ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Friday, October 21, 2022

ಜ್ಞಾನದಿಂದ ಸತ್ಯದರ್ಶನ.

ಸಣ್ಣವಯಸ್ಸಿನಲ್ಲಿಯೇ ಸತ್ಯದ ಹುಡುಕಾಟ, ಸತ್ಯದ ಹಿಂದೆ ನಡೆದಷ್ಟೂ ಸಂಕಟದ ಜೊತೆಗೆ ದ್ವಂದ್ವ. ಸತ್ಯವೆಂದು
ಹೊರಗೆ ನಡೆದಷ್ಟೂ ಅಲೆದಾಟ ,ಸುಸ್ತು,ನಿರಾಸೆ ಕೊನೆಗೆ ನಿರಾಸಕ್ತಿ. ಬೆಳೆದಂತೆಲ್ಲಾ  ಹೊರಗಿನ ಶಿಕ್ಷಣದಲ್ಲಿ ಏನಿದೆ ಎನ್ನುವ ಪರೀಕ್ಷೆ. ಪರೀಕ್ಷೆಯಲ್ಲಿ ಬರೆದು ಬರೆದು ಏನೂ ಸಿಗದ ಪರಿಸ್ಥಿತಿ, ಸ್ಥಿತಿಯನ್ನು ಸರಿಯಾಗಿಟ್ಟುಕೊಳ್ಳಲು  ಹಣದ ಅಗತ್ಯತೆ.ಹಣ ಸಂಪಾದಿಸಲಾಗದ  ವಿದ್ಯೆಯ ಅರ್ಧ ಸ್ಥಿತಿ.ಕೊನೆಗೆ ಎಲ್ಲರಂತೆ ಬದುಕಬೇಕೆಂಬುದರ ನಡೆ ನುಡಿಯ ಮಧ್ಯೆ ಆತ್ಮಾವಲೋಕನ ಮಾಡಿಕೊಂಡರೆ ಎಲ್ಲೋ  ಸೋತಿರುವ ಅನುಭವ. ಆದರೂ ಎಲ್ಲಿ ಸೋತಿದ್ದು ಗೆಲುವು ಯಾವುದೆನ್ನುವ ದ್ವಂದ್ವದ  ಜೀವನದಲ್ಲಿ ಡಿಗ್ರಿ ಮುಗಿಸೋ ಹೊತ್ತಿಗೆ  ಇಷ್ಟೇ ಜೀವನ. ಏನೂ ಸರಿಯಾಗಿ ಪೂರ್ಣ ಕಲಿಯಲಾಗಿಲ್ಲ. ಎಲ್ಲರಲ್ಲಿಯೂ  ಸುಖ ದು:,ಖವಿದ್ದರೂ  ಎಲ್ಲಾ  ಸುಖಿಗಳೆನ್ನುವ ನಾಟಕದಲ್ಲಿ ಸಂತೋಷವಾಗಿದ್ದಾರೆ. ನಾಟಕರಂಗದೊಳಗೆ ಹೊಕ್ಕಿ ನೋಡಿದರೆ ಎಲ್ಲಾ ನಾಟಕಕ್ಕೆ ಸೀಮಿತ. ದೇವಾಲಯಗಳಲ್ಲಿ ದೇವರು ಕಾಣದಿದ್ದರೂ ರಾಜಕೀಯವಿದೆ. ಕೊನೆಗೆ ಸಂಸಾರದೊಳಗೆ  ಹೋದಂತೆ ಇನ್ನಷ್ಟು  ಮತ್ತಷ್ಟು ಸತ್ಯ ಶೋಧನೆ ಉತ್ತರ ಹೊರಗೆ ಸಿಗದೆ
