ಭೂ ಋಣ ತೀರಿದಾಗ ಮುಕ್ತಿ

ಭೂಮಿಯಲ್ಲಿ ಎಷ್ಟು ಸಂಪಾದಿಸಿದರೂ ಒಮ್ಮೆ ಎಲ್ಲಾ ತೀರಿಸಿ ಹೋಗಲೇಬೇಕೆನ್ನುವುದನ್ನು ಯಾರೂ ಬದಲಾಯಿಸಲಾಗಿಲ್ಲ.ಅದಕ್ಕೆ ಮಹಾತ್ಮರು ಸಾಧ್ಯವಾದಷ್ಟು ಸರಳವಾಗಿ ಜೀವನ‌ನಡೆಸುತ್ತಾ ...

Tuesday, September 30, 2025

ಜಾತಿಯಿಂದ ಸಾಲ ಹೆಚ್ಚುತ್ತದೆ

ಜಾತಿ ಜಾತಿ ಎಂದು ರಾಜಕೀಯಕ್ಕೆ ಸಿಲುಕಿಕೊಂಡು ಎಷ್ಟು ಜನ್ಮ ಎತ್ತಿದರೂ ತೀರಿಸಲಾಗದ ಸಾಲದ ಸುಳಿಯಲ್ಲಿ ಮನುಕುಲಕ್ಕೆ ತನ್ನ ‌ಮಾನವ ಜಾತಿಯ. ಮೂಲ ಗುರಿ ತಲುಪಲಾಗದೆ ಜೀವಾತ್ಮ ಅತಂತ್ರಸ್ಥಿತಿಗೆ  ಬಂದರೂ ಯಾರೂ ಸರಿಯಾದ ಸತ್ಯ ಧರ್ಮದ‌ಬಗ್ಗೆ ಶಿಕ್ಷಣ ನೀಡದೆ ಆಳೋದೇ  ಸಾಧನೆ ಎಂದರೆ ಅಜ್ಞಾನವಷ್ಟೆ.

ಭಾರತ ಜಾತ್ಯಾತೀತ ದೇಶ ಎಂದರೇನು?

ಜಾತಿಯಿಲ್ಲದ ದೇಶವೆನ್ನಬೇಕೋ ಜಾತಿಯೇ  ಮುಖ್ಯವಾದ ದೇಶವೆನ್ನಬೇಕೋ?

ನಮ್ಮ ಕಣ್ಣಿಗೆ ಕಾಣುವ ಪ್ರಕೃತಿ ಯಾವ ಜಾತಿ?  ಲಕ್ಮಿ ಯಾವ ಜಾತಿ? ಭೂಮಿ ಯಾವ ಜಾತಿ?  ಭಾರತಮಾತೆ ಕನ್ನಡಮ್ಮ...ಎಲ್ಲಾ ದೇವತೆಗಳು ಯಾವ ಜಾತಿ? ಎಲ್ಲರೂ  ಆರಾಧಿಸುವ  ದೇವರನ್ನು ಜಾತಿಯ ಹೆಸರಿನಲ್ಲಿ ಪೂಜಿಸಿದರೆ ದೈವತ್ವ ಬರುವುದೆ?
ಹೋಗಲಿ  ನಮ್ಮ ಜನ್ಮ ಒಂದು  ಕುಟುಂಬದೊಳಗೆ ಆಗಿದೆ ಎಂದರೆ ಎಷ್ಟು ಮಂದಿ ಆ ಒಂದೇ ಜಾತಿಯಡಿ ಇದ್ದು ಜೀವನ ನಡೆಸಿರುವರು? ಅನ್ಯಧರ್ಮ ಅನ್ಯಜಾತಿಯವರ ಸಹಕಾರ ಸಹಾಯವಿಲ್ಲದೆ ಸಮಾಜದಲ್ಲಿ ಜೀವನ ನಡೆಸಲು ಅಸಾಧ್ಯ ಎನ್ನುವಾಗ ಮಿಶ್ರ ಜಾತಿ ಮಿಶ್ರ ಧರ್ಮ ಸಮ್ಮಿಶ್ರ ಸರ್ಕಾರ ಹಿಡಿದು  ಜಾತಿಯ ಹೆಸರಿನಲ್ಲಿ ದೇಶವನ್ನು ಒಡೆದು ಆಳೋದರಿಂದ ಲಾಭ ಯಾರಿಗಾಗಿದೆ ಎಂದರೆ  ರಾಜಕಾರಣಿಗಳಿಗೆ ಅಧಿಕಾರ ಸಿಕ್ಕಿದೆ .ಜನರ ಸಾಲ ಮಿತಿಮೀರಿದೆ. ದೇಶದಲ್ಲಿ ವಿದೇಶಿ ಸಾಲ ಬಂಡವಾಳ ವ್ಯವಹಾರ ಅನ್ಯಧರ್ಮದವರ ಅಧಿಕಾರವೂ ಹೆಚ್ಚಾಗಿದ್ದು ನಮ್ಮವರೆ ಅವರ ಆಳಾಗಿ ದುಡಿದರೂ ಪ್ರಗತಿ ಎನ್ನುವ ಮಟ್ಟಿಗೆ ಅಜ್ಞಾನ ಬೆಳೆದಿದೆ. ಇದನ್ನು ಪ್ರಗತಿಪರರು ವೈಜ್ಞಾನಿಕ ಪ್ರಗತಿ ಎಂದರೆ ಅಧ್ಯಾತ್ಮ ಚಿಂತಕರು ಅಧೋಗತಿ ಎನ್ನುವರು.
ಅಂದರೆ  ಒಂದು ಮಗು  ಜನ್ಮಪಡೆದಾಗ  ಅದಕ್ಕೆ  ಹೊರಗಿನ ಜಾತಿ ಭಾಷೆ ಧರ್ಮ ದ ಅರಿವಿರದು.ಅದನ್ನು ಪೋಷಕರು ಮಗು  ಬೆಳೆದಂತೆಲ್ಲಾ  ಅನಗತ್ಯವಾಗಿ  ಮಕ್ಕಳ ತಲೆಗೆ ತುಂಬಿ ಒಳಗೇ ಇದ್ದ  ವಿಶೇಷವಾದ ಜ್ಞಾನಶಕ್ತಿಯನರಿಯದೆ ಹೊರಗಿನ ವಿಷಯಗಳ ಹಿಂದೆ ನಡೆಸಿ  ಸಾಲಕ್ಕೆ ಜೀವಾತ್ಮನನ್ನು  ಸಿಲುಕಿಸಿದರೆ  ಇದರ  ಪರಿಣಾಮವೇ ಇಂದಿನ ಪರಿಸ್ಥಿತಿ ಎಂದರೆ ಅರ್ಥ ವಾಗದು.
ಧಾರ್ಮಿಕ ಕ್ಷೇತ್ರವೇ ಇದರ ಹಿಂದೆ ‌ನಡೆದಾಗ  ಬೇರೆಯವರ ಪಾಡೇನು?
ಧರ್ಮ  ಒಂದೇ ಎನ್ನುವ ಹಲವಾರು ಮತಗಳ ನಡುವಿನ ಈ ರಾಜಕೀಯಕ್ಕೆ  ಮಕ್ಕಳು ಮಹಿಳೆಯರು ಮನೆಯಿಂದ ಹೊರಬಂದು ದುಡಿಯುವ‌ಹಂತಕ್ಕೆ ತಲುಪಿರೋದು ಸಾಲ ತೀರಿಸಲು. ಸಾಲ ಎಂದರೆ ಋಣ .ಇದು ಜಾತಿಯಿಂದ ಬೆಳೆಯಿತೆ? ಪ್ರತಿಯೊಂದು ಗಿಡಮರ ಕಲ್ಲು ಮಣ್ಣು ನೀರು ಹೂ  ಹಣ್ಣುಗಳಿಗೂ ಮನುಷ್ಯ ಜಾತಿ ಬೆರೆಸಿ ಬೆಳೆಸಿದ್ದಾನೆ.
ಆದರೆ  ಎಲ್ಲದರಿಂದ ದೂರವಿರುವ ಪರಮಾತ್ಮನ ಕಡೆಗೆ ಹೋಗಲು ಇವುಗಳು ಬಿಡದೆ ಕಾಡುತ್ತಿದೆ ಎಂದರೆ  ನಿಜವಾದ ಜ್ಞಾನಿಗಳು  ಇದಕ್ಕೆ ಸರಿಯಾದ  ರೀತಿಯಲ್ಲಿ ಉತ್ತರ ನೀಡುವುದು ಧರ್ಮ ವಾಗಿದೆ.
ಬೇಲಿಯೇ ಎದ್ದು ಹೊಲಮೇಯ್ದರೆ ಕಾಯೋರಿಲ್ಲ ಎನ್ನುವಂತೆ
ತಾವೂ ದುಡಿಯದೆ ಇತರರನ್ನು ಸನ್ಮಾರ್ಗದಲ್ಲಿ  ನಡೆಯದಂತೆ ತಡೆದು ಆಳಿದರೆ  ಅಧರ್ಮ ವಷ್ಟೆ.
ಹಿಂದೆ ಮಹಾರಾಜರಿಗೆ ಸರಿಯಾದ ಧಾರ್ಮಿಕ ಶಿಕ್ಷಣ ನೀಡಿ ಋಷಿಮುನಿಗಳು  ಲೋಕಕಲ್ಯಾಣಕ್ಕಾಗಿ  ಶಿಕ್ಷಣದಾಸೋಹ ನೀಡಿದ್ದರು. ಆದರೆ ಇಂದು ಸರ್ಕಾರದ ಹಿಂದೆ ನಡೆದು ಅಜ್ಞಾನವನ್ನು ಜ್ಞಾನವೆಂದು ಪ್ರಚಾರ ಮಾಡಿ ಹಣಗಳಿಸಿ ಅಧಿಕಾರ ಪಡೆದವರಿಗೆ ಕೆಳವರ್ಗದವರ ಜ್ಞಾನದ ಅರಿವಿಲ್ಲದೆ ಅವರನ್ನು ಜಾತಿಯಿಂದ ಹಿಂದುಳಿಸಿ ಸಾಲದ ದವಡೆಗೆ ಸಿಲುಕಿಸಿ  ಇನ್ನಷ್ಟು ಸಮಸ್ಯೆ ಮುಗಿಲುಮುಟ್ಟಿದೆ.
