ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Wednesday, August 17, 2022

ಮಾತಿಗಿಂತ ಕೃತಿಯೇ ದೊಡ್ಡದು

ಮೌನಕ್ಕಿಂತ ಮಾತು ದೊಡ್ಡದು ಮಾತಿಗಿಂತ ಕೃತಿ ದೊಡ್ಡದು
ಇಲ್ಲಿ ಮೌನ ಬಂಗಾರ ಮಾತು ಬೆಳ್ಳಿ.ಎನ್ನುವುದನ್ನು ಇಂದಿನ
ಜಗತ್ತಿನಲ್ಲಿ ಯಾರೂ ಒಪ್ಪದ ಸ್ಥಿತಿಗೆ ಸಮಾಜ ತಲುಪಿರುವಾಗ ಯಾವ ಮಾತು ಆಡಿದರೆ  ಈ ಮೌನಕ್ಕಿಂತ
ಉತ್ತಮವೆನ್ನುವ ಬಗ್ಗೆ ತಿಳಿಯುವುದು ಅಗತ್ಯವಿದೆ.
ಅಧ್ಯಾತ್ಮ ತಿಳಿಸುವಂತೆ ಪ್ರತಿಯೊಬ್ಬರೂ ಆ ಪರಾಶಕ್ತಿ,ಪರಮಾತ್ಮನ ಅಂಶವನ್ನು ಹೊಂದಿರುವವರಾದರೂ ಯಾರಿಗೂ ಆ ಶಕ್ತಿಯ ದರ್ಶನ ಆಗದಿರುವಾಗ  ಆ ಶಕ್ತಿಯ ದರ್ಶನವಾದವರು ಮೌನ ಮುರಿದು  ಸರಿಯಾಗಿ ಮಾತನಾಡುವುದು ಅಗತ್ಯವಿದೆ.
ಯಾವಾಗ ಮೌನದಿಂದ ಸುಮ್ಮನಿದ್ದು  ಅಧರ್ಮ, ಅಸತ್ಯ, ಅನ್ಯಾಯಗಳನ್ನು ನೋಡಿಕೊಂಡಿರುವೆವೋ ಆಗಲೇ ಅದು
ನಮ್ಮ ಪ್ರಾರಬ್ದಕರ್ಮ ವಾಗಿ ಬೆಳೆದು ಕಾಲಬುಡ ನಿಲ್ಲುತ್ತದೆ
ಇದು ಪೋಷಕರಿಗಾಗಬಹುದು,ಗುರು ಹಿರಿಯರಿಗಾಗಬಹುದು. ಮಕ್ಕಳು ತಿಳಿಯದೆ ತಪ್ಪು ಮಾಡಿದರೂ ತಪ್ಪನ್ನು ತಿದ್ದದೆ ಬಿಟ್ಟು ಮುಂದೆ ದೊಡ್ಡದಾಗಿ
ಬೆಳೆದಾಗಲೂ ಮೌನವಾಗಿರುವ ಶಕ್ತಿವುಳ್ಳವರು ವಿರಳ.
ಹೀಗಾಗಿ ಇಂದು ಎಲ್ಲರೂ ಮಾತನಾಡುವ ಅಧಿಕಾರಕ್ಕಾಗಿ
ಹೋರಾಟ ಮಾಡಿಯಾದರೂ ಸರಿ ನನ್ನ ಮಾತಿಗೆ ಬೆಲೆ ಬರಬೇಕೆನ್ನುವವರ ಸಂಖ್ಯೆ ಬೆಳೆದಿದೆ.ಆದರೆ, ಯಾವುದರ ಪರವಾಗಿ ಮಾತನಾಡಿದರೆ ಉತ್ತಮ ಶಾಂತಿ ಸಿಗುವುದೆನ್ನುವ
ಜ್ಞಾನವಿಲ್ಲದೆ ಕೇವಲ ರಾಜಕೀಯಕ್ಕೆ ಪರ ನಿಂತು ನಮ್ಮವರ
ತಪ್ಪು ಮುಚ್ಚಿಟ್ಟು ಆಳೋದಕ್ಕೆ  ಮಾತನಾಡಿದರೆ ಅಧರ್ಮ.
