ವಿದೇಶಿ ಒಪ್ಪಂದಕ್ಕೆ ಒಪ್ಪುವ ನಾವುಗಳು ಸ್ವದೇಶಿಗಳ ಒಪ್ಪಿಗೆಯನ್ನು ಪಡೆಯುತ್ತಿಲ್ಲವೆ?
ನಮ್ಮದು ಸ್ವತಂತ್ರ ದೇಶವೆನ್ನುವಾಗ ಯಾರಿಗೆ ಸಿಕ್ಕಿದೆ ಸ್ವಾತಂತ್ರ್ಯ? ಎನ್ನುವ ಪ್ರಶ್ನೆಯೂ ಹುಟ್ಟುತ್ತಿದೆ.ಪ್ರತಿಯೊಂದು ವಿಚಾರಗಳಿಗೂ ಬೇರೆಯವರ ಒಪ್ಪಿಗೆ ಪಡೆದು ಮುಂದೆ ನಡೆಯುವ ಮಕ್ಕಳ ಒಳಗಿನ ಮನಸ್ಸು ಇದಕ್ಕೆ ಒಪ್ಪಿದೆಯೆ ಎನ್ನುವ ಬಗ್ಗೆ ಪೋಷಕರು ಚಿಂತನೆ ಮಾಡುವಷ್ಟು ಸಮಯವಿಲ್ಲ. ಪ್ರಾಥಮಿಕ ಶಿಕ್ಷಣವೇ ಪರಕೀಯರ ಭಾಷೆಯಲ್ಲಿ ಕಲಿಸಿ ಮಕ್ಕಳ ಮನಸ್ಸಿಗೆ ಒಪ್ಪಿಗೆ ಆಗದೆ ಕಲಿಸಿದರೆ ಇದರಲ್ಲಿ ರಾಜಕೀಯವಿದೆ. ಶಿಕ್ಷಣವೇ ನಮ್ಮ ಮೂಲವಲ್ಲದಿದ್ದರೂ ವಿದೇಶದವರೆಗೆ ಹೋಗಿ ಕಲಿತು ಬಂದವರ ಒಪ್ಪಂದಕ್ಕೆ ಸಹಿ ಹಾಕುವ ನಮಗೆ ನಮ್ಮೊಳಗೇ ಅಡಗಿದ್ದ ಶಕ್ತಿಯನ್ನು ಕೇಳಿ ತಿಳಿಯುವ ಸ್ವಾತಂತ್ರ್ಯ ವಿಲ್ಲವಾಯಿತೆ? ಆದರೂ ಕಾಲದ ಪ್ರಕಾರ ನಡೆಯಲೇ
ಬೇಕು.ಕಾಲವೇ ಇದಕ್ಕೆ ಉತ್ತರಿಸುತ್ತದೆ ಎನ್ನುವ ಹಾಗೆ ಒಪ್ಪಂದದಿಂದ ಸಾಕಷ್ಟು ಭೌತಿಕ ಬದಲಾವಣೆ ಆದರೂ ಅಧ್ಯಾತ್ಮ ದಲ್ಲಿ ಕುಸಿದ ಮನಸ್ಸನ್ನು ಬೆಳೆಸುವ ಕೆಲಸ ತಂತ್ರ ಜ್ಞಾನ ಮಾಡಬಹುದೆ? ತಂತ್ರದಿಂದ ಯಾರನ್ನಾದರೂ ಅಸತ್ಯ,ಅನ್ಯಾಯ, ಅಧರ್ಮದಿಂದ ಆಳಿದರೆ ಇದೊಂದು ಕ್ಷಣಿಕವಾದ ಬದಲಾವಣೆ. ಶಾಶ್ವತವಾದ ಬದಲಾವಣೆ ನಮ್ಮ ಮನಸ್ಸಿನ ಚಿಂತನೆ ಯನ್ನು ನಮ್ಮವರ ಒಪ್ಪಿಗೆಯ ಮೇಲೆ ಹೆಚ್ಚಿಸಿಕೊಂಡು ಧರ್ಮ ದ ಪರ ನಿಲ್ಲುವುದಾಗಿದೆ. ಹಾಗಾದರೆ
ನಮ್ಮ ಹಿಂದಿನ ಜನ್ಮದ ನೆನಪಿಲ್ಲ. ಆದರೆ ಇಂದಿನ ಜನನವಾಗಿದೆ.