ಒಟ್ಟಿನಲ್ಲಿ  ಅತಿಯಾದರೆ ಗತಿಗೇಡು ಎನ್ನುವಂತೆ  ಇದರಿಂದ  ಮೂಲದ ಧರ್ಮ ಕರ್ಮದಿಂದ  ದೂರವಾದಷ್ಟೂ ಜೀವಾತ್ಮ ಅತಂತ್ರಸ್ಥಿತಿಗೆ ತಲುಪುವುದು ಸಹಜ. ಕಣ್ಣಿಗೆ ಕಾಣದ ಶಕ್ತಿಯ  ಕೆಲಸ ಕಾಣುವ ಶಕ್ತಿಯ ಕೆಲಸದ ನಡುವಿನ ಅಂತರದಲ್ಲಿ ಮಧ್ಯವರ್ತಿಗಳು  ತಮ್ಮದೇ ಆದ ರಾಜಕೀಯ ತಂತ್ರ ಬೆರೆಸಿ ಜನರನ್ನು ಆಳೋದನ್ನು  ಸಾಧನೆ ಎಂದರೆ ಅಜ್ಞಾನವಷ್ಟೆ.ಇಲ್ಲಿ ಅಜ್ಞಾನ ಎಂದರೆ ಸತ್ಯದ ತಿಳುವಳಿಕೆಯಿಲ್ಲದಿರೋದಷ್ಟೆ.
ಬುದ್ದಿವಂತಿಕೆ ಗೆ ಕೊರತೆಯಿಲ್ಲದ ಕಲಿಯುಗದಲ್ಲಿ ಜ್ಞಾನದ ಕೊರತೆ ಹೆಚ್ಚಾಗಿದೆ. ಹೀಗಾಗಿ  ಎಷ್ಟೋ  ಸಂಸಾರಗಳು  ನಾಶ ಆದರೂ ಸರಿ ಜಾತಿ ಮಾತ್ರ ಬಿಡೋದಿಲ್ಲ ಎನ್ನುವ ಸರ್ಕಾರವ   ಬಿ ನಡೆದರೆ   ತಾವೇ ತೋಡಿಕೊಂಡ ಹೊಂಡದಲ್ಲಿ ತಾವೇ ಬಿದ್ದರೂ  ಸರ್ಕಾರವೇ ಕಾರಣವೆಂದು ಜಾರಿಕೊಳ್ಳುವ ಮಟ್ಟಿಗೆ  ಅಜ್ಞಾನ ಹೆಚ್ಚುವುದು.
ಹಿಂದಿನ ಎಷ್ಟೋ ಮಹಾತ್ಮರುಗಳು ಸಾದು ಸಂತ ಶರಣರು ಯಾವ ಜಾತಿಯಿಂದ  ಪರಮಾತ್ಮನ ಕಾಣಲಿಲ್ಲ. ಅವರಲ್ಲಿದ್ದ ಜ್ಞಾನಶಕ್ತಿಯಿಂದ ಪರಮಾತ್ಮನ ದಾಸ,ಶರಣರಾಗಿ ದೈವತ್ವ ಪಡೆದವರು. ಈಗ ಅವರನ್ನು ಜಾತಿಯ ಪಟ್ಟಿಗೆ ಸೇರಿಸಿ ಜನರನ್ನು ದಾರಿತಪ್ಪಿಸುವುದರಿಂದ  ಮಾಡಬಾರದ್ದು ಮಾಡಿದರೆ ಆಗಬಾರದ್ದು ಆಗೋದನ್ನು ತಡೆಯಲಾಗದು.
ಇರುವ ಅಲ್ಪ ಜ್ಞಾನವನ್ನು ಸದ್ಬಳಕೆ ಮಾಡಿಕೊಂಡು ಸರಳವಾಗಿ ಸ್ವಾವಲಂಬಿಗಳಾಗಿ ಸ್ವಾಭಿಮಾನದಿಂದ ಸ್ವತಂತ್ರ ಜೀವನ ನಡೆಸಲು ಹೊರಗಿನ ಜಾತಿ ಸರ್ಕಾರದ ಅಗತ್ಯವಿದೆಯೆ?
ಸಾಮಾನ್ಯಜ್ಞಾನದ ಕೊರತೆಯಿಂದ ಇಂದು ಜನಸಾಮಾನ್ಯರು ದೊಡ್ಡದೊಡ್ಡ ಸಾಲ ಮಾಡುತ್ತಾ  ಅಜ್ಞಾನದೆಡೆಗೆ ಹೊರಗೆ ನಡೆದಿರೋದು ಕಲಿಕೆಯ ಪ್ರಭಾವ. ಏನೂ ಓದದೆ ಕಲಿಯದೆ ಇದ್ದ  ಮಹಾತ್ಮರುಗಳು ಪರಮಾತ್ಮನ  ಧ್ಯಾನದಿಂದಲೇ ಋಣಮುಕ್ತರಾಗಿ  ಜೀವನ್ಮುಕ್ತಿ ಪಡೆದರೆನ್ನುವುದು ಸರ್ವ ಕಾಲಿಕ ಸತ್ಯ. ಇದನ್ನು ಧಾರ್ಮಿಕ ವರ್ಗ  ಜನಸಾಮಾನ್ಯರಿಗೆ ಅರ್ಥ ಮಾಡಿಸಲು ಸೋತು  ರಾಜಕೀಯದ ಹಿಂದೆ ನಡೆದು ಜಾತಿಯ ವಿಚಾರದಲ್ಲಿ  ವಿರೋಧಿಸುವ ಹಂತಕ್ಕೆ ಬಂದಿರೋದು ದುರಂತವಷ್ಟೆ.
ದೇವರಿಗೆ ಹೊರಗಿನ‌ಜಾತಿ ಧರ್ಮ ಅಲಂಕಾರ ಆಚರಣೆಗಿಂತ ಮೊದಲು ಶುದ್ದವಾಗಿರುವ ಒಳಗಿರುವ ಆತ್ಮಾವಲೋಕನ  ಅಗತ್ಯವಿದೆ. ಒಟ್ಟಿನಲ್ಲಿ ಇದನ್ನು ಯಾವುದೇ ರಾಜಕೀಯದಿಂದ  ಸರಿಪಡಿಸಲಾಗದು. ಸ್ವಯಂ ಪ್ರಯತ್ನ,ಸ್ವಯಂ ಪ್ರಕಾಶಕರಾಗೋದಕ್ಕೆ  ಆತ್ಮಸಾಕ್ಷಿಯ ಕಡೆಗೆ ನಡೆಯೋ ಜ್ಞಾನಶಕ್ತಿ ಅಗತ್ಯವಿದೆ. ಇದಕ್ಕೆ ಸರ್ಕಾರದ ಅಗತ್ಯವಿದೆಯೆ?  ಹಣದಿಂದ ಸಾಧ್ಯವೆ? ಜಾತಿ ಮನುಷ್ಯನ ಸೃಷ್ಟಿ ವರ್ಣ ದೈವಸೃಷ್ಟಿ.
ವರ್ಣದಲ್ಲಿ  ಬ್ರಾಹ್ಮಣ ಕ್ಷತ್ರಿಯ ವೈಶ್ಯ ಶೂದ್ರ ಎನ್ನುವ ನಾಲ್ಕರಲ್ಲಿ  ಬ್ರಾಹ್ಮಣನ ಜ್ಞಾನ, ಕ್ಷತ್ರಿಯನ ಬಾಹುಬಲ, ವೈಶ್ಯರ ವ್ಯವಹಾರ ಶೂದ್ರ ಸೇವೆಯು ಧರ್ಮದ ಹಾದಿಯಲ್ಲಿ ಸತ್ಯದೆಡೆಗೆ ನಡೆದಿತ್ತು. ಈಗಿದು ಮಿಥ್ಯದಲ್ಲಿ ಮುಳುಗಿ ಹಣ ಗಳಿಸಿ ವ್ಯವಹಾರಕ್ಕೆ ಸೀಮಿತವಾಗಿ  ಸಾಲದ ಸುಳಿಯಲ್ಲಿದೆ. ಹೊರಗೆ ಬರಲಾಗದವರು ಇನ್ನಷ್ಟು ಸಾಲ ಬೆಳೆಸಿ ಜಾತಿಒಡೆದು ಧರ್ಮ ಭ್ರಷ್ಟರಾಗಿರೋದು ಕಲಿಯುಗದ ಪ್ರಭಾವವೆಂದು ಸುಮ್ಮನಿರಬಹುದೆ? ಸಾಧ್ಯವೆ? ಹೊರಗಿನ ಹೋರಾಟ ಹಾರಾಟ ಮಾರಾಟವೇ ಜೀವನ ಎಂದರೆ ಕಷ್ಟ.
ಇದರಲ್ಲಿ ಸತ್ಯ ಧರ್ಮ ಇದ್ದರೆ  ಉತ್ತಮ. ಇಲ್ಲದಿದ್ದರೆ ಅಧಮ.
ಭೂಮಿ ಒಂದು ಮಾಧ್ಯಮವಷ್ಟೆ.ಇಲ್ಲಿ  ಸಾಲ ತೀರಿಸುವ ಜ್ಞಾನವೂ ಇದೆ ಏರಿಸುವ ಅಜ್ಞಾನವೂ ಇದೆ.ಕಣ್ಣಿಗೆ ಕಾಣುವ ಅಜ್ಞಾನದ ಹಿಂದೆ ನಡೆದಷ್ಟೂ ಕೆಳಮಟ್ಟದ ಪಾತಾಳ ತಲುಪುವುದನ್ನು ಯಾರೂ ತಪ್ಪಿಸಲಾಗದು. ಕಾರಣವಿಷ್ಟೆ ಜನ್ಮ  ಪರಮಾತ್ಮನ ಇಚ್ಚೆಯಂತೆ ನಡೆದರೂ ಎಲ್ಲಿ ಜನಿಸಬೇಕೆಂಬುದು  ಹಿಂದಿನ ಋಣದ ಆಧಾರದಲ್ಲಿರುತ್ತದೆ. ಆ ಋಣ ತೀರಿಸಲು ಸುಜ್ಞಾನದ ಶಿಕ್ಷಣ ನೀಡುವುದು ನಿಜವಾದ ಧರ್ಮ ವಾಗಿತ್ತು. ಧಾರ್ಮಿಕ ವರ್ಗ  ಶಿಕ್ಷಣ ಬಿಟ್ಟು ರಾಜಕೀಯಕ್ಕೆ ಇಳಿದರೆ ಏನರ್ಥ? ಒಟ್ಟಿನಲ್ಲಿ ಮಾನವನಿಗೆ ಮಾನವನೇ ಶತ್ರು. ಮನಸ್ಸೇ ಇದರ ಮೂಲ. ಅಹಂಕಾರ ಸ್ವಾರ್ಥ ಎನ್ನುವುದು ಅತಿಯಾದಷ್ಟೂ ಗತಿಗೇಡು.
ಅಸುರರ ಹಿಂದೆ ಸುರರು ನಡೆದರೆ ಪ್ರಗತಿಯೆ? 
ಇದರಲ್ಲಿ  ತಪ್ಪು ಯಾರದ್ದು? ಸರ್ಕಾರ ನಡೆಸಿರುವವರದ್ದೆ ಸಹಕಾರ ನೀಡಿದವರದ್ದೇ? ತಪ್ಪಿಗೆ ತಕ್ಕಂತೆ ಶಿಕ್ಷೆಯನ್ನು ಅನುಭವಿಸಲೇಬೇಕೆನ್ನುತ್ತದೆ ಕರ್ಮ ಸಿದ್ದಾಂತ. 

