ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Wednesday, August 24, 2022

ಆರೋಗ್ಯ ಮತ್ತು ಯೋಗ

ಆರೋಗ್ಯ ಮತ್ತು ಯೋಗ

    ಆರೋಗ್ಯವೆಂದರೆ ಆರು ಯೋಗ್ಯವಾಗಿ ಬಳಸಿಕೊಂಡು ರೋಗವಿಲ್ಲದಿರೋದೆಂದರ್ಥದಲ್ಲಿ ಯೋಗವನ್ನು ತಿಳಿದಾಗ ಯಾವುದೇ ವಿಚಾರವಿರಲಿ ನಮ್ಮ ಮನಸ್ಸು ಮತ್ತು ಆತ್ಮನ ಸೇರುವಿಕೆ ಎಂದಾಗುತ್ತದೆ. ಪ್ರತಿಯೊಂದು ಚರಾಚರದಲ್ಲಿಯೂ ಅಡಗಿರುವ ಅಣುಶಕ್ತಿಯಲ್ಲಿ ತನ್ನದೇ ಆದ ವಿಶೇಷವಿರುತ್ತದೆ. ಆ ಅಣುಶಕ್ತಿಗಳ ಒಕ್ಕೂಟದಿಂದ ಇಡೀ ಬ್ರಹ್ಮಾಂಡ ನಡೆಯುತ್ತಿದೆ. ಒಳ್ಳೆಯದಕ್ಕೆ ಬಳಸಿದರೆ ಒಳ್ಳೆಯದಾಗುತ್ತದೆ. ಕೆಟ್ಟದ್ದಕ್ಕೆ ಬಳಸಿದರೆ ಕೆಟ್ಟದ್ದಾಗಿ ಬೆಳೆದು ತಿರುಗಿ  ಹೊಡೆಯುತ್ತದೆ. ಭೂಮಿಯನ್ನು ಸದ್ಬಳಕೆ ಮಾಡಿಕೊಂಡರೆ  ಆರೋಗ್ಯಕರ ಜೀವನ ನಡೆಸಬಹುದು.
    ಹೀಗೇ ಮಾನವನ ಆಹಾರ, ವಿಹಾರಗಳ ಮೇಲೇ ಆರೋಗ್ಯವಿದೆ. ರಾಜಯೋಗದ ಪ್ರಕಾರ ಹೇಳುವುದಾದರೆ ಮಾನವ ತನ್ನ ತಾನರಿತು ನಡೆಯೋದೇ ಕಷ್ಟ. ಕಾರಣ ನಮ್ಮ ಮನಸ್ಸನ್ನು ತಡೆಹಿಡಿದು ಪರಿಶುದ್ದವಾದ ನಿಯಮಗಳನ್ನು ಅನುಸರಿಸುವುದಕ್ಕೆ ಯೋಗವಿರಬೇಕು. ಪರಿಶುದ್ಧವಾದ ಮನಸ್ಸನ್ನು ಕೊಡುವ ಆಹಾರ ಸೇವನೆ ಎಲ್ಲರಿಗೂ ಕಷ್ಟ. ಮೃಗಾಲಯದಲ್ಲಿರುವ ಆನೆಗೂ ಸಿಂಹಕ್ಕೂ ಎಷ್ಟು ವ್ಯತ್ಯಾಸವೆಂದರೆ, ದೊಡ್ಡ ಗಾತ್ರದ ಆನೆ ಶಾಂತವಾಗಿದ್ದರೆ ಸಿಂಹ ಚಂಚಲತೆಯಿಂದ  ತಿರುಗುತ್ತಿರುತ್ತದೆ ಕಾರಣ ಅವುಗಳ ಆಹಾರ ಸೇವನೆ. ಸಾತ್ವಿಕ, ರಾಜಸ ಹಾಗು ತಾಮಸ ಆಹಾರದ ಗುಣವೇ ಇದಕ್ಕೆ ಕಾರಣ.
