ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Wednesday, September 21, 2022

ನಿಜವಾದ ಸ್ವಪ್ರಯತ್ನ ಯಾವುದು?

ನಿಜವಾದ ಸ್ವಪ್ರಯತ್ನ
ಪ್ರತಿಯೊಂದು ಕಾರ್ಯವೂ ಮೂರು ಹಂತಗಳನ್ನು ದಾಟಿ ಹೋಗಬೇಕು ನಿಂದೆ, ವಿರೋಧ,ನಂತರ ಒಪ್ಪಿಗೆ.
ಸ್ಮಾಮಿ ವಿವೇಕಾನಂದ.
ವಿವೇಕವನ್ನು ಬೆಳೆಸಿಕೊಳ್ಳಲು ಈ ಮೂರು ಹಂತ ದಾಟಲೇಬೇಕೆನ್ನುವುದು ಸತ್ಯ. ಮಾನವನಿಗೆ ಎಲ್ಲಿಯವರೆಗೆ ವಿವೇಕ ಬರುವುದಿಲ್ಲವೋ ಅಲ್ಲಿಯವರೆಗೆ ಸ್ವತಂತ್ರ ಜ್ಞಾನವೂ ಸಿಗೋದಿಲ್ಲ.ಪರಾವಲಂಬನೆಯ ದಾರಿ ಹಿಡಿದಿರುವ ಇಂದಿನ ಸ್ಥಿತಿಗೆ ಸ್ವಪ್ರಯತ್ನವಿಲ್ಲದೆಯೇ  ಪರರ ಹಿಂದೆ ನಡೆದಿರುವುದೆ ಕಾರಣ. ಇದು ಶಿಕ್ಷಣದ‌ಮೂಲಕವೇ ನಡೆದು ಸ್ವಂತ ಜ್ಞಾನವಿಲ್ಲದೆ ಹೊರಗಿನ ಸತ್ಯವಷ್ಟೆ ಸತ್ಯವೆಂಬ ಭ್ರಮೆಯಲ್ಲಿ  ಇತರರನ್ನು ನಿಂದಿಸುತ್ತಾ, ವಿರೋಧಿಸುತ್ತಾ ಕೊನೆಗೆ ಅವರೊಂದಿಗೆ ರಾಜಿ ಮಾಡಿಕೊಂಡು ನಮ್ಮತನವನ್ನು ನಮ್ಮ ಪ್ರಯತ್ನವನ್ನು  ಬಿಟ್ಟು ಮುಂದೆ ನಡೆದವರಿಗೆ  ಒಳಗೇ ಸಮಸ್ಯೆಗಳು ಬೆಟ್ಟದಂತೆ ಬೆಳೆಯಿತು.
ಇದನ್ನು  ಪರಿಹರಿಸಿಕೊಳ್ಳಲು ಕಷ್ಟವಾಗಿ ಮತ್ತೆ ಅದೇ ಮಾರ್ಗ  ಹಿಡಿದರೆ  ಸಮಸ್ಯೆಗೆ ಪರಿಹಾರವಿಲ್ಲ.ಹಣದ ಮೂಲಕ ಪರಿಹಾರ ಸಿಗುವಂತಿದ್ದರೆ ಈವರೆಗೆ ಸರ್ಕಾರಗಳು ನೀಡಿದ ಉಚಿತ ವಸತಿ,ವಸ್ತು, ವಸ್ತ್ರ, ಶಿಕ್ಷಣ,ಸಾಲ,ಸೌಲಭ್ಯ
ಪಡೆದವರಲ್ಲಿ  ಸಮಸ್ಯೆಗಳೇ ಇರುತ್ತಿರಲಿಲ್ಲ. ಹೆಚ್ಚು ಸಮಸ್ಯೆ ಇರೋದೇ ಅವರಲ್ಲಿ ಎಂದರೆ  ಪರಿಹಾರವನ್ನು ಹೊರಗೆ ಹುಡುಕಿ ಒಳಗಿದ್ದ ಜ್ಞಾನವನ್ನು ಸದ್ಬಳಕೆ ಮಾಡಿಕೊಳ್ಳಲು ಸೋತಿರುವುದೆಂದರೆ ತಪ್ಪಿಲ್ಲ. ಇದನ್ನು ತಪ್ಪು ಎಂದರೂ ಸರಿಯಲ್ಲ. ಕಾರಣ ಮಾನವ ಸಂಘಜೀವಿ ನಿಜ ಆದರೆ ಸ್ವಂತ ಬುದ್ದಿ,ಜ್ಞಾನವಿರೋದು ಮಾನವನಿಗೆ ಮಾತ್ರ.ಅದನ್ನು ಸತ್ಯ ಧರ್ಮದ ಮೂಲಕ ಬಳಸಿದವರಷ್ಟೆ  ಮಹಾತ್ಮರಾಗಿರೋದು
ಇದು ನಮ್ಮ ಇತಿಹಾಸ ಪುರಾಣ ಕಥೆಗಳೇ ತಿಳಿಸುತ್ತದೆ.
