ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Sunday, August 28, 2022

ವಿಜ್ಞಾನದೊಳಗಿರುವ ಜ್ಞಾನ ಯಾವುದು?

ಒಳಗೊಳಗಿರುವ ಸತ್ಯವನ್ನು ಗಮನಿಸಲು ಒಳಹೊಕ್ಕಿ ನೋಡಬೇಕು.ಹೊರಗೆಬಂದಷ್ಟೂ ಅಸತ್ಯವೇ ಬೆಳೆಯೋದು.
ಅಸತ್ಯದೊಳಗಿರುವ ಸೂಕ್ಷ್ಮ ವಾದ ಸತ್ಯ, ಅಧರ್ಮದೊಳಗಿರುವ ಸೂಕ್ಮವಾದ ಧರ್ಮ, ಅಕರ್ಮದೊಳಗಿನ‌ಕರ್ಮ, ವಿಜ್ಞಾನದೊಳಗಿನ ಜ್ಞಾನ,ಅದ್ವೈತ ದೊಳಗಿನ ದ್ವೈತ ,ವಿದೇಶದೊಳಗಿನ ದೇಶ
ಅಜ್ಞಾನದೊಳಗಿರುವ ಜ್ಞಾನ.ಒಟ್ಟಿನಲ್ಲಿ  ಹೊರಗಿನಿಂದ ಕಾಣೋದೇ ಬೇರೆ ಒಳಹೊಕ್ಕಿ ನೋಡಿ ತಿಳಿಯೋದೇ ಬೇರೆ.
ಅಧ್ಯಾತ್ಮ ಸತ್ಯಕ್ಕೂ ಭೌತಿಕ ದ ಸತ್ಯಕ್ಕೂ  ವ್ಯತ್ಯಾಸವಿಷ್ಟೆ.
ಒಂದು ಒಳಗಿನಿಂದ ಕಂಡುಹಿಡಿದ ಸತ್ಯ ಇನ್ನೊಂದು ಹೊರಗಿನಿಂದ ಕಂಡುಕೊಂಡ ಸತ್ಯ. ಆದರೆ ಇಲ್ಲಿ ಹೊರಗಿನ ಸತ್ಯ ಒಳಗಿನ ಸತ್ಯವನ್ನು ಅಲ್ಲಗೆಳೆದಷ್ಟೂ ಅಸತ್ಯ ಬೆಳೆದು ಅಧರ್ಮ ,ಅನ್ಯಾಯ,ಅಹಂಕಾರ, ಸ್ವಾರ್ಥ ದಲ್ಲಿ ಜೀವನವೇ  ಮುಗಿಯುತ್ತದೆ .ಆದರೆ ಆಂತರಿಕ ಸತ್ಯ ಬಿಟ್ಟು ಈವರೆಗೆ ಯಾವ ಜೀವಾತ್ಮನೂ ಮುಕ್ತಿ ಪಡೆದಿಲ್ಲವೆನ್ನುವ ಮಹಾಸತ್ಯವನ್ನು ಅರಿತು ನಡೆಯುವುದೇ  ಜೀವನದ ಗುರಿ.
ಗುರುವಾದವರು ಈ ಸತ್ಯದೆಡೆಗೆ ಶಿಷ್ಯರನ್ನು ನಡೆಸುವಾಗ ತಾನು ಒಳಗಿರುವ ಸತ್ಯವನ್ನು ಕಂಡುಕೊಳ್ಳುವುದು ಮುಖ್ಯ.
ನಂತರವಷ್ಟೆ ಶಿಷ್ಯನ ಜಿಜ್ಞಾಸೆ ಪೂರೈಸಬಹುದೆನ್ನುವುದನ್ನು ಅಧ್ಯಾತ್ಮ ಸಾಧಕರು ತಿಳಿಸಿದ್ದಾರೆ.