    ಉಪವಾಸದಿಂದ ಆರೋಗ್ಯವೃದ್ದಿಯಾಗುತ್ತದೆ ಎನ್ನುತ್ತಾರೆ. ಆದರೆ, ಉಪವಾಸ ಮಾಡಿದರೆ ಶರೀರ ದುರ್ಭಲವಾಗಿ, ಕ್ಷೀಣಿಸಿ, ಶಕ್ತಿಹೀನ ಸ್ಮೃತಿ, ಹೀನ ಸ್ಥಿತಿಗೆ ಬರೋವಷ್ಟು ಮಾಡಬಾರದೆನ್ನುತ್ತಾರೆ ಯೋಗಿಗಳು. ಕಾರಣ ಅಧ್ಯಾತ್ಮ ಸಾಧನೆಗೆ ಅಡ್ಡಿಯಾಗುವುದೆಂದು. ಮೊದಲು ಮಾನವನಾಗು ನಂತರ ಮಹಾತ್ಮನಾಗಬಹುದು.ಆಂತರಿಕ ಶುದ್ದಿಯ ಜೊತೆಗೆ ಬಾಹ್ಯ ಶುದ್ದಿ ಮಾಡಿಕೊಂಡರೆ ಪರಿಪೂರ್ಣತೆ .ಹೀಗಾಗಿ ಆರೋಗ್ಯ ಚೆನ್ನಾಗಿರಬೇಕಾದರೆ ಯೋಗ ಮುಖ್ಯ.  ಯೋಗಾಸನ‌ ಮಾಡುತ್ತಿದ್ದೇನೆಂದು  ಚೆನ್ನಾಗಿ ತಿಂದರೆ ಆಗೋದಿಲ್ಲ. ಯೋಗವೆಂದರೆ  ಕೂಡುವುದು ಸೇರುವುದು ಎಂದರೆ ನಮ್ಮ‌ಮೂಲದ ಧರ್ಮ, ಕರ್ಮ, ಜ್ಞಾನ, ಆಹಾರ, ಸಂಸ್ಕೃತಿ, ಸಂಪ್ರದಾಯ, ಸತ್ಯದೆಡೆಗೆ ಮನಸ್ಸನ್ನು ಸೇರಿಸಿಕೊಳ್ಳುವುದು ಯೋಗ. ಒಳಗಿನ ಶಕ್ತಿ ಹೊರಗಿನ ಶಕ್ತಿಯನ್ನು ಅರ್ಥ ಮಾಡಿಕೊಂಡು ನಡೆಯುವುದೇ ಯೋಗ.  ನಮ್ಮದಲ್ಲದ  ವಿಚಾರ, ವಿಷಯ, ವಸ್ತು, ಜ್ಞಾನದೆಡೆಗೆ ನಡೆದಂತೆಲ್ಲಾ ಒಳಗಿನ ಆರೋಗ್ಯಕ್ಕೆ ಹಾನಿ. ಸಕಾರಾತ್ಮಕ ನಕಾರಾತ್ಮಕ ಎರಡೂ ಒಂದೇ ಮಾರ್ಗದಲ್ಲಿ ನಡೆಯಲಾಗದು. ಹೀಗಾಗಿ ಅಧ್ಯಾತ್ಮ ಹಾಗು ಭೌತಿಕ ಜಗತ್ತಿನ ಮಧ್ಯೆ ಬೆಳೆದಿರುವ ಅಂತರಕ್ಕೆ ಕಾರಣವೇ ಇದರಲ್ಲಿರುವ  ಸಾತ್ವಿಕ ಸತ್ಯವನ್ನು  ಬಿಟ್ಟು ಭೌತಿಕದಲ್ಲಿ ನಡೆದಿರುವುದು. ಹೀಗಾಗಿ ಆರೋಗ್ಯಕರ ಸಮಾಜ ನಿರ್ಮಾಣವಾಗಬೇಕಾದರೆ‌  ಸಂಸಾರವು ಸಮಾಜದೊಳಗಿದೆ  ಎನ್ನುವ ಸತ್ಯ ತಿಳಿದು, ಒಳಗಿರುವ ಸಮಾಜವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಅವರವರ ಮೂಲದ ಆಹಾರವನ್ನು, ಶಿಕ್ಷಣವನ್ನು, ಧರ್ಮ ಕರ್ಮವನ್ನರಿತರೆ  ಆರೋಗ್ಯವಂತ ರಾಷ್ಟ್ರ ನಿರ್ಮಾಣ ಸಾಧ್ಯ.ಇದಕ್ಕಾಗಿ  ನಮ್ಮ ನಮ್ಮ ಆಂತರಿಕ ಶುದ್ದಿಗಾಗಿ ಪ್ರಯತ್ನ ಪಟ್ಟರೆ ಒಳಗೇ ಇರುವ ಆ ದೈವಶಕ್ತಿಯಿಂದ  ಆರೋಗ್ಯ ರಕ್ಷಣೆ ಸಾಧ್ಯ.
