ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Friday, August 19, 2022

ಧರ್ಮ ಕ್ಷೇತ್ರೇ ಕುರುಕ್ಷೇತ್ರೇ.....

ಧರ್ಮ ಕ್ಷೇತ್ರೇ ಕುರುಕ್ಷೇತ್ರ.... ಇಲ್ಲಿ ಕ್ಷೇತ್ರ  ಎನ್ನುವ ಪದವನ್ನು ಅರ್ಥ ಮಾಡಿಕೊಂಡರೆ ಭಗವದ್ಗೀತೆ ಯ ಉದ್ದೇಶ ಅರ್ಥ ಆಗಬಹುದು. ಸಾಮಾನ್ಯವಾಗಿ ಹಿಂದಿನ ರಾಜಪ್ರಭುತ್ವ ದಲ್ಲಿ ಕಾಣುವ ನಾಲ್ಕು ವರ್ಣಗಳಲ್ಲಿ ನಾಲ್ಕು ಕ್ಣೇತ್ರಗಳಿದ್ದವು. ಧಾರ್ಮಿಕ, ರಾಜಕೀಯ, ಆರ್ಥಿಕ, ಹಾಗು ಸಾಮಾಜಿಕ ಕ್ಷೇತ್ರ. ಇದರಲ್ಲಿ ಮೇಲಿನ ಕ್ಷೇತ್ರದ ಪ್ರಕಾರ ನಡೆಯುವಾಗ  ಹಣವನ್ನು ಧರ್ಮದ ಮಾರ್ಗದಲ್ಲಿ ಸಂಪಾದಿಸಿ  ರಾಜಕೀಯ, ಆರ್ಥಿಕ, ಸಾಮಾಜಿಕ ಪ್ರಗತಿಯಾಗುತ್ತಿತ್ತು. ಯಾವಾಗ ಧರ್ಮ ಬಿಟ್ಟು ರಾಜಕೀಯ ಬೆಳೆಯಿತೋ ಆಗಲೇ ಅಧರ್ಮದೆಡೆಗೆ ಮನುಕುಲ ನಡೆದು ಕೊನೆಯ ಕ್ಷೇತ್ರದಲ್ಲಿ ಅಸಮಾನತೆ,ಅಸತ್ಯ,ಅಧರ್ಮ, ಅನೀತಿ
ಅನ್ಯಾಯಗಳು ಬೆಳೆಯುತ್ತಾ ಮನುಕುಲವನ್ನೇ ಹಾಳುಮಾಡಿತು.
ಇದನ್ನು ಸರಿಪಡಿಸಲೆಂದೇ ಧರ್ಮ ಯುದ್ದಗಳಾದವು.ಧರ್ಮ ಸ್ಥಾಪನೆಯಾಯಿತು. ಆದರೆ, ಮಾನವನೊಳಗೇ ಅಡಗಿದ್ದ ಅರಿಷಡ್ವರ್ಗಗಳೇ  ಜನ್ಮ ಜನ್ಮಕ್ಕೂ ಆಳಿದ ಪ್ರಭಾವ ಇಂದಿಗೂ
ಕ್ಷೇತ್ರ ಕ್ಷೇತ್ರಗಳಲ್ಲಿ ಭ್ರಷ್ಟಾಚಾರ ಬೆಳೆದು ನಿಂತಿದೆ.ಹಾಗಾದರೆ ಇದನ್ನು ರಾಜಕೀಯದಿಂದ ಸರಿಪಡಿಸಬಹುದೆ? ರಾಜಯೋಗದಿಂದಲೇ ಎಂದಾಗ ಪ್ರಜಾಪ್ರಭುತ್ವ ದೇಶದ ಪ್ರಜೆಗಳಲ್ಲಿ ರಾಜಯೋಗದ ಜ್ಞಾನವಿದ್ದರೆ ತಮ್ಮನ್ನು ತಾವರಿತು ಇದ್ದಲ್ಲಿಯೇ ಇದ್ದುದರಲ್ಲಿಯೇ  ತಮ್ಮ ಜೀವ ಉಳಿಸಿಕೊಂಡು ಸನ್ಮಾರ್ಗ, ಸ್ವಧರ್ಮ ಸತ್ಕರ್ಮದೆಡೆಗೆ ಹೋಗಲು ಸಾಧ್ಯವಾದರೆ
