ಎಷ್ಟೋ ಮಹಾತ್ಮರು ಆ ಗೀತೆಯ ಸಾರಾಂಶವನ್ನು ಜ್ಞಾನದಿಂದ ಅರ್ಥ ಮಾಡಿಕೊಂಡು ಮುಕ್ತಿ ಪಡೆದಿದ್ದಾರೆ. ಆದರೆ ಭಾರತದಲ್ಲಿ ಪ್ರಚಾರವೇನೋ ನಡೆದಿದೆ. ಹಲವರಿಗೆ ಹಲವು ರೀತಿಯಲ್ಲಿ ಗೀತೆಯ ಅರ್ಥ ತಿಳಿದು ತಿಳಿಸಿದ್ದಾರೆ. ದೇಶದಲ್ಲಿನ ಸಮಸ್ಯೆ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಆದರೆ ಸಮಸ್ಯೆಗೆ ಕಾರಣ ಮತ್ತು ಪರಿಹಾರ ಮಾತ್ರ ಹಣದಿಂದ, ಅಧಿಕಾರದಿಂದ ಸಿಗುವುದಾಗಿದ್ದರೆ ಎಲ್ಲರ ಮನೆಯ ಸಮಸ್ಯೆ ಬಗೆಹರಿದು ನೆಮ್ಮದಿಯಿಂದ ಇರಬಹುದಿತ್ತು. ಸರ್ಕಾರದ ಸಾಲ ಪ್ರಜೆಗಳ ತಲೆಮೇಲೆ ಏರುತ್ತಿದೆ. ಇದನ್ನು ತೀರಿಸಲಾಗದೆ ವಿದೇಶದ ಕಡೆ ಮುಖಮಾಡಿ ಮನೆ ಬಿಟ್ಟು ದೂರವಾಗುತ್ತಿದ್ದಾರೆ. ಹಾಗೆಯೇ
ಹಳ್ಳಿಗಳನ್ನು ದಿಲ್ಲಿ ಮಾಡುವತ್ತ ವೈಜ್ಞಾನಿಕ ಚಿಂತನೆಗಳೂ ರಭಸದಿಂದ ನಡೆದಿದೆ. ಇವೆಲ್ಲದರ ಪರಿಣಾಮ ಏನಾಯಿತು?
ಪ್ರಕೃತಿವಿಕೋಪಗಳು ಬೆಳೆದವು. ರೋಗ ಹೆಚ್ಚಾಯಿತು, ಸಂಬಂಧ ಗಳು ವ್ಯವಹಾರಕ್ಕೆ ಸೀಮಿತವಾಯಿತು. ಪಕ್ಷಗಳು ಬೆಳೆದವು. ಪಕ್ಷಪಾತದಿಂದ ಭಿನ್ನಾಭಿಪ್ರಾಯ ಹೆಚ್ಚಾಗಿ ಜನರಲ್ಲಿ ಅಜ್ಞಾನ ಆವರಿಸಿ ಭ್ರಷ್ಟಾಚಾರ ಮುಗಿಲುಮುಟ್ಟಿತು. ಭೂಮಿ ಮೇಲಿದ್ದು ಆಕಾಶದೆತ್ತರ ಹಾರೋ ಕನಸಿನ ಹಿಂದೆ ಯುವಜನತೆ ಮುಂದೆ ಹೋಗುತ್ತಾ
ನಡುರಸ್ತೆಯಲ್ಲಿ ನಿಂತು ದಾರಿತಪ್ಪಿದರೆ ಪೋಷಕರು ಕಾರಣರೆ? ಸರ್ಕಾರ ಕಾರಣವೆ? ಅಥವಾ ಅಜ್ಞಾನದ ಶಿಕ್ಷಣವೆ?
