ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Tuesday, September 6, 2022

ವಿವೇಕಾನಂದರ ರಾಜಯೋಗ

ವಿವೇಕಾನಂದರು ತಿಳಿಸಿದ ರಾಜಯೋಗವೆ ಬೇರೆ ಇಂದಿನ ರಾಜಕೀಯವೆ ಬೇರೆ.ರಾಜಯೋಗದಿಂದ ಮುಕ್ತಿ ಮೋಕ್ಷ ಪಡೆಯಬಹುದು.ಇದರಲ್ಲಿ 8 ಮೆಟ್ಟಿಲುಗಳಿವೆ. ಮೊದಲನೆಯದು ಯಮ,ಅಹಿಂಸೆ,ಅಸ್ತೇಯ,ಬ್ರಹ್ಮಚರ್ಯ ಮತ್ತು ಅಪರಿಗ್ರಹ.
ಎರಡನೆಯದು ನಿಯಮ,ಶುಚಿ,ತೃಪ್ತಿ, ತಪಸ್ಸು, ಅಧ್ಯಯನ ಮತ್ತು ಈಶ್ವರನಲ್ಲಿ ಶರಣಾಗತಿ,
ನಂತರ ಆಸನ,ಆನಂತರ ಪ್ರಾಣಾಯಾಮ  ಮುಂದಿನದು
ಪ್ರತ್ಯಾಹಾರ ಅಥವಾ ಇಂದ್ರಿಯ ಗಳನ್ನು ಅವಕ್ಕೆ ಸಂಬಂಧ ಪಟ್ಟ ವಸ್ತುಗಳಿಂದ ಹಿಂಪಡೆಯುವುದು.ಆನಂತರ  ಧಾರಣ ಅಥವಾ ಮನಸ್ಸನ್ನು ಒಂದು ವಸ್ತುವಿನ ಮೇಲೆ ಏಕಾಗ್ರಗೊಳಿಸುವುದು. ಇದರ ನಂತರ ಬರುವುದೆ ದ್ಯಾನ ಮತ್ತು ಸಮಾಧಿ.
ನಮಗೆ ಕಾಣುವಂತೆ ಯಮ ಮತ್ತು ನಿಯಮಗಳು ನೈತಿಕ ಶಿಕ್ಷಣ.ಇವುಗಳ ತಳಹದಿಯಿಲ್ಲದೆ ಯಾವ ಯೋಗಾಭ್ಯಾಸವೂ ಜಯಪ್ರದವಾಗುವುದಿಲ್ಲ.ಯಮ ನಿಯಮ ಪಳಗಿದ ಮೇಲೆ ಯೋಗಿಯು ತನ್ನ ಸಾಧನೆಯ ಫಲವನ್ನು ಪಡೆಯುತ್ತಾನೆ. ಇವುಗಳಿಲ್ಲದೆ ಯೋಗವೆಂದಿಗೂ
ಫಲಕಾರಿಯಾಗದು.ಯೋಗಿಯು ಮಾತು,ಕೃತಿ,ಆಲೋಚನೆಯಿಂದಲೂ ಕೂಡ ಯಾರನ್ನೂ ಹಿಂಸಿಸಬಾರದು,ದಯೆ ಮಾನವನಿಗೆ ಮಾತ್ರವಲ್ಲ ಇದು ಈ ಹಂತವನ್ನೂ ಮೀರಿಹೋಗಿ ಇಡೀ ವಿಶ್ವವನ್ನೇ ಆಲಿಂಗನ ಮಾಡಬೇಕಾಗುವುದು.ಆನಂತರ ದ ಮೆಟ್ಟಿಲೇ ಆಸನ.ಉತ್ತಮ ಮಾನಸಿಕ ಸ್ಥಿತಿಗೆ ಏರವವರೆಗೂ ಪ್ರತಿದಿನ ಶಾರೀರಿಕ ಮತ್ತು ಮಾನಸಿಕ ಸಾಧನೆಯನ್ನು ಪ್ರತಿದಿನ ಮಾಡಬೇಕು.ಎಂದು ರಾಜಯೋಗದಲ್ಲಿ ತಿಳಿಸಿದ್ದಾರೆ.ಈಗಿನ
ಯೋಗಿಗಳಲ್ಲಿ ಯೋಗ ಕೇಂದ್ರಗಳಲ್ಲಿ   ಆಸನಗಳು ಪ್ರಾಣಾಯಾಮಗಳು ಇದ್ದರೂ ಹೊರಗಿನ ರಾಜಕೀಯದಲ್ಲಿ ಮುಳುಗಿರುವ ಮನಸ್ಸನ್ನು ತಡೆಹಿಡಿಯಲಾಗದವರೆ ಹೆಚ್ಚಾಗಿ
