ಯೋಗವೆಂದರೆ ಸೇರುವುದು ಕೂಡುವುದು ಒಂದಾಗುವುದು ಒಗ್ಗಟ್ಟು , ಏಕತೆ,ಐಕ್ಯತೆಯವರೆಗೂ ತಿಳಿದಾಗ ಭಗವದ್ಗೀತೆ ಸರಿಯಾಗಿ ಅರ್ಥ ವಾಗುತ್ತದೆ.ಧರ್ಮರಕ್ಷಣೆಗಾಗಿ ಕೂಡಿಕೊಳ್ಳುವವರು ಕೆಲವರು ಧರ್ಮ ಭಕ್ಷಣೆಗಾಗಿ ಸೇರುವವರು ಹಲವರಾದಾಗಲೇ ಅಯೋಗ್ಯರ ಸಂಖ್ಯೆ ಮುಗಿಲುಮುಟ್ಟುವುದು.
ಹಾಗಾದರೆ ಯೋಗವೆಂದಾಗ ವಿದ್ಯಾಯೋಗ, ಧನಕನಕಯೋಗ,ಮದುವೆಯೋಗ,ಮಕ್ಕಳಯೋಗ...
ಎಲ್ಲವನ್ನೂ ಪಡೆಯಲು ಯೋಗ್ಯ ಜ್ಞಾನದಿಂದ ಸಾಧ್ಯವಿದೆ ಆದ್ದರಿಂದ ಜ್ಞಾನಯೋಗವೇ ದೊಡ್ಡದು ಎಂದರು ಶ್ರೀ ಶಂಕರ ಭಗವತ್ಪಾದರು. ಜ್ಞಾನದಿಂದ ನಾನ್ಯಾರು ನನ್ನ ಕೆಲಸವೇನು ನನ್ನ ವ್ಯವಹಾರ ದಿಂದ ಸಿಗುವ ಲಾಭ ನಷ್ಟದ ಲೆಕ್ಕಾಚಾರದ ಹಿಂದಿರುವ ಋಣ ವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ.ಎಲ್ಲದ್ದಕ್ಕೂ ಮೂಲವೇ ಸತ್ಕರ್ಮ ಕರ್ಮ ಯೋಗದಿಂದ ಸಾಧ್ಯವಿದೆ ಎನ್ನಬಹುದು.
ಶಿಕ್ಷಣವೇನೂ ಇದೆ ಯೋಗಶಿಕ್ಷಣವಿಲ್ಲ.ಅಂದರೆ ಮಕ್ಕಳ ಒಳಗಿರುವ ಜ್ಞಾನಕ್ಕೆ ಪೂರಕವಾದ ಶಿಕ್ಷಣವಿಲ್ಲ.ಹೊರಗಿನ ಜ್ಞಾನಕ್ಕೆ ಶಿಕ್ಷಣ ನೀಡಿ ಒಳಗಿನ ಜ್ಞಾನ ಹಿಂದುಳಿದರೆ ಒಂದನ್ನೊಂದು ಸೇರದೆ ವಿರುದ್ದದ ಅಜ್ಞಾನ ಬೆಳೆಯುತ್ತದೆ.
ವಿದ್ಯೆಯಿಂದ ವಿನಯ ಮೂಡುವುದು ಇಂದಿನ ವಿಧ್ಯಾರ್ಥಿಗಳು ವಿನಯವಂತರೆ ಗಮನಿಸಿದರೆ ಪೋಷಕರು ಮನೆಯೊಳಗೆ ವಿನಯವಂತಿಕೆಯ ವಿಚಾರ ವಿಷಯ ಸಂಸ್ಕಾರ ಕಲಿಸಬಹುದು. ಇದು ವಿದ್ಯಾ ಯೋಗ .
ಮದುವೆಯೋಗ ಇಲ್ಲಿ ಹೆಣ್ಣು ಗಂಡಿನಗುಣಸಾಮ್ಯತೆಯೇ ಮುಖ್ಯವಾಗಿರುತ್ತದೆ ಹಣವಲ್ಲ. ಯಾವಾಗ ಹಣದ ಹಿಂದೆ ಸಂಬಂಧ ಕೂಡುವಿಕೆ ಹೆಚ್ಚಾಯಿತೋ ವಿಚ್ಚೇದನ ಗಳು ಬೆಳೆದವು. ಮದುವೆಯನ್ನು ಆಟದಂತೆ ಆಡುವುದಕ್ಕೆ ಕಾನೂನಿನಲ್ಲಿಯೇ ಅವಕಾಶವಿದ್ದರೆ ಮುಗಿಯಿತು ಕಥೆ. ಸ್ವೇಚ್ಚಾಚಾರಿಗಳ ಸಂತೆ ಅದಕ್ಕೆ ತಕ್ಕಂತೆ ಮಕ್ಕಳು ಮೊಮ್ಮಕ್ಕಳ ಕಂತೆ .
ಜ್ಞಾನವೆಂದರೆ ತಿಳುವಳಿಕೆ ಇದರಲ್ಲಿ ಸತ್ಯ ಅಸತ್ಯ ಎರಡೂ ಇದೆ. ಆಂತರಿಕ ವಾಗಿರುವ ಸತ್ಯಜ್ಞಾನದಿಂದ ನಾನ್ಯಾರೆಂಬ ಪ್ರಶ್ನೆಗೆ ಉತ್ತರ ತಿಳಿಯಲು ಸ್ವಯಂ ಪ್ರಕಾಶಕರಾಗಬೇಕಿದೆ .ಹೊರಗಿನಿಂದ ನಾನು ಬೇರೆಯಾಗಿ ಕಂಡರೂ ಒಳಗಿನಜಗತ್ತಿನಲ್ಲಿ ನಾನೆಂಬುದಿಲ್ಲ. ನನ್ನ ಭೂ ಋಣವನ್ನು ಸತ್ಕರ್ಮದಿಂದ ಸ್ವಾಭಿಮಾನ, ಸ್ವಾವಲಂಬನೆ ಸ್ವತಂತ್ರ ಬುದ್ದಿಯಿಂದ ತಿಳಿಯುವಾಗ ರಾಜಕೀಯದ ಹಂಗಿರದು. ಇದನ್ನು ನಮ್ಮ ಮಹಾತ್ಮರುಗಳು ನಡೆದು ನುಡಿದು ಯೋಗಿಗಳಾಗಿದ್ದರು. ಪರಮಾತ್ಮನ ಪರಮಸತ್ಯವ ಅರಿತು ಜೀವನ ನಡೆಸೋರನ್ನು ಯೋಗಿಗಳೆಂದರೆ ಸರಿಯಾಗಬಹುದಷ್ಟೆ.ಪರಮಾತ್ಮ ಇರೋದೆಲ್ಲಿ ? ಚರಾಚರದಲ್ಲಿಯೂ ಅಣು ಪರಮಾಣುಗಳ ರೂಪದಲ್ಲಿರುವ ಈ ಶಕ್ತಿಯ ಒಕ್ಕೂಟವೇ ಪರಮಶಕ್ತಿಯಾಗಿದೆ. ಇದನ್ನು ಸದ್ಬಳಕೆ ಮಾಡಿಕೊಂಡರೆ ಯೋಗ.ಭೋಗಕ್ಕೆ ದುರ್ಭಳಕೆ ಮಾಡಿಕೊಂಡರೆ ರೋಗ. ಇದನ್ನು ಯಾವ ಪುರಾಣ ಗ್ರಂಥ ತಿಳಿಸದಿದ್ದರೂ ಅಂದಿನಮಹಾತ್ಮರುಗಳು ಇದನ್ನರಿತು ನಡೆದ ಕಾರಣ ಭೂಮಿಯಲ್ಲಿ ಧರ್ಮ ರಕ್ಷಣೆಯಾಗಿತ್ತು.ಯಾವಾಗ ಅಸುರಿ ಶಕ್ತಿ ಇದನ್ನರಿಯದೆ ಭೂಮಿಯನ್ನು ದುರ್ಭಳಕೆ ಮಾಡಿಕೊಂಡರೋ ಆಗ ದೇವಾನುದೇವತೆಗಳ ಸಹಕಾರದಿಂದ ಯುದ್ದ ನಡೆದಿದೆ. ದೇವರು ಎಂದಾಗ ಒಳ್ಳೆಯದೆ ಕಾಣುವ ನಮ್ಮ ಮನಸ್ಸು ದೇವರಂತ ಮನಸ್ಸು. ಅದೇ ಮನಸ್ಸು ಕೆಟ್ಟದ್ದೇ ಬಯಸಿದರೆ ಅಸುರಿ ಮನಸ್ಸು.
ಮಾನವನ ಮನಸ್ಸೇ ಎಲ್ಲದ್ದಕ್ಕೂ ಕಾರಣವೆನ್ನುವುದು ಸತ್ಯ.
ಆತ್ಮಾನುಸಾರ ಸತ್ಯ ಧರ್ಮವನರಿತವರು ಭೂಮಿಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವೆಂದರೆ ಇದು ಯೋಗಿಗಳಿಗೆ ಸಾಧ್ಯವಾಗಿತ್ತು. ಅಂದರೆ ಎಲ್ಲರಲ್ಲಿಯೂ ಯೋಗವಿದೆ ಅದರ ಬಗ್ಗೆ ಸತ್ಯಜ್ಞಾನವಿಲ್ಲ.ಇದಕ್ಕೆ ಕಾರಣವೇ ಯೋಗ್ಯ ಶಿಕ್ಷಣದ ಕೊರತೆ. ಎಷ್ಟೇ ಭಗವದ್ಗೀತೆ ಓದಿದರೂ ಯೋಗ ಶಿಕ್ಷಣ ಕೊಡದಿದ್ದರೆ ಮಕ್ಕಳು ಯೋಗ್ಯಪ್ರಜೆಯಾಗೋದು ಕಷ್ಟವಿದೆ.
ಭಗವಂತನು ಎಲ್ಲರ ಹೃದಯ ಶ್ರೀಮಂತಿಕೆಯಲ್ಲಿರುವಾಗ ಹೃದಯಹೀನರ ವಶದಲ್ಲಿದ್ದು ಶ್ರೀಮಂತರಾದರೆ ಹಣಬಂದರೂ ಜ್ಞಾನ ಬರದಲ್ಲವೆ?
2.ಗೀತಾಜಯಂತಿ
ಗೀತಾಜಯಂತಿಯ ಶುಭಾಶಯಗಳು. ಭಗವದ್ಗೀತೆಯ ಕುರಿತು ಚಿಂತನೆ ನಡೆಸುವಾಗ ಅದರಲ್ಲಿದ್ದ ಯೋಗಶಕ್ತಿಯನ್ನು ಅರ್ಥ ಮಾಡಿಕೊಳ್ಳುವುದು ಅಗತ್ಯವಾಗಿದೆ. ಯೋಗದಿಂದಲೇ ಪರಮಾತ್ಮನ ದರ್ಶನ. ಪರಮಾತ್ಮ ಜೀವಾತ್ಮನ ಸೇರುವಿಕೆಯೇ ಯೋಗ. ಹಾಗಾದರೆ ಇದಕ್ಕೆ ಇರುವ ಮಾರ್ಗದಲ್ಲಿ ಜ್ಞಾನಯೋಗ, ರಾಜಯೋಗ,ಭಕ್ತಿಯೋಗ ಕರ್ಮ ಯೋಗ ಇಂದಿನ ಪರಿಸ್ಥಿತಿಗೆ ಕಾರಣ ಮತ್ತು ಪರಿಹಾರವನ್ನು ಒಳಗಿನಿಂದ ಕೊಡಬಹುದೇ ಹೊರತು ಹೊರಗಿನಿಂದ ಕಷ್ಟವಿದೆ. ಮನಸ್ಸಿನ ಯುದ್ದ ಕ್ಕೂ ಮನುಷ್ಯನ ಯುದ್ದಕ್ಕೂ ವ್ಯತ್ಯಾಸವಿದ್ದರೂ ಯುದ್ದದಿಂದ ಮನಸ್ಸು ಸತ್ತರೆ ವೈರಾಗ್ಯ ಬರಬಹುದು ಮನುಷ್ಯ ಸತ್ತರೆ ಜನ್ಮಪಡೆಯಲೂ ಬಹುದು.
ಹೀಗಿರುವಾಗ ಭಗವಂತನ ಗೀತೆಯನ್ನು ಸರಿಯಾದ ಮನಸ್ಸಿನಿಂದ ಅರ್ಥ ಮಾಡಿಕೊಂಡರೆ ಮನುಷ್ಯ ಮಹಾತ್ಮನಾಗಿ ಹೋಗಬಹುದಷ್ಟೆ. ಹೊರಗಿನಮನಸ್ಸು ಕೆಟ್ಟಾಗ ಯಾವ ಗೀತೆಯ ಒಳಾರ್ಥ ತಿಳಿಯದೆ ವಿರೋಧ ಹೆಚ್ಚಾದರೆ ನಷ್ಟ ನಮಗೇ .ಎಷ್ಟು ಅಧ್ಯಾತ್ಮ ಸತ್ಯದ ವಿರುದ್ದ ರಾಜಕೀಯ ಬೆಳೆಸಿದರೂ ಮನುಷ್ಯ ಅಸುರರಾಗುವುದು ಸತ್ಯ. ಹಿಂದಿನ ರಾಜರ ಕಾಲದ ಧರ್ಮ ದ ಪ್ರಕಾರ ಪ್ರಜೆಗಳ ಸುಖಕ್ಕಾಗಿ ರಾಜ ಧರ್ಮ ನಿಷ್ಠನಾಗಿದ್ದರೆ ಪ್ರಜೆಗಳೂ ಧರ್ಮ ಕ್ಕೆ ತಕ್ಕಂತೆ ಕರ್ಮ ಮಾಡಿ ಸಮಾಜ ರಾಜ್ಯ ಲೋಕವೂ ನಡೆಯುತ್ತಿತ್ತು.
ಈಗ ರಾಜಪ್ರಭುತ್ವ ವಿಲ್ಲವಾದರೂ ರಾಜಕೀಯತೆ ಮನೆ ಮಾಡಿ ಮನುಷ್ಯನಮನಸ್ಸು ಹೊರಗುಳಿದಿದೆ ಒಳಮನಸ್ಸಿನ ಕಥೆ ಕೇಳೋರಿಲ್ಲವಾಗಿದೆ. ಒಳಗೇ ಕುದಿಯುತ್ತಿರುವ ದ್ವೇಷದ ಕಿಡಿ ಹೊರಗೆ ತಂದು ಹರಡುವ ಮಂದಿಗೆ ಭಗವಂತನ ಇರುವಿಕೆಯನ್ನು ನಂಬಲಸಾಧ್ಯವಾದರೂ ನಂಬಿದವರ ಪಾಲಿಗೆ ಇದ್ದೇ ಇದ್ದಾನೆ. ಆ ನಂಬಿಕೆಯೂ ತಮ್ಮ ದೈಹಿಕ ಸುಖಕ್ಕಾಗಿ ಹೆಚ್ಚಾದರೆ ಇದರಲ್ಲಿ ಯೋಗವಿರದು ಭೋಗವೇ ಇರೋದು. ಭೋಗದಿಂದ ಭಗವಂತನ ಕಾಣೋದಕ್ಕೆ ಕಷ್ಟ.
