ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Monday, September 19, 2022

ಹಿಂದೂ ಧರ್ಮದ ಷೋಡಶ ಸಂಸ್ಕಾರಗಳು

ಹಿಂದೂ ಧರ್ಮದ ಷೋಡಶ ಸಂಸ್ಕಾರಗಳು.

1.ಗರ್ಭಾದಾನ, 2.ಪುಂಸವನ, 3.ಸೀಮಂತ, 4 ವಿಷ್ಣುಬಲಿ, 5.ಜಾತಕರ್ಮ, 6 .ನಾಮಕರಣ, 7, ಉಪನಿಷ್ಕ್ರಮಣ 8,.ಅನ್ನಪ್ರಾಶನ, 9,.ಚೌಲ, (ಕರ್ಣವೇಧನ?)10,.ಉಪನಯನ, 11, ಹೋತೃ , 12. ಶುಕ್ರೀಯ 13, ಉಪನಿಷದ್, 14. ಗೋದಾನ, 15. ಸಮಾ ವರ್ತನ, 16. ವಿವಾಹ

ಇಲ್ಲಿ  ಮಕ್ಕಳು ಹುಟ್ಟುವ ಮೊದಲು,  ತಾಯಿಗರ್ಭದ ಸಮಯದಲ್ಲಿ, ಹುಟ್ಟಿದ ನಂತರದಲ್ಲಿ  ಸಂಸ್ಕಾರದ ಮೂಲಕ ಆತ್ಮಶುದ್ದಿ ಮಾಡುವ  ಕಾರ್ಯಕ್ರಮವೇ  ಮಕ್ಕಳು ಮುಂದೆ ಮಹಾತ್ಮರಾಗಿ ದೈವತ್ವದೆಡೆಗೆ ಹೋಗಲು ಸಾಧ್ಯವೆನ್ನುವ ಸತ್ಯ ಇದೆ. ಇದನ್ನು ಮಂತ್ರ,ತಂತ್ರ,ಯಂತ್ರಗಳಿಂದ  ಹಿಂದಿನ ಮಹಾತ್ಮರುಗಳು,ಜ್ಞಾನಿಗಳು ಹೇಗೆ ಮಾಡಬಹುದು ಮಾಡಬೇಕೆಂಬುದನ್ನು  ತಿಳಿಸಿರುವ ಉದ್ದೇಶ ಒಂದೇ. ಜನ್ಮ ಪಡೆದ ಶಿಶುವಿನೊಳಗೆ  ಇರುವ ನಕಾರಾತ್ಮಕ ಗುಣವನ್ನು ಸಣ್ಣ ವಯಸ್ಸಿನಲ್ಲಿಯೇ  ತೆಗೆದುಹಾಕಿ ಸಕಾರಾತ್ಮಕ ದೃಷ್ಟಿಯಿಂದ ಜೀವನವನ್ನು ಸನ್ಮಾರ್ಗದಲ್ಲಿ ನಡೆಸುವುದಾಗಿತ್ತು. ಕಾಲ ಬದಲಾದಂತೆ ಆಚರಣೆಯೂ ಬದಲಾಯಿತು ಕೊನೆಯಲ್ಲಿ ಆಚರಣೆಯ ಉದ್ದೇಶ ತಿಳಿಯದೆ ನಡೆದವು .