ಶಿಕ್ಷಣ ರಕ್ತಗತ ವಿಷಯಲ್ಲೋ ಋಣದ ವಿಚಾರದಲ್ಲೂ?

ಶಿಕ್ಷಣದಲ್ಲಿ ಬದಲಾವಣೆ ಮಾಡೋದಕ್ಕೆ ಪ್ರತಿಯೊಬ್ಬರೂ ತಮ್ಮ ತಮ್ಮ ಮನಸ್ಸಿಗೆ ಬಂದ ಹಾಗೆ ಸಲಹೆ,ಸೂಚನೆ ಕೊಡುತ್ತಾರೆ. ಆದರೆ ಮಕ್ಕಳ ಮನಸ್ಸನ್ನರಿತು ಅವರ ಪರಿಸ್ಥಿತಿ ,ಮನಸ್ಥಿತ...

Friday, August 29, 2025

ಹಿಂದೂಗಳ ಸ್ಥಿತಿಗೆ ಹಿಂದೂಗಳೆ ಕಾರಣ

ಈಗಲಾದರೂ ಹಿಂದೂಗಳು ಸನಾತನಧರ್ಮದ ಪಾಠ ಕಲಿಯಬಹುದೆ? ಅಥವಾ ರಾಜಕೀಯದ  ವಶದಲ್ಲೇ‌ ಸಾಯಬೇಕೆ?

ಪ್ರಶಸ್ತಿ ಪದಕ ಸನ್ಮಾನ ಸಮಾವೇಶಗಳ ಮಧ್ಯೆ ಧರ್ಮಕ್ಕೆ ಬೆಲೆಯೇ ಇಲ್ಲದಂತಾಗಿದೆ. ದೇಶೀಯ ಶಿಕ್ಷಣದ ಕೊರತೆಯಿಂದ ವಿದೇಶಿ ರೀತಿ ನೀತಿ ಸಂಸ್ಕೃತಿ ಗಳು ಬೆಳೆದವು. ವಿದೇಶಿ ಎನ್ನುವ ಬದಲಾಗಿ ಪಾಶ್ಚಿಮಾತ್ಯ ಸಂಸ್ಕೃತಿ ಎಂದರು. ಪಶ್ಚಿಮ ದಿಕ್ಕನ್ನು ಮುಳುಗಡೆಯ ದಿಕ್ಕು ಎನ್ನುವರು.ಅಂದರೆ ಸನಾತನ ಧರ್ಮದ ಪ್ರಕಾರ ಸೂರ್ಯಾಸ್ತ ಪಶ್ಚಿಮದಲ್ಲಿ ಆಗುವುದರಿಂದ ಭಾರತಕ್ಕೆ ಇದು ಮುಳುಗಡೆಯ ದಿಕ್ಕು. ಭೂಮಿಯ ಇನ್ನರ್ದ ಭಾಗದಲ್ಲಿ ಬೆಳಕಿದ್ದು ಅಲ್ಲಿ  ಸೂರ್ಯ ಬೆಳಗುತ್ತಿರುವುದರಿಂದ ಇಡೀ ಭೂ ಮಂಡಲದಲ್ಲಿ ಕತ್ತಲುಬೆಳಕಿನ ಆಟವಿರುತ್ತದೆ.ಮಾನವ ಮಾತ್ರ ತನ್ನ ಕಣ್ಣಿಗೆ ಕಂಡದ್ದೆ ಸತ್ಯವೆಂದರಿತು ನಡೆಯುವುದು ಭ್ರಮೆ ಯಷ್ಟೆ.
ಇಲ್ಲಿ ವಾಸ್ತವದಲ್ಲಿ ಎಲ್ಲರೂ ಮಾನವರೆ .ಅದರಲ್ಲಿ ಹೆಸರು ಎಲ್ಲರಿಗೂ ಇದೆ.ಆ ಹೆಸರಿನಲ್ಲಿ ಯಾವ ಕೆಲಸ ಮಾಡುವರೋ ಅದೇ ಅವರನ್ನು ಮೇಲೆ ಕೆಳಗೆ ಆಡಿಸುತ್ತದೆ.
ಇತ್ತೀಚಿನ ದಿನಗಳಲ್ಲಿ ಹೊರದೇಶದವರು ಪ್ರಶಸ್ತಿ ಕೊಟ್ಟರೆ ದೊಡ್ಡ ಸಾಧನೆ.ನಮ್ಮವರಿಂದ ಪ್ರಶಸ್ತಿ ಪಡೆಯುವುದು ಕಷ್ಟ.ಕಾರಣ ನಮ್ಮವರೆ ನಮಗೆ ಶತ್ರುಗಳು. ಹಿಂದೂಗಳಿಗೆ ಹಿಂದೂಗಳ ಏಳಿಗೆ  ಸಹಿಸಲ್ಲ ಅಂದರೆ ನಮ್ಮ ಒಳಗಿನ ಬುದ್ದಿ ಸರಿಯಿಲ್ಲವೆಂದರ್ಥ. ಹಾಗೆ ಅನ್ಯರಲ್ಲಿಯೂ ಇದೆ. ಇದು  ನಮ್ಮ ಆತ್ಮವಂಚನೆಯೇ  ಆಗಿದ್ದರೂ ಅದನ್ನು ಬೆಳೆಸಿಕೊಂಡಾಗ ಪರಮಾತ್ಮ ಅನ್ಯರ ರೂಪದಲ್ಲಿ ಮಧ್ಯೆ ನಿಂತು ಅವರಿಂದಲೇ ಬುದ್ದಿ ಕಲಿಸುವ ಕೆಲಸ ಮಾಡಿಸುವನು.
ಪರಮಾತ್ಮನಿಗೇನೂ ಬೇಧವಿಲ್ಲ. ಜೀವಾತ್ಮರಿಗೇ ಬೇಧಬಾವ,ಬಡವ ಬಲ್ಲಿದ ಭಿನ್ನಾಭಿಪ್ರಾಯ ದ್ವೇಷದಿಂದ  ಸಮಸ್ಯೆಯಾಗುತ್ತಿರೋದು.ಇದನ್ನರಿತ ಮಹಾತ್ಮರುಗಳು  ಪರಮಸತ್ಯವರಿತು ರಾಜಕೀಯ ಬಿಟ್ಟು ಸ್ವತಂತ್ರ ಬುದ್ದಿ ಜ್ಞಾನದಿಂದ ಜೀವನ್ಮುಕ್ತರಾಗಿರುವರು.
ಪುರಾಣ ಇತಿಹಾಸ ಕಥೆಗಳಲ್ಲಿಯೂ ಇದನ್ನು ಕಾಣಬಹುದು.
ಹುಟ್ಟು ಗುಣ ಸುಟ್ಟರೂ ಹೋಗದು ಎನ್ನುವಂತೆ  ಈ ದ್ವೇಷದ ಕಿಡಿ ಬೆಂಕಿಯಾಗಿ ಸುಟ್ಟರೂ ಮತ್ತದೇ ರೀತಿಯಲ್ಲಿ ಜನ್ಮ ಪಡೆಯೋದರಿಂದ ಈಗ ಸಾಕಷ್ಟು ಅತೃಪ್ತ ಆತ್ಮಗಳು ಸಾಮ್ರಾಜ್ಯ ಸ್ಥಾಪನೆ ಮಾಡಿಕೊಂಡು ದೇವರನ್ನೇ ಆಳಲು ಹೊರಟಿವೆ. ಇದನ್ನು ವಿರೋಧಿಸಿದರೂ  ಉಪಯೋಗವಿಲ್ಲ.
ಇಲ್ಲಿ ಕಾಣೋದು ಕೇವಲ  ಹೆಸರು, ಹಣ ,ಜಾತಿ ,ಧರ್ಮ ವಷ್ಟೆ.
ದೇವರ ಹೆಸರಿನಲ್ಲಿ ಅತ್ಯಾಚಾರ, ಅನಾಚಾರ, ಅನ್ಯಾಯ ನಡೆದರೂ  ಹಣದಿಂದ ಮುಚ್ಚಿಹಾಕುವ ಅನ್ಯಾಯಾಧೀಶರಿರುವಾಗ ಎಲ್ಲವನ್ನೂ ಸಾಕ್ಷಿಯಾಗಿ ನೋಡುತ್ತಿರುವ  ಪರಮಾತ್ಮನಿಗೇ ಬಿಟ್ಟು ನಾವು ಶುದ್ದತೆ ಕಡೆಗೆ ಹೊರಟರೆ  ಎಲ್ಲಾ ಸರಿಯಾಗುತ್ತದೆ. ಆದರೆ ನಮ್ಮ ರಾಜಕೀಯ ಶಕ್ತಿಗೆ ಇದು ಸಾಧ್ಯವಿಲ್ಲ. ಜನಬಲ ಹಣಬಲ ಅಧಿಕಾರಬಲದಲ್ಲಿ ಎಷ್ಟು ಅಧರ್ಮ ಅಸತ್ಯ ಅನ್ಯಾಯ ಕ್ಕೆ ಸಹಕಾರ ಸಿಕ್ಕರೂ ಅದನ್ನು ದೇವರೆ ಮಾಡಿಸಿರೋದೆಂದರೆ ತಪ್ಪು. ನಮ್ಮ ಈ ಕೆಟ್ಟ ಕರ್ಮಕ್ಕೆ ದೇವರು ಹೊಣೆಯಾಗೋದಿಲ್ಲ. ಕೆಲವು ಕೆಳಮಟ್ಟದ ಶಕ್ತಿಯನ್ನು ನಾವೇ ಬೆಳೆಸಿರುವಾಗ ಮೇಲಿರುವ ದೈವಶಕ್ತಿಯ ಅರಿವಿಲ್ಲದೆ  ಈ ಕಾರ್ಯ ಕೆಳಗೇ ನಡೆಯುತ್ತದೆ. ಇದಕ್ಕೆ ಕಾರಣ ಕೆಳಮಟ್ಟದ ಕಳಪೆ ಶಿಕ್ಷಣದಿಂದ ಪಡೆದ ಜ್ಞಾನ.
ಅರ್ಧ ಸತ್ಯ ಅಪಾಯ. ಹೀಗಾಗಿ ಮಧ್ಯವರ್ತಿಗಳು ತಮ್ಮ ಸ್ವಾರ್ಥ ಸುಖಕ್ಕಾಗಿ ಪ್ರಶಸ್ತಿ ಪದವಿ ಅಧಿಕಾರ ಸ್ಥಾನದಿಂದ ಜನಬಲ ಹಣಬಲಗಳಿಸುತ್ತಾ ಭೂಮಿಯ ಸತ್ಯ ಸತ್ವ ತತ್ವಕ್ಕೆ ದಕ್ಕೆ ತಂದರೆ ವಿನಾಶ ಕಟ್ಟಿಟ್ಟ ಬುತ್ತಿ.
ಯಾರದ್ದೋ ಮಾನವನ ಕಥೆ ಬರೆದು ಜಗತ್ತನ್ನು ಆಳಲು ಹೋಗೋದು ದುರಂತವಷ್ಟೆ. ಇಲ್ಲಿ ಕಥೆಯ ಹಿಂದಿನ ವ್ಯಥೆಯನ್ನು ವೈಭವೀಕರಿಸುವ ದುಷ್ಟಶಕ್ತಿಗಳ ಕೈವಾಡವಿದೆ.
ದೈವೀಕ ಗುಣಸಂಪತ್ತನ್ನು ನಿರ್ಲಕ್ಷ್ಯ ಮಾಡುತ್ತಾ ಅಧರ್ಮಕ್ಕೆ ಸಹಕರಿಸುವ  ದುರುದ್ದೇಶವಿದ್ದರೆ  ನಾರಿ ಮಾರಿಯಾಗಿ ಕಾಡೋದು ಸಹಜ. ನಾರಿ ಶಕ್ತಿಯನ್ನು ದುರ್ಭಳಕೆ ಮಾಡಿಕೊಂಡರೆ ಮುಂದಿದೆ ಮಾರಿಹಬ್ಬ. ಒಟ್ಟಿನಲ್ಲಿ ವಿನಾಶಕಾಲೇ ವಿಪರೀತ ಬುದ್ದಿ ಎಂದಂತೆ ಆ ಪರಮಾತ್ಮನ ಸತ್ಯದ ವಿರುದ್ದ ನಡೆದಷ್ಟೂ  ಮನುಕುಲಕ್ಕೆ ಅಪಾಯ.
ಕಲಿಗಾಲದ ಮಹಿಮೆಯೆನ್ನಬೇಕೋ ಅಥವಾ ಕಲಿಕೆಯ ಪ್ರಭಾವವೋ? ಎರಡೂ ಸತ್ಯ.ಆದರೆ ಸತ್ಯವಿಲ್ಲದ ಕಥೆ ಹಿಡಿದು ಅಸತ್ಯದ ಸಾಮ್ರಾಜ್ಯ ನಡೆಸೋದರಿಂದ ಧರ್ಮಕ್ಕೆ ಉಳಿಗಾಲವಿಲ್ಲ.ಹಿಂದೂ ಸ್ತ್ರೀ ಯರ ಜ್ಞಾನ ಗುರುತಿಸದೆ ಅನ್ಯರನ್ನು ಎತ್ತಿ ಹಿಡಿದಷ್ಟೂ  ಭಾರತಮಾತೆಗೆ ಅವಮಾನ.
ಸಂಸಾರದಿಂದ ಹೊರಬರೋದು ಧರ್ಮದಿಂದ ಹೊರಬರೋದು ಸಾಧನೆ ಎನ್ನುವ ರೀತಿಯಲ್ಲಿ ಪ್ರಚೋಧನೆ ನೀಡುವುದು  ಅಧರ್ಮ. ಅಧರ್ಮಕ್ಕೆ ತಕ್ಕಂತೆ ಫಲವೂ ಇರುತ್ತದೆ. ಈಗಲಾದರೂ  ಸನಾತನಧರ್ಮದ ತತ್ವದರ್ಶನ ಆಗೋದಕ್ಕೆ  ಹಿಂದೂಗಳಲ್ಲಿ ಒಗ್ಗಟ್ಟು ಮೂಡಿದರೆ ಉತ್ತಮ.
ಆದರೆ ಇದರಲ್ಲಿ ರಾಜಕೀಯ ಬೆರೆಸಿದಷ್ಟೂ ಅಪಾಯವೇ.ಮನಸ್ಸು ಮೈ ಮನೆ ಶುದ್ದಿಪಡಿಸಿಕೊಂಡರೆ  ಒಳಗಿನ ಪರಮಾತ್ಮನ ದರ್ಶನ .ಹೊರಗೆ ಬಂದಷ್ಟೂ ಕಲ್ಮಶವೆ. ಸ್ವಚ್ಚ ಭಾರತಕ್ಕೆ ಸ್ವಚ್ಚ ಶುದ್ದ ವಿಚಾರದ ಶಿಕ್ಷಣದ ಅಗತ್ಯವಿದೆ.
ಈ ವಿಚಾರವನ್ನು ಕಳೆದ 18 ವರ್ಷಗಳಿಂದಲೂ ಲೇಖನಗಳ ಮೂಲಕ ಬರೆದು ಮಠ ಮಂದಿರ ಶಾಲಾಕಾಲೇಜ್ ಸಂಘಗಳವರೆಗೂ ಪತ್ರಿಕೆಯಮೂಲಕ ತಲುಪಿಸುವಾಗ ತಿಳಿದ ವಿಚಾರವಿಷ್ಟೆ.ಇಲ್ಲಿ ಸ್ತ್ರೀ ಗೃಹಿಣಿಯಾಗಿ ಸತ್ಯ ತಿಳಿಸಿದರೆ  ನಿರ್ಲಕ್ಷ್ಯ, ಅದೇ ಸ್ತ್ರೀ ದುಡಿದು ಲಕ್ಷ ದೇಣಿಗೆ ಕೊಟ್ಟರೆ ಸನ್ಮಾನ.  ಹಣವಿದ್ದರೆ ಜ್ಞಾನದ ಕೊರತೆ,ಜ್ಞಾನವಿದ್ದರೆ ಹಣದ ಕೊರತೆ.  ಎಂದರೆ ಎತ್ತ ಸಾಗಿದ್ದಾರೆ ಭಾರತೀಯರು?
ಪಾಶ್ಚಾತ್ಯ ರ  ವೈಭೋಗದಲ್ಲಿ ಭಾರತೀಯರ ವೈಭವದ ಆಚರಣೆಯಲ್ಲಿ ದೈವತ್ವದ ಕೊರತೆ ಎದ್ದು ಕಾಣುತ್ತಿದೆ. ಯೋಗವೇ ಇಲ್ಲದಿದ್ದರೆ  ಫಲವಿರದು.ಯೋಗವೆಂದರೆ ಸೇರುವುದು. ಸತ್ಯಧರ್ಮ ಜ್ಞಾನವಿಜ್ಞಾನ,ಹರಿಹರ,ಸ್ತ್ರೀ ಪುರುಷರ ಜ್ಞಾನದ ನಡುವೆ ಅಂತರ ಬೆಳೆಸಿದರೆ ಪರಮಾತ್ಮನೊಂದಿಗೆ ಜೀವಾತ್ಮ  ಸೇರುವುದು ಹೇಗೆ? 
ಜ್ಞಾನಯೋಗ,ರಾಜಯೋಗ,ಭಕ್ತಿಯೋಗ,ಕರ್ಮಯೋಗವು ಅಧ್ಯಾತ್ಮ ಸಾಧನೆಯಾಗಿದೆ. ಈಗ  ಇವು ಭೋಗಕ್ಕೆ ವ್ಯವಹಾರಕ್ಕೆ ಇಳಿದು ಜನರನ್ನು ದುರ್ಭಳಕೆ ಮಾಡಿದರೆ  ಜನಜೀವನ ಅಸ್ತವ್ಯಸ್ತವಾಗುತ್ತದೆ. ಹಣವಿದ್ದರೂ ಸಾಲವೇ.
ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿ ರುಪಾಯಿ..ಎಂದರು ಈಗ ಉದ್ಯೋಗಮ್ ಸ್ತ್ರೀ ಲಕ್ಷಣಂ ಎನ್ನುವ ಪರಿಸ್ಥಿತಿ ಭಾರತಕ್ಕೆ ಬಂದಿರೋದಕ್ಕೆ ಅತಿಯಾದ ಸಾಲವೇ ಕಾರಣ. ಆಸ್ತಿ ಜ್ಞಾನದಿಂದ ಮಾಡುವ ಬದಲು ಸಾಲದಿಂದ ಆಸ್ತಿ ಮಾಡಿ ಮಕ್ಕಳು ‌ಮೊಮ್ಮಕ್ಕಳು ಗುರುಹಿರಿಯರ ಜ್ಞಾನ ಬಿಟ್ಟು ನಮ್ಮವರಿಂದ ದೂರವಾಗುತ್ತಾ  ಅನ್ಯರ ಕೈ ಕೆಳಗೆ ದುಡಿಯುವಂತಾಗಿರೋದು ಆತ್ಮದುರ್ಭಲತೆಯ ಲಕ್ಷಣ. ಒಟ್ಟಿನಲ್ಲಿ ಎಲ್ಲರೂ ಮಾನವರೆ .ಸಾಲ ತೀರಿಸಲು ಬಂದಿರುವ‌ಜೀವಾತ್ಮನ ತಲೆ ಮೇಲೆ ಇನ್ನಷ್ಟು ಸಾಲದ ಹೊರೆ ಹಾಕಿರುವ ಅಜ್ಞಾನಕ್ಕೆ ಮದ್ದು ಸುಜ್ಞಾನದ ಶಿಕ್ಷಣವಾಗಿತ್ತು.ಪೋಷಕರೆ  ಅದರ ವಿರುದ್ದ ಇದ್ದರೆ ಮಕ್ಕಳ ಗತಿ ಅಧೋಗತಿ. ಮನೆಯೇ ಗುರುಕುಲವಾಗಿದ್ದ ಕಾಲ ಹೋಗಿ ಹೊರಗೆ ಗುರುಕುಲವಿದ್ದರೂ ಲಕ್ಷ ಕೊಡಬೇಕಿದೆ.
ಲಕ್ಷಗಳಿಸಲು ತಂತ್ರದ ದುರ್ಭಳಕೆ ಅದೇ ಅಧರ್ಮಕ್ಕೆ ಕಾರಣ. 
ಮನೆಯೊಳಗೆ ಸ್ವತಂತ್ರವಾಗಿ ಜ್ಞಾನದಿಂದ ಬಾಳಿಬದುಕುವ ಶಕ್ತಿ ಮಹಿಳೆಯರಿಗಿದ್ದರೂ ಅವರನ್ನು ಗೌರವದಿಂದ ಕಾಣುವ ಜ್ಞಾನ ಪುರುಷರಿಗಿಲ್ಲದೆ ರಾಜಕೀಯದಿಂದ ಆಳಲು ಹೋದರೆ  ಮಹಿಳೆ ಸಂಸಾರ ತೊರೆದು ಹೊರಬಂದು ಹಣ ಹೆಸರು ಸ್ಥಾನ ಸನ್ಮಾನಕ್ಕೆ ತಲೆಬಾಗುವಳು.ಇಲ್ಲಿ ಆತ್ಮಕ್ಕೆ ಲಿಂಗಬೇಧವಿಲ್ಲ. ಅಧ್ಯಾತ್ಮ ಸಾಧನೆಗೆ  ಸ್ತ್ರೀ ಯನ್ನು ತಡೆದಷ್ಟೂ  ಭೂಮಿಯಲ್ಲಿ ಅಸುರ ಶಕ್ತಿ ಬೆಳೆಯುತ್ತದೆ. ಮೊದಲ ಗುರುವಿಗೇ ಅಜ್ಞಾನ ಆವರಿಸಿದರೆ ಮಕ್ಕಳ ಗತಿ?
ಸಾಮಾನ್ಯ ಜ್ಞಾನವಿಲ್ಲದೆ ಎಷ್ಟು ವಿಶೇಷ ಜ್ಞಾನ ಬೆಳೆಸಿದರೂ ನೀರಿನಲ್ಲಿ ಹೋಮಮಾಡಿದಂತೆಯೇ ಸರಿ. ಭಾರತದ ಈ ಸ್ಥಿತಿಗೆ ಕಾರಣವೇ  ಪ್ರಜಾಪ್ರಭುತ್ವದ ಪ್ರಜೆಗಳ ಸಾಮಾನ್ಯ ಜ್ಞಾನ  ನಿರ್ಲಕ್ಷ್ಯ ಮಾಡಿಕೊಂಡು ವಿಶೇಷಜ್ಞಾನದಿಂದ‌ಲಕ್ಷ ಗಳಿಸುತ್ತಾ  ಸತ್ಯಜ್ಞಾನದಿಂದ ದೂರವಾಗಿರೋದು. ಪ್ರಜಾಪ್ರಭುತ್ವ. ಪ್ರಜೆಗಳ ಅಜ್ಞಾನದಿಂದ ನಡೆದರೆ ಅಧೋಗತಿ,ಸುಜ್ಞಾನದೆಡೆಗೆ ನಡೆಸೋದು ಧಾರ್ಮಿಕ ವರ್ಗದ ಪ್ರಗತಿಯಾಗಿತ್ತು.ಈ ವಿಚಾರವನ್ನು ಮಠಾಧೀಶರವರೆಗೂ ತಲುಪಿಸಿದರೂ ಸಾಮಾನ್ಯರೆನ್ನುವ ಕಾರಣದಿಂದ ಈವರೆಗೆ  ಪ್ರತಿಕ್ರಿಯೆ ನೀಡದಿರೋದು ಪರಮಾತ್ಮನ ಪ್ರೇರಣೆಯೆ ಆಗಿದ್ದರೂ ಸತ್ಯ ಹೊರಬರೋದು ಅವನ ಪ್ರೇರಣೆಯೆ ಆಗಿದೆ. ಒಟ್ಟಿನಲ್ಲಿ ಇಲ್ಲಿ ಅಧಿಕಾರ ಸ್ಥಾನಕ್ಕೆ ಕೊಡುವ ಗೌರವ ನಿಜವಾದ ಸತ್ಯಕ್ಕೆ ಸಿಗದ ಕಾರಣದಿಂದ ಇಂದು ಚಾಮುಂಡಿ ಅನ್ಯರ ವಶ ಆಗಲು ಹೊರಟಿದ್ದಾಳೆಂದರೆ ತಪ್ಪಲ್ಲ.
ಹಿಂದೂ ಸ್ತ್ರೀ ಶಕ್ತಿಯರಿಂದ ಎಷ್ಟೋ ಉತ್ತಮ ಪುಸ್ತಕಗಳು ರಚನೆಯಾಗಿದ್ದರೂ ಹಿಂದೂಗಳು ಅದನ್ನು ಬದಿಗಿಟ್ಟು  ಹಿಂದುಳಿದರೆ  ಅನ್ಯರು  ಅವರ ಧರ್ಮ ಬಿಟ್ಟು ಹೋದರೂ ಅವರನ್ನು ಬಿಡದೆ ಮೇಲಕ್ಕೆ ಏರಲು  ಬಿಡುವರೆಂದರೆ ನಮ್ಮ ತಪ್ಪು. ನಮಗೆ ನಾವೇ ಶತ್ರುವಾದರೆ  ಪರರನ್ನು ಪರಮಾತ್ಮನನ್ನು ಕಾರಣವೆನ್ನಲಾಗದು. ಇಂದಿಗೂ ನಮ್ಮ ಈ ಕುತಂತ್ರ ಬುದ್ದಿವಂತಿಕೆ ಸ್ವತಂತ್ರ ಜ್ಞಾನವನ್ನು ನಷ್ಟ ಮಾಡಿದೆ.
ಯಾರೂ ಶಾಶ್ವತವಲ್ಲ ಎಂದು ತಿಳಿದರೂ  ಮಾನವನಿಗೆ ತತ್ವಕ್ಕಿಂತ ತಂತ್ರವೇ‌ಮುಖ್ಯವಾಗುತ್ತಿದೆ.ಇದೇ‌ಮಾಯೆ.ಎಲ್ಲಾ ಒಮ್ಮೆ ಮಾಯವಾಗೋರೆ.ಈ ಪ್ರಶಸ್ತಿ ಯ ಹಿಂದಿನ ರಾಜಕೀಯ ಶಕ್ತಿಯೂ ಒಮ್ಮೆ ಮಾಯವಾಗೋದೆ ಎಂದಾಗ ಮಾನವ ಯಾವುದರ ಹಿಂದೆ ಓಡುತ್ತಿರುವುದು? 
ಸಂಘಟನೆಗಳು ರಾಜಕೀಯ ಬಿಟ್ಟು ಚರ್ಚೆ ನಡೆಸಿದರೆ ಸತ್ಯ ಒಳಗಿದೆ. ಆತ್ಮರಕ್ಷಣೆಗಾಗಿ ಸತ್ಯವೇ ದೇವರಾಗಬೇಕಿದೆ. ಇದು ಜನಸಾಮಾನ್ಯರಿಗೆ ಅರ್ಥ ವಾಗದಂತೆ ರಾಜಕೀಯತೆ ಬೆಳೆದು ಆಳುತ್ತಿದೆ. ಇದರಿಂದ ಮಾನವ ಮಾನವನಿಗೇ ಶತ್ರು.
ತನಗೆ ತಾನೇ ಮೋಸ ಹೋದಾಗ ತಪ್ಪು ಯಾರದ್ದು? ಕರ್ಮಕ್ಕೆ ತಕ್ಕಂತೆ ಫಲ ಇದೇ ಕರ್ಮ ಸಿದ್ದಾಂತ ವಾಗಿದೆ.