ಒಳಗೇ ಹುಡುಕುತ್ತಾ  ಬಂದದ್ದೆಲ್ಲಾ ಬರಲಿ ಎನ್ನುವ ಹಾಗೂ ಇಲ್ಲ. ಕೊನೆಗೂ  ತನ್ನೊಳಗೆ ಇದ್ದ ಅಲ್ಪ ಸ್ವಲ್ಪ ಜ್ಞಾನವನ್ನು ಬೆಳೆಸಿಕೊಳ್ಳುತ್ತಾ ಅದನ್ನು ಮಕ್ಕಳಿಗೆ ತಿಳಿಸಿ ಬೆಳೆಸುತ್ತಾ ಹೊರಗಿನವರೂ ಹೇಳುತ್ತಾ ಹಾಡುತ್ತಾ ಕಲಿಸುತ್ತಾ ಭಜನೆಯ ಮೂಲಕ ಇನ್ನಿತರ ಸಣ್ಣ ಪುಟ್ಟ ಕಾರ್ಯಕ್ರಮದಲ್ಲಿ  ತೊಡಗಿಸಿ ಕೊಂಡು  ಸತ್ಯವನ್ನು ಒಳಗೇ‌ ಹುಡುಕಿಕೊಂಡು ಹೋದ ಮೇಲೆ ಸಿಕ್ಕಿದ್ದು ಸತ್ಯ ಹೊರಗಿಲ್ಲ ಒಳಗೇ ಇದೆ ಎನ್ನುವ ಜ್ಞಾನ.
ಇದನ್ನು  ಯಾರಿಗಾದರೂ ಹೇಳಿದರೆ ಹುಚ್ಚು ಎನ್ನಬಹುದಷ್ಟೆ
ಈ ಕಾಲದಲ್ಲಿ  ಇದನ್ನು ನಂಬುವುದು ಕಷ್ಟ. ಹೀಗಾಗಿ ಒಳಗಿನಿಂದ ಹರಿದುಬರುವ ಸದ್ವಿಚಾರವನ್ನು ಹೊರಗೆ ಇಳಿಸುವ ಪ್ರಯತ್ನದಲ್ಲಿ ಕಾಲಕಳೆದರೂ ಎಲ್ಲೋ ಒಂದೆಡೆ  ತಡೆಯುತ್ತಿದೆ. ಯಾರಿಗೂ ನೋವಾಗದಂತಿರಬೇಕಾದರೆ ಎಲ್ಲರನ್ನೂ ಒಪ್ಪಿ ನಡೆಯಬೇಕು. ಅದರಲ್ಲಿ ಸತ್ಯವೇ ಇಲ್ಲದೆ ಒಪ್ಪಿದರೆ ಆತ್ಮಸಾಕ್ಷಿಗೆ ವಿರುದ್ದ. ಹೀಗಾಗಿ ಈ ಭೂಮಿಯಲ್ಲಿ  ಜ್ಞಾನದ ನಂತರ ಜೀವನ‌ನಡೆಸೋದು ಕಷ್ಟದ ಕೆಲಸ. ಹಾಗಂತ ಇದಕ್ಕೆ ಉತ್ತಮ ಸತ್ಸಂಗ ದೊರೆತರೆಸಂತೋಷವಿದೆ.
 ಸತ್ಯವು  ಮೂರು ರೀತಿಯಲ್ಲಿ ಇರುತ್ತದೆ. ಒಂದು ಪೂರ್ಣ ಸತ್ಯ,ಅರ್ಧ ಸತ್ಯ ಇನ್ನೊಂದು  ವ್ಯವಹಾರಿಕ ಸತ್ಯ. ವ್ಯವಹಾರಿಕ ಸತ್ಯದಲ್ಲಿ ಹಣವಿದ್ದರೂ  ಜ್ಞಾನದ ಕೊರತೆ, 
ಪೂರ್ಣ ಸತ್ಯವೆ ಅದ್ವೈತ.
