ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Friday, October 14, 2022

ಇರೋದೊಂದೆ ಜೀವನ

ಇರೋದು ಒಂದೇ ಜೀವನ  ಇದನ್ನು ಸಂತೋಷದಿಂದ ಕಳೆಯಿರಿ ಎನ್ನುವ ಹಲವು ಮಂದಿಯ  ಹಿಂದೆ ಕೆಲವರು ಜೀವನದ ಮುಖ್ಯ ಉದ್ದೇಶ ತಿಳಿದು  ಜಾಗರೂಕರಾಗಿ  ನಡೆಯಿರಿ.ದಾರಿತಪ್ಪಿದರೆ ತಿರುಗಿ ಬರೋದು ಕಷ್ಟವೆಂದು
ಹೇಳುತ್ತಿದ್ದರೂ  ಮನರಂಜನೆಯೆಡೆಗೆ ನಡೆದ ಮನಸ್ಸಿಗೆ ಇದು ಕೇಳೋದೇ ಇಲ್ಲ. ಏನಾಗುತ್ತದೆ ನೋಡೇ ಬಿಡೋಣವೆಂಬ ಹಠದಲ್ಲಿ ಅಧರ್ಮ, ಅಸತ್ಯ,ಅನ್ಯಾಯದ ಭ್ರಷ್ಟಾಚಾರದ ಸುಳಿಯಲ್ಲಿ ಸಿಲುಕಿ ಹೊರಬರಲಾರದೆ ಇದೇ ಜೀವನ ಎಂದು ಇತರರಿಗೂ ಹೇಳುತ್ತಾ ಒಮ್ಮೆ ಮರೆಯಾಗುತ್ತಾರೆ. ನಂತರದ ದಿನಗಳಲ್ಲಿ ಅವರನ್ನು ಅನುಸರಿಸಿದವರಿಗೆ ಅವರ ಪ್ರತಿಮೆಯೆ ಗತಿ. ಪ್ರತಿಭೆಯನ್ನು ಬೆಳೆಸಿಕೊಂಡು ಜ್ಞಾನ ಸಂಪಾದನೆ ಮಾಡಿಕೊಂಡವರಿಗೆ  ಸರಿದಾರಿ ಕಾಣಬಹುದು.
ಹೀಗಾಗಿ ಎಲ್ಲರನ್ನೂ  ನಂಬುವ ಮೊದಲು ನಮ್ಮಲ್ಲಿ ಆತ್ಮವಿಶ್ವಾಸ ವಿದ್ದರೆ ನಂಬಿ ಕೆಡೋದಿಲ್ಲ. ಇದು ದೈವತ್ವದೆಡೆಗೆ
ನಡೆಸಿದರೆ  ಮುಕ್ತಿ ಎನ್ನಬಹುದು. ಜ್ಞಾನವನ್ನು ಬೆಳೆಸದ ವಿಜ್ಞಾನವು ಕುಂಟುತ್ತದೆ. ವಿಜ್ಞಾನದ ಮೂಲ ಅರ್ಥ ತಿಳಿಯದ ಜ್ಞಾನ ಕುರುಡಾಗಿರುತ್ತದೆ. ಅಂದರೆ ವಿಜ್ಞಾನ  ಆಂತರಿಕ  ಜ್ಞಾನವನ್ನು ವಿಶೇಷವಾಗಿ ತಿಳಿಯುವುದಾಗಬಹುದು. ಹೊರಗಿನಿಂದ ವಿಶೇಷವಾಗಿ ಬೆಳೆಸುವುದಾಗಬಹುದು.ಆದರೆ ಮೂಲವನ್ನರಿತು 
ಅದಕ್ಕೆ ಹೊಂದುವ ವಿಶೇಷಜ್ಞಾನದಿಂದಲೇ ಪೂರ್ಣ ಸತ್ಯದ ಅರಿವಾಗುವುದು. ಅದಕ್ಕೆ ವಿರುದ್ದ  ನಡೆದಂತೆಲ್ಲಾ ವಿಶೇಷವೆನಿಸಿದರೂ ಮೂಲದ ಜ್ಞಾನ ಸಶೇಷವಾಗಿಯೇ ಉಳಿದು ತಿರುಗಿ ಬರಲೇಬೇಕು.ಮೂಲವನ್ನರಿತು ರೆಂಬೆಗಳನ್ನು ಬೆಳೆಸಿದರೆ  ಉತ್ತಮ. ಯಾರೋ ಹೇಳಿದರು,ನಡೆದರು,ಅನುಭವಿಸಿ ತಿಳಿದರು  ಹೋದರು. ಅನುಭವವು ಅಂದಿನ ಸಾಮಾಜಿಕ, ಆರ್ಥಿಕ, ಧಾರ್ಮಿಕ ,ರಾಜಕೀಯ ಪರಿಸ್ಥಿತಿ ಗೆ ತಕ್ಕಂತೆ ಇರುತ್ತದೆ. ಬದಲಾವಣೆ  ಆಗುತ್ತಿರುವ ಹಾಗೆ ಅನುಭವವೂ ಬದಲಾಗಬಹುದು. ಆದರೆ ತತ್ವ ಒಂದೇ. ಸತ್ಯ ಒಂದೇ. ನ್ಯಾಯ,ನೀತಿ ಒಂದೇ. ಒಂದೇ ಭೂಮಿಯಲ್ಲಿಒಂದೇ ಜನ್ಮ ಎನ್ನುವುದನ್ನು 
ಎಲ್ಲಾ ಒಪ್ಪದ ಕಾರಣ ಈ ಜನ್ಮದಲ್ಲಿ ಯಾವುದನ್ನು ತಿಳಿಯಬೇಕೆನ್ನುವ  ಜ್ಞಾನ ನಮಗಿದ್ದರೆ ಯಾರೋ ಕುಣಿಸಿದಂತೆ ಕುಣಿಯುವ ಅಗತ್ಯವಿರೋದಿಲ್ಲ.
ಮನರಂಜನೆಯಿರಲಿ ಆತ್ಮವಂಚನೆ ಆಗದಿರಲಿ."ಮಾನವ ಜನ್ಮ ದೊಡ್ಡದು ಹಾಳು ಮಾಡದಿರಿ ಹುಚ್ಚಪ್ಪಗಳಿರ" ಎಂದು
ಪರಮಾತ್ಮನ ದಾಸರೆ ಹೇಳಿದ್ದಾರೆ ಎಂದರೆ ಪರಮಾತ್ಮನ ಸೇವೆ ಅಧ್ಯಾತ್ಮ ದಲ್ಲಿದ್ದರೆ  ಅದೇ ಆತ್ಮಸಂತೋಷ.

No comments:

Post a Comment