ಬ್ರಿಟಿಷ್ ಸರ್ಕಾರದ ಅನ್ಯಾಯ,ಅಧರ್ಮ, ಅತ್ಯಾಚಾರ, ಅಸತ್ಯ, ಅನೀತಿಯ ವ್ಯವಹಾರವನ್ನು ವಿರೋಧಿಸಿ ತಮ್ಮ ಜೀವವನ್ನು ಲೆಕ್ಕಿಸದೆ ದೇಶದ ಬಿಡುಗಡೆಗಾಗಿ ಹೋರಾಟದ ದಾರಿ ಹಿಡಿದವರೆಷ್ಟೋ ಮಹಾತ್ಮರುಗಳಿಗೆ ಇಂದಿಗೂ ಸಹ ನಮ್ಮ ಈ ತ್ಯಾಗಕ್ಕೆ ಸಿಕ್ಕ ಬೆಲೆಯನ್ನು ಹುಡುಕುವ ಹಾಗಾಗಿದೆ ಎಂದರೆ ತಪ್ಪಿಲ್ಲ.
ದೇಶದೊಳಗಿರುವ ಎಲ್ಲರಿಗೂ ಸ್ವಾತಂತ್ರ್ಯ ಹೋರಾಟಗಾರರ ವಿಚಾರ ತಿಳಿದಿದೆ. ಪಠ್ಯಪುಸ್ತಕಗಳಲ್ಲಿ, ಪ್ರಚಾರಕರಲ್ಲಿ, ಮಾಧ್ಯಮಗಳಲ್ಲಿ ಮಧ್ಯವರ್ತಿಗಳಲ್ಲಿ ಈ ವಿಚಾರಗಳನ್ನು ತಿಳಿಸುವ ಸ್ವಾತಂತ್ರ್ಯ ಬಹಳಷ್ಟಿದೆ. ಆದರೆ ತಿಳಿಸಿದವರಿಗೆ ನಿಜವಾದ ಸ್ವಾತಂತ್ರ್ಯದ ಮೂಲಾರ್ಥ ತಿಳಿಯದೆ ಅದನ್ನು ರಾಜಕೀಯವಾಗಿ ಹರಡುತ್ತಾ ದೇಶದ ಜನರೊಳಗಿದ್ದ ದ್ವೇಷ, ರೋಷ, ಅಸೂಯೆ,ತಾರತಮ್ಯ, ಭಿನ್ನಾಭಿಪ್ರಾಯ, ಸೇಡನ್ನು ಇನ್ನಷ್ಟು ದಷ್ಟಪುಷ್ಟವಾಗಿಸಿ ನಮ್ಮವರನ್ನೇ ದ್ವೇಷ ಮಾಡುತ್ತಾ ವಿದೇಶಿಗಳ ಕೈಗೆ ಶಿಕ್ಷಣ,ವ್ಯವಹಾರ ಕೊಟ್ಟು ದೇಶದ ತುಂಬಾ ಜನರಿದ್ದರೂ ದೇಶಭಕ್ತರ ಸಂಖ್ಯೆ ಕಡಿಮೆ.