ಹೀಗಾಗಿ ಹಣವಿದ್ದರೂ ಶಾಂತಿ ನೆಮ್ಮದಿಯ ಕೊರತೆ.ಎಲ್ಲಿ ಪರಮಾತ್ಮನಿರುವನೋ ಅಲ್ಲಿ ಶಾಂತಿಯಿರುತ್ತದೆ ಎಂದಾಗ ಪರಮಾತ್ಮನ ಇರುವಿಕೆಯನ್ನು ಕಂಡುಕೊಳ್ಳಲು ಶಾಂತಿಯಿಂದ ಒಳಗಿರಬೇಕು. ಸಾಧ್ಯವೆ? ಸಾಲದ ಮಿತಿ ಮೀರಿದಾಗ ಪರರ ಸಾಲವನ್ನು ತೀರಿಸಲು ಪರಕೀಯರ ಸೇವೆ ಅಗತ್ಯ. ಸೇವೆಯಲ್ಲಿ ಸ್ವಾರ್ಥ ಅಹಂಕಾರ ಅಪೇಕ್ಷೆ ನಿರೀಕ್ಷೆಗಳು ಬೆಳೆದಂತೆಲ್ಲಾ ಮತ್ತಷ್ಟು ಗೊಂದಲ ಕಳವಳ ಕಲಹದ ಮನಸ್ಸು ತಿಳಿಯೋದು ಅಸತ್ಯ ಅನ್ಯಾಯ ಅಧರ್ಮಕ್ಕೆ ಕಾರಣವೇ ದೇವರೆಂದು. ದೇವರನ್ನು ಬಿಟ್ಟು ಹೊರಬಂದರೆ ಮುಗಿಯಿತು ಕಥೆ. ನಿರಾಕಾರ ಪರಮಾತ್ಮನ ಸೇರೋದೆಂದರೆ ಒಳಗಿರುವ ಜೀವಾತ್ಮನ ಸಂಸ್ಕಾರ ಅಗತ್ಯ.
ಸಂಸ್ಕಾರವಿಲ್ಲದೆ ಕಂಡದ್ದೇ ಸತ್ಯವೆಂದು ತಿಳಿದು ತಿಂದರೆ ಆರೋಗ್ಯ ಹಾಳಾಗುತ್ತದೆ.ಹಾಳಾದ ದೇಹದೊಳಗೆ ಸೂಕ್ಮವಾಗಿರುವ ಆತ್ಮನ ಕಾಣೋದಕ್ಕೆ ಮನಸ್ಸಿನಿಂದ ಕಷ್ಟ.
ಯೋಗದ ಪ್ರಕಾರ ಮನಸ್ಸು ಆತ್ಮಾನುಸಾರ ನಡೆದಾಗ ಒಳಗಿನಕಲ್ಮಶಯುಕ್ತ ವಿಚಾರಗಳಲ್ಲಿ ಅಡಗಿರುವ ಅಸತ್ಯ ಅನ್ಯಾಯ ಅಧರ್ಮ ಕ್ಕೆ ಕಾರಣವಾಗಿರುವ ಹೊರಗಿನ ತಂತ್ರದ ರಾಜಕೀಯದ ಉದ್ದೇಶ, ದುರುದ್ದೇಶ ಎರಡೂ ಅರ್ಥ ವಾಗುತ್ತಾ ಭಗವಂತನೆಡೆಗೆ ಹೋಗುವ ದಾರಿ ಒಳಗೇ ಕಾಣುತ್ತದೆ. ಇದಕ್ಕಾಗಿ ಯಾವ ಅಧಿಕಾರ ಹಣ ಜಾತಿ ಧರ್ಮದ ಬಗ್ಗೆ ಚಿಂತನೆ ಮಾಡದೆ ಮಹಾತ್ಮರುಗಳು ಸ್ವತಂತ್ರ ಬುದ್ದಿ ಜ್ಞಾನದಿಂದ ಒಳನಡೆದು ಅಧ್ಯಾತ್ಮ ಸಾಧಕರಾಗಿದ್ದರು.
ಭೌತಿಕದ ಸಾಧನೆಗಾಗಿ ಪುಸ್ತಕದ ವಿಷಯ ಮಸ್ತಕದವರೆಗೆ ತಂದು ಹೊರಹಾಕಬಹುದು.ಅದರಲ್ಲಿನ ತತ್ವ,ಸತ್ವ ಸತ್ಯಕ್ಕೆ ತಲೆಬಾಗದೆ ಹೃದಯ ವೈಶಾಲ್ಯತೆಯಿಂದ ದೂರವಾಗುತ್ತಾ ಒಳಗೆ ದ್ವೇಷ ಬೆಳೆದಂತೆಲ್ಲಾ ಅಧರ್ಮ ಕ್ಕೆ ಬಲಬಂದು ಮನುಷ್ಯರನ್ನು ಅಸುರರು ಆಳುವರು.ದೈವತ್ವಕ್ಕೆ ರಾಜಕೀಯ ಬೇಡ.ಅದರಲ್ಲೂ ಸ್ವತಂತ್ರ ಭಾರತದಲ್ಲಿ ಪ್ರಜೆಗಳ ಸ್ವತಂತ್ರ ಜ್ಞಾನಕ್ಕೆ ಸರಿಯಾದ ಶಿಕ್ಷಣವಿದ್ದರೆ ಗೀತೆಯೊಳಗಿರುವ ತತ್ವದರ್ಶನ ಯೋಗದರ್ಶನ ಸಾಧ್ಯವೆನ್ನುವರು. ಯೋಗಿಗಳ ದೇಶ ರೋಗಿಗಳ ದೇಶ ಮಾಡಿಕೊಂಡು ಹೊರಗಿನ ಔಷಧಕ್ಕೆ ಹಣಸುರಿದರೆ ಒಳಗಿರುವ ಜ್ಞಾನ ಬೆಳೆಸುವುದು ಕಷ್ಟ. ಒಟ್ಟಿನಲ್ಲಿ ಭಗವದ್ಗೀತೆ ಯನ್ನು ಪಠ್ಯಪುಸ್ತಕ ಕ್ಕೆ ಸೇರಿಸಲು ಪೋಷಕರೆ ವಿರೋಧಿಸಿದರೆ ಧರ್ಮ ಗ್ರಂಥವಾಗಲು ಸಾಧ್ಯವೆ? ಗ್ರಂಥಕ್ಕೆ ಪೂಜೆ ಮಾಡಿದರೆ ಪುಣ್ಯ ಬರುತ್ತದೆ ಎಂದರೆ ಅದನ್ನು ಅರ್ಥ ಮಾಡಿಕೊಂಡು ನಡೆಯಲು ಸಾಧ್ಯವಾದರೆ ಜ್ಞಾನೋದಯವಾಗುತ್ತದೆ. ಜ್ಞಾನಯೋಗವಿಲ್ಲದೆ ಕರ್ಮ ಯೋಗ ಸಿದ್ದಿಸುವುದೆ? ಕರ್ಮ ಯೋಗವಾದರೂ ಸತ್ಕರ್ಮ ವಾಗಿರಬೇಕಲ್ಲವೆ? ಯಾರದ್ದೋ ಕೈಕೆಳಗೆ ದುಡಿಯುವುದು ತಪ್ಪಲ್ಲವಾದರೂ ಅಧರ್ಮಿಗಳ ಪರಧರ್ಮಿಗಳ ವಶದಲ್ಲಿ ದುಡಿದು ಸತ್ಕರ್ಮ ಸ್ವಧರ್ಮ ಸ್ವಾಭಿಮಾನ ಸ್ವತಂತ್ರ ಜ್ಞಾನ ಸಂಪಾದನೆ ಮಾಡಬಹುದೆ?
ಹಣದಿಂದ ಪುಸ್ತಕ ಖರೀದಿಸಿ ಓದಬಹುದು. ಆದರೆ ಹಣದ ಮೂಲ ಮುಖ್ಯವಾಗಿರುವುದು. ಎಷ್ಟೇ ಪರಕೀಯರು ದೇಶಕ್ಕೆ ವಿರುದ್ದ ನಿಂತು ಜನರನ್ನು ದಾರಿತಪ್ಪಿಸಿದರೂ ದೇಶದ ಋಣ ತೀರಿಸಲು ಯೋಗಮಾರ್ಗ ಅಗತ್ಯವಾಗಿದೆ ಎನ್ನುವ ಸಂದೇಶ ಭಗವದ್ಗೀತೆ ತಿಳಿಸುತ್ತದೆ. ಅಂದಿನ ಧರ್ಮ ಯುದ್ದ ದಾಯಾದಿಗಳ ನಡುವೆ ನಡೆದಿದ್ದರೂ ಸೋತವರು ಗೆದ್ದವರು ಒಂದೇ ದೇಶದ ನೆಲದ ಮೇಲಿನ ಋಣ ತೀರಿಸಲಾಗಿತ್ತು.
ಈಗಲೂ ಇದೇ ನಡೆದಿದೆ ಜೀವ ಇರೋವರೆಗೆ ಹೋರಾಟ ಹೋದ ಮೇಲೆ ಏನಿರುತ್ತದೆ? ಹೋದವರನ್ನು ತಿರುಗಿ ಎಳೆದು ತಮ್ಮ ಬೇಳೆ ಬೇಯಿಸಿಕೊಳ್ಳುವ ಮಾರಾಟವಾದರೆ ಇದರಲ್ಲಿ ಹಣದ ಲಾಭವಿದ್ದರೆ ಜ್ಞಾನದ ನಷ್ಟವೂ ಇರುತ್ತದೆ. ಒಟ್ಟಿನಲ್ಲಿ ಮಾನವ ಮಧ್ಯವರ್ತಿ ಯಾಗಿ ಅರ್ಧ ಸತ್ಯದಲ್ಲಿ ನಿಂತು ಈ ಕಡೆ ದೇವರು ಆಕಡೆ ಅಸುರರ ವಶದಲ್ಲಿರೋವಾಗ ಯೋಗ .ಒಳ್ಳೆಯವರೊಂದಿಗೆ ಸತ್ಯದೊಂದಿಗೆ ಧರ್ಮ ದಿಂದ ಒಂದಾಗಿದ್ದರೆ ಒಳ್ಳೆಯ ಯೋಗ.ಇಲ್ಲವಾದರೆ ಕೆಟ್ಟಯೋಗ ಎನ್ನಬಹುದೆ?
ಆಂತರಿಕವಾಗಿರುವ ಆತ್ಮಜ್ಞಾನದಿಂದ ತಿಳಿಯುವ. ಸತ್ಯವೇ ಬೇರೆ ಯೋಗ.ಭೌತಿಕದ ಸತ್ಯದ ಯೋಗವೇ ಬೇರೆ ಎಂದಾಗ ಭಗವಂತನಿಗೆ ಎರಡೂ ಒಂದೇ ನಾಣ್ಯದ ಎರಡು ಮುಖ.
ಭೂಮಿಯ ಒಂದು ಭಾಗದ ಜನರಿಗೆ ಕತ್ತಲಾದಾಗ ಇನ್ನೊಂದು ಭಾಗದಲ್ಲಿ ಬೆಳಕಿರುತ್ತದೆ.ನಂತರ ಕತ್ತಲು ಬಂದೇ ಬರುತ್ತದೆ. ಆದರೆ ಜ್ಞಾನದ ನಂತರ ಇವೆರಡೂ ಬೆಳಕಿನೆಡೆಗೆ ನಡೆದಿರುತ್ತದೆಯಾದರೂ ಹೊರಗೆ ಹುಡುಕಿದರೆ ಸಿಗದು.
ದಾರಿಯಾವುದಯ್ಯ ವೈಕುಂಟಕ್ಕೆ? ಕುಂಟು ನೆಪಹಿಡಿದು ಹೊರಟವರಿಗೆ ಕುಂಟುತ್ತಲೇ ಇರಬೇಕು. ಯಾವುದೋ ಒಂದು ಜನ್ಮದಲ್ಲಿ ಸ್ಥಳ ತಲುಪಬಹುದು.ಪ್ರಯತ್ನ ನಮ್ಮದು ಫಲ ಭಗವಂತನದು. ಶ್ರೀ ಕೃಷ್ಣನು ಅರ್ಜುನನಿಗೆ ಕೊನೆಯಲ್ಲಿ ಹೇಳಿದ್ದು ಇಷ್ಟೆ.ಎಲ್ಲಾ ತಿಳಿಸಿದ ಮೇಲೆ ನಿನ್ನಿಚ್ಚೆಯಂತೆ ನೀ ನಡೆ ಎಂದು. ಆಗೋದನ್ನು ತಡೆಯಲಾಗದು ಯಾಕೆ ಆಗುತ್ತಿದೆ ಎಂದು ಯೋಗದಿಂದ ತಿಳಿದಾಗಲೇ ಮುಕ್ತಿ.
3.ಮಾನವ ಮಹಾತ್ಮನಾಗೋದು ಹೇಗೆ?
ಮಾನವನಿಗೆ ಆತ್ಮಜ್ಞಾನ ಹೆಚ್ಚಾದಂತೆ ಇನ್ನೊಬ್ಬರನ್ನು ನೋಡಿ ಪಾಠ ಕಲಿಯುವನು, ಅದಕ್ಕಿಂತ ಕೆಳಗಿನವನು ಇನ್ನೊಬ್ಬರ ಮಾತನ್ನು ಅರ್ಥ ಮಾಡಿಕೊಂಡು ನಡೆಯುವನು,ಅದಕ್ಕಿಂತ ಕೆಳಗಿನವನು ಇನ್ನೊಬ್ಬರು ಹೇಳೋವರೆಗೂ ಕಾದು ಸರಿಯಾಗುವನು, ಅದಕ್ಕಿಂತ ಕೆಳಗಿನವನು ಹೇಳಿಕೇಳಿ ನೋಡಿಯೂ ಪಾಠ ಕಲಿಯದೆ ಇರುವನು. ಒಟ್ಟಿನಲ್ಲಿ ಹೊರಗಿನಿಂದ ಕಲಿಕೆಯು ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಇದನ್ನು ಹೇಗೆ ಅರ್ಥ ಮಾಡಿಕೊಂಡರೆ ಯಾವ ಜ್ಞಾನ ಬರುವುದೆನ್ನುವುದು ಅವರವರ ಅನುಭವಕ್ಕೆ ಬಿಟ್ಟ ವಿಚಾರ. ಹಿಂದಿನವರಲ್ಲಿದ್ದ ಸತ್ಯಜ್ಞಾನಕ್ಕೂ ಈಗಿನವರ ಮಿಥ್ಯಜ್ಞಾನ ಕ್ಕೂ ವ್ಯತ್ಯಾಸವಿದ್ದರೂ ಎರಡರ ಅಂತರದಲ್ಲಿ ಸಾಮಾನ್ಯ ಜ್ಞಾನ ಎಲ್ಲರಲ್ಲಿಯೂ ಅಡಗಿದೆ. ಮೊದಲು ಅದರಿಂದ ಸತ್ಯಾಸತ್ಯತೆ ಅರ್ಥ ಮಾಡಿಕೊಳ್ಳಲು ಕಲಿತರೆ ಸಾಮಾನ್ಯರಂತಿದ್ದರೂ ಅಸಮಾನ್ಯ ಸತ್ಯವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವೆನ್ನುವ ಸಂದೇಶವನ್ನು ನಮ್ಮ ಮಹಾತ್ಮರುಗಳು ತಮ್ಮ ನಡೆ ನುಡಿಯಿಂದಲೇ ತಿಳಿಸಿದ್ದಾರೆ.
ಮಹಾತ್ಮರ ಹೆಸರಿನಲ್ಲಿ ರಾಜಕೀಯ ನಡೆಸಿ ಹಣ ಅಧಿಕಾರ ಸ್ಥಾನಮಾನ ಕ್ಕಾಗಿ ಹೋರಾಟ ಹಾರಾಟ ಮಾರಾಟಕ್ಕೆ ಇಳಿದರೆ ಮಹಾತ್ಮರ ತತ್ವ ಕಾಣೋದಿಲ್ಲ.ಮಾನವನ ತಂತ್ರವೇ ಕಾಣೋದು. ತಂತ್ರದಿಂದ ಸ್ವತಂತ್ರ ಜ್ಞಾನ ಸಿಗೋದಿಲ್ಲ ಇದು ಸತ್ಯ. ಪ್ರತಿಯೊಬ್ಬರೊಳಗೂ ಅಡಗಿರುವ ಒಂದು ವಿಶೇಷ ಶಕ್ತಿ ಸ್ವತಂತ್ರ ವಾಗಿ ಬೆಳೆದಿದ್ದರೆ ಈ ಅತಂತ್ರಸ್ಥಿತಿಗೆ ಸ್ಥಳ ವೇ ಇರುತ್ತಿರಲಿಲ್ಲ. ಇಂದಿನ ಬಡವ ಮುಂದಿನ ಶ್ರೀಮಂತ ನಾಗಬಹುದು. ಇಂದಿನ ಜ್ಞಾನಿ ಮುಂದೆ ಅಜ್ಞಾನಿಯಾಗಲಾರ.
