ಎಂತಹ ಭ್ರಷ್ಟಾಚಾರದ ಭ್ರಮೆಯಲ್ಲಿ ನಾವಿದ್ದೇವೆಂದರೆ ಜೀವನ್ಮುಕ್ತಿ ಪಡೆಯಲು ಆಳಾಗಿರಬೇಕೆನ್ನುವ ತತ್ವವನ್ನು
ಅರ್ಥ ಮಾಡಿಕೊಳ್ಳದೆ ಆಳುವವರ ಹಿಂದೆ ನಡೆದು ಇನ್ನಷ್ಟು ಸಾಲದ ಸುಳಿಯಲ್ಲಿ ಜೀವ ಜಡವಾದರೆ ಆತ್ಮ ಮೇಲಕ್ಕೆ ಹೋಗಲು ಸಾಧ್ಯವೆ?
ದಾಸರು,ಶರಣರು,ಸಂತರು,ಸಂನ್ಯಾಸಿಗಳು ಮಹಾತ್ಮರುಗಳು ಮಹಾಗುರುಗಳು,ತತ್ವಜ್ಞಾನಿಗಳು ತಂತ್ರದಿಂದ ನೀನು ಮುಕ್ತಿ ಪಡೆಯಬಹುದೆಂದಿರೋದನ್ನು ಕಾಣೋದಿಲ್ಲ.
ಆದರೆ ಇಂದಿನ ತಂತ್ರಜ್ಞಾನದಿಂದ ಸಾಕಷ್ಟು ವಿಷಯ ಸಂಗ್ರಹಮಾಡಿದ ಹಾಗೆ ಹಣವನ್ನೂ ಸಂಗ್ರಹಣೆ ಮಾಡುತ್ತಾ ಹೊರಗಿನ ರಾಜಕೀಯದಲ್ಲಿರುವ ಮಾನವನಿಗೆ
ತನ್ನೊಳಗೇ ಅಡಗಿದ್ದ ಆ ಸಣ್ಣ ಬಿಂದುವಿನೆಡೆಗೆ ಸಾಗಲು ಪರಿಶ್ರಮ ಪಡಲಾಗುತ್ತಿಲ್ಲ. ಇದ್ದಲ್ಲಿಯೇ ಇದ್ದು ಭಗವಂತನ ಕಾಣೋ ಯೋಗಶಕ್ತಿ ಎಲ್ಲೆಡೆಯೂ ತಿರುಗಿದರೆ ಸಿಗದು. ಇದೇ ದೊಡ್ಡ ದೊಡ್ಡ ಸಮಸ್ಯೆಗಳಿಗೆ ದಾರಿಮಾಡಿಕೊಟ್ಟು ಮೂಲ ಶಕ್ತಿಯಿಂದಲೇ ದೂರಮಾಡುತ್ತಾ ಜೀವಾತ್ಮನಿಗೆ ಅತಂತ್ರಸ್ಥಿತಿ ತಲುಪಿಸಿ ಆಳುತ್ತಿದೆ.ಸ್ವತಂತ್ರ ವಾಗಿದ್ದ ಹಿಂದಿನ ಮಹಾತ್ಮರೆಲ್ಲಿ? ಅತಂತ್ರಸ್ಥಿತಿಗೆ ತಲುಪಿಸಿ ಆಳುವ ಮಹೋದಯ,ಮಹಾ ಪುರುಷ,ಸ್ತ್ರೀ ಯರೆಲ್ಲಿ? ಅಲ್ಲಿರುವುದು ನಮ್ಮನೆ ಇಲ್ಲಿ ಬಂದೆ ಸುಮ್ಮನೆ.
ಪರಮಾತ್ಮನೆಡೆಗೆ ಹೋಗೋದಕ್ಕೆ ಸಂಘಟನೆಯಲ್ಲಿ ತತ್ವ ಬೇಕು.ಸ್ವತಂತ್ರ ಜ್ಞಾನ ಬೇಕು.ಸತ್ಯ ಬೇಕು.ಅವರವರ ಧರ್ಮ ದಿಂದ ಶಾಂತಿ,ತೃಪ್ತಿ ಮುಕ್ತಿ ಸಿಗುವಂತಿರಬೇಕಿತ್ತು.ಈಗ ಧರ್ಮ
ಬಿಟ್ಟು ಹೊರನಡೆದವರಿಗೆ ಸಹಕಾರ,ಸಹಾಯ,ಅವಕಾಶ ಅಧಿಕಾರ,ಸ್ಥಾನಮಾನ,ಗೌರವ,ಜನಬಲ,ಹಣಬಲ ಎಲ್ಲಾ ಸಿಗುತ್ತಿದೆ ಎಂದರೆ ಅಜ್ಞಾನ ಮಿತಿಮೀರಿದೆ ಎಂದರ್ಥ.
