ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Thursday, September 1, 2022

ವಾಸ್ತವ ಜಗತ್ತಿನಲ್ಲಿ ನಾನ್ಯಾರು?

ನಾನ್ಯಾರು? ಈ ಪ್ರಶ್ನೆಗೆ ಉತ್ತರ  ಸಿಗೋದು ಬಹಳ ಕಷ್ಟ. ಹಾಗಂತ ಉತ್ತರವೇ ಸಿಗೋದಿಲ್ಲವೆಂದು ಯಾರೂ ಮಹಾತ್ಮರು ಹೇಳಿಲ್ಲ. ಸಂನ್ಯಾಸಿಯಾಗಿದ್ದು ತಿಳಿಯುವುದಕ್ಕೆ ಸ್ವತಂತ್ರ ವಾಗಿರಬೇಕು ಎನ್ನುವುದಾದರೆ ಸಂಸಾರದೊಳಗಿದ್ದವರಿಗೆ ಸಾಧ್ಯವಿಲ್ಲವೆ? ಎಷ್ಟೋ ಮಹರ್ಷಿಗಳು ಸಂಸಾರದೊಳಗಿದ್ದೇ ಪ್ರಶ್ನೆಗೆ ಉತ್ತರ ತಿಳಿದು ದ್ವೈತ ಸಿದ್ದಾಂತ ವನ್ನು ಮಂಡಿಸಿದ್ದಾರೆ. ಅದೇ ಸಂನ್ಯಾಸಿಗಳಾದವರು ಅದ್ವೈತ ಸಿದ್ದಾಂತದಿಂದ ಉತ್ತರ ಕಂಡುಕೊಂಡವರಿದ್ದಾರೆ. ಇಲ್ಲಿ ಸಿದ್ದಾಂತಗಳ ಉದ್ದೇಶ ಒಂದೇ ಆದರೂ ಅವರ ಅನುಭವದಲ್ಲಿ ವ್ಯತ್ಯಾಸವಿದೆ.ಇದನ್ನು ತಿಳಿಸುವಾಗಲೂ ವ್ಯತ್ಯಾಸವಾಗುತ್ತದೆ ಪ್ರಚಾರ ಮಾಡುವವರಂತೂ ಮನಸ್ಸಿಗೆ ಬಂದಂತೆ ಹೊರ ಹಾಕಿ ಹೋಗಿರುವುದು ಇಂದು ನಾನ್ಯಾರು ಪ್ರಶ್ನೆಗೆ ಉತ್ತರ ಹೊರಗೆ ಹುಡುಕಿಕೊಂಡು  ಅದ್ವೈತ ಸಂಶೋಧನಾ ಕೇಂದ್ರ ದ್ವೈತ ಸಂಶೋಧನಾ ಕೇಂದ್ರಗಳಾಗಿ ವಿಶಿಷ್ಟಾದ್ವೈತ ವೂ ಇದೆ. ಆದರೆ ಪ್ರಶ್ನೆಗೆ ಉತ್ತರ ಅವರವರ ಆತ್ಮಜ್ಞಾನದಿಂದ ಆತ್ಮಾವಲೋಕನದಿಂದ ಸ್ವತಂತ್ರ ಜೀವನದಿಂದ ತಿಳಿಯಬೇಕಾದ್ದನ್ನು ಯಾರೋ ತಿಳಿಸಿದ್ದಾರೆ ಅವರು ಯಾರೆಂದು ಎಂದರೆ ನಾನ್ಯಾರು ಎಂಬುದಕ್ಕೆ ಉತ್ತರ ಸಿಗುವುದೆ? ಮಹಾತ್ಮ ನಾಗೋ ಮೊದಲು ಮಾನವನಾಗಿದ್ದವರು ಅವರವರ ಜೀವನದಲ್ಲಿ ಅಳವಡಿಸಿಕೊಂಡ ತತ್ವಜ್ಞಾನದಿಂದ  ಅಧ್ಯಾತ್ಮ ಸಾಧನೆ ಮಾಡಿಕೊಂಡು ಸಮಾಜದ‌ಮಧ್ಯೆ ಇದ್ದೂ ಇಲ್ಲದವರಂತಿದ್ದು ಅವರ ಅನುಭವದಿಂದ ಸಮಾಜದ ಅಂಕಿಡೊಂಕುಗಳನ್ನು ಸಾಹಿತ್ಯದ ಮೂಲಕ ನಡೆ ನುಡಿ ಯ ಮೂಲಕ ಜನರನ್ನು ಎಚ್ಚರಿಸುವ ಕೆಲಸ ಮಾಡಿದ್ದರು.ಅಂದು ಯಾವುದೇ ಹಣ,ಅಧಿಕಾರ,ಸ್ಥಾನಮಾನಕ್ಕೆ  ಅವಕಾಶವಿರದೆ ಜನರಿಗೆ ಶಿಕ್ಷಣದಲ್ಲಿಯೇ  ಮೂಲಭೂತ ಅವಶ್ಯಕವಾದ ಜ್ಞಾನವನ್ನು ಕೊಡುತ್ತಾ ಸ್ವತಂತ್ರ ವಾಗಿ ಜೀವನ ನಡೆಸಲು ಸಹಕರಿಸಿದ್ದ ಮಹಾತ್ಮರುಗಳು  ಇಂದಿಗೂ ಪೂಜನೀಯ ಸ್ಥಾನದಲ್ಲಿದ್ದಾರೆ ದೇವರನ್ನು ಸಾಕಾರವಾಗಿ ಪೂಜಿಸುತ್ತಾ ನಿರಾಕಾರದೆಡೆಗೆ ಸಾಗುವುದೇ ಅಧ್ಯಾತ್ಮ ಪ್ರಗತಿ. ಆದರೆ ವಿಪರ್ಯಾಸವೆಂದರೆ  ಇಂದು ಯಾರು ಸಾಕಾರವನ್ನು,ಸಹಕಾರವನ್ನು ಬೆಳೆಸಿಕೊಂಡು ಜನರನ್ನು  ಆಕರ್ಷಿಸುವತ್ತ ನಡೆದಿರುವರೋ ಅವರಿಗೆ ಜನರೆ ದೇವರು. ಕಾರಣ ಜನರೊಳಗಿರುವ ದೈವತ್ವದಿಂದ ಅವರ ಸಾಧನೆ ಸಾಧ್ಯವಾಗಿದೆ.