Monday, September 29, 2025

ಜ್ಞಾನ ದೇವತೆ ಸರಸ್ವತಿ

ಸ್ವಚ್ಚ ಬಿಳಿ ವಸ್ತ್ರ ದಲ್ಲಿ ಕುಳಿತಿರುವ ಸರಸ್ವತಿ ಜ್ಞಾನದ ಅಧಿದೇವತೆ. ಸುಜ್ಞಾನದಿಂದ ಆತ್ಮೋನ್ನತಿ ಎಂದು ಮಹರ್ಷಿಗಳು  ದೇವಿ ಸರಸ್ವತಿಯನ್ನು ಒಲಿಸಿಕೊಳ್ಳಲು ಮುಕ್ತಿ ಪಥ ಹಿಡಿದರು. ಕಲ್ಲಿನ‌ಮೇಲೆ ಕುಳಿತಿರುವ ಸಂಕೇತ ಸ್ಥಿರ ಶಾಶ್ವತ ಎನ್ನುವ ಅರ್ಥ ಕೊಡುತ್ತದೆ. ಜ್ಞಾನದ ನಂತರವೇ ಹಣಸಂಪಾದನೆ  ಮಾಡಿ ಋಣ. ಕಳೆಯುವ ಸತ್ಕರ್ಮ ದಾನ ಧರ್ಮ ಗಳಿಂದ ಸನಾತನ ಹಿಂದೂ ಬೆಳೆದಿರೋದು.‌ಈಗಲೂ ಜ್ಞಾನವಿದೆ ಆದರೆ ಅದರಲ್ಲಿ ಸತ್ಯದ ಕೊರತೆಯ ಜೊತೆಗೆ ಧರ್ಮ ದ ಕೊರತೆಯೂ ಹೆಚ್ಚಾಗಿದ್ದು ಆಡಂಬರದ ಜೀವನದಲ್ಲಿ  ಕಷ್ಟ ನಷ್ಟಗಳಾದಾಗ ದಾನ ಧರ್ಮ ಪೂಜೆ ಇನ್ನಿತರ ಕಾರ್ಯಕ್ಕೆ ಹಣ ನೀಡಲಾಗುತ್ತದೆ. ಇದರಿಂದಾಗಿ ತಾತ್ಕಾಲಿಕವಾಗಿ  ಸಮಸ್ಯೆ  ತಡೆದರೂ  ಮತ್ತೆ ಮತ್ತೆ ಬಂದಾಗ ಮಾನವನಿಗೆ ದೇವರೆ ಇಲ್ಲ ಎನ್ನುವ  ಮಟ್ಟಿಗೆ ಅನುಮಾನವೂ ಬೆಳೆಯುತ್ತದೆ. ಆದರೆ ಒಂದು ವಿಚಾರ ಮಾನವ‌ಕಾರಣಮಾತ್ರದವನಷ್ಟೆ. ಯಾವಾಗ ಭ್ರಷ್ಟರ ಹಣದಲ್ಲಿ  ದಾನವರು ಬೆಳೆಯುವರೋ  ಆಗ ಸಮಸ್ಯೆ ಒಳಗೆ ಹೊರಗೆ ಬೆಳೆಯುತ್ತಾ ಹೋಗುತ್ತದೆ. ಕಾರಣವಿಷ್ಟೆ ನಮ್ಮ ಪ್ರಾರಭ್ದ ಕರ್ಮ ವನ್ನು ಹಣದಿಂದ ತೀರಿಸುವುದಕ್ಕೂ ಸುಜ್ಞಾನ ಅಗತ್ಯವಿದೆ.ಸುಜ್ಞಾನ ದಲ್ಲಿ ಸತ್ಯ ಧರ್ಮ ಅಗತ್ಯವಾಗಿರಬೇಕು.
ಇತ್ತೀಚಿನ ದಿನಗಳಲ್ಲಿ ಸುಜ್ಞಾನ ಎಂದು ವಿಜ್ಞಾನ ಶಿಕ್ಷಣ ನೀಡುವರು. ಹೊರಗಿನ ಸತ್ಯ ಕ್ಷಣಿಕವಾದ್ದರಿಂದ ಅಸತ್ಯ ಬೆಳೆದು ಅಧರ್ಮ ಕ್ಕೆ ಸಹಕಾರ ಸಿಕ್ಕಾಗ  ಸಮಸ್ಯೆ ಯ ಜೊತೆಗೆ ಅಜ್ಞಾನವೂ ಬೆಳೆಯುತ್ತದೆ. ಶಿಕ್ಷಣವೇ ಇದರ ಮೂಲ.
ಲಕ್ಮಿ ಗೆ  ಅಲಂಕಾರ ಮಾಡೋದು ಸರಿ ಕಾರಣ ಅವಳಲ್ಲಿ ಅದು ತುಂಬಿಕೊಂಡಿರುತ್ತದೆ. ಅದೇ  ಸರಸ್ವತಿಗೆ ಮಾಡಿದರೆ ಜನರು ನೋಡೋದು ಅಲಂಕಾರವಷ್ಟೆ. ಒಳಗಿರುವ ಜ್ಞಾನ  ಕಾಣೋದಿಲ್ಲ. ದೇವತೆಗಳಿಗೂ ಅವರದೇ ಆದ ವಿಶೇಷ ಶಕ್ತಿ ಇದ್ದಾಗ ಆ ಶಕ್ತಿಗೆ ತಕ್ಕಂತೆ  ನಮ್ಮ ಆಚಾರ ವಿಚಾರ ಪ್ರಚಾರ ಹಾಗೂ ಆಹಾರ ವಿಹಾರವೂ ಅಗತ್ಯವೆನಿಸುತ್ತದೆ.‌ಇಲ್ಲದಿದ್ದರೆ ಆ ಶಕ್ತಿಗೆ  ನಮ್ಮ ಬೇಡಿಕೆ ತಲುಪುವುದೇ ಇಲ್ಲ. ತಲುಪದಿದ್ದರೆ ಬೇಡಿಕೆ ಈಡೇರುವುದಿಲ್ಲ.ಈಡೇರದಿದ್ದರೆ ದೇವರೆ ಇಲ್ಲ ಎನ್ನುವುದು ಯಾರ ತಪ್ಪು?
ನಮ್ಮ ಕೈ ಬೆರಳೇ ಒಂದೇ ಸಮನಾಗಿರೋದಿಲ್ಲ.ಇನ್ನು ಅಗೋಚರ ಶಕ್ತಿ ಒಂದೇ ಸಮನಾಗಿರಬಹುದೆ?
ನಾಸ್ತಿಕ ಆಸ್ತಿಕ ಎಂದರೆ  ದೇವರನ್ನು ನಂಬದಿರೋರು ನಂಬುವವರು ಎನ್ನುವ ಬದಲು ಆಸ್ತಿ ಮಾಡದವರು ಆಸ್ತಿ ಮಾಡುವವರು ಎಂದರೆ ಈಗ ಸರಿಯಾಗಬಹುದು. ಅವರವರ ದೇವರನ್ನು ನಂಬಿ ನಡೆದವರೂ ಆಸ್ತಿ ಕರೆ.
ಆದರೆ ಯಾರು ದೇವರಲ್ಲಿ  ಆಸ್ತಿಗಾಗಿ ಮೊರೆಹೋಗದೆ  ಮಹಾತ್ಮರಾದರೂ  ಅವರು  ಜ್ಞಾನವನೇ ಆಸ್ತಿ ಯಾಗಿ  ಬಿಟ್ಟು ಹೋಗಿರುವರು. ಇದೇ ವಿಶೇಷ ಶಕ್ತಿ.ವಿಶೇಷಜ್ಞಾನ. ಅಧ್ಯಾತ್ಮ ವಿಜ್ಞಾನ

Sunday, September 21, 2025

ಶೈಲಪುತ್ರಿ

ನವರಾತ್ರಿಯ ಶುಭಾಶಯಗಳು
ಮೊದಲದಿನ ಶೈಲಪುತ್ರಿಯಾಗಿ‌ ಜಗನ್ಮಾತೆ ಕಾಣುವಳು.
ಭೌತಿಕ ಸಂಪತ್ತನ್ನು ಬಿಟ್ಟು ಆಧ್ಯಾತ್ಮಿಕ ಸಂಪತ್ತಿನ ಮಹಾದೇವನನ್ನೇ ವರಿಸಿದ ಮಹಾಶಕ್ತಿಯ ಆರಾಧನೆಯಿಂದ ನಮ್ಮಲ್ಲಿಯ ಅಜ್ಞಾನವೆಂಬ  ಅಂಧಕಾರ ಕಳೆಯಲೆಂದು ಪ್ರಾರ್ಥಿಸೋಣ.

 ಸನಾತನಧರ್ಮದಲ್ಲಿ ಸ್ತ್ರೀ ಗೆ ಕೊಟ್ಟಿರುವ ಸ್ಥಾನಮಾನವನ್ನು  ಅವಳ ಆರಾಧನೆ ಮಾಡುವ ಮೂಲಕ ನವರಾತ್ರಿಯಲ್ಲಿ ವಿಶೇಷವಾಗಿ ನವದುರ್ಗೆಯರ ರೂಪದಲ್ಲಿ ಕಾಣಬಹುದು.

ಭೂ ತಾಯಿಯಿಲ್ಲದೆ ಮನುಕುಲವೇ ಇಲ್ಲ. ಹೀಗಿರುವಾಗ ಸ್ತ್ರೀ ಶಕ್ತಿಯನರಿತು ಮಾನವ ಸನ್ಮಾರ್ಗದಲ್ಲಿ ನಡೆಯಲು ಜ್ಞಾನವೇ ಪ್ರಧಾನ.
ಜ್ಞಾನದೇವತೆಯನ್ನು ಹೊರಗಿನಿಂದ ಅಲಂಕರಿಸಿದರೆ ಕಣ್ಣಿಗೆ ಚೆನ್ನಾಗಿ ಕಾಣಬಹುದು. ಅವಳ ಆಂತರಿಕ ಶಕ್ತಿಯನರಿತು ಅದರಂತೆ‌ನಡೆದುಕೊಂಡಾಗಲೇ ಆತ್ಮಜ್ಞಾನದಿಂದ ಆತ್ಮನಿರ್ಭರ ದೆಡೆಗೆ ಸಾಗಬಹುದು.
ಕಾಣದ ಶಕ್ತಿ ಕಾಣುವ ವ್ಯಕ್ತಿಯ ನಡುವೆ ಅಂತರ ಬೆಳೆಸಿರೋದು ಹಣ ಅಧಿಕಾರ ಸ್ಥಾನ. ಆದರೆ ನವರಾತ್ರಿಯ ಮೊದಲ ದಿನದ ದೇವಿ ಶೈಲಪುತ್ರಿಯು ಶಿವನನ್ನು ಒಲಿಸಿಕೊಳ್ಳಲು  ಮಾಡಿದ ತಪಸ್ಸಿನ  ಫಲವಾಗಿ ಶಿವಶಕ್ತಿಯಾಗಿ ಇಂದು ಆರಾಧಿಸಲ್ಪಡಲು ಕಾರಣವೆಂದರೆ ಜ್ಞಾನ ಶಕ್ತಿ. ಜ್ಞಾನದಿಂದ ಧ್ಯಾನ ಧ್ಯಾನದಿಂದ ಜ್ಞಾನೋದಯ .ಜಗನ್ಮಾತೆಯನ್ನು ಬರಿಗಣ್ಣಿನಿಂದ ಅಳೆಯಲಾಗದು. ಹಾಗೆ ಜಗಧೀಶ್ವರನೂ ಆ ಮಾತೆಗೆ ತನ್ನ ಅರ್ಧ ಶರೀರವನ್ನು ಕೊಟ್ಟು ನಡೆಸಿರುವುದರಿಂದ  ಇಬ್ಬರೂ ಸೇರಿದಾಗಲೇ‌ ಜಗತ್ತಿನ‌ ಕಲ್ಯಾಣವಾಗುವುದೆನ್ನುವ ಸಂದೇಶ ಇದರಲ್ಲಿದೆ ಎಂದರೆ ನಮ್ಮ ಇಂದಿನ ಪರಿಸ್ಥಿತಿಗೆ‌ ಕಾರಣ ಮತ್ತು ಪರಿಹಾರವೂ ಇದರಲ್ಲಿದೆ. ಇದನ್ನು  ಧಾರ್ಮಿಕ ವಾಗಿಅರ್ಥ ಮಾಡಿಕೊಳ್ಳಲು ಜ್ಞಾನ ಬೇಕು,ರಾಜಕೀಯವಾಗಿ ತಿಳಿಸಲು‌ ಹಣ ಬೇಕು. ಜ್ಞಾನವಿಲ್ಲದೆ ಹಣಗಳಿಸಿದಷ್ಟೂ ಸತ್ಯ ತಿಳಿಯದೆ ಜೀವ ಹೋಗುತ್ತಿರುತ್ತದೆ.ಮತ್ತದೇ ಅಜ್ಞಾನದ‌ಜನ್ಮ.

ಮನುಷ್ಯನ‌ ಬುದ್ದಿವಂತಿಕೆಗೂ ಜಗನ್ಮಾತೆಯ ಜ್ಞಾನಕ್ಕೂ ಬಹಳ ಅಂತರವಿದೆ. ಬುದ್ದಿ ಹೊರಗಿನಿಂದ ಸೇರಿದ್ದು ಜ್ಞಾನ‌ಒಳಗೇ ಅಡಗಿರೋದು. ಜ್ಞಾನವನ್ನು ಗುರುತಿಸುವ ಗುರುವೇ ದೇವರು.
ಯಾವಾಗ  ಗುರುತಿಸುವ ಕೆಲಸವಾಗದೆ ವ್ಯವಹಾರಕ್ಕೆ ಮಾನವ ತನ್ನ ಬುದ್ದಿವಂತಿಕೆ ಬಳಸುವನೋ ಅಜ್ಞಾನವೇ ಬೆಳೆಯುವುದು.

