ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Sunday, February 26, 2023

ಪುರುಷಪ್ರಧಾನ ಸಮಾಜ ಮತ್ತು ಭಾರತ

ಪುರುಷಪ್ರಧಾನ ಸಮಾಜ ಮತ್ತು ಭಾರತ
ಭಾರತಮಾತೆಯನ್ನು ಆತ್ಮಜ್ಞಾನದಿಂದ ಅರ್ಥ ಮಾಡಿಕೊಂಡ ಮಹಾತ್ಮರ ಯೋಗಿಗಳ ದೇಶವೀಗ  ಭೋಗ ಜೀವನ ನಡೆಸುವ  ಭ್ರಷ್ಟಾಚಾರಿಗಳ ವಶವಾಗಿರುವುದು  ಅಜ್ಞಾನವನ್ನು ತೋರಿಸುತ್ತದೆ. ಏನೇ ಬರಲಿ ಒಗ್ಗಟ್ಟಿರಲಿ ಎನ್ನುವ ತತ್ವ ಬಿಟ್ಟು ತಂತ್ರದಿಂದ ಮನೆಯೊಳಗಿನ ಮಹಿಳೆ ಮಕ್ಕಳು ಹೊರಬರುವಂತೆ ಮಾಡಿ ಒಳಗಿದ್ದ ಸತ್ವ ಸತ್ಯ ಹಿಂದುಳಿಸಿದರೆ  ಇದಕ್ಕೆ ಕಾರಣ ಸ್ತ್ರೀ ಯಾಗುವಳೆ? ಪುರುಷರೆ? ಸತ್ಯ ತಿಳಿಸಿದರೆ 'ಸ್ತ್ರೀ ವಾದಿ' ಎಂದು ದೂರ ತಳ್ಳುವುದರಿಂದ ಸತ್ಯ ಹಿಂದುಳಿಯಬಹುದು ಅದರ ಜೊತೆಗೆ ಧರ್ಮ ವೂ ಕುಸಿಯುತ್ತದೆ. 
ಮಹಾಭಾರತ ಯುದ್ದವಾಗಲಿ,ರಾಮಾಯಣಯುದ್ದವಾಗಲಿ ನಡೆದಿದ್ದಕ್ಕೆ ಸ್ತ್ರೀ ಕಾರಣವೆನ್ನುವ  ಮಾತಿದೆ. ಇದನ್ನು ಇನ್ನೊಂದು ರೀತಿಯಲ್ಲಿ ವಿವರಿಸಿದರೆ ಪುರುಷಪ್ರಧಾನ ಸಮಾಜವೇ ಇದಕ್ಕೆ ಕಾರಣವೆನ್ನಬಹುದು. ಭಾರತವನ್ನು ಪವಿತ್ರದೃಷ್ಟಿಯಿಂದ ಕಾಣೋದಕ್ಕೆ ಆತ್ಮಜ್ಞಾನವಿರಬೇಕು.ಈ ಆತ್ಮಜ್ಞಾನ ಸಿಗೋದಕ್ಕೆ ಭೂಮಿಗೆ ಬರಬೇಕು.ಭೂಮಿಯಲ್ಲಿ ಜನ್ಮ ಪಡೆಯುವುದಕ್ಕೆ ತಾಯಿಯ  ಗರ್ಭದಿಂದಷ್ಟೆ ಸಾಧ್ಯ.
ಹೀಗಾಗಿ ಜನನಿಯನ್ನು  ಯಾವ ರೀತಿಯಲ್ಲಿ ನೋಡಲಾಗುವುದೋ ಆ ರೀತಿಯಲ್ಲಿ  ಜೀವನವಿರುತ್ತದೆ. ಸಮಾಜಕ್ಕೆ ಮೊದಲು ಸಂಸಾರ ಕಾಣುವ ಮಗು ಸಂಸಾರದಲ್ಲಿರುವ  ಎಲ್ಲಾ ಸದಸ್ಯರ ಪೈಕಿ ತಾಯಿಯನ್ನು ಅವಲಂಬಿಸಿರುತ್ತದೆ.ಆ ತಾಯಿಗೆ ಸಿಗುವ ಜ್ಞಾನದಿಂದ  ತನ್ನ ಜ್ಞಾನ ಮುಂದುವರಿಸಿಕೊಂಡು ಸಮಾಜದ ಒಂದು ಅಂಗವಾಗಿ ಬೆಳೆಯುವ ಮಕ್ಕಳ ಭವಿಷ್ಯ ದ ಮೂಲಾಧಾರವೆ ಮೊದಲು ಗುರು ತಾಯಿಯಾಗಿದ್ದಳು. ಈಗಲೂ ಅಂತಹ ಗುರುವಿದ್ದರೂ ಮೊದಲ ಗುರುವಿನ ಶಿಕ್ಷಣವೇ ಭೌತಿಕ ಶಿಕ್ಷಣ ಹೀಗಾಗಿ ಆಂತರಿಕ ಅರಿವಿಲ್ಲದ ಮಕ್ಕಳು ಮೊದಲು ಮೊದಲು ನೋಡುವುದು ದೈಹಿಕ ಬೆಳವಣಿಗೆ.ಅಧಿಕಾರ,ಹಣ,
ಸ್ಥಾನಮಾನವಿಲ್ಲದ ಸ್ತ್ರೀ ಯನ್ನು ಕೀಳಾಗಿ ಕಾಣುವ ಸಂಸಾರವು ಇಂದಿಗೂ ಭಾರತದಂತಹ ಮಹಾತ್ಮರನ್ನು ಗುರುತಿಸಲು ಸೋತಿದೆ ಎನ್ನಬಹುದು. ಎಷ್ಟೋ  ಕುಟುಂಬ  ಒಡೆದಿರುವುದೂ  ಈ ಅಜ್ಞಾನದಿಂದಲೇ ಇದಕ್ಕೆ ಕಾರಣವೆ ಶಿಕ್ಷಣ ವ್ಯವಸ್ಥೆ.
ಹಿಂದಿನ ಶಿಕ್ಷಣ ವ್ಯವಸ್ಥೆ ಮನೆಮನೆಯೂ ಗುರುಕುಲವಾಗಿಸಿ ಅಧ್ಯಾತ್ಮ ದೆಡೆಗೆ  ಸಾಗಿಸಿತ್ತು.ವಿಪರೀತವಾದ ಸ್ತ್ರೀ ಶೋಷಣೆಗೆ ಕಾರಣ ಅಂದಿನ  ಪುರುಷಪ್ರಧಾನ ಸಮಾಜ ವ್ಯವಸ್ಥೆ ಯಾಗಿತ್ತು.ಈಗಲೂ ಇದೇ ಸಮಾಜ ಸ್ತ್ರೀ ಯನ್ನು ಆಳಲು ಹೊರಟು ಸ್ತ್ರೀ ವಿದ್ಯಾವಂತೆಯಾಗಿ ಮನೆಯಿಂದ ಹೊರ
ಬಂದು ಸ್ವತಂತ್ರ ಜೀವನ ನಡೆಸುವಂತೆ ಮಾಡಿದ್ದರೂ  ಒಳಗಿರಬೇಕಾದ ಜ್ಞಾನಶಕ್ತಿ  ಕುಸಿದರೆ ಅಥವಾ ತೊರೆದು ಹೊರಗೆ ಹೋದರೆ  ಏನಾಗಬಹುದು? ಇದಕ್ಕೆ ಕಾರಣ
ವೆಂದರೆ  ಸಂಸಾರ ಬೇರೆ ಸಮಾಜ ಬೇರೆ, ಜ್ಞಾನ ಬೇರೆ ವಿಜ್ಞಾನ ಬೇರೆ, ಸ್ತ್ರೀ ಬೇರೆ ಪುರುಷ ಬೇರೆ, ಹರಿಹರ ರ ಭೇಧಭಾವ, ದ್ವೈತಾದ್ವೈತದ ದ್ವೇಷ, ಹೀಗೇ  ಬೆಳೆಯುತ್ತಾ ಹೋಗಿ ಈಗಿದು ಬಿಡಿಸಲಾಗದ ಗಂಟಾಗಿದೆ. ಸರಳವಾಗಿದ್ದ ತತ್ವವನ್ನು  ಕಠಿಣವಾಗಿಸಿಕೊಂಡು  ಅರ್ಧ ಸತ್ಯವನ್ನು  ಬಂಡವಾಳ ಮಾಡಿಕೊಂಡು ಎಲ್ಲರಿಗೂ ಹಂಚಿದ ಮಧ್ಯವರ್ತಿ ಮಾನವನಿಗೆ ತನ್ನೊಳಗೆ ಅಡಗಿರುವ ಶಿವಶಕ್ತಿಯರ  ಅಂಶದ ಅರಿವಿಲ್ಲದೆ ಹೊರಗಿನ ರಾಜಕೀಯಕ್ಕೆ ಮಣೆ ಹಾಕುತ್ತಾ ಅತಿಥಿ ಸತ್ಕಾರ ಮಾಡಿ ನಮ್ಮವರನ್ನೇ ದ್ವೇಷ ಮಾಡಿಕೊಂಡು ಹೊರಗಿನ ದೇವರನ್ನು ಬೆಳೆಸಿದರೆ  ಕಷ್ಟ ನಷ್ಟ ಯಾರಿಗೆ?
ಸ್ತ್ರೀ ಶಕ್ತಿಯನ್ನು  ಯಾರೋ ಆಳಲು ಹೋಗಿ ಆಳಾಗಿ ಹಾಳಾಗಿ ಹೋದರೂ ಅದರಲ್ಲಿಯೂ ಸಾಧನೆ ಎನ್ನುವವರು ಪುರುಷರಿದ್ದಾರೆ.ಅದೇ ಸ್ತ್ರೀ ತನ್ನ ಆತ್ಮರಕ್ಷಣೆಯ ಜೊತೆಗೆ ದೇಹ ರಕ್ಷಣೆಯನ್ನೂ ಮಾಡಿಕೊಂಡು ಧರ್ಮದ ಹಾದಿ ಹಿಡಿದರೆ  ಅದರಲ್ಲಿ ಲೋಪದೋಷಗಳನ್ನು ಹುಡುಕಿಕೊಂಡು ಕೆಳಗಿಳಿಸುವ  ಪುರುಷಪ್ರಧಾನ ಸಮಾಜದಿಂದ ಭಾರತೀಯರಿಗೆ ಸಿಕ್ಕಿದ್ದು ಭ್ರಷ್ಟಾಚಾರ ಮಾತ್ರ. ಇಲ್ಲಿ ಯಾರೋ ಕೆಲವರು ಉತ್ತಮರಿದ್ದರೂ ಇಡೀ ಸಮಾಜ ಹಾಳಾಗಿ ಹೋಗಿರುವಾಗ  ಕೆಲವರನ್ನು ಎತ್ತಿ ಏಣಿಗೇರಿಸುವ ಅಗತ್ಯವಿಲ್ಲ.ಹಾಗೆಯೇ ಕೆಲವು ಸ್ತ್ರೀ ಯರು ದಾರಿತಪ್ಪಿ ನಡೆದರೆ ಎಲ್ಲಾ ಸ್ತ್ರೀ ಯರೂ ಹೀಗೇ ಎನ್ನಬಾರದಷ್ಟೆ. ಒಳ್ಳೆಯದು ಕಣ್ಣಿಗೆ ಕಾಣದು ಕೆಟ್ಟದ್ದು ಕಂಡರೂ ಹೇಳೋ
ಹಾಗಿಲ್ಲ. ನಿರಾಕಾರ ಶಕ್ತಿ ಕಾಣೋದಿಲ್ಲವೆಂದ ಮಾತ್ರಕ್ಕೆ ಇಲ್ಲವೆಂದಲ್ಲ.ಹಾಗೆ ಕಾಣೋದೆಲ್ಲಾ ಸತ್ಯವಲ್ಲ. ಅಜ್ಞಾನದ ಕಣ್ಣಿಗೆ ಕಂಡದ್ದೇ ಸತ್ಯವೆನ್ನುವ ಮಟ್ಟಿಗೆ ಸಮಾಜ ಭೌತಿಕದಲ್ಲಿ ಬೆಳೆದು ಜ್ಞಾನದ ಕಣ್ಣು ಮುಚ್ಚಿಹೋಗಿದೆ. ಆ ಕಣ್ಣನ್ನು ಯಾರೋ ಹೊರಗಿನಿಂದ ಬಂದು ತೆರೆಸುವ ಮೊದಲು ನಾವೇ ಒಳಗೆಹೊಕ್ಕಿ ನೋಡಲು ಸ್ತ್ರೀ ಸಹಕಾರದ ಜೊತೆಗೆ ಪುರುಷ ಸಹಕಾರ ಅಗತ್ಯವಾಗಿತ್ತು. ವೈಜ್ಞಾನಿಕ ಚಿಂತನೆಗಳಂತೆ ಅಧ್ಯಾತ್ಮದ ಚಿಂತನೆ ಕಣ್ಣಿಗೆ ಕಾಣೋದಿಲ್ಲ. ಅವರವರ ಆತ್ಮಸಾಕ್ಷಿಗೆ ತಕ್ಕಂತೆ ನಡೆಯುವುದಕ್ಕೆ  ಅವಕಾಶ,ಸ್ವಾತಂತ್ರ್ಯ ಇದ್ದರೂ ಹಿಂದಿನವರ ಕುತಂತ್ರದ ಕೆಲವು ರಾಜಕೀಯವಿಚಾರ ಇಂದಿಗೂ  ಸಮಾಜ ಹಾಗು ಸಂಸಾರ ಪೀಡಕರನ್ನು ಸೃಷ್ಟಿ ಮಾಡಿ ಮೆರೆಯುತ್ತಿದೆ. ಎಲ್ಲಿಯವರೆಗೆ ಶಾಸ್ತ್ರ ಸಂಪ್ರದಾಯ, ಆಚರಣೆಗಳು ಶುದ್ದ  ಮನಸ್ಸಿನಿಂದ ನಡೆಯುವುದಿಲ್ಲವೋ ಎಲ್ಲಿಯವರೆಗೆ ಅತಿಯಾದ ವ್ಯವಹಾರಿಕ ಪ್ರವೃತ್ತಿಯ ರಾಜಕೀಯತೆ ಇರುವುದೋ ಅಲ್ಲಿಯವರೆಗೆ ಆತ್ಮಜ್ಞಾನವು ಹಿಂದುಳಿದಿರುತ್ತದೆ. ಪುಸ್ತಕದ ವಿಚಾರ ಮಸ್ತಕಕ್ಕೆ ಬಂದು ಮಾತಿನ ಮೂಲಕ ಹೊರಹೋಗುತ್ತಿದ್ದರೆ ಹೃದಯವಂತ
ರಿರದೆ ಹೃದಯಹೀನ ಸಮಾಜದಲ್ಲಿ ಸ್ತ್ರೀ ಪುರುಷರ ನಡುವೆ ಹೋರಾಟ,ಹಾರಾಟ,ಮಾರಾಟದ ವ್ಯವಹಾರವೆ ಹೆಚ್ಚಾಗಿರುತ್ತದೆ. ಇದರಿಂದಾಗಿ ಮನೆಯೊಳಗಿದ್ದ ಶಕ್ತಿ ಮನದೊಳಗೆ ಹೋಗಲಾಗದೆ  ಅಶುದ್ದತೆಯಿಂದ ಹೊರಗೆ  ಹೆಚ್ಚಾಗಿ ಹರಡಿಕೊಂಡರೆ  ಇದನ್ನು  ರಾಜಕೀಯತೆ ಎನ್ನಬಹುದು.ರಾಜಯೋಗವಾಗಲಾರದು. ಅಧ್ಯಾತ್ಮದ ಬೆಳವಣಿಗೆಗೆ ಆಂತರಿಕ ಶುದ್ದಿಯಾಗಬೇಕು.
ಶಾಂತಿಯಿರಬೇಕು.ಇದನ್ನು ಹೊರಗಿನ ರಾಜಕೀಯ ಕೊಡುವುದೆ? ಸಂಸಾರ ಕಷ್ಟವೆಂದು  ಕಾವಿಧರಿಸಿ ಸಂನ್ಯಾಸಿಯಂತೆ ಸಮಾಜದ ಮಧ್ಯೆ ಪ್ರಚಾರಕರಾದವರು ಸಾಕಷ್ಟು ವೈಭವದ ಜೀವನ ನಡೆಸಿದರೂ  ಸಾಧನೆ ಎನ್ನುವುದಾದರೆ ಯಾರು ತಾನೆ ಸಂಸಾರಸ್ಥರಾಗಿದ್ದು ಕಷ್ಟಪಟ್ಟು ಧರ್ಮದ ಹಾದಿಯಲ್ಲಿ ನಡೆಯಲು ಇಷ್ಟಪಡುವರು? ಸಾಕಷ್ಟು ಹಣವಿರುವವರಿಗೆ ಸತ್ಯಜ್ಞಾನದ ಕೊರತೆ, ಹಣವಿಲ್ಲದವರಿಗೆ ಜ್ಞಾನವಿದ್ದರೂ  ಗೌರವದ ಕೊರತೆ.
ಹೀಗಾಗಿಯೇ ಇತ್ತೀಚಿನ ದಿನಗಳಲ್ಲಿ ವಿಚ್ಚೇದನ ಹೆಚ್ಚಾಗಿದೆ. ಭೂಮಿಯ ಸಾಲ ತೀರಿಸಲು ಬಂದವರು ಭೂಮಿಯನ್ನು ದುರ್ಭಳಕೆ ಮಾಡಿಕೊಂಡಾದರೂ ಭೂ ಆಳುವರು. ಆದರೆ ಋಣ ತೀರಿಸಲು ಭೂ ಸೇವೆ ಮಾಡಬೇಕು. ಸತ್ಕರ್ಮ, ಸ್ವಧರ್ಮ, ಸ್ವಾಭಿಮಾನ, ಸ್ವಾವಲಂಬನೆ, ಸ್ವತಂತ್ರ ಜ್ಞಾನವಿಲ್ಲದೆ ಸಾಲ ತೀರದು. ಇಂತಹ ವಿಚಾರವನ್ನು ಶಿಕ್ಷಣದಿಂದ  ಪಡೆದು ಭಾರತದ ಹಿಂದೂ ಸನಾತನ ಧರ್ಮ ಬೆಳೆದಿತ್ತು.ಈಗ ಶಿಕ್ಷಣವೇ ಪರಕೀಯರ ವಶವಾಗಿ ಪರದೇಶಕ್ಕೆ ಹೆಣ್ಣನ್ನು ಕೊಟ್ಟು  ಸ್ವದೇಶಕ್ಕೂ ನನಗೂ ಸಂಬಂಧ ವಿಲ್ಲವೆನ್ನುವಂತೆ ದೇಶವನ್ನೇ ವಿದೇಶ ಮಾಡಲು ಹೊರಟಿರುವ ಸರ್ಕಾರಕ್ಕೆ ಹೆಚ್ಚಿನ ಸಹಕಾರ ನೀಡುವ ಶ್ರೀಮಂತ ಪ್ರಜೆಗಳಲ್ಲಿ  ಆತ್ಮಜ್ಞಾನದ ಕೊರತೆ ಹೆಚ್ಚಾಗಿರೋದು  ಕಣ್ಣಿಗೆ ಕಾಣದ ಕಟು ಸತ್ಯ. ಇದನ್ನು ಪರಧರ್ಮದವರು ಗಮನಿಸುತ್ತಾ ಭಾರತೀಯ ಸ್ತ್ರೀ ಯರನ್ನು ತಮ್ಮೆಡೆ ಸೆಳೆಯುವ‌ಪ್ರಯತ್ನದಲ್ಲಿ ಯಶಸ್ವಿಯಾಗಿರೋದನ್ನು  ಪುರುಷರು ದ್ವೇಷ ಮಾಡಿ ಪ್ರಯೋಜನವಿಲ್ಲ. ಸಾಮಾನ್ಯಜ್ಞಾನದ ಕೊರತೆಯಿಂದ ಇಂದು  ಸಮಾಜದಲ್ಲಿ ಕೆಟ್ಟ ಬದಲಾವಣೆ ಆಗುತ್ತಿದೆ. ಒಳಗಿದ್ದ ಸತ್ವ ಸತ್ಯ ಬಿಟ್ಟು ಹೊರಗಿನ ಮಿಥ್ಯವನ್ನು ತುಂಬಿಕೊಂಡಿರುವ ಸಮಾಜವನ್ನು  ಭೌತಿಕದಲ್ಲಿ  ಕಂಡರೂ  ಅಧ್ಯಾತ್ಮದ  ಕೊರತೆಯನ್ನು  ನೀಗಿಸಲು ಸರಿಯಾದ ಶಿಕ್ಷಣ,ಶಿಕ್ಷಕ,ಗುರು ಮೂಲ ಶಕ್ತಿಯನ್ನು  ಗುರುತಿಸಲು ಸೋತಿರುವುದು ಭಾರತೀಯರ  ಈ ಸ್ಥಿತಿಗೆ ಕಾರಣವೆಂದರೂ ಇಲ್ಲಿ ತಪ್ಪಾಗುತ್ತದೆ. ಕಾರಣ ಇಲ್ಲಿ ಹೇಳಿದ್ದಷ್ಟೇ ಸತ್ಯವೆನ್ನುವ ಮಂದಿ ಹೆಚ್ಚು.  ಶಂಖದಿಂದ ಬಂದದ್ದೆಲ್ಲಾ ತೀರ್ಥ ವಾಗಿದ್ದರೆ  ಎಲ್ಲಾ ಶುದ್ದವಾಗಿರುತ್ತಿತ್ತು.
ರಾಜಕೀಯ ತುಂಬಿರುವ ಧರ್ಮದಲ್ಲಿ ಪರಮಾತ್ಮನ ದರ್ಶನ ಮಾಡಲಾಗದು.  ಇತಿಹಾಸದ ರಾಜಪ್ರಭುತ್ವ ಹೋಗಿ ಪ್ರಜಾಪ್ರಭುತ್ವ ಬಂದರೂ ನಮ್ಮ ಹಿಂದಿನ ರಾಜಕೀಯ ಬಿಡದೆ ರಾಜಯೋಗ ಅರ್ಥ ವಾಗದು. ತನ್ನ ತಾನು ಆಳಿಕೊಳ್ಳುವ ಜ್ಞಾನಶಕ್ತಿ ಸ್ತ್ರೀ ಪುರುಷರಿಬ್ಬರಲ್ಲಿಯೂ ಇದೆ. ಆದರೆ ಸ್ತ್ರೀ ಯ ಅಧ್ಯಾತ್ಮ ಶಕ್ತಿ ಪುರುಷರ ಭೌತಿಕ ಶಕ್ತಿಯನ್ನು  ಆಳುವುದೆನ್ನುವ ಕಾರಣಕ್ಕಾಗಿ ಸ್ತ್ರೀ ಯನ್ನು ಹಿಂದುಳಿಸಿ ಆಳಿರುವುದೇ  ಸಂತಾನದ ಅಜ್ಞಾನಕ್ಕೆ ಕಾರಣವಾಗಿದೆ. ಒಟ್ಟಿನಲ್ಲಿ ಮೊದಲ ಗುರುವಿಗೆ ಕೊಡಬೇಕಾದ ಜ್ಞಾನದ ಶಿಕ್ಷಣದಲ್ಲಿಯೇ  ಪುರುಷಪ್ರಧಾನ ಮಿತಿಮೀರಿ ಭಾರತ
ದಂತಹ ಪವಿತ್ರ ದೇಶ ದಾರಿತಪ್ಪಿ ನಡೆಯಲು ಕಾರಣವಾಗಿರೋದು ಸತ್ಯ. ಇಡೀ ಸಂಸಾರದ ಜವಾಬ್ದಾರಿ ಹೊತ್ತು ಹೊರಗೆ ಒಳಗೆ ದುಡಿದು ಜೀವನ ನಡೆಸುತ್ತಿರುವ ಮಹಿಳೆಯರು  ದೇಶದ ಆಸ್ತಿ.ಇವರನ್ನು ಮನರಂಜನೆಗಾಗಿ ಮೀಸಲಾಗಿಟ್ಟುಕೊಂಡವರೆಷ್ಟೋ ಮಂದಿಗೆ  ತಾವು ಆತ್ಮಹತ್ಯೆ ಮಾಡಿಕೊಂಡಿರುವ ಸತ್ಯಜ್ಞಾನವಿಲ್ಲ. ಎಲ್ಲಿಯವರೆಗೆ  ಪುರುಷ ತನ್ನ ಸಾಲ ತೀರಿಸಲು ಧರ್ಮ ಮಾರ್ಗ ಹಿಡಿಯುವುದಿಲ್ಲವೋ ಅಲ್ಲಿಯವರೆಗೆ ಆತ್ಮಕ್ಕೆ ಶಾಂತಿ, ನೆಮ್ಮದಿ, ತೃಪ್ತಿ ಸಿಗೋದಿಲ್ಲ.ಅತೃಪ್ತ ಆತ್ಮಗಳಾಗಿದ್ದು ಆತ್ಮವಂಚನೆಯಲ್ಲಿಯೇ  ಕಾಲಕಳೆಯುವಂತಹ  ಮಕ್ಕಳು  ಬೆಳೆಯುತ್ತಿರುವುದರ ಹಿಂದೆ  ಅಜ್ಞಾನವಡಗಿದೆ.ಎಷ್ಟು ಪುಸ್ತಕ ಓದಿದ್ದೇವೆನ್ನುವ ಬದಲಾಗಿ ಎಷ್ಟು ಸತ್ಯ ಧರ್ಮದ  ಮಾರ್ಗ ದಲ್ಲಿ ನಡೆದುಸ್ವತಂತ್ರರಾಗಿಸ್ವತಂತ್ರಜ್ಞಾನಪಡೆದಿದ್ದೇವೆ
ನ್ನುವುದೇ ಮುಖ್ಯ. 
ಆಳುವುದಕ್ಕೆ ಹಣ ಬೇಕು.ಹಣಗಳಿಸುವುದಕ್ಕೆ ಜ್ಞಾನವಿರಬೇಕು.ಜ್ಞಾನ ಬಂದ‌ಮೇಲೆ ಹಣ ಸದ್ಬಳಕೆ
ಯಾಗಬೇಕು. ಸದ್ಬಳಕೆ ಧರ್ಮದ ಪರವಿರಬೇಕು.ಧರ್ಮದ ಪ್ರಕಾರ ಜ್ಞಾನಕ್ಕೆ ಲಿಂಗಬೇಧವಿಲ್ಲ. ಹಾಗಾಗಿ ಜ್ಞಾನದೇವತೆ
ಯಿಲ್ಲದ ಬ್ರಹ್ಮಜ್ಞಾನವಿಲ್ಲ. ಬ್ರಹ್ಮಜ್ಞಾನವಿಲ್ಲದೆ ಬ್ರಾಹ್ಮಣ
ನಾಗೋದಿಲ್ಲ.ಬ್ರಾಹ್ಮಣನ ನಂತರ ಕ್ಷತ್ರಿಯಧರ್ಮ, ವೈಶ್ಯ ಶೂದ್ರರೂ ಮೇಲಿನ ತಲೆಯ ಆಧಾರದಲ್ಲಿಯೇ ಬೆಳೆದಿರುವಾಗ ತಲೆಯಿದ್ದವರು ಸರಿಯಾಗಿ ನಡೆಯಬೇಕು. ನಡೆದವರಲ್ಲಿ ತಲೆಯಿದ್ದರೂ ಗುರುತಿಸದವರು ಬೆಳೆದರು.ಇವೆಲ್ಲವೂ ಅಸಮಾನತೆಯ ಅಜ್ಞಾನವನ್ನು ಬೆಳೆಸಿತು.ಈಗಲೂ ಹಳೆಯ ಗಾಯವನ್ನು ಕೆದಕಿಕೊಂಡು ಹುಣ್ಣು ಮಾಡಿಕೊಂಡು  ಜೀವನದಲ್ಲಿ ರೋಗ ಹರಡಲು ರಾಜಕೀಯತೆ ಮನೆಮಾಡಿಕೊಂಡಿದೆ. ಇದನ್ನು ತಡೆಯಲು ಕಷ್ಟ.ಕಷ್ಟಪಟ್ಟರೆ ಸಾಧ್ಯ.ಆದರೆ ಕಷ್ಟವನ್ನು ಹಣದಿಂದ ಸರಿಪಡಿಸಹೋಗಿ ಇನ್ನಷ್ಟು ಸಾಲ ಹೋರಿಸಿ  ತಮ್ಮ ಅಧಿಕಾರ ಸ್ಥಾನಮಾನ ಉಳಿಸಿಕೊಳ್ಳಲುಹೊರಟಿರುವಮಧ್ಯವರ್ತಿಗಳು ತಾವೂ ಸತ್ಯ ತಿಳಿಯದೆ ಪರರಿಗೂ ತಿಳಿಸದಂತೆ ಅಡ್ಡದಾರಿಗೆ ಸ್ತ್ರೀ ಯರನ್ನು ಮಕ್ಕಳನ್ನು ಎಳೆದಿರೋದು ದುರಾದೃಷ್ಟಕರ ವಿಚಾರ. ಒಟ್ಟಿನಲ್ಲಿ ಮಾಡಿದ್ದುಣ್ಣೋ ಮಹಾರಾಯ ಎಂದು ಪುರುಷರಿಗೆ ಹೇಳಿರುವುದಕ್ಕೆ ಈ ರಾಜಕೀಯತೆ ಕಾರಣ.
ಹಿಂದಿನ ಸ್ತ್ರೀ ಯರಲ್ಲಿದ್ದ ಆತ್ಮಜ್ಞಾನಕ್ಕೂ ಈಗಿನ ವಿಜ್ಞಾನಕ್ಕೂ ಬಹಳ ಅಂತರವಿದೆ.ಈ ಅಂತರವನ್ನು ಮದ್ಯವರ್ತಿಗಳು ನಿಂತು ಕುತಂತ್ರದಿಂದ  ಇನ್ನಷ್ಟು ದೂರ ಮಾಡಿದರೆ‌ಯಾರಿಗೆ ಲಾಭ? ನಷ್ಟ? ಮನುಕುಲ ಎಚ್ಚರವಾಗೋದು ಕಷ್ಟವಿದೆ.
ಭ್ರಷ್ಟಾಚಾರ ಬೆಳೆಯಲು ಕಾರಣ ಸ್ತ್ರೀ ಸಹಕಾರ. ಇದರಿಂದಾಗಿ ಸ್ತ್ರೀ ಶೋಷಣೆ ಹೆಚ್ಚಾಗುವುದೆನ್ನುವ ಸತ್ಯವನ್ನು ಸ್ವಯಂ ಸ್ತ್ರೀ ಅರ್ಥ ಮಾಡಿಕೊಂಡಿಲ್ಲ. ಹಣವೇ ಸರ್ವಸ್ವ ವಲ್ಲ.ಜ್ಞಾನ ಸರ್ವಸ್ವ.ಕರ್ಮಫಲ ಈ ಜನ್ಮದಲ್ಲಿ  ಅನುಭವಿಸ
ದಿದ್ದರೂ ಮುಂದಿನ ಜನ್ಮದಲ್ಲಿಅನುಭವಿಸಲೇಬೇಕೆನ್ನುವುದು
 ಅಧ್ಯಾತ್ಮ ಸತ್ಯ. ಭೌತಿಕ ವಿಜ್ಞಾನ ಒಪ್ಪಲಿ ಬಿಡಲಿ ಸತ್ಯ ಒಂದೇ. ಇದನ್ನರಿತು  ನಡೆದರೆ ಸಮಾನತೆ ಮನೆಯೊಳಗೆ ಹೊರಗೆ ಸರಿಯಿರುತ್ತದೆ. ಸಂಸಾರ ಸಮಾಜದ ಒಂದು ಭಾಗವಷ್ಟೆ.ಸಮಾಜವೇ ಸಂಸಾರವಾದರೆ ನಡೆಸೋದು ಕಷ್ಟ.
ಅವರವರ ಜ್ಞಾನದ ಸದ್ಬಳಕೆಗೆ ಸರ್ಕಾರದ ಹಣಕ್ಕಿಂತ ಜ್ಞಾನದ ಶಿಕ್ಷಣವೇ ಮೂಲಾಧಾರ. ನಾವು ಬದಲಾಗದೆ ಸಮಾಜದ ಬದಲಾವಣೆ ಅಸಾಧ್ಯ. ಗೃಹ ಮಂತ್ರಿಯ  ಜ್ಞಾನ ಬಿಟ್ಟು ನಡೆದಷ್ಟೂ  ಗ್ರಹಣಗಳೆ ಹೆಚ್ಚುವುದು.

