ನಂಬಿಕೆ ಹಾಗು ಮೂಢನಂಬಿಕೆಗೆ ವ್ಯತ್ಯಾಸವಿಷ್ಟೆ ನಂಬಿಕೆಯಲ್ಲಿ ಆತ್ಮವಿಶ್ವಾಸವಿರುತ್ತದೆ ಮೂಡನಂಬಿಕೆಯಲ್ಲಿ
ಕಡಿಮೆಯಿದ್ದು ಮೂಢರಂತೆ ವರ್ತಿಸುತ್ತಾರೆ.
ಉದಾಹರಣೆಗೆ, ದೇವರಿದ್ದಾನೆಂಬ ನಂಬಿಕೆಯಲ್ಲಿ ಆಂತರಿಕವಾಗಿ ಮಾನವ ತನ್ನ ಶುದ್ದಿಗಾಗಿ ಪ್ರಯತ್ನ ಪಡುತ್ತಾ
ಮುಂದೆ ನಡೆದಂತೆಲ್ಲಾ ದೈವಗುಣವೃದ್ದಿಯಾದಂತೆ ನಂಬಿಕೆಯೂ ಬಲವಾಗುತ್ತದೆ ದಾಸರು,ಶರಣರು,ಸಂತರು,ಸಾದುಗಳಲ್ಲಿ ನಂಬಿಕೆಯೇ ದೇವರಾಗಿತ್ತು. ಆದರೆ, ಅಂತಹ ಮಹಾತ್ಮರನ್ನು ಮಧ್ಯೆ ನಿಲ್ಲಿಸಿ
ಜನರನ್ನು ತಮ್ಮೆಡೆ ಸೆಳೆಯುವಾಗ ಜನರೊಳಗೇ ಅಡಗಿದ್ದ ಮೂಲ ನಂಬಿಕೆ ಶ್ರದ್ದೆ ಬಿಟ್ಟು ಹೊರ ಬಂದರೆ ಮಧ್ಯವರ್ತಿಗಳನ್ನಷ್ಟೆ ನಂಬುತ್ತಾ ಅವರು ಹೇಳಿದ ತತ್ವವನ್ನು
ಅರ್ಥ ಮಾಡಿಕೊಳ್ಳಲು ಸೋತರೆ ಮೂಢನಂಬಿಕೆಯಾಗುತ್ತದೆ. ವಿವೇಕಾನಂದರು ಇಂತಹವರನ್ನು ವಿರೋಧಿಸುತ್ತಿದ್ದರು. ಇಡೀ ಜಗತ್ತಿನ ಮಾನವರೊಳಗಿರುವ ಅಪಾರವಾದ ಆತ್ಮಶಕ್ತಿಯ ಮೇಲೆ ನಂಬಿಕೆ ಇಟ್ಟರೆ ಮಾನವನೊಳಗಿರುವ ಅಮೃತವಾದ ಜ್ಞಾನ
ಸದ್ಬಳಕೆ ಆಗುತ್ತದೆ ಎನ್ನುವುದು ಅವರ ಸಂದೇಶ.
ನೀನು ಅಮೃತಪುತ್ರ,ದೇವರ ಪುತ್ರ, ಅಗಾಧವಾದ ಆತ್ಮಶಕ್ತಿ
ನಿನ್ನೊಳಗೇ ಅಡಗಿರುವಾಗ ಹೊರಗೆ ಹುಡುಕಿದರೆ ಸಿಗದು.
ಮೂಲ ಶಕ್ತಿಯ ಮೇಲೆ ನಂಬಿಕೆಯಿದ್ದರೆ ರೆಂಬೆಗಳನ್ನು ಸರಿಯಾದ ಮಾರ್ಗದಲ್ಲಿ ಬೆಳೆಸಬಹುದು. ಇವೆಲ್ಲವೂ ಇಂದು ಅರ್ಥ ವಾಗದಿದ್ದರೂ ಸತ್ಯವಾಗಿದೆ. ಮಕ್ಕಳ ಆಂತರಿಕ ಜ್ಞಾನಕ್ಕೆ ಪೂರಕವಾದ ಶಿಕ್ಷಣ,ಸಂಸ್ಕಾರವನ್ನು ಕೊಟ್ಟಾಗಲೇ
ವಿವೇಕ ಬೆಳೆಯೋದು ಆನಂದವನ್ನು ಒಳಗೆ ಕಾಣಬಹುದು.
ಹೊರಗಿನ ಮನರಂಜನೆ ತಾತ್ಕಾಲಿಕವಾದರೆ ಒಳಗಿನ ಆತ್ಮವಿಶ್ವಾಸ,ನಂಬಿಕೆ ಶಾಶ್ವತ. ದೇವರೆಲ್ಲಿರೋದು? ಪ್ರತಿಮೆಯಲ್ಲಿಯೋ ಪ್ರತಿಭೆಯಲ್ಲಿಯೋ? ಎಂದಾಗ ಎರಡೂ ಕಡೆ ಇರುವ ದೇವರನ್ನು ಕಾಣೋದಕ್ಕೆ ನಂಬಿಕೆ,ಶ್ರದ್ದೆ,ಭಕ್ತಿಯ ಜ್ಞಾನ ಮುಖ್ಯ. ವ್ಯವಹಾರಕ್ಕೆ ಹೆಚ್ಚಾಗಿ ಬಳಸಿದರೆ ಹಣದ ಹಿಂದೆ ಬರುವ ಋಣವೂ ಹೆಚ್ಚಾಗಿ ನಂಬಿಕೆ ಕುಸಿಯುತ್ತದೆ.
ಒಟ್ಟಿನಲ್ಲಿ ನಂಬಿಕೆಯಿರಲಿ ಅಪನಂಬಿಕೆ ಮೂಢನಂಬಿಕೆ ಬೇಡ. ನಾವಿದ್ದೇವೆಂದರೆ ನಮ್ಮಲ್ಲಿ ದೈವತ್ವವೂ ಇರುತ್ತದೆ.
ಒಳ್ಳೆಯದನ್ನು ಜನರು ನಂಬೋದಿಲ್ಲವೆಂದರೆ ಅವರಲ್ಲಿ ಕೆಟ್ಟದ್ದು ಹೆಚ್ಚಾಗಿರುತ್ತದೆ ಅಷ್ಟೆ.
No comments:
Post a Comment