ಶಿಕ್ಷಣವೂ  ಇದಕ್ಕೆ ವಿರುದ್ದವಾಗಿ ನೀಡಿ ಆಚರಣೆಯಲ್ಲಿ ಕಾಟಾಚಾರವೂ ಬೆರೆಕೆಯಾಯಿತು. ಆದರೆ  ಆಂತರಿಕ ಶುದ್ದಿಯಿಂದ ದೂರವಾದ ಮನಸ್ಸಿಗೆ  ಇದರ ಮೂಲ ಉದ್ದೇಶದ ಅರಿವಿನ ಕೊರತೆಯಿಂದ ಇವೆಲ್ಲವೂ ಮೂಢನಂಬಿಕೆ ಎನ್ನುವ ಮಟ್ಟಕ್ಕೆ  ಬಂದು ಮಾನವ ಸ್ವೇಚ್ಚಾಚಾರದಲ್ಲಿ  ಭೂಮಿಯನ್ನು ದುರ್ಭಳಕೆ ಮಾಡಿಕೊಂಡು ಸ್ತ್ರೀ ಶಕ್ತಿಗೆ ಸರಿಯಾದ ಶಿಕ್ಷಣ ನೀಡದೆ  ಅವಳ ಜ್ಞಾನವನ್ನು ಬೆಳೆಸದೆ ಮಕ್ಕಳ ಲಾಲನೆ ಪಾಲನೆ ಪೋಷಣೆ ಕೇವಲ ಭೌತಿಕಾಸಕ್ತಿಯಲ್ಲಿ ಮುಂದೆ ನಡೆಯುತ್ತಾ ಒಳಗಿನ ಸಂಸ್ಕಾರ ಹಿಂದುಳಿದು ಹೊರಗಿನ ಸಮಸ್ಯೆ ಬೆಳೆಯಿತು. ಮಂತ್ರದಿಂದ ಮಾವಿನ ಕಾಯಿ ಉರುಳೋದಿಲ್ಲ ಎನ್ನುವ ಕಾರಣಕ್ಕೆ ತಂತ್ರದಿಂದ  ಬೀಳಿಸಿ ಕೊನೆಗೆ ಅಷ್ಟೂ ಹಣ್ಣು ಒಮ್ಮೆಗೆ ಪಡೆದರೆ ಸಾಕಷ್ಟು ಹಣ
ಪಡೆಯಬಹುದೆನ್ನುವ ವ್ಯವಹಾರ ಜ್ಞಾನದಿಂದ ಇಡೀ ಮರವನ್ನು ಯಂತ್ರದಿಂದ ಬೋಳಿಸಿದರೆ  ಸಿಗೋದು ಹಣ ಮಾತ್ರ ಜ್ಞಾನವಲ್ಲ. ಹಾಗೆಯೇ ಮಕ್ಕಳಿಗೆ ಸರಿಯಾದ  ಸಾತ್ವಿಕ ಗುಣವನ್ನು ಸಣ್ಣ ವಯಸ್ಸಿನಲ್ಲಿ ಕಲಿಸಲಾಗದೆ  ಭೌತಿಕ
ಜ್ಞಾನವನ್ನು  ತಂತ್ರದಿಂದ ನೀಡುತ್ತಾ ಅವರಲ್ಲಿದ್ದ ಸ್ವತಂತ್ರ ಜ್ಞಾನ ಹಿಂದುಳಿದರೆ ದೊಡ್ಡವರಾದ ಮೇಲೆ ಅತಂತ್ರಸ್ಥಿತಿಗೆ ತಲುಪಿದವರನ್ನು ಯಂತ್ರದಂತೆ ದುಡಿಸಿಕೊಂಡರೆ  ಜೀವನದಲ್ಲಿ ಸಂತೋಷ ಶಾಂತಿ,ನೆಮ್ಮದಿ ತೃಪ್ತಿ, ಮುಕ್ತಿ ಎಲ್ಲಿರುವುದು?
