ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಭಾರತದಲ್ಲಿ ಆಚರಿಸಲಾಗುತ್ತಿದೆ. ಡಾ. ರಾಧಾಕೃಷ್ಣನ್ ರಂತಹ ಮಹಾಶಿಕ್ಷಕರಲ್ಲಿದ್ದ ಮಹಾಜ್ಞಾನವನ್ನು ಸ್ವಲ್ಪ ಮಟ್ಟಿಗೆ ಎಲ್ಲಾ ಶಿಕ್ಷಕರಲ್ಲಿಯೂ ಕಾಣಬಹುದು. ಗುರುವೇ ಬೇರೆ ಶಿಕ್ಷಕರೆ ಬೇರೆ ಎನ್ನುವ ಭಾವನೆಯಲ್ಲಿ ಮಕ್ಕಳು ಭೌತಿಕದಲ್ಲಿ ನಡೆದಿರುವ ಭಾರತ ಇಂದಿಗೂ ಎಲ್ಲಿ ತಪ್ಪಿರುವುದೆನ್ನುವ ಪ್ರಶ್ನೆಗೆ ಉತ್ತರ ಹುಡುಕುವುದರಲ್ಲಿಯೇ ಕಾಲ ಹಾಕುತ್ತಿದೆ.ಕೆಲವರು ತಿರುಗಿ ಬರುವ ಪ್ರಯತ್ನದಲ್ಲಿರೋದು ಸಂತೋಷಕರ ವಿಚಾರವಾದರೂ ಸಮಾಜದ ಕಟ್ಟಕಡೆಯ ಪ್ರಜೆಗಳವರೆಗೆ ಈ ಬದಲಾವಣೆ ಆದಾಗಲೇ ಭಾರತ ಆತ್ಮನಿರ್ಭರ ವಾಗಲು ಸಾಧ್ಯ.ಆತ್ಮಜ್ಞಾನದಿಂದ ವೈಜ್ಞಾನಿಕ ಪ್ರಗತಿ ಕಾಣುತ್ತಾ ಮುಂದೆ ನಡೆದಂತೆಲ್ಲಾ ಅಧ್ಯಾತ್ಮ ವೇ ಹಿಂದುಳಿದಾಗಲೇ ಅಜ್ಞಾನ ಬೆಳೆಯುವುದು. ಮತ್ತೆ ಅಧ್ಯಾತ್ಮ ವನ್ನು ಬೆಳೆಸುವುದಷ್ಟೆ ಇದಕ್ಕೆ ಪರಿಹಾರ.ಆದರೆ ಇದರಲ್ಲಿ ರಾಜಕೀಯವಿರದೆ ರಾಜಯೋಗವಿದ್ದರೆ ಶಿಕ್ಷಕರು ಗುರುಗಳು ಸ್ವಯಂ ಆತ್ಮಾವಲೋಕನ ಮಾಡಿಕೊಳ್ಳಬಹುದು.ಹಿಂದಿನ ಕಾಲದ ಶಿಕ್ಷಣದ ವಿಚಾರದ ಜೊತೆಗೆ ಶಿಕ್ಷಕರೂ ಪರಿಶುದ್ದವಾಗಿದ್ದು ಮಕ್ಕಳು ಅವರಲ್ಲಿ ಭಕ್ತಿ ಭಯವನ್ನಿಟ್ಟುಕೊಂಡಿದ್ದರು.ಈಗಿದು ಮರೆಯಾಗುತ್ತಿದೆ.