ಭಗವದ್ಗೀತೆ ಯಲ್ಲಿರುವ ಪ್ರತಿಯೊಂದು ಧರ್ಮ ಸೂಕ್ಷ್ಮ ಅರ್ಥ ಆಗಬಹುದು. ಶಾಲೆ ಕಾಲೇಜುಗಳಲ್ಲಿ ಭಗವದ್ಗೀತೆ ಅಳವಡಿಸಿದ್ದರೂ ಶಿಕ್ಷಕರಲ್ಲಿ,ಗುರುಗಳಲ್ಲಿ,ಪೋಷಕರಲ್ಲಿ ರಾಜಕೀಯವಿದ್ದರೆ ವ್ಯರ್ಥ ಪ್ರಯತ್ನ.ಅಲ್ಲಿರುವ ರಾಜಕೀಯವೇ ಬೇರೆ ಇಲ್ಲಿರುವ‌ರಾಜಕೀಯವೇ ಬೇರೆ.ಅಲ್ಲಿದ್ದ ಕ್ಷತ್ರಿಯ ಧರ್ಮವೆ ಬೇರೆ  ಇಂದಿನ ಪ್ರಜಾಧರ್ಮ ವೇ ಬೇರೆ.ಅಂದಿದ್ದ ವರ್ಣ ಪದ್ದತಿ ಬೇರೆ ಇಂದಿನ ಜಾತಿ ರಾಜಕೀಯವೇ ಬೇರೆ.ಆದರೂ ಓದಿ ತಿಳಿದು ತಿಳಿಸುವಾಗ ಪ್ರತಿಯೊಬ್ಬರಿಗೂ ಒಂದೊಂದು  ಸತ್ಯದ ಅರಿವಾದರೂ ಬೇರೆಯವರಿಗೂ ಅದೇ ಅನುಭವವಾಗದಿರಬಹುದು.ಆದರೆ ಸತ್ಯ ಧರ್ಮ ಒಂದೇ. ಒಂದೇ ದೇಶದಲ್ಲಿ ಅಸಂಖ್ಯಾತ ಧರ್ಮ, ಪಂಗಡ,ಜಾತಿ,ಪಕ್ಷಗಳು ಜನರನ್ನು ಆಳುವುದರಲ್ಲಿ ಧರ್ಮ ಎಲ್ಲಿದೆ? ಯಾರಲ್ಲಿದೆ? ಎಷ್ಟಿದೆ? ಎಂದು ಅಳೆಯಲಾಗದ ಮೇಲೆ ನಮ್ಮೊಳಗಿರುವ ಜ್ಞಾನದಿಂದ ಎಷ್ಟು ಸಾಧ್ಯವೋ ಅಷ್ಟು ಪ್ರಜಾಧರ್ಮದ ಪ್ರಕಾರ ದೇಶದ ಸಾಲ ತೀರಿಸುವತ್ತ ನಡೆಯುವುದಷ್ಟೇ ಈಗಿರುವ ಮಾರ್ಗ. ನಾವಂದು ಕೊಂಡ. ಹಾಗೆ ದೇವರು ಹೊರಗಿಲ್ಲ.ಒಳಗೇ ಇರೋದು. ಹುಡುಕಿಕೊಳ್ಳಲು ಜ್ಞಾನ ಬೇಕು. ಸತ್ಯವೇ ದೇವರಾಗಬೇಕು. ಅಸತ್ಯದೆಡೆಗೆ  ನಡೆದಷ್ಟೂ ಹಣ ಸಿಗಬಹುದು.ಹಣವನ್ನು ಸದ್ಬಳಕೆ ಮಾಡಿಕೊಳ್ಳಲು ಜ್ಞಾನ ಬೇಕು.ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಮಾಡುತ್ತಿರುವ  ಇಂದು ನಾವೆಲ್ಲರೂ ಯಾರದ್ದೋ ಜ್ಞಾನದಲ್ಲಿ ಎಲ್ಲಿ ಅಮ್ಮ ಎಂದು ಹೊರಗೆ ಹುಡುಕುತ್ತಿದ್ದೇವೆ. ನಮ್ಮ  ನಮ್ಮ ಅಮ್ಮ ಒಳಗೇ ಇದ್ದರೂ ಹೊರಗೆ ಹುಡುಕಿದರೆ ಸಿಗುವಳೆ?
