ನಮ್ಮ ದೇಶದಲ್ಲಿ ಇತ್ತೀಚೆಗೆ ಸಾಕಷ್ಟು ಪ್ರತಿಮೆಗಳು,
ಪ್ರವಾಸಿತಾಣಗಳು ಇನ್ನಿತರ ಮೇಲ್ವರ್ಗಗಳಿಗೆ ಮನರಂಜನೆ ನೀಡುವ ಕಾರ್ಯಕ್ರಮಗಳಿಗೇನೋ ಕೊರತೆ ಇಲ್ಲ. ಆದರೆ ಇದರಿಂದಾಗಿ ದೇಶಕ್ಕಾಗುತ್ತಿರುವ ಕಷ್ಟ ನಷ್ಟ
ಅರ್ಥ ಮಾಡಿಕೊಳ್ಳುವ ಜ್ಞಾನದ ಶಿಕ್ಷಣದ ಕೊರತೆಯಿದೆ.
ಜ್ಞಾನವಿಲ್ಲದೆ ವಿಜ್ಞಾನ ಬೆಳೆದಿದೆ. ವಿದೇಶದೊಳಗೆ ದೇಶ ಸಿಲುಕಿದೆ. ಅಜ್ಞಾನದೊಳಗಿರುವ ಜ್ಞಾನವನ್ನು ಹೊರ
ತರಲಾಗದೆ ರಾಜಕೀಯದ ಹಿಂದೆ ನಡೆದವರಿಗೆ ತಾವೂ
ಅಜ್ಞಾನಿಗಳ ವಶವಾಗೋ ಸತ್ಯದ ಅರಿವಿಲ್ಲ. ಹಾಗಾದರೆ ಇಲ್ಲಿ ಸ್ವತಂತ್ರ ಯಾರಿಗೆ ಸಿಕ್ಕಿದೆ? ಭಾರತಕ್ಕೋ ?ವಿದೇಶಕ್ಕೋ?
ಆತ್ಮಾವಲೋಕನ ಮಾಡಿಕೊಳ್ಳಲು ಸೋತಿರುವ ಪ್ರಜೆಗಳಿಗೆ
ನಮಗೆ ನಾವೇ ಶತ್ರುಗಳಾಗಿರುವಾಗ ಹೊರಗಿನ ಶತ್ರುಗಳು
ಸರಿಯಾಗಿ ಪಾಠ ಕಲಿಸುತ್ತಿದ್ದಾರೆ. ಅಂದರೆ ಅದ್ವೈತ ದೊಳಗೇ ದ್ವೈತವಿದ್ದರೂ ಒಂದಾಗಿಲ್ಲ. ತತ್ವವನ್ನು ತಂತ್ರವಾಗಿಸಿಕೊಂಡರೆ ಸ್ವತಂತ್ರ ಎಲ್ಲಿರುವುದು? ಒಳಗಿನ ಸತ್ಯ ಬಿಟ್ಟು ಹೊರಗೆ ದೇವರನ್ನು ಬೆಳೆಸಿದರೆ ಸಿಗುವನೆ? ಅಥವಾ ಒಳಗಿರುವ ಭಾರತೀಯ ಜ್ಞಾನವನ್ನು ವ್ಯವಹಾರಕ್ಕೆ ಬಳಸಿ ಹೊರಗಿನ ಶಿಕ್ಷಣದಿಂದ ರಾಜಕೀಯ ನಡೆಸಿದರೆ ತತ್ವಜ್ಞಾನ ಬೆಳೆಯೋದಿಲ್ಲ. ಅಂತರದಿಂದ ಬೆಳೆದಿರುವ ಅವಾಂತರಕ್ಕೆ
ಅಜ್ಞಾನದ ಶಿಕ್ಷಣವೇ ಕಾರಣ.ದೇಶದ ಸಾಲ ತೀರಿಸಲು ವಿದೇಶಿ ಸಾಲ ತರುವುದೆ? ಅಥವಾ ದೇಶದ ಪ್ರಜೆಗಳಿಗೆ ಸೂಕ್ತ
ಶಿಕ್ಷಣ ಕೊಟ್ಟು ಸ್ವತಂತ್ರ ಜೀವನ ನಡೆಸಲು ಬಿಡುವುದೆ? ಈಗ ಕಾಲ ಮಿಂಚಿಹೋಗಿರಬಹುದು. ಮುಂದಿನ ಪೀಳಿಗೆಗಾದರೂ
ನಮ್ಮತನ ಆತ್ಮವಿಶ್ವಾಸ,ಆತ್ಮಜ್ಞಾನ ಹೆಚ್ಚಾಗಬೇಕಾದರೆ ಈಗ
ನಮ್ಮ ಸಹಕಾರವೂ ಅಧ್ಯಾತ್ಮದ ಕಡೆಗೆ ನಡೆಯಬೇಕಿದೆ. ಇಲ್ಲಿ ರಾಜಕೀಯವೇ ಭ್ರಷ್ಠರ ವಶದಲ್ಲಿದ್ದರೆ ರಾಜಯೋಗದ ಗತಿ? ಹಿಂದಿನ ಧರ್ಮ ಕರ್ಮ ಜ್ಞಾನದಲ್ಲಿತ್ತು. ಅದಕ್ಕೆ ಹಿಂದೂ ಧರ್ಮ ಉಳಿದಿತ್ತು. ಈಗ ಅಜ್ಞಾನದ ರಾಜಕೀಯಕ್ಕೆ ಇಳಿದು ವ್ಯವಹಾರ ನಡೆಸಿದೆ.ಹಣವಿದ್ದರೂ ಇದನ್ನು ಹೇಗೆ ಬಳಸಬೇಕೆಂಬ ಜ್ಞಾನವಿಲ್ಲದೆ ಹೆಸರು,ಹಣ,ಅಧಿಕಾರದ ದಾಹಕ್ಕೆ ಜೀವ ಬಲಿಯಾಗುತ್ತಿದೆ. ಕೆಲವರಿರಬಹುದು ಆದರೆ
ಇಡೀ ದೇಶ ಕಾಣೋದು ಹಲವರ ರಾಜಕೀಯ ಮಾತ್ರ.
ಮಧ್ಯವರ್ತಿಗಳು ಮಾಧ್ಯಮಗಳು ಮಹಿಳೆಯರು ಮಕ್ಕಳು ಮನೆಯಿಂದ ಹೊರಬಂದು ಮನರಂಜನೆಗಾಗಿ ಸಹಕರಿಸಿದರೆ ಋಣ ಅಥವಾ ಸಾಲ ತೀರುವುದೆ? ಯೋಗಿಗಳ ದೇಶ ಭೋಗಕ್ಕೆ ಬಳಸಿ ಸಾಲ ಏರಿಸಿ ರೋಗಿಗಳ ದೇಶವಾಗಿಸಿ ಆಳೋರಿಗೆ ನಮ್ಮ ಸಹಕಾರವಿದೆ ಎಂದರೆ ಇದಕ್ಕೆ ಕಾರಣವೇ ನಮ್ಮ ಸಹಕಾರ. ಕೋಟ್ಯಂತರ ಹಣವನ್ನು
ದುರ್ಭಳಕೆ ಮಾಡಿಕೊಳ್ಳುವವರಿಗೆ ವಿರೋಧಿಗಳಿಲ್ಲ. ಸಣ್ಣ ಪುಟ್ಟ ಕಳ್ಳರಿಗೆ ಕಠಿಣ ಶಿಕ್ಷೆ.