ನಿಧಾನವೇ ಪ್ರಧಾನ, ತಾಳಿದವನು ಬಾಳಿಯಾನು ಎನ್ನುವುದು ಇಂದಿಗೂ ಸತ್ಯ. ಆದರೆ ಆ ರೀತಿಯಲ್ಲಿ ನಡೆದವರನ್ನು ಸಮಾಜವೇ ತಿರಸ್ಕರಿಸುತ್ತದೆ ಎಂದರೆ ಅಜ್ಞಾನ
 ಅಜ್ಞಾನದೊಳಗಿರುವ ಜ್ಞಾನವನ್ನು ಗುರುತಿಸಿಕೊಳ್ಳಲು ಒಳಗಿನ ಸಂಸ್ಕಾರ ಅಗತ್ಯವಾಗಿತ್ತು.ಇದು ಭಾರತೀಯ ಶಿಕ್ಷಣದ ಗುರಿಯಾಗಿತ್ತು. ಯಾವಾಗ  ಸಂಸ್ಕಾರ ರಹಿತ ಜೀವನ ಕ್ರಮ ಹೆಚ್ಚಾಯಿತೋ ಆಗಲೇ ಅಧರ್ಮ ,ಅಸತ್ಯ,ಅನ್ಯಾಯವೂ ಬೆಳೆಯಿತು. ಈಗಲೂ ಎಷ್ಟೋ ಸಂಸಾರದಲ್ಲಿ ಸಂಸ್ಕಾರವಿದೆ. ಆದರೆ ಅವರ ಹಣದ ಬಡತನವು  ಸಮಾಜಕ್ಕೆ ಕಾಣುತ್ತದೆಯೇ ಹೊರತು ಗುಣದ ಶ್ರೀಮಂತಿಕೆಗೆ ಬೆಲೆಯಿಲ್ಲದೆ ದಾರಿ ತಪ್ಪಿ ನಡೆಯುವವರೆ ಹೆಚ್ಚು. ಸಾಲ ಮಾಡಿ ಏನಾದರೂ  ಕಟ್ಟಬಹುದು, ಕೊಳ್ಳಬಹುದು.ಆದರೆ ಪರಮಸತ್ಯವನ್ನು,ಪರಮಾತ್ಮನನ್ನು  ಕಾಣೋದಕ್ಕೆ ಒಳಗಿನ ಸಂಸ್ಕಾರದ ಅಗತ್ಯವಿದೆ.
ಎಲ್ಲಿಯವರೆಗೆ ಆತ್ಮಶುದ್ದಿಗಾಗಿ ಸಂಸ್ಕಾರಯುತ ಶಿಕ್ಷಣ,
ಕಾರ್ಯಕ್ರಮ, ಸಂಪ್ರದಾಯ,ಶಾಸ್ತ್ರ , ಧರ್ಮಾಚರಣೆಯು  ನಡೆಯುವುದಿಲ್ಲವೋ ಅಲ್ಲಿಯವರೆಗೆ ಆತ್ಮನಿಗೆ ಸ್ವತಂತ್ರ ಜ್ಞಾನ,ಆತ್ಮಜ್ಞಾನ ಸಿಗದು. ಆತ್ಮನಿರ್ಭರ ಭಾರತವನ್ನು ರಾಜಕೀಯದಿಂದ  ಕಟ್ಟುವ ಮೊದಲು ಆತ್ಮಜ್ಞಾನದ ಕಡೆಗೆ ಪ್ರಜೆಗಳ ಶಿಕ್ಷಣವಿದ್ದರೆ ಉತ್ತಮ ಬದಲಾವಣೆ . ಇಲ್ಲಿ ಯಾರೂ ಸ್ವತಂತ್ರ ರಾಗಿಲ್ಲ.ಕಾರಣ ನಮ್ಮೊಳಗೇ ಅಡಗಿರುವ ಮಂತ್ರ,ತಂತ್ರ,ಯಂತ್ರಜ್ಞಾನವೂ ಭೌತಿಕ  ವ್ಯವಹಾರಕ್ಕೆ ಬಳಸಿ ಧಾರ್ಮಿಕತೆ ಹಿಂದುಳಿದರೆ ಇದು ಕಾಲದ ಪ್ರಭಾವವೇ? 
 ಮಾನವ ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧನೆ ಮಾಡಬಹುದು. ಇದು ಅಧ್ಯಾತ್ಮದೆಡೆ ಇದ್ದರೆ  ಆತ್ಮಜ್ಞಾನ.