    ಯೋಗಿಗಳಿಂದ ದೇಶೋದ್ದಾರ, ಧರ್ಮದ ಉದ್ದಾರ ಸಾಧ್ಯ. ಇಡೀ ದೇಶವನ್ನು ಒಬ್ಬರಿಂದ ಸರಿಪಡಿಸಲಾಗದು. ಪ್ರತಿಯೊಬ್ಬರೂ ಅವರವರ  ಮೂಲವನ್ನು ಸರಿಯಾಗಿ ಅರ್ಥ ಮಾಡಿಕೊಂಡು ತಮ್ಮ ಆರೋಗ್ಯ ರಕ್ಷಣೆಗೆ ಮುಂದಾದರೆ ಯಾವ ಸರ್ಕಾರದ ಹಣವೂ ಬೇಡ. ಸಾಲವೂ ಬೆಳೆಯಲ್ಲ, ಔಷಧವಂತೂ ಬೇಡ. ಆರೋಗ್ಯ ರಕ್ಷಣೆಗೆ ಯೋಗ ಬೇಕು. ಯೋಗ್ಯ ಶಿಕ್ಷಣ ಬೇಕು. ಆರು ಯೋಗ್ಯ ರೀತಿಯಲ್ಲಿ ಬಳಸಬೇಕು. ಇದೇ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳೆಂಬ ಅರಷಡ್ವರ್ಗದ ಅತಿರೇಖವೇ  ಅನಾರೋಗ್ಯಕರ ಸಮಾಜ ನಿರ್ಮಾಣ ಮಾಡಿ ಆಳುತ್ತಿದೆ. ಇದಕ್ಕೆ ನಮ್ಮದೇ ಸಹಕಾರ ಇದ್ದಾಗ  ದೇಹವನ್ನು ಅದೇ ನಡೆಸಿದೆಯಲ್ಲವೆ? ಎಲ್ಲಿರುವುದು ಆರೋಗ್ಯ? ಕೊನೆಪಕ್ಷ  ರೋಗಕ್ಕೆ ಔಷಧವಾಗಿ  ಆಯುರ್ವೇದ ವನ್ನಾದರೂ ಬಳಸಬಹುದೆ? ಹೊರಗಿನ ರೋಗಕ್ಕೆ ಔಷಧವೂ ಹೊರಗಿನಿಂದ  ಪಡೆಯುವ ಸ್ಥಿತಿಗೆ  ಬಂದಿರುವುದೇ ದೊಡ್ಡ ಸಮಸ್ಯೆ. ಇದರಿಂದ ಬಿಡುಗಡೆ ಪಡೆಯಲು ಒಳಗಿನ ಆರೋಗ್ಯಕರ ಶಿಕ್ಷಣವಿದ್ದರೆ ಉತ್ತಮ.ಇದರಲ್ಲಿ ರಾಜಕೀಯ ಇಲ್ಲದೆ ಮಕ್ಕಳ ಜ್ಞಾನಕ್ಕೆ ತಕ್ಕಂತೆ  ಇದ್ದರೆ  ಆರೋಗ್ಯವಂತ ಮಕ್ಕಳಿಂದ ಆರೋಗ್ಯವಂತ ಪ್ರಜೆಗಳು ಬೆಳೆಯಬಹುದು. ಇದಕ್ಕೆ ಪೋಷಕ ಪ್ರಜೆಗಳೇ ವಿರೋಧಿಗಳಾದರೆ  ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂದ ಹೀಗಾಗುತ್ತದೆ. 



No comments:

Post a Comment