ಭಾರತೀಯ ಶಿಕ್ಷಣದ ಮೂಲ ಉದ್ದೇಶ ಜ್ಞಾನವನ್ನು ಬೆಳೆಸಿ ಯೋಗಿಗಳಂತೆ ಜೀವನ ನಡೆಸುವುದಾಗಿದೆ. ಎಲ್ಲೋ ಒಂದೆಡೆ ಎಡವಿದ ಈ ಶಿಕ್ಷಣ ಪದ್ದತಿ ಇಂದು ಭೋಗ ಜೀವನಕ್ಕಾಗಿ, ಹಣ ಸಂಪಾದನೆಯ ಗುರಿಯಲ್ಲಿ ಮುಂದೆ ನಡೆದು ಭೌತಿಕ ಜಗತ್ತಿನಲ್ಲಿ ಶಿಕ್ಷಣ ವಿದೇಶದವರೆಗೆ ಹರಡಿದೆ. ಶಿಕ್ಷಣ ಎಂದರೆ ಶಿಕ್ಷೆ ನೀಡುವ ಕ್ಷಣ ಎನ್ನುವ ಮಟ್ಟಿಗೆ ಮಕ್ಕಳಲ್ಲಿ ಭಯ ಹುಟ್ಟಿಸುವಂತಾಗಬಾರದಷ್ಟೆ. ಶಿಕ್ಷೆ ಇಲ್ಲದೆ ಯಾವುದೇ ಶಿಷ್ಯನ ಉದ್ದಾರ ಆಗೋದಿಲ್ಲ.ಆದರೂ ಯಾವ ವಿಷಯವನ್ನು ಕಲಿಯದಿದ್ದರೆ ಯಾವ ವಿಚಾರದಲ್ಲಿ ಆಸಕ್ತಿ ತೋರದಿದ್ದರೆ ಶಿಕ್ಷೆ ನೀಡಿ ಕಲಿಸಲಾಗುತ್ತಿತ್ತೋ ಅದನ್ನು ಬಿಟ್ಟು
ಅನಾವಶ್ಯಕ, ಪ್ರಭುದ್ದ ವಿಚಾರಗಳನ್ನು ತಲೆಗೆ ನೇರವಾಗಿ ತುಂಬಿದಾಗ ಮಕ್ಕಳು ಆಸಕ್ತಿ ತೋರದಿದ್ದರೆ ಶಿಕ್ಷೆ ನೀಡುವ ಮೂಲಕ ಕಲಿಸುವುದರಿಂದ ಮಕ್ಕಳ ಮನಸ್ಸಿಗಾಗಲಿ ಭವಿಷ್ಯಕ್ಕಾಗಲಿ,ಜ್ಞಾನಕ್ಕಾಗಲಿ ಸಮಸ್ಯೆ ಹೆಚ್ಚಾಗುತ್ತಿದೆ.ಶಿಕ್ಷಕ ಎನ್ನುವ ಪದವನ್ನು ಶಿ- ಶಿಸ್ತಿನಿಂದ, ಕ್ಷ-ಕ್ಷಮಿಸುತ್ತಾ,ಕ-ಕಲಿಸುವವರು ಎಂದಾದರೆ ಮಕ್ಕಳಲ್ಲಿ ಯಾವುದೇ ಶಿಸ್ತು,ವಿನಯ ಉತ್ತಮ ಕಲಿಕೆಯಲ್ಲಿ ಹಿಂದುಳಿಯುತ್ತಿದ್ದಾ
ರೆಂದರೆ ಪೋಷಕರು,ಶಿಕ್ಷಕರು,ಶಿಕ್ಷಣ ಸಂಸ್ಥೆ, ಸರ್ಕಾರ ಚಿಂತನೆ ನಡೆಸುವುದು ಇಂದು ಅಗತ್ಯವಾಗಿದೆ. ಯಾವುದನ್ನು ಕಲಿತರೆ ಶಿಷ್ಟಾಚಾರ ಬೆಳೆಯುವುದೋ ಅದೇ ನಿಜವಾದ ಶಿಕ್ಷಣ. ಯಾರು ಶಿಷ್ಟಾಚಾರವನ್ನು ಕಲಿಸುವರೋ ಅವರು ಶಿಕ್ಷಕರು. ಡಾ.ಸರ್ವಪಲ್ಲಿ ರಾಧಾಕೃಷ್ಣನ್ ರವರ ಜೀವನ ಚರಿತ್ರೆ ಗಮನಿಸಿದರೆ ಜೀವನದಲ್ಲಿ ಸಾಕಷ್ಟು ಕಷ್ಟಪಟ್ಟು ಶಿಕ್ಷಣ ಪಡೆದು ಮಹಾಶಿಕ್ಷಕರಾಗಿದ್ದು ಸೇವೆಯನ್ನು ನಿಸ್ವಾರ್ಥ ನಿರಹಂಕಾರದಿಂದ ಮಾಡಿದವರು. ಹಾಗೆಯೇ ದೇಶದ ರಾಜಕೀಯದಲ್ಲಿದ್ದು ದೇಶದ ಭವಿಷ್ಯಕ್ಕಾಗಿ ತಮ್ಮ ಸೇವೆಯ ಮೂಲಕ ಜನರಲ್ಲಿ ಅರಿವನ್ನು ಹೆಚ್ಚಿಸಿದ ಮಹಾವ್ಯಕ್ತಿತ್ವದ ಮಹಾತ್ಮರೆನ್ನಬಹುದು. ಅವರ ಶಿಕ್ಷಣವು ಅಧ್ಯಾತ್ಮದ ಕಡೆಗೆ ನಡೆಸಿರೋದೆ ಇದಕ್ಕೆ ಕಾರಣ.