ಬ್ರಹ್ಮನ ರಾಣಿ ಸರಸ್ವತಿ,ವಿಷ್ಣುಪತ್ನಿ ಲಕ್ಮಿ ಶಿವನ ಅರ್ಧಾಂಗಿ ದುರ್ಗೆಯರಲ್ಲಿ ಯಾರು ಹೆಚ್ಚು ಕಡಿಮೆ ಎನ್ನುವ ಬುದ್ದಿವಂತಿಕೆ ಯಿಂದ  ಜಗನ್ಮಾತೆಯ ಪರಿಚಯವಾಗದು.
ಹೆಣ್ಣು ಒಲಿದರೆ ನಾರಿ‌ಮುನಿದರೆ‌ಮಾರಿ ಎಂದಂತೆ ಯಾವಾಗ ಅಧರ್ಮದಿಂದ ಭೂಮಿಯನ್ನು ತಾಯಿಯನ್ನು ಸ್ತ್ರೀ ಶಕ್ತಿಯನ್ನು ದುರ್ಭಳಕೆ ಮಾಡಿಕೊಳ್ಳುವರೋ ವಿನಾಶ ನಿಶ್ಚಿತ.
ವಿನಾಶಕಾಲೇ ವಿಪರೀತ ಬುದ್ದಿ ಎಂದಂತೆ.
ಇಡೀ ವಿಶ್ವದ ಗುರುವಾಗಿದ್ದ ಭಾರತಮಾತೆ ನಡೆದಿರೋದೆ ಸ್ತ್ರೀ ಯರ ಜ್ಞಾನ ಶಕ್ತಿಯಲ್ಲಿ ಎಂದಾಗ ಆ ಜ್ಞಾನವನ್ನು ಗುರುತಿಸಿ ಶಿಕ್ಷಣ ನೀಡಬೇಕಾಗಿರೋದು ಇಂದು ಅಗತ್ಯವಿದೆ.
ಆಟಕ್ಕುಂಟು ಲೆಕ್ಕಕ್ಕಿಲ್ಲವೆಂದು ವ್ಯವಹಾರಕ್ಕೆ ಎಳೆದು ಬಳಸಿದರೆ ಜ್ಞಾನ ಬರೋದಿಲ್ಲ. ಸನಾತನಧರ್ಮದ ಈ ಸ್ಥಿತಿಗೆ ಕಾರಣವೇ  ಅತಿಯಾದ ಹೊರಗಿನ ನೋಟ ಆಟ ಪಾಠವಾಗಿದೆ. ಇದೀಗ ಕಾದಾಟಕ್ಕೆ  ದಾರಿಮಾಡಿದೆ. ಹೋರಾಟ ಜ್ಞಾನದಿಂದ ನಡೆದರೆ ಉತ್ತಮ ಅಜ್ಞಾನದೊಂದಿಗೆ ಗುದ್ದಾಡಿದರೂ ಅಜ್ಞಾನವೇ ಕಾಣೋದು.ಅಂತರಂಗ ಶುದ್ದಿ ಆಗದೆ ಬಹಿರಂಗ ಶುದ್ದವಾಗುವುದೆ? 
ಹೊರಗಿನ ಕಸ ತೆಗೆಯುವುದಕ್ಕೆ ಸುರಿಯುವ ಹಣವನ್ನು ಒಳಗಿನ ಕಸ ತೆಗೆದುಕೊಳ್ಳುವ  ಸುಶಿಕ್ಷಣ ದಾನಕ್ಕೆ ಬಳಸಿದ್ದರೆ ಭಾರತ ಈ ಸ್ಥಿತಿಗೆ ಬರುತ್ತಿರಲಿಲ್ಲ. ಅನುಭವಿಸದೆ ಸತ್ಯ ಅರ್ಥ ಆಗದು. ನಡೆಯೋದೆಲ್ಲವೂ ದೇವಿಯ‌ಪ್ರೇರಣೆಯೇ ಎಂದರೆ ದೇವಿ  ಎಲ್ಲರಿಂದಲೂ ತನ್ನ ಕೆಲಸ ಮಾಡಿಕೊಂಡರೂ ನೋಡುವ ಜ್ಞಾನದೃಷ್ಟಿ ಉತ್ತಮವಿರಬೇಕಿದೆ.
ಎಲ್ಲಿರುವರು ದೇವಿಯರು?

ಪರಮಾತ್ಮನಿಗೆ‌ನಮ್ಮ‌ಜೀವ ಮೀಸಲೋ ಸರ್ಕಾರಕ್ಕೋ?

ಪರಮಾತ್ಮನಿಗೆ ಜೀವಾತ್ಮ‌ಮೀಸಲಾಗಿದ್ದರೆ ಜೀವನ್ ಮುಕ್ತಿ  ಎಂದಿರುವ‌ ಸನಾತನಧರ್ಮ ಇಂದು ಹಿಂದುಳಿಯಲು‌ ಕಾರಣವೇ  ಹೊರಗಿನಿಂದ ಮಾನವ ಬೆಳೆಸಿಕೊಂಡಿರುವ‌
ಜಾತಿ‌ ಮೀಸಲಾತಿ. ಯಾರಾದರೂ ‌ ಕೊನೆಗಾಲದಲ್ಲಿ  ನನಗೆ ತೃಪ್ತಿ ಸಿಕ್ಕಿದೆ ಎಂದವರಿದ್ದಾರೆಯೆ? ಆತ್ಮಕ್ಕೆ ತೃಪ್ತಿ ಕೊಡದ  ಸಾಲ ಸೌಲಭ್ಯ ಗಳಾಗಲಿ ಉಚಿತ ಭಾಗ್ಯಗಳಾಗಲಿ  ಮಾನವನ  ಹೊರಗಿನ ಆಸೆಯನ್ನು ಬೆಳೆಸುವಾಗ  ಆಸೆಯೇ ದು:ಖಕ್ಕೆ ಕಾರಣವೆನ್ನುವುದು ಸತ್ಯವಾಗಿರುತ್ತದೆ. 
ಆಸೆ ಇರಲಿ ಅತಿಆಸೆ ಇರಬಾರದು. ಒಂದು ಸಂಸಾರ ಸಾಕಲು ಒಬ್ಬರಿಗೆ  ಸರ್ಕಾರದ ಕೆಲಸ ಸಿಕ್ಕರೆ ಸಾಕು. ಎಲ್ಲರಿಗೂ ಬೇಕು ಎಂದರೆ  ಅದರಲ್ಲಿ ಧರ್ಮ ವಿರಬೇಕು. ಸರ್ಕಾರದ ಸೇವೆ ದೇವರ ಸೇವೆಯಾಗಬೇಕು. ಸೇವೆಯಿಂದ ಪರಮಾತ್ಮನ ಋಣ ತೀರಿಸಲು ಸಾಧ್ಯ. 
ಅರ್ಹರಿಗೆ ಕೆಲಸವಿಲ್ಲದೆ ಅನರ್ಹ ರಿಗೆ ಕೆಲಸ ಕೊಟ್ಟರೆ ಸೇವೆ ಮಾಡೋದಕ್ಕೆ ಜ್ಞಾನ‌ಬೇಡವೆ? ಕೆಲಸ ಮಾಡದೆ ಹಣಪಡೆದರೆ   ಸಾಲವಾಗುತ್ತದೆ. ಸಾಲ ತೀರಿಸದಿದ್ದರೆ  ಕಷ್ಟ ನಷ್ಟಗಳು ರೋಗಗಳು ಹೆಚ್ಚುವುದು. ದುಡಿದ‌ಹಣವೆಲ್ಲವೂ ದುರ್ಭಳಕೆ ಆದರೆ  ಮನಸ್ಸಿಗೆ ಶಾಂತಿ ಸಿಗದು. ಶಾಂತಿಯಿಲ್ಲದ ಮನುಷ್ಯನಿಗೆ  ಪರಮಾತ್ಮನೆಡೆಗೆ  ಹೋಗಲಾಗದು. ಹೀಗೇ ಒಂದರ ಹಿಂದೆ ಒಂದು ಸೇರಿದರೆ‌ ಹಿಂದೆ ಬರೋದು ಕಷ್ಟ.

ಸರ್ಕಾರದ ಸಾಲ ಜನರ ಸಾಲ ಎರಡೂ ಒಂದೇ. ಜನರ ಸಾಲ ತೀರಿಸಲು  ಸರ್ಕಾರದ ಕೆಲಸವನ್ನು ‌ನಿಸ್ವಾರ್ಥ ನಿರಹಂಕಾರದಿಂದ ಧರ್ಮ  ಸತ್ಯದಿಂದ ಮಾಡಬೇಕು. ಹಿಂದಿನ  ಮಹಾತ್ಮರು ದೇಶಭಕ್ತರು  ಈ ರೀತಿಯಲ್ಲಿ ದೇಶಕಟ್ಟುವ ಸೇವೆಯಲ್ಲಿದ್ದರು.‌ ಈಗ ದೇಶಭ್ರಷ್ಟರ ಸೇವೆಗೆ ಜನ ನಿಂತಿರುವರೆಂದರೆ ಅಜ್ಞಾನವಷ್ಟೆ. ಸತ್ಯದ ಅರಿವಿಲ್ಲದೆ ಸಾಲದ ಅರಿವಿಲ್ಲದೆ ಹೊರಗೆ ಬಂದವರಿಗೆ ಕಾಣೋದು ಹಣ‌ಮಾತ್ರ. ಅದರ ಹಿಂದಿನ ಋಣಭಾರ ಅವರ ಮಕ್ಕಳು ಮೊಮ್ಮಕ್ಕಳವರೆಗೂ ಹೊತ್ತು ನಡೆಯಲೇಬೇಕೆನ್ನುವುದು ಅಧ್ಯಾತ್ಮ ಸತ್ಯ. ಇದರ ಬಗ್ಗೆ ಧಾರ್ಮಿಕ ಚಿಂತಕರೂ ಗುರುಗಳಾದವರು ಸರಿಯಾಗಿ ತಿಳಿಸಿ  ಜನರನ್ನು ಎಚ್ಚರಿಸುವ‌ ಕೆಲಸ ಮಾಡಿದ್ದರೆ  ಇಂದು ಈ‌ಮೀಸಲಾತಿ‌ಪರಮಾತ್ಮನ ಅರಿಯುವುದಕ್ಕೆ  ಸಾಧ್ಯವಾಗುತ್ತಿತ್ತು. ದುರಂತ ವೆಂದರೆ  ಸರ್ಕಾರದ ಹಿಂದೆ  ಜಾತಿ ಹಿಡಿದು ನಡೆದಿರೋದು. ಧರ್ಮ ಕರ್ಮಕ್ಕೆ ವಿರುದ್ದ ಸಾಲ ಮಾಡಿರೋದು. ಒಟ್ಟಿನಲ್ಲಿ ಕಲಿಯುವ ಕಾಲ‌ ಕಲಿಗಾಲ. ಅವರವರ ಸಾಲಕ್ಕೆ ಅವರವರೆ  ಹೊಣೆಗಾರರಾದಾಗ  ತೀರಿಸದೆ  ಜೀವಕ್ಕೆ ಶಾಂತಿಯಿರದು.ಶಾಂತಿಸಿಗದೆ ಮುಕ್ತಿಯೂ ಸಿಗದು.‌ 

Wednesday, September 17, 2025

ಸತ್ಯದ ಆ.....ಶ್ರಮ ಯಾವುದು?