ಯೋಗ ಕೇಂದ್ರಕ್ಕೆ ಬರುತ್ತಿರುವುದನ್ನು ಗಮನಿಸಿದರೆ ನಮ್ಮ ರೋಗಕ್ಕೆ  ಕಾರಣವಾಗಿರುವ  ರಾಜಕೀಯವನ್ನು ಬಿಡಲು ಸಾಧ್ಯವೆ? ನಮ್ಮನ್ನು ನಾವು ಆಳಿಕೊಳ್ಳಲು ಬೇಕಾದ ಸ್ವಲ್ಪ ಜ್ಞಾನ ಒಳಗಿತ್ತು.ಅದನ್ನು ಬಿಟ್ಟು ಹೊರಗಿನಿಂದ ವಿಶೇಷ ಜ್ಞಾನ ಒಳಗೆ ತುಂಬಿಕೊಂಡು  ಅಗತ್ಯಕ್ಕೆ ಮೀರಿದಹಣ ಸಂಪಾದನೆ  ಮಾಡಿ ಋಣವನ್ನು ಬೆಳೆಸಿಕೊಂಡು  ಮೂಲದಿಂದ ದೂರವಾದ ಮನಸ್ಸನ್ನು ತಡೆಹಿಡಿಯಲಾಗದೆ
ತಿರುಗಿ ಬರುವ ಪ್ರಯತ್ನವಾಗಿದೆ.ಇದಕ್ಕೆ ಹೊರಗಿನ ಸರ್ಕಾರ ಏನೂ ಮಾಡಲಾಗದು.
ರಾಜಯೋಗದ ಮೊದಲ ಮೆಟ್ಟಿಲನ್ನು ಹತ್ತಲು ಪ್ರಯತ್ನವೇ ಪಡದೆ ರಾಜಕೀಯ ನಡೆಸಿದರೆ ಯೋಗಿಯಾಗಲು ಅಸಾಧ್ಯ.
ಸಂನ್ಯಾಸಿಗಳಾದರೂ ಆಗಬಹುದು.ಯೋಗಿಯಾಗುವುದೇ ಬಹಳ ಕಷ್ಟ. ಎಲ್ಲವನ್ನೂ ಎಲ್ಲರನ್ನೂ ತೊರೆದು ಹೋಗಬಹುದು. ಇದ್ದೂ ಇಲ್ಲದಂತಿರುವ ಸ್ಥಿತಪ್ರಜ್ಞಾವಂತರು ಇಂದು ಕಾಣುವುದು ಕಷ್ಟ.ಕಣ್ಣಿಗೆ ಕಂಡದ್ದೆಲ್ಲಾ ಸತ್ಯವಲ್ಲ. ಕಾಣದಿರೋದೆ ಸತ್ಯ.ಆ ಸತ್ಯವನ್ನು ಯೋಗ್ಯ ಮಾರ್ಗದಲ್ಲಿ ಆಂತರಿಕ ಶಕ್ತಿಯಿಂದ ತಿಳಿದವರೆ ಮಹಾಯೋಗಿಗಳು.ಕಲಿಗಾಲದಲ್ಲಿ ಜನರನ್ನು ದಾರಿತಪ್ಪಿಸಿ ಆಳುವವರೆ ಹೆಚ್ಚು.ತಾವೇ ಆಳಾಗಿದ್ದರೂ ಇತರರನ್ನು ಆಳಿ ಅಳಿಸಿದರೆ  ಪರಮಾತ್ಮ ಒಲಿಯುವನೆ? ನಾನೇ ದೇವರೆಂದರೆ ದೇವರು ಕಾಣುವನೆ? ದೇಶದೊಳಗಿರುವ ಎಲ್ಲರಿಗೂ ದೇಶ ಕಾಣೋದಿಲ್ಲ ಕಾರಣ ನಾನೇ ಬೇರೆ ದೇಶ ಬೇರೆ ಎಂದು ಅದರೊಳಗೇ ಇದ್ದು ದೇಶ ಆಳೋ ರಾಜಕೀಯವಿದೆ. ಇದೇ ಭಾರತೀಯರ ದೊಡ್ಡ ಸಮಸ್ಯೆಗೆ ಕಾರಣವಾಗುತ್ತಿದೆ. ಒಟ್ಟಿನಲ್ಲಿ  ಯೋಗವನ್ನು ರಾಜಕೀಯದಿಂದ  ಪಡೆಯಲಾಗದು.
ಹೃದಯರೋಗಕ್ಕೆ ಹೃದಯವಂತಿಕೆಯ ಗುಣಜ್ಞಾನ ಹೆಚ್ಚಬೇಕು. ವೈಜ್ಞಾನಿಕ ಜಗತ್ತಿನಲ್ಲಿ ಹೃದಯದ ಕಸಿ ಮಾಡಿ ಜೀವ ಉಳಿಸಬಹುದಷ್ಟೆ.ಹೃದಯವಂತರನ್ನು ಬೆಳೆಸುವ  ರಾಜಯೋಗದ ಶಿಕ್ಷಣವನ್ನು ನೀಡದೆ ಹೃದಯ ಶುದ್ದಿಯಾಗಲು ಕಷ್ಟ. ಹೀಗಾಗಿ ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೂ ಒತ್ತಡದ ಕಾರಣಕ್ಕೆ ಹೃದಯರೋಗ ಹೆಚ್ಚಾಗಿದೆ. ನಮ್ಮ ಭಾರತೀಯ ಶಿಕ್ಷಣವು ಹೃದಯವಂತಿಕೆಯನ್ನು ಬೆಳೆಸುವತ್ತ ಸಾಗುವುದು ಉತ್ತಮ. 

No comments:

Post a Comment