Tuesday, February 21, 2023

ಆಳುವವರು ಆಳಾಗಿರುತ್ತಾರೆ

ಹಿಂದೂ ಧರ್ಮದ  ಚಿಂತನೆಗಳು ಜೀವನ್ಮುಕ್ತಿಯೆಡೆಗೆ ಆತ್ಮಸಾಕ್ಷಿಯ ಕಡೆಗಿತ್ತು. ಕಾಲಾನಂತರದ ರಾಜಕೀಯ ಪ್ರಭಾವದಿಂದಾಗಿ  ಮನುಷ್ಯತ್ವ ಮರೆತವರು ತತ್ವವನ್ನು ತಂತ್ರವಾಗಿ ಬಳಸಿಕೊಂಡು ಜೀವವನ್ನೇ ಆಳಲು ಹೊರಟು ಆತ್ಮಹತ್ಯೆ ಮಾಡಿಕೊಂಡವರೆ ಹೆಚ್ಚಾದರು. ಇದನ್ನು ತಡೆಯಲು ಹೊರಟ ಪರಧರ್ಮದವರು ಜೀವಕ್ಕೆ ಬೆಲೆಕಟ್ಟಿ ಕೊಂಡುಕೊಳ್ಳುವ ವ್ಯವಹಾರಕ್ಕೆ ತಮ್ಮ ಧರ್ಮ ಬಳಸಲು ಮುಂದಾದರು.ಇದೀಗ ಎಷ್ಟರ ಮಟ್ಟಿಗೆ  ಸಮಸ್ಯೆ ಗೆ ಕಾರಣ ಆಗಿದೆಯೆಂದರೆ  ಮಹಾತ್ಮರನ್ನೂ ಬಿಡದೆ ಎಲ್ಲಾ ಧರ್ಮದ ಉದ್ದೇಶ ಹಣ,ಅಧಿಕಾರ,ಸ್ಥಾನಮಾನ ಪಡೆದು ಜನರನ್ನು ಆಳುವುದು. ಇದನ್ನು ಸತ್ಯಜ್ಞಾನವೆಂದರೆ   ತಪ್ಪು. ಮಿಥ್ಯಜ್ಞಾನದಲ್ಲಿ ವ್ಯವಹಾರವೇ ಮುಖ್ಯ ಧರ್ಮ ವಲ್ಲ.
ಸತ್ಯದ ಬೆನ್ನತ್ತಿ ಹೋದವರಿಗಷ್ಟೆ ಹಿಂದಿರುವ ತಂತ್ರದ ದರ್ಶನ.ಎಲ್ಲಾ ಮಾನವರಾದಾಗ ಎಲ್ಲರಲ್ಲಿಯೂ ತಂತ್ರವಿದೆ.ಒಬ್ಬರಿಗೊಬ್ಬರು ಆಳಿಕೊಳ್ಳಲು ಮುಂದಾದಷ್ಟೂ ಕುತಂತ್ರ ಹೆಚ್ಚಾಗುತ್ತಾ ಕೊನೆಗೆ ಒಳಗೇ ಇದ್ದ ಸ್ವತಂತ್ರ ಜ್ಞಾನ ಹಿಂದುಳಿಯುತ್ತದೆ. ಇದರಿಂದಾಗಿ ಕಷ್ಟ ನಷ್ಟ ಅನುಭವಿಸುವುದು ಒಳಗಿನ ಜೀವವೇ ಹೊರತು ಹೊರಗಿನ ಜೀವನವಲ್ಲ. ಜೀವನದಲ್ಲಿ ಸಾಕಷ್ಟು ಜೀವಿಗಳ ವನವಿದೆ. ಆ ವನವನ್ನು  ಆಳೋಬದಲಾಗಿ ಸರಿಯಾದ ಪೋಷಣೆ ಮಾಡಿ ಬೆಳೆಸಿ ಬೆಳೆಯಲು ಬಿಟ್ಟರೆ ತಾನೇ ಒಳ್ಳೆಯ ಫಲ ನೀಡಲು ಸಾಧ್ಯ? ಕಲಿಗಾಲದ ಪ್ರಭಾವ ಎಲ್ಲರಿಗೂ ಆಳುವುದಕ್ಕೆ  ಆಸೆ ಆದರೆ  ಜ್ಞಾನಗಳಿಸುವುದಕ್ಕೆ ಆಸೆಯಿಲ್ಲದ ಕಾರಣ ಅಸತ್ಯ ಅನ್ಯಾಯ, ಅಧರ್ಮದೆಡೆಗೆ  ಸಹಕಾರ ಕೊಡುತ್ತಾ ಅದರಲ್ಲಿ ಸುಖವಿದೆ ಎನ್ನುವ ಭ್ರಮೆಯಲ್ಲಿ ತಾನೂ ಹಾಳಾಗಿ ಇತರರನ್ನು ಹಾಳುಮಾಡಿ ಹೋಗುವ  ಆಳುವವರು ಮತ್ತೆ ಜನ್ಮ ಪಡೆದಾಗ ಆಳಾಗಿರುತ್ತಾರೆ.
ಸಾಮಾನ್ಯವಾಗಿ ನಾವೀಗ ಎಷ್ಟೋ ಸಾಧಕರ ಮೂಲವನ್ನು ಗಮನಿಸಿದರೆ ತುಂಬಾ ಬಡತನವನ್ನನುಭವಿಸಿ ಮೇಲೆದ್ದು ಬಂದವರಿದ್ದಾರೆ. ಕಷ್ಟಪಟ್ಟು ಸುಖ ಅನುಭವಿಸುವುದು ಸರಿ.ಆದರೆ ಸುಖ ಬಂದಾಗ ಕಷ್ಟದಲ್ಲಿರುವವರನ್ನು ಆಳುವುದು ತಪ್ಪು. ಒಟ್ಟಿನಲ್ಲಿ  ಕರ್ಮಕ್ಕೆ ತಕ್ಕಂತೆ ಫಲ.ಯಾರಿಗೆ ಗೊತ್ತು ನಾವು ಹಿಂದಿನ ಜನ್ಮದಲ್ಲಿ ಏನು ಪಾಪ ಪುಣ್ಯದ ಕರ್ಮ ಮಾಡಿದ್ದೇವೆಂದು. ಇದನ್ನು ಅಧ್ಯಾತ್ಮ
ತಿಳಿಸುತ್ತದೆ.ಆದರೆ, ಅಧ್ಯಾತ್ಮ ದ ವಿಚಾರ ಓದಿ ತಿಳಿಸುವಾಗ ನಮ್ಮನ್ನು ನಾವು ಅರಿಯಲಾಗದೆ ಮೋಸ ಹೋಗುವ ಸಂಭವವೂ ಇರುತ್ತದೆ. ಈ ಮಾಯಾಲೋಕದಲ್ಲಿ ಎಲ್ಲಾ ಕ್ಷಣಿಕವೆ ಎಂದು ತಿಳಿದರೂ ಅಧಿಕಾರ,ಸ್ಥಾನಮಾನ,ಸನ್ಮಾನ
,ಪ್ರಶಸ್ತಿ, ಹಣ,ಜನಕ್ಕಾಗಿ ಪ್ರತಿಕ್ಷಣವೂ ಹಪಹಪಿಸುವ   ಸ್ವಾರ್ಥ. ರಾಜಕೀಯ ಬಿಟ್ಟು ಹಿಂದೆ ಬರುವುದು ಬಹಳ ಕಷ್ಟವಿದೆ. ಇದು ಹೊರಗಿನ ಜಗತ್ತನ್ನು ಆಳಲು ಹೊರಟು ಒಳಗಿನ ಜಗತ್ತಿನಿಂದ ಪಲಾಯನಮಾಡಿ ಗೆದ್ದೆ ಎನ್ನುವ ಭ್ರಮೆಯಲ್ಲಿ  ಹರಡುತ್ತಿದೆ. ಇದು ಧಾರ್ಮಿಕ ಕ್ಷೇತ್ರವನ್ನೇ ಆವರಿಸಿದರೆ ಧರ್ಮ ರಕ್ಷಣೆ ಹೇಗೆ ಸಾಧ್ಯ?
ಈ ಪ್ರಶ್ನೆಗೆ ಈವರೆಗೆ ಯಾವ ಧಾರ್ಮಿಕ ವರ್ಗ ಉತ್ತರ ನೀಡಲಾಗಿಲ್ಲ.ಕಾರಣವಿಷ್ಟೆ ಧರ್ಮಕ್ಕಿಂತವ್ಯವಹಾರವೇ ಮುಖ್ಯ.ಹಣವಿಲ್ಲದವರನ್ನು ಜನರು ಬದುಕಲು ಬಿಡೋದಿಲ್ಲ.ಒಬ್ಬ ಶುದ್ದ ಬ್ರಾಹ್ಮಣನ ಬಡತನವು ಅವನ ಸಂಸಾರವನ್ನು ನಾಶ ಮಾಡುತ್ತದೆಂದರೆ ಜ್ಞಾನ ಮೇಲೆ ಬರಲು ಕಷ್ಟವಿದೆ.ಹಾಗಂತ ಅಜ್ಞಾನದಿಂದ ಸಂಸಾರ ನಡೆಸಿದರೆ ಜೀವನ್ಮುಕ್ತಿಯಿಲ್ಲವಾದರೆ ಇಲ್ಲಿ ಜೀವಕ್ಕೆ ಮುಕ್ತಿ ಸಿಗದೆ ಅತಂತ್ರಸ್ಥಿತಿಗೆ ತಲುಪಿರುವ ಸಾಕಷ್ಟು ಅತೃಪ್ತ ಆತ್ಮಗಳಿವೆ.
ತೃಪ್ತಿ ಸಿಗುವುದಕ್ಕೆ ಆತ್ಮಜ್ಞಾನ ಬೇಕು.ಆತ್ಮಜ್ಞಾನಕ್ಕೆ ತಕ್ಕಂತೆ ಶಿಕ್ಷಣವಿರಬೇಕು.ಶಿಕ್ಷಣ ನೀಡುವವರು ಸ್ವತಂತ್ರ ಜ್ಞಾನಿಗಳಾಗಿ ಇರಬೇಕು. ಸ್ವತಂತ್ರವಾಗಿರುವ ಸತ್ಯವನ್ನು ತಿಳಿದು ನಡೆಯಬೇಕು. ಸತ್ಯವಿಲ್ಲದ ಧರ್ಮ  ಕುಂಟುತ್ತದೆ. ಧರ್ಮ ವೆ ಇಲ್ಲದ ಭೌತಿಕ ಸತ್ಯ ಕುರುಡರನ್ನು ಬೆಳೆಸುತ್ತದೆ. ಹೀಗಾಗಿ ಸತ್ಯ ಒಳಗಿದೆ ಇದನ್ನು ಒಳಗಿದ್ದೇ ಬೆಳೆಸಿಕೊಳ್ಳಲು  ಜನರಿಗೆ ಸ್ವಾತಂತ್ರ್ಯ ವಿದೆ. ಆದರೆ ಶಿಕ್ಷಣ ಮಾತ್ರ ಹೊರಗಿನದ್ದಾಗಿದ್ದು ಅಸತ್ಯವನ್ನು ಒತ್ತಾಯಪೂರ್ವಕವಾಗಿ ಒಳಗೆ ಸೇರಿಸುತ್ತಾ ಆಳುತ್ತಿದೆ. ಈ ವಿಚಾರವಾಗಿ ಯಾರೂ ಗಮನಕೊಡುತ್ತಿಲ್ಲ.
ಶಿಕ್ಷಣದಲ್ಲಿ ಬದಲಾವಣೆ ಮಾಡಬೇಕೆಂಬ ಕೂಗಿದೆ.ಅದಕ್ಕೆ ಸಾಕಷ್ಟು ಹಣಬಳಕೆಯಾಗಿದೆ,ಸಂಘಟನೆಗಳು ಹುಟ್ಟಿ
ಕೊಂಡಿದೆ, ಚರ್ಚೆ ಮಾಡೋರಿಗೆ ಅಧಿಕಾರ ಹಣವಿದೆ.
ಅಧಿಕಾರ ಹಣದ ಮೂಲವೇ  ಸರ್ಕಾರವಾಗಿದೆ.
ಸರ್ಕಾರ ಭ್ರಷ್ಟರಿಗೆ ಮಣೆ ಹಾಕಿದೆ. ಜ್ಞಾನ ಬರೋದಕ್ಕೆ ಭ್ರಷ್ಟಾಚಾರವೇ ಅಡ್ಡಿಯಾದಾಗ ಅದರ ಮೂಲದವರಿಂದ  ಶಿಕ್ಷಣದ ಬದಲಾವಣೆ ಆದರೂ ಮಕ್ಕಳ  ಮುಗ್ದ ಮನಸ್ಸು,
ಸ್ವಚ್ಚ ಮನಸ್ಸು ಶುದ್ದಿ ಮಾಡಲು ಶಿಕ್ಷಕರು ಶುದ್ದವಾಗಬೇಕು. ಸ್ವಚ್ಚ ಭಾರತವಾಗಲು ಶಿಕ್ಷಣ ಶುದ್ದವಾಗಬೇಕು.ಮೊದಲು ಪೋಷಕರು ಶುದ್ದವಾದರೆ ಅವರವರ ಮನೆಮನೆಯೇ ಗುರುಕುಲವಾಗಬಹುದು.ಇದಕ್ಕೆ  ಭ್ರಷ್ಟರಾಜಕೀಯದ ಬಲವಿದ್ದರೆ ಮಾತ್ರ ಮನೆ ಮನೆಗೂ ಭ್ರಷ್ಟಾಚಾರ ಹರಡುತ್ತದೆ.ಈಗಾಗಲೇ ಹರಡಿದೆ.ಎಲ್ಲೋ ಸ್ವಲ್ಪ ಉಳಿದಿರುವ  ಕಡೆಗೆ  ನಡೆಸದಿದ್ದರೆ ಉತ್ತಮ. ಮರವನ್ನು ಕಡಿದರೂ ಬೇರನ್ನು ಕೀಳಲಾಗದು.ಹಾಗಾಗಿ ಗಿಡದ ಮೂಲ ಶುದ್ದವಾಗಿದ್ದರೆ ನಿಧಾನವಾಗಿ ಉತ್ತಮ ಫಲ ಕೊಡುತ್ತದೆ.
ಯಾರನ್ನೋ ಯಾರೋ ಆಳಲು ಹೊರಟು ತಾವೇ ಆಳಾಗಿರುವ ಸತ್ಯ ನಮಗೇ ತಿಳಿದಿಲ್ಲ. ಸಾಮಾನ್ಯಜ್ಞಾನದ ಕೊರತೆ ಮಾನವನಿಗೆ ಒಳಗೇ ಸೇರಿಕೊಂಡಿರುವ,
ಸೇರುತ್ತಿರುವ ಅಸುರರ ಪರಿಚಯವಾಗದೆ ನಾನೇ
 ದೇವರು ಎನ್ನುವ ಅಹಂಕಾರ ಬೆಳೆದು ಮಕ್ಕಳ ಒಳಗಿನ ದೈವತ್ವ ಕಾಣದಾಗಿದೆ. ಪ್ರತಿಯೊಂದು ದೇಶಕ್ಕೂ ಅದರದೇ ಆದ ಮೂಲ ಶಿಕ್ಷಣಪದ್ದತಿ ಇದೆ.ಆ ದೇಶಕ್ಕೆ ಅದು ಉತ್ತಮ ಭವಿಷ್ಯನಿರ್ಮಾಣ ಮಾಡಬಹುದು. ಯಾವಾಗ ಪರದೇಶದ ಶಿಕ್ಷಣವೇ ಮೂಲ ಶಿಕ್ಷಣವಾಗುವುದೋ ಅದೇ ದೊಡ್ಡ ದುರಂತ ಕ್ಕೆ ಕಾರಣವಾಗುವುದು. ಜನ್ಮದಾರಂಭದಿಂದಲೇ ಹೊತ್ತುಕೊಂಡು ಬಂದಿರುವ ಋಣ ವನ್ನು ಸತ್ಕರ್ಮದಿಂದ ಸ್ವಧರ್ಮದಿಂದ ತೀರಿಸುವುದು ಸುಲಭ.ಆದರೆ ಅದನ್ನರಿಯದೆ ಹೊರಗಿನಿಂದ ಇನ್ನಷ್ಟು ಮತ್ತಷ್ಟು ಋಣ ಅಥವಾ ಸಾಲ ಮೈ ಮೇಲೆಳೆದುಕೊಂಡರೆ ತೀರಿಸಲಾಗುವುದೆ ಈ ವಿಚಾರ ತಿಳಿಯಲು ಜನಸಾಮಾನ್ಯರು ಯಾವ ದೇವರ ಹತ್ತಿರ ಹೋಗುವ ಅಗತ್ಯವಿಲ್ಲ.ಇದೊಂದು ಸಾಮಾನ್ಯ ಜ್ಞಾನ. ಪಾಲಿಗೆಬಂದದ್ದು ಪಂಚಾಮೃತವೆಂದೆಣಿಸಿ ಸರಳ ಜೀವನ ಸತ್ಯ,ಧರ್ಮದ ಕಾಯಕದಲ್ಲಿ ತೃಪ್ತಿ ಕರ ಸಂಸಾರ ನಡೆಸಿದ ಹಿಂದಿನವರಲ್ಲಿದ್ದ ತತ್ವಜ್ಞಾನ ಇಂದಿನವರಲ್ಲಿ ಮರೆಯಾಗಿ ತಂತ್ರಜ್ಞಾನದಲ್ಲಿ ಸಾಕಷ್ಟು ಸಂಶೋಧನೆಯಾಗಿದೆ.ತಂತ್ರದಿಂದ ಸ್ವತಂತ್ರ ಜ್ಞಾನ ಸಿಗದು.ಕಾರಣ ಇದು ಒಂದೇ ಇರೋದು.ಸತ್ಯ ಒಂದೇ ಇರೋದು.ಒಬ್ಬ ದೇವರನ್ನು ಕೋಟಿ ಮಾಡಿಕೊಂಡರೂ ಮೂಲ ಒಬ್ಬನೆ.
ದೇಹದೊಳಗೆ ಏನು ಸೇರಿಸಿದರೂ ಜೀವವೆ ಅನುಭವಿಸುವಂತೆ  ಪರಮಾತ್ಮನ  ಹೆಸರಿನಲ್ಲಿ ನಡೆಸುವ ಕಾರ್ಯದಲ್ಲಿ ಸ್ವಚ್ಚತೆಯಿಲ್ಲವಾದರೆ  ದೈವಶಕ್ತಿ ಕ್ಷೀಣಿಸಿ ಅಸುರ ಶಕ್ತಿ ಒಳಗೆ ಬೆಳೆಯುತ್ತದೆ. ಆಹಾರ,ವಿಹಾರ,ಸಂಸ್ಕಾರ,ವ್ಯವಹಾರದ ರೂಪಪಡೆದರೆ  ಹಣವೇ ಸರ್ವಸ್ವ. ಜ್ಞಾನ  ಕ್ಣೀಣವಾದಂತೆಲ್ಲಾ ಅಜ್ಞಾನದ ಕರುಡು ಹೆಚ್ಚುವುದು. ಇದು ದೇಶಕ್ಕೂ ಒಂದೇ ವಿದೇಶಕ್ಕೂ ಒಂದೇ  ಪ್ರಭಾವ ಬೀರುವುದು.ಎಲ್ಲಾ ಕಡೆ ಇರೋದೂ ಮಾನವ ರೂಪದಲ್ಲಿರುವ  ದೈವಾಂಶ ಸಂಭೂತರೆ.

 ದೇಶ ಒಂದೇ, ಭೂಮಿ ಒಂದೇ, ತಾಯಿ ಒಬ್ಬಳೆ ಜನ್ಮವೇ ಇಲ್ಲವಾಗಿದ್ದರೆ ಜೀವನ ಎಲ್ಲಿರುವುದು? ಜನನಿಯನ್ನು ಆಳುವುದರಿಂದ ಮುಕ್ತಿ ಸಿಗುವುದೆ? ಜನನಿಯ ಧರ್ಮ ರಕ್ಷಣೆಗಾಗಿ  ಅಧಿಕಾರ ಬೇಕಷ್ಟೆ.ಇದನ್ನು  ಸರಿಯಾಗಿ ಬಳಸುವ ಜ್ಞಾನದ ಅಗತ್ಯವಿದೆ.
ದೇವನೊಬ್ಬನೆ ನಾಮ ಹಲವು ಎಂದಂತೆ ದೇವಿಯೊಬ್ಬಳೆ ನಾಮ ಹಲವು ಯಾಕಾಗಲಿಲ್ಲ? ಭೂಮಿ ಮೇಲೆ ನಿಂತವರಿಗೆ ಕೆಳಗೆ ಕಾಣದೆ ಮೇಲೆ ಕಂಡಿದೆ.ಇದಕ್ಕೆ ಕಾಲುಬುಡದ ಕಸ ಹಾಗೇ ಉಳಿದಿದೆ. ಸ್ವಚ್ಚ ಮಾಡಿಕೊಳ್ಳಲು ಸಾಧ್ಯವಿದೆ.
ಸ್ವಚ್ಚಭಾರತ ಅಭಿಯಾನವು ರಾಜಕೀಯವಾಗಿ ಬೆಳೆದಷ್ಟೂ ಕೊಳಕು ತುಂಬಿಹೋಗುತ್ತದೆ. ಅವರವರ ಮನೆ,ಮನಸ್ಸಿನ ಸ್ವಚ್ಚತೆ ಕಡೆಗೆ ಗಮನಕೊಡದ ತತ್ವಜ್ಞಾನ ಕೇವಲ ಪ್ರಚಾರಕ್ಕೆ ಸೀಮಿತವಾಗದೆ ಆಚಾರಕ್ಕೆಬಂದರೆ ಒಗ್ಗಟ್ಟು  ಸತ್ಯ ಹಾಗು ಸತ್ವದ ಕಡೆಗಿರುತ್ತದೆ. ಎಲ್ಲಾ   ಪರಮಾತ್ಮನಆಟವೆನ್ನುವವರು
ತಮ್ಮ ಆಟದಲ್ಲಿರುವ ರಾಜಕೀಯಬಿಟ್ಟುರಾಜಯೋಗದೆಡೆಗೆ 
ನಡೆದರೆ ಪರಮಾತ್ಮನ ಕಾಣಬಹುದು. ಒಳಗಿನ  ಕೊಳಕನ್ನು  ಸರ್ಕಾರದ ಹಣ ತೊಳೆಯಲಾಗದು.
ಇದನ್ನು ಶಿಕ್ಷಣದಿಂದ ಸಂಸ್ಕಾರ ಮಾಡಿ ಮಕ್ಕಳಿಗೆ ಕೊಡದೆ  ದೇಶ  ಹಾಳಾಗಿದೆ,ಧರ್ಮ ಕೆಟ್ಟಿದೆ,ಸಂಸ್ಕಾರ ರಹಿತ ಸಮಾಜವಾಗಿದೆ, ಭ್ರಷ್ಟಾಚಾರ ಮುಗಿಲು ಮುಟ್ಟಿದೆ ಎಂದು ಕೂಗುವ ಮಧ್ಯವರ್ತಿಗಳು, ಮಾಧ್ಯಮಗಳು  ದೇಶದ ಪರ ಧರ್ಮದ ಪರ ನಿಂತರೆ? ಅಥವಾ ರಾಜಕೀಯ ಪಕ್ಷದ ಪರ ನಿಂತು ವ್ಯವಹಾರಕ್ಕಿಳಿದವೆ?
 ಸಾಮಾನ್ಯಪ್ರಜೆಗಳ ಸಾಮಾನ್ಯಜ್ಞಾನಕ್ಕೆ ವಿರುದ್ದನಿಂತು ಆಳಿದವರು ದೇಶ ರಕ್ಷಣೆ ಮಾಡಲಾಯಿತೆ? ಆಗಿದ್ದು ಆಗಿದೆ ಇನ್ನಾದರೂ ಹಿಂದಿರುಗಿ ಬಂದು ತಮ್ಮನ್ನು ತಾವು ಶುದ್ದಿಗೊಳಿಸಿಕೊಳ್ಳಲು ಮುಂದೆ ನಡೆದವರಿಗೆ ಮೇಲೆ ಹೋದವರಿಗೆ ಕಷ್ಟ. ಹಿಂದೆ ನಡೆದವರನ್ನು ತಡೆಯದೆ ಮುಂದೆ  ಸರಿದಾರಿಯಲ್ಲಿ ನಡೆಯಲು ಬಿಟ್ಟರೆ ಇದೇ ಧರ್ಮ.
ಒಟ್ಟಿನಲ್ಲಿ  ಕಲಿಗಾಲ ಮಾನವನಿಗೆ ತಕ್ಕ ಪಾಠ ಕಲಿಸುತ್ತದೆ.
ಆದರೂ ಪಾಠವನ್ನೇ ತಿರುಚಿಕೊಂಡು ಆಳುವ  ಅಸುರಿ ಶಕ್ತಿ ತಡೆಯಲು  ಅಸುರರಿಂದಲೇ ಸಾಧ್ಯ.ಮುಳ್ಳನ್ನು ಮುಳ್ಳಿನಿಂದಲೆ ತೆಗೆಯಬೇಕೆಂಬುದೆ  ಸತ್ಯ. ಆದರೂ ಏನೂ ಅರಿಯದ ಮುಗ್ದ ಮಕ್ಕಳು  ಅಸುರಶಕ್ತಿಯ ಆಳಾದರೆ  ಅವರ ಭವಿಷ್ಯ ಹೇಗಿರಬಹುದು? ಮನರಂಜನೆಗಾಗಿ ಬಳಸುವ  ಮಕ್ಕಳ ಪ್ರತಿಭೆಯನ್ನು ದುರ್ಭಳಕೆ ಮಾಡಿಕೊಂಡರೂ ಅರ್ಥ ವಾಗದ ಪೋಷಕರಿಗೆ  ಮಕ್ಕಳ ಸತ್ಯಜ್ಞಾನ ಹಿಂದುಳಿಯುತ್ತಿರುವ ಸತ್ಯದ ಅರಿವಿಲ್ಲದಿರೋದು ಶಿಕ್ಷಣದ ಪ್ರಭಾವ.ತಂತ್ರ ತಾತ್ಕಾಲಿಕ ವಷ್ಟೆ.ತತ್ವ ಮಾತ್ರ ಶಾಶ್ವತ.
 ಬದಲಾವಣೆ ಜಗದ ನಿಯಮ.ಕಾಲಚಕ್ರ ತಿರುಗಿದಾಗ‌
ಮೇಲಿನವರು ಕೆಳಗೆ ಕೆಳಗಿನವರು ಮೇಲಕ್ಕೆ. ಹಿಂದಿನ ಪುರಾಣ ಕಥೆಗಳಲ್ಲಿ ತಿಳಿಸಿದಂತೆ  ಅಸುರರು ದೇವಲೋಕ
ವನ್ನು ಆಕ್ರಮಿಸಿ ಮೆರೆದರು.ದೇವತೆಗಳು ಹೆದರಿ ಅಡಗಿ
ಕುಳಿತರು.ಇದರರ್ಥ  ಸಾಮಾನ್ಯಜ್ಞಾನದಿಂದಲೇ ತಿಳಿಯಬಹುದು. ಯಾವಾಗ ದೈವಶಕ್ತಿಯ ದುರ್ಭಳಕೆ
ಯಾಗುವುದೋ ಅಸುರರೆ  ಸಾಮ್ರಾಜ್ಯಸ್ಥಾಪಿಸಿಕೊಂಡು ಆಳುವರೆಂದರ್ಥ.ಈಗಲೇ ಈ ಸ್ಥಿತಿ ಮುಂದೆ ಏನು ಗತಿ? ಒಳಗಿನ ದೈವತ್ವದ ಸದ್ಬಳಕೆಯಾಗಲು ರಾಜಕೀಯ ಬೇಡ.ರಾಜಯೋಗದ ಅಗತ್ಯವಿದೆ.ವೈಭವದ  ವೈಚಾರಿಕತೆ
ಗಿಂತ ಸರಳವಾದ ವಿಚಾರವೇ ಶ್ರೇಷ್ಟ. ನಮ್ಮಲ್ಲಿ ಅಳವಡಿಸಿಕೊಂಡರೆ‌ ಉತ್ತಮ.ಪ್ರಯತ್ನ ನಮ್ಮದು ಫಲ ಭಗವಂತನದು.