ಆದರೆ ಜ್ಞಾನವನ್ನು ದುರ್ಭಳಕೆ ಮಾಡಿಕೊಂಡರೆ ಅಜ್ಞಾನ.
ಸಾದು ಸಂತ ದಾಸ ಶರಣ ಮಹಾತ್ಮರನ್ನು ಬೆಳೆಸುವ ಅಗತ್ಯವಿಲ್ಲ ಅವರಂತೆ ನಡೆಯುವುದು ಅಗತ್ಯವಾಗಿತ್ತು ಹಿಂದೂ ಧರ್ಮ ವು ವ್ಯಕ್ತಿಯನ್ನು ನೋಡಿ ಮುಂದೆ ನಡೆದಿಲ್ಲ ಆತ್ಮಶಕ್ತಿಯಿಂದ ಮುಂದೆ ನಡೆದಿತ್ತು. ಈಗಿನ ರಾಜಕೀಯ ವ್ಯಕ್ತಿಯ ಅಧಿಕಾರ ಹಣ ಸ್ಥಾನದ ಮೇಲಿದೆ ಎಂದರೆ ಧರ್ಮ ಯಾವುದು? ಪರಕೀಯರನ್ನು ದ್ವೇಷ ಮಾಡುವವರೆ ಅವರ ಬಂಡವಾಳ ಸಾಲ ವ್ಯವಹಾರದಲ್ಲಿ ಮುಳುಗಿರುವಾಗ ಸತ್ಯ ಯಾವುದು? ನಮಗೆ ನಾವೇ ವೈರಿಗಳಾಗಿರುವಾಗ ಹೊರಗಿನ ವೈರಿಗಳ ಅಗತ್ಯವಿಲ್ಲ.
.
———————————————
* ನುಡಿ ಮುತ್ತುಗಳು:-
——————————
ಒಂದು ಕೆಲಸ ಯಶಸ್ವಿಯಾಗಬೇಕಾದರೆ, ಆ ಕೆಲಸ ಮಾಡುವವರು ಮೊದಲು ಅದನ್ನ ಪ್ರೀತಿಸಬೇಕು.**
**ಆಕಸ್ಮಿಕವಾಗಿ ಏನೂ ಆಗುವುದಿಲ್ಲ.ನಿಮ್ಮ ಕ್ರಿಯೆಯಿಂದ ನಿಮ್ಮ ಸ್ವಂತ ಹಣೆಬರಹವನ್ನು ನೀವು ರಚಿಸುತ್ತೀರಿ.ಆದ್ದರಿಂದ ನಿರ್ಧಾರ ತೆಗೆದುಕೊಳ್ಳುವಾಗ ಜಾಗರೂಕರಾಗಿರಿ .**
*ತಲೆಯ ಮೇಲಿನ ಭಾರವನ್ನು ಹೊರೆ ಎಂದುಕೊಂಡರೆ ಇಳಿಸಿಬಿಡಬೇಕೆನ್ನಿಸುತ್ತದೆ,
ಜವಾಬ್ದಾರಿ ಎಂದು ತಿಳಿದರೆ ಹೊರಲು ಪ್ರೇರಣೆಯಾಗುತ್ತದೆ.*
**ತಪ್ಪುಗಳಿಂದ ಪಾಠ ಕಲಿಯಬಹುದು .ಹೌದು ಹಾಗೆಂದು ಪಾಠ ಕಲಿಯಲೆಂದೇ ತಪ್ಪು ಮಾಡಬಾರದು.**
**ಯಾವುದೇ ಎತ್ತರದ
ಸ್ಥಾನಕ್ಕೇರಿದರೂ ಸಮಯ ಬಂದಾಗ ಕೆಳಗಿಳಿಯಲೇಬೇಕು.ಹಕ್ಕಿ ಕೂಡ ಎಷ್ಟೇ ಎತ್ತರದಲ್ಲಿ ಹಾರಾಡುತ್ತಿದ್ದರೂ ಬಾಯಾರಿದಾಗ ನೀರು ಕುಡಿಯಲು ಕೆಳಗಿಳಿಯಲೇಬೇಕು.ಎತ್ತರ ಸ್ಥಾನ ಶಾಶ್ವತವಲ್ಲ.ಹೃದಯ ಸ್ಥಾನ ಶಾಶ್ವತ**
**ಸಮಯಕ್ಕೆ ತಕ್ಕಂತೆ ನಿಮ್ಮನ್ನು
ಒಳ್ಳೆಯವರು ಅಥವಾ ಕೆಟ್ಟವರು
ಎಂದು ನಿರ್ಧರಿಸುವವರ ಜೊತೆ ಹೆಚ್ಚು ಸಮಯ ಕಳೆಯುವದನ್ನು ನಿಲ್ಲಿಸಿ.**
**The Sea is Same for all But Some Find PEARLS,Some find Fishes and Some Just Find their Feet Wet. LiFE is Common for All But We can only get what We Try For.**
**A Very Simple Theory for Your PEACE of MIND, do not try to Understand Everything.*
**IN LIFE,You Cannot Control anything around You,But, You can definitely Control Everything Inside You.**
**Do not Struggle to make your Presence Noticed.Just make your Absence Felt.**
**Courage isn’t having the strength to go on, it is going on when you don’t have the strength.**
- Napoleon Bonaparte -
**Your bad time is a litmus test to know the values of your Friends. Real friends don't have to speak to or see each other daily to remain in each other's hearts always.
It is better to have a friend who lends his shoulders when you cry, than a friend who comes forward to hold your hand in good times.
We never lose friends .We simply learn who the real ones are.**
**Whole World is in need of light; India alone has that Light.**
- Swamy Vivekananda -
**THE THINGS WE DO WITH ANGER WILL END UP WITH REPENTANCE.*
**AT THE SAME TIME IF WE TALK SENSIBLY AND HEARTFULLY, EVEN OUR ENEMIES WILL BE CONVINCED AND BECOME FRIENDS.**
4 ಅಸುರರೊಳಗಿರುವ ಸುರರು
.ಒಂದು ಸೂಕ್ಮವಾಗಿರುವ ಅಧ್ಯಾತ್ಮ ಸತ್ಯ ಗಮನಿಸಿದರೆ ಭಗವಂತ ಮಾನವನಿಗೆ ಪಾಠ ಕಲಿಸುವುದಕ್ಕೆ ಅಸುರರೊಳಗೆ ಸುರರನ್ನು,ಸುರರೊಳಗೆ ಅಸುರರನ್ನು ಹಿಡಿದು ಆಟವಾಡಿಸಿ ಕೊನೆಗೆ ಸುರರನ್ನು ಗೆಲ್ಲಿಸೋದಾಗಿರತ್ತೆ.ಆದರೆ ಮಾನವನಿಗೆ ಸುರರತತ್ವ ಅಸುರರ ತಂತ್ರವನ್ನು ಗಮನಿಸುವ ಜ್ಞಾನ ಬೇಕಷ್ಟೆ. ಇಲ್ಲವಾದರೆ ಎಲ್ಲರಲ್ಲಿಯೂ ಅಡಗಿರುವ ಅಸುರ ಶಕ್ತಿ ಜಾಗೃತವಾಗಿ ಜೀವ ಹೋದರೂ ಸತ್ಯ ತಿಳಿಯದು. ಇದನ್ನೇ ಮಾಯೆ ಎಂದರು. ಯಾರೂ ಶಾಶ್ವತವಲ್ಲ ಯಾವುದೂ ಸ್ಥಿರವಲ್ಲ ಆದರೂ ಹೋರಾಟ ಹಾರಾಟ ಮಾರಾಟಕ್ಕೆ ಬೆಲೆ ಹೆಚ್ಚು. ಇದು ಕೂಡ ಭಗವಂತನ ಆಟ. ಹಾಗಾದರೆ ಭಗವಂತನಿರೋದೆಲ್ಲಿ ಎಂದರೆ ಚರಾಚರದಲ್ಲಿರುವ ಅಣುರೇಣುತೃಣಕಾಷ್ಟದೊಳಗೇ ಸೂಕ್ಮವಾಗಿರುವ ಶಕ್ತಿ.ಸೂಕ್ಮ ಶಕ್ತಿಯನ್ನು ಕಣ್ಣು ನೋಡದೆ ಪ್ರತಿಕ್ಷಣ ಅನುಭವಿಸುತ್ತಿದ್ದರೂ ನಾನೇ ಬೇರೆ ನೀನೇ ಬೇರೆ ಎನ್ನುವ ದ್ವಂದ್ವವೇ ದ್ವೇಷವಾಗಿ ಬದಲಾದಾಗ ಸುರಾಸುರರ ಕಾಳಗ ನಡೆದಿರೋದನ್ನು ಪುರಾಣ ತಿಳಿಸಿದೆ. ದೇವತೆಗಳು ಮಾಡಿದ್ದನ್ನೇ ಅಸುರರು ಮಾಡಿದರೆ ತಪ್ಪೇನು? ಎನ್ನುವ ಪ್ರಶ್ನೆ ಎದ್ದಾಗ ದೇವತೆಗಳು ಆತ್ಮಕ್ಕೆ ಬೆಲೆಕೊಟ್ಟು ಸತ್ಯ ಧರ್ಮದ ಪರವಿದ್ದರೆ ಅಸುರರು ದೇಹಕ್ಕೆ ಬೆಲೆಕೊಟ್ಟು ಅಧರ್ಮ ಅಸತ್ಯದಿಂದ ಭೂಮಿಯನ್ನು ಆಳುವರಷ್ಟೆ ವ್ಯತ್ಯಾಸ.
ಈಗಲೂ ಪಕ್ಷ ಪಕ್ಷಗಳ ನಡುವೆ ನಡೆದಿರುವ ರಾಜಕೀಯದ ಆಟದಲ್ಲಿ ಜನರನ್ನು ಯಾರು ಯಾವ ದಿಕ್ಕಿನಲ್ಲಿ ನಡೆಸಿದ್ದಾರೆಂದು ಸೂಕ್ಮವಾಗಿ ಗಮನಿಸಿದರೆ ದೇಶದ ಪರ ನಿಂತವರಿಗಿಂತ ದೇಶದ ವಿರುದ್ದ ನಿಂತವರಿಗೇ ಸಹಕಾರ ಹೆಚ್ಚು. ಕಾರಣ ವಿದೇಶದ ಸಾಲ ಬಂಡವಾಳ, ವ್ಯವಹಾರದಿಂದ ಸಾಕಷ್ಟು ಹಣದ ಹರಿವು ಒಳಗಾದರೂ ಅದನ್ನು ತೀರಿಸಲು ಪ್ರಜೆಗಳೇ ಕಷ್ಟಪಟ್ಟು ದುಡಿಯಲೇಬೇಕೆಂಬುದು ಅಧ್ಯಾತ್ಮ ಸತ್ಯ.ಹೀಗಾಗಿ ಅದರ ಬದಲಾಗಿ ನಮ್ಮ ನಮ್ಮ ಮೂಲ ಧರ್ಮ ಕರ್ಮ ದೆಡೆಗೆ ಹಿಂದಿರುಗಿ ಸ್ವತಂತ್ರವಾಗಿ ದುಡಿದು ಸೇವೆ ಮಾಡಿದವರ ಸಾಲ ಇದ್ದಲ್ಲಿಯೇ ತೀರಬಹುದು.ಇದಕ್ಕಾಗಿ ವಿದೇಶದವರೆಗೆ ಹೋಗುವ ಅಗತ್ಯವೇ ಇರೋದಿಲ್ಲ ಎಂದಾಗ ಆತ್ಮನಿರ್ಭರ ಭಾರತ. ಇದನ್ನು ಒಪ್ಪದವರು ವಿರೋಧಿಸಿ ಪಕ್ಷ ತೊರೆದರೆ ದೇಶ ಒಂದೇ ಇರೋದು.ದೇಶದ ಸಾಲ ತೀರಿಸಲು ದೈವತತ್ವ ಅಗತ್ಯವಿದೆ. ಒಗ್ಗಟ್ಟು ಏಕತೆ,ಐಕ್ಯತೆ,ಸಮಾನತೆಯ ಮಂತ್ರ ಹೇಳೋದು ಸುಲಭ ಅದರಂತೆ ನಡೆಯದಿದ್ದರೆ ತಂತ್ರದಿಂದ ಅತಂತ್ರಜೀವನ. ಒಟ್ಟಿನಲ್ಲಿ ಎಲ್ಲರಲ್ಲಿಯೂ ದೇವಾಸುರರ ಗುಣವಿದೆ ಎಂದಾಗ ದೇವರನ್ನು ಬೇಡೋರಲ್ಲಿ ದೈವಸಂಪತ್ತಿದೆ ಎಂದರ್ಥ ವಲ್ಲ. ಸಂಪತ್ತು ಸತ್ಯ ಜ್ಞಾನದಿಂದ ಸಂಪಾದಿಸಿದರೆ ದೈವಶಕ್ತಿ ಹೆಚ್ಚುವುದು. ಅಸತ್ಯದಿಂದ ಸಂಪಾದಿಸಿದರೆ ಅಸುರಿಶಕ್ತಿ ಹೆಚ್ಚುವುದಷ್ಟೆ ವ್ಯತ್ಯಾಸ. ದೇವರಿರೋದೆಲ್ಲಿ? ಸತ್ಯದಲ್ಲಿ ಧರ್ಮ ದಲ್ಲಿ. ಸತ್ಯ ಒಂದೇ ಅದು ನಮ್ಮೊಳಗೇ ಇರುವ ಆತ್ಮಸಾಕ್ಷಿಯಾಗಿದೆ. ಯಾವಾಗ ಮಾನವ ಅಸತ್ಯದಿಂದ. ಮುಂದೆ ನಡೆಯುವನೋ ಸತ್ಯ ಹಿಂದೆ ಉಳಿದು ಅರ್ಥ ವಾಗದಷ್ಟೆ.ಹಾಗಂತ ಸತ್ಯ ಒಳಗಿಲ್ಲ ಎಂದಲ್ಲ ಇದ್ದರೂ ಅರ್ಥ ವಾಗದಷ್ಟು ಅಸತ್ಯ ಒಳಗಿದೆ ಎಂದಾಗುತ್ತದೆ. ಹಾಗಾಗಿ ಜಗತ್ತನ್ನು ಮಿಥ್ಯ ಎಂದರು.ಬ್ರಹ್ಮ ಸತ್ಯ ಎಂದರು.ಬ್ರಹ್ಮ ಕಣ್ಣಿಗೆ ಕಾಣದು ಜಗತ್ತು ಕಾಣುತ್ತದೆ ಆದರೂ ಶಾಶ್ವತವಲ್ಲ.ಬದಲಾಗುವ ಜಗತ್ತಿನಲ್ಲಿ ಬ್ರಹ್ಮಜ್ಞಾನ ಹುಡುಕಲಾಗದು.ಹೀಗಾಗಿ ಒಳಗಿನಜಗತ್ತನ್ನು ಒಳಗೇ ಹುಡುಕಿಕೊಳ್ಳಲು ಯೋಗದೆಡೆಗೆ ನಡೆದರು. ಯೋಗವೆಂದರೆ ಆಸನವಲ್ಲ ಸೇರುವುದು ಕೂಡುವುದು ಒಂದಾಗುವುದು.