ಜನನ ಮರಣದ ನಡುವಿನ ಜೀವನದಲ್ಲಿ ಜೀವಿಗಳ ವನವಿದೆ.ಎಲ್ಲಾ ಜೀವಕ್ಕೂ ಅಸ್ತಿತ್ವ ವಿದೆ.ಅಸ್ತಿತ್ವಕ್ಕೆ ದಕ್ಕೆ ಆದರೆ ಅದೇ ವಿರುದ್ದ ನಿಲ್ಲುತ್ತದೆ. ವಿರೋಧವಿದ್ದ ಕಡೆ ಶಾಂತಿಯಾಗಲಿ ಒಗ್ಗಟ್ಟು ಆಗಲಿ ಬೆಳೆಯೋದಿಲ್ಲ. ಹೀಗಾಗಿ ಇಂದಿನ ಒಂದೇ ದೇಶದಲ್ಲಿ ಹಲವಾರು ಸಂಘ,ಸಂಸ್ಥೆ, ಧರ್ಮ, ಜಾತಿ,ಪಂಗಡ,ಪಕ್ಷ,ದೇವರುಗಳ ಹೆಸರಲ್ಲಿ ರಾಜಕೀಯ ಬೆಳೆಸಿಕೊಂಡು ಜನರನ್ನು ಆಳಲು ಹೊರಟು ಆಳುಗಳೇ ಹೆಚ್ಚಾಗಿದ್ದರು ಪರಮಾತ್ಮನ ಆಳಾಗದೆ,
ದಾಸರಾಗದೆ,ಶರಣರಾಗದೆ,ಭಕ್ತರಾಗದೆ,ಯೋಗಿಗಳಾಗದೆ, ಮಹಾತ್ಮರಾಗದೆ ಹೋದ ಜೀವಕ್ಕೆ ಮುಕ್ತಿ ಎಲ್ಲಿದೆ? ಸ್ವಾವಲಂಬನೆ ಹೆಸರಲ್ಲಿ ಪರಕೀಯರ ಕೈಕೆಳಗೆ ದುಡಿಯಲು ಭೂಮಿಯನ್ನು ಮಾರಿ ಹೋದರೆ ಭೂಮಿಯ ಋಣ ತೀರಿಸಲು ಕಷ್ಟ. ಹಾಗೆಯೇ ಭಗವಂತನ ಹೆಸರಲ್ಲಿ ತನ್ನ ತಾನರಿಯದೆ ನಾನೇ ದೇವರೆಂದು ಜನರನ್ನು ಅಧರ್ಮ ಅಸತ್ಯ,ಅನ್ಯಾಯದ ರಾಜಕೀಯಕ್ಕೆ ಎಳೆದರೂ ಮುಕ್ತಿ ಯಿಲ್ಲ. ಮಧ್ಯವರ್ತಿಗಳ ಮಧ್ಯೆ ಸಿಲುಕಿದ ಜೀವಕ್ಕೆ ಶಾಂತಿ ತೃಪ್ತಿ ಮುಕ್ತಿ ಸಿಗೋದು ಕಷ್ಟ.ಹೀಗಾಗಿ ಹಿಂದಿನ ಮಹಾತ್ಮರುಗಳು ನೇರವಾಗಿ ಪರಮಾತ್ಮನೆಡೆಗೆ ನಡೆದರು. ಈಗ ಅವರನ್ನು ಮಧ್ಯೆ ನಿಲ್ಲಿಸಿ ಜನರನ್ನು ತಮ್ಮೆಡೆ ಎಳೆಯೋ ಬದಲಾಗಿ ಅವರಲ್ಲಿದ್ದ ಸತ್ಯಜ್ಞಾನವನ್ನು ಅರ್ಥ ಮಾಡಿಸುವ ಶಿಕ್ಷಣವನ್ನು ನೀಡಿದರೆ ಒಳಗಿರುವ ಅರಿವೆಂಬ ದೈವವೇ ಸ್ವತಂತ್ರ ಬುದ್ದಿ ಜ್ಞಾನಕೊಟ್ಟು ನಡೆಸಬಹುದಿತ್ತು.
