ಅಂತರಾಷ್ಟ್ರೀಯ ಬಡತನ ನಿರ್ಮೂಲನೆ ದಿನವಾದ ಇಂದು ಬಡತನಕ್ಕೆ ಕಾರಣ ಮತ್ತು ಪರಿಹಾರ ತಿಳಿಯುವ ಪ್ರಯತ್ನ ಮಾಡೋಣವೆ?
ಬಡತನದಲ್ಲಿ ಎರಡು ರೀತಿಯಿದೆ ಜ್ಞಾನದಿಂದ ಬಡವರಾಗೋದು,ಅಜ್ಞಾನದಿಂದ ಬಡವರಾಗೋದು.ಹಿಂದಿನ ಮಹಾತ್ಮರುಗಳಲ್ಲಿ ಜ್ಞಾನವಿತ್ತು ಹಣವಿರಲಿಲ್ಲ ಅವರನ್ನು ಬಡವರೆಂದು ಅಜ್ಞಾನಿಗಳು ತಿಳಿದು ತಿರಸ್ಕಾರದಿಂದ ಕಂಡಿದ್ದರು. ಹಾಗೆ ಹಣದಲ್ಲಿ ಶ್ರೀಮಂತ ರಾಗಿ
ಆತ್ಮಜ್ಞಾನದಲ್ಲಿ ಬಡವರಾದ ಎಷ್ಟೋ ಮಂದಿ ಭೌತಿಕದಲ್ಲಿ ಸಾಕಷ್ಟು ಆಸ್ತಿ ಅಂತಸ್ತು ಹೆಸರು,ಹಣ,ಪದವಿ ಪಟ್ಟ ಪಡೆದರೂ ತೃಪ್ತಿ ಸಿಗದೆ ಜನರ ಹಿಂದೆ ನಡೆದವರನ್ನು ನಿಜವಾದ ಬಡವರೆಂದು ಅಧ್ಯಾತ್ಮ ತಿಳಿಸುತ್ತದೆ. ಈಗಲೂ ಅಂತಹವರ ಸಂಖ್ಯೆ ಬೆಳೆದು ನಿಂತಿದೆ.ನಿಜವಾದ ಜ್ಞಾನಿಗಳ ಸಂಖ್ಯೆ ಇಳಿದಿದೆ ಹೀಗಾಗಿ ಸಾಕಷ್ಟು ಸಮಸ್ಯೆಗಳು ಮಾನವ ಹೊತ್ತು ನಡೆಯಬೇಕಾಗಿದೆ.ಕಾರಣವಿಷ್ಟೆ ಮಾನವ ಭೂಮಿಯಲ್ಲಿ ಜನ್ಮ ತಾಳುವುದೇ ಜ್ಞಾನ ಪಡೆದು ಜೀವನ್ಮುಕ್ತಿ ಪಡೆಯಲೆನ್ನುವ ಮಹಾತ್ಮರ ಸಂದೇಶವನ್ನು ಕೇಳಿದರೂ ಅವರಂತೆ ನಡೆಯಲಾಗದೆ ಅವರ ನುಡಿಯನ್ನು ಮಾತ್ರ ಪ್ರಚಾರ ಮಾಡುತ್ತಾ ಜನರನ್ನು ಸ್ವತಂತ್ರವಾಗಿ ಸತ್ಯದ ಹಾದಿಯಲ್ಲಿ ನಡೆಯುವ ಶಿಕ್ಷಣ ಕೊಡದೆ ಆಳಿದ ರಾಜಕೀಯದ ಪ್ರಭಾವ. ಭಾರತದಂತಹ ಮಹಾ ಜ್ಞಾನಿಗಳ ದೇಶವು ಅಜ್ಞಾನದೆಡೆಗೆ ಹೋಗುತ್ತಾ ಹಣವೇನೂ ಎಲ್ಲರಲ್ಲಿದೆ ಅದನ್ನು ಸದ್ಬಳಕೆ ಮಾಡಿಕೊಂಡು ಹಂಚಿ ಬಾಳುವ ಸುಜ್ಞಾನದ ಕೊರತೆಯಿದೆ. ಹಾಗಂತ ಹಂಚಿಕೆಯು ಸರ್ಕಾರದ ಮೂಲಕ ನಡೆಯುತ್ತಿದೆ. ಎಷ್ಟೇ ಉಚಿತ ಸಾಲ,ಸೌಲಭ್ಯಗಳನ್ನು ಹಂಚಿದರೂ ಅದನ್ನು ಸರಿಯಾದ ಜನರಿಗೆ ತಲುಪಿಸಲಾಗದೆ ಸರ್ಕಾರಗಳು ಸೋತಿವೆ.ಮಧ್ಯವರ್ತಿಗಳು ಮಧ್ಯದಲ್ಲಿಯೇ ತಡೆದು ತಮ್ಮಪಾಲನ್ನು ಇಟ್ಟುಕೊಂಡು ಅಳಿದುಳಿದದ್ದನ್ನು ಹಂಚಿ ಜನರನ್ನು ತಮ್ಮೆಡೆ ಸೆಳೆದು ಆಳುವ ರಾಜಕೀಯದಿಂದ ಬಡತನವು ಬೆಳೆದು ನಿಂತಿದೆ. ಬಡತನವನ್ನು ಉತ್ತಮ ಜ್ಞಾನದ ಶಿಕ್ಷಣದಿಂದ ಸರಿಪಡಿಸಲು ಜ್ಞಾನಿಗಳೇ ತಯಾರಿಲ್ಲ ಎಂದರೆ ಜನರ ಬಡತನ ನಿವಾರಣೆ ಹಣದಿಂದ ಅಸಾಧ್ಯ.
ಹಣ ಪಡೆದರೂ ಸಾಲವಾಗಿ ಅದೇ ಶೂಲವಾಗುವಾಗ ಯಾವ ಸರ್ಕಾರವೂ ಇರೋದಿಲ್ಲ.ಹೀಗಾಗಿ ಹಿಂದಿನ ಮಹಾತ್ಮರುಗಳು ,ರಾಜರುಗಳು ಅವರವರ ಮೂಲ ಧರ್ಮ ಕರ್ಮ ಬಿಡದೆ ಸ್ವತಂತ್ರ ಜ್ಞಾನಿಗಳಾಗಿ ಸ್ವತಂತ್ರ ಜೀವನನಡೆಸುತ್ತಾ ಪಾಲಿಗೆ ಬಂದದ್ದೆ ಪಂಚಾಮೃತವೆಂದು ಅಮೃತವಾದ ಶಿಕ್ಷಣ ಪಡೆದು ಜ್ಞಾನದಲ್ಲಿ ಶ್ರೀಮಂತ ರಾಗಿ ಅಮರರಾದರು. ವಿಶ್ವದ ತುಂಬಾ ಬಡತನ ಹರಡುತ್ತಿರುವುದು ಅಜ್ಞಾನದ ಸಂಕೇತ.ಅಜ್ಞಾನವೆಂದರೆ ಅರ್ಧ ಸತ್ಯವನ್ನರಿತು ನಡೆಯೋದೆನ್ನಬಹುದು. ಸತ್ಯಾಸತ್ಯತೆಯನ್ನು ಓದಿ,ಕೇಳಿ,ನೋಡಿ ತಿಳಿಯೋದೆ ಬೇರೆ ಅನುಭವಿಸಿ ಅರ್ಥ ಮಾಡಿಕೊಳ್ಳುವುದೇ ಬೇರೆ.ಅನುಭವ,
ಅನುಭವದಿಂದ ಸತ್ಯ ದರ್ಶನ ಮಾಡಿಕೊಂಡವರೆ ದಾಸರು,ಸಂತರು,ಶರಣರು. ಇವರ ನಡೆ ನುಡಿಯು ಹಣದಿಂದ ಬೆಳೆದಿರಲಿಲ್ಲ ಜ್ಞಾನದಿಂದ ಬೆಳೆದಿತ್ತು.
ಯಾವಾಗ ಅವರನ್ನು ಸಮಾಜ ಅಜ್ಞಾನದ ದೃಷ್ಟಿಯಿಂದ ಅಳೆದು ಬಡವರೆನ್ನುವ ಪಟ್ಟ ಕಟ್ಟಿದರೂ ಆಗಲೇ ಅಧರ್ಮ ಬೆಳೆದಿದೆ. ಕಲಿಗಾಲವಾದರೂ ಮಾನವನ ಜೀವಕ್ಕೆ ಮುಕ್ತಿ ಸಿಗಬೇಕಾದರೆ ಜ್ಞಾನವನ್ನು ಸದ್ಬಳಕೆ ಮಾಡಿಕೊಂಡು ಜೀವನ ನಡೆಸುತ್ತಾ ಇತರರಿಗೂ ಜೀವಿಸಲು ಸಹಕರಿಸಬೇಕಿದೆ. ಈಗಿನ ಭಾರತದಲ್ಲಿ ಸಾಕಷ್ಟು ಆರ್ಥಿಕಾಭಿವೃದ್ದಿಗೆ ಸಹಕಾರವಿದೆ.
ಅದೇ ಜ್ಞಾನಾಭಿವೃದ್ದಿಗೆ ಸ್ವಾತಂತ್ರ್ಯ ವಿಲ್ಲವಾಗಿದೆ. ಇದಕ್ಕೆ ಕಾರಣ ನಮ್ಮ ವೈಜ್ಞಾನಿಕ ಸಂಶೋಧನೆ.
ಅಧ್ಯಾತ್ಮ ಸಂಶೋಧನೆ ಕಣ್ಣಿಗೆ ಕಾಣದ ಕಾರಣ ಕಷ್ಟಪಟ್ಟು ಒಳಗಿನ ಜ್ಞಾನದ ಸಂಪತ್ತನ್ನು ಬಳಸಿಕೊಳ್ಳಲು ಕಷ್ಟ.ಹೀಗಾಗಿ ಹೊರಗಿನ ಸಂಪತ್ತನ್ನು ಭೂಮಿ ಅಗೆದು ಮೇಲೆ ತಂದು ಪ್ರಕೃತಿಯನ್ನು ದುರ್ಭಳಕೆ ಮಾಡಿಕೊಂಡು ರಾಜನಂತೆ ಜೀವನ ನಡೆಸಲು ಹೋಗಿ ತಾನೇ ಸೇವಕನಾಗಿ ಬಡವನಾಗಿ ಜನ್ಮ ತಾಳಬೇಕಾಗಿದೆ. ಇದೊಂದು ಕರ್ಮ ಫಲ ಎಂದು ಸುಮ್ಮನೆ ನೋಡಲು ಮಾನವನಿಗೆ ಕಷ್ಟ. ಮನಸ್ಸನ್ನು ತಡೆಹಿಡಿದು ತಪಸ್ಸನ್ನು ಮಾಡಿಕೊಂಡು ಮುಕ್ತಿ ಪಡೆದ ಯೋಗಿಗಳ ದೇಶದಲ್ಲಿ ಭೋಗ ಜೀವನಕ್ಕಾಗಿ ಸಾಲ ಮಾಡಿ ತುಪ್ಪ ತಿನ್ನುವ ಮಟ್ಟಿಗೆ ಅಜ್ಞಾನ ಬೆಳೆದಿರೋದು ಶಿಕ್ಷಣದಿಂದ.