ಎಲ್ಲಿ ಸತ್ಯವಿರುವುದೋ ಅಲ್ಲಿ ದೈವತ್ವ ಬೆಳೆಯುವುದು. ಎಲ್ಲಿ ನ್ಯಾಯವಿರುವುದೋ ಅಲ್ಲಿ ನ್ಯಾಯದೇವತೆಯಿರುವಳು,ಎಲ್ಲಿ ಶಾಂತಿಯಿರುವುದೋ ಅಲ್ಲಿ  ದೇವಾನುದೇವತೆಗಳಿರುವರು. ಇದು ಹಿಂದಿನ ಮಹರ್ಷಿಗಳು ಕಂಡುಕೊಂಡ ಸತ್ಯ.ಯುಗಾಂತರದೊಳಗಿರುವ ಅಂತರಕ್ಕೆ ಕಾರಣವನ್ನು ಜ್ಞಾನದಿಂದ ತಿಳಿದುಕೊಂಡರೆ ಅಂತರ ಕಡಿಮೆಯಾಗುತ್ತದೆ.ಅಜ್ಞಾನದಿಂದ ಬೆಳೆಸಿದರೆ ಅಂತರ ಬೆಳೆಯುತ್ತದೆ. ಇಲ್ಲಿ ಮಾನವನ ಜೀವನದಲ್ಲಿ ನಡೆಯುತ್ತಿರುವ ಪ್ರತಿಯೊಂದಕ್ಕೂ ಕಾರಣವಿದ್ದರೂ ಪರಿಹಾರ ಜ್ಞಾನದಿಂದ ತಿಳಿಯದೆ ಹೊರಗೆ ಪರಿಹಾರದ ಹಣ ಪಡೆದಷ್ಟೂ ಋಣ ಹೆಚ್ಚಾಗಿ ಆತ್ಮಹತ್ಯೆ ಹೆಚ್ಚಾಗುತ್ತಿರುವುದು ಅಜ್ಞಾನ್ ಶಿಕ್ಷಣದಿಂದ ಎನ್ನಬಹುದಾದರೂ ಆ ಶಿಕ್ಷಣವನ್ನು ಬದಲಾವಣೆ ಮಾಡಿಕೊಳ್ಳಲು ಒಬ್ಬರಿಂದ ಸಾಧ್ಯವಿಲ್ಲ. ಇದು ರಾಜಕೀಯದ ಮಟ್ಟಕ್ಕೆ ಬೆಳೆದಿರುವಾಗ ಒಳಗಿರುವ ರಾಜಯೋಗವನ್ನು ಅರ್ಥ ಮಾಡಿಕೊಳ್ಳಲು ಮಾನವ ಸೋತಿರೋದು  ಕಾಲದ ಪ್ರಭಾವ. ಕಾಲಮಾನಕ್ಕೆ ತಕ್ಕಂತೆ ಬೆಳೆದ ಸಮಾಜದ ಬದಲಾವಣೆಯನ್ನು ಸ್ವೀಕರಿಸುತ್ತಾ ಮುಂದೆ  ನಡೆದ  ಮಾನವನಿಗೆ  ತನ್ನ ತಾನರಿಯಲಾಗದೆ ಪರರನ್ನು ಅರ್ಥ ಮಾಡಿಕೊಳ್ಳಲು ಹೋಗಿ ಪರರೂ ದಾರಿ ತಪ್ಪಿದರು. ಒಟ್ಟಿನಲ್ಲಿ ಹಿಂದಿರುವಹಿಂದೂ ಧರ್ಮದ ಉದ್ದೇಶ ಎಲ್ಲರನ್ನೂ ತತ್ವಜ್ಞಾನದಿಂದ ಒಗ್ಗೂಡಿಸಿ ಸಮಾಜದಲ್ಲಿ  ಯಾವ ಭೇಧಭಾವವಿಲ್ಲದೆ ಬಾಳಿ ಬದುಕಿ ಪರಮಾತ್ಮನೆಡೆಗೆ ಸಾಗೋದು.