ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Thursday, September 8, 2022

ಪ್ರತಿಮೆಗೂ ಪ್ರತಿಭೆಗಿರುವ ವ್ಯತ್ಯಾಸ

ಪ್ರತಿಮೆಗಳಿಂದ ಪ್ರತಿಭಾವಂತರು ಬೆಳೆದರೆ ಉತ್ತಮ ಪ್ರಗತಿ.
ಪ್ರತಿಮೆಗಳನ್ನು ಬಳಸಿಕೊಂಡು  ರಾಜಕೀಯಕ್ಕೆ ಇಳಿದಾಗ ಜನರು ಪ್ರತಿಮೆಯನ್ನಷ್ಟೇ ನೋಡಲು ಬರಬಹುದು.ಆ ಪ್ರತಿಮೆಯೊಳಗಿರುವ ಶಕ್ತಿ ಕಾಣೋದು ಕಷ್ಟವಾಗಬಹುದು.
ದೇವತಾರಾಧನೆಯಲ್ಲಿ ನಿರಾಕಾರ ಬ್ರಹ್ಮನ ಕಾಣುವ ಶಕ್ತಿ ಕೆಲವರಲ್ಲಿ ಇದ್ದರೂ ಯಾವಾಗ ಆಕಾರಗಳು ಬದಲಾಗುತ್ತಾ
ಹೆಚ್ಚು ಹೆಚ್ಚು ಪ್ರತಿಮೆಗಳು ಅನಾವರಣವಾಗುವುದೋ ಹೊರಗಿನ ಕಣ್ಣು ತೆರೆದುಕೊಂಡಷ್ಟೂ ಒಳಗಣ್ಣು ಕಾಣದೆ ಹಿಂದುಳಿಯುವ ಸಾಧ್ಯತೆಗಳಿವೆ.  ದೇವತಾರಾಧನೆಯಿಂದ ದೈವತ್ವ ಬೆಳೆಯುವುದು ಜ್ಞಾನದ ಲಕ್ಷಣ. ಹಿಂದಿನ ದೇವಾನುದೇವತೆಗಳ ಕಾಲದಲ್ಲಿದ್ದ   ಮಹಾತ್ಮರು ಇಂದಿಲ್ಲ.ಇಂದಿನ ಜನಸಂಖ್ಯೆ ಅಂದಿರಲಿಲ್ಲ.ಹಾಗಾದರೆ ಈ
ಜನಸಂಖ್ಯೆಯನ್ನು  ತಡೆಯಲು ಜ್ಞಾನದಿಂದ ಸಾಧ್ಯವಿತ್ತು. ಪ್ರತಿಭೆಯನ್ನು ಸದ್ಬಳಕೆ ಮಾಡಿಕೊಂಡು  ಪ್ರತಿಮೆಯೊಳಗಿದ್ದ ತತ್ವವನ್ನು  ತಿಳಿಯುತ್ತಾ ದೈವತ್ವದ ಕಡೆಗೆ ನಡೆದವರು ಮುಕ್ತಿ
ಪಡೆಯುತ್ತಿದ್ದ ಕಾರಣ ಜನಸಂಖ್ಯೆ  ಕಡಿಮೆಯಿತ್ತು. ಆದರೆ ಕಲಿಗಾಲದ ಪ್ರಭಾವದಿಂದಾಗಿ ಜನರಲ್ಲಿ  ಅಜ್ಞಾನ ಬೆಳೆದು
ದೈವತ್ವ ಕುಸಿಯುತ್ತಾ ದೇವರನ್ನು ವ್ಯವಹಾರಕ್ಕೆ ಬಳಸಿ ಪ್ರತಿಮೆಗಳೇನೂ ಸಾಕಷ್ಟಿದೆ.ಆದರೆ ನಮ್ಮೊಳಗೇ ಇರುವ ಆ ದೈವಶಕ್ತಿಯನ್ನು ಬೆಳೆಸುವ ವಿದ್ಯೆಯಿಲ್ಲದೆ ಅವಿದ್ಯಾವಂತರಿಗೆ
ಪ್ರತಿಮೆಗಳು  ಸಹಕಾರಿಯಾಗುತ್ತಿದೆ ಎಂದರೆ ತಪ್ಪು ಎನ್ನಬಹುದಾದರೂ ಕೆಲವೆಡೆ ಮಾತ್ರ ಪ್ರತಿಮೆಗಳಿಂದ ಜನ
ಪ್ರೇರಿತರಾಗಿ ದೇಶಭಕ್ತರಾಗಿರಬಹುದು,