ಮಾತೃಭಾಷೆ ಎಷ್ಟು ಅಗತ್ಯವಿದೆ?

_🙏    ಇಂದಿನ ವಿಶೇಷ :- 
* ಜಾಗತಿಕ ಮಾತೃ ಭಾಷಾ ದಿನ,              
ವಿಶ್ವ ಮಾತೃ ಭಾಷಾ ದಿನದಲ್ಲಿ ಅವರವರು ಹುಟ್ಟಿದ ದೇಶ,ರಾಜ್ಯ, ಮನೆಯ ಮೂಲದ ಭಾಷೆಯನ್ನು ಅಲ್ಲಿದ್ದೇ
ತಿಳಿದು,ಬೆಳೆಸಿ,ಕಲಿಸಿ ನಡೆಸುವಂತಾಗಿದ್ದರೆ ಎಷ್ಟೋ ಶಾಂತಿ
ಜ್ಞಾನ,ಸಮೃದ್ದಿ,ಸಮಾಧಾನ,ನೆಮ್ಮದಿ ಸಿಗುತ್ತಿತ್ತು. ಆದರೆ, ಹುಟ್ಟಿದ್ದು ಒಂದೆಡೆ,ಬೆಳೆದದ್ದು ಒಂದೆಡೆ, ಕಲಿತದ್ದು ಮತ್ತೊಂದು ಕಡೆ,ದುಡಿಯಲು ಹೋಗಿದ್ದೇ ಬೇರೆ ಕಡೆ ಹೀಗೇ
ನಡೆಯುತ್ತಾ ಭಾಷೆಗಳು ಬೆಳೆದವು.ಮೂಲ ಭಾಷೆ ಮರೆತು
ನಡೆದವರಿಗೆ  ಅದು ಹಿಂದುಳಿದದ್ದೇ ಕಾಣಲಿಲ್ಲ.ಎಲ್ಲೋ ದೂರವಿದ್ದು ಭಾಷೆ ಹಾಳಾಯಿತು ಎನ್ನುವ ಬದಲಾಗಿ ಹತ್ತಿರ
ಬಂದು ಬೆಳೆಸುವ ಕೆಲಸ ಮಾಡಿದ್ದರೆ  ಋಣ ಸಂದಾಯವಾಗುತ್ತದೆ ಎನಿಸುತ್ತದೆ.ಮೂರನೆಯವರಿಗೆ ಕಲಿಸೋ ಮೊದಲು ನಮ್ಮವರಿಗೆ ಕಲಿಸುವ ಕೆಲಸ ಭಾಷಾ ರಕ್ಷಕರು ಮಾಡಬಹುದು.ಶಾಲಾ ಕಾಲೇಜ್ಗಳಲ್ಲಿಯೇ  ಮರೆಯಾಗುತ್ತಿರುವಾಗ ಹೊರಗಿನ ಹೋರಾಟ,ಹಾರಾಟ,ಮಾರಾಟದ  ರಾಜಕೀಯದಿಂದ ಯಾವ ಭಾಷೆ ಧರ್ಮ ಉಳಿಸಲಾಗುವುದಿಲ್ಲ. ಒಟ್ಟಿನಲ್ಲಿ ಯಾವುದೇ ಆಗಲಿ ವ್ಯವಹಾರಕ್ಕೆ ರಾಜಕೀಯಕ್ಕೆ ಇಳಿದ ಮೇಲೆ  ಹಣ,ಅಧಿಕಾರ, ಸ್ಥಾನಮಾನವಷ್ಟೆ ಮುಖ್ಯವಾಗುತ್ತದೆ.
ಇದು ತಾತ್ಕಾಲಿಕ ವೆಂದು ಅರಿತವರಷ್ಟೆ ಮೂಲವನ್ನರಿತು ನಡೆಯುತ್ತಾರೆನ್ನಬಹುದು. ವಿಶ್ವಶಕ್ತಿಯ ಒಂದು ಮುಖ್ಯ ಶಕ್ತಿಯಾಗಿರುವ ಭಾರತಮಾತೆ,ಅವಳೊಳಗಿರುವ ಕನ್ನಡಮ್ಮ
ಇಂದು  ಪರಕೀಯ,ಪರದೇಶ,ಪರರಾಜ್ಯದವರ ಕೈಯಲ್ಲಿ  ಸಿಲುಕಿ ಆಟಕ್ಕುಂಟುಲೆಕ್ಕಕ್ಕಿಲ್ಲ ಎನ್ನುವಂತೆ    ನಾಟಕ
ವಾಡುವವರ  ಹತ್ತಿರವಿದ್ದರೂ ದೂರವಾಗಿರೋದಾಗಿದೆ.  ಅದಕ್ಕೆ ಸಹಕಾರ ನೀಡಿದವರೂ ನಾವೇ ಆಗಿರೋದು ದೊಡ್ಡ
ದುರಂತ. ನೆಲ ಜಲ ಬೇಕು,ಸರ್ಕಾರದ ಸಾಲ,ಸೌಲಭ್ಯ ಬೇಕು
ಭಾಷೆ,ಧರ್ಮ,ಸಂಸ್ಕೃತಿ ಬೇಡವೆಂದರೆ ಹೇಗಿದೆ.
ಆತ್ಮಾವಲೋಕನ ಅಗತ್ಯವಿದೆ. ಆತ್ಮಾವಲೋಕನ ದಿಂದ ಆತ್ಮನಿರ್ಭರ ಭಾರತ.

  ನುಡಿ ಮುತ್ತುಗಳು/ THOUGHTS OF THE DAY.:- 
              - - - - -
 * ನೀವು ಯಾರಿಗಾದರೂ ನೀಡಬಹುದಾದ ಅತ್ಯುತ್ತಮ ಉಡುಗೊರೆ ನಿಮ್ಮ ಅಮೂಲ್ಯವಾದ ಸಮಯ. ಏಕೆಂದರೆ ನೀವು ನಿಮ್ಮ ಸ್ವಂತ ಸಮಯವನ್ನು ನೀಡಿದಾಗ, ನೀವು ನಿಮ್ಮ ಜೀವನದ ಒಂದು ಭಾಗವನ್ನು ಅವರಿಗೆ ನೀಡುತ್ತೀರಿ. ಅದು ನಿಮಗೆ ಎಂದಿಗೂ ವಾಪಸ್ಸು ಬರುವುದಿಲ್ಲ .**

** ನೀವು ಎಲ್ಲಾ ಸಮಯದಲ್ಲೂ ಸರಿ ಎಂದು ನೀವೇ ಭಾವಿಸಿದರೆ, ನೀವು ಏನನ್ನೂ ಜೀವನದಲ್ಲಿ ಕಲಿಯುವುದಿಲ್ಲ.*

**ಸುಂದರವಾದ ಮುಖವನ್ನ ಜನರು ಕ್ಷಣಿಕ ಕಾಲ ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ. ಆದರೆ *ಸುಂದರವಾದ ನಡವಳಿಕೆಯನ್ನು*  ಜೀವನ ಪರ್ಯಂತ ಕಾಪಾಡಿಕೊಂಡಿರುತ್ತಾರೆ.
ಏನು ಬೇಕೆಂಬುದು ನೀವೇ ಆಯ್ಕೆ ಮಾಡಿಕೊಳ್ಳಿ. ನಮ್ಮ ಜೀವನದಲ್ಲಿ ನಾವು ತೂರಿಸುವ ಅಕ್ಕರೆ ಪ್ರೀತಿ ವಾತ್ಸಲ್ಯ ಮಮತೆ ಕರುಣೆ ನಮ್ಮ  ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ.**

 *ನಿಮ್ಮ ಸಮಸ್ಯೆಗಳನ್ನು ಜನರಿಗೆ ಎಂದಿಗೂ ಹೇಳಬೇಡಿ. ಏಕೆಂದರೆ ಬಹುಪಾಲು ಜನರು ಸಮಸ್ಯೆಬಗ್ಗೆ ಸುಮ್ಮನೆ ತಲೆಕೆಡಿಸಿಕೊಳ್ಳುವುದಿಲ್ಲ ಮತ್ತು  ಇನ್ನು ಕೆಲವರು ನಿಮಗೆ ಸಮಸ್ಯೆಗಳಿವೆ ಎಂದು ಸಂತೋಷಪಡುತ್ತಾರೆ.**

** ಗಳಿಸಿದ ಧನ ಚಿರವಲ್ಲ, ಪಡೆದ ಅಧಿಕಾರ ಸ್ಥಿರವಲ್ಲ, ಏರಿದ ಅಂತಸ್ತು ಶಾಶ್ವತವಲ್ಲ, ಸಂತಸ ಸಂಭ್ರಮಗಳೂ, 
ಸಕಲವೂ ನಸ್ವರ.
                      ಮಾಡಿದ ಸತ್ಕಾರ್ಯ,
ಮೆರೆದ ಔದಾರ್ಯ, ಆನಂದಿಸಿ, ಅನುಭವಿಸಿದ ನೆನಪುಗಳ ಮಾಧುರ್ಯ ಎಂದಿಗೂ ಅಜರಾಮರ.*

*** ಸ್ವಯಂ ನಿಯಂತ್ರಣವೇ ಶಕ್ತಿ. ಸರಿಯಾದ ಆಲೋಚನೆಯೇ ಪಾಂಡಿತ್ಯ, ಶಾಂತತೆಯು ಶಕ್ತಿ.**
 
 *** The Future belongs to those Who Believe in the BEAUTY of their DREAMS.**

*** LIFE is So much Simpler When you Stop Explaining Yourself to PEOPLE and Just do What Works for YOU.**

* Push Yourself because no one else is going to do it for you. It's your life and yours alone. Others may walk it with you but no one can walk it for you.*

*Life has no remote, get up and change it yourself.

**The crux of life should be :
Learn what you don’t know.
Polish what you know.
Debate what you believe in.
Share all back to society which made you what you are today.**

**Expose Yourself to aloneness. When a Person is Left alone, he Starts thinking of Higher Reality - about Death, Life, soul, God and the Mystery of all.**

  - Swami Chinmayananda Saraswati- 

* Pure Heart is the Greatest Temple in the World. Do not Believe the Smiling face, but Believe the Smiling Heart, they are very rare in this World.**

* Life is really Simple but Feelings and Thinking makes it Complicated.**

 * Social inter- dependence is not an Accident, but the Law of Our Nature.**
 - Mahadev Govind Ranade-
————————————————* *ನಮ್ಮ ಕನ್ನಡ ಭಾಷೆ , ನಮ್ಮೆಲ್ಲರ ಹೆಮ್ಮೆಯ ಭಾಷೆ. ಕನ್ನಡದ ಸುಗಂಧವನ್ನು ಎಲ್ಲೆಡೆ ಹರಡಿ. ಕನ್ನಡ ಬೆಳೆಸಿ, ಉಳಿಸಿ ಮತ್ತು ಎಲ್ಲೆಡೆ ಕನ್ನಡದ ವಾತಾವರಣವನ್ನು ಉಂಟುಮಾಡಿ. ಸಿರಿಗನ್ನಡಂ ಗೆಲ್ಗೆ ಮತ್ತು  ಸಿರಿಗನ್ನಡಂ ಬಾಳ್ಗೆ. 🙏 
 ——————————————

Monday, February 20, 2023

ಸರ್ವಜ್ಞರು ಯಾರು?

ಇಂದು ಸರ್ವಜ್ಞ ಜಯಂತಿ ಯಂತೆ ಅಂದರೆ ಸರ್ವಜ್ಞ ಒಬ್ಬ ವ್ಯಕ್ತಿ ಎನ್ನಬಹುದಾದರೆ ಎಲ್ಲವನ್ನೂ ಅರಿತವರು ಸರ್ವಜ್ಞ ರಾಗುವರು. ಇಲ್ಲಿ ಎಲ್ಲಾ ತಿಳಿದವರಿಲ್ಲ ಎಲ್ಲರಿಗೂ ತಿಳಿಸುವವರಿದ್ದಾರೆ ತಿಳಿಸುವವರ ತಿಳುವಳಿಕೆಯು ಎಲ್ಲರಿಗೂ ತಿಳಿಯುವಂತಾದರೆ ಅವರು ಸರ್ವಜ್ಞರು.  ಹಾಗಂತ ಇಡೀ ಬ್ರಹ್ಮಾಂಡ ಶಕ್ತಿ ಯನ್ನು ಒಬ್ಬ ವ್ಯಕ್ತಿ ತಿಳಿಯಲಾಗದು.ಒಬ್ಬೊಬ್ಬರಲ್ಲಿಯೂ ಒಂದೊಂದು ಶಕ್ತಿ ಇರೋವಾಗಾ ಒಂದು ಶಕ್ತಿಯನ್ನು  ಹೇಗೆ ಕಾಣಬಹುದೆಂದು ಒಬ್ಬ ವ್ಯಕ್ತಿಯು ಅವರ  ಅನುಭವದಿಂದ  ತಿಳಿದು ತಿಳಿಸಬಹುದು. ತತ್ವದ ಮೂಲಕ ಕಾಣೋದನ್ನು ತಂತ್ರದಿಂದ ಕಂಡೆನೆಂದರೆ  ಸತ್ಯವಿದ್ದರೂ ಅದು ತತ್ವವಾಗದು.ತತ್ವ ಒಂದೇ ಹಾಗಾಗಿ ಹಲವಾರು ತಂತ್ರಗಳ ಮೂಲಕ ಮಾನವ ದೇವರನ್ನು ಕಾಣುವ ಪ್ರಯೋಗ ಮಾಡಿರೋದಾಗಿದೆ. ಈ ಪ್ರಯೋಗದಿಂದ  ತನ್ನ ಹಾಗು ಉಳಿದವರ ಆತ್ಮೋನ್ನತಿಯಾದರೆ ಅಧ್ಯಾತ್ಮ ವೆನ್ನಬಹುದು.ಹಾಗೆಯೇ ತನ್ನ ಜೀವನದ ಜೊತೆಗೆ ಸಮಾಜದ ಜೀವನವೂ ಉನ್ನತಮಟ್ಟಕ್ಕೆ  ಏರಿದರೆ ಸಾಧನೆ ಎನ್ನುವರು. ಈ ಸಾಧನೆಯು  ಆತ್ಮಸಾಕ್ಷಿ ಯ  ಮೂಲದವರೆಗೆ  ಹೋದರೆ  ಅವನಿಗೆ ಸರ್ವಜ್ಞ ಕಾಣಬಹುದು.ಅಂದರೆ ಅಧ್ಯಾತ್ಮದ ಮೂಲ  ಕಣ್ಣಿಗೆ ಕಾಣದು, ಅನುಭವಕ್ಕೆ  ಬರೋವಾಗ ಒಂದೆ ರೀತಿಯಲ್ಲಿರದ ಕಾರಣ  ತಂತ್ರ ಬೆಳೆದು ಯಂತ್ರ ಮಾನವನ ಸೃಷ್ಟಿ ಯಾಗಿದೆನ್ನಬಹುದು.
ಭಗವಂತನೊಳಗಿರುವ ಎಲ್ಲಾ ಒಂದೇ ಶಕ್ತಿಯ ಪ್ರತಿಬಿಂಬ ಎಂದ ಮೇಲೆ ಭಾರತೀಯರೆಲ್ಲರೂ ಭಾರತಮಾತೆಯ ಸಣ್ಣ ಶಕ್ತಿ ಪಡೆದರೂ  ಅದನ್ನು ಸರಿಯಾಗಿ ಬಳಸದೆ  ನಾನೇ ಭಾರತ ಎಂದರೆ  ಸರಿಯಲ್ಲ. ಹಾಗೆ ಸರ್ವಜ್ಞ ನ ತತ್ವಪದಗಳ ಹಿಂದಿನ  ಅಧ್ಯಾತ್ಮ ಸತ್ಯ ಅರ್ಥ ವಾಗಲು ನಮ್ಮೊಳಗೇ ತತ್ವದರ್ಶನ ಆಗಬೇಕು. ಆಗಲೇ ಹೊರಗಿರುವ ತತ್ವದ ಜೊತೆಗೆ ತಂತ್ರವೂ ಸ್ಪಷ್ಟವಾಗಿ ಕಾಣುತ್ತದೆ. ನಮ್ಮ ಶುದ್ದಿಗೆ ಬೇಕಾಗಿರೋದು ತತ್ವ.ಜೀವನಕ್ಕೆ ಬೇಕಾಗಿರೋದು  ತಂತ್ರಜ್ಞಾನದ ಸದ್ಬಳಕೆ. ಯಾವಾಗ ತತ್ವ ಬಿಟ್ಟು ತಂತ್ರದ ದುರ್ಭಳಕೆ ಆಯಿತೋ ಅಧರ್ಮ ಬೆಳೆಯಿತು.
ದೇಶದ ಪ್ರಶ್ನೆ ಬಂದಾಗ ದೇಶ ಒಂದೇ ಆದರೂ ಪ್ರಜೆಗಳಲ್ಲಿ ಒಗ್ಗಟ್ಟು ಇಲ್ಲ. ಇದು ಯೋಗದಿಂದ ಬೆಳೆದರೆ ಭಕ್ತಿಯಾಗುತ್ತದೆ
ದೇವನೊಬ್ಬನಾದರೂ ದೇವರನ್ನು ಬೇರೆ ಬೇರೆ ಕಾಣೋದು ಕಡಿಮೆಯಾಗಿಲ್ಲ. ಶಿವ ಬೇರೆ ರುದ್ರ ಬೇರೆ ಎನ್ನುವ ವಾದವಿವಾದ ಶಿವರಾತ್ರಿಯಲ್ಲಿ  ಕೆಲವರು ಮಾಡುತ್ತಿದ್ದರು.
ಅದ್ವೈತ ದೊಳಗೆ ದ್ವೈತ ವಿದ್ದರೂ ಬೇರೆ ಬೇರೆ ಹೇಗೆ ಆಗಿದೆಯೋ ಹಾಗೆ ರುದ್ರನೊಳಗಿರುವ ಶಿವಕಾಣೋದಿಲ್ಲ. ಶಿವನೊಳಗಿದ್ದ ರುದ್ರ ಕಂಡಿಲ್ಲ. ಕಾರಣ ನಾನಿರುವಾಗ ದೇವರು ಕಾಣೋದಿಲ್ಲ  ದೇವರು ಕಂಡಾಗ ನಾನಿರೋದಿಲ್ಲ. ಲಯದಲ್ಲಿ ರುದ್ರನ  ಕಾಣೋದು ಶಿವನಲ್ಲಿ ಶಾಂತಿ ಕಾಣೋದು ಒಂದೇ  ಸಮನಾದರೂ  ಒಂದೇ ಸಲವಾಗದು.
ಶಾಂತವಾಗಿರುವಾಗ ಸಿಟ್ಟು ಬರೋದಿಲ್ಲ.ಸಿಟ್ಟು ಬಂದಾಗ ಶಾಂತಿ ಇರೋದಿಲ್ಲವಲ್ಲ. 
ಶ್ರೀ ರಾಮನೊಳಗಿರುವ ವಿಷ್ಣು ವಿಷ್ಣುವಿನೊಳಗಿದ್ದ ರಾಮತತ್ವ ಕಾಣದೆ  ಸಾಕಷ್ಟು ರಾಮರು,ಕೃಷ್ಣರ ದೇವಾಲಯ ಹಲವಾರು ಹೆಸರಿನಿಂದ ಪೂಜಿಸಲಾಗಿದೆ.ಅವರವರ ಜ್ಞಾನಕ್ಕೆ ಭಕ್ತಿಗೆ, ಶಕ್ತಿಗನುಸಾರವಾಗಿ  ದೈವತತ್ವ ಕಂಡಿರುವುದೇ ಇದಕ್ಕೆ ಕಾರಣ ಹಾಗಂತ ಯಾರ ತಪ್ಪು ಯಾರ ಸರಿ ಎನ್ನುವ ವಾದಕ್ಕೆ
ಕುಳಿತರೆ ನಾನ್ಯಾರು? ನಾವ್ಯಾರು? ಎನ್ನುವ  ಸತ್ಯ ತಿಳಿಯದೆ ಜೀವ ಹೋಗುತ್ತದೆ. ಬ್ರಹನ ಸೃಷ್ಟಿ ಸರಸ್ವತಿಯ ಜ್ಞಾನ, ವಿಷ್ಣುವಿನ ಕಾರ್ಯವೂ ಲಕ್ಮಿ ಕೃಪೆಯಿಂದ, ಕೊನೆಯಲ್ಲಿ ಸಿಗೋದು ಲಯದ ಅಂತ್ಯ  ಜೀವನ್ಮುಕ್ತಿ, 
ಹಾಗಾದರೆ ಶಿವನಿಂದ  ಜೀವನದಲ್ಲಿ ಆನಂದ,ಸಂತೋಷ,
ಶಾಂತಿ,ತೃಪ್ತಿ, ಮುಕ್ತಿ  ಸಿಗೋದು  ಸರಳ ಸುಲಭ ಎನ್ನುವ  ಕರ್ಮ ಯೋಗ,ಭಕ್ತಿಯೋಗ,ರಾಜಯೋಗ ಜ್ಞಾನಯೋಗ  ಎಲ್ಲದರಲ್ಲೂ ಅಡಗಿರುವ ಯೋಗವು ದೈಹಿಕ ಕ್ರಿಯೆಯ ಜೊತೆಗೆ ಮಾನಸಿಕ ಕ್ರಿಯೆಯೂ ಅಗತ್ಯವೆಂದಾಯಿತು.
ಶಿವನೆ ಬೇರೆ ವಿಷ್ಣುವೇ ಬೇರೆ ಎನ್ನುವವರೊಮ್ಮೆ ನಾನೇ ಬೇರೆ ದೇಶವೇ ಬೇರೆ,ಭೂಮಿಯೇ ಬೇರೆ,ದೇವರೆ ಬೇರೆ,ಧರ್ಮ ಬೇರೆ  ರಾಜಕೀಯ ಬೇರೆ ಆಗಲು  ರುದ್ರ ಕಾರಣನೆ ಶಿವನೆ?
ಮಾನವನ ಮನಸ್ಸು ಕಾರಣ.ಮನಸ್ಸೇ ಎಲ್ಲದರ ಮೂಲ.
ಇಬ್ಬರೂ ಒಂದೇ   ಎನ್ನುವ ತತ್ವ  ತಂತ್ರಕ್ಕೆ ಇಳಿದರೆ ಅತಂತ್ರಜ್ಞಾನ. ತಾಳಿದವನು ಬಾಳಿಯಾನು ಎಂದು  ತಾಳ್ಮೆ ಯಿಲ್ಲದ ಬಾಳು  ಗೋಳಾದಾಗ ರುದ್ರನೇ ಕಾಣೋದು.
ಹಾಗೆಯೇ ಅತಿಯಾದರೆ ಗತಿಗೇಡು ಎನ್ನುವರು.
ಪೈಪೋಟಿ, ಹಗೆತನ,ಬಡತನ,ಸಾಲ, ಅತಿಯಾದ ಸಿರಿತನವೇ ಲಯಕ್ಕೆ   ಕಾರಣ. ಸಮಾನತೆಯಿದ್ದರೆ ಶಾಂತಿ.
ಅಸಮಾನತೆಯಿದ್ದರೆ ಕ್ರಾಂತಿ.  ಸಾವನ್ನು ಪ್ರೀತಿಸುವ  ಜ್ಞಾನಕ್ಕೂ ದ್ವೇಷಿಸುವ ಅಜ್ಞಾನಕ್ಕೂ ನಡುವಿರುವ  ಸಾಮಾನ್ಯಜ್ಞಾನ  ಮುಖ್ಯ.
ಶಾಂತಿಯಿಂದ ಅಧ್ಯಾತ್ಮ ಸಾಧಕರಾದವರಿದ್ದಾರೆ. ಅವರು ಸರ್ವಜ್ಞ ಪೀಠ ಏರಿದವರು. ಜ್ಞಾನಪೀಠ ಸಿಗಬಹುದು. ಇದನ್ನು  ಮಾನವರು ಕೊಡುತ್ತಾರೆ  ಸರ್ವಜ್ಞ ಪೀಠ ಕಷ್ಟವಿದೆ. ಇದನ್ನು ಮಹಾತ್ಮರು ಗಳಿಸಿಕೊಳ್ಳಬೇಕಿದೆ. ದೈವತ್ವವೇ ಇದರ ಮೂಲಾಧಾರ. ಬ್ರಹ್ಮಾಂಡದೊಳಗಿರಬಹುದು ಬ್ರಹ್ಮನೊಳಗೆ ಹೊಕ್ಕಿ ಜ್ಞಾನ ಪಡೆಯುವುದು ಕಷ್ಟ ಎಂದಂತೆ.

Thursday, February 16, 2023

ಅದ್ವೈತದೊಳಗಿರುವ ದ್ವೈತ ಒಂದೆ ಎರಡೆ?

ಅದ್ವೈತ ದೊಳಗೇ ದ್ವೈತ ಕಣ್ಣಿಗೆ ಕಾಣುವಾಗ ಬೇರೆ ಬೇರೆ ಎನ್ನುವ ವಾದ ವಿವಾದಕ್ಕೆ ಅರ್ಥ ವಿದೆಯೆ?

ಅದ್ವೈತ ದರ್ಶನ ವಾಗಲು ನಾನು ಹೋಗಬೇಕು. ನಾನುಹೋದರೆ ಆತ್ಮದರ್ಶನ.ಅಹಂಕಾರ ಸ್ವಾರ್ಥದ ರಾಜಕೀಯವಿರುವ ಕಡೆ  ತತ್ವವಿರೋದಿಲ್ಲ ತಂತ್ರವೇ ಇರುತ್ತದೆ. ತಂತ್ರದಲ್ಲಿ ಪೂರ್ಣ ಸತ್ಯವಿರದು. ಪೂರ್ಣ ಸತ್ಯವಿಲ್ಲದೆ ಸರ್ವಜ್ಞರಾಗದು. ಭಗವಂತನೊಬ್ಬನೆ ಸರ್ವಜ್ಞ ಎಂದಮೇಲೆ ಅವನೊಳಗಿರುವ‌ ಜೀವಾತ್ಮರು ಅಲ್ಪಜ್ಞರಷ್ಟೆ.
ಅಲ್ಪ ಸ್ವಲ್ಪ ಸಿಕ್ಕಿದ್ದನ್ನು ಸದ್ಬಳಕೆ ಮಾಡಿಕೊಂಡರೆ  ಮುಕ್ತಿ.
ಇದಕ್ಕೆ ಬೇಕಿದೆ  ಮಾನವನಿಗೆ ಸಾಮಾನ್ಯಜ್ಞಾನ. 
ಸಾಮಾನ್ಯಜ್ಞಾನದಿಂದ ವಿಶೇಷ ಜ್ಞಾನಕ್ಕೆ  ನಿಧಾನವಾಗಿ ಹೋದವರಿಗಷ್ಟೆ ಈ ತತ್ವದರ್ಶನ ಆಗಿರೋದು.ಹಾಗೆ ಸಾಮಾನ್ಯರ ಮಧ್ಯೆ ಇದ್ದು ಸತ್ಯ ತಿಳಿದವರಿಗೆ ಪರಮಾತ್ಮನದರ್ಶನವಾಗಿದೆ. ಸಾಮಾನ್ಯರಿಂದ ದೂರವಿದ್ದು ವಿಶೇಷಜ್ಞಾನ  ಪಡೆದವರ  ಅನುಭವವನ್ನು ಸಾಮಾನ್ಯರು ಅರ್ಥ ಮಾಡಿಕೊಳ್ಳಲು ಕಷ್ಟ.ಹಾಗೆಯೇ ಮೊದಲೇ ವಿಶೇಷ ಜ್ಞಾನವನ್ನು  ತಿಳಿಯುವ ಅವಕಾಶ,ಅಧಿಕಾರ ಪಡೆದವರಿಗೆ ಸಾಮಾನ್ಯರೊಳಗಿದ್ದ ಪರಮಾತ್ಮ ಕಾಣಿಸಲಿಲ್ಲ. ಸಾಮಾನ್ಯಜ್ಞಾನವಿಲ್ಲದ ವಿಶೇಷ ಜ್ಞಾನ ಕುಂಟುತ್ತಿದೆ
ವಿಶೇಷಜ್ಞಾನದೆಡೆಗೆ ಹೋಗಲಾಗದ ಸಾಮಾನ್ಯ ಜ್ಞಾನ ಕುರುಡು ಜಗತ್ತಿನಲ್ಲಿದೆ. ಒಟ್ಟಿನಲ್ಲಿ ಎರಡೂ ಒಂದಾಗದಿದ್ದರೆ ಅದ್ವೈತ ವಲ್ಲ. ಒಂದನ್ನು ಎರಡಾಗಿಸೋದರಿಂದ ತತ್ವವಾಗಲ್ಲ. ಒಗ್ಗಟ್ಟನ್ನು ಬೆಳೆಸುವುದು ಸುಲಭವಲ್ಲ.ಬಿಕ್ಕಟ್ಟನ್ನು ಬಗೆಹರಿಸುವುದೂ ಸುಲಭವಲ್ಲ.
ಸುಲಭವಾಗಿರೋದು  ಧರ್ಮರಕ್ಷಣೆ ಮಾಡೋದಿಲ್ಲ.
ಧರ್ಮ ರಕ್ಷಣೆ ಮಾಡೋದು ಸುಲಭವಾಗಿರೋದಿಲ್ಲ.
ಕಣ್ಣಿಗೆ ಕಾಣೋದೆಲ್ಲಾ ಸತ್ಯವಲ್ಲ. ಸತ್ಯ ಕಣ್ಣಿಗೆ ಕಾಣೋದಿಲ್ಲ.
ಹಣದಿಂದ ಜ್ಞಾನ ಬೆಳೆದಿಲ್ಲ. ಜ್ಞಾನದಿಂದ ಹಣಸಂಪಾದನೆ ಮಾಡಬಹುದಲ್ಲ.
ಬ್ರಾಹ್ಮಣ,ಕ್ಷತ್ರಿಯ, ವೈಶ್ಯ,ಶೂದ್ರರಲ್ಲಿ ಮೇಲುಕೀಳಿಲ್ಲ.
ಬ್ರಾಹ್ಮಣನ ತಲೆಯ ಜ್ಞಾನದಿಂದ  ಹೃದಯವಂತರಾಗಿ ಹೊಟ್ಟೆಯ ಹಸಿವನ್ನು ತೀರಿಸಿಕೊಂಡು  ಸೇವಕರಾಗಿ ನಡೆಯುವುದೇ  ವರ್ಣದ ಉದ್ದೇಶವಾಗಿತ್ತು.
ಜ್ಞಾನವನ್ನು ದುರ್ಭಳಕೆ ಮಾಡಿಕೊಂಡು  ದೈಹಿಕ ಶ್ರಮ ಕ್ಕೆ ಬೆಲೆಕೊಡದೆ  ಅಡ್ಡದಾರಿಗೆಳೆದು ಆಳಿದ ರಾಜಕೀಯವೇ ಎಲ್ಲಾ ಸಮಸ್ಯೆಗೆ ಕಾರಣವಾಗಿದೆ.
ಬಡಬ್ರಾಹ್ಮಣ,ಬಡಶಿಕ್ಷಕ,ಬಡ,ಸೈನಿಕ,ಬಡ ರೈತ ಎನ್ನುವುದರಲ್ಲಿ ಅಡಗಿತ್ತು ಬಡತನದ ಅಜ್ಞಾನ. ಈಗಲೂ ಇದೇ  ಜನರಲ್ಲಿ ಹಾಸುಹೊಕ್ಕಾಗಿದೆ. ಮಲಗಿದವರನ್ನು ಎಚ್ಚರಿಸಬಹುದು.ಮಲಗಿದವರಂತೆ ನಾಟಕವಾಡುತ್ತಿ
ರುವವರನ್ನು ಎಬ್ಬಿಸಲಾಗದು. ಸಾಕಷ್ಟು ಜನ ನಾಟಕ 
ನೋಡಿಕೊಂಡು  ಮನರಂಜನೆಯಲ್ಲಿದ್ದು  ಆತ್ಮವಂಚನೆಯ ಜೀವನ ನಡೆಸಿದ್ದಾರೆ. ಇದನ್ನು  ಸರಿಪಡಿಸಲು  ಭಗವಂತನಿಂದಲೂ ಕಷ್ಟವಾಗಿ ಭೂ ತಾಯಿಯೇ  ತನ್ನ ಸ್ವಚ್ಚ ತೆಗೆ ಮುಂದಾಗಿ ಪ್ರಕೃತಿ ವಿಕೋಪ,ಕೊರೊನದಂತಹ ಮಹಾಮಾರಿ,ಅಪಘಾತ,ಯುದ್ದ,ಇನ್ನಿತರ ರಾಜಕೀಯ
 ಹೋರಾಟದ ಮೂಲಕ  ಜೀವ ಹೋಗುತ್ತಿದೆ. ಅಜ್ಞಾನದಲ್ಲಿ ಹೋದ ಜೀವ ತಿರುಗಿ ಜನ್ಮ ಪಡೆದಾಗ ಜ್ಞಾನದ ಶಿಕ್ಷಣ ನೀಡಿ ಬೆಳೆಸಿದರೆ  ಅದೇ ಧರ್ಮ. ಎಲ್ಲದ್ದಕ್ಕೂ ಕಾರಣವೇ ಶಿಕ್ಷಣ.
ಆಗೋದೆಲ್ಲಾ ಒಳ್ಳೆಯದಕ್ಕೆ, ಆಗುತ್ತಿರುವುದರ ಹಿಂದಿನ ಶಕ್ತಿ  ಆ ಭಗವಂತನೆ ಆದಾಗ ಯಾರನ್ನು ವಿರೋಧಿಸಬೇಕು?
ಸತ್ಯಕ್ಕೆ ಸಾವಿಲ್ಲವೆಂದಾಗ ನಮ್ಮೊಳಗಿನ ಸತ್ಯಕ್ಕೆ ನಾವೇ ಬೆಲೆ ಕೊಡದೆ  ಸಾಯಿಸಿದರೆ  ಸತ್ತಿದ್ದು ಸತ್ಯವಲ್ಲ  ನಮ್ಮ ಜ್ಞಾನವಷ್ಟೆ.
ಅದ್ವೈತ ಧ್ವೈತ ವಿಶಿಷ್ಟಾದ್ವೈತ ವೆಲ್ಲವೂ ಆ ಪರಮಾತ್ಮನ ತತ್ವ. ಇದರಲ್ಲಿ ಬೇರೆ ಕಾಣೋದು  ಮಾನವನ ತಂತ್ರ. ಈ ತಂತ್ರದಿಂದ ಸ್ವತಂತ್ರ ಜ್ಞಾನ ಪಡೆಯಲಾಗದು. ಎಂದಾಗ ಇಲ್ಲಿ ಸ್ವತಂತ್ರ ವಾಗಿದ್ದ ಸತ್ಯ ಒಂದೇ ಅದೇ ಆತ್ಮಸಾಕ್ಷಿ.
ಇದು ಸಾಮಾನ್ಯರಲ್ಲಿ ಹೆಚ್ಚಾಗಿತ್ತು.ಆದರೆ  ವಿಶೇಷ ಜ್ಞಾನಿಗಳ ಹಿಂದೆ ನಡೆಯುತ್ತಾ ಕುಸಿದಿದೆ.ಅದರಲ್ಲೂ ಮಕ್ಕಳಲ್ಲಿ ಶುದ್ದವಾಗಿತ್ತು.ಪೋಷಕರು ಅದನ್ನು ಬೆಳೆಸದೆ ಅಸತ್ಯದೆಡೆಗೆ ನಡೆಸುತ್ತಾ ಮಕ್ಕಳು  ಭೌತಿಕದ ವಿಶೇಷಜ್ಞಾನಿಗಳಾದರೂ ಅಧ್ಯಾತ್ಮದ ವಿಶೇಷಜ್ಞಾನದಿಂದ ದೂರವಾದರು. ಒಟ್ಟಿನಲ್ಲಿ ಒಂದರೊಳಗೆ ಇನ್ನೊಂದು ಅಡಗಿದೆ.ಅದ್ವೈತ ದೊಳಗೆ ದ್ವೈತ, ವಿಜ್ಞಾನದೊಳಗೆ ಜ್ಞಾನ,  ಆದರೆ ವಿದೇಶದೊಳಗೆ ದೇಶ ಅಡಗಿ ಕುಳಿತರೆ  ಯಾರಿಗೆ ಕಷ್ಟ ನಷ್ಟ?  ಹಾಗೆಯೇ ಅಧರ್ಮದೊಳಗೆ ಧರ್ಮ ಸಿಲುಕಿದರೆ?  
ಅಸತ್ಯದೊಳಗಿನ  ಸತ್ಯ ಕಾಣಬಹುದೆ?  ಸತ್ಯದ ಅರಿವಾಗಲು ಆಂತರಿಕ ಶುದ್ದಿಯ ನಂತರ ಭೌತಿಕ ಶುದ್ದಿಯಾಗಬೇಕು.
ಆಂತರಿಕ ಶುದ್ದಿಗೆ ಸಂಸ್ಕಾರಯುತ ಶಿಕ್ಷಣವಿರಬೇಕು. ನಂತರ ಭೌತಿಕ ಶುದ್ದಿಯಾಗುತ್ತದೆ. ಸಂಸ್ಕಾರವೆಂದರೆ ಅನಾವಶ್ಯಕ ವಿಷಯವನ್ನು  ಬಿಟ್ಟು ವಾಸ್ತವತೆಯನ್ನರಿತು ರಾಜಕೀಯ
ವಿಲ್ಲದ  ಶುದ್ದವಾದ ಸದ್ವಿಚಾರವನ್ನರಿತು ಸ್ವತಂತ್ರ ವಾಗಿ  ನಡೆಯೋದಾಗಿತ್ತು. ಈಗೆಲ್ಲಿದೆ?ಯಾವ ಕ್ಷೇತ್ರ ಶುದ್ದವಾಗಿದೆ? ಯಾವ ರೀತಿಯಲ್ಲಿ ಶುದ್ದ ಮಾಡಬಹುದು?
ಸರ್ಕಾರದ ಹಣ,ಶ್ರೀಮಂತ ರ ಹಣ, ದೇವರ ಹಣ,ದೇಶದ ಋಣ. ಈ ದೇಶದ ಋಣ ತೀರಿಸಲು ತತ್ವಜ್ಞಾನ ಅಗತ್ಯ. ತಂತ್ರವು ತಾತ್ಕಾಲಿಕ ಪರಿಹಾರ ಮಾರ್ಗ ತಿಳಿಸಿದರೆ ತತ್ವ ಶಾಶ್ವತ ಪರಿಹಾರದೆಡೆಗೆ ನಡೆಸುತ್ತದೆ. ಭೂಮಿಯಲ್ಲದೆ ಮನುಕುಲವಿಲ್ಲ.ಮಾನವನಿಲ್ಲದೆ ಧರ್ಮ ವಿಲ್ಲ.
ಧರ್ಮವಿಲ್ಲದೆ  ಶಾಂತಿಯಿಲ್ಲ. ದೈವತ್ವವಿಲ್ಲದೆ  ಮಹಾತ್ಮರಾಗೋದಿಲ್ಲ.ಮಹಾತ್ಮರು ದೇವರನ್ನು ಕಂಡಿದ್ದಾರೆ
ಆದರೆ ಮಹಾತ್ಮರಿಂದ ದೇವರಲ್ಲ. 
ದೇಶದ ವಿಚಾರದಲ್ಲಿ ವಿದೇಶದಿಂದ ದೇಶ ಬೆಳೆಸೋದು ಅಜ್ಞಾನ. ಅದರಲ್ಲೂ ಭಾರತದಂತಹ ಮಹಾದೇಶ ಯೋಗಿಗಳ ದೇಶವನ್ನೇ ಭೋಗದೆಡೆಗೆ ನಡೆಸುತ್ತಾ ಹೋದರೆ ಆತ್ಮನಿರ್ಭರವಾಗದು.  ಹಣವಿಲ್ಲದೆ ಜೀವನವಿಲ್ಲ. ಸತ್ಯಜ್ಞಾನವಿಲ್ಲದ ಮಾನವನ ಬದುಕೇ ಬದುಕಲ್ಲ ಎಂದಿದ್ದಾರೆ ಸ್ವಾಮಿ ವಿವೇಕಾನಂದರು.
ಸಾಲ ತೀರದೆ ಮುಕ್ತಿಯಿಲ್ಲ. ಸಾಲವೇ ಶೂಲವಾಗಬಾರದಲ್ಲ.
ಅಲ್ಲ ಅಲ್ಲ ಎನ್ನುವವರೆಲ್ಲರೂ ಅಲ್ಲನ ಕಂಡಿಲ್ಲ. ಹೀಗಾಗಿ  ದೇವರೆ ಇಲ್ಲ ನಾನೇ ಎಲ್ಲಾ ಎನ್ನುವವರೂ ಒಂದು ರೀತಿಯ ಅಲ್ಲನ ಭಕ್ತರೆ. ದೇವರಿದ್ದಾನೆ ನಾನೇ ದೇವರು ಎನ್ನುವವರೂ ಅಲ್ಲಾನ ಭಕ್ತರಾಗಿಲ್ಲ. ಹೀಗೇ ಎಲ್ಲದ್ದಕ್ಕೂ ಅಲ್ಲ ಎನ್ನುವ ಬದಲು  ನಾನೇನೂ ಅಲ್ಲ ಎನ್ನುವುದೇ ಉತ್ತಮ. ಪ್ರಯತ್ನ ನಮ್ಮದು ಫಲ ಭಗವಂತನದು. ಯಾರನ್ನೂ ಯಾರೂ ಆಳಲು  ನಾವೇನು ಆಳಲ್ಲ. ಆಳಾದವರಲ್ಲಿಯೂ ಪರಮಾತ್ಮನಿದ್ದಾನಲ್ಲ. ಅಂತವರಿಗೆ‌ ಉತ್ತಮ ಶಿಕ್ಷಣ ನೀಡಿ ಸ್ವತಂತ್ರ ಜೀವನ ನಡೆಸಲು ಬಿಡಬಹುದಲ್ಲ. ಎಲ್ಲಾ ಹೇಳಬಹುದಷ್ಟೆ ಆದರೆ ಸತ್ಯದೆಡೆಗೆ ಧರ್ಮದೆಡೆಗೆ ತಿರುಗಿ ಬರೋದಕ್ಕೂ ಕರ್ಮಫಲ ಬಿಡೋದಿಲ್ಲ. ಕರ್ಮಕ್ಕೆ ತಕ್ಕಂತೆ ಫಲ. ದೇವಾನುದೇವತೆಗಳಿಗೂ ಇದು ತಪ್ಪಿದ್ದಲ್ಲ.  ಸೃಷ್ಟಿ ಮಾಡಿಕೊಂಡ ಅರ್ಧ ಸತ್ಯದಿಂದ ಮುಂದೆ ಪೂರ್ಣ ಸತ್ಯವಿದೆ
ಮಧ್ಯವರ್ತಿಗಳಿಗೆ  ಮಣೆಹಾಕಿದಷ್ಟೂ ಅತಂತ್ರಸ್ಥಿತಿಗೆ ಜೀವನ ತಲುಪುವುದೆನ್ನುವ ಕಾರಣಕ್ಕಾಗಿ ಹಿಂದಿನ  ಜ್ಞಾನಿಗಳು ಸ್ವತಂತ್ರ ವಾಗಿ ಮುಂದೆ ನಡೆದು ಮುಕ್ತರಾದರು. ಅವರಿಗೂ ನಮಗೂ ವ್ಯತ್ಯಾಸವಿಷ್ಟೆ ಅವರು ತತ್ವ ತಿಳಿದು ನಡೆದರು.
ನಾವು ತಂತ್ರದಲ್ಲಿದ್ದೇವೆ. ಇದಕ್ಕೆ ಸ್ವತಂತ್ರ ಭಾರತವು ತಂತ್ರದ ವಶದಲ್ಲಿದೆ.ತತ್ವದಿಂದ ತಂತ್ರವನ್ನು ಅರ್ಥ ಮಾಡಿಕೊಳ್ಳಲು  ಸಾಧ್ಯವಿದೆ. ತಂತ್ರಕ್ಕೆ ತತ್ವ ಅರ್ಥ ವಾಗದು.
ನಾಟಕದಲ್ಲಿ  ತತ್ವವಿದ್ದರೆ ಉತ್ತಮ ಬದಲಾವಣೆ ತಂತ್ರವೇ ಮೆರೆದರೆ  ಕೇವಲ ಆತ್ಮವಂಚನೆಯ ಮನರಂಜನೆ.

Tuesday, February 14, 2023

ಪರಮಾತ್ಮನ ಇಚ್ಚೆಯಿಲ್ಲದೆ ಏನೂ ನಡೆಯದು

ಕೆಲವರು ಹೇಳುತ್ತಾರೆ ಎಲ್ಲಾ ಪರಮಾತ್ಮನ ಇಚ್ಚೆಯಿಲ್ಲದೆ ಏನೂ ನಡೆಯದು ಯಾರಿಗೂ ಏನೂ ಹೇಳುವ ಅಗತ್ಯವಿಲ್ಲವೆಂದು, ಹಲವರು ಹೇಳುತ್ತಾರೆ  ನಮ್ಮ ಪ್ರಯತ್ನವಿಲ್ಲದೆ ಏನೂ ನಡೆಯೋದಿಲ್ಲ ಹಾಗಾಗಿ ಅವಕಾಶವನ್ನು ತಪ್ಪಿಸಿಕೊಳ್ಳದೆ ಎಲ್ಲಾ ಹೇಳಿ ಮುಗಿಸಬೇಕೆಂದು. ಇದರಲ್ಲಿ ಯಾವುದು ಸತ್ಯ ಮಿಥ್ಯ?
ನಾವು ಹೇಳುವುದರಲ್ಲಿ ಸತ್ಯವಿದ್ದರೆ ಸತ್ಯ ಬೆಳೆಯುವುದು.
ಮಿಥ್ಯವಿದ್ದರೆ ಮಿಥ್ಯ ಬೆಳೆಯುವುದು.ಆದರೆ ಸತ್ಯ ಕಣ್ಣಿಗೆ ಕಾಣದಿರುವಾಗ ಸತ್ಯ ಹೇಳಿದರೂ ಬೆಳೆಯುವುದಿಲ್ಲವೆನ್ನುವ
‌ಕಾರಣಕ್ಕಾಗಿ ಎಲ್ಲಾ ಪರಮಾತ್ಮನಿಗೆ ಬಿಟ್ಟು ಸತ್ಯ ತಿಳಿದವರು ಹೇಳದೆ ಹೊರಟರು.ಇದರ ಪರಿಣಾಮ ಮಿಥ್ಯ ಸತ್ಯದ ಜಾಗವನ್ನೂ ಆಕ್ರಮಿಸಿಕೊಂಡು ರಾಜಾರೋಷವಾಗಿ ಹರಡಿಕೊಂಡು  ಆಳುತ್ತಿದೆ. 
ಒಂದೆ ಸತ್ಯ ಮಾತ್ರ ತಟಸ್ಥ ವಾಗಿ ನಿಂತು ನೋಡುತ್ತಿದೆ.
ಮಿಥ್ಯದ ರಾಜಕೀಯಕ್ಕೂ ಸತ್ಯದ ರಾಜಯೋಗಕ್ಕೂ ಅಂತರ ಬೆಳೆದು  ಇಂದು ಮನುಕುಲ  ಎಲ್ಲಾ ನಾನೇ, ನನ್ನಿಂದಲೇ
,ನನಗಾಗಿಯೇ ಇರೋದೆನ್ನುವ ಭ್ರಮೆಯಲ್ಲಿ  ಮಾಡಬಾರದ್ದನ್ನು ಮಾಡಿಕೊಂಡು ಸರ್ಕಾರ ಕಾರಣವೆಂದೋ ಇಲ್ಲ ಒಂದು ವರ್ಗ ಕಾರಣವೆಂದೋ ತಿಳಿಸಿ ದ್ವೇಷ ಬೆಳೆಸುತ್ತಾ ದೇಶವನ್ನೇ ಹಾಳು ಮಾಡುತ್ತಿದ್ದರೂ ಎಲ್ಲಾ ಪರಮಾತ್ಮನ ಇಚ್ಚೆಯಂತೆಯೇ ನಡೆಯುತ್ತದೆ ಎನ್ನುವವರಿಗೆ ಯಾವುದೇ  ಸಮಸ್ಯೆಯಿಲ್ಲ.ಕಾರಣ ಜನಬಲ ಹಣಬಲ ಇರುವ ಕಡೆ ಸಮಸ್ಯೆಗಳು ಜನರೆಡೆಗೆ ಹೋಗುವುದು.ಸಹಕಾರ ಕೊಟ್ಟ ಮೇಲೆ ಅದರ ಫಲವೂ ಅನುಭವಿಸಲೇಬೇಕಲ್ಲವೆ. ಇಲ್ಲಿ ಸತ್ಯಕ್ಕೆ ಕೊಡುವ ಸಹಕಾರಕ್ಕಿಂತ ಮಿಥ್ಯಕ್ಕೆ ಕೊಡುವ ಸಹಕಾರದಿಂದ ಜನರಲ್ಲಿ ಅಜ್ಞಾನ ಬೆಳೆದು ತನ್ನೊಳಗೆ ಅಡಗಿರುವ ಸತ್ಯವನ್ನು ಹೇಳದೆ,ಕೇಳದೆ ಜೀವ ಹೋಗುತ್ತಿದೆ ಎಂದರೆ ಪರಮಾತ್ಮನಿಗೆ ಸತ್ಯ ಬೇಕೋ ಮಿಥ್ಯವೋ?
ಸತ್ಯಕ್ಕೆ ಸಾವಿಲ್ಲವೆಂದರೆ  ದೇವರು ಯಾರು? ಸಾಯಿತ್ತಿರುವುದು ಯಾರು? ಪರಮಾತ್ಮ ಇರೋದೆಲ್ಲಿ? ಚರಾಚರಗಳಲ್ಲಿಯೂ ಇರುವ ಆ ಬ್ರಹ್ಮವಸ್ತುವನ್ನು ಬಳಸುವ ಜ್ಞಾನವೇ ಇಲ್ಲದವರನ್ನು ಆಳುವುದು ಸುಲಭ. ಆಳಿದರೂ ಮುಕ್ತಿಯಿಲ್ಲವೆನ್ನುವುದೂ ಸತ್ಯ. ಆದರೂ ರಾಜಕೀಯ ಮಿತಿಮೀರಿದೆ. ಸತ್ಯ  ತಿಳಿದವರಿಗೆ ಅಧಿಕಾರ,
ಹಣವಿಲ್ಲ.
ಅಧಿಕಾರ,ಹಣಬಲ,ಜನಬಲವಿದ್ದವರಿಗೆ ಪೂರ್ಣ ಸತ್ಯಜ್ಞಾನವಿಲ್ಲ. ಮಧ್ಯವರ್ತಿಗಳು ಯಾವಾಗಲೂ ಅರ್ಧ ಸತ್ಯದಲ್ಲಿಯೇ ಇರೋವಾಗ ಮುಂದೆ ನಡೆದವರಿಗೆ ಸತ್ಯ ತಿಳಿದರೂ ತಿಳಿಸಲು  ಅವಕಾಶವಿರಬೇಕು.
ಈಗಿನ‌ಪ್ರಜಾಪ್ರಭುತ್ವದಲ್ಲಿರುವ ಸ್ವಾತಂತ್ರ್ಯ ಹಿಂದಿನ ರಾಜರ ಕಾಲದಲ್ಲಿಯೂ ಇರಲಿಲ್ಲವೇನೋ ಆದರೆ ಅಂದಿನ ಪ್ರಜೆಗಳಲ್ಲಿದ್ದ  ಜ್ಞಾನಶಕ್ತಿ ಈಗಿನ ಪ್ರಜೆಗಳಲ್ಲಿ ಇರದ ಕಾರಣವೇ ಇಂದು ಮಿಥ್ಯವೇ ಜಗತ್ತನ್ನು ಆಳಲು ಹೊರಟು ಪ್ರಕೃತಿ  ವಿಕೋಪಗಳು ಹೆಚ್ಚಾಗಿದೆ. ಪ್ರಕೃತಿಯ ಸಣ್ಣ ಬಿಂದುಮಾತ್ರದ ಮಾನವನಿಗೆ ಸತ್ಯದ ಅರಿವಿದ್ದರೆ ಮಾತ್ರ ಜೀವನದ ಅರ್ಥ ವಾಗುತ್ತದೆ. ಇಲ್ಲವಾದರೆ ಜೀವನವೇ ವ್ಯರ್ಥ ಎಂದರು ಮಹಾತ್ಮರುಗಳು.
 ಮಹಾಭಾರತದ ಯುದ್ದ ಸಮಯದಲ್ಲಿ ಅರ್ಜುನನ ವಿಷಾಧ ಯೋಗಕ್ಕೆ ಶ್ರೀ ಕೃಷ್ಣ ನ ಒಂದು ಉತ್ತರ ಎಲ್ಲಾ ಮೊದಲೇ ಸತ್ತಿರುವಾಗ ಯಾರನ್ನು ಯಾರೂ ಸಾಯಿಸುತ್ತಿಲ್ಲ ವೆಂದು.
ಸತ್ಯ ಧರ್ಮ ಬಿಟ್ಟು ನಡೆದರೆ ಸತ್ತಂತೆ ಎನ್ನುವುದು  ಹಿಂದು ಧರ್ಮ, ಇದನ್ನು ಪರಧರ್ಮದವರು  ಅವರ ಅರಿವಿಗೆ ತಕ್ಕಂತೆ ತಿಳಿದು ನಡೆದರು. ಆದರೆ ಆಳವಾಗಿರುವ ಸತ್ಯವನ್ನು ಅರ್ಥ ಮಾಡಿಕೊಳ್ಳಲು ಆಳಕ್ಕೆ ಇಳಿದವರು ಸನಾತನಿಗಳಾದರು.
ಈಗಲೂ ಇದ್ದಾರೆ ಹಾಗಾಗಿ ಮಳೆ ಬೆಳೆಯಾಗುತ್ತಿದೆ. ಅವರನ್ನು ಆಳಲು ಹೋಗಬಾರದಷ್ಟೆ.  ಆತ್ಮಸಾಕ್ಷಿಗೆ ಸರ್ಕಾರ ಬೇಡ. ಸರ್ಕಾರದಲ್ಲಿ ಆತ್ಮಸಾಕ್ಷಿಗೆ ಅವಕಾಶವಿಲ್ಲ.
ಅಧಿಕಾರವೂ ಇಲ್ಲದ ಕಾರಣವೇ ಭ್ರಷ್ಟಾಚಾರ ಮುಗಿಲು
ಮುಟ್ಟಿದೆ. ಆ ಮುಗಿಲನ್ನು ಆಳೋದಕ್ಕೆ ಹೋದರೆ ಜೀವ ಹೋಗುತ್ತದೆ. ಒಟ್ಟಿನಲ್ಲಿ ಭೂಮಿ ಮೇಲಿದ್ದೇ ಆಕಾಶದೆತ್ತರ ಜ್ಞಾನವನ್ನು ಬೆಳೆಸಿಕೊಂಡಿದ್ದ ಋಷಿಮುನಿಗಳ ಸತ್ಯಜ್ಞಾನವು  ಅಲ್ಪ ಸ್ವಲ್ಪ ಈಗ ನಮಗಿದೆ.ಇದನ್ನು ಸಾಮಾನ್ಯ ಜ್ಞಾನವೆಂದರೆ ಸರಿಯಾಗಬಹುದು. ಈ ಸಾಮಾನ್ಯಜ್ಞಾನ ವಿಶೇಷಜ್ಞಾನಕ್ಕಿಂತ ಅಗತ್ಯವಾಗಿದೆ. ವಿಶೇಷಜ್ಞಾನವು ಹೊರಗಿನಿಂದ ಒಳಗೆ ಸೇರಿದೆ ಸಾಮಾನ್ಯಜ್ಞಾನ ಹುಟ್ಟುವಾಗಲೇ ಜೊತೆಯಲ್ಲಿದೆ. ಹೊರಗಿನಿಂದ ಸೇರಿಕೊಂಡಿರುವುದು ನಮ್ಮನ್ನೇ ಆಳುತ್ತದೆ.ನಮ್ಮನ್ನು ನಾವು ಆಳಿಕೊಳ್ಳಲು ಸಾಮಾನ್ಯಜ್ಞಾನದ ಅಗತ್ಯವಿದೆ. ಒಟ್ಟಿನಲ್ಲಿ ಪ್ರಜಾಪ್ರಭುತ್ವದ ಪ್ರಜೆಗಳಿಗೆ ಸಾಮಾನ್ಯಜ್ಞಾನದ ಕೊರತೆ ಇದ್ದರೆ  ಪರಮಾತ್ಮನ ತತ್ವವೂ ಕಾಣೋದಿಲ್ಲ ಪರಕೀಯರ ತಂತ್ರವೂ  ಕಾಣೋದಿಲ್ಲ. ಇದಕ್ಕೆ ಇರಬೇಕು ಪರಮಾತ್ಮನ ಇಚ್ಚೆಯಿಲ್ಲದೆ ಒಂದು ಹುಲ್ಲು ಕಡ್ಡಿಯೂ ಅಲ್ಲಾಡದು ಎಂದು.
ಪರಮಾತ್ಮ ಎಲ್ಲರಲ್ಲಿಯೂ ಆವರಿಸಿರುವಾಗ ಎಲ್ಲರ ಸಹಕಾರದಿಂದಲೇ ಹುಲ್ಲಿನ ಕಟ್ಟನ್ನು ಎತ್ತಿ ಹಿಡಿಯುವುದು.ಪ್ರತಿಯೊಂದು ಹುಲ್ಲಿನಲ್ಲಿಯೂ ಭೂ ತತ್ವವಿದೆ. ಆದರೆ ಅದರ ಬಳಕೆಯು ಮಾತ್ರ ಸರಿಯಾಗಿಲ್ಲದೆ ಅಧರ್ಮ ಬೆಳೆದಿದೆ. ಅತಿಯಾದ ಸಹಕಾರವೂ ಸೋಮಾರಿಗಳನ್ನು ಬೆಳೆಸುತ್ತದೆ. ಭ್ರಷ್ಟಾಚಾರ ಬೆಳೆಸುತ್ತದೆ. ಇದರ ಪ್ರತಿಫಲ ಅಜ್ಞಾನದ ಜೀವನವಾಗುತ್ತದೆ. ಮಾರಿ ಅಂದರೆ ರೋಗ ಹೆಚ್ಚುತ್ತದೆ. ರೋಗದ ಹೆಸರಿನಲ್ಲಿ ವ್ಯವಹಾರ ಬೆಳೆಯುತ್ತದೆ. ವ್ಯವಹಾರದಲ್ಲಿ ಹಣವೇ ಸರ್ವಸ್ವ ವಾಗುತ್ತದೆ.ಹಣಕ್ಕಾಗಿ ಹೆಣವನ್ನು ಮಾರಾಟಮಾಡುವ ಹಂತಕ್ಕೆ ಮಾನವ ಬಂದರೆ ಒಳಗಿದ್ದ  ಜೀವಾತ್ಮನಿಗೆ ಮುಕ್ತಿ ಸಿಗುವುದೆ? ಈ ವಿಚಾರದಲ್ಲಿ ಅಧ್ಯಾತ್ಮ ಚಿಂತಕರಾದವರು ಚರ್ಚೆ ನಡೆಸಿದ್ದರೆ ಈವರೆಗೂ  ಬೆಳೆದು ನಿಂತಿರುವ ಆರೋಗ್ಯ ರಕ್ಷಣೆಯ  ಆಸ್ಪತ್ರೆಯ ಬದಲಾಗಿ ಆರು ಯೋಗ್ಯವಾಗಿರಿಸುವ ಆರೋಗ್ಯಕರ ಶಿಕ್ಷಣ ನೀಡಿದ್ದರೆ ದೇಶ ಆತ್ಮನಿರ್ಭರ ಭಾರತ ಆಗುತ್ತಿತ್ತು. ಈಗಲೂ ಕಾಲಮಿಂಚಿಲ್ಲ ರಾಜಕೀಯವು ರಾಜಯೋಗದೆಡೆ ನಡೆದರೆ ಸಾಧ್ಯವಿದೆ.ಅಂದರೆ ಪರಮ ತತ್ವದ ಕಡೆಗೆ ನಡೆದರೆ ವಿಶ್ವಗುರು ಭಾರತವಾಗುವುದು. ಇದಕ್ಕೆ  ಪ್ರಜೆಗಳ ಸಹಕಾರವಿರಬೇಕಷ್ಟೆ. ಅಸತ್ಯವನ್ನು ಎತ್ತಿ ಹರಡುವ ಬದಲಾಗಿ ಸತ್ಯವನ್ನು ಒಳಗೇ ಬೆಳೆಸಿಕೊಂಡು ಕಂಡುಕೊಂಡರೆ  ಆತ್ಮಜ್ಞಾನ. ಇದನ್ನೂ ಸರ್ಕಾರ ಮಾಡಲು ಕಷ್ಟ ಕಷ್ಟ. ಹಣವನ್ನು ಸದ್ಬಳಕೆ ಮಾಡಿದರೆ ಜ್ಞಾನ.ದುರ್ಭಳಕೆ ಮಾಡಿದಷ್ಟೂ ಅಜ್ಞಾನ.ಇದ್ದಾಗಲೇ ಜ್ಞಾನಸಂಪಾದನೆಗಾಗಿ ಶ್ರಮಪಡಬೇಕೆನ್ನುವರು  ಮಹಾತ್ಮರುಗಳು.

ಪರಮಾತ್ಮನ ಇಚ್ಚೆ  ಮಾನವನ ಸ್ವೇಚ್ಚೆ ಎರಡೂ ಒಂದಾಗೋದು  ಸಾಧ್ಯವೆ? 

Monday, February 13, 2023

ಯಾರುಯಾರ ಹಿಂಬಾಲಕರು?

ವಾಸ್ತವ ಜಗತ್ತಿನಲ್ಲಿ  ಯಾರಲ್ಲಿ ಹೆಚ್ಚುಹಣ,ಸಂಪತ್ತು, ವಿದ್ಯೆ, ಅಧಿಕಾರ,ಸೌಂದರ್ಯವಿದೆಯೋ ಅವರಿಗೆ  ಸಾಕಷ್ಟು ಹಿಂಬಾಲಕರಿರುತ್ತಾರೆ. ಆದರೆ, ಹಿಂಬಾಲಕರಲ್ಲಿರುವ ಅಲ್ಪ ಸ್ವಲ್ಪ  ಹಣ,ಸಂಪತ್ತು,ಅಧಿಕಾರ,ವಿದ್ಯೆ, ಸೌಂದರ್ಯ ದ ಪರಿಚಯ  ಸ್ವತಃ ಅವರಿಗೇ ಇಲ್ಲದೆ ಹಿಂದುಳಿದರೆ  ಇಡೀ ದೇಶ, ವಿಶ್ವದ ಶಕ್ತಿ  ಕಡೆಗೆಣಿಸಿದಂತೆ. ಹೀಗಾಗಿ ಸ್ವಾಮಿ ವಿವೇಕಾನಂದರು ಎಲ್ಲಾ ನಿನ್ನೊಳಗೇ ಅಡಗಿರುವಾಗ ಒಳಹೊಕ್ಕಿ ನೋಡಿದಾಗಲೇ ನೀನು ಅಮೃತ ಪುತ್ರನಾಗಲು ಸಾಧ್ಯವೆಂದರು. ಅಮೃತಪುತ್ರರ ಜ್ಞಾನ ಯಾವತ್ತೂ ಶಾಶ್ವತ.
ಆದರೆ ಆ ಜ್ಞಾನವೇ ಹೊರಗಿನವರ‌ ಬಳುವಳಿಯಾದರೆ ಮೂಲ ಶಕ್ತಿಯೇ ಕಾಣದೆ ಹೊರಗಿನ ಶಕ್ತಿಯ  ಹಿಂಬಾಲಕರೆ ಹೆಚ್ಚಾಗುತ್ತಾರೆ. ಇದು  ಅಧರ್ಮ, ಅನ್ಯಾಯ,ಅಸತ್ಯ,
ಅನೀತಿಯಾದರಂತೂ‌ ಜೀವನವೇ ನರಕ.
ಈ ಕಾರಣಕ್ಕಾಗಿ ನಮ್ಮ ಭಾರತೀಯರು ಯೋಗಿಗಳಾಗಿ  ಆತ್ಮಜ್ಞಾನದೆಡೆಗೆ ಸಾಗಿದ್ದರು. ಜ್ಞಾನ ವಿಜ್ಞಾನದ ಅಂತರದಲ್ಲಿರುವ ನಾವೀಗ  ನಮ್ಮ ಸಾಮಾನ್ಯಜ್ಞಾನ
ದಿಂದಲೇ  ವಾಸ್ತವಸತ್ಯವನ್ನರಿತರೆ  ನಮ್ಮ  ಆಂತರಿಕ ಜ್ಞಾನದಿಂದಲೇ ಆತ್ಮನಿರ್ಭರ ಭಾರತ ಮಾಡಬಹುದು. ಯಾವಾಗ  ಇದು ರಾಜಕೀಯವಾಗುವುದೋ ಆಗ ರಾಜಯೋಗ ಹಿಂದುಳಿದು ಸತ್ಯವಿಲ್ಲದ ಧರ್ಮ ಧರ್ಮ ವಿಲ್ಲದ ಸತ್ಯದ  ನಡುವಿನ ಅಧರ್ಮಕ್ಕೆ ಜೋತುಬಿದ್ದು ಜೀವ ಹೋಗುವುದು. 
ಸತ್ಯವೇ ನಮ್ಮ ತಾಯಿತಂದೆ,ಸತ್ಯವೇ ನಮ್ಮ ಬಂಧು ಬಳಗ ಸತ್ಯವಾಕ್ಯಕೆ ತಪ್ಪಿ ನಡೆದರೆ ಮೆಚ್ಚನಾಪರಮಾತ್ಮನು .
.ಪುಣ್ಯಕೋಟಿಯ ಕಥೆ ಮಕ್ಕಳಿಗೆ ತಿಳಿಸುವುದರ  ಮೂಲಕ ಪುಣ್ಯ ಗಳಿಸಬಹುದು. ಸತ್ಯ ಹೇಳಲು ಬಿಟ್ಟರೆ  ಮಾತ್ರ  ಮಕ್ಕಳನ್ನು ದೇವರೆನ್ನಬಹುದು.
ಕಾರಣ ನಿಷ್ಕಲ್ಮಶ ಹೃದಯವಿದ್ದವರೆ ದೇವರು ಮಕ್ಕಳನ್ನು ದೇವರೆನ್ನುವ ಕಾಲವಿತ್ತು.  ಆತ್ಮಸಾಕ್ಷಿಗಿಂತ ದೊಡ್ಡ ದೇವರಿಲ್ಲ.
ಜನರನ್ನು  ದಾರಿತಪ್ಪಿಸಿ ಆಳುವುದು ಸುಲಭ. ಆದರೆ ಅದೇ ಕರ್ಮಕ್ಕೆ  ಆಳಾಗಿ ಜನ್ಮ ಪಡೆದಾಗ  ಅಳುವ ಸರದಿಯೂ ಇದೆ . ಈ ಸತ್ಯ ಪ್ರತಿಕ್ಷಣ ಮಾನವ  ಮರೆಯದಿದ್ದರೆ ಯಾರ ಹಿಂದೆ ಯಾರು ನಡೆಯಬೇಕಿತ್ತು.ಯಾರು ನಡೆದಿರುವುದು ಯಾಕೆ ಎನ್ನುವ  ಜ್ಞಾನ ಬರುತ್ತದೆ. 
ಸರಿಯಾದ ಶಿಕ್ಷಣ ನೀಡದೆ ಅಜ್ಞಾನದಲ್ಲಿರುವವರನ್ನು  ಆಳುವುದುಪ್ರಗತಿಯಾಗದು.ಅಧೋಗತಿಯಾಗುತ್ತದೆನ್ನುವರು ಮಹಾತ್ಮರುಗಳು. ಭಾರತದ ಭವಿಷ್ಯ ಆತ್ಮಜ್ಞಾನದ ಶಿಕ್ಷಣವಾಗಿತ್ತು. ಅದರಜೊತೆಗೆ ವೈಜ್ಞಾನಿಕ ಸಂಶೋಧನೆ  ಇದ್ದರೆ  ಸಮಾನತೆಯ ಅರ್ಥ ವಾಗುತ್ತದೆ. ಹಿಂದಿನ ಕಾಲದಂತಿರಲಾಗದಿದ್ದರೂ ಈಗಿನ ಕಾಲವನ್ನು ಹಾಳು ಮಾಡುವಂತಾಗದಿದ್ದರೆ ಉತ್ತಮ.ಭವಿಷ್ಯದ ಬಗ್ಗೆ ಚಿಂತನೆ ನಡೆಸಬಾರದೆನ್ನುವ ಮಧ್ಯವರ್ತಿಗಳು ಸಾಕಷ್ಟು ಸಾಲ ಮಾಡಿ ಹೋದರು. ಈಗ ಸಾಲ ತೀರಿಸಲು  ಹಿಂದಿನವರು ಬರುವರೆ?
ಪರಕೀಯರ ಶಿಕ್ಷಣ,ಭಾಷೆ,ಸಂಸ್ಕೃತಿ, ಭಾಷೆಯ ಹಿಂದೆ ನಡೆದರೆ ಪರಕೀಯರೆ ಆಳುವುದು.

ವಿವೇಕ ಯಾವುದರಲ್ಲಿದೆ?

ವಾಸ್ತವ ಜಗತ್ತಿನಲ್ಲಿ  ಯಾರಲ್ಲಿ ಹೆಚ್ಚುಹಣ,ಸಂಪತ್ತು, ವಿದ್ಯೆ, ಅಧಿಕಾರ,ಸೌಂದರ್ಯವಿದೆಯೋ ಅವರಿಗೆ  ಸಾಕಷ್ಟು ಹಿಂಬಾಲಕರಿರುತ್ತಾರೆ. ಆದರೆ, ಹಿಂಬಾಲಕರಲ್ಲಿರುವ ಅಲ್ಪ ಸ್ವಲ್ಪ  ಹಣ,ಸಂಪತ್ತು,ಅಧಿಕಾರ,ವಿದ್ಯೆ, ಸೌಂದರ್ಯ ದ ಪರಿಚಯ  ಸ್ವತಃ ಅವರಿಗೇ ಇಲ್ಲದೆ ಹಿಂದುಳಿದರೆ  ಇಡೀ ದೇಶ, ವಿಶ್ವದ ಶಕ್ತಿ  ಕಡೆಗೆಣಿಸಿದಂತೆ. ಹೀಗಾಗಿ ಸ್ವಾಮಿ ವಿವೇಕಾನಂದರು ಎಲ್ಲಾ ನಿನ್ನೊಳಗೇ ಅಡಗಿರುವಾಗ ಒಳಹೊಕ್ಕಿ ನೋಡಿದಾಗಲೇ ನೀನು ಅಮೃತ ಪುತ್ರನಾಗಲು ಸಾಧ್ಯವೆಂದರು. ಅಮೃತಪುತ್ರರ ಜ್ಞಾನ ಯಾವತ್ತೂ ಶಾಶ್ವತ.
ಆದರೆ ಆ ಜ್ಞಾನವೇ ಹೊರಗಿನವರ‌ ಬಳುವಳಿಯಾದರೆ ಮೂಲ ಶಕ್ತಿಯೇ ಕಾಣದೆ ಹೊರಗಿನ ಶಕ್ತಿಯ  ಹಿಂಬಾಲಕರೆ ಹೆಚ್ಚಾಗುತ್ತಾರೆ. ಇದು  ಅಧರ್ಮ, ಅನ್ಯಾಯ,ಅಸತ್ಯ,
ಅನೀತಿಯಾದರಂತೂ‌ ಜೀವನವೇ ನರಕ.
ಈ ಕಾರಣಕ್ಕಾಗಿ ನಮ್ಮ ಭಾರತೀಯರು ಯೋಗಿಗಳಾಗಿ  ಆತ್ಮಜ್ಞಾನದೆಡೆಗೆ ಸಾಗಿದ್ದರು. ಜ್ಞಾನ ವಿಜ್ಞಾನದ ಅಂತರದಲ್ಲಿರುವ ನಾವೀಗ  ನಮಗಮ ಸಾಮಾನ್ಯಜ್ಞಾನದಿಂದಲೇ  ವಾಸ್ತವಸತ್ಯವನ್ನರಿತರೆ  ನಮ್ಮ  ಆಂತರಿಕ ಜ್ಞಾನದಿಂದಲೇ ಆತ್ಮನಿರ್ಭರ ಭಾರತ ಮಾಡಬಹುದು. ಯಾವಾಗ  ಇದು ರಾಜಕೀಯವಾಗುವುದೋ ಆಗ ರಾಜಯೋಗ ಹಿಂದುಳಿದು ಸತ್ಯವಿಲ್ಲದ ಧರ್ಮ ಧರ್ಮ ವಿಲ್ಲದ ಸತ್ಯದ  ನಡುವಿನ ಅಧರ್ಮಕ್ಕೆ ಜೋತುಬಿದ್ದು ಜೀವ ಹೋಗುವುದು. 
ಸತ್ಯವೇ ನಮ್ಮ ತಾಯಿತಂದೆ,ಸತ್ಯವೇ ನಮ್ಮ ಬಂಧು ಬಳಗ ಸತ್ಯವಾಕ್ಯಕೆ ತಪ್ಪಿ ನಡೆದರೆ ಮೆಚ್ಚನಾಪರಮಾತ್ಮನು .
.ಪುಣ್ಯಕೋಟಿಯ ಕಥೆ ಮಕ್ಕಳಿಗೆ ತಿಳಿಸುವುದರ  ಮೂಲಕ ಪುಣ್ಯ ಗಳಿಸಬಹುದು. ಸತ್ಯ ಹೇಳಲು ಬಿಟ್ಟರೆ  ಮಾತ್ರ  ಮಕ್ಕಳನ್ನು ದೇವರೆನ್ನಬಹುದು.
ಕಾರಣ ನಿಷ್ಕಲ್ಮಶ ಹೃದಯವಿದ್ದವರೆ ದೇವರು.ಮಕ್ಕಳನ್ನು ದೇವರೆನ್ನುವ ಕಾಲವಿತ್ತು.  ಆತ್ಮಸಾಕ್ಷಿಗಿಂತ ದೊಡ್ಡ ದೇವರಿಲ್ಲ.
ಜನರನ್ನು  ದಾರಿತಪ್ಪಿಸಿ ಆಳುವುದು ಸುಲಭ. ಆದರೆ ಅದೇ ಕರ್ಮಕ್ಕೆ  ಆಳಾಗಿ ಜನ್ಮ ಪಡೆದಾಗ  ಅಳುವ ಸರದಿಯೂ ಇದೆ . ಈ ಸತ್ಯ ಪ್ರತಿಕ್ಷಣ ಮಾನವ  ಮರೆಯದಿದ್ದರೆ ಯಾರ ಹಿಂದೆ ಯಾರು ನಡೆಯಬೇಕಿತ್ತು.ಯಾರು ನಡೆದಿರುವುದು ಯಾಕೆ ಎನ್ನುವ  ಜ್ಞಾನ ಬರುತ್ತದೆ. 
ಸರಿಯಾದ ಶಿಕ್ಷಣ ನೀಡದೆ ಅಜ್ಞಾನದಲ್ಲಿರುವವರನ್ನು  ಆಳುವುದು  ಪ್ರಗತಿಯಾಗದು.
ಅಧೋಗತಿಯಾಗುತ್ತದೆನ್ನುವರು ಮಹಾತ್ಮರುಗಳು. ಭಾರತದ ಭವಿಷ್ಯ ಆತ್ಮಜ್ಞಾನದ ಶಿಕ್ಷಣವಾಗಿತ್ತು. ಅದರಜೊತೆಗೆ ವೈಜ್ಞಾನಿಕ ಸಂಶೋಧನೆ  ಇದ್ದರೆ  ಸಮಾನತೆಯ ಅರ್ಥ ವಾಗುತ್ತದೆ. ಹಿಂದಿನ ಕಾಲದಂತಿರಲಾಗದಿದ್ದರೂ ಈಗಿನ ಕಾಲವನ್ನು ಹಾಳು ಮಾಡುವಂತಾಗದಿದ್ದರೆ ಉತ್ತಮ.ಭವಿಷ್ಯದ ಬಗ್ಗೆ ಚಿಂತನೆ ನಡೆಸಬಾರದೆನ್ನುವ ಮಧ್ಯವರ್ತಿಗಳು ಸಾಕಷ್ಟು ಸಾಲ ಮಾಡಿ ಹೋದರು. ಈಗ ಸಾಲ ತೀರಿಸಲು  ಹಿಂದಿನವರು ಬರುವರೆ?
ಪರಕೀಯರ ಶಿಕ್ಷಣ,ಭಾಷೆ,ಸಂಸ್ಕೃತಿ, ಭಾಷೆಯ ಹಿಂದೆ ನಡೆದರೆ ಪರಕೀಯರೆ ಆಳುವುದು.
ಹೊಂದಿಕೊಂಡು ಹೋಗಬೇಕಾಗಿದ್ದು ನಮ್ಮವರನ್ನು. ಆದರೆ ನಮ್ಮವರೆ ನಮ್ಮ ವಿರುದ್ದ ನಿಂತರೆ ಪರಕೀಯರೆ ಬೆಳೆಯೋದು. ಅವರು ನಮ್ಮ ಧರ್ಮದ ಪರವಿದ್ದರೆ  ಅದು ಧರ್ಮ. ವಿರುದ್ದವಿದ್ದರೆ?

ರಾಜಯೋಗದಿಂದ ಧರ್ಮರಕ್ಷಣೆ ಸಾಧ್ಯ.

