ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Saturday, August 27, 2022

ವಿದೇಶಿ ವ್ಯಾಮೋಹವೆ? ಸಾಲದ ಪ್ರಭಾವವೆ?

ವಿದೇಶಿ ವ್ಯಾಮೋಹವೇ? ವಿದೇಶಿ ಸಾಲದ ಪ್ರಭಾವವೆ?
ಮಕ್ಕಳು ಮೊಮ್ಮಕ್ಕಳವರೆಗೂ ಭೌತಿಕ ಆಸ್ತಿ ಮಾಡಿದವರ ಮಕ್ಕಳು ಮೊಮ್ಮಕ್ಕಳು ವಿದೇಶದೆಡೆಗೆ ಹೋಗುತ್ತಿರುವ ಸತ್ಯ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಕಾರಣವಿಷ್ಟೆ ವಿದೇಶಿ ಶಿಕ್ಷಣದ ಪ್ರಭಾವ ನಮ್ಮ ಸ್ವಾರ್ಥ ದ ಜೀವನಕ್ಕೆ ಮಾಡಿ
ಕೊಂಡ  ಆಸ್ತಿ ಅಂತಸ್ತು, ಅಧಿಕಾರದ ದಾಹ. ಇದನ್ನು  ತೀರಿಸಲು ಜನ್ಮ ಜನ್ಮಗಳೇ ಬೇಕು. ಹಾಸಿಗೆ ಇದ್ದಷ್ಟು ಕಾಲುಚಾಚು ಎನ್ನುವ ಹಿಂದಿನ ಉದ್ದೇಶ ನಿನ್ನ ಸಾಲವನ್ನು ನೀನು ತೀರಿಸಲು ಸರಳವಾಗಿ ಬದುಕು ಎಂದಾಗಿತ್ತು. ಆಸ್ತಿಯೇನೂ ಮಾಡಿದ್ದರೂ ಅನುಭವಿಸಲು ಮಕ್ಕಳು ಇಲ್ಲವಾದರೆ ಇದು ಸಮಾಜಕ್ಕಾದರೂ ತಿರುಗಿ ಕೊಟ್ಟು ಹೋಗುವ‌ಜ್ಞಾನವಿದ್ದರೆ ಕೆರೆಯ ನೀರನು ಕೆರೆಗೆ ಚೆಲ್ಲಿ ಎಂದ ಹಾಗಾಗುತ್ತದೆ. ದೇಶದ ಸಾಲ ತೀರಿಸಲು  ಸಾಧ್ಯವಾಗದವರು ವಿದೇಶದ ಸಾಲ ತೀರಿಸಲು ಹೊರಗೆ ಹೋಗಿ ದುಡಿಯಲೇ
ಬೇಕು ಆದರೆ ,ವಿದೇಶಕ್ಕೆ ಹೋದರೆ ದೊಡ್ಡ ಸಾಧನೆ ಎನ್ನುವ ಭ್ರಮೆ ಇಂದಿಗೂ  ಹೆಚ್ಚಾಗಿರೋದಕ್ಕೆ  ದೇಹಕ್ಕಾಗಲಿ,
ದೇಶಕ್ಕಾಗಲಿ   ಪ್ರಯೋಜನವಿಲ್ಲದ ಅಜ್ಞಾನವೇ 
ಮನುಕುಲವನ್ನು ಆಳುತ್ತಿದೆ. ಇಲ್ಲಿ ವಿದೇಶದೆಡೆಗೆ ಹೋಗಬಾರದೆಂಬುದಿಲ್ಲ.ಅನಿವಾರ್ಯ ಪರಿಸ್ಥಿತಿ ಅನೇಕರಲ್ಲಿದೆ.ಶಿಕ್ಷಣಕ್ಕೆ ಮಾಡಿಕೊಂಡ ಸಾಲ ತೀರಿಸಲು  ಹೆಚ್ಚು ಹಣ ಸಂಪಾದನೆ ಅಗತ್ಯ.ಇದು ಭಾರತದೊಳಗೇ ಸಿಕ್ಕಿದರೆ ‌ ದೂರ ಹೋಗುವ ಅಗತ್ಯವಿರಲಿಲ್ಲ.