ಭಾರತ ಮಾತೆ,ಕನ್ನಡಮ್ಮ,ವಿಶ್ವಮಾತೆ,ಜಗದೀಶ್ವರಿ,
ಜ್ಞಾನದೇವತೆ, ಸ್ತ್ರೀ ಶಕ್ತಿಯಿಂದ ನಡೆಯುತ್ತಿರುವ ಈ ಭೂಮಿ ತಾಯಿಯ ಹೆಣ್ಣು ಮಕ್ಕಳಿಗೆ ಯಾಕೆ ಗುರುಕುಲವಿಲ್ಲದೆ ಆಳಿದರು? ಎಂಬ ಪ್ರಶ್ನೆಗೆ ಉತ್ತರವಿಲ್ಲ. ಯಾವಾಗ ಸ್ತ್ರೀ ಶಕ್ತಿ ಅಧ್ಯಾತ್ಮ ವಿದ್ಯೆಯನ್ನು ಕಲಿಯದೆ ಭೌತಿಕ ವಿದ್ಯೆ ಕಲಿಯುವಂತಾಯಿತೋ ಆಗಲೇ ಅಸಮಾನತೆ
ಬೆಳೆಯಿತು.
ಪುರುಷ ಪ್ರಧಾನ ದೇಶವೆಂಬ ಬೇಧಭಾವದಲ್ಲಿಯೇ ಹೆಣ್ಣು ತನ್ನ ಸಮಸ್ಯೆಗೆ ಕಾರಣ ತಿಳಿಯುವ ಜ್ಞಾನವನ್ನು ಆಂತರಿಕ ಶಕ್ತಿಯಿಂದ ಬೆಳೆಸಿಕೊಳ್ಳಲು ಸಾಧ್ಯವಾಗಿಲ್ಲದೆ ಹೊರಗೆ ಬರುವಂತಾಗಿದೆ.ಹಿಂದಿನ ಕಾಲದ ಸಂಸ್ಕಾರಯುತ ಸಮಾಜಮುಖಿಯ ಶಿಕ್ಷಣದಿಂದ ಮನೆ ಮನೆಯೂ ಗುರುಕುಲವಾಗಿತ್ತು.
ಅಂದಿನ ಕಾಲದಲ್ಲಿದ್ದ ಗುರುಕುಲಗಳಲ್ಲಿ ಸ್ತ್ರೀ ಯರಿಗೂ ತಿಳಿಯುವ ಅವಕಾಶವಿದ್ದ ಕಾರಣ ಒಂದು ಧಾರ್ಮಿಕ ನೆಲೆ ಧರ್ಮವನ್ನು ರಕ್ಷಣೆ ಮಾಡುತ್ತಿತ್ತು. ಆದರೂ ಹೆಚ್ಚು ಹೆಚ್ಚು ರಾಜಕೀಯ ಶಕ್ತಿ ಹೆಚ್ಚಾದಂತೆಲ್ಲಾ ಧರ್ಮದಸೂಕ್ಮವು ಅರ್ಥ ಆಗದ ಮನಸ್ಸನ್ನು ತಡೆಹಿಡಿಯಲಾಗದೆ ಸ್ತ್ರೀ ಯೇ ಇದಕ್ಕೆ ಕಾರಣವೆನ್ನುವ ಮಟ್ಟಿಗೆ ತಮ್ಮ ತಪ್ಪನ್ನು ಮುಚ್ಚಿಹಾಕುವ ಪ್ರಯತ್ನವಾಯಿತು. ಈಗಲೂ ಧಾರ್ಮಿಕ ಕ್ಷೇತ್ರ ನಡೆಸೋ ಗುರುಕುಲಗಳಲ್ಲಿ ಹೆಣ್ಣು ಮಕ್ಕಳಿಗೆ ಅವಕಾಶವಿಲ್ಲ.ಕಾರಣ ಇಷ್ಟೇ ಹೆಣ್ಣಿನ ಚಂಚಲ ಸ್ವಭಾವದಿಂದಾಗಿ ಸರಿಯಾಗಿ ವಿದ್ಯೆ ಕಲಿಯದೆ ಹೋಗಬಹುದು.ಅಥವಾ ಪುರುಷರನ್ನೇ ಆಳುವ ಶಕ್ತಿ ಹೆಣ್ಣಿಗೆ ಬಂದರೆ ಸಂಸಾರದಲ್ಲಿ ಸಮಸ್ಯೆ ಆಗಬಹುದು.