ಶ್ರಮಪಡದೆ ಆಶ್ರಮ ಕಟ್ಟಿದರೆ ವ್ಯರ್ಥ.
ಶ್ರಮಿಕರನ್ನು  ತಮ್ಮೆಡೆಗೆಳೆಯಲು ಆಶ್ರಮಗಳನ್ನು ಕಟ್ಟುವ ಬದಲಾಗಿ ಶ್ರಮಪಟ್ಟು ದುಡಿದು ಬಂದ ಹಣವನ್ನು ಸದ್ಬಳಕೆ ಮಾಡಿಕೊಂಡು  ಸಮಾಜದಲ್ಲಿ ಎಲ್ಲರೊಳಗೊಂದಾಗಿ ಇರೋದೆ ಉತ್ತಮ. 
ವಿದೇಶಿಗಳ ಹಣದಿಂದ ಏನಾದರೂ ಆಶ್ರಮಗಳು ನಡೆಸುತ್ತಿದ್ದರೆ ಅದರಲ್ಲಿ ಸ್ವದೇಶದ ಜ್ಞಾನವಿದೆಯೆ? ಶ್ರಮ ಇದೆಯೆ? ಎನ್ನುವ ಬಗ್ಗೆ ತಿಳಿದು ನಡೆದರೆ ಸರಿ. ಇಲ್ಲವಾದರೆ ನಮ್ಮ ಶ್ರಮಕ್ಕೆ ಬೆಲೆಯೇ ಇಲ್ಲವಾಗುತ್ತದೆ. ಇಷ್ಟಕ್ಕೂ ಯಾವ ಯೋಗಿಯಾಗಲಿ,ಸಂನ್ಯಾಸಿಯಾಗಲಿ ಆತ್ಮಜ್ಞಾನ ಪಡೆಯಲು  ಆಶ್ರಮದ ಮೊರೆ ಹೋಗಿದ್ದರು? 
ಬಾಲ್ಯ,ಯೌವನ,ಗೃಹಸ್ಥ, ವಾನಪ್ರಸ್ಥ,ಸಂನ್ಯಾಸ  ಐದರಲ್ಲಿ ಕೊನೆಯ ಸಂನ್ಯಾಸವನ್ನು ನೇರವಾಗಿ ಆರಿಸಿಕೊಂಡರೆ ಉಳಿದ  ನಾಲ್ಕರ ಅನುಭವ ಜ್ಞಾನದ ಕೊರತೆ ಕಾಡಬಹುದು.
ಕಾಲದ ಪ್ರಭಾವ ಎಲ್ಲಾ ವೇಗವಾಗಿ ನಡೆದು ಮುಕ್ತಿ ಪಡೆಯಲು  ಸಾಧ್ಯವೆ? ಕೆಲವರಿಗಷ್ಟೆ ಹಿಂದಿನ ಜನ್ಮದ ಜ್ಞಾನವಿದ್ದು  ಗುರುಮುಖೇನ ಕಲಿತು ನಿಧಾನವಾಗಿ ಮೇಲೆ ಹೋಗಬಹುದು. ಎಲ್ಲಾ  ಒಂದೇ ಎನ್ನುವ  ಪ್ರಚಾರಕ್ಕೆ ಬದಲಾಗಿ  ಎಲ್ಲರನ್ನೂ ಒಂದಾಗಿಸುವ ತತ್ವವನ್ನರಿತರೆ  ಕೆಲವರಿಗೆ ಬಾಲ್ಯದಲ್ಲಿಯೇ ಜ್ಞಾನೋದಯವಾಗಿ ಸಂನ್ಯಾಸಿ ಆಗಬಹುದು ಹಾಗೆ ಯೌವನ,ಸಂಸಾರದಲ್ಲಿಯೂ ನಡೆದಿದೆ. ಒಟ್ಟಿನಲ್ಲಿ ಸಂನ್ಯಾಸಿ ಎಂದರೆ ಸಂಸಾರದಿಂದ ಮನಸ್ಸನ್ನು ದೂರವಿಟ್ಟು ಸ್ವತಂತ್ರ ವಾಗಿ ಜೀವಿಸುವುದಾಗಿತ್ತು. ಕಾಲಬದಲಾಗಿದೆ ಆದರೂ ಮೂಲದ ಸತ್ಯ ಧರ್ಮ ಬದಲಾಗೋದಿಲ್ಲ.ಮಾನವನ ಚಿಂತನೆ ಬದಲಾದರೂ ಆತ್ಮನ ಅರಿವು ಬದಲಾಗದು. ಜೀವ ಬದಲಾದರೂ ಪರಮಾತ್ಮನು ಒಬ್ಬನೇ,ಭೂಮಿಯೂ ಒಂದೇ  ಶ್ರಮವಿಲ್ಲದ ಆಶ್ರಮದಲ್ಲಿ ಧರ್ಮದ ಹುಡುಕಾಟವಿರಬಾರದಷ್ಟೆ.  ಕಾಲಕ್ಕೆ ತಕ್ಕಂತೆ ಜೀವನದಲ್ಲಿ ಬದಲಾವಣೆ ಆದರೂ ಕಾಲಕೆಟ್ಟು ಹೋಗದಂತೆ ಎಚ್ಚರವಹಿಸುವ ಜ್ಞಾನ ಮಾನವನಿಗೆ ಅಗತ್ಯವೆನ್ನುತ್ತಾರೆ ಮಹಾತ್ಮರುಗಳು. ಭೌತಿಕದ ಆಶ್ರಮಗಳಲ್ಲಿ ಅಧ್ಯಾತ್ಮದ ಆ- ಶ್ರಮ ಬಹಳ ಮುಖ್ಯ.
ಇಲ್ಲವಾದರೆ ಅನಾಥಾಶ್ರಮ,ವೃದ್ದಾಶ್ರಮ, ಅಬಲಾಶ್ರಮ, ಬಿಕ್ಷುಕರ ಆಶ್ರಮ ಗಳಿಂದ ಭೂಮಿ ನಡುಗಿ ಹೋಗುತ್ತದೆ.
ಬಿಕ್ಷುಗಳ ದೇಶವನ್ನು ಬಿಕ್ಷುಕರ ಆಶ್ರಮದಿಂದ ನಡೆಸುವುದು
ಪ್ರಗತಿಯೆ ಅದೋಗತಿಯೆ?
ಸರಿಯಾದ ಜ್ಞಾನದ ಶಿಕ್ಷಣ ಕೊಟ್ಟು ಕೆಲಸ ಕೊಟ್ಟು ಸ್ವತಂತ್ರ ಜೀವನ ನಡೆಸುವ  ಸಹಕಾರ,ಸರ್ಕಾರ  ನಮ್ಮಲ್ಲಿದ್ದರೆ ಈ ಸ್ಥಿತಿಗೆ  ಮಾನವನ ಜೀವನ ತಲುಪುತ್ತಿರಲಿಲ್ಲ. ಇಲ್ಲಿ ಯಾರನ್ನೂ  ದೂರದೆ  ದೂರದ ಬೆಟ್ಟನುಣ್ಣಗೆ ಎನ್ನುವ ಸಂದೇಶವಿದೆ ಎನ್ನಬಹುದಷ್ಟೆ. ನಿಜವಾದ ಜ್ಞಾನಿಗಳು ಶ್ರಮಪಟ್ಟು ಮುಕ್ತಿ ಪಡೆಯುತ್ತಾರೆ. ಹಣದ ಬಡತನವಿದ್ದರೆ ಜ್ಞಾನದಿಂದ  ಮುಂದೆ ನಡೆದು ಜೀವನ ನಡೆಸುವ ಶಿಕ್ಷಣ  ಕೊಟ್ಟರೆ ಸಾಕು. ಹಣಕೊಟ್ಟು ಮತ್ತಷ್ಟು ಋಣ ಅಥವಾ ಸಾಲದ ಹೊರೆ ಹಾಕಿದರೆ ಎಲ್ಲಿಯ ಜ್ಞಾನ? ಭಾರತೀಯರನ್ನು
ಆಳೋದಕ್ಕೆ ಬಂದವರು  ಶಿಕ್ಷಣವನ್ನೇ ಬುಡಮೇಲು ಮಾಡಿ ಈಗ ಬಿಕ್ಷುಗಳ ದೇಶ ಬಿಕ್ಷುಕರ ದೇಶವಾದರೂ ಅಜ್ಞಾನದ ಕಣ್ಣಿಗೆ ಪ್ರಗತಿಶೀಲ ಎನ್ನುವಂತಾಗಿದೆ. ಅವರವರ ಅನ್ನ ಅವರೆ  ತಯಾರಿಸಿಕೊಳ್ಳಲು ಶ್ರಮ ದ ಅಗತ್ಯವಿದೆ. ಸೋಮಾರಿಗಳಿಂದಲೇ ಮಾರಿಯ ದರ್ಶನವಾದರೆ ಪ್ರಗತಿಯೆ? ಆತ್ಮನಿರ್ಭರ ಭಾರತ ಅಧ್ಯಾತ್ಮ ದಿಂದ  ಮಾತ್ರ ಸಾಧ್ಯವಿದೆ. ರಾಜಕೀಯದಲ್ಲಿ ಅಧ್ಯಾತ್ಮ ವಿದೆಯೆ? ಅಧ್ಯಾತ್ಮ ವೆ ರಾಜಕೀಯ ನಡೆಸಿದೆಯೆ? ಆತ್ಮಾವಲೋಕನ ಅಗತ್ಯ.

Monday, September 15, 2025

ತಾರತಮ್ಯ

" ತಾರತಮ್ಯ...! "

ಎಂಥಾ ವಿಪರ್ಯಾಸ ನೋಡಿ ಮಾರಾಯ್ರೇ....

ಎಲ್ಲಾ ಅಮ್ಮಂದಿರಿಗೂ ತನ್ನ ಮಗ
ಶ್ರೀ ಕೃಷ್ಣನಂತೆ  ಸದಾ ಚೇಷ್ಠೇ, ತಂಟೆ
ಲೀಲೆ, ಅಮೋದ ಪ್ರಮೋದಗಳಿಂದ
ನಲಿದಾಡುತ್ತಿರಲಿ ಅಂತ ಬಯಸ್ತಾರೆ

ಅದೇ...ಆ ಮಗುವಿನ ಅಪ್ಪ ...
ಎಂದೆಂದೂ ಮರ್ಯಾದ ಪುರುಷೋತ್ತಮ
ಶ್ರೀ ರಾಮಚಂದ್ರನ ತರಹ ಮಾತ್ರ 
ಇರಲೆಂದು ಆಶಿಸುತ್ತಾರೆ.

ತ್ರೇತಾಯುಗದ ಶ್ರೀ ರಾಮನೇ ದ್ವಾಪರದಲ್ಲಿ ಶ್ರೀ ಕೃಷ್ಣನಾಗಿ ಅವತಾರವೆತ್ತಿದ ಎನ್ನುವ ಅದ್ವೈತ  ಶ್ರೀ ರಾಮಾವತಾರವೇ ಬೇರೆ ಶ್ರೀ ಕೃಷ್ಣಾವತಾರವೇ ಬೇರೆ ಎನ್ನುವ ಧ್ವೈತ. ಎಲ್ಲವೂ ವಿಷ್ಣುವಿನ ರೂಪವೇ ಎನ್ನುವ ವಿಶಿಷ್ಟಾದ್ವೈತ ಎಲ್ಲದರಲ್ಲೂ ಇರೋನು ಒಬ್ಬನೇ  ಆದರೆ ನಾಮ ರೂಪ ಅವತಾರಗಳು ಬೇರೆ ಬೇರೆ.
ಶ್ರೀ ರಾಮನಂತಹ ಮರ್ಯಾದ ಪುರುಷೋತ್ತಮ ಇಲ್ಲ. ಹೀಗಿರುವಾಗ ಶ್ರೀ ರಾಮರಾಜ್ಯ ಸ್ಥಾಪನೆಗೆ  ಪುರುಷರು ಮರ್ಯಾದೆಯಿಂದ ಇರಬೇಕು. ಯಾವಾಗ ಮರ್ಯಾದೆ ಉಳಿಸಿಕೊಳ್ಳಲು ಪ್ರಯತ್ನಪಡುವರೋ  ಆಗ ಮರ್ಯಾದೆ  ಬಿಟ್ಟು ಹೊರಬರುವವರು ಹೆಚ್ಚಾಗಿ ಕಾಣುವರು. ಅಂದರೆ ಮಾನವ ನೋಡುವುದು ಹೊರಗಿನ‌ ಮರ್ಯಾದೆಯನ್ನು. ನನಗೆ ಮರ್ಯಾದೆ ಕೊಡಬೇಕೆಂಬ ಆಸೆಯಲ್ಲಿ ನಾಟಕ ನಡೆಸುತ್ತಾ ಜನರ ಮುಂದೆ ಮರ್ಯಾದಸ್ಥನಂತೆ ಬದುಕುವ ಎಷ್ಟೋ ಮಂದಿಗೆ ಒಳಗಿದ್ದ ಮರ್ಯಾದ ಪುರುಷೋತ್ತಮನ ದರ್ಶನ ಆಗಿರದು. ಇದು ಸ್ತ್ರೀ ಗೂ ಅನ್ವಯಿಸುತ್ತದೆ. ಶ್ರೀ ರಾಮನ ಕಾಲದಲ್ಲಿದ್ದ ಧರ್ಮ ಸತ್ಯ ನ್ಯಾಯ ನೀತಿ ಸಂಸ್ಕೃತಿ ದ್ವಾಪರದಲ್ಲಿರಲಿಲ್ಲ.ಅಸುರ ಶಕ್ತಿ ಬೆಳೆದಿತ್ತು..ನಂತರದ ಕಲಿಯುಗದಲ್ಲಿ  ಕೇವಲ ರಾಜಕೀಯವೇ ಎಲ್ಲಾ ಕ್ಷೇತ್ರ ಆಳುತ್ತಿದೆ ಎಂದರೆ ರಾವಣ ಜರಾಸಂಧ ಕೀಚಕ ಯಮ..ರ ಪಾತ್ರಧಾರಿಗಳು  ಮಕ್ಕಳು ಮಹಿಳೆಯರನ್ನು ಹೇಗೆ ಕಾಣುವರು?
ಶ್ರೀ ಕೃಷ್ಣ ರಾಧೆಯ ಪವಿತ್ರವಾದ ಸಂಬಂಧ  ವೇಷಹಾಕಿಕೊಂಡರೆ ಅರ್ಥ ವಾಗದು. ಹಾಗೆಯೇ ಭಾರತಮಾತೆಯ ವೇಷ ಹಾಕಿಕೊಂಡರೆ ಭಾರತೀಯ ಮಹಿಳೆ ಆಗೋದಿಲ್ಲ. ಮಕ್ಕಳಿಗೆ ಕೊಡುವ ಶಿಕ್ಷಣವೇ ಅನ್ಯರ ವಶ ಆಗಿರುವಾಗ  ಪುರಾಣಗಳು ವಾದ ವಿವಾದ, ಚರ್ಚೆ ಜೊತೆಗೆ  ಅಪಾರ್ಥಗಳಿಂದ  ಅಧರ್ಮಕ್ಕೆ ಮತ್ತಷ್ಟು ಶಕ್ತಿಬಂದರೆ  ಇದು ಮುಂದಿನ ಪೀಳಿಗೆಗೆ  ವರದಾನವೋ ಶಾಪವೋ.
ಹಿಂದೆ ಮಕ್ಕಳನ್ನು  ಬೆಳೆಸುವ ರೀತಿ ದೈವೀಕತೆಯತ್ತ ನಡೆದಿತ್ತು.ಈಗ ಭೌತಿಕದೆಡೆಗೆ ನಾಟಕದ ಜಗತ್ತಿನೆಡೆಗೆ ನಡೆದಿದೆ. ಇದರಿಂದಾಗಿ ಶ್ರೀ ಕೃಷ್ಣನ ತುಂಟಾಟ ಕಳ್ಳತನ ತಂತ್ರವು  ಹೊರಜಗತ್ತಿನಲ್ಲಿ ಮನರಂಜನೆಯಾದರೆ ಒಳಜಗತ್ತಿನಲ್ಲಿ ಆತ್ಮವಂಚನೆಗೆ ಕಾರಣವಾಗಿದೆ. 
ಕೃಷ್ಣ ಬೇರೆಯಲ್ಲ ಕ್ರೈಸ್ತರು ಬೇರೆಯಲ್ಲ.ರಾಮ ಬೇರೆಯಲ್ಲ ರಹೀಮ ಬೇರೆಯಲ್ಲ ಎನ್ನುವುದು ಸಾಮಾನ್ಯವಾಗಿ  ಒಳಗಿನ ಸತ್ವ ಸತ್ಯ ತತ್ವ ಅರಿಯದೆ  ಮಾನವ ಮುಂದೆ ಮುಂದೆ ಹೋಗಿ ಮೂಲದಿಂದ ಬೇರೆಯಾದಷ್ಟೂ ಅತಂತ್ರಸ್ಥಿತಿಗೆ ಜೀವಾತ್ಮನ‌ಪಯಣ ಕೆಳಮುಖವಾಗಿರುತ್ತದೆ.

