ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Saturday, September 17, 2022

ಪಿತೃಪಕ್ಷದ ವಿಶೇಷ ತರ್ಪಣ


ಪಕ್ಷಮಾಸದ  ತಿಥಿಗಳಲ್ಲಿ  ಯಾರಿಗೆ ಬೇಕಾದರೂ ತರ್ಪಣ ನೀಡಬಹುದು.
ಕಾರಣ, 'ಋಣ' ಕೇವಲ ನಮ್ಮ ಹತ್ತಿರದ ಸಂಬಂಧ ದವರಲ್ಲಿಲ್ಲ ಎಲ್ಲರ ಋಣವೂ ತೀರಿಸಬೇಕೆಂಬುದಾಗಿದೆ. ಪಿತೃಪಕ್ಷ ಎಂದಾಕ್ಷಣ  ಪೋಷಕರು, ಪಿತೃಗಳೆ ಶ್ರೇಷ್ಠ ವೆಂದಾಗುತ್ತದೆ. ಮಾನವ  ಭೂಮಿಯ ಮೇಲೆ ಜೀವನ ನಡೆಸುವಾಗ , ತನ್ನ ಸಂಸಾರಕ್ಕಾಗಿ ಸಮಾಜದ ಋಣವನ್ನು ಹೊತ್ತಿರುವಾಗ ,ಅದರ ಋಣ ತೀರಿಸಲು ಹಲವು ಧಾರ್ಮಿಕ ಕರ್ಮ,ಕ್ರಿಯೆಗೆ  ಮೊರೆಹೋಗಲೇಬೇಕು. ಇದರಲ್ಲಿ ಜಾತಿ ಸೀಮಿತವಾಗಿರುವುದಿಲ್ಲ.ದೇಹ ಬಿಟ್ಟ ಆತ್ಮ ಪರಿಶುದ್ದ.
ಪರಮಾತ್ಮನ ಋಣ ತೀರಿಸಲು ಕಷ್ಟ.ಎಂದಿರುವ ಪ್ರಕಾರ ಇಲ್ಲಿ  ಪರಮಾತ್ಮ  ಚರಾಚರದಲ್ಲಿಯೂ ಅಡಗಿರುವುದು ಸತ್ಯ. ಪಿತೃಗಳಾಗಲಿ,ಪೋಷಕರಾಗಲಿ, ಬಂದು ಮಿತ್ರ ರಾಗಲಿ
 ಪ್ರತಿಯೊಬ್ಬರಿಗೂ  ಜೀವನದಲ್ಲಿ  ನಿಸ್ಸಂಗದಿಂದ ಬದುಕಲು ಕಷ್ಟ. ಸರ್ಕಾರ ಎಂದರೆ ಸಹಕಾರ, ಈ ಸಹಕಾರ ದ ಋಣವನ್ನು ತೀರಿಸುವವರೆಗೆ  ಜೀವಕ್ಕೆ ಮುಕ್ತಿ ಇಲ್ಲವೆಂಬ ಕಾರಣಕ್ಕೆ ಈ ಹೊರಗಿನ  ದಾನ,ಧರ್ಮ, ಆಚಾರ,ವಿಚಾರ,ಪೂಜೆ,ಪುರಸ್ಕಾರ, ದೇವತಾರಾಧನೆ, ...