ಇಲ್ಲಿಯ ಮೂಲವನ್ನರಿಯುವ ಶಿಕ್ಷಣ ಕೊಡದೆ ವಿದೇಶಿ ಒಪ್ಪಂದಕ್ಕೆ ದೇಶವನ್ನು ಒಪ್ಪಿಸಿದರೆ ಇದರ ಪರಿಣಾಮ ಏನಾಗಬಹುದು?
ನಮ್ಮವರ ಮಾತಿಗೆ ಬೆಲೆಕೊಡದೆ ಆಳುವವರ ಭವಿಷ್ಯದಲ್ಲಿ
ಯಾರ ಭವಿಷ್ಯವಡಗಿದೆ. ಇದರಿಂದಾಗಿ ಮಾನವೀಯ ಮೌಲ್ಯಗಳು , ತತ್ವಜ್ಞಾನ, ಸತ್ಯಜ್ಞಾನ, ದೈವತ್ವ ಬೆಳೆಯುವುದಾದರೆ ಉತ್ತಮ ಸ್ವತಂತ್ರ ಜೀವನ. ಈಗಲೂ ಇದೇ ನಿಜವಾದ ಸುಖವೆಂದರಿತು ನಾವೆಲ್ಲರೂ ನಡೆದರೂ ಇದೇ ಮುಂದಿನ ದು:ಖಕ್ಕೆ ಕಾರಣವಾಗುವುದಂತೂ ಸತ್ಯ.
ಹಾಗಾಗಿ ಕಷ್ಟಪಟ್ಟು ಕೆಲಸ ಮಾಡಿ. ಆಂತರಿಕ ಶಕ್ತಿಯನ್ನು ವಿದೇಶಿ ಒಪ್ಪಂದದ ವ್ಯವಹಾರದಿಂದ ಬೆಳೆಸುವ ಬದಲಾಗಿ ಶಾಶ್ವತವಾಗಿರುವ ಮರೆಯಾಗಿರುವ ಅಗೋಚರ ಶಕ್ತಿಯನ್ನು ಅಧ್ಯಾತ್ಮ ದ ಪ್ರಕಾರ ತಿಳಿಯಲು ಕೆಲವು ನಮ್ಮ ಒಳಗಿನ ಒಪ್ಪಿಗೆ ಇರಬೇಕು.ಅದೇ ಪ್ರಕಾರ ಹೊರಗಿನಿಂದ ತಿಳಿದು
ಎರಡೂ ನಮ್ಮತನವನ್ನು ಕೆಡಸದಂತಿದ್ದರೆ ಒಪ್ಪಿಗೆ ಅಗತ್ಯ.
ಅಂದರೆ ನಮ್ಮ ದೇಶದ ಶಿಕ್ಷಣದಲ್ಲಿ ಸತ್ಯಜ್ಞಾನವಿತ್ತು ಹೊರಗಿನ ಶಿಕ್ಷಣದಲ್ಲಿ ಮಿಥ್ಯಜ್ಞಾನವಿದೆ.ಜ್ಞಾನ ಎರಡೂ ಕಡೆ ಇದ್ದರೂ ಒಂದು ಜೀವಾತ್ಮನಿಗೆ ಇನ್ನೊಂದು ಜೀವನಕ್ಕೆ ಬೇಕಾದ ಶಿಕ್ಷಣ.
ಯಾವಾಗ ಇವೆರಡೂ ವಿರುದ್ದ ದಿಕ್ಕಿನಲ್ಲಿ ನಡೆಯುವುದೋ ಆಗಲೇ ಯುದ್ದ,ದ್ವೇಷ ಭಯೋತ್ಪಾದನೆಯು ಹೆಚ್ಚಾಗುತ್ತ ನಮ್ಮ ಜೀವನವೇ ಒಪ್ಪಿಗೆಯಿಲ್ಲದೆ ನಡೆಸುವ ಸ್ಥಿತಿಗೆ ಬರುತ್ತದೆ. ಒಟ್ಟಿನಲ್ಲಿ ಅಧ್ಯಾತ್ಮ ಸತ್ಯವನ್ನು ಒಪ್ಪಿಕೊಳ್ಳಲು
ಅಂತಹ ಶಿಕ್ಷಣವಿದ್ದರೆ ಸಾಧ್ಯವೇ ಹೊರತು ಹೊರಗಿನಿಂದ ಕೇಳಿದಾಕ್ಷಣ ಸಾಧ್ಯವಿಲ್ಲ. ಹಾಗೆಯೇ ಭೌತಿಕದ ಆ ಕ್ಷಣದ ಸತ್ಯ ಕಣ್ಣಿಗೆ ಗೋಚರಿಸಿದರೂ ಇನ್ನೊಂದು ಕ್ಷಣದಲ್ಲಿ ಬದಲಾಗಬಹುದೆನ್ನುವ ಅರಿವಿರಬೇಕು.