ಆಳುವ ಬದಲು ಆಳಾಗಿ ದುಡಿಯುವುದೇ ಉತ್ತಮ ಎನ್ನುವ ದಾಸ,ಶರಣರ ತತ್ವದಂತೆ ಭೂಮಿಯನ್ನು ಆಳಲು ಹೋಗುವ ಬದಲಾಗಿ ಭೂ ಸೇವೆ ಮಾಡಿಕೊಂಡು ಋಣ ತೀರಿಸುವ ಜ್ಞಾನ ಮಾನವನಿಗಿದ್ದಿದ್ದರೆ ಸ್ತ್ರೀ ಯನ್ನು ಹಿಂದೆ ನಿಲ್ಲಿಸಿ ಆಳುವ ರಾಜಕೀಯ ಹೆಚ್ಚಾಗುತ್ತಿರಲಿಲ್ಲ. ಆದರೂ ಸ್ತ್ರೀ ಯನ್ನು ಯಾರು ಆಳಾಗಿಸಿಕೊಂಡರೂ ಅಧರ್ಮ ವೆ. ಇಲ್ಲಿ ಸ್ತ್ರೀ ಶಕ್ತಿಯ ಒಪ್ಪಿಗೆ ಇಲ್ಲದೆ ನಡೆಸೋ ರಾಜಕೀಯ ಹಲವು ದುರಂತಗಳನ್ನು ಕಂಡಿದೆ. ಧರ್ಮಜ್ಞಾನವೇ ಇಲ್ಲದ ಸ್ತ್ರೀ ಯಿಂದ ಭೂಮಿಯಲ್ಲಿ ಧರ್ಮ ನೆಲೆಸುವುದೆ? ಅವಳ ಮಕ್ಕಳಿಗೆ ಅವಳೇ ಮೊದಲ ಗುರುವಾದಾಗ ಅವಳಿಗೇ ಜ್ಞಾನವಿಲ್ಲದೆ ಕಲಿಸುವುದೇನು? ಇಂತಹ ಸಾಮಾನ್ಯ ಪ್ರಶ್ನೆಗೆ
ಉತ್ತರ ಕೊಡಲು ಕಷ್ಟ. ಯಾವಾಗ ಸ್ತ್ರೀ ಯ ಜ್ಞಾನ ಕುಸಿಯುವುದೋ ಆಗ ನಾನೆಲ್ಲಿದ್ದೇನೆಂಬ ಅರಿವಿಲ್ಲದೆ ಮುಂದೆ ಮನುಕುಲ ನಡೆಯುತ್ತದೆ. ವಾಸ್ತವ ಜಗತ್ತಿನಲ್ಲಿ ಸಾಕಷ್ಟು ವಿದ್ಯಾವಂತರು,ಬುದ್ದಿವಂತರು,ಹಣವಂತರಿದ್ದರೂ ಭೂಮಿಯಲ್ಲಿ ಅಜ್ಞಾನದ ಅಂದಕಾರದ ಅಹಂಕಾರ ಸ್ವಾರ್ಥ ಮಿತಿಮೀರಿ ಭ್ರಷ್ಟಾಚಾರ ಬೆಳೆದಿದೆ. ಇದರ ಫಲ ಎಲ್ಲಾ ಅನುಭವಿಸಲೇಬೇಕಾಗಿದೆ. ಎಷ್ಟು ವರ್ಷ ವಾದರೂ ಜ್ಞಾನ ಇಲ್ಲವಾದರೆ ವಯಸ್ಸಾಗಬಹುದು.ಇದು ಪುರುಷ ಸ್ತ್ರೀ ಇಬ್ಬರೂ ಅರ್ಥ ಮಾಡಿಕೊಳ್ಳಲು ಇಬ್ಬರಿಗೂ ಉತ್ತಮ ಧಾರ್ಮಿಕ ಶಿಕ್ಷಣದ ಅಗತ್ಯವಿತ್ತು. ಪುರುಷರು ಧಾರ್ಮಿಕ ಶಿಕ್ಷಣ ಪಡೆದು ಗೃಹಸ್ಥ ರಾದರೂ ಅವರನ್ನು ಅರ್ಥ ಮಾಡಿಕೊಳ್ಳುವ ಸ್ತ್ರೀ ಗೆ ಧರ್ಮ ಜ್ಞಾನ ವಿಲ್ಲವಾಗಿ ಭೌತಿಕ ವಿದ್ಯೆ ಇದ್ದರೆ ಹಣಸಂಪಾದನೆಯಷ್ಟೆ ಗುರಿಯಾಗಬಹುದು.