ಪ್ರತಿಯೊಂದು ದೇಶಕ್ಕೂ ಅದರದೇ ಆದ ಮೂಲ ಧರ್ಮ, ಕರ್ಮ ದ ಜ್ಞಾನದ ಶಿಕ್ಷಣವಿರುತ್ತದೆ. ವಿದೇಶಗಳಲ್ಲಿ ಅವರ ಶಿಕ್ಷಣದಿಂದ ದೇಶೋದ್ದಾರ ಆದರೂ ಭಾರತದ ಜ್ಞಾನವನ್ನು ಯಾವ ದೇಶವೂ ಸಂಪೂರ್ಣ ತಿಳಿಯಲಾಗದು. ಇದೊಂದು ಧರ್ಮ ಭೂಮಿ, ಧರ್ಮದ ಪ್ರಕಾರ ನಡೆದ ತಪೋಭೂಮಿ. ಯೋಗಿಗಳ ದೇಶಕ್ಕೆ ಯೋಗ್ಯ ಶಿಕ್ಷಣವೇ ಮೂಲಾಧಾರ. ಮೂಲಾಧಾರದಿಂದ ನಿಧಾನವಾಗಿ ಮೇಲೆ ಮೇಲಿನ ಚಕ್ರ ಶುದ್ದಿ ಮಾಡಿಕೊಂಡ ಮಹಾತಪಸ್ವಿಗಳನ್ನು ನಮ್ಮಂತಹ ತಾಮಸ ಗುಣದವರಿಂದ ಅರ್ಥ ಮಾಡಿಕೊಳ್ಳಲು ಕಷ್ಟ. ಹೀಗಾಗಿ ಮೂಲದ ಶಿಕ್ಷಣವನ್ನು ಯಾವುದೇ ಪಕ್ಷಪಾತವಿಲ್ಲದೆ
ಜನಸಾಮಾನ್ಯರಿಗೆ ನೀಡುವುದು ಧರ್ಮ. ಆದರೆ ಇದರ ಹಿಂದೆ ರಾಜಕೀಯವಿದ್ದರೆ ಕಷ್ಟನಷ್ಟ. ಒಟ್ಟಿನಲ್ಲಿ ಹೇಳುವುದಾದರೆ ಅಂದಿನ ರಾಜಪ್ರಭುತ್ವದ ಸಿದ್ದಾಂತ ವನ್ನು ಇಂದಿನ ಪ್ರಜಾಪ್ರಭುತ್ವದಲ್ಲಿ ಶಿಕ್ಷಣದಿಂದ ಅಳವಡಿಸಿಕೊಂಡು ನಮ್ಮೊಳಗೇ ಅಡಗಿರುವ ಆ ಮಹಾತ್ಮನ
ಕಡೆಗೆ ಹೋಗುವುದರಿಂದ ಇದ್ದಲ್ಲಿಯೇ ಬದಲಾವಣೆಗೆ ಸಹಕಾರ ನೀಡಬಹುದಷ್ಟೆ. ಇಲ್ಲಿರುವ. ಎಲ್ಲಾ ಪಕ್ಷಗಳೂ ಜನಸಹಕಾರದಿಂದಲೇ ಹುಟ್ಟಿ,ಬೆಳೆದು ಮುಂದೆ ನಡೆದಿದೆ. ಒಮ್ಮೊಮ್ಮೆ ಒಂದೊಂದು ಪಕ್ಷ ಆಡಳಿತಕ್ಕೆ ಬಂದಾಗಲೂ ಜನರ ಬೇಡಿಕೆಗಳನ್ನು ಈಡೇರಿಸುವತ್ತ ನಡೆದು ತಮ್ಮ ಅಧಿಕಾರ ಉಳಿಸಿಕೊಳ್ಳಲು ಹೋರಾಡಿದೆ. ಅಂದಿನ ಜನರೆ ಇಂದೂ ಇರೋದು. ಪಕ್ಷಾಂತರ ಆದರೂ ಹಿಂದಿನ ಪಕ್ಷದ ಉದ್ದೇಶ ವನ್ನು ಮುಂದುವರಿಸಿರೋದು ಸತ್ಯ. ಜನರ ಸಾಲದ ಸಮಸ್ಯೆಗೆ ಸಾಲಮನ್ನಾ ಮಾಡಿದರೂ ಭಗವಂತನ ಸಾಲವನ್ನು ಸರ್ಕಾರ ಮನ್ನಾ ಮಾಡಲಾಗದು. ಹೀಗಿರುವಾಗ ಅವರವರ ಸಾಲ ತೀರಿಸಲು ಸತ್ಕರ್ಮ, ಸದಾಚಾರ, ಸನ್ಮಾರ್ಗ ಸರಳ ಜೀವನ,ಸತ್ಯದ. ಮಾರ್ಗದಿಂದ ಸಾಧ್ಯ ಎನ್ನುವ ಸತ್ಯವನ್ನು ಮಹಾತ್ಮರುಗಳು ಹಿಂದೆಯೇ ತಿಳಿದು ನಡೆದು ತಿಳಿಸಿ ಮುಕ್ತರಾಗಿರೋದು ಎಲ್ಲರಿಗೂ ತಿಳಿದಿದೆ. ಆದರೆ ಯಾಕೆ ನಡೆಯಲಾಗುತ್ತಿಲ್ಲವೆಂದಾಗ ಅವರಲ್ಲಿದ್ದ ತತ್ವಜ್ಞಾನ,ಸತ್ಯಜ್ಞಾನ,ಧರ್ಮ ಜ್ಞಾನ ನಮ್ಮಲ್ಲಿ ಹಿಂದುಳಿದಿದೆ.
ಇದನ್ನು ಕೊಡಬೇಕಾದ ಶಿಕ್ಷಣವೇ ಹಿಂದುಳಿದಿದೆ.ಶಿಕ್ಷಣವೂ
ವ್ಯವಹಾರಮಯವಾಗಿ ಹಣವಿದ್ದವರ ಪಾಲಾಗುತ್ತಿದೆ. ಜ್ಞಾನವಿರುವವರಲ್ಲಿ ಹಣದ ಅಭಾವ, ಹಣವಿದ್ದವರಲ್ಲಿ ಜ್ಞಾನದ ಕೊರತೆ. ಹೀಗಾಗಿ ಸಮಾಜದಲ್ಲಿ ಅಸಮಾನತೆಯ ಹೋರಾಟ ನಡೆದಿದೆ. ಇದಕ್ಕೆ ನಮ್ಮದೇ ಸಹಕಾರ. ನಮ್ಮ ಜೀವರಕ್ಷಣೆಗೆ ಸರ್ಕಾರದ ಹಣ. ಇದೇ ಋಣವಾಗಿ ಬೆಳೆದು ಮಕ್ಕಳು ಮೊಮ್ಮಕ್ಕಳ ಕಾಲಕ್ಕೆ ಋಣಭಾರದಿಂದ ಪೋಷಕರ ವಿರುದ್ದ ನಿಲ್ಲುವವರನ್ನು ಸರ್ಕಾರ ತಡೆಯಲು ಕಷ್ಟ. ಪಕ್ಷಗಳ ಒಗ್ಗಟ್ಟಿನಿಂದ ದೇಶ ಒಂದಾಗೋ ಬದಲು ಒಡೆದುಹೋದರೆ
ಯಾರಿಗೆ ಲಾಭ? ಪರಕೀಯರ ವ್ಯವಹಾರ ಬೇಕು ಅವರ ಧರ್ಮ ಬೇಡ. ಅವರ ಜ್ಞಾನ ಬೇಕು ಅವರ ರಾಜಕೀಯ ಬೇಡ. ಹೀಗಾಗಿ ಇಂದಿಗೂ ನಮ್ಮೊಳಗೇ ದ್ವೇಷ ಹೆಚ್ಚಾಗುತ್ತಾ
ಅಜ್ಞಾನದಿಂದ ಜನರು ಹೋಗುತ್ತಿದ್ದರೆ ಜ್ಞಾನ ಸಿಗದೆ ಮುಕ್ತಿ ಇಲ್ಲ. ಜ್ಞಾನ ಸಿಗೋದಕ್ಕೆ ರಾಜಕೀಯ ಬಿಡಲ್ಲ. ಹಾಗಾದರೆ ಇದಕ್ಕೆ ಪರಿಹಾರ ಒಳಗಿದೆಯೋ ಹೊರಗಿದೆಯೋ? ಆತ್ಮರಕ್ಷಣೆಗಾಗಿ ಅಧ್ಯಾತ್ಮ ದೆಡೆಗೆ ನಡೆದ ಯೋಗಿಗಳ ದೇಶ ಜೀವರಕ್ಷಣೆಗಾಗಿ ಹೋರಾಟದ ಹಾದಿ ಹಿಡಿದು ಜೀವ ಹೋದರೆ ತಿರುಗಿ ಬರಲೇಬೇಕು. ತಿರುಗಿ ಬಂದಿರುವ ಎಷ್ಟೋ ಮಕ್ಕಳಿಗೆ ಸರಿಯಾದ ಶಿಕ್ಷಣದಿಂದ ಜ್ಞಾನ ಹೆಚ್ಚಿಸಿದರೆ ಆತ್ಮನಿರ್ಭರ ಭಾರತ ಸಾಧ್ಯ. ಇದರಲ್ಲಿಯೂ ಪೋಷಕರು ತಮ್ಮ ಭೌತಿಕ ದ ಸ್ವಾರ್ಥ ಅಹಂಕಾರ ಬಿಡದೆ ಮಕ್ಕಳನ್ನು ಅಜ್ಞಾನದೆಡೆಗೆ ಎಳೆದು ಆಳಿದರೆ ಶೋಷಣೆ ಮಾಡುವ ಮಕ್ಕಳೇ ಮುಂದೆ ಬೆಳೆಯೋದು. ಇದನ್ನು ತಪ್ಪಿಸಲು ಆ ಭಗವಂತನಿಗೂ ಕಷ್ಟ. ಭೂಮಿ ಮೇಲಿರುವಾಗಲೇ ಅಧ್ಯಾತ್ಮ ಸತ್ಯವನ್ನು ಅರ್ಥ ಮಾಡಿಕೊಂಡ ಯೋಗಿಗಳ ದೇಶವನ್ನು ಭೋಗಕ್ಕೆ ಬಳಸಿ ರೋಗಿಗಳ ದೇಶ ಮಾಡಿರುವ ಈ ಪಕ್ಷಪಾತವೇ ಮಾನವನಿಗೆ