ಭೌತಿಕದೆಡೆ ಸಾಗಿದರೆ ವಿಜ್ಞಾನ.ಇವೆರಡ ನಡುವಿನ ಸಾಮಾನ್ಯಜ್ಞಾನವೇ ಇದರ ತಳಪಾಯ. ಅದನ್ನು ಗಟ್ಟಿಯಾಗಿಸಿಕೊಂಡಾಗಲೇ ಮಾನವ. ಮೊದಲು ಮಾನವನಾಗು ಎಂದರೆ ನನ್ನ ಮನಸ್ಸನ್ನು  ನಾನೇ  ಕಂಡುಕೊಳ್ಳಲು ಸೋತರೆ ಪರರ ವಶದಲ್ಲಿರುವ ಮನಸ್ಸನ್ನು ಅವರು ಆಳುವರೆಂಬುದಾಗಿದೆ.ಮನಸ್ಸನ್ನು  ಹಿಡಿತದಲ್ಲಿಟ್ಟು ಕೊಳ್ಳಲು ಸಂಸ್ಕಾರ ಬೇಕು.ಸರಿ ತಪ್ಪು ಅರಿವಿದ್ದರೆ ತಪ್ಪನ್ನು ಬಿಟ್ಟು ಸರಿದಾರಿ ಹಿಡಿಯಬಹುದು.ಅರಿವೇ ಇಲ್ಲದಿದ್ದರೆ ನಡೆದದ್ದೇ ದಾರಿ. ನೇರದಾರಿಯಲ್ಲಿ ನಿಧಾನವಾಗಿ ಚಲಿಸುವುದು  ಉತ್ತಮ ಅಡ್ಡದಾರಿ ಹಿಡಿದರೆ ಮತ್ತೆ ತಿರುಗಿ ನೇರದಾರಿಗೆ ಬರುವುದು ಸುಲಭವಿಲ್ಲ. ಹೀಗೇ ಪ್ರತಿಯೊಂದು ವಿಚಾರದಲ್ಲಿಯೂ ನಮ್ಮ ನಮ್ಮ ಮೂಲದ ಧರ್ಮ ಕರ್ಮ ದ ಪ್ರಕಾರ  ಜ್ಞಾನವನ್ನು ಹೆಚ್ಚಿಸಿಕೊಂಡು ಒಗ್ಗಟ್ಟಿನಿಂದ  ಸತ್ಯವನ್ನು ತಿಳಿಯಲು  ಸಹಕರಿಸುವ ಗುರುಹಿರಿಯರು ಹಿಂದಿನ ಕಾಲದಲ್ಲಿ ಇದ್ದರು. ಹಂಚಿ ತಿನ್ನುವ ಬುದ್ದಿಶಕ್ತಿ ಸಾಲ ಬೆಳೆಯದಂತೆ ತಡೆದಿತ್ತು.ಆದರೆ ಇಂದು ಭ್ರಷ್ಟಾಚಾರವನ್ನು ಹಂಚಿಕೊಂಡು ತಿನ್ನುವುದರಿಂದ ಸಾಕಷ್ಟು ಸಮಸ್ಯೆಗಳು ಮನೆ ಮನೆಯೊಳಗೆ ಹರಡುತ್ತಿದೆ. ಹಾಗಾದರೆ ಸಂಸ್ಕಾರದ ಉದ್ದೇಶ  ಏನಾಗಿತ್ತು? ಶುದ್ದ ಮಾಡೋದು,ಸ್ವಚ್ಚ
ಮಾಡೋದು
 ಅಂತರಂಗವನ್ನು ಎಂದರೆ  ಬಸವಣ್ಣನವರ ವಚನದ ಪ್ರಕಾರ ಕಲಬೇಡ,ಕೊಲಬೇಡ,ಹುಸಿಯ ನುಡಿಯಲು ಬೇಡ,ಮುನಿಯಬೇಡ,ಅನ್ಯರಿಗೆ ಅಸಹ್ಯಪಡಬೇಡ,
ತನ್ನಬಣ್ಣಿಸಬೇಡ ,ಇದಿರ ಹಳಿಯಲು ಬೇಡ ಇದೇ ಅಂತರಂಗ ಶುದ್ದಿ ಇದೇ ಬಹಿರಂಗ ಶುದ್ದಿ ಎಂದಾಗಿದೆ. ಇದನ್ನು ರಾಜಕೀಯದ ಹಿಂದೆ ನಡೆದು ಬೆಳೆಸಲಾಗದು.
