ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Tuesday, August 23, 2022

ಅರ್ಜುನನ ಧರ್ಮ ಸಂಕಟ ನಮಗಿದೆಯೆ?

ಅರ್ಜುನನ ಧರ್ಮ ಸಂಕಟ  ಸಾಮಾನ್ಯವಾಗಿ ಇಂದು ಎಲ್ಲರೊಳಗೂ ಅಡಗಿದ್ದರೂ ಅದನ್ನು ಬಗೆಹರಿಸುವ‌ಕೃಷ್ಣನ ತತ್ವ ಜ್ಞಾನದ ಕೊರತೆ ಮನುಕುಲವನ್ನು ದಾರಿ ತಪ್ಪಿಸುತ್ತಿದೆ. ಹಾಗಾದರೆ ಇಲ್ಲಿ  ಅರ್ಜುನ ಯಾರು? ಕೃಷ್ಣನೆಲ್ಲಿರೋದು?  ಅಂದಿನ ಕ್ಷತ್ರಿಯರು ಇಂದಿಲ್ಲ. ಅಂದಿನ ರಾಜಪ್ರಭುತ್ವ ಇಂದಿಲ್ಲ.ಅಂದಿನ ಶಿಕ್ಷಣ ಇಂದಿಲ್ಲ.ಅಂದಿನ ಗುರು ಹಿರಿಯರು ಇಂದಿಲ್ಲ.ಅಂದಿನ ಧಾರ್ಮಿಕ  ಕಾರ್ಯಕ್ರಮದೊಳಗಿದ್ದ ಸತ್ಯ ಇಂದಿಲ್ಲ.ಹಾಗಾದರೆ ಅಂದಿನ  ಪುರಾಣ,ಇತಿಹಾಸದ ಪ್ರಚಾರ ಇಂದು ಯಾಕೆ ಬೇಕು? ಎಂದಾಗ  ನಮಗೆ ವಿಷಯದೊಳಗಿದ್ದ ಧರ್ಮ, ಸತ್ಯ,ನ್ಯಾಯ,ನೀತಿ,ಸಂಸ್ಕೃತಿ ಯಿಂದ  ಭೂಮಿಯಲ್ಲಿ ಯಾವ ಸತ್ಯ ಸತ್ವ ಉಳಿಸಬಹುದು ಬೆಳೆಸಬಹುದೆನ್ನುವ  ಜ್ಞಾನ ಹೆಚ್ಚಾಗುವುದಾದರೆ ಇದರ ಅಗತ್ಯವಿದೆ. ಈ. ವಿಚಾರಗಳನ್ನು ಬಳಸಿಕೊಂಡು ವ್ಯವಹಾರ ಬೆಳೆಸಿಕೊಂಡು  ಹಣ,ಅಧಿಕಾರ, ಸ್ಥಾನಮಾನದಿಂದ ಜನರನ್ನು ಆಳೋದಾದರೆ ಇಲ್ಲಿ ಯಾವುದೇ ರಾಜಪ್ರಭುತ್ವ ಇಲ್ಲವೆನ್ನಬಹುದು. ಇದೇ ಅಧರ್ಮಿಗಳಿಗೆ  ಶಕ್ತಿ ಹೆಚ್ಚಿಸಿ ಅಸುರರ ಸಾಮ್ರಾಜ್ಯ ಮಾಡುತ್ತಿದೆ ಎಂದರೆ ತಪ್ಪು ಎನ್ನುವ ನಮಗೆ ಅರ್ಜುನನಿಗಿದ್ದ  ಧರ್ಮ ಸಂಕಟವಿದೆ. ಪಂಚಪಾಂಡವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ ಆದರೂ  ಯುದ್ದ ಮಾಡಲು ಅರ್ಜುನ ಹಿಂದೇಟು ಹಾಕಿದ್ದನು.ಎಂದಾಗ ನಮಗೆ ದೇಶ ಎಷ್ಟು ಸುಖ,ಸಂತೋಷ ನೀಡಿದ್ದರೂ ದೇಶಕ್ಕೆ ಅಪಾಯ ಬಂದಾಗ ನಮ್ಮ ಸ್ವಾರ್ಥ, ಅಹಂಕಾರ ಬಿಡದೆ, ನಮ್ಮಲ್ಲಿ ಒಗ್ಗಟ್ಟು ಏಕತೆ,ಐಕ್ಯತೆಯನ್ನು ರಾಜಕೀಯವಾಗಿ ಬೆಳೆಸಿಕೊಂಡು ಒಬ್ಬರನ್ನೊಬ್ಬರು ಅವಲಂಬಿಸಿಕೊಂಡು ನಮ್ಮವರು ಮಾಡಿದ ತಪ್ಪನ್ನು ತಿದ್ದದೆ ಬೇರೆಯವರ ತಪ್ಪನ್ನುತಿದ್ದುವ ಪ್ರಯತ್ನದಲ್ಲಿ 