ಪುರಾಣ ಇತಿಹಾಸ ಭವಿಷ್ಯದ ಚಿಂತನೆಯಲ್ಲಿ ವಾಸ್ತವ ಸತ್ಯವನ್ನು ಮರೆತರೆ ಮಾನವನಿಗೆಕಷ್ಟ ನಷ್ಟ. ರಾಜರಕಾಲ ಹೋಗಿ ಪ್ರಜಾಪ್ರಭುತ್ವ ಬಂದು ಎಷ್ಟೋ ವರ್ಷ ವಾದರೂ ರಾಜರಂತೆ ಬದುಕಲು ಹೋಗುವವರು  ಸಾಮಾನ್ಯರನ್ನು ದಾರಿತಪ್ಪಿಸಿ ಆಳೋದನ್ನು ಈವರೆಗೆ ತಡೆಯಲಾಗಿಲ್ಲವೆಂದರೆ ಯಾವುದನ್ನು ತಡೆಯಬಹುದೋ ಅದನ್ನು ಬಿಟ್ಟು ಆಗಬಾರದ್ದನ್ನು ಮಾಡಿದರೆ ಆಗೋದೇಬೇರೆ. ಪರಮಾತ್ಮನ ಇಚ್ಚೆಯಿಲ್ಲದೆ ಒಂದು ಹುಲ್ಲು ಕಡ್ಡಿಯೂ ಅಲ್ಲಾಡದೆನ್ನುವ ಸತ್ಯವನ್ನು ಯಾರು ಕಂಡು ಆತ್ಮಸಾಕ್ಷಿಯಂತೆ ನಡೆದರೋ ಅವರನ್ನು ಕಾಣೋದು ಇಂದು ಕಷ್ಟವಿದೆ.ಆದರೆ ಅವರ ನಡೆ ನುಡಿಯಲ್ಲಿದ್ದ ತತ್ವಜ್ಞಾನ ಇಂದಿಗೂ ಮಾನವನಿಗೆ ಅಗತ್ಯವಿದೆ.
ತತ್ವಜ್ಞಾನದಿಂದ ರಾಜಯೋಗ ರಾಜಯೋಗದಿಂದ ಧರ್ಮ ರಕ್ಷಣೆ ಸಾಧ್ಯವೆನ್ನುವ ಸತ್ಯ  ಹಿಂದಿನ ದೇಶಭಕ್ತರು,ದೇವರ ಭಕ್ತರು ಅನುಭವದಿಂದ ತಿಳಿದು  ನಡೆದು ನುಡಿದಿದ್ದರು. ಇದು ಭಾರತೀಯ  ತತ್ವಶಾಸ್ತ್ರ. ಶಾಸ್ತ್ರ, ಸಂಪ್ರದಾಯ, ಇನ್ನಿತರ ಆಚಾರ,ವಿಚಾರ,ಪ್ರಚಾರಗಳು ಸಾಕಷ್ಟು ವರ್ಷದಿಂದ ನಡೆದಿದೆ.ಆದರೆ ಯಾಕೆ ಶಸ್ತ್ರ ಹಿಡಿದು ತನ್ನ ಜೀವರಕ್ಷಣೆ ಮಾಡಿಕೊಳ್ಳುವ  ಪರಿಸ್ಥಿತಿ ಬರುತ್ತಿದೆ? ಇದರಲ್ಲಿ ಯಾವುದೂ ಅತಿಯಾಗಬಾರದೆನ್ನುವ ಸಂದೇಶವಿದೆ. ಆಂತರಿಕ ಜ್ಞಾನಕ್ಕೆ ವಿರುದ್ದ ಭೌತಿಕ ವಿಜ್ಞಾನ ಬೆಳೆದಂತೆಲ್ಲಾ ಆತ್ಮಹತ್ಯೆಗಳಾದವು.
ಆತ್ಮಹತ್ಯೆಯ ಪಾಪಕ್ಕೆ  ಇನ್ನಷ್ಟು  ಅಗೋಚರ ಅತೃಪ್ತ ಆತ್ಮಗಳು  ಮಾನವನೊಳಗೆ ಹೊರಗೆ ಇದ್ದರೂ  ಕಾಣದೆ  ತಮ್ಮದೇ ಆದ ರಾಜಕೀಯ ತಂತ್ರದಿಂದ ಅತೃಪ್ತರನ್ನು ಆಳಲು ಹೊರಟು ತಮ್ಮ ರಾಜಯೋಗವನ್ನು ಅರ್ಥ ಮಾಡಿಕೊಳ್ಳಲು ಸೋತವರು  ಹೋರಾಟ,ಹಾರಾಟ, ಮಾರಾಟದಲ್ಲಿ
ಮೈಮರೆಯುವಂತಾಗುತ್ತಿದೆ. ಇದರಿಂದಾಗಿ ಯಾರಿಗೆ ಲಾಭ? ಯಾರಿಗೆ ನಷ್ಟ?
ಅಧ್ಯಾತ್ಮದ ಪ್ರಕಾರ ಭೂಮಿಗೆ ನಷ್ಟ ಮನುಕುಲಕ್ಕೆ ಕಷ್ಟ.ಲಾಭ ಯಾರಿಗೂ ಇಲ್ಲ.ಕಾರಣ ಇಲ್ಲಿ ನಡೆಸೋ ಶಕ್ತಿಯೇ ಬೇರೆ ನಡೆಯೋ ಶಕ್ತಿಯೇ ಬೇರೆ. ಒಬ್ಬರಿಗೊಬ್ಬರು  ಮುಖ ನೋಡಿಕೊಳ್ಳದಿದ್ದರೂ ವ್ಯವಹಾರಕ್ಕೆ ಇಬ್ಬರೂ ಬೇಕು. ಒಂದೇ ನಾಣ್ಯದ ಎರಡು ಮುಖಗಳ ವಿರುದ್ದ ದಿಕ್ಕಿನ ಚಲನೆಯು ಮಧ್ಯವರ್ತಿ ಮಾನವನಿಗೆ  ಕಾಣಿಸುತ್ತಿಲ್ಲ.ಇದನ್ನು ಕಂಡವರು ತತ್ವಜ್ಞಾನಿಗಳಾದರು, ಮಹಾತ್ಮರಾದರು,ದೇವರಾದರು. ರಾಜಯೋಗವೆಂದರೆ  ಆತ್ಮಾನುಸಾರ ನಡೆದು ಸ್ವತಂತ್ರ ಜ್ಞಾನದಿಂದ  ತನ್ನ ತಾನು ಆಳಿಕೊಂಡಿರುವ ಯೋಗಿಗಳು.
ಸ್ವಾಮಿ ವಿವೇಕಾನಂದರ ಪ್ರಕಾರ  ಭಾರತದ  ಶಿಕ್ಷಣದಲ್ಲಿಯೇ ರಾಜಯೋಗವಿತ್ತು. ಆದರೆ ಅದರೊಳಗಿದ್ದ ಹಲವು ರಾಜಕೀಯದಿಂದ  ಇಂದು  ಧರ್ಮ, ಸತ್ಯನ್ಯಾಯ,ನೀತಿ,ಸಂಸ್ಕೃತಿ, ಸಂಪ್ರದಾಯ, ಆಚರಣೆಯು ವೈಭೋಗದೆಡೆಗೆ  ನಡೆದಂತೆಲ್ಲಾ  ನಿಜವಾದ  ಹಿಂದೂಗಳು ಹಿಂದುಳಿದರು. 
ವರ್ಷಕ್ಕೊಂದರಂತೆ  ಪುಸ್ತಕ ರೂಪ ಪಡೆಯುತ್ತಿರುವ ಇಂತಹ ಲೇಖನಗಳು ಜನಸಾಮಾನ್ಯರ ಸಾಮಾನ್ಯಜ್ಞಾನಕ್ಕೆ ಅರ್ಥ ಆಗುತ್ತದೆನ್ನಬಹುದು. ಜನಸಾಮಾನ್ಯರ  ಜ್ಞಾನದಿಂದಲೇ ದೇಶ ನಡೆದಿರೋದು. ಒಬ್ಬೊಬ್ಬ ಪ್ರಜೆಯೂ ದೇಶದ ಒಂದು ಭಾಗ.ದೇಶಭಕ್ತಿಯು ಯೋಗದಿಂದ ಬೆಳೆಯುವುದೆ ಹೊರತು ಭೋಗದಿಂದಲ್ಲ. ಎಲ್ಲಾ ಒಂದೇ ಎನ್ನುವ ಬದಲಾಗಿ ಎಲ್ಲರಿಗೂ ಒಂದೇ ದೇಶ,ಧರ್ಮ, ನೆಲ ಜಲ ಎನ್ನುವ ಸತ್ಯ ತಿಳಿದರೆ  ಅದರ ಋಣ ತೀರಿಸಲು ಯೋಗ ಮಾರ್ಗ ಉತ್ತಮ
ಎಂದಿದ್ದಾರೆ ರಾಜಯೋಗಿಗಳು. ವಾಸ್ತವದಲ್ಲಿ  ನಮ್ಮ ಶಿಕ್ಷಣವೇ  ನಮ್ಮ ಜ್ಞಾನವನ್ನು ಗುರುತಿಸಲು ಸೋತಿರುವಾಗ ಎಲ್ಲಿಯ ಯೋಗಯೋಗವೆಂದರೆಸೇರುವುದು,ಕೂಡುವುದು,
ಒಂದಾಗುವುದು ಎಂದಾಗ ಒಳಗಿನ  ಜ್ಞಾನಶಕ್ತಿಗೆ ಹೊರಗಿನ‌ಜ್ಞಾನಶಕ್ತಿ ಕೂಡುವುದಾಗಬೇಕು. ವಿರುದ್ದವಾದರೆ ಯೋಗ ಕೂಡಿಬರದು.ಮೂಲದೆಡೆಗೆ ಸೇರೋದಿಲ್ಲ. ಕೆಲವರಿಗೆ ಸಾಧ್ಯವಾಗಿದ್ದರೆ ಹಲವರಿಗೆ ಸಾಧ್ಯವಾಗಿಲ್ಲದಿರೋದಕ್ಕೆ ಕಾರಣ ರಾಜಕೀಯದ ದುರ್ಭಳಕೆ.
ಈ ವರ್ಷದ ಹೊಸಪುಸ್ತಕ ರಾಜಯೋಗ- ಧರ್ಮ ರಕ್ಷಣೆಯು
ಇಂದು ಕೈ ಸೇರಿತು. ವಿಚಾರಗಳು  ಸಾಮಾನ್ಯವೆನಿಸಿದರೂ ಅನುಭವಕ್ಕೆ ಬರುವ ಸತ್ಯವಾಗಿದೆ. ಸತ್ಯವೇ ದೇವರಾದರೆ  ಸತ್ಯ -ಧರ್ಮದ ಯೋಗದಿಂದ  ಧರ್ಮ ರಕ್ಷಣೆ .ಸತ್ಯವೆ ಬೇರೆ ಧರ್ಮ ವೆ ಬೇರೆ ಆದರೆ ಅಧರ್ಮ .

Friday, February 10, 2023

ಸಂಕಷ್ಟಹರ ಗಣಪತಿ ವಿಶೇಷತೆ

ಜಯದೇವಜಯದೇವ ಶ್ರೀ ಗಣಪತಿರಾಯ ಜಯಗಣಪತಿ ರಾಯ ಭಯಕಾರಕ ಭಯಹಾರಕ ಓಂಕಾರ ಕಾಯ..
ದ.ರಾ ಬೇಂದ್ರೆಯವರ  ಇದರಲ್ಲಿ ಗಣಪತಿಯು ಭಯಕಾರಕನೂ,ಭಯಹಾರಕನೂ ಆಗಿರುವುದು ವಿಶೇಷ. 
ದೇವರು ಕೂಡ ಭಯವನ್ನು ಹುಟ್ಟಿಸಿ  ಭಯ
ಕಳೆಯುತ್ತಾನೆಂದರೆ  ಮಾನವನ ಗತಿ  ಹೇಗಿರಬಹುದು.
ಗಣಪತಿಯ ಸಣ್ಣದಾದ ಕಣ್ಣುಸೂಕ್ಮ ಸತ್ಯವನ್ನು ಸೂಚಿಸುತ್ತದೆ, ದೊಡ್ಡದಾದ ಕಿವಿ ಹೆಚ್ಚುಕೇಳಿಸಿಕೊಳ್ಳುವ ಸೂಚನೆಯಾದರೆ ಉದ್ದವಾಗಿರುವ  ಮೂಗು ಬಾಯಿಗೇ ಅಡ್ಡವಾಗಿದ್ದರೂ ಸಾತ್ವಿಕ ಆಹಾರವನ್ನು ಹೆಚ್ಚು ತಿಂದು  ದೈಹಿಕ ಬಲದಲ್ಲಿಯೂ  ಎಲ್ಲರಿಗಿಂತ  ಬಲಿಷ್ಠ.  ಮಾತು ಕಡಿಮೆ ಕೆಲಸ ಹೆಚ್ಚು  ಮಾಡುವ ಇಂತಹ ಗಣಗಳ ಪತಿಯು ಸಂಕಷ್ಟದಿಂದ  ದೂರಮಾಡುವ ಸಂಕಷ್ಟ ಹರ ಚತುರ್ಥಿ ವ್ರತ ಕಥೆ ಮಾನವರು ಮಾಡೋದಕ್ಕೆ ಕಾರಣಸಂಕಷ್ಟವೇ ಆಗಿರುತ್ತದೆ. ಸಂಕಟಬಂದಾಗ ವೆಂಕಟರಮಣ ಎನ್ನುವಂತೆ ಮಾನವರು ಕಷ್ಟವಿಲ್ಲದಿದ್ದರೆ ಯಾವ ದೇವರೂ ಭೂಮಿಯಲ್ಲಿರುತ್ತಿರಲಿಲ್ಲ. ಒಟ್ಟಿನಲ್ಲಿ ಭೂಮಿ ಮೇಲಿರುವ ಎಲ್ಲಾ ದೇವಾನುದೇವತೆಗಳಿಗೂ  ತನ್ನದೆ ವಿಶೇಷ ಶಕ್ತಿಯಿದೆ. ಆ ಶಕ್ತಿಯನ್ನು ಮಾನವ ದುರ್ಭಳಕೆ ಮಾಡಿಕೊಂಡರೆ ಕಷ್ಟ.ಸದ್ಬಳಕೆ ಮಾಡಿಕೊಂಡರೆ ಸುಖ. ಅತಿಯಾದ ಸುಖವೇ ದು:ಖಕ್ಕೆ ಕಾರಣ.  
ಅಗೋಚರ ಶಕ್ತಿಯ   ಹೆಸರಿನಲ್ಲಿ ನಡೆಸುವ ವ್ಯವಹಾರದಲ್ಲಿ  ಸಾಕಷ್ಟು ಲಾಭಗಳಿಸಿದರೂ  ಕೊನೆಗೊಮ್ಮೆ ನಷ್ಟವೂ ಆಗುತ್ತದೆ. ಇದಕ್ಕಾಗಿ ಮಾನವರು ಇತಿಮಿತಿಗಳನ್ನು ಕಾಯ್ದು ಕೊಂಡಿರಲು  ಧಾರ್ಮಿಕತೆಯ ಅಗತ್ಯವಿದೆ.ಸತ್ಯದ ಅಗತ್ಯವಿದೆ. 
ಒಂದೇ ಸತ್ಯ ಒಂದೇ ಗಣಪತಿ,ಒಂದೇ ದೇವರು ನಾಮ ಹಲವು. ಈ ಹಲವುಗಳಲ್ಲಿಯೂ  ಹಲವು ವಿಶೇಷ ಶಕ್ತಿಯಿದೆ. ಎಲ್ಲಾ ವಿಶೇಷವೂ ಒಬ್ಬ ಮಾನವನಲ್ಲಿರಲಾಗದು.ಆದರೆ ಎಲ್ಲಾ ದೇವರನ್ನು ಒಬ್ಬ ಮಾನವರೂಪಿ ಗುರು ತಿಳಿಯಬಹುದು. ಇದೇ ಕಾರಣಕ್ಕಾಗಿ  ದೇವರಿಗಿಂತ ಗುರುವೇ ದೊಡ್ಡವರು ಎನ್ನುವರು.
ಸಾಕಷ್ಟು  ಹೆಸರಿನಲ್ಲಿ ದೇವಸ್ಥಾನ ವಿದೆ. ಒಂದೇ ದೇವರ ದೇವಸ್ಥಾನವು ಅನೇಕ ಇದೆ. ಮಾನವರ ಸಂಕಷ್ಟಕ್ಕೆ  ಮಿತಿಯಿಲ್ಲವಾಗಿದೆ. ಸಂಕಷ್ಟ ಬರೋದು ಸಹಜವಾದರೂ  ಅದನ್ನು ದೇವರಿಂದ  ಪರಿಹರಿಸಿಕೊಳ್ಳಲು  ನಡೆಸೋ ವ್ಯವಹಾರ  ಸರಿಯಿಲ್ಲದ ಕಾರಣ  ಅಂತ್ಯವಿಲ್ಲದ ಜೀವನವಾಗಿದೆ. ಇಲ್ಲಿ ದೇವರು  ಹಣ,ಅಧಿಕಾರ,ಸ್ಥಾನ ಕೊಟ್ಟು  ಜನರನ್ನು ಸನ್ಮಾರ್ಗದಲ್ಲಿ ನಡೆಸಲು ಒಬ್ಬ ವ್ಯಕ್ತಿಗೆ ಅವಕಾಶಕೊಟ್ಟರೆ ಅವನು ಅದನ್ನು ತನ್ನದೆನ್ನುವ  ದರ್ಪದಲ್ಲಿ‌ ಭ್ರಷ್ಟಾಚಾರದ ದಾರಿಹಿಡಿದರೆ ಭ್ರಷ್ಟಾಚಾರಕ್ಕೆ  ಭಯವಿದೆಯೆ? ಭ್ರಷ್ಟರಿಗೆ ಭಯವಿದೆಯೆ? ಇದ್ದರೆ ಅದು ಬೆಳೆಯುತ್ತಿರಲಿಲ್ಲ.ಹಾಗಾದರೆ ಭ್ರಷ್ಟಾಚಾರಿಗಳಿಗೆ ದೇವರ ಸಹಕಾರವಿದೆಯೆ? ಸಹಕಾರವಿಲ್ಲದೆ ಯಾವುದೂ ಬೆಳೆಯದು  ಈಗ‌ನಾವು ದೇವರಿರುವುದು ಎಲ್ಲಿಎಂಬ ಪ್ರಶ್ನೆಗೆ ಉತ್ತರ ನಮ್ಮೊಳಗೆ ಇರುವ  ದೈವತ್ವದ ಗುಣವೇ ದೇವರು. ದೇವರಿಗೆ  ಅರ್ಪಿಸುವ ಎಲ್ಲದರಲ್ಲಿಯೂ ಆ ದೇವರಿದ್ದಾನೆಂದ ಮೇಲೆ ನಾವು ಕೊಡುವ ಸಹಕಾರದಲ್ಲಿಯೂ ದೇವರಿದ್ದಾನೆ.
ಪ್ರತಿಫಲಾಪೇಕ್ಷೆ ಇಲ್ಲದ, ನಿಸ್ವಾರ್ಥ, ನಿರಹಂಕಾರದ ಸೇವೆಯೇ ನನಗೆ ಅತ್ಯಂತ ಪ್ರಿಯವಾದದ್ದು ಎಂದು ಶ್ರೀ ಕೃಷ್ಣ ಪರಮಾತ್ಮ ತಿಳಿಸಿಲ್ಲವೆ?
ಪ್ರತಿಷ್ಠಿತ ವ್ಯಕ್ತಿಗಳನ್ನು ಬೆಳೆಸಿರುವ  ಜನರ ಸಂಕಷ್ಟ ತೀರಿತೆ?
ಕಷ್ಟಪಟ್ಟು ದುಡಿದರೂ  ಅಲ್ಪಸ್ವಲ್ಪ ಭಾಗವನ್ನು ದೇವರಿಗೆ ಅರ್ಪಿಸಿ  ಸೇವಿಸುವುದೇ ಹಿಂದೂ ಧರ್ಮಾಚರಣೆಯಾಗಿದೆ. ಇದರಲ್ಲಿ ಹಣಕ್ಕಿಂತ ಮೊದಲು ಜ್ಞಾನವನ್ನು  ಹಂಚಿಕೊಂಡು 
ಬಾಳುವುದರಿಂದ  ಬಿದ್ದರೂ ಜೊತೆಗಿದ್ದವರು ಎತ್ತಲು ಬರುವರು.ಇಲ್ಲ ಎಲ್ಲಾ ನನಗೆ ಎಂಬಸ್ವಾರ್ಥ ದಲ್ಲಿ ಯಾರು  ಗಣಪತಿಯನ್ನಾಗಲಿ ಇತರ ದೇವತೆಗಳನ್ನಾಗಲಿ ಅತಿಯಾಗಿ ಆಳಿದರೆ ಸಂಕಷ್ಟ  ತಪ್ಪಿದ್ದಲ್ಲ ಎನ್ನುವ ಅರ್ಥದಲ್ಲಿ  ಹೊರಗಿನಿಂದ ಎಷ್ಟೇ ಕಾಡಿ ಬೇಡಿ ಪಡೆದರೂ  ನಮ್ಮ ಹಣೆ ಬರಹವನ್ನು  ಯಾರೂ ಅಳಿಸಲಾಗದೆನ್ನುವರು.
ಕಷ್ಟದಲ್ಲಿರುವವರಿಗೆ ಸಹಾಯ ಮಾಡಿದರೆ ಸಂಕಷ್ಟಹರ , ಇತರರಿಗೆ ಕಷ್ಟಕೊಟ್ಟಷ್ಟೂ ಕಷ್ಟ ಹೆಚ್ಚುವುದು. ದೇವರು ಸರ್ವಾಂತರ್ಯಾಮಿ ಆಗಿದ್ದರೂ ಕಷ್ಟ ಸುಖಗಳಿಗೆ‌ ಅವರವರು ದೈವ ತತ್ವವನ್ನು ಬಳಸಿಕೊಂಡಿಲ್ಲ.
ಕಷ್ಟಪಟ್ಟರೆ ಸುಖವಿದೆ, ಕಷ್ಟಪಡದೆ ಸುಖ ಗಳಿಸುವುದೆ  ಅಧರ್ಮ.  ಇದಕ್ಕೆ ಕಾರಣ ಅಜ್ಞಾನ. ಎಂದರೆ‌ ಗಣಗಳನ್ನು ಒಂದೆ ಸಮನಾಗಿ  ನಡೆಸುವವನು ಗಣಪತಿ.ಹೆಚ್ಚು ಪಡೆದರೆ ಹೆಚ್ಚು ಸಂಕಷ್ಟ . ಅತಿಯಾದರೆ ಗತಿಗೇಡು.
ಆನೆಯಂತಹ ದೈತ್ಯ ಪ್ರಾಣಿಯ ಆಹಾರ ಎಷ್ಟು ಸಾತ್ವಿಕವಾಗಿದೆ ಅದಕ್ಕೆ ಅದು ಶಾಂತವಾಗಿರುತ್ತದೆ. ಶಾಂತಿಯಿಂದ ಜ್ಞಾನ,  ಶಾಂತಿಯಿಂದ ದೈವತ್ವದ ದರ್ಶನ ಸಾಧ್ಯ. ಹಾಗೆ ಅದರ ಮುಖವಿರುವ ಗಣಪತಿಯ ಜ್ಞಾನ. ಸಂಪತ್ತು ಅಪಾರ ಅವನ ಜ್ಞಾನ ನಮಗಿದ್ದರೆ ಮಾತ್ರ ಅವನ ತಂದೆತಾಯಿಯ ಅಂದರೆ ಶಿವಶಕ್ತಿಯ ದರ್ಶನ.  ಅದಕ್ಕಾಗಿ ಪ್ರತಿಯೊಂದು ‌ಕಾರ್ಯದ ಮೊದಲು ಗಣಪತಿಯ ಅಪ್ಪಣೆ ಅಗತ್ಯ. ದೇವತೆಗಳ ಸರ್ಕಾರಕ್ಕೂ ಮಾನವರ ಸರ್ಕಾರಕ್ಕೂ ವ್ಯತ್ಯಾಸವಿಷ್ಟೆ.ದೇವತೆಗಳು ಧರ್ಮ ಹಾಗು ಸತ್ಯದ ಪರನಿಂತು  ಕಾಣದೆ ಸಹಕರಿಸುವರು, ಮಾನವರು ಅಧರ್ಮ, ಅಸತ್ಯಕ್ಕೆ ಸಹಕರಿಸಿ ಸಂಕಷ್ಟಕ್ಕೆ ಗುರಿಯಾಗುವರು. ರಾಜಕೀಯದಲ್ಲಿ ಅಸತ್ಯ ಅಧರ್ಮ ವೇ ಹೆಚ್ಚು, ಅದೇ ರಾಜಯೋಗದಲ್ಲಿ ಸತ್ಯ ಹಾಗು ಧರ್ಮ ವಿದೆ. ಅಂದರೆ ನಮ್ಮ ದೈವೀ ಸಂಪತ್ತನ್ನು ಸರಿಯಾಗಿ ಬಳಸಿಕೊಂಡು  ನಮ್ಮನ್ನು ನಾವು ಅರ್ಥ ಮಾಡಿಕೊಳ್ಳಲು ಕಷ್ಟವಿದ್ದರೂ ನಂತರ ಸುಖವಿದೆ ಎಂದರ್ಥ.
ಎಲ್ಲಿಯವರೆಗೆ  ಮಾನವರಿಗೆ  ಆಂತರಿಕ ಶಕ್ತಿಯ ಪರಿಚಯವಾಗದೆ  ಭೌತಿಕದ ರಾಜಕೀಯಕ್ಕೆ  ಸಹಕರಿಸುವರೋ ಅಲ್ಲಿಯವರೆಗೆ ಸಂಕಷ್ಟ ತಪ್ಪಿದ್ದಲ್ಲ
ವೆನ್ನಬಹುದು.