Monday, August 18, 2025

ಸರ್ವ: ವಿಷ್ಣು ಸಹಸ್ರನಾಮ



ಇಂದಿನ ನಾಮ 
ವಿಷ್ಣು ಸಹಸ್ರ ನಾಮ - ಪ್ರತಿಯೊಂದು ನಾಮದ ವಿವರಣೆ
ಸರ್ವ: ಶರ್ವ: ಶಿವಃ ಸ್ಥಾಣುರ್ಭೂತಾದಿರ್ನಿಧಿರವ್ಯಯಃ | ಸಂಭವೋ ಭಾವನೋ ಭರ್ತಾ ಪ್ರಭವಃ ಪ್ರಭುರೀಶ್ವರಃ ||೪ 

. ಸರ್ವ: - ಲೋಕದಲ್ಲಿ ಏನನ್ನು ನೋಡುತ್ತೇವೋ, ಏನನ್ನು ಕೇಳುತ್ತೇವೋ ಅವೆಲ್ಲವನ್ನೂ ಹೊಂದಿರುವವನು.

ವಿವರಣೆ : 'ಸರ್ವಂ ಸಮಾಪ್ನೋಷಿ ತತೋSಸಿ ಸರ್ವ'- ಲೋಕದಲ್ಲಿ ಏನನ್ನು ನೋಡುವೆಯೋ, ಏನನ್ನು ಕೇಳುವೆಯೋ ಅವೆಲ್ಲವನ್ನೂ ನೀನು ಹೊಂದಿರುವಿ. ಆದುದರಿಂದ ನೀನು ಸರ್ವ ಎಂದು ಅರ್ಜುನ ಕೃಷ್ಣನಲ್ಲಿ ನಿವೇದಿಸಿಕೊಂಡಿರುವನು.

'ವ್ಯಾಸೋಚ್ಛಿಷ್ಟಂ ಜಗತ್ ಸರ್ವಂ'- ಎಂದು ಒಂದು ಮಾತಿದೆ. ಜಗತ್ತಿನಲ್ಲಿ ಏನೇನಿದೆಯೋ ಅವೆಲ್ಲ ಶ್ರೀವೇದವ್ಯಾಸರ ವಾಹ್ಮಯದ ಉಚ್ಚಿಷ್ಟ, ಎಂಜಲು. ಅದರಂತೆ ಜಗತ್ತಿನಲ್ಲಿ ಯಾವ ಯಾವ ವಸ್ತುವಿನಲ್ಲಿ ಏನೇನು ಗುಣಗಳಿವೆಯೋ ಅದೇ ಗುಣಗಳನ್ನಲ್ಲದಿದ್ದರೂ, ಅಂತಹ ಗುಣಗಳನ್ನು ಪರಮಾತ್ಮ ಹೊಂದಿರುವನು. ಒಂದು ವಸ್ತು ನಷ್ಟವಾದಾಗ ಅದರಲ್ಲಿಯ ಗುಣಗಳನ್ನು ಪರಮಾತ್ಮನು ಸ್ವೀಕರಿಸುವನು, ಹೀಗೆ ಎಲ್ಲವನ್ನೂ ಹೊಂದಿರುವುದರಿಂದ ಸರ್ವ ಎನಿಸುವನು.
ಸರ್ವ ಶಕ್ತಿ ಸರ್ವಾತ್ಮ, ಸರ್ವೇಶ್ವರ, ಸರ್ವಸ್ವ ವನ್ನು ಆವರಿಸುವ ಪರಮಾತ್ಮನೊಬ್ಬನೆ ಆಗಿರುವನೆಂಬುದಾಗಿದೆ.
ಇಲ್ಲಿ ನಾನು ಬೇರೆ ನೀನೇ ಬೇರೆ ಎನ್ನುವುದು ಭ್ರಮೆಯಷ್ಟೆ.ಮಾಯೆಯ ವಶದಲ್ಲಿ ಜೀವನಿಗೆ ಎಲ್ಲಾ ನಾನೇ ಮಾಡುತ್ತಿರುವುದೆನ್ನುವಂತೆ ಅನುಭವವಾದರೂ ಆ ಮಾಯೆಯೂ ಪರಮಾತ್ಮನ ರೂಪವೇ ಆಗಿರುತ್ತದೆ ನ್ನಬಹುದು.ಅದಕ್ಕೆ ನಾನೆಂಬುದಿಲ್ಲ ಜಗತ್ ಮಿಥ್ಯ ಎನ್ನುವುದು ಅಧ್ವೈತ.




ಭೌತಿಕದಲ್ಲಿ  ಹೊರಗಿನ ದೃಷ್ಟಿಯಿಂದ  ನಮ್ಮ ಸುತ್ತಮುತ್ತಲಿನ ಪರಿಸ್ಥಿತಿಯನ್ನು  ಅರಿತು ನಡೆಯಲು ಇದನ್ನು ನಮ್ಮ ಇಂದಿನ ಸರ್ಕಾರಗಳಿಗೆ  ಹೋಲಿಸಿದರೆ ಇಲ್ಲಿ ಸರ್ಕಾರ ಏನೂ ಮಾಡುತ್ತಿಲ್ಲ ಎಲ್ಲಾ ಪ್ರಜೆಗಳ ಸಹಕಾರದಿಂದ ನಡೆದಿದೆ. ಎಲ್ಲಾ ಪಕ್ಷಗಳೂ ಜನ್ಮ ಪಡೆದಿರೋದು ಪ್ರಜೆಗಳ ಸಹಕಾರದಿಂದಲೇ  ಅವರ ಹಣವನ್ನು  ಹಿಂದಿರುಗಿ ಕೊಡುವುದು ಕೆರೆಯ ನೀರನು ಕೆರೆಗೆ ಚೆಲ್ಲಿದಂತೆ ಆದರೆ ಅದು ಧರ್ಮ ಸತ್ಯ ನ್ಯಾಯ ನೀತಿ ಸಂಸ್ಕೃತಿ ಗೆ ವಿರುದ್ದವಿದ್ದರೆ ಭ್ರಷ್ಟಾಚಾರ ವಾಗುತ್ತದೆ. ‌ಭ್ರಷ್ಟಾಚಾರವನ್ನು  ಬೆಳೆಸಿದಷ್ಟೂ  ಅದರ ಫಲವನ್ನು ಪ್ರಜೆಗಳೇ ಅನುಭವಿಸೋದು. ಹಾಗೆಯೇ ಎಲ್ಲಾ  ಪರಮಾತ್ಮನ ಒಳಗಿರುವ ಜೀವಾತ್ಮರೆ ಆದಾಗ ಆ ಸರ್ವ:  
ಲೋಕದಲ್ಲಿ ಏನನ್ನು ನೋಡುತ್ತೇವೋ, ಏನನ್ನು ಕೇಳುತ್ತೇವೋ ಅವೆಲ್ಲವನ್ನೂ ಹೊಂದಿರುವವನು ಒಬ್ಬನೇ ಪರಮಾತ್ಮ. ಇದನ್ನರಿಯದ ಮಾನವ ಸತ್ಯಧರ್ಮ ಬಿಟ್ಟು ವಿರೋಧಿಸಿದರೆ ಸರ್ವ ನಾಶಕ್ಕೆ ಕಾರಣನಾಗುವನು.
ವಿನಾಶಕಾಲೇ ವಿಪರೀತ ಬುದ್ದಿ ಎಂದಂತೆ ಜ್ಞಾನವಿಲ್ಲದೆ ಬುದ್ದಿ ಓಡಿಸಿದರೆ  ವಿನಾಶವೇ. ಶಾಶ್ವತವಿರದ  ಜೀವಕ್ಕಾಗಿ  ಜೀವನವಿಡೀ ಆತ್ಮವಂಚನೆಯಲ್ಲಿ  ರಾಜಕೀಯ ನಡೆಸಿದರೆ  ಎಲ್ಲರೊಳಗಿದ್ದು ನಡೆಸೋ  ಪರಮಾತ್ಮನ ಅರಿಯಲಾಗದು .




ಈ ಕೆಳಗಿನ ಪೋಸ್ಟ್ ನಲ್ಲಿ  ಅಕ್ಷರ ತಪ್ಪಾಗಿದೆ ಹಾಗಂತ ಒಳಗಿನ  ಅರ್ಥ ನಮಗೆ ಅರ್ಥ ವಾಗುತ್ತದೆಂದರೆ ಪರಮಾತ್ಮ ಒಳಗಿದ್ದು ಅರ್ಥ ಮಾಡಿಸುವನೋ ಹೊರಗಿದ್ದು ಅರ್ಥ ಮಾಡಿಸುವನೋ ನಮಗೇ ಬಿಟ್ಟ ವಿಚಾರ.
ಕೆಲವರು ತಪ್ಪನ್ನು ಹೊರಗೆ ಹುಡುಕಿ ಒಳಗಿದ್ದ ಸತ್ಯ ಒಪ್ಪದೆ ನಡೆದರೆ  ಕೆಲವರಿಗೆ ಹೊರಗಿನ ತಪ್ಪು  ಕಾಣದೆ ಒಳಗಿನ ತಪ್ಪು ತಿಳಿದು ಸರಿಯಾಗಿ ನಡೆಯುವರು.ಇಬ್ಬರೂ ಪರಮಾತ್ಮನ ಸಣ್ಣ ಬಿಂದುಗಳೇ ಆಗಿದ್ದರೂ ಹೊರಗಿನ‌ಬಿಂದು ಕೂಡಿಕೊಂಡು  ವಿರೋಧ ವ್ಯಕ್ತಪಡಿಸಿದರೆ ಒಳಗಿನ ಬಿಂದುಗಳು  ಸತ್ಯ ತೋರಿಸಲಾಗದೆ ಹಿಂದುಳಿಯುವರು. ಹಿಂದೂ ಸನಾತನ ಧರ್ಮ  ಹಿಂದುಳಿದಿರಲು ಕಾರಣವೇ ಒಗ್ಗಟ್ಟಿನ ಅಭಾವವೆನ್ನಬಹುದು.
ಏನೇ ಆದರೂ ಒಳಗಿಳಿದವರನ್ನು ಪರಮಾತ್ಮನೇ ನೇರವಾಗಿ ನಡೆಸುವಾಗ  ಹೊರಗುಳಿದವರು ಯಾರೂ ಏನೂ ಮಾಡಲಾಗದು. ಆಳವಾದ ಬೇರನ್ನು ರೆಂಬೆಕೊಂಬೆಗಳನ್ನು ಮುರಿದರೆ  ಕೀಳಬಹುದೆನ್ನುವುದು ಭ್ರಮೆಯಷ್ಟೆ.ಅದಕ್ಕೆ  ಎಷ್ಟೋ  ಆಕ್ರಮಣಗಳು ನಡೆದರೂ ಮತ್ತೆ ಮತ್ತೆ ಚಿಗುರುತ್ತದೆ ಸನಾತನಧರ್ಮ. ಏನಂತೀರ? ಆದರೆ ಚಿಗುರಿಗೆ ಸರಿಯಾದ ಲಾಲನೆ ಪೋಷಣೆ ಸಂಸ್ಕರಣೆ  ಮಾಡದಿದ್ದರೆ ಉಪಯೋಗವಿಲ್ಲ. ಇದು ಹಿಂದುಗಳಿಗೆ ಅರ್ಥ ವಾದರೆ ಉತ್ತಮ.  ಹೊರಗಿನ ರಾಜಕೀಯಕ್ಕಿಂತ ಒಳಗಿನ ರಾಜಯೋಗದಿಂದ  ಪರಮಾತ್ಮನ ದರ್ಶನ ವಾಗೋದು.
ಅವತಾರ ಪುರುಷ ಸ್ತ್ರೀ ಯರು  ಕಣ್ಣಿಗೆ ಕಾಣೋದಿಲ್ಲ.ಅವರ ಗುಣಜ್ಞಾನವರಿತು ನಡೆದರೆ  ಕಾಣುವರು ಎಂದರೆ ಒಳಗಿನ ಸರ್ವಾಂಗೀಣ ಪ್ರಗತಿ ಆರೋಗ್ಯವಾಗಿರಬೇಕಿದೆ.ಇದನ್ನು ಶಿಕ್ಷಣದಿಂದ  ಮಾಡಬೇಕಿತ್ತು. ಯಾರನ್ನೂ ಕಾರಣಕರ್ತ  ಎನ್ನುವ ಬದಲು‌ನಾನೇ ಎಲ್ಲದಕ್ಕೂ ಕಾರಣ ನನ್ನ ಸಹಕಾರವೇ ಕಾರಣವೆಂದು ಪ್ರಜೆಗಳಿಗೆ ಅರ್ಥ ವಾದರೆ  ಆತ್ಮರಕ್ಷಣೆಗಾಗಿ  ಪ್ರಯತ್ನ ಪಡಬಹುದು. ಹಣದಿಂದ ಕಷ್ಟ. ರಾಜಕೀಯದಿಂದ ನಷ್ಟ.  ಒಬ್ಬರನ್ನು ಇಳಿಸಿ ಇನ್ನೊಬ್ಬರು  ಅಧಿಕಾರ ಪಡೆದರೂ  ಮತದಾನ ಮಾಡುವ ಪ್ರಜೆಗಳ ಅಜ್ಞಾನ. ಹೋಗದಿದ್ದರೆ  ಯಾರ ಉದ್ದಾರವಾಗುತ್ತದೆ. ಎಲ್ಲಾ ನಾಟಕಮಯ. ಪಾತ್ರಧಾರಿಗಳಲ್ಲಿ  ನಿಂತು ಆಡಿಸುವವ ಒಬ್ಬನೇ  ಆದಾಗ  ಯಾರ ತಪ್ಪು ಸರಿ ತೀರ್ಮಾನಕ್ಕೆ ಬರಲು ಸಾಧ್ಯವೆ? ಆತ್ಮಸಾಕ್ಷಿಗೆ ವಿರುದ್ದ ನಡೆದಷ್ಟೂ ಸಂಕಷ್ಟವೆ. 

ಅಧ್ಯಾತ್ಮ ಮತ್ತು ಭೌತ ವಿಜ್ಞಾನ ವೆರಡೂ ಒಂದೇ ನಾಣ್ಯದ ಎರಡು ಮುಖ. ವ್ಯವಹಾರಕ್ಕೆ  ಇಳಿದಾಗ ಹಣಕ್ಕಾಗಿ ಧರ್ಮ ನಷ್ಟ, ಧರ್ಮಕ್ಕೆ ತಿರುಗಿದಾಗ ಹಣ ನಷ್ಟ.  ಯಾರಿಗೆ ನಷ್ಟ ಎಂದರೆ  ಜೀವಾತ್ಮನಿಗಷ್ಟೆ ಪರಮಾತ್ಮನಿಗಲ್ಲ. ಎಲ್ಲರೊಳಗಿದ್ದರೂ  ಎಲ್ಲರೂ ಅವನನ್ನು ಅರಿಯಲಾಗದು.
ಅಣುರೇಣುತೃಣಕಾಷ್ಟ ಪರಿಪೂರ್ಣ ಗೋವಿಂದ.
ಹೆಚ್ಚು ಲಾಭ ಮಾಡಿಕೊಂಡರೆ ನಷ್ಟ ಅನುಭವಿಸುವುದು ಸತ್ಯ. ಅಧರ್ಮ ಅಸತ್ಯಕ್ಕೆ ಬೆಲೆ ಹೆಚ್ಚಾದಂತೆ  ಸತ್ಯ ಧರ್ಮ  ಹಿಂದುಳಿಯುತ್ತದೆ. ಅದೇ ಮುಂದೆ ದೊಡ್ಡ ದೊಡ್ಡ ಸಮಸ್ಯೆಗೆ ಕಾರಣವಾದಾಗ ಮಾನವನೇ ಹಿಂದಿರುಗಿ‌ ಬಂದು ದಾನಧರ್ಮ  ಮಾಡುವನೆಂದರೆ ಕೆರೆಯನೀರನು ಕೆರೆಗೆ ಚೆಲ್ಲಿ ಎಂದಂತೆ . ಇಷ್ಟು ತಿಳಿದವರು  ಯಾವುದೂ ಅತಿಯಾಗದಂತೆ   ಸತ್ಯವರಿತು ಬದುಕುವರು. 

ಸರ್ಕಾರ ಕೊಡುವ ಭಾಗ್ಯಗಳು ಸಾಲ ಸೌಲಭ್ಯಗಳನ್ನು  ಪಡೆದವರು  ಶ್ರೀಮಂತ ನಾದರೂ  ಬಡವರೆ ಆಗಿರುವರು.
ಎಷ್ಟು ಕೊಟ್ಟರೂ ಸಾಲದು ಎಂದರೆ ಸಾಲವೇ ಅದು.
ದೊಡ್ಡ  ಮನೆ ಮಠ ಬಂಗಲೆ ಕಾರುಬಾರು  ನಡೆಸಿದರೂ ತೃಪ್ತಿ ಸಿಗದು ಎಂದರೆ ಪರಮಾತ್ಮನೆಡೆಗೆ ಜೀವಾತ್ಮ ನ ಪಯಣವಾಗಿಲ್ಲವೆಂದರ್ಥ. ಹಿಂದಿನ ಮಹಾತ್ಮರಲ್ಲಿ ಹಣವಿರಲಿಲ್ಲ ಅಧಿಕಾರವೂ ಇರಲಿಲ್ಲ ಆದರೂ ಆತ್ಮತೃಪ್ತಿ ಇತ್ತು. ಈಗ ಎಲ್ಲಾ ಇದೆ ಆತ್ಮಕ್ಕೆ ತೃಪ್ತಿ ಯಿಲ್ಲದೆ ಅತೃಪ್ತರೆ  ರಾಜಕೀಯಕ್ಕೆ ಇಳಿದಿರೋದೆಂದರೆ  ಅವರಿಗೆ ಸಹಕಾರ ಕೊಟ್ಟವರಿಗೂ ಅತೃಪ್ತಿಯೇ ಕಾಡುತ್ತದೆ. ಏನನ್ನೇ ಆಗಲಿ ಹಂಚಿಕೊಂಡಷ್ಟೂ ಬೆಳೆಯುತ್ತದೆ. ಹಾಗೆ  ಇದೂ ಒಂದು.