ಹಾಗಾದರೆ ಜನರಿಗೆ ಏನು ಸಿಕ್ಕಿದೆ? ಇದು  ದೊಡ್ಡದಾಗಿ ಬೆಳೆದಿರುವ ಪ್ರತಿಷ್ಟಿತರೆ  ಪ್ರಶ್ನೆ ಮಾಡಿಕೊಂಡರೆ ಅವರಿಗೆ ನಾನ್ಯಾರು ಎಂಬ ಪ್ರಶ್ನೆಗೆ ಉತ್ತರ ಒಳಗಿನಿಂದ ಸಿಗುವುದು ಕಷ್ಟ.ಕಾರಣ ಜನ ಎಲ್ಲರೂ ಅವರನ್ನು ದೇವರೆಂದು ಕರೆದರೂ ಒಳಗೇ ಇರುವ ಆತ್ಮಾವಲೋಕನ ಮಾಡಿಕೊಳ್ಳಲು ಸೋತಿದ್ದರೆ ದೇವರು ಆಗಲು ಕಷ್ಟ. ನಾನೆಂಬುದಿಲ್ಲ ಎನ್ನುವ ಅದ್ವೈತ ನಾನಿದ್ದೇನೆ ಎನ್ನುವ ದ್ವೈತ ದ  ಜೊತೆಗೆ ನಾವೆಲ್ಲರೂ ಒಂದೇ ದೇವರೊಳಗಿರುವ ದೇವಾಂಶ ಸಂಭೂತರೆನ್ನುವ ಮೂರು ತತ್ವದ ಉದ್ದೇಶ ಆ ಒಂದು ದೇವರೆಡೆಗೆ ಹೋಗಲು ಪ್ರಯತ್ನಪಟ್ಟು  ಒಂದೇ ಭೂಮಿಯ ಮೇಲಿರುವಮನುಕುಲ ತನ್ನ ಜನ್ಮಕ್ಕೆ ಕಾರಣ ತಿಳಿದು ಸಮಾಜ,ಸಂಸಾರವನ್ನು ಸನ್ಮಾರ್ಗದಲ್ಲಿ  ನಡೆಸೋದಾಗಿತ್ತು. ಕೆಲವರು ಈ ಕೆಲಸ ಮಾಡುತ್ತಿದ್ದರೂ ಹಲವರಿಗೆ ಇದರ ಬಗ್ಗೆ ಜ್ಞಾನವೇ ಇಲ್ಲ. ಹೀಗಾಗಿ ಹಲವರನ್ನು ಆಳೋದಕ್ಕೆ ಕೆಲವರು   ಹೋಗಿ ಹಿಂದುಳಿದಿರೋದು. ಹಿಂದು ಧರ್ಮ ಹಿಂದುಳಿಯಲು ಕಾರಣವೇ ರಾಜಕೀಯ.ಇದು ಧಾರ್ಮಿಕ ಕ್ಷೇತ್ರದಲ್ಲಿ ಹೆಚ್ಚಿ ಜನರ ಸಾಮಾನ್ಯಜ್ಞಾನವೇ ಹಿಂದುಳಿದಾಗಲೇ ಪರಕೀಯರ ವಶದಲ್ಲಿ  ದೇಶ  ಸಿಲುಕೋದು. ಭಾರತವನ್ನು ಆಳಲು ಕಷ್ಟ.ಜ್ಞಾನಿಗಳಿಂದ ಮುಂದುವರಿದ ದೇಶವನ್ನು ಅಜ್ಞಾನದ ಶಿಕ್ಷಣದಿಂದ ಹಿಂದುಳಿಸಿ  ಧರ್ಮ ಹಾಳಾಗಿದೆ,ಸಂಸ್ಕೃತಿ ಕೆಡುತ್ತಿದೆ, ಭಾಷೆ ಹಿಂದುಳಿಯುತ್ತಿದೆ ಎಂದಾಗ ಇದಕ್ಕೆ ಪರಿಹಾರ  ಜನರೆ ಒಳಗೆ ಹುಡುಕಿಕೊಂಡು ನಾನ್ಯಾರು ? ಪ್ರಶ್ನೆ ಹಾಕಿಕೊಂಡರೆ' ಭಾರತೀಯ' ಎನ್ನುವ ಉತ್ತರ ಹೊರಗೆ ಕಂಡರೂ ನಮ್ಮೊಳಗೇ ಅಡಗಿರುವ ವಿದೇಶಿ  ಶಿಕ್ಷಣ,ಸಂಸ್ಕೃತಿ, ಭಾಷೆ,ವ್ಯವಹಾರ,ಬಂಡವಾಳ,ಸಾಲದಿಂದ ದೇಶವೇ ತನ್ನ ಮೂಲವನ್ನು  ಬೆಳೆಸಲಾಗದಿರೋದು ನಮ್ಮ ಸಹಕಾರದಿಂದ. ಹೀಗಾಗಿ ನಮ್ಮ ಸಹಕಾರ ವೇ ಸರಿಯಿಲ್ಲ ಎನ್ನುವ ಸತ್ಯವನ್ನು ನಾವೇ ಸರಿಯಾಗಿ ಅರ್ಥ ಮಾಡಿಕೊಳ್ಳಲು  ಸೋತಿರುವಾಗ ಹಣದಿಂದ, ಅಧಿಕಾರದಿಂದ  ಜನರನ್ನು ಆಳಲು ಹೋಗುವುದೇ ಅಧರ್ಮ.  