ದೇವರಭಕ್ತರಾಗಿರಬಹುದು.ಆದರೆ ಹಲವರಿಗೆ ಇದನ್ನು  ಹೇಗೆ ಬಳಸಿಕೊಂಡು ಸನ್ಮಾರ್ಗದಲ್ಲಿ ನಡೆಯಬೇಕೆಂಬ ಅರಿವಿಲ್ಲದೆ ತಮ್ಮ ತಮ್ಮ ಸನ್ಮಾನಕ್ಕಾಗಿ ಇದನ್ನು ಬಳಸಿಕೊಂಡು ಜನರ ದಾರಿ ತಪ್ಪಿಸಿದರೆ ಕಷ್ಟ ನಷ್ಟ. ಯಾವುದೇ  ಸ್ಥಳವನ್ನು ವೀಕ್ಷಣೆ ಮಾಡಲು ಹೊರಟರೆ ಪ್ರವಾಸವಾಗುತ್ತದೆ. ಹಾಗೆ ಯಾತ್ರೆಯಾಗಿ ಪವಿತ್ರ ಸ್ಥಳವಾಗಿ
ಕಂಡರೆ ಯಾತ್ರಾಸ್ಥಳ ವಾಗುತ್ತದೆ. ಹಣವಿಲ್ಲದೆ ಪ್ರವಾಸ,
ಯಾತ್ರೆ ಮಾಡಲಾಗದು. ಹಣದ ಮೂಲವೂ ಜ್ಞಾನದಿಂದ  ಇದ್ದರೆ ನಿಜವಾದ  ಧರ್ಮ ವಾಗುತ್ತದೆ.
ಜ್ಞಾನೋದಯವಾಗುತ್ತದೆ.ಪ್ರತಿಯೊಂದು ಪ್ರತಿಮೆಯ  ಆಂತರಿಕ ಶಕ್ತಿ  ಅಗಾಧ ವಾಗಿರುತ್ತದೆ. ಇದನ್ನು ಯಾವ ಮಣ್ಣಿನಿಂದ, ಲೋಹದಿಂದ ಮಾಡಿರುದೆನ್ನುವ ಬಗ್ಗೆ
ಪ್ರವಾಸಿಗರು ಯಾತ್ರಿಗಳು ಗಮನಿಸದೆ ಆ ಪ್ರತಿಮೆಯ ರೂಪ ತಾಳಿದ‌ ಮಹಾತ್ಮರಲ್ಲಿದ್ದ ಜ್ಞಾನಶಕ್ತಿಯನ್ನು ಅರ್ಥ ಮಾಡಿಕೊಳ್ಳಲು  ನಮಲ್ಲಿ ಜ್ಞಾನವಿದ್ದರೆ ಮಾತ್ರ ಸಾಧ್ಯ. ಹಾಗೆ ಮಕ್ಕಳೂ ಕೂಡ ಒಂದು ಬೊಂಬೆಯ ಹಾಗೆ ಹೇಳಿದಂತೆ ಕೇಳುತ್ತಾರೆ.ಅವರೊಳಗೇ ಅಡಗಿರುವ ಪ್ರತಿಭೆ ಜ್ಞಾನವನ್ನು
ಗುರುತಿಸಿ ಪೂರಕವಾದ ಶಿಕ್ಷಣ ನೀಡಿದಾಗಲೇ ಪ್ರತಿಭಾವಂತರಾಗಿ ಬೆಳೆಯುವುದು. ಇದಕ್ಕೆ ವಿರುದ್ದ ಶಿಕ್ಷಣ ನೀಡಿ ಶಿಕ್ಷಿಸಿದರೆ ಮುಂದೆ ಅವರೇ ತಿರುಗಿ ಶಿಕ್ಷೆ ನೀಡುವಾಗ
ಮಕ್ಕಳು ಸರಿಯಿಲ್ಲ ಎನ್ನುವ ಬದಲಾಗಿ ಪೋಷಕರು ನೀಡಿದ ಶಿಕ್ಷಣ ಸರಿಯಿಲ್ಲವೆನ್ನುವುದು ಸೂಕ್ತ. ಹೀಗಾಗಿ ಪ್ರತಿಭೆ ಯನ್ನು ಗುರುತಿಸಲೂ ಜ್ಞಾನವಿರಬೇಕು. ಒಂದು ದೇವದೇವಿಯರ ,ವ್ಯಕ್ತಿಯನ್ನು ಪ್ರತಿಮೆಯಾಗಿಸುವುದೂ  ಅವರ ದೈವತ್ವದ ಜ್ಞಾನವನ್ನು ಗುರುತಿಸುವುದಕ್ಕೆ ಹೊರತು ವ್ಯವಹಾರಕ್ಕೆ, ರಾಜಕೀಯಕ್ಕೆ  ಇಳಿಸಬಾರದೆನ್ನುವರು ಮಹಾತ್ಮರು.
