ಈವರೆಗೆ ಲೇಖನಗಳಲ್ಲಿ ಯಾವುದೇ ಒಂದು ಧರ್ಮ, ಭಾಷೆ,ಪಕ್ಷ,ಜಾತಿಯಾಗಿ ಎತ್ತಿಹಿಡಿದಿಲ್ಲ. ಕಾರಣ ತತ್ವವೂ ಇದನ್ನು ತಿಳಿಸಿದೆ. ಹಿಂದಿನ ಧರ್ಮ ಒಂದೇ ಇತ್ತು.ಅದರಲ್ಲಿ ದೈವಗುಣವುಳ್ಳವರನ್ನು ದೇವರೆಂದು ಕರೆಯಲಾಯಿತು. ಮಾನವೀಯ ಗುಣವುಳ್ಳವರನ್ನು ಮಹಾತ್ಮರೆಂದರು ಅಸುರೀ ಗುಣವುಳ್ಳವರನ್ನು ರಾಕ್ಷಸರೆಂದರು. ಹಾಗಂತ ಅವರು ಭೂಮಿಯಲ್ಲಿ ಜೀವನ ನಡೆಸುವಾಗ ಎಲ್ಲಾ ಮಾನವರಾಗೇ ಇದ್ದರು. ಹೀಗಾಗಿ ಅಂದಿನ ಧರ್ಮ ಒಂದೇ ಶಿಕ್ಷಣದ ತಳಪಾಯದಲ್ಲಿ ಬೆಳೆದು ನಂತರದಲ್ಲಿ ಅವರವರ ಗುಣಜ್ಞಾನದ ಬೆಳವಣಿಗೆ ಮೇಲೇ ಮುಂದುವರಿಯಿತು. ಈಗಲೂ ಎಲ್ಲಾ ಮಾನವರಾದರೂ ಇಲ್ಲಿರುವ ಅಸಂಖ್ಯಾತ ಧರ್ಮ, ಪಂಗಡ, ಜಾತಿ ಪಕ್ಷದ ಹಿಂದಿನ ಉದ್ದೇಶ ರಾಜಕೀಯವಾಗಿ ಬೆಳೆದು ನಿಂತು ನಿಜವಾದ ಜ್ಞಾನವುಳ್ಳವರಿಗೆ ಶಿಕ್ಷಣ ನೀಡದೆ ಆಳುವವರೆ ಹೆಚ್ಚಾಗಿ ಅಸುರ ಶಕ್ತಿ ಬೆಳೆದು ಮಾನವೀಯತೆ ಅಳಿದು ದೈವಗುಣವೇ ಹಿಂದುಳಿದರೆ ಯಾರನ್ನು ದ್ವೇಷ ಮಾಡಿ ಏನೂ ಪ್ರಯೋಜನವಿಲ್ಲ. ದ್ವೇಷವೇ ಮಾನವನ ಶತ್ರು. . ಶತ್ತುದೇಶಗಳನ್ನು ಮಿತ್ರರಾಗಿಸ ಹೋಗಿ ನಮ್ಮವರನ್ನೇ ಶತ್ರುಗಳಾಗಿಸಿಕೊಂಡರೆ ಅತಿಥಿಗಳೇ ತಿಥಿ ಮಾಡೋ ಕಾಲ ಬರುತ್ತದೆ. ಆದರೆ ಅವರಿಗೆ ಸಂಸ್ಕಾರ,ಧರ್ಮವೇ ಗೊತ್ತಿಲ್ಲದೆ ಹೋದರೆ ಜೀವ ಅತಂತ್ರಸ್ಥಿತಿಗೆ ತಲುಪುತ್ತದೆ. ಭೂತ ಪ್ರೇತ,ಪಿಶಾಚಿಗಳೆಂದು ಕರೆಯಲ್ಪಡುವ ಶಕ್ತಿಯಿಂದ ಶಾಂತಿ ಪಡೆಯಬಹುದೆ?
ನಾವು ಯಾರನ್ನೇ ಆಗಲಿ ಅರ್ಥ ಮಾಡಿಕೊಳ್ಳಲು ಜ್ಞಾನದ ಅಗತ್ಯವಿದೆ.ಎಲ್ಲರಲ್ಲಿಯೂ ಅಡಗಿರುವ ಸಾಮಾನ್ಯಜ್ಞಾನ ದಿಂದ ಆಂತರಿಕ ಶುದ್ದಿ ಮಾಡಿಕೊಂಡ ನಂತರ ವಿಶೇಷ
ಜ್ಞಾನವನ್ನರಿತು ಸದ್ಬಳಕೆ ಮಾಡಿಕೊಂಡರೆ ಸಮಾನತೆ. ಅಸಮಾನತೆಗೆ ಕಾರಣವೇ ರಾಜಕೀಯ. ಇಲ್ಲಿ ಪ್ರಜಾಪ್ರಭುತ್ವ ಇರೋವಾಗ ಯಾರನ್ನು ಯಾರು ಆಳಬೇಕಿತ್ತು. ಹೇಗೆ ಜ್ಞಾನ ಪಡೆದು ಜ್ಞಾನಿಗಳಾಗಿ ಯೋಗಿಗಳಂತೆ ಜೀವಿಸಬೇಕಿತ್ತು.
ಇವೆಲ್ಲವೂ ಹಿಂದಿನ ಮಹಾತ್ಮರೆ ನಡೆದು ನುಡಿದು ಹೋಗಿರುವಾಗ ಅದರ ಸಾರಾಂಶ,ತತ್ವವೇ ನಮಗೆ ರಸಾಯನವಾದರೆ ಉತ್ತಮ ಬದಲಾವಣೆ. ಭಾರತವನ್ನು ವಿದೇಶಮಾಡೋದು ಅಜ್ಞಾನ.
ವಿದೇಶದಲ್ಲಿರುವ ಭಾರತೀಯರನ್ನು ಕರೆತರಲು ಸಾಧ್ಯವೆ?
ಎಲ್ಲಿಗೆ ಹೋಗುತ್ತಿದೆ ಭಾರತ? ನಾವ್ಯಾರು? ಪ್ರತಿಭಾವಂತರಿಗೆ
ಅವಕಾಶ ನೀಡದೆ ಪ್ರತಿಮೆಗಳಿಗೆ ಹಣ ಸುರಿದರೆ ದೇಶಕ್ಕೆ ನಷ್ಟ. ಆತ್ಮಾವಲೋಕನ ಅಗತ್ಯವಿದೆ. ನೆಲಜಲ ವ್ಯವಹಾರ ಬೇಕು ಧರ್ಮ ಶಿಕ್ಷಣ ಬೇಡವೆ?
No comments:
Post a Comment