ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Friday, September 2, 2022

ಆಳಾಗಿರಲಿ ಅರಸನಾಗಿರಲಿ,ಗುರುವಾಗಲಿ ಶಿಷ್ಯನಾಗಿರಲಿ ಎಲ್ಲರಿಗೂ ತತ್ವ ಒಂದೇ. ನನ್ನ ಜೊತೆಗೆ ಎಷ್ಟೇ ಜನಬಲ
,ಹಣಬಲ,ಅಧಿಕಾರವಿದ್ದರೂ ಜೀವಾತ್ಮ ಪರಮಾತ್ಮನ ಅಧೀನದಲ್ಲಿರೋದನ್ನು ಮರೆಯಬಾರದೆನ್ನುವುದೆ ತತ್ವಜ್ಞಾನ.
ಯಾವಾಗ ಹೊರಗಿನ ಬಲಾಬಲಗಳು  ಜೀವನದ ಸತ್ಯಾಸತ್ಯತೆಯನ್ನು  ತಿಳಿಸುವುದೋ ಗೊತ್ತೇ ಆಗದೆ ಜೀವನ  ನಡೆಸುವುದೆ ಮಾನವ. ಮನುಕುಲದ ಒಳಿತು  ಕೆಡುಕುಗಳಿಗೆ
ಸಾಧನವಾಗಿರುವ ತತ್ವ ಹಾಗು ತಂತ್ರಶಕ್ತಿಯನ್ನು ಅರ್ಥ ಮಾಡಿಕೊಳ್ಳಲು ಕಷ್ಟ. ಹೀಗಾಗಿ ಮಧ್ಯವರ್ತಿಗಳು  ಹೆಚ್ಚಾಗಿ
ಸುತ್ತಮುತ್ತಲಿನ  ಸಮಾಜದ ಅಂಕುಡೊಂಕು, ಆಗುಹೋಗುಗಳಬಗ್ಗೆ ಪ್ರಚಾರ ಮಾಡುತ್ತಾ  ಜನಜೀವನದಲ್ಲಿ
 ಇದರಿಂದಾಗಿ ಯಾವ ಬದಲಾವಣೆ ಆಗಿದೆ,ಆಗುತ್ತಿದೆ,
ಆಗಬಹುದೆನ್ನುವ ಬಗ್ಗೆ ಚಿಂತನೆ ನಡೆಸುವುದಕ್ಕೂ ಪುರುಸೊತ್ತಿಲ್ಲದೆ   ಅಶಾಂತಿ ಹೆಚ್ಚಾಗುತ್ತಿದೆ. 
ಶಾಂತಿಯಿಂದ ಜೀವನ ನಡೆಸಲುಸಂನ್ಯಾಸಿಯಾಗಬೇಕೆನ್ನುವ
 ಕಾಲವೂ ಹೋಗಿ  ಶಾಂತಿಗಾಗಿ  ಯೋಗವನ್ನು ಅನುಸರಿಸಿದರೂ ಕೇವಲ ಯೋಗಾಸನದಿಂದ ಶಾಶ್ವತ
 ಶಾಂತಿ ಸಿಗುವುದೆ?
ರಾಜಯೋಗದಿಂದ ಸಾಧ್ಯವೆ ಎಂದರೆ ಪ್ರಯತ್ನಪಟ್ಟರೆ ಸಾಧ್ಯವೆಂದು ಮಹಾತ್ಮರುಗಳು ತಿಳಿಸಿದ್ದಾರೆ.ಇಲ್ಲಿ ಮಹಾಯೋಗ ಪರಮಾತ್ಮನೆಡೆಗೆ ಜೀವಾತ್ಮ  ನಡೆಯೋ
ದಾದರೆ  ಪರಮಾತ್ಮ ಇರೋದು ಎಲ್ಲಿ?  ಸತ್ಯ ಹಾಗು ಧರ್ಮದಲ್ಲಿ. ಸತ್ಯ ಯಾವುದು ಎಲ್ಲಿದೆ? ಯಾರಲ್ಲಿದೆ? ಹೇಗಿದೆ? ಇವೆಲ್ಲ ಪ್ರಶ್ನೆಗೆ ಉತ್ತರ  ಒಂದೇ ಅವರವರ 
ಒಳಗೇ ಅಡಗಿದೆ. ಯಾವಾಗ ಮಾನವ  ಹೊರಗಿನ
ವ್ಯವಹಾರಕ್ಕೆ  ಅಸತ್ಯ,ಅಧರ್ಮವನ್ನು ಬಳಸುತ್ತಾ ಮುಂದೆ ನಡೆದನೋ ಅದೇ ಬೆಳೆಯುತ್ತಾ ಮಕ್ಕಳು ಮೊಮ್ಮಕ್ಕಳು, ಮರಿಮಕ್ಕಳವರೆಗೂ  ವ್ಯವಹಾರ ಜ್ಞಾನವೇನೋ ಬೆಳೆಯಿತು
ಆದರೆ ಋಣಮುಕ್ತರಾಗಲು ಪರಮಾತ್ಮನ‌ಕಾಣಲು ಜೀವನಿಗೆ
ಸಾಧ್ಯವಾಗದೆ  ಜನ್ಮ ಜನ್ಮ ಪಡೆದರೂ ಹಿಂದಿನ ವ್ಯವಹಾರ ಜ್ಞಾನವೇ ಶಿಕ್ಷಣ ವಾಗಿದ್ದರೆ  ಮೂಲದ ಧರ್ಮ ಕರ್ಮದ ಕಡೆಗೆ ಹೋಗಲು ಕಷ್ಟ.  ಎಷ್ಟೇ ಭೌತಿಕ ಆಸ್ತಿ ಅಂತಸ್ತು ಇದ್ದರೂ ಜೀವ ಇರೋ ತನಕ ಜನಬಲ ಹೋದನಂತರ ಪರಮಾತ್ಮನೆ ಬಲ.
