ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Monday, September 19, 2022

ಅಂತರದಿಂದ ಅವಾಂತರ ಪರಿಹಾರ?

ಅಂತರವೆಂಬ ಪಿಡುಗಿಗೆ ಮದ್ದು ಇದೆಯೆ?
ಭೂಮಿ ಆಕಾಶದ ನಡುವಿನ‌ ಅಂತರವನ್ನು ಭೌತಿಕದಿಂದ ಅಳೆದು ತೂಗಿ ಲೆಕ್ಕಾಚಾರದಲ್ಲಿಯೇ ಅಂತರ ಹೆಚ್ಚಿಸಿರುವ
ನಮ್ಮ ಚಿಂತನಗಳೇ ಇಂದು ಬಹು ದೊಡ್ಡ ಚಿಂತೆಗೆ ಕಾರಣ.ಇದೇ ಚಿತೆಯವರೆಗೂ ಹೋಗುತ್ತಿದೆ  ಈ ಅಜ್ಞಾನಕ್ಕೆ ಮದ್ದು ಅಂತರವನ್ನು ಅಳೆಯುವ ಬದಲಾಗಿ ಸಮಾನಾಂತರವಾಗಿ ಒಂದೇ ರೇಖೆಯಲ್ಲಿ  ತಿಳಿದು ತಿಳಿಸಿ ನಡೆದು ನಡೆಸುವುದಾಗಿದೆ. ಸಮಾ-  ಅಂತರ ಬೆಳೆದಷ್ಟೂ ಮಧ್ಯವರ್ತಿಗಳು  ಹೆಚ್ಚಾಗುತ್ತಾ ಅರ್ಧ ಸತ್ಯದ ಅತಂತ್ರಸ್ಥಿತಿಗೆ ಜೀವನ ತಲುಪುತ್ತದೆ ಹೀಗಾಗಿ ತತ್ವಗಳಲ್ಲಿರುವ ಅಂತರವನ್ನು
ಸರಿಯಾಗಿ  ತಿಳಿದು ಜೋಡಿಸುವುದೇ  ತತ್ವಜ್ಞಾನದ ಗುರಿ.
ಇನ್ನು  ಇದೀಗ ತಂತ್ರಜ್ಞಾನದಿಂದ ಸಾಕಷ್ಟು ಬೆಳೆದು ನಿಂತಿದೆ
ಇದರಲ್ಲಿ ಮುಖ್ಯವಾದ ಧರ್ಮಾಂತರ  ,ಜಾತಿಯ ಅಂತರ, ಪಕ್ಷಾಂತರ, ದೇಶಾಂತರದಿಂದ ಯಾರಿಗಾದರೂ ದೇವರು ಕಾಣಿಸಿರಬಹುದೆ? ದೇವನೊಬ್ಬನೆ ನಾಮ ಹಲವು ಎಂದು ಮುಂದೆ ನಡೆದವರಲ್ಲಿಯೇ ಅಂತರವನ್ನು ಸೃಷ್ಟಿ ಮಾಡುತ್ತಾ
ವ್ಯವಹಾರಕ್ಕೆ ಇಳಿದಾಗ ಭೌತಿಕದಲ್ಲಿ ಅಗೋಚರ ಶಕ್ತಿಯನ್ನು ತೋರಿಸಲಾಗದು ಅನುಭವಿಸಿಯೇ ತಿಳಿಯಬೇಕು. ಹೀಗಾಗಿ
ನಮ್ಮೊಳಗೇ ದೈವತ್ವದ ಗುಣ ಜ್ಞಾನ,ವಿದ್ಯೆ ಇಲ್ಲವಾದರೆ ದೇವರಿಲ್ಲ ಎನ್ನುವ  ಅಹಂಕಾರ ಬೆಳೆದು ನಾನೇ ಎಲ್ಲಾ ಎನ್ನುವ ಮಟ್ಟಕ್ಕೆ ಮನಸ್ಸು ಹೊರಮುಖವಾಗಿರುತ್ತದೆ.ಇದು ಜನಸಾಮಾನ್ಯರನ್ನೂ ದಾರಿತಪ್ಪಿಸಿ ಆಳಿದರೆ  ದೈವತ್ವ ವೆಲ್ಲಿ?
