ಶ್ರೀ ಕೃಷ್ಣ ನಲ್ಲಿದ್ದ ರಾಜಯೋಗವನ್ನರಿತು ತತ್ವಜ್ಞಾನದಿಂದ
ಮುಂದೆ ನಡೆದವರಿಗೆ ಮುಕ್ತಿ .ತಂತ್ರದಿಂದ ಕೃಷ್ಣನನ್ನು ಆಳಲು ಹೊರಟವರಿಗೆ ಪುನರ್ಜನ್ಮದ ಪ್ರತಿಫಲ. ಹಾಗಾಗಿ ಇಂದು ಜನಸಂಖ್ಯೆ ಮಿತಿಮೀರಿ ಅಜ್ಞಾನವನ್ನು ಬಂಡವಾಳ ಮಾಡಿಕೊಂಡು ವ್ಯವಹಾರದಲ್ಲಿ ಲಾಭ ನಷ್ಟವನ್ನರಿತು ಜೀವನ ನಡೆಸೋದು ಸಹಜವಾಗಿದೆ.ಆದರೆ ವ್ಯವಹಾರ ಜೀವನದ ಮೂರನೆ ಅಂಗ. ವ್ಯವಹಾರದಲ್ಲಿಯೂ ಧಾರ್ಮಿಕವಾಗಿ ನಡೆಯುವಾಗ ಜ್ಞಾನ ಹೆಚ್ಚುತ್ತದೆ ಹಣವನ್ನು ಸತ್ಕರ್ಮಕ್ಕೆ ಉಪಯೋಗಿಸಿ ಶಾಂತಿ ಸಿಗುತ್ತದೆ. ಶ್ರೀ ಕೃಷ್ಣನ ಅರ್ಥ ಮಾಡಿಕೊಳ್ಳಲು ಭಕ್ತರಿಗೆ,ದಾಸ,ಶರಣರಿಗೆ ಸಾದು ಸಂತರಿಗೆ ಮಹಾತ್ಮರಿಗಷ್ಟೆ ಸಾಧ್ಯವೆಂದಾಗ ಇವರೆಲ್ಲರೂ ಜ್ಞಾನವನ್ನು ಬಂಡವಾಳಗಿಟ್ಟುಕೊಂಡಿದ್ದರು
ಇದನ್ನು ನಾವು ಅವರ ನಡೆ ನುಡಿಯಲ್ಲಿದ್ದ ಸದ್ವಿಚಾರ,ಸದಾಚಾರ,ಸತ್ಯ,ಧರ್ಮ, ನ್ಯಾಯ,ನೀತಿ,ಸಮಾನತೆ ,ಸರಳತೆ,ಶಾಂತತೆಯನ್ನರಿತರೆ ಸಾಧ್ಯ. ಭಗವದ್ಗೀತೆ ಯೂ ಇದನ್ನು ತಿಳಿಸಿದೆ. ಭಗವದ್ಗೀತೆ ಮಹಾಗ್ರಂಥವೆಂದು ಪೂಜಿಸಿ ಓದಿ ಪ್ರಚಾರಮಾಡುವುದರಿಂದಲೂ ಪುಣ್ಯ ಸಂಪಾದನೆ ಸಾಧ್ಯ.ಆದರೆ, ಅದರೊಳಗಿರುವ ಧಾರ್ಮಿಕ ಸೂಕ್ಷ್ಮ ಸರಳ ವಿಚಾರವನ್ನು ನಾವೆಷ್ಟು ಜೀವನದಲ್ಲಿ ತಿಳಿದು ನಡೆಯಲು ಸಹಕಾರ ನೀಡಬೇಕಾದ ನಮ್ಮ ಸಮಾಜ, ಗುರುಹಿರಿಯರು, ರಾಜಕಾರಣಿಗಳು ಇನ್ನಿತರ ಪ್ರತಿಷ್ಠಿತ ಜ್ಞಾನಿಗಳು ಈಗಲೂ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಕೆಲವರಿದ್ದರೂ ಕೇವಲವಾಗಿ ಕಾಣುವ ಸಮಾಜದ ಎದುರು ಗುರುತಿಸಲಾಗದು. ಸತ್ಯವೇ ದೇವರು. ಸತ್ಯ ಕಠೋರವಾಗುವುದಕ್ಕೆ ಕಾರಣ ಅದನ್ನು ತಿರಸ್ಕರಿಸಿ ಮುಂದೆ ನಡೆದಿರೋದು.ಸತ್ಯವೇ ದೇವರು ಎಂದಾಗ ದೇವರಿರೋದು ಎಲ್ಲಿ? ಸತ್ಯಕ್ಕೆ ಬೆಲೆಕೊಡದೆ ರಾಜಕೀಯವನ್ನು ಬೆಳೆಸಿದವರಿಗೆ ಇಂದಿನ ರಾಜಕೀಯದೊಳಗೇ ಅಡಗಿರುವ ಅಧರ್ಮ, ಅಸತ್ಯ,ಅನ್ಯಾಯದ ಭ್ರಷ್ಟಾಚಾರವನ್ನು ತಡೆಯಲಾಗುತ್ತಿಲ್ಲ.ಕಾರಣವಿಷ್ಟೆ ನಮ್ಮ ಸಹಕಾರದಿಂದಲೇ ಇದು ಬೆಳೆದಿರುವಾಗ ನಮ್ಮೊಳಗೂ ಇದೇ ಇರುತ್ತದೆ.ಮೊದಲು ಒಳಗಿರುವ ಇದನ್ನು ತೊಳೆದು ಸ್ವಚ್ಚ ಮಾಡಿಕೊಂಡರೆ ಹೊರಗಿನ ಭ್ರಷ್ಟಾಚಾರ ನಿಧಾನವಾಗಿ ಹೋಗಿ ಸ್ವಚ್ಚ ಭಾರತವಾಗುತ್ತದೆ. ಜಗದ್ಗುರು ಆಗೋ ಮೊದಲು ದೇಶಕ್ಕೆ ಗುರುವಾಗಬೇಕು.ದೇಶಕ್ಕೆ ಗುರು
ವಾಗೋ ಮೊದಲು ಸಮಾಜಕ್ಕೆ ಗುರುವಾಗಬೇಕು.ಇದಕ್ಕೂ ಮೊದಲು ಸಂಸಾರಕ್ಕೆ ಗುರುವಾಗಬೇಕು. ಇದೂ ಸಾಧ್ಯ ಆಗಬೇಕಾದರೆ ನಮ್ಮನ್ನು ನಾವೇ ಯಾರೆಂದು ಅಧ್ಯಾತ್ಮ ಸತ್ಯ ತತ್ವದಿಂದ ಅರ್ಥ ಮಾಡಿಕೊಳ್ಳಬೇಕೆನ್ನುವುದೇ ಅದ್ವೈತದ ಅಹಂ ಬ್ರಹ್ಮಾಸ್ಮಿ. ಇಲ್ಲಿ ನಾನೇ ಬ್ರಹ್ಮನಾಗಿದ್ದರೆ ನಾನೇ ಸೃಷ್ಟಿಸಿದ. ಹಲವು ಧರ್ಮ, ಪಂಗಡ,ಪಕ್ಷ,ಜಾತಿ,ಇನ್ನಿತರ ಭೌತಿಕ 'ವಿಷ'ಯ ಗಳಿಂದ ನಮ್ಮ ಗುರಿ ತಲುಪಲಾಯಿತೆ? ದಾರಿ ತಪ್ಪಿದವರ ಹಿಂದೆ ನಡೆದು ದಾರಿ ತಪ್ಪಿದರೆ ತಪ್ಪು ಯಾರದ್ದು? ಪರಮಾತ್ಮನಿರೋದು ಎಲ್ಲರ ಒಳಗೇ ಎಂದಾಗ
ಒಳಹೊಕ್ಕಿ ನೋಡುವ ಶಿಕ್ಷಣವನ್ನು ಶಿಕ್ಷಕರು,ಗುರುಗಳು ಪೋಷಕರು,ಹಿರಿಯರು, ಜ್ಞಾನಿಗಳು, ಸಾಹಿತಿಗಳು, ಇನ್ನಿತರ
ಅಧಿಕಾರ ಪಡೆದ ಪ್ರತಿಷ್ಡಿತರು ಜನರಿಗೆ ಕೊಡದೆ ಆಳಿದರೆ ಶ್ರೀ ಕೃಷ್ಣನ ಕೃಪೆ ಆಗುವುದೆ? ಕಲಿಗಾಲದ ಪ್ರಭಾವವೆಂದರಿತು ಈಗ ಇದ್ದಲ್ಲಿಯೇ ಮೂಲದ ಧರ್ಮ, ಕರ್ಮ, ಭಾಷೆ ಶಿಕ್ಷಣ ಬೆಳೆಸುವತ್ತ ನಡೆದರೆ ದಾರಿ ಹತ್ತಿರವಿದೆ. ಹಿಂದೆ ಇತ್ತು.ಹಿಂದಿನವರಲ್ಲಿತ್ತು. ಎಲ್ಲಿಯವರೆಗೆ ಮಾನವನಪ್ರಾಣಿ ಗುಣ ಹೋಗುವುದಿಲ್ಲವೋ ಪ್ರಾಣಕ್ಕೆ ಮುಕ್ತಿ ಯಿಲ್ಲ.ಪ್ರಾಣಿಗಳ ಸ್ವತಂತ್ರ ಜೀವನಕ್ಕೂ ಮುಳ್ಳಾಗಿರುವ ಮಾನವನಿಗೆ ದೇವರು ಕಾಣಲು ಕಷ್ಟ ಕಷ್ಟ. ಸತ್ಯವನ್ನು ಸುಳ್ಳು ಮಾಡಿ ರಾಜಕೀಯ ನಡೆಸಿದರೂ ಸತ್ಯಕ್ಕೆ ಸಾವಿಲ್ಲ.ರಾಜಕೀಯದಿಂದ ಮುಕ್ತಿ ಸಿಗೋದಿಲ್ಲ. ಶ್ರೀ ಕೃಷ್ಣ ನ
ಯೋಗ ಜೀವನ ಧರ್ಮದಾರಿತವಾಗಿತ್ತು. ಸ್ವಯಂ ಭಗವಂತನೆಗೆ ಭೂಮಿ ಆಳಲಾಗಲಿಲ್ಲ ಕಾರಣ ದೇವಾಸುರರನ್ನು ಒಳಗೇ ಇಟ್ಟುಕೊಂಡಿರುವಾಗ ಯಾರನ್ನೂ ಪೂರ್ಣ ತಪ್ಪಿತಸ್ಥರೆಂದು ಹೇಳಲಾಗದು.ಕೈ ಕೈ ಸೇರಿದರೆ ಚಪ್ಪಾಳೆ. ಸದ್ದು ಮಾಡುತ್ತಿರುವ ಮಾಧ್ಯಮ,ಮಧ್ಯವರ್ತಿಗಳು
ಮಾನವರಷ್ಟೆ,ಮಹಿಳೆ ಮಕ್ಕಳನ್ನು ಹೊರಗೆಳೆದು ಆಳಿದರೆ ಅಧರ್ಮ. ಹಣದಿಂದ ಏನಾದರೂ ಜೀವ ಖರೀದಿ ಮಾಡಿದರೂ ಅದರ ಫಲವನ್ನು ಉಣ್ಣುವ ಜೀವ ಒಳಗಿದೆ
ಕರ್ಮಕ್ಕೆ ತಕ್ಕಂತೆ ಪ್ರತಿಫಲ.
No comments:
Post a Comment