Sunday, February 5, 2023

ಸಾಹಿತ್ಯದಲ್ಲಿ ಸತ್ಯದ ಜೊತೆಗೆ ಧರ್ಮವಿರಬೇಕು

ನನ್ನ ಲೇಖನಿಯ ವಿಶೇಷವೇನಂದರೆ ಯಾವುದೇ ವಿಚಾರವಿರಲಿ ಅದು ನಮ್ಮ ವಾಸ್ತವ ಜೀವನದಲ್ಲಿ ಅನುಭವಕ್ಕೆ ಬರುವಂತಿರಬೇಕು ಸತ್ಯ ಹಾಗು ಧರ್ಮದ ಸಮಾನತೆ ,ಸಮಾಜದ ಲೋಪದೋಷಗಳ ಜೊತೆಗೆ ನಮ್ಮ ಲೋಪದೋಷಗಳ  ವಿವರಣೆ ಇರುತ್ತದೆ. ಕಾರಣ ನನ್ನ ಕ ಜೀವನದಲ್ಲಿ  ಅನುಭವಿಸಿದ   ಸತ್ಯವು  ಭೌತಿಕದ  ಹಲವು ಅಸಮಾನತೆಗೆ ಕಾರಣವಾಗಿರುವಾಗ ಸಮಾಜದ‌
ಮದ್ಯೆ‌ಇದ್ದು  ಅದರಲ್ಲಿನ ತಪ್ಪು ಸರಿ ಎನ್ನುವ ಹಕ್ಕು ಸ್ವಾತಂತ್ರ್ಯನಮಗಿದೆ ಎನ್ನುವ ದೃಷ್ಟಿಕೋನದಿಂದ ಲೇಖನಗಳು "ಪ್ರಜಾಪ್ರಭುತ್ವ ಮತ್ತು ಧರ್ಮ""ಮಾತೃಭಾಷಾ ಶಿಕ್ಷಣದ ಮಹತ್ವ","ರಾಜಕೀಯ ಮತ್ತು ಮಾದ್ಯಮ","ಆಧ್ಯಾತ್ಮ ಮತ್ತು ಆತ್ಮನಿರ್ಭರ ಭಾರತ"ದ  ಪುಸ್ತಕ ರೂಪ ಪಡೆದಿವೆ.
ವಿಪರ್ಯಾಸವೆಂದರೆ  ಭಾರತದಲ್ಲಿ ಸ್ತ್ರೀ ಯರ ಜ್ಞಾನಕ್ಕೆ  ಬೆಲೆ ಇಲ್ಲದ ರಾಜಕೀಯಕ್ಕೆ  ಭಾರತೀಯರೆ ಬಲಿಯಾಗಿರುವುದಾಗಿದೆ.
  ಭೂತದ ಬಾಯಲ್ಲಿ ಭಗವದ್ಗೀತೆ ಎಂದರೆ ಹೀಗೇ ಇರಬೇಕು.
ವಾಸ್ತವ ಸತ್ಯ ತಿಳಿಸಿದರೆ ನಮಗೇ ಅವಮಾನ ಕಾರಣ ನಾವು ವಾಸ್ತವದಲ್ಲಿ ‌ಬದುಕುತ್ತಿಲ್ಲ. ಪುರಾಣ,ಇತಿಹಾಸದ ರಾಜಕೀಯ ಇಟ್ಟುಕೊಂಡು  ಭವಿಷ್ಯ ನಿರ್ಮಾಣ ಮಾಡುವ ಕನಸಿನ ಭಾರತದಲ್ಲಿ  ನಿದ್ದೆ ಮಾಡುತ್ತಿರುವವರ ಹಿಂದೆ ನಡೆದು ಒಳಗೇ ಅಡಗಿದ್ದ ಸ್ವತಂತ್ರ ಜ್ಞಾನ‌ಕುಸಿದಿದೆ. ಈಗ ಹೊರಗೆ ಹೋರಾಟ,ಹಾರಾಟ,ಮಾರಾಟ ಮಾಡುತ್ತಾ  ಹಣಕ್ಕೆ, ಅಧಿಕಾರಕ್ಕೆ, ಸ್ಥಾನಮಾನಕ್ಕೆ  ಸ್ಫರ್ಧೆ ನಡೆಸಿದರೆ  ಒಳಗೆ ಸ್ವಚ್ಚ ವಾಗೋದಿಲ್ಲ. ಇನ್ನಷ್ಟು ಮಹಿಳೆ ಮಕ್ಕಳು ಹೊರಗೆ ಬಂದು ಮನೆ ಖಾಲಿ.ಆ ಖಾಲಿಜಾಗದಲ್ಲಿ ಖಾಲಿಸ್ಥಾನಿಗಳೇನಾದರೂ‌ ಬಂದರೆ ಮೇಲಿರುವ ಆ ದೇವರೂ ಏನೂ‌ಮಾಡಲಾಗದು.
ಹಾಗಾದರೆ ಪುರಾಣ ಇತಿಹಾಸ ಭವಿಷ್ಯದ ಅಗತ್ಯವಿಲ್ಲವೆ? 
ಇವುಗಳೇ   ಇಂದಿನ   ದುಸ್ಥಿತಿಗೆ ಕಾರಣವಾಗುವಂತಿದ್ದರೆ ಅಗತ್ಯವಿಲ್ಲ. ನಾನಿದ್ದೇನೆಂದರೆ ನನ್ನೊಳಗೇ ಜ್ಞಾನಶಕ್ತಿಯೂ ಇದೆ.ಸತ್ಯ ಧರ್ಮ ಗಳು ನನ್ನ ಮೂಲದಲ್ಲಿದ್ದರೆ ನನ್ನಲ್ಲಿ ಇರುತ್ತದೆ. ಇಲ್ಲವಾದಲ್ಲಿ ಇದನ್ನು ಹೊರಗಿನ ಗುರುವಿನಶಿಕ್ಷಣ ನೀಡಬೇಕು. ಯಾವುದೂ‌ ಸಿಗದಿದ್ದರೆ ಸ್ವತಂತ್ರ ಜ್ಞಾನವಿದೆ ಅದನ್ನು ಸದ್ಬಳಕೆಮಾಡಿಕೊಳ್ಳುವ‌ ಸರ್ಕಾರ ಬೇಕು.  ಎಲ್ಲವೂ ಇದ್ದರೂ  ನನ್ನ ಜೀವಕ್ಕೆ ಬೇಕಾದಷ್ಟು ಮಾತ್ರ ಪಡೆಯುವಂತಿದ್ದರೆ ಉತ್ತಮ.ಮಿತಿಮೀರಿದರೆ ನನಗೇ ಸಂಕಷ್ಟ. ಜನರನ್ನು ಆಳೋ ಮೊದಲು ನನ್ನ ನಾ ಆಳಿಕೊಳ್ಳಲು ಬೇಕಾದ ಜ್ಞಾನವಿರಬೇಕೆನ್ನುವುದಾಗಿದೆ. ಇದೇ ಇಂದಿನ. ಪ್ರಜೆಗಳ ಸಮಸ್ಯೆಗೆ ಕಾರಣ.ಮೂಲದ. ಜ್ಞಾನ. ಬಿಟ್ಟು ಹೊರಗಿನ‌ಜ್ಞಾನ ಒಳಗೆ ಹಾಕಿಕೊಂಡರೆ  ಒಳಗೆ ಸ್ವಚ್ಚ ಆಗಬಹುದೆ? ಕೂಡಿಕೊಂಡು ಬಾಳಬಹುದೆ? ಯೋಗವೆಂದರೆ ಸೇರುವುದು. ಪರಮ ಸತ್ಯದೊಂದಿಗೆ  ಪರಕೀಯರಸತ್ಯ ಹೊಂದಿಕೆಯಾಗವುದೆ? 
ಎಲ್ಲರನ್ನೂ ಒಗ್ಗೂಡಿಸಿಕೊಂಡು ಬದುಕಲು ನಮ್ಮ ತತ್ವಗಳು ಸಿದ್ದಾಂತಗಳು, ಧರ್ಮಗಳು  ಬೆಳೆದರೂ ಅದರ ಜೊತೆಗೆ ಸತ್ಯವೇ  ಇಲ್ಲವಾದರೆ  ಅಸಮಾನತೆಯ ರಾಜಕೀಯವಾಗಿ ತಂತ್ರದ  ಜೊತೆಗೆ ಕುತಂತ್ರವೂ ಬೆರೆತು ಸ್ವತಂತ್ರವಿಲ್ಲದ ಮಾನವನಿಗೆ ಅತಂತ್ರ ಜೀವನವೇ ಗತಿ.
 ಲೇಖನಗಳನ್ನು  ಬರೆಯುವಾಗ ಯಾರಿಗೂ  ಮನಸ್ಸಿಗೆ ನೋವಾಗದಂತೆ‌ ಇಳಿಸಬೇಕೆಂದುಕೊಂಡರೂ ಇಳಿಸಿದ ಮೇಲೆ  ಅದರಲ್ಲಿ ಸತ್ಯ ಧರ್ಮ ವಿದ್ದರೂ  ಹಲವರಿಗೆ ನೋವು ಆಗಬಹುದು.ಇದರಲ್ಲಿ  ನಾನೂ ಒಬ್ಬಳು .ಕಾರಣವಿಷ್ಟೆ ನನ್ನ ಉದ್ದೇಶ  ವಾಸ್ತವದಲ್ಲಿ ನಾವೆಲ್ಲರೂ ಎಲ್ಲಿ ತಪ್ಪಿರುವುದು ಎಂದು ತಿಳಿಯುವ ಪ್ರಯತ್ನ ವಷ್ಟೆ. ಪ್ರಜಾಪ್ರಭುತ್ವದ ಪ್ರಜೆಗೆ ಈ  ಅಧಿಕಾರ,ಅವಕಾಶವಿದೆ.ಆದರೆ ಇದು ಸಮಾಜದ ಜನತೆ ಕೊಡುವುದಿಲ್ಲ  ನಾವೇ  ಒಳಹೊಕ್ಕಿ ತಿಳಿಯಬೇಕಾದ ಅಧ್ಯಾತ್ಮ ಸತ್ಯ.ಆತ್ಮಾವಲೋಕನ ದಿಂದ ಆತ್ಮನಿರ್ಭರ ಭಾರತ ಎನ್ನಬಹುದಷ್ಟೆ. ಯಾರಲ್ಲಿ ಯಾವ ಮಹಾತ್ಮರಿರುವರೋ ಅಸುರರಿರುವರೋ  ಕಾಣದ‌ ಕುರುಡು ಜಗತ್ತಿನಲ್ಲಿ ಮಾನವ ನಡೆದಿರುವಾಗ ಅವರವರ ಕುರುಡುತನಕ್ಕೆ ಒಳಗಣ್ಣಿನ ಅಗತ್ಯವಿದೆ.ಇದನ್ನು ಎಲ್ಲಾ ಮಹಾತ್ಮರೂ ತಿಳಿಸಿದ್ದರೂ ನಾವು ಏನೂ ಹೆಸರು,ಹಣ,ಅಧಿಕಾರವಿಲ್ಲದೆ ಅದೇ ಸತ್ಯ ತಿಳಿಸಿದರೆ  ನಮ್ಮವರೆ ವಿರೋಧಿಗಳಾಗುತ್ತಾರೆಂದರೆ ನಮ್ಮವರೆ ನಮಗೆ ಶತ್ರುಗಳೆಂದರ್ಥ. ಮಾನವ ತನಗೆ ತಾನೇ ಮೋಸ ಹೋಗುವಷ್ಟು ಬೇರೆಯವರಿಂದ ಹೋಗುವುದಿಲ್ಲವಂತೆ.
ಆತ್ಮಸಾಕ್ಷಿಗೆ ವಿರುದ್ದ ನಡೆದಷ್ಟೂ ಮೋಸ ಹೋಗುವುದು ಸತ್ಯ . ಇದಕ್ಕಾಗಿ ಮಹಾತ್ಮರನ್ನು ದೇವರೆಂದರು.ದೈವತ್ವದೆಡೆಗೆ ಹೋಗಿ ಸೇರಿದರೆ ದೇವರಾಗುತ್ತಾರೆ.

 ಕಲಿಯುವವರೆಗೆ ಬ್ರಹ್ಮವಿದ್ಯೆ ಕಲಿತಮೇಲೆ ಕೋತಿ ವಿದ್ಯೆ ಎಂದಂತೆ ವಿದ್ಯೆಯನ್ನು  ದುರ್ಭಳಕೆ ಮಾಡಿಕೊಂಡರೆ ಅಧರ್ಮ. ಮಂಗನಿಂದ ಮಾನವನಾಗಿರೋದನ್ನು  ವಿಜ್ಞಾನ ತಿಳಿಸುತ್ತದೆ ಆದರೆ ದೇವರಿಂದ ಮಾನವನಾಗಿರೋದು ಅಧ್ಯಾತ್ಮ ತಿಳಿಸುತ್ತದೆ.ಇಲ್ಲಿ ವಿಜ್ಞಾನದ ಪ್ರಕಾರ ಮಾನವ ಮಂಗನಿಗಿಂತ ಹೆಚ್ಚು ಸಾಧನೆ ಮಾಡಿ ಮುಂದೆ ಬಂದಿದ್ದರೆ, ಅಧ್ಯಾತ್ಮದ ಪ್ರಕಾರ ದೇವರಂತಿದ್ದವರು  ಇಳಿಯುತ್ತಾ ಮಾನವನಾಗಿ ಸತ್ಯ ತಿಳಿಯಲು ಸೋತಿದ್ದಾನೆನ್ನಬಹುದು.
 ಓದಿ ತಿಳಿದವರಿಗೆ ಬಹಳ. ಬೇಗ ಹೆಸರು,ಹಣ,ಸ್ಥಾನ,
ಅಧಿಕಾರ,ಸನ್ಮಾನ ಸಿಗೋದಾದರೆ  ಅದರಲ್ಲಿನ ಸತ್ಯಾಸತ್ಯತೆಯನ್ನು ಯಾರೂ  ತಿಳಿಯಲು ಹೋಗದೆ ಹೊರಜಗತ್ತಿನಲ್ಲಿ ರಾಜಕೀಯ ಬೆಳೆಯುತ್ತದೆ. ಇದು  ಮನುಕುಲವನ್ನು  ದಾರಿತಪ್ಪಿಸಿ ಆಳಿದರೆ ಅದೇ ಅಸುರ
ಸಾಮ್ರಾಜ್ಯವಾಗುತ್ತದೆ. ಅಸುರರೊಳಗೇ ಸುರರಿರುವಾಗ ಯಾರು ಸ್ವತಂತ್ರ ರು? ಸಾಮಾನ್ಯಸತ್ಯವನ್ನು ಸಾಮಾನ್ಯರ ನಡುವಿದ್ದು,ಸಾಮಾನ್ಯಜ್ಞಾನವಿದ್ದವರಷ್ಟೇ ಗುರುತಿಸಿ ಅಳವಡಿಸಿಕೊಂಡು ಮಾನವರಾಗಿ  ನಂತರ ಮಹಾತ್ಮರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ. ಒಂದೂ ಕೆಳಗಿನ‌ ಮೆಟ್ಟಿಲು ಹತ್ತದವರಿಗೆ ನೇರವಾಗಿ ಮೇಲಿನ ವಿಚಾರ ತಲೆಗೆ ತುಂಬಿದರೆ  ಹುಚ್ಚರಾಗುತ್ತಾರೆ. ಮಕ್ಕಳ ಮುಗ್ಧ ಮನಸ್ಸಿಗೆ ಪ್ರಬುದ್ಧ ವಿಚಾರ ಮೊದಲೇ ತುಂಬಿದರೆ ಮುಂದೆ ಅವರನ್ನು ಆಳೋದು ದೇವರಲ್ಲ ಅಸುರರು.
ಇಲ್ಲಿ ಅತಿಯಾದ ಆತ್ಮವಂಚನೆಯೇ ಅಜ್ಞಾನವಾಗಿರುವಾಗ  ಅಜ್ಞಾನವನ್ನು ಬಂಡವಾಳ ಮಾಡಿಕೊಂಡವರು ವ್ಯವಹಾರ ನಡೆಸಿದರೂ ಆ ಹಣವೂ ಅಜ್ಞಾನದ ಸಂಪಾದನೆ. ಇದರಲ್ಲಿ ಧರ್ಮ ರಕ್ಷಣೆ ಮಾಡಬಹುದೆ? ಮಾಡಲು ಹೋದರೂ ಆ ಅಜ್ಞಾನವೇ ಹೆಚ್ಚುತ್ತದೆ.
 ಧಾರ್ಮಿಕ  ಪ್ರಗತಿಯ ಮೊದಲ ಮೆಟ್ಟಿಲೇ ಮಾನವನ ಸದ್ಗುಣ ಬೆಳೆಸಲು ಒಳಗಿರುವ ಅಸತ್ಯವನ್ನು ಹೊರಗಟ್ಟಿ ಸ್ವಚ್ಚ ಸಂಸ್ಕಾರದಿಂದ ಶುದ್ದಗೊಳಿಸುವ ಶಿಕ್ಷಣ ನೀಡುವುದು ಭಾರತೀಯ ಶಿಕ್ಷಣದ ಗುರಿಯಾಗಿತ್ತು. ಈಗ ಈ ಶಿಕ್ಷಣ ಯಾರ ವಶವಾಗಿದೆ? ಇದೆಯೇ? ಇದ್ದರೆ ಯಾರಲ್ಲಿದೆ? ಯಾವ ರೂಪ ಪಡೆದಿದೆ? ಯಾರ ಕೈಕೆಳಗಿದೆ? ಈ ವಿಚಾರ  ಪ್ರಜೆಗಳ ಕಣ್ಣಿಗೆ ಕಾಣಿಸದಷ್ಟು ಮುಚ್ಚಿಹೋಗುತ್ತಿದೆ.
ಒಟ್ಟಿನಲ್ಲಿ ಅಧಿಕಾರವಿದ್ದವರ ತಪ್ಪು ತಪ್ಪಲ್ಲ.ಅಧಿಕಾರ ಇಲ್ಲದವರ  ಸರಿ  ತಪ್ಪಾಗಿರುವುದು  ಭ್ರಷ್ಟಾಚಾರದ‌ ಹಾದಿ ಹಿಡಿದಿದೆ.
ಹಸಿದ ಹೊಟ್ಟೆಗೆ ಊಟ ಕೊಟ್ಟು  ಸಮಾಧಾನದಿಂದ ಅವರ ಸ್ಥಿತಿಗೆ ಕಾರಣ ತಿಳಿದು  ಹೃದಯವಂತಿಕೆಯ ಜ್ಞಾನದ ಮೂಲಕ  ಮೇಲಿರುವ ಪರಮಾತ್ಮನೆಡೆಗೆ‌ ನಡೆಸುವವರೆ ನಿಜವಾದ ಗುರುಗಳಾಗಿದ್ದರು. ಈಗ  ಎಲ್ಲಾ ಗುರುಗಳೇ ಶಿಷ್ಯರಿಲ್ಲದ ಸಮಾಜ.ಇಲ್ಲಿ ಯಾರು ಬೇಕಾದರೂ ಪುರಾಣ ಇತಿಹಾಸ ,ಹಿಂದಿನ ಕಥೆ ಓದಿ ತನ್ನದೇ ಹೆಸರಲ್ಲಿ ಬರೆದುಕೊಂಡು  ಪ್ರಚಾರ ಮಾಡಬಹುದು.ಆದರೆ ವಾಸ್ತವ ಸತ್ಯದ ಅರಿವಿಲ್ಲದೆ  ಜನರನ್ನು ಆಳಿದರೆ ಇದೇ ಅಧರ್ಮ ದ ಹಾದಿ ಹಿಡಿಯುತ್ತದೆನ್ನುವುದಷ್ಟೆ ಸರ್ವ ಕಾಲಿಕ ಸತ್ಯ.
ಶಂಖದಿಂದ ಬಂದದ್ದೆಲ್ಲಾ  ಸ್ವಚ್ಚ ತೀರ್ಥವಾಗಿದ್ದರೆ ಇಂದು ಅಸತ್ಯಕ್ಕೆ ಸ್ಥಾನವೇ ಇರುತ್ತಿರಲಿಲ್ಲ.   ತೀರ್ಥಕ್ಷೇತ್ರಗಳ ಸ್ವಚ್ಚತೆಗೆ ಕೋಟ್ಯಾಂತರ ರೂ ಬಳಸುವ ಮೊದಲು ಸ್ವಚ್ಚ ಶಿಕ್ಷಣ  ನೀಡಿದರೆ   ಉತ್ತಮ. ಇಂದು ಅಸತ್ಯಕ್ಕೆ ಹೆಚ್ಚಿನ ಸ್ಥಾನಮಾನ ಸಿಗುತ್ತಿರುವುದಕ್ಕೆ ಕಾರಣವೇನೆಂದರೆ  ನಮ್ಮ ಸಹಕಾರವಷ್ಟೆ.ಅಸತ್ಯಕ್ಕೆ ಕೊಡುವ ಸಹಕಾರ ಸತ್ಯಕ್ಕೆ ಕೊಡದೆ  ಅಧರ್ಮ ಬೆಳೆಯಿತು. ಧರ್ಮಹಿಂದುಳಿಯಿತು.
ಸತ್ಯದಜೊತೆಗೇ ಧರ್ಮ ವಿದ್ದರೆ ಮಾತ್ರ ಸಮಾನತೆ,ಶಾಂತಿ,
ತೃಪ್ತಿ ಮುಕ್ತಿ ಎನ್ನುವುದು ಸತ್ಯವಲ್ಲವೆ?
ಎಲ್ಲಾ ಓದುವರೆಂದು ನಾನು ಬರೆಯುವುದಿಲ್ಲ  ಬರೆಯುವುದು ಅನಿವಾರ್ಯ ಕರ್ಮ ನನದೂ.
ಓದುವವರಿಹರೆಂದು ನಾಬಲ್ಲೆ ಅದರಿಂದ ಬರೆಯುವೆನು ಮನಸ್ಸಾರೆ ಎಂದಿನಂತೆ ..ಯಾರು ಓದದಿದ್ದರೂ ನನಗಿಲ್ಲ ಚಿಂತೆ.ನನ್ನ ಆಂತರಿಕ  ಶಕ್ತಿಗೆ  ನಾನು ಕೊಡುವ‌ ಒಂದು  ಬೆಲೆ ಎಂದಾಗ  ಅವರವರ  ಆತ್ಮಶಕ್ತಿಯನ್ನು ಅವರವರೆ ತಿಳಿದು ಸದ್ಬಳಕೆ ಮಾಡಿಕೊಂಡು ಋಣಮುಕ್ತರಾಗಲು ಈಗಿನ ಪ್ರಜಾಪ್ರಭುತ್ವ  ಸ್ವಾತಂತ್ರ್ಯ ನೀಡಿತ್ತು. ಆದರೂ ಪರಕೀಯರ ಪರರ ರಾಜಕೀಯಕ್ಕೆ ಸಹಕರಿಸಿ  ಪರದೇಶವನ್ನೂ  ದೇಶದೊಳಗೆ ಸೇರಿಸಿಕೊಂಡು ಆಳುವ‌  ರಾಜಕೀಯ ದೇಶದ ಪ್ರಜೆಗಳ ಆತ್ಮದುರ್ಭಲಕ್ಕೆ ಕಾರಣವಾಗಬಾರದಷ್ಟೆ. 
ಆಗೋದೆಲ್ಲಾ ಒಳ್ಳೆಯದಕ್ಕೆ  ಎನ್ನಬಹುದಷ್ಟೆ. ಯಾರೂ ಯಾರ ಕರ್ಮ ವನ್ನು  ಮಾಡಿದರೂ  ಅದರಫಲ ಅವನ ಜೀವವೆ  ಅನುಭವಿಸುವಾಗ ನಮ್ಮ ಕರ್ಮಕ್ಕೆ ನಾವೇ ಕಾರಣರು. 

ಮಧ್ಯವರ್ತಿಗಳು, ಮಾಧ್ಯಮಗಳು, ಮಹಿಳೆ ಮಕ್ಕಳು  ಮನೆಯಿಂದ  ಹೊರಬಂದು ಎಷ್ಟೇ ಹಣಸಂಪಾದನೆ ಮಾಡಿ ಮನರಂಜನೆಯಲ್ಲಿದ್ದರೂ  ಮನಸ್ಸಿನ ಒಳಗಿರುವ  ಸ್ವಾರ್ಥ ಅಹಂಕಾರದ ಅಸುರರಿಂದ ಬಿಡುಗಡೆ ಪಡೆಯದೆ  ಜೀವನ್ಮುಕ್ತಿ ಪಡೆಯಲಾಗದೆನ್ನುವುದೆ  ಅಧ್ಯಾತ್ಮ ಸತ್ಯವಾಗಿತ್ತು.
 ಮಠ,ಮಂದಿರಗಳೇನೋ  ಬೆಳೆದಿದೆ  ಆದರೆ ಅದರೊಳಗಿನ ಸಂಪತ್ತು,ಹಣ,ಆಸ್ತಿಗಳು ದೇಶದ ಸಾಲವನ್ನಾಗಲಿ ಜನರ ಅಜ್ಞಾನವನ್ನಾಗಲಿ ತೀರಿಸಲಾಗದಿದ್ದರೆ  ಧರ್ಮ ವಾಗದು.‌
ಕೊಟ್ಟಿದ್ದು ತನಗೆ ಬಚ್ಚಿಟ್ಟದ್ದು ಪರರಿಗೆ ಎಂದಂತೆ ನಮ್ಮ ಜ್ಞಾನವನ್ನು ಸರಿಯಾಗಿ ಕೊಡದೆ ಆಸ್ತಿಯನ್ನು ಬಚ್ಚಿಟ್ಟು ಈಗ ಪರರು ಬೆಳೆದು ನಿಂತರು. ನಮ್ಮವರೆ ಹಿಂದುಳಿದರು.
ಆತ್ಮಾವಲೋಕನ ಭಾರತೀಯರಷ್ಟೆ ಅಲ್ಲದೆ ಮಾನವರು ಮಾಡಿಕೊಳ್ಳಲು ಹೊರಗಿನ ರಾಜಕೀಯ ಬಿಟ್ಟು  ಚಿಂತನೆ ನಡೆಸಬೇಕು. ರಾಜಕೀಯ ಜನರನ್ನು ಹೊರಗೆಳೆಧು
ಹೊಡೆಯುತ್ತಿದೆ. ಇದು  ಮನೆಯೊಳಗೆ ಇರೋವಾಗ ಹೊರಗಿನ ರಾಜಕೀಯ ಏನೂ ಮಾಡಲಾಗದು.ಇದಕ್ಕೆ ಕಾರಣವೇ ಅಜ್ಞಾನ.ಅಜ್ಞಾನವೆಂದರೆ  ತಿಳುವಳಿಕೆಯಲ್ಲಿರುವ ಅಸತ್ಯವೆನ್ನಬಹುದಷ್ಟೆ. ಏನೂ ಓದದಿರುವವರೂ ಜ್ಞಾನಿಗಳಾಗಬಹುದು. ಅರ್ಧ ಸತ್ಯ ಓದಿದವರಿಂದಲೇ ಸಮಸ್ಯೆ ಹೆಚ್ಚು. ಇವರು ಮಧ್ಯವರ್ತಿಗಳಾದರೆ  ಮನುಕುಲಕ್ಕೆ ಮಾರಕ.  ಎಚ್ಚರವಾಗದೆ  ಮಲಗಿದ್ದರೆ  ಸಾವೇನೂ ಬರುತ್ತದೆ. ಜ್ಞಾನ ಬರೋದಿಲ್ಲ. ಇದ್ದಾಗಲೇ  ಸತ್ಯಜ್ಞಾನದ ಕಡೆಗೆ  ನಡೆದವರು ಮಹಾತ್ಮರುಗಳು. ಯೋಗಿಗಳ ದೇಶವನ್ನು  ಸಾಲದೆಡೆಗೆ  ನಡೆಸುತ್ತಾ  ಭೋಗದ ಜೀವನದಲ್ಲಿ ಶ್ರೀಮಂತ ರಾದವರಿಗೆ  ಆತ್ಮನಿರ್ಭರ  ಎಂದರೆ ಅರ್ಥ ಆಗಲು ಕಷ್ಟ. ಇದು ತತ್ವದಲ್ಲಿತ್ತು  ತಂತ್ರದಲ್ಲಿರಲಿಲ್ಲ.

Friday, February 3, 2023

'ಓಂ'ಕಾರವೇ ಅಧ್ಯಾತ್ಮ ಸಾಧನೆಯ ಮೂಲಪದ

ಓಂ ಪದದಿಂದಲೇ  ಆತ್ಮೋನ್ನತಿ ಸಾಧ್ಯವೆನ್ನುವ ಹಿಂದೂ ಧರ್ಮವನ್ನು ರಕ್ಷಣೆ ಮಾಡೋದಕ್ಕೆ  ಎಷ್ಟೋ ವರ್ಷಗಳಿಂದಲೂ ಹೋರಾಟ,ಹಾರಾಟ,ಮಾರಾಟ ನಡೆದಿದೆ. ಇದಕ್ಕೆ ಕಾರಣ ಓಂ ಪದದಲ್ಲಿರುವ  ಮೂರು ಅಕ್ಷರದ ಮಹಿಮೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದಿರೋದೆನ್ನಬಹುದೆ? 
 ಏನು ಹೇಳಿದರೂ ತಪ್ಪನ್ನು ಹುಡುಕುವ ನಮಗೆ  ನಮ್ಮ ತಪ್ಪು ಕಾಣೋದಿಲ್ಲವೆನ್ನುವುದೂ ಸತ್ಯ. ಇಲ್ಲಿ ಹಿಂದಿನಿಂದಲೂ ನಡೆಸಿಕೊಂಡು ಬಂದಿರುವ ಎಲ್ಲಾ ಆಚರಣೆಯ ಮುಖ್ಯ ಉದ್ದೇಶ ಜ್ಞಾನಾರ್ಜನೆಯಾದರೆ ಆಂತರಿಕ  ಶುದ್ದಿ. ಧನಾರ್ಜನೆ ಆದರೆ ಭೌತಿಕ ಪ್ರಗತಿ.
 ಓಂ ಎನ್ನುವುದರಲ್ಲಿ ಅಡಗಿರುವ  ಮೂರಕ್ಷರ ಅ,ಉ,ಮ.ಇವು ಮಾನವನೊಳಗಿರುವ ಚಕ್ರಶುದ್ದಿ ಮಾಡುವ ಶಕ್ತಿ ಪಡೆದಿದೆ. ಏಳು  ಮುಖ್ಯಚಕ್ರಗಳಲ್ಲಿ ಮೂರು ಚಕ್ರ ಶುದ್ದಿ ಓಂ ಪದವನ್ನು ಮೂರಕ್ಷರದಿಂದ ಹೇಳುವುದರಿಂದ ಶುದ್ದಿ ಮಾಡಬಹುದೆಂದರೆ  ಆಶ್ಚರ್ಯ ವಾಗುತ್ತದಲ್ಲವೆ? ಇದನ್ನು ಜನಸಾಮಾನ್ಯರವರೆಗೆ  ತಿಳಿಸುವಲ್ಲಿ ನಮ್ಮ ಶಿಕ್ಷಣ ಹಿಂದುಳಿದು‌ ಹೊರಗಿನಿಂದ ಓ ಎಂದು ಕೂಗುವತ್ತ ನಡೆದಿರೋದು ದುರಂತ.
ಅ ಶಬ್ದ ದ ಉಚ್ಚಾರಣೆಯು  ಸ್ವಾಧಿಷ್ಠಾನ ಚಕ್ರದಿಂದ ಪ್ರಾರಂಭಿಸಿ, ಉ ಕಾರವು ಹೃದಯದ ಭಾಗ,ಎದೆಯ ಮದ್ಯೆ ಭಾಗದ. ಅನಾಹತ ಚಕ್ರಕ್ಕೆ ಬಂದು ನಂತರ ಮ ಕಾರದಿಂದ ಮೇಲಿರುವ ಸಹಸ್ರಾರ ಚಕ್ರದೆಡೆಗೆ ಸಾಗಿ‌ ಮುಗಿಸುವ  ದ್ಯಾನ
 ಮಾನವನ ಹೊಟ್ಟೆ ಭಾಗದ ಸ್ವಾಧಿಷ್ಠಾನ, ಎದೆ ಭಾಗದ ಅನಾಹತ, ತಲೆಭಾಗದ ಸಹಸ್ರಾರ ಚಕ್ರವನ್ನು ಶುದ್ದಗೊಳಿಸುವುವಾಗ ಹೊರಗಿನಿಂದ  ಎಷ್ಟೋ ಮಂತ್ರಶಕ್ತಿ  ಎಷ್ಟು  ಮಾನವನ ಆರೋಗ್ಯ ಹೆಚ್ಚಿಸಬಹುದು. ಮಂತ್ರದಿಂದ ಮಾವಿನ‌ಕಾಯಿ ಉದುರೋದಿಲ್ಲ ಎನ್ನುವುದನ್ನು  ಹರಡಿಕೊಂಡು  ಅದೇ ಮಂತ್ರ ತಂತ್ರವಾಗಿ ಬಳಸುತ್ತಾ ವ್ಯವಹಾರದಲ್ಲಿ ಯಂತ್ರದಂತೆ ದುಡಿದರೂ ಮಾನವನಿಗೆ ಸ್ವತಂತ್ರ ಜ್ಞಾನವಿಲ್ಲದೆ ಅತಂತ್ರಸ್ಥಿತಿಗೆ  ಬಂದಿರೋದಕ್ಕೆ ಕಾರಣ  ಸರಳವಾಗಿದ್ದ ಒಂದು ಪದವನ್ನು  ಸರಿಯಾದ ಮಾರ್ಗದರ್ಶನ ವಿಲ್ಲದೆ ಬಳಸಿ ,  ಇನ್ನಷ್ಟು ಸೇರಿಸಿಕೊಂಡು ಮುಂದೆ ಬಂದಂತೆಲ್ಲಾ ಮೂಲಾಕ್ಷರಕ್ಕೆ ದಕ್ಕೆಯಾಯಿತು.
ಇಲ್ಲಿ ತಿಳಿದವರಷ್ಟೆ ಮಂತ್ರವನ್ನು ಸರಿಯಾದ ಉಚ್ಚಾರಣೆಯಿಂದ  ಸದ್ಬಳಕೆ ಮಾಡಿಕೊಂಡಿದ್ದರೂ  ಅವರ ಹಿಂದೆ  ನಡೆದವರಿಗೆ ಅರ್ಥ ವಾಗದೆ ಮೂಲವನ್ನು ಬಿಟ್ಟು  ಹೊರಗಿನ ಮಂತ್ರವನ್ನು ತಂತ್ರವಾಗಿಸಿ ಯಂತ್ರ ದೆಡೆಗೆ ನಡೆದರು. ಇದನ್ನು ಕಾಲದ ಪ್ರಭಾವ ಎನ್ನಬಹುದು.ಆದರೆ ಮಾನವನಿಗೆ ಮುಕ್ತಿ ಮೋಕ್ಷದ ದಾರಿಯಲ್ಲಿ ನಡೆಯುವುದಕ್ಕೆ ಮೂಲದೆಡೆಗೆ  ಸಾಗಲೇಬೇಕು. ಅಡ್ಡದಾರಿಯಲ್ಲಿ ನಿಂತರೂ  ತಿರುಗಿ ಸೀದಾದಾರಿ ಹಿಡಿಯಲೇಬೇಕು.  ಓಂ ಕಾರಣದಿಂದಲೇ ಈ ಭೂಮಿ ನಡೆದಿದೆ ಎಂದು ಈಗಾಗಲೇ ವಿಜ್ಞಾನಿಗಳ ಸಂಶೋಧನೆ ತಿಳಿಸಿದೆ ಎಂದರೆ ಅದರ ಮೇಲಿರುವ ಮಾನವನೊಳಗೂ ಅದೇ ಶಕ್ತಿಯಿರುವಾಗ ಮೊದಲು ಇದರೊಂದಿಗೆ ಕೂಡಿಕೊಂಡು ನಂತರ ಹೊರಗಿನ ಇತರ  ಸದ್ವಿಚಾರವನ್ನು ಅಳವಡಿಸಿಕೊಂಡರೆ ಆತ್ಮಜ್ಞಾನ.
ಹೊಟ್ಟೆಯ ಭಾಗ ಸ್ವಾಧಿಷ್ಠಾನ ಚಕ್ರದ ದೇವತೆ ಪಾರ್ವತಿ ಮಾತೆ ಅನ್ನಪೂರ್ಣೆಯ ಮೂಲಕ ಹೃದಯವಂತಿಕೆಯ ಗುಣದ ಅನಾಹತ ಚಕ್ರ ಶುದ್ದಿಯಿಂದ ಮೇಲಿನ ಸಹಸ್ರಾರ ಚಕ್ರದ ನಟರಾಜನ ತಲುಪಬಹುದು.  ಅಂದರೆ  ಹಸಿದ ಹೊಟ್ಟೆಗೆ ಅನ್ನ ಕೊಟ್ಟು, ಹೃದಯವಂತಿಕೆಯ ಶಿಕ್ಷಣ ನೀಡಿ ಮೇಲಿರುವ ಜ್ಞಾನದೆಡೆಗೆ  ಮಾನವನ ನಡೆಸುವುದೇ ನಿಜವಾದ ಹಿಂದಿನ ಸನಾತನ  ಧರ್ಮವಾಗಿದೆ. ಕೇವಲ ಹೊಟ್ಟೆ ತುಂಬಿಸಿ ಸೋಮಾರಿಯಾಗಿಸಿ ಮಲಗಿಸಿದರೆ  ಮಾರಿಯ ದರ್ಶನ .
ಒಟ್ಟಿನಲ್ಲಿ ಹಿಂದೂ ಧರ್ಮದ ಸರಳವಾಗಿದ್ದ  ಸದ್ವಿಚಾರವನ್ನು  ಕ್ಲಿಷ್ಟವಾಗಿಸಿಕೊಂಡು ಹೊರಬಂದ ಅನೇಕ  ಆಚಾರ,ವಿಚಾರ,
ಪ್ರಚಾರಗಳು ಧರ್ಮದ ಮೂಲವನ್ನರಿಯದೆ  ಹಿಂದೆಯೂ ಹೋಗಲಾಗದೆ ಮುಂದೆ ನಡೆಯಲೂ ಆಗದ ತ್ರಿಶಂಕುಸ್ಥಿತಿಯಲ್ಲಿದೆ. 

