ಉಳಿತಾಯ ಎಂದರೆ ಉಳಿಸುವುದಾಗುತ್ತದೆ. ಬೌತಿಕ
ಉಳಿತಾಯಕ್ಕೂ ಆಧ್ಯಾತ್ಮದ ಉಳಿತಾಯಕ್ಕೂ ವ್ಯತ್ಯಾಸ
ಬಹಳವಿದೆ. ಬೌತಿಕದಲ್ಲಿ ಹಣವನ್ನು ಉಳಿಸಿ,ಆಪತ್ತಿನಲ್ಲಿ
ಬಳಸುವುದು ಉಳಿತಾಯವಾದರೆ, ಆಧ್ಯಾತ್ಮ ಜಗತ್ತಿನಲ್ಲಿ ಜ್ಞಾನವನ್ನು ಉಳಿಸಿ ಬೆಳೆಸಬೇಕಿದೆ. ಹಣ ಸಂಪಾದನೆಯನ್ನು ಜ್ಞಾನದಿಂದ ಮಾಡುತ್ತಾ ಧರ್ಮ ಕರ್ಮಕ್ಕೆ ತಕ್ಕಂತೆ ಜೀವನವನ್ನು ಸರಳವಾಗಿ ಸ್ವಚ್ಚವಾಗಿ
ಜೀವನ ನಡೆಸಿ ಧರ್ಮವನ್ನು ಉಳಿಸಿಕೊಳ್ಳಲು ಸಾಕಷ್ಟು
ಕಷ್ಟಪಡುತ್ತಿದ್ದ ಹಿಂದಿನ ಮಹಾತ್ಮರನ್ನು ನಾವೀಗ ಉಳಿಸಲು ಅವರ ತತ್ವವನ್ನು ನಮ್ಮಲ್ಲಿ ಅಳವಡಿಸಿಕೊಂಡರೆ ಸಾಕು ನಾವು ಉಳಿದಂತೆಯೆ.
ಆದರೆ, ಪ್ರತಿಯೊಬ್ಬರಲ್ಲಿಯೂ ಒಂದಲ್ಲ ಒಂದು ವಿಶೇಷ ಜ್ಞಾನವಿದೆ. ಅದನ್ನು ಗುರುತಿಸುವ ಕೆಲಸ ಗುರು ಹಿರಿಯರು ಮಾಡಿ ಅದಕ್ಕೆ ತಕ್ಕಂತೆ ಶಿಕ್ಷಣ ನೀಡುವುದರಿಂದ ಮಾತ್ರ ಇದು ಸಾಧ್ಯವಿದೆ. ಭೂಮಂಡಲದ ಮೇಲಿರುವ ಚರಾಚರದಲ್ಲಿಯೂ ಅಡಗಿರುವ ಅಣು,ಪರಮಾಣುಗಳು ಕಣ್ಣಿಗೆ ಕಾಣದಿದ್ದರೂ ಹೇಗೆ ಜ್ಞಾನಿವಿಜ್ಞಾನಿಗಳು ಅದನ್ನು ಗುರುತಿಸಿ ಬಳಸಿಕೊಂಡು ಮನುಕುಲ ನಡೆದಿದೆಯೋ
ಹಾಗೆಯೇ ಅದರಲ್ಲಿ ಒಂದು ಸಣ್ಣ ಶಕ್ತಿ ಪ್ರತಿಯೊಬ್ಬರಲ್ಲಿಯೂ ತನ್ನದೇ ಆದ ವಿಶೇಷ ಶಕ್ತಿಯನ್ನು
ಹೊಂದಿದ್ದು ಜೀವಾತ್ಮನಾಗಿ ಪರಮಾತ್ಮನ ಸೇರಲು ಬಯಸಿರುತ್ತದೆ. ಆದರೆ, ಅಜ್ಞಾನದಿಂದ ಅದನ್ನು ತಿಳಿಯದೆ ಉಳಿತಾಯವನ್ನು ಬೌತಿಕದಲ್ಲಷ್ಟೇ ಮಾಡಿ
ಹೆಚ್ಚು ಹೆಚ್ಚು ಹಣ ಸಂಪಾದಿಸುತ್ತಾ ಮುಂದೆ ನಡೆದರೆ
ಪರರ ಹಣ ಸಾಲವಾಗುತ್ತದೆ. ಇದನ್ನು ತೀರಿಸಲು ಪರಮಾತ್ಮನ ಸೇವೆ ನಿಸ್ವಾರ್ಥ ನಿರಹಂಕಾರದಿಂದ ಮಾಡಿ ದಾನ,ಧರ್ಮದ ಕಡೆ ನಡೆಯುವುದರಿಂದ ನಮ್ಮ
ಜೀವಕ್ಕೆ ಮುಕ್ತಿ ಎಂದರು. ಇಂತಹ ವಿಚಾರಗಳು ಭಾರತ
ದೇಶದಪುರಾಣ,ಇತಿಹಾಸಗಳಿಂದಷ್ಟೆ ಅಲ್ಲದೆ ವೇದಗಳ ಕಾಲದಲ್ಲಿಂದಲೂ ಪ್ರಚಾರವಾಗುತ್ತಲೇ ಬಂದಿದೆ. ಆದರೆ
ಬೌತಿಕಾಸಕ್ತಿ ಹೆಚ್ಚಾಗಿ ವಿಜ್ಞಾನ ಜಗತ್ತಿನಲ್ಲಿ ಉಳಿತಾಯದ ವ್ಯವಹಾರದಲ್ಲಿ ಕೇವಲ ಲಾಭ ನಷ್ಟವನ್ನು
ಹಣದಿಂದ ಅಳೆಯುತ್ತಾ ಒಳಗಿನ ಜ್ಞಾನವನ್ನು ಉಳಿಸಲು
ಸಾಧ್ಯವಾಗದೆ ಮನುಕುಲ ಮುಂದೆ ಬಂದಿರೋದು ಕಾಲ
ಪ್ರಭಾವವೆ. ಈಗಲೂ ಎಷ್ಟೋ ಮಂದಿ ತಮ್ಮ ಅಲ್ಪ ಸಂಪಾದನೆಯಲ್ಲಿಯೇ ಜೀವನ ನಡೆಸಿದ್ದಾರೆ. ಇವರಿಂದ
No comments:
Post a Comment