ಸ್ವಾಮಿ ವಿವೇಕಾನಂದರ ದೇಶಭಕ್ತಿಯನ್ನು ಅರ್ಥ ಮಾಡಿ
ಕೊಳ್ಳಲು ನಿಜವಾದ ಸ್ವಪ್ರಯತ್ನದಿಂದ ಮಾತ್ರ ಸಾಧ್ಯವಿತ್ತು.
ಅದೂ ಶಿಕ್ಷಣದಿಂದ ಸಾಧ್ಯವಿತ್ತು. ಯಾವಾಗ ವಿಚಾರಗಳು ಪ್ರಚಾರಕ್ಕಷ್ಟೇ ಸೀಮಿತವಾಗಿ ರಾಜಕೀಯ ರೂಪ ಪಡೆಯಿತೋ ಆಗಲೇ ಅಧರ್ಮಕ್ಕೆ ಬಲ ಹೆಚ್ಚಾಯಿತು.
ವಿವೇಕವೆಂದರೆ ವಿಚಾರವನ್ನು ವೇದನೆಯಿಲ್ಲದೆ ಕಾಣುವುದು
ಆದರೆ ವಿಪರ್ಯಾಸವೆಂದರೆ ಇಂದಿಗೂ ಸದ್ವಿಚಾರ, ಸತ್ಯದ ವಿಚಾರಗಳನ್ನು ಹೇಳುವುದಕ್ಕೆ,ಕೇಳುವುದಕ್ಕೆ ವೇದನೆಯಿದೆ.
ಕಾರಣವಿಷ್ಟೆ ನಮ್ಮೊಳಗಿನ ವಿಚಾರಗಳು ಅದಕ್ಕೆ ಪೂರಕವಿದ್ದರೆ ವೇದನೆಯಾಗದು.ವಿರುದ್ದವಾಗಿದ್ದರೆ ಸಾಕಷ್ಟು  ನಿಂದನೆಗಳು,ವಿರೋಧಗಳು ಬರುವುದು ಸಹಜ.
ನಮ್ಮ ಮೂಲದ ಶಿಕ್ಷಣದ ವಿಚಾರದಲ್ಲಿ ವಿವೇಕವಿತ್ತು.
ಅದನ್ನು ಮಕ್ಕಳಿಗೆ ಶಿಕ್ಷಣದ ಮೂಲಕ ಕೊಡಲು ಸೋತವರು ಭಾರತೀಯರೆ ಹೀಗಾಗಿ ವಿರುದ್ದದ  ವಿಚಾರಗಳನ್ನು ತಲೆಗೆ ತುಂಬಿದಾಗ  ನಿಜವಾದ ಸಾತ್ವಿಕ ವಿಚಾರಗಳನ್ನು ಮನಸ್ಸು ಒಪ್ಪದೆ ವಿರೋಧವೇ ಮಾಡೋದು. ಇದಕ್ಕೆ ಪರಿಹಾರ
ಏನಾದರೂ ಹಣದಿಂದ ಕೊಡಬಹುದೆ? ಬಡತನ ಬೆಳೆದಿರೋದೆ ಅಜ್ಞಾನದ ಶಿಕ್ಷಣದಿಂದ. ಎಷ್ಟು ಹಣದ ಸಾಲ ಮಾಡಿದರೂ ತೀರಿಸುವ ಶಕ್ತಿಯೇ ಇಲ್ಲವಾದರೆ ಸಾಲವೇ 
ಶೂಲವಾಗುತ್ತದೆ. ಇದನ್ನು ಸಾಮಾನ್ಯಜ್ಞಾನದಿಂದಲೇ ಅರ್ಥ ಮಾಡಿಕೊಂಡು ಯಾವ ವಿಶೇಷ ಶಿಕ್ಷಣವೂ ಇಲ್ಲದೆಯೂ ಜೀವನದ ಮುಖ್ಯಗುರಿ ತಲುಪಿದ್ದ ವಿವೇಕವಂತ ನಮ್ಮ ಹಿಂದಿನ ಜ್ಞಾನಿಗಳನ್ನು ನಾವುಯಾವ ಮಾರ್ಗದಲ್ಲಿ ನಡೆದು