ಹೊರಗಿನಿಂದ ಆಚರಣೆಗಳೇನೋ ನಡೆಯುತ್ತದೆ ಆದರೆ ನಮ್ಮ ಕರ್ಮವೇ ಅಥವಾ ಕೆಲಸವೇ   ಅಧರ್ಮದ  ಸಹಕಾರದಲ್ಲಿದ್ದರೆ ,ಭ್ರಷ್ಟರ ವಶದಲ್ಲಿಯೇ ನಾವಿದ್ದರೆ ನಮ್ಮ ಧಾರ್ಮಿಕ ಕಾರ್ಯದ ಫಲವೂ ಅವರೆ ಅನುಭವಿಸೋದು.ಅಂದರೆ ಭ್ರಷ್ಟಾಚಾರವನ್ನು ತಡೆಯಲು ಭ್ರಷ್ಟರಿಗೆ ಅಸಾಧ್ಯ. ದಾಸಶರಣರು ತಿಳಿಸಿರುವ  ಹಾಗೆಯೇ ಯಾರು ತತ್ವವನ್ನು ಉಪದೇಶ ಮಾಡುತ್ತಾ ಕೇವಲ ರಾಜಕೀಯ ನಡೆಸುವರೋ ಅವರಿಗೆ ರಾಜಯೋಗದ ಅರ್ಥ ಆಗೋದಿಲ್ಲ.ಸ್ವತಂತ್ರ ಭಾರತದಲ್ಲಿ ಸಂನ್ಯಾಸಿಗಳಿಗೆ ಸ್ವತಂತ್ರ ಇಲ್ಲ. ಹಿಂದಿನ ಮಹಾತ್ಮರುಗಳು ರಾಜಕೀಯದಿಂದ ದೂರ ಇದ್ದರೂ ಯಾವಾಗ ರಾಜ್ಯಕ್ಕೆ ಶತ್ರು ಭಯ ಆವರಿಸುವುದೋ ಆಗ ರಾಜನಿಗೆ ಸರಿಯಾದ ಮಾರ್ಗದರ್ಶನ ಮಾಡಿ  ಧರ್ಮ ರಕ್ಷಣೆಗೆ ಮುಂದಾಗುತ್ತಿದ್ದರು. ಪ್ರಜಾಪ್ರಭುತ್ವದ ರಾಜಕಾರಣಿಗಳಿಗೆ ಧಾರ್ಮಿಕ ಶಿಕ್ಷಣದ ಕೊರತೆಯಿದೆ. ದೇಶದ ಸಾಲವನ್ನು ವಿದೇಶದಿಂದ ಸಾಲ ಮಾಡಿ ತೀರಿಸಬಹುದೆನ್ನುವ ಅಜ್ಞಾನದಿಂದ ಇಡೀ ದೇಶವನ್ನು ವಿದೇಶಿಗಳ ವ್ಯವಹಾರಕ್ಕೆ  ಕೈ ಜೋಡಿಸಿ ಜನರನ್ನು ಆಳಲು ಹೊರಟಿರುವುದು ಅಧರ್ಮ.
ಇದಕ್ಕೆ ಸಹಕರಿಸಿದ ದೇಶದ ಜ್ಞಾನಿಗಳು ಆತ್ಮಾವಲೋಕನ ಮಾಡಿಕೊಳ್ಳಲು ಕಷ್ಟವಾಗುತ್ತಿದೆ.ಕಾರಣ ಧರ್ಮ ಬೇರೆ ರಾಜಕೀಯ ಬೇರೆ ಎಂದು ಮುಂದೆ ಹೋದವರಿಗೆ ಹಿಂದಿರುಗಿ ಬರಲು ಕಷ್ಟ. ಹಿಂದಿರುವವರನ್ನು ತಡೆಯುವುದೂ ಕಷ್ಟ. ಮಕ್ಕಳು ಮಹಿಳೆಯರ ಜ್ಞಾನಶಕ್ತಿ ಭೌತಿಕದಲ್ಲಿ ಬೆಳೆದರೂ ಧಾರ್ಮಿಕ ಕ್ಷೇತ್ರದಲ್ಲಿ ಅಸಮಾನತೆಯ ಕಿಡಿಯಿಂದ ಅಗ್ನಿ ರೂಪ ತಾಳಿ ಹೊರಬಂದ ಅನೇಕ ಸ್ತ್ರೀ ಶಕ್ತಿಯನ್ನು ತಿರುಗಿ ಯಥಾಸ್ಥಿತಿಗೆ ತರುವುದಕ್ಕೆ ಆಗದು. ಒಲಿದರೆ ನಾರಿ ಮುನಿದರೆ ಮಾರಿ. ಮಾರಿಯ ದರ್ಶನವಾಗುತ್ತಿದೆ.ಹೋದ ಜೀವಕ್ಕೆ ಸರ್ಕಾರ ಕಾರಣವಾಗುತ್ತಿದೆ.ಸರ್ಕಾರದಿಂದ ಪರಿಹಾರ ಹಣ ಕೊಟ್ಟರೂ ಜ್ಞಾನವಿಲ್ಲದೆ ಹಣವನ್ನು  ದುರ್ಭಳಕೆ ಮಾಡಿಕೊಂಡು ಸಾಲದ ಹೊರೆ ತಾಳಲಾರದೆ ಜೀವ ಹೋದರೆ ಆತ್ಮಹತ್ಯೆ. ಆತ್ಮಹತ್ಯೆ ಗೂ ಪರಿಹಾರ ಧನ? ಇನ್ನೊಂದಷ್ಟು ಮಂದಿಗೆ  ಹೇಗೋ ಸತ್ತರೆ ಹಣ ಸಿಗುತ್ತದೆ ಇದ್ದು ಕಷ್ಡಪಡೋ ಬದಲು ಸಾಯೋದೆ ಉತ್ತಮ ಎನ್ನುವ ಭ್ರಮೆಯಲ್ಲಿ ಸಾಕಷ್ಟು ಜೀವ ಅತಂತ್ರಸ್ಥಿತಿಗೆ ತಲುಪುತ್ತಿದೆ.