ಇನ್ನು ಕೆಲವರಿಗೆ ದೇವರ ಜೊತೆಗೆ ನಾನೂ ಇರೋವಾಗ ಇಬ್ಬರೂ ಸರಿಸಮಾನರೆಂಬ ಮಾನವೀಯ ಗುಣವಿದ್ದರೂ
ಯಾವಾಗ ಆ ಮಾನವನ ಮನಸ್ಸು ಅಹಂಕಾರ ದಿಂದ ಬೆಳೆಯುವುದೋ ಮೇಲು ಕೀಳೆಂಬ ಬಾವನೆಗೆ ತಕ್ಕಂತೆ  ದೈವ ಶಕ್ತಿ  ಕುಸಿಯುತ್ತದೆ. ಪ್ರಾರಂಭದಲ್ಲಿರುವಂತೆಯೇ ಮಾನವ ಕೊನೆಯವರೆಗೂ ಇರಲಸಾಧ್ಯ.ಮೊದಲು  ನಾಸ್ತಿಕ ನಾದವನು ಕೊನೆಗೆ ಆಸ್ತಿಕನಾಗಬಹುದು.ಹಾಗೆ ಆಸ್ತಿಕ ನಾಸ್ತಿಕನಾಗಬಹುದು. ಆದರೆ ಭೌತಿಕದ ಆಸ್ತಿಯಿಂದ ದೈವತ್ವ ಪಡೆಯುವುದು ಕಷ್ಟ. ಅಧ್ಯಾತ್ಮ ಮಾರ್ಗದಲ್ಲಿ ನಡೆಯುವಾಗ  ಎಲ್ಲಿ,ಯಾರು,ಹೇಗೆ ಬದಲಾಗಬಹುದೆನ್ನುವ ಕಲ್ಪನೆ ಮಾಡಲಾಗದು. ಹಾಗಾಗಿ ನಮ್ಮ ಮನಸ್ಸನ್ನು ಒಂದು ಸ್ಥಿಮಿತದಲ್ಲಿಟ್ಟುಕೊಂಡು ಜೀವನ  ನಡೆಸುವುದೇ ಸ್ಥಿತಪ್ರಜ್ಞಾವಂತರ  ಲಕ್ಷಣ ಎಂದಿರುವುದು.
ಇಲ್ಲಿ  ಪರಮಾತ್ಮ ಹಾಗು ಜೀವಾತ್ಮರ ನಡುವಿನ ಅಂತರವೇ
ಅಜ್ಞಾನಕ್ಕೆ ಕಾರಣ. ಈ ನಡುವಿನ ರಾಜಕೀಯದಿಂದ ದೂರ ಇದ್ದವರಿಗೆ ಮಾತ್ರ   ಆತ್ಮಜ್ಞಾನದಿಂದ ಮುಕ್ತಿ ಮೋಕ್ಷವನ್ನು ಪಡೆಯಲು ಸಾಧ್ಯ ಎನ್ನುವ  ಕಾರಣಕ್ಕಾಗಿ ಹಿಂದಿನ ಮಹಾತ್ಮರು,ತಪಸ್ವಿಗಳು,ಸಂನ್ಯಾಸಿಗಳು ಸಾದು,ಸಂತರು
ದಾಸ,ಶರಣರು  ತಮ್ಮ ತತ್ವಜ್ಞಾನದ ಮೂಲಕ ಸತ್ಯ ಹೊರಹಾಕುವ ಪ್ರಯತ್ನ ಮಾಡಿದ್ದರೂ ಅದನ್ನು ರಾಜಕೀಯವಾಗಿ ಬಳಸಿದರೆ ಅಂತರ ಕಡಿಮೆಯಾಗಲು ನಮ್ಮಲ್ಲಿ ಅದರ ಸ್ವಲ್ಪ ಅನುಭವಜ್ಞಾನವಿರಬೇಕಷ್ಟೆ.
