ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Wednesday, August 24, 2022

ನಿಮ್ಮದು ಯಾವ‌ ಪಕ್ಷ?

    ಹಿಂದೂ ಪಕ್ಷ, ಮುಸ್ಲಿಂ ಪಕ್ಷ, ಕ್ರೈಸ್ತ ಪಕ್ಷದಲ್ಲಿ ಪಿತೃಪಕ್ಷವೇ ಇಲ್ಲವಾದರೆ  ಮಾತೆಗೆ ಪಕ್ಷಪಾತವೇ ಗತಿ. ಹಿಂದೂ ಧರ್ಮ ಎಂದರೆ ಅವರವರ ಹಿಂದಿನ ಗುರು ಹಿರಿಯರು ನಡೆದ ದಾರಿ, ಧರ್ಮ,ಕರ್ಮವಾಗುತ್ತದೆ. ಹಾಗಾದರೆ ಭಾರತೀಯರ ಧರ್ಮ ಒಂದೇ. ಅದೇ ಭಾರತೀಯತೆಯನ್ನು ಬೆಳೆಸಿ  ಕಲಿಸಿ,vಉಳಿಸುವುದಾಗಿತ್ತು. ಇದನ್ನು ಹಿಂದಿನ ಕಾಲದಲ್ಲಿದ್ದ ಶಿಕ್ಷಣದಲ್ಲಿಯೇ ಮಕ್ಕಳಿಗೆ ಮನೆ ಮನೆಯಲ್ಲಿ ಕಲಿಸುವ‌ ಅವಕಾಶದ ಜೊತೆಗೆ  ಗುರುಕುಲಗಳಿದ್ದವು.ಯಾವುದೇ ರಾಜಕೀಯ ಲೇಪನವಿಲ್ಲದೆ ಮೂಲ ಧರ್ಮ ಕರ್ಮಕ್ಕೆ ತಕ್ಕಂತೆ ಶಿಕ್ಷಣ ನೀಡಿ ಸ್ವಾವಲಂಬನೆ, ಸ್ವಾಭಿಮಾನ, ಸರಳ ಜೀವನದಲ್ಲಿ ಸ್ವತಂತ್ರ ಕಂಡಿದ್ದ ಭಾರತವನ್ನು ಆಳಲು ಬಂದವರ ಹಿಂದೆ ನಡೆದವರು ಈಗಲೂ ಧರ್ಮದ ಹುಡುಕಾಟ ನಡೆಸುತ್ತಾ ರಾಜಕೀಯ ಬಿಡದೆ  ಮುಂದೆ ಹೋಗಿ ಅತಂತ್ರಸ್ಥಿತಿಗೆ ತಾವೂ ತಲುಪಿ ಹಿಂದೆ ಬಂದವರಿಗೂ ದಾರಿತಪ್ಪಿಸಲಾಗಿದೆ. 
    ಹಾಗಾದರೆ ದಾರಿ ತಪ್ಪಿಸಿರೋರನ್ನು ದೂರಿಕೊಂಡಿದ್ದರೆ ದಾರಿ  ಸರಿಯಾಗುವುದೆ? ಅಥವಾ ನಮ್ಮ ಹತ್ತಿರವಿರುವ ಸರಿಯಾದ ದಾರಿ ನಾವೇ ಆರಿಸಿಕೊಂಡು ಮೂಲ ಸೇರಬೇಕೆ? ಎಲ್ಲಿದೆ ಧರ್ಮ? ಎಲ್ಲಿದೆ  ಶಿಕ್ಷಣ ನೀತಿ? ಎಲ್ಲಿಗೆ  ಹೋಗುತ್ತಿದೆ ಭಾರತ? ಒಳಗಿನ  ಹುಳುಕನ್ನು ಮುಚ್ಚಿ ಹೊರಗೆ ತೇಪೆ ಹಾಕಿದರೂ ಒಳಗೇ ಕೊಳೆತು ನಾರುವ  ಕೆಟ್ಟ ಮನಸ್ಸನ್ನು ಸರಿಪಡಿಸಲು ಯಾವ ಸರ್ಕಾರದಿಂದಲೂ ಕಷ್ಟ. ಇದೊಂದು ಪ್ರಜಾಪ್ರಭುತ್ವ ದೇಶ. ಪ್ರಜೆಗಳೇ ಸರಿಯಾದ ಮಾರ್ಗವನ್ನು ಧರ್ಮದ ಕಡೆಗೆ ಆರಿಸಿಕೊಂಡು ಅವರವರ ಸಂಸಾರವನ್ನು ಭದ್ರಗೊಳಿಸಿಕೊಂಡರೆ ಹೊರಗಿನವರಿಗೆ ಕೆಲಸವಿರೋದಿಲ್ಲ. ಒಟ್ಟಿನಲ್ಲಿ ಹೊರಗಿನವರ ಹಿಂದೆ ಹೋದರೆ ಧರ್ಮ ಉಳಿಯೋದಿರಲಿ ಅಳಿಯದಿದ್ದರೆ ಸಾಕು. ಇಲ್ಲಿನ ನೆಲ, ಜಲ, ಭಾಷೆ, ಸಂಸ್ಕೃತಿ,  ಧರ್ಮವನ್ನು ಯಾರು ಉಳಿಸುವರೋ ಅವರಿಗೆ ಮುಕ್ತಿ. ಅಂದರೆ ದೇಶಭಕ್ತಿ ಪ್ರಜೆಗಳಿಗೆ ಅಗತ್ಯವಿದೆ. ಇದಕ್ಕೆ ರಾಜಕೀಯಕ್ಕಿಂತ ರಾಜಯೋಗದ ಅವಶ್ಯಕತೆ ಇದೆ. ಇದನ್ನು ಸ್ವಾಮಿ ವಿವೇಕಾನಂದರು ಸ್ವಾತಂತ್ರ್ಯ ಪೂರ್ವದಲ್ಲಿಯೇ ತಿಳಿಸಿದ್ದರು. ಆದರೆ ವಿಪರ್ಯಾಸವೆಂದರೆ ವಿವೇಕಾನಂದರ ಸಂದೇಶಗಳನ್ನು ಶಿಕ್ಷಣದಲ್ಲಿ  ಅಳವಡಿಸದೆ ಪ್ರಚಾರಕ್ಕಷ್ಟೇ ಬಳಸಿದವರೆ  ಹೆಚ್ಚು.             ವಿಚಾರವನ್ನು ವೇದನೆಯಿಲ್ಲದೆ ತಿಳಿದು ಪಡೆಯುವ ಆನಂದ ವಿವೇಕಾನಂದ. ವಿಚಾರವನ್ನು ವೇದ ಶಾಸ್ತ್ರಗಳಲ್ಲಿ ಅಡಗಿರುವ ಸತ್ಯಜ್ಞಾನದಿಂದ ಅರ್ಥಮಾಡಿಕೊಂಡು ಕಾಣುವ ಆತ್ಮಾನಂದವೇ ವಿವೇಕಾನಂದ. ವಿವೇಕವನ್ನು ಹೆಚ್ಚಿಸಿಕೊಳ್ಳಲು ರಾಜಯೋಗದ ಅಗತ್ಯವಿದೆ.ವಿವೇಕವುಳ್ಳವರ ಪಕ್ಷ ಯಾವುದಿದೆ? 


No comments:

Post a Comment