ಶತ್ರುವಾಗಿರುವಾಗ ಯಾವ ಪಕ್ಷ ಸರಿ ಯಾವುದು ತಪ್ಪು ಎನ್ನುವ ಬದಲಾಗಿ ನಮ್ಮ ಸಹಕಾರದಲ್ಲಿರುವ ಲೋಪಧೋಷವನ್ನು ಜ್ಞಾನದಿಂದ ಕಂಡುಕೊಂಡರೆ ಉತ್ತಮ.ಇದು ಎಲ್ಲರಿಗೂ ಕಷ್ಟವಾದರೂ ಸಾಧ್ಯವಾದವರು
ತಿರುಗಿ ಬರಬಹುದು.ಹಿಂದೂ ದೇಶ ಹಿಂದಿನವರ ಜ್ಞಾನದಿಂದ
ಮುಂದಿತ್ತು. ಈಗಿದು ವೈಜ್ಞಾನಿಕ ವಾಗಿ ಮುಂದುವರಿಯುತ್ತ ತತ್ವಜ್ಞಾನದಿಂದ ಹಿಂದುಳಿದರೆ ಒಳಗಿನ ಶಕ್ತಿ ಕುಸಿದು ಕಷ್ಟ ನಷ್ಟ ಅನುಭವಿಸೋದು ದೇಹವೇ. ದೇಶದೊಳಗಿರುವ ಎಲ್ಲಾ ಪ್ರಜೆಗಳಲ್ಲಿ ಧಾರ್ಮಿಕ ಪ್ರಜ್ಞೆ ಯಿದೆ.ಆದರೆ ರಾಜಕೀಯ ಪಕ್ಷಗಳ ಮೂಲಕ ಅದನ್ನು ಬೆಳೆಸುವತ್ತ ಹೊರಗೆ ಹೊರಟು ಶಿಕ್ಷಣವೇ ಅಧರ್ಮದೆಡೆಗೆ ನಡೆದರೆ ಮಕ್ಕಳ ಭವಿಷ್ಯವನ್ನು ಸರ್ಕಾರ ನಿರ್ಧಾರ ಮಾಡುವುದೆ? ಶಿಕ್ಷಣ ನೀತಿ
ಜಾರಿಗೆ ತರುವಲ್ಲಿಯೇ ಪಕ್ಷಗಳ ವಿರೋಧ. ಇದಕ್ಕೆ ಜನರ ಸಹಕಾರ ಹೀಗೇ ಮುಂದೆ ನಡೆದರೆ ಹಿಂದೂ ಧರ್ಮ ಉದ್ದಾರ ಆಗೋದಾಗಿದ್ದರೆ ಇಷ್ಟು ವರ್ಷ ಕಾಯುವ ಅಗತ್ಯವಿರಲಿಲ್ಲ. ಆದರೂ ಬದಲಾವಣೆಯ ಗಾಳಿ ಬೀಸಿದೆ.ಆ ಗಾಳಿಯನ್ನು ಸದ್ಬಳಕೆ ಮಾಡಿಕೊಂಡರೆ ಆರೋಗ್ಯವಂತ ಸಮಾಜ. ದುರ್ಭಳಕೆ ಮಾಡಿ ಆಳಿದರೆ ರೋಗ. ಪ್ರಜಾಪ್ರಭುತ್ವದ ಪ್ರಜೆಗಳೇ ಇದಕ್ಕೆ ಕಾರಣವಾದಾಗ ಸರ್ಕಾರ ಏನೂ ಮಾಡಲಾಗದು.
No comments:
Post a Comment