ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Thursday, October 27, 2022

ದೀಪಗಳ ಮಹತ್ವ

ದೀಪಾವಳಿಯ ಶುಭಾಶಯಗಳು.
ದೀಪಗಳು  ಜೀವನಕ್ಕೆ ಬೆಳಕನ್ನು ನೀಡುವ ಸಾಧನ. ಇದನ್ನು ಯಾವ ಕಾರ್ಯಕ್ಕೆ ಹೇಗೆ ಹೇಗೆ ಬಳಸಬೇಕೆಂಬುದೂ ಹಿಂದೂ ಧರ್ಮ ದಲ್ಲಿದೆ. ದೀಪ ಬೆಳಗುವ ಕಾರ್ಯಕ್ರಮ ಪ್ರತಿಯೊಂದು ಶುಭ ಸಮಾರಂಭದಲ್ಲಿ ಕಾಣಬಹುದು. ಇದಕ್ಕೆ
ಕಾರಣವನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ದೀಪದಿಂದ
ಉತ್ತಮ ಬದಲಾವಣೆಯೂ ಸಾಧ್ಯ. ಇತ್ತೀಚಿನ ದಿನಗಳಲ್ಲೊ
ಎಷ್ಟು ದೀಪ ಹಚ್ಚಬೇಕೆಂಬುದರ ಬಗ್ಗೆ ಚರ್ಚೆ ನಡೆಯುತ್ತದೆ.
ದೀಪ ಒಂದಾದರೂ ಶುದ್ದವಿದ್ದರೆ ಅದರಿಂದ ಜ್ಞಾನ ಬರುತ್ತದೆ.
ಆಂತರಿಕ ಶಕ್ತಿಯನ್ನು ಹೆಚ್ಚಿಸುವ  ಜ್ಞಾನ ದೀಪವನ್ನು ಯಾರೂ ಕಣ್ಣಿನಿಂದ ಕಾಣಲಾಗದು. ಅವರವರ ಜ್ಞಾನ  ಒಳಗೇ ಇದ್ದು ಅದನ್ನು ತಿಳಿಯಲು ಹೊರಗಿನ ಕಾರ್ಯ ಕ್ರಮದಲ್ಲಿ ದೀಪವನ್ನು ಬೆಳಗಲಾಗುತ್ತದೆ. ಇಲ್ಲಿ ಧಾರ್ಮಿ ಕ,ರಾಜಕೀಯ ಆರ್ಥಿಕ, ಸಾಮಾಜಿಕ,ಶೈಕ್ಷಣಿಕ,ಸಾಹಿತ್ಯಿಕ ಕ್ಷೇತ್ರವೆಲ್ಲವೂ ಶುಭ ಸಮಾರಂಭದಲ್ಲಿ ದೀಪ ಬೆಳಗಿಸುತ್ತಾರೆ. ಆದರೆ ಆರ್ಥಿಕವಾದ ಅಭಿವೃದ್ಧಿಗೆ  ಹೆಚ್ಚು ಹೆಚ್ಚು ಪ್ರಾಧಾನ್ಯತೆ
ಯನ್ನು ಪಡೆದುಕೊಂಡು  ಧಾರ್ಮಿಕ ವಾಗಿ ಹಿಂದುಳಿದರೆ ದೀಪದ ಎಣ್ಣೆಯಿಂದ ಹಿಡಿದು‌ಉರಿಸುವ ಬತ್ತಿಯೂ ಕಲಬೆರಕೆಯಾಗಿ ಅದರ ಸತ್ವವನ್ನು ‌ಕಳೆದುಕೊಂಡು ಲಕ್ಷಾಂತರ  ದೀಪಗಳನ್ನುಹಚ್ಚಿದರೂ ಪ್ರಕೃತಿ ವಿರುದ್ದ 
ನಡೆದಾಗ ಪ್ರಕೃತಿ ವಿಕೋಪ ಹೆಚ್ಚಿಸಮಸ್ಯೆ  ಸುತ್ತಿಕೊಳ್ಳುತ್ತದೆ. 