ಇದಕ್ಕೆ ಬದಲಾಗಿ ಮೌನವೇ ಉತ್ತಮ ದಾರಿ ತೋರಿಸುತ್ತದೆ
ಮಾತಿಗಿಂತ ಕೃತಿಯೇ ಮೇಲು ಎನ್ನುತ್ತಾರೆ. ಕೆಲವು ವೇಳೆ ಕೃತಿಚೌರ್ಯದಿಂದಾಗುವ  ಅನಾಹುತಗಳು ಮನುಕುಲಕ್ಕೆ
ಮಾರಕವಾಗುವುದರಿಂದ ಸಾಧ್ಯವಾದರೆ ಬದುಕಿದ್ದಾಗಲೆ ಸತ್ಯ ನುಡಿದು ಹೋಗುವುದು ಉತ್ತಮ.
ನಮ್ಮ ಹಿಂದಿನ ಪುರಾಣ,ಇತಿಹಾಸದ ಕಥೆಗಳೇ ಇದಕ್ಕೆ ಸಾಕ್ಷಿ.
ಮಹಾತ್ಮರುಗಳೇನೋ ಬರೆದಿಟ್ಟರು.ಅದನ್ನು ಓದಿ ಅರ್ಥ ಮಾಡಿಕೊಳ್ಳುವವರಿಗೆ  ಸತ್ಯದ ಅರಿವಾಗದಿದ್ದರೆ ಕೇವಲ ಪ್ರಚಾರಕ್ಕಷ್ಟೇ ಸೀಮಿತವಾಗಿ ಮಧ್ಯವರ್ತಿಗಳು ಬೆಳೆಯುತ್ತಾರೆ. ಸತ್ಯ ದ ಅನುಭವ ನಮ್ಮ ಜೀವಕ್ಕೆ ಸಿಕ್ಕರೆ
ಸರಿ.ಸಿಗದಿದ್ದರೆ ಅದನ್ನು ಅಸತ್ಯವೆನ್ನುವವರು  ತಿರುಚಿ ಬರೆದು ಮೂಲವನ್ನು ಹಿಂದುಳಿಸಿ ಆಳುತ್ತಾರೆ.ಹೀಗಾಗಿಯೇ
ನಮ್ಮ‌ಹಿಂದಿನ ಮಹಾತ್ಮರ ಹೆಸರಲ್ಲಿ ಸಾಕಷ್ಟು ಕಾರ್ಯಕ್ರಮ
ನಡೆದರೂ ಮಹಾತ್ಮರುಗಳ ಸಂಖ್ಯೆ ಬೆಳೆಯದೆ,ಮಧ್ಯವರ್ತಿಗಳು ಬೆಳೆದು ಅತಂತ್ರಸ್ಥಿತಿಗೆ ತಲುಪಿದೆ ಜಗತ್ತು. ಭಾರತವನ್ನು ಅರ್ಥ ಮಾಡಿಕೊಳ್ಳಲು
ಕಷ್ಟ.ಅದರಲ್ಲೂ ಭಾರತೀಯರನ್ನು ಕಷ್ಟ ಕಷ್ಟ.ಕಾರಣ ಇಲ್ಲಿ
ಮಧ್ಯವರ್ತಿಗಳು ಹೆಚ್ಚಾಗಿ ಈ ಕಡೆ ರಾಜಕೀಯ ಇನ್ನೊಂದು ಕಡೆ ರಾಜಯೋಗ ವನ್ನು  ಅನರ್ಥದಿಂದ ಎಳೆದಾಡಿಕೊಂಡು
ವ್ಯವಹಾರಕ್ಕೆ ಬಳಸುತ್ತಾ ವಿದೇಶದವರೆಗೆ ಪ್ರಚಾರವಾಗಿದ್ದರೂ ನಮ್ಮೊಳಗೇ ಅಡಗಿದ್ದ ಸತ್ಯಕ್ಕೆ ನಾವೇ