 ತಿಳಿಯಲು ಪ್ರಯತ್ನಪಟ್ಟೆವೋ ಆ ಮಾರ್ಗವೇ ರಾಜಕೀಯ
ವಾಗಿತ್ತು. ಅವರು ನಡೆದ ರಾಜಯೋಗದ ಮಾರ್ಗ ವನ್ನು ಇಂದಿಗೂ ಜನರು ತಿರಸ್ಕಾರದಿಂದ ಕಾಣುತ್ತಾರೆಂದರೆ 
ಅಜ್ಞಾ‌ನವಷ್ಟೆ.ಇಲ್ಲಿ ಅಜ್ಞಾನವೆಂದರೆ ಜ್ಞಾನವಿಲ್ಲ ಎಂದರ್ಥ ವಲ್ಲ.ಜ್ಞಾನವಿದ್ದರೂ ನಡೆದಿಲ್ಲ ಅನುಭವದ ಸತ್ಯ ಗೊತ್ತಿಲ್ಲ
ವೆಂದರ್ಥ.ಭಾರತದ ಪ್ರತಿಯೊಬ್ಬ ಪ್ರಜೆಯೊಳಗೂ ಅಡಗಿದ್ದ ಅಪಾರವಾದ ಜ್ಞಾನ ಶಕ್ತಿಯನ್ನು ಗುರುತಿಸದೆ ನೇರವಾಗಿ ಹೊರಗಿನ ಶಿಕ್ಷಣ ನೀಡಿ ಸ್ವಪ್ರಯತ್ನದಿಂದ ಸತ್ಯ ತಿಳಿಯದೆ 
ಯಾರೋ ಹೇಳಿದ್ದಾರೆ, ಮಾಡಿದ್ದಾರೆ,ನಡೆದಿದ್ದಾರೆ ಎನ್ನುವ  ಪ್ರಚಾರ ಮಾಡುತ್ತಾ ತಾನು ನಡೆಯಲಾಗದೆ ನಡೆಯುವವರಿಗೂ ಸಹಕಾರ ನೀಡದೆ ಆಳಿದ ಪ್ರತಿಫಲವೇ ಇಂದಿನ ಯುವ ಜನಾಂಗ ಸರಿದಾರಿ ಕಾಣದೆ ಮಧ್ಯೆ ನಿಂತು  ನಿಂದಿಸೋದು,  ವಿರೋಧಿಸೋದು. ಯಾರು ಅವರಿಗೆ ಹಣ,ಅಧಿಕಾರ,ಸ್ಥಾನಮಾನ ಕೊಡುವರೋ ಅವರನ್ನು ಒಪ್ಪಿಕೊಂಡು  ಮುಂದೆ ನಡೆಯೋದು. ಮುಂದೆ ಎಂದರೆ ವಿದೇಶಕ್ಕೋ? ಎನ್ನುವ ಪ್ರಶ್ನೆಗೆ ಉತ್ತರವಿಲ್ಲ.
"ಇಂದಿನ‌ ಮಕ್ಕಳೇ ಮುಂದಿನ ದೇಶದ ಪ್ರಜೆಗಳು" ಇದರಲ್ಲಿ ಎರಡರ್ಥ ವಿದೆ.ಯಾರು ದೇಶೀಯ ಜ್ಞಾನ ಪಡೆದು ಮುಂದೆ ನಡೆದರೂ ಅವರು ದೇಶದಲ್ಲಿದ್ದೇ ದೇಶಸೇವೆ ಮಾಡುವ ಜ್ಞಾನಿಗಳಾಗಿ ಪ್ರಜಾಪ್ರಭುತ್ವ ಗಟ್ಟಿಯಾಗಿರುತ್ತದೆ.