ಇರೋವಾಗಲೇ ಜ್ಞಾನದ ಮೂಲಕ  ಸತ್ಯ ಧರ್ಮದ ಪ್ರಕಾರ
ನಡೆದವರಿಗೆ ಮುಕ್ತಿ . ಒಟ್ಟಿನಲ್ಲಿ ರಾಜಕೀಯದಲ್ಲಿರುವ ಆಸೆ,ಆಕಾಂಕ್ಷೆ,ಆಸಕ್ತಿ ,ಪ್ರೀತಿ ,ವಿಶ್ವಾಸವು ರಾಜಯೋಗದೆಡೆಗೆ
ತಿರುಗಿಸಲು  ಹೊರಗಿನ ಗುರು ಹಿರಿಯರು ದಾರಿ ತೋರಿಸಬಹುದಷ್ಟೆ.ನಡೆಸುವುದಕ್ಕೆ ಕಷ್ಟ. ಇತ್ತೀಚಿನ ದಿನಗಳಲ್ಲಿ ಸ್ವತಂತ್ರ ವಾಗಿರೋರ ಸಂಖ್ಯೆ ಕಡಿಮೆ.
ಜನಬಲ,ಹಣಬಲ,ಅಧಿಕಾರ ಬಲದಿಂದ  ನಡೆಯುವಾಗ
 ಯಾವ ಬಲವಾದರೂ ಕುಸಿಯಬಹುದೆನ್ನುವ  ಜ್ಞಾನವಿದ್ದರೆ 
ಕೊನೆವರೆಗೂ ಆತ್ಮಬಲ, ಆತ್ಮಾವಲೋಕನ,ಆತ್ಮಶಕ್ತಿ
ಯೊಳಗೆ ಜೀವನ  ನಡೆಸಬಹುದು ಎಂದಿದ್ದಾರೆ ಮಹಾತ್ಮರು.
ಮಹಾತ್ಮರಲ್ಲಿದ್ದ.    ಜ್ಞಾನಶಕ್ತಿಯನ್ನು    ಬಂಡವಾಳವಾಗಿಸಿ
ಕೊಂಡು  ವ್ಯವಹಾರ ನಡೆಸುವಾಗ ಸುಲಭವಾಗಿ ಅಧಿಕಾರ, 
ಹಣ,ಜನ ಸಹಾಯ ಸಿಗುತ್ತದೆ. ಯಾವಾಗ ಬಂಡವಾಳ ಕರಗುವುದೋ ಹಾಗೆಯೇ  ಹೊರಗಿನ ಸಹಕಾರವೂ ದೂರವಾಗುತ್ತದೆ.ಎಲ್ಲಾ ಮಾಯೆ ಎನ್ನುವ ಹಾಗೆ ಮಾಯವಾಗೋ ಜಗತ್ತಿನಲ್ಲಿ ಶಾಶ್ವತವಾಗಿರುವ ಆಂತರಿಕ ಶಕ್ತಿಯನ್ನು ಬೆಳೆಸಿಕೊಂಡು ಮುಕ್ತಿಪಡೆದ  ಮಹಾತ್ಮರುಗಳು 
 ಯಾವಾಗಲೂ  ಅಮರರು.ಅವರ ತತ್ವಜ್ಞಾನವೇ ಬಂಡವಾಳ.