ಇಲ್ಲಿ ಅಧ್ಯಾತ್ಮ ಎಂದರೆ ತನ್ನ ಆತ್ಮಾನುಸಾರ ನಡೆಯಲು, ತನ್ನ ತಾನರಿತು ನಡೆಯಲು ಬೇಕಾದ ಒಂದು ತತ್ವ ಜ್ಞಾನವೆನ್ನಬಹುದು.ತಂತ್ರಜ್ಞಾನದಿಂದ ನಮ್ಮ ಶಿಕ್ಷಣವು ಬೆಳೆದಿದೆ.ಮೂಲದ ತತ್ವದೆಡೆಗೆ ನಡೆದರೆ ಬದಲಾವಣೆ ಸಾಧ್ಯವಿದೆ. ಸ್ವದೇಶವನ್ನು ವಿದೇಶ ಮಾಡೋದರಿಂದ ಅಧರ್ಮ ಬೆಳೆದರೆ, ಸ್ವದೇಶವನ್ನು ಸ್ವದೇಶವನ್ನಾಗಿಸಿ ಮಕ್ಕಳಲ್ಲಿ ದೇಶಭಕ್ತಿ ಮೂಡಿಸುವುದೆ ನಿಜವಾದ ಧರ್ಮ ಶಿಕ್ಷಣ. ಧರ್ಮ ಶಿಕ್ಷಣವೆಂದರೆ ಪುರಾಣ,ಇತಿಹಾಸ,ವೇದ ವಿದ್ಯೆಯಷ್ಟೆ ಎನ್ನುವ ಮಟ್ಟಿಗೆ
ಬೆಳೆದು ಭೌತಿಕ ವಿಜ್ಞಾನದಿಂದ ದೂರವಾಗುತ್ತಾ ಅಂತರದಲ್ಲಿ ವಿದೇಶಿಗಳ ಪ್ರವೇಶವಾದ ಮೇಲೆ ಮಧ್ಯವರ್ತಿಗಳು ತಮ್ಮ ಸ್ಥಾನಮಾನವನ್ನು ಬೆಳೆಸಿಕೊಂಡರೆ ಇದರಿಂದಾಗಿ ಶಿಕ್ಷಣದ ಸತ್ವ ಕುಸಿಯುತ್ತದೆ.ನೈತಿಕತೆ ಮಾಯವಾದರೆ ಅನೈತಿಕತೆ ಹೆಚ್ಚುತ್ತದೆ. ಸತ್ಯ ಹಿಂದುಳಿದರೆ ಅಸತ್ಯವೇ ಮಕ್ಕಳನ್ನು ಆಳುತ್ತದೆ. ಸತ್ಯವಿಲ್ಲದ ಧರ್ಮ ಕುಂಟುತ್ತದೆ. ಈ ಕುಂಟು ಕುರುಡರ ನಡುವೆ ರಾಜಕೀಯ ಸೇರಿಸಿಕೊಂಡರೆ ಶಿಕ್ಷೆಯೇ ಗತಿ. ಒಟ್ಟಿನಲ್ಲಿ ಬದಲಾವಣೆ ಶಿಕ್ಷಣದಲ್ಲಿಯೇ ಮಾಡದೆ ಜನರನ್ನು ಆಳೋದರಲ್ಲಿ,ಮಕ್ಕಳನ್ನು ಅಳಿಸುವುದರಲ್ಲಿ ಯಾವ ಅರ್ಥ ವೂ ಇಲ್ಲ.
ಕ್ಷಮಿಸಿ, ಶಿಕ್ಷಣ ಕ್ಷೇತ್ರದಲ್ಲಿ ನಡೆಯುತ್ತಿರುವ ಮಕ್ಕಳ ಮೇಲಿನ ದೌರ್ಜನ್ಯ ಕೇವಲ ಕೆಲವರಿಗಷ್ಟೇ ಕಾಣಬಹುದು.
ಆಧ್ಯಾತ್ಮ ಹಾಗು ಭೌತಿಕದ ನಡುವಿರುವ ಸಾಮಾನ್ಯರ ಸಾಮಾನ್ಯ ಜ್ಞಾನವಿಲ್ಲದೆ ಮಕ್ಕಳಿಗೆ ವಿಶೇಷ ಜ್ಞಾನವನ್ನು ಹೊರಗಿನಿಂದ ಒತ್ತಾಯದಿಂದ ತುಂಬುವುದು ಸುಲಭವಲ್ಲ.