ಆದರೆ ಯಾರು ನೇರವಾಗಿ ವಿದೇಶಿ ಶಿಕ್ಷಣದ ಗುಲಾಮರಾಗಿ
ಶಿಕ್ಷಣ ಪಡೆದರೋ ಅವರಿಗೆ ಸ್ವಂತ ಬುದ್ದಿಯಿಲ್ಲದೆ ವಿದೇಶಕ್ಕೆ ಹೋಗಿ ದುಡಿಯುವ ಹಾಗಾಗಿದೆ. ಇದರಿಂದಾಗಿ ಮೂಲದ ಧರ್ಮ ಕರ್ಮ ಕ್ಕೆ ಸಿದ್ದಾಂತಕ್ಕೆ ಬೆಲೆಕೊಡಲಾಗದೆ ನಿಂದನೆ
ವಿರೋಧಗಳೇ ಹೆಚ್ಚಾಗಿ ಸಂಸಾರದಲ್ಲಿಯೇ ಸಮಸ್ಯೆ.ಇದು
ಸಾಮಾನ್ಯಜ್ಞಾನದಿಂದಲೇ ಅರ್ಥ ಮಾಡಿಕೊಂಡರೆ ನಮ್ಮ ನಮ್ಮ ಸಮಸ್ಯೆಗೆ ಕಾರಣವೇ  ಅರ್ಧಸತ್ಯದ ರಾಜಕೀಯ.
ರಾಜಕೀಯಕ್ಕೆ ಸಹಕರಿಸುವ ನಾವು ಯಾರ ಆಳಾಗಿದ್ದೇವೆ?
ಅಂದರೆ ಪ್ರಜಾಪ್ರಭುತ್ವ ದೇಶದಲ್ಲಿ ಆಳು ಯಾರು ಅರಸ ಯಾರು? ಯಾರಲ್ಲಿ  ನಿಜವಾದ ಸ್ವಪ್ರಯತ್ನವಿಲ್ಲವೋ ಅವರಲ್ಲಿ ಗೊಂದಲಗಳು,ಸಂಶಯಗಳು,ಅನುಮಾನಗಳು
ಹೆಚ್ಚಾಗಿ ಸತ್ಯವನ್ನು ತಿರಸ್ಕರಿಸುತ್ತಾ ಮಿಥ್ಯವನ್ನು ಹೆಚ್ಚಿಸುತ್ತಾ
ಸಮಾಜದ ಋಣದಲ್ಲಿದ್ದರೂ  ಸಮಾಜವನ್ನು ದಾರಿತಪ್ಪಿಸಿ ಆಳುತ್ತಾರೆ. ಇದಕ್ಕೆ ಸಹಕರಿಸುವವರೂ ಅದೇ  ದಾರಿಯಲ್ಲಿ ನಡೆದರೆ  ಒಮ್ಮೆ ದೇಹ ಮರೆಯಾಗೋದು ಸತ್ಯ.ಹಾಗಂತ
ಸತ್ಯ ನಾಶವಾಗುವುದೆ? ಹಿಂದಿನ ಮಹಾತ್ಮರುಗಳು ನಡೆದ ಸತ್ಯ ಹಾಗು ಧರ್ಮದ  ಹಾದಿಯಲ್ಲಿ ನಡೆಯಲಾಗದವರು
ಪ್ರಚಾರಮಾಡಿದರೂ ಹಾದಿ ಮುಚ್ಚಿಹೋಗಿದ್ದರೆ ಅಥವಾ ತಾವೇ ಆ ಹಾದಿಯಲ್ಲಿ ನಡೆಯದೆ ನಡೆಯುವವರಿಗೂ ಅಡ್ಡ ನಿಂತಿದ್ದರೆ  ಧರ್ಮ ರಕ್ಷಣೆ ಸಾಧ್ಯವಿಲ್ಲ. ಹಿಂದೂ ಧರ್ಮದ ರಕ್ಷಣೆಗೆ ರಾಜಕೀಯದ ಅಗತ್ಯವಿಲ್ಲ. ರಾಜಯೋಗದ ಹಿಂದಿನ ಶಿಕ್ಷಣದ ಅಗತ್ಯವಿತ್ತು. ಅದನ್ನು ಕೊಡುವ ಶಿಕ್ಷಕರು ಗುರು ಹಿರಿಯರೂ  ಧಾರ್ಮಿಕ ವಾಗಿ ಸತ್ಯದಲ್ಲಿ ನಡೆಯುತ್ತಿದ್ದರು. ಅವರ ನಿಜವಾದ ಸ್ವಪ್ರಯತ್ನವೇ ಧರ್ಮ ರಕ್ಷಣೆಗೆ ದಾರಿಯಾಗಿತ್ತು. ಈಗ ನಾವೆಲ್ಲರೂ ಒಗ್ಗಟ್ಟಿನಿಂದ
ಈ ವಿಚಾರದಲ್ಲಿ ಆತ್ಮಾವಲೋಕನ ಮಾಡಿಕೊಳ್ಳಲು ನಮ್ಮ ನಮ್ಮ ಪ್ರಯತ್ನವಷ್ಟೆ ಉಳಿದಿರೋದು. ಪ್ರಯತ್ನ ನಮ್ಮದು ಫಲ ಭಗವಂತನದು.