ಅರ್ಧ ಸತ್ಯ ಧ್ವೈತ. ಮಾನವ ಮಧ್ಯವರ್ತಿಯಾಗಿ  ನಿಂತಾಗ
ತನ್ನ ಜೀವನದ ಜೊತೆಗೆ ಇತರರ ಜೀವನವೂ ಮುಖ್ಯ. ತನ್ನ ಜೀವನಕ್ಕಾಗಿ ಸಂಸಾರ ಬಿಟ್ಟು ಹೊರನಡೆದವರು ಮಹಾತ್ಮ ರೆನ್ನಿಸಿಕೊಂಡರೆ  ಸಂಸಾರದ ಜವಾಬ್ದಾರಿ ಹೊತ್ತುಕೊಂಡು ಸಮಾಜವನ್ನು ಸನ್ಮಾರ್ಗದಲ್ಲಿ ನಡೆಸಿದ ಹಲವರು ಇನ್ನೂ ಹೆಚ್ಚಿನ ಮಹಾತ್ಮರು. ಸಂನ್ಯಾಸಿಯಾಗೋದು ಸುಲಭ.
ಸಂಸಾರಿಯಾಗಿದ್ದು  ಅಧ್ಯಾತ್ಮ ದೆಡೆಗೆ ನಡೆಯೋದು ಕಷ್ಟ.ಇಲ್ಲಿ  ಜೀವ ನಮ್ಮ ಒಳಗಿದ್ದರೂ ಜೀವನ ಹೊರಗಿದೆ.
ಒಳಗಿನ ಜೀವಕ್ಕಾಗಿ ಜೀವನವನ್ನು ಅರ್ಥ ಮಾಡಿಕೊಳ್ಳಲು ಜ್ಞಾನ ಬೇಕಿದೆ. ಜೀವನ ಎಂದರೆ ಜೀವಿಗಳ ವನ. ಪ್ರತಿಯೊಂದು ಜೀವಿಗೂ ತನ್ನದೇ ಆದ ಅಸ್ತಿತ್ವ ಇದೆ.ಮಾನವ
ಮಹಾತ್ಮನಾದಾಗಲೇ ಆ ಜೀವದ ಬಗ್ಗೆ ಚಿಂತನೆ ನಡೆಸುವ ಜ್ಞಾನ ಬರೋದು. ಇಲ್ಲವಾದರೆ ಜೀವಿಗಳನ್ನು ದುರ್ಭಳಕೆ ಮಾಡಿಕೊಂಡಾದರೂ ಜೀವನ‌ ನಡೆಸುತ್ತಾನೆ.  ಒಟ್ಟಿನಲ್ಲಿ ಯುಗಯುಗದಿಂದಲೂ ಭೂಮಿಯಲ್ಲಿ ಜೀವನ ನಡೆಯುತ್ತಿದೆ. ಅಂದಿನ‌ ಜ್ಞಾನಕ್ಕೆ ತಕ್ಕಂತೆ   ಶಿಕ್ಷಣವೂ ಇತ್ತು.ಆದರೆ ಇಂದು ಜ್ಞಾನಕ್ಕೆ ತಕ್ಕಂತೆ ಶಿಕ್ಷಣ ನೀಡದೆ ಅಜ್ಞಾನ ಬೆಳೆದಿದೆ.ಅಜ್ಞಾನದಲ್ಲಿ  ಸತ್ಯಾಸತ್ಯತೆಯನ್ನು  ಅರ್ಧಕ್ಕೆ ನಿಲ್ಲಿಸಿ
ಆಳುವುದರಿಂದ  ಜೀವನ ಅತಂತ್ರಸ್ಥಿತಿಗೆ ತಲುಪುತ್ತದೆ. ಸರ್ವಜ್ಞ  ಕೇವಲ ಭಗವಂತನೊಬ್ಬನೆ.ಅವನೊಳಗಿರುವ ಜೀವಾತ್ಮರೆಲ್ಲರಲ್ಲಿಯೂ ವಿಶೇಷವಾಗಿ ಒಂದು ಸಣ್ಣ ಜ್ಞಾನವಿದೆ.ಅದನ್ನು ಗಮನಿಸಿ ಪೋಷಣೆ ಮಾಡಿ ಬೆಳೆಸುವ ಶಿಕ್ಷಣ ನೀಡಿದಾಗಲೇ ಒಳಗಿರುವ ಸತ್ಯದ ಜೊತೆಗೆ ಹೊರಗಿನ ಸತ್ಯ ತಿಳಿದು  ಅಸತ್ಯವನ್ನು ಹಿಮ್ಮೆಟ್ಟಿಸಬಹುದೆನ್ನುವರು ಮಹಾತ್ಮರುಗಳು. ನಾನಿದ್ದಾಗ  ದೇವರು ಕಾಣೋದಿಲ್ಲ.
ನಾನು ಹೋದ ಮೇಲೆ ದೇವರುಕಾಣೋದು ಎಂದರೆ ನಮ್ಮೊಳಗೇ ಅಡಗಿರುವ ದೈವತ್ವವನ್ನು ಬೆಳೆಸಿಕೊಳ್ಳಲು 
ನಾನೇ  ಅಡ್ಡದಾರಿ ಹಿಡಿದರೆ  ತತ್ವ ಕಾಣೋದಿಲ್ಲ.  
ತಂತ್ರವೇ ಕಾಣೋದು.ತಂತ್ರ ಹೊರಗಿದೆ ತತ್ವ ಒಳಗಿದೆ.  ಇದೊಂದು  ನನ್ನ ಜೀವನಾನುಭವದ ಸತ್ಯ ವಿಚಾರವಾಗಿದೆ. ಇಲ್ಲಿ  ನಾವು ಹೊರಗೆ ಕಾಣುವ ರಾಜಕೀಯದಲ್ಲಿ ಧರ್ಮ ಸತ್ಯವಿಲ್ಲ.ಆದರೂ ಅದರ ಹಿಂದೆ ನಡೆಯುತ್ತಾ ನಮ್ಮನ್ನು  ನಾವೇ ಹಿಂದುಳಿದರೆ ಪರರು ಬೆಳೆಯುವುದರಲ್ಲಿ ತಪ್ಪಿಲ್ಲ.
ಪರರಲ್ಲಿರುವ‌ ಒಗ್ಗಟ್ಟು ಒಂದೆ ಧರ್ಮ, ಶಿಕ್ಷಣವು ನಮ್ಮಲ್ಲಿ ಇಲ್ಲವಾದರೆ  ತತ್ವದ ಪ್ರಕಾರ ಒಗ್ಗಟ್ಟಿನಲ್ಲಿದೆ ಬಲ. ಎಲ್ಲಾ ಒಂದೇ ಎನ್ನುವ ಹಿಂದೆ ರಾಜಕೀಯವಿರಬಾರದು. ರಾಜಯೋಗದ ಹಿಂದೆ ನಡೆದರೆ  ಯೋಗ ಕೂಡಿಬರುವುದು.
ಯೋಗವೆಂದರೆ ಕೂಡುವುದು ಸೇರುವುದಾದರೆ ಆ ನಿರಾಕಾರ ಬ್ರಹ್ಮನ ಸೇರಲು ಯೋಗಬೇಕು. ಎಲ್ಲರಲ್ಲಿಯೂ
ಸತ್ಯವಿದೆ  ಕಂಡುಕೊಳ್ಳಲು ಕಷ್ಟವಾಗಿದೆಕಾರಣ ಹೊರಗಿನ ಅಸತ್ಯವನ್ನು ನಂಬಿಕೊಂಡು ಮುಂದೆ ದೂರ ದೇಶದವರೆಗೂ
ಜೀವ ಹೋಗಿದೆ.ತಿರುಗಿ ಬರೋದು ಕಷ್ಟ.ಕೊನೆಪಕ್ಷ ಹತ್ತಿರವಿರುವ ಜೀವಕ್ಕೆ ಸತ್ಯಜ್ಞಾನದ ಶಿಕ್ಷಣ ನೀಡಿ ಬೆಳೆಸಿದರೆ
ಮುಂದೆ  ಬೆಳೆದು  ನಿಜವಾದ ಮನುಕುಲದ ಉದ್ದಾರ ಸಾಧ್ಯ.
ಆಗೋದನ್ನು ತಡೆಯಲಾಗದು, ಆಗೋದೆಲ್ಲಾ ಒಳ್ಳೆಯದಕ್ಕೆ
ಯಾಕೆ ಆಗುತ್ತಿದೆ ಎನ್ನುವ ಬಗ್ಗೆ ಇದ್ದಾಗಲೆ ಆತ್ಮಾವಲೋಕನ ಮಾಡಿಕೊಂಡರೆ ಎಲ್ಲವೂ ನನ್ನಿಂದಲೇ, ನನಗಾಗಿಯೇ,ನಾನೇ
ಮಾಡಿಕೊಂಡಿರುವ ವ್ಯವಸ್ಥೆ. ಈ ಅವಸ್ಥೆಗೂ ನಾನೇ ಕಾರಣ ಎನ್ನುವ ಸತ್ಯ ತಿಳಿಯುವುದೇ ನಿಜವಾದ ಅಧ್ಯಾತ್ಮ. ನನ್ನ ನಾ ತಿಳಿದ ಮೇಲೇ ಪರರನ್ನು ತಿಳಿಯಲು ಸಾಧ್ಯ. ಆಂತರಿಕ ಶಕ್ತಿ ಬಿಟ್ಟು ಹೊರನಡೆದರೆ ಭೌತಿಕ ಶಕ್ತಿ ಬೆಳೆಯುತ್ತದೆ. ಇದಕ್ಕೆ ಶ್ರೀ ಶಂಕರ ಭಗವದ್ಪಾದರು ಜಗತ್ತು ಮಿಥ್ಯ ಎಂದರು.
ಬದಲಾವಣೆ ಜಗದ ನಿಯಮ. ಮೇಲೆ ಹೋದವರು ತಿರುಗಿ ಬರಲೇಬೇಕು.ಕೆಳಗಿದ್ದವರು ಮೇಲೆ ಹೋಗಲೇಬೇಕು. ಭೂಮಿಯ ಒಂದು ದ್ರುವ ಇನ್ನೊಂದು ಧ್ರುವವನ್ನು   ಸೇರದಿದ್ದರೂ ಇರೋದು ಒಂದೇ ಭೂಮಿ. ನಾಣ್ಯದ ಎರಡೂ ಮುಖ  ಒಟ್ಟಿಗಿದ್ದರೂ ಒಂದರ ಹಿಂದೆ ಇನ್ನೊಂದು ಇರುತ್ತದೆ. ಆದರೆ ಜ್ಞಾನದ ನಂತರ ವಿಜ್ಞಾನ ಬೆಳೆದರೆ  ಎರಡರ ಸಮಾನತೆ ಅರ್ಥ ವಾಗಬಹುದು. ಕಾರಣ ಜ್ಞಾನ  ಕಣ್ಣಿಗೆ ಕಾಣದಿದ್ದರೂ ಅನುಭವಕ್ಕೆ ಬರುತ್ತದೆ.  ಇದಕ್ಕೆ ಹೇಳೋದು  ಕಣ್ಣಿಗೆ ಕಾಣೋದೆಲ್ಲ ಸತ್ಯವಲ್ಲ. ಕಾಣದಿರೋದು ಅಸತ್ಯ ವಲ್ಲ. ಸತ್ಯಾಸತ್ಯತೆಯನ್ನು  ಎಷ್ಟು ಬಗೆದರೂ‌ ಬೆಳೆಯುತ್ತದೆ.  ಜೀವ ಭೂಮಿಗೆ ಬಂದ ಉದ್ದೇಶ ಒಂದೇ ಜೀವನ್ಮುಕ್ತಿ ಎನ್ನುವ ಪರಮಸತ್ಯದ  ಹಿಂದೆ ನಡೆಯೋದು  ಅಲ್ಪಮಂದಿ. ತಮ್ಮ ಆಸೆ ತೀರಿಸಿಕೊಳ್ಳಲು ಸಾಕಷ್ಟು ಜೀವ ಕಾಯುತ್ತವೆ. ತೀರದ ಪಕ್ಷದಲ್ಲಿ ಮತ್ತೆ ಮತ್ತೆ ಹುಟ್ಟುವುದು.ಹೀಗಾಗಿ ಆಸೆಯು ಸಾತ್ವಿಕವಾಗಿದ್ದರೆ  ಶಾಂತಿ.
ರಾಜಸವಾಗಿದ್ದರೆ ಕ್ರಾಂತಿ. ತಾಮಸಗುಣವಾಗಿದ್ದರೆ ಅಶಾಂತಿ.
ಆಸೆಯೇ ದು:ಖಕ್ಕೆ ಕಾರಣವೆಂದರು. ಅತಿಆಸೆಯೇ ದು:ಖಕ್ಕೆ ಕಾರಣವೆನ್ನಬಹುದಷ್ಟೆ.ಆಸೆಯಿಲ್ಲದೆ ಜನ್ಮವಿಲ್ಲ.
ಜನ್ಮಪಡೆದವರೆಲ್ಲರ ಆಸೆಯೂ ಸಮಾನವಾಗಿರಲ್ಲ. ಅವರವರ ಆಸೆಗೆ ತಕ್ಕಂತೆ  ಪರಮಾತ್ಮ ನಡೆಸುವಾಗ  ಆಸೆಯು ದುರಾಸೆಯಾಗದಂತೆ ತಡೆಯುವುದೇ ಜ್ಞಾನ.
ವಿದ್ಯೆಗಿಂತ ಜ್ಞಾನವೇ ಶ್ರೇಷ್ಠ. ವಿದ್ಯೆಯಿಲ್ಲದೆಯೂ ಜ್ಞಾನಿಗಳಿದ್ದರು. ಆಂತರಿಕವಾಗಿರುವ ಸಾಮಾನ್ಯಜ್ಞಾನ  ಎಲ್ಲರ ಸಂಪತ್ತು. ಸಂಪತ್ತನ್ನು ವೃದ್ದಿಗೊಳಿಸಿಕೊಳ್ಳಲು ಒಳಗೆ ನಡೆದರೆ ಆತ್ಮಜ್ಞಾನ, ಹೊರಗೆ ಬಂದರೆ  ಬೌತಿಕದ ವಿಜ್ಞಾನ.
ಎರಡನ್ನೂ ಅರ್ಥ ಮಾಡಿಕೊಳ್ಳಲು ಬೇಕಿದೆ ಸಾಮಾನ್ಯಜ್ಞಾನ
ಅತಿಯಾದರೆ ಗತಿಗೇಡು. ಮಾನವ ಕಾರಣಮಾತ್ರದ ಮಧ್ಯವರ್ತಿ ಎಂದಾಗ ಇಲ್ಲಿ ನಾನ್ಯಾರು ಉತ್ತರವಿದೆ. ನನ್ನೊಳಗಿರುವ  ದೇವಾಸುರರ ಶಕ್ತಿಯನ್ನು  ತಿಳಿದು ನಡೆದರೆ
ನನ್ನ ಸ್ವಂತ ಬುದ್ದಿಗೆ ಕೆಲಸವಿದೆ. ಇಲ್ಲವಾದರೆ ಕೆಲಸವಿಲ್ಲದೆ ಜಡ್ಡುಗಟ್ಟುತ್ತದೆ. ಲೋಕದ ಡೊಂಕನ್ನು ನೀವ್ಯಾಕೆ ತಿದ್ದುವಿರಿ
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ,ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ ಎಂದರು ಶರಣರು.ಪರಮಾತ್ಮನಿಗೆ ಶರಣಾಗೋದು ಬಹಳ ಕಷ್ಟ. ಪರಕೀಯರಿಗೆ ಶರಣಾದರೆ ನಷ್ಟ. ಇಬ್ಬರ ನಡುವಿನ‌ಮಾನವನಿಗೆ ಸಂಕಷ್ಟ ತಪ್ಪಿದ್ದಲ್ಲ. 
ದೇವತೆಗಳನ್ನು  ಪೂಜಿಸುವವರು ದೇವಲೋಕ ಸೇರಿದರೆ
ಪಿತೃಗಳನ್ನು ಪೂಜಿಸಿದರೆ ಪಿತೃಲೋಕ, ಭೂತಗಳನ್ನು ಪೂಜಿಸಿದರೆ ಭೂತಲೋಕವಾದರೆ  ಕೃಷ್ಣನ ಭಕ್ತರಿಗೆ ವೈಕುಂಠ ಎನ್ನುವುದು ಶ್ರೀ ಕೃಷ್ಣನ ಸಂದೇಶ. ಇದನ್ನು ಭೂಲೋಕದಲ್ಲಿದ್ದು ಎಲ್ಲಾ ತಿಳಿಯಬೇಕೆಂಬುದಷ್ಟೆ ಸತ್ಯ.
ಅವರವರ ದೇವರು ಅವರನ್ನು ನಡೆಸುತ್ತಾನೆ.ಪರಕೀಯರ ದೇವರ ಹಿಂದೆ ನಡೆದರೂ ನಡೆಸುತ್ತಾನೆ. ಆದರೆ ಮೂಲ ದೇವರು ಹಿಂದುಳಿದರೆ  ತಿರುಗಿ ಬರೋದಷ್ಟೆ ಕಷ್ಟ. ಒಟ್ಟಿನಲ್ಲಿ
ಎಲ್ಲಾ ದೇವರಿರೋದೂ ಒಂದೇ ಶಕ್ತಿಯೊಳಗೆ. ಒಳಗಿನ ಶಕ್ತಿಯನ್ನು  ಒಳಗೇ ಹುಡುಕಿದರೆ ಸಿಗೋದು. ಹೊರಗೆ ಹುಡುಕಿದರೆ ಸಿಗೋದಿಲ್ಲ.ಹಾಗೆ ಒಳಗಿನ ಸತ್ಯ ಬಿಟ್ಟು ಹೊರಗೆ ನಡೆದರೆ ದೇವರು ಸಿಗೋದಿಲ್ಲವೆನ್ನುವುದೇ ಅದ್ವೈತ. ದ್ವೈತವೂ ಒಳಗಿರುವಾಗ ಬೇರೆ ಬೇರೆ ಆಗೋದಿಲ್ಲ.  ಇದನ್ನು ಅನುಭವದಿಂದ ಮಾತ್ರ  ತಿಳಿಯಬೇಕಿದೆ. ದೇಶದೊಳಗಿರುವ
ಎಲ್ಲಾ ದೇಹದಲ್ಲಿಯೂ  ದೇಶಭಕ್ತಿ ಇಲ್ಲದಿದ್ದರೆ ದೇಶ ಬೇರೆ ದೇಹ ಬೇರೆ . ಮುಕ್ತಿ ಯಿಲ್ಲ.ಹಾಗೆ ದೇವರೂ ಕೂಡ..
ತತ್ವದೊಳಗೆ ಇರೋವಾಗ ತಂತ್ರವಿದ್ದರೆ ಸಿಗೋದಿಲ್ಲ.

No comments:

Post a Comment