ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Thursday, August 18, 2022

ಮಾನವನ ಶತ್ರು ಹೊರಗಿಲ್ಲ ಒಳಗಿರೋದು.

ತನಗೆ ತಾನೇ ಮೋಸ ಹೋಗುವುದರಲ್ಲಿ ನಿಸ್ಸೀಮನೆಂದು ಮಾನವನಿಗೆ ಹೇಳುತ್ತಾರೆ. ಕಾರಣವಿಷ್ಟೆ ಭೂಮಿಯಲ್ಲಿ ಜನ್ಮ ಪಡೆಯಲು ಮೂಲ ಕಾರಣವೆ ಜೀವನ್ಮುಕ್ತಿ ಎನ್ನುವುದು ನಿರ್ವಿವಾದದ ಸತ್ಯ. ಜೀವಕ್ಕೆ ಮುಕ್ತಿ ಸಿಗಬೇಕಾದರೆ ಆ ಪರಾಶಕ್ತಿ ಪರಮಾತ್ಮನ ಸತ್ಯವನ್ನು ಅರ್ಥ ಮಾಡಿಕೊಳ್ಳಲು ಸತ್ಯದೆಡೆಗೆ ನಡೆಯಬೇಕು ಎನ್ನುವುದಾದರೆ  ಕಲಿಯುಗದಲ್ಲಿ
ಇದು ಎಷ್ಟರ ಮಟ್ಟಿಗೆ ಸಾಧ್ಯ? ಸಾಧ್ಯವಿಲ್ಲ ಎನ್ನುವವರ ಹಿಂದೆ ನಡೆದವರನ್ನೂ ಮೀರಿ ಸಾಧ್ಯವಾಗಿಸಿಕೊಂಡವರೂ ಕೆಲವರಿದ್ದರೂ ಅವರನ್ನು ಬಿಟ್ಟು ಸಾಧ್ಯವಿಲ್ಲ ಎನ್ನುವವರ ಹಿಂದೆ  ನಿಂತು ನೋಡುವವರೆ ಹೆಚ್ಚು. ನಮಗಿಂತ ಶ್ರೀಮಂತ
ವ್ಯಕ್ತಿಯಲ್ಲಿ ಹಣವಿದ್ದರೂ ಗುಣದ ಅಭಾವವಿರುತ್ತದೆ.ಇಲ್ಲ ಹಣವೂ ನಮ್ಮ ಪಾಲಿನದೇ ಆಗಿದ್ದು ಅದರಲ್ಲಿ ಸ್ವಲ್ಪ ಕೊಟ್ಟು
ಆಳುವುದರಿಂದ ಪರಮಾತ್ಮನೆಡೆಗೆ ಜೀವ ನಡೆಯಬಹುದೆ?
ಅಗೋಚರ ಶಕ್ತಿಯನ್ನು ತೋರಿಸಲಾಗದು ಅನುಭವಿಸಿಯೇ
ಕಾಣಬೇಕು. ಹೊರಗೆ  ನೋಡುತ್ತಾ ಒಳಗಿನ ಶಕ್ತಿ ಬೆಳೆದರೆ ಉತ್ತಮ. ಒಳಗಿನ ಶಕ್ತಿಯೇ ಹಿಂದುಳಿದು ನಾನು ಬೆಳೆದರೆ?
ಹಾಗಂತ ಎಲ್ಲಿ ಸಹಕಾರವಿದೆಯೋ ಅಲ್ಲಿ ಬೆಳವಣಿಗೆಯಿದೆ.
ಸಹಕಾರ ಯಾವುದಕ್ಕೆ ಕೊಡಬೇಕೆಂಬ ಜ್ಞಾನ ಮಾನವನಿಗೆ
ಇದ್ದರೆ ಮನುಕುಲದ ಏಳಿಗೆಯಾಗುತ್ತದೆ. 
ಏನನ್ನು  ಕೊಡುವೆವೋ,ಬೇಡುವೆವೋ,ಮಾಡಿ ತಿಳಿಯುವೆವೋ ,ಓದುವೆವೋ ಪ್ರಚಾರಮಾಡುವೆವೋ ಅದು ತಿರುಗಿ ಬರುತ್ತದೆ. ಒಳ್ಳೆಯದು ಕೆಟ್ಟದ್ದು  ಕಣ್ಣಿನಿಂದ ಅಳೆಯದೆ ಅಂತರಾಳದಿಂದ ತಿಳಿಯೂ ಪ್ರಯತ್ನದಲ್ಲಿ  ಮಾನವನ‌ ಸೋಲು ಗೆಲುವು ಅಡಗಿದೆ .ಅಧ್ಯಾತ್ಮ ಸತ್ಯ ಕಾಣಲ್ಲ.ಭೌತಿಕ ಮಿಥ್ಯ ಕಾಣುತ್ತದೆ ಬೆಳೆಯುತ್ತದೆ.
ಹಿಂದಿನ ಮಹಾತ್ಮರು ಅಧ್ಯಾತ್ಮದತ್ತ ನಡೆದು ಜ್ಞಾನ ಪಡೆದರು.

No comments:

Post a Comment