ಪ್ರತಿಮೆಯಾಗಿರಲೂ ಜ್ಞಾನದಿಂದಲೇ ಸಾಧ್ಯ.ಆದರೆ ಅದನ್ನು ಗುರುತಿಸಲು ಜ್ಞಾನವಿಲ್ಲವಾದರೆ ಪ್ರತಿಮೆಯೂ ವ್ಯರ್ಥ, ಪ್ರತಿಭೆಯೂ ವ್ಯರ್ಥ.
ಪ್ರತಿಮೆಯು ಭೌತಿಕ ಜಗತ್ತಿನ ಒಂದು ರೂಪ.ಪ್ರತಿಭೆ ಆಂತರಿಕ ಶಕ್ತಿಯ ಒಂದು ರೂಪ. ಯಾವಾಗ ಪ್ರತಿಭೆಯನ್ನು
ಬೆಳೆಸದೆ ಪ್ರತಿಮೆಗಳಿಗೆ ಹಣ ಸುರಿಯಲಾಗುವುದೋ ಅದು
ಸಾಲವಾಗಿ  ಕಾಡುತ್ತದೆ. ಜನರೊಳಗಿರುವ ಜ್ಞಾನ ಹೆಚ್ಚಲು
ಅವರವರ ಪ್ರತಿಭೆಗನುಸಾರವಾಗಿ ಶಿಕ್ಷಣ ಪಡೆಯುವ  ಅವಕಾಶ ಇದ್ದರೆ ಇದ್ದಲ್ಲಿಯೇ  ಶಕ್ತಿಶಾಲಿಗಳಾಗಬಹುದು.
ಸಾಕಾರದಿಂದ ನಿರಾಕಾರದೆಡೆಗೆ ಸಾಗುವಾಗ ಸಾಲ ತೀರಬೇಕು. ಇದನ್ನು ನಿಜವಾದ ಜ್ಞಾನವೆಂದಿದ್ದಾರೆ.  ದೇಶ ದೇಹ ವೆರಡೂ ಒಂದೇ ನಾಣ್ಯದ ಎರಡು ಮುಖಗಳು.
ಇದರಲ್ಲಿ ದೇಶಕ್ಕಾಗಿ ದೇಹತ್ಯಾಗ ಮಾಡುವುದು
ದೇಶಭಕ್ತರ  ಪ್ರತಿಭೆ. ದೇಹಕ್ಕಾಗಿ ದೇಶತ್ಯಾಗ ಮಾಡುವುದು
ದೇಶಭ್ರಷ್ಟರ ಪ್ರಗತಿ. ಪ್ರತಿಮೆಗಳಿಂದ  ದೇಶದ ಉದ್ದಾರ ಆಗಬೇಕಾದರೆ ದೇಹದೊಳಗೆ ಪ್ರತಿಮೆಯೊಳಗಿರುವ ಆತ್ಮಶಕ್ತಿ   ಬೆಳೆಯಬೇಕು.ಆತ್ಮಶಕ್ತಿ ಬೆಳೆಸಿಕೊಳ್ಳಲು ಅಧ್ಯಾತ್ಮ ಶಿಕ್ಷಣವಿರಬೇಕು.ಅಧ್ಯಾತ್ಮ ಶಿಕ್ಷಣವನ್ನು ನೀಡದೆ
ಪ್ರತಿಮೆಯನ್ನಷ್ಟೇ   ಬೆಳೆಸುತ್ತಿದ್ದರೆ ಜನರ ಅಜ್ಞಾನ ಬೆಳೆಯುತ್ತಾ ಕೊನೆಗೊಮ್ಮೆ ಪ್ರತಿಮೆಯನ್ನು  ಹಾಳುಮಾಡಿ
ತಮ್ಮೊಳಗಿನ ಅಜ್ಞಾನವನ್ನು ಪ್ರದರ್ಶನ ಮಾಡವಂತಾಗ
ಬಾರದು.ಎಲ್ಲರಲ್ಲಿಯೂ ಒಳ್ಳೆಯದು ಕೆಟ್ಟದ್ದು ಇದ್ದೇ ಇರುತ್ತದೆ. ಇದಕ್ಕೆ ಕಾರಣ ಅಸಮಾನತೆಯ ರಾಜಕಾರಣ.ಈ ರಾಜಕಾರಣದಿಂದ ಬೆಳೆಯುವ ಪ್ರತಿಮೆಗಳು  ನಿಜವಾದ ಪ್ರತಿಭೆಯನ್ನು ಗುರುತಿಸದೆ ಆಳಿದರೆ  ಎಲ್ಲಾ ವ್ಯರ್ಥ. ಸಾಕಷ್ಟು  ಹಳೆಯ ದೇವಾನುದೇವತೆಗಳ ವಿಗ್ರಹಗಳು ಮೂಲೆ ಸೇರಿದೆ. ಹೊಸಹೊಸ ಪ್ರತಿಮೆಗಳು ತಯಾರಾಗಿ ಹೊರಬರುತ್ತಿದೆ. ಹಾಗಾದರೆ ಧರ್ಮ ರಕ್ಷಣೆ ಆಗಿದೆಯೆ? 