ವಿಪರ್ಯಾಸವೆಂದರೆ ನಮ್ಮ ಭಾರತೀಯ ಶಿಕ್ಷಣವೂ ಇಂದು ವ್ಯಾಪಾರದ ವಸ್ತುವಂತಾಗಿ ಜ್ಞಾನವನ್ನು ತಿರಸ್ಕಾರದಿಂದ ಕಂಡು ವೈಜ್ಞಾನಿಕ ಜಗತ್ತಿನಲ್ಲಿ ಜನರನ್ನು ತಂತ್ರದಿಂದ ಆಳಲು ಹೊರಟು ಅತಂತ್ರಸ್ಥಿತಿಗೆ ದೇಶವನ್ನು ನಡೆಸುತ್ತಿದೆ ಎಂದರೆ ಒಪ್ಪೋದಿಲ್ಲ. ಕಾರಣ ನಾವೂ ತಂತ್ರದೊಳಗೇ ಜೀವನ ನಡೆಸೋ ತಂತ್ರಜ್ಞಾನಿಗಳು. ತತ್ವದೆಡೆಗೆ ಹೋಗಲು ಹಿಂದೆ ತಿರುಗಬೇಕಿದೆ. ಹಿಂದಿನವರ ಧರ್ಮ ವೇ ಹಿಂದೂ ಧರ್ಮ.
ಇಂದು ಇಸ್ಲಾಂ ಶಿಕ್ಷಣದ ತಂತ್ರವಾಗಿದೆ.ಮುಂದೆ ಹೀಗೇ ನಡೆದರೆ ಮುಸ್ಲಿಂ ರ ಯಾಂತ್ರಿಕ ಜೀವನದ ಯಂತ್ರಮಾನವ
ಎಲ್ಲವನ್ನೂ ಆ ಮೇಲಿನ ಶಕ್ತಿಯೇ ಸೃಷ್ಟಿ ಮಾಡಿದ್ದರೂ ಕೆಳಗಿನ ಮಾನವನಿಗೆ ಯಾವುದು ಸ್ವತಂತ್ರ ಯಾವುದು ಅತಂತ್ರವೆನ್ನುವ ಜ್ಞಾನವಿಲ್ಲದೆ ಜನನ ಮರಣಗಳ ಸರಪಳಿಯಿಂದ ಬಿಡುಗಡೆ ಕಾಣೋದು ಕಷ್ಟಕರವಾಗಿದೆ.
ಎಲ್ಲೋ ಮೂಲೆಯಲ್ಲಿರುವ ಜೀವಕ್ಕೆ ಮುಕ್ತಿ ಸಿಗಬಹುದು.