ಒಟ್ಟಿನಲ್ಲಿ ಶಿಕ್ಷೆ ಎಲ್ಲರಿಗೂ ಇದೆ.ಕೆಲವರಿಗೆ ಸಣ್ಣದರಲ್ಲಿಯೇ ಶಿಕ್ಷೆಯಾಗಿ ಮುಕ್ತಿ ಕೊಡುವ ಆ ಪರಮಾತ್ಮನನ್ಯಾಯಾಲಯ
ದೊಡ್ಡದಾಗಿ ಬೆಳೆದು ನಿಂತ ಭ್ರಷ್ಟರಿಗೆ ಶಿಕ್ಷೆ ಕೊಡಲು ಕಷ್ಟವಾಗುತ್ತಿದೆ.ಕಾರಣವಿಷ್ಟೆ ಈ ಸಣ್ಣ ಪುಟ್ಟ ಕಳ್ಳರು ದೊಡ್ಡವರ ಪಕ್ಷವಹಿಸಿ ನಿಂತು ಪರಮಾತ್ಮನಿಗೆ ಅಡ್ಡ ನಿಲ್ಲುತ್ತಾರೆ. ಇದರ ಪ್ರತಿಫಲವೇ ಬಡವರಿಗೆ ಶಿಕ್ಷೆ ಹೆಚ್ಚಾಗಿದೆ. ಇನ್ನೊಂದು ಕಾರಣವೆಂದರೆ ಭ್ರಷ್ಟರೆ ಭ್ರಷ್ಟರಿಗೆ ಶಿಕ್ಷೆ ನೀಡಲು
ಸಾಧ್ಯವಿಲ್ಲ. ಅನ್ಯಾಧೀಶರುಗಳು ನ್ಯಾಯವನ್ನು ಹಣದಿಂದ ತಡೆಯಬಹುದಷ್ಟೆ. ಜ್ಞಾನಿಗಳು ಅಜ್ಞಾನಿಗಳ ಹಿಂದೆ ನಡೆದರೆ
ಅಧರ್ಮ.
ಶಿಕ್ಷಣವೇ ಸರಿಯಿಲ್ಲದೆ ಆಳಿದರೆ ಆಗೋದೆ ಹೀಗೆ. ದೊಡ್ಡವರ
ದಡ್ಡತನಕ್ಕೆ ದೇಶವೇ ಹಿಂದುಳಿಯುತ್ತಿದೆ. ಇದನ್ನು ಎಲ್ಲಾ ಕ್ಷೇತ್ರದಲ್ಲಿ ಕಾಣಬಹುದು. ಸ್ವತಂತ್ರ ವಾಗಿದ್ದವರಿಗೆ ಸ್ಪಷ್ಟವಾಗಿ ಕಾಣುತ್ತದೆ. ರಾಜಕೀಯ ಭ್ರಷ್ಟಾಚಾರ ಕಣ್ಣಿಗೆ ಕಾಣುತ್ತದೆ.
ಧಾರ್ಮಿಕ ಭ್ರಷ್ಟಾಚಾರ ಕಣ್ಣಿಗೆ ಕಾಣದೆ ಅನುಭವಕ್ಕೆ ಬರುತ್ತದೆ. ಅನುಭವಿಸಿದ ಮೇಲೇ ಸತ್ಯದರ್ಶನ ವಾಗುತ್ತದೆ.
ಭಾರತೀಯರಾಗಲು ಭಾರತದೊಳಗಿದ್ದರೆ ಸಾಲದು ಅವಳ ಜ್ಞಾನವಿರಬೇಕಿದೆ. ಹಾಗೆಯೇ ದೇವರಾಗಲು ದೈವತ್ವದ ಶಿಕ್ಷಣವಿರಬೇಕು. ತತ್ವಜ್ಞಾನ ಬೇಕಿದೆ. ದೇವರು ಅಸಂಖ್ಯ ದೇಶ ಒಂದೇ. ಸತ್ವಗುಣ,ರಜೋಗುಣ,ತಮೋಗುಣದಲ್ಲಿ ಸತ್ವವೇ ಇಲ್ಲವಾದರೆ ಮೂಲಾಧಾರ ಚಕ್ರ ಶುದ್ದವಾಗುವುದೆ?
ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎನ್ನುವ ವರ್ಣದ ಧರ್ಮ ಕರ್ಮವು ಜ್ಞಾನಿಗಳಿಂದ ಬೆಳೆದಿತ್ತು. ಇದರಲ್ಲಿ ಮೇಲಿನವರ ಜ್ಞಾನವೇ ಎಲ್ಲರನ್ನೂ ನಡೆಸಿತ್ತು. ಕಾಲಬದಲಾಗಿದೆ.ಹಾಗಂತ ಸತ್ಯ ಒಂದೇ. ಆ ಸತ್ಯದ ಕಡೆಗೆ ನಡೆಯುವುದೇ ಅಧ್ಯಾತ್ಮ.