ಕೆಲವರು ಇತ್ತೀಚೆಗೆ  ಜನಸಾಮಾನ್ಯರಿಗೆ  ಈ ಕುಂಡಲಿನೀ ದ್ಯಾನವನ್ನು ಹೇಳಿಕೊಡುವುದರ ಮೂಲಕ  ತಮ್ಮ ಆಂತರಿಕ ಶಕ್ತಿಯನ್ನು ಬೆಳೆಸಿಕೊಳ್ಳುವಲ್ಲಿ ಸಹಕರಿಸುತ್ತಿದ್ದಾರೆ. ಇದು ಶಾಲಾ ಕಾಲೇಜ್ ಮಟ್ಟಕ್ಕೆ ಬೆಳೆದರೆ ಉತ್ತಮ ಯೋಗದ ಮೂಲಕ ಭಾರತೀಯರ ಜ್ಞಾನಶಕ್ತಿ ಬೆಳೆಯುವುದು.ಹಿಂದಿನ ಭಾರತದ ಶಿಕ್ಷಣದಲ್ಲಿದ್ದ ಯೋಗ್ಯ ವಿಚಾರದ ಜೊತೆಗೆ ಆರೋಗ್ಯವನ್ನು ಹೆಚ್ಚಿಸುವ ಕೆಲಸ ಮಠ ಮಾನ್ಯಗಳು, ಸಂಘ,ಸಂಸ್ಥೆ ಗಳು, ಇನ್ನಿತರ  ಸಂಘಟನೆಗಳು ಒಟ್ಟಾಗಿ ಸೇರಿ
ಶೈಕ್ಷಣಿಕ ಕ್ಷೇತ್ರದಲ್ಲಿ  ಅಳವಡಿಸಿ ತಾವೂ ಸೇವೆ ಮಾಡುವುದರ ಮೂಲಕ ದೇಶ ಕಟ್ಟಲು ಮುಂದಾದರೆ ಆತ್ಮನಿರ್ಭರ ಭಾರತ ಸಾಧ್ಯ. 
ಇದನ್ನು ಒಂದು ಚೌಕಟ್ಟಿಗೇ ಸೀಮಿತವಾಗಿಟ್ಟು  ನಮ್ಮವರನ್ನೇ ದ್ವೇಷ ಮಾಡಿದಷ್ಟೂ ಪರಕೀಯರೆ ಬೆಳೆಯೋದು. ತಾರತಮ್ಯಕ್ಕೆ   ತಂತ್ರಜ್ಞಾನ ಬಳಸಿದರೆ ,ಒಗ್ಗಟ್ಟಿಗೆ ತತ್ವಜ್ಞಾನ.
ಯಾರ ದೇಹದಲ್ಲಿ ಯಾವ ಮಹಾತ್ಮನಿರುವರೋ ಯಾರಿಗೆ ಗೊತ್ತು. ಆತ್ಮಶಕ್ತಿಯನ್ನು  ಗುರುತಿಸದ ಶಿಕ್ಷಣ ಶಿಕ್ಷಣವೇ ಅಲ್ಲ.
ಮಾನ ಸನ್ಮಾನವು ಆತ್ಮಜ್ಞಾನದಿಂದ ಬೆಳೆದರೆ ಉತ್ತಮ. 

ಏನೂ ತಿಳಿಯದವರಿಗೆ ತಿಳಿಸಬಹುದು ಅರ್ಧ ತಿಳಿದವರಿಗೆ ಕಷ್ಟ. ಎಲ್ಲಾ ತಿಳಿದಿದೆ ಎನ್ನುವವರು ತಿಳಿಯಲು ಹೋಗೋದೆ ಇಲ್ಲ.  ಇದು ವಾಸ್ತವ ಸತ್ಯ. ಈ  ಲೇಖನವು ಮಾನವರಿಗೆ  ತನ್ನ ಒಳಗಿರುವ ಚಕ್ರವನ್ನರಿಯಲು ಸಹಾಯವಾಗಬಹುದು. ಇದಕ್ಕಾಗಿ ಹಂಚಿಕೊಂಡೆ. ಒಳಗಿನ ಚಕ್ರ ಶುದ್ದಿಯಾಗದೆ, ಹೊರಗಿನ ಆಚರಣೆಯು ಮಾನವನ ಕಾಲಿಗೆ ಚಕ್ರ ಕಟ್ಟಿಕೊಂಡು  ತಿರುಗಿಸುತ್ತಿದೆ. ಎಷ್ಟು ತಿರುಗಿದರೂ  ದೈಹಿಕ ಹಾಗು ಮಾನಸಿಕ ನೆಮ್ಮದಿ  ಸಿಗುವುದೆ?

Wednesday, February 1, 2023

ಸಾಧಕರಾಗುವುದು ಬೇಕೆ? ಯಾಕೆ? ಹೇಗೆ?

ಜೀವನದ ಸೋಲು ಗೆಲುವಿನ ನಡುವಿನ ಹೋರಾಟದಲ್ಲಿ ಸೋತವರು ಗೆಲ್ಲಲು ಬರುತ್ತಾರೆ.ಗೆದ್ದವರು ಮತ್ತೆ ಬಂದು ಸೋಲುತ್ತಾರೆ.
ಇದರರ್ಥ  ಜೀವನ ಒಂದು ತಾತ್ಕಾಲಿಕ ಜೀವದ ನಡಿಗೆಯಾಗಿರುತ್ತದೆ. ಒಬ್ಬ ವ್ಯಕ್ತಿ ಜೀವನದ ಮುಖ್ಯ ಗುರಿಯಕಡೆಗೆ ನಡೆದಂತೆಲ್ಲಾ  ಸೋಲುಗಳು ಬಂದರೂ ಮತ್ತೆ ಮತ್ತೆ ಅದೇ ಗುರಿಯ ಕಡೆಗೆ  ಎದ್ದು ಬಿದ್ದು ತಲುಪಿದಾಗ  ಜನ ಅವನನ್ನು ಗುರುತಿಸಿ  ಸನ್ಮಾನದಿಂದ ಮೇಲೆತ್ತಿದಾಗ  ತಾನು ಗುರಿ ತಲುಪಿದ ಮಹಾವ್ಯಕ್ತಿ ಎನ್ನುವ ಭಾವನೆಯಲ್ಲಿ ಮುಂದೆ ನಡೆದವರಿಂದ ಹಲವು ತಪ್ಪು ಗಳಾದರೂ ಜನ ಅದನ್ನು ಗುರುತಿಸಿದರೂ ಹೇಳೋದಿಲ್ಲ ಕಾರಣ ,ಅವನ ಹಿಂದಿನ ಶ್ರಮದ ಜೀವನ  ಚರಿತ್ರೆಯಾಗಿ ಜನರಲ್ಲಿ  ಉತ್ತಮ ಬಾವನೆಯಿರುತ್ತದೆ. ಆದರೆ, ಅವನ ತಪ್ಪು ಎತ್ತಿ ಹಿಡಿಯುವವರು ತಪ್ಪಿತಸ್ಥರಾಗುತ್ತಾರೆನ್ನಬಹುದು. 

ರಾಮಾಯಣ ಮಹಾಭಾರತದಂತಹ  ಪುರಾಣ ಕಥೆಗಳಲ್ಲಿ ಬರುವ ಪಾತ್ರಗಳಲ್ಲಿದ್ದ ಧಾರ್ಮಿಕ ತಾತ್ವಿಕ ವ್ಯಕ್ತಿತ್ವದ ಬಗ್ಗೆ ಮಾತನಾಡುವಾಗ ಬಹಳ ಎಚ್ಚರವಾಗಿರಬೇಕು. ಅಂದಿನ ರಾಜ ಪ್ರಭುತ್ವದ ಕ್ಷತ್ರಿಯ ಧರ್ಮ, ಧಾರ್ಮಿಕತೆಯನ್ನು ಮೀರಿ ನಡೆದಿರಲಿಲ್ಲ. ಹಾಗೆ ಈಗಿನ ಪ್ರಜಾಪ್ರಭುತ್ವದ ಪ್ರಜಾಧರ್ಮವು  ದೇಶದಿಂದ ವಿದೇಶದೆಡೆಗೆ ನಡೆದಿರುವಾಗ ಯಾರ ಧರ್ಮ ಶ್ರೇಷ್ಠ ಕನಿಷ್ಠ ಎನ್ನಬಹುದು?  ಸರ್ಕಾರದ ಸಾಧನೆಗೆ ಸಹಕರಿಸಿರುವ ಪ್ರಜೆಗಳಿಗೆ ಸಿಕ್ಕಿದ್ದು ಭ್ರಷ್ಟಾಚಾರ. ಹಾಗಾದರೆ ಭ್ರಷ್ಟಾಚಾರ ವನ್ನು ಬೆಳೆಸಿದ್ದೂ ಪ್ರಜೆಗಳೆ ಆದಾಗ ಯಾರನ್ನು ಸಾಧಕರೆನ್ನಬಹುದು? ಒಟ್ಟಿನಲ್ಲಿ ಕೋಟ್ಯಾಂತರ ರೂಗಳ ಕಾರ್ಯಕ್ರಮ  ಎಲ್ಲಾ ಕ್ಷೇತ್ರದಲ್ಲಿ ನಡೆಯುತ್ತಿದೆ.ಕೋಟ್ಯಾಂತರ ಜನ ಜೀವನವೂ  ಹಾಳಾಗಿದೆ. ಲಕ್ಷಾಂತರ ಸಾಧಕರು ಮರೆಯಾಗಿದ್ದಾರೆ. ದೇಶ ಮಾತ್ರ ಹಿಂದುಳಿದ ಸಂಖ್ಯೆಯಲ್ಲಿ ಮುಂದೆ ಬಂದಿದೆ. ಈ ಸಂಖ್ಯಬಲವು ರಾಜಕೀಯಕ್ಕೆ ಸಹಕರಿಸಿ ಇನ್ನಷ್ಟು ಅಜ್ಞಾನದಲ್ಲಿ  ಹೋಗುತ್ತಿದೆ. ಯಾವುದೇ ಆಗಲಿ ಅತಿಯಾದರೆ ಗತಿಗೇಡು .ಸರ್ಕಾರ ಇರೋದು ದೇಶ ಸೇವೆಗೆ, ಆದರೆ ಜನರಸೇವೆಯೇ ದೇಶಸೇವೆ ಎಂದರೆ ಜನರಲ್ಲಿ  ದೈವತ್ವ ವಿದೆಯೆ? ಅಸುರತ್ವವೆ? ಎರಡೂ  ನಮ್ಮೊಳಗೇ ಇದೆ.
ಯಾವುದರೆಡೆಗೆ ಹೋಗುವೆವೋ ಅದರ ವಶವಾಗುವುದು ಜೀವ. ಇದನ್ನು ಧಾರ್ಮಿಕ ವರ್ಗ ಅರ್ಥ ಮಾಡಿಕೊಂಡರೆ ಉತ್ತಮ  ರೀತಿಯಲ್ಲಿ ದೇಶ ಕಟ್ಟಬಹುದು. ವಿಪರ್ಯಾಸವೆಂದರೆ ನಮ್ಮವರಿಗೆ ಕೊಡಬೇಕಾದ ಧಾರ್ಮಿಕ ಶಿಕ್ಷಣದ ಕೊರತೆ  ಅಧರ್ಮ ವನ್ನು ಬೆಳೆಸಿ ಆಳಲು ಹೊರಟಿದೆ. ಇದು ಸಾಧನೆಯಾದರೆ ಎಲ್ಲಾ ಸಾಧಕರೆ.
ಪ್ರತಿಪಕ್ಷವೂ  ಜನರನ್ನು ಆಳುವುದಕ್ಕೆ  ಹೊರಟಿರೋದು  ಪ್ರಜಾಪ್ರಭುತ್ವದ ಧರ್ಮವಾಗುವುದೆ?
ಇಲ್ಲಿ ಸಮಾಜದ ದೃಷ್ಟಿಯಲ್ಲಿ   ಕಷ್ಟಪಟ್ಟು ಮೇಲೇರಿದವರ ತಪ್ಪು  ತಪ್ಪಾಗದಿದ್ದರೆ ಅದು ಜನರನ್ನು ಇನ್ನಷ್ಟು ತಪ್ಪಿದ ದಾರಿಗೆ ಎಳೆಯುವುದೂ ಸತ್ಯ. ಹೀಗಾಗಿ ತಪ್ಪು ಯಾರೇ ಮಾಡಿದರೂ ತಪ್ಪಾಗಿರುತ್ತದೆ. ಹೇಳಿದರೆ ಸರಿಪಡಿಸಿಕೊಳ್ಳಲು ಸಾಧ್ಯವಾದರೆ  ವ್ಯಕ್ತಿಯು ಇನ್ನಷ್ಟು ಉತ್ತಮ ವಾಗಿ ಬೆಳೆಯಬಹುದು.ಇದು ಮಕ್ಕಳು ಮಹಿಳೆಯರಿಗೆ ಅಗತ್ಯವಿದೆ.
ಹೀಗೇ ತಪ್ಪು ಮಾಡುತ್ತಾ ಹೋದರೂ ಯಾರೂ ತಿಳಿಸದೆ ಮುಂದೆ ನಡೆದ ಜೀವ ಒಮ್ಮೆ ಹೋಗುತ್ತದೆ. ತಿರುಗಿ ಬಂದಾಗ ಹಿಂದಿನ ಜನ್ಮದ ಆಸೆ ಆಕಾಂಕ್ಷೆಗಳು ಮತ್ತೆ ಜೀವಂತವಾಗೇ ಇರುವುದರಿಂದ ಅದೇ ಜೀವನವಾಗುತ್ತದೆನ್ನುವರು. ಅಂದರೆ ಹಿಂದಿನ ಜನ್ಮದ ಪಾಪ ಪುಣ್ಯಗಳ ಮಿಶ್ರಣವೇ ಜೀವನದ ಆಗು ಹೋಗುಗಳ ಮೂಲ. ಶ್ರೀ ಕೃಷ್ಣ ಪರಮಾತ್ಮ ತಿಳಿಸಿದಂತೆ
ಕೊನೆಕ್ಷಣದಲ್ಲಿ ಮಾನವನ  ಮನಸ್ಸು ಏನು ಚಿಂತಿಸಿ ಹೋಗುವುದೋ  ಅದೇ ಚಿಂತನೆಯು ಮುಂದಿನ ಜನ್ಮದ ಪ್ರಾರಂಭವಾಗಿರುತ್ತದೆ. ಮಕ್ಕಳಿಗೆ ಸಂಸ್ಕಾರ ಕೊಡುವ ಉದ್ದೇಶ ಇದೇ ಆಗಿತ್ತು.ಕೆಟ್ಟ ಶಕ್ತಿಯನ್ನು  ಹೊರಗೆ ಹಾಕಿ ಒಳ್ಳೆಯದನ್ನು ಸೇರಿಸುವುದೇ ಸಂಸ್ಕಾರದ ಉದ್ದೇಶ. ಈಗ ಸಾಕಷ್ಟು ಶಾಸ್ತ್ರ ಸಂಪ್ರದಾಯ, ಆಚರಣೆ, ಇನ್ನಿತರ ಕಾರ್ಯಕ್ರಮ  ನಡೆಸಿದರೂ ಅದರೊಳಗಿರುವ ನಕಾರಾತ್ಮಕ ಭಿನ್ನಾಭಿಪ್ರಾಯ, ದ್ವೇಷ, ಅಸೂಯೆಗಳ ಸಂಸ್ಕಾರವಾಗದೆ ಕಾಟಾಚಾರ, ಮೂಢನಂಬಿಕೆ ಹೆಚ್ಚಾಗಿ ದೈವತ್ವ ಕುಸಿದಿದೆ. ಸಾಧ್ಯವಾದರೆ ಆಚರಣೆಯು ಶುದ್ದ ಮನಸ್ಸಿನಿಂದ ಸರಳವಾಗಿ ಯಾವ ಸಾಲಮಾಡದೆ ನಡೆಸಿದರೆ ಅದು ಉತ್ತಮ ಜೀವನವಾಗಬಹುದು.ಒಗ್ಗಟ್ಟನ್ನು ಬೆಳೆಸಬೇಕಾಗಿದ್ದ ಆಚರಣೆಯು ರಾಜಕೀಯ ರೂಪ ಪಡೆದು ಬಿಕ್ಕಟ್ಟು, ಭಿನ್ನಾಭಿಪ್ರಾಯ ಬೆಳೆಸಿದರೆ ಸಾಧನೆಯಾಗದು. ಇದು ಧಾರ್ಮಿಕ , ಸಾಹಿತ್ಯಿಕ,ಶೈಕ್ಷಣಿಕ ಕ್ಷೇತ್ರದಲ್ಲಿ ಹೆಚ್ಚಾಗಿ ರಾಜಕೀಯದೆಡೆಗೆ  ಸಾಗಿದೆ.ನಮಗೆ ರಾಜಕೀಯ ಕ್ಷೇತ್ರವಷ್ಟೆ ಕಾಣೋದರಿಂದ ರಾಜಕಾರಣಿಗಳ ಹಿಂದೆ ನಿಂತಿರುವ ಮಧ್ಯವರ್ತಿಗಳು  ರಾಜಾರೋಷವಾಗಿ ಬೆಳೆದಿರೋದು   ಮಾನವನಿಗೇ  ನುಂಗಲಾರದ. ತುತ್ತಾಗುತ್ತಿದೆ.
ಸಾಮಾನ್ಯವಾಗಿ ನಾವೀಗ  ಪ್ರಜಾಪ್ರಭುತ್ವದ ದೇಶದಲ್ಲಿರುವ ಸಾಮಾನ್ಯಪ್ರಜೆಗಳಷ್ಟೆ ಆದರೂ ಕೆಲವರಿಗೆ  ಅತಿಯಾದ ಅಧಿಕಾರ, ಪುರಸ್ಕಾರ, ಕೆಲವರಿಗೆ ಅತಿಯಾದ ತಿರಸ್ಕಾರ .ಎಲ್ಲಾ ಒಂದೇ ಎನ್ನುವ ಪ್ರಚಾರವಷ್ಟೆ. ಇದರಲ್ಲಿ ಗೆದ್ದವರು  ಅಧಿಕಾರ ಪಡೆದು ಪುರಸ್ಕಾರಗಳಿಸುವವರೆನ್ನುವ ಭ್ರಮೆಯಲ್ಲಿ  ಜನಜೀವನ ಇದ್ದರೆ , ತಿರಸ್ಕಾರದಿಂದ  ಕಂಡ ವ್ಯಕ್ತಿಯೂ  ಒಮ್ಮೆ ಜೀವನದಲ್ಲಿ ಮೇಲೆದ್ದು ಪುರಸ್ಕಾರ ಪಡೆಯುತ್ತಾನೆ. ಅಂದಾಗ ಯಾವುದೂ ಯಾರೂ ಶಾಶ್ವತವಲ್ಲ. ಶಾಶ್ವತವಾಗಿರೋದು ಆತ್ಮ ಮಾತ್ರ.ಹೀಗಾಗಿ ಕಷ್ಟಪಟ್ಟು ಆತ್ಮಜ್ಞಾನದೆಡೆಗೆ ಹೋಗುವಾಗ  ಕೆಲವರಿಗೆ ಮದ್ಯೆ ಪುರಸ್ಕಾರ,ಅಧಿಕಾರ,ಸನ್ಮಾನಗಳು ಸಿಗುತ್ತದೆ ಆಗ ಅಲ್ಲಿಯೇ ನಿಂತು  ರಾಜಕೀಯಕ್ಕೆ ಇಳಿಯುವವರೂ ಹೆಚ್ಚು.ಆದರೆ ಕೆಲವರಿಗಷ್ಟೆ ಮೊದಲಿನಿಂದಲೂ ವಿರೋಧಗಳಿದ್ದು ಯಾವ ಸಹಕಾರವಿಲ್ಲದೆಯೇ  ಜೀವನದ ಸತ್ಯಾಸತ್ಯತೆಯನ್ನು ತಿಳಿಯಲು ಸಾಧ್ಯ. ಇವರು  ಜನರಿಗೆ ಹಣ ನೀಡುವ ಶ್ರೀಮಂತ ರಾಗದಿದ್ದರೂ  ಜ್ಞಾನ ನೀಡುವ ಗುರುವಾಗಿರೋದು ನಮ್ಮ ಸನಾತನ ಧರ್ಮದ  ಅಧ್ಯಾತ್ಮ ಸಾಧಕರಲ್ಲಿ ಮಾತ್ರ ಕಾಣಬಹುದು. ಪರಧರ್ಮದವರು ಹಣದಿಂದ ಜನರನ್ನು  ನಡೆಸಬಹುದೆನ್ನುವ ಭ್ರಮೆಯಲ್ಲಿ ಬದುಕಿದರೆ, ಹಿಂದೂ ಧರ್ಮದವರ  ಜ್ಞಾನವೇ ಜೀವನಕ್ಕೆ ಬಂಡವಾಳ. ಇದಿಲ್ಲದ ಹಣ ಅಜ್ಞಾನವನ್ನು ಬೆಳೆಸಿ ಭೌತಿಕ ಸಾಧನೆಗೆ  ಪ್ರೇರಣೆ ನೀಡಿ  ಸೋಲು ಗೆಲುವಿನ ಹೋರಾಟವು ನಿರಂತರವಾಗಿ ನಡೆಯುತ್ತಿರುತ್ತದೆ. ಯಾರೂ ಸೋತವರೂ ಇಲ್ಲ ಗೆದ್ದವರೂ ಇಲ್ಲ. ಎಲ್ಲರೂ ಒಂದೇ ಭೂಮಿಯಲ್ಲಿ  ಜನ್ಮ ಜನ್ಮದ ಫಲವನ್ನು ಅನುಭವಿಸುವ ಸಾಮಾನ್ಯರು ಮಾನವರು.
 ಸಾಧನೆ ಮಾಡೋದು ತಪ್ಪಲ್ಲ ಆ ಸಾಧನೆಯ ಮಾರ್ಗ ತಪ್ಪಾಗಬಾರದು. ಯಾರನ್ನೂ ಕಾಡಿ ಬೇಡಿ ಎಷ್ಟೇ ಸಾಧನೆ ಮಾಡಿದರೂ  ಅದೊಂದು ನಾಟಕವಾಗಿರುತ್ತದೆ. ಭಗವಂತನ ನಾಟಕದಲ್ಲಿ ಪಾತ್ರಧಾರಿಗಳಾಗಿರುವಾಗ  ಭಗವಂತನೆಡೆಗೆ ಹೋಗುವ ಮಾರ್ಗದಲ್ಲಿ ಸಾಧನೆ ಮಾಡಿದವರಿಗೇ ಸಿಗದ ಮೋಕ್ಷ ಹುಲುಮಾನವರ ನಾಟಕಕ್ಕೆ ಸಿಗುವುದೆ? 

ಭೂಮಿಯನ್ನು  ಸರಿಯಾಗಿ ಅರ್ಥ ಮಾಡಿಕೊಂಡು ಸೇವಾ ಮನೋಭಾವದಿಂದ  ಜೀವನ ನಡೆಸಿದವರು ಮಹಾತ್ಮರಾದರು. 
ತತ್ವಜ್ಞಾನದಲ್ಲಿ  ನಾಟಕಕ್ಕೆ  ಬೆಲೆಯಿಲ್ಲ.ತಂತ್ರಜ್ಞಾನದ ನಾಟಕಕ್ಕೆ ಬೆಲೆಹೆಚ್ಚು ಆದರೆ ಇದು ಸ್ಥಿರವಾಗಿರೋದಿಲ್ಲ.
 ಬ್ರಹ್ಮ ಪುರಾಣ,ವಿಷ್ಣು ಪುರಾಣ,ಶಿವಪುರಾಣಕ್ಕೆ ಕೊಡುವ ಸ್ಥಾನ ದೇವಿಪುರಾಣಕ್ಕೂ ಕೊಟ್ಟರೆ ಯಾವ ರಾಮಾಯಣ ಮಹಾಭಾರತ ಯುದ್ದ ನಡೆದಿದೆಯೋ ಅದಕ್ಕೆ ಕಾರಣ ತಿಳಿಯಬಹುದು.