ಆದರೆ ಪರಮಾತ್ಮನಿರೋದು ಆಂತರಿಕ ಶುದ್ದಿಯಲ್ಲಿ ಎಂದಾಗ ಆಂತರಿಕ ವಾದ  ಜ್ಞಾನವನ್ನು ಗುರುತಿಸಿ ಬೆಳೆಸಿದ್ದ ಶಿಕ್ಷಣವೇ ಹಿಂದುಳಿದಾಗ ಇಲ್ಲಿ  ಬೆಳೆಯೋದು ಭೌತಿಕ ಸತ್ಯ ಮಾತ್ರ. ತಾತ್ಕಾಲಿಕ ವಾದ ಸತ್ಯವನ್ನು ಶಾಶ್ವತವೆಂಬ ಭ್ರಮೆ ಯಲ್ಲಿ ಭೂಮಿಯನ್ನು ಆಳಲು ಹೋದವರು ಹಿಂದೆಯೂ ಇದ್ದರು,ಈಗಲೂ ಇರುವರು,ಮುಂದೆಯೂ ಇರುವರು. ಆದರೆ  ಆಳಾಗಿ ಜನ,ಸೇವಕರಾಗಿರುವುದನ್ನು  ಅರ್ಥ ಮಾಡಿಕೊಳ್ಳದೆ ಜನರ ಹಣ, ಜ್ಞಾನವನ್ನು ದುರ್ಭಳಕೆ ಮಾಡಿಕೊಂಡು ಅಸುರರಂತೆ
ಇದ್ದರೆ ಭೂ ತಾಯಿ ಸುಮ್ಮನಿರಲು ಸಾಧ್ಯವೆ? ಭೂಮಿಯ ಋಣ ತೀರಿಸಲು ಬಂದ ಜೀವ  ಇನ್ನಷ್ಟು ಸಾಲದ ಸುಳಿಗೆ ಸಿಕ್ಕರೆ ಮುಕ್ತಿ ಸಿಗುವುದೆ? ಈ ವಿಚಾರ ಎಲ್ಲಾ ಧಾರ್ಮಿಕ ಜನತೆ ಅರ್ಥ ಮಾಡಿಕೊಂಡರೆ ಧರ್ಮ ರಕ್ಷಣೆ ಸಾಧ್ಯ. ಬೇಲಿಯೇ ಎದ್ದು ಹೊಲಮೇಯ್ದರೆ ಕಾಯುವವರು ಯಾರು? ಮೇಲಿರುವ ಭಗವಂತನಿಗೆ ಎಲ್ಲಾ ಒಂದೇ. ಅವನೊಳಗೇ ಇರುವ ಅಸಂಖ್ಯಾತ ಜೀವರಾಶಿಗಳಲ್ಲಿ ಬುದ್ದಿವಂತ ಜ್ಞಾನವಂತ ಮಾನವನೂ ಒಬ್ಬನಾದರೂ ಇಲ್ಲಿ ಎಲ್ಲಾ ಪ್ರಾಣಿಗಳನ್ನು ಜೀವಿಗಳನ್ನು ಆಳಿ ಅಳಿಸುವುದು ಅಧರ್ಮ. ಹೀಗಿರುವಾಗ ಅಧರ್ಮಕ್ಕೆ ತಕ್ಕಂತೆ  ಪ್ರತಿಫಲ ವು ಒಳಗಿನ ಜೀವವೇ ಅನುಭವಿಸಬೇಕೆಂಬ‌ ನಿಯಮವನ್ನು ಯಾವ  ರಾಜಕೀಯ ದಿಂದ ಬದಲಾಯಿಸಲಾಗದು. ಇದನ್ನು ರಾಜಯೋಗದಿಂದ ಕಂಡುಕೊಂಡವರು ಮಹಾತ್ಮರಾದರು.ದೇವರಾದರು,ಸಾದು,ಸಂತ,ದಾಸ,ಶರಣರ ತತ್ವದೊಳಗಿರುವ ಸತ್ಯವನ್ನರಿತರೆ ಜೀವನದ ಮುಖ್ಯ ಉದ್ದೇಶ ವೂ ಅರ್ಥ ವಾಗುತ್ತದೆ. ಇದನ್ನು ಪ್ರಚಾರ ಮಾಡಿ ಹಣಬಲ,ಜನಬಲ,ಅಧಿಕಾರ, ಸ್ಥಾನಮಾನ ಪಡೆದರೂ ಕ್ಷಣಿಕ ಎನ್ನುವ ಕಾರಣಕ್ಕಾಗಿ ಮಹಾತ್ಮರುಗಳು ಪರಮಾತ್ಮನ ಸೇವೆ ಎನ್ನುವ ಸೇವಾಮನೋಭಾವದಲ್ಲಿ ಸಮಾಜದ ಮಧ್ಯೆ ಇದ್ದು  ಸಮಾಜಸುಧಾರಣೆಗೆ ಶ್ರಮಿಸಿದ್ದರು. ಅಂದಿನ  ಅನುಭವಿ ಜ್ಞಾನಿಗಳ  ಶ್ರಮದಿಂದ ಸಮಾಜ,ದೇಶದಲ್ಲಿ ಶಾಂತಿ ನೆಲೆಸಿತ್ತು.