ಪುರಾಣದ ಮಹಾಭಾರತದಲ್ಲಿ ಭೀಷ್ಮಾಚಾರ್ಯರಂತಹ ಮಹಾಜ್ಞಾನಿಗಳಿಗೇ ಬಿಡದ ಧರ್ಮ ಸಂಕಟ ನಮ್ಮಂತಹ ಸಾಮಾನ್ಯರಿಗೆ ಬಿಡುವುದೆ? ಆದರೆ ಅವರಲ್ಲಿದ್ದ ಜ್ಞಾನಶಕ್ತಿ ಧರ್ಮ ದೆಡೆಗೆ ನಡೆಸಿ ಮುಕ್ತಿ ಪಡೆದರು. ನಮ್ಮಲ್ಲಿರುವ ಅಜ್ಞಾನವೇ ನಮ್ಮನ್ನು ಅಧೋಗತಿಗೆ ಎಳೆಯುತ್ತಿದ್ದರೆ ಎಲ್ಲಿಯ ಧರ್ಮ ರಕ್ಷಣೆ. ಒಟ್ಟಿನಲ್ಲಿ ದೇವಾಸುರರ ನಡುವೆ ಮನುಕುಲವಿದೆ.ಹಿಂದಿನ ರಾಜಪ್ರಭುತ್ವದ ಒಳ ಒಪ್ಪಂದ
ದಿಂದ ದ್ವೇಷ ಬೆಳೆದು ಯುದ್ದಗಳಾಗಿ ಕೊನೆಗೆ ಹೊರಗಿನವರ ಪ್ರವೇಶಕ್ಕೆ ಸ್ವಾಗತಿಸುತ್ತಾ, ಮುಂದೆ ಹೊರಗಿನವರೆ ಆಳಲು ಪ್ರಾರಂಭಿಸಿದರು.
ಹೀಗಾಗಿ ಹಿಂದಿನ ಭಾರತವನ್ನು ನಿಧಾನವಾಗಿ ಆಕ್ರಮಣ ಮಾಡಿಕೊಂಡ ವಿದೇಶಿಗಳ ವ್ಯವಹಾರಕ್ಕೆ ಒಪ್ಪಂದ ಮಾಡಿಕೊಂಡ ಭಾರತದ ಪ್ರಜೆಗಳಿಗೆ ಈಗಲೂ ನಾವು ಯಾರ ಕೈ ಕೆಳಗೆ ಸಾಲದೊಳಗೆ ಇರುವುದೆನ್ನುವ ಸಾಮಾನ್ಯ
ಜ್ಞಾನದ ಅಗತ್ಯವಿದೆ ಎನಿಸುವುದಿಲ್ಲವೆ? ಪ್ರಜಾಸರ್ಕಾರ ಮಕ್ಕಳಿಗೆ ಸರಿಯಾದ ಶಿಕ್ಷಣವನ್ನು ಸ್ವತಂತ್ರವಾಗಿ ಕೊಡಲು ಒಪ್ಪದ ಕಾರಣ ವಿದೇಶಿಗಳನ್ನೇ ಒಪ್ಪಂದದ ಮೂಲಕ ಮನೆಯೊಳಗೆ ಕರೆ ತಂದರೆ ಅವರಿಗೆ ನಮ್ಮ ತಾತ್ವಿಕ ನಿಲುವು ಅರ್ಥವಾಗದು.
