ಶ್ರಮಪಡದೆ ಆಶ್ರಮ ಕಟ್ಟಿದರೆ ವ್ಯರ್ಥ.
ಶ್ರಮಿಕರನ್ನು ತಮ್ಮೆಡೆಗೆಳೆಯಲು ಆಶ್ರಮಗಳನ್ನು ಕಟ್ಟುವ ಬದಲಾಗಿ ಶ್ರಮಪಟ್ಟು ದುಡಿದು ಬಂದ ಹಣವನ್ನು ಸದ್ಬಳಕೆ ಮಾಡಿಕೊಂಡು ಸಮಾಜದಲ್ಲಿ ಎಲ್ಲರೊಳಗೊಂದಾಗಿ ಇರೋದೆ ಉತ್ತಮ.
ವಿದೇಶಿಗಳ ಹಣದಿಂದ ಏನಾದರೂ ಆಶ್ರಮಗಳು ನಡೆಸುತ್ತಿದ್ದರೆ ಅದರಲ್ಲಿ ಸ್ವದೇಶದ ಜ್ಞಾನವಿದೆಯೆ? ಶ್ರಮ ಇದೆಯೆ? ಎನ್ನುವ ಬಗ್ಗೆ ತಿಳಿದು ನಡೆದರೆ ಸರಿ. ಇಲ್ಲವಾದರೆ ನಮ್ಮ ಶ್ರಮಕ್ಕೆ ಬೆಲೆಯೇ ಇಲ್ಲವಾಗುತ್ತದೆ. ಇಷ್ಟಕ್ಕೂ ಯಾವ ಯೋಗಿಯಾಗಲಿ,ಸಂನ್ಯಾಸಿಯಾಗಲಿ ಆತ್ಮಜ್ಞಾನ ಪಡೆಯಲು ಆಶ್ರಮದ ಮೊರೆ ಹೋಗಿದ್ದರು?
ಬಾಲ್ಯ,ಯೌವನ,ಗೃಹಸ್ಥ, ವಾನಪ್ರಸ್ಥ,ಸಂನ್ಯಾಸ ಐದರಲ್ಲಿ ಕೊನೆಯ ಸಂನ್ಯಾಸವನ್ನು ನೇರವಾಗಿ ಆರಿಸಿಕೊಂಡರೆ ಉಳಿದ ನಾಲ್ಕರ ಅನುಭವ ಜ್ಞಾನದ ಕೊರತೆ ಕಾಡಬಹುದು.
ಕಾಲದ ಪ್ರಭಾವ ಎಲ್ಲಾ ವೇಗವಾಗಿ ನಡೆದು ಮುಕ್ತಿ ಪಡೆಯಲು ಸಾಧ್ಯವೆ? ಕೆಲವರಿಗಷ್ಟೆ ಹಿಂದಿನ ಜನ್ಮದ ಜ್ಞಾನವಿದ್ದು ಗುರುಮುಖೇನ ಕಲಿತು ನಿಧಾನವಾಗಿ ಮೇಲೆ ಹೋಗಬಹುದು. ಎಲ್ಲಾ ಒಂದೇ ಎನ್ನುವ ಪ್ರಚಾರಕ್ಕೆ ಬದಲಾಗಿ ಎಲ್ಲರನ್ನೂ ಒಂದಾಗಿಸುವ ತತ್ವವನ್ನರಿತರೆ ಕೆಲವರಿಗೆ ಬಾಲ್ಯದಲ್ಲಿಯೇ ಜ್ಞಾನೋದಯವಾಗಿ ಸಂನ್ಯಾಸಿ ಆಗಬಹುದು ಹಾಗೆ ಯೌವನ,ಸಂಸಾರದಲ್ಲಿಯೂ ನಡೆದಿದೆ. ಒಟ್ಟಿನಲ್ಲಿ ಸಂನ್ಯಾಸಿ ಎಂದರೆ ಸಂಸಾರದಿಂದ ಮನಸ್ಸನ್ನು ದೂರವಿಟ್ಟು ಸ್ವತಂತ್ರ ವಾಗಿ ಜೀವಿಸುವುದಾಗಿತ್ತು. ಕಾಲಬದಲಾಗಿದೆ ಆದರೂ ಮೂಲದ ಸತ್ಯ ಧರ್ಮ ಬದಲಾಗೋದಿಲ್ಲ.ಮಾನವನ ಚಿಂತನೆ ಬದಲಾದರೂ ಆತ್ಮನ ಅರಿವು ಬದಲಾಗದು. ಜೀವ ಬದಲಾದರೂ ಪರಮಾತ್ಮನು ಒಬ್ಬನೇ,ಭೂಮಿಯೂ ಒಂದೇ ಶ್ರಮವಿಲ್ಲದ ಆಶ್ರಮದಲ್ಲಿ ಧರ್ಮದ ಹುಡುಕಾಟವಿರಬಾರದಷ್ಟೆ. ಕಾಲಕ್ಕೆ ತಕ್ಕಂತೆ ಜೀವನದಲ್ಲಿ ಬದಲಾವಣೆ ಆದರೂ ಕಾಲಕೆಟ್ಟು ಹೋಗದಂತೆ ಎಚ್ಚರವಹಿಸುವ ಜ್ಞಾನ ಮಾನವನಿಗೆ ಅಗತ್ಯವೆನ್ನುತ್ತಾರೆ ಮಹಾತ್ಮರುಗಳು. ಭೌತಿಕದ ಆಶ್ರಮಗಳಲ್ಲಿ ಅಧ್ಯಾತ್ಮದ ಆ- ಶ್ರಮ ಬಹಳ ಮುಖ್ಯ.
ಇಲ್ಲವಾದರೆ ಅನಾಥಾಶ್ರಮ,ವೃದ್ದಾಶ್ರಮ, ಅಬಲಾಶ್ರಮ, ಬಿಕ್ಷುಕರ ಆಶ್ರಮ ಗಳಿಂದ ಭೂಮಿ ನಡುಗಿ ಹೋಗುತ್ತದೆ.
ಬಿಕ್ಷುಗಳ ದೇಶವನ್ನು ಬಿಕ್ಷುಕರ ಆಶ್ರಮದಿಂದ ನಡೆಸುವುದು
ಪ್ರಗತಿಯೆ ಅದೋಗತಿಯೆ?
ಸರಿಯಾದ ಜ್ಞಾನದ ಶಿಕ್ಷಣ ಕೊಟ್ಟು ಕೆಲಸ ಕೊಟ್ಟು ಸ್ವತಂತ್ರ ಜೀವನ ನಡೆಸುವ ಸಹಕಾರ,ಸರ್ಕಾರ ನಮ್ಮಲ್ಲಿದ್ದರೆ ಈ ಸ್ಥಿತಿಗೆ ಮಾನವನ ಜೀವನ ತಲುಪುತ್ತಿರಲಿಲ್ಲ. ಇಲ್ಲಿ ಯಾರನ್ನೂ ದೂರದೆ ದೂರದ ಬೆಟ್ಟನುಣ್ಣಗೆ ಎನ್ನುವ ಸಂದೇಶವಿದೆ ಎನ್ನಬಹುದಷ್ಟೆ. ನಿಜವಾದ ಜ್ಞಾನಿಗಳು ಶ್ರಮಪಟ್ಟು ಮುಕ್ತಿ ಪಡೆಯುತ್ತಾರೆ. ಹಣದ ಬಡತನವಿದ್ದರೆ ಜ್ಞಾನದಿಂದ ಮುಂದೆ ನಡೆದು ಜೀವನ ನಡೆಸುವ ಶಿಕ್ಷಣ ಕೊಟ್ಟರೆ ಸಾಕು. ಹಣಕೊಟ್ಟು ಮತ್ತಷ್ಟು ಋಣ ಅಥವಾ ಸಾಲದ ಹೊರೆ ಹಾಕಿದರೆ ಎಲ್ಲಿಯ ಜ್ಞಾನ? ಭಾರತೀಯರನ್ನು
ಆಳೋದಕ್ಕೆ ಬಂದವರು ಶಿಕ್ಷಣವನ್ನೇ ಬುಡಮೇಲು ಮಾಡಿ ಈಗ ಬಿಕ್ಷುಗಳ ದೇಶ ಬಿಕ್ಷುಕರ ದೇಶವಾದರೂ ಅಜ್ಞಾನದ ಕಣ್ಣಿಗೆ ಪ್ರಗತಿಶೀಲ ಎನ್ನುವಂತಾಗಿದೆ. ಅವರವರ ಅನ್ನ ಅವರೆ ತಯಾರಿಸಿಕೊಳ್ಳಲು ಶ್ರಮ ದ ಅಗತ್ಯವಿದೆ. ಸೋಮಾರಿಗಳಿಂದಲೇ ಮಾರಿಯ ದರ್ಶನವಾದರೆ ಪ್ರಗತಿಯೆ? ಆತ್ಮನಿರ್ಭರ ಭಾರತ ಅಧ್ಯಾತ್ಮ ದಿಂದ ಮಾತ್ರ ಸಾಧ್ಯವಿದೆ. ರಾಜಕೀಯದಲ್ಲಿ ಅಧ್ಯಾತ್ಮ ವಿದೆಯೆ? ಅಧ್ಯಾತ್ಮ ವೆ ರಾಜಕೀಯ ನಡೆಸಿದೆಯೆ? ಆತ್ಮಾವಲೋಕನ ಅಗತ್ಯ.
No comments:
Post a Comment