ಸತ್ಯಕ್ಕೆ ಬೆಲೆಯಿದೆಯೆ? ಮಹಾತ್ಮರುಗಳೆಲ್ಲಿ?
ದೇಶದಲ್ಲಿ ಶಾಂತಿ ನೆಲೆಸಲು ಜ್ಞಾನವನ್ನು ಹೆಚ್ಚಿಸಿಕೊಳ್ಳಲು
ಪ್ರಜೆಗಳು ಮುಂದಾಗಬೇಕಿದೆ.  ಹಿಂದಿನ ದೇವತೆಗಳು,
ಮಹಾತ್ಮರುಗಳು, ದಾಸ,ಶರಣ,ಸಂತರ ತತ್ವಜ್ಞಾನ ಬಿಟ್ಟು 
ತಂತ್ರದಿಂದ  ಎಷ್ಟೇ ರಾಜಕೀಯ ಪ್ರತಿಮೆಗಳು ಹೊರ
ಬಂದರೂ ಅದೂ ಕೂಡ ದೇಶದ ಸಾಲವೇ.ಆ ಸಾಲ ತೀರಿಸಲು ಪ್ರತಿಮೆಯೊಳಗಿರುವ‌ ಮಹಾಶಕ್ತಿಯನ್ನು ಜನರು ಅರ್ಥ ಮಾಡಿಕೊಳ್ಳಲು ಜ್ಞಾನವಿರಬೇಕಿದೆ.ಅಜ್ಞಾನದಲ್ಲಿಯೇ
ಜನರನ್ನು ಆಳೋದಕ್ಕೆ ಸುಲಭ.ಕಣ್ಣಿಗೆ ಕಾಣುವ ಪ್ರತಿಮೆಗೂ
ಕಾಣದ ಪ್ರತಿಭೆಗೂ ವ್ಯತ್ಯಾಸವಿಷ್ಟೆ. ಒಂದಕ್ಕೆ ಹಣಬೇಕು.
ಇನ್ನೊಂದು ಜ್ಞಾನಬೇಕು. ಒಂದು ಎಲ್ಲರಿಗೂ ಕಾಣಬಹುದು.
ಇನ್ನೊಂದು ಯಾರಿಗೂ ಕಾಣದಿರಬಹುದು.
ಒಂದನ್ನು  ಎರಡಾಗಿಸಲಾಗದು.ಆದರೆ ಪ್ರತಿಭೆಯನ್ನು  ಎಷ್ಟು ಬೇಕಾದರೂ ಬೆಳೆಸಿಕೊಂಡು ಹಂಚಿಕೊಳ್ಳಲು ಸಾಧ್ಯ.
ಈ ಹಂಚಿಕೆಯಿಂದ ಮುಕ್ತಿ ಸಿಗಬಹುದು.ಯಾವಾಗ ಜ್ಞಾನ
 ಸರಿಯಾಗಿ ಹಂಚಿಕೆಯಾಗುವುದೋ ಆಗ ಯಾವ ಪ್ರತಿಮೆ
ಇಲ್ಲದೆಯೂ ನಿರಾಕಾರ ಬ್ರಹ್ಮನೆಡೆಗೆ ಮನಸ್ಸು ಹರಿಯುತ್ತದೆ
ಒಟ್ಟಿನಲ್ಲಿ ಪ್ರತಿಮೆಗಳು  ರಾಜಕೀಯವನ್ನು ಬೆಳೆಸದೆ ರಾಜಯೋಗಿಗಳನ್ನು ಬೆಳೆಸುವಂತಾದರೆ  ಯೋಗಿಗಳ ದೇಶ
ಪ್ರತಿಭಾವಂತ ಜ್ಞಾನಿಗಳಿಂದ ಪ್ರಗತಿ ಹೊಂದಬಹುದು. ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಆಗಬಾರದಷ್ಟೆ.