ಮೋಸಮಾಡಿಕೊಂಡು ಜೀವನ ನಡೆಸುವಂತಾಗಿದೆ ಎಂದರೆ
ಮೌನವನ್ನು ದುರ್ಭಳಕೆ ಮಾಡಿಕೊಂಡರೂ ಎಲ್ಲಾ ದೇವರೆ
ಸರಿಮಾಡುತ್ತಾನೆಂಬ ಭ್ರಮೆಯಲ್ಲಿ ನಮ್ಮವರ ಸತ್ಯವನ್ನು
ಕೇಳದೆ ಪರಕೀಯರ ಮಿಥ್ಯವನ್ನು ಸ್ವಾಗತಿಸುತ್ತಾ ಮುಂದೆ ನಡೆದಂತೆಲ್ಲಾ ಮೂಲದ ಮೌನ ಮತ್ತೆ ಹುಟ್ಟಿ ಮಾತಾಡೋ
ಪರಿಸ್ಥಿತಿ ಬಂದಿರೋದು.ವಿಗ್ರಹದೊಳಗಿರುವ ಶಕ್ತಿ ಮಾತನಾಡೋದಿಲ್ಲ.ಹತ್ತಿರವೇ ಇರುವ ಮಹಾಶಕ್ತಿಯ ಮಾತು ಕೇಳೋಹಾಗಿಲ್ಲ. ಇವರಿಬ್ಬರ ನಡುವಿನ ಜೀವನ
ಶಾಂತಿಯಿಂದ ಇರಬೇಕಾದರೆ ಸಮಾನತೆ ಇರಬೇಕು.
ಪ್ರತಿಮೆಗೂ ಪ್ರತಿಭೆಗೂ ವ್ಯತ್ಯಾಸವಿಷ್ಟೆ ಒಂದು ಜೀವನಕ್ಕೆ
ದಾರಿ ತೋರಿಸಿದರೆ ಇನ್ನೊಂದು ಜೀವನ ನಡೆಸುತ್ತದೆ.
ಜೀವನದಲ್ಲಿ ಮಾತಿರಬೇಕು.ಮಾತೇ ಜೀವನವಾಗದಂತೆ ನೋಡಿಕೊಳ್ಳಬೇಕು. ನುಡಿದರೆ ಮುತ್ತಿನ ಹಾರದಂತಿರಬೇಕು.
ನುಡಿದು ಮತ್ತಿಗೆಹಾಕದಂತಾಗಬಾರದಷ್ಟೆ.ಇತ್ತೀಚಿನ ದಿನಗಳಲ್ಲಿ  ನುಡಿಗಳೇ ಜನರನ್ನು ಮುತ್ತಿಗೆ ಹಾಕುವಂತೆ ಮಾಡಿ  ಜನಸಂಖ್ಯೆ ಬೆಳೆದು  ರಾಜಕೀಯ ಪ್ರಭಾವದಿಂದಾಗಿ
ಭೂಮಿಯಲ್ಲಿ ಕ್ರಾಂತಿಕಾರಿಕ ಬೆಳವಣಿಗೆಗಳಾಗುತ್ತಿರುವುದಕ್ಕೆ
ಕಾರಣ ಎಲ್ಲಾ ತಿಳಿದವರು ನಮಗೂ ದೇಶಕ್ಕೂ ಸಂಬಂಧ ಇಲ್ಲ.ನಮ್ಮ ಧರ್ಮ ಬೇರೆ ದೇಶದ ಧರ್ಮ ಬೇರೆ ಎನ್ನುವ
ವ್ಯವಹಾರದಲ್ಲಿರೋದೆಂದರೂ  ತಪ್ಪಾಗುತ್ತದೆಯೆ?

No comments:

Post a Comment