ಎಲ್ಲದ್ದಕ್ಕೂ ಕಾರಣ ಸ್ತ್ರೀ ಸಹಕಾರ ಎನ್ನುವಂತೆ  ಸ್ತ್ರೀ ಜ್ಞಾನ ಉತ್ತಮವಿದ್ದರೆ  ಬೇಧವಿರದು. ಅಂದರೆ ಶ್ರೀ ರಾಮನಂತಹ ಪುರುಷನಂತೆ ಶ್ರೀ ಕೃಷ್ಣನಂತಹ ಮಹಾಪುರುಷ ಇದ್ದರೂ ಒಂದು ತತ್ವ ಇನ್ನೊಂದು ತಂತ್ರ ಎರಡೂ ಸೇರಿ ಮಹಾತ್ಮ ಆಗಬಹುದು. ಧರ್ಮ ರಕ್ಷಣೆಗಾಗಿ  ಶ್ರೀ ರಾಮನ‌ನಡೆ ಶ್ರೀ ಕೃಷ್ನ ನುಡಿಯನ್ನು ಅರ್ಥ ಮಾಡಿಕೊಳ್ಳಲು  ಸ್ತ್ರೀ ಶಕ್ತಿಯ ಜ್ಞಾನ ಅಂತರ್ಮುಖವಾಗಿ ಬಹಿರಂಗದೆಡೆಗೆ ನೋಟ ಹರಿಸಿದರೆ ವಾಸ್ತವದಲ್ಲಿ  ತನಗೆ ತಾನೇ ಮೋಸ ಹೋಗುತ್ತಿರುವ ಸತ್ಯ ತಿಳಿಯಬಹುದು. ಜನನಿ ಇಲ್ಲದ ಜನ್ಮವಿಲ್ಲ. ದೈವೀಕ ಶಕ್ತಿ  ಕೇವಲ  ಹೊರಗಿನ  ಆಡಂಬರವಾಗದೆ  ರಾಜಕೀಯದಿಂದ ದೂರವಿದ್ದು  ನೋಡಿದರೆ  ಎಲ್ಲರಲ್ಲಿಯೂ  ಅಡಗಿರುವ ಸತ್ಯ ಅರ್ಥ ವಾದರೂ  ಎಲ್ಲರನ್ನೂ ನಡೆಸುತ್ತಿರುವ ಅಸುರ ಶಕ್ತಿ ಇದನ್ನು ತಡೆಯುತ್ತದೆ. ಇದಕ್ಕೆ ಕಾರಣ ನಮ್ಮದೇ ಸಹಕಾರ.

ಸ್ತ್ರೀ ಯರ ಜ್ಞಾನ ಆಟಕ್ಕುಂಟು ಲೆಕ್ಕಕ್ಕಿಲ್ಲವಾಗಿ ಇಂದಿಗೂ ಸ್ತ್ರೀ ಸತ್ಯ ತಿಳಿಸಿದರೆ ಅಲಕ್ಷ್ಯ. ರಾಜಕೀಯಕ್ಕೆ ಬಳಸಿಕೊಂಡು ಅನ್ಯರನ್ನು ಆಳೋದೇ  ಗುರಿಯಾದರೆ  ಒಳಗಿದ್ದ ಧರ್ಮ ಕ್ಕೆ ಸಂಕಟ. ಈ ಧರ್ಮ ಸಂಕಟವನ್ನು ಹಣದಿಂದ ತಡೆಯಬಹುದೆ?  ಧಾರ್ಮಿಕ , ಶೈಕ್ಷಣಿಕ,ರಾಜಕೀಯ, ಆರ್ಥಿಕ, ಸಾಹಿತ್ಯ ಕ್ಷೇತ್ರಗಳು ಸಮಾಜವನ್ನು ಆಳೋದಕ್ಕೆ ಹೊರಟು  ಸಂಸಾರ ತೊರೆದವರು ಸಂಸಾರಿಗಳ ಹಣದಲ್ಲಿ ಜೀವನ ನಡೆಸುವುದು ಅನಿವಾರ್ಯ. ಕಾರಣ ಅಂದಿನ ವಾನಪ್ರಸ್ತ ಇಂದು  ಆಶ್ರಮ ಗಳಾಗಿವೆ. ಆಶ್ರಮ ನಡೆದಿರೋದೆ ಜನರ ಹಣದಲ್ಲಿ.ಸರ್ಕಾರ ನಡೆದಿರೋದೆ ಜನರ ಹಣದಲ್ಲಿ ಆಚರಣೆಗಳು ಕಾರ್ಯಕ್ರಮಗಳು ದೇವಸ್ಥಾನಗಳು..ಇನ್ನಿತರ ಸಂಘಗಳು ನಡೆದಿರೋದೆ ಜನಬಲ ಹಣಬಲದಲ್ಲಿ ಎಂದಾಗ ಜನರೊಳಗೆ ಯಾರ ಜ್ಞಾನವಿದೆ. ಸಂಪಾದನೆಯ ಮೂಲ ಯಾವುದಿದೆ? ಹಿಂದಿನವರ  ಶಿಕ್ಷಣ ನೀಡಲಾಗಿದೆಯೆ? ಇದ್ದರೆ ಸರಿ.ಇಲ್ಲವೆಂದರೆ  ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ.
ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ಸಹಕಾರವಿಲ್ಲದೆ ರಾಜಕೀಯ ಬೆಳೆದಿಲ್ಲ ಎಂದಾಗ ಶ್ರೀ ರಾಮ ಶ್ರೀ ಕೃಷ್ಣ ಇರೋದೆಲ್ಲಿ?
ದೈವೀಕ ಗುಣದ ಶಿಕ್ಷಣ ನೀಡದೆ ವೇಷ ಹಾಕಿದರೆ ನಾಟಕವಷ್ಟೆ. ಇದಕ್ಕಾಗಿ ಹಣ ಸಮಯ ವ್ಯರ್ಥ ವಾಗದಿದ್ದರೆ ಉತ್ತಮ. ಮಕ್ಕಳಿಗೆ ಮನೆಯೊಳಗೆ  ಸಂಸ್ಕಾರದ ಶಿಕ್ಷಣ ಕೊಟ್ಟರೆ  ದೇವರಂತಾಗುವರು. ಹೊರಗೆ ದೇವರ ವೇಷ ಒಳಗೆ ಅಸುರಗುಣವಿದ್ದರೆ ವ್ಯರ್ಥ. 
ನಾಟಕದಲ್ಲಿ ನಾಟಕ ಮಾಡಿ ಸಾಧಕರಾಗೋದಕ್ಕೆ ಜನಬಲ ಹಣಬಲ ಅಧಿಕಾರ ಬಲ ಇದೆ. ಆದರೆ ದೈವಬಲ ಇದೆಯೆ? ಅಸುರಬಲವೇ ಎನ್ನುವುದು ಪ್ರಶ್ನೆ ಯಾಗುತ್ತಿದೆ. ಎತ್ತ ಸಾಗಿದೆ ಭಾರತ?

ಹಿಂದೂಗಳು ಹಿಂದಿರುಗಬೇಕು. ವಿದೇಶದೆಡೆಗೆ ಮುಂದೆ ನಡೆದಷ್ಟೂ ಖಾಲಿ ಸ್ಥಾನ ತುಂಬಲು ಅನ್ಯರು ಬರೋದನ್ನು ತಡೆಯಲಾಗದು.ಹತ್ತಿರವಿರುವ ಸತ್ಯ ತಿಳಿದರೆ ಸಾಕು.‌ಪ್ರಚಾರ ಮಾಡಿದಷ್ಟು ಸುಲಭವಿಲ್ಲ ಅನುಷ್ಟಾನಕ್ಕೆ ತರೋದು.