ಆದರೆ ಭಾರತದಲ್ಲಿ ಅಂತಹ  ಉದ್ಯೋಗ ಸಿಗುವುದು ಅಲ್ಪ ಮಂದಿಗಷ್ಟೆ. ವಿದೇಶಿಗರು ಜನರ ಬುದ್ದಿಶಕ್ತಿಯನ್ನು ಗಮನಿಸಿ ಭಾರತೀಯರನ್ನು ತಮ್ಮೆಡೆಗೆ ಎಳೆದುಕೊಂಡು ಬಳಸಿದರೆ, ಭಾರತೀಯರು ಹಣವನ್ನಷ್ಟೇ ನೋಡಿಕೊಂಡು  ಜನರನ್ನು ಬಳಸುತ್ತಾರೆ.ಹಾಗಾದರೆ ಜ್ಞಾನದ ಗತಿ ಏನು? ಸಾಮಾನ್ಯರೊಳಗೇ ಅಡಗಿರುವ ಅಸಮಾನ್ಯ ಜ್ಞಾನಕ್ಕೆ ತಕ್ಕಂತೆ ಶಿಕ್ಷಣ ನೀಡದೆ ಆಳಿದವರಿಂದ ದೇಶ ಉದ್ದಾರ
ವಾಯಿತೆ? ಮಹಾತ್ಮರ ದೇಶವನ್ನು ಯಾರು ಆಳುತ್ತಿದ್ದಾರೆ? ನಮ್ಮ ಮಕ್ಕಳೇ ಪರಕೀಯರಾದರೆ ಪರಕೀಯರು ನಮ್ಮವ
ರಾಗಲು ಸಾಧ್ಯವೆ? ಎಲ್ಲಾ ಪ್ರಶ್ನೆಗೆ ಉತ್ತರ  ಪೋಷಕರೆ ಕಂಡುಕೊಳ್ಳಲು ಆತ್ಮಜ್ಞಾನದ ಅಗತ್ಯವಿದೆ. ವೈಜ್ಞಾನಿಕ ವಾಗಿ ದೇಶವನ್ನು  ಬೆಳೆಸಿದ್ದರೂ ಆಂತರಿಕ ಶಕ್ತಿಯೇ ಕುಸಿದರೆ ಕಷ್ಟ ನಷ್ಟ ತಪ್ಪಿದ್ದಲ್ಲ.
ಮಕ್ಕಳು ವಿದೇಶದಲ್ಲಿದ್ದರೆ ಪೋಷಕರು ವೃದ್ದಾಶ್ರಮದಲ್ಲಿ ತಮ್ಮ ಕೊನೆಉಸಿರೆಳೆಯುವುದರಲ್ಲಿ ಯಾವಧರ್ಮ ಅಡಗಿದೆ?
ಇದಕ್ಕೆ ಕಾರಣಕರ್ತರು ಪೋಷಕರೆ ಆದಾಗ ಇದನ್ನು ಸರ್ಕಾರ ಸರಿಪಡಿಸಬಹುದೆ? ಸರಿಪಡಿಸಬೇಕಾದರೆ ಒಂದು ಕಾನೂನು ತರಬೇಕಿದೆ. ವಿದೇಶದಲ್ಲಿರುವ ಸ್ವದೇಶಿಗಳ ಆಸ್ತಿ ಪಾಸ್ತಿಗೆ ಒಂದು ಚೌಕಟ್ಟು ಹಾಕಿ ಮಿತಿ ಮೀರಿದ್ದರೆ  ಸರ್ಕಾರದ ವಶವಾದರೆ ಆ ಆಸ್ತಿ ರಕ್ಷಣೆಗಾಗಿಯಾದರೂ ತಿರುಗಿ ಬಂದು ದೇಶದಲ್ಲಿ ಸೇವೆ ಮಾಡಲು ಸಾಧ್ಯವಾಗಬಹುದು.ಯಾಕೆ? ಆಸ್ತಿ ಬೇಕು  ದೇಶ ಬೇಡ, ಪೋಷಕರು ಬೇಡ? ಈ ಅಜ್ಞಾನಕ್ಕೆ ಕಾರಣವೇ ವಿದೇಶಿ  ಶಿಕ್ಷಣ ನೀತಿ. ಅಲ್ಲಿರುವ ವೈಭವದ ಜೀವನ ಶೈಲಿ. ಆದರೆ ಇದರಿಂದಾಗುತ್ತಿರುವ   ಕಷ್ಟ ನಷ್ಟ ಸರ್ಕಾರ ಭರಿಸಲಾಗದು.  ಧರ್ಮ, ಸಂಸ್ಕೃತಿ, ಭಾಷೆ,ಶಿಕ್ಷಣ ನಮ್ಮ ದೇಶದೊಳಗಿದ್ದು ಬೆಳೆಸುವುದೇ ಬೇರೆ.ಹೊರಗಿದ್ದು ಬೆಳೆಸುವುದೇ ಬೇರೆ.ದೇಶದೊಳಗಿರುವ ಪ್ರಜೆಗಳಿಂದಲೇ ದೇಶದ ಭವಿಷ್ಯವಿರೋದು ಹೊರಗಿರುವವರಿಂದಲ್ಲ.
ಹೀಗಿರುವಾಗ ಹೊರಗಿನವರಿಗೆ ಯಾಕೆ ದೇಶದಲ್ಲಿ ಆಸ್ತಿ ಮಾಡಿಡಬೇಕು? ಒಟ್ಟಿನಲ್ಲಿ ಅಧರ್ಮದೆಡೆಗೆ ಹೋದವರನ್ನು ರಾಜಕೀಯವಾಗಿ ಬೆಳೆಸಿಕೊಂಡು  ನಡೆಸಿದ್ದಷ್ಟೂ ಸಂಕಷ್ಟಗಳಿಂದ ಬಿಡುಗಡೆ ಯಿಲ್ಲ.
ಒಂದು ಮಗುವಿಗೆ ಎರಡು ಮೂರು ಮನೆ? ಸಾಮಾನ್ಯಜ್ಞಾನ ಬೇಕಷ್ಟೆ. ಎಷ್ಟು ಹೊರಗಿನಿಂದ ಪಡೆದರೂ ಸಾಲದ ಹೊರೆಯೇ  ಇದನ್ನು ತೀರಿಸದೆ ಜೀವಕ್ಕೆ ಮುಕ್ತಿ ಯಿಲ್ಲವೆನ್ನಬಹುದು.ಪುರಾಣ,ಇತಿಹಾಸದ ಕಥೆಯಲ್ಲಿ ಇದನ್ನು ತಿಳಿಯಲಾಗದು.ಮೊದಲು ಸಾಮಾನ್ಯಜ್ಞಾನದಿಂದ ಸರಳವಾಗಿ ಸಾಮಾನ್ಯಸತ್ಯವನ್ನು ಅರ್ಥ ಮಾಡಿಕೊಂಡರೆ ವಿಶೇಷ ಜ್ಞಾನದ ಒಳಗಿರುವ ರಾಜಕೀಯವೂ ಅರ್ಥ ವಾಗುತ್ತದೆ. ಹಾಗೆಯೇ ರಾಜಯೋಗವೂ ಅರ್ಥ ವಾಗುತ್ತದೆ. ಸಾಲವಿಲ್ಲದೆ ಜನ್ಮವಿಲ್ಲ.ಸಾಲ ತೀರದೆ  ಜೀವಕ್ಕೆ ಮುಕ್ತಿ ಯಿಲ್ಲ
ಹಾಗಾದರೆ ಸಾಲ ಯಾರದ್ದು ಅವರ ಹಿಂದಿನ  ಉದ್ದೇಶವೇನು? ಯಾರ ಹಿಂದೆ ನಡೆದಿದ್ದೇವೆ? ಎಲ್ಲಿಗೆ ಹೋಗುತ್ತಿದೆ ಜೀವ? ಅಲ್ಲಿರುವುದು ನಮ್ಮನೆ ಇಲ್ಲಿ ಬಂದೆ ಸುಮ್ಮನೆ ಎಂದರೆ ಮೂಲದ ಮನೆ ಬಿಟ್ಟು ಹೊರಗೆ ಹೋದಷ್ಟೂ ತಿರುಗಿ ಬರೋದು ಕಷ್ಟ.
ಈ ಕಾರಣಕ್ಕಾಗಿ ಹಿಂದಿನ ಕಾಲದಲ್ಲಿ ಅವರವರ ಮೂಲ ಧರ್ಮ ಕರ್ಮ ಬಿಡದೆ ಒಗ್ಗಟ್ಟಿನಿಂದ ಒಂದೇ ಸ್ಥಳದಲ್ಲಿ ಅವರವರ ಶಿಕ್ಷಣ ಪಡೆದು ನೆಮ್ಮದಿಯಿಂದ ಜೀವನ ನಡೆಸುತ್ತಾ ಧರ್ಮ ರಕ್ಷಣೆ ಆಗಿತ್ತು.ಈಗ ಗುರು ಹಿರಿಯರೇ  ದೂರ ಹೋಗುತ್ತಿರುವಾಗ ಅವರ ಅನುಚರರ ಗತಿಯೇನು?  ಕಾಲದ ಪ್ರಭಾವ,  ಜ್ಞಾನ ಸದ್ಬಳಕೆ ಮಾಡಿಕೊಂಡರೆ ದಾನ ಧರ್ಮಕ್ಕೆ  ಬಳಕೆಯಾಗುತ್ತದೆ.ಋಣ ತೀರುತ್ತದೆ. ಆದರೆ ಹಣಸಂಪಾದನೆಯೇ ಅಜ್ಞಾನದಿಂದಾದರೆ ಅದನ್ನು ದಾನ ಧರ್ಮಕ್ಕೆ ಬಳಸಿದರೆ ಅಧರ್ಮಕ್ಕೆ ಜಯ. ಇದೊಂದು ಸಾಮಾನ್ಯ ಜ್ಞಾನವಷ್ಟೆ.ಮಾನವನ ಜೀವನ ಒಂದು ಚದುರಂಗದಾಟದಂತೆಇಲ್ಲಿ ಕಾಲಾಳುಗಳೂ ರಾಜನನ್ನು ಮತ್ತೆ ಬದುಕಿಸಬಹುದು.ಪ್ರಜಾಪ್ರಭುತ್ವದ ಭಾರತದಲ್ಲಿನ ಪ್ರತಿಯೊಬ್ಬ ಪ್ರಜೆಯೂ  ಕಾಲಾಳುಗಳೇ ಆದರೆ  ಅವರಿಗೆ ಗೊತ್ತಿಲ್ಲ ನಮ್ಮಲ್ಲಿಕ್ಷತ್ರಿಯಗುಣವಿದೆಯೆಂದು.ದೇಶರಕ್ಷಣೆಗಾಗಿ ಹೊರಗಿನ ಹೋರಾಟಕ್ಕಿಂತ ಒಳಗಿನ ಹೋರಾಟ ಅತಿಮುಖ್ಯ.ನಮ್ಮತನ ನಮ್ಮಧರ್ಮ, ನಮ್ಮ ದೇಶವನ್ನು ನಮ್ಮದೇ ಜ್ಞಾನದ ಶಿಕ್ಷಣದಿಂದ ಬೆಳೆಸುವುದಕ್ಕೆ ವಿದೇಶದವರೆಗೆ ಹೋಗುವ ಅಗತ್ಯವಿದೆಯೆ? ಹೋಗುವುದಕ್ಕೆ ಸುರಿಯುತ್ತಿರುವ ಲಕ್ಷಾಂತರ ರೂಗಳು ದೇಶದ ಸಾಲವಲ್ಲವೆ? ಈ ಸಾಲ ತೀರಿಸಲು ಮತ್ತೆ ಬರಲೇಬೇಕಷ್ಟೆ? ಇದೇ ಹಣವನ್ನು ಸದ್ಬಳಕೆ ಮಾಡಿಕೊಂಡು ಸ್ವತಂತ್ರ ಜೀವನ ನಡೆಸುವ ಜ್ಞಾನವಿಲ್ಲವೆ? ಕೆಲವರಿದ್ದಾರೆ ಅವರಿಂದ ದೇಶ ನಡೆಯುತ್ತಿದೆ. ಆದರೆ ಸಾಕಷ್ಟು ಜನರ ಆಸ್ತಿ ಇಲ್ಲಿ ಕೊಳೆಯುತ್ತಿದೆ. ಇದರ ಬಗ್ಗೆ ಸರ್ಕಾರ ಚಿಂತನೆ ನಡೆಸಿದರೆ ಮುಂದಿನ ದಿನಗಳಲ್ಲಿ ಅಂತಹ ಬುದ್ದಿವಂತರಿಗೆ ದೇಶದೊಳಗೇ ಉದ್ಯೋಗ ಸೃಷ್ಟಿ ಮಾಡಬಹುದು
ಆದರೆ ವಿದೇಶಿಗಳ ಕೈ ಕೆಳಗೆ ದುಡಿಯುವಂತಾಗಬಾರದು. ಮೂಲ ಕರ್ಮಕ್ಕೆ ತಕ್ಕಂತೆ ಶಿಕ್ಷಣ ನೀಡಿದರೆ ಆತ್ಮನಿರ್ಭರ ಭಾರತ ಸಾಧ್ಯ. ಈಗಾಗಲೇ ಎಷ್ಟೋ ಮಕ್ಕಳಿಗೆ ಸಾಲ  ನೀಡಿ ಬೆಳೆಸಲಾಗಿದೆ.ಆ ಸಾಲ ತೀರಿಸಲು ಕಷ್ಟಪಟ್ಟು ದೇಶದಲ್ಲಿದ್ದೇ ದುಡಿದರೆ ದೇಶವೂ ಸುರಕ್ಷಿತ ಜೀವಕ್ಕೂ ತೃಪ್ತಿ, ಮುಕ್ತಿ. ಇಂತಹ ಲೇಖನಗಳನ್ನು ಯಾರೂ ಇಷ್ಟಪಡೋದಿಲ್ಲ.ಕಾರಣ ಇದರೊಳಗಿರುವ ಸ್ವಾವಲಂಬನೆ, ಸರಳ ಜೀವನ,ಸತ್ಯ,
ಧರ್ಮ,ಸ್ವಾಭಿಮಾನ ಸ್ವತಂತ್ರ ಜೀವನ  ನಡೆಸುವವರನ್ನು ಸಮಾಜವೇ ತಿರಸ್ಕರಿಸಬಹುದೆನ್ನುವ ಬಾವನೆ ಹೆಚ್ಚಾಗಿ ಪರಾವಲಂಬಿಗಳು ಬೆಳೆದಿದ್ದಾರೆ. ಒಂದು ಸತ್ಯ ಜೀವಾತ್ಮ ಪರಮಾತ್ಮನೆಡೆಗೆ ಹೋಗಲು ಸಾಲ ತೀರಿಸಲೇಬೇಕು. ಅದೂ ತಂದೆ ತಾಯಿ,ಬಂದುಬಳಗ,ಗುರು, ದೇಶ ಭೂಮಿ  ಹೀಗೇ
ಮುಂದೆ ಮುಂದೆ ಬೆಳೆದಂತೆಲ್ಲಾ ತಿರುಗಿ ಬರಲಾಗದೆ ದಾರಿತಪ್ಪಿದ ಮಗನಾಗೋದು ಸತ್ಯ. ನಾನೆಷ್ಟು ಹಣಸಂಪಾದಿಸಿದರೂ ಸತ್ಯಜ್ಞಾನವಿಲ್ಲದೆ  ಸಾಲ ತೀರಿಸೋದು ಕಷ್ಟ. ಹೀಗಾಗಿ ಸತ್ಯ ಧರ್ಮ ದಿಂದ ಮಹಾತ್ಮರುಗಳು  ಪರಮಾತ್ಮನೆಡೆಗೆ ಸಾಗಿದ್ದರು.ಈಗಿನ‌ ಪರದೇಶ ಪರಮಾತ್ಮನ ದರ್ಶನ ಮಾಡಿಸುವುದೆ? ಸತ್ಯವಾಗಿಯೂ ದೂರದ ಬೆಟ್ಟ ನುಣ್ಣಗೆ ಎನ್ನುತ್ತಾರೆ. ಅಲ್ಲಿದ್ದವರು ಇಲ್ಲಿದ್ದವರನ್ನು ಅಧೃಷ್ಟವಂತರೆನ್ನಲು ಜ್ಞಾನಿಗಳಿಗಷ್ಟೆ ಸಾಧ್ಯ.