ಅಂತರದಿಂದ ಆಂತರಿಕ  ಜ್ಞಾನವನ್ನು ಹೆಚ್ಚಿಸಿಕೊಳ್ಳಲು ನಮ್ಮ
ದೇಹವನ್ನು ಭೌತಿಕದಿಂದ  ಅಧ್ಯಾತ್ಮ ದ ಕಡೆಗೆ ಒಯ್ಯಬೇಕು.
ಹಾಗೆ ಹೋಗುತ್ತಿರುವಾಗ ಸತ್ಯ ಹಾಗು ಧರ್ಮ ದ ಮೂಲದ ಬಗ್ಗೆ ಚಿಂತನೆ ಯಿದ್ದರೆ  ಮೂಲ ತಲುಪುವ ಪ್ರಯತ್ನಮಾಡಲು ಸಾಧ್ಯ. 
ಸತ್ಯವೇ ತಿಳಿಯದ ಧರ್ಮವು ಕುಂಟುತ್ತದೆ ಧರ್ಮ ವಿಲ್ಲದ ಸತ್ಯವು ಕುರುಡು ಜಗತ್ತಿನಲ್ಲಿ ಅಲೆದಾಡುತ್ತದೆ.ಅಂದರೆ ಅಧ್ಯಾತ್ಮ ಸತ್ಯವನ್ನು  ಆಂತರಿಕ ವಾಗಿರುವ ಸತ್ಯದ ಮೂಲಕವೇ ಕಾಣಬಹುದು. ಹೊರಗಿನ ಸತ್ಯದೆಡೆಗೆ ಹೋದಷ್ಟೂ ಅಂತರವೇ ಹೆಚ್ಚುತ್ತದೆ. ಪ್ರತಿಯೊಂದು ಚರಾಚರದಲ್ಲಿಯೂ ಅಡಗಿರುವ ಆ ಶಕ್ತಿ ಕಾಣಲಾಗದು .
ಆದರೂ ಬಳಸುತ್ತೇವೆ. ಅಣು ಪರಮಾಣುಗಳ ಒಕ್ಕೂಟದ ಈ ವೈಜ್ಞಾನಿಕ ಸಂಶೋಧನೆಯಿಂದ ಮಾನವನ ಜೀವನ ನಡೆದಿದೆ.ಹಾಗೆಯೇ ಈ ಸಂಶೋಧನೆಗಳಿಗೆ ಸಹಕರಿಸಿರುವ ಜೀವಾತ್ಮ‌ಪರಮಾತ್ಮರನ್ನು ವಿರೋಧಿಸಿ ನಡೆದರೆ ಅಂತರ ಬೆಳೆಯುತ್ತದೆ. ಅಂದರೆ ಒಕ್ಕೂಟದ ಉದ್ದೇಶ ಒಂದೇ ಆದರೆ ಮಾನವನಿಗೆ ಇದರಲ್ಲಿ ಬೇರೆ ಬೇರೆ ಕಾಣುತ್ತಿದೆ ಎಂದಾಗ ಮಾನವ ಮಧ್ಯವರ್ತಿ ಯಷ್ಟೆ. ಅವನ ಸ್ವಾರ್ಥ ದ ಬದುಕಿಗೆ
ಎರಡೂ ಬಳಸಿದರೂ ಆತ್ಮಕ್ಕೆ ತೃಪ್ತಿ, ಶಾಂತಿ ಮುಕ್ತಿ ಸಿಗಲಿಲ್ಲ
ಎಂದರೆ  ಮನಸ್ಸು ಸಂಪೂರ್ಣ ವಾಗಿ  ಅದರೊಂದಿಗೆ ಸೇರಿಲ್ಲ. ಈ ಸೇರುವಿಕೆಯೇ ಯೋಗ. ಇದು ಅಧ್ಯಾತ್ಮ ಸಾಧನೆಯಿಂದ   ಸಾಧ್ಯ.  ಅಂತರವು  ಸಾಧನೆಗೇ ಅಡ್ಡಿ.