ಒಟ್ಟಿನಲ್ಲಿ ಎಲ್ಲಾ ನಾವೇ ಮಾಡಿಕೊಂಡು ಬಂದಿರುವ ಅಸಮಾನತೆಯ ಫಲ. ಈಗಲೂ ಸಾಕಷ್ಟು ಹೆಣ್ಣುಮಕ್ಕಳಿಗೆ
ವಿದ್ಯೆ ಇದ್ದರೆ ಜ್ಞಾನವಿಲ್ಲ.ಜ್ಞಾನವಿದ್ದವರಿಗೆ ವಿದ್ಯೆಯಿಲ್ಲ. ಈ ಅನ್ಯಾಯಕ್ಕೆ ಸರಿಯಾದ ನ್ಯಾಯ ಕೊಡುವವರಿಲ್ಲದೆ ಹೆಣ್ಣು ಸರಿಯಿಲ್ಲ.ಗಂಡುಸರಿಯಿಲ್ಲ.ಕುಟುಂಬ ಸರಿಯಿಲ್ಲ,ಸಮಾಜ ಸರಿಯಿಲ್ಲ,ದೇಶ ಸರಿಯಿಲ್ಲ ಎಂದು ಹೊರದೇಶದವರೆಗೆ ಸರಿಪಡಿಸಲು ಹೋದವರು ಅಲ್ಲೇ ಸರಿಯಾಗಿ ಸಂಪಾದನೆ ಗೌರವ ಇದೆ ಎಂದು ಅಲ್ಲಿಯೇ ನೆಲೆಸುತ್ತಾರೆ. ಹಾಗಾದರೆ ಸರಿಯಾಗಿರೋದು ಯಾರು? ಏನು? ನಾನೇ ಸರಿ ಎನ್ನುವ ಅಹಂಕಾರ ಸರಿಯಾಗಿ ಬೆಳೆದು ನಿಂತಿದೆ.ಇದರಿಂದಾಗಿ ಭೂಮಿ ಕಾಣದೆ ಆಕಾಶಕ್ಕೆ ಹಾರೋದರಲ್ಲಿಯೇ ವಿಜ್ಞಾನ ಬೆಳೆದಿದೆ. ಜೀವ ಕೊಟ್ಟ ತಾಯಿಯು ಸರಿಯಿಲ್ಲವೆನ್ನುವ ಮಕ್ಕಳ ಸಂಖ್ಯೆ ಬೆಳೆಯುತ್ತಿದೆ. ಹಣಸಂಪಾದನೆ ಮಾಡಿದರೆ ಮಾತ್ರವೇ ಹೆಣ್ಣಿಗೆ ಗೌರವ ಎನ್ನುವ ಪರಿಸ್ಥಿತಿಯಲ್ಲಿ ಹೆಣ್ಣು ಮನೆಯಿಂದ ಹೊರಹೋಗಿ ದುಡಿದು ತರುವ ಹಾಗಾಗಿದೆ.
ಇವೆಲ್ಲದರ ಹಿಂದೆ ಇರೋದೆ ಅಜ್ಞಾನದ ಶಿಕ್ಷಣ. ಶಿಕ್ಷಣದಲ್ಲಿ ಅಡಗಿರುವ ವಿಷಯಗಳು, ಧಾರ್ಮಿಕ ಕ್ಷೇತ್ರದೊಳಗಿರುವ ವ್ಯವಹಾರ ಜ್ಞಾನ. ಅಸಮಾನತೆಯ ಅಜ್ಞಾನ.ತತ್ವಜ್ಞಾನವನ್ನು ತಂತ್ರವನ್ನಾಗಿಸಲು ಹೋದರೆ ಅಧರ್ಮ. ಕಾರಣ ಒಂದೇ ತತ್ವ,ಒಂದೇ ಧರ್ಮ, ದೇವರು ಎಂದಿರೋದು ಹಲವಾಗಿಸಿದ್ದು ಮಾನವನ ಸ್ವಾರ್ಥ ದ ರಾಜಕೀಯ. ಇದನ್ನು ಸ್ತ್ರೀ ಯನ್ನಾಗಲಿ, ಭೂಮಿಯನ್ನಾಗಲಿ ಆಳಲು ಬಳಸಿದರೂ ಭೂಮಿಯ ಋಣ ತೀರದೆ ಜೀವಕ್ಕೆ ಮುಕ್ತಿ ಸಿಗುವುದೆ? ಅಜ್ಞಾನದಲ್ಲಿಯೇ ಆಳುವ ಬದಲಾಗಿ ಜ್ಞಾನದಿಂದ ಜೀವನ ಸತ್ಯ ತಿಳಿಸುತ್ತಾ ಮುಂದೆ ನಡೆದಿದ್ದರೆ ಶಾಂತಿ,ತೃಪ್ತಿ, ಮುಕ್ತಿ ಸಿಗುತ್ತದೆ ಎನ್ನುವ ಸತ್ಯವನ್ನು ಮಾನವರು ಪ್ರತಿಕ್ಷಣ ನೆನಿಸಿ ಕೊಳ್ಳಲು ಕಷ್ಟ. ಅದೂ ಇಂದಿನ ವೈಜ್ಞಾನಿಕ ಚಿಂತನೆಯಲ್ಲಿ ವೈಚಾರಿಕತೆಯ ಹಿಂದಿನ ಉದ್ದೇಶ ಅರ್ಥ ವಾಗದು. ಹೀಗಾಗಿ ಮೊದಲು ಹೆಣ್ಣು ಮಕ್ಕಳಿಗೆ ಆಂತರಿಕ ಜ್ಞಾನ ಬೆಳೆಸಿ ಕಲಿಸಿ, ಗೌರವಿಸಿ ಸಹಕರಿಸಿದರೆ ಧರ್ಮ ರಕ್ಷಣೆಗೆ ಅವಳೂ ಸಹಕಾರ ನೀಡುವಳಲ್ಲವೆ? ಹಿಂದಿನ ಕಾಲದಲ್ಲಿದ್ದ ಸ್ತ್ರೀ ಶಕ್ತಿ ಈಗಿಲ್ಲ. ಹಾಗಂತ ಜ್ಞಾನವಿಲ್ಲವೆ? ಇದನ್ನು ಸರಿಯಾಗಿ ಬಳಸಲು ಅವಕಾಶ,ಅಧಿಕಾರ ಕೊಡದೆ ಆಳಿದರೆ ಅಧರ್ಮವೇ ಬೆಳೆಯೋದು. ಸ್ವಾತಂತ್ರ್ಯ ವನ್ನು ಸ್ವೇಚ್ಚಾಚಾರ ಎಂದು ತಿಳಿಯುವುದೇ ಇಂದಿನ ಯುವಪೀಳಿಗೆಯ ಅಜ್ಞಾನ.
ಇದಕ್ಕೆ ಕಾರಣವೇ ಶಿಕ್ಷಣವಾದಾಗ ಜ್ಞಾನದ ಶಿಕ್ಷಣ ನೀಡಲು ಧಾರ್ಮಿಕ ವರ್ಗ ರಾಜಕೀಯ ಕ್ಷೇತ್ರ ದಲ್ಲಿರುವ ಅಜ್ಞಾನವನ್ನು ಸರಿಪಡಿಸದೆ ಅವರ ಹಿಂದೆ ನಿಂತರೆ ಯಾರು ಜ್ಞಾನಿಗಳು?
ಕೆಲವರಿಗೆ ಅತಿಯಾದ ಆತ್ಮವಿಶ್ವಾಸ, ಅತಿಯಾದ ಅಹಂಕಾರ, ಸ್ವಾರ್ಥ ವೂ ತಿಳಿಯದೆ ಬೆಳೆದಿದೆ.ಜನರ ಸಹಕಾರವೇ ಇದಕ್ಕೆ ಇದೆ. ಆದರೆ ಜನರಲ್ಲಿ ಜ್ಞಾನದ ಕೊರತೆ ಇದೆ. ಎಲ್ಲಾ ಕೊರತೆಯೂ ಒಂದಾಗಿ ಸಹಕರಿಸಿದರೆ ಇರುವ ಜ್ಞಾನವೂ ಹಿಂದುಳಿಯಬಹುದು. ಹಾಗಾಗಿ ಜ್ಞಾನ ಒಳಗೆ ಇರಲಿ ಅದನ್ನು ಒಳಗಿನ ಮನಸ್ಸಿನ ಸಹಕಾರದಿಂದ ಹೆಚ್ಚು ಮಾಡುವ ಬಗ್ಗೆ ಮನೆ ಮನೆಯೊಳಗಿರುವ ಸ್ತ್ರೀ ಶಕ್ತಿಯನ್ನು
ಪ್ರೋತ್ಸಾಹಿಸಿ ಸಹಕರಿಸಿದರೆ ಹೊರಗಿನ ರಾಜಕೀಯ ಬೇಡ.ಇದ್ದರೂ ಒಳಗಿನವರ ಜ್ಞಾನಶಕ್ತಿಯಿಂದ ಹೊರಗಿನ ಶಕ್ತಿಯೂ ಬೆಳೆಯುವುದು.ಅವರವರ ಸ್ವತಂತ್ರ ಜ್ಞಾನಕ್ಕೆ ಅವರೆ ರಾಜರು. ಪ್ರಜಾಪ್ರಭುತ್ವದ ಪ್ರಜೆಗಳ ಸಾಮಾನ್ಯ ಜ್ಞಾನದಿಂದಲೇ ಇಂದಿನ ಈ ಪರಿಸ್ಥಿತಿ ಗೆ ಕಾರಣ ಮತ್ತು ಪರಿಹಾರ ಮಾರ್ಗ ಒಳಗಿರುವ ಹೆಣ್ಣು ಮಕ್ಕಳ ಜ್ಞಾನದ ಸಹಕಾರದಿಂದ ತಿಳಿಯಬಹುದು. ಮಿತಿಮೀರಿ ಬೆಳೆದವರ ಹಿಂದೆ ಹೋಗುವ ಬದಲು ಇನ್ನೂ ಕಣ್ಣು ಬಿಡುತ್ತಿರುವ ಸಣ್ಣ ಮಕ್ಕಳ ಬಗ್ಗೆ ಎಚ್ಚರವಿರಲಿ. ಮಕ್ಕಳು ನಾವು ಕುಣಿಸುವ ಗೊಂಬೆಯಲ್ಲ. ಅವರೊಳಗೂ ಮಹಾ ಚೇತನಾಶಕ್ತಿ ಇದೆ.ಅದನ್ನು ಸರಿಯಾದ ಶಿಕ್ಷಣದ ಮೂಲಕ ಬೆಳೆಸಿದರೆ ದೈವಗುಣದಿಂದಲೇ ದೈವತ್ವದೆಡೆಗೆ ನಡೆಯಬಹುದು.ಇದು ಸಂಸಾರದಲ್ಲಿ ಹೆಣ್ಣಿನ ಜ್ಞಾನದಿಂದ ಸಾಧ್ಯವಾದಾಗ ಅವಳನ್ನು ದೂರವಿಟ್ಟು ದೂರಿದರೆ ಧೋಷವೇ ಹೆಚ್ಚು.
ಸ್ವಾಮಿ ವಿವೇಕಾನಂದರಾಗಲಿ,ಶಿವಾಜಿ ಮಹಾರಾಜನಾಗಲಿ
ತಾಯಿಯ ಶಿಕ್ಷಣದಿಂದ ಮಹಾತ್ಮರಾಗಲು ಸಾಧ್ಯವಾಗಿದ್ದು.
ಭಾರತೀಯ ನಾರಿ ಶಕ್ತಿಯನ್ನು ದುರ್ಭಳಕೆ ಮಾಡಿಕೊಂಡು ಆಳುವುದೇ ಅಜ್ಞಾನದ ಸಂಕೇತ. ಇದು ಸ್ತ್ರೀ ಕುಲಕ್ಕೆ ನಷ್ಟ.
ಭೂಮಿಗೆ ನಷ್ಟ. ಜ್ಞಾನ ದೇವತೆಯನ್ನು ಪ್ರತಿಮೆಯ ಮೂಲಕ ಆರಾಧಿಸುವಾಗ ಪ್ರತಿಭಾಶಕ್ತಿ ಜ್ಞಾನ ಶಕ್ತಿ ಪಡೆದ ಹೆಣ್ಣು ಮಕ್ಕಳು ಕಾಣದಿದ್ದರೆ ವ್ಯರ್ಥ. ಹೆಣ್ಣು ಮಕ್ಕಳಿಗೆ ವಿದ್ಯೆ ಕಲಿಸದೆ ಇದ್ದ ಕಾಲದಲ್ಲಿ ಸ್ವತಃ ಹೆಣ್ಣು ಹೋರಾಟಮಾಡಿ ತನ್ನ ಅಸ್ತಿತ್ವಕ್ಕೆ ಆದ ಅನ್ಯಾಯ ಕ್ಕೆ ಸಿಡಿದೆದ್ದು ಸಮಾಜ ಸುಧಾರಣೆ ಮಾಡಿದ ಧೀರ ಮಹಿಳೆಯರು ಭಾರತೀಯರು. ಆದರೆ ಇಂದು ಶಿಕ್ಷಣವಿದೆ ಜ್ಞಾನವಿಲ್ಲ.ಅವಶ್ಯಕರವಾದ ವಿಚಾರವೆ
ಇಲ್ಲದ ಅನಗತ್ಯವಾದ ವಿಷಯವನ್ನು ಹೊಂದಿರುವ ಶಿಕ್ಷಣ ಪಡೆದು ದಿನವಿಡೀ ಕುಳಿತು ಓದಿದರೂ ಆಂತರಿಕ ಶಕ್ತಿ ಹೆಚ್ಚದೆ ಭೌತಿಕಾಸಕ್ತಿ ಬೆಳೆಸುವ ಶಿಕ್ಷಣ ನೀಡಿ ಕೊನೆಯಲ್ಲಿ ತಡೆಗೋಡೆ ಹಾಕುವ ಪ್ರಯತ್ನ ಮಾಡಿದರೆ ಧರ್ಮ ವೆ? ಇಷ್ಟು ಸಾಲದೆಂಬಂತೆ ಸಂಸಾರದ ಸಮಸ್ಯೆಗೆ ಹೆಣ್ಣೇ ಕಾರಣ ಎನ್ನುವ ಹಣೆಪಟ್ಟಿ ಕಟ್ಡಿದರೆ ವಿದ್ಯಾವಂತ ಹೆಣ್ಣು ಒಪ್ಪಲು ಕಷ್ಟ. ಇದೇ ರೀತಿ ಪುರುಷನೂ ನಡೆದುಕೊಂಡು ಬಂದರೆ ಭೂಮಿಯ ಮೇಲೆ ಶಾಂತಿ ಇರೋದಿಲ್ಲ. ಶಾಂತಿ,ಸಮೃದ್ಧಿ, ಸಂತೋಷ,ಆತ್ಮತೃಪ್ತಿ ಸಿಗೋದು ಆತ್ಮಜ್ಞಾನದಿಂದ ಎಂದ ಮೇಲೆ ಆ ಜ್ಞಾನದಿಂದ ವಂಚಿತಳಾದ ಸ್ತ್ರೀ ಜ್ಞಾನಿ ಆಗಲು ಕಷ್ಟ. ಇಲ್ಲಿ ಹೊರಗಿನಿಂದ ನಡೆಸುತ್ತಿರುವ ರಾಜಕೀಯವೇ ಸಮಸ್ಯೆಗೆ ಕಾರಣವಾದಾಗ ಒಳಗಿನ ರಾಜಯೋಗದ ಶಿಕ್ಷಣ ನೀಡುವುದು ಉತ್ತಮ ದಾರಿ. ಬ್ರಹ್ಮಾಂಡದ ಎಲ್ಲಾ ವಿಷಯ ಒಂದೇ ಜನ್ಮದಲ್ಲಿ ತಿಳಿಯಲಾಗದು. ಕೊನೆಪಕ್ಷ ಈ ಜನ್ಮದ ಸಮಸ್ಯೆಗೆ ಕಾರಣ ಒಳಗಿರುವ ಜ್ಞಾನದಿಂದ ತಿಳಿದು ಸರಿ ಮಾಡಿಕೊಳ್ಳುವ ಮೂಲಕ ಪರಿಹಾರ ಕಂಡುಕೊಳ್ಳಲು ಸಣ್ಣ ವಯಸ್ಸಿನಲ್ಲಿಯೇ ಇಬ್ಬರಿಗೂ ಗುರುಕುಲ ಶಿಕ್ಷಣದಲ್ಲಿ ಜ್ಞಾನಕ್ಕೆ ಒತ್ತುಕೊಟ್ಟು ಯಾವುದೇ ರೀತಿಯ ಬೇಧಭಾವ ನೋಡದೆ ಬೆಳೆಸಿ ಅವರಲ್ಲಿರುವ ಅಜ್ಞಾನವನ್ನು ಶಿಕ್ಷೆ ನೀಡಿಯಾದರೂ ಸರಿಪಡಿಸುವ ಶಿಕ್ಷಣವೇ ನಿಜವಾದ ಧರ್ಮ ಶಿಕ್ಷಣ. ಓದಿ ತಿಳಿಯುವುದಕ್ಕೆ ನೆನಪಿನ ಶಕ್ತಿ ಸಾಕು.ಮಾಡಿ ಕಲಿತು ನಡೆಯುವುದಕ್ಕೆ ಜ್ಞಾನಶಕ್ತಿ ಬೇಕು. ಅವರವರ ಮೂಲ ಧರ್ಮ ಕರ್ಮ ವನ್ನರಿತು ನಡೆಯುವುದೇ ಜ್ಞಾನ. ದೈವಶಕ್ತಿ ಎಲ್ಲರ ಆತ್ಮಜ್ಞಾನದಲ್ಲಿದೆ.