ಭಾರತಮಾತೆ,ಕನ್ನಡಮ್ಮ ಎನ್ನುವ  ನಮ್ಮಲ್ಲಿ ಭಾರತೀಯತೆ,ಕನ್ನಡದ ಜ್ಞಾನವಿದೆಯೆ? ವ್ಯವಹಾರಕ್ಕೆ ಬಳಸಿ ಜ್ಞಾನದಿಂದ ದೂರವಾದರೆ ಸರ್ಕಾರ ಕಾರಣವಲ್ಲ.ನಮ್ಮದೇ ಸಹಕಾರವೇ ಕಾರಣ.ಅವರವರ ಮೂಲ ಧರ್ಮ ಕರ್ಮ,ಶಿಕ್ಷಣ,ಭಾಷೆ, ಜನ್ಮಸ್ಥಳ,ಜನ್ಮಭೂಮಿಯನ್ನು ತೊರೆದು ದೂರಹೋಗಿ ತಿರುಗಿ ಬರೋದರ ಬದಲಾಗಿ ಇದ್ದಲ್ಲಿಯೇ ಸರಿಯಾದ ಶಿಕ್ಷಣದಿಂದ ಒಗ್ಗಟ್ಟಿನಿಂದ ನಮ್ಮವರನ್ನು ,ಮಕ್ಕಳು ಮಹಿಳೆಯರನ್ನು ಅರ್ಥ ಮಾಡಿಕೊಂಡರೆ ರಾಜಕೀಯವೇಕೆ? ಭೂಮಿ ಮೇಲೆ ನಿಂತು ಭೂಮಿಯನ್ನು ಆಳೋದರಿಂದ ಮುಕ್ತಿ ಸಿಗುವುದೆ? ಅಥವಾ ಭೂಮಿಯನ್ನು ಬಿಟ್ಟು  ಆಕಾಶದಲ್ಲಿ ಎಷ್ಟು ದಿನ ಹಾರಬಹುದು? ಹಾಗೆಯೇ  ಜನನ ಮರಣದ ನಡುವಿನ‌ ಜೀವನ ಕ್ಷಣಿಕವಾಗಿದೆ. ಇರೋವಾಗಲೇ ಆಂತರಿಕ ಶಕ್ತಿಯಿಂದ ನಮ್ಮ ಜ್ಞಾನವನ್ನು ಹೆಚ್ಚಿಸಿಕೊಂಡು ಋಣ ಅಥವಾ ಸಾಲ ತೀರಿಸಲು ರಾಜಯೋಗದಿಂದ ಸಾಧ್ಯವೆಂದರು ಮಹಾತ್ಮರುಗಳು
ಎಷ್ಟೇ ಮುಂದೆ ಅಧರ್ಮದೆಡೆಗೆ ನಡೆದರೂ ಪರಮಾತ್ಮನನ್ನು ಸೇರದ ಜೀವಕ್ಕೆ ಶಾಂತಿ, ತೃಪ್ತಿ, ಮುಕ್ತಿ ಸಿಗೋದಿಲ್ಲವೆನ್ನುವ ಒಂದೇ ಸತ್ಯವನ್ನು ಮಾನವನು ಪ್ರತಿಕ್ಷಣ ನೆನಪಿಸಿಕೊಂಡರೆ ಹೋಗುವ ದಾರಿ ಸರಿಇರುತ್ತದೆ. ಕಷ್ಟಗಳು ಹೊರಗೂ ಇದೆ ಒಳಗೂ ಇದೆ.ಒಳಗಿನ ಕಷ್ಟ ಪರಮಾತ್ಮನೆಡೆಗೆ ಸಾಗಿಸುತ್ತದೆ.ಹೊರಗಿನ‌ಕಷ್ಟ ಪರದೇಶದೆಡೆಗೆ ನಡೆಸುತ್ತದೆ ಯಾವುದು ಬೇಕು ತೀರ್ಮಾನ ನಮಗೇ ಬಿಟ್ಟದ್ದು. 