ದೇಶದ ತುಂಬಾ ತುಂಬಿರುವ ಅಜ್ಞಾನವನ್ನು ಹೊಡೆದೋಡಿಸಲು ಜ್ಞಾನದ ಶಿಕ್ಷಣ ನೀಡುವುದು ಧರ್ಮ. ಶಿಕ್ಷಣ ಪಡೆಯುವುದು ಪ್ರಜಾಧರ್ಮ. ಎಲ್ಲಿಯವರೆಗೆ ಪ್ರಜೆಗಳು  ಪ್ರತಿಮೆಗಳನ್ನು ವ್ಯವಹಾರಕ್ಕೆ ಬಳಸಿಕೊಂಡು ಜೀವನ ನಡೆಸುವರೋ ಅಲ್ಲಿಯವರೆಗೆ ಜ್ಞಾನ ಬರೋದಿಲ್ಲ.
ಜ್ಞಾನವಿದ್ದರೂ ವ್ಯವಹಾರವೇ ಧರ್ಮ ಕ್ಕಿಂತ ಮುಖ್ಯ ಎನ್ನುವುದಾದರೆ  ಹಣ ಸಿಕ್ಕರೂ  ಜ್ಞಾನ ಕುಸಿಯುತ್ತದೆ.
ಭಾರತವನ್ನು  ಪ್ರತಿಮೆಗಳಿಂದ ಬೆಳೆಸುವ ಜೊತೆಗೆ ಪ್ರತಿಭಾವಂತರನ್ನು ಸರಿಯಾದ ಶಿಕ್ಷಣ ನೀಡುವುದರ ಮೂಲಕ ಬೆಳೆಸಿದರೆ ಜ್ಞಾನಿಗಳ ದೇಶವಾಗುತ್ತದೆ. ಯಾವುದೇ ಆಗಲಿ ಅತಿಯಾಗಬಾರದಷ್ಟೆ. ಸರ್ಕಾರದ ಹಣ ಪ್ರಜೆಗಳ ಹಣ,ಸರ್ಕಾರದ ಸಾಲ ಪ್ರಜೆಗಳ ಸಾಲ. ಸಾಲ ತೀರಿಸಲು ಜ್ಞಾನದಿಂದ, ಪ್ರತಿಭೆಯಿಂದ ಸಾಧ್ಯವಿದೆ. ಯಾರೋ ಒಬ್ಬರಿಂದ  ಧರ್ಮ ರಕ್ಷಣೆ, ದೇಶ ರಕ್ಷಣೆ ಅಸಾಧ್ಯ.
ಪ್ರತಿಯೊಬ್ಬರಿಂದಲೂ ಪ್ರತಿಭಾವಂತರಿಂದಲೂ ಸಾಧ್ಯವಿದೆ.
ಆದರೆ ಇದನ್ನು ಸದ್ಬಳಕೆ ಮಾಡಿಕೊಂಡರೆ ಮಾತ್ರ. ಹಣದಿಂದ ದೇಶವಲ್ಲ.ಜ್ಞಾನದಿಂದ ದೇಶ ಕಟ್ಟಬೇಕು. ಪ್ರತಿಮೆಯಿಂದ  ಭಕ್ತಿ ಜ್ಞಾನ  ಬೆಳೆಯುವ ಜೊತೆಗೆ ಪ್ರತಿಭೆಗೆ ಪ್ರೋತ್ಸಾಹ ನೀಡಿ
,ಶಿಕ್ಷಣ ನೀಡಿ  ಜ್ಞಾನದಿಂದ ನಡೆಯಲು ಬಿಡಬೇಕಿದೆ. ಆಳುವ ಅರಸನಿಗಿಂತಲೂ ಆಳಾಗಿ ದುಡಿಯುವ ಪರಮಾತ್ಮನ  ದಾಸರೆ ಶ್ರೇಷ್ಠರು. ಏನಂತೀರ? ಇದಕ್ಕೆ ಉತ್ತರವಿದೆಯೆ? 
ಎಲ್ಲರೂ  ಪರಮಾತ್ಮನ ದಾಸರಾಗಲಾಗದು  ಅದು ಬಿಟ್ಟು ಎಲ್ಲಾ ಪರಕೀಯರ ದಾಸರಾದರೆ ? ಪ್ರತಿಮೆಗಳ ಜೊತೆಗೆ  ಪ್ರತಿಭೆಗಳೂ ಮೋಸಹೋಗುತ್ತವೆ. ರಾಜಯೋಗಿಗಳ ಪ್ರತಿಮೆಗಳಿಂದ  ರಾಜಕೀಯ ಬೆಳೆಯಬಾರದು. 

No comments:

Post a Comment