ದೇವಾನುದೇವತೆಗಳು ಮುಕ್ಕೋಟಿ ದೇವತೆಗಳೂ ಆತ್ಮ ರೂಪದಲ್ಲಿರುವಾಗ ಅವರನ್ನು ಭೌತಿಕದಲ್ಲಿ ಕಾಣಲಾಗುವುದೆ? ಆಂತರಿಕ ವಾಗಿ ದೈವೀ ಗುಣ ಬೆಳೆಸುವ ಶಿಕ್ಷಣವಿಲ್ಲದೆ ಹೊರಗೆ ದೇವರನ್ನು ಬೆಳೆಸುವ ಶಕ್ತಿ ಮಾನವನ ವ್ಯವಹಾರಕ್ಕೆ ಸೀಮಿತವಾದರೆ ಜ್ಞಾನದ ಗತಿ? ಭೂಮಿಯ ಮೇಲೆ ನಿಂತು ಭೂಮಿಯನ್ನು ಆಳುವುದು ಹೇಗೆ ಸಾಧ್ಯ?ಧರ್ಮ ಹಾಗು ಸತ್ಯವಿದ್ದರೆ ಭೂತಾಯಿ ಸಹಕರಿಸಬಹುದು. ಹಾಗೆಯೇ ಸ್ತ್ರೀ ಶಕ್ತಿ. ಅಧರ್ಮಕ್ಕೆ ಸಹಕರಿಸಿದರೆ ಪ್ರತಿಫಲ ತಿರುಗಿ ಬರುವುದು. ಕರ್ಮಕ್ಕೆ ತಕ್ಕಂತೆ ಫಲ ಎನ್ನುತ್ತಾರೆ ಮಹಾತ್ಮರು. ನಾವೀಗ ಕೇವಲ ಮಾನವರಷ್ಟೆ. ಆತ್ಮರಕ್ಷಣೆ ಜ್ಞಾನದಿಂದ ಮಾತ್ರ ಸಾಧ್ಯ. ರಾಮರಾಜ್ಯದ ಹೆಸರಲ್ಲಿ ರಾಮನ ತತ್ವ ಬಿಟ್ಟು ತಂತ್ರದಿಂದ ಸೀತೆಯರನ್ನು ಆಳಿದರೆ ತಿರುಗಿ ಬೀಳುವುದು ಸೀತೆಯರೆ .ಅತಿಥಿಗಳಾಗಿ ವಿದೇಶಿಗಳಿಗೆ ಸ್ಥಾನಮಾನ ಕೊಡುವ ಭಾರತೀಯರಿಗೆ ಕೊನೆಗೆ ಅವರೇ ತಿಥಿ ಮಾಡಬಹುದೆನ್ನುವ ಜ್ಞಾನವಿದ್ದರೆ ಅತಿಯಾಗದೆ ಇತಿಮಿತಿಯಲ್ಲಿರಬಹುದು. ಪರರೆಲ್ಲಾ ನಮ್ಮವರಾದರೆ ಸ್ವರ್ಗ ನಮ್ಮವರೆ ಪರಕೀಯರಾದರೆ ನರಕ.
No comments:
Post a Comment