Sunday, August 17, 2025

ಕಲಿಯುಗದಲ್ಲಿ ಹೊಂದಾಣಿಕೆ ಕಷ್ಟವೆ?

ಎಲ್ಲವನ್ನೂ ಹೊಂದಿಕೊಂಡು ಹೊದ್ದುಕೊಂಡು  ಮಲಗೋದು ಸುಲಭ.ಆದರೆ ನಡೆಯೋದು ಕಷ್ಟ. ಹಿಂದೂ ಸನಾತನ ಧರ್ಮ ಹೇಳಿರೋದು ನಿನ್ನ ಧರ್ಮ ನಿನ್ನ ಕರ್ಮಕ್ಕೆ ತಕ್ಕಂತೆ ಹೊಂದಿಕೊಂಡಿರು ಅಂತ ಇಂದು ಅನ್ಯರ ಧರ್ಮ ಕರ್ಮಕ್ಕೆ ಹೊಂದಿಕೊಂಡು  ನಾವಂದುಕೊಂಡಂತೆ ಆಗುವುದೆನ್ನುವ ಭ್ರಮೆಯಲ್ಲಿ ಮುಂದೆ ನಡೆದಂತೆಲ್ಲಾ ಸತ್ಯ ದರ್ಶನ ವಾಗುತ್ತಿದೆ.ಇಲ್ಲಿ ನಮ್ಮ  ಸ್ವಂತ ಬುದ್ದಿ ಜ್ಞಾನವೇ ಹಿಂದುಳಿದಾಗ  ಅಂದುಕೊಂಡಿದ್ದೆ ಬೇರೆ ಆಗಿರೋದೆ ಬೇರೆ.
ಮಕ್ಕಳು ನಮ್ಮವರೆಂದು ಅಂದುಕೊಂಡು ಬೆಳೆಸಿ ದೊಡ್ವರಾದ ಮೇಲೆ  ಅವರು ನಮ್ಮವರಾಗೇ ಉಳಿಯದಿದ್ದರೆ ಕಾರಣ ಶಿಕ್ಷಣವಾಗಿರುತ್ತದೆ. ಅನ್ಯರ ಶಿಕ್ಷಣ, ವ್ಯವಹಾರ,ಸಾಲ ,ಬಂಡವಾಳದ ಪ್ರತಿಫಲ  ಅನ್ಯರ ಆಳಾಗಿ ಸೇವೆ ಮಾಡೋದಷ್ಟೆ.
ಇದನ್ನು ತಿಳಿಯಲು ಪುರಾಣ ಇತಿಹಾಸ ಕೆದಕಿದರೂ ಸಿಗದು.
ಕಾರಣ ಅಂದು ಎಲ್ಲರಲ್ಲಿಯೂ ಒಂದೇ  ರೀತಿಯ ಶಿಕ್ಷಣ ಇರದಿದ್ದರೂ ಅವರವರ ಮೂಲ ಧರ್ಮ ಕರ್ಮಕ್ಕೆ ತಕ್ಕಂತೆ ಜೀವನ ನಡೆದಿತ್ತು. ಆತ್ಮಾವಲೋಕನ ದಿಂದ  ಆಧ್ಯಾತ್ಮಿಕ ಚಿಂತನೆ  ವಾದ ವಿವಾದ ಚರ್ಚೆಗಳಾಗುತ್ತಿತ್ತು.ಈಗ ಭೌತಿಕದ ವಿಜ್ಞಾನದ ಹಿಂದೆ ನಡೆದು ಹಿಂದಿನವರ ಜ್ಞಾನವಿಲ್ಲ ಆದರೆ ಸಾಕಷ್ಟು ಹೊರಗಿನವರ ಹಣವಿದೆ. ಹೊರಗಿನ ಹಣ ಸಾಲವಾಗಿದೆ.ಸಾಲ ತೀರಿಸದಿದ್ದರೆ ನಾವಂದುಕೊಂಡಂತೆ ಆಗದು. ಸಾಲ ತೀರಿಸಲು  ಅನ್ಯರ ಮಾತನ್ನು ಕೇಳುತ್ತಾ ಹೊಂದಿಕೊಂಡು ಬಾಳಬೇಕು. ಹಾಗಾದರೆ ನಮ್ಮ ‌ಮಾತು ನಾವೇ ಕೇಳದ ಸ್ಥಿತಿಗೆ ಬಂದರೆ  ಆತ್ಮಾವಲೋಕನ ಅಸಾಧ್ಯ.
ಹೀಗೇ  ಒಳಗೆ  ಅಂದುಕೊಂಡಂತೆ ಹೊರಗಿರಲು ಕಷ್ಟವಾದಾಗ. ಆತ್ಮಹತ್ಯೆ ಗಳಾಗುತ್ತವೆ.
ಮಕ್ಕಳು ಇತ್ತೀಚಿನ ದಿನಗಳಲ್ಲಿ ಪೋಷಕರು ಸ್ವಲ್ಪ ಬೈದರೂ ಶಿಕ್ಷೆ ನೀಡಿದರೂ ಆತ್ಮಹತ್ಯೆಗೆ ಪ್ರಯತ್ನ ನಡೆಸುವರೆಂದರೆ ಎಷ್ಟು ಅಜ್ಞಾನ ಆವರಿಸಿದೆ ಎಂದು ತಿಳಿಯಬಹುದು.
ಇದಕ್ಕೆ ಕಾರಣವೇ  ಅತಿಯಾದ ಪರಾವಲಂಬನೆ, ಸುಖ, ವೈಭೋಗ, ಸೋಮಾರಿತನ  ಎನ್ನಬಹುದು.ಇದರಿಂದ ಸತ್ಯಜ್ಞಾನ  ಸಿಗದ ಕಾರಣ  ಭೌತಿಕದಲ್ಲಿ ನಾನಂದುಕೊಂಡದ್ದು ಸಾಧಿಸಲು  ಯಾವ ಮಾರ್ಗ ವಾದರೂ ಸರಿ ಎಂದು ಹಿಂದೆ ಮುಂದೆ ಅರಿಯದೆ ಯುವಪೀಳಿಗೆ  ನಡೆದಿರೋದು. ಇದರ ಪರಿಣಾಮ  ಭ್ರಷ್ಟಾಚಾರ. ಒಟ್ಟಿನಲ್ಲಿ ಶಿಷ್ಟಾಚಾರದಲ್ಲಿರಬೇಕೆಂಬ ಆಸೆ ಒಳಗಿದ್ದರೂ ಎಲ್ಲರನ್ನೂ ಹೊಂದಿಕೊಂಡಿರಬೇಕೆನ್ನುವ  ಸಮಾಜದ ಮಧ್ಯೆ  ಸಂಸಾರ ನಡೆಸೋದು ಕಷ್ಟ. ಧಾರ್ಮಿಕ ಕ್ಷೇತ್ರ ಶಿಕ್ಷಣ ಕ್ಷೇತ್ರವೇ  ಭ್ರಷ್ಟಾಚಾರಕ್ಕೆ ಸಹಕರಿಸಿದರೆ  ಸಾಮಾನ್ಯರ ಗತಿ ಅಧೋಗತಿ.
ಬೇಲಿಯೇ ಎದ್ದು ಹೊಲಮೇಯ್ದರೆ ಯಾರನ್ನು ಹೊಂದಿಕೊಂಡು ಬಾಳಬೇಕು.ಸ್ವಂತ ಬುದ್ದಿ ಜ್ಞಾನವಿಲ್ಲದಿದ್ದರೆ ಬದುಕಿಯೂ ವ್ಯರ್ಥ ಎನ್ನುವುದು ಸನಾತನ ಧರ್ಮ.
ಎಲ್ಲಿಯವರೆಗೆ ವಾಸ್ತವ ಅರ್ಥ ಆಗದೆ ಪುರಾಣ ಇತಿಹಾಸದ ರಾಜಕೀಯ ಪ್ರಚಾರವಿರುವುದೋ ಪ್ರಜಾಪ್ರಭುತ್ವ ದಾರಿತಪ್ಪಿ ನಡೆಯುತ್ತಿರುತ್ತದೆ. ಇಲ್ಲಿ ಪ್ರಜೆಗಳ ಸಾಮಾನ್ಯ ಜ್ಞಾನ ಬಿಟ್ಟು ಹೊರಗಿನವರ ವಿಜ್ಞಾನವೇ ದೇಶ ಆಳುತ್ತಿದೆ ಅಂದರೆ  ಯಾರನ್ನು ಯಾರು ಹೊಂದಿಕೊಂಡು ನಡೆದಿರೋದು?
ಒಟ್ಟಿನಲ್ಲಿ ಹಣವಿದ್ದರೆ ಹೆಣಕ್ಕೂ ಬೆಲೆ ಎಂದು ಹೂತಿರುವ ಬುರುಡೆ ಹಿಡಿದು ಕಾಲಹರಣ ಮಾಡೋದಕ್ಕೆ ಕೊಡುವ ಸಹಕಾರ  ನಿಜವಾದ  ಸತ್ಯ ಧರ್ಮ ತಿಳಿಸುವವರಿಗಿಲ್ಲದೆ  ಹೊದ್ದು ಮಲಗೋ ಜನಕ್ಕೆ  ಸೋಮಾರಿತನ ಬರೋದು ಸಹಜ.ಸೋ 'ಮಾರಿ'  ಬಂದಾಗ ಹೊಂದಿಕೊಂಡಿರಬೇಕು.
ರೋಗವನ್ನು ಹಂಚಿಕೊಳ್ಳಲು ಯಾರೂ ತಯಾರಿಲ್ಲವಲ್ಲ.
ಹೊನ್ನು ಹೆಣ್ಣು ಮಣ್ಣಿನ ಋಣ ತೀರಿಸಲು ಬಂದಿರುವ ಈ ಜೀವಾತ್ಮನಿಗೆ  ಪರಮಾತ್ಮನ ದರ್ಶನ ಆಗೋದಕ್ಕೆ  ಸ್ವಂತ ಬುದ್ದಿ ಜ್ಞಾನವೇ ಆಸ್ತಿ ಯಾಗಿದೆ. ಅದೇ ಅನ್ಯರ ವಶದಲ್ಲಿ ಇದ್ದರೆ  ಸ್ವತಂತ್ರ ಯಾರಿಗೆ ಸಿಕ್ಕಿದೆ?
ಪ್ರಕೃತಿ ವಿಕೋಪಕ್ಕೆ  ಸಾಕಷ್ಟು  ನೆಲಸಮವಾಗಿರುವ ಹೈಟೆಕ್ ತಂತ್ರಗಾರಿಕೆಯ ಹಿಂದೆ ನಡೆದು ದೇಶವನ್ನು ಸಾಲಕ್ಕೆ ಬಿಟ್ಟರೆ ದೇಶಭಕ್ತಿ ಎನ್ನಬೇಕೆ? ಜನಮರುಳೋ ಜಾತ್ರೆಯೂ ಎಂದಂತಿದೆ ಭಾರತೀಯರ ಪರಿಸ್ಥಿತಿ. ಯಾರೋ ಒಬ್ಬ ವ್ಯಕ್ತಿಯನ್ನು ನಂಬಿ ನಮ್ಮ ಹತ್ತಿರದ ಶಕ್ತಿಯನ್ನು ನಂಬದಿದ್ದರೆ ಬಿಡುವಳೆ ಶಕ್ತಿ. 
ಭಾರತ ಮಾತೆ ಕನ್ನಡಮ್ಮನ ಹೆಸರಿನಲ್ಲಿ ರಾಜಕೀಯಕ್ಕೆ ಇಳಿಯುವ ಮೊದಲು ಸೇವೆಯ ಅರ್ಥ ತಿಳಿದರೆ ನಮ್ಮ  ಸ್ವಂತಿಕೆ  ಉಪಯೋಗಕ್ಕೆ ಬರಬಹುದು.
ಭಾರತೀಯ ಮಕ್ಕಳನ್ನು ವಿದೇಶದಲ್ಲಿ ದುಡಿಯಲು ಬಿಟ್ಟು ವಿದೇಶಿಗರನ್ನು ವ್ಯವಹಾರಕ್ಕೆ ಕರೆದು ಕೂರಿಸಿ ಸನ್ಮಾನ ಮಾಡಿದರೆ ಅವರ ಬಂಡವಾಳ,ಸಾಲದಡಿ ನಮ್ಮ ಮಕ್ಕಳು ದುಡಿಯಲೇಬೇಕು. ಸಂಸ್ಕಾರ ಸಂಸ್ಕೃತಿ ಭಾಷೆ ಧರ್ಮದ ಜ್ಞಾನವಿಲ್ಲದವರೊಂದಿಗೆ ಹೊಂದಿಕೊಂಡು ಬಾಳಬೇಕೆಂದರೆ  ಅಜ್ಞಾನವಷ್ಟೆ. ಇದರಿಂದ ಆತ್ಮಹತ್ಯೆಗಳು ಹೆಚ್ಚಾಗಿವೆ. ಇದರ ಬಗ್ಗೆ ಚರ್ಚೆ ಮಾಡೋದು ಕಷ್ಟವಿದೆ.ಕಾರಣ ಇದಕ್ಕೆ ಸಹಕಾರ ಕೊಟ್ಟವರೆ  ಈಗ ರಾಜರಂತೆ ಆಳುತ್ತಿರುವವರು. ಇದರಿಂದ ಮನುಕುಲಕ್ಕೆ ಕಷ್ಟ ನಷ್ಟ. ಇದಕ್ಕೆ ಕಾರಣವೇ ನಾನೇ ಸರಿ ಎನ್ನುವ ದುರಹಂಕಾರ ಸ್ವಾರ್ಥ ವಾಗಿದೆ. ಇದೊಂದು ಅಸುರಿ ಗುಣವಾದ್ದರಿಂದ ಅಸುರರನ್ನು ಹೊಂದಿಕೊಂಡು ಬಾಳಿದರೆ ಭೂಮಿಯನ್ನು ಆಳೋದು ಅಸುರರೆ. ಕಾಲಹರಣ ಮಾಡದೆ ಆತ್ಮಾವಲೋಕನ ಮಾಡಿಕೊಂಡರೆ ಬದಲಾವಣೆ ಹತ್ತಿರವಿದೆ. ದೂರ ನಡೆದಷ್ಟೂ ಸಂಕಷ್ಟವೇ.
ಯಾರಿಗೆ ಗೊತ್ತು ಯಾರು  ದೇಶ ಆಳೋರು ಹಿಂದು‌ ಮುಸ್ಲಿಂ ಕ್ರೈಸ್ತನಾಗಿ ಹಿಂದಿನ‌ಜನ್ಮದಲ್ಲಿದ್ದರೆಂದು. ಅಂದಿನ  ಜ್ಞಾನವೇ ಇಂದಿಗೂ ಇರುತ್ತದೆ. ಅದೇ ವಿಜ್ಞಾನ ವ್ಯವಹಾರ ಸಾಲ ಮುಂದೆ ಬರುತ್ತದೆ. ಆದರೆ ಜ್ಞಾನದ ವಿಷಯದಲ್ಲಿ  ಅಂತರವಿದ್ದರೂ ಭಾರತೀಯ  ಹಿಂದಿನ ತತ್ವಶಿಕ್ಷಣ,ಇಂದಿನ ತಂತ್ರ ಶಿಕ್ಷಣ ಮುಂದಿನ‌ ಯಂತ್ರಮಾನವರನ್ನು  ಬೆಳೆಸಬಾರದಲ್ಲವೆ?
ಮಕ್ಕಳು ಯಂತ್ರಕ್ಕೆ ಸಮಾನರೆ? ಸ್ವತಂತ್ರ ಜ್ಞಾನವಿಲ್ಲವೆ?
ಆತ್ಮಾವಲೋಕನ ದಿಂದ ಸ್ವತಂತ್ರ ಮಾನವನಾಗಬಹುದು.
ಮಾನವನ ನಂತರವೇ ಮಹಾತ್ಮರನ್ನು ಅರಿಯಬಹುದು.
ಯಾರದ್ದೋ  ಜ್ಞಾನ ಬುದ್ದಿವಿಷಯಗಳನ್ನು ತಲೆಗೆ ತುಂಬುವ ಮೊದಲು  ಇದರಿಂದ ಆತ್ಮರಕ್ಷಣೆ ಆಗುವುದೆ ಎನ್ನುವ ಜ್ಞಾನ ಪೋಷಕರಲ್ಲಿದ್ದರೆ  ಕ್ಷೇಮ. 
 ಸತ್ಯವಿರುವ ಪೋಸ್ಟ್ ಹಂಚಿಕೊಳ್ಳಲು ಹಿಂದೆ ಮುಂದೆ ನೋಡುವ ನಾವು  ಯಾರನ್ನು ಹೊಂದಿಕೊಂಡು ಬಾಳುತ್ತಿದ್ದೇವೆ? ಪರಮಾತ್ಮನನ್ನೋ ಪರಕೀಯರನ್ನೋ?
ಪರಮಾತ್ಮ ಕಾಣೋದಿಲ್ಲ ಪರಕೀಯರು ಕಾಣುವರು.
ಕಣ್ಣಿಗೆ ಕಾಣೋರು ಶಾಶ್ವತ ವಲ್ಲ. ಇದನ್ನು ಯಾರೂ ವಿರೋಧಿಸುವ ಹಾಗಿಲ್ಲ.ಅದಕ್ಕೆ  ಚರ್ಚೆ ಆಗೋದಿಲ್ಲ.
ಅನಾವಶ್ಯಕ ವಿಚಾರಗಳನ್ನು ಮನೆ ಮನೆಗೆ ತಲುಪಿಸೋದೆ  ಕರ್ಮ ವಾಗಿ ಕಾಡುತ್ತಿದೆಯಷ್ಟೆ.