Wednesday, September 10, 2025

ಅದ್ವೈತ ದರ್ಶನ ನಾನಿರುವಾಗ ಆಗೋದು ವಿರಳ

ಮೂಲದ ಶಕ್ತಿ ಒಂದೇ ಮೂಲ ಪುರುಷ ಒಬ್ಬನೇ ಆದರೂ ಎಷ್ಟೋ ಶಕ್ತಿ ಪುರುಷ  ಜನ್ಮ ತಳೆದಿವೆ ಭೂಮಿಯು ಇದಕ್ಕೆ ಮಾಧ್ಯಮವಾಗಿದೆ. ಪುರಾಣ ಇತಿಹಾಸ ದ ಕಥೆಗಳು  ಮಾನವನಿಗೆ  ಭೂತ ವರ್ತಮಾನ. ಭವಿಷ್ಯವನ್ನು  ನಿರ್ಧಾರ ಮಾಡಲು ಸ್ವತಂತ್ರ ಜ್ಞಾನದೆಡೆಗೆ‌ನಡೆಯಲು ಕಲಿಸಿವೆ. ಆದರೆ ಸ್ವತಂತ್ರ ಎನ್ನುವ ಪದವನ್ನು ಅಪಾರ್ಥ ಮಾಡಿಕೊಂಡು ಸ್ವೇಚ್ಚಾಚಾರದೆಡೆಗೆ ನಡೆದವರಿಗೆ ಮೂಲದೆಡೆಗೆ ಸಾಗಲಾಗದೆ ಅದರ ವಿರುದ್ದ ನಡೆದು  ಅಂತ್ಯ ಕಾಣದೆ ಅತಂತ್ರಸ್ಥಿತಿಗೆ ಜೀವಾತ್ಮ ತಲುಪಿದ್ದು ಅತೃಪ್ತ ಆತ್ಮಗಳು  ತಮ್ಮ ಮನಸ್ಸಿಗೆ ಬಂದದ್ದೇ ಸರಿ ಎನ್ನುವ ಹಠದಲ್ಲಿ ಸ್ಪರ್ಧೆ ನಡೆಸುತ್ತಾ ಹೋರಾಟ ಹಾರಾಟ‌ಮಾರಾಟವೇ ಜೀವನವಾಗಿದೆ. ಇದನ್ನು  ತಪ್ಪು ಎಂದರೂ ತಪ್ಪು ಸರಿ ಎಂದರೂ ತಪ್ಪು. ‌ತಪ್ಪು ಯಾರದ್ದು?  ಜೀವಾತ್ಮನದ್ದೆ? ಪರಮಾತ್ಮನದ್ದೆ?
ಪರಮಾತ್ಮನ ಒಳಗಿರುವ ಜೀವಾತ್ಮರಿಗೆ  ತಮ್ಮದೇ ಆದ  ಬುದ್ದಿವಂತಿಕೆ  ಸಾಮಾನ್ಯ ಜ್ಞಾನವಿದ್ದರೂ  ಅದನ್ನು  ಸರಿಯಾಗಿ ಗುರುತಿಸಿ ಬಳಸಿಕೊಳ್ಳುವ  ಗುರುವಿಲ್ಲದಿದ್ದರೆ  ಅದು  ಕರ್ಮಫಲ ಎನ್ನುವರು.
ಇತ್ತೀಚಿನ ದಿನಗಳಲ್ಲಿ ಎಲ್ಲರಲ್ಲಿಯೂ  ಹಣವಿದೆ.ಇಲ್ಲದವರಿಗೆ ಸರ್ಕಾರಗಳು ಉಚಿತವಾಗಿ  ಭಾಗ್ಯ ನೀಡುತ್ತಿದೆ. ಆದರೆ ಸಮಸ್ಯೆ  ಮಿತಿಮೀರಿದೆ. ತೃಪ್ತಿ ಸಿಗದೆ  ಜೀವ ಹೋಗುತ್ತಿದೆ ಎಂದರೆ  ಅಧ್ಯಾತ್ಮ ಚಿಂತನೆ  ಇಲ್ಲ. ತನ್ನ ತಾನರಿಯದೆ ಅನ್ಯರನ್ನು ಅರಿತರೆ  ಆತ್ಮಕ್ಕೆ ತೃಪ್ತಿ ಸಿಗದು ಎನ್ನುತ್ತದೆ ಸನಾತನ ಧರ್ಮ. ಎಷ್ಟು ಪುರಾಣ ಇತಿಹಾಸ ಕೆದಕಿದರೂ ಸತ್ಯ ಸ್ಪಷ್ಟವಾಗಿ ಅರ್ಥ ವಾಗದಿದ್ದರೆ ವ್ಯರ್ಥ. ಒಂದೇ ಸತ್ಯ ಎನ್ನುವುದು  ಸರಿ. ಆ ಒಂದರ ಹಿಂದೆ ನಡೆಯದೆ  ದೂರ ಹೋದವರಿಗೆ  ಸತ್ಯದ ಅರಿವಿರದು.. ದೂರ ಹೋಗಲು ಕಾರಣವೇ‌  ಹಣಸಂಪಾದನೆ. ಅದು ಸತ್ಯಜ್ಞಾನದ ಜೊತೆಗೆ ಆದಾಗ  ಅಂತರ ಬೆಳೆಯದು.
ವಿದೇಶದೊಳಗಿದ್ದು ದೇಶಭಕ್ತಿ  ಇದ್ದರೂ ದೇಶದೊಳಗೆ ಇದ್ದು ಭಕ್ತಿಯೋಗ ದ ಅನುಭವವಾದರೆ ಪೂರ್ಣ. ಹೀಗೇ ಎಷ್ಟೋ  ಸತ್ಯ  ಅರಿವಿಗೆ ಬಂದರೂ  ಅನುಭವಿಸುವ ಅವಕಾಶವಿಲ್ಲದೆ ಅಸತ್ಯ ಬೆಳೆದಿದೆ.ಕಾಲಾಂತರ ಎಲ್ಲವೂ ಮಾಡಿಸುತ್ತದೆ.
ಕಾಲಾಯ ತಸ್ಮೈ ನಮ: ಎಂದು ನಡೆಯೋದಷ್ಟೆ   ಜೀವಾತ್ಮರಿಗಿರುವ  ಮಂತ್ರ.

Tuesday, September 9, 2025

ಅಪ್ರಮೇಯೋ

ವಿಷ್ಣು ಸಹಸ್ರ ನಾಮ - ಪ್ರತಿಯೊಂದು ನಾಮದ ವಿವರಣೆ.

ಅಪ್ರಮೇಯೋ ಹೃಷೀಕೇಶ: ಪದ್ಮನಾಭೋಮರಪ್ರಭುಃ | ವಿಶ್ವಕರ್ಮಾ ಮನುಸ್ತ್ರಷ್ಟಾ ಸ್ಥವಿಷ್ಠಃ ಸ್ಥವಿರೋಧ್ರುವಃ ||೬ || 

ವಿಷ್ಣು ಸಹಸ್ರ ನಾಮ - ಪ್ರತಿಯೊಂದು ನಾಮದ ವಿವರಣೆ.

ಇಂದಿನ ನಾಮ 
ವಿಷ್ಣು ಸಹಸ್ರ ನಾಮ - ಪ್ರತಿಯೊಂದು ನಾಮದ ವಿವರಣೆ

೪೬. ಅಪ್ರಮೇಯಃ - ಪೂರ್ಣವಾಗಿ ತಿಳಿದುಕೊಳ್ಳಲು ಸಾಧ್ಯವಾಗದವನು. ..

ವಿವರಣೆ : ಪರಮಾತ್ಮನನ್ನು ನಖಶಿಖಾಂತ ತಿಳಿದುಕೊಳ್ಳಲು ಸಾಧ್ಯವಿಲ್ಲ. ಯಾರೂ ನಾನು ದೇವರನ್ನು ಪೂರ್ಣವಾಗಿ ಬಲ್ಲವನಾಗಿದ್ದೇನೆ ಎಂದು ಹೇಳುವವರಿಲ್ಲ. 'ಮೇಯ' 'ಪ್ರಮೇಯ'- ಅಪ್ರಮೇಯ, ಮೇಯ ಎಂದರೆ ತಿಳಿದುಕೊಳ್ಳಲು ಯೋಗ್ಯ. ಪ್ರಮೇಯ ಚೆನ್ನಾಗಿ ತಿಳಿದುಕೊಳ್ಳಲು ಯೋಗ್ಯ, ಅಪ್ರಮೇಯ ಎಂದರೆ ಸಮಗ್ರವಾಗಿ ಯಾರನ್ನು ತಿಳಿದುಕೊಳ್ಳಲು ಸಾಧ್ಯವಿಲ್ಲವೋ ಅಂತಹವನು.

ಕುರುಡರು ಆನೆಯನ್ನು ಪರಿಚಿಯಿಸಿಕೊಂಡಂತೆಯೋ ಏನೋ ನಮಗೆ ನಿಮಗೆ ಭಗವಂತನ ಪರಿಚಯ. ನಾವು ಬಿಡಿ, ಲಕ್ಷ್ಮೀಯೇ ದೇವರನ್ನು ಸಮಗ್ರವಾಗಿ ತಿಳಿದುಕೊಂಡಿಲ್ಲ. ದಾಸರು ಅಂದರು 'ಬಗೆ ಬಗೆಯ ನೂತನವ ಕಾಣುತ ಮಿಗೆ ಹರುಷದಿಂ ಪೊಗಳುತಿಪ್ಪುದು ತ್ರಿಗುಣಮಾನಿ ಮಹಾಲಕುಮಿ ಸಂತೈಸಲನುದಿನವು" ಹೀಗೆ ಲಕ್ಷ್ಮೀದೇವಿ ಪ್ರತಿನಿತ್ಯ ಬಗೆ ಬಗೆಯ ನೂತನವನ್ನು ತನ್ನ ಪತಿಯಲ್ಲಿ ಕಾಣುತ್ತಿದ್ದಾಳೆ ಎಂದರೆ ಈಗಾಗಲೇ ಸಮಗ್ರವಾಗಿ ಅವನನ್ನು ತಿಳಿಯಲಿಲ್ಲ ಎಂಬುದು ಸ್ಪಷ್ಟ, ಲಕ್ಷ್ಮೀದೇವಿಗೇ ಪೂರ್ಣವಾಗಿ ತಿಳಿದುಕೊಳ್ಳಲಾಗಲಿಲ್ಲ ಎಂದರೆ ನಮಗೆ ಅವನನ್ನು ಹೇಗೆ ಪೂರ್ಣವಾಗಿ ತಿಳಿದುಕೊಳ್ಳಲು ಸಾಧ್ಯವಾದೀತು?

ಆದ್ದರಿಂದ ಯಾರ ಮುಂದೆಯೂ ತನ್ನನ್ನು ಪೂರ್ಣವಾಗಿ ತೆರೆದು ಇಡದೆ ಇರುವುದೇ ದೇವರ ದೊಡ್ಡ ಗುಣ. ಯಾರಿಗೂ ಸಮಗ್ರವಾಗಿ ಅರ್ಥವಾಗದಂತೆ ಇರುವಿಕೆಯೇ ಭಗವಂತನ ಗುಣ. ಎಷ್ಟು ಕೆದಕಿದರೂ ತನ್ನ ಪೂರ್ಣ ಗುಟ್ಟನ್ನು ಬಿಟ್ಟು ಕೊಟ್ಟಿಲ್ಲ - ಎಂದು ನಾವು ಲೋಕದ ಸಾಮಾನ್ಯ ಜನರ ಬಗ್ಗೆ ಹೇಳುವುದಿದೆ. ಹೀಗಿರುವಾಗ ಅನಂತ ಕಲ್ಯಾಣ ಗುಣ ಪರಿಪೂರ್ಣನಾದ ಭಗವಂತನ ಪೂರ್ಣ ಗುಟ್ಟು ಬಿಟ್ಟು ಕೊಡಲ್ಪಟ್ಟತೇ ? ಶ್ರೀ ಕೃಷ್ಣನಲ್ಲಿ ಭೀಷ್ಮರು ಅನ್ನುವರು - ಎಂಟು ನೂರು ವರ್ಷಗಳಾದರೂ ಒಂದನ್ನು ಚೆನ್ನಾಗಿ ತಿಳಿದುಕೊಳ್ಳಲಾಗಲೇ ಇಲ್ಲ. ಅದು ಮತ್ತಾವುದೂ ಅಲ್ಲ, 'ನೀನೇ', ಕೃಷ್ಣ ಮುಗುಳ್ನಕ್ಕು ಅನುಗ್ರಹಿಸಿದೆ.

Saturday, September 6, 2025

ಧಾತಾ- ಧಾರಣೆ ಹಾಗು ಪೋಷಣೆ ಮಾಡುವವನು

ಇಂದಿನ ನಾಮ 
ವಿಷ್ಣು ಸಹಸ್ರ ನಾಮ - ಪ್ರತಿಯೊಂದು ನಾಮದ ವಿವರಣೆ
ಸ್ವಯಂಭೂ ಶಂಭುರಾದಿತ್ಯ: ಪುಷ್ಕರಾಕ್ಕೋ ಮಹಾಸ್ವನಃ | ಅನಾದಿನಿಧನೋ ಧಾತಾ ವಿಧಾತಾ ಧಾತುರುತ್ತಮ: ||೫|| 
43 ಧಾತಾ - ಧಾರಣೆ ಹಾಗೂ ಪೋಷಣೆ ಮಾಡುವವನು,

ವಿವರಣೆ : ನಾವು ಸಾಯದಂತೆ ನೋಡಿಕೊಳ್ಳುವನು. ಸಾಯಲಿಲ್ಲ. ಇದ್ದೇವೆ. ಆದರೆ ಇದ್ದರೆ ಮಾತ್ರ ಸಾಲದು, ನಮಗೆ ಕಾಲಕಾಲಕ್ಕೆ ಆಹಾರ ಬೇಕಲ್ಲ ? 'ಪುಟ್ಟಿಸಿದ ದೇವ ತಾ ಹೊಣೆಗಾರನಾಗಿರಲು ಗಟ್ಟಾಗಿ ಸಲಹುವನು ಇದಕೆ ಸಂಶಯವಿಲ್ಲ, ತಲ್ಲಣಿಸದಿರು ಕಂಡ್ಯ ತಾಳು ಮನವೇ'- ಆನೆಗೈದುಮಣವ ಆಹಾರವ ಯಾರು ಕೊಡುವರು ? - ದಾಸರು ಒಂದು ಕಡೆ ಕೇಳಿದ್ದುಂಟು - ಆನೆ ಐದು ಮಣ ಆಹಾರ ತಿನ್ನುವುದು. ಯಾರು ತಂದು ಕೊಡುವರು ? ನಾವು ತಂದು ಹಾಕುವುದಿಲ್ಲ. ಆದರೂ ಅದಕ್ಕೆ ಆಹಾರ ಸಿಗುವುದು. ಕಲ್ಲಿನ ಮೂಲೆಯಲ್ಲಿ ಕಪ್ಪೆ ಹುಟ್ಟಿರುತ್ತದೆ. ಅಲ್ಲಿಗೇ ಆಹಾರ ಉದಕವ ಯಾರು ತಂದು ಕೊಡುವವು ? ಭೀಷ್ಮರು ಹೇಳ್ತಾರೆ ನೀನೇ ಆಹಾರವನ್ನು ಒದಗಿಸುವವನು. ವ್ಯಕ್ತಿಗಳು ಇರುವಂತೆ ಮಾಡುವುದಷ್ಟೇ ಅಲ್ಲದೆ ಅವರಿಗೆ ಕಾಲಕಾಲಕ್ಕೆ ಆಹಾರವನ್ನು ನೀನೇ ಒದಗಿಸುವಿ. ಆದುದರಿಂದ ನೀನು ‘ಧಾತಾ’

ಅನ್ನದ ಋಣ ಎಲ್ಲಿರುವುದೋ ಯಾರಿಗೂ ತಿಳಿಯದು.ಜನ್ಮಜನ್ಮದ ಋಣ ಹೇಗೆ ತಿಳಿಯಬಹುದು. ಒಟ್ಟಿನಲ್ಲಿ ಪರಮಾತ್ಮನ ಸ್ಮರಣೆಯಲ್ಲಿ ಏನೇ ಕರ್ಮ ಮಾಡಿದರೂ ಸೇವೆಯಾಗುವುದು.ಋಣಕಳೆಯುವುದು.ಇಲ್ಲಿ ಧರ್ಮ ಜಾತಿ ಪಂಗಡ,ದೇಶ,ಪಕ್ಷಪಾತಗಳಿಗೆ ಅವಕಾಶವಿರದು. ಇದು  ಕೇವಲ  ನಿಸ್ವಾರ್ಥ ನಿರಹಂಕಾರ ಮತ್ತು ಪ್ರತಿಫಲಾಪೇಕ್ಷೆ ಇಲ್ಲದೆ  ನಡೆಸಿದಾಗಷ್ಟೆ ಸಾಧ್ಯ ವೆಂದು ಶ್ರೀ ಕೃಷ್ಣ  ತಿಳಿಸಿ ನನಗೂ ಜನ್ಮಗಳಿವೆ ಎಂದೂ ಹೇಳಿರುವಾಗ    ಅವನೊಳಗಿರುವ ಅಸಂಖ್ಯಾತ ಜೀವಾತ್ಮರ ಪಾಡೇನು?.ಎಲ್ಲವನ್ನೂ  ಕೃಷ್ಣಾರ್ಪಣ ಮಾಡಿದಾಗ ಒಳಗಿನ ಜೀವಾತ್ಮರಿಗೂ ಅವನೇ ತಲುಪಿಸೋದಲ್ಲವೆ?

ದೇಶದ ಪ್ರಶ್ನೆ ಬಂದಾಗ  ದೇಶಕ್ಕೆ ಏನು ಕೊಡುವೆವೋ ಅದೇ ನಮಗೂ ತಿರುಗಿ ಬರುತ್ತದೆ. ಇಷ್ಟೇ  ದೊಡ್ಡವರನ್ನು ನಿರ್ಲಕ್ಷ್ಯ ಮಾಡಿದರೂ  ಹಿಂದೆ ಅದೇ ಬರುತ್ತದೆ. ಹಿಂದಿನ ಧರ್ಮ ಕರ್ಮ ಬಿಟ್ಟು ಎಷ್ಟು ದೂರ ನಡೆದರೂ ಹಿಂದೆ ತಿರುಗಿ ಬರೋವರೆಗೂ ಆತ್ಮಕ್ಕೆ ತೃಪ್ತಿ ಸಿಗದು.ಅಲ್ಲಿರುವುದು ನಮ್ಮನೆ ಇಲ್ಲಿ ಬಂದೆ ಸುಮ್ಮನೆ ಎಂದಂತೆ ಪರಮಾತ್ಮನೆಡೆಗೆ ಹೋಗದೆ  ತೃಪ್ತಿ ಇಲ್ಲ ಜೀವನ್ಮುಕ್ತಿ ಇಲ್ಲ.

ಅತಿಆಸೆಯೇ ದು:ಖಕ್ಕೆ ಕಾರಣ

ಉಸಿರು ಹೋಗಿ ಆಸೆ ಉಳಿದರೆ, 
ಅದುವೇ *ಮೃತ್ಯು.*
ಉಸಿರು ಇರುವಾಗಲೇ ಆಸೆ ಅಳಿದರೆ, ಅದುವೇ *ಮುಕ್ತಿ.
ಜೀವನ್ಮುಕ್ತಿ ಸಿಗೋದು ಎನ್ನುವ ಆಸೆಯಲ್ಲಿ ಎಷ್ಟೋ ಧಾರ್ಮಿಕ ಪೂಜೆ ಹೋಮ‌ಹವನ ಯಾಗ ಯಜ್ಞ ಜಪ ತಪ ಎಲ್ಲಾ ಮಾನವ ನಡೆಸುವನು. ಆದರೆ ಮುಕ್ತಿ ಯಾರಿಗೆ ಸಿಕ್ಕಿದೆ ಎನ್ನುವ ಪ್ರಶ್ನೆಗೆ ಉತ್ತರ ಸ್ಪಷ್ಟವಾಗಿ ಇಂದಿಗೂ  ತಿಳಿದಿಲ್ಲದೆ  ನಾನು ಧರ್ಮ ರಕ್ಷಕ, ಧರ್ಮ ವಂತ ,ಧಾರ್ಮಿಕ  ಗುಣವಂತ, ಜ್ಞಾನಿ, ಎನ್ನುವ ಜನ  ಇದ್ದಾರೆ. ಈ ನಾನು ಯಾರು? ಎಂದು  ತಿಳಿಯುವ ಪ್ರಯತ್ನ ನಡೆಸಿರುವವರು ಜೀವನ್ಮುಕ್ತರಾಗಿದ್ದಾರೆ ಎಂದರೆ  ನಾನು  ಯಾರ ಸೇವಕ? ಯಾರ ಸೇವೆ ಮಾಡಿದೆ? ಯಾರ ಹಣದಿಂದ  ಮಾಡಿದೆ? ಎಷ್ಟು ಮಾಡಿದೆ? ಯಾಕೆ ಮಾಡಿದೆ? ಇವೆಲ್ಲದರ ಹಿಂದೆ ಯಾರಿರೋದು  ಎನ್ನುವುದಕ್ಕೆ ಉತ್ತರ ಒಂದೇ  ಅವನೇ ಪರಮಾತ್ಮ. 

ಪರಮಾತ್ಮನ ಸತ್ಯದೆಡೆಗೆ ನಡೆದಂತೆ  ಈ ಅಧ್ಯಾತ್ಮ ದ ಜ್ಞಾನ ಬೆಳೆಯುತ್ತದೆ  ಅಧ್ಯಾತ್ಮ ದಿಂದ ಜೀವನದ ರಹಸ್ಯವರಿತವರು  ಉಸಿರಿರುವಾಗಲೇ ಆಸೆಯಿಂದ ಮುಕ್ತರಾಗಿರುವರು.
ಆದರೆ ಯಾವಾಗ ಇದು ವ್ಯವಹಾರಕ್ಕೆ ಸೀಮಿತವಾಗುತ್ತಾ ನನ್ನ ದೇವರು ನನ್ನ ಮನೆ,ನನ್ನ ಜಾತಿ,ಧರ್ಮ, ಪಕ್ಷ ಎನ್ನುವ ಹಂತಕ್ಕೆ ಎಳೆದುಕೊಂಡು ಹೊರ ನಡೆಯುತ್ತದೋ ಆಸೆಗೆ ಮಿತಿ ಇಲ್ಲದೆ  ನಾನು ಬೆಳೆದು ಉಸಿರಾಡಲೂ ಪುರುಸೊತ್ತಿಲ್ಲದ  ಜೀವನವಾಗುತ್ತದೆ. 
ಜೀವಕ್ಕೆ ಆಸರೆಯಾಗಿರುವ ವಾಯುವೇ ಉಸಿರು. ವಾಯುಮಾಲಿನ್ಯದಿಂದ ಜೀವಕ್ಕೆ ಅಪಾಯ. ವಾಯುಮಾಲಿನ್ಯ  ಅತಿಆಸೆಯ ಫಲ. ವೈಜ್ಞಾನಿಕ ಚಿಂತನೆಯ ಜೊತೆಗೆ ವೈಚಾರಿಕತೆಯ ಹಿಂದಿನ  ಗುರಿ ಅರ್ಥ ವಾದವರು ಉಸಿರಿರುವರೆಗೂ  ಪರಮಸತ್ಯಧರ್ಮದೊಂದಿಗೆ ನಡೆಯುವರು. ಆದರೆ ಇದರಿಂದ ಇತರರಿಗೆ  ಅನ್ಯಾಯವಾದರೆ ಅಧರ್ಮ ಅಸತ್ಯ ಬೆಳೆದರೆ  ಮೃತ್ಯು.

ಹೆಣ್ಣು ಹೊನ್ನು ‌ಮಣ್ಣಿನ‌ಮೇಲಿರುವ ಆಸೆಯಲ್ಲಿ  ಒಳಗಿರುವ ಪರಮಸತ್ಯ ಧರ್ಮ ತೊರೆದರೆ  ಮೃತ್ಯು. ಸಾವು ಎಲ್ಲರಿಗೂ ಇದೆ. ಯಾರು ಉಸಿರಿರುವಾಗಲೇ  ಪರಮಾತ್ಮನ ಅರಿತು ನಡೆದರೋ ಅವರು ಜೀವನ್ಮುಕ್ತರಾಗಿರುವರು.ಅರಿಯದವರು ಮೃತ್ಯುವಿನ ವಶವಾದರು. ಅದ್ವೈತ ಹೇಳೋದಿಷ್ಟೆ  ನಾನೆಂಬುದಿಲ್ಲ. ಪರಮಾತ್ಮ ಒಬ್ಬನೇ  ಇವೆಲ್ಲವೂ  ಆಂತರಿಕ ಶುದ್ದಿಯಿಂದಲೇ ಅರ್ಥ ವಾಗುವ ಅಧ್ಯಾತ್ಮ ಸತ್ಯ. ಎಲ್ಲಾ ಶೂನ್ಯ ಎಂದಾಗ ಆ ಶೂನ್ಯವನ್ನು ಹಿಡಿದು ಲೆಕ್ಕಹಾಕಿದರೆ‌ ಶೂನ್ಯವೆ .ಅದರ ಮುಂದೆ ಹಿಂದೆ 1 ಸೇರಿಸಿದರೂ  ಲೆಕ್ಕ ಬೆಳೆಯುತ್ತದೆ.
ಲೆಕ್ಕಾಚಾರ ವೇ ಆಸೆಯ ಪ್ರತೀಕ. ಅತಿಯಾದ ಲೆಕ್ಕಾಚಾರವೇ ಋಣ. ಋಣಮುಕ್ತರಾಗದೆ  ಜೀವನ್ಮುಕ್ತಿ ಯಿಲ್ಲ. ಭೂಮಿಯ ಮೇಲಿದ್ದು ಭೂ ಸೇವೆ ಮಾಡದೆ  ಸಾಲ ಏರಿಸಿದರೆ ಆಸೆಯೇ ದು:ಖಕ್ಕೆ ಕಾರಣವಾಗುತ್ತದೆ. ಅತಿಆಸೆ ಗತಿಗೇಡು ಎನ್ನುವರು.

Friday, September 5, 2025

ಶಿಕ್ಷಣದಲ್ಲಿ ