ಭಾರತದೊಳಗಿದ್ದವರೆಲ್ಲರೂ ಭಾರತೀಯ ಎನ್ನಿಸಿಕೊಳ್ಳಲು ದೇಶಭಕ್ತಿ ಅಗತ್ಯ.ಹಾಗೇ ಶ್ರೀ ಕೃಷ್ಣ ತತ್ವ,ಶ್ರೀ ರಾಮತತ್ವವನ್ನರಿತು ನಡೆದವರಷ್ಟೆ ಭಕ್ತರಾಗಬಹುದು.ದೈವ ಗುಣವಿಲ್ಲದೆ ದೇವರ ಭಕ್ತರಾಗಬಹುದೆ?
ಹೆತ್ತವರಿಲ್ಲದ ಜೀವವಿಲ್ಲ. ಭೂಮಿಯಲ್ಲಿ ಜನ್ಮ ತಾಳುವುದಕ್ಕೆಕಾರಣರಾದವರೆ ತಾಯಿತಂದೆ. ಜೀವನ ನಡೆಸಲು ಉತ್ತಮ ಸಮಾಜದ ಅಗತ್ಯವಿದೆ.ಉತ್ತಮ ಸಮಾಜ ನಿರ್ಮಾಣ ಉತ್ತಮ ಶಿಕ್ಷಣದಿಂದ ಮಾತ್ರ ಸಾಧ್ಯ. ಅದೇ ಸಿಗದಿದ್ದರೆ ?
ದೇಶದೊಳಗೆ ದೇಹವಿದೆ ಮನಸ್ಸು ಹೊರಗಿದೆ, ಹಾಗೆಯೇ ಮಾನವನ ಜೀವವೂ ಪರಮಾತ್ಮನೊಳಗಿದ್ದರೂ ಮನಸ್ಸು ಪರಮಾತ್ಮನಲ್ಲಿಲ್ಲ ಇದನ್ನು ಕಂಡುಕೊಳ್ಳಲು ಆಂತರಿಕ ಜ್ಞಾನ ಬೇಕಷ್ಟೆ. ಆಂತರಿಕ ಶುದ್ದಿಯಿಂದ ಆತ್ಮಜ್ಞಾನ.
**ನಾನು ಮೊದಲು ಭಾರತೀಯ, ಕೊನೆಗೂ ಭಾರತೀಯ. ಭಾರತೀಯನಲ್ಲದೆ ಮತ್ತೇನೂ ಅಲ್ಲ' **
-ಡಾ. ಬಿ. ಆರ್.
No comments:
Post a Comment