ಆದಿ ಆತ್ಮ ವೇ ಮಕ್ಕಳಿಗೆ ತಂದೆತಾಯಿಯರು. ಜ್ಞಾನವೇ ಆಸ್ತಿ
ಜ್ಞಾನವಿಲ್ಲದೆ ಎಷ್ಟೇ ಭೌತಿಕ ಆಸ್ತಿ ಮಾಡಿದರೂ ಮಕ್ಕಳ ಕಾಲಕ್ಕೆ ತಕ್ಕ ಶಾಸ್ತಿ ಆಗದಿದ್ದರೆ ಅದೇ ಪುಣ್ಯ.ಅದೃಷ್ಟ.
ಭಗವಂತನೊಳಗೆ ಶಿಷ್ಟರು,ದುಷ್ಟರು,ಭ್ರಷ್ಟರೂ ಇದ್ದಾರೆ. ಯಾರಿಗೆ ಹೆಚ್ಚು ಸಹಕಾರವಿರುವುದೋ ಅವರು ಬೆಳೆಯುತ್ತಾರೆ.ಕಾರಣ ಪರಮಾತ್ಮನಿಗೆ ಎಲ್ಲಾ ಒಂದೇ. ಕಷ್ಟಪಟ್ಟು ಭ್ರಷ್ಟಾಚಾರ ನಡೆಸಿದರೂ ಅದರ ಫಲ ಭ್ರಷ್ಟನೇ
ಅನುಭವಿಸಬೇಕು.ಇದಕ್ಕೆ ಸಹಕರಿಸಿದವರಿಗೂ ಇದರ ಫಲ ಸಿಗುತ್ತದೆ.ಹೀಗಾಗಿ ಎಷ್ಟೇ ಅನ್ಯಾಯ ಮಾಡಿದರೂ ಶಿಕ್ಷೆ ಆಗದೆ ಹೊರಬರುವುದು ಶ್ರೀಮಂತ ವರ್ಗ. ಆದರೆ ಜೀವನ ಶಾಶ್ವತವಲ್ಲ.ಇದರ ಫಲ ಮತ್ತೊಂದು ಜನ್ಮದಲ್ಲಿ ಪಡೆಯಬೇಕೆನ್ನುವುದೇ ಕರ್ಮ ಸಿದ್ದಾಂತ. ಇದನ್ನು ಸರ್ಕಾರ
ತಡೆಯಲಾಗದು.ಈ ಸಾಮಾನ್ಯಜ್ಞಾನ ಸಾಮಾನ್ಯಜನ ತಿಳಿದರೆ ಮೂಲವನ್ನು ಗಟ್ಟಿಯಾಗಿಸಿಕೊಂಡು ಕಷ್ಟಪಟ್ಟು ದುಡಿಯಬಹುದು.ಕಾಯಕವೇ ಕೈಲಾಸ,ಕೈಲಾಸದಲ್ಲಿ ಕಾಯಕವಾಗಬಾರದಷ್ಟೆ. ದೇವರ ಕೋಣೆಯೇ ಬೇರೆ, ಬಚ್ಚಲಮನೆಯೇ ಬೇರೆ. ಎರಡೂ ಶುದ್ದವಾಗಿಟ್ಟರೂ ಅದರ ಕಾರ್ಯದ ಫಲವೇ ಬೇರೆ ಬೇರೆ. ಭ್ರಷ್ಟಾಚಾರದ ಹಣದಲ್ಲಿ ದೇವರ ಪೂಜೆ ಅಗತ್ಯವೆ? ಭ್ರಷ್ಟರ ಹಣದಲ್ಲಿ ದೇಶಸೇವೆಯೆ? ವಿದೇಶಿಗಳ ಸಾಲದಲ್ಲಿ ರಾಜಕೀಯವೆ?
ಹಿಂದಿನ ಕಾಲದಲ್ಲಿ ಶೌಚಾಲಯ ಮನೆಯಿಂದ ಹೊರಗಿತ್ತು.
No comments:
Post a Comment