ದ್ಯಾನ,ಜಪ,ತಪ,ಯೋಗ ,ಯಾಗ, ದಾನ,ಧರ್ಮ,ಸೇವೆ,
ಪೂಜೆ, ಪುನಸ್ಕಾರಗಳು,ಸಂಸ್ಕಾರಯುಕ್ತವಾಗಿದ್ದು
 ಉತ್ತಮ ಶಾಂತಿ,ಸಮೃದ್ಧಿಯನ್ನು  ದೇಶದ ಜನತೆ,ದೇಶ,ವಿಶ್ವ ಕಂಡರೆ  ಅದು ನಿಜವಾದ ಜ್ಞಾನದಿಂದ ಮಾತ್ರ ಸಾಧ್ಯವೆನ್ನುವರು ಮಹಾತ್ಮರುಗಳು. ಯಾವಾಗ  ಆಚರಣೆ
ಗಳಾಗಲಿ,ಕಾರ್ಯ ಕ್ರಮಗಳಾಗಲಿ ತಮ್ಮ ಸ್ವಾರ್ಥ ಅಹಂಕಾರದ  ರಾಜಕೀಯ ರೂಪ ಪಡೆದು  ಅಜ್ಞಾನ  ಬೆಳೆಯುವುದೋ  ಎಷ್ಟೇ ದೀಪ  ಹಚ್ಚಿದರೂ ಅದರ ಎಣ್ಣೆಯಾಗಲಿ,ಬತ್ತಿಯಾಗಲಿ,ಹಣವಾಗಲಿ,ಹಣತೆಯಾಗಲಿ
 ಜನರಾಗಲಿ ಸ್ವಚ್ಚ ಮನಸ್ಸಿನಿಂದ  ಬಳಸಿ ಬೆಳಗುವರೋ ಅದೇ ರೀತಿಯಲ್ಲಿ   ಪ್ರತಿಫಲವನ್ನೂ  ಮನುಕುಲ  
ಪಡೆಯುತ್ತಾನೆ. ಹೊರಗಿನಿಂದ ಮಾನವ ಬೆಳಗುವ ದೀಪ ಒಳಗೇ ಇರುವ   ದೇವರ ಶಕ್ತಿಯಾದ ಆತ್ಮಜ್ಯೋತಿ ಒಂದಾಗಲು ಎರಡೂ ಕಡೆಯಿಂದಲೂ ಶುದ್ದವಾಗಬೇಕು.
ಆತ್ಮ ಯಾವತ್ತೂ ಸ್ವಚ್ಚವೆ ಆದರೆ ಮನಸ್ಸು ಸ್ವಚ್ಚವಾಗದಿದ್ದರೆ
ಒಳಗಿನ ದೀಪದವರೆಗೆ ತಲುಪದೆ ಜ್ಞಾನದೀಪ ಬೆಳೆಯುವುದಿಲ್ಲ. ಒಟ್ಟಿನಲ್ಲಿ ದೀಪದ ಶಕ್ತಿ  ಎಲ್ಲೆಡೆಯೂ ಒಂದೇ  ಸಮನಾಗಿರೋದಿಲ್ಲ. 
ಶುಭಕ್ಕೆ ದೀಪ ಹಚ್ಚುತ್ತಾರೆ. ಅದು ಶುದ್ದವಾಗಿದ್ಧಷ್ಟೂ ಉತ್ತಮ .
ದೀಪಾವಳಿ ದೀಪಗಳ ಸಾಲಿನಲ್ಲಿ‌ ಸಾಕಷ್ಟು  ಶಕ್ತಿ  ಅಡಗಿರುತ್ತದೆ. ದೀಪ ಎನ್ನುವ ಪದವನ್ನು  ಮನೆಯ ದೀಪ, ದೇವಸ್ಥಾನ,ಮಠ,ಮಂದಿರ,ಮಹಲ್,ಮಹಾದೇಶ,ಮಹಾವಿಶ್ವದೆಲ್ಲೆಡೆಯೂ ಹರಡಿದೆ.ಆದರೆ ಮನಸ್ಸಿನ ಒಳಗಿರುವ ಜ್ಞಾನದ ದೀಪವನ್ನು  ಹೊರಗಿನವರು ಕಾಣದಿದ್ದರೂ ಇದೇ ಎಲ್ಲಾ ದೀಪಗಳ ಮೂಲ ಶಕ್ತಿಯಾಗಿದ್ದು ಒಳಗಿನಿಂದಲೇ
 ಬೆಳಗುತ್ತದೆ. ಯಾರೆಷ್ಟೇ  ಇಲ್ಲವೆಂದರೂ ನಾವು ಕಂಡು
ಕೊಂಡಿದ್ದನ್ನು ಆರಿಸಲಾಗದು.ಇದನ್ನು ನಮ್ಮ ಆಸ್ತಿ
ಯನ್ನಾಗಿಟ್ಟುಕೊಂಡು ಇಡೀ ಭೂಮಂಡಲವನ್ನು ಅರ್ಥ
 ಮಾಡಿಕೊಂಡರೆ  ಆತ್ಮರಕ್ಷಣೆ ಆಗುತ್ತದೆ.ಆರದ ದೀಪವೇ ಆತ್ಮಜ್ಯೋತಿ.ಇದನ್ನುಕಂಡುಕೊಂಡವರೆಮಹಾತ್ಮರಾಗಿದ್ದಾರೆ. 
ಹೊರಗಿನಿಂದ  ಬೆಳಗುವ ದೀಪಗಳುಪ್ರಕೃತಿಯ ಪರ ನಿಂತು
 ಸ್ವಚ್ಚ ವಾದರೆ ನಿಜವಾದ ದೀಪಾವಳಿ.
ಹಬ್ಬ ಹರಿದಿನಗಳಲ್ಲಿ ಬೆಳಗುವ ದೀಪಗಳ ಸಂಖ್ಯೆ ಅಧಿಕ. ದಿನವೂ ಬೆಳಗುವ ದೀಪಗಳ ಸಂಖ್ಯೆ ಕಡಿಮೆಯಿದ್ದರೂ ಇದು
ವರ್ಷ ವಿಡೀ ಬೆಳಗಿಸುವುದರಿಂದ ಹೆಚ್ಚಿನ ಮಹತ್ವ ಪಡೆದಿದೆ.
ಹಾಗೆಯೇ ಮನೆಯ ದೀಪ ಎನ್ನುವ ಸ್ತ್ರೀ ಶಕ್ತಿ ಪ್ರತಿದಿನವೂ
ಸಂಸಾರಕ್ಕಾಗಿ ಭಗವಂತನಿಗೆ ದೀಪ ಬೆಳಗಿ ಶುದ್ದ ಭಾವನೆಯಲ್ಲಿ ಬೇಡಿದರೆ  ಅದಕ್ಕಿಂತ ದೊಡ್ಡ  ಶಕ್ತಿ ಬೇರಿಲ್ಲ.
ಮನೆಯಲ್ಲಿ ದೀಪ ಹಚ್ಚಲು ಸಮಯವಿಲ್ಲದೆ ಹೊರಗಿನ ಕಾರ್ಯ ಕ್ರಮದಲ್ಲಿನ  ದೀಪ ಹಚ್ಚುವುದರಿಂದ ಹೊರಗಿನ  ವ್ಯವಹಾರದಲ್ಲಿ ಪ್ರಗತಿ ಕಾಣಬಹುದು. ಹಣ ಸಂಪಾದನೆ ಗಾಗಿ ನಡೆಸುವ ವ್ಯವಹಾರದಲ್ಲಿ ದೀಪದಲ್ಲಿ ಸಮಾನತೆಯ ಅಗತ್ಯವಿದೆ. ಸಂಸಾರದ ಜೊತೆಗೆ ಸಮಾಜದ ದೀಪವೂ ಸ್ವಚ್ಚ
ಸುಂದರವಾಗಿರಿಸೋದೆ ದೊಡ್ಡ ಸಾಧನೆ. ಇದಕ್ಕೆ ಸಹಕಾರದ ಅಗತ್ಯವಿದೆ.ಕೇವಲ ತನ್ನ ಮನೆಗಾಗಿ ಮಾಡಿಕೊಂಡರೆ ಇದು ಸಾಧನೆಯಾಗದೆ ಸಮಾಜದಲ್ಲಿಯೂ ಜ್ಞಾನಜ್ಯೋತಿ ಬೆಳಗಿಸಿದರೆ  ದಾರಿ ದಾರಿಯಲ್ಲಿ ಉರಿಸುವ ದೀಪದೊಳಗಿನ
ಆ ಮಹಾಶಕ್ತಿ  ಕಾಣಬಹುದು.