ಕಾರಣ ಇದು ಸ್ವತಂತ್ರ ವಾಗಿ ಪರಮಾತ್ಮನೆಡೆಗೆ ಜೀವನ ನಡೆಸಬಹುದು. ಹಾಗಾಗಿ ಯಾರನ್ನು ಆಳಬೇಕು ಅಳಿಸಬೇಕು ಎನ್ನುವ ಅಜ್ಞಾನದಿಂದ ಹೊರಬಂದು ಮಾನವ ನಾನ್ಯಾರ ಅಡಿಯಾಳಾಗಿರುವೆನೆಂಬ ಸತ್ಯ ತಿಳಿದರೆ ಒಳಗಿರುವ ಮಹಾ ಶಕ್ತಿಯನ್ನು ಸದ್ಬಳಕೆ ಮಾಡಿಕೊಳ್ಳಲು ಪ್ರಯತ್ನ ಪಡಬಹುದು. ಎಷ್ಟೋ ಜನ್ಮಗಳ ಪರಾವಲಂಬನೆಯ ಸಾಲದ ಹೊರೆಯನ್ನು ತೀರಿಸಲು ಕಷ್ಟಪಟ್ಟು ದುಡಿಯುವುದು ಸರಿಯಾದ ಮಾರ್ಗ. ಆದರೆ ಇದು ಧರ್ಮ ದ ಮಾರ್ಗದಲ್ಲಿರುವುದು ಅಗತ್ಯ. ಏನೇ ಆದರೂ ಮಾಡಿದ ಸಾಲ ತೀರೋವರೆಗೆ ಮುಕ್ತಿ ಯಿಲ್ಲ. ಎಲ್ಲಾ ಸಾಲಗಾರರೆ.ಅದನ್ನು ತೀರಿಸಲು ಬಂದ ಜೀವದ ಮೇಲೆ ಇನ್ನಷ್ಟು ಸಾಲದ ಹೊರೆ ಹಾಕಿ ಹೋಗುತ್ತಿರುವ ಸರ್ಕಾರಗಳಿಂದ ದೇಶ ಉಳಿಯಬಹುದೆ? ಎಷ್ಟು ಪ್ರಜೆಗಳು ಸ್ವತಂತ್ರ ಜ್ಞಾನದಿಂದ ಪರಮಾತ್ಮನ ಸೇವಾ ಕಾರ್ಯದಲ್ಲಿದ್ದು ದೇಶದ ಋಣ ತೀರಿಸಲು ಸಾಧ್ಯವಾಗಿದೆ?
ಮಹಾವಿಷ್ಣು ವಿನ ಅವತಾರವೆಲ್ಲವೂ ಧರ್ಮ ಸ್ಥಾಪನೆಗಾಗಿ
ಆಗಿದ್ದರೂ ಆ ಮಹಾವಿಷ್ಣುವನ್ನೇ ರಾಜಕೀಯಕ್ಕೆ ಬಳಸಿದರೆ
ಭಕ್ತಿ ಎಲ್ಲಿರುತ್ತದೆ? ಶ್ರದ್ದೆ,ಭಯವೂ ಇಲ್ಲದ ಯಾವುದೇ ಕರ್ಮ ದಿಂದ ಪರಮಾತ್ಮ ಒಲಿಯುವುದಿಲ್ಲ ಎಂದರೆ ಅಸುರ
ಶಕ್ತಿಯನ್ನು ತಿಳಿಯದೆಯೇ ಬೆಳೆಸಿಕೊಂಡು ನಾನು ಬೆಳೆದೆ.
ತತ್ವವನ್ನು ತಂತ್ರವಾಗಿಸಿ ನನ್ನ ಸ್ವಾರ್ಥ ಅಹಂಕಾರ ಬೆಳೆದರೆ
ಅತಂತ್ರಸ್ಥಿತಿಗೆ ಜೀವ ತಲುಪುತ್ತದೆ. ಅತಂತ್ರವನ್ನು ಸ್ವತಂತ್ರ ಮಾಡುವ ಶಕ್ತಿಯೂ ಹಿಂದೂ ಸಂಸ್ಕಾರ,ಸಂಸ್ಕೃತಿ, ಧರ್ಮ ತಿಳಿಸಿದೆ. ಇದನ್ನು ಅವರವರ ಆತ್ಮಶುದ್ದಿಗಾಗಿ ಶಿಕ್ಷಣದ ಮೂಲಕ ತಿಳಿಸಿ ಬೆಳೆಸುವುದೇ ನಿಜವಾದ ಧರ್ಮ ರಕ್ಷಣೆ.
ಅದರಲ್ಲೂ ಬೇಧ ಭಾವದ ಭಿನ್ನಾಭಿಪ್ರಾಯ ದ ದ್ವೇಷ ಬೆಳೆದರೆ ಯಾರಿಗೆ ಮುಕ್ತಿ?
ತಿಳಿದವರಿಗೆ ತಿಳಿಸಬಾರದು,ಅರ್ಧ ತಿಳುವಳಿಕೆಯವರನ್ನು ಪ್ರಶ್ನೆ ಮಾಡಬಾರದು,ಏನೂ ತಿಳಿಯದವರನ್ನು ಆಳಬಾರದು. ಮಾಡಬಾರದ್ದನ್ನು ಮಾಡಿದರೆ ಆಗಬಾರದು ಆಗುತ್ತದೆ ಇದರ ಫಲವೇ ಇಂದಿನ ಸಮಾಜ.