ಹಾಗಾದರೆ  ಮಹಾತ್ಮರುಗಳು ಯಾಕೆ ಎಲ್ಲಾ ಬಿಟ್ಟು ದೂರ ಹೋದರು? ಎಂದರೆ ಮಹಾತ್ಮರುಗಳ ಉದ್ದೇಶ ಜೀವನ್ಮುಕ್ತಿ
ಇದಕ್ಕಾಗಿ ಜೀವಾತ್ಮ ಪರಮಾತ್ಮನೆಡೆಗೆ ಹೋಗಲು ಹೊರಗಿನ
ಸಹಕಾರದ ಅಗತ್ಯವಿರಲಿಲ್ಲ.ಸ್ವತಂತ್ರ ಬದುಕಿನಲ್ಲಿ ನಮ್ಮ ಸಹಾಯಕ್ಕೆ ಒಳಗಿರುವ ಅಗೋಚರ ಆತ್ಮಶಕ್ತಿಯೇ ಪ್ರೇರಕರು. ಇದನ್ನರಿತವರು ಭೌತಿಕದಿಂದ ದೂರವಾದರು.
ಯಾವಾಗ ಜೀವಕ್ಕೆ  ಭೌತಿಕಾಸಕ್ತಿ ಕಡಿಮೆಯಾಗುವುದೋ ಆಗಲೇ ಆಂತರಿಕ ಶಕ್ತಿ ಹೆಚ್ಚಾಗುವುದು.ಇದನ್ನು ವೈರಾಗ್ಯ ಎಂದರು. ಸಂನ್ಯಾಸಿಯಾದ ತಕ್ಷಣ ವೈರಾಗ್ಯವೆಂದರ್ಥ ವಲ್ಲ.
ಸಂಸಾರದಲ್ಲಿರುವವರೆಲ್ಲರೂ   ವೈರಾಗ್ಯದಿಂದ ಜೀವನ ನಡೆಸಬಹುದು. ಆದರೆ ತಮ್ಮದೇ ಆದ ಧರ್ಮ ಕರ್ಮಕ್ಕೆ ವಿರುದ್ದ ನಡೆಯುವುದರಿಂದಲೂ ಅಂತರ ಬೆಳೆಯುತ್ತದೆ.
ಒಟ್ಟಿನಲ್ಲಿ ಅಂತರವು ಅಜ್ಞಾನದಿಂದ ಬೆಳೆದಿರುವುದರಿಂದ
ಜ್ಞಾನದಿಂದ ಇದನ್ನು ಹೊಡೆದೋಡಿಸುವುದೇ ಭಾರತೀಯ ಮೂಲ ಶಿಕ್ಷಣದ ಉದ್ದೇಶವಾಗಿದೆ.
ಹೊರಗಿನ ಸಾಲ ಬೆಳೆದಷ್ಟೂ ಒಳಗಿನ ಸಾಲವೂ ಬೆಳೆಯುತ್ತದೆ. ಎಂದ ಮೇಲೆ ಎರಡೂ ಒಂದೇ ನಾಣ್ಯದ ಎರಡು ಮುಖವಷ್ಟೆ.
ಸ್ತ್ರೀ ಪುರುಷ, ಭೂಮಿ ಆಕಾಶ, ಜ್ಞಾನ ವಿಜ್ಞಾನ,  ದೇಶ ವಿದೇಶ, ಅಧ್ಯಾತ್ಮ ವಿಜ್ಞಾನ, ಭೌತ ವಿಜ್ಞಾನದ  ನಡುವೆ ಬೆಳೆದ ಅಂತರವೇ ಇಂದು ಅವಾಂತರಕ್ಕೆ ಕಾರಣವಾಗಿದೆ.