ಬೆಳೆದು ಬಂದವು. ಯಾರು  ಪ್ರತಿಯೊಂದು ಕಾರ್ಯದಲ್ಲೂ
ಪರಮಾತ್ಮನ  ಕಂಡು ಸೇವೆ ಎಂದು ನಡೆಯುವರೋ ಅವರಿಗೆ  ಮುಕ್ತಿ ಎಂದು  ಮಹಾತ್ಮರು ತಿಳಿಸಿದ್ದಾರೆ. ಈಗ ಎಷ್ಟು ಜನರಿಗೆ ಪ್ರತಿಯೊಬ್ಬರೊಳಗಿರುವ ಪರಮಾತ್ಮನ
ದರ್ಶನ ವಾಗಿದೆ? ಹೀಗಾಗಿ ಅನೇಕ ರೀತಿಯಲ್ಲಿ ಪಾಪಕರ್ಮ
ಬೆಳೆದು,  ಸಾಲ ಬೆಳೆದು, ಅದನ್ನು ತೀರಿಸಲು  ಮುಂದಾಗುತ್ತಾರೆ. ಇದು ಮಕ್ಕಳು ಹುಟ್ಟಿದಾರಂಭದಿಂದಲೇ ತಾಯಿ,ತಂದೆ,ಬಂದು,ಬಳಗ,ಸಮಾಜ,ದೇಶ ವಿಶ್ವದವರೆಗೆ   ಬೆಳೆದ ಋಣವನ್ನು ತೀರಿಸಲು ಕಷ್ಟ. ಇದನ್ನು ಕೇವಲ  ತಮ್ಮ ಮೂಲ ಧರ್ಮ ಕರ್ಮದಲ್ಲಿ  ಸಾತ್ವಿಕತೆಯನ್ನು ಬೆಳೆಸಿಕೊಳ್ಳಲು  ಉತ್ತಮ  ಶಿಕ್ಷಣವನ್ನು, ಪೋಷಕರಾದವರು ಮನೆ  ಒಳಗಿನಿಂದಲೆ  ಕೊಡಲು ಬೇಕು  ಸತ್ಯಜ್ಞಾನ.
ಕಲಿಯುಗದ ಪ್ರಭಾವ, ಮಾನವ ಕೇವಲ ತನ್ನ ಸಂಸಾರದ ಸುಖಕ್ಕೆ ಸಮಾಜದ ಋಣ ಬೆಳೆಸಿಕೊಂಡು  ಪಡಬಾರದ ಕಷ್ಟ ನಷ್ಟಕ್ಕೆ  ಬಲಿಯಾದರೆ  ಇದನ್ನು ಸರ್ಕಾರದಿಂದ  ಸರಿಪಡಿಸಲು  ಅಸಾಧ್ಯ. ಮೊದಲು ಋಣ ಎಂದರೆ ಸಾಲಕರ್ಮ ಎಂದರೆ ಕೆಲಸ ಎಂದರಿತು.ಕಾಯಕವೆ ಕೈಲಾಸವೆಂಬ ಮಂತ್ರದಿಂದ  ದುಡಿದು ಗಳಿಸಿದ ಹಣದಲ್ಲಿ ಪಿತೃಗಳ ಋಣ  ತೀರಿಸಿದರೆ ಶಾಂತಿ,ಮುಕ್ತಿ  ಎರಡೂ
ಇದ್ದಲ್ಲಿಯೇ ಸಿಗುತ್ತದೆ.
ಕೆರೆಯ ನೀರನು ಕೆರೆಗೆ ಚೆಲ್ಲಿದರೆ ಸಮಾನತೆ, ಕೊಳಚೆಗೆ ಬಿಟ್ಟರೆ ? ಋಣಮುಕ್ತರಾಗಲು ಸಾಧ್ಯವೆ?
