ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Wednesday, September 21, 2022

ವಿಶ್ವಶಾಂತಿ ದಿನದ ಶುಭಾಶಯಗಳು


|| ಅಂತರಾಷ್ಟ್ರೀಯ  ವಿಶ್ವ  ಶಾಂತಿದಿನದ ಶುಭಾಶಯಗಳು. 
ರಾಷ್ಟ್ರೀಯ ಶಾಂತಿಯ ನಂತರವೇ ಅಂತರಾಷ್ಟ್ರೀಯ ಶಾಂತಿ
ಹಾಗೆ ಮನೆಯೊಳಗೆ ಶಾಂತಿ ಸಿಗಲು ಮನಸ್ಸು ಶಾಂತವಾಗಿರಬೇಕು. ಮನಸ್ಸಿನ  ಶಾಂತಿಗೆ  ಯೋಗ

ಇರಬೇಕು. ಅಧ್ಯಾತ್ಮದ ಯೋಗವೇ ಬೇರೆ ಭೌತಿಕದ ಯೋಗವೇ ಬೇರೆ.ಒಟ್ಟಿನಲ್ಲಿ ನಮ್ಮ ಮನಸ್ಸಿಗೆ ಕೂಡುವ,
ಸೇರುವ ವಿಚಾರಗಳಿಂದ ಮನಸ್ಸು ಶಾಂತವಾದರೆ ಅದೇ ಮಹಾಯೋಗ. ಈ ಯೋಗವು ಹೊರಗಿನಿಂದ ಬರುವುದೆ? ಒಳಗಿನಿಂದ  ಬರುವುದೆ? ತಂದೆ ತಾಯಿಯರ ಸಂಯೋಗ
ದಿಂದ  ಮಕ್ಕಳು  ಜನ್ಮತಾಳುವರು. ಅಂದರೆ ಪಿತೃಗಳಿಲ್ಲದೆ 
ಜೀವನವಿಲ್ಲ.ಪಿತೃಪಕ್ಷದ ಈ ದಿನಗಳಲ್ಲಿ  ನಾವು ಪಿತೃಗಳನ್ನು ನೆನಪಿಸಿಕೊಳ್ಳುವುದೆ ಪಿತೃಗಳ ಯೋಗದ ಫಲ.
ಪಕ್ಷಪಕ್ಷದ ನಡುವಿನ‌ ಹಗ್ಗಜಗ್ಗಾಟದಲ್ಲಿ ಜನರ ಮನಸ್ಸನ್ನು ಹೊರಗೆಳೆದು  ಆಳುತ್ತಿರುವ. ರಾಜಕೀಯಕ್ಕೆ  ಬಲಿಯಾದರೆ ಒಳಗಿನ ಪಿತೃಪಕ್ಷವಿಲ್ಲದೆ  ಜೀವನ ಅತಂತ್ರಸ್ಥಿತಿಗೆ ತಲುಪುತ್ತದೆ.
ಯಾವಾಗ ಪಿತೃಗಳ ಆಶೀರ್ವಾದ ಸಹಕಾರ, ಸಹಾಯ ಧರ್ಮ ಕರ್ಮಗಳಿಂದ ಮಕ್ಕಳು ದೂರವಾಗುತ್ತಾ ಹೊರಗೆ ಹೋಗುವರೋ ಆಗಲೇ ಶಾಂತಿ ಕಳೆದುಕೊಂಡು ದೇಶ ವಿದೇಶದಲ್ಲಿ  ಶಾಂತಿ ಹುಡುಕುವಂತಾಗುತ್ತದೆ.  ಅಲ್ಲಿರುವುದು ನಮ್ಮನೆ ಇಲ್ಲಿ ಬಂದೆ ಸುಮ್ಮನೆ. ಸುಮ್ಮನಿರಲಾಗದೆ ರಾಜಕೀಯ ನಡೆಸಿಕೊಂಡು ಅಶಾಂತಿಯಿಂದ  ಜೀವನ ನಡೆಸೋದರಲ್ಲಿ  ಶಾಂತಿ ಕಾಣಬಹುದೆ? ಎಲ್ಲಾ ನಿನ್ನೊಳಗೇ
ಅಡಗಿರುವಾಗ ಹೊರಗೆ ಹುಡುಕುವುದೇಕೆ? ಎನ್ನುವರು ಮಹಾತ್ಮರು. ಆದರೆ ಒಳಗೆ ಹುಡುಕಿಕೊಳ್ಳುವುದನ್ನು ಗುರು ಹಿರಿಯರು ಕಲಿಸಿಕೊಡುವುದೇ ನಿಜವಾದ ಶಿಕ್ಷಣವಾಗಿತ್ತು.
ಶಿಕ್ಷಣವೇ ಅಂತರಾಷ್ಟ್ರೀಯ ಮಟ್ಟಕ್ಕೆ ಬೆಳೆದಿದೆ.
ಆಂತರಿಕವಾಗಿದ್ದ ಜ್ಞಾನದ ಮಟ್ಟ ಕುಸಿಯುತ್ತಾ ಅಶಾಂತಿ  ಹೆಚ್ಚಾಗುತ್ತಿದೆ. ಇದಕ್ಕೆ ಕಾರಣವೇ ನಮ್ಮ ಭೌತಿಕ ಸಹಕಾರ
ಅಧ್ಯಾತ್ಮ ಬಿಟ್ಟು ನಡೆದಿರೋದು. ನಮ್ಮದೇ ಸಹಕಾರಕ್ಕೆ ನಾವೇ ಹೊಣೆಗಾರರಲ್ಲವೆ? ಕರ್ಮಕ್ಕೆ ತಕ್ಕಂತೆ ಫಲ.
  - - - -  
          ಭಗವದ್ಗೀತೆಯ ಯೋಗಗಳಾಗ ಜ್ಞಾನಯೋಗ,ರಾಜಯೋಗ,ಭಕ್ತಿಯೋಗ,ಕರ್ಮಯೋಗವು
ಪರಮಾತ್ಮನ ಕಡೆಗೆ  ನಡೆಸಿತ್ತು ಭೌತಿಕದ ಯೋಗವು ಪರಕೀಯರ ಕಡೆಗೆ ನಡೆಸುತ್ತಾ  ಭೋಗದಿಂದ ರೋಗವೇ ಹೆಚ್ಚಾಗಿ ಮಾನವನಿಗೆ ಅಶಾಂತಿ ಹೆಚ್ಚಾಗುತ್ತಿದೆ. ಇದನ್ನು ಭೌತಿಕ ವಿಜ್ಞಾನ ಒಪ್ಪಿದರೂ  ಅದನ್ನು ಒಳಗೆಳೆದುಕೊಂಡ ಮಧ್ಯವರ್ತಿಗಳು ಒಪ್ಪದೆ ವ್ಯವಹಾರದಿಂದ  ಶಾಂತಿ ಕಾಣಲು
ಸಾಧ್ಯವೆ?   

No comments:

Post a Comment