ಹಿಂದೂ ಧರ್ಮದ ಹಿಂದುಳಿಯುವಿಕೆಗೆ  ಪರಧರ್ಮದ ನಡುವಿನ ಅಂತರ ಕಾರಣ. ಆದರೆ ಈ ಅಂತರವು ಅಜ್ಞಾನದಿಂದ ಬೆಳೆದಿದೆಯೋ ಜ್ಞಾನದಿಂದಲೋ ಎನ್ನುವ ಪ್ರಶ್ನೆ ಹಾಕಿಕೊಂಡರೆ  ನಮಗೆ  ನಮ್ಮ ಧರ್ಮ ದ ತಿರುಳೇ ಅರ್ಥ ವಾಗದೆ ಪರರ ಧರ್ಮವನ್ನು ವಿರೋಧಿಸಿ ಅವರ ಹತ್ತಿರವೇ ಇದ್ದು ವ್ಯವಹಾರಕ್ಕೆ ಮಾತ್ರ ಬಳಸಿದರೆ ಋಣ ತೀರಿಸಲು  ತಿರುಗಿ ಬರಲೇಬೇಕು. ಇಲ್ಲಿ ಪ್ರತಿಯೊಬ್ಬರೂ ಒಂದು ಶಕ್ತಿಯ ಅಧೀನದಲ್ಲಿರುವಾಗ  ಆ ಶಕ್ತಿಯನ್ನು ಬಳಸಿಕೊಂಡು  ಅಧರ್ಮಕ್ಕೆ ಸಹಕರಿಸಿದರೆ  ಇದರ ಫಲ ಅನುಭವಿಸುವಾಗ  ಯಾರೂ ಇರೋದಿಲ್ಲ.ಆತ್ಮಸಾಕ್ಷಿಯಂತೆ
ನಡೆದವರಿಗಷ್ಟೇ ಇಲ್ಲಿ ಸ್ವತಂತ್ರ ಜ್ಞಾನ,ಧರ್ಮ, ಸತ್ಯ,ನ್ಯಾಯ ನೀತಿ  ಅರ್ಥ ವಾಗುತ್ತದೆ. ಹೀಗಾಗಿ ಹಿಂದೂಸ್ತಾನ್ ಒಳಗೆ
ಇದ್ದು ನಾನು ಬೇರೆ ಹಿಂದೂ ಬೇರೆ ಎನ್ನುವ  ಅಂತರದಿಂದ ಹಿಂದುಳಿಯುವುದು ಯಾರು? ಜೀವವಿರುವಾಗಲೇ ಒಂದೇ
ಎನ್ನುವ ತತ್ವದರ್ಶನ ಮಾಡಿಕೊಳ್ಳಲು  ಮಹಾತ್ಮರಿಗೆ ಸಾಧ್ಯ.
ಎಂದರೆ ಮಾನವ‌ ಮಹಾತ್ಮನಾದಾಗಲೇ ಅಂತರದಿಂದ ಬಿಡುಗಡೆ ಸಾಧ್ಯ. ರಾಜಕೀಯದಿಂದ ದೂರನಿಂತು ದೇಶ ನೋಡಿದಾಗಲೇ ದೇಶದ  ಒಳಗೆ ನಡೆಯುತ್ತಿರುವ ಎಲ್ಲಾ ಅಂತರಕ್ಕೆ ಕಾರಣವೇ ಅಜ್ಞಾನದ ಶಿಕ್ಷಣ. ಅಜ್ಞಾನಕ್ಕೆ ಕಾರಣವೆ   ಅತಿಯಾದ ಸ್ವಾರ್ಥ, ಅಹಂಕಾರದ  ವ್ಯವಹಾರ ಜ್ಞಾನ.  ವ್ಯವಹಾರದಿಂದ ಹಣದ ಲಾಭ ನಷ್ಟವಾದ ಹಾಗೆ
ಧಾರ್ಮಿಕ  ಕ್ಷೇತ್ರಗಳಲ್ಲಿ ನಡೆಯುತ್ತಿರುವ ದೇವರ ಮೇಲು ಕೀಳುಗಳಿಂದ ಇನ್ನಷ್ಟು ಅಸುರರು ಬೆಳೆದರೆ  ಧರ್ಮ ರಕ್ಷಣೆ
ಸಾಧ್ಯವೆ?  ಪ್ರಜಾಧರ್ಮ ವೇ ಕುಸಿದಿರುವಾಗ ಪ್ರಜಾಪ್ರಭುತ್ವ
ಬೆಳೆಯಲಾಗುವುದೆ? ಒಟ್ಟಾರೆ ಕಟ್ಟುವುದು ಕಷ್ಟ.