ಪರಮಾತ್ಮನ ಜೀವಾತ್ಮ ಒಂದಾಗಲು ಒಳಗಿನ ಸತ್ಯ ಧರ್ಮ ದಿಂದ ಕೂಡಿಕೊಳ್ಳುವುದೇ ಯೋಗ.
ಹೊರಗಿನ ಸತ್ಯ ಧರ್ಮ ದ ಬೇಧಭಾವದಲ್ಲಿ ಕೂಡುವುದು ಕಷ್ಟ ಹಾಗಾಗಿ ನಾವು ಪುಣ್ಯದ ಕೆಲಸ ಮಾಡಿ ಕೂಡಬೇಕು
ಪಾಪದ ಕೆಲಸ ಕಳೆದು ನಡೆಯಬೇಕು, ಜ್ಞಾನವನ್ನು ಗುಣಿಸಿಕೊಂಡು ಅಜ್ಞಾನವನ್ನು ಭಾಗಿಸಿಕೊಳ್ಳುವ ಲೆಕ್ಕಾಚಾರದ ವ್ಯವಹಾರದಲ್ಲಿ ಸತ್ಸಂಗ ಸಂಘಟನೆಗಳನ್ನು ಸೃಷ್ಟಿ ಮಾಡಿದರೆ ಸ್ಥಿತಿಯೂ ಉತ್ತಮ ಮುಕ್ತಿಯೂ ಸುಗಮ.
ಇಲ್ಲಿ ಲೆಕ್ಕಾಚಾರದಲ್ಲಿ ಕೇವಲ ಹಣ ಮಾತ್ರ ಕಾಣುತ್ತಾ ಅಜ್ಞಾನ ಅಧರ್ಮ ಅನ್ಯಾಯ ಭ್ರಷ್ಟಾಚಾರ ವಿದ್ದರೂ ಸರಿ ನಾನು ಬೆಳೆಯಬೇಕೆಂದರೆ ಒಳಗಿರುವ ಜ್ಞಾನ ಕುಸಿಯುತ್ತಾ ಜೀವ ಹೋಗುತ್ತದೆ .ಪರಮಾತ್ಮನಿಗೇನೂ ನಷ್ಟವಿಲ್ಲ ಕಾರಣ ಅವನೊಳಗೇ ಎಲ್ಲಾ ಇರೋವಾಗ ಒಮ್ಮೆ ಮೇಲೆ ಬಂದರೆ ಇನ್ನೊಮ್ಮೆ ಕೆಳಗಿಳಿಯುವರಷ್ಟೆ.ಕೆಳಗಿದ್ದವರು ಮೇಲೆ ಬರುವರು.ಹಾಗೆ ಸುರರ ಅಹಂಕಾರ ಮಿತಿಮೀರಿದಾಗ ಅಸುರಶಕ್ತಿ ಬೆಳೆದರೆ ಅಸುರರ ಅಹಂಕಾರ ಬೆಳೆದಾಗ ಸುರರ ಜ್ಞಾನ ಮೇಲೇರುವುದು.ತಲೆ ಸರಿಯಿದ್ದರೆ ಕಾಲೂ ಸರಿದಾರಿಗೆ ನಡೆಯಬಹುದು. ತಲೆಯೇ ಸರಿಯಿಲ್ಲವಾದರೆ ನಡಿಗೆ ಸರಿಯಿರದು. ಒಂದು ಶರೀರದೊಳಗೆ ಎಲ್ಲಾ ಅಂಗಾಂಗಗಳಿಗೂ ಅದರದೇ ಆದ ವಿಶೇಷಶಕ್ತಿಯಿರುತ್ತದೆ. ಹಾಗಂತ ಮಾನವನಿಗೆ ಪ್ರತಿಕ್ಷಣ ಅದನ್ನು ನೋಡಿಕೊಂಡು ಬದುಕಲಾಗದು. ಅಂಗಕ್ಕೆ ಸಮಸ್ಯೆಯಾದಾಗಲೇ ಪರೀಕ್ಷೆ ನಡೆಯುತ್ತದೆ ಅದಕ್ಕೆ ಕಾರಣ ತಿಳಿದು ಉಪಚಾರ ಮಾಡಬಹುದು. ಇದು ಎಲ್ಲರಿಗೂ ಕಷ್ಟ ಹೀಗಾಗಿ ನಮ್ಮ ಗುಣದ ಬಗ್ಗೆ ನಾವೇ ಚಿಂತನೆ ಮಾಡಿದರೆ ಒಳಗೆ ಯಾವ ಶಕ್ತಿಯಿದೆ ನಡೆಸುತ್ತಿದೆ ಎನ್ನುವ ವಿಚಾರ ಅರ್ಥ ವಾಗುತ್ತದೆ.
ಹೊರಗಿನವರು ನಮ್ಮನ್ನು ಸಾಕಬೇಕು,ನೋಡಿಕೊಳ್ಳಬೇಕು ಎನ್ನುವ ಸ್ಥಿತಿಗೆ ಬಂದಿದೆ ಎಂದರೆ ನಮ್ಮಲ್ಲಿ ರೋಗ ಹೆಚ್ಚಾಗಿದೆ ಎಂದರ್ಥ. ಆ ರೋಗಕ್ಕೆ ಔಷಧ ಒಳಗಿದ್ದರೆ ಉತ್ತಮ ಹೊರಗೇ ಇದ್ದರೆ ಹೊರಗಿನ ರೋಗವೇ ಒಳಗಿದೆ ಎಂದರ್ಥ.
ಇದರಲ್ಲಿ ಭ್ರಷ್ಟಾಚಾರ ವೂ ಒಂದು ರೋಗವೇ. ಇದಕ್ಕೆ ಶಿಷ್ಟಾಚಾರದ ಔಷಧವಿದ್ದರೆ ಉತ್ತಮ ದೇಹಾರೋಗ್ಯ ಸಾಧ್ಯ.
ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವಂತಾಗುವಷ್ಟು ಮುಳ್ಳು ಒಳಗೆ ಬೆಳೆಸಿಕೊಂಡರೆ ಹೆಚ್ಚು ನೋವಾಗುತ್ತದೆ.ಹೀಗೇ ನಾವು ಅನೇಕ ವಿಚಾರಗಳಿಗೆ ಪರಿಹಾರ ಕಂಡುಕೊಳ್ಳಲು ಸಮಸ್ಯೆಯ ಮೂಲ ತಿಳಿಯುವುದು ಅಗತ್ಯವಿದೆ. ಮನೆಯೊಳಗೆ ಸಮಸ್ಯೆಯಿದ್ದರೆ ಒಳಗೇ ಪರಿಹಾರವಿದ್ದರೆ ಉತ್ತಮ. ಹೊರಗಿನಿಂದ ಸಮಸ್ಯೆ ಒಳಗೆ ಬಂದಾಗ ಸಮಸ್ಯೆಯಿಂದ ದೂರವಿರೋದಷ್ಟೂ ಉತ್ತಮ. ಮಾನವನ ಸಮಸ್ಯೆಗೆ ಅವನ ಕರ್ಮ ಋಣವೇ ಕಾರಣವೆಂದಾಗ ಸತ್ಕರ್ಮದಿಂದ ಋಣಮುಕ್ತನಾಗೋದೆ ಧರ್ಮ. ಮಹಾತ್ಮರಾಗೋದಕ್ಕೆ ಹೊರಗೆ ನಡೆಯಬೇಕೆಂದಿಲ್ಲ ಒಳಗೆ ನಡೆಯಬೇಕು. ಆತ್ಮಾವಲೋಕನ ನಕ್ಕೆ ಸರ್ಕಾರದ ಹಣ. ಬೇಡ ಜ್ಞಾನಿಗಳ ಸಹಕಾರ ಅಗತ್ಯ. ಜ್ಞಾನಿಗಳೆನ್ನಿಸಿಕೊಂಡವರೆ ರಾಜಕೀಯದ ಸುಳಿಯಲ್ಲಿದ್ದರೆ ಸರ್ಕಾರದ ಗತಿ ಏನು?
ಸ್ವತಂತ್ರ ಭಾರತದಲ್ಲಿ ಯಾರಿಗೆ ಸ್ವಾತಂತ್ರ್ಯ ಸಿಕ್ಕಿದೆ ಎನ್ನುವ ಪ್ರಶ್ನೆಗೆ ಉತ್ತರ ಅಜ್ಞಾನಕ್ಕೆ ಸ್ವತಂತ್ರ ವಿದೆ. ಅಜ್ಞಾನವನ್ನು ಹಣಕೊಟ್ಟು ಖರೀದಿಸುತ್ತಿದ್ದಾರೆ. ಅದರಿಂದ ಇನ್ನಷ್ಟು ಸಾಲ ಬೆಳೆದು ಆತ್ಮಹತ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಪರಿಹಾರ ಜ್ಞಾನದ ಶಿಕ್ಷಣ ನೀಡೋದು.ಶಿಕ್ಷಕರು ಗುರುಗಳು ಸತ್ಯ ಧರ್ಮದ ಪಾಠ ಕಲಿತು ಕಲಿಸೋದು.ಕೆಲವರಿದ್ದಾರೆ ಅವರನ್ನು ಕೇವಲವಾಗಿಸಿ ಕಾಣೋರು ಬೆಳೆದಿದ್ದಾರೆಂದರೆ ಕಲಿಗಾಲದ ಮಹಿಮೆಯೆನ್ನಬೇಕೋ ಹಿರಿಮೆ ಎನ್ನಬೇಕೋ?
ಹಿಂದೆ ಯಾವುದೇ ಭೌತಿಕಸುಖವಿರದೆ ಶಾಂತಿಯಿಂದ ಜ್ಞಾನ ಪಡೆಯುತ್ತಿದ್ದರು .ಈಗ ಭೌತಿಕಾಸಕ್ತಿ ಮಿತಿಮೀರಿ ಅಜ್ಞಾನದಲ್ಲಿ ಸುಖಕ್ಕಾಗಿ ಹಾತೊರೆಯುವ ಜೀವನವಿದೆ. ಯಾವುದೂ ಅತಿಯಾದರೆ ಗತಿಗೇಡು. ಸುಖದು:ಖವಿಲ್ಲದ ಜೀವನ ಜೀವನವೇ ಅಲ್ಲ. ಅಲ್ಲ ಅಲ್ಲ ಎನ್ನುವುದರಿಂದ ಏನೂ ಸಿಗೋದಿಲ್ಲ. ಹಾಗಾಗಿ ಇದೆ ಎಂದುಕೊಂಡರೆ ಎಲ್ಲಾ ಇದೆ. ಇಲ್ಲವೆಂದರೆ ದೇವರೇ ಇಲ್ಲವೆನ್ನಬಹುದು.ಆದರೆ ತತ್ವ ಒಂದೇ ಇರುತ್ತದೆ. ಒಂದೇ ಭೂಮಿಯಲ್ಲಿ ದೇವಾಸುರರು ಮಹಿಳೆ ಮಕ್ಕಳು ಪುರುಷರು ಒಂದಾಗಿ ಬಾಳೋದು ಯೋಗಜ್ಞಾನವಿರಬೇಕಷ್ಟೆ. ಅಯೋಗ್ಯರಿಗೆ ಯೋಗ್ಯ ಶಿಕ್ಷಣ ನೀಡುವುದಕ್ಕೂ ಯೋಗಬೇಕು.ಕಾಲ ಕೂಡಿಬಂದಾಗ ಆಗುತ್ತದೆ ಹಾಗಾಗಿ ಮಾನವ ಕಾರಣಮಾತ್ರನಾದರೂ ಎಲ್ಲದ್ದಕ್ಕೂ ಕಾರಣನಾಗಿಯೇ ಇದ್ದಾನೆ. ಇದಕ್ಕೆ ಸ್ತ್ರೀ ಶಕ್ತಿಯೂ ಸೇರಿದಾಗ ಕಾರಣಾಂತರ ಸಮಸ್ಯೆ ಹೆಚ್ಚುವುದು. ಪರಿಹಾರ ಒಳಗೇ ಹುಡುಕಿಕೊಂಡರೆ ಸಿಗುವುದೆನ್ನುವ ಕಾರಣಕ್ಕಾಗಿ ಅಧ್ಯಾತ್ಮ ಜಗತ್ತು ಬೆಳೆದಿದೆ.
5.ಸಂಬಂಧ ಜೋಡಣೆಯ ಉದ್ದೇಶ ವೇನು?
*ಸಂಬಂಧಗಳನ್ನು ಜೋಡಿಸುವದು ಒಂದು ಕಲೆಯಾದರೆ, ಸಂಬಂಧಗಳನ್ನು ಉಳಿಸಿಕೊಳ್ಳುವುದು ಒಂದು ಸಾಧನೆ. ಜೀವನದಲ್ಲಿ ನಾವು ಎಷ್ಟು ಒಳ್ಳೆಯವರು,ಎಷ್ಟು ಕೆಟ್ಟವರು ಎಂಬುದು ಇಬ್ಬರಿಗೆ ಮಾತ್ರ ತಿಳಿದಿರುತ್ತದೆ. ನಮ್ಮೆಲ್ಲರ "ಪರಮಾತ್ಮ" ಮತ್ತು ನಮ್ಮ "ಅಂತರಾತ್ಮ"*
ಸಂಬಂಧ ಗಳು ದ್ವೇಷದಿಂದ ಕೂಡಿಕೊಂಡರೆ ಸಮಸ್ಯೆಗಳನ್ನು ಕೂಡಿಸಿಕೊಂಡಂತೆ. ಇದು ಖಾಸಗಿ ಜೀವನದಲ್ಲಿ ನಡೆಯೋದಿಲ್ಲ ರಾಜಕೀಯ ಜೀವನದಲ್ಲಿ ನಡೆಯುತ್ತದೆ. ಅಂದರೆ ಒಂದು ಪಕ್ಷವನ್ನು ನಾಶ ಮಾಡಿ ಇನ್ನೊಂದು ಪಕ್ಷ ಕಟ್ಟುವಾಗ. ಬೇರೆ ಸಣ್ಣ ಪಕ್ಷಗಳ ಸಹಕಾರ ಸಹಾಯ ಬೇಕು. ಇಂತಹ ಸ್ಥಿತಿಯಲ್ಲಿ ಉತ್ತಮ ಉದ್ದೇಶವನ್ನು ಇಟ್ಟುಕೊಂಡವರ ಸಂಬಂಧ ವಿದ್ದರೆ ಉತ್ತಮ ಪಕ್ಷದಿಂದ ಭವಿಷ್ಯದಲ್ಲಿ ಪ್ರಗತಿ ಕಾಣಬಹುದು. ಯಾವಾಗ ದ್ವೇಷದಿಂದ ಕೂಡಿದ್ದನ್ನು ಸೇರಿಸಿಕೊಂಡೆವೋ ಆಗ ನಮ್ಮಲ್ಲಿದ್ದ ಒಗ್ಗಟ್ಟೂ ಮರೆಯಾಗುತ್ತಾ ಇಡೀ ಪಕ್ಷದೊಳಗೇ ಭಿನ್ನಾಭಿಪ್ರಾಯ ದ್ವೇಷ ಅಸೂಯೆಯ ಹೊಗೆ ಹೆಚ್ಚಾಗುತ್ತಾ ಬೆಂಕಿಯಾಗಿ ಉರಿದು ತಾವೂ ನಾಶವಾಗೋದರ ಜೊತೆಗೆ ಸುತ್ತಮುತ್ತಲಿನ ಪಕ್ಷಗಳೂ ನಾಶವಾಗುತ್ತದೆ. ಇದಕ್ಕೆ ಪರಿಹಾರವೆಂದರೆ ನಮ್ಮ ದ್ವೇಷ ವನ್ನು ಬಿಟ್ಟು ಉತ್ತಮ ಸಂಬಂಧ ವನ್ನು ನಿಸ್ವಾರ್ಥ ನಿರಹಂಕಾರದಿಂದ ಕೂಡಿಸಿಕೊಳ್ಳುವುದಾಗಿದೆ.ಇದು ಹೊರಗಿನ ರಾಜಕೀಯ ದಲ್ಲಿ ಕಷ್ಟವಿದೆ.ಒಳಗಿರುವ ರಾಜಯೋಗದಿಂದ ಸಾಧ್ಯವಿದೆ. ದ್ವೇಷದಿಂದ ಏನೂ ಸಾಧನೆ ಮಾಡಲಾಗದು. ಕಟ್ಟುವುದು ಕಷ್ಟ ಮೆಟ್ಟುವುದು ಸುಲಭ ಎಂದಂತೆ ಒಂದು ಪಕ್ಷ ಕಟ್ಟುವುದಕ್ಕೆ ಧರ್ಮ ಸತ್ಯವನರಿಯುವುದು ಬಹಳ ಕಷ್ಟದಕೆಲಸ.ಕಟ್ಟಿದ ಮೇಲೆ ಅದನ್ನು ನಡೆಸುವುದು ಬಹಳ ಕಷ್ಟ ಕಾರಣ ನಡೆಯುವಾಗ ಮಧ್ಯೆ ಬರುವ ಅಧರ್ಮ, ಅಸತ್ಯವನ್ನು ದ್ವೇಷ ಮಾಡಿದರೆ ಅವು ಮೈಮೇಲೆರಗಿ ಬೀಳಿಸುವ ಕೆಲಸ ಮಾಡೋದು ಸಹಜ ಹೀಗಾಗಿ ಅವುಗಳನ್ನು ನಿರ್ಲಕ್ಷಿಸಿ ಶಾಂತವಾಗಿರೋದಕ್ಕೆ ಮಹಾತ್ಮರಿಗಷ್ಟೆ ಸಾಧ್ಯ.