ಜ್ಞಾನವಿದ್ದವರು ಅಲ್ಲಿಯವರೆಗೆ ಹೋಗುತ್ತಿರಲಿಲ್ಲ. ಆದರೆ ಈಗ  ಹೋಗುತ್ತಿರುವುದೇ ಜನರಿಗೆ ಸಮಸ್ಯೆಯಾಗುತ್ತಿದೆ. ಹಿಂದೂ ಧರ್ಮ  ಎಲ್ಲೆಡೆಯೂ ಇದೆ.ಆದರೆ ಭಾರತದಲ್ಲಿ ಹಿಂದುಳಿಯುತ್ತಿದೆ. ಮೂಲ ಬಿಟ್ಟು ಹೊರಗೆ ನಡೆದವರೆ ಹೆಚ್ಚು.ಹೊರಗಿನಿಂದ ಒಳಗೆ ಬಂದವರಲ್ಲಿ ಹಿಂದಿನ ಸತ್ಯದ ಅರಿವಿಲ್ಲ. ನಮ್ಮ ಹಿಂದಿನವರ ಸತ್ಯಜ್ಞಾನ ಬಿಡದೆ ನಡೆದರೆ ಹಿಂದೂಧರ್ಮ ರಕ್ಷಣೆ
ಯಾಗುತ್ತದೆ.ಇದನ್ನು ಇತರ ಧರ್ಮದವರು ಮಾಡಿದ್ದಾರೆ.ಆದರೆ ಅವರಲ್ಲಿ  ಸತ್ಯದ ಅರಿವಿಲ್ಲವಷ್ಟೆ. ಧರ್ಮ ಸೂಕ್ಷ್ಮ ವನ್ನರಿಯಲು ಆಂತರಿಕ ಶುದ್ದಿ ಅಗತ್ಯ. 
ಈ ಕಾರಣಕ್ಕಾಗಿಯೇ ಹಿಂದೆ ಅವರವರ ಜನ್ಮ ಸ್ಥಳ, ಮೂಲ ಧರ್ಮ ಶಿಕ್ಷಣ ಅದಕ್ಕೆ ತಕ್ಕಂತೆ ಕಾಯಕ ತತ್ವದರ್ಶನದಿಂದ  ಜನರಲ್ಲಿ ದೈವೀಕ  ಜ್ಞಾನ ಬೆಳೆಸುವತ್ತ ಶಿಕ್ಷಣವಿತ್ತು. ದೂರದ ದೇಶದವರನ್ನು ಪರದೇಶಿಗಳೆಂದು ಪರಕೀಯರೆಂದು ಕರೆದು ಹತ್ತಿರಬರದಂತೆ ನೋಡಿಕೊಂಡಿದ್ದರು. ಆದರೆ ಕಾಲ ಬದಲಾದಂತೆ  ಭೌತಿಕಾಸಕ್ತಿ ಹೆಚ್ಚಾಗಿ ಪರಕೀಯರ  ಕಡೆಗೆ ಶಿಕ್ಷಣ ನಡೆಯುತ್ತಾ  ಹಿಂದಿನ ಸತ್ವ,ಸತ್ಯ,ಧರ್ಮವು ಬೇರೆ ಆಗಿ  ಅಂತರ ಬೆಳೆಯಿತು. ಅಂತರದಲ್ಲಿ  ಅಜ್ಞಾನದ ವ್ಯವಹಾರ ಹೆಚ್ಚುತ್ತಾ ಸರಸ್ವತಿಗಿಂತ ಮೊದಲೇ ಲಕ್ಮಿ ಯ ಹಿಂದೆ ನಡೆದವರ ಹಿಂದೆ ನಡೆಯುತ್ತಾ ಸಮಾಜದಲ್ಲಿ ಅಸಮಾನತೆ,ಅಸಹಿಷ್ಣುತೆ,ಹಿಂಸೆ, ಅಧರ್ಮ ವೇ ತನ್ನ ಸ್ಥಾನ ಭದ್ರಗೊಳಿಸಿಕೊಂಡು ಮನುಕುಲದ ದಾರಿ ತಪ್ಪಿ ನಡೆಯಿತು. ದೇಹವಿರುವಾಗಲೇ ಒಳಗಿನ ಜೀವಾತ್ಮನಿಗೆ ಪರಮಾತ್ಮನ ದರ್ಶನ ವಾದರೆ ಅದೇ ಮುಕ್ತಿ. ಇದಕ್ಕಾಗಿ ಒಳಗೆ ಶುದ್ದ ಮಾಡಿಕೊಳ್ಳಲು ಸಾಧ್ಯವಾದಷ್ಟು ಸಾಲದಿಂದ ದೂರವಾಗಿ ಸತ್ಯದೆಡೆಗೆ ಧರ್ಮ ದೆಡೆಗೆ ನಡೆದವರೆ ಮಹಾತ್ಮರುಗಳು. ಇದನ್ನು ಬಿಟ್ಟು ಹೊರನಡೆದರೆ  ಅಂತರದಲ್ಲಿ ಮಧ್ಯವರ್ತಿಗಳು ನಿಂತು ಆಟವಾಡಿಸುವುದು ಸಹಜ.ಈಗ  ಮಾಧ್ಯಮವಾಗಲಿ,ಮಧ್ಯವರ್ತಿಗಳಾಗಲಿ ವ್ಯವಹಾರ ಬಿಟ್ಟು ಯೋಚಿಸಲು ಸಾಧ್ಯವೆ? ವ್ಯವಹಾರದಲ್ಲಿ ಲಾಭ ಬಿಟ್ಟು ನಡೆಸಬಹುದೆ.ಲಾಭ ಹೆಚ್ಚಲು ಅಸತ್ಯ ದಿಂದ ಮಾತ್ರ ಸಾಧ್ಯ. ಸತ್ಯವೇ ದೇವರಾದಾಗ ಅಸತ್ಯ ಯಾರು? ನಾವು ಯಾರ ಹಿಂದೆ ನಡೆದಿದ್ದೇವೆ.ಎಲ್ಲಿಗೆ ಹೋಗುತ್ತೇವೆ? ಇದರ ಬಗ್ಗೆ ಧಾರ್ಮಿ ಕ ಚಿಂತಕರು ಆತ್ಮಾವಲೋಕನ ಮಾಡಿಕೊಳ್ಳಲು ಸಮಯವಿದೆ. ತತ್ವಕ್ಕೂ ತಂತ್ರಕ್ಕೂ ವ್ಯತ್ಯಾಸವಿಲ್ಲವೆ? ರಾಜಯೋಗಕ್ಕೂ ರಾಜಕೀಯಕ್ಕೂ   ವ್ಯತ್ಯಾಸವಿಲ್ಲವೆ? ದೇವರಿಗೂ ಅಸುರರಿಗೂ ವ್ಯತ್ಯಾಸವಿಲ್ಲವೆ? ಭೂಮಿಯ ಮೇಲಿರುವಾಗ ಎಲ್ಲಾ ಮಾನವರೆ.ಅವರೊಳಗಿರುವ ತತ್ವ ಹಾಗು ತಂತ್ರದ. ಆಧಾರದಲ್ಲಿದೆ ಅವರವರ ಜೀವನ.ಒಟ್ಟಾರೆ ಒಬ್ಬರನ್ನೊಬ್ಬರು ಅವಲಂಬಿಸಿ ನಡೆಯುವಾಗ  ಎಚ್ಚರಿಕೆ ಅಗತ್ಯವೆನ್ನಬಹುದಷ್ಟೆ.ಜ್ಞಾನವಿಲ್ಲದವರಿಗೆ ಜ್ಞಾನವಿದ್ದವರು ತಿಳಿಸಿ ಕಲಿಸಬೇಕು. ಹಣವಿದ್ದವರಿಗೂ ಜ್ಞಾನ ಕೊಟ್ಟು ಹಣ ಸಧ್ಬಳಕೆ ಮಾಡಿಕೊಳ್ಳಲು ಸಹಕರಿಸಬೇಕು. ಇದಕ್ಕಾಗಿ ಜ್ಞಾನಿಗಳೇ ದೇಶದ ಆಸ್ತಿ.ಜ್ಞಾನವೇ ಮಾನವನ ಆಸ್ತಿ.  

No comments:

Post a Comment