ಈ ಲೇಖನದ ಉದ್ದೇಶ  ಹಿಂದೂ ಧರ್ಮದ ಹಿಂದುಳಿದರೆ
ಮುಂದಿನ  ಜೀವನವೇ ಸ್ವತಂತ್ರ ಕಳೆದುಕೊಂಡು ಅತಂತ್ರಸ್ಥಿತಿಗೆ ಬಂದಾಗ  ಯಾವ ಪ್ರಯತ್ನವೂ ವ್ಯರ್ಥ
ಎನ್ನುವುದಾಗಿದೆ.  ಮೌನದಿಂದ  ಧ್ಯಾನ ಮಾಡಬಹುದು. ಧ್ಯಾನದಿಂದ ಜ್ಞಾನವೂ ಸಿಗಬಹುದು.ಜ್ಞಾನಸಿಕ್ಕ ಮೇಲೆ ನನಗೂ ಜಗತ್ತಿಗೂ ಏನೂ ಸಂಬಂಧ ವಿಲ್ಲವೆಂದು ಮೌನವಾಗಿದ್ದು ಅಧರ್ಮ ಬೆಳೆದರೆಇದರಷ್ಟು ತಪ್ಪು ಬೇರೆ 
ಇಲ್ಲ.  ಇದೊಂದು ಅನುಭವದ ಸತ್ಯವಾಗಿದೆ. ಹಲವು ತತ್ವಜ್ಞಾನದ ಸತ್ಯವನ್ನು  ತಿಳಿಸುವ ಪ್ರಯತ್ನದಲ್ಲಿ ನಾನು ಸಾಕಷ್ಟು ನಿಂದನೆ,ವಿರೋಧವನ್ನು ಮೌನದಿಂದ  ಕಂಡಿರುವೆ. ಆದರೆ ಪ್ರಯತ್ನದ ಫಲವಾಗಿ ಸತ್ಯ ದರ್ಶನವಾಗಿದೆ. ಇದನ್ನು ಒಪ್ಪಲಿ ಬಿಡಲಿ  ಇದರಿಂದಾಗಿ ಆತ್ಮರಕ್ಷಣೆ ಧರ್ಮ ರಕ್ಷಣೆಯಂತೂ ಆಗುತ್ತದೆ ಎನ್ನುವ ಬಲವಾದ ನಂಬಿಕೆಯೇ ಈವರೆಗೆ ಲೇಖನಗಳು ಹರಿದುಬಂದಿದೆ. ಹಾಗಂತ ಎಲ್ಲರಿಗೂ ಇದೇ ಅನುಭವ ಆಗೋದಿಲ್ಲ.ಅನುಭವಿಸದೆ ಸತ್ಯ ತಿಳಿಯಲ್ಲ ಇದೇ  ನಮ್ಮ ಹಿಂದುಳಿಯುವಿಕೆಗ ಕಾರಣವಾಗಿದೆ.  ಇಲ್ಲಿ  ಅಜ್ಞಾನದಲ್ಲಿ ರಾಜಕೀಯ ನಡೆಸಿದವರಿಗೆ ಜನಬಲ,ಹಣಬಲ,
ಅಧಿಕಾರ ಬಲ ಹೆಚ್ಚು.ಅದೇ ಜ್ಞಾನದೆಡೆಗೆ ಹೋಗುವವರನ್ನು ಅವರೆ ತಡೆದು ನಿಲ್ಲಿಸುವುದು. ಹೀಗಾದರೆ  ಪ್ರಗತಿ ಯಾವುದರಲ್ಲಿದೆ?  ಅಂಗೈ ಹುಣ್ಣಿಗೆ ಕನ್ನಡಿ ಬೇಕೆ? ನಮ್ಮ 
ಸಹಕಾರವೇ ಇದಕ್ಕೆ ಕಾರಣ. ಇದಕ್ಕೆ ತಕ್ಕಂತೆ ಪ್ರತಿಫಲ.