ಒಮ್ಮೆ ಭಗವಾನ್ ಬುದ್ದ ಅಂಗುಲಿಮಾಲರ ಒಂದು ಕಥೆ ಇದಕ್ಕೆ ಸಾಕ್ಷಿ. ಹಾಗೆಯೇ ಇನ್ನೂ ಕೆಲವು ಮಹಾತ್ಮರ ಜೀವನದಲ್ಲಿಯೂ ಇಂತಹ ಸನ್ನಿವೇಶ ನಡೆದು ದುಷ್ಟರೂ ಶಿಷ್ಟರಾಗಿರುವ ಕಥೆಗಳಿವೆ. ಹಾಗಂತ ಈಗಿನ ಪರಿಸ್ಥಿತಿ ಯಲ್ಲಿ ಇಷ್ಟೊಂದು ಶಾಂತಿದೂತರಿಲ್ಲದಿದ್ದರೂ ಶಾಂತಿಯನ್ನು ಕಾಪಾಡುವವರ ಸಂಬಂಧ ಬೆಳೆಸಿಕೊಂಡರೆ ನಮ್ಮೊಳಗೆ ಇನ್ನಷ್ಟು ಶಾಂತಿ ಹೆಚ್ಚುವುದಲ್ಲವೆ?
ಕ್ರಾಂತಿಗೆ ಹೆಚ್ಚು ಮಂದಿ ಕೈ ಜೋಡಿಸಿಕೊಂಡು ಹೊರಗೆ ಬಂದರೆ ಒಳಗಿದ್ದ ಸತ್ಯ ಧರ್ಮ ದ ಸೂಕ್ಮ ತೆ ಅರ್ಥ ವಾಗದೆ ಜೀವ ಹೋಗುತ್ತದೆ. ಎಲ್ಲಿಯವರೆಗೆ ಆತ್ಮಕ್ಕೆ ಶಾಂತಿ ಸಿಗದೆ ಜೀವ ಹೋಗುವುದೋ ಮತ್ತದೇ ಸ್ಥಿತಿಯಲ್ಲಿ ಜನ್ಮ ಪಡೆದು ಅದೇ ಕೆಲಸದಲ್ಲಿ ತೊಡಗಿಸಿಕೊಂಡಿರುತ್ತದೆ.ಹೀಗಾಗಿ ನಮ್ಮ ಸನಾತನ ಧರ್ಮ ವು ಶಾಂತಿಯನ್ನು ಬಯಸುತ್ತದೆ. ದುಷ್ಟರನ್ನು ಶಾಂತಿಯಿಂದಲೂ ಗೆಲ್ಲಬಹುದೆನ್ನುವುದು ಸತ್ಯವಾದರೂ ರಾಜಕೀಯಕ್ಕೆ ಇಳಿದ ಮನಸ್ಸಿನಲ್ಲಿ ಶಾಂತಿ ಯಿರದು.ಹಾಗಾಗಿ ರಾಜಕೀಯದಿಂದ ಶಾಂತಿ ಸೃಷ್ಟಿ ಮಾಡಲು ಕಷ್ಟವಿದೆ.ಆದರೆ ಧರ್ಮ ರಕ್ಷಣೆಗಾಗಿ ಹೋರಾಟ ಮಾಡುವಾಗ ಧರ್ಮ ಸೂಕ್ಮವನ್ನರಿಯುವುದು ಬಹಳ ಅಗತ್ಯವಾಗಿದೆ.ಇತ್ತೀಚೆಗೆ ಸಾಕಷ್ಟು ತಿಳಿದವರೂ ದುಷ್ಟರ ಸಂಬಂಧ ಮಾಡಿಕೊಂಡು ದಾರಿತಪ್ಪಿರುವುದು ಸತ್ಯ.
6.ಸಂಸ್ಕಾರ ಒಂದು ಕಡೆಯಲ್ಲ ಎರಡೂ ಕಡೆ ಮುಖ್ಯ
ನಾವೆಷ್ಟೇ ಸಂಸ್ಕಾರ ಸಂಸ್ಕೃತಿ ಸದಾಚಾರದ ಪಾಠ ಹೇಳಿ ಮಕ್ಕಳನ್ನು ಬೆಳೆಸಿದರೂ ಅವರು ಸೇರುವ ಮನೆಯಲ್ಲಿ ಇದಕ್ಕೆ ವಿರೋಧವಿದ್ದರೆ ವ್ಯರ್ಥ. ಇಲ್ಲಿ ಗಂಡು ಹೆಣ್ಣಿನ ಪ್ರಶ್ನೆ ಬರೋದಿಲ್ಲ ಈಗಿನ ಕಾಲದಲ್ಲಿ ಕೂಡುಕುಟುಂಬವಿರೋದು ಅಪರೂಪ ಇದ್ದರೂ ಅದೇ ಹಳೇ ಕಂದಾಚಾರವಿದ್ದರೆ ವಾಸ್ತವತೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಕಷ್ಟ.
ಇಲ್ಲಿ ಒಳ್ಳೆಯ ಗುಣವನ್ನು ಎತ್ತಿ ಹಿಡಿದು ಕೆಟ್ಟಗುಣವನ್ನು ತೆಗೆದು ಹಾಕುವುದೇ ಸಂಸ್ಕಾರ. ನಾವು ಒಳ್ಳೆಯವರೆ ಕೆಟ್ಟವರೆ ಎನ್ನುವುದನ್ನು ಹೊರಗಿನವರು ನಿರ್ಧಾರ ಮಾಡೋದಕ್ಕೆ ಸಮಯ ಹಿಡಿಯುತ್ತದೆ. ಆದರೆ ಮನೆಯವರು ಗುರುತಿಸಲು ಸಾಧ್ಯವಾಗೋದು ಜ್ಞಾನದಿಂದ ಮಾತ್ರ.ಹಣದ ವಿಚಾರದಲ್ಲಿ ಇದರ ಲೆಕ್ಕಾಚಾರ ತಪ್ಪಾಗಿರುತ್ತದೆ. ಹಾಗಾಗಿ ಶುದ್ದವಾದ ಶಿಕ್ಷಣವನ್ನು ಮನೆಯೊಳಗೆ ಹೊರಗೆ ಕೊಡುವುದಷ್ಡೆ ನಮ್ಮ ಧರ್ಮ ವಾಗಿದೆ. ಪ್ರಕೃತಿ ಎಲ್ಲರನ್ನೂ ಸಮಾನವಾಗಿ ಕಂಡಾಗ ಅದನ್ನು ಸದ್ಬಳಕೆ ಮಾಡಿಕೊಳ್ಳಲು ನಮ್ಮಲ್ಲಿ ಸಂಸ್ಕಾರವಿರಬೇಕು. ಇಂದಿನ ಕಾಲದ ಹುಡುಗರು ಸರಿಯಿಲ್ಲ ಹುಡುಗಿಯರು ಸರಿಯಿಲ್ಲ ಎನ್ನುವ ಬದಲು ನಾವೇನು ಶಿಕ್ಷಣ ಕೊಟ್ಟಿದ್ದೇವೆನ್ನುವ ಕಡೆಲಕ್ಷ್ಯ ಕೊಟ್ಟರೆ ಲಕ್ಷ ಲಕ್ಷಕೊಟ್ಟು ಕಲಿಸಿದ ಶಿಕ್ಷಣದಲ್ಲಿಯೇ ಸಂಸ್ಕಾರವಿರಲಿಲ್ಲವಾದಾಗ ಅದೇ ದೊಡ್ಡದಾಗಿ ಬೆಳೆದಿದೆಯಷ್ಟೆ. ಸಂಸ್ಕಾರಕ್ಕೆ ಲಕ್ಷ ಹಣ ಸುರಿದು ಸಾಲ ಮಾಡೋ ಬದಲು ಮನೆಯೊಳಗೇ ಮಕ್ಕಳಿಗೆ ಉತ್ತಮ ವಿಷಯ ಆಹಾರ ಜ್ಞಾನವನ್ನು ಹೆಚ್ಚಿಸುವ ಕೆಲಸ ಕಾರ್ಯದಲ್ಲಿ ತೊಡಗಿಸಿಕೊಂಡರೆ ಸಾಲವಿಲ್ಲದೆಯೇ ಜ್ಞಾನೋದಯವಾಗುತ್ತದೆ.
ಹಿಂದಿನ ಗುರುಕುಲದಲ್ಲಿದ್ದಂತೆ ಇಂದಿನ ಗುರುಕುಲಗಳಲ್ಲಿ ಶ್ರಮವಿಲ್ಲದೆಯೇ ಶಿಕ್ಷಣ ಕೊಡುತ್ತಿರುವುದರಿಂದ ವೇದ ಪಾಠ ತಲೆಗೆ ಹತ್ತದೆ ಮನೆ ಸೇರಿದವರಿದ್ದಾರೆ. ಹಾಗಂತ ಎಲ್ಲಾ ವೇದಪಂಡಿತರಾಗಲು ಅಸಾಧ್ಯವಾದರೂ ಎಲ್ಲರಲ್ಲಿಯೂ ಮಹಾತ್ಮರಿದ್ದಾರೆ.
ಮಹಾತ್ಮ ಗಾಂಧೀಜಿಯ ಬಗ್ಗೆ ತಿಳಿಸಿದರೆ ಕೆಲವರಿಗೆ ಅವರು ರಾಷ್ಟ್ರ ಪಿತರಾಗಿ ಕಂಡರೆ ಕೆಲವರಿಗೆ ಅವರಲ್ಲಿದ್ದ ದೋಷಗಳೇ ಕಾಣುತ್ತದೆ. ಅವರ ಖಾಸಗಿ ಬದುಕಿನಲ್ಲಿಯೂ ಇಬ್ಬರು ಮಕ್ಕಳಲ್ಲಿ ಅಂತರವಿತ್ತು. ಹಾಗಾದರೆ ಇದಕ್ಕೆ ಕಾರಣ ಅವರ ಹೋರಾಟದ ಜೀವನವೆಂದರೆ ತಪ್ಪು. ಮಕ್ಕಳ ಪೂರ್ವ ಜನ್ಮದ ಸಂಸ್ಕಾರವೂ ಆಗಿರಬಹುದು.ಅಸುರ ಕುಲದಲ್ಲಿ ಸುರರೂ ಜನ್ಮತಾಳಿದರೂ ಸಂಸ್ಕಾರದಿಂದ ಸುರರಾಗೇ ಬೆಳೆಯಬಹುದು.ಹಾಗೆಯೇ ಸುರರ ಕುಲದಲ್ಲಿ ಅಸುರರ ಜನ್ಮವಾದಾಗಲೂ ಸಂಸ್ಕಾರದಿಂದ ತಿದ್ದಬಹುದು. ಆದರೆ ಇದು ಹೊರಗಿನಿಂದ ನಡೆಸೋದಕ್ಕಿಂತ ಒಳಗಿನಿಂದ ನಡೆಸಿದಾಗಲೇ ಸಂಪೂರ್ಣ ವಾಗೋದು. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ ಎಂದಂತೆ ಸಣ್ಣ ತಪ್ಪನ್ನು ತಿದ್ದದೆ ದೊಡ್ಡ ತಪ್ಪಿಗೆ ಶಿಕ್ಷೆ ನೀಡಿದರೂ ತಪ್ಪು ಅಳಿಸೋದು ಕಷ್ಟ. ಹೀಗಾಗಿ ದೇಶದ ಇಂದಿನ ಯುವಪೀಳಿಗೆಯ ಅತಿಯಾದ ಅಜ್ಞಾನವನ್ನು ಹೊರಗಿನ ಕಾನೂನಿನಿಂದ ತಡೆಯುವುದು ಕಷ್ಟವಿದೆ. ಸಣ್ಣ ಮಕ್ಕಳಿಗೆ ಸರಿಯಾದ ಸಂಸ್ಕಾರವಿದ್ದರೆ ಮುಂದಿನ ಪೀಳಿಗೆಯಿಂದ ಸ್ವಚ್ಚಭಾರತ ಸಾಧ್ಯ.ಇದನ್ನು ಹೊರಗಿನ ಸರ್ಕಾರದ ಹಣದಿಂದ ಸರಿಪಡಿಸಲಾಗದು ಒಳಗಿನ ಗುಣಸುಜ್ಞಾನದಿಂದ ಸಾಧ್ಯವಾದಾಗ ಅದಕ್ಕೂ ಪೋಷಕರ ವಿರೋಧವಿದ್ದರೆ ಮಾಡಿದ್ದುಣ್ಣೋ ಮಹಾರಾಯ.ಕರ್ಮಕ್ಕೆ ತಕ್ಕಂತೆ ಫಲ ನಿಶ್ಚಿತ.
ಮಕ್ಕಳು ಬೇಗ ಬೇಗ ಬುದ್ದಿವಂತರಾಗಲು ತಂತ್ರ ಬಳಸಿದರೆ ಒಳಗಿದ್ದ ತತ್ವಜ್ಞಾನಕ್ಕೆ ಬೆಲೆಯಿರದು.
ಸಂಸ್ಕಾರವೆಂದರೆ ಅಸತ್ಯ ಅಧರ್ಮ ಅನ್ಯಾಯ ಭ್ರಷ್ಟಾಚಾರ ವನ್ನು ಬೆಳೆಸುವ ದುರ್ಗುಣದಿಂದ ದೂರವಿರೋದು. ಮೊದಲು ಪೋಷಕರಿಗೆ ಸಂಸ್ಕಾರವಿದ್ದರೆ ಮಕ್ಕಳಲ್ಲಿ ಬದಲಾವಣೆ ಸಾಧ್ಯ. ಅತಿಯಾದ ಸ್ವಾರ್ಥ ಅಹಂಕಾರವೇ ಮಾನವನ ನಿಜವಾದ ಶತ್ರುಗಳಾಗಿದೆ. ಇದನ್ನು ಹೊರಗಿನವರು ಬೆಳೆಸಿರುವಾಗ ಒಳಗಿದ್ದು ಬಿಡುವ ಪ್ರಯತ್ನ ಮಾಡಿದರೆ ಉತ್ತಮ.