ಈ ದಿನ ಸರ್ ಎಂ ವಿಶ್ವೇಶ್ವರಯ್ಯ ನವರ ಜನ್ಮದಿನದ ಅಂಗವಾಗಿ ಇಂಜಿನಿಯರ್ ದಿನವನ್ನಾಗಿ ಆಚರಣೆ ಮಾಡುತ್ತಾರೆ. ಅವರ ಆ ಪರಿಶ್ರಮದಿಂದಾದ ಆಣೆಕಟ್ಟಿನಿಂದಾಗಿ ಜನಜೀವನದಲ್ಲಿ ಸಾಕಷ್ಟು ಸುಖ,ಸಮೃದ್ದಿ
ಶಾಂತಿ ಬೆಳೆಯಬೇಕಿತ್ತು. ಇತ್ತೀಚಿನ ದಿನಗಳಲ್ಲಿ ಇದು ಕುಸಿಯಲು ಕಾರಣ ನೀರಿನ ದುರ್ಭಳಕೆ ಕಾರಣ.ನೀರಿನ ವಿಚಾರದಲ್ಲಿ ರಾಜಕೀಯ ಶಕ್ತಿ ಪ್ರವೇಶ ಮಾಡಿ ದ್ವೇಷ ಹೆಚ್ಚಾಗಿ ಸರಿಯಾದ ಕೆಲಸ ಮಾಡದೆಯೇ ಪ್ರತಿಫಲ ಕೇಳಿ ಪರಮಾತ್ಮನು ಸರಿಯಾಗಿ ಪ್ರತಿಫಲ ನೀಡುವುದರ ಮೂಲಕ
ಪ್ರಕೃತಿ ವಿಕೋಪಕ್ಕೆ ಜೀವ ಹೋಗುತ್ತಿದೆ. ಜನಜೀವನ ಅಸ್ತವ್ಯಸ್ತವಾಗುತ್ತಿದೆ. ಸಾಲ ಹೆಚ್ಚಾಗಿ ತೀರಿಸಲಾಗದೆ ಆತ್ಮಹತ್ಯೆ ಬೆಳೆಯುತ್ತಿದೆ. ಸರ್ಕಾರಗಳಂತೂ ಉಚಿತ ಯೋಜನೆಗಳಿಂದ ಸೋಮಾರಿಗಳು ಬೆಳೆದು ಮಧ್ಯವರ್ತಿಗಳ ಕುತಂತ್ರದಿಂದ ಬೇಸತ್ತು ಹೋಗುತ್ತಿದ್ದಾರೆ. ಈಗಲೂ ಯಾವ ಪಕ್ಷ ನಮಗೆ ಹೆಚ್ಚು ಕೊಡುತ್ತದೆ ಎನ್ನುವ ಅಜ್ಞಾನದಿಂದ ಹೊರಬರದಿದ್ದರೆ ಹಿಂದೆ ಇರುವ ಪಿತೃಪಕ್ಷ ದೂರವಾಗಿ ಜೀವ ಅತಂತ್ರವಾಗುತ್ತದೆ. ಹೀಗಾಗಿ ಹಿಂದೂ ಧರ್ಮ ವನ್ನು ಅರ್ಥ ಮಾಡಿಕೊಳ್ಳದೆ ಮುಂದೆ ನಡೆಯಬಾರದು. ಹಿಂದೆ ನಮ್ಮ ಹಿಂದಿನವರ ಧರ್ಮ ಕರ್ಮ ವೇ ನಮಗೆ ಪ್ರಾರಂಭದ ಬಂಡವಾಳವಾಗಿತ್ತು. ಇದು ತತ್ವದ ಪ್ರಕಾರವಿದ್ದರೆ ಒಗ್ಗಟ್ಟು. ತಂತ್ರವಾದರೆ ಬಿಕ್ಕಟ್ಟು. ಸ್ವತಂತ್ರ ವಾಗಿದ್ದರೆ ಶ್ರಮಪಟ್ಟು ಮುಂದೆ ನಡೆಯಬಹುದಲ್ಲವೆ?
No comments:
Post a Comment