ಆತ್ಮಜ್ಞಾನ ವಿಜ್ಞಾನದ ನಡುವಿರುವ ಸಾಮಾನ್ಯಜ್ಞಾನವನ್ನು ಮಾನವ ತಿಳಿದರೆ ಸಾಕು ತನ್ನ ಈ ಸಂಕಷ್ಟಗಳಿಗೆ ಕಾರಣವಾಗಿರುವ ಋಣ ಅಥವಾ ಸಾಲವನ್ನು ಹೇಗೆ ತೀರಿಸಿ ಮುಕ್ತಿ ಪಡೆಯಬಹುದೆನ್ನುವುದನ್ನು ತನ್ನೊಳಗಿನ ಅರಿವಿನಿಂದ ಅರ್ಥ ಮಾಡಿಕೊಳ್ಳಲು ಸಾಧ್ಯ. ಪುರಾಣ,ಇತಿಹಾಸದ ಮಧ್ಯೆ ವಾಸ್ತವ ಸತ್ಯವಿದೆ. ನಂತರವೇ ಭವಿಷ್ಯವಾಗೋದು. ಹಿಂದಿನ ಸತ್ಯ ಮುಂದಿನ ಸತ್ಯವನ್ನು ವಾಸ್ತವ ಸತ್ಯದ ಮೂಲಕ ತಿಳಿದಾಗಲೇ ಭವಿಷ್ಯದಲ್ಲಿ ಸತ್ಯಕ್ಕೆ ಬೆಲೆ ಧರ್ಮ ಕ್ಕೆ ನೆಲೆ. ಇಲ್ಲಿ ಸಾಲದ ವಿಚಾರ ಬಂದಾಗ ಇಲ್ಲಿ ಪ್ರತಿಯೊಬ್ಬರೂ ಸಾಲಗಾರರೆ,ಶ್ರೀಮಂತ ಬಡವನ ಪಾಲನ್ನು ಪಡೆದು ದೊಡ್ಡ ಸಾಲಗಾರನಾದರೆ,ಬಡವ ಶ್ರೀಮಂತನ ಬೇಡಿಕೊಂಡು ಸಾಲದ ಸುಳಿಯಲ್ಲಿರುತ್ತಾನೆ.ಇವರಿಬ್ಬರ ನಡುವಿರುವ ಮಧ್ಯವರ್ತಿಗಳು ಈ ಕಡೆ ಶ್ರೀಮಂತನ ಸಾಲ, ಇನ್ನೊಂದು ಕಡೆ ಬಡವನ ಸಾಲವನ್ನು ಏರಿಸುತ್ತಾ ಹರಿದುಹೋಗುವ ಹಣದಲ್ಲಿ ತಮ್ಮ ಪಾಲನ್ನು ಸುಲಭವಾಗಿ ಪಡೆದುಕೊಂಡು ಜೀವನ ನಡೆಸುತ್ತಾನೆ.ಹಾಗಾದರೆ ಸಾಲ ಯಾರಿಂದ ಯಾರಿಗೆ ಹೋಗುತ್ತಿದೆ? ಕಳೆದುಕೊಂಡವರು ಯಾರು? ಇದಕ್ಕಾಗಿ ಅಧ್ಯಾತ್ಮ ಚಿಂತಕರು ಎಲ್ಲವನ್ನೂ ಪರಮಾತ್ಮನಿಗೆ ಅರ್ಪಿಸಿ ನಿಸ್ವಾರ್ಥ, ನಿರಹಂಕಾರದಿಂದ ಮುಂದೆ ಸರಳ ಜೀವನನಡೆಸಿ ಮುಕ್ತಿ ಪಡೆದರು.ಈಗಿನ ಕಾಲದಲ್ಲಿ ಅಂತಹ ಮಹಾತ್ಮರನ್ನು ಹುಡುಕಿದರೂ ಸಿಗೋದು ಕಷ್ಟ.ಕಾರಣ ಮಹಾತ್ಮರ ಹೆಸರಿನಲ್ಲಿಯೇ ವ್ಯವಹಾರ ಬೆಳೆಸಿ ಶ್ರೀಮಂತ ರಾದೋರನ್ನು ಜನರು ದೇವರು, ಮಹಾತ್ಮರು, ಎನ್ನುವ ಮಟ್ಟಿಗೆ ಸಮಾಜ ಬೆಳೆದಿದೆ. ಹಾಗಾದರೆ ಮಧ್ಯವರ್ತಿಗಳು ದೇವರೆ? ಇಲ್ಲಿ ಮಧ್ಯವರ್ತಿಗಳು ಎಂದಾಗ ಮಾನವರು, ಮಾನವರಲ್ಲಿ ಪುರುಷ,ಸ್ತ್ರೀ, ಮಕ್ಕಳು ಇರುತ್ತಾರೆ. ಮಹಾತ್ಮರುಗಳು ಎಂದರೆ ಆತ್ಮಾನುಸಾರ,ಆತ್ಮಾವಲೋಕನದಲ್ಲಿ,ಸತ್ಯ ಧರ್ಮವನ್ನರಿತು ದೈವತ್ವದೆಡೆಗೆ ನಡೆದವರಾಗುತ್ತಾರೆ. ದೇವರನ್ನು ಯಾರಿಗೂ ತೋರಿಸಲಾಗದು ಕಾರಣ ನಿರಾಕಾರಶಕ್ತಿಯನ್ನು ತೋರಿಸಲಾಗದು.ಆದರೆ ಇಂದು ಸಾಕಷ್ಟು ದೇವಾನುದೇವತೆಗಳು ಹೊರಬಂದಿರೋದರ ಹಿಂದಿನ ಕಾರಣ ಮಾನವನ ಚಂಚಲಮನಸ್ಸನ್ನು ಒಂದೆಡೆ ನಿಲ್ಲಿಸಿ ಆಂತರಿಕ ವಾಗಿರುವ ಶಕ್ತಿಯನ್ನು ಜಾಗೃತಗೊಳಿಸುವುದಾಗಿತ್ತು.ಆಗಿದೆಯೆ? ದೇವರಿರೋದೆಲ್ಲಿ? ದೇವರ ಸಾಲ ನಾವು ತೀರಿಸಬಹುದೆ? ತಿರುಪತಿ ತಿಮ್ಮಪ್ಪನಸಾಲವನ್ನು ತೀರಿಸಬಹುದೆ? ದೇಶದ ಸಾಲ ನಾವು ತೀರಿಸಲು ದೇಶ ಸೇವೆ ನಿಸ್ವಾರ್ಥ ದಿಂದ ಪ್ರತಿಫಲಪೇಕ್ಷೆಯಿಲ್ಲದೆ ಜ್ಞಾನದಿಂದ ಜೀವನ ಮಾಡಬೇಕು ಎಂದ ಹಾಗೆ ದೇವರ ಸೇವೆಯೂ ನಡೆಯಬೇಕಿತ್ತು. ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಹಣವಿದ್ದರೂ ಸಾಲದ ಹಣವಾಗಿದೆ. ಅದೂ ಕೂಡಾ ವಿದೇಶಿ ಸಾಲ,ಭ್ರಷ್ಟಾಚಾರದ ಹಣದಲ್ಲಿ ದೈವತ್ವ ಪಡೆಯಲು ದೇವರ ಋಣ ತೀರಿಸಲು ಕಷ್ಟ.ಇದಕ್ಕೆ ಪ್ರತಿಯಾಗಿ ಇನ್ನಷ್ಟು ಭ್ರಷ್ಟಾಚಾರ ಬೆಳೆದು ರಾಜಕೀಯಕ್ಕೆ ಮುಖಮಾಡಿಕೊಂಡು ಜನಸಾಮಾನ್ಯರು ದಿನನಿತ್ಯದ ಕರ್ಮ ಸರಿಯಾಗಿ ಮಾಡದೆ ಸಾಲದ ಮೊರೆ ಹೋಗುತ್ತಿರುವುದು ಜ್ಞಾನಿಗಳ ದೇಶ ಹಿಂದುಳಿಯಲು ಕಾರಣ.ಹಾಗಂತ ದೇಶದ ಆಸ್ತಿಗೇನೂ ಕೊರತೆಯಿಲ್ಲ.ಸರಿಸಮನಾಗಿ ಬಳಕೆಯಾಗಿಲ್ಲ.ಮೂಲದಶಿಕ್ಷಣವೇ ಸರಿಯಿಲ್ಲವಾದರೆ ಜ್ಞಾನ ಎಲ್ಲಿಂದ ಸಿಗಬೇಕು.ಜ್ಞಾನವಿಲ್ಲದೆ ಹಣಸಂಪಾದಿಸಿದರೆ ಸದ್ಬಳಕೆಯಾಗದೆ ಸಾಲವಾಗಿರುತ್ತದೆ. ಇದೇ ಎಲ್ಲಾ ಮಾನವರ ಸಮಸ್ಯೆಗೆ ಕಾರಣವಾಗುತ್ತಿದೆ.ಇದನ್ನು ತಿಳಿಸಿದರೆ ತಡೆಯುವವರೆ ಅರ್ಧಸತ್ಯದ ವ್ಯವಹಾರದಲ್ಲಿರುವ ಮಧ್ಯವರ್ತಿಗಳು. ಅಂದಾಗ ಮಧ್ಯವರ್ತಿಗಳ ಉದ್ದೇಶ ? ಯಾವತ್ತೂ ಅರ್ಧ ತುಂಬಿದ ಕೊಡವೇಸದ್ದು ಮಾಡೋದು. ಆ ಸದ್ದಿನಿಂದ ಏನಾದರೂ ಶಾಂತಿ,ತೃಪ್ತಿ, ಮುಕ್ತಿ ಪಡೆಯಲು ಸಾಧ್ಯವೆ? ಈ ಕಾರಣಕ್ಕಾಗಿ ಹಿಂದಿನ ಮಹಾತ್ಮರುಗಳು ತಪಸ್ಸಿಗೆ ಕಾಡಿಗೆ ಹೊರಟು ಮುಕ್ತಿ ಪಡೆದರು.ಈಗ ನಾಡಿನ
ಮಧ್ಯೆ ಕುಳಿತು ರಾಜಕೀಯ ಬಿಡದೆ ಯೋಗ, ದ್ಯಾನ, ಜಪ ಯಾಗ ಯಜ್ಞ, ಪೂಜೆ,ಆರಾಧನೆ,ಇನ್ನಿತರ ಕಾರ್ಯಕ್ರಮದಲ್ಲಿ ಜನರನ್ನು ಮನೆಯಿಂದ ಹೊರಗೆ ಕರೆಸಿಕೊಳ್ಳುತ್ತಾರೆ.ಮನೆಯೊಳಗಿದ್ದೇ ಯೋಗ್ಯರೀತಿಯಲ್ಲಿ ಜೀವನನಡೆಸುತ್ತಿದ್ದ ಹಿಂದಿನ ಕಾಲಕ್ಕೂ ಮನೆಹೊರಗೆ ಬಂದು ಹೋರಾಟ ಮಾಡುತ್ತಾ ಸಮಸ್ಯೆಗಳನ್ನು ಒಳಗೆಳೆದುಕೊಂಡು ಜೀವನ ನಡೆಸುವ ಈಗಿನವರಿಗೂ ವ್ಯತ್ಯಾಸವಿಷ್ಟೆ.ಅಂದಿನ ಜನರಿಗೆ ಅರಿವಿನ ಶಿಕ್ಷಣ ಮನೆ ಮನೆಯ ಒಳಗೇ ನೀಡಿದ್ದರು. ಈಗಿನವರಲ್ಲಿದ್ದ ಅಲ್ಪ ಜ್ಞಾನವನ್ನೂ ಗುರುತಿಸದೆ ಹೊರಗಿನ ಶಿಕ್ಷಣ ನೀಡಿ ಅಜ್ಞಾನದಲ್ಲಿ ಆಳುವವರ ಸಂಖ್ಯೆ ಬೆಳೆದಿದೆ.ಇದಕ್ಕೆ ಪರಿಹಾರವಿಷ್ಟೆ "ಹಾಸಿಗೆ ಇದ್ದಷ್ಟು ಕಾಲು" ಚಾಚು," ಕಾಯಕವೇ ಕೈಲಾಸ ಮಂತ್ರ", " ದೇಶ ಸೇವೆಯೇ ಈಶ ಸೇವೆ", " ತಾಳಿದವನು ಬಾಳಿಯಾನು". " ಜನರ ಸೇವೆಯೇ ಜನಾರ್ದನನನ ಸೇವೆ". ಸೇವೆಯನ್ನು ಮಾಡುವಾಗ ಸತ್ಯದ ಅರಿವಿರಬೇಕು.ಧರ್ಮ ತಿಳಿದಿರಬೇಕು.
ಭ್ರಷ್ಟಾಚಾರದ ಹಣದಲ್ಲಿ, ಸಹಕಾರದಲ್ಲಿದ್ದರೆ ಸಾಲ ತೀರಿಸುವುದಕ್ಕೆ ಕಷ್ಟ.ಕಾರಣ ಅಲ್ಲಿ ಭ್ರಷ್ಟಾಚಾರಕ್ಕೆ ಬಲ,ಬೆಲೆ ಹೆಚ್ಚಾಗಿರುತ್ತದೆ. ಸಮಾಜದ ಋಣ ತೀರಿಸಲು ನಮ್ಮ ಸಾತ್ವಿಕ ಕರ್ಮದಿಂದ ಸಾಧ್ಯ.ಸಮಾಜವಿಲ್ಲದ ಸಂಸಾರವಿಲ್ಲ. ಸಂಸಾರ ಇಂದು ಸಂನ್ಯಾಸಿ ಗಳಿಗೂ ಇದೆ.ಅಂದರೆ ಅವರೂ ಒಂದು ಚೌಕಟ್ಟಿನಲ್ಲಿರುವಾಗ ಅದರ
ಜವಾಬ್ದಾರಿ ಹೋರಲೇಬೇಕು.ಹಾಗೆಯೇ ದೇಶದೊಳಗಿದ್ದ ಮೇಲೆ ದೇಶದ ಸಾಲ ಪ್ರಜೆಗಳೇ ಹೋರಬೇಕು. ಎಲ್ಲರೂ ಒಂದೇ ಒಬ್ಬರನ್ನೊಬ್ಬರು ಅವಲಂಬಿಸಿ ನಡೆಯುವಾಗ ಒಬ್ಬರ ಸಾಲ ಇನ್ನೊಬ್ಬರು ತೀರಿಸಬೇಕಾದರೆ ಅನಗತ್ಯವಾದ ವಿಷಯ, ವಿಚಾರ,ಹಣ,ಸಂಪತ್ತು,ಜ್ಞಾನವನ್ನು ಬಿಟ್ಟರೆ ಅಗತ್ಯಕ್ಕೆ ತಕ್ಕಂತೆ ಸಿಗುತ್ತದೆ. .ಅದೇ ಪರಮಾತ್ಮನ ಸಾಲ.ಅದನ್ನು ಸದ್ಬಳಕೆ ಮಾಡಿಕೊಂಡರೆ ಸಾಲದಿಂದ ಮುಕ್ತಿ.ದುರ್ಭಳಕೆ ಮಾಡಿಕೊಂಡರೆ ಆತ್ಮಹತ್ಯೆ ಅಂದರೆ ಪರಮಾತ್ಮನಿಗೇ ಮೋಸಮಾಡಿದ ಪ್ರತಿಫಲವೆನ್ನಬಹುದು. ಚರಾಚರದಲ್ಲಿಯೂ ಅಡಗಿರುವ ಆ ಅಣು ಶಕ್ತಿಯ ಸದ್ಬಳಕೆಯೇ ಜೀವನ್ಮುಕ್ತಿಗೆ ಮಾರ್ಗ.ಏನೇ ಬರಲಿ ಒಗ್ಗಟ್ಟು ಇರಲಿ ಎನ್ನುವ ಮಂತ್ರದಿಂದ ಹೋರಾಟ ನಡೆಸಿದ್ದ ಜ್ಞಾನಿಗಳ ದೇಶವನ್ನು ತಂತ್ರದಿಂದ ಮುಂದೆ ನಡೆಸುತ್ತಾ ಯಂತ್ರಮಾನವರ ಸೃಷ್ಟಿ ಹೆಚ್ಚಾಗಿದೆ. ಒಟ್ಟಿನಲ್ಲಿ ಯಾರ ಸಾಲವನ್ನೂ ಯಾರೂ ತೀರಿಸಲಾಗದು.ಅವರವರ ಆತ್ಮಜ್ಞಾನದಿಂದ ಮಾತ್ರ ಬಿಡುಗಡೆ ಸಾಧ್ಯ.ಋಣವನ್ನು ಸತ್ಕರ್ಮದಿಂದ,ಸದಾಚಾರ,ಸತ್ಯ,ಧರ್ಮ,ಸ್ವಾವಲಂಬನೆ, ಸರಳ ಜೀವನ,ಸ್ವಾಭಿಮಾನದಿಂದ ಸ್ವತಂತ್ರ ವಾಗಿದ್ದು ತೀರಿಸಿದ ಹಿಂದಿನ ಮಹಾತ್ಮರ ಜ್ಞಾನವನ್ನು ಅರ್ಥ ಮಾಡಿಕೊಳ್ಳಲು ಮಾನವರಿಗೆ ಜ್ಞಾನದ ಶಿಕ್ಷಣ ಬೇಕು. ಭೂಮಿಯಲ್ಲಿ ಧರ್ಮ ರಕ್ಷಣೆ ಜ್ಞಾನಿಗಳಿಂದಾಗಿತ್ತು. ಹಾಗಾದರೆ ಈಗೆಲ್ಲಿರುವರು ಜ್ಞಾನಿಗಳು? ಜ್ಞಾನಕ್ಕೆ ಬೆಲೆಯಿಲ್ಲ ಧರ್ಮಕ್ಕೆ ನೆಲೆಯಿಲ್ಲದೆ ಸಾಲ ಹನುಮಂತನಬಾಲದಂತೆ ಬೆಳೆಸಿಕೊಂಡು ಭೌತಿಕದಲ್ಲಿ ಶ್ರೀಮಂತ ರಾದರೆ ಅಧ್ಯಾತ್ಮ ದ ಪ್ರಕಾರ ಇದೇ ಅಧೋಗತಿಯ ಸಂಕೇತವೆನ್ನುವರು. ಸತ್ಯವೇ ದೇವರಾದರೆ ಸತ್ಯ ನುಡಿದು ದೇವರನ್ನು ಕಂಡವರೆಷ್ಟು ?
No comments:
Post a Comment