ಅದನ್ನು ಸುಲಭವಾಗಿಸಲು ಶಿಕ್ಷಕರಾದವರು ಮೊದಲು ಮಕ್ಕಳ ಮೂಲ ಪ್ರತಿಭೆ,ಆಸಕ್ತಿ,ಯೋಗ್ಯತೆಯನ್ನು
ಪ್ರೀತಿಯಿಂದ ಪೋಷಕರ ಸಹಕಾರದಿಂದ ಕಂಡುಕೊಂಡು ಮನೆಯೊಳಗೆ ಹೊರಗೆ ಏಕರೀತಿಯ ಶಿಕ್ಷಣ ನೀಡಿದರೆ ಅಲ್ಪ ಸಮಯದಲ್ಲಿ ಸರಳವಾಗಿರುವ ವಿಷಯವನ್ನು ಸುಲಭವಾಗಿ ಅರ್ಥ ಮಾಡಿಕೊಂಡು ಮಕ್ಕಳು ಯಾವುದೇ ಶಿಕ್ಷೆಯಿಲ್ಲದೆ
ಕಲಿಯಬಹುದು.ಇದಕ್ಕೆ ಪೋಷಕರು ,ಶಿಕ್ಷಕರು ತಯಾರಾಗಬೇಕು. ಇಂದಿನ ಮಕ್ಕಳೇ ಮುಂದಿನ ದೇಶದ ಪ್ರಜೆಗಳು.ಇಲ್ಲಿ ನಮ್ಮ ದೇಶದ ಪ್ರಜೆಯಾಗಿ ಸೇವೆ ಸಲ್ಲಿಸಲು ಬೇಕಾದ ಯೋಗ್ಯ ಶಿಕ್ಷಣ ನೀಡುವುದು ಧರ್ಮ. ಮುಂದಿನ ದೇಶ ಅಂದರೆ ವಿದೇಶ ಶಿಕ್ಷಣ ನೀಡಿ ಬೆಳೆಸಿದರೆ ಅವರಿಗೆ ಕೆಲಸವೂ ವಿದೇಶಿ ಕಂಪನಿಗಳೇ ಕೊಡಬೇಕು.ವಿದೇಶದಲ್ಲಿ ದುಡಿಯಬೇಕು.ಇದು ದೇಶ ಸೇವೆಯಾಗಲಾರದಲ್ಲವೆ?
ಇದೊಂದು ಸಾಮಾನ್ಯಜ್ಞಾನದ ಸತ್ಯ. ನಮ್ಮಲ್ಲಿರುವ ಅಗಾಧವಾದ ಅಧ್ಬುತ ಪ್ರತಿಭೆ,ಜ್ಞಾನಶಕ್ತಿ ನಾವೇ ತಿರಸ್ಕರಿಸಿ
ನಡೆದರೆ ತಪ್ಪು ಯಾರದ್ದು? ಮಕ್ಕಳದ್ದೆ? ಪೋಷಕರದ್ದೇ? ಶಿಕ್ಷಕರದ್ದೆ? ಎಲ್ಲರಿಗೂ ಹಣವೇ ಮುಖ್ಯವಾದರೆ ಗುಣಜ್ಞಾನ ಇಲ್ಲದೆ ಹಣವನ್ನು ದುರ್ಭಳಕೆ ಮಾಡಿಕೊಂಡು ಜೀವನ ನಡೆಸೋದೂ ಸಹಜ. ಪ್ರಜಾಪ್ರಭುತ್ವದ ಜವಾಬ್ದಾರಿ ಪ್ರಜೆ ಎಂದರೆ ಶಿಕ್ಷಕರು.ಶಿಕ್ಷಣದ ಮೇಲೆ ದೇಶದ ಭವಿಷ್ಯ ನಿಂತಿದೆ. ಯೋಗಿಗಳಂತಿದ್ದ ಅಂದಿನ ಶಿಕ್ಷಕರ ಗುರಿ ದೇಶವನ್ನು ಯೋಗ್ಯ ರೀತಿಯಲ್ಲಿ ನಡೆಸುವುದಾಗಿತ್ತು.ಈಗಲೂ ಸಾಕಷ್ಟು ಗುರುಕುಲಗಳಿವೆ.ಆದರೆ ಸಾಮಾನ್ಯರ ಮಕ್ಕಳಿಗೆ ಮರೀಚಿಕೆ ಯಾಗಿದೆ. ಕೆಲವು ಕಡೆ ರಾಜಕೀಯಕ್ಕೆ ಸಹಕರಿಸಿ ಮುಂದೆ ನಡೆದಿದೆ.ರಾಜಕೀಯದಲ್ಲಿ ಭ್ರಷ್ಟಾಚಾರ ಅಡಗಿದೆ.