ಇಷ್ಟಕ್ಕೂ ಪ್ರಜಾಪ್ರಭುತ್ವದ ದೇಶದಲ್ಲಿ ಪ್ರಜೆಗಳಿಗೆ ಕೊಡಲೇ ಬೇಕಾದ ದೇಶೀಯ ಶಿಕ್ಷಣವನ್ನು ಕೊಡಬೇಕಾದವರೆ ವಿದೇಶಕ್ಕೆ ಹೊರಟರೆ ಅವರನ್ನು ದೇವರೆಂದು,ಮಹಾತ್ಮರೆಂದು, ಶ್ರೀಮಂತ ರೆಂದು,ವಿದ್ಯಾವಂತರೆಂದು ತಿಳಿದು ಅನುಸರಿಸಿದವರ ತಪ್ಪಿಲ್ಲ. ಇಂದಿನ ಭಾರತ ಅಂದಿನ ಭಾರತ ಕ್ಕಿಂತ ಹೆಚ್ಚು ಬದಲಾಗಿಲ್ಲ.ಅಂದು ಹೊರಗಿನಿಂದ ಬಂದು ಆಳಲು ಹೊರಟವರಿಗೆ ಅಂದಿನ ರಾಜರುಗಳ ಆಂತರಿಕ ದ್ವೇಷವೇ ಸಹಕರಿಸಿತ್ತು.ಈಗ ನಮ್ಮವರನ್ನೇ ನಾವು ದ್ವೇಷ ಮಾಡುತ್ತಾ, ಹೊರಗಿನವರನ್ನು , ಹೊರಗಿನಿಂದ ಕರೆದು ಕೂರಿಸಿ ವ್ಯವಹಾರವನ್ನು ಬೆಳೆಸಲು ಭೂಮಿಯನ್ನು, ಜನರನ್ನು ಕೊಟ್ಟು ಕರೆಸಿಕೊಳ್ಳುವ ಹಂತಕ್ಕೆ ನಮ್ಮ ರಾಜಕೀಯ ವ್ಯವಸ್ಥೆ ಬಂದಿದೆ. ಕಾರಣವಿಷ್ಟೆ ಸಾಲ. ಅಧ್ಯಾತ್ಮ ಚಿಂತಕರ ಪ್ರಕಾರ ಮಾನವನ ಸಾಲ ತೀರುವುದು ಸತ್ಕರ್ಮ, ಸ್ವಧರ್ಮ, ಸ್ವಶಿಕ್ಷಣ, ಸುಜ್ಞಾನ, ಸ್ವಾವಲಂಬನೆ, ಸ್ವಾಭಿಮಾನದ ಸ್ವತಂತ್ರ ಜೀವನದಿಂದ. ಹಾಗಾದರೆ ಈಗಿನ ದೇಶದ ಸಾಲವನ್ನು ತೀರಿಸಲು ಇವುಗಳಿಂದ ಸಾಧ್ಯವೆ?
ಇನ್ನಷ್ಟು ಮತ್ತಷ್ಟು ಹೊರಗಿನ ಸಾಲವನ್ನು ಒಳಗೆಳೆದುಕೊಂಡು ಸ್ವತಂತ್ರವಾಗಿ ಬದುಕಲು ಸಾಧ್ಯವೆ?
ಸಾಮಾನ್ಯರಲ್ಲಿದ್ದ ಜ್ಞಾನವನ್ನು ತಿರಸ್ಕರಿಸಿ ದೇಶವನ್ನೇ ವಿದೇಶ ಮಾಡಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆಗೆ ನಾವು ಹೊರಟಿರುವಾಗ ನಮಗೆ ಸ್ವಾತಂತ್ರ್ಯ ಸಿಕ್ಕಿದ್ದು ಸತ್ಯವೆ
ಎನ್ನುವ ಬಗ್ಗೆ ಸಂಶಯ ಮೂಡುತ್ತದೆ. ನಮ್ಮ ಜ್ಞಾನವೇ ನಮ್ಮಿಂದ ದೂರವಾಗುತ್ತಿದೆ,ನಮ್ಮವರೆ ನಮಗೆ ಶತ್ರು ವಾಗಿ
ಅಡ್ಡ ನಿಂತಿದ್ದಾರೆ, ನಮ್ಮ ಮಕ್ಕಳೇ ನಮ್ಮ ದೇಶ ಬಿಟ್ಟು ವಿದೇಶಕ್ಕೆ ಹಾರುತ್ತಿದ್ದಾರೆ.ಇನ್ನು ಧರ್ಮ, ಸಂಸ್ಕೃತಿ, ಕಲೆ, ಆಚಾರ, ವಿಚಾರ, ಸಾಹಿತ್ಯ, ಸಂಗೀತದಲ್ಲಿಯೂ ಪಾಶ್ಚಾತ್ಯರ ಪ್ರವೇಶವಾಗಿದೆ. ಹಾಗಾದರೆ ಇಲ್ಲಿ ನಮ್ಮದು ಏನಿದೆ? ಶಿಕ್ಷಣದಲ್ಲಿಯೇ ಹೊರಮುಖವಾಗಿರುವ ಜ್ಞಾನ
ಒಳಗಿನ ಜ್ಞಾನದೆಡೆಗೆ ಬರೋದಕ್ಕೆ ಬಹಳ ಸಮಯ ಬೇಕು.
ಆದರೆ, ಇರುವವರೆಲ್ಲರೂ ಈ ಸತ್ಯ ತಿಳಿದು ಹಿಂದಿರುಗುವ
ಸ್ವಾತಂತ್ರ್ಯ ಇನ್ನೂ ನಮ್ಮಲ್ಲಿದೆ ಎನ್ನುವ ಆತ್ಮವಿಶ್ವಾಸ ನಮಗಿದ್ದರೆ ಮುಂದಿನ ಭಾರತವು ಆತ್ಮಜ್ಞಾನಿಗಳ ಭಾರತ ಆಗಬಹುದೇನೂ.
ಒಳಗೆಳೆದುಕೊಂಡ ಕೆಟ್ಟ' ವಿಷ'ಯಗಳಿಂದ ದೇಹದೊಳಗೇ
ನಿಧಾನವಾಗಿ ಹರಡಿದ ವಿಷ ಜೀವವನ್ನು ಬಲಿತೆಗೆದುಕೊಂಡರೂ ಮೂಲದಲ್ಲಿದ್ದ ಅಮೃತದಂತಹ
ಜ್ಞಾನದಿಂದ ಮತ್ತೆ ಬದುಕಿಸಬಹುದಲ್ಲವೆ? ಇದಕ್ಕೆ ಸಹಕಾರ
ಸಿಗೋದಕ್ಕೆ ನಮ್ಮಲ್ಲಿ ಕಷ್ಟ.ಕಾರಣ ಹೊರಗಿನಿಂದ ತುಂಬಿದ
ವಿಷವೇ ದೇಹವನ್ನು ನಡೆಸುತ್ತಿರುವಾಗ ಒಳಗೇ ಇದ್ದ ಅಮೃತವೂ ವಿಷವಾಗಬಹುದು. ಹೀಗಾಗಿ ಮಕ್ಕಳಿಗೆ ಸ್ವತಂತ್ರ ಜ್ಞಾನ ಹೆಚ್ಚಿಸಿ, ಅವರ ಒಳಗಿನ ಮೂಲದ ಶಕ್ತಿಗೆ,ಪ್ರತಿಭೆಗೆ,ಆಸಕ್ತಿಗೆ,ಜ್ಞಾನಕ್ಕೆ ಪೂರಕವಾದ ಶಿಕ್ಷಣ ಕೊಡುವ ಸ್ವಾತಂತ್ರ್ಯ ಪೋಷಕರಿಗಿದ್ದರೆ ಉತ್ತಮ.
ಪೇರೆಂಟ್ಸ ಎನ್ನುವ ಆಂಗ್ಲ ಪದಕ್ಕೆ ತಕ್ಕಂತೆ ಹಣವನ್ನು, ಮಕ್ಕಳನ್ನು ಕೊಟ್ಟು ತಮ್ಮ ಸ್ವಾತಂತ್ರ್ಯ ಕಳೆದುಕೊಂಡು
ಅನಾವಶ್ಯಕವಾದ ವಿಚಾರಗಳಿಂದ ಮಕ್ಕಳ ಮುಗ್ದ ಮನಸ್ಸನ್ನು ಕೆಡಿಸಿ ಪ್ರಬುದ್ದರನ್ನಾಗಿಸಲು ಹೊರಟವರಿಗೆ ಕೊನೆಗಾಲದಲ್ಲಿ ಹಣವೂ ಇಲ್ಲ,ಮಕ್ಕಳೂ ಇಲ್ಲ, ಜ್ಞಾನವೂ
ಇಲ್ಲವಾದರೆ ಸ್ವಾತಂತ್ರ್ಯ ಯಾರಿಗೆ ಕೊಟ್ಟಿದ್ದೇವೆ.