ರಾಜಯೋಗದ ಹಿಂದೆ ನಡೆದರೆ ಸಾಧ್ಯವೆಂದು ಸ್ವಾಮಿ ವಿವೇಕಾನಂದರು ತಿಳಿಸಿದ್ದಾರೆ. ಸ್ವಾಮಿ ವಿವೇಕಾನಂದರ ದೇಶಭಕ್ತಿ  ದೇಶವನ್ನು  ಶಿಕ್ಷಣದಿಂದ ಸಂಸ್ಕರಿಸುವತ್ತ ನಡೆದಿತ್ತು. ವಿಪರ್ಯಾಸವೆಂದರೆ ಸರ್ಕಾರಗಳು ದೇಶವನ್ನೇ ವಿದೇಶ ಮಾಡುವ  ತಂತ್ರಜ್ಞಾನಕ್ಕೆ ಒತ್ತುಕೊಟ್ಟು ತತ್ವಜ್ಞಾನ ಹಿಂದುಳಿದಿದೆ. ಇದನ್ನು ಮತ್ತೆ ತತ್ವದಿಂದ ಮೇಲೆತ್ತುವುದರಿಂದ ಸ್ವತಂತ್ರ ಜ್ಞಾನ ಮಾನವರು ಪಡೆಯಬಹುದು. ಸಮಸ್ಯೆ ಒಳಗಿರುವಾಗ ಪರಿಹಾರವೂ ಒಳಗೇ ಹುಡುಕಿಕೊಳ್ಳಲು ಸಂಸ್ಕಾರಯುತ ಶಿಕ್ಷಣವಿರಬೇಕಷ್ಟೆ.
ಹೊರಗಿನ ಭ್ರಷ್ಟಾಚಾರವನ್ನು ಬೆಳೆಯಲು ಬಿಟ್ಟು ಅದೇ ಹಣದಲ್ಲಿ ಎಷ್ಟೇ  ಧಾರ್ಮಿಕ ಕಾರ್ಯಕ್ರಮ ನಡೆಸಿದರೂ ನೀರಿನಲ್ಲಿ ಹೋಮಮಾಡಿದಂತಾಗುತ್ತದೆ. ಒಟ್ಟಿನಲ್ಲಿ ನಮ್ಮ
ಮನಸ್ಸು ಶುದ್ದಿಯಾದರೆ ಆತ್ಮಶುದ್ದಿ. ಇದು ನಿಸ್ವಾರ್ಥ, ನಿರಹಂಕಾರದ  ಸತ್ಯ,ಧರ್ಮ ದ  ಕಾರ್ಯದಿಂದ ಸಾಧ್ಯ. ಇದು ಒಬ್ಬರಿಂದ ಕಷ್ಟ ಪ್ರತಿಯೊಬ್ಬರಿಂದಲೂ ಸಾಧ್ಯ.
ದೇಶದೊಳಗಿರುವ ಪ್ರಜೆಗಳ ಜ್ಞಾನದಿಂದ ದೇಶ ಶುದ್ದ.ಆದರೆ  ನಮ್ಮ ಜ್ಞಾನವೇ ನಮಗೆ  ತಿಳಿಯದೆ ಪರಕೀಯರ ಜ್ಞಾನದಲ್ಲಿ ನಾವಿದ್ದರೆ  ನಾವ್ಯಾರು? ಹಾಗೆ ದೈವತ್ವದೆಡೆಗೆ ನಡೆಯದೇ ನಾನೇ ದೇವರೆಂದರೆ ಸರಿಯಾಗದು. ನಮ್ಮ ಗುಣವನ್ನು ನಾವೇ  ಸಂಸ್ಕರಿಸಿಕೊಳ್ಳದೆ ಮಕ್ಕಳಿಗೆ ಕಲಿಸಲಾಗದು.

No comments:

Post a Comment