ಭ್ರಷ್ಟಾಚಾರವನ್ನು ಶಿಕ್ಷಣದಿಂದ ದೂರಮಾಡಬೇಕಿದೆ. ಆದರೆ, ಹಣದ ಮೂಲವೇ ಭ್ರಷ್ಟಾಚಾರ ವಾಗಿದ್ದರೆ ಸರಿಪಡಿಸುವವರು ಯಾರು? ಕೆಲವರು ಮನೆಯೊಳಗೆ ಉತ್ತಮ ಶಿಕ್ಷಣ ನೀಡಿದರೂ ಹೊರಗಿನ ಶಿಕ್ಷಣ ತದ್ವಿರುದ್ಧವಾಗಿ ದ್ದರೆ ಮಕ್ಕಳ ಗತಿ? ಒಟ್ಟಿನಲ್ಲಿ ಶಿಕ್ಷಣ ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸುವ ಕ್ಷಣ ವಾಗಿರಲು ದೇಶೀಯ ಧರ್ಮ, ಸಂಸ್ಕೃತಿ, ಭಾಷೆಯ ಉಳಿಯುವಿಕೆಯತ್ತ ನಡೆದಾಗಲೇ ಉಳಿತಾಯ.ಎಲ್ಲರ ಉಳಿವು ಅಳಿವು ಇದು ಶಿಕ್ಷಣದಲ್ಲಿದೆ.ಶಿಕ್ಷಕರು ವ್ಯವಹಾರಕ್ಕೆ ಸೀಮಿತವಾಗದೆ ಧಾರ್ಮಿಕವಾಗಿ ಅರ್ಥ ಮಾಡಿಕೊಳ್ಳಲು ಶಿಕ್ಷಕರಿಗೂ ಧರ್ಮ ಶಿಕ್ಷಣವಿರಬೇಕು.ಡಾ. ರಾಧಾಕೃಷ್ಣನ್ ರವರಂತಹ ಮಹಾ ದೇಶಭಕ್ತರ ಶಿಕ್ಷಕರ ಸಂಖ್ಯೆ ಸಾವಿರವಾಗಲಿ.ಅವರಂತಹ ಶಿಕ್ಷಕರನ್ನು ಪಡೆಯುವ ಮಕ್ಕಳ ಸಂಖ್ಯೆ ಕೋಟಿಯಾಗಲಿ. ಕೋಟಿ ಜನಸಂಖ್ಯಯಿರುವ ಈ ದೇಶ ಇಂದು ಅಧರ್ಮ, ಅನ್ಯಾಯ ಅಸತ್ಯದ ಭ್ರಷ್ಟಾಚಾರದಲ್ಲಿದೆ ಎಂದಾಗ ನಮಗೇ ತಿಳಿಯದೆ ನೀಡಿದ ಶಿಕ್ಷಣದ ವಿಷಯವೇ ಕಾರಣವೆನ್ನಬಹು
ದಲ್ಲವೆ?
ಕಾಲ ಮುಗಿಯುತ್ತದೆ.ಬದಲಾವಣೆ ಪ್ರಾರಂಭವಾಗುತ್ತದೆ.
ಬದಲಾವಣೆಗೆ ಸಹಕರಿಸುವುದಷ್ಟೆ ನಮ್ಮೆಲ್ಲರ ಧರ್ಮ. ಧರ್ಮ ವನ್ನು ರಕ್ಷಣೆ ಮಾಡೋರನ್ನು ಧರ್ಮ ವೇ ರಕ್ಷಿಸುತ್ತದೆ. ನಮ್ಮ ಭಾರತೀಯ ಶಿಕ್ಷಣವು ಅಧ್ಯಾತ್ಮದೊಳಗಿನಿಂದ ಭೌತಿಕ ವಿಜ್ಞಾನ ವನ್ನು ಬೆಳೆಸಿತ್ತು.ಈಗಿದು ಇವೆರಡರ ಅಂತರದಲ್ಲಿ ಪರಕೀಯ ಜ್ಞಾನ ಸೇರಿಕೊಂಡು ರಾಜಕೀಯಕ್ಕೆ ಇಳಿದಾಗ ಒಳಗಿರುವ ಮಕ್ಕಳ ಜ್ಞಾನವನ್ನು ಬೆಳೆಸಲಾಗುವುದೆ? ಆತ್ಮಾವಲೋಕನದಿಂದ ಮುಂದಿನ ಪ್ರಜೆಗಳಿಗೆ ಪೋಷಕರು ಮಕ್ಕಳಿಗೆ ಶಿಕ್ಷಣ ನೀಡಿ ಬೆಳೆಸುವುದು ಇಂದಿಗೆ ಅಗತ್ಯವಾಗಿದೆ.
No comments:
Post a Comment