ಬ್ರಹ್ಮಣ,ಕ್ಷತ್ರಿಯ,ವೈಶ್ಯ,ಶೂದ್ರ ಎನ್ನುವ ನಾಲ್ಕು ವರ್ಣಗಳ ಧರ್ಮ ಕರ್ಮಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಜ್ಞಾನವಿರಬೇಕು.ಅಜ್ಞಾನದಲ್ಲಿಯೇ ಅದನ್ನು ಮೇಲು ಕೀಳೆಂದು ಬೆಳೆಸುತ್ತಾ ಜಾತಿ,ಪಂಗಡ,ಪಕ್ಷಗಳೇನೂ ಬೆಳೆದು ನಿಂತರೂ ಋಣ ಮಾತ್ರ ತೀರಿಸಲಾಗದೆ  ಜೀವ ಮತ್ತೆ ಮತ್ತೆ  ಜನ್ಮಪಡೆದು ಕಷ್ಟ ಅನುಭವಿಸಬೇಕಾಗಿದೆ.ಭೂಮಿಯನ್ನು ಕರ್ಮ ಭೂಮಿ ಎನ್ನಲು ಕಾರಣ ಇಲ್ಲಿ ಮಾತ್ರ ಮಾನವನು ಜನ್ಮ ತಾಳಿ ತನ್ನ ಕರ್ಮದಿಂದ ಮುಕ್ತಿ ಮೋಕ್ಷ ಪಡೆಯುವ ಅವಕಾಶವಿರೋದು.ಇದು ದೇವಾಸುರರಿಗೂ ಇದೆ.ಮೂಲ ಶಕ್ತಿಯನ್ನರಿಯುವುದೇ ಇದಕ್ಕಿರುವ ಮಾರ್ಗ. ಇಲ್ಲಿ ಒಂದೇ ಜನ್ಮದಲ್ಲಿ ಎಲ್ಲಾ ಸಾಧ್ಯವಾಗದ ಕಾರಣ ಸಾಧನೆಯ ಮಾರ್ಗ
ಮಾತ್ರ ತಿಳಿದು ಅದರಂತೆ ಅಧ್ಯಾತ್ಮ ದೆಡೆಗೆ ಸಾಗುವುದೆ ಅಧ್ಯಾತ್ಮ ಸಾಧನೆ. ಹಾಗೆಯೇ ಭೌತಿಕದಲ್ಲಿಯೂ  ಎಲ್ಲರನ್ನೂ ನಡೆಸುವ ಪರಮಾತ್ಮನರಿತು ಉತ್ತಮ ಜೀವನ ನಡೆಸಲು ಪರರಿಗೂ  ಉತ್ತಮ ದಾರಿದೀಪವಾಗುವಂತೆ  ತಾನೂ ನಡೆದು ನಡೆಸುವುದೂ ಸಾಧಕರ ಲಕ್ಷಣ. ಒಂದೇ ತತ್ವದಡಿ ಇದ್ದರೆ ಒಗ್ಗಟ್ಟು ತಂತ್ರಕ್ಕೆ ಒಳಗಾದರೆ ಆಪತ್ತು.
ಗುರು ಹಿರಿಯರ ಜ್ಞಾನವೇ ಕಿರಿಯರಿಗೆ  ಮಾರ್ಗ ದರ್ಶನ.ಎಲ್ಲಿಯವರೆಗೆ ಗುರುಹಿರಿಯರು ಸನ್ಮಾರ್ಗದಲ್ಲಿ ನಡೆಯುವರೋ ಕಿರಿಯರೂ ನಡೆಯಬಹುದು.ಇದನ್ನು ಶಿಕ್ಷಣದಿಂದ ಬೆಳೆಸಲಾಗಿತ್ತು.ಸಂಸ್ಕಾರದಿಂದ ತಿದ್ದಲಾಗಿತ್ತು.