 ಸರ್ಕಾರದ ಹಣವಾಗಲಿ,ಜನರ ಹಣವಾಗಲಿ,ವಿದೇಶದ ಹಣವಾಗಲಿ, ಪರಕೀಯರ ಹಣವಾಗಲಿ ತತ್ವಜ್ಞಾನ,
ಸತ್ಯಜ್ಞಾನದಿಂದ ಬಳಸದಿದ್ದರೆ ಅದೇ ಮುಂದೆ ಹೆಣದಾಟಕ್ಕೆ
ದಾರಿಯಾಗುತ್ತದೆ. ಹಣದಿಂದ ಧರ್ಮ ರಕ್ಷಣೆ ಸಮಾನತೆ ಬೆಳೆಸಬಹುದಾಗಿದ್ದರೆ ದೇಶದಲ್ಲಿ ಇಷ್ಟು ಅಸಮಾನತೆಯ ವಿಷಬೀಜ ಬೆಳೆಯುತ್ತಲಿರಲಿಲ್ಲ. ಅವರವರ ಜ್ಞಾನವೇ ಅವರಿಗೆ ಸಮಾನ. ಜ್ಞಾನವನ್ನು ಸದ್ಬಳಕೆ ಮಾಡಿಕೊಂಡರೆ 
ಉತ್ತಮ ಸಮಾಜ. ಉತ್ತಮ ಸಮಾಜದೊಳಗಿರುವ ಸಂಸಾರದಲ್ಲಿಯೂ ಸಾಮರಸ್ಯವಿರಬೇಕು.
 ಇವೆಲ್ಲವೂ ಒಂದು ದೇಶದೊಳಗಿದ್ದರೆ ದೇಶವೆ ಸುಬಿಕ್ಷವಾಗಿರುತ್ತದೆ. ಭಿಕ್ಷುಗಳ ದೇಶವನ್ನು ಭಿಕ್ಷುಕರ ದೇಶವಾಗಿಸಿರೋದು  ನಮ್ಮದಲ್ಲದ  ಶಿಕ್ಷಣದ ಪ್ರಭಾವವಷ್ಟೆ.
ಏನೇ ಸಮಸ್ಯೆ ಇದ್ದರೂ ಜ್ಞಾನದಿಂದ ಪರಿಹಾರ ಕಂಡುಕೊಂಡ
ಭಾರತ  ಇಂದು ಅಜ್ಞಾನದಿಂದ  ರಾಜಕೀಯದಲ್ಲಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಪಡುತ್ತಿದೆ.ಸಿಗುವುದೆ? ಎಲ್ಲಿದೆ ಸತ್ಯ?
ಎಲ್ಲಿರುವರು ಮಹಾತ್ಮರು? ಯಾವುದು ಧರ್ಮ?
ಪ್ರಶ್ನೆಗೆ ಉತ್ತರ ಪ್ರಜೆಗಳ ಆತ್ಮಾವಲೋಕನದಲ್ಲಿದೆ.  ಆತ್ಮಾವಲೋಕನಕ್ಕೆ ಆತ್ಮಜ್ಞಾನವಿರಬೇಕು. ಆತ್ಮಜ್ಞಾನ ಬೆಳೆಯಲು ಅಧ್ಯಾತ್ಮ ಶಿಕ್ಷಣವಿರಬೇಕು.ಅಧ್ಯಾತ್ಮ ಶಿಕ್ಷಣದಿಂದ ಒಳಗಿನ ಅಹಂಕಾರ ಸ್ವಾರ್ಥ  ನಶಿಸಬೇಕು. ಅಹಂಕಾರ ಸ್ವಾರ್ಥ  ಹೊರಗೆ ಹೋದಾಗಷ್ಟೆ ಒಳಗಿರುವ ಚೇತನಾತ್ಮನ ಬೆಳಕು ಕಾಣಲು ಸಾಧ್ಯವೆನ್ನುವ  ತತ್ವಜ್ಞಾನಿಗಳ  ಪ್ರಕಾರ  ನಡೆಯುವುದಕ್ಕೆ ಹೊರಗಿನ ರಾಜಕೀಯ  ಅಡ್ಡವಾಗಿದ್ದರೆ  ರಾಜಕೀಯ ಬಿಟ್ಟು ಸ್ವತಂತ್ರವಾಗಿ ಜೀವಿಸಬಹುದೆ? ದೇಶಬಿಟ್ಟು ಹೋದರೆ ಇನ್ನಷ್ಟು ಮೂಲದಿಂದ ದೂರವಾದಂತೆಯೆ. ಹೀಗಾಗಿ ಇತ್ತೀಚೆಗೆ ಸಂನ್ಯಾಸಿಗಳಿಗೂ ರಾಜಕೀಯ ಸುತ್ತಿಕೊಂಡು ಆಡಿಸುತ್ತಿದೆ. ಆತ್ಮನಿರ್ಭರ ಭಾರತವಾಗಲು ಆತ್ಮಾವಲೋಕನದಿಂದ ಸಾಧ್ಯ.

No comments:

Post a Comment