7.ಜ್ಯೋತಿಷ್ಯ ಸತ್ಯ ಜ್ಯೋತಿಷಿ ಸತ್ಯವಂತರಾದರೆ ಜ್ಯೋತಿಷ್ಯವೂ ಸತ್ಯವೇ ಇರುತ್ತದೆ.
ಜ್ಯೋತಿಷ್ಯ ಶಾಸ್ತ್ರದ ಬಗ್ಗೆ ಹಲವರಿಗೆ ಗೊಂದಲವಿದೆ.ಇದು ಸರಿಯೋ ತಪ್ಪೋ ಎನ್ನುವ ವಾದ ವಿವಾದದಲ್ಲಿ ಜ್ಯೋತಿಷ್ಯ ಸತ್ಯವಿದ್ದರೂ ಜ್ಯೋತಿಷ್ಯ ನುಡಿದವರಲ್ಲಿ ತಪ್ಪಾಗಿದೆ. ಹಾಗೆ ಸನಾತನ ಹಿಂದೂ ಧರ್ಮದ ಉದ್ದೇಶ ಸರಿಯಿದ್ದರೂ ಎಲ್ಲಾ ಹಿಂದೂಗಳು ಸರಿಯಾಗಿ ಅರ್ಥ ಮಾಡಿಕೊಳ್ಳಲು ಸೋತಾಗ ಪರಕೀಯರು ಹಿಂದೂ ಧರ್ಮ ವೇ ಇಲ್ಲವೆಂದರೆ ತಪ್ಪು ಪರರದ್ದಲ್ಲ ನಮ್ಮವರದ್ದೇ.
ಹೀಗೇ ದೇಶದ. ವಿಚಾರಕ್ಕೆ ಬಂದಾಗ ಎಲ್ಲಾ ಧರ್ಮ ದವರೂ ಭಾರತದ ಋಣ ತೀರಿಸಲು ಅದರ ಧರ್ಮ ಕರ್ಮ ದ ಬಗ್ಗೆ ಅರಿವನ್ನು ಬೆಳೆಸಿಕೊಳ್ಳಲು ಅವಕಾಶವಿರಬೇಕು. ಅವಕಾಶ ಇದ್ದರೂ ಕೊಡದಿದ್ದರೆ ಅದು ನಮ್ಮ ತಪ್ಪು. ಸಹಕಾರವೇ ಇಲ್ಲವಾದರೆ ಅದು ನಮ್ಮ ಕರ್ಮ ಫಲ. ಹಾಗಂತ ನಮ್ಮ ಆತ್ಮಸಾಕ್ಷಿಗೆ ನಾವೇ ವಿರುದ್ದ ನಡೆದಾಗ ಇದರ ಫಲವನ್ನು ಯಾರೋ ಅನುಭವಿಸಲಾಗದು. ಹಾಗಾಗಿ ಭವಿಷ್ಯದ ಚಿಂತನೆ ಮಾಡುವಾಗಹಿಂದಿರುವ ಗ್ರಹಗತಿಗಳ ಚಲನವಲನದಿಂದ ಮಾನವನ ಜೀವನದಲ್ಲಾಗುವ ಪರಿಣಾಮವನ್ನು ಸೂಕ್ಮವಾಗಿ ತಿಳಿದು ಸೂಕ್ತ ಮಾರ್ಗದರ್ಶನ ಪರಿಹಾರ ಸೂಚಿಸುವ ಜ್ಯೋತಿಷ್ಯ ಶಾಸ್ತ್ರ ಎಲ್ಲರಿಗೂ ಒಂದೇ ರೀತಿಯಲ್ಲಿ ಕಲಿಯಲಾಗದಿದ್ದರೂ ಕಲಿತವರ ನಡೆ ನುಡಿಯ ಮೇಲೇ ಹೇಳಿಕೆಯೂ ಇರುತ್ತದೆ. ನಾನೆಂಬುದಿಲ್ಲವೆಂದಿರುವ ಸತ್ಯದಲ್ಲಿ ಆ ಅಗೋಚರ ಶಕ್ತಿ ಯ ಒಳಗಿನಹೇಳಿಕೆ ಯಾರಿಗೂ ಕಾಣೋದಿಲ್ಲ.ಸ್ವಚ್ಚ ಶುದ್ದ ವ್ಯಕ್ತಿತ್ವವುಳ್ಳವರು ಏನು ಹೇಳಿದರೂ ಸತ್ಯವಾಗಿರುತ್ತದೆ ಅವರಿಗೆ ಶಾಸ್ತ್ರ ಓದುವ ಅವಕಾಶವಿಲ್ಲದೆಯೂ ಭವಿಷ್ಯ ಅರ್ಥ ವಾಗಬಹುದು. ಹಾಗಂತ ಬೇರೆಯವರ ಭವಿಷ್ಯವನ್ನು ಬದಲಾಯಿಸುವ ಹಠಕ್ಕೆ ಬಿದ್ದರೆ ಅದೇ ಭವಿಷ್ಯವನ್ನು ಹಾಳುಮಾಡಲೂಬಹುದು. ಕಾರಣ ಅವರವರ ಧರ್ಮ ಕರ್ಮಕ್ಕೆ ತಕ್ಕಂತೆ ಅವರ ಭವಿಷ್ಯ ವಿರುತ್ತದೆ. ಇದು ಮನೆಯಿಂದ ಹಿಡಿದು ಮಠ ಮಂದಿರ, ಮಾಧ್ಯಮ, ಮಂತ್ರಿ ಮಹೋದಯರವರೆಗೂ ಒಂದೇ ಸಮನಾಗಿರಲು ಕಷ್ಟ. ಮನೆಯೊಳಗೆ ಸ್ವಚ್ಚ ಮನಸ್ಸಿನ ಮಾನವರಿರಬೇಕು.
ಸಾಧ್ಯವಿಲ್ಲದ ಕಾರಣ ಹೊರಗೆ ಬಂದವರು ಹೊರಗಿನವರಿಂದ ತನ್ನ ಭವಿಷ್ಯ ಕೇಳಿಕೊಂಡು ನಡೆಯಬೇಕಾಯಿತು.ಆದರೆ ಗ್ರಹಗತಿಗಳಿಗೆ ಯಾರು ಶ್ರೇಷ್ಠ ಕನಿಷ್ಟವೆನ್ನುವುದನ್ನು ತಾಳೆಹಾಕುವ ಲೆಕ್ಕಾಚಾರದಲ್ಲಿ ಹಣ ಬರೋದಿಲ್ಲ ಜ್ಞಾನವೇ ಬರೋದು. ಹಾಗಾಗಿ ಜ್ಯೋತಿಷ್ಯ ಆತ್ಮಜ್ಯೋತಿಯ. ಒಂದು ಸಂದೇಶ. ಹೇಳುವವರಲ್ಲಿ ಆತ್ಮಜ್ಞಾನವಿದ್ದರೆ ಹೇಳಿದ್ದು ಸತ್ಯವಾಗೇ ಇರುತ್ತದೆ. ಕಲಿತು ಹೇಳುವಾಗ. ಸ್ವಲ್ಪ ತಪ್ಪಾದರೂ ಕೇಳುವವರ ಹಣೆಬರಹವನ್ನು ಅಳಿಸಲು ಜ್ಯೋತಿಷ್ಯ ಶಾಸ್ತ್ರ ವೂ ಸಹಕರಿಸದು.ಎಲ್ಲಾ ಮೇಲಿನ ಶಕ್ತಿಯ ಆದೇಶದಂತೆನಡೆದರೂ ಮಧ್ಯದಲ್ಲಿ ತಡೆದು ನಿಲ್ಲಿಸುವ ಶಕ್ತಿ ಕೆಲವರಿಗಷ್ಟೆ ಇದೆ. ಅವರೂ ಮುಂದೆ ಹೋದ ಮೇಲೆ ಆಗೋದನ್ನು ತಡೆಯಲಾಗದು.ಅದಕ್ಕೆ ಬಂದದ್ದೆಲ್ಲಾ ಬರಲಿ ಗೋವಿಂದನ ದಯೆ ಒಂದಿರಲಿ ಎಂದರು ದಾಸ ಶ್ರೇಷ್ಠ ರು.
ಈಗಿನ ಭಾರತದ ಭವಿಷ್ಯವನ್ನು ಹಿಂದೆಯೇ ತಿಳಿಸಿದ್ದರು. ಕಲಿಯುಗದ ಭವಿಷ್ಯವನ್ನು ಹಿಂದಿನ ಯುಗದಲ್ಲೇ ತಿಳಿಸಿದ್ದರು. ಹಾಗಾದರೆ ಆಗೋದನ್ನು ಮೊದಲೇ ತಿಳಿಸಿರುವ ಹಿಂದಿನ ವಿಜ್ಞಾನ ಆತ್ಮಜ್ಞಾನವಾಗಿದೆ. ಆತ್ಮಜ್ಞಾನದಿಂದ ನಮ್ಮ ಭವಿಷ್ಯ ಉತ್ತಮವಾಗಿರುತ್ತದೆ ಎಂದಾಗ ನಮ್ಮ ಮೂಲ ಶಿಕ್ಷಣ ಆತ್ಮಜ್ಞಾನದೆಡೆಗೆ ನಡೆದರೆ ಮಕ್ಕಳ ಭವಿಷ್ಯ ಉತ್ತಮವಾಗಿರಬಹುದಲ್ಲವೆ? ಒಳಗೆ ಅಡಗಿರುವ ಜ್ಞಾನಶಕ್ತಿ ಗುರುತಿಸಿ ಶಿಕ್ಷಣ ನೀಡಿದರೆ ಸರ್ವಜ್ಞ ರಾಗದಿದ್ದರೂ ವಿಜ್ಞಾನಿಗಳಾಗಬಹುದು.ಇಲ್ಲಿ ವಿಜ್ಞಾನ ವಿಶೇಷವಾದ ಜ್ಞಾನ. ಒಳಗಿನ ಜ್ಞಾನದ ಜೊತೆಗೆ ಹೊರಗಿನ ಜ್ಞಾನ ಹೊಂದಿಕೊಂಡು ನಡೆದಾಗ ಪರಿಪೂರ್ಣತೆ ಕಾಣಬಹುದು.
ಇಂದು ಒಳಗಿನ ಜ್ಞಾನಕ್ಕೆ ವಿರುದ್ದದ ಹೊರಗಿನ ಶಿಕ್ಷಣವೇ ಮಕ್ಕಳನ್ನು ದಾರಿತಪ್ಪಿಸಿ ನಡೆಸಿರೋದೇ ಅಜ್ಞಾನಕ್ಕೆ ಕಾರಣ. ಇದನ್ನು ಯಾವ ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಲು ಸಾಧ್ಯ?
ಮಕ್ಕಳ ಶಿಕ್ಷಣದ ವಿಚಾರ ಬಂದಾಗ ಹೇಳೋದು ಬಹಳ ದೊಡ್ಡ ಅಧಿಕಾರಿ ಆಗುವನು, ಇಂಜಿನಿಯರಿಂಗ್, ಡಾಕ್ಟರ್ ವಿಜ್ಞಾನಿ ಆಗುವನೆಂದರೆ ಬಹಳ ಸಂತೋಷ. ಅದೇ ಓದು ಹತ್ತದಿದ್ದರೆ ದನ ಕಾಯೋ ಎಮ್ಮೆ ಮೇಯಿಸೋ,ಮಠ ಸೇರೋ, ಕೂಲಿ ಮಾಡೋ ಎನ್ನುವ ವ್ಯಂಗ್ಯ ಪದವನ್ನು ಬಳಸುವವರೊಮ್ಮೆ ಚಿಂತನೆ ಮಾಡಿದರೆ ಶ್ರೀ ಕೃಷ್ಣ ನಿಗೆ ಗೋವಿಂದ ಎನ್ನುವರು, ಗೋಸೇವೆಯಿಂದ ಕೋಟ್ಯಾಂತರ ದೇವತೆಗಳ ಸೇವೆ ಮಾಡಿದಂತಾಗಿ ಋಣ ಕಳೆಯುತ್ತದೆ. ಸೇವೆಯಲ್ಲಿ ಕೂಲಿಯೂ ಒಂದು. ಅಂದಿನ ದಿನದ ಹಣದಲ್ಲಿ ತನ್ನ ಸಂಸಾರದ ಹೊಟ್ಟೆ ತುಂಬಿಸುವುದರ ಮೂಲಕ ಯಾವಭ್ರಷ್ಟತೆಯಿಲ್ಲದೆ ಹಣ ಸಂಗ್ರಹಣೆಯಿಲ್ಲದೆಯೂ
ಕೂಲಿಮಾಡುವವರ ಸಂಸಾರದಲ್ಲಿ ಸಂತೋಷವಿರುವುದು, ಮಠಗಳಲ್ಲಿ ನಡೆಸುವ ಧಾರ್ಮಿಕ ಕ್ರಿಯೆಗಳಿಂದಲೇ ಸಮಾಜದಲ್ಲಿ ಧರ್ಮ ನಿಂತಿರೋದು. ಬಡಬ್ರಾಹ್ಮಣ,ಬಡರೈತ,ಬಡಸೈನಿಕ ಬಡ ಶಿಕ್ಷಕ ಎಂದರೆ ಅಜ್ಞಾನ. ಅವರ ಜ್ಞಾನವನ್ನು ಗುರುತಿಸದ ಕಣ್ಣಿಗೆ ಹಣವಷ್ಟೆ ಕಾಣೋದು. ಹೀಗಾಗಿ ಸಾಲ ಮಾಡಿಯಾದರೂ ಹೊರಗಿನ ಶಿಕ್ಷಣ ಪಡೆದಯಾವ ಇಂಜಿನಿಯರಿಂಗ್, ಡಾಕ್ಟರ್ ಇನ್ನಿತರ ಅಧಿಕಾರಿಗಳು ನೇರವಾಗಿ ಯಾರ ಸಹಕಾರ,ಹಣ,
ಸಾಲವಿಲ್ಲದೆ ಓದಿ ಮೇಲೇರಿಲ್ಲ.ಸ್ವತಂತ್ರ ವಾಗಿ ಜೀವನ ನಡೆಸಲು ಹೊರಗಿನ ಜ್ಞಾನ ಕ್ಕಿಂತ ಒಳಗಿನ ಜ್ಞಾನವೇ ಆಸ್ತಿಯಾಗಿದೆ. ಅದನ್ನು ಹೆಚ್ಚಿಸಿಕೊಂಡು ಎಲ್ಲರಿಗೂ ಉಪಯೋಗವಾಗುವ ಕೆಲಸ ಮಾಡುವುದರಿಂದ ಭವಿಷ್ಯ ಚೆನ್ನಾಗಿ ಇರುತ್ತದೆ.ದುರ್ಭಳಕೆ ಮಾಡಿಕೊಂಡರೆ ಭವಿಷ್ಯ ಹಾಳಾಗಿರುವುದು.