ನಾವೇ ಸೋತಿದ್ದೇವೆ. ಹೀಗಿರುವಾಗ ಎಲ್ಲರಲ್ಲಿಯೂ ಇದ್ದು ಎಲ್ಲರ ಕರ್ಮಕ್ಕನುಗುಣವಾಗಿ ನಡೆಸಿದ ಶ್ರೀ ಕೃಷ್ಣನ ತತ್ವವನ್ನು ನಮ್ಮೊಳಗೇ ತೆಗೆದುಕೊಳ್ಳುವಜ್ಞಾನವಿಲ್ಲದೆ ಭೌತಿಕದಲ್ಲಿ ಸಾಕಷ್ಟು ಮುಂಮದುವರಿದರೂ ಅಧ್ಯಾತ್ಮದ ಪ್ರಕಾರ ಎಲ್ಲರೂ ಹಿಂದುಳಿದ ಹಿಂದೂಗಳೇ . ಭಾರತ ಹಿಂದಿನಿಂದಲೂ ಎಲ್ಲರನ್ನೂ ನಮ್ಮವರೆಂದು ಕರೆದು ಕೂರಿಸಿ ಸ್ವಾಗತಿಸಿದ ಮಹಾದೇಶ. ಅತಿಥಿ ಸತ್ಕಾರಕ್ಕೆ ಹೆಸರಾದ ದೇಶ.ಆದರೆ, ಯಾರಿಗೆ ಅತಿ ಸತ್ಕಾರ ಮಾಡಿ ಒಳಗೇ ಬೆಳೆಸಿದೆವೋ ಅವರೇ ತಿಥಿ  ಮಾಡೋ ಪರಿಸ್ಥಿತಿ ಎದುರಿಸಿದ್ದೂ ಇದೇ ದೇಶ.  ಅರ್ಜುನ ನಿಗೆ ಗುರು ಹಿರಿಯರಲ್ಲಿದ್ದ ಭಕ್ತಿ ಗೌರವ,ಪ್ರೀತಿಯಿಂದ ಯುದ್ದ ಮಾಡಲು ಹಿಂಜರಿಕೆಯಾದರೂ  ಕುರುಕ್ಷೇತ್ರ ಯುದ್ದವು ಧರ್ಮ ಸ್ಥಾಪನೆಯ ಗುರಿ ಹೊಂದಿದ ಕಾರಣ ಅಂದಿನ‌ ಕೌರವರ ಅಧರ್ಮ ಯುಕ್ತ ಆಡಳಿತವನ್ನು  ನಿಲ್ಲಿಸಿ ಧರ್ಮ ಸ್ಥಾಪನೆಗಾಗಿಯೇ  ಜನ್ಮತಳೆದ ಮಹಾ ವೀರರಿಗೆ ಸ್ವರ್ಗ ದೊರುಕುವುದು ಕೇವಲ ಧರ್ಮ ಯುದ್ದದಿಂದಲೇ ಎನ್ನುವ ಸತ್ಯವನ್ನು ಶ್ರೀ ಕೃಷ್ಣ ಪರಮಾತ್ಮನೇ ಮುಂದೆ ನಿಂತು ಭಗವದ್ಗೀತೆ ಯ ಮೂಲಕ ಮಹಾವೀರ ಅರ್ಜುನನ ವಿಷಾಧ ವನ್ನು ತೊಲಗಿಸಿದ್ದ. ದ್ವಾಪರದಿಂದ ಕಲಿಯುಗಕ್ಕೆ ಮನುಕುಲ ಕಾಲಿಟ್ಟಿದೆ.ಅಂದಿನ  ಕ್ಷಾತ್ರಧರ್ಮ ಇಂದಿಲ್ಲ. ಅಂದಿನ ಸತ್ಯಜ್ಞಾನ ಇಂದಿಲ್ಲವಾದರೂ ಜನನ ಮರಣಗಳಿವೆ. ಜೀವನದ ಮುಖ್ಯ ಗುರಿ ಅಧ್ಯಾತ್ಮದ ಪ್ರಕಾರ  ಮುಕ್ತಿ ಪಡೆಯೋದಾದರೆ ಭೌತಿಕದಲ್ಲಿ ಗುರಿಯನ್ನು   ಅನಾವಶ್ಯಕ ವಿಚಾರಗಳನ್ನು ತಿಳಿಯುತ್ತಾ ಒಳಗಿದ್ದ ಗುರು,ಗುರಿ ಕಾಣದೆ ಜನರ ಜೀವನ ನಡೆದಿದೆ. ಪ್ರಜಾಪ್ರಭುತ್ವದ ಪ್ರಜೆಗಳೇ ಇಲ್ಲಿ ರಾಜರು. ರಾಜಯೋಗದಿಂದ ದೇಶವನ್ನು ಆಳುತ್ತಿದ್ದ ಅಂದಿನ ಮೂಲ ಶಿಕ್ಷಣವಿಲ್ಲದೆ ಮೂಲ ದಲ್ಲಿಯೇ ರಾಜಕೀಯ ತೂರಿಸಿಕೊಂಡು ಮಹಿಳೆ ಮಕ್ಕಳು ಹೊರಬಂದರೆ ಇಲ್ಲಿ ಯುದ್ದ ಯಾರ ವಿರುದ್ದ ನಡೆಯುತ್ತಿದೆ? ಮನೆ ಮನೆಯೊಳಗಿನ ರಾಮಾಯಣ,ಮಹಾಭಾರತ ಕಥೆ ರಾಜಕೀಯಕ್ಕೆ ಸೀಮಿತವಾಗಿ ಸ್ತ್ರೀ ಶಕ್ತಿಯನ್ನು ಆಳಲು ಹೊರಟು ಇನ್ನಷ್ಟು ಸಾಲದ ಹೊರೆ ಹೊತ್ತು ದೇಶಕ್ಕೆ ಭಾರ ಭಾರತಕ್ಕೆ ಕಷ್ಟ ನಷ್ಟವಾದರೂ  ಧರ್ಮದ ಅರ್ಥ ತಿಳಿಯದೆ ಮುಂದೆ ಹೋಗಿ ಹಿಂದಿನ ಸತ್ಯ ಸತ್ವ,ತತ್ವವೇ ಇಲ್ಲದೆ  ಯುದ್ದಕ್ಕೆ ನಿಂತರೆ  ಜೀವ ಹೋದರೂ ಜ್ಞಾನ ಬರೋದಿಲ್ಲ. 
ಹಿಂದಿನ ಮಹಾಜ್ಞಾನಿಗಳಲ್ಲಿದ್ದ ತತ್ವಜ್ಞಾನ ಇಂದಿನ ತಂತ್ರಜ್ಞಾನದಿಂದ ಅರ್ಥ ಮಾಡಿಕೊಳ್ಳಲು ಕಷ್ಟ.ಸ್ವಲ್ಪ ಮಟ್ಟಿಗೆ ಅಳವಡಿಸಿಕೊಂಡರೆ ಅನುಭವಕ್ಕೆ ಬರುತ್ತದೆ. ಅದ್ವೈತ ಎಂದರೆ ಒಗ್ಗಟ್ಟು, ಒಂದು,ಏಕತೆ,ಐಕ್ಯತೆ ಎಂದಾಗ ದೇವನೊಬ್ಬನೆ ನಾಮ ಹಲವು ಎನ್ನಬಹುದು.ಈ ಹಲವುನಾಮದೊಳಗಿರುವ ಏಕ ಶಕ್ತಿಯನ್ನು ತಿಳಿಯೋದೆ ತತ್ವ. ಇದನ್ನು  ಒಡೆದು ಆಳೋದೇ ತಂತ್ರ. ಹೀಗೆಯೇ ಧರ್ಮ, ಜಾತಿ,ಪಂಗಡ,ಪಕ್ಷಗಳು ಹುಟ್ಟಿಕೊಂಡವು. ಆದರೆ ಈಗ ಇದೇ ಮನುಕುಲಕ್ಕೆ  ಮಾರಕವಾಗುತ್ತಿದೆ.ಅದರಲ್ಲೂ ಭಾರತದಂತಹ ಪವಿತ್ರ ದೇಶವನ್ನು ಅಪವಿತ್ರಗೊಳಸಿ ಆಳಲು  ಹೊರಗಿನವರ ತಂತ್ರವೇ ಕಾರಣ.ಇದಕ್ಕೆ ಸಹಕಾರ ನೀಡಿದ ನಮಗೆ ಈಗ ಧರ್ಮ ಸಂಕಟ. ಹೊರಗಿನವರಿಂದ ಪಡೆದ ಮೇಲೆ ತಿರುಗಿ ಕೊಡಲು ಕಷ್ಟಪಡಬೇಕು.ಇಲ್ಲವಾದರೆ ಒಪ್ಪಿ ನಡೆಯಬೇಕು.ಒಪ್ಪಿದರೆ ಅಧರ್ಮ ಕಷ್ಟಪಡಲು ಶಕ್ತಿ ಇಲ್ಲ. ಹೀಗಾಗಿ  ಮಧ್ಯದಲ್ಲಿ ನಿಂತು ಇನ್ನಷ್ಟು ಗೊಂದಲ ಸೃಷ್ಟಿ ಮಾಡಿದರೂ ಮುಂದೆ ನಡೆಯದಿದ್ದರೆ  ಧರ್ಮರಕ್ಷಣೆ ಕಷ್ಟ.