ಈಗಲೂ ಮೂಲೆ ಮೂಲೆಯಲ್ಲಿದ್ದಾರೆ. ಸರ್ಕಾರದ ಕಣ್ಣಿಗೆ ಬೀಳದಿರೋದು  ಪರಮಾತ್ಮನ ಕರುಣೆ ಭಾರತಾಂಬೆಯ ಅದೃಷ್ಟವೆನ್ನಬಹುದಷ್ಟೆ. ಕಾಡಿನಲ್ಲಿರುವ ಅಂತಹ ಸ್ವಾವಲಂಬಿ, ಸ್ವಾಭಿಮಾನಿ, ಸ್ವತಂತ್ರ ಜ್ಞಾನದ ಮಾನವರಿಂದ  ಭೂಮಿ ನಡೆದಿದೆ.ಎಲ್ಲರಿಗೂ ಸ್ವತಂತ್ರ. ಜ್ಞಾನವಿದ್ದರೂ ಪರತಂತ್ರದಲ್ಲಿದ್ದು ಪರಕೀಯರ ಹಿಂದೆ ನಡೆದು ಮೂಲವನ್ನು ಬಿಟ್ಟು ಅತಂತ್ರಸ್ಥಿತಿಗೆ ಬಂದಿರೋದಕ್ಕೆ  ಕಾರಣವೆ ಅತಿಯಾದ ಸ್ವಾರ್ಥ ಅಹಂಕಾರದಿಂದ 
ಕೂಡಿದ  ಜೀವನ.ಇದಕ್ಕೆ ಶಿಕ್ಷಣದ ವಿಷಯವೇ ಕಾರಣ. ಮೊದಲು ಮಾನವನಾಗುವ ಮಾನವೀಯತೆ ಬೆಳೆಸುವ ನೈತಿಕ ಶಿಕ್ಷಣ ಧಾರ್ಮಿಕವರ್ಗ ನೀಡಿದರೆ  ಭಾರತದ  ಸ್ವಾತಂತ್ರ್ಯ ಕ್ಕೆ ದಕ್ಕೆ ಯಾಗದು. ಈಗ ಅಂತಹ ಕಾರ್ಯ ನಡೆದಿದೆ.ಎಲ್ಲರ ಸಹಕಾರದ ಅಗತ್ಯವಿದೆ.ಇದು ನಮ್ಮ ಮಕ್ಕಳಿಗೆ ನಾವು ಬಿಟ್ಟು ಹೋಗುವ ಆಸ್ತಿ.ಜ್ಞಾನದ ಆಸ್ತಿ ಮಕ್ಕಳಿಗೆ ಅಗತ್ಯ.ಇದು ಅವರ ಒಳಗಿದೆ .ಗುರುತಿಸಿ ಗುರುವಿನ ಮೂಲಕ ಬೆಳೆಸುವುದಕ್ಕೆ ಪೋಷಕರು ಒಳಗಿನ ಸತ್ಯವನ್ನು ಅರ್ಥ ಮಾಡಿಕೊಳ್ಳಲು ಹಿಂದಿರುಗಬೇಕು. ಹಿಂದೂ ಧರ್ಮ ಹಿಂದಿನ ಶಿಕ್ಷಣದಲ್ಲಿತ್ತು.
ಈಗಲೂ ಇದೆ ಆದರೆ ರಾಜಕೀಯದ ಕಡೆಮುಖಮಾಡುತ್ತಿದೆ.
ಗಮನಿಸಿ ಸಹಕರಿಸಿ ಬೆಳೆಸಿದರೆ ನಮ್ಮ ಆತ್ಮನಿರ್ಭರ ಭಾರತ ಸಾಧ್ಯವಿದೆ.

No comments:

Post a Comment