ಕೆಲವರಿಗೆ ಸಣ್ಣ ವಯಸ್ಸಿಗೇ ಸಾಕಷ್ಟು ಜನಬಲ,ಹಣಬಲದ ಜೊತೆಗೆ ಅಧಿಕಾರವೂ ಇರುತ್ತದೆ.ಹಾಗಾಗಿ ಸ್ವಪ್ರಯತ್ನದಲ್ಲಿ ಸೋತು  ರಾಜಕೀಯವನ್ನೇ ಬಂಡವಾಳ  ಮಾಡಿಕೊಳ್ಳುತ್ತಾರೆ.
ಕೆಲವರಿಗೆ ಜೀವನದ ಮಧ್ಯೆ ಸತ್ಯ ದರ್ಶನ ವಾದರೆ ಅವರಿಗೆ ಸಾಕಷ್ಟು ನಿಂದನೆ,ವಿರೋಧವೇ ಹೆಚ್ಚು ಇದರಿಂದಾಗಿ ಏನೂ ಬೇಡವೆಂದು ಎಲ್ಲವನ್ನೂ ಒಪ್ಪಿ ನಡೆದರೆ ಸತ್ಯ ಅರ್ಧಕ್ಕೆ ನಿಂತ ನೀರಾಗಿ ಕೊಳೆಯುತ್ತದೆ ಇದರಿಂದಾಗಿ ರೋಗವೂ ಹೆಚ್ಚುತ್ತದೆ. ಇನ್ನೂ ಹಲವರಿಗೆ ಕೊನೆಗಾಲದಲ್ಲಿ ಸತ್ಯದರ್ಶನ ಆದರೂ ವಯಸ್ಸಾದ ಕಾರಣ ಸುಮ್ಮನೆ ಹೋಗುತ್ತಾರೆ.ಮತ್ತೆ
ಜನ್ಮವೆತ್ತಿದಾಗ ಸರಿಯಾದ ಜ್ಞಾನದ ಶಿಕ್ಷಣ ಸಿಕ್ಕಿದರೆ ಉತ್ತಮ
ಆದರೆ ಹಿಂದಿನ ಜನ್ಮದ ಪ್ರಾರಂಭದಿಂದ ಮಧ್ಯದವರೆಗೂ ಮಾಡಿದ ಕರ್ಮಫಲಕ್ಕೆ ತಕ್ಕಂತೆ ಜನ್ಮವಿರುವುದರಿಂದ ಇಲ್ಲಿ
ಸತ್ಯಕ್ಕೆ ಬೆಲೆಯಿರೋದಿಲ್ಲ.ಮಕ್ಕಳಿಗೆ ಸ್ವತಂತ್ರ ಜ್ಞಾನವಿದ್ದರೂ
ಪೋಷಕರ ಹಿಡಿತದಲ್ಲಿ ಅದನ್ನು ಅತಂತ್ರಗೊಳಿಸಬಹುದು.
ಒಟ್ಟಿನಲ್ಲಿ ಯಾರೋ ಯಾರನ್ನೋ ಹೇಗೋ ಆಳಲು ಹೋಗಿ
ನಮ್ಮ ನಮ್ಮ ಸ್ವಪ್ರಯತ್ನ ಕೇವಲ ಭೌತಿಕ ಮಟ್ಟಕ್ಕೆ ನಿಂತಿದೆ.
ಅಧ್ಯಾತ್ಮ ದೆಡೆಗೆ ಹೋದರೆ ನಿಜವಾದ  ದಾರಿ ಕಾಣುತ್ತದೆ.