ಅದು ಬಿಟ್ಟು ವ್ಯವಹಾರಕ್ಕೆ ಬದಲಾಗಿ ತಂತ್ರದಿಂದ ಜನರನ್ನೇ ಮನೆಯಿಂದ ಹೊರ ಹಾಕಿ ಆಳಿದರೆ?ಅತಿಥಿ ಸತ್ಕಾರವಿರಲಿ ಆದರೆ ಅವರೇ ನಮ್ಮ ತಿಥಿ ಮಾಡುವಷ್ಟುಅತಿಯಾಗದಿರಲಿ.
ನಮ್ಮ ಭೌತಿಕ ವಿಜ್ಞಾನಕ್ಕೆ ತಕ್ಕಂತೆ ಜೀವನ ನಡೆಸಲು ಅದೇ ಶಿಕ್ಷಣವನ್ನು ಸಣ್ಣ ವಯಸ್ಸಿಗೇ ನೀಡಿದರೆ ಮಾನವೀಯತೆಯ
ಅಧ್ಯಾತ್ಮ ಶಿಕ್ಷಣದ ಅರಿವಿಲ್ಲದ ಮನಸ್ಸನ್ನು ತಡೆ ಹಿಡಿಯುವುದು ಕಷ್ಟ.
ಇದು ಯೋಗದಿಂದ ಮಾತ್ರ ಸಾಧ್ಯ. ಯೋಗ್ಯ ಶಿಕ್ಷಣ ನೈತಿಕ ಶಿಕ್ಷಣ,ಯೋಗಶಿಕ್ಷಣ, ಧಾರ್ಮಿಕ ಶಿಕ್ಷಣವು ನಮ್ಮ ಭಾರತೀಯರ ಮೂಲ ಶಿಕ್ಷಣವಾಗಿತ್ತು. ಈಗ ಕೆಲವೆಡೆ ಪುನರಾರಂಭವಾಗಿದ್ದರೂ ರಾಜಕೀಯಕ್ಕೆ ಇಳಿದು ವ್ಯವಹಾರಕ್ಕೆ ಬಳಸಿದರೆ ಕಷ್ಟ. ಅವರವರ ದೇಶದ ಭವಿಷ್ಯ ಅವರವರ ಮೂಲ ಶಿಕ್ಷಣವೇ ನಿರ್ಧಾರ ಮಾಡುತ್ತದೆ. ಇದಕ್ಕೆ ಹೊರಗಿನವರ ಒಪ್ಪಂದ ಒಪ್ಪಿಗೆ ಯಾಕೆ ಬೇಕಿದೆ? ಹೊರಗಿನವರಿಗೂ ನಮ್ಮ ಜ್ಞಾನ ಕಲಿಸಿ ಬೆಳೆಸಿ ಆದರೆ ನಮ್ಮವರನ್ನೇ ಆಳೋವಷ್ಟು ಒಪ್ಪಂದದ ಅಗತ್ಯವಿರಲಿಲ್ಲ.
ಈ ಕಾರಣಕ್ಕಾಗಿ ನಮ್ಮ ಮೂಲದ ಶಿಕ್ಷಣದ ನಂತರವೇ ಹೊರಗಿನ ಶಿಕ್ಷಣದ ಅಗತ್ಯವಿದೆ. ಮೂಲ ಧರ್ಮ ಕರ್ಮ ಕ್ಕೆ
ದಕ್ಕೆಯಾದರೆ ಸಮಸ್ಯೆ ಒಳಗೇ ಬೆಳೆಯುತ್ತದೆ. ಒಳಗಿನ ಸಮಸ್ಯೆಗೆ ಪರಿಹಾರ ಹೊರಗೆ ಸಿಗೋದಿಲ್ಲ ಎನ್ನುವ ಸಾಮಾನ್ಯ ಜ್ಞಾನ ನಮಗಿರಬೇಕು. ಸಾಮಾನ್ಯರ ಸಮಸ್ಯೆಗೆ
ಅಸಮಾನ್ಯರು ಸಾಮಾನ್ಯರಂತೆ ಬದುಕಿ ಅರ್ಥ ಮಾಡಿಕೊಳ್ಳಲು ಸಾಧ್ಯವೆ? ಇಲ್ಲವೆಂದರೆ ಸಮಸ್ಯೆಗೆ ಪರಿಹಾರ ಕೊಡಲು ಕಷ್ಟ.ಹಣದಿಂದ ಕೊಟ್ಟರೆ ಮತ್ತಷ್ಟು ಸಾಲದ ಹೊರೆ ಸಾಮಾನ್ಯರೆ ಹೋರಬೇಕೆಂಬುದು ಅಧ್ಯಾತ್ಮ ಸತ್ಯ. ಭೌತಿಕ ಜಗತ್ತಿನಲ್ಲಿ ಹಣದಿಂದ ಏನು ಬೇಕಾದರೂ ಪಡೆಯಬಹುದು ಆದರೆ ಸತ್ಯಜ್ಞಾನ ಆತ್ಮಜ್ಞಾನ ಸಿಗೋದಿಲ್ಲವೆನ್ನುವುದು ಸತ್ಯ. ಬದಲಾವಣೆ ರಾಜಕೀಯ ಪಕ್ಷದಿಂದ ಸಾಧ್ಯವಿಲ್ಲ. ಪಿತೃಪಕ್ಷದಿಂದ ಸಾಧ್ಯವಾಗಬಹುದು.