8.ಸೃಷ್ಟಿ ಸ್ಥಿತಿ ಲಯದಲ್ಲಿ ಸ್ತ್ರೀ ಶಕ್ತಿಯ ಪಾತ್ರ
ಬ್ರಹ್ಮನ ಸೃಷ್ಟಿ ಗೆ ಜ್ಞಾನಕೊಡುವ ದೇವಿ,ವಿಷ್ಣುವಿನ ಕಾರ್ಯಕ್ಕೆ ಲಕ್ಮಿಯ ಸಹಕಾರ, ಶಿವನ ಕಾರ್ಯದಲ್ಲಿ ಸಮನಾಗಿ ನಿಂತು ನಡೆಸೋ ಸ್ತ್ರೀ ಶಕ್ತಿಯನ್ನು ಅರ್ಥ ಮಾಡಿಕೊಳ್ಳಲು ಸೋತರೆ ಭೂಮಿಯಿಂದ ಜೀವಾತ್ಮನಿಗೆ ಮುಕ್ತಿಯಿಲ್ಲ ಅತೃಪ್ತ ಆತ್ಮಗಳ ಭೂಲೋಕವಾದರೆ ನರಕ. ನರಕಾಸುರನ ವಧೆ ಮಾಡಿದ ಶ್ರೀ ಕೃಷ್ಣ ನಿಗೆ ಹದಿನಾರು ಸಾವಿರ ಸ್ತ್ರೀ ಯರೊಂದಿಗೆ ಮದುವೆ ಆಯಿತಂತೆ. ಒಂದು ಸ್ತ್ರೀ ಜನ್ಮ ಸಾರ್ಥಕ ವಾಗೋದು ವಿವಾಹದಿಂದ ಎಂದರೆ ವಿವಾಹವು ಒಂದು ದೇವತಾಕಾರ್ಯವಾಗಿದೆ. ಶಾಸ್ತ್ರದ ಪ್ರಕಾರ ನಡೆಸೋ ವಿವಾಹದಿಂದ ಉತ್ತಮ ಸಂತಾನವನ್ನು ಮುಂದೆ ಪಡೆಯುವರೆನ್ನುವುದು ಹಿಂದೂ ಸನಾತನ ಧರ್ಮ ತಿಳಿಸಿದೆ.
ಈಗಿನ ಸ್ಥಿತಿಯಲ್ಲಿ ವಿವಾಹವೇನೋ ವೈಭವದಿಂದ ನಡೆಯುತ್ತದೆ. ಆದರೆ ಅಲ್ಲಿ ಶಾಸ್ತ್ರ ಸಂಪ್ರದಾಯ ವೇದ ಪಠಣಗಳಲ್ಲಿ ಕಡಿವಾಣವಿರುತ್ತದೆ. ಜನಸಾಗರವಿದ್ದರೂ ಅವರನ್ನು ಉಪಚರಿಸುವುದೇ ದೊಡ್ಡ ಸಮಸ್ಯೆಯಾಗುತ್ತದೆ.ಹಾಗಾಗಿ ಅನ್ನದಾನದಿಂದ ಸಂತೋಷ ಪಡಲು ಅನೇಕ ರೀತಿಯಲ್ಲಿ ವಿಶೇಷ ಭೋಜನವಿರುತ್ತದೆ. ಅನ್ನಬ್ರಹ್ಮನ ನೆನಪಿಸಿಕೊಂಡು ಅನ್ನಪೂರ್ಣ ವಾದಾಗಜ್ಞಾನ ಹೆಚ್ಚುವುದು. ಇದನ್ನು ಪ್ರತಿದಿನದ ಊಟದಲ್ಲಿಯೂ ಮಾಡಿದಾಗ ನಾವು ತಿಂದ ಅನ್ನವು ಒಂದು ಯಜ್ಞ ದ ರೂಪದಲ್ಲಿ ಪರಮಾತ್ಮನ ತಲುಪಲು ಸಾಧ್ಯ. ಆತ್ಮ ಕ್ಕೆ ಜ್ಞಾನದ ಹಸಿವಿರೋದರಿಂದ ಜ್ಞಾನದಿಂದ ಸಂಪಾದಿಸಿದ ಅನ್ನವನ್ನು ಯಜ್ಞ ದ ರೀತಿಯಲ್ಲಿ ಸೇವಿಸಿದರೆ ಒಳಗಿರುವ ಎಲ್ಲಾ ದೇವಾಂಶಗಳಿಗೂ ತಲುಪಿ ಸಂತೃಪ್ತ ರಾಗಿರುವರು. ಆಗ ದೈವೀಕ ಗುಣ ಸಂಪತ್ತು ಲಭಿಸುವುದು.ಇದೇ ಆರೋಗ್ಯದ ಗುಟ್ಟು. ಅನ್ನಾಹಾರವಿಲ್ಲದೆ ಎಷ್ಟೋ ವರ್ಷಗಳ ತಪಸ್ಸಿನಿಂದ ಪರಮಾತ್ಮನ ಸೇರಿದ ಋಷಿಗಳಾಗಲು ಕಷ್ಟ.ಆದರೆ ಅನ್ನ ಆಹಾರದಲ್ಲಿ ಪರಮಾತ್ಮನ ಸತ್ವವ ಕಂಡು ಸೇವಿಸುವ ಜ್ಞಾನವಿದ್ದರೆ ಅದೇ ಖುಷಿ. ಋಷಿಗಳಂತಿರಲಾಗದಿದ್ದರೂ ಸರಿ ಖುಷಿಯನ್ನು ಒಳಗಿನಿಂದ ಬೆಳೆಸಿಕೊಂಡರೆ ಉತ್ತಮ.
ಕಲುಷಿತ ನೀರು ಆಹಾರಗಳನ್ನು ಸೇವಿಸಿಯೂ ಬದುಕುತ್ತಿರುವ ಮಾನವನೊಳಗೇ ಅಡಗಿರುವ ದೈವ ಶಕ್ತಿಗೆ
ಜ್ಞಾನದ ಹಸಿವಿದೆ ಹೊರಗಿನ ಆಹಾರದ ತಯಾರಿಕೆಯಲ್ಲಿ ಜ್ಞಾನವಿದ್ದರೆ ಇದು ಆತ್ಮಬಲವನ್ನು ಇನ್ನಷ್ಟು ಹೆಚ್ಚಿಸಿ ದೈವಬಲದಿಂದ ದೇಹದ ಆರೋಗ್ಯವೃದ್ದಿಯಾಗುತ್ತದೆ . ಒಂದು ಹಿಡಿ ಅನ್ನವಿದ್ದರೂ ಜೀವ ಬದುಕುತ್ತದೆ ಆದರೆ ಇದು ಸಾತ್ವಿಕ ಜ್ಞಾನದಿಂದ ಸಂಪಾದಿಸಿದ್ದರೆ ಸಂತೃಪ್ತಿ. ಶಿಷ್ಟಾಚಾರದ ಸಂಪಾದನೆಯಲ್ಲಿ ಸತ್ಯಜ್ಞಾನವನ್ನು ಕಾಣಬಹುದು.ಇದು ದೈವೀಕ ಸಂಪತ್ತು. ದೇಹವೇ ದೇಗುಲವಾದಾಗ ಅದರೊಳಗೆ ನಾವು ಹಾಕುವ ಆಹಾರ ವಿಷಯಗಳು ಹೇಗಿರಬೇಕಿತ್ತು? .
ಆರೋಗ್ಯವು ಯೋಗದಿಂದ ವೃದ್ದಿಯಾದರೆ ಮುಕ್ತಿ.
9.ಲಿಂಗತಾರತಮ್ಯದಿಂದಾಗುವ ಅನಾಹುತ
ಜೀವಕ್ಕಾಗುವ ನೋವು ನಲಿವಿನ ಅನುಭವದಲ್ಲಿ ಲಿಂಗ ತಾರತಮ್ಯ ಹೆಚ್ಚಾಗಿರುತ್ತದೆ. ಭೂಮಿಯ ಮೇಲಿರುವ ಎಲ್ಲಾ ರೀತಿಯ ಜೀವ ಸಂಕುಲಗಳಲ್ಲಿ ಮಾನವನ ಜೀವಕ್ಕೆ ಹೆಚ್ಚಿನಬೆಲೆ. ಹೀಗಾಗಿ ಪ್ರಾಣಿ ಪಕ್ಷಿ ಜಂತುಹುಳ ಕೀಟಗಳಂತಹ ಅತಿಸಣ್ಣ ಜೀವಿಗಳಿಗೆ ಬೆಲೆಕೊಡದೆ ತನ್ನ. ಜೀವನಕ್ಕಾಗಿ ಇತರ ಜೀವಿಗಳನ್ನು ದುರ್ಭಳಕೆ ಮಾಡಿಕೊಂಡಾಗಲೇ ಒಳಗಿನ ಜೀವಾತ್ಮನಿಗೆ ಹಿಂಸೆಯಾಗುತ್ತಾ ಆರೋಗ್ಯ ಹಾಳಾಗಿ ಜೀವ ಹೋಗುತ್ತದೆ.
ಪ್ರತಿಯೊಂದು ಜೀವಿ ಯಲ್ಲಿಯೂ ಅಡಗಿರುವ ಶಕ್ತಿಯಲ್ಲಿ ವ್ಯತ್ಯಾಸವಿದೆ. ಆರೋಗ್ಯ ಉತ್ತಮವಾಗಿರಲು ಆ ಶಕ್ತಿಯ ಗುಣವಿಶೇಷತೆ ತಿಳಿದು ಬಳಸುವುದು ಅಗತ್ಯ.ಹಾಗಂತ ನಾವು ಸೇವಿಸುವ ಗಾಳಿ,ನೀರಲ್ಲಿ ಶಕ್ತಿಯನ್ನು ಹುಡುಕಿದರೆ ಜೀವವೇ ಇರೋದಿಲ್ಲ. ಉಳಿದ ಧಾನ್ಯ ಅಕ್ಕಿ ಬೇಳೆ ಕಾಳುಗಳಲ್ಲಿ , ತರಕಾರಿ ಹಣ್ಣು ಗಳಲ್ಲಿ ಅಡಗಿರುವ ಸತ್ವಕ್ಕೂ, ಮಾಂಸಹಾರಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಹೀಗಾಗಿ ಆಹಾರವನ್ನು ಸತ್ವ ರಜಸ್ಸು ತಾಮಸ್ಸೆಂಬ ಮೂರು ಗುಂಪಾಗಿ ಪರಿಗಣಿಸಿದ್ದಾರೆ. ಇದನ್ನು ಭಗವದ್ಗೀತೆ ಯಲ್ಲಿ ಶ್ರೀ ಕೃಷ್ಣ ಪರಮಾತ್ಮನೇ ತಿಳಿಸಿರುವುದನ್ನು ನಾವು ತಿಳಿದಿದ್ದರೂ ಈಗಿನ ಆರೋಗ್ಯದ ಸಮಸ್ಯೆನ ಸಾತ್ವಿಕ ಆಹಾರ ಪಡೆದವರಲ್ಲಿಯೂ ಕಾಣುತ್ತಿರೋದರೋದು ನಮ್ಮ ಹಣ ಸಂಪಾದನೆಯ ಹಿಂದೆ ಇರುವ ಸತ್ವ,ರಜಸ್ಸು ತಮಸ್ಸಿನ ಮಾರ್ಗವಾಗಿದೆ.
ಅನ್ನದಾನ ಮಹಾದಾನವಾದರೂ ದಾನ ಯಾರಿಗೆ ಯಾವಾಗ ಹೇಗೆ ಎಷ್ಟು ಯಾಕೆ ಮಾಡಬೇಕೆಂಬ ಜ್ಞಾನ ಅಗತ್ಯವಿದೆ.
ಹೊಟ್ಟೆ ತುಂಬಿದವರಿಗೆ ಹಸಿವಿನ ಅರಿವಿರದು. ಹೊಟ್ಟೆ ತುಂಬಿದವರಿಗೆ ಅನ್ನದಾನ ಮಾಡಬಾರದು. ಇದೇ ರೀತಿ ಭ್ರಷ್ಟಾಚಾರದ ವಶದಲ್ಲಿ ದ್ದವರ ದಾನ ಧರ್ಮ ವು ಪರಮಾತ್ಮನವರೆಗೆ ತಲುಪಿಸುವುದು ಬಹಳಕಷ್ಟ. ಆದರೂ ಪ್ರತಿಯೊಬ್ಬರಲ್ಲಿಯೂ ಅಡಗಿರುವ ಪರಮಾತ್ಮನ ಶಕ್ತಿಯನ್ನು ಕಂಡವರು ಮಾಡುವ ದಾನ ಶ್ರೇಷ್ಠ. ಹಾಗಾಗಿ ಹಿಂದೆ ಎಷ್ಟೋ ಯೋಗಿಗಳು ಭಕ್ತರು ಪರಮಾತ್ಮನಿಗಾಗಿಯೇ ಸೇವೆ ಮಾಡುತ್ತಾಜನರ ಸೇವೆಯಲ್ಲಿ ಜನಾರ್ದನ ನನ್ನು, ದೇಶ ಸೇವೆಯಲ್ಲಿ ಈಶ್ವರನನ್ನು, ಕಾಯಕದಲ್ಲಿ ಕೈಲಾಸವನ್ನು ಕಾಣುತ್ತಿದ್ದರು. ಇದರಿಂದಾಗಿ ಸಮಾನತೆಯಲ್ಲಿ ಲಿಂಬೇಧ, ಜಾತಿಬೇಧಧರ್ಮ ಬೇಧ, ಪಕ್ಷಬೇಧವ ಮರೆತು ರಾಜಯೋಗದೆಡೆಗೆ ನಡೆದಿದ್ದರು.
ತಿನ್ನುವುದಕ್ಕಾಗಿಯೇ ಜೀವಿಸೋದಲ್ಲ ಜೀವಿಸುವುದಕ್ಕಾಗಿ ತಿನ್ನಬೇಕೆಂದರು. ಆದರೆ ಏನೂ ತಿನ್ನದೆ ಸಾವಿರಾರು ವರ್ಷ ತಪಸ್ಸು ಮಾಡಿದವರಿದ್ದರೆಂದರೆ ಆತ್ಮಜ್ಞಾನವು ತಿನ್ನುವುದರಿಂದ ಬರೋದಿಲ್ಲವೆಂದು ಕೆಲವು ವ್ರತನಿಯಮ ಜಪತಪ ಯಾಗಯಜ್ಞ ಹಲವು ಯೋಗ ಮಾರ್ಗ ಧರ್ಮ ನಿಷ್ಠೆ ಉಪವಾಸ ಉಪಕಾರ ಉಪಚಾರ....ಬೆಳೆಯುತ್ತಾ ಹೋಗಿ ಈಗ ಊಟವೇ ಎಲ್ಲದರ ಮೂಲವಾಗಿದೆ. ಅಂದರೆ ಯಾವುದೇ ಕಾರ್ಯಕ್ರಮ ಮಾಡಿದರೂ ಅನ್ನದಾನವಿಲ್ಲದೆ ಸಂಪನ್ನವಾಗದು.
ದೇವತಾಕಾರ್ಯಗಳಲ್ಲಿ ಹಂಚುವ ಆಹಾರ
ಇದು ಪ್ರಸಾದವಾಗಿರುತ್ತದೆ. ಹಾಗಾಗಿ ಈ ಪ್ರಸಾದವು ಸಾತ್ವಿಕವಾಗಿ ಸತ್ವಪೂರ್ಣ ವಾಗಿ ಸತ್ಯ ಧರ್ಮ ದಲ್ಲಿದ್ದರೆ ಆರೋಗ್ಯ ಪೂರ್ಣ ಜೀವನ. ಪ್ರತಿಯೊಂದು ಮನೆಯ ಅನ್ನವೂ ಅನ್ನಪೂರ್ಣೇಶ್ವರಿ ಯ ಪ್ರಸಾದವಾಗಬೇಕಾದರೆ ಅನ್ನಬ್ರಹ್ಮನ ಸ್ಮರಣೆಯಿಂದ ತಯಾರಿಸುವುದು ಅಗತ್ಯ. ಇದು ಸಾಧ್ಯವಾಗುವುದಕ್ಕೆ ನಮ್ಮಲ್ಲಿ ಬ್ರಹ್ಮಜ್ಞಾನವಿರಬೇಕು.
