ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Tuesday, August 23, 2022

ಆತ್ಮಜ್ಞಾನಿ=ಭೌತವಿಜ್ಞಾನಿ?

ಅಧ್ಯಾತ್ಮ  ವಿಜ್ಞಾನ ಮತ್ತು ಭೌತ ವಿಜ್ಞಾನ  ಎರಡೂ ಸೇರೋದೂ ಒಂದೇ ಕಡೆ. ಆಕಾಶತತ್ವವನ್ನು ಭೂಮಿ ಮೇಲಿದ್ದೇ ಯಾವುದೇ ಜೀವ ಜಂತುಗಳಿಗೆ ತೊಂದರೆ ಕೊಡದೆ ತಪ್ಪಸ್ಸಿನಿಂದ ತಿಳಿದ ಆತ್ಮಜ್ಞಾನಿಗಳಿಗೂ, ಆಕಾಶದೆತ್ತರ ಹಾರಿ,ಬೇರೆ ಬೇರೆ ಗ್ರಹಗಳ ಬಗ್ಗೆ ಹೆಚ್ಚು ಹೆಚ್ಚು ತಿಳಿಯುತ್ತಾ  ಭೂಮಿಯ ಮೇಲಿದ್ದರೂ ಆಕಾಶದೆತ್ತರ ದ ಚಿಂತನೆಯಲ್ಲಿಯೆ ಜೀವನ ನಡೆಸುವ ಭೌತ ವಿಜ್ಞಾನಿಗೂ ವ್ಯತ್ಯಾಸವಿಷ್ಡೆ. ಇವರಿಂದ ಅಲ್ಪ ಸ್ವಲ್ಪ ಜ್ಞಾನ‌ಪಡೆದು ಭೂಮಿಯಲ್ಲಿ ಜೀವನ‌ನಡೆಸುವ ಮಾನವರಿಗೆ ಮಾತ್ರ ಇಬ್ಬರ ಶಕ್ತಿಯನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗದೆ ಅರ್ಧ ಸತ್ಯದ ರಾಜಕೀಯದಲ್ಲಿಯೇ ಕಾಲಹರಣ ಮಾಡಿಕೊಂಡು  ಜೀವನದ ಸತ್ಯಾಸತ್ಯತೆಯನ್ನು  ತಿಳಿಯಲಾಗದೆ ಭೂಮಿಯಲ್ಲಿ ಸಮಸ್ಯೆಗಳೇ ಬೆಳೆಸಿರೋದು. ಆ ಸಮಸ್ಯೆಯೊಳಗೇ  ಜೀವನ ನಡೆಸೋ ಏಕೈಕ ಪ್ರಾಣಿಸಂಸಾರಿ. ಸಸ್ಯಗಳನ್ನು ತಿಂದು ಬದುಕಿದವರು ಸಸ್ಯಹಾರಿ, ಪ್ರಾಣಿಗಳನ್ನು ತಿಂದು  ಬದುಕಿದವರು ಶಾಕಾಹಾರಿಗಳು,ಸಮಸ್ಯೆಗಳನ್ನು ತಿಂದು ಬದುಕಿದವರೆ ಸಂಸಾರಿಗಳು. ಒಟ್ಟಿನಲ್ಲಿ ಸಂಸಾರಿಗಳಿಗಿರುವಷ್ಡು ಸಮಸ್ಯೆ ಯಾವ ಆತ್ಮಜ್ಞಾನಿಗೂ ಇಲ್ಲ ವಿಜ್ಞಾನಿಗೂ ಇಲ್ಲ. ಇದಕ್ಕೆ ಕಾರಣವೇ ಯಾರೋ ಕಂಡುಹಿಡಿದಸತ್ಯವನ್ನು ನಾನು ಕಂಡು ಹಿಡಿದೆ ಎನ್ನುವ ಅಹಂಕಾರ,ಸ್ವಾರ್ಥ ದ ವ್ಯವಹಾರ ಜ್ಞಾನ. ಅತಿಯಾದರೆ ಗತಿಗೇಡು.

No comments:

Post a Comment