ಸಿದ್ದಿಪುರುಷರಿಗೂ ಪ್ರಸಿದ್ದಿ ಪುರುಷರಿಗಿರೋ
ವ್ಯತ್ಯಾಸವೆಂದರೆ,ಒಂದು ಅನುಭವದ ಜ್ಞಾನಿ
ಇನ್ನೊಂದು ಅನುಭವವಿಲ್ಲದ ಪ್ರಸಿದ್ದರಾದ ಜ್ಞಾನಿ.
ನಮ್ಮಲ್ಲಿ ಸಿದ್ದಿ ಪಡೆದವರ ಹೆಸರಲ್ಲಿ ಪ್ರಸಿದ್ದರಾದವ
ರ ಸಂಖ್ಯೆ ಹೆಚ್ಚು.ಸಿದ್ದಿಯನ್ನ ಪ್ರಚಾರಮಾಡೋದು
ಪ್ರಸಿದ್ದರು.ಇದರಿಂದ ಪೂರ್ಣಧರ್ಮ,ಪೂರ್ಣಸತ್ಯ
ಇಲ್ಲದೆ ವ್ಯವಹಾರದ ರಾಜಕೀಯ ಹೆಚ್ಚಾಗಿದೆ.ಇಂದು
ಸ್ವಾವಲಂಬನೆಗೆ ಬದಲು ಪರಾವಲಂಬನೆ ಹೆಚ್ಚು.
ಹಾಗೆ ಜ್ಞಾನವಿಲ್ಲದೆ ಸಾಲ ಬೆಳೆಯುತ್ತದೆ ಕರ್ಮವಿಲ್ಲದ ಧರ್ಮಪ್ರಚಾರ.ಪುರಾಣ ಇತಿಹಾಸದ ರಾಜಪ್ರಭುತ್ವದ ರಾಜಕೀಯದಲ್ಲಿ ಧರ್ಮ ವಿತ್ತು.ಇಂದು ಧರ್ಮದ ಹೆಸರಲ್ಲಿ ರಾಜಕೀಯ ಬೆಳೆದು ಸಿದ್ದಾಂತ ಗಳು ಪ್ರಸಿದ್ದಿ ಪಡೆದರೂ ಮೂಲದ ಸಿದ್ದ ಪುರುಷರ ಜ್ಞಾನ ಪಡೆಯಲಾಗಿಲ್ಲ.
No comments:
Post a Comment