ಆತ್ಮಹತ್ಯೆ ಮಹಾ ಪಾಪ ಎನ್ನುತ್ತಾರೆ. ಇಲ್ಲಿ ಈಸಬೇಕು ಇದ್ದು ಜೈಸಬೇಕು. ಹಿಂದಿನ ಮಹಾತ್ಮರುಗಳು ಹಣದಲ್ಲಿ ಬಡವರಾಗಿ ಗುಣಜ್ಞಾನದಿಂದ ಶ್ರೀಮಂತರಾಗಿದ್ದವರು. ಅವರ ಹೆಸರಲ್ಲಿ ನಾವು ಹಣದ ಶ್ರೀಮಂತ ರಾದರೆ ಜನರು ನಮ್ಮ ಹಿಂದೆ ನಿಂತರೆ  ನಮಗೆ ದೇವರಾಗಲಿ ಮಹಾತ್ಮರಾಗಲಿ ಜ್ಞಾನವಾಗಲಿ ನಾನ್ಯಾರು ಎಂಬ ಸತ್ಯವಾಗಲಿ ತಿಳಿಯೋದೇ ಇಲ್ಲವಲ್ಲ.ಜನ್ಮ ಜನ್ಮಕ್ಕೆ ಇದು ಬೆಳೆಯುತ್ತಾ ಅಜ್ಞಾನದಿಂದ ಹೊರಬರಲಾಗದ ಜೀವಕ್ಕೆ ಜ್ಞಾನದ ಶಿಕ್ಷಣ ನೀಡೋದಕ್ಕೆ ಯಾವ ಸರ್ಕಾರವೂ ಮುಂದೆ ಬರದೆ  ಅಧಿಕಾರಕ್ಕಾಗಿ  ಪೈಪೋಟಿ ನಡೆಸುತ್ತಾ ಮಧ್ಯವರ್ತಿಗಳ  ಹಿಂದೆ ನಿಂತು  ವ್ಯವಹಾರ ನಡೆಸಿದರೆ ಹಣ,ಹೆಸರು,ಸ್ಥಾನಮಾನವನ್ನು ಪಡೆದರೂ ಮುಂದಿನ ಪೀಳಿಗೆಗೆ  ಇದು  ಯಾವ ತತ್ವವನ್ನು ಅರ್ಥ ಮಾಡಿಸಬಹುದು? ಸತ್ಯ ,ಇಂದಿನ ತಾಂತ್ರಿಕ ಯುಗದಲ್ಲಿ ತಂತ್ರಜ್ಞಾನದಿಂದ ಸಾಕಷ್ಟು ಭೌತಿಕದಲ್ಲಿ ಪ್ರಗತಿಕಂಡರೂ ಅದೇ ತಂತ್ರ ತತ್ವವನ್ನು  ಅರ್ಥ ಮಾಡಿಸದಿದ್ದರೆ ವ್ಯರ್ಥ.
ನನಗೆ ಅರಿವುಬಂದ 16 ವರ್ಷಗಳಲ್ಲಿ ಕಂಡಂತಹ  ಸತ್ಯವನ್ನು ಲೇಖನದಲ್ಲಿ ಅಪರೋಕ್ಷವಾಗಿ ತಿಳಿಸುವ ಪ್ರಯತ್ನಮಾಡಿದ್ದೇನೆ.ಇಲ್ಲಿ ಧಾರ್ಮಿಕ ಗುರುಗಳನ್ನಾಗಲಿ ಮೇಲಿರುವ ರಾಜಕಾರಣಿಗಳನ್ನಾಗಲಿ ಸಾಮಾನ್ಯಪ್ರಜೆಯು ನೇರವಾಗಿ ಬೇಟಿಮಾಡಲು ಮಧ್ಯವರ್ತಿಗಳ ಸಹಾಯ,ಸಹಕಾರದ ಅಗತ್ಯವಿದೆ. ಆದರೆ ಮಧ್ಯವರ್ತಿಗಳ ‌ಸ್ವಾರ್ಥ, ಅಹಂಕಾರದಿಂದ  ಸತ್ಯ ಮುಂದೆ ಹೋಗದಿದ್ದರೆ ತಪ್ಪು ಯಾರದ್ದು? ಪ್ರಜಾಪ್ರಭುತ್ವದ ಪ್ರಜೆಯಾಗಿ ದೇಶದ ಪರ ನಿಂತಾಗ ಅಧರ್ಮ, ಅನ್ಯಾಯ, ಅಸತ್ಯ,ಭ್ರಷ್ಟಾಚಾರ ದ  ಒಳಗೇ ಎಲ್ಲಾ ಇರುವುದನ್ನು ತಿಳಿಸುವುದಕ್ಕೆ ಅವಕಾಶ ನೀಡದಿದ್ದರೆ  ತತ್ವಜ್ಞಾನ ಪ್ರಚಾರದಿಂದ ಉಪಯೋಗವೇನು,,  ಕಾಯಾವಾಚಾಮನಸ್ಸಿನಿಂದ ತ್ರಿಕರಣ ಶುದ್ದಿಯಾದರೆ  ಮಾತ್ರ ತತ್ವದ ಒಳಗಿರುವ ಪದಾರ್ಥ ಸಿಗುತ್ತದೆ. ಇದು ಎಲ್ಲರಿಗೂ ಒಂದೇ ರೀತಿಯಲ್ಲಿ ಅನುಭವಕ್ಕೆ ಬರದಿದ್ದರೂ ಸತ್ಯ ಸತ್ವ,ತತ್ವ ಒಂದೆ.ಭಾರತದ ಒಳಗೆ ಇದ್ದು ಭಾರತವನ್ನು ಅರ್ಥ ಮಾಡಿಕೊಳ್ಳಲು ಸೋತರೆ ಭಾರತೀಯರಾಗೋದಿಲ್ಲ.ಹಾಗೆಯೇ ಕಾರಣಾಂತರದಿಂದ ವಿದೇಶಕ್ಕೆ ಹೋಗಿ ಭಾರತದ ಪರ ನಿಂತರೂ  ಭಾರತೀಯ ಎನ್ನಲಾಗದು. ಮನಸ್ಸು ಮತ್ತು ಆತ್ಮ ಒಂದಾದರೆ ಯೋಗ.
ಭಾರತಮಾತೆಯ ಆತ್ಮ ಜ್ಞಾನವೇ ಭಾರತೀಯರ ಒಳಗೆ ಹೊರಗೆ  ಬೆಳೆಗುತ್ತಿದ್ದರೆ ಆತ್ಮನಿರ್ಭರ  ಭಾರತ.ಭಾರತೀಯರೆಲ್ಲರೂ ಅವರವರ ಮೂಲ ಶಿಕ್ಷಣದ ಗುರಿಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗೋದು ಭಾರತೀಯ ಶಿಕ್ಷಣದಿಂದ. ನಾನು ಪೇಪರ್ ನಡೆಸುತ್ತಿದ್ದ ಸಮಯದಲ್ಲಿ ತಿಳಿದ. ಸತ್ಯವೇನೆಂದರೆ  ನಿಮಗ್ಯಾಕೆ ಬೇಕು ಈ ಕಷ್ಟ.ನಿಮ್ಮ ಪಾಡಿಗೆ ನೀವಿರಬಹುದಲ್ಲವೆ? ಮಾಧ್ಯಮಗಳೂ  ಅಂದಿನ ಪರಿಸ್ಥಿತಿಯಲ್ಲಿ ಯಾರ ವಿರುದ್ದವಾಗಿ ಸುದ್ದಿ ತರುವರೋ ಅದನ್ನು ಜನಸಾಮಾನ್ಯರೆದುರು ತರುವ ಕೆಲಸ ಮಾಡುತ್ತಿದ್ದ ಕಾರಣ ಲೇಖನಗಳಲ್ಲಿ ಅಡಗಿರುವ ಹಲವಾರು ನಮ್ಮ ಅನುಭವಕ್ಕೆ ಸಿಗುವ ,ಸಾಮಾನ್ಯಜನರಿಗೆ ಅರ್ಥ ವಾಗುವ ವಾಸ್ತವ ಸತ್ಯವನ್ನು ಸರಳ ಭಾಷೆಯಲ್ಲಿ ಹೊರಹಾಕುವ ಪ್ರಯತ್ನವಾಗಿತ್ತು.ಈಗಲೂ ಸಾಮಾಜಿಕ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ತರಲು ರಾಜಕೀಯದಿಂದ ಕಷ್ಟ.ಆದರೆ ರಾಜಯೋಗದಿಂದ ಸಾಧ್ಯವಿದೆ. ಇದನ್ನು ಲೇಖನಗಳಲ್ಲಿ ಸಾಧ್ಯವಾದವರು ತಿಳಿಯಬಹುದು. ನಾವೆಲ್ಲರೂ ಮಾನವರಷ್ಟೆ.ಇಲ್ಲಿ ಯಾರೂ ಸ್ವತಂತ್ರ ರಾಗಿಲ್ಲ.ಮಧ್ಯವರ್ತಿಗಳು ಅವರವರಿಗೆ ಕಂಡಂತೆ ಜನರಿಗೆ ತಿಳಿಸುವ ಕೆಲಸದಲ್ಲಿ ಮಗ್ನರಾಗಿದ್ದರೆ ,ಎಲ್ಲಾ ತಿಳಿದವರು ಯಾರಿಗೂ ಹೇಳೋ ಅಗತ್ಯವಿಲ್ಲವೆಂದು  ಕೈ ಚೆಲ್ಲಿದ್ದಾರೆ.
ಇದನ್ನು ನನಗೆ  ಶೃಂಗೇರಿಯ ಜಗದ್ಗುರುಗಳಾಗಿರುವ  ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಯವರು  ಮೊದಲು ನನ್ನ ಲೇಖನಗಳನ್ನು ಮಠಕ್ಕೆ ತಲುಪಿಸುವ ಸಂದರ್ಭದಲ್ಲಿಯೇ ತಿಳಿಸಿದ್ದರು. ಆದರೆ  ವಾಸ್ತವತೆಯನ್ನು  ಎತ್ತಿ ಹಿಡಿಯುವ ಸಾಮಾನ್ಯ  ಜ್ಞಾನವನ್ನು ಹೆಚ್ಚಿಸುವ ವಿಚಾರಗಳು 
ಒಳಗಿನಿಂದ ಹೆಚ್ಚು ಹೆಚ್ಚು ಬರುತ್ತಿರುವಾಗ  ಅದನ್ನು ಹೊರಹಾಕಲು ಲೇಖನವನ್ನು ಬಳಸಿ ಇಳಿಸುವ ಕೆಲಸವಾಯಿತು.  ಇತ್ತೀಚಿನ ಪುಸ್ತಕ "ಅಧ್ಯಾತ್ಮ ಮತ್ತು ಆತ್ಮನಿರ್ಭರ ಭಾರತ "  ನೇರವಾಗಿ ಶ್ರೀ ಶ್ರೀ ವಿಧುಶೇಖರ ಭಾರತೀ ತೀರ್ಥರವರಿಗೆ ತಲುಪಿಸಿ ನನ್ನ ಧರ್ಮ ಸಂಕಟಕ್ಕೆ ಪರಿಹಾರ ಕೇಳಿಕೊಂಡಿದ್ದೆ  ಯಾವ ಉತ್ತರವೂ ಸಿಗಲಿಲ್ಲ.ಈ   ಕೆಲಸಕ್ಕೆ ಸ್ವಲ್ಪ ಪ್ರಮಾಣದಲ್ಲಿ ತಂತ್ರಜ್ಞಾನವನ್ನು ಬಳಸಿ ನಾನಿರುವಾಗಲೇ  ಎಷ್ಟು ಸಾಧ್ಯವೋ  ತಲುಪಿಸುವ ಪ್ರಯತ್ನವಾದರೂ  ಭೌತಿಕದಲ್ಲಿರುವ ರಾಜಕೀಯದಲ್ಲಿ ಮುಳುಗಿರುವ  ಜನರ ಮನಸ್ಸಿಗೆ ಇದು ಅರ್ಥವಾಗೋದು ಕಷ್ಟ. ಆದರೂ ಹಿಂದಿರುಗಿ ಬರಲಾಗದು. ಏನೂ ತಿಳಿಯದವರನ್ನು  ಏನೋ ಮೋಸ ವಾಗಿದೆ ಎಂದು ಬಡಿದೆಬ್ಬಿಸಿ ಅವರ ಮೂಲ ಧರ್ಮ ಕರ್ಮಕ್ಕೆ ದಕ್ಕೆಯಾಗಿ  ಸಮಸ್ಯೆ ಮಿತಿಮೀರಿ ಬೆಳೆಯುತ್ತಿದೆ. ಇವೆಲ್ಲವೂ ನನ್ನಿಂದಲೇ ಬೆಳೆದಾಗ ಇದರ ಫಲವೂ ನಾನೇ ತಿನ್ನಬೇಕು ಎನ್ನುವ ಜ್ಞಾನವಿದ್ದರೆ  ಪರಿಹಾರ ಒಳಗೇ  ಕಾಣಬಹುದಿತ್ತು. ಸುರಕ್ಷಿತವಾಗಿದ್ದ ಮಹಿಳೆ, ಮಕ್ಕಳನ್ನೂ ಹೊರಗೆಳೆದು
 ರಾಜಕೀಯ ಬೆಳೆದಿದೆ.ಹಾಗಾದರೆ ನಾನ್ಯಾರು? ನಾನೆಂಬುದಿಲ್ಲವಾದರೆ ಇದಕ್ಕೆ ಕಾರಣರು ಯಾರು? ಈ ಪ್ರಶ್ನೆ  ನನಗೇ ಸಾಧ್ಯವಿಲ್ಲ ಎಂದಾಗ ಮಕ್ಕಳಿಗಾಗಲಿ ಶಿಷ್ಯರಿಗಾಗಲಿ  ಕಷ್ಟ ಕಷ್ಟ. ನನ್ನ ಸ್ವತಂತ್ರ ಜ್ಞಾನ ಒಳಗಿತ್ತು. ಹೊರಗಿನವರು ಗುರುತಿಸದೆ ನೀಡಿದ  ಹೊರಗಿನ ವಿಷಯ ಜ್ಞಾನವೇ  ವಿಷವಾಗಿದ್ದರೆ ಅಮೃತದಂತಹ  ಜ್ಞಾನವನ್ನು  ಮುಂದೆ ಬೆಳೆಸುವುದಕ್ಕೆ  ನನ್ನ ಸಹಕಾರ  ಅಗತ್ಯವಿದೆ.ನಾನಿದ್ದಾಗ ದೇವರು ಕಾಣೋದಿಲ್ಲ ನಾನು ಹೋದಾಗಲೇ ದೇವರಾಗೋದು. ಹಾಗೆಯೇ ಅಸುರೀ ಗುಣವೂ ನನ್ನೊಳಗೇ ಇದೆ. ಭೂಮಿಯನ್ನು ಧರ್ಮದಿಂದ ಆಳುವಾಗ  ಸಾಕಷ್ಟು ಅಸುರಿ ಶಕ್ತಿಗಳ ವಿರೋಧವಿದ್ದರೂ  ಗೆಲುವು ಮಾತ್ರ ದೈವಗುಣಕ್ಕೆ. ಎಷ್ಟೇ ದೇವರ ಹೆಸರಲ್ಲಿ ರಾಜಕೀಯ ನಡೆಸಿದರೂ ದೈವಗುಣದ ಒಗ್ಗಟ್ಟು ,ತತ್ವಜ್ಞಾನವಿಲ್ಲವಾದರೆ  ಪ್ರಯೋಜನವಿಲ್ಲ.ನಿಧಾನವಾಗಿ  ಆಮೆ ನಡಿಗೆಯಲ್ಲಿರುವ ಜ್ಞಾನಶಕ್ತಿಯನ್ನು  ಜಿಂಕೆಯಂತೆ ಹಾರುವವರಿಗೆ  ಬೆಳೆಸಲು ಕಷ್ಟ. ಇನ್ನೂ ಜಿಂಕೆಗಳನ್ನು ಬೆಳೆಸುವ ಪೋಷಕರಿಗಂತೂ ನಾವೆಲ್ಲ ಎಲ್ಲಿ ಸೋತಿರುವುದೆನ್ನುವ ಸತ್ಯದ ಅರಿವಿಲ್ಲ. ಒಟ್ಟಿನಲ್ಲಿ ಹಲ್ಲಿದ್ದವರಿಗೆ ಕಡಲೆಯಿಲ್ಲ. ಕಡಲೆಯಿದ್ದವರಿಗೆ ಹಲ್ಲಿಲ್ಲ. ಇಂತಹ ವಿಚಾರಗಳು ಒಳಗಿನಿಂದ  ತಿಳಿದು ಇಳಿಸುತ್ತಾ  16 ವರ್ಷ ವಾಯಿತು. ಮೊದಲು ಇದನ್ನು ಯಾರಿಗೆ ಹೇಗೆ ತಿಳಿಸಬೇಕೆನ್ನುವ ಅರಿವಿಲ್ಲದೆ ಎಲ್ಲರಿಗೂ ತಿಳಿಸುವ ಪ್ರಯತ್ನ ಮಾಡಿದಾಗಲೇ ಸಮಾಜದಲ್ಲಿ  ಇರುವ ಅಸಮಾನತೆಯೆಂಬ ಭೂತದ ದರ್ಶನವಾಯಿತು. ಆದರೂ ಪ್ರಯತ್ನ ಬಿಡದೆ ಪತ್ರಿಕೆ ಮೂಲಕ ಶಿಕ್ಷಣ ಕ್ಷೇತ್ರವನ್ನು ಹೊಕ್ಕಿ ನೋಡಿದಾಗಲೇ ಶಿಕ್ಷಣದೊಳಗೇ ಅಡಗಿರುವ‌ ಭ್ರಷ್ಟಾಚಾರ ಎದ್ದು ಕಂಡಿದ್ದು. ಹಾಗೆಯೇ ಇದನ್ನು ಸರಿಪಡಿಸದಿರುವ ಧಾರ್ಮಿಕ ಕ್ಷೇತ್ರದೊಳಗೆ ಸೂಕ್ಮವಾಗಿ ಗಮನಿಸಿದಾಗ ದೇಶದ ಈ ಸ್ಥಿತಿಗೆ  ತತ್ವವನ್ನು ತಂತ್ರವನ್ನಾಗಿ ಬಳಸಿ ಆಳಿದ ಸತ್ಯ ದರ್ಶ ನವಾಯಿತು. ಈವರೆಗೂ ಎಲ್ಲಾ  ಕ್ಷೇತ್ರಗಳಲ್ಲಿಯೂ  ಯಾವ ರೀತಿಯಲ್ಲಿ ತಿಳಿದೋ ತಿಳಿಯದೆಯೋ ಆವರಿಸಿರುವ ಅಧರ್ಮ, ಅನ್ಯಾಯ, ಅಸತ್ಯ,ಅಜ್ಞಾನವನ್ನು ಜನಸಾಮಾನ್ಯರವರೆಗೆ ತಲುಪಿಸುವ ಕೆಲಸವಾಗಿದೆ. ಎಲ್ಲಿಯವರೆಗೆ ಜನ ಎಚ್ಚೆತ್ತುಕೊಂಡು ತಮ್ಮ ಆಂತರಿಕ ಶಕ್ತಿಯನ್ನು ಸದ್ಬಳಕೆ ಮಾಡಿಕೊಳ್ಳುವ ಶಿಕ್ಷಣವನ್ನು ಪಡೆಯಲಾಗುವುದಿಲ್ಲವೋ,ಎಲ್ಲಿಯವರೆಗೆ ಮಧ್ಯವರ್ತಿಗಳು  ಸತ್ಯಾಸತ್ಯತೆಯನ್ನು ಧಾರ್ಮಿಕ ದೃಷ್ಟಿಯಿಂದ  ನೋಡದೆ ರಾಜಕೀಯವಾಗಿ ಪ್ರಚಾರ ಮಾಡಿ ಜನರ  ಶಾಂತಿ ಕೆಡಿಸುವರೋ ಎಲ್ಲಿಯವರೆಗೆ ಮಾನವ ತನ್ನ ಆತ್ಮರಕ್ಷಣೆಗಾಗಿ ಸತ್ಯ ಧರ್ಮದ  ಮಾರ್ಗ ಹಿಡಿದು ಸ್ವತಂತ್ರ ಜೀವನ‌ನಡೆಸುವುದಿಲ್ಲವೋ ಅಲ್ಲಿಯವರೆಗೆ ಅರ್ಧ ಸತ್ಯವೆ ಅತಂತ್ರಸ್ಥಿತಿಗೆ ಕಾರಣವಾಗಿರುತ್ತದೆ. ಪೂರ್ಣ ಸತ್ಯ ಒಂದೇ.
ದೇವನೊಬ್ಬನೆ ನಾಮ ಹಲವು ಎಂದ ಹಾಗೆ ದೇವಿ ಒಬ್ಬಳೆ ಭೂ ದೇವಿ.ಭೂಮಿ ಋಣ ತೀರಿಸಲು ಸತ್ಕರ್ಮ, ಸ್ವಧರ್ಮ ಸ್ವಾಭಿಮಾನ, ಸ್ವಾವಲಂಬನೆ, ಸ್ವತಂತ್ರ ಜ್ಞಾನವೇ ಬಂಡವಾಳ ಇದು ಹೊರಗೆ ಸಿಗೋದಿಲ್ಲ.ಒಳಗಿನಿಂದಲೇ ಬೆಳೆಸಿಕೊಂಡು ಬಾಳಲು ತತ್ವವೇ ಮೂಲ. ನಂತರ ತಂತ್ರದ ಸದ್ಬಳಕೆ ಹಾಗೆ ಮುಂದೆ ಯಂತ್ರಗಳ ಸೃಷ್ಟಿ. ಯಂತ್ರ ಮಾನವ ಸೃಷ್ಟಿ ಮಾಡಿ ಮಾನವನ ಸ್ವತಂತ್ರ ಹಾಳಾಗದಂತೆ  ಅವನೇ ಕಾಪಾಡಬೇಕು.
ಭಗವಂತನಿಗೆ ಎಲ್ಲಾ ಸಮಾನ.ಮಂತ್ರ,ತಂತ್ರ,ಯಂತ್ರಗಳು ಅವನೊಳಗಿರುವ ಶಕ್ತಿಯಾದರೂ ಮಾನವನು ಇವನ್ನು ಹೇಗೆ ಬಳಸಿದರೆ ಭೂಮಿ ಋಣ ತೀರುವುದೆನ್ನುವ  ಜ್ಞಾನವೇ ಹಿಂದಿನ‌ ಮಹರ್ಷಿಗಳನ್ನು ಸ್ವತಂತ್ರರಾಗಿಸಿತ್ತು. ಒಟ್ಟಿನಲ್ಲಿ ಇಂದಿನ‌ ಧಾರ್ಮಿಕ‌ ಮುಖಂಡರನ್ನು ಪ್ರಶ್ನೆ ಮಾಡೋವಷ್ಟು ಜ್ಞಾನ ನಮಗಿದ್ದಿದ್ದರೆ  ನಮ್ಮ ದೇಶ ಧರ್ಮದ ಹಾದಿಯಲ್ಲಿ ನಡೆಯುತ್ತಿತ್ತು. ರಾಜಕಾರಣಿಗಳಾದರೂ ಜನಸೇವಕರಾಗಿ ಜನರ ಹಣವನ್ನು ಬಳಸಿ ಜನರನ್ನು ಸಾಕೋ ಮಟ್ಟಿಗೆ ಸಾಲ ಸೌಲಭ್ಯಗಳನ್ನು ನೀಡುತ್ತಾ ಬಂದರೂ ಅವರೊಳಗೇ ಅಡಗಿದ್ದ ಅಜ್ಞಾನವನ್ನು ಉಚಿತ ಶಿಕ್ಷಣದಿಂದ ಹೊಡೆದೋಡಿಸಿ ಸ್ವತಂತ್ರ ಭಾರತದ ಮೂಲ ಧರ್ಮ ಕರ್ಮದಿಂದ  ನಡೆಯೋ ಶಿಕ್ಷಣ ಧಾರ್ಮಿಕ ವರ್ಗ ನೀಡಿದ್ದರೆ ದೇಶ ಈ ಸ್ಥಿತಿಗೆ ಬರುತ್ತಿರಲಿಲ್ಲ. ಈಗಲೂ ಸಮಯವಿದೆ ಆದರೆ ಮನಸ್ಸಿಲ್ಲದವರು ಇದ್ದಾರೆ.ಇದರಿಂದಾಗಿ ಸಮಸ್ಯೆ ಒಳಗೇ ಬೆಳೆಯುತ್ತಿದೆ.ಇದನ್ನು ಸರ್ಕಾರದ ಹಣವಾಗಲಿ ,ವಿದೇಶದ ಶಿಕ್ಷಣವಾಗಲಿ ಸರಿಪಡಿಸಿದರೂ ತಾತ್ಕಾಲಿಕ ಪರಿಹಾರವಷ್ಟೆ. ಒಟ್ಟಿನಲ್ಲಿ  ಇಲ್ಲಿ ಯಾರೂ  ಸ್ವತಂತ್ರ ವಾಗಿಲ್ಲ.ಸತ್ಯ ನಮ್ಮೊಳಗೇ ಇದೆ ಅದನ್ನು ನಾವೇ ವಿರೋಧಿಸಿದ್ದೇವೆಂದರೆ ಸತ್ಯವೇ ದೇವರಾದಾಗ ದೈವತ್ವ ಹೆಚ್ಚುವುದು. 
ಹಿಂದಿನ ಬ್ರಾಹ್ಮಣ,ಕ್ಷತ್ರಿಯ,ವೈಶ್ಯ,ಶೂದ್ರರೆನ್ನುವ ಧರ್ಮಕರ್ಮದ ಜ್ಞಾನ ಇಂದಿಲ್ಲ. ಮಿಶ್ರವರ್ಣಗಳಾಗಿ ಮಿಶ್ರಜಾತಿಗಳಾಗಿ  ಸಮ್ಮಿಶ್ರ ಸರ್ಕಾರ ನಡೆಸುವಾಗ ಇಲ್ಲಿ ಯಾರು ಮೇಲು ?ಯಾರು ಕೀಳು? ಯಾರು ಅರಸ ?ಯಾರು ಆಳು? ಆಳಾದವರೂ ಅರಸರಾಗಲು‌ ಜ್ಞಾನವೇ ಮೇಲಾಗಿರಬೇಕಷ್ಟೆ. ಅಜ್ಞಾನದಿಂದ ಆಳೋದೆ ಅಧರ್ಮ.
ಪರಮಾತ್ಮನ ಇಚ್ಚೆಯಿಲ್ಲದೆ ಹುಲ್ಲುಕಡ್ಡಿಯೂ ಅಲ್ಲಾಡದು  ಎನ್ನುವವರು  ಈ ಲೇಖನಗಳಲ್ಲಿರುವ  ವಿಚಾರವನ್ನು ಗಮನಿಸಲು ರಾಜಕೀಯವಾಗಲಿ, ಹಣವಾಗಲಿ,
ಅಧಿಕಾರವಾಗಲಿ  ಅಗತ್ಯವಿಲ್ಲ. ಹಿಂದೂ ಧರ್ಮದ ಅಳಿವು ಉಳಿವು ಹೊರಗಿನ ಸತ್ಯದಲ್ಲಿಲ್ಲ.ಒಳಗಿನ ತತ್ವದಲ್ಲಿದೆ. ತತ್ವಕ್ಕೂ ತಾರತಮ್ಯ ಬೇಕೆ?ಭೂಮಿ ಮೇಲಿದ್ದು ಸ್ತ್ರೀ ಶಕ್ತಿಯನ್ನು  ವಿರೋಧಿಸಿ  ಎಷ್ಟೇ  ಆಚರಣೆ ಮಾಡಿದರೂ ಆಂತರಿಕ ಶುದ್ದಿಯಾಗದೆ ಸ್ವಚ್ಚ ಭಾರತ ಕಷ್ಟ.
ಇದು ಮನೆ,ಮಠ,ಮಂದಿರ,ಮಾಧ್ಯಮ,ಮಹಿಳೆ,ಮಕ್ಕಳವರೆಗೆ ತಲುಪಿಸುವ  ಧರ್ಮ ಮನುಕುಲಕ್ಕೆ  ಅಗತ್ಯವಿದೆ.  ಒಬ್ಬರಿಂದ ಎಲ್ಲಾ ಸಾಧ್ಯವಿಲ್ಲ.ಪ್ರತಿಯೊಬ್ಬರಿಂದಲೂ ಸಾಧ್ಯ.ಪ್ರಜಾಪ್ರಭುತ್ವದ ಅರ್ಥ ತಿಳಿಯದೆ‌  ಆಳುವವರಿಗೆ ಪ್ರಜೆಗಳೇ ಸಹಕಾರ ನೀಡಿ ಈಗಿದು ತಿರುಗಿ ಪ್ರಜೆಗಳಿಗೇ  ಸಮಸ್ಯೆ ಹೆಚ್ಚಾಗಿದೆ. ಒಳಗಿನ ಸಮಸ್ಯೆಗೆ  ಪರಿಹಾರ ಒಳಗಿನ ಒಗ್ಗಟ್ಟಿನಿಂದ  ಬಗೆಹರಿಸೋ ಬದಲು ಇನ್ನಷ್ಟು  ಭಿನ್ನಾಭಿಪ್ರಾಯ ಸೃಷ್ಟಿಸಿ  ಹೊರಬರುವಂತೆ ಮಾಡಿದರೆ ?
ತಿಳಿದವರಿಗೆ ತಿಳಿಸಬಾರದಂತೆ, ತಿಳಿದವರಂತೆ ನಾಟಕವಾಡೋರಿಗೂ ತಿಳಿಸಬಾರದಂತೆ ಏನೂ ತಿಳಿಯದವರಿಗೆ   ತಿಳಿಸಬಹುದಂತೆ. ಆದರೆ ಮಕ್ಕಳನ್ನು ಏನೂ ತಿಳಿಯದವರೆಂದು ತಿಳಿಸಬಾರದ ವಿಷಯವನ್ನು ತಿಳಿಸುತ್ತಾ ಹೋದವರೆ  ಇಂದು ಹೆಚ್ಚು ಸಂಕಟದಲ್ಲಿರೋದು.
ಕಾರಣವಿಷ್ಟೆ ನಾನು ದೊಡ್ಡವನು ಎನ್ನುವ ಅಹಂ  ನನಗೇ ತಿಳಿಯದೆ ಒಳಗಿತ್ತು.ಅಹಂಕಾರ ಸ್ವಾರ್ಥ ವೇ ಮಾನವನ ಶತ್ರು ಎನ್ನುತ್ತಾರೆ ಮಹಾತ್ಮರು. ಸರ್ವಜ್ಞ ಒಬ್ಬನೇ .ಅವನ ಅಲ್ಪ ಜ್ಞಾನದಿಂದ ನಾನೇ ಸರ್ವಜ್ಞ ಎನ್ನುವವರು ಹೆಚ್ಚಿದರೆ  ಅಜ್ಞಾನ.
ಭಗವದ್ಗೀತೆ, ರಾಮಾಯಣ ಮಹಾಭಾರತ,ವೇದಗಳು  ತಿಳಿಸುವ ಸಾಮಾನ್ಯಜ್ಞಾನ ಬಿಟ್ಟು ರಾಜಕೀಯಕ್ಕೆ ಬಳಸಿದರೆ ಪ್ರಜಾಪ್ರಭುತ್ವದ ಪ್ರಜಾಧರ್ಮ ಉಳಿಸಲಾಗದು. ಸಾಮಾನ್ಯಜ್ಞಾನವನ್ನು ಸರಿಯಾಗಿ ಬಳಸಿಕೊಂಡು ವಿಶೇಷ ಜ್ಞಾನದೆಡೆಗೆ ಸಾಗುವುದೇ  ನಿಜವಾದ ಧರ್ಮ.

No comments:

Post a Comment