Saturday, August 16, 2025

ಅವಕಾಶದ ಸದ್ಬಳಕೆಯಾಗಬೇಕು

ಅವಕಾಶಗಳೆಲ್ಲವೂ ಅನುಭವವನ್ನು ಹೆಚ್ಚಿಸುತ್ತದೆ ಆದರೆ ಎಲ್ಲವನ್ನೂ  ಪಡೆಯುವುದು ಕಷ್ಟ. ಸಂಸಾರ ಮತ್ತು ಸಮಾಜದ‌ಮಧ್ಯೆ ನಡೆಯುವ ಪ್ರತಿಯೊಂದು ಕಾರ್ಯಕ್ರಮದಲ್ಲಿ ಭಾಗವಹಿಸಲಾಗದು. ಕಾರಣ ಒಂದೇ ವೇಳೆಯಲ್ಲಿ ಎರಡೂ ಕಡೆ ಕಾರ್ಯಕ್ರಮ ಇದ್ದಾಗ  ಒಂದು ಆಯ್ಕೆ ಅನಿವಾರ್ಯ ವಾಗುತ್ತದೆ.
ಸಾಮಾಜಿಕ ಕ್ಷೇತ್ರದಲ್ಲಿರುವವರಿಗೆ ಎರಡೂ ಕಡೆಹೋಗಬೇಕು ಇಲ್ಲದಿದ್ದರೆ ತಾಳತಪ್ಪಿದಂತೆ. ಎಷ್ಟೋ ಕಲಾವಿದರು ರಾಜಕಾರಣಿಗಳು ಪ್ರತಿಷ್ಟಿತರ ಕಾರ್ಯಕ್ರಮ ಪ್ರತಿದಿನ ಹೊರಗೆ ಇರುವುದರಿಂದ ಅವರ ಜೀವನ ನಡೆಯುವುದೇ ಹೀಗೆ ಜನಬಲ ಹಣಬಲ ಅಧಿಕಾರ ಬಲದಿಂದ ಆಗ ತಮ್ಮ ಸ್ವಂತ ಜ್ಞಾನ ಬಳಸೋದಕ್ಕೆ ಸಮಯವಿರದು. ಹೀಗಾಗಿ ಅವಕಾಶವನ್ನು ಬಿಡದಂತೆ ಬಿಡುವಿಲ್ಲದ ಸಮಯದಲ್ಲೂ ಬಿಡುವು ಮಾಡಿಕೊಂಡು ತಿರುಗಬೇಕು. ದೇಹಕ್ಕೆ ದಣಿವು  ಮನಸ್ಸಿನ  ಕಿರಿಕಿರಿ  ಸಂಸಾರದ ಸಮಸ್ಯೆ ಯಾವುದೂ ಲೆಕ್ಕಕ್ಕೆ ಬರದು. ಆ ದಾರಿಯಲ್ಲಿ  ಉಳಿದವರೂ ನಡೆದರೆ ಗತಿ ಏನು?
ಒಟ್ಟಿನಲ್ಲಿ ಹೊರಗಿನ ಓಡಾಟ ಹೆಚ್ಚಾದಂತೆ ಒಳಗಿನ ಓಡಾಟ ಕಡಿಮೆಯಾಗುತ್ತದೆ. ಒಳಗೇ ಹೋಗಿ ಅರಿವು ಮೂಡಿಸಿದರೆ ಸಂತೃಪ್ತಿ ಸಂತೋಷ  ಶಾಂತಿ  ಸಿಗುತ್ತದೆ ಎನ್ನುವ ಕಾರಣಕ್ಕಾಗಿ
ನಿನ್ನ ಆತ್ಮಸಂತೋಷಕ್ಕಾಗಿ ನೀನು ಬದುಕೋದನ್ನು ಕಲಿ ಎಂದರು. ಈಗ ಬೇರೆಯವರ ಒತ್ತಾಯ ಒತ್ತಾಸೆ ಒಳಿತಿಗಾಗಿ  ದಾರಿತಪ್ಪಿ ನಡೆದು  ಬೇರೆಯವರ ಅಡಿಯಾಳಾಗಿ ಕಾರ್ಯಕ್ರಮ ನಡೆಸುತ್ತಾ ಹೊರಗೆ ತಳುಕುಬಳುಕಿನ ಜೀವನ ಒಳಗೆ ಹುಳುಕು ಇದ್ದರೂ ಹುಡುಕಲಾಗದ ಸಂಕಟ. ಇಷ್ಟೇ ಜೀವನ. ಯಾರದ್ದೋ ದೇಹವನ್ನು ದೇಶವನ್ನು ಯಾರೋ  ನಡೆಸಿದರೆ  ನಮ್ಮದೇನಿರುತ್ತದೆ. ಪರಮಾತ್ಮನ ಹೆಸರಿನಲ್ಲಿ ನಡೆಸೋ ವ್ಯವಹಾರದಲ್ಲಿ ಹಣವಿದ್ದರೂ ಸದ್ಬಳಕೆಯಾದರೆ ಸರಿ ದುರ್ಭಳಕೆ ಆದಷ್ಟೂ ಅಧರ್ಮ ವೇ.
ದಕ್ಷಿಣಭಾರತದಲ್ಲಿನ ಆಚರಣೆ ಉತ್ತರದಲ್ಲಿಲ್ಲ. ದಕ್ಷಿಣದ ದಿಕ್ಕು ಯಮನ ದಿಕ್ಕು ಅಂದರೆ ಧರ್ಮ ದ ಕಡೆಗೆ ಹೋಗಲು ಮಾನವ ಪ್ರಯತ್ನ ಪಡಬೇಕು. ಉತ್ತರದಲ್ಲಿ  ಶಿವನಿರೋವಾಗ ಅಧರ್ಮಕ್ಕೆ ಸರಿಯಾಗಿ ಪೆಟ್ಟು ಕೊಟ್ಟು ಲಯದ ಕೆಲಸ ನಿರಂತರವಾಗಿ ನಡೆದಿರುತ್ತದೆ.ಹಾಗಾಗಿ ಜನರು ಎಚ್ಚರವಾಗಿರುವರು. ಹಣವಿಲ್ಲದೆ ಜೀವನವಿಲ್ಲ ಹೀಗಾಗಿ ಸತ್ಕರ್ಮದ ಕಾರ್ಯ ಕ್ರಮವನ್ನು  ನಡೆಸುವಾಗ ಸ್ವಚ್ಚತೆ ಅಗತ್ಯವಿದೆ. ಇತ್ತೀಚಿನ ದಿನಗಳಲ್ಲಿ ಹೊರಗಿನ ಕಾರ್ಯಕ್ರಮ ಬೆಳೆದು ಮನೆಯೊಳಗೆ ನಡೆಯುತ್ತಿದ್ದ ಕಾರ್ಯಕ್ರಮ ನಿಂತಿದೆ. ಪ್ರತಿದಿನ ಪೂಜೆ ಮಾಡುತ್ತಿದ್ದವರು ಬಿಟ್ಟು ಹೊರಗೆ ದುಡಿಯುವ ಸ್ಥಿತಿಗೆ ಬಂದಿದೆ. ಇದರಿಂದಾಗಿ ಮನೆಯೊಳಗೆ ಸಮಸ್ಯೆ ಹೆಚ್ಚಾಗುತ್ತಾ ಜನ ಹೊರಗೆ ಬಂದರೆ ಸಮಸ್ಯೆ ಕಡಿಮೆಯಾಗುವುದೆ? ಭಾರತದಂತಹ ‌ಮಹಾದೇಶ ಮಹಿಳೆಯರ  ಸಂಪಾದನೆಗೆ ಒತ್ತು ಕೊಡುತ್ತಿದೆ ಎಂದರೆ ಇಲ್ಲಿ ಧರ್ಮ ಎಲ್ಲಿದೆ? ಅಂದರೆ ಭೂಮಿಯ ಋಣ ತೀರಿಸಲು ಪುರುಷನಿಗೆ ಉದ್ಯೋಗ ಅಗತ್ಯ.ಅದೂ ಉತ್ತಮ ಸಂಪಾದನೆಯಿಂದಷ್ಟೆ ತೀರಿಸಬೇಕಿತ್ತು. ಮನೆಯೊಳಗೆ ಇದ್ದ ಲಕ್ಮಿಯರನ್ನು ಹೊರಗೆ ಕಳಿಸಿದರೆ ಋಣ ತೀರುವುದೆ? 
ಅಜ್ಞಾನದ ಕಣ್ಣಿಗೆ ಹಣ ಮಾತ್ರ ಕಾಣೋದು ಋಣವಲ್ಲ. ಹೀಗಾಗಿ ಎಷ್ಟು ಹಣ ಬಂದರೂ ತೃಪ್ತಿ ಸಿಗದೆ ಹೊರಗಿನ ಕಾರ್ಯಕ್ರಮ  ನಡೆಯುತ್ತಿದೆ. ಆತ್ಮ ನಿರ್ಭರ ಭಾರತಕ್ಕೆ ಬೇಕಾದ ಅಧ್ಯಯನ  ಅಭ್ಯಾಸಬಲ ಹಿಂದಿನ ಕಾಲದ ಸಾತ್ವಿಕ ಶಿಕ್ಷಣದಲ್ಲಿತ್ತು. ಹೀಗಾಗಿ ಮನೆ ಮನೆ ಗುರುಕುಲವಾಗಿ ಕಾರ್ಯಕ್ರಮ ಒಳಗೇ ನಡೆದಿತ್ತು. ಇಂತಹ ಅವಕಾಶದಿಂದ ದೂರವಾಗಿರುವ ನಮಗೆ ಈಗ ಹೊರಗಿನ ಅವಕಾಶಕ್ಕಾಗಿ ಕಾಯುವ ಸ್ಥಿತಿ ಬಂದಿದೆ. ಆತ್ಮಾವಲೋಕನಕ್ಕೆ ಸಮಯವಿಲ್ಲದ ಮೇಲೆ ಅವಕಾಶ ಸದುಪಯೋಗವಾಗುವುದೆ? ಒಟ್ಟಿನಲ್ಲಿ ಅನುಭವಕ್ಕೆ ಕೊರತೆಯಿಲ್ಲ.ಸಂತೋಷ ತಾತ್ಕಾಲಿಕ ವಾಗಿರುತ್ತದೆ. 
ಹೆಂಡತಿ‌ಮಕ್ಕಳು ಮನೆಯೊಳಗಿದ್ದರೆ ಸಂತೋಷ. ಅವರು ಹೊರಗೆ ಹೊರಟಷ್ಟೂ ನಷ್ಟ. ಆಸೆಯೆನ್ನುವ ಭೂತ ಒಳಗೆ ಸೇರೋದಕ್ಕೆ ಹೊರಗಿನ ಅವಕಾಶ ಸಹಾಯ ಮಾಡುತ್ತದೆ.
ಆದರೆ ಒಳ್ಳೆಯ ಆಸೆಗೆ ಅವಕಾಶವಿದ್ದರೆ ಬಿಡಬಾರದಷ್ಟೆ.
ನಮ್ಮಿಂದ ಇನ್ನೊಬ್ಬರೂ ಬೆಳೆಯುವರೆಂದರೆ ಸರಿ.ಅದರಲ್ಲಿ ಅಧ್ಯಾತ್ಮದ ಉನ್ನತಿ ಇದ್ದರೆ ಪ್ರಗತಿ ಸದ್ಗತಿ ಪ್ರಾಪ್ತಿ.
ಕೇವಲ ರಾಜಕೀಯ  ಪ್ರಗರಿಯಾದರೆ ದುರ್ಗತಿಯಷ್ಟೆ.
ಸಾಮಾನ್ಯವಾಗಿ ಪ್ರತಿಯೊಂದು ಕಾರ್ಯಕ್ರಮದಲ್ಲಿ  ಪ್ರತಿಷ್ಡೆ ಸನ್ಮಾನ  ಊಟ ಉಪಚಾರ ದ ಜೊತೆಗೆ ರಾಜಕೀಯ ಇರುತ್ತದೆ. ಹೀಗಾಗಿ ಇದರಿಂದ ನಮ್ಮ ಆತ್ಮರಕ್ಷಣೆ ಆಗುವುದೆ ಇಲ್ಲವೆ ಎನ್ನುವ ಬಗ್ಗೆ ಗಮನವಿದ್ದರೆ ಉತ್ತಮ.

Monday, August 11, 2025

ಹಿಂದುಳಿದವರು ಮುಂದುವರಿದವರು ಯಾರು?

ಹಿಂದೂಸ್ತಾನ್ ಹಿಂದೂ ಧರ್ಮ ಹಿಂದುಳಿದವರು..ಎಲ್ಲವೂ ಒಂದೇ ಎನ್ನುವ ಪ್ರಶ್ನೆಗೆ ಉತ್ತರ ಹಲವು ಬರುತ್ತದೆ. ಬೇರೆ ಮಾಡೋದು ತಂತ್ರಜ್ಞಾನ ಒಂದು ಮಾಡೋದು ತತ್ವಜ್ಞಾನ ಎಂದಂತೆ ಎರಡರಿಂದ ಮೂರು‌ನಾಲ್ಕು ....ಸಾವಿರ ಕೋಟಿಯಾಗಿ ಬೆಳೆದಿರುವ  ಮನಸ್ಸುಗಳನ್ನು ಒಂದು ಮಾಡೋದರ ಹಿಂದೆ ಹೋದವರು  ಹಿಂದುಳಿದವರಂತೆ ಕಂಡಿದ್ದು  ಬೇರೆ ಮಾಡುತ್ತಾ‌ಮುಂದೆ ಹೋದವರಿಗಷ್ಟೆ. ಇದರಲ್ಲಿ ಅಧ್ಯಾತ್ಮ ಸತ್ಯ ಭೌತಿಕ‌ಮಿಥ್ಯ ತಮ್ಮದೇ ಆದ ಅನುಭವಗಳಿಂದ ಮಾನವನಿಗೆ ದಾರಿ ತೋರಿಸಿರುವುದರಿಂದ  ಆ ದಾರಿಯಲ್ಲಿ ನಡೆದವರಿಗೆ ಸತ್ಯ ಮಿಥ್ಯಗಳ ಎರಡೂ ಅನುಭವಗಳಾಗಿದೆ.
ನಮ್ಮ ಸ್ಥಾನಮಾನಕ್ಕಾಗಿ  ಮುಂದೆ ಮುಂದೆ ಹೋಗುವಾಗ ಹಿಂದೆಯೇ ನಡೆದು ಬರುವ ಋಣ ಕರ್ಮ ಗಳು ಕಾಣದು.
ಮತ್ತೆ  ಅದನ್ನು ತೀರಿಸಲು  ಅದೇ ಜೀವಾತ್ಮ ಬಂದಾಗ  ಹಿಂದಿನ ಸ್ಥಿತಿಗೆ ವಿರುದ್ದ ಮನಸ್ಥಿತಿ ಇರಬಹುದು. ಯಾರು ಸರಿಯಾದ ಮಾರ್ಗ ದರ್ಶನದಲ್ಲಿ ಮಾರ್ಗದಲ್ಲಿ ನಡೆದಿರುವರೋ ಅವರು ಗುರಿತಲುಪಿ  ಜೀವನ್ಮುಕ್ತಿ ಪಡೆದರು. ವಾಸ್ತವದಲ್ಲಿ  ನಾವೆಲ್ಲರೂ  ಹಿಂದಿರುಗಿ ಬಂದಿರುವ ಜೀವಾತ್ಮರಾದರೂ ನಮಗೆ ಮಾರ್ಗ ದರ್ಶನ ಮಾಡಿಸುವ‌  ಗುರುಹಿರಿಯರು  ನಮ್ಮವರೆ ಎನ್ನುವ ಪ್ರಶ್ನೆ  ಹಾಕಿಕೊಂಡರೆ  ಸನಾತನಧರ್ಮದ ಈ ಸ್ಥಿತಿಗೆ ಕಾರಣ ಮತ್ತು ಪರಿಹಾರ ಇದ್ದಲ್ಲಿಯೇ ಸಿಗಬಹುದು.
ಹಿಂದುಳಿದವರು ಯಾರು? ಹಣವಿಲ್ಲದವರೆ ಜ್ಞಾನವಿಲ್ಲದವರೆ?
ಸುಜ್ಞಾನವಿಲ್ಲದೆ ಅಜ್ಞಾನದಿಂದ  ಹಣದ‌ಹಿಂದೆ ನಡೆದು ಶ್ರೀಮಂತ ರಾದರೆ  ಮುಂದುವರಿದವರಾಗುವರಾದರೆ  ನಾವ್ಯಾಕೆ  ಹಿಂದಿನ ಮಹಾತ್ಮರನ್ನು  ಆರಾಧಿಸಬೇಕು? ಬೇಡಬೇಕು? 
ದಾಸ ಶರಣ,ಸಂತ ಮಹಾತ್ಮರುಗಳು  ಸುಜ್ಞಾನದ ಗಣಿಗಳು.
ಪರಮಾತ್ಮನ ಹಿಂದೆ ನಡೆದ ಸನಾತನಿಗಳು ಹಿಂದೂಗಳು.
ಅವರಲ್ಲಿದ್ದ ನಿಸ್ವಾರ್ಥ ನಿರಹಂಕಾರ  ಮತ್ತುಪ್ರತಿಫಲಾಪೇಕ್ಷೆ ಇಲ್ಲದ  ಸೇವೆಯನ್ನು  ನಾವೀಗ‌ಕಾಣಬಹುದೆ? 
ಜಗತ್ತನ್ನು ಆಳಲು ಹೊರಡುವುದು ರಾಜಕೀಯ ದ ಲಕ್ಷಣ
ಜಗತ್ತನ್ನು ಅರಿತು ಆಳಾಗಿ ಬದುಕುವುದೇ ರಾಜಯೋಗದ ಲಕ್ಷಣ. ಹಿಂದುಳಿದವರಲ್ಲಿರುವ  ಸಾಮಾನ್ಯಜ್ಞಾನ  ವಿಶೇಷ‌ಜ್ಞಾನಿಗಳಲ್ಲಿ ಕಾಣೋದಿಲ್ಲ. ಕಾರಣ ಭೂಮಿಯಲ್ಲಿ ಜೀವನ ನಡೆಸುತ್ತಿರುವ ಅರಿವು ಮಾನವನಿಗೆ ಅಗತ್ಯವಿದೆ.
ಯಾವಾಗ ಆಕಾಶದೆತ್ತರ ಹಾರೋದಕ್ಕೆ  ವಿಶೇಷವಿಜ್ಞಾನ‌ಬೆಳೆಯಿತೋ ಅಂದೇ ಭೂಮಿ ಕಾಣದೆ  ದುರ್ಭಳಕೆ ಆಯಿತು.
ಎಲ್ಲವೂ ರಾಜಕೀಯಮಯ. ಯಾರದ್ದೋ ದುಡ್ಡು ಯಾರದ್ದೋ ಜ್ಞಾನ  ಹಿಡಿದು ಯಾರನ್ನೂ ಆಳೋದರಲ್ಲಿ  ಧರ್ಮ ವಿದೆಯೆ ಇಲ್ಲವೆ ಎನ್ನುವ ಬಗ್ಗೆ ಇನ್ಯಾರೋ ಮಧ್ಯೆ ಬಂದು ವಾದ ವಿವಾದ‌ಮಾಡೋದರಲ್ಲಿಯೇ ನಮ್ಮ ಜೀವನ‌ಮುಗಿಯುತ್ತದೆ.ಒಳಗೇ ಅಡಗಿದ್ದ ಅಪಾರವಾದ ಜ್ಞಾನಶಕ್ತಿ ಹಿಂದುಳಿದಾಗ  ಹೊರಗಿನವರ ವಿರುದ್ದಹೋರಾಟ ಮಾಡಿದರೆ ಜ್ಞಾನ‌ಬರುವುದೆ?
ಒಟ್ಟಿನಲ್ಲಿ ನಮ್ಮ ಅಜ್ಞಾನದ ಫಲವೇ ಈ ಸಾಲ. ಎಷ್ಟು ಹಣ ಇದ್ದರೂ ಸಾಲದು.ಸಾಲವೇ ಅದು.
ಇದನ್ನು ತೀರಿಸದೆ ಮುಕ್ತಿಯಿಲ್ಲ ಎನ್ನುವುದು ಸತ್ಯ.ಹೀಗಾಗಿ ಹಿಂದೆ  ಕೊನೆಗಾಲದಲ್ಲಿ ಎಲ್ಲಾ ದಾನ‌ಮಾಡಿ ಸಂನ್ಯಾಸಿಗಳಾಗೋದು ನಡೆದಿತ್ತು.ಈಗಲೂ ಎಲ್ಲಾ ದಾನ ಮಾಡಿ  ಮಠ ಸೇರುವುದಿದೆ. ಇದು ಕೆಲವರಿಗಷ್ಟೆ ಆಗುತ್ತದೆ.
ಆದರೆ  ಮಿತಿಮೀರಿದ ಸಂಪಾದನೆಯ ಹಿಂದೆ ಇರುವ ಅತಿಯಾದ ಸಾಲದ ಚುಕ್ತ  ಆಗುವುದೆ ಇಲ್ಲವೆ ಎನ್ನುವ ಪ್ರಶ್ನೆಗೆ ಉತ್ತರ ಯಾರೂ ಕೊಟ್ಟಿಲ್ಲ.ಕೊಡಲಾಗೋದಿಲ್ಲ.
ಶ್ರೀ ಕೃಷ್ಣ ಪರಮಾತ್ಮನಿಗೇ ಜನನ‌ಮರಣವಿದೆ ಎಂದರೆ ಅವನೊಳಗಿರುವ ಭಕ್ತಿರಿಗಿಲ್ಲವೆ? ಭಕ್ತಿಯಲ್ಲಿಯೂ  ಎರಡಿದೆ
ಒಂದು  ಯೋಗದಿಂದ ಬೆಳೆಯೋದು.ಇನ್ನೊಂದು ಭೋಗಕ್ಕೆ ಸೇರೋದು.
 ಯೋಗದಿಂದ ಭಕ್ತಿಉಕ್ಕಿದರೆ  ಯೋಗಿಯಾಗುವನು. ಭೋಗದಿಂದ ಗಳಿಸಿದವನು  ರೋಗಿಯಾಗುವನು.
ದೇವರು ಕೇಳಿದ್ದೆಲ್ಲಾ ಕೊಡುವನು. ಹೇಗೆ ಸರ್ಕಾರ ಎಲ್ಲರಿಗೂ ಕೇಳಿದ್ದು ಕೊಟ್ಟು  ನಂತರ  ಹಿಂದಿರುಗಿ ಪಡೆಯುವುದೋ ಹಾಗೆ. ಉಚಿತ ಬಸ್ ಭಾಗ್ಯ..ಮಹಿಳೆಯರಿಗೆ..ಉಚಿತವಾಗಿ ಮನೆಯಿಂದ ಹೊರಗೆ ಬಂದು ತಿರುಗಾಡಬಹುದು.ಆದರೆ ಕಣ್ಣಿಗೆ ಕಾಣುವ ವಸ್ತು ಒಡವೆ ಇನ್ನಿತರ  ಸಾಮಾಗ್ರಿಗಳೂ ಮನೆಗೆ ಹೋಗುವಾಗ ಕೈ ಸೇರುತ್ತದೆ ಎಂದರೆ ವ್ಯಾಪಾರ ವ್ಯವಹಾರ ಜೋರಾಗಿದೆ ಎಂದರ್ಥ. ಇದರಿಂದಾಗಿ ಹಣ ಉಳಿತಾಯವಾಯಿತೆ?
ಎಲ್ಲೋ ಕೆಲವರಿಗೆ  ಮಾತ್ರ ಈ ಭಾಗ್ಯಗಳಿಂದ ಉಪಯೋಗವಾಗಿದೆ. ಹಾಗೆ ದೇವರು ಕೊಟ್ಟಿದ್ದರಲ್ಲಿ  ಜೀವನ ನಡೆಸೋದಕ್ಕೂ ಜ್ಞಾನವಿರಬೇಕು.
ಸುಜ್ಞಾನದ ಶಿಕ್ಷಣ ಕೊಡದೆ ಉಚಿತ ಕೊಟ್ಟರೆ ಸಾಲ ಖಚಿತ.
ಇದು ಮನೆ ಮಠ ಮಂದಿರದ ಜೊತೆಗೆ ದೇಶವನ್ನು ಹಾಳು ಮಾಡುವಷ್ಟು ಬೆಳೆಸಬಾರದಷ್ಟೆ.
ಇಲ್ಲಿ  ಜನರ ಹಣವನ್ನು ಜನರಿಗೆ ತಲುಪಿಸುವ ಕೆಲಸದಲ್ಲಿ ಮಧ್ಯವರ್ತಿಗಳು  ಸಾಕಷ್ಟು ಭ್ರಷ್ಟಾಚಾರ ನಡೆಸಿ ಶ್ರೀಮಂತ ಆಗಿದ್ದರೂ  ಇದರಿಂದ  ಆತ್ಮತೃಪ್ತಿ ಸಿಗದು. 
ಇವೆಲ್ಲವೂ ಪುರಾಣ ಇತಿಹಾಸದೊಳಗೂ ಕಾಣುತ್ತೇವೆ.
ಆದರೆ ಅಂದಿನ ಧಾರ್ಮಿಕ ಶಿಕ್ಷಣಕ್ಕೂ ಇಂದಿನ ಭೌತಿಕ ಶಿಕ್ಷಣಕ್ಕೂ  ವ್ಯತ್ಯಾಸವಿದೆ. ಅಂದೂ ಮೂರು ಪಂಗಡವಿತ್ತು.
ಮೂವರೂ ಒಬ್ಬರನ್ನೊಬ್ಬರು  ಅರ್ಥ ಮಾಡಿಕೊಳ್ಳಲು ಕಷ್ಟವಿತ್ತು. ಈಗಲೂ ಇದ್ದಾರೆ ಮುಂದೆಯೂ ಇರುವರಷ್ಟೆ.
ಅದರಲ್ಲಿ  ನಾವ್ಯಾರು ಎಂದರಿತರೆ ನಾವು‌ಮೇಲಕ್ಕೆ ಅಂದರೆ ಜ್ಞಾನದೆಡೆಗೆ ಹೀಗಬೇಕೆ? ಮಧ್ಯೆ ನಿಲ್ಲಬೇಕೆ? ಅಥವಾ ಪಾತಾಳಕ್ಕೆ ಇಳಿಯಬೇಕೆ ಎನ್ನುವ ಬಗ್ಗೆ ಚಿಂತನೆ ನಡೆಸಬಹುದು.
ದೇವರು ಮಾನವರು ಅಸುರರು.. ದೈವತ್ವ ಪಡೆದರೆ ಜೀವನ್ಮುಕ್ತಿ,  ಮಾನವೀಯತೆ ಮೆರೆದರೆ  ದೇವಮಾನವ, ಅಸುರತ್ವದೆಡೆಗೆ ಸಾಗಿದರೆ  ಮೇಲೇಳಲಾಗದ  ಕೆಳಗಿನ ಸ್ಥಿತಿ.
ನಮ್ಮ ನಡೆ ಎತ್ತ ಕಡೆ?
ಹಿಂದೂಸ್ತಾನ್  ಅನ್ಯರಿಗೆ  ಕೊಡುವಷ್ಟು ಗೌರವ ನಮ್ಮವರಿಗೆ ಕೊಡಲು ಸೋಲಲು ಕಾರಣವೇ ಅನ್ಯರ ಶಿಕ್ಷಣದ ಜ್ಞಾನ.
ಹೀಗಿರುವಾಗ  ಹಿಂದೂವಾಗಿರಲು  ಜ್ಞಾನ ಬೇಕೆಂದರೆ ಹಿಂದಿನ ಶಿಕ್ಷಣ ಕೊಡಬೇಕು.  ಎಷ್ಟೋ ಹೋರಾಟಗಾರರು
ಮಕ್ಕಳು‌ಮೊಮ್ಮಕ್ಕಳನ್ನು ವಿದೇಶಕ್ಕೆ ಕಳಿಸಿ ಜನರ ಮುಂದೆ
ರಾಜಕೀಯ ನಡೆಸಿರುವರೆಂದರೆ  ಜನಸಾಮಾನ್ಯರ  ಅಜ್ಞಾನ ಬೆಳೆದಿದೆ. ಇಲ್ಲಿ ಆಳೋದು ತಪ್ಪಲ್ಲ  ಆಳಾಗಿ ಕಾಣೋದು ತಪ್ಪು.
 ಪಕ್ಷ ಪಕ್ಷದ ನಡುವೆ ಅಂತರ ಬೆಳೆಸಿ  ಕ್ರಾಂತಿ ಹರಡೋದು ಅಧರ್ಮ. ವ್ಯವಹಾರದ ವಿಚಾರಕ್ಕೆ ಬಂದರೆ ಯಾವಜಾತಿ  ಪಕ್ಷ ಧರ್ಮ ಬೇಧ ವಿರದು. ಧರ್ಮ ದೇವರ ವಿಚಾರಕ್ಕೆ ಬಂದರೆ  ಎಲ್ಲಾ ಬೇರೆ ಬೇರೆ ಆಗುವುದೆಂದರೆ  ಇದರರ್ಥ ನಮ್ಮಲ್ಲಿ  ಸ್ಪಷ್ಟವಾದ ಒಂದೇ ಸತ್ಯದ ಅರಿವಿಲ್ಲದಿರೋದಷ್ಟೆ.
ಒಂದೇ ದೇವರ ಹೆಸರಿನಲ್ಲಿ ಅಸಂಖ್ಯಾತ ದೇವಸ್ಥಾನ ಇದ್ದಾಗ ಎಲ್ಲರೂ ಒಗ್ಗಟ್ಟಿನಿಂದ ಬಾಳೋದು ಕಲಿಯಬೇಕಿತ್ತು.ಒಬ್ಬರನ್ನು ಕೆಳಗಿಳಿಸಿ ಇನ್ನೊಬ್ಬರು ಮೇಲಕ್ಕೆ ಏರೋದಕ್ಕೆ ರಾಜಕೀಯದ  ಸಹಕಾರವಿದೆ ಎಂದರೆ ಅಧರ್ಮ.
ತತ್ವ ಒಂದು ಮಾಡಬೇಕಿತ್ತು. ತಂತ್ರದಿಂದ ಆಳುವಾಗಲೂ ಧರ್ಮಕ್ಕೆ ಚ್ಯುತಿ ಬರದಂತಿರಬೇಕು. ಮೂಲಕ್ಕೆ ಅಪಾಯವಾದಾಗ  ಏನೂ‌ಮಾಡಲಾಗದು. ಒಂದು ಮರದ ಬೇರು ಗಟ್ಟಿಯಿದ್ದರೂ ರೆಂಬೆಗಳನ್ನು ದುರ್ಭಳಕೆ ಮಾಡಿಕೊಂಡು ಬೇರೆ ಬೇರೆ ಮಾಡಿದರೆ ದುರ್ಭಲವಾಗುತ್ತದೆ.
ಹಾಗೆಯೇ ಹಿಂದಿನಿಂದಲೂ ಅನ್ಯರು  ಸನಾತನಧರ್ಮದ ವಿರುದ್ದ ನಿಂತು  ತಮ್ಮ ಜನಸಂಖ್ಯೆ ಬೆಳೆಸಿಕೊಳ್ಳಲು  ಪಿತೂರಿ ನಡೆಸಿದ್ದರೂ  ನೆಲಜಲದ ಋಣ ತೀರಿಸದೆ ಜನ್ಮ ಜನ್ಮದಲ್ಲಿ  ಕಷ್ಟ ಅನುಭವಿಸುವುದು ತಪ್ಪಲಿಲ್ಲ. ಪರಮಾತ್ಮನಿಗೆ ಎಲ್ಲಾ ಒಂದೇ ಆಗಿದ್ದರೂ ಜೀವಾತ್ಮನ ಹಿಂದಿನ ಋಣ ಕರ್ಮದ ಫಲ ಅನುಭವಿಸಲೇಬೇಕೆನ್ನುವುದು  ಕರ್ಮ ಸಿದ್ದಾಂತ.
ಹಾಗಾಗಿ ಈಗಲೂ ಭಾರತೀಯರಾಗಲಿ ಹಿಂದೂ‌ಮುಸಲ್ಮಾನ ಕ್ರೈಸ್ತ ಮತ  ವಿಶ್ವದೆಲ್ಲೆಡೆಯ. ಹರಡಿದೆ. ಧರ್ಮ ಒಂದೇ
ಮಾನವಧರ್ಮ. ಇದರಲ್ಲಿ  ದೈವೀಕ ಶಕ್ತಿ ಇದ್ದರೆ  ಆತ್ಮಕ್ಕೆ ತೃಪ್ತಿ.ಅಸುರಿಶಕ್ತಿ ಇದ್ದರೆ ಅತೃಪ್ತ ಆತ್ಮವೇ ಆಗಿರುತ್ತದೆ. ಎಷ್ಟು ಕೊಟ್ಟರೂ ಸಾಲದು ಎಂದರೆ ಸಾಲವೇ ಆದಾಗಿರುತ್ತದೆ.
ಕಷ್ಪಪಡದೆ ಗಳಿಸಿದ ಹಣ,ಅಧಿಕಾರ ಸ್ಥಾನವನ್ನು  ಬಿಟ್ಟು ಬರೋದು ಕಷ್ಟ.ಹೀಗಾಗಿ ಯಥಾರಾಜ ತಥಾಪ್ರಜ.
ಯಥಾ  ಪ್ರಜಾ ತಥಾದೇಶ.‌ನಾವೆಲ್ಲರೂ ಮಾನವರು ದೇಶದ  ಪ್ರಜೆಗಳು.ಪ್ರಜಾಪ್ರಭುತ್ವದ  ಅಡಿಯಲ್ಲಿರುವ ಸಾಮಾನ್ಯರು ಎಂದಾಗ ನಮ್ಮಲ್ಲಿ ಸಾಮಾನ್ಯಜ್ಞಾನ ಇದೆ.ಅದನ್ನು ಸರಿಯಾಗಿ ಬಳಸಿದರೆ  ಒಳಗಿನ ವಿಶೇಷಜ್ಞಾನ ಸಿಗುತ್ತದೆ. ಬಳಸದೆ ಹೊರಗಿನ‌ವಿಶೇಷಜ್ಞಾನ ಬಳಸಿದರೆ  ನಮ್ಮನ್ನು ಹೊರಗಿನವರು ಆಳುವರಷ್ಟೆ. ಏನು ಕೊಡುವೆವೋ ಪಡೆಯುವೆವೋ ಅದೇ ತಿರುಗಿ ಬರುತ್ತದೆ. ಪಾಪಪುಣ್ಯ ವೂ
ಪರಮಾತ್ಮನ ಲೆಕ್ಕಾಚಾರವಾಗಿರುತ್ತದೆ.
ಅಧರ್ಮದಲ್ಲಿ ಪಾಪಸುತ್ತಿದರೆ ಧರ್ಮದಲ್ಲಿ ಪುಣ್ಯ ಬರುತ್ತದೆ. ಯಾವುದು ಹೆಚ್ಚಾಗಿರುವುದೋ ಅದೇ ಜೀವನವಾಗುತ್ತದೆ. 
ನಮಗೆ ತಿಳಿದಷ್ಟು ತಿಳಿಸಬಹುದು. ತಿಳಿಯದ್ದನ್ನು ತಿಳಿಯುವುದು ಎಷ್ಟೋ ಬಾಕಿ ಇದೆ. ಮಾನವನಿಗೆ ಒಂದು ಇತಿಮಿತಿ ಇದೆ.ಮಿತಿಮೀರಿದರೆ  ಸಮಸ್ಯೆಯೇ ಅತಿಯಾಗುತ್ತದೆ.

Tuesday, August 5, 2025

ಆತ್ಮಹತ್ಯೆಗೆ ‌ಕಾರಣವೇನು?

ಮಕ್ಕಳೇ ಬೇಡ ಎನ್ನುವವರ ಸಂಖ್ಯೆ‌ಬೆಳೆಯುತ್ತಿದೆ.ಇದ್ದ ಮಕ್ಕಳು ದೂರದ ದೇಶಕ್ಕೆ  ಓಡುತ್ತಿದ್ದಾರೆ.ಹತ್ತಿರವಿದ್ದವರಿಗೆ ಪೋಷಕರಲ್ಲಿ ಭಯ ಭಕ್ತಿ ಗೌರವವಿಲ್ಲದೆ‌ನಡೆಸಿಕೊಂಡರೆ  ಇನ್ನೂ ಕೆಲವು ಮಕ್ಕಳು ಆತ್ಮಹತ್ಯೆಯಂತಹ ಹೇಯ ಕೃತ್ಯಗಳಿಗೆ ಶರಣಾಗುತ್ತಿದ್ದಾರೆಂದರೆ ಭಾರತ ಎತ್ತ ಸಾಗುತ್ತಿದೆ?
ಇದಕ್ಕೆ ಕಾರಣವೇನು? ಕಾರಣಕರ್ತರು ಯಾರು? ಎಲ್ಲಾ ಪ್ರಶ್ನೆಗೆ ಉತ್ತರ ಒಂದೇ ಅಜ್ಞಾನ.
ಅಜ್ಞಾನವೆಂಬ ಅಂಧಕಾರದಲ್ಲಿರುವ ಎಷ್ಟೂ ಜೀವಾತ್ಮರುಗಳು ಪರಮಾತ್ಮನ ಅರಿವಿಲ್ಲದೆಯೇ ಅಂತ್ಯ ಕಾಣುತ್ತಿರೋದು  ಭಾರತದಂತಹ  ಜ್ಞಾನದ ದೇಶಕ್ಕೆ ಅವಮಾನ. ಮಕ್ಕಳು ಹೊರಗೆ ಸಾಧನೆ ಮಾಡಿದರೆ ಪ್ರೋತ್ಸಾಹ ಕೊಡುವ ಪೋಷಕರಿಗೆ ಮಕ್ಕಳ ಒಳಗಿರುವ  ಜ್ಞಾನದ ಅರಿವಿಲ್ಲದೆ ಸಣ್ಣ ವಯಸ್ಸಿನಲ್ಲಿಯೇ ಲಕ್ಷಾಂತರ ಹಣಗಳಿಸುವ  ಕನಸು ಕಾಣುವರು. ಪ್ರತಿಭೆ  ಎಂದರೆ ತೋರುಗಾಣಿಕೆಯಾಗಿರುವ ಇಂದು ತಮ್ಮ ಪ್ರತಿಷ್ಟೆಗಾಗಿ ಮಕ್ಕಳ ನ್ನು  ಯಾರದ್ದೋ  ಹಿಂದೆ ಬಿಟ್ಟು  ನಡೆಯುವಾಗ  ಮಕ್ಕಳ  ವಯಸ್ಸು ಮನಸ್ಸು  ಎರಡೂ  ಒಂದೇ ಇರದು.
ಪ್ರಭುದ್ದ ವಿಚಾರಗಳನ್ನು ತಿಳಿಸುವಾಗ  ಅವರೊಳಗೆ ಆಗುವ ಮಾನಸಿಕ ಬದಲಾವಣೆಗೂ ದೈಹಿಕ ಆರೋಗ್ಯಕ್ಕೂ ಸಮಸ್ಯೆ ಆಗುತ್ತದೆ. ಇದರಿಂದ  ನೋಡಲು ಮಾತ್ರ ಮಕ್ಕಳು ಇವರ ದೃಷ್ಟಿ ಕೋನ  ಪ್ರಭುದ್ದವಾಗಿದ್ದರೆ  ಹೆಚ್ಚು ಹೆಚ್ಚು ಅಪರಾಧಕ್ಕೆ ಇಳಿಯುವರು.
ವೈಜ್ಞಾನಿಕ  ದೃಷ್ಟಿಯಿಂದ ಅಳೆಯುವ ಜಗತ್ತಿನಲ್ಲಿ  ನಿಜವಾಗಿಯೂ  ಮಕ್ಕಳು  ದೊಡ್ಡವರೆ ಸಣ್ಣವರೆ?
ಭಾರತದ ಹಿಂದಿನ ಕಾಲದಲ್ಲಿದ್ದ ಶಿಕ್ಷಣದಲ್ಲಿ ಮಕ್ಕಳ ಜ್ಞಾನಶಕ್ತಿ ಗುರುತಿಸುವುದರ ಮೂಲಕ  ಉತ್ತಮ ವಿದ್ಯೆ ಕಲಿಸಿ ಸ್ವಾವಲಂಬನೆ ಸರಳ ಸತ್ಯ ಧರ್ಮದೆಡೆಗೆ‌ ನಡೆಸುವಷ್ಟು  ಜ್ಞಾನಿಗಳನ್ನು ಲೋಕಕ್ಕೆ ನೀಡಿದ್ದರು. ಈಗ ಅಜ್ಞಾನಿಗಳನ್ನು ಹೊತ್ತು  ನಡೆಯುತ್ತಿದೆ ದೇಶ. 
ಪೋಷಕರೆಂದರೆ ಕೇವಲ ಒಂದು ಮಗುವಿನ ಪೋಷಣೆ ಮಾಡೋದಲ್ಲ. ಇತರ ಮಕ್ಕಳ ನ್ನೂ  ದೇಶದ ಸಮಾಜದ ಆಸ್ತಿ ಆಗಿಸುವಷ್ಟು ಜ್ಞಾನವನ್ನು ಕೊಟ್ಟು ಬೆಳೆಸೋದೆ ಗುರುವಿನ ಲಕ್ಷಣವಾಗಿತ್ತು. ಈಗ ಶಿಕ್ಷಣವೇ  ಧಾರ್ಮಿಕ ವರ್ಗದವರಿಂದ ಬೇರೆ ಆಗಿದ್ದು ಸ್ವಯಂ ಧಾರ್ಮಿಕ ವರ್ಗ ವೂ  ಹೊರಗಿನ ಶಿಕ್ಷಣ ದೆಡೆಗೆ‌ ನಡೆಯುವಂತಾಗಿರೋದು ದುರಂತ.
ಎಷ್ಟು  ವರ್ಷ ಬದುಕಿದ್ದೇವೆನ್ನುವುದಕ್ಕಿಂತ ಹೇಗೆ ಬದುಕಿದ್ದೇವೆ ಎನ್ನುವುದು  ಪ್ರಶ್ನೆಯಾಗಬೇಕಿದೆ.
ಯಾರದ್ದೋ  ಹಣ ಅಧಿಕಾರ‌ ಸ್ಥಾನ ಹೆಸರು ಹಿಡಿದು ನಾವು ಹಿಂದೆ ಹೋಗುವಾಗ ಅವರ ಜ್ಞಾನ ಮುಖ್ಯವಾಗಿರುತ್ತದೆ. ಇದು ನಮ್ಮ ಹಿಂದಿನವರ ಜೊತೆಗೆ ನನ್ನ ಜೊತೆಗೆ  ಸೇರುವುದೆ ಇಲ್ಲವೆ ಎನ್ನುವ ಸತ್ಯವರಿಯುವುದು ಅಗತ್ಯವಿದೆ. ಇದನ್ನು ಯೋಗ ಎಂದರು.
ಈಗ‌ನಮ್ಮ ಮಕ್ಕಳಿಗೆ ಕಲಿಸಿದ ವಿದ್ಯೆ ನಮಗಿರಲಿಲ್ಲ.
ನಾವು‌ ಕಲಿತ ವಿದ್ಯೆ ನಮ್ಮ ಪೋಷಕರಿಗಿರಲಿಲ್ಲ.ಪೋಷಕರು ಕಲಿತ ವಿದ್ಯೆ ಅವರ ಗುರು ಹಿರಿಯರಿಗಿರಲಿಲ್ಲ ಎಂದರೆ  ರಕ್ತ ಸಂಬಂಧ ಒಂದೇ ಇದ್ದರೂ ಜ್ಞಾನ ಸಂಬಂಧ ಬೇರೆ ಆದಾಗ  ಆತ್ಮಹತ್ಯೆಯೇ ಸರಿ.

ಮಕ್ಕಳಿಗಾಗಿ ಆಸ್ತಿ ಮಾಡುವುದರ ಹಿಂದೆ ಪೋಷಕರು ನಡೆದು  ಮಕ್ಕಳೂ ಇಲ್ಲ ಸಾಲವೂ ತೀರದೆ  ಸಮಸ್ಯೆ ಬೆಳೆದಿದೆ. ಇದಕ್ಕೆ ಬದಲು ಹಣವನ್ನು  ದಾನಧರ್ಮ ಕಾರ್ಯಕ್ಕೆ ಬಳಸುತ್ತಾ ಮಕ್ಕಳ ಶಿಕ್ಷಣದಲ್ಲಿ ಸಂಸ್ಕಾರ ಕೊಟ್ಟರೆ ಮಕ್ಕಳೇ ಆಸ್ತಿ ಆಗುವರು. 
ಹಿಂದಿನ ಮಹಾತ್ಮರುಗಳಲ್ಲಿ ಹಣವಿರಲಿಲ್ಲ ಜ್ಞಾನವಿತ್ತು.
ಈಗ ಹಣವಿದೆ  ಸತ್ಯಜ್ಞಾನದ ಕೊರತೆಯಿಂದ ಜನರನ್ನು ಹೊರಗೆಳೆಯುವ ರಾಜಕೀಯತೆ ಬೆಳೆದಿದೆ.
ಶಕ್ತಿಗಿಂತ ವ್ಯಕ್ತಿಪೂಜೆಯೇ ಹೆಚ್ಚಾಗಿದೆ.ಪ್ರಜಾಪ್ರಭುತ್ವದಲ್ಲಿ  ಯಾರ ಶಕ್ತಿಯಿಂದ ದೇಶ‌ನಡೆಯಬೇಕಿತ್ತು? ನಡೆದಿದೆ?

ಮೂಲವನರಿತು  ರೆಂಬೆಕೊಂಬೆಗಳು ಬೆಳೆದಾಗ ಬೇರು ಗಟ್ಟಿ.ಇಲ್ಲದಿದ್ದರೆ ಟೊಳ್ಳಾಗಿ ಮುರಿದುಬೀಳುತ್ತದೆ.
ಪ್ರಕೃತಿಯನರಿತು ನಡೆಯೋದರಿಂದ ಆತ್ಮರಕ್ಷಣೆ.ವಿರುದ್ದ ನಡೆದಷ್ಟೂ ಆತ್ಮಹತ್ಯೆಗಳಾಗುತ್ತದೆ. ಮನಸ್ಸಿನ ವಿಕೃತ ಬುದ್ದಿವಂತಿಕೆ  ಮಕ್ಕಳನ್ನು  ಹಾಳುಮಾಡುತ್ತಿದೆ ಇದನ್ನು ಸಾಧನೆ  ಎಂದರೆ ಅಜ್ಞಾನ ವಷ್ಟೆ.
ನಾವೆಷ್ಟು ಡಿಗ್ರಿ‌ ಪಡೆದರೂ ಸ್ವಂತ ಬುದ್ದಿ ಜ್ಞಾನ ಇಲ್ಲದಿದ್ದರೆ ಪರರ ವಶದಲ್ಲಿ ಜೀವನ. ಪರಮಾತ್ಮನ ಸೇರುವ ಯೋಗವೇ ಬೇರೆ ಪರದೇಶ ಸೇರುವ ಯೋಗವೇ ಬೇರೆ.

ಪೋಷಕರು ಮಕ್ಕಳು  ವಿದೇಶಕ್ಕೆ ಹೋದರೆ ಪ್ರಗತಿ ಎನ್ನುವ ಭ್ರಮೆಯಲ್ಲಿ  ಬೆಳೆಸಿ ತಮ್ಮ ಕೊನೆಗಾಲದಲ್ಲಿ  ವೃದ್ದಾಶ್ರಮ ಸೇರುವ  ಸ್ಥಿತಿಗೆ ಬಂದರೆ ಅದಕ್ಕೆ ಸರ್ಕಾರ ಕಾರಣವಲ್ಲ.
ಸರ್ಕಾರ ಎಂದರೆ ಸಹಕಾರವಷ್ಟೆ.

ನಾವು ಮಕ್ಕಳಿಗೆ ಹೇಗೆ ಸಹಕರಿಸುವೆವೋ ಯಾವುದಕ್ಕೆ ಸಹಾಯ ಮಾಡುವೆವೋ ಯಾವ ಶಿಕ್ಷಣ ಕೊಡುವೆವೋ ಹಾಗೇ ಬೆಳೆಯುತ್ತಾರೆ.
ಹೀಗಿರುವಾಗ , ಮಕ್ಕಳು  ಸರಿಯಿಲ್ಲ ಎನ್ನುವುದರ ಬದಲು ನಮ್ಮ ಚಿಂತನೆಗಳೇ ಸರಿಯಿಲ್ಲ ಎಂದು ಒಪ್ಪಿ ನಡೆದರೆ  ಮುಂದೆ ಆಗುವ ಅನಾಹುತದಿಂದ ಪಾರಾಗಬಹುದು.
ಸಂಬಂಧ ಯೋಗದಿಂದ ಬೆಳೆಯುವುದು ಪರಮಾತ್ಮನ ಇಚ್ಚೆ
ಭೋಗಕ್ಕಾಗಿ ಬೆಳೆಸುವುದು ಜೀವಾತ್ಮನ ಇಚ್ಚೆ.