ಅಧ್ಯಾತ್ಮ ಎಂದರೆ ತನ್ನ ತಾನರಿತು ನಡೆಯೋದು
ಸತ್ಯಧರ್ಮ ಕ್ಕೆ ಬೆಲೆಕೊಡೋದರ ಹಿಂದಿನ ಉದ್ದೇಶ ಅರ್ಥ ಮಾಡಿಕೊಳ್ಳಲು ಸ್ವ ಪ್ರಯತ್ನ ಅಗತ್ಯವಿದೆ. ರಾಮಾಯಣ ಮಹಾಭಾರತದಂತಹ ಮಹಾಪುರಾಣ ಕಥೆಯನ್ನೇ ತಿರುಚಿ
ತಮ್ಮ ತಮ್ಮ ರೀತಿಯಲ್ಲಿ ಜನರಿಗೆ ಬಿಟ್ಟಿರುವಾಗ ಅದರಲ್ಲಿ ಅಡಗಿದ್ದ ಧರ್ಮ ಸೂಕ್ಮತೆಯ ಅರಿವಾದರೂ ಹೇಗೆ ಬರಲು ಸಾಧ್ಯ.ಹಾಗೆಯೇ ಅಸಂಖ್ಯಾತ ಜನರ ಕಥೆಯೂ ಇದೆ.ಅವರವರ ಕಥೆಯೇ ವ್ಯಥೆಯಾಗಿರುವಾಗ ಅದನ್ನು ಓದಿಕೊಂಡು ಇನ್ನಷ್ಟು ವ್ಯಥೆಪಡೋದರ ಬದಲಾಗಿ ನಮ್ಮ
ಜನ್ಮಕ್ಕೆ ಕಾರಣ ತಿಳಿದು ನಡೆದರೆ ಉತ್ತಮವಲ್ಲವೆ? ಮಾನವ
ಭೂಮಿಯಲ್ಲಿ ಹುಟ್ಟಲು ಕಾರಣವೇ ಹಿಂದಿನ ಜನ್ಮದ ಋಣ ಮತ್ತು ಕರ್ಮ. ಇದನ್ನು ತೀರಿಸಲು ಧರ್ಮ ಹಾಗು ಸತ್ಯದ ಮಾರ್ಗ ಹಿಡಿಯಬೇಕು. ಅವರವರ ಮೂಲ ಧರ್ಮ ಕರ್ಮ ವೇ ಇದಕ್ಕೆ ಸರಿಯಾದ ಮಾರ್ಗ.ಇದನ್ನು ಬಿಟ್ಟು ಹೊರಗೆ ನಡೆದಷ್ಟೂ ಅಧರ್ಮ ಅಕರ್ಮ ವಾಗುವುದಾದರೆ ಇದರ ಪರಿಣಾಮ ಎದುರಿಸೋದು ಒಳಗಿನ ಜೀವ. ಈ ಜೀವಾತ್ಮ
ಪರಮಾತ್ಮನ ಕಡೆಗೆ ನಡೆಯುವಾಗ ಬರುವ ನಿಂದನೆ ,
ವಿರೋಧಕ್ಕೆ ಕಾರಣವೇ ಅಜ್ಞಾನಿಗಳ ಸಹವಾಸ.ಅಜ್ಞಾನಕ್ಕೆ
 ಕಾರಣ ಜ್ಞಾನದ ಶಿಕ್ಷಣದ ಕೊರತೆ. ಯಾರು ಕೊಡಬೇಕಿತ್ತು? ಜ್ಞಾನಿಗಳೆಲ್ಲಿರುವರು? ನಿಜವಾದ ಸ್ವಪ್ರಯತ್ನಆಗಿದೆಯೆ? 
ಇಲ್ಲವೆ? ಇದನ್ನು ಧಾರ್ಮಿಕ ವರ್ಗದವರು ಪ್ರಶ್ನೆ
ಮಾಡಿಕೊಂಡರೆ ಉತ್ತರವಿದೆ. ಪ್ರಶ್ನೆ ಮಾಡೋರಿಲ್ಲ.
ಮಾಡಿದರೂ ಉತ್ತರ ಸಿಗೋದಿಲ್ಲವಲ್ಲ.ನಮ್ಮ ಸಹಕಾರವೇ ಸರಿಯಿಲ್ಲ.ಅಧರ್ಮ, ಅನ್ಯಾಯ, ಭ್ರಷ್ಟಾಚಾರ, ಅಸತ್ಯದಿಂದಲೇ ರಾಜಕೀಯ‌ ನಡೆಸಿದರೆ  ಬೆಳೆಯೋದೂ ಅದೇ. ಆದರೆ ಅದು ಶಾಶ್ವತವಲ್ಲ ಸ್ವಪ್ರಯತ್ನವು ಸತ್ಯ ಧರ್ಮದಲ್ಲಿದ್ದರೆ ಸಾಕಷ್ಟು ಬದಲಾವಣೆ ನಮ್ಮಲ್ಲಿ ಕಾಣಬಹುದು.ನಾನು ಬದಲಾದರೆ  ನಂತರ ಮಕ್ಕಳು ಬದಲಾಗಬಹುದು.  'ಯಥಾ ಗುರು ತಥಾಶಿಷ್ಯ'  'ಯಥಾ ರಾಜ ತಥಾ  ಪ್ರಜೆ'     'ಯಥಾ  ಪ್ರಜಾ ತಥಾ ಪ್ರಜಾಪ್ರಭುತ್ವ'
ನಾವ್ಯಾರು?  ಪ್ರಜೆಗಳೆ ?  ರಾಜರೆ? ಮಾನವರೆ? ದೇವರೆ? ಅಸುರರೆ? 