ಸಂಪ್ರದಾಯದಿಂದ ಸರಿಪಡಿಸಲಾಗಿತ್ತು.ಆದರೆ ಅನೇಕ ರೀತಿಯಲ್ಲಿ ಅನೇಕ ಮಾರ್ಗದಲ್ಲಿ ನಡೆಯುವಾಗ ಭಿನ್ನಾಭಿಪ್ರಾಯ ಪ್ರಾರಂಭವಾದ ಕಾರಣ ದ್ವೇಷವೂ ಬೆಳೆದು ಬಿಕ್ಕಟ್ಟು ಹೆಚ್ಚಾಗಿ ಸಂಸಾರವೇ ಬೇರೆ ಸಮಾಜವೇ ಬೇರೆ ದೇಶವೇ ಬೇರೆ,ಧರ್ಮ ವೇ ಬೇರೆ ಎನ್ನುವ ಹಾಗಾಗಿ ಇಂದಿಗೂ ಏಕತೆಯೆಡೆಗೆ ತಿರುಗಲು ಕಷ್ಟ. ಜನರನ್ನು ಒಂದಾಗಿಸಲು ಹಣವನ್ನು ಬಳಸುವಂತಾಗಿದೆ.ಹಣದ ಮೂಲವೇ ಅಧರ್ಮ ವಾಗಿದ್ದರೆ ಬೆಳೆಯುವುದೂ ಅಧರ್ಮ.ಪಿತೃಗಳ  ಜ್ಞಾನ ಧರ್ಮ ಕರ್ಮ ಬಿಟ್ಟು ಆಸ್ತಿ ಮಾತ್ರ ಬಳಸಿದರೆ  ಋಣ ತೀರೋದಿಲ್ಲವೆನ್ನುವುದು  ಸೂಕ್ಷ್ಮ ಸತ್ಯ. ಹಾಗಾದರೆ ಋಣಮುಕ್ತರಾಗಲು ನಾವು ಜನ್ಮ ಪಡೆದ ಕುಟುಂಬದ  ಧರ್ಮ ಕರ್ಮ ವನ್ನರಿತು ಉತ್ತಮ ಸಂಸ್ಕಾರ ಶಿಕ್ಷಣದ ಮೂಲಕ ಜ್ಞಾನ ಬೆಳೆಸಿಕೊಂಡು  ಸಮಾಜದ ಋಣವನ್ನು ತೀರಿಸುವ ಸೇವೆ ಮಾಡಿ ಆ ಪರಮಾತ್ಮನ ನಾಮ ಸ್ಮರಣೆಯಿಂದಲೇ  ಕರ್ಮ ಮಾಡಿದರೆ  ಸಾಲಮನ್ನಾ.
ಹೊರಗಿನ ಆಚರಣೆಯಲ್ಲಿ ನಿಜವಾದ ಶ್ರದ್ದೆ ಭಕ್ತಿ ಜ್ಞಾನ ಇದ್ದರೆ  ಎಲ್ಲಾ ಕರ್ಮವೂ ಶುದ್ದವಾಗುತ್ತದೆ. ಆತ್ಮಕ್ಕೆ ತೃಪ್ತಿ ಶಾಂತಿ ಮುಕ್ತಿ ಸಿಗುತ್ತದೆ. ಯಾರಿಗೆ ಗೊತ್ತು ಯಾರ ಮನೆಯ ಮಕ್ಕಳಾಗಿ ಯಾರ ಗುರು ಹಿರಿಯರಿರುವರೋ  ಒಟ್ಟಿನಲ್ಲಿ ಸಂಸ್ಕಾರಯುತ ಧಾರ್ಮಿಕ ಶಿಕ್ಷಣವಿಲ್ಲದೆ  ಜ್ಞಾನ ಸಿಗದು.
ಮಕ್ಕಳಿಗೆ ಭೌತಿಕ ಆಸ್ತಿ ಮಾಡಲು ಹೋಗಿ ಸಾಲದ ಹೊರೆ ಹಾಕದೆ, ಅಧ್ಯಾತ್ಮ ದಿಂದ ಜೀವನ ನಡೆಸುತ್ತಾ ಜ್ಞಾನದ ಆಸ್ತಿ ಮಾಡಿ. ಇದು ಸಮಾಜವನ್ನು ಉತ್ತಮ ಮಾರ್ಗದಲ್ಲಿ ನಡೆಸಬಹುದು. ಜ್ಞಾನವನ್ನು ಯಾವ ಭ್ರಷ್ಟರೂ ಕದಿಯೋದಿಲ್ಲ. ಗುರು ಹಿರಿಯರ ಜ್ಞಾನದಿಂದಲೇ ಧರ್ಮ ರಕ್ಷಣೆ ಹಣದಿಂದಲ್ಲ.ಏನಂತೀರ?

No comments:

Post a Comment