ಭಾರತದಂತಹ  ಮಹಾ ದೇಶದಲ್ಲಿನ ಸ್ತ್ರೀ ಶಕ್ತಿಯಿಂದ ಮನೆ ಮನೆಯೊಳಗೆ ಜ್ಞಾನ ಜ್ಯೋತಿ ಬೆಳಗಿತ್ತು. ವಿದೇಶಿಗರಿಂದ ವಿಜ್ಞಾನ ಬೆಳೆದಿರೋದು ಸ್ತ್ರೀ ಸಹಕಾರದಿಂದಲೇ.ಆದರೆ ಎರಡೂ ದೀಪಗಳ ಉದ್ದೇಶ  ಒಂದಾಗದೆ ವಿರುದ್ದ ನಡೆದಾಗ
ದ್ವೇಷ,ಸೇಡು,ಪೈಪೋಟಿ, ಹಗೆ,ಬಡತನ,ಯುದ್ದದಂತಹ ಅಸುರಿ ಶಕ್ತಿಯನ್ನು ಹಿಮ್ಮೆಟ್ಟಿಸಲಾಗದು.  ಮನುಕುಲವು ಆತ್ಮಜ್ಯೋತಿಯನ್ನು‌ ಬೆಳಗಿಸುವ  ಹಿಂದೂ ಧರ್ಮದ ದೀಪವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ  ಕ್ಯಾಂಡಲ್ ಮೂಲಕ ಬೆಳಗಿಸುತ್ತಾ ಪಟಾಕಿಯಂತಹ ಸಿಡಿಮದ್ದುಗಳಿಂದ  ಶಬ್ದ,ಸದ್ದು,ಗದ್ದಲ,ಗಲಭೆಗಳನ್ನು ಸೃಷ್ಟಿಮಾಡಿ ಕಿಡಿಕಾರಿದರೆ ಇದರಿಂದಾಗಿ ಕಷ್ಟ ನಷ್ಟಗಳನ್ನು ಜೀವವೇ ಅನುಭವಿಸುವು
ದೆನ್ನುವುದೇ  ಜ್ಞಾನದ ದೀಪ.ಇದನ್ನು ಸೂಕ್ಷ್ಮ ವಾಗಿ ಕಂಡವರಿಗೆ  ನಿಜವಾದ ಸತ್ಯದರ್ಶನ. ಇಲ್ಲವಾದರೆ ಮಿಥ್ಯದ ಹೊರಗಿನ ದೀಪ ಬೇರೆ ಬೇರೆ ರೂಪ ಪಡೆದು  ಹೊತ್ತಿ ಉರಿಯಬಹುದು. ಎರಡೂ ದೀಪಗಳೂ ಬೆಳಕನ್ನು
ನೀಡುವುದು ಸತ್ಯವಾದರೂ ಒಂದು ಶಾಶ್ವತ ಇನ್ನೊಂದು ತಾತ್ಕಾಲಿಕ. ಅತಿಯಾಗಿ ಉರಿಯುವುದನ್ನು ಬಿಟ್ಟರೆ ಶಾಂತಿ ಕಾಣಬಹುದು. ಉರಿಯಲ್ಲಿಯೂ ಎರಡು ರೀತಿಯಿದೆ.
ಬೆಂಕಿಯೂ ಅಗ್ನಿ, ದೀಪವೂ ಅಗ್ನಿ.   ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು. 
ವಾಮನಾವತಾರದಲ್ಲಿ ಇದನ್ನು ಮಹಾವಿಷ್ಣುವೇ ತೋರಿಸಿಕೊಟ್ಟಿದ್ದು  ಇದಕ್ಕಾಗಿಯೇ, ಅತಿಯಾದ ಸಂಪತ್ತಿದೆ ಎಂದು ದಾನ ಮಾಡಿದರೂ ಕಷ್ಟ.ಹೀಗಾಗಿ ಇತಿಮಿತಿಯಲ್ಲಿ ಸಂಪತ್ತಿದ್ದರೆ ಆಪತ್ತಿರೋದಿಲ್ಲ.  ಒಂದು ಭೂಮಿಯನ್ನೇ ಅರ್ಥ ಮಾಡಿಕೊಳ್ಳದೆ ಇತರ ಲೋಕವನ್ನೆಲ್ಲಾ ಗೆದ್ದು ಆಳುವ
ಅಸುರರನ್ನು  ಹೇಗೆ ಸಂಹಾರ ಮಾಡಲಾಯಿತೆನ್ನುವ ಪುರಾಣ ಕಥೆ ಕೇಳಿದರೂ ಭೂಮಿಯನ್ನು ಆಳೋದಕ್ಕಾ
ಗಿಯೇ  ಅಧರ್ಮ, ಅಸತ್ಯ,ಅನ್ಯಾಯ,ಭ್ರಷ್ಟಾಚಾರದಲ್ಲಿ
ದುಷ್ಟರು ಹುಟ್ಟಿ ಬೆಳೆದು ದೀಪ ಹಚ್ಚಿ ಸಂಭ್ರಮಿಸಿದರೆ ದೀಪದ ಮಹತ್ವ ತಿಳಿಯದೆ ಆತ್ಮಜ್ಯೋತಿ ಹಿಂದುಳಿಯುತ್ತದೆ.
 ಹೊರಗಿನಿಂದ ಕಾಣುವ ಬೆಳಕನ್ನು ನಂಬಿ ಕೆಟ್ಟವರೇ 
ಹೆಚ್ಚು. ಕತ್ತಲು ಬೆಳಕಿನಗ್ರಹಣವನ್ನು  ಎಷ್ಟು ಭಯದಿಂದ 
ಕಾಣುವರೋ  ಒಳಗಿನ  ಈ ಕತ್ತಲೆಯನ್ನು  ಭಯವಿಲ್ಲದೆ ಬೆಳೆಸಿಕೊಂಡು  ಆಳುವವರ ಸಂಖ್ಯೆ ಬೆಳೆದು ನಿಂತಿದೆ ಇದನ್ನು ಯಾರೂಕಾಣುತ್ತಿಲ್ಲವೆಂದರೆ ನಮಗೆ ನಾವೇ ಕತ್ತಲೆಯೊಳಗಿರುವುದು ಸತ್ಯ.
 ಹೊರಗಿನ ದೀಪದಿಂದ ದೀಪವನ್ನು  ಹಚ್ಚಬಹುದು.ಒಳಗಿನ ದೀಪದಿಂದ ಇನ್ನೊಂದು ದೀಪ ಹಚ್ಚಲು ಜ್ಞಾನದ ಶಿಕ್ಷಣ ಬೇಕು.
ಸತ್ಯಜ್ಞಾನವನ್ನು   ಸತ್ಯದಿಂದಲೇ  ಬೆಳಗಿಸಿಕೊಳ್ಳಬೇಕಿದೆ. ಈ ಕಷ್ಟ  ಯಾರೂ ಇಷ್ಟಪಡದೆ   ಇಂದು ಅಜ್ಞಾನದ ರಾಜಕೀಯ ಬೆಳೆದಿದೆ.

No comments:

Post a Comment