ಸ್ವಾಮಿ ವಿವೇಕಾನಂದರ ಸಂದೇಶದಲ್ಲಿ ದೇಶಭಕ್ತಿಯಿತ್ತು.ದೇಶ ರಕ್ಷಣೆಗಾಗಿ ಅಧ್ಯಾತ್ಮ ದತ್ತ ನಡೆದು ನಿನ್ನ ನೀ ಆಳಿಕೊಳ್ಳುವ ರಾಜಯೋಗವಿತ್ತು. ನಾನ್ಯಾರೆಂಬುದೇ ಗೊತ್ತಿಲ್ಲ. ಪರಕೀಯರನ್ನು ನಮ್ಮವರೆ ಎಂದು ಸಾಲ ಮಾಡಿದರೆ ತೀರಿಸಲೇಬೇಕು. ಇದೇ ದೊಡ್ಡ ಧರ್ಮ ಸಂಕಟ.ಈ ಕಾರಣದಿಂದ ಎಷ್ಟೋ ನಮ್ಮವರು ಹೊರ ದೇಶಕ್ಕೆ ಹೋಗಿ ದುಡಿಯಬೇಕಾಗಿದೆ. ನಮ್ಮವರನ್ನೇ ನಾವು ದ್ವೇಷ ಮಾಡಿ ದೇಶಕಟ್ಟುವ ಕೆಲಸ ಮಾಡಬಹುದೆ? ಹಿಂದಿನ ಯುಗದಲ್ಲಿದ್ದ ಮೂರು ಮುಖ್ಯ ವರ್ಗವೇ ದೇವರು ಮಾನವರು,ಅಸುರರು. ಇಲ್ಲಿ ಮಧ್ಯವರ್ತಿ ಮಾನವನೊಳಗೇ ದೇವಾಸುರರ ಗುಣಗಳಿವೆ.ದೈವತ್ವ ಬೆಳೆದಂತೆ ತತ್ವಜ್ಞಾನ.ಅಸುರತ್ವ ಬೆಳೆದಂತೆ ತಂತ್ರದ ರಾಜಕೀಯವಾಗುತ್ತದೆ. ರಾಜಕೀಯದಲ್ಲಿ ಹಣ,ಅಧಿಕಾರ ಸ್ಥಾನಮಾನವೇ ಬಂಡವಾಳ.ಇದು ಜನರೇ ಕೊಡೋದು. ಹಿಂದಿರುಗಿಸಲಾಗದೆ ದುಂದುವೆಚ್ಚಮಾಡಿ ಸಾಲ ಮಾಡಿದರೆ ತೀರಿಸಲು ಸಾಧ್ಯವೆ? ಹೀಗೇ ಹಾಸಿಗೆ ಇದ್ದಷ್ಡು ಕಾಲು ಚಾಚು ವಿಚಾರವನ್ನು ವಿರೋಧಿಸಿ ನೇರವಾಗಿ ಆಕಾಶದೆತ್ತರ ಹಾರಲು ಹೋಗಿ ಭೂಮಿಯಲ್ಲಿ  ಸಾಯುತ್ತಿದ್ದರೆ ಭೂಮಿ ಮೇಲಿದ್ದು ಧರ್ಮ ರಕ್ಷಣೆ ಮಾಡಲಾಗುವುದಿಲ್ಲ. 
ನಾನಿದ್ದಾಗ ಕಾಣದ ದೇವರು ನಾನು ಹೋದ ಮೇಲೆ ಕಂಡರೆ ವ್ಯವಹಾರವಾಗುತ್ತದೆ.  ವ್ಯವಹಾರವೇ ಧರ್ಮ ಸಂಕಟಕ್ಕೆ ಕಾರಣವಾದಾಗ ವ್ಯವಹಾರ ಬಿಟ್ಟು ಸತ್ಯದೆಡೆಗೆ ಧರ್ಮ ದೆಡೆಗೆ ಸಾಗುವುದೇ ಉತ್ತಮ ಮಾರ್ಗವಲ್ಲವೆ? ವ್ಯವಹಾರವಿಲ್ಲದ ಜೀವನವಿಲ್ಲ.ಧರ್ಮ ಸೂಕ್ಷ್ಮ ವನ್ನರಿತು  ನಡೆಯಲು  ಇಂದಿನ ಭೌತಿಕ ವಿಜ್ಞಾನ ಬಿಡೋಹಾಗಿಲ್ಲ.ಹಾಗಾಗಿ ನಾವೆಲ್ಲರೂ ಮಧ್ಯವರ್ತಿಗಳಷ್ಟೆ. ಯಾವಕಡೆ ಮುಂದೆ ನಡೆದರೆ  ಉತ್ತಮ ಎನ್ನುವ ಜ್ಞಾನ ಬೇಕಿದೆ. 

No comments:

Post a Comment