ಭೌತವಿಜ್ಞಾನ ಭೋಗದೆಡೆಗೆ ನಡೆಸಿ  ಅಧ್ಯಾತ್ಮ ವಿಜ್ಞಾನ ದಿಂದ ದೂರ ನಡೆಸಿದಷ್ಟೂ  ಆತ್ಮಹತ್ಯೆಯಂತಹ ರೋಗವಿರುತ್ತದೆ.
ರೋಗ ಬಂದಾಗ ಅನುಭವಿಸೋದು  ಜೀವವೇ . ಇದಕ್ಕಾಗಿ ಈಗಲಾದರೂ ಭಾರತೀಯರು  ತಮ್ಮ ಸ್ವಾರ್ಥ ಅಹಂಕಾರದ ರಾಜಕೀಯ ದುರುದ್ದೇಶ ಬಿಟ್ಟು ದೇಶದ ಹಿತಕ್ಕಾಗಿ ಆತ್ಮರಕ್ಷಣೆಗಾಗಿ  ತಮ್ಮ ಮಕ್ಕಳನ್ನು ಸತ್ಯದ ಧರ್ಮದ ಹಾದಿಗೆ  ‌ನಡೆಸಲು ಸಾಧ್ಯವಾದರೆ ಅದೇ ಪುಣ್ಯದ ಕೆಲಸ. 
ದೇಶ ಸೇವೆಯೇ ಈಶ ಸೇವೆ,ಜನರ ಸೇವೆಯೇ ಜನಾರ್ದನನನ ಸೇವೆ...ಕಾಯಕವೇ ಕೈಲಾಸ ಎಲ್ಲಾ ಯೋಗಿಗಳ ಮಾತಾಗಿದೆ. ಭಗವದ್ಗೀತೆ ಪಠಣ ಸ್ಫರ್ಧೆ ಯಾಗದೆ ಅದರಲ್ಲಿನ ತತ್ವಗುಣ ಯೋಗ ಮಾರ್ಗ  ಅರ್ಥ ಮಾಡಿಸುವ ಶಿಕ್ಷಣವಾದರೆ  ಬದಲಾವಣೆ ಸಾಧ್ಯ.
ಒಟ್ಟಿನಲ್ಲಿ ಇತ್ತೀಚೆಗೆ ಎಲ್ಲರಿಗೂ  ತಪ್ಪು ನಡೆದಿರೋದು ತಿಳಿದಿದೆ.ಆದರೆ  ಬೇರೆಯವರ ತಪ್ಪು ಎತ್ತಿ ಹಿಡಿಯೋದೆ ಕೆಲಸವಾಗಿ ಮಕ್ಕಳ ತಪ್ಪು ಕಾಣುತ್ತಿಲ್ಲ. ಜೊತೆಗೆ ತಮ್ಮ ಹಿಂದೆ ಬರುತ್ತಿರುವವರನ್ನು ಆಳೋದೇ ಕೆಲಸವಾಗಿ ಹಣ ಅಧಿಕಾರ ಸ್ಥಾನ ಸನ್ಮಾನಗಳು ದೇಹಕ್ಕೆ ಸಿಗುತ್ತಿದೆ ದೇಶಕ್ಕಲ್ಲ.ದೇಶ  ವಿದೇಶಿಗಳ ಬಂಡವಾಳ ಸಾಲ ವ್ಯವಹಾರ ಶಿಕ್ಷಣದ ಜೊತೆಗೆ  ಅವರದೇ ಧರ್ಮ ಸಂಸ್ಕೃತಿ ಯನ್ನು  ಮಕ್ಕಳಿಗೆ  ನೀಡಿದರೆ  ನಾವ್ಯಾರು ವಿದೇಶಿಗಳೆ? ಸ್ವದೇಶಿಗಳೆ?
ನಾನ್ಯಾರು ಎನ್ನುವ ಪ್ರಶ್ನೆಗೆ ಉತ್ತರ ಹೊರಗಿಲ್ಲ. ನಾವ್ಯಾರು ಎನ್ನುವ ಪ್ರಶ್ನೆಗೆ ಉತ್ತರ ಭಾರತೀಯರಾಗುತ್ತದೆ.ನಿಜವಾಗಿಯೂ ನಮ್ಮಲ್ಲಿ ಭಾರತೀಯ ಜ್ಞಾನವಿದೆಯೆ? ನಮ್ಮ  ನಡೆ ನುಡಿಯಲ್ಲಿ ಸ್ವದೇಶವಿದೆಯೆ? ನಮ್ಮ ಮಕ್ಕಳಲ್ಲಿ ಇದೆಯೆ? ಇಲ್ಲ ಎಂದರೆ ನಮಗೆ  ದೇಶದೊಳಗೆ  ಜೀವಿಸುವ  ಯೋಗ್ಯತೆ ಇಲ್ಲ. ಇದು ನಮಗೆಲ್ಲರಿಗೂ ಅನ್ವಯಿಸುತ್ತದೆ. ಕಾರಣ ನಮಗೆ ದೇಶದ ನೆಲ ಜಲ ಅಧಿಕಾರ ಎಲ್ಲಾ ಬೇಕು.ಅದರ ಮೂಲ ಶಿಕ್ಷಣ ಜ್ಞಾನ ಸಂಸ್ಕೃತಿ ಯ ಅರಿವಿಲ್ಲದಿದ್ದರೆ  ವ್ಯರ್ಥ ಜೀವನ.
ಇದನ್ನು ಆತ್ಮಹತ್ಯೆ ಎನ್ನಬಹುದೆ? ಆತ್ಮಕ್ಕೆ ಮರಣವಿಲ್ಲ ಆದರೆ ಹತ್ಯೆ  ಎಂದರೆ ಅದರ ಅರಿವಿಲ್ಲದೆ ಜೀವ ನಡೆಯೋದು.
ಎಷ್ಟೋ ಮಕ್ಕಳು  ಯೋಗಿಗಳಾಗುವ ಜ್ಞಾನ ಪಡೆದರೂ ಗುರುತಿಸದ  ಶಿಕ್ಷಣ ಕೊಟ್ಟು  ಅಧರ್ಮ ಬೆಳೆದಿದೆ. ಇದಕ್ಕೆ ಸಹಕರಿಸಿದ  ಎಷ್ಟೋ ಜನರು ಶ್ರೀಮಂತ ರಾಗಿ ಶ್ರೀಮಂತ ದೇಶದ ಪ್ರಜೆಗಳಾಗಿದ್ದಾರೆ.ಆದರೆ  ಒಳಗಿರುವ ಪರಿಶುದ್ದ ಹೃದಯದ ಬಗ್ಗೆ ಅರಿವಿರದಿದ್ದರೆ  ಆತ್ಮಕ್ಕೆ ತೃಪ್ತಿ ಸಿಗದು.
ಅಧ್ಯಾತ್ಮ ಚಿಂತನೆಗಳು ಒಳಗಿನಿಂದ. ಹರಿದುಬರೋದಕ್ಕೆ ಅನುಭವಜ್ಞಾನ ಅಗತ್ಯವಿದೆ. ಯಾರೋ ಹೇಳಿದ್ದಷ್ಟೆ ಸತ್ಯವಿರದು.ಕಾಲ ಚಕ್ರ ಬದಲಾದಂತೆ  ಹಲವು ಆಚಾರ ವಿಚಾರಗಳೂ ಬದಲಾಗಿದೆ.ಆದರೆ ಭೂಮಿ ಒಂದೇ. ಸತ್ಯ ಒಂದೇ ಪರಮಾತ್ಮ ಒಬ್ಬನೇ ಜಗನ್ಮಾತೆಯೂ ಒಬ್ಬಳೇ‌ದೇಶ ಒಂದೇ  ಜನ್ಮ ಹಲವು..ಹೀಗಾಗಿ ಈ ಜನ್ಮದಲ್ಲಿ ಎಲ್ಲಿ ಜನ್ಮವಾಗಿದೆಯೋ ಅದರ ಮೂಲವರಿತು ಋಣ ತೀರಿಸುವ  ಸತ್ಕರ್ಮದಲ್ಲಿದ್ದವರಿಗೆ ಇದ್ದಲ್ಲಿಯೇ ಸಂತೃಪ್ತಿ ಸಿಕ್ಕಿತ್ತು.
ಕಲಿಗಾಲದ ಕಲಿಕೆ ಹೊರಮುಖವಾಗಿ ಸಾಕಷ್ಟು ಹೊರಗೆ ಜ್ಞಾನ ಬೆಳೆದಿದೆ.ಒಳಗಿದ್ದ ಸತ್ಯ ಸತ್ತಂತಿದೆ. ಸತ್ಯವೇ ದೇವರು ಎಂದರೆ  ಇರೋದೆಲ್ಲಿ?
 ಮಕ್ಕಳನ್ನು ದೇವರೆಂದರು.ಕಾರಣವಿಷ್ಟೆ ಸ್ವಚ್ಚ ಹೃದಯ ನಿಸ್ವಾರ್ಥ ನಿರಹಂಕಾರ ದ ಜ್ಞಾನವಾಗಿತ್ತು.ಅಂತಹ ಜ್ಞಾನಕ್ಕೆ ಪೂರಕವಾದ ಶಿಕ್ಷಣ ನೀಡಿದರೆ ಮಹಾತ್ಮರಾಗುವರು. ವಿರುದ್ದ  ಕೊಟ್ಟು  ಶಿಕ್ಷೆ ನೀಡಿದಷ್ಟೂ  ವಿರೋಧಿಗಳಾಗಿ‌
ದೂರವಾಗುವರು. ಒಟ್ಟಿನಲ್ಲಿ ಅಸುರರೊಳಗೆ ಸುರರು, ವಿದೇಶದೊಳಗೆ ದೇಶ, ಅಧರ್ಮದಲ್ಲಿ ಧರ್ಮ, ಅಜ್ಞಾನದಲ್ಲಿ ಜ್ಞಾನ ,ಅಸತ್ಯದೊಳಗೆ ಸತ್ಯ  ಅದ್ವೈತ ದೊಳಗೆ ಧ್ವೈತ  ಸೇರಿ  ನೋಡಲು ಒಂದೇ. ಒಳಗೆ  ಬೇರೆ ಬೇರೆಯೇ.ಅಂತರ ಸೃಷ್ಟಿ ಮಾಡೋದು ಸುಲಭದ ಕೆಲಸ.ಒಗ್ಗಟ್ಟು ಮೂಡಿಸೋದೆ ಕಷ್ಟ.
ಪೋಷಕರಿಲ್ಲದೆ ಮಕ್ಕಳ ಜನ್ಮವಾಗದು. ಅವರ ಜ್ಞಾನ ಸ್ವಚ್ಚವಿದ್ದರೆ ಮಕ್ಕಳು ಸ್ವಚ್ಚವಾಗುವರು.
ಹಿರಣ್ಯ ಕಶ್ಯಪ್ ಮಗ ಪ್ರಹ್ಲಾದ ರು ಅಸುರ ವಂಶದವರಾದರೂ ದೇವರಾಗಿರುವರು ಎಂದರೆ  ಗರ್ಭದಲ್ಲಿರುವಾಗಲೇ ದೇವತೆಗಳು ಕೊಟ್ಟ ಸಂಸ್ಕಾರದ  ಫಲ.
ಹೀಗಾಗಿ ನಮ್ಮ ಸನಾತನ ಧರ್ಮ 16 ಸಂಸ್ಕಾರದ‌ಮೂಲಕ ದೇವರನ್ನು ಕಾಣಬಹುದೆಂದಿದೆ.ಇದನ್ನು  ಶಿಕ್ಷಣದಿಂದ. ಕೊಡಬೇಕೆ? ಮನೆಯೊಳಗೆ ಕೊಡಬೇಕೆ?
ಸಂಸ್ಕಾರದ ವಿಷಯ ಬಂದರೆ ಯಾವುದೋ ಶಾಸ್ತ್ರ ಸಂಪ್ರದಾಯ ಅಡ್ಡ ಬರುತ್ತದೆಂದರೆ ಅದೂ ಕೂಡ ಅವರವರ ಅನುಭವಕ್ಕೆ ತಕ್ಕಂತೆ ಸೃಷ್ಟಿ ಆಗಿದೆ. ಎಲ್ಲರಿಗೂ ಸಮಾನವಾದ ಸತ್ಯ ಒಂದೇ. ಆ ಪರಮಸತ್ಯ ಅರಿಯಲು ಮನಸ್ಸು ಶುದ್ದವಿದ್ದು ಆಹಾರ ವಿಹಾರ ಶಿಕ್ಷಣ ಶುದ್ದವಾಗಬೇಕು.
ಅಸತ್ಯದ  ವಿಚಾರಗಳು ಅಶುದ್ದತೆಗೆ ಕಾರಣವೆಂದಾಗ ನಮ್ಮ ಮಕ್ಕಳು ಸತ್ಯವಂತರೆ ? ನಾವೆಷ್ಟು ಸತ್ಯವಂತರು.ಕಷ್ಟವಿದೆ. ಕಷ್ಟಪಟ್ಟರೆ ಸುಖವೂ ಇದೆ. ಮಧ್ಯವರ್ತಿಗಳು  ಸಾಕಷ್ಟು  ವ್ಯವಹಾರಕ್ಕೆ  ಅಸತ್ಯ ಅನ್ಯಾಯ ಅಧರ್ಮ ಕ್ಕೆ ಸಹಕಾರ ಕೊಟ್ಟು ಇಂದು ಮಕ್ಕಳು ಮಹಿಳೆಯರೂ ಹೊರಗೆ ಬರುವಂತಾಗಿದೆ  ಇದರಿಂದಾಗಿ ಲಾಭ ಯಾರಿಗೆ? ನಷ್ಟ ಯಾರಿಗೆ?
ದೇವಾಸುರರ ನಡುವಿರುವ ಮಾನವರಿಗೆ  ಸರಿಯಾದ ಜ್ಞಾನ ಕೊಡುವವರು ಯಾರು? ಸತ್ಯ ಮಿಥ್ಯದ ನಡುವಿನ ಜೀವನವು ಗೊಂದಲ ಗಲಭೆ ದ್ವೇಷ ಅಸೂಯೆಯ ಕಡೆಗೆ ಹೊರಟರೆ ಅಜ್ಞಾನ ಮಿತಿಮೀರಿದೆ ಎಂದರ್ಥ.
ಯಾರನ್ನು ಯಾರೂ ಬದಲಾಯಿಸಲಾಗದು.ಹುಟ್ಟು ಗುಣ ಸುಟ್ಟರೂ ಹೋಗದು ಎಂದಂತೆ ಹಿಂದಿನ ಕರ್ಮಕ್ಕೆ ತಕ್ಕಂತೆ ಫಲ. ಯಾರಿಗೆ ಗೊತ್ತು ಯಾರೊಳಗೆ ಯಾವ ಮಹಾತ್ಮರು ಇರುವರೋ ಅಸುರರಿರುವರೋ? ಕಲಿಗಾಲದಲ್ಲಿ ಅಸುರರ ಸಂಖ್ಯೆ ಬೆಳೆಯಲು ಕಾರಣ ಮಹಾತ್ಮರುಗಳು ಮುಕ್ತಿ ಪಡೆದಿರೋದು. ಇದನ್ನು ಸರಿಪಡಿಸಲು ಮತ್ತೆ ಮಹಾತ್ಮರು ಜನ್ಮ ತಾಳಲೇಬೇಕು.ಇದು ಮಕ್ಕಳ ಜ್ಞಾನದಲ್ಲಿದೆ.ಸರಿಯಾದ ಸಂಸ್ಕಾರದ ಶಿಕ್ಷಣವೇ  ಪರಿಹಾರವಾಗಿದೆ. 

Monday, August 4, 2025

ಕಲ್ಲಿನಲ್ಲಿ ದೇವರನ್ನು ಕಾಣುವುದು ಮೂಡನಂಬಿಕೆಯೆ?

ಮೂಢರು ಕಲ್ಲಿಗೆ ಪೂಜಿಸಿ ಆರಾಧಿಸಿ‌ಮೂಡನಂಬಿಕೆ ಬೆಳೆಸಿರುವವರು ಭಾರತೀಯರು ವಿಶ್ವದ ಎರಡನೇ ಸ್ಥಾನದ ಹಿಂದುಳಿದವರು ಎನ್ನುವ ಅರ್ಥ ಬರುವ ಪೋಸ್ಟ್ ಹಾಕಿದ್ದಕ್ಕೆ ಸರಿಯಾದ ಉತ್ತರ ಕೊಟ್ಟಿರುವರು. ಇದನ್ನು ಓದಿದಾಗ  ಅನಿಸಿದ್ದು ಹೀಗೆ.ನಿಮಗೇನು ಅನಿಸುತ್ತದೆಂದು ತಿಳಿಸಿ.
ಯಾರೋ ಹೇಳಿದ್ದನ್ನು ತಕ್ಷಣ ಕೇಳುವ ನಮಗೆ ನಮ್ಮ ಅಂತರಾತ್ಮದ ಕೂಗು ಕೇಳಿಸಬೇಕಿದೆ. ಅದಕ್ಕೆ ಆತ್ಮಜ್ಞಾನದೆಡೆಗೆ ಸಾಗಬೇಕಿದೆ.

ಕಾಣದ ದೇವರನ್ನು ಕಾಣೋದಕ್ಕೆ ಜ್ಞಾನವಿರಬೇಕಷ್ಟೆ.
ನಿರಾಕಾರದಿಂದ ಸಾಕಾರದೆಡೆಗೆ ನಡೆದು ಬಂದ  ದೇವತಾರಾಧನೆಯಿಂದ ಮಾನವ ತನ್ನ ಜೀವನ‌ ನಡೆಸಿರೋದು  ಪುರಾಣ ಸತ್ಯ.
ರಾಮಾಯಣ ಮಹಾಭಾರತ ಯುದ್ದವೂ ಧರ್ಮ ರಕ್ಷಣೆಗಾಗಿ ನಡೆದಿರೋದನ್ನು  ಸಾಬೀತು ಪಡಿಸೋದು ಕಷ್ಟ. ಕಾರಣ ಯಾವಾಗ ಮಾನವನಲ್ಲಿ ಅಜ್ಞಾನ ಹೆಚ್ಚುವುದೋ ನಾನೇ ದೇವರು ನನ್ನಿಂದಲೇ‌ಜಗತ್ತು ನಾನೇ ರಾಜ ಎನ್ನುವ ಅಹಂಕಾರ ಅತಿಯಾದ ಸ್ವಾರ್ಥ ಮನೆ‌ಮಾಡಿ ಆಳುತ್ತದೆ.
ಆಳುವಾಗ ಹಿಂದಿರುವ ಅಸಂಖ್ಯಾತ ಶಕ್ತಿಯನ್ನು  ಗುರುತಿಸುವುದು ಕಷ್ಟ.ಹೀಗಾಗಿ ಆ ಹಿಂದಿನ ಶಕ್ತಿಯನ್ನು ಆಳಾಗಿ ಕಾಣುವುದರಿಂದ ಇನ್ನಷ್ಟು ಅಧರ್ಮ ಅಸತ್ಯ ಅನ್ಯಾಯ ಬೆಳೆಸುತ್ತದೆ.

ಇರಲಿ  ಹಿಂದಿನಿಂದಲೂ ಈ ಭೂಮಿಯಲ್ಲಿ  ದೇವಾಸುರರು ಇದ್ದರು ಈಗಲೂ ಇರುವರು. ಅವರ ಮಧ್ಯೆ ಕಾರಣಮಾತ್ರದ ಮಾನವರೂ  ಇರುವರು. ಯಾವಾಗ ಮಧ್ಯವರ್ತಿ ಮಾನವ ದೈವತ್ವ ಬಿಟ್ಟು ಅಸುರರೆಡೆಗೆ ನಡೆಯುವರೋ  ಭೂಮಿ ಅಸುರರ ವಶವಾಗುತ್ತದೆ.
ವ್ಯತ್ಯಾಸವಿಷ್ಟೆ ಇಬ್ಬರೂ ನೋಡಲು ಮಾನವರೆ ಆದರೂ ಒಳಗಿನ‌ ಸತ್ವ ರಜಸ್ಸು ತಮಸ್ಸಿನ ಗುಣಜ್ಞಾನದಲ್ಲಿ  ಬೇರೆ ಬೇರೆ.
ಹೀಗಾಗಿ ಭೂಮಿಯನ್ನು ‌ಹೇಗೆ‌ನೋಡುವರೋ ಬಳಸುವರೋ ಆಳುವರೋ ಎನ್ನುವುದರ‌ಮೇಲೇ ಜೀವನ ನಿಂತಿದೆ. ಭೂಮಿಯ ಋಣ ತೀರಿಸುವುದು ಹಿಂದೂ ಧರ್ಮದ ಮುಖ್ಯ ಗುರಿ ಆದರೆ  ಅದಕ್ಕಾಗಿ ದೈವತ್ವದ ಗುಣ ಅಗತ್ಯವಿದೆ. ದೇವರಿಗೂ  ಋಣ ತೀರಿಸಲು ಕಷ್ಟ.ಹೀಗಾಗಿ ಅಂತಹ ಮಹಾತ್ಮರಿಗೆ ದೇವತೆಗಳ ಸಹಕಾರವಿರುತ್ತದೆ.
ಋಣ ಬೆಳೆಸುವ ಅಸುರರ ಹಿಂದೆ ನಡೆದಷ್ಟೂ  ಭೂಮಿಯ ದುರ್ಭಳಕೆ ಹೆಚ್ಚಾಗುತ್ತದೆ. ಇದೇ ಕಾರಣದಿಂದ  ಸನಾತನ ಧರ್ಮ ದಲ್ಲಿ ಚರಾಚರದಲ್ಲಿ ಅಡಗಿರುವ ಆ ಪರಮಶಕ್ತಿಯನ್ನು  ಪರಮಾತ್ಮನನ್ನು  ಕಾಣುವುದಕ್ಕೆ  ಕಲ್ಲು ಮಣ್ಣಿನಲ್ಲಿ  ಪ್ರಕೃತಿ ಪೂಜೆಯಲ್ಲಿ  ಆತ್ಮಜ್ಞಾನದೆಡೆಗೆ ನಡೆಯುವ  ಕಾರ್ಯಕ್ರಮ ನಡೆಸಿದರು. ಆದರೆ ಇತ್ತೀಚಿನ ದಿನಗಳಲ್ಲಿ  ತಮ್ಮ ಸ್ವಾರ್ಥ ಸುಖಕ್ಕಾಗಿ  ಪ್ರಕೃತಿ ದುರ್ಭಳಕೆ ಮಾಡಿಕೊಂಡು  ದೇವರ ಹೆಸರಿನಲ್ಲಿ ಧರ್ಮದ ಹೆಸರಿನಲ್ಲಿ ಅಸುರರೂ‌ಬ ಬೆಳೆದಿರೋದು ದುರಂತವೇ ಆಗಿದೆ.
ಹತ್ತಿರದ ಸಂಬಂಧ ಬಿಟ್ಟು ದೂರದ‌ಬೆಟ್ಟ ನುಣ್ಣಗೆ ಎಂದಂತೆ  ಮನಸ್ಸು  ಹೊರನಡೆದು ಒಳಮನಸ್ಸು ಅಶುದ್ದವಾದಾಗ ಆತ್ಮಶುದ್ದಿಗೆ ಯೋಗ ಅ ಅಗತ್ಯವಿದೆ. ಯಾವುದೂ ಅತಿಯಾಗದಂತೆ ಎಚ್ಚರಿಕೆಯಿಂದ ಬಳಸಿದರೆ  ಉತ್ತಮ ಫಲ.
ಯಾರೋ  ನೀವು ಮಾಡುತ್ತಿರುವುದು ತಪ್ಪು ಎಂದಾಗ. ಅವರ ಸ್ಥಳದಲ್ಲಿ ನಿಂತು ಅವರಿಗೆ ಇದರ ಅರಿವಾಗದಿರುವುದಕ್ಕೆ ಹೇಳಿದ್ದಾರೆಂದು  ಸುಮ್ಮನಿದ್ದರೆ ನಮ್ಮ ಒಳ್ಳೆಯ ಕಾರ್ಯಕ್ಕೆ  ತಡೆ‌ಬರದು. ಅದು ಬಿಟ್ಟು ವಿರೋಧಿಸಿ ದ್ವೇಷ‌ಮಾಡಿ ಹೋರಾಟ ಮಾಡಿ,ಜಗಳ ಎಬ್ಬಿಸಿ ಕೂಗಾಡಿದರೆ  ಕೆಡೋದು  ಸಂಸಾರವೆ ಜೊತೆಗೆ ಸಮಾಜದ ಶಾಂತಿಯೂ ಕೆಡುತ್ತದೆ.ಇದನ್ನು ಗುರಿಯಾಗಿಸಿಕೊಂಡಿರುವವರಿಗೆ ಸರಿಯಾದ ಅವಕಾಶ ನೀಡಿದ ಪಾಪಕ್ಕೆ ಗುರಿಯಾಗೋದು ಯಾರು?
ಒಟ್ಟಿನಲ್ಲಿ ನಾಯಿ ಬೊಗಳಿದರೆ ದೇವಲೋಕ‌ಹಾಳಾಗದು.ಹಾಳಾಗೋದಕ್ಕೆ ಕಾರಣ ಇನ್ನಷ್ಟು ನಾಯಿಗಳನ್ನು ಛೂ ಬಿಡೋದು. ಇಂದಿಗೂ ಸನಾತನ ಧರ್ಮದ ಸತ್ವ ಶುದ್ದವಾಗಿದ್ದರೂ ಆಚಾರ ವಿಚಾರ‌ಪ್ರಚಾರದ ಅಂತರಗಳು  ಅಶುದ್ದತೆಗೆ ಸಹಕಾರ ಕೊಡುತ್ತಿವೆ. ಇದನ್ನು ಪ್ರಶ್ನೆ ಮಾಡಿದವರನ್ನು ತುಚ್ಚವಾಗಿ ಕಾಣುತ್ತಿದೆ. ದೇವರನ್ನು  ಹೊರಗೆ ಬೆಳೆಸಿದಷ್ಟು ದೈವತ್ವದ ಗುಣಜ್ಞಾನ  ಒಳಗಿನಿಂದ ಶಿಕ್ಷಣದ‌ಮೂಲಕ ಬೆಳೆಸಿದ್ದರೆ  ಭೂಮಿಯಲ್ಲಿ  ದೇವತೆಗಳು ಇರುತ್ತಿದ್ದರು. ಈಗ ದೇವರು ಇರೋದೆಲ್ಲಿ? ಅಸುರರು ಯಾರು? ನಾವ್ಯಾರು?