ಕಣ್ಣಿಗೆ ಕಾಣುವ ಶಿಕ್ಷೆಗಿಂತ ಕಾಣದ ಆತ್ಮವಂಚನೆಯ ಮಾನಸಿಕ ಹಿಂಸೆಯೇ ಯಾರಿಗೂ ಕಾಣದು. ಹೀಗಾಗಿ ಹಣವಿದ್ದರೂ ಮಾನಸಿಕವಾಗಿ ಕೊರಗಿ,ಸೊರಗಿ ನೋವನ್ನು
ಅನುಭವಿಸುವವರಿಗೆ ಸರ್ಕಾರ ಹಣ ನೀಡಲಾಗದು.ಜ್ಞಾನದ ಶಿಕ್ಷಣದಿಂದ ಮೇಲೆತ್ತುವ ಶಕ್ತಿ ಭಾರತಕ್ಕೆ ಇದೆ.ಇದನ್ನು ವಿದೇಶಿಗರು ಅವರ ದೇಶದಲ್ಲಿ ಅಳವಡಿಸಿಕೊಂಡಿದ್ದಾರೆಂದರೆ
ಭಾರತದ ಬಡತನಕ್ಕೆ ನಮ್ಮದೇ ಆದ ಅಜ್ಞಾನದ ಸಹಕಾರವೆ ಕಾರಣ. ಜ್ಞಾನಕ್ಕೆ ನೀಡದ ಸಹಕಾರದಿಂದ ಮಾನವ ಮಹಾತ್ಮನಾಗದೆ ಅಸುರರ ಸಾಮ್ರಾಜ್ಯ ಕ್ಕೆ ದಾರಿಮಾಡಿದೆ.
ಯಾರಿಲ್ಲಿ ದೇವರು ಅಸುರರು?
ಜೀವ ಎಲ್ಲರಿಗೂ ಅಗತ್ಯ.ಜೀವನ ಎಲ್ಲರ ಒಗ್ಗಟ್ಟಿನಿಂದ ನಡೆಸಬೇಕು.ಒಗ್ಗಟ್ಟು ತತ್ವದ ಮೂಲಕ ಬೆಳೆಯಬೇಕಿದೆ.
ಆದರೆ ಇಲ್ಲಿ ತತ್ವದಲ್ಲಿಯೇ ಭಿನ್ನಾಭಿಪ್ರಾಯದ
ರಾಜಕೀಯವಿದೆ .
ಅದ್ವೈತ ಸಂಶೋಧನೆ, ದ್ವೈತ ಸಂಶೋಧನಾ ಕೇಂದ್ರದಿಂದ ಜನರಲ್ಲಿ ಜ್ಞಾನದ ಶ್ರೀಮಂತಿಕೆ ಬೆಳೆಸಿದ್ದರೆ ಬಡವರ ಸಂಖ್ಯೆ ಬೆಳೆಯುತ್ತಿರಲಿಲ್ಲ.ಸಾಲ ಮಾಡದೆಯೇ ಜೀವನ
ನಡೆಸುವವರು ಹೆಚ್ಚುತ್ತಿದ್ದರು.ದೇಶದ ಸಾಲ ತೀರಿಸಲು ವಿದೇಶಕ್ಕೆ ಹೋಗುವ ಅಗತ್ಯವಿರಲಿಲ್ಲ. ಆದರೂ ಅದನ್ನು ಪ್ರಗತಿ ಎನ್ನುವ ಮಟ್ಟಿಗೆ ಪ್ರೋತ್ಸಾಹ ,ಸಹಕಾರ, ಸಹಾಯ ನೀಡುತ್ತಿರುವುದು ಶ್ರೀಮಂತ ವರ್ಗ ವೆ. ಇದರಿಂದ ಅವರಿಗೇ ಕೊನೆಯಲ್ಲಿ ವೃದ್ದಾಶ್ರಮ,ಅನಾಥಾಶ್ರಮ,ಅಬಲಾ
ಶ್ರಮದ ಆಸರೆ ಆಗಿದೆ. ಶ್ರಮಪಡದೆ ಜ್ಞಾನ ಸಿಗದು. ಶ್ರಮಪಡದೆ ಹಣ ಪಡೆದರೆ ಸಾಲವಾಗುವುದು .ಇವು ತತ್ವಜ್ಞಾನಿಗಳೇ ಅನುಭವದಿಂದ ತಿಳಿಸಿದ ಸತ್ಯ. ಇದರಲ್ಲಿ ನಮ್ಮ ಶ್ರಮ ಎಷ್ಟಿದೆ ಎನ್ನುವ ಬಗ್ಗೆ ನಾವೇ ಆತ್ಮಾವಲೋಕನ ನಡೆಸಿಕೊಂಡರೆ ನಮ್ಮ ಸಾಲವನ್ನು ನಾವೇ ಜ್ಞಾನದಿಂದ ದುಡಿದು ತೀರಿಸಬಹುದು. ಸ್ವಾವಲಂಬನೆ ಸ್ವರ್ಗ ಪರಾವಲಂಬನೆ ನರಕವೆಂದರು. ಆದರೆ,ವಿಪರ್ಯಾಸವೆಂದರೆ ನಿಜವಾದ ಸ್ವಾವಲಂಬಿಗಳನ್ನು ಬಡವರೆಂದು ಕರೆದು ಪರಾವಲಂಬನೆಗೆಳೆದು ಆಳಿದರೆ ಇಲ್ಲಿ ಅಧರ್ಮ ವಿದೆ. ಬಡಶಿಕ್ಷಕ,ಬಡರೈತ,ಬಡಬ್ರಾಹ್ಮಣ,ಬಡ ಸೈನಿಕರ ಜ್ಞಾನ ಗುರುತಿಸದೆ ಶಿಕ್ಷಣವನ್ನು ಅಜ್ಞಾನಕ್ಕೆ ತಿರುಚಿ ದೇಶವನ್ನು ವಿದೇಶ ಮಾಡಲು ಹೊರಟರೆ ಆತ್ಮನಿರ್ಭರ ಭಾರತಕ್ಕೆ ಅರ್ಥ ವಿದೆಯೆ? ಸರ್ಕಾರ ಈ ನಿಟ್ಟಿನಲ್ಲಿ ಬದಲಾವಣೆ ಮಾಡಲು ಮುಂದೆ ಬಂದರೂ ಅಜ್ಞಾನಿಗಳಿಗೆ ಕಾಣೋದೆ ಬೇರೆ. ಒಟ್ಟಿನಲ್ಲಿ ಬಡತನಕ್ಕೆ ಅಜ್ಞಾನದ ಶಿಕ್ಷಣ ಕಾರಣ.
ಸ್ವಾರ್ಥ ಅಹಂಕಾರದಿಂದ ಮಾನವ ಮಾನವನಿಗೇ ಶತ್ರುವಾದರೆ ದೇವಾಸುರ ಗುಣಗಳೇ ಅರ್ಥ ವಾಗದು. ದೈವತ್ವ ಬೆಳೆಸಿಕೊಳ್ಳಲು ತತ್ವವನ್ನು ಅರ್ಥ ಮಾಡಿಕೊಳ್ಳುವ ಸತ್ಯ ಜ್ಞಾನ ಇರಬೇಕು.ಸತ್ಯವನ್ನು ತಿರುಚಿ ಆಳಿದರೆ ಅಸತ್ಯವಾಗುತ್ತದೆ. ಧರ್ಮ ಹಿಂದುಳಿಯುತ್ತದೆ.ಮಾನವ ಧರ್ಮ ಎಲ್ಲರಿಗೂ ಸಮಾನವಿದ್ದರೂ ಅದನ್ನು ಮಾನವೀಯತೆ ಶಿಕ್ಷಣ,ನೈತಿಕ ಶಿಕ್ಷಣ,ಯೋಗಶಿಕ್ಷಣವಿಲ್ಲದೆ
ಬೆಳೆಸಲಾಗದು. ಯಾವಾಗ ಈ ಅಜ್ಞಾನದ ರಾಜಕೀಯಕ್ಕೆ
ಶಿಕ್ಷಣ ಬಲಿಯಾಯಿತೋ ಆಗಲೇ ಮಾನವನ ಜೀವನ ಬಡತನದೆಡೆಗೆ ನಡೆಯಿತು. ಅತಿಯಾದ ಶೋಷಣೆಯಿಂದ ಯಾವುದೇ ಜ್ಞಾನ ಬೆಳೆಸಲಾಗದು.ಸ್ತ್ರೀ ಶಕ್ತಿಯ ಜ್ಞಾನವನ್ನು ಗುರುತಿಸದೆ ಶೋಷಣೆಯಿಂದ ಅವಳನ್ನು ಹಿಂಸೆ ಮಾಡಿಯಾದರೂ ಭೂಮಿ ಆಳುವ ಅಸುರ ಶಕ್ತಿ ಇಂದಿಗೂ ಹೆಸರುವಾಸಿಯಾಗಿದೆ. ಕಾರಣ ಜ್ಞಾನ ಖರೀದಿಸಲು ಕಷ್ಟ.ಹಣವನ್ನು ಜ್ಞಾನದಿಂದ ಸಂಪಾದಿಸೋದು ಬಹಳ ಕಷ್ಟ. ಆದರೂ ತನ್ನ ಜೀವ ರಕ್ಷಣೆಗೆ ಜೀವಕ್ಕೆ ಬೇಕಾದಷ್ಟು ಜ್ಞಾನ ಹುಟ್ಟಿದಾಗಲೇ ಪಡೆದಿರೋದನ್ನು ಗುರುತಿಸಿ ಅದನ್ನು ಸರಿಯಾದ ಶಿಕ್ಷಣದಿಂದ ಬೆಳೆಸಿ ಸರಳ,ಸುಲಭ,ಸ್ವತಂತ್ರವಾಗಿ ಜೀವನ ನಡೆಸುವ ಶಕ್ತಿಯನ್ನು ಎಲ್ಲರಲ್ಲಿಯೂ ಇದ್ದರೂ ಮೂಲದ ಧರ್ಮ ಕರ್ಮ ವನ್ನು ಬಿಟ್ಟು ಅತಿಯಾದ ಸ್ವಾರ್ಥ ಅಹಂಕಾರದ ರಾಜಕೀಯಕ್ಕೆ ಮುಖ ಮಾಡಿ ಮುಂದೆ ನಡೆದವರಿಗೆ ಹಿಂದಿನ ಸತ್ಯ,ಧರ್ಮ ,ನ್ಯಾಯ ,ನೀತಿ ,ಸಂಸ್ಕೃತಿ ಯ ಬಗ್ಗೆ ಅರಿವಿಲ್ಲದೆ ಹಿಂದುಳಿದವರನ್ನು ಬಡವರೆಂದು ಪರಿಗಣಿಸಿ ಶಿಕ್ಷಣ ನೀಡದೆ ಹಣ ನೀಡಿ ಸಾಲದ ದವಡೆಗೆ ತಳ್ಳಿ ಶೋಷಣೆ ಮಾಡಿ ಶ್ರೀಮಂತರಾದವರು ತಮ್ಮ ಭೌತಿಕದ ಜ್ಞಾನದಿಂದ ದೊಡ್ಡವರಾದರೂ ಅಧ್ಯಾತ್ಮದಲ್ಲಿ ಅವರೆ ನಿಜವಾದ ಬಡವರು. ಪರರ ಶಿಕ್ಷಣ,ಪರಾವಲಂಬನೆ ಪರಕೀಯರ ಆಡಳಿತದಲ್ಲಿದ್ದು ಸ್ವಂತ ಬುದ್ದಿ,ಜ್ಞಾನವನ್ನು ಬೆಳೆಸಿಕೊಳ್ಳಲು ಕಷ್ಟ.ಜೀವ ಯಾವತ್ತೂ ಪರಕೀಯರ ವಶದಲ್ಲಿಯೇ ಇರೋವಾಗ ಪರಮಾತ್ಮನೆಡೆಗೆ ಹೋಗುವುದಕ್ಕೆ ಆತ್ಮಜ್ಞಾನ ಬೇಕೆಂಬುದೆ ಎಲ್ಲಾ ಶರಣರು, ದಾಸರು,ಮಹಾತ್ಮರುಗಳು,ದೇಶಭಕ್ತರು ತತ್ವದಿಂದ ಸ್ವತಂತ್ರ ಗಳಿಸಿದ್ದರು. ಆದರೆ ತತ್ವ ಕಣ್ಣಿಗೆ ಕಾಣದು ತಂತ್ರ ಕಂಡರೂ ಅದರಲ್ಲಿ ಹಣವಿರುತ್ತದೆ.ಹಣಕ್ಕಾಗಿ ಹೆಣವನ್ನೂ ಮಾರುವಷ್ಟು ಬಡತನವಿದೆ. ಇದನ್ನು ಹಣದಿಂದ ಸರಿಪಡಿಸಲಾಗದು.ಸತ್ಯಜ್ಞಾನದಿಂದ ಅರ್ಥ ಮಾಡಿಸುವ ಶಿಕ್ಷಣವನ್ನು ಜಾರಿಗೆ ತಂದರೆ ಮಾನವ ನಿಜವಾದ ಮನುಷ್ಯ ಆಗಬಹುದೇನೋ. ಮಹಾತ್ಮರ ದೇಶವನ್ನು ಆಳುವವರಿಗೆ ಆತ್ಮಜ್ಞಾನವಿರಬೇಕಿದೆ. ಸತ್ತವರಿಗೆ ಹಣ ನೀಡುತ್ತಾ ಸಾಲ ಹೆಚ್ಚಿಸುವ ಬದಲಾಗಿ ಇದ್ದವರಿಗೆ ಜ್ಞಾನದ ಶಿಕ್ಷಣ ಉಚಿತವಾಗಿ ನೀಡುವತ್ತ ಧಾರ್ಮಿಕ ಕ್ಷೇತ್ರ ರಾಜಕೀಯ ಕ್ಷೇತ್ರ ಒಂದಾಗಿ ನಿಂತರೆ ದೇಶದ ಆರ್ಥಿಕ ಸ್ಥಿತಿ ಬಲವಾಗುತ್ತಾ ಸಾಮಾಜಿಕ ಕ್ಷೇತ್ರದಲ್ಲಿ ಸಮಾನತೆ ಹೆಚ್ಚಬಹುದಲ್ಲವೆ? ಇದಕ್ಕೆ ವಿದೇಶದ ಹಣ,ಸಾಲ,ಬಂಡವಾಳ,ವ್ಯವಹಾರದ ಅಗತ್ಯವಿದೆಯೆ? ಸ್ವದೇಶದ ಶಿಕ್ಷಣ,ಧರ್ಮ, ಸತ್ಯ,ನ್ಯಾಯ,
ನೀತಿ,ಸಂಸ್ಕೃತಿ ಸದಾಚಾರವನ್ನು ವಿರೋಧಿಸಿ ಹೊರಗೆ ನಾಟಕವಾಡಿ ಆಳುವುದು ಅಧರ್ಮವಲ್ಲವೆ? ಎಲ್ಲಿರುವರು ಜ್ಞಾನಿಗಳು? ಮಹಾತ್ಮರು? ದೇಶಭಕ್ತರು,ದೇವರಭಕ್ತರು?
ಬಡವರನ್ನು ದುರ್ಭಳಕೆ ಮಾಡಿಕೊಂಡು ಅಜ್ಞಾನದಿಂದ ಆಳಿದವರೆ ನಿಜವಾದ ಬಡವರು. ನಾವ್ಯಾರು? ಅಗತ್ಯಕ್ಕಿಂತ ಹೆಚ್ಚಿನ ಹಣ ಸಂಗ್ರಹಣೆ ಯಾರ ಪಾಲಾಗಿತ್ತು? ಇದರಿಂದಾಗಿ ಯಾರಿಗೆ ಲಾಭ ನಷ್ಟವಾಗುತ್ತಿದೆ. ಚಿಂತನೆ ಒಳಗೆ ನಡೆಸಿದರೆ ಜ್ಞಾನೋದಯವಾಗಬಹುದು.
ಯಾರನ್ನೂ ಯಾರೋ ಆಳುವುದಕ್ಕೆ ಸಾಧ್ಯವೆ? ಅಜ್ಞಾನದಲ್ಲಿ ರಾಜಕೀಯವಿದೆ.
ಜ್ಞಾನದಲ್ಲಿ ರಾಜಯೋಗವಿದೆ. ರಾಜಕೀಯದಿಂದ ಬಡತನ ಬೆಳೆದಿದೆ.ರಾಜಯೋಗದಿಂದ ಬಡತನ ನಿರ್ಮೂಲನೆ ಮಾಡಬಹುದು. ಇದಕ್ಕೆ ಹೊರಗಿನ ಸರ್ಕಾರದ ಅಗತ್ಯವಿಲ್ಲ.
ಮನೆ ಮನೆಯೊಳಗೆ ಅಡಗಿರುವ ಅಜ್ಞಾನದ ಅಹಂಕಾರ ಸ್ವಾರ್ಥ ವೇ ಅಸುರೀ ಶಕ್ತಿಯಾಗಿದೆ. ಮಾನವನೊಳಗೇ ಇರುವ ದೇವಾಸುರರ ಗುಣಗಳೇ ಬಡವ ಶ್ರೀಮಂತರೆನ್ನುವ ಬೇಧ ಭಾವ ಹುಟ್ಟಿಸಿ ಆಳುತ್ತಿದೆ. ಹಾಗಾದರೆ ನಾನ್ಯಾರು? ನಾವ್ಯಾರ ಸೇವಕರು? ದಾಸರು? ಶರಣರು? ಪರಮಾತ್ಮ ಪರಕೀಯರ ನಡುವೆ ಬಡವರ ಜೀವನವಿದೆ. ಭಗವಂತನ
ಸೊಂಟಭಾಗದಲ್ಲಿ ಭೂಮಿಯಿದೆಯಂತೆ.ಭೂಮಿಯ ಮೇಲೆ ಮನುಕುಲವಿರೋವಾಗ ನಾವಿರೋದೆಲ್ಲಿ? ಎಲ್ಲಿಗೆ ಹೋಗಬೇಕು? ಎಲ್ಲಿಂದ ಬಂದೆವು? ಇದರ ಮೂಲ ತಿಳಿಯಲು ಆಂತರಿಕ ಜ್ಞಾನವಿರಬೇಕು.ಭೌತಿಕ ವಿಜ್ಞಾನದಲ್ಲಿ ಈ ಸೂಕ್ಮವಿಚಾರ ತಿಳಿಯಲಾಗದು ಅಲ್ಲವೆ? ನಾವೆಲ್ಲರೂ ಸಾಮಾನ್ಯರಷ್ಟೆ.ಸಾಮಾನ್ಯಜ್ಞಾನ ಅಗತ್ಯವಾಗಿದೆ. ಇದಿಲ್ಲದೆ ವಿಜ್ಞಾನ ಬೆಳೆದರೆ ಅಜ್ಞಾನವಾಗುತ್ತದೆ. ಪುರಾಣ,ಇತಿಹಾಸದ ಕಥೆಯ ವ್ಯಥೆಯನ್ನು ಬಿಟ್ಟು ವಾಸ್ತವತೆಯ ಸತ್ಯದೆಡೆಗೆ ನಿಂತು ಚಿಂತನೆ ಮಾಡಿದರೆ ಇಲ್ಲಿ ಬಡವರನ್ನು, ಬಡತನವನ್ನು ತಮ್ಮ ರಾಜಕೀಯದ ದಾಳವಾಗಿಟ್ಟುಕೊಂಡು
ಆಟ,ನಾಟಕವಾಡಿಕೊಂಡಿರುವ ಮಧ್ಯವರ್ತಿಗಳೇ ಹೆಚ್ಚು.
ಇದರಿಂದಾಗಿ ಅತಂತ್ರಸ್ಥಿತಿಗೆ ಜೀವ ನಿಂತಿದೆ.
No comments:
Post a Comment