ಹಾಗಾದರೆ ನಾನ್ಯಾರು?  ಪ್ರಶ್ನೆಗೆ ಆಳವಾದ ಉತ್ತರ ನಾನೆಂಬುದಿಲ್ಲ. ವಾಸ್ತವ ಜಗತ್ತಿನಲ್ಲಿ ನಾನೊಬ್ಬ ಮಾನವನಷ್ಟೆ. ಮಾನವನ‌ಪ್ರಯತ್ನದ ಫಲವೇ ಜಗತ್ತು.ಸೃಷ್ಟಿ ಮಾಡಿದವನೂ,ಸ್ಥಿತಿಗೆ ಕಾರಣನೂ,ಲಯಕ್ಕೂ ನಾನೇ ಕಾರಣವಾದಾಗ  ನಾನು ಹೋದರೆ  ಮುಕ್ತಿ. ಇದ್ದರೆ ?
ನನಗೆ ಸರ್ಕಾರ ಮುಕ್ತಿ ಕೊಡಲು ಸಾಧ್ಯವೆ?ಅಥವಾ ನಾನು ಸರ್ಕಾರದಿಂದ ಮುಕ್ತನಾಗಿರಬೇಕೆ? ನನ್ನ ಪ್ರಯತ್ನದಿಂದ ಸರ್ಕಾರ ಬೆಳೆಯಿತೆ? ನಾನು ಏನೂ ಪ್ರಯತ್ನ ಪಡದೆಯೂ ಸರ್ಕಾರ  ಬೆಳೆಯಿತೆ? ನನ್ನ ಸರ್ಕಾರ ಧರ್ಮದೆಡೆಗೆ ಇತ್ತೆ?
ಹಾಗಾದರೆ ಧರ್ಮ ಹಿಂದುಳಿಯಲು ಕಾರಣವೇನು? ನನ್ನ ಧರ್ಮದ ರಕ್ಷಣೆಗೆ ಸರ್ಕಾರದ ಹಣಬೇಕಿತ್ತೆ? ಅಥವಾ ಸರ್ಕಾರದ ಹಣದಿಂದಲೇ ಧರ್ಮ ರಕ್ಷಣೆಯೆ? ಒಟ್ಟಿನಲ್ಲಿ ಎಲ್ಲರಿಗೂ ಶಿಕ್ಷಣ ಸರಿಯಿಲ್ಲದೆ ದೇಶದಲ್ಲಿ ಅಧರ್ಮ, ಅನ್ಯಾಯ, ಅಸತ್ಯ,ಭ್ರಷ್ಟಾಚಾರ ಮುಗಿಲುಮುಟ್ಟಿದೆ ಎಂದು ತಿಳಿದರೂ  ಯಾವ ಪೋಷಕರೂ  ಶಿಕ್ಷಣಕ್ಷೇತ್ರದಲ್ಲಾಗಲಿ ಧಾರ್ಮಿಕ ಕ್ಷೇತ್ರದಲ್ಲಾಗಲಿ ನಡೆಯುತ್ತಿರುವ ರಾಜಕೀಯಕ್ಕೆ
ವಿರೋಧ ವ್ಯಕ್ತಪಡಿಸಲಾಗುತ್ತಿಲ್ಲ.ಇಲ್ಲಿ ಸ್ವಪ್ರಯತ್ನದ ಕೊರತೆ ಇದೆ.ಇದು ನಮಗೇ ಕಷ್ಟ ನಷ್ಟ ತಂದುಕೊಡುತ್ತದೆನ್ನುವ ಸತ್ಯ ತಿಳಿದರೆ ಮುಂದಿನ ಪೀಳಿಗೆಗೆ ನಾವು ಹಣದ ಆಸ್ತಿ ಮಾಡಿಡುವ ಬದಲು ಜ್ಞಾನದ ಆಸ್ತಿ ಮಾಡಿಟ್ಟು ಮುಂದೆ ನಡೆಯಬಹುದಷ್ಟೆ. ಸತ್ಯವನ್ನು  ಹಲವು ರೀತಿಯಲ್ಲಿ ತಿರುಚಿ ಬರೆದು ಓದಿ ತಿಳಿಸಿದರೂ ಮೂಲದ ಸತ್ಯ ಒಂದೇ. ಅದೇ ಆತ್ಮಸಾಕ್ಷಿ. ಇದನ್ನು ಯಾವ ಸರ್ಕಾರವೂ ಸರಿಪಡಿಸಲಾಗದು

No comments:

Post a Comment