ಪುರಾಣ,ಇತಿಹಾಸದ ಕಥೆಗಳನ್ನು ನಾವು ಕೇಳುವಾಗ,
ಹೇಳುವಾಗ ಈಗಿನ ಮಾನವರ ಪರಿಸ್ಥಿತಿ, ಮನಸ್ಥಿತಿ, ಜ್ಞಾನಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು. ಕೇವಲ ಬೌತಿಕ ಸತ್ಯವನ್ನಷ್ಟೇ ತಿಳಿದವರಿಗೆ ಅಂದಿನಧರ್ಮ ಜ್ಞಾನ ಕೇವಲ ಕ್ರೂರತೆ, ಅಸಹಾಯಕತೆ, ಕಠೋರತೆ, ಅಶಾಂತಿಯ ರಾಜಕೀಯತೆ, ಸ್ತ್ರೀ ಶಕ್ತಿಯ ದುರುಪಯೋಗ ಇದೇ ಕಾಣುತ್ತದೆ. ಹೀಗಿರುವಾಗ ಸಮಾಜ ಅದರೊಳಗಿನ ಧಾರ್ಮಿಕತೆ, ಪಾರಮಾರ್ಥಿಕ ಸತ್ಯಜ್ಞಾನ ತಿಳಿಯದೆ
ಅದಕ್ಕೆ ವಿರುದ್ದ ನಡೆಯುವುದು ಸಹಜ. ಇದನ್ನು ನಾಸ್ತಿಕತೆ ಎನ್ನಲಾಗದು. ಮಾನವೀಯತೆ ಬಿಟ್ಟು ಕೇವಲ ಪ್ರಚಾರಕ್ಕೆ ಸೀಮಿತ ಮಾಡಿದರೆ ಧರ್ಮ ರಕ್ಷಣೆ ಕಷ್ಟ.
ಬದಲಾವಣೆ ನಮ್ಮಿಂದ ಆಗಬೇಕು. ನಾನೆಂಬುದು ಬದಲಾಗಬೇಕು.ಇದನ್ನು ಶಿವ ಶರಣರು ತಿಳಿಸಿದ್ದಾರೆ.
ಸತ್ಯ ಯುಗ,ತ್ರೇತಾಯುಗ,ದ್ವಾಪರಯುಗ,ಕಲಿಯುಗ ಇವು
ನಾಲ್ಕು ವರ್ಣಗಳನ್ನು ತಿಳಿಸುತ್ತದೆ. ಬ್ರಾಹ್ಮಣ ,ಕ್ಷತ್ರಿಯ ವೈಶ್ಯ
ಶೂದ್ರದ ಧರ್ಮ ಕರ್ಮದ ಪ್ರಕಾರ ಸತ್ಯಯುಗದ ಬ್ರಾಹ್ಮಣ
,ತ್ರೇತಾಯುಗದ ಕ್ಷತ್ರಿಯ, ದ್ವಾಪರದ ವೈಶ್ಯ, ಹಾಗು ಕಲಿಯುಗದ ಶೂದ್ರರ ಧರ್ಮ ಕರ್ಮಕ್ಕೆ ತಕ್ಕಂತೆ ಭೂಮಿ
ನಡೆಯುತ್ತದೆ. ಅಂದರೆ, ಈಗಿನ ಸಾಮಾನ್ಯಜ್ಞಾನದ ಶೂದ್ರರ
ಸೇವಾಗುಣದಿಂದ ಮಾತ್ರ ಭೂಮಿಯ ರಕ್ಷಣೆ ಸಾಧ್ಯ ಎಂದರ್ಥ.
ಇಲ್ಲಿ ಮೇಲು ಕೀಳೆಂಬುದಿಲ್ಲ. ಅವರವರ ಮೂಲ ಧರ್ಮ ಕರ್ಮ ಅವರನ್ನು ನಡೆಸುತ್ತದೆ. ಅದನ್ನು ತಿರಸ್ಕರಿಸಿ ನಡೆದರೆ
ಅಧರ್ಮ, ಅನ್ಯಾಯ, ಅನಾಚಾರ, ಭ್ರಷ್ಟಾಚಾರ, ಅಸತ್ಯದ
ಜೀವನದಲ್ಲಿ ಜೀವಕ್ಕೆ ಮುಕ್ತಿ ಸಿಗದೆ ಅತಂತ್ರವಾಗಿರುತ್ತದೆ.
ಸಾತ್ವಿಕ ವಿಚಾರವೆಂದರೆ ಸತ್ಯದ ವಿಚಾರ. ಸತ್ಯ ನಮ್ಮ ಧರ್ಮ
ಕರ್ಮದೊಳಗಿದೆ. ನಮ್ಮ ಆತ್ಮಸಾಕ್ಷಿಗೆ ನಾವೇ ರಾಜರು.
ಹೀಗಿರುವಾಗ, ಅದನ್ನು ಮರೆತು ಹೊರಗಿನ ರಾಜಕೀಯಕ್ಕೆ
ಶರಣಾದರೆ ನಷ್ಟ ಯಾರಿಗೆ?
ಒಟ್ಟಿನಲ್ಲಿ ಮಾನವನ ಸಕಲ ಸಂಕಷ್ಟ ಕ್ಕೆ ಅವನೇ ಕಾರಣ.
ಇದನ್ನು ಸರ್ಕಾರ ಸರಿಪಡಿಸಹೋದರೆ ಇನ್ನಷ್ಟು ಅಧರ್ಮ
ಅನ್ಯಾಯ, ಅಶಾಂತಿ,ಭ್ರಷ್ಟಾಚಾರ ಹೆಚ್ಚಾಗುತ್ತದೆ. ಹಣದಿಂದ
ಏನೂ ಬದಲಾವಣೆ ಆಗೋದಿಲ್ಲ. ಆದರೂ ಅದೊಂದು ಸಾಲದ ರೂಪದಲ್ಲಿ ನಿಂತು ಮುಂದಿನ ಪೀಳಿಗೆಯಿಂದ ವಸೂಲಿ ಮಾಡುವುದು ಸತ್ಯ.
ಒಂದು ಪಕ್ಷ ಪ್ರಜೆಗಳಿಗೆ ಅನಾವಶ್ಯಕ ಸಾಲ ಸೌಲಭ್ಯಗಳನ್ನು
ನೀಡಿ ಸೋಮಾರಿ ಮಾಡಿ ಬೆಳೆಸಿದರೆ, ಇನ್ನೊಂದು ಪಕ್ಷ ಅದನ್ನು ವಸೂಲಿ ಮಾಡಲು ಹೊರಟಿತು. ಹಾಗಾದರೆ ಇಲ್ಲಿ
ತಪ್ಪು ಮಾಡಿದವರು ಯಾರು? ಸಾಲ ಕೊಡುವುದು ಎಷ್ಟು ತಪ್ಪೋ ಹಾಗೇ ಪಡೆಯುವುದೂ ತಪ್ಪು ಎನ್ನುತ್ತಾರೆ ಮಹಾತ್ಮರು.
ಮಹಾತ್ಮರಿಗೆ ಸಾಲದ ಹೊರೆ ಏರಿಸಿ ಸಾಕೋ ಸರ್ಕಾರದ ಹಿಂದೆ ನಡೆದವರನ್ನು ಹಿಂದುಳಿದವರು ಎಂದರೆ ಈಗ ಅವರ ಸಮಸ್ಯೆಗೆ ಪರಿಹಾರವಾಗಿ ಹಣ ನೀಡುವ
ಬದಲು ಕೆಲಸ ಕೊಟ್ಟು ದುಡಿಯಲು ಸಹಕರಿಸಿ. ಇಲ್ಲ ಅವರ ಮೂಲ ಧರ್ಮ ಕರ್ಮದಲ್ಲಿ ಜೀವನ ನಡೆಸಲು ಬಿಡಿ. ಅವರವರ ಸ್ವಾವಲಂಬನೆ ಅವರನ್ನು ಮೇಲೆತ್ತುವುದು.
ಇದಕ್ಕೆ ಮಧ್ಯೆ ರಾಜಕೀಯತೆ ಯಾಕೆ?
ಪ್ರತಿಯೊಂದರಲ್ಲಿಯೂ ನಮ್ಮ ದೇಶವನ್ನು ಹಿಂದೆ ತಳ್ಳುವ
ಪ್ರಯತ್ನ ವಿಜ್ಞಾನದಿಂದ ನಡೆದಿದೆ. ವಿದೇಶಿಗಳ ಶಿಕ್ಷಣ, ಧರ್ಮ
ವ್ಯವಹಾರಜ್ಞಾನ, ಬಂಡವಾಳ, ರೀತಿ,ನೀತಿ,ಸಂಸ್ಕೃತಿ....
ಇದನ್ನು ಈಗಲೂ ಬೆಳೆಸಿರುವುದು ಭಾರತೀಯರೆ ಎಂದರೆ
ನಾವು ಬದಲಾಗದೆ ಬೇರೆಯವರನ್ನು ಬದಲಾವಣೆ ಮಾಡಲು ಸಾಧ್ಯವೆ?
ಆಧ್ಯಾತ್ಮಿಕ ಸತ್ಯ ಕಣ್ಣಿಗೆ ಕಾಣದ ಕಾರಣ ಇದೊಂದು ವಿಷಯ ಕೇವಲ ಪ್ರಚಾರಕ್ಕೆ ಸೀಮಿತವಾಗಿ,ಜನರನ್ನು ಮನೆ
ಹೊರಗಿನ ದೇವರೆಡೆಗೆ ಎಳೆದಿದೆ. ಮನೆಯೊಳಗಿನ ದೇವರು
ಕಾಣುವರೆ? ಸ್ತ್ರೀ ದೇವತೆಗಳನ್ನು ಆರಾಧಿಸುವವರೆ ಮನೆಯ
ಒಳಗಿನ ಸ್ತ್ರೀ ಯರಿಗೆ ಸರಿಯಾದ ಜ್ಞಾನದೆಡೆಗೆ ನಡೆಸೋ
ಶಿಕ್ಷಣ ನೀಡದೆ ರಾಜಕೀಯ ನಡೆಸಿದರೆ, ಇಲ್ಲಿ ರಾಜಯೋಗ
ಎಲ್ಲಿರುತ್ತದೆ?
ರಾಜಯೋಗ ಎಂದರೆ ಆತ್ಮಾನುಸಾರ ಸ್ವತಂತ್ರ ವಾಗಿ ಜೀವನ
ನಡೆಸೋದು. ರಾಜಕೀಯ ಮನಸ್ಸಿಗೆ ಬಂದಂತೆ ಇತರರನ್ನು
ಆಳುವುದು.
No comments:
Post a Comment