ಹಿಂದೂಗಳು ದೇವರನ್ನು ಎಲ್ಲಾ ರೂಪದಲ್ಲಿ ಕಾಣಬಹುದು
ಆದರೆ  ವಿಕೃತ ರೂಪದಲ್ಲಿ ಕಾಣೋದಿಲ್ಲ.ಪ್ರಕೃತಿ ರೂಪದಲ್ಲಿ ಕಾಣುವರು. ವಿಕೃತವಾಗಿ ಚಿಂತನೆ ನಡೆಸೋರನ್ನು ಅಸುರರೆನ್ನುವರು. ಈ ಭೂಮಿಯಲ್ಲಿ ದೇವರಿದ್ದಂತೆ ಅಸುರರೂ  ಇರುವರೆಂಬುದು ಸ್ಪಷ್ಟವಾಗಿದೆ. ಹೀಗಾಗಿ  ಮಾತನಾಡದ ಕಲ್ಲು ಮಣ್ಣುಗಳಲ್ಲಿ ದೇವರನ್ನು  ನೋಡುವುದು ಉತ್ತಮ...ಇದರಿಂದ ಮನುಷ್ಯತ್ವ ಹಾಳಾಗಬಾರದಷ್ಟೆ.

ದೇಶವನ್ನು ವಿದೇಶ ಮಾಡೋದು ಪ್ರಗತಿಯೆ?


ನಾವು ಸತ್ಯವನ್ನು ಬದಲಾಯಿಸಲಾರೆವು,ಆದರೆ ಸತ್ಯ ನಮ್ಮನ್ನು ಬದಲಿಸಬಲ್ಲದು.ಸತ್ಯದೊಂದಿಗೆ ಇದ್ದು ಬದುಕು ಬದಲಾಯಿಸಿಕೊಳ್ಳಬೇಕಿದೆ. 
ದೇಶವನ್ನು ವಿದೇಶ ಮಾಡಲು ಹೊರಟವರಿಗೆ ಈಗ ಸತ್ಯದ ಅರಿವಾಗಿರಬಹುದು. ಎಷ್ಟೇ ಆದರೂ ಹೊರಗಿನವರು ನಮ್ಮವರಾಗರು, ನಮ್ಮವರೆ ಹೊರಗಿನವರಾದಾಗ  ಕಷ್ಟ ಯಾರಿಗೆ? 

ದೇಶ‌ ಮೊದಲೋ ವಿದೇಶವೋ?
ಯಾವ ದೇಶದ ಶಿಕ್ಷಣ  ಮೊದಲಿರುವುದೋ ಆ ದೇಶ   ಮುಂದಿರುವುದು.ಇಷ್ಟು ತಿಳಿದರೆ ಸಾಕು ಮಾನವ ತನ್ನ ಜನ್ಮ ಭೂಮಿಯ ರಕ್ಷಣೆಗೆ  ತಾನು ಯಾವ ಶಿಕ್ಷಣ ಜ್ಞಾನ ಪಡೆದು  ಮುಂದುವರಿಯಬೇಕೆಂಬ ಸಾಮಾನ್ಯಜ್ಞಾನಕ್ಕೆ ತಲೆಬಾಗಬಹುದು.
ಹಿಂದಿನಿಂದಲೂ  ದೇಶ ಮೊದಲು ಎನ್ನುವ ಕೂಗಿನಲ್ಲಿ ದೇಶಭಕ್ತರು  ಮುಂದೆ ಬಂದಿರುವರು. ಈಗ‌ ವಿದೇಶಗಳಿಗೆ‌ ಮೊದಲು ಹೋಗುವವರ ಸಂಖ್ಯೆ ಬೆಳೆದಿದೆ. ದೇಶದಲ್ಲಿ ಹತ್ತಿರದ ಎಷ್ಟೋ ಪ್ರವಾಸಿತಾಣಗಳಲ್ಲಿ ವಿದೇಶಿಗರು  ಬರುವರು ಆದರೆ ನಮ್ಮ ‌ಮಕ್ಕಳಿಗೇ ಅದರ ಪರಿಚಯವಿಲ್ಲದೆ‌ ವಿದೇಶದ ಪರಿಚಯ ಮಾಡಿಸುವವರೂ ಇದ್ದಾರೆಂದರೆ ವಿದೇಶಿ ವ್ಯಾಮೋಹ, ವ್ಯವಹಾರ, ಶಿಕ್ಷಣ,ಧರ್ಮ  ಸಂಸ್ಕೃತಿ ಗೆ ಮರುಮಾತನಾಡದೆ‌ ಮಾರು ಹೋದ  ನಮ್ಮ ಶಿಕ್ಷಣದಲ್ಲೇ  ವಿದೇಶವನ್ನು  ಮಕ್ಕಳಿಗೆ ತೋರಿಸುವ ಪ್ರಯತ್ನದಲ್ಲಿ  ಗೆದ್ದವರು ಯಾರು? ಸೋತವರು ಯಾರು?
ಈಗ  ದೇಶದ ಸಾಲ ತೀರಿಸಲು‌ ವಿದೇಶಿವ್ಯವಹಾರಕ್ಕೆ ಕೈ ಜೋಡಿಸಿ  ನಮ್ಮವರನೇ  ಅವರ ಕೈ ಕೆಳಗೆ ದುಡಿಸಿದರೂ  ಪ್ರಗತಿ ಎನ್ನುವ ಭ್ರಮೆಯಲ್ಲಿ  ನಮ್ಮ ‌ಮೂಲದ  ಧರ್ಮ ಕರ್ಮ ಹಿಂದುಳಿದು  ಮಕ್ಕಳು ‌ಮೊಮ್ಮಕ್ಕಳವರೆಗೆ ಆಸ್ತಿ ಮಾಡಿದ್ದರೂ  ಅವರು‌ ಜೊತೆಗೆ ಇರಲಾಗದ ಪರಿಸ್ಥಿತಿ ಯಲ್ಲಿ  ದೇಶದಲ್ಲಿ ವೃದ್ದಾಶ್ರಮ ಅನಾಥರ ಶ್ರಮ  ಅಬಲಾಶ್ರಮ ಬಿಕ್ಷುಕಾಶ್ರಮಗಳು ತಲೆ ಎತ್ತಿದೆ. ಎಂದರೆ  ನಿಜವಾದ ಋಷಿಗಳ ಆಶ್ರಮದಿಂದ  ದೇಶಭಕ್ತಿ  ಇದ್ದ ಭಾರತ  ಇಂದಿನ ಪೀಳಿಗೆಗೆ ಸಾಲದ ಹೊರೆ ಏರಿಸಿ  ಪೋಷಕರನ್ನು ಆಶ್ರಮಕ್ಕೆ  ಸೇರಿಸಿ ವಿದೇಶದಲ್ಲಿ  ನೆಲೆಸುವಂತಾಗಿರಲು  ಕಾರಣವೇ  ಅನಾವಶ್ಯಕ  ಅಜ್ಞಾನದ ವಿಷಯವನ್ನು  ತಲೆಗೆ ತುಂಬಿದ ಶಿಕ್ಷಣಕ್ಕೆ ನೀಡಿದ ಸಹಕಾರ.

ಅತಿಯಾದ ಆಸ್ತಿಯನ್ನು  ನಮ್ಮವರಿಗೆ  ಬಿಟ್ಟು  ಋಣ ತೀರಿಸಬಹುದು. ಹಿಂದೂಗಳ ಆಸ್ತಿ ಅನ್ಯರ ವಶವಾದರೂ ಸರಿ  ನಮ್ಮವರಿಗೆ ಕೊಡೋದಿಲ್ಲ ಎನ್ನುವ ದ್ವೇಷ ಮರೆತರೆ  ಭಾರತದ ಶ್ರೀಮಂತಿಕೆ ನಮ್ಮ ಜ್ಞಾನದಲ್ಲಿದೆ. .ಎಷ್ಟು ಆಸ್ತಿ ಮಾಡಿದರೂ ಸಾಲವೇ ಅದು. ಅದರಿಂದ ಹೊರಬರದೆ ಜೀವಮ್ಮುಕ್ತಿ ಸಿಗದು ಇದು ಅಧ್ಯಾತ್ಮ ಸತ್ಯ.ಕೊನೆಪಕ್ಷ ತನ್ನ ಜೀವಕ್ಕೆ ಸಾಕಾದಷ್ಟು ಮಾಡಿಕೊಂಡು ಇತರರ ಜೀವನಕ್ಕೆ  ಸಮಸ್ಯೆಯಾಗದಿದ್ದರೆ ಉತ್ತಮ. ಎಷ್ಟೋ  ಹಿಂದೂಗಳು  ಆಸ್ತಿ ಇದ್ದರೂ ವಿದೇಶದಲ್ಲಿರುವರು. ದೇಶಭಕ್ತಿ ಇದ್ದರೆ  ಹಿಂದಿರುಗಬಹುದು. ಇಲ್ಲವಾದರೆ  ದೇಶಕ್ಕೆ ಆಸ್ತಿ  ಬರೆದುಕೊಡಬಹುದು. ಒಟ್ಟಿನಲ್ಲಿ ಅತಿಯಾದ ಅಜ್ಞಾನಕ್ಕೆ ಮದ್ದಿಲ್ಲ. 
ಇಷ್ಟಕ್ಕೂ  ನಾವು ಕಲಿತಿರುವ ವಿದ್ಯೆ  ದೇಶಕ್ಕೆ ಲಾಭ ತಂದಿತೆ ವಿದೇಶಕ್ಕೋ? ತಂತ್ರಜ್ಞಾನದ ಯುಗದಲ್ಲಿ ಮಾನವನನ್ನು  ಮಾನವನೇ ತಂತ್ರದಿಂದ ಆಳೋದು ಸಾಮಾನ್ಯ. ಆಳೋನು ಯಾರು? ಆಳು ಯಾರು? ಅರಸನೆಲ್ಲಿ? 
ಪ್ರಜಾಪ್ರಭುತ್ವದಲ್ಲಿ  ಪ್ರಜೆಗಳ ಜ್ಞಾನವೇ ಹೊರಗಿನವರದ್ದಾದರೆ ಆಳೋದು ಹೊರಗಿನವರೆ ಆಗುವರು.
ನಮ್ಮವರನ್ನೇ ದ್ವೇಷ ಮಾಡುತ್ತಾ ಅಂತರ ಬೆಳೆಸಿದ ಅನ್ಯರಿಗೆ  ಈಗ  ದೇಶ ಆಳೋದೆ  ಗುರಿ. ಇದನ್ನು ವಿರೋಧಿಸಿ ಹೊರಗೆ ಹೋರಾಟ‌ನಡೆಸುವವರೊಮ್ಮೆ  ತಮ್ಮೊಳಗೆ ಯಾರ ಜ್ಞಾನವಿದೆ ಸಾಲವಿದೆ‌ ಎಂದು ತಿಳಿದರೆ  ಹೋರಾಟದಿಂದ ಉಪಯೋಗವಿಲ್ಲ. 
ಹಿಂದೆ ಅಸಹಕಾರ ಚಳುವಳಿಯ ಹಿಂದಿನ ಅಧ್ಯಾತ್ಮ ಸತ್ಯ ಈಗ ನಾವರಿತು ನಡೆದಾಗಲೇ ಸಮಸ್ಯೆಗೆ ಪರಿಹಾರವಿದೆ.
ಅಂದರೆ  ನಾವೇ ಅಡಿಯಾಳಾಗಿ ಸಹಕಾರ ಕೊಟ್ಟು  ಅಧಿಕಾರ ಕೊಟ್ಟಿರುವಾಗ  ಅವರನ್ನು  ಕೆಳಗಿಳಿಸಲು  ಕಷ್ಟ.
ಋಣಭಾರ ಕಳೆಯಲು ನಮ್ಮ  ಧರ್ಮ ಕರ್ಮ ವು ಯೋಗದೆಡೆಗೆ  ಸಾಗಬೇಕು. ಹೀಗಾಗಿ ಸ್ವದೇಶಿ ಶಿಕ್ಷಣ ಧರ್ಮ  ಕರ್ಮ ವು  ಯೋಗದ ಮಾರ್ಗ ಹಿಡಿದು ತತ್ವದಿಂದ ಒಗ್ಗಟ್ಟು ಬೆಳೆಸಿಕೊಂಡು  ರಾಜಕೀಯದಿಂದ ‌ದೂರವಿದ್ದು ಸ್ವತಂತ್ರ ವಾಗಿ ದೇಶ ಸೇವೆ ಮಾಡುವವರಿಗೆ  ಸಹಕರಿಸಿದರೆ  ಅಥವಾ ನಾವೂ ಸ್ವತಂತ್ರವಾಗಿ  ನಿಸ್ವಾರ್ಥ ನಿರಹಂಕಾರ ದಿಂದ ಪರಮಾತ್ಮನ ಸೇವೆಯೆಂದರಿತು  ದೇಶ ಸೇವೆ ಮಾಡಿದರೆ  ಇರುವ ಅಲ್ಪ ಸ್ವಲ್ಪ ನೆಮ್ಮದಿ ಉಳಿಯುತ್ತದೆ.
ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಯಾದರೆ ಕಷ್ಟ.
ಒಟ್ಟಿನಲ್ಲಿ ಇಲ್ಲಿ ಸಾಲ ಸಾಲವೇ. ಅದು ದೇಶವನ್ನು ಉಳಿಸುವುದೋ  ಉರಿಸುವುದೋ ಎನ್ನುವ ಜ್ಞಾನವಿದ್ದರೆ ಪರಕೀಯರ ಹಿಂದೆ ಹೋಗೋದನ್ನು ತಡೆಯಬಹುದು.
ಭಾರತೀಯರ ಸಮೃದ್ದವಾದ ಸುಜ್ಞಾನಕ್ಕೂ  ಅನ್ಯರ  ಸಮೃದ್ದವಾದ ವಿಜ್ಞಾನಕ್ಕೂ ನಡುವಿರುವ ಸಾಮಾನ್ಯ ಜ್ಞಾನದ ಬಳಕೆ ಸದ್ಬಳಕೆ ಆದರೆ ನಾವು ಮಾನವರಷ್ಟೆ. ದೇಶದ ಮಾನ ಉಳಿಸಲು  ನಮ್ಮ ಸನ್ಮಾನದಿಂದ  ದೂರವಿರಬೇಕು. ಸನ್ಮಾನ ಅಧ್ಯಾತ್ಮದ   ಪ್ರಕಾರ  ನಡೆದರೆ ಸರಿ. 

ಒಗ್ಗಟ್ಟಿನಿಂದ ತತ್ವ ಬಿಕ್ಕಟ್ಟಿನಿಂದ ತಂತ್ರ.‌ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ  ತಂತ್ರ ಪ್ರಯೋಗ  ನಡೆಯುವುದು ಸಹಜ.ಆದರೆ ಇದು ಯಾರ ಜೊತೆಗೆ ನಡೆಸಿದ್ದೇವೆನ್ನುವುದರ ಮೇಲೇ ನಿಂತಿದೆ ನಮ್ಮ ಸ್ವತಂತ್ರ.  
ಪರರೆಲ್ಲಾ ನಮ್ಮವರಾದರೆ ಸ್ವರ್ಗ, ನಮ್ಮವರೆ ಪರರಾದರೆ ನರಕ. ಈಗ ಹೇಗಿದೆ? ನಮ್ಮವರನ್ನೇ ಪರರಿಗೆ ಬಿಟ್ಟು ಪರರೂ  ಸೇರಿಕೊಂಡು  ಆಳಿದರೆ  ಸ್ವರ್ಗ ನರಕ ಯಾರಿಗೆ?

ದೊಡ್ಡಣ್ಣನ ಹಿಡಿತದಲ್ಲಿ  ದೇಶ ಸಿಲುಕಿದರೆ   ಕಾರಣರು ಯಾರು? ಭಾರತಾಂಬೆಯ  ಸುಜ್ಞಾನ  ವಿಜ್ಞಾನವನ್ನು ಮೀರಿಸಬಹುದು.ಆದರೆ  ಅದಕ್ಕೆ  ಮಕ್ಕಳಿಗೆ  ಸುಜ್ಞಾನ ದ ಶಿಕ್ಷಣವಿರಬೇಕಿತ್ತು. ಬದಲಾವಣೆ ಶಿಕ್ಷಣದಲ್ಲಿಯೇ ಆಗಬೇಕು.ಸಹಕಾರವೂ ಒಳಗಿನವರೆ ಕೊಡಬೇಕಿದೆ. ಹಣವನ್ನು ಹಂಚಿದಷ್ಟು ಸುಲಭ ವಿಲ್ಲ ಜ್ಞಾನ ಹಂಚುವುದು.
ಅದರಂತೆ ನಡೆಯುವುದು ಅಗತ್ಯವಿದೆ. 
ಯೋಗದಿಂದ ತಿಳಿಯುವುದಕ್ಕೂ ಭೋಗದಿಂದ ತಿಳಿಯುವುದಕ್ಕೂ ಅಂತರವಿದೆ.  ಯೋಗ ಒಳಗಿನ ಶಕ್ತಿ ಭೋಗ ಹೊರಗಿನ ಶಕ್ತಿ. 

ಸ್ವಂತ‌ಭೂಮಿ ವ್ಯವಹಾರ ಜ್ಞಾನ‌ಬಿಟ್ಟು ಪೋಷಕರಿಂದ ಜನ್ಮ ಭೂಮಿಯಿಂದ ದೂರವಾದರೂ ಹಿಂದಿರುಗಿ ಬರೋ ವರೆಗೆ ಆತ್ಮಕ್ಕೆ ತೃಪ್ತಿ ಸಿಗದು ಎನ್ನುವ ಸನಾತನ ಧರ್ಮ. ಇಂದಿಗೂ  ಅರ್ಥ ವಾಗದೆ ಹೊರಗೆ ತಳುಕುಬಳುಕು ಒಳಗೆ ಹುಳುಕಿನ ಮನಸ್ಥಿತಿ ಯವರಿಗೆ  ಈ ಕಡೆ ಅಧ್ಯಾತ್ಮ ಇನ್ನೊಂದು ಕಡೆ ಭೌತಿಕಾಸಕ್ತಿ. ತಕ್ಕಡಿ  ಎರಡೂ ಕಡೆ ಸಮನಾಗಿರದೆ  ಬಾಗುತ್ತಿದೆ. ಇನ್ನೊಂದು ಕಡೆ ಏಳುವವರೆ ಅಧಿಕಾರ ನಡೆಸುತ್ತಿದ್ದಾರೆಂದರೆ  ಅತಿಯಾದ ಸಾಲವೇ ಭಾರ ತಡೆಯಲಾಗದೆ  ಶೂಲವಾಗಿದೆ. ಪರಮಸತ್ಯ ಧರ್ಮಕ್ಕೆ ತಲೆಬಾಗದೆ ಅಸತ್ಯ ಅಧರ್ಮಕ್ಕೆ ತಲೆಬಾಗಿದರೆ  ತಲೆದಂಡ.

ವಿದೇಶಿ ವ್ಯವಹಾರ ಲಾಭವೋ‌?ನಷ್ಟವೋ?