ಎಲ್ಲಾ ಬ್ರಹ್ಮರೆ ಎನ್ನುವುದು ಸುಲಭ. ಎಲ್ಲಾ ಬ್ರಹ್ಮಚಾರಿ ಬ್ರಹ್ಮಚಾರಣಿಯರಾಗೋದು ಕಷ್ಟ. ಹೀಗಾಗಿ ಬ್ರಹ್ಮಚಾರಿಗಳ ಜ್ಞಾನ ಬ್ರಹ್ಮಚಾರಿಣಿಯರ ಜ್ಞಾನದಲ್ಲೂ ಬೇರೆ ಬೇರೆ ಕಾಣುತ್ತಾ ಜೀವ ಹಿಂಸೆ ಹೆಚ್ಚಾಗುತ್ತಾ ಭೂಮಿಯಲ್ಲಿ ಜೀವನ
ಬಲಿಕೊಟ್ಟು ಮುಂದೆ ನಡೆದವರಿಗೆ ಕೊನೆಗಾಲದಲ್ಲಿ ಜೀವನದ ಸತ್ಯವೂ ಅರ್ಥ ವಾಗದೆ ತನ್ನ ಜೀವಕ್ಕೆ ಸಮಸ್ಯೆ ಹೆಚ್ಚಾಗುತ್ತಾ ಹೋಗುತ್ತದೆ. ಜೀವಕ್ಕೆ ಲಿಂಗಬೇಧವಿಲ್ಲ. ಲಿಂಗಬೇಧವು ಧರ್ಮ ರಕ್ಷಣೆಗೆ ಅಪಾಯಕಾರಿ.
ಆತ್ಮಜ್ಞಾನದಿಂದ ಧರ್ಮ ರಕ್ಷಣೆಯಾಗಬೇಕಾದರೆ ಅವರವರ ಜ್ಞಾನವನ್ನು ಸದ್ಬಳಕೆ ಮಾಡಿಕೊಂಡರೆ ಅದೇ ಸಂತೋಷಕರ ಜೀವನ.ಹೆಣ್ಣು ಜೀವಕ್ಕೆ ಸಹನಾಶಕ್ತಿ ಹೆಚ್ಚಾಗಿರುವ ಕಾರಣ ಭೂಮಿಯಲ್ಲಿ ಹೆಣ್ಣಿಗೆ ಹೆಚ್ಚು ಜ್ಞಾನಶಕ್ತಿ . ಅದಕ್ಕಾಗಿ ಸ್ತ್ರೀ ಸಹನೆ,ಕರುಣೆ ಪ್ರೀತಿವಿಶ್ವಾಸ ಗಳಿಸಿದನ್ನು ರಾಜಕೀಯದಲ್ಲಿ ಕಳೆದುಕೊಳ್ಳುವುದೂ ಹೆಚ್ಚಾಗಿದೆ. ಗಳಿಸುವುದು ಕಷ್ಟ ಕಳೆದುಕೊಳ್ಳುವುದು ಸುಲಭ. ಯಾರೇ ಏನೇ ಪಡೆದರೂ
ಕೊಟ್ಟು ನಡೆಯಲೇಬೇಕಷ್ಟೆ ಅದರಲ್ಲಿ ಜೀವವೂ ಒಂದಾಗಿದೆ.
ಧರ್ಮ ಸತ್ಯದ ರಕ್ಷಣೆಗಾಗಿ ಜೀವಕೊಡೋದಕ್ಕೂ ಅಧರ್ಮ ಅಸತ್ಯದ ರಕ್ಷಣೆಗಾಗಿ ಜೀವನ ನಡೆಸೋದಕ್ಕೂ ವ್ಯತ್ಯಾಸವಿದೆ. ಮಕ್ಕಳು ಮಹಿಳೆಯರ ಒಂದು ಸಣ್ಣ ಜೀವವೂ ಮನುಕುಲಕ್ಕೆ ಒಂದು ಭಾರವಾದರೆ ಇತರ ಪ್ರಾಣಿ ಪಕ್ಷಿ ಮರಗಿಡಗಳಲ್ಲಿ ಅಡಗಿರುವ ಜೀವಕ್ಕೆ ಬೆಲೆಕಟ್ಟಲು ಮಾನವನಿಗೆ ಸಾಧ್ಯವೆ?
ನಿಜ ಸ್ತ್ರೀ ಹೃದಯಕ್ಕೆ ಬೆಲೆಕೊಡುವಾಗ ಅಸುರರನ್ನು ತಿಳಿಯದೆ ಪ್ರೀತಿಸುವ ಕಾರಣ ಭೂಮಿಯಲ್ಲಿ ಅಸುರಿ ಶಕ್ತಿ ಬೆಳೆಯುವುದು ಸುಲಭವಾಗಿರುತ್ತದೆ. ಇದನ್ನು ತಡೆಯಲು ಪುರುಷಶಕ್ತಿಗೂ ಕಷ್ಟವಾದಾಗಲೇ ಸ್ವಯಂ ದುರ್ಗೆ ಯಾಗಿ ಅವತಾರವೆತ್ತಿಅಸುರರ ಸಂಹಾರ ನಡೆದಿರುವ ದೇವಿಪುರಾಣ ಶ್ರೇಷ್ಠ ವಾಗಿದೆ.
10.ಸಾಲ ಅಥವಾ ಋಣ ತೀರಿಸುವ ಬಗೆ
ಒಂದು ಸಾಲ ತೀರಿಸಲು ಇನ್ನೊಂದು ಸಾಲ ಅದನ್ನು ತೀರಿಸಲು ಮತ್ತೊಂದು ಹೀಗೇ ಸಾಲದ ಪಟ್ಟಿ ಬೆಳೆದಂತೆಲ್ಲಾ ಮಾನವನ ಸಮಸ್ಯೆಗೆ ಪರಿಹಾರ ಸಿಗದೆ ಜೀವ ಹೋದರೂ ಮತ್ತೆ ಸಾಲ ತೀರಿಸಲು ಬರಲೇಬೇಕು ಎನ್ನುವ ಸತ್ಯ ಅರ್ಥ ವಾದವರು ಸಾಲ ತೀರಿಸುವ ಸತ್ಕರ್ಮ, ಸ್ವಧರ್ಮ, ಸರಳ ಜೀವನ, ಪರಮಾತ್ಮನ ಸೇವೆಯ ಕಡೆಗೆ ನಡೆದು ಮುಕ್ತಿ ಪಡೆಯುವರು. ಈಗಂತೂ ಒಂದೊಂದು ದೇವರ ಮೇಲೂ ಸಾಲದ ಹೊರೆಹಾಕಿಕೊಂಡು ವೈಭವದ ಕಾರ್ಯಕ್ರಮ ನಡೆಸುವುದು ನೋಡಿದರೆ ದೇವರ ಸಾಲ ತೀರಿಸಲು ಮಾನವನಿಗೆ ಸಾಧ್ಯವೆ?
ತಿರುಪತಿ ತಿಮ್ಮಪ್ಪನ ಬಳಿ ಇರುವ ಆಸ್ತಿ ಯನ್ನು ಕಬಳಿಸಿಕೊಂಡು ಶ್ರೀಮಂತ ರಾದವರು ತಿರುಪತಿ ತಿಮ್ಮಪ್ಪನ ಸಾಲ ತೀರಿಸುವರಂತೆ .ತಿಮ್ಮಪ್ಪ ತನ್ನ ಮದುವೆಯಲ್ಲಿ ಕುಬೇರನ ಬಳಿ ಸಾಲ ಪಡೆದದ್ದನ್ನು ತೀರಿಸಲೆಂದೆ ತಿರುಪತಿಯಲ್ಲಿರುವನಂತೆ. ಲಕ್ಮಿ ಪತಿಯಾದವನಿಗೇ ಸಾಲದ ಹೊರೆ ಇದ್ದರೆ ಅಲಕ್ಮಿಯಾಗಿರುವವರ ಸಂಸಾರದ ಗತಿ ಏನು?
ತಿರುಪತಿಯಿಂದ ದೂರವಿರುವ ಲಕ್ಮಿ ಯನ್ನು ನೋಡಲು ಜನಸಾಗರ ಹರಿದುಬರುತ್ತದೆ. ತಿರುಪತಿಗೆ ಬಂದಷ್ಟು ಆಸ್ತಿ ಹಣ ಸಂಪತ್ತು ಸ್ವಯಂ ಲಕ್ಮಿ ನಿವಾಸಕ್ಕೆ ಬರೋದಿಲ್ಲ. ಎಂದಾಗ ತಿರುಪತಿ ತಿಮ್ಮಪ್ಪನ ಸಾಲ ಎಂದೋ ತೀರಿದೆ ಎಂದರ್ಥ. ದೇಶದೊಳಗೆ ಇರುವ ದೇವಾನುದೇವತೆಗಳ ಸಂಪತ್ತನ್ನು ಅಸುರರು ಲೂಟಿಹೊಡೆದು ದೇಶದ ಸಾಲ ಏರಿಸಿ ವಿದೇಶಿ ಸಾಲದಿಂದ ದೇಶ ನಡೆಸಿದರೂ ಹೇಳೋರಿಲ್ಲ ಕೇಳೋರಿಲ್ಲ. ಯಾರನ್ನು ಯಾರು ಆಳುತ್ತಿರುವುದು? ದೇವರನ್ನು ಮಾನವರೋ? ಮಾನವರನ್ನು ದೇವರೋ? ದೇವರನ್ನು ಅಸುರರೋ? ಅಸುರರನ್ನು ದೇವರೋ?
ಮಾನವರನ್ನು ಅಸುರರೋ? ಅಸುರರನ್ನು ಮಾನವರೋ?
ಆಳುವವರು ಆಳಾಗೇ ಇರುವರು.ಕಾರಣ ಆಳಿಸಿಕೊಳ್ಳುವವರ ಪಾಲನ್ನು ತಾವೇ ಹಿಡಿದಿಟ್ಟುಕೊಂಡಾಗ ಸೇವೆ ಮಾಡದೆ ಬೇರೆದಾರಿಯಿಲ್ಲ.
ಒಟ್ಟಿನಲ್ಲಿ ಸೇವೆಯಿಂದ ಸಾಲಮನ್ನಾ ಸಾಧ್ಯವಿದೆ.ಇದು ಸತ್ವಯುತವಾಗಿದ್ದರೆ ಉತ್ತಮ.
ಭಗವಂತನ ಸೇವೆ ನಿಸ್ವಾರ್ಥ ನಿರಹಂಕಾರ ಪ್ರತಿಫಲಾಪೇಕ್ಷೆ ಇಲ್ಲದೆ ಮಾಡಿದರೆ ಮುಕ್ತಿ ಮೋಕ್ಷವೆಂದರು. ಭೌತಿಕಾಸಕ್ತಿ ಹೆಚ್ಚಿದಂತೆಲ್ಲ ಇಂತಹ ಸೇವೆ ನಡೆಯೋದಿಲ್ಲ.ಹಾಗಾಗಿ ಜೀವನ್ಮುಕ್ತಿ ಕಷ್ಟವಿದೆ. ಏನೇ ಇರಲಿ ಭಗವಂತನ ಪರಮಾತ್ಮನ ದಾಸರಾಗೋದರಿಂದ ಕಷ್ಟ ನಷ್ಟಗಳೇ ಹೆಚ್ಚು.ಕಾರಣ ಅವನ ಋಣ ತೀರಿಸಲು ಆಸೆ ಬಿಡಬೇಕು. ಆಸೆ ಬಿಡೋದೇ ಬಹಳ ಕಷ್ಟ. ಆಸೆ ಬಿಟ್ಟಂತೆಲ್ಲಾ ದಾನ ಧರ್ಮ ದ ಮೂಲಕ ಹಣ ಅಧಿಕಾರದಿಂದ ದೂರವಾಗಿ ನಷ್ಟ ಅನುಭವಿಸಿದ ಮೇಲೇ ಜ್ಞಾನೋದಯ. ಜೀವಾತ್ಮನು ಪರಮಾತ್ಮನೊಂದಿಗೆ ಬೆರೆತಾಗಲೇ ಮುಕ್ತಿ ಮೋಕ್ಷ. ಹೀಗಾಗಿ ದಾಸ ಸಂತ ಶರಣರಲ್ಲಿ ಭೌತಿಕ ಆಸ್ತಿ ಯಿರದೆ ಅಧ್ಯಾತ್ಮಿಕ ಆಸ್ತಿ ಹೆಚ್ಚಾಗಿತ್ತು. ಮಹಾತ್ಮರಾಗಲು ದೇವರಾಗಬೇಕಿಲ್ಲ ದೈವತ್ವವರಿತರೆ ಸಾಕು. ದೇವರ ದಾಸರಂತೆ ಅಸುರರ ದಾಸರೂ ಭೂಮಿಯಲ್ಲಿರುವರು. ಆದರೆ ಅವರಿಗೆ ಸತ್ಯ. ಧರ್ಮದ ಅರಿವಿರೋದಿಲ್ಲವಾದ್ದರಿಂದ ಅಸತ್ಯ ಅಧರ್ಮಕ್ಕೆ ಸಹಕಾರ ಕೊಟ್ಟು ದೇವರ ಹೆಸರಿನಲ್ಲಿ ಅಸುರರನ್ನು ಬೆಳೆಸುವರು. ಇದರಿಂದಾಗಿ ಹಣ ಅಧಿಕಾರ ಸ್ಥಾನ ಪದವಿ ಪಡೆದರೂ ಅದೊಂದು ಋಣವಾಗಿರುವುದು.
ಬ್ರಹ್ಮನ ಸೃಷ್ಟಿ ಗೆ ಜ್ಞಾನ ನೀಡುವ ದೇವಿ, ವಿಷ್ಣುವಿನ ಕಾರ್ಯಕ್ರಮಕ್ಕೆ ಧನ ನೀಡುವ ಹೃದಯ ಲಕ್ಮಿ, ಶಿವನ ಅರ್ಧ ಶರೀರವನ್ನು ಆವರಿಸಿಕೊಂಡು ಜಗತ್ತನ್ನು ನಡೆಸೋ ಜಗಧೀಶ್ವರಿಯರಲ್ಲಿ ಬೇಧ ಭಾವ ತೋರಿಸಿ ಆಳುವ ಅಸುರರಿಗೆ ಬ್ರಹ್ಮಜ್ಞಾನ ಬರೋದಿಲ್ಲ. ಸತ್ಯಯುಗಕ್ಕೂ ಕಲಿಯುಗಕ್ಕೂ ವ್ಯತ್ಯಾಸವಿಷ್ಟೆ. ಸತ್ಯಯುಗ ದೇವತೆಗಳ ಕಾಲ ಕಲಿಯುಗ ಅಸುರರ ಕಾಲ. ಯಾರಲ್ಲಿ ಹಣವಿದೆಯೋ ಅವರು ದೇವರೆಂದರೆ ತಪ್ಪು ತಿಳುವಳಿಕೆ. ತಿಳುವಳಿಕೆಯನ್ನು ದುರ್ಭಳಕೆ ಮಾಡಿಕೊಂಡರೆ ಇನ್ನಷ್ಟು ನಷ್ಟ. ಸದ್ಬಳಕೆ ಮಾಡಲು ಇಷ್ಟಪಡದ ಜನರಿಗೆ ಕಷ್ಟ ತಪ್ಪಿದ್ದಲ್ಲ. ಹಾಗಾದರೆ ನಾವ್ಯಾರು? ಯಾರಿಗೆ ಸಹಕರಿಸುವೆವೋ ಅವರ ಪಕ್ಷ ನಾವು. ನಮ್ಮೊಳಗೇ ಇರುವ ದೇವಾಸುರ ಗುಣಗಳಿಂದ ಯಾರಿಗೆ ಲಾಭ ನಷ್ಟ ಎನ್ನುವ ಲೆಕ್ಕಾಚಾರವೇ ಋಣ ಸಂದಾಯ ವಾಗದೆ ಉಳಿಯಲು ಕಾರಣ.
- - - -