ಭೌತಿಕದಲ್ಲಿ ನಿಜವಾಗಿಯೂ ಎಲ್ಲರೂ ಮುಂದುವರಿದ
ಪ್ರಜೆಗಳಾದರೂ ಅಧ್ಯಾತ್ಮ ದ ಪ್ರಕಾರ ನಮ್ಮತನ, ನಮ್ಮ ಜ್ಞಾನ,ನಮ್ಮ ಮಕ್ಕಳಿಗೇ ಹಂಚಲಾಗದ ನತದೃಷ್ಟರು ಇಂದು
ಮಕ್ಕಳನ್ನು ವಿದೇಶಕ್ಕೆ ಕಳಿಸುವುದಕ್ಕೇ ತಯಾರಿ ನಡೆಸಿರುವುದಕ್ಕೆ ಅಜ್ಞಾನದ ಶಿಕ್ಷಣವೇ ಕಾರಣವಾಗಿದೆ.
ಎಲ್ಲರಿಗೂ ಹೆಸರು,ಹಣ,ಅಧಿಕಾರ,ಸ್ಥಾನಮಾನಕ್ಕಾಗಿ ವ್ಯವಹಾರದಲ್ಲಿ ಮುಳುಗಿದ್ದರೂ ವ್ಯವಹಾರದ ಸಾಲವೇ ಬೇರೆ,ದೇಶದ ಸಾಲವೇ ಬೇರೆ. ಅಧ್ಯಾತ್ಮದ ಋಣವನ್ನು
ತೀರಿಸಲು ಆಂತರಿಕ ಜ್ಞಾನವೇ ಮೂಲ ಶಕ್ತಿ. ಆದರೆ ಜನ್ಮ ಜನ್ಮಗಳಿಂದ ಹೊತ್ತು ಬಂದದ್ದನ್ನು ಒಂದೇ ಜನ್ಮದಲ್ಲಿ ತೀರಿಸಲು ಯಾರಿಗೂ ಸಾಧ್ಯವಿಲ್ಲ. ಹೀಗಾಗಿ ಸಾಲ ಮಾಡದೆ
ಇದ್ದದ್ದರಲ್ಲಿ ಉಳಿಸಿ,ಬೆಳೆಸಿ ತೀರಿಸುವುದಕ್ಕೆ ಹಿಂದಿನ ಮಹಾತ್ಮರುಗಳು ಪ್ರಯತ್ನಿಸಿ ಗೆದ್ದರು. ಒಟ್ಟಿನಲ್ಲಿ ಇಡೀ
ಜಗತ್ತಿನಲ್ಲಿ ಯಾರೂ ಸಾಲವಿಲ್ಲದೆ ಬದುಕಿಲ್ಲ.ಆಗೋದೂ
ಇಲ್ಲ.ಕೊನೆಪಕ್ಷ ನಮ್ಮ ಹತ್ತಿರದ ಸಾಲವನ್ನು ಸ್ವಧರ್ಮ, ಸತ್ಕರ್ಮ, ಸ್ವದೇಶದಲ್ಲಿದ್ದೇ ತೀರಿಸುವ ಜ್ಞಾನವಿದ್ದರೆ ಅದೇ
ಮುಕ್ತಿ. ಸ್ವಾತಂತ್ರ್ಯ ವೆಂಬುದನ್ನು ಸ್ವೇಚ್ಚಾಚಾರವೆಂದರಿತು
ಮನಸ್ಸಿಗೆ ಬಂದಂತೆ ನಡೆದರೆ ತಪ್ಪು. ಇದರಿಂದಾಗಿ ಯಾವ
ದೇಶವೂ ಉದ್ದಾರವಾಗೋದಿಲ್ಲ. ಇತರರಿಂದ ಪಡೆದ ಮೇಲೆ
ಕೊಡುವುದೂ ಧರ್ಮ. ಇಲ್ಲವಾದರೆ ಅವರಿಂದ ಪಡೆಯದೆ
ದೂರವಿರಬೇಕಷ್ಟೆ. ಸಂಸಾರ ನಡೆಸಲು ಸಮಾಜದಿಂದ
ಪಡೆಯುವಾಗ ಸಮಾಜಕ್ಕೆ ತಿರುಗಿ ಕೊಡುವ ಜ್ಞಾನಬೇಕು.ಇಲ್ಲವಾದರೆ ಅದೇ ಋಣವಾಗಿ ಕಾಡುತ್ತದೆ.ಹಾಗೆಯೇ ದೇವರನ್ನು ಬೇಡಿ ಎಲ್ಲಾ ಪಡೆದ ಮೇಲೆ ದೇವರನ್ನು ಮರೆತರೆ ಅಧರ್ಮ. ದೇಶದಿಂದ ಎಲ್ಲಾ
ಪಡೆದು ವಿದೇಶ ಉದ್ದಾರ ಮಾಡಿದರೂ ಅಧರ್ಮ.
ಸ್ವಾತಂತ್ರ್ಯ ನಮ್ಮಜನ್ಮ ಸಿದ್ದ ಹಕ್ಕು. ಆದರೆ ಜನ್ಮದ ಮೂಲ
ಧರ್ಮ, ಕರ್ಮ, ಶಿಕ್ಷಣ,ಜ್ಞಾನವನ್ನೇ ಮಕ್ಕಳಿಗೆ ಸ್ವತಂತ್ರ ವಾಗಿ
ತಿಳಿಸದಿದ್ದರೆ ಹಕ್ಕು ಯಾರಿಗೆ ಸೇರಿತು? ಇಲ್ಲಿ ಭಾರತವನ್ನು
ಮಾತ್ರ ತೆಗೆದುಕೊಂಡು ಹೇಳದೆ ಎಲ್ಲಾ ದೇಶಗಳ, ರಾಜ್ಯಗಳ
ಜನರಿಗೆ ಅವರವರ ಮೂಲವನ್ನರಿತು ಅಲ್ಲಿದ್ದೇ ಜೀವನನಡೆಸಲು ಅವಕಾಶವಿದ್ದರೂ ಅದನ್ನು ಬಿಟ್ಟು ಹೊರ
ಬಂದು ಸ್ವಾತಂತ್ರ್ಯ ಕಳೆದುಕೊಂಡರೆ ಇದರಲ್ಲಿ ತಪ್ಪು ಯಾರದ್ದು? ಪೋಷಕರೆಂದಾಗ ದೇಶವನ್ನೂ ಪೋಷಣೆ ಮಾಡೋದಕ್ಕೆ ಮಕ್ಕಳಿಗೆ ದೇಶೀಯ ಶಿಕ್ಷಣ ನೀಡುವುದು
ಧರ್ಮ.ನಂತರವಷ್ಟೆ ಹೊರಗಿನ ಶಿಕ್ಷಣ. ಒಳಗಿನಜ್ಞಾನಕ್ಕೆ
ವಿರುದ್ದವಾದ ಹೊರಗಿನಜ್ಞಾನ ಮೊದಲೇ ಒಳಗೆ ತುಂಬಿದರೆ
ದೇಹ ನಡೆಸೋದು ಹೊರಗಿನಜ್ಞಾನವೇ.ಹೀಗೆಯೇ ನಮ್ಮ
ದೇಶದ ಈ ಸ್ಥಿತಿಗೂ ಇದೇ ಕಾರಣವಾಗಿದೆ. ದೇಶದಲ್ಲಿದ್ದ ಅಗಾಧವಾದ ಜ್ಞಾನದ ಸಂಪತ್ತನ್ನು ತಿರಸ್ಕರಿಸುತ್ತಾ ಹೊರಗಿನ ವಿಜ್ಞಾನಕ್ಕೆ ತಲೆಬಾಗಿದ ದೇಹವನ್ನು ನಡೆಸಿದ್ದು ವಿಜ್ಞಾನ. ಅತಿಯಾದ ವೈಜ್ಞಾನಿಕ ಸಂಶೋಧನೆಗಳಿಂದ ಒಳಗಿದ್ದ ಅಧ್ಯಾತ್ಮ ಜ್ಞಾನ ಹಿಂದುಳಿದು ಹೊರಗಿನವರೆ ನಮ್ಮನ್ನು ಆಳಲು ಬಂದರೂ ಕಾಣಿಸುತ್ತಿಲ್ಲ.ಕಂಡರೂ ಅದನ್ನು ವಿರೋಧಿಸಿದರೂ ಪ್ರಯೋಜನವಿಲ್ಲ. ಹಲವರ
ದೇಹದೊಳಗೆ ಆವರಿಸಿರುವ ಈ ಶಕ್ತಿಯನ್ನು ವಿರೋಧಿಸಲು
ಆಗದೆ ಬಿಡಲೂ ಆಗದೆ ಅತಂತ್ರಸ್ಥಿತಿಗೆ ತಲುಪಿದೆ ನಮ್ಮ ಸ್ವಾತಂತ್ರ್ಯ. ಒಟ್ಟಿನಲ್ಲಿ ಇಲ್ಲಿ ಎಲ್ಲಾ ಮಾನವರೆ ಆದರೆ ಎಲ್ಲಾ
ಮಹಾತ್ಮರಲ್ಲ.ಎಲ್ಲಾ ಭಾರತೀಯರಾದರೂ ಎಲ್ಲರಲ್ಲಿಯೂ ಭಾರತೀಯರ ಜ್ಞಾನವಿಲ್ಲ. ಎಲ್ಲಾ ಭೂಮಿ ಮೇಲಿದ್ದರೂ ಎಲ್ಲಾ ಭೂಮಿಯ ಋಣ ತೀರಿಸಲಾಗುತ್ತಿಲ್ಲ. ಎಲ್ಲರಿಗೂ ಸ್ವಾತಂತ್ರ್ಯ ಸಿಕ್ಕಿದ್ದರೂ ಎಲ್ಲರೂ ಸತ್ಯ ಹೇಳೋ ಹಾಗಿಲ್ಲ.
ಅಸುರ ಶಕ್ತಿಯ ಹಿಡಿತದಲ್ಲಿರುವ ದೇಹದೊಳಗೆ ಅಡಗಿರುವ
ಮಹಾಶಕ್ತಿಯನ್ನು ಕಾಣೋದಕ್ಕೆ ಆಗೋದಿಲ್ಲ. ನಾವೇ ಇಷ್ಟಪಟ್ಟು ಸೇರಿಸಿದ್ದನ್ನು ನಾವೇ ಕಷ್ಟಪಟ್ಟು ಹೊರಹಾಕಲು ಕಷ್ಟವಾದರೆ ಬೇರೆ ಯಾರಿಗೆ ಸಾಧ್ಯ? ಪರಮಾತ್ಮ ಎಲ್ಲರಲ್ಲಿಯೂ ಸರಿಸಮನಾಗಿ ಆವರಿಸಿದ್ದರೂ ಕೆಲವರಿಗೆ ಮಾತ್ರ ಮೊದಲೇ ಅರಿತು ನಡೆಯೋ ಜ್ಞಾನವಿರುತ್ತದೆ.
ಕೆಲವರಿಗಷ್ಟೇ ಮಧ್ಯದಲ್ಲಿ ಅರಿವಿಗೆ ಬಂದು ಹಿಂದಿರುಗಿ ಹೋಗಬಹುದು.ಹಲವರಿಗೆ ತಿಳಿಯದೆಯೇ ಮುಂದೆ ಮುಂದೆ ಹೋಗುವಾಗ ತಿಳಿದವರು ನಿಲ್ಲಿಸಿ ತಿಳಿಸಿದರೆ ಉತ್ತಮ. ಸ್ವತಂತ್ರ ಭಾರತವನ್ನು ಆಳೋದು ಸುಲಭ.ಆದರೆ
ನಮ್ಮನ್ನು ನಾವೇ ಆಳಿಕೊಳ್ಳುವುದು ಕಷ್ಟ.ಒಂದು ರಾಜಕೀಯ ಇನ್ನೊಂದು ರಾಜಯೋಗ.ಯೋಗಿಗಳ ದೇಶಕ್ಕೆ ರಾಜಯೋಗದ ಶಿಕ್ಷಣವಿರಬೇಕಿತ್ತು.ಶಿಕ್ಷಣವೇ ರಾಜಕೀಯಕ್ಕೆ ತಿರುಗಿದರೆ ದೇಶದ ಸ್ವಾತಂತ್ರ್ಯ ಯಾರಿಗೆ ಸಿಕ್ಕಿದೆ?
ಯೋಗಿಗಳ ದೇಶವನ್ನು ಭೋಗ ಜೀವನಕ್ಕಾಗಿ ಪರಕೀಯರ ಶಿಕ್ಷಣದ ಹಿಂದೆ ನಡೆಸಿ ರೋಗವನ್ನು ಹೆಚ್ಚಿಸುತ್ತಾ ಆಳಿದವರಿಗೆ ಸ್ವಾತಂತ್ರ್ಯ ಸಿಕ್ಕಿದೆ.
ಸತ್ಯ ಧರ್ಮವಿಲ್ಲದ ಜೀವನ ಎಷ್ಟು ವರ್ಷ ನಡೆಸಿದರೂ ವ್ಯರ್ಥ. ಇದನ್ನು ನಮ್ಮ ಹಿಂದಿನ ಮಹಾತ್ಮರುಗಳೇ ತಿಳಿಸಿ
ಹೋಗಿದ್ದಾರೆ. ದೇಶ ರಕ್ಷಣೆ ಕ್ಷತ್ತಿಯರಿಂದಾಗಬೇಕು.ಕ್ಷತ್ರಿಯ
ಈಗೆಲ್ಲಿರುವುದು? ರಾಜರ ಕಾಲ ಹೋಗಿ ಪ್ರಜಾಪ್ರಭುತ್ವ
ಬಂದಿದೆ.ಇಲ್ಲಿ ರಾಜರು ಯಾರು? ಸೇವಕರು ಯಾರು? ಸೈನಿಕರಷ್ಟೇ ದೇಶ ಕಾಯುವ ವೀರರು. ದೇಶದೊಳಗಿರುವ ಶತ್ರುಗಳನ್ನು ಓಡಿಸುವವರು ಯಾರು? ನಮ್ಮೊಳಗೇ ಅಡಗಿರುವ ಅತಿಯಾದ ಸ್ವಾರ್ಥ ಅಹಂಕಾರ ಅಜ್ಞಾನವೇ
ನಮ್ಮ ಹಿತ ಶತ್ರುಗಳಾದಾಗ ಸ್ವಾತಂತ್ರ್ಯ ಕ್ಕೆ ದಕ್ಕೆ ಆಗೋದು
ಸಹಜ. ಭೌತಿಕದಲ್ಲಿ ಸ್ವಾತಂತ್ರ್ಯ ಪಡೆದರೂ ಅಧ್ಯಾತ್ಮ ದ ಸ್ವಾತಂತ್ರ್ಯ ಕಳೆದುಕೊಂಡರೆ ತುಂಬಲಾರದ ಕಷ್ಟ ನಷ್ಟ ಮನುಕುಲಕ್ಕೆ ತಾನೇ.
No comments:
Post a Comment