ಹಿಂದಿನ ಗುರು ಹಿರಿಯರ ಋಣ ತೀರಿಸಲು ಧರ್ಮ ಕರ್ಮದಿಂದ ,ನ್ಯಾಯ,ನೀತಿ,ಸತ್ಯದಿಂದ ಜೀವನ ನಡೆಸುವ
ಜ್ಞಾನದಿಂದ ಸಾಧ್ಯವೆನ್ನುತ್ತಾರೆ. ಇದನ್ನು ಬಿಟ್ಟು ಎಷ್ಟು ದೂರ ಹೋದರೂ ಸಾಲದ ಸುಳಿಯಲ್ಲಿರುವ ಜೀವಕ್ಕೆ ಮುಕ್ತಿ ಸಿಗೋದು ಕಷ್ಟ. ಎಲ್ಲಾ ತ್ಯಜಿಸಿ ಸಂನ್ಯಾಸಿ ಆಗೋದಕ್ಕಿಂತ ಯೋಗಿಯಾಗಿರುವುದೇ ಮೇಲು .ಶ್ರೀ ಕೃಷ್ಣಪರಮಾತ್ಮನು
ಅರ್ಜುನನ ವಿಷಾದಕ್ಕೆ ' ನೀನು ಯೋಗಿಯಾಗು 'ಎಂದಿರುವುದು ಇದೇ ಕಾರಣಕ್ಕಾಗಿ. ನಮ್ಮ ಧರ್ಮಕ್ಕೆ ಚ್ಯುತಿ ಬಂದರೆ ಎದ್ದು ಹೋರಾಡಬೇಕೇ ಹೊರತು ಹೇಡಿಗಳಂತೆ ಒಪ್ಪಂದಕ್ಕೆ ಶರಣಾಗಬಾರದು. ಹೋರಾಡಲು ಉತ್ತಮ ಸಹಕಾರವೂ ಅಗತ್ಯ. ಒಪ್ಪಂದ ನಮ್ಮ ಆತ್ಮಬಲವನ್ನು ಹೆಚ್ಚಿಸಬೇಕಿದೆ. ಆತ್ಮಹತ್ಯೆ ಆಗಬಾರದಷ್ಟೆ.
ಆ ಪಕ್ಷ ಈ ಪಕ್ಷ ದೊಡ್ಡದು ಒಳ್ಳೆಯದು,ಕೆಟ್ಟದ್ದು ಎಂದು ಹೊರಗಿನ ಪಕ್ಷಾಂತರದಲ್ಲಿ ಮೈ ಮರೆತರೆ ನಮ್ಮದೇ ಆದ ಪತೃಪಕ್ಷವೇ ಹಿಂದುಳಿಯುತ್ತದೆ. ಮೂಲವನ್ನರಿತು ನಡೆದರೆ ಧರ್ಮ. ಧರ್ಮವನ್ನು ರಕ್ಷಣೆ ಮಾಡಿದವರನ್ನು ಧರ್ಮ ವೇ ರಕ್ಷಿಸುತ್ತದೆ. ರಾಜಕೀಯದಲ್ಲಿ ಧರ್ಮ ವಿದೆಯೆ? ಸತ್ಯ ಎಲ್ಲಿದೆ? ಸತ್ಯವೇ ದೇವರೆನ್ನುತ್ತಾರೆ.
No comments:
Post a Comment