ಮೆಟ್ಟುವುದು ಸುಲಭ.ಸುಲಭವಾದ ಕಾರ್ಯಕ್ಕೆ ಎಲ್ಲರ ಸಹಕಾರ ಸುಲಭವಾಗಿ ಸಿಗುತ್ತದೆ. ಆದರೆ‌ ಕಟ್ಟುವ ಕೆಲಸಕ್ಕೆ
ಸಿಗದಿರೋದೆ  ಅಧರ್ಮ ಕ್ಕೆ ದಾರಿ ಮಾಡಿಕೊಡುತ್ತಿದೆ. 
ಕೋಟ್ಯಂತರ ಹಣ ಸುರಿದು  ದೊಡ್ಡ ಬಂಗಲೆಯನ್ನು  ಸಾಲ ಮಾಡಿ ಕಟ್ಟುವುದು ಸುಲಭ ಆದರೆ ಎಲ್ಲಿ ಹೇಗೆ ಯಾರ ಜಾಗದಲ್ಲಿ ,ಯಾವ ಮಾರ್ಗದಲ್ಲಿ ,ಯಾರಿಗಾಗಿ,ಯಾಕೆ ಕಟ್ಟಬೇಕೆಂಬ ಅರಿವಿಲ್ಲದೆ  ಕಟ್ಟಿ ಕೆಟ್ಟರೆ  ಅನುಭವಿಸು ಕಷ್ಟ ನಷ್ಟಕ್ಕೆ ಸರ್ಕಾರ ಜವಾಬ್ದಾರಿ ಎನ್ನುವುದೇ ಅಜ್ಞಾನ,ಅಧರ್ಮ.

ಉದಾಹರಣೆಗೆ ಸರ್ಕಾರದ ಸಾಲ,ಸೌಲಭ್ಯಗಳನ್ನು ಜನರು ಸುಲಭವಾಗಿ ಪಡೆದರೂ ಅದರ ಹಿಂದಿನ  ಸಾಲದ ಭಾರವನ್ನು ಜೀವ ಹೋರಲಾಗದಿದ್ದಾಗ ಯಾರೂ ಹತ್ತಿರ ಬರೋದಿಲ್ಲ.  ಸರ್ಕಾರ  ಸಾಲ ಮನ್ನಾ ಮಾಡಬಹುದು ಆದರೆ, ಮೇಲಿರುವ ಪರಮಾತ್ಮನ ಲೆಕ್ಕದಲ್ಲಿ ಚುಕ್ತಾ ಆಗದಿದ್ದರೆ ಬಡ್ಡಿ ಚಕ್ರಬಡ್ಡಿಯ ಸಮೇತ ಮುಂದಿನ ಪೀಳಿಗೆಯವರೆಗೂ ಸಾಲ ಬೆಳೆಯುತ್ತದೆನ್ನುವ ಅಧ್ಯಾತ್ಮ ಸತ್ಯ ತಿಳಿದರೆ,  ಪಾಲಿಗೆ ಬಂದದ್ದು ಪಂಚಾಮೃತವೆಂದರಿತು  ಸಾಲದಿಂದ ದೂರವಿರಬಹುದು. ಅನಾವಶ್ಯಕ  ಸಾಲವೇ ಶೂಲವಾಗುತ್ತದೆ. ಅಗತ್ಯವಿದ್ದರೆ  ಪಡೆದು ತೀರಿಸುವತ್ತ ನಡೆಯಬೇಕು. ಮನೆಯೊಳಗೇ ಇದ್ದ ಜ್ಞಾನ ಆಸ್ತಿ ಬಿಟ್ಟು ಹೊರಗೆ ನಡೆದಷ್ಟೂ ಅಂತರ ಬೆಳೆದು ತಿರುಗಿ ಮನೆ ಸೇರಲು ಕಷ್ಟ.ಹಾಗೆ   ಭಾರತೀಯರು  ಭಾರತ ಮಾತೆಯನ್ನು ಮರೆತು  ಮುಂದೆ ನಡೆದರೆ  ಸಿಗುವ  ಸಹಕಾರ  ಅವಳ ಶಕ್ತಿಯನ್ನು ಬೆಳೆಸುವುದರಲ್ಲಿ  ಸಿಕ್ಕಿದ್ದರೆ  ಭಾರತ ವಿಶ್ವ ಗುರು ಎನ್ನುವ ಮಾತಿಗೆ ಬೆಲೆಯಿರುತ್ತಿತ್ತು. ಏನೇ  ಇದ್ದರೂ ಅಂತರವೇ ಅವಾಂತರವನ್ನು  ಹೆಚ್ಚಿಸುತ್ತದೆನ್ನುವುದು ಸತ್ಯ. ತತ್ವವೂ ಒಗ್ಗಟ್ಟನ್ನು ಎತ್ತಿ ಹಿಡಿದಿತ್ತು.ತಂತ್ರದಿಂದ ಅಂತರ ಬೆಳೆಯಿತು.
ಇದೇ ಮುಂದೆ ಮಾನವನು ಮಾನವನನ್ನು  ಯಂತ್ರದಂತೆ ಕಾಣುವಂತಾಯಿತು. ಆದರೂ  ಇದನ್ನು ತಪ್ಪಿಸಲು ತಂತ್ರದಿಂದ, ರಾಜಕೀಯದಿಂದ ಅಸಾಧ್ಯ. ತತ್ವದಿಂದ ರಾಜಯೋಗದಿಂದ ಸತ್ಯದೆಡೆಗೆ ನಡೆದರೆ ಸಾಧ್ಯ. ಯಾರಿಗೆ ಗೊತ್ತು  ಈ ಅಂತರವು ಎಷ್ಟು ಜನ್ಮಗಳಿಂದ ಬಂದಿದೆಯೋ ಎಷ್ಟು ಜನ್ಮಗಳವರೆಗೆ ಹೋಗುವುದೋ ಎಷ್ಟು ಮಾನವರ ಅಜ್ಞಾನ ಬೆಳೆಸುವುದೋ. ಮಹಾತ್ಮರ ಯೋಗಿಗಳ ದೇಶ  ಆಳಲು ಬಂದವರ ಅಂತರಜ್ಞಾನವೇ ಸ್ವತಂತ್ರ ಭಾರತವನ್ನು ಅತಂತ್ರಸ್ಥಿತಿಗೆ ತಲುಪಿಸಿದೆ ಎಂದರೂ  ಅರ್ಥ ಆಗುವುದಿಲ್ಲ.ರಾಜಕೀಯದ ದಾಳದಲ್ಲಿ ನಡೆಯುತ್ತಿರುವ ಕಾಲಾಳುಗಳಿಗೆ ಸ್ವತಂತ್ರ ಎಲ್ಲಿರುವುದು? ರಾಜ ಹೋದ ಮೇಲೆ ಹುಟ್ಟಬಹುದು. ಹಾಗಾದರೆ ಪ್ರಜಾಪ್ರಭುತ್ವದ ರಾಜರು ಯಾರು?

No comments:

Post a Comment