ದೇಶ‌ಮೊದಲೋ ವಿದೇಶವೋ?
ಯಾವ ದೇಶದ ಶಿಕ್ಷಣ  ಮೊದಲಿರುವುದೋ ಆ ದೇಶ   ಮುಂದಿರುವುದು.ಇಷ್ಟು ತಿಳಿದರೆ ಸಾಕು ಮಾನವ ತನ್ನ ಜನ್ಮ ಭೂಮಿಯ ರಕ್ಷಣೆಗೆ  ತಾನು ಯಾವ ಶಿಕ್ಷಣ ಜ್ಞಾನ ಪಡೆದು  ಮುಂದುವರಿಯಬೇಕೆಂಬ ಸಾಮಾನ್ಯಜ್ಞಾನಕ್ಕೆ ತಲೆಬಾಗಬಹುದು.
ಹಿಂದಿನಿಂದಲೂ  ದೇಶ ಮೊದಲು ಎನ್ನುವ ಕೂಗಿನಲ್ಲಿ ದೇಶಭಕ್ತರು  ಮುಂದೆ ಬಂದಿರುವರು. ಈಗ‌ವಿದೇಶಗಳಿಗೆ‌ ಮೊದಲು ಹೋಗುವವರ ಸಂಖ್ಯೆ ಬೆಳೆದಿದೆ. ದೇಶ್ಲ್ಲಿನ ಹತ್ತಿರದ ಎಷ್ಟೋ ಪ್ರವಾಸಿತಾಣಗಳಲ್ಲಿ ವಿದೇಶಿಗರು  ಬರುವರು ಆದರೆ ನಮ್ಮ ‌ಮಕ್ಕಳಿಗೇ ಅದರ ಪರಿಚಯವಿಲ್ಲದೆ‌ವಿದೇಶದ ಪರಿಚಯ ಮಾಡಿಸುವವರೂ ಇದ್ದಾರೆಂದರೆ ವಿದೇಶಿ ವ್ಯಾಮೋಹ, ವ್ಯವಹಾರ, ಶಿಕ್ಷಣ,ಧರ್ಮ  ಸಂಸ್ಕೃತಿ ಗೆ ಮರುಮಾತನಾಡದೆ‌ ಮಾರು ಹೋದ  ನಮ್ಮ ಶಿಕ್ಷಣದಲ್ಲೇ  ವಿದೇಶವನ್ನು  ಮಕ್ಕಳಿಗೆ ತೋರಿಸುವ ಪ್ರಯತ್ನದಲ್ಲಿ  ಗೆದ್ದವರು ಯಾರು? ಸೋತವರು ಯಾರು?
ಈಗ. ವ್ಯವಹಾರಕ್ಕೆ ಕೈ ಜೋಡಿಸಿ  ನಮ್ಮವರನೇ  ಅವರ ಕೈ ಕೆಳಗೆ ದುಡಿಸಿದರೂ  ಪ್ರಗತಿ ಎನ್ನುವ ಭ್ರಮೆಯಲ್ಲಿ  ನಮ್ಮ ‌ಮೂಲದ  ಧರ್ಮ ಕರ್ಮ ಹಿಂದುಳಿದು  ಮಕ್ಕಳು ‌ಮೊಮಗಮಕ್ಕಳವರೆಗೆ ಆಸ್ತಿ ಮಾಡಿದ್ದರೂ  ಅವರು‌ಜೊತೆಗೆ ಇರಲಾಗದ ಪರಿಸ್ಥಿತಿ ಯಲ್ಲಿ  ದೇಶದಲ್ಲಿ ವೃದ್ದಾಶ್ರಮ ಅನಾಥರ ಶ್ರಮ  ಅಬಲಾಶ್ರಮ ಬಿಕ್ಷುಕಾಶ್ರಮಗಳು ತಲೆ ಎತ್ತಿದೆ. ಎಂದರೆ  ನಿಜವಾದ ಋಷಿಗಳ ಆಶ್ರಮದಿಂದ  ದೇಶಭಕ್ತಿ  ಇದ್ದ ಭಾರತ  ಇಂದಿನ ಪೀಳಿಗೆಗೆ ಸಾಲದ ಹೊರೆ ಏರಿಸಿ  ಪೋಷಕರನ್ನು ಆಶ್ರಮಕ್ಕೆ  ಸೇರಿಸಿ ವಿದೇಶದಲ್ಲಿ  ನೆಲೆಸುವಂತಾಗಿರಲು  ಕಾರಣವೇ  ಅನಾವಶ್ಯಕ  ಅಜ್ಞಾನದ ವಿಷಯವನ್ನು  ತಲೆಗೆ ತುಂಬಿದ ಶಿಕ್ಷಣಕ್ಕೆ ನೀಡಿದ ಸಹಕಾರ.
ಇಷ್ಟಕ್ಕೂ  ನಾವು ಕಲಿತಿರುವ ವಿದ್ಯೆ  ದೇಶಕ್ಕೆ ಲಾಭ ತಂದಿತೆ ವಿದೇಶಕ್ಕೋ? ತಂತ್ರಜ್ಞಾನದ ಯುಗದಲ್ಲಿ ಮಾನವನನ್ನು  ಮಾನವನೇ ತಂತ್ರದಿಂದ ಆಳೋದು ಸಾಮಾನ್ಯ. ಆಳೋನು ಯಾರು? ಆಳು ಯಾರು? ಅರಸನೆಲ್ಲಿ? 
ಪ್ರಜಾಪ್ರಭುತ್ವದಲ್ಲಿ  ಪ್ರಜೆಗಳ ಜ್ಞಾನವೇ ಹೊರಗಿನವರದ್ದಾದರೆ ಆಳೋದು ಹೊರಗಿನವರೆ ಆಗುವರು.
ನಮ್ಮವರನ್ನೇ ದ್ವೇಷ ಮಾಡುತ್ತಾ ಅಂತರ ಬೆಳೆಸಿದ ಅನ್ಯರಿಗೆ  ಈಗ  ದೇಶ ಆಳೋದೆ  ಗುರಿ. ಇದನ್ನು ವಿರೋಧಿಸಿ ಹೊರಗೆ ಹೋರಾಟ‌ನಡೆಸುವವರೊಮ್ಮೆ  ತಮ್ಮೊಳಗೆ ಯಾರ ಜ್ಞಾನವಿದೆ ಸಾಲವಿದೆ‌ ಎಂದು ತಿಳಿದರೆ  ಹೋರಾಟದಿಂದ ಉಪಯೋಗವಿಲ್ಲ. 
ಹಿಂದೆ ಅಸಹಕಾರ ಚಳುವಳಿಯ ಹಿಂದಿನ ಅಧ್ಯಾತ್ಮ ಸತ್ಯ ಈಗ ನಾವರಿತು ನಡೆದಾಗಲೇ ಸಮಸ್ಯೆಗೆ ಪರಿಹಾರವಿದೆ.
ಅಂದರೆ  ನಾವೇ ಅಡಿಯಾಳಾಗಿ ಸಹಕಾರ ಕೊಟ್ಟು  ಅಧಿಕಾರ ಕೊಟ್ಟಿರುವಾಗ  ಅವರನ್ನು  ಕೆಳಗಿಳಿಸಲು  ಕಷ್ಟ.
ಋಣಭಾರ ಕಳೆಯಲು ನಮ್ಮ  ಧರ್ಮ ಕರ್ಮ ವು ಯೋಗದೆಡೆಗೆ  ಸಾಗಬೇಕು. ಹೀಗಾಗಿ ಸ್ವದೇಶಿ ಶಿಕ್ಷಣ ಧರ್ಮ  ಕರ್ಮ ವು  ಯೋಗದ ಮಾರ್ಗ ಹಿಡಿದು ತತ್ವದಿಂದ ಒಗ್ಗಟ್ಟು ಬೆಳೆಸಿಕೊಂಡು  ರಾಜಕೀಯದಿಂದ ‌ದೂರವಿದ್ದು ಸ್ವತಂತ್ರ ವಾಗಿ ದೇಶ ಸೇವೆ ಮಾಡುವವರಿಗೆ  ಸಹಕರಿಸಿದರೆ  ಅಥವಾ ನಾವೂ ಸ್ವತಂತ್ರವಾಗಿ  ನಿಸ್ವಾರ್ಥ ನಿರಹಂಕಾರ ದಿಂದ ಪರಮಾತ್ಮನ ಸೇವೆಯೆಂದರಿತು  ದೇಶ ಸೇವೆ ಮಾಡಿದರೆ  ಇರುವ ಅಲ್ಪ ಸ್ವಲ್ಪ ನೆಮ್ಮದಿ ಉಳಿಯುತ್ತದೆ.
ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಯಾದರೆ ಕಷ್ಟ.
ಒಟ್ಟಿನಲ್ಲಿ ಇಲ್ಲಿ ಸಾಲ ಸಾಲವೇ. ಅದು ದೇಶವನ್ನು ಉಳಿಸುವುದೋ  ಉರಿಸುವುದೋ ಎನ್ನುವ ಜ್ಞಾನವಿದ್ದರೆ ಪರಕೀಯರ ಹಿಂದೆ ಹೋಗೋದನ್ನು ತಡೆಯಬಹುದು.
ಭಾರತೀಯರ ಸಮೃದ್ದವಾದ ಸುಜ್ಞಾನಕ್ಕೂ  ಅನ್ಯರ  ಸಮೃದ್ದವಾದ ವಿಜ್ಞಾನಕ್ಕೂ ನಡುವಿರುವ ಸಾಮಾನ್ಯ ಜ್ಞಾನದ ಬಳಕೆ ಸದ್ಬಳಕೆ ಆದರೆ ನಾವು ಮಾನವರಷ್ಟೆ. ದೇಶದ ಮಾನ ಉಳಿಸಲು  ನಮ್ಮ ಸನ್ಮಾನದಿಂದ  ದೂರವಿರಬೇಕು. ಸನ್ಮಾನ ಅಧ್ಯಾತ್ಮದ   ಪ್ರಕಾರ  ನಡೆದರೆ ಸರಿ. 

ಒಗ್ಗಟ್ಟಿನಿಂದ ತತ್ವ ಬಿಕ್ಕಟ್ಟಿನಿಂದ ತಂತ್ರ.‌ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ  ತಂತ್ರ ಪ್ರಯೋಗ  ನಡೆಯುವುದು ಸಹಜ.ಆದರೆ ಇದು ಯಾರ ಜೊತೆಗೆ ನಡೆಸಿದ್ದೇವೆನ್ನುವುದರ ಮೇಲೇ ನಿಂತಿದೆ ನಮ್ಮ ಸ್ವತಂತ್ರ.  
ಪರರೆಲ್ಲಾ ನಮ್ಮವರಾದರೆ ಸ್ವರ್ಗ, ನಮ್ಮವರೆ ಪರರಾದರೆ ನರಕ. ಈಗ ಹೇಗಿದೆ? ನಮ್ಮವರನ್ನೇ ಪರರಿಗೆ ಬಿಟ್ಟು ಪರರೂ  ಸೇರಿಕೊಂಡು  ಆಳಿದರೆ  ಸ್ವರ್ಗ ನರಕ ಯಾರಿಗೆ?

Sunday, August 3, 2025

ಗುರು ಹಿರಿಯರಲ್ಲಿ ಭಕ್ತಿ ಭಯ ಅಗತ್ಯವಿದೆ

ಇದರ ಅನುಭವ ನಮಗೆ ಸಾಕಷ್ಟು ಆಗಿರುತ್ತದೆ. ಆದರೆ ಅದರ ಹಿಂದೆ ಇರುವ ಶಕ್ತಿಯ ಕಾಳಜಿ ಬಗ್ಗೆ ಗಮನವಿರದು.
ಮಕ್ಕಳಿಗೆ ಕೇಳಿದ್ದೆಲ್ಲಾ ಕೊಡಿಸುವ ಈಗಿನ ಕಾಲಕ್ಕೂ ಏನು ಕೇಳದೆ ಕೊಟ್ಟಿದ್ದನ್ನು ಪಡೆದು ನಡೆದ ಅಂದಿನ ಕಾಲಕ್ಕೂ ಅಂತರವಿದೆ. ಅಂದಿನ‌ಕೂಡುಕುಟುಂಬದಲ್ಲಿ ಇದ್ದದರಲ್ಲಿ ಹಂಚಿ ಬಾಳುವ ಜ್ಞಾನಕ್ಕೂ  ಒಬ್ಬರೆ ಎಲ್ಲವನ್ನೂ ಅನುಭವಿಸಬೇಕೆನ್ನುವ ಇಂದಿನ ಮಕ್ಕಳಿಗೂ ಅಂತರವಿದೆ.
ಅಂದಿನ‌ಹಿಂದೂಗಳಲ್ಲಿದ್ದ ತತ್ವಶಾಸ್ತ್ರ ಕ್ಕೂ ಈಗಿನವರ ತತ್ವಶಾಸ್ತ್ರ ಕ್ಕೂ ಅಂತರವಿದೆ. ಅಂದಿನ ಶಿಕ್ಷಣಕ್ಕೂ‌ಇಂದಿನ ಶಿಕ್ಷಣಕ್ಕೂ ಅಂತರವಿದೆ.ಅಂದಿನ‌ಗುರುವಿಗೂ ಈಗಿನ ಗುರುವಿಗೂ ಅಂತರವಿದೆ. ಅಂದಿನ ಸಂಸಾರಕ್ಕೂ ಈಗಿನ ಸಂಸಾರಕ್ಕೂ ಅಂತರವಿದೆ. ಎಲ್ಲಾ ಅಂತರಗಳ‌ಮಧ್ಯೆ ರಾಜಕೀಯವಿದ್ದು ಮಧ್ಯವರ್ತಿ ಮಾನವ ನಿಂತು  ಅರ್ಧ ಸತ್ಯದ ವ್ಯವಹಾರಕ್ಕೆ ಇಳಿದು ತನ್ನ ಸ್ವಾರ್ಥ ಚಿಂತನೆಯಲ್ಲಿ ತನ್ನ ಆತ್ಮಕ್ಕೆ ತಾನೇ ಮೋಸಹೋಗೋದು ಸಾಮಾನ್ಯ ವಿಚಾರವಾಗುತ್ತಿದೆ. 
ನಿಜವಾಗಿಯೂ  ಇಲ್ಲಿ ಮೋಸ ಮಾಡಿದವರು ಯಾರು? ಹೋದವರು ಯಾರು? ಮಾನವರೆ ಎಂದಾಗ  ನಮ್ಮ ಮನಸ್ಸಿನ ಸಮಸ್ಯೆಗೆ  ಕಾರಣ ಅಜ್ಞಾನ ವಾಗಿದೆ.
ಸತ್ಯ ಕಠೋರವಾಗಲು ಕಾರಣ ಅದನ್ನು ‌ನಿರ್ಲಕ್ಯ ಮಾಡಿ ಲಕ್ಷ ಲಕ್ಷ ಹಣಸಂಪಾದನೆ ಮಾಡಿರೋದಷ್ಟೆ. ಲಕ್ಷಕೊಟ್ಟರೂ ಸತ್ಯ  ಬೆಳೆಯದು  ಕಾರಣ ಸತ್ಯ ಇರೋದು ಒಂದೇ. ಅದು ಹಣದಿಂದ  ಬದಲಾಗೋದಿಲ್ಲ. ಅದರೆಡೆಗೆ ಹೋಗೋದೆ ಜೀವನ ಎನ್ನುತ್ತದೆ ಅಧ್ಯಾತ್ಮ. ಕಲಿಕೆಯೇ ಅಸತ್ಯದೆಡೆಗೆ ನಡೆಸಿದರೆ ಕಲಿಗಾಲವಾಗುತ್ತದೆ. 

ಲೇಖನಗಳಲ್ಲಿ ಸತ್ಯವಿರುವುದರಿಂದ ಇದು ಇನ್ನೂ ಹಿಂದುಳಿದಿರೋದು. ಸತ್ಯ ಯಾವತ್ತೂ ಕಹಿ. ಆದರೆ ಅದು ದೇವರು ಎನ್ನುವ ಕಾರಣಕ್ಕಾಗಿ  ತಿಳಿಯುವುದು ಅಗತ್ಯವಿದೆ.
ಸಂಪೂರ್ಣ ಸತ್ಯ ಒಂದೇ ಜನ್ಮದಲ್ಲಿ ತಿಳಿಯಲಾಗದು.‌ಆದರೆ ಈ ಜನ್ಮದ ಗುರಿಯನ್ನು ತಿಳಿದು ನಡೆಯಲು ಸತ್ಯ ಅಗತ್ಯವಿದೆ.
ಕವಲೊಡೆದ ದಾರಿ ಒಮ್ಮೆ ಮೂಲ ಸೇರಬೇಕು. ಓಡುವ ನದಿ ಸಾಗರವ ಸೇರಿದಂತೆ.. ಈಗ ನದಿಯನ್ನು ದಾರಿತಪ್ಪಿಸುವ ಕೆಲಸ ರಾಜಕೀಯದೊಳಗಿದೆ ಎಂದರೆ  ಅನರ್ಥ .
ಪ್ರಕೃತಿಯನ್ನು  ಆಳೋದಕ್ಕೆ ಹೋಗಬಾರದಷ್ಟೆ.

ಸಾಧು, ಸ್ವಾಮೀಜಿ, ಜಗದ್ಗುರು, ಸದ್ಗುರು

ಸಾಧು, ಸ್ವಾಮೀಜಿ, ಜಗದ್ಗುರು, ಸದ್ಗುರು, ಇವುಗಳ ವ್ಯತ್ಯಾಸ ಗೊತ್ತಾ.

🔸 ಸಾಧು (ಸತ್ಸಂಗಿ / ವಿರಕ್ತಿ ಹೊಂದಿದವನು):👇
ಅರ್ಥ: ಲೋಕಿಕ ಬಾಧೆಗಳಿಂದ ದೂರ ಉಳಿದು ಸತ್ಯದ ಮಾರ್ಗದಲ್ಲಿ ನಡೆಯುವವನು.
ಇಂದ್ರಿಯ ನಿಗ್ರಹ, ಏಕಾಗ್ರತೆ, ಧ್ಯಾನ-ಭವನೆ ಇತ್ಯಾದಿಗಳನ್ನು ಅಭ್ಯಾಸ ಮಾಡುವವನು.
"ಸಾಧನೆ"ಯಲ್ಲಿ ತೊಡಗಿರುವವನು.

🔸 ಸ್ವಾಮೀಜಿ:👇
ಅರ್ಥ: ಆತ್ಮ ನಿಯಂತ್ರಣವನ್ನು ಪಡೆದವನು. ತನ್ನ ಇಂದ್ರಿಯಗಳ ಮೇಲೆ ಸ್ವಾಮ್ಯ ಹೊಂದಿದವನು.
ಹಲವು ಆಧ್ಯಾತ್ಮಿಕ ಸಂಸ್ಥೆಗಳ ಮುಖ್ಯಸ್ಥರಿಗೆ "ಸ್ವಾಮೀಜಿ" ಎಂದು ಬರೆಯುತ್ತಾರೆ.
ಉದಾ: ರಾಮಕೃಷ್ಣ ಮಠದ ಸ್ವಾಮೀಜಿಗಳು.

🔸 ಸದ್ಗುರು:👇
ಅರ್ಥ: ಸತ್ಯದ ಜ್ಞಾನವನ್ನು ಬೋಧಿಸುವ ಗುರು.
ಸದಾ ಸತ್ಮಾರ್ಗದಲ್ಲಿ ಇರುವ, ತಮ್ಮ ಅನುಭವದಿಂದ ಶಿಷ್ಯರನ್ನು ಮಾರ್ಗದರ್ಶಿಸುವವನು.
"ಅಸತ್ಯದಿಂದ ಸತ್ಯದತ್ತ ಕರೆದೊಯ್ಯುವವನು."
ಉದಾ :- ಸದ್ಗುರು ಸಿದ್ಧಾರೂಢ ಸ್ವಾಮಿಗಳು

🔸 ಜಗದ್ಗುರು:👇
ಅರ್ಥ: ಜಗತ್ತಿನ ಎಲ್ಲರಿಗೂ ಗುರು.
ವಿಶ್ವಗುರು ಅಥವಾ ವೈಶ್ವಿಕ ಮಟ್ಟದಲ್ಲಿ ಜ್ಞಾನ ಬೋಧನೆ ಮಾಡುವ ಮಹಾನ್ ಗುರು.
ಉದಾ: ಆದಿ ಶಂಕರಾಚಾರ್ಯರನ್ನು ಜಗದ್ಗುರು ಎನ್ನುತ್ತಾರೆ.

🔸 ಅವಧೂತ:👇
ಅರ್ಥ: ಎಲ್ಲಾ ಲೌಕಿಕ ನಿಯಮಗಳನ್ನು ತಿರಸ್ಕರಿಸಿದ, ಸ್ಥಿತಪ್ರಜ್ಞ, ಪರಮಾತ್ಮನೊಂದಿಗೆ ಲೀನವಾದ ಯೋಗಿ.
ಅವನು "ನಾನು", "ನನ್ನದು" ಎನ್ನುವ ಅಹಂಕಾರವನ್ನು ದೂರ ಮಾಡಿದ್ದಾನೆ.
ಭಗವತ್ಗೀತೆಯ "ಗುಣಾತೀತ" ಸ್ಥಿತಿಯಲ್ಲಿ ಇರುವವನು.

🔸 ಮಹಾ ಮಂಡಲೇಶ್ವರ:👇
ಅರ್ಥ: ಒಂದು ಮಹಾಸಂಸ್ಥಾನದ ಅಥವಾ ಆಖಾಡದ (ಪೀಠದ) ಉನ್ನತ ಪದವಿಯುಳ್ಳ ಯೋಗಿ.
ಹೆಚ್ಚಿನ ಅನುಭವ ಮತ್ತು ತಪಸ್ಸಿನ ಆಧಾರದ ಮೇಲೆ ಈ ಪದವಿ ಲಭಿಸುತ್ತದೆ.
"ಮಹಾ" ಎಂದರೆ ಶ್ರೇಷ್ಠ, "ಮಂಡಲ" ಎಂದರೆ ಪೀಠ/ಪ್ರಾಂತ, "ಇಶ್ವರ" ಎಂದರೆ ನಿಯಂತ್ರಕ.

🔸 ಯೋಗಿ:👇
ಅರ್ಥ: ಯೋಗಶಾಸ್ತ್ರವನ್ನು ಅಭ್ಯಾಸ ಮಾಡುವವನು.
ದೇಹ, ಮನಸ್ಸು, ಆತ್ಮದ ಏಕ್ಯವನ್ನು ಸಾಧಿಸಿದವನು.
ಭಕ್ತಿಯೋಗ, ಜ್ಞಾನಯೋಗ, ಧ್ಯಾನಯೋಗ, ಕರ್ಮಯೋಗ—ಇವುಗಳಲ್ಲಿ ಯಾವುದಾದರೂ ಮಾರ್ಗದಿಂದ ಒಟ್ಟಾಗಿ ದೇವರಲ್ಲಿ ಲೀನನಾಗುವವನು.

ಕೃಪೆ: 👉 ಪೌರಾಣಿಕ ಕಥೆಗಳು.