ಎಲ್ಲಾ ಕ್ಷೇತ್ರಗಳ ವ್ಯವಹಾರಿಕ ಪ್ರಗತಿ ದೇಶದ ಧರ್ಮ ರಕ್ಷಣೆಗೆ  ತಡೆಯಾದರೆ  ಹಣದಿಂದ ಧರ್ಮ ವೆ? ಧರ್ಮದಿಂದ ಹಣವೆ? ಜ್ಞಾನದಿಂದ  ದೇಶವೆ? ಅಜ್ಞಾನದಿಂದ ದೇಶವೆ? ಇಲ್ಲಿ ಯಾರನ್ನೂ ತಪ್ಪು ಎನ್ನಲಾಗದು. ಕಾರಣ  ಒಬ್ಬರನ್ನೊಬ್ಬರು ಅವಲಂಬಿಸಿ ನಡೆದಿರುವ  ರಾಜಕೀಯದಲ್ಲಿ ಸಹಕರಿಸಿದವರೆ ಪ್ರಜೆಗಳು. ಈಗ ಪ್ರಜೆಗಳ ಸಂಕಷ್ಟಕ್ಕೆ ರಾಜಕೀಯದಲ್ಲಿ ಪರಿಹಾರವಿಲ್ಲ. ಪರಕೀಯರ ಸಾಲವನ್ನು ಪರಮಾತ್ಮ ತೀರಿಸುವುದಾಗಿದ್ದರೆ ಈ ದೇಶದಲ್ಲಿ ಆಚರಣೆಯಲ್ಲಿರುವ ಎಲ್ಲಾ ಧಾರ್ಮಿಕ ಕಾರ್ಯದಿಂದ ದೇಶದ ಸಾಲ ತೀರಬೇಕಿತ್ತು. ಇದನ್ನು ಭೌತಿಕದಲ್ಲಿ ತೀರಿಸಲಾಗದ ಮೇಲೆ ಅಧ್ಯಾತ್ಮ ದೆಡೆಗೆ ಜನರೆ ಹೋಗಬೇಕು. ಅಧ್ಯಾತ್ಮ ಎಂದರೆ ನಮ್ಮ ಸಾಲ ನಾವೇ ತೀರಿಸೋದಕ್ಕಾಗಿ ಆತ್ಮಾನುಸಾರ ಸತ್ಯ ಧರ್ಮದ ಪ್ರಕಾರ ಹಣ ಸಂಪಾದಿಸಿ ಋಣ ತೀರಿಸೋದಷ್ಟೆ.
ನಮ್ಮ ಹಣ ಯಾರ ಋಣವಾಗಿದೆ ಪರೀಕ್ಷಿಸಿಕೊಂಡರೆ ನಾವೇ ಪರಕೀಯರ ಋಣದಲ್ಲಿರುವಾಗ ದೇಶವನ್ನು ಆಳುವುದರಲ್ಲಿ ಅರ್ಥ ವಿಲ್ಲ. ಒಟ್ಟಿನಲ್ಲಿ ಆತ್ಮಾವಲೋಕನ  ಒಂದೊಂದು ಕ್ಷೇತ್ರದಲ್ಲಿ ಆಗಬೇಕಿದೆ. ನಮ್ಮ ನಮ್ಮ ಕ್ಷೇತ್ರದ ಶುದ್ದಿ ನಮ್ಮ ಆತ್ಮಜ್ಞಾನದಿಂದ ಮಾಡಿಕೊಂಡರೆ  ಸ್ವಚ್ಚ ಭಾರತ. ಆತ್ಮನಿರ್ಭರ ಭಾರತ ಸಾಧ್ಯ. ಏನಂತೀರಾ? 
ದೇಶದ ಸಾಮಾನ್ಯಪ್ರಜೆಯಾಗಿದ್ದು  ತಿಳಿಸುವ ಸ್ವಾತಂತ್ರ್ಯ ನಮಗಿದೆ. ಕೆಲವರಿಗೆ  ಇದರಲ್ಲಿ ಸತ್ಯ ಕಾಣದಿರಬಹುದು.ರಾಜಕೀಯದೊಳಗಿರುವ ಮನಸ್ಸಿಗೆ ರಾಜಯೋಗ ಕಾಣೋದಿಲ್ಲ. ಹಾಗೆಯೇ ರಾಜಯೋಗದಲ್ಲಿರುವ ಮನಸ್ಸಿಗೆ ರಾಜಕೀಯ ಹಿಡಿಸೋದಿಲ್ಲ. ಇವೆರಡೂ ಒಂದೇ ನಾಣ್ಯದ ಎರಡು ಮುಖಗಳಾದರೂ ವ್ಯವಹಾರಕ್ಕೆ ಬಂದಾಗ ಒಂದೇ ಸಮ ನಡೆಯುತ್ತದೆ.ಆದರೆ ಧರ್ಮದ ಪ್ರಕಾರ ನಡೆಯುವುದಕ್ಕೆ ಎರಡೂ ಸಿದ್ದವಾದರೆ  ಸಮಾನತೆ ಬೆಳೆಯುತ್ತದೆ
ಹಿಂದಿನ  ಪುರಾಣ,ಇತಿಹಾಸದಲ್ಲಿರುವ ಈ ಏರು ಪೇರುಗಳೇ ಕೊನೆಯಲ್ಲಿ ಯುದ್ದಕ್ಕೆ ದಾರಿಮಾಡಿಕೊಟ್ಟಿತು. ಈಗಲೂ ಇದೆ.ಆದರೆ ಯುದ್ದವಿಲ್ಲ.ಇದ್ದರೂ ಸೈನಿಕರಷ್ಟೇ ಮಾಡಬೇಕು.ರಾಜಕೀಯವಿದೆ ರಾಜಧರ್ಮ ವಿಲ್ಲ. ಕ್ಷಾತ್ರವೀರ್ಯ ಇಲ್ಲದಿದ್ದರೆ ಪ್ರಯೋಜನವಿಲ್ಲ.ಯಾವುದಕ್ಕೆ ಹೋರಾಡಬೇಕಿತ್ತು? ಯಾವುದಕ್ಕಾಗಿ ಹೋರಾಟ ನಡೆದಿದೆ? ನಮ್ಮ ಸಹಕಾರ ಎಷ್ಡಿದೆ ಇದರಿಂದಾಗಿ ಯಾರಿಗೆ ಲಾಭವಾಗುತ್ತಿದೆ? ಮುಂದಿನ ಪೀಳಿಗೆ ಯಾವ ಕಡೆ ನಡೆದಿದೆ?  ನಮ್ಮ ಸ್ವಾತಂತ್ರ್ಯ ಯಾರಿಗೆ ಸಿಕ್ಕಿದೆ? ಮಹಾತ್ಮರು ಯಾರು? ದೇವರಿರೋದೆಲ್ಲಿ? ದೇಶದೊಳಗಿರುವ ನಾವ್ಯಾರು? ನಮ್ಮಲ್ಲಿ ಯಾರ ಜ್ಞಾನವಿದೆ? ಈ ಎಲ್ಲಾ ಪ್ರಶ್ನೆಗೆ ಉತ್ತರ ಒಳಗಿದ್ದು ಹುಡುಕಿಕೊಳ್ಳಲು ಯೋಗ ಬೇಕಿದೆ.ಯೋಗ ಎಂದರೆ ಸೇರೋದು ಯಾರನ್ನು ಸೇರಬೇಕೆಂದರೆ ಜೀವಾತ್ಮ ಪರಮಾತ್ಮನ ಸೇರಲು ಒಳಹೊಕ್ಕಿ ಸತ್ಯ ತಿಳಿಯಬೇಕಿದೆ. ಹೊರಗಿನ ಸತ್ಯವೇ ಇದನ್ನು ತಡೆಯುತ್ತಿದೆ.  ಇದಕ್ಕೆ ಶಿಕ್ಷಣವೇ ಕಾರಣವಾಗಿದೆ.ಬದಲಾವಣೆ ಶಿಕ್ಷಣದಲ್ಲಿಯೇ ಮಾಡಬೇಕಿದೆ. ಸರ್ಕಾರ ಮಾಡಿದಿದ್ದರೂ ನಮ್ಮ ಸಹಕಾರದಲ್ಲಿ ಬದಲಾವಣೆ ಸಾಧ್ಯವಿಲ್ಲವೆ? ಮಕ್ಕಳಿಗೆ ಉತ್ತಮ ವಿಚಾರ ತಿಳಿಸಿ ಬೆಳೆಸಲು ಪೋಷಕರಲ್ಲಿ ಜ್ಞಾನವಿಲ್ಲವೆ? ಎಲ್ಲಿಗೆ ಹೋಗುತ್ತಿದೆ ಭಾರತ?
ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ  ಅಸಹಕಾರ ಚಳುವಳಿಯ ಅಧ್ಯಾತ್ಮ ಸತ್ಯವೆಂದರೆ  ಅಧರ್ಮಕ್ಕೆ ಸಹಕಾರ ನೀಡದಿದ್ದರೆ ಧರ್ಮ ಗೆಲ್ಲುವುದೆನ್ನುವುದಾಗಿತ್ತು.ಅದನ್ನು ಅರ್ಥ ಮಾಡಿಕೊಳ್ಳಲು  ಇಂದು ಸೋತಿರೋದಕ್ಕೆ  ಪ್ರಜೆಗಳ ಅಜ್ಞಾನ ಕಾರಣ.

1 comment: