ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Tuesday, August 30, 2022

ಗೌರಿ ಮತ್ತು ವರಸಿದ್ದಿವಿನಾಯಕ ವ್ರತ ಮಹಿಮೆ

ಎಲ್ಲರಿಗೂ ಗೌರಿ ಹಬ್ಬದ ಶುಭಾಶಯಗಳು. ಗಣಪತಿಯ ತಾಯಿ,ಗೌರೀ ಮಾತೆ .ಗೌರ ವರ್ಣದವಳಾದ ಗೌರಿ ದೇವಿ.ಬಿಳಿ ಬಣ್ಣ ಶುಭ್ರತೆಯ,ಸ್ವಚ್ಚತೆಯ ಸಂಕೇತ. ಏನನ್ನು ಸ್ವಚ್ಚ ಮಾಡಿಕೊಳ್ಳಬೇಕೆಂದರೆ ಮನಸ್ಸನ್ನು ಸ್ವಚ್ಚಮಾಡಿಕೊಂಡು ಶುಭ್ರವಾಗಿದ್ದು ಗೌರಿಯನ್ನು ಪೂಜಿಸಿ ಮುಕ್ತಿಪಡೆಯುವುದು. ಸ್ತ್ರೀ ಶಕ್ತಿಯ ಜ್ಞಾನ ಅಪಾರವಾದದ್ದು.
ಜ್ಞಾನದೇವತೆಯನ್ನು ಮರೆತು ಮುಂದೆ ನಡೆದಷ್ಟೂ ಸ್ತ್ರೀ ಗೆ
ಸಮಸ್ಯೆಗಳೇ ಹೆಚ್ಚುತ್ತದೆ. ಭೂಮಿಯ ಪವಿತ್ರತೆ,ಸಾತ್ವಿಕತೆ ಇರೋದು ಸ್ತ್ರೀ ಯ ರ ಜ್ಞಾನದಲ್ಲಿ ಎನ್ನುವ ಕಾರಣಕ್ಕಾಗಿ ಭಾರತೀಯರ ಹಬ್ಬ ಹರಿದಿನಗಳಲ್ಲಿ ವಿಶೇಷವಾಗಿ ಸ್ತ್ರೀ ಯರು  ಮುಂದಾಗಿರುತ್ತಾರೆ. 4 ಕೈಗಳು,4,ಭುಜಗಳುಳ್ಳ, ವೃಷಭ ವಾಹಿನಿಯಾದ ಗೌರಿ ಶಂಖ,ಚಕ್ರ,ಚಂದ್ರನ ಸಹಿತ ಕಂಗೊಳಿಸುತ್ತಾಳೆ. ವೃಷಭವಾಹನ ಅಹಂಕಾರವನ್ನು ದೂರ ಮಾಡುವ ಸಂಕೇತ, 4 ಕೈಗಳ ಭುಜ , ಬಾಲ್ಯ,ಕೌಮಾರಿ,  ಯೌವನ,ವಾರ್ಧಕ್ಯ,ಧರ್ಮ ಅರ್ಥ,ಕಾಮ,ಮೋಕ್ಷ ಪ್ರತಿಯೊಂದು  ರೂಪದಲ್ಲಿದ್ದು   ಅನುಗ್ರಹಿಸುವ ತಾಯಿಯ ವ್ರತ,ಪೂಜೆ,ಸ್ಮರಣೆ ಯಿಂದ  ಪುನೀತರಾಗಿರುವ ಭಕ್ತರು ಅನೇಕರು. ಉತ್ತಮವಾದ ರೀತಿಯಲ್ಲಿ  ದೇವಿಯನ್ನು  ನೋಡಿ,ಪ್ರಾರ್ಥಿಸಿದರೆ ಉತ್ತಮವಾದದ್ದನ್ನೇ ಕೊಡುತ್ತಾಳೆ.
ಹಾಗೆಯೇ ಯಾವುದೇ ಸ್ತ್ರೀ ಗೆ ಎಲ್ಲಿ ಉತ್ತಮ ಗೌರವ,ಪ್ರೀತಿ,ವಿಶ್ವಾಸವಿರುವುದೋ  ಅಲ್ಲಿ ದೇವತೆಗಳು
ನೆಲೆಸಿರುವರು. ದೇವ ದಾನವರ ಗುಣ ಲಕ್ಷಣಗಳು ಮಾನವನೊಳಗೆ ಹೊರಗೆ ಇರೋವಾಗ ಯಾವ ಗುಣದಿಂದ
ಮನಸ್ಸು ಶುದ್ದವಾಗುವುದೋ ಅದೇ ದೈವ ಗುಣ. ಗೌರಿ ಗೌರವರ್ಣದವಳಾಗಿದ್ದು ಪತಿವ್ರತೆ,ಧರ್ಮ. ಪತ್ನಿಯಾಗಿದ್ದುಶಿವಸಾನಿದ್ಯದಲ್ಲಿದ್ದು ಮಾನವನರಿಗೆ ಸಕಲ ಸೌಭಾಗ್ಯವನ್ನು ಕರುಣಿಸಲೆಂದೇ ಭಾದ್ರಪದ ಶುಕ್ಲ ತದಿಗೆಯ ದಿನವನ್ನು ಮಹಾಗೌರಿ ವ್ರತವನ್ನಾಚರಿಸಲಾಗುತ್ತದೆ.  ನಂತರದ ದಿನ ಬರುವ ವರಸಿದ್ದಿವಿನಾಯಕನೂ ಬೇಡಿದ ವರ ನೀಡುವ‌ ನಾಯಕ. ಒಂದು ಮಾತ್ರ ಮಾನವ ಅರ್ಥ ಮಾಡಿಕೊಂಡರೆ ಉತ್ತಮ. ನಾವು ಏನು ಬೇಡಿದರೆ ತಿರುಗಿ ಕೊಟ್ಟರೂ ಹೆಚ್ಚಾಗುವುದೋ ಅಂತಹ ಜ್ಞಾನವನ್ನು ಬೇಡದೆ
ಹಣವನ್ನು ಬೇಡಿದರೆ ಹೊರಗಿನಿಂದ ಹಣಬಂದರೂ ಅದನ್ನು ಸದ್ಬಳಕೆ ಮಾಡಿಕೊಳ್ಳಲು ಜ್ಞಾನ ಬೇಕು. ದೇವತಾರಾಧನೆಗೆ
ಕಡಿಮೆಯಾಗಿಲ್ಲ ಆದರೆ  ದೈವತ್ವ  ಬೆಳೆಯದೆ ಸಮಸ್ಯೆಗೂ ಮಿತಿಯಿಲ್ಲ ವಾದರೆ‌ ಬೇಡಿ ಉಪಯೋಗವಿಲ್ಲ. ಹೀಗಾಗಿ "ತಲ್ಲಣಿಸದಿರು ಕಂಡ್ಯಾ ತಾಳು ಮನವೆ ಎಲ್ಲರನ್ನೂ ಸಲಹುವನು ಇದಕೆ ಸಂಶಯವಿಲ್ಲ" ದಾಸರೆಂದರು. ಕಾರ್ಯವು ಕ್ರಮಬದ್ದವಾಗಿದ್ದರೆ ಕಾರ್ಯಕ್ರಮ ಯಶಸ್ವಿ.
ಕ್ರಮರಹಿತವಾಗಿ,ಅಕ್ರಮ ಹಣದಲ್ಲಿ ಎಷ್ಟೇ  ದೇವರನ್ನು ಬೇಡಿದರೂ ವಿಘ್ನಗಳೇ ಹೆಚ್ಚು. ಸಿದ್ದಿವಿನಾಯಕಸ್ವಾಮಿ ಒಲಿಯೋದು ಸಿದ್ದರಿಗೆ. ಸಿದ್ದಿಪಡೆದವರ ಹೆಸರಲ್ಲಿ ಪ್ರಸಿದ್ದ ರಾದರೆ  ಅರ್ಧ ಸತ್ಯವಷ್ಡೆ. ಆಂತರಿಕ ಶುದ್ದಿಯಿಂದ ಸಿದ್ದಿ ಪಡೆದವರೆಲ್ಲರೂ ಪ್ರಸಿದ್ದರಾಗಿರಲಿಲ್ಲ.ಕಾರಣವಿಷ್ಟೆ ಅವರಿಗೆ
ಪರಾಶಕ್ತಿ,ಪರಮಾತ್ಮನೇ ಸಿಕ್ಕಿದ ಮೇಲೆ ಹೊರಗಿನ ಸಾಮಾನ್ಯ   ಪ್ರಸಿದ್ದಿಯ ಅಗತ್ಯವಿರಲಿಲ್ಲ. ಕಾಲಬದಲಾದರೂ ಒಳಗಿನ‌ ಜಗತ್ತು  ಶುದ್ದವಾಗಿರುತ್ತದೆ ಕಾರಣ ಆತ್ಮ ಪರಿಶುದ್ದವಾದ ಮಹಾಚೇತನ.
ಎಲ್ಲರಿಗೂ  ಮಹಾಗೌರಿ ಹಾಗು ವರಸಿದ್ದಿವಿನಾಯಕ  ಹಬ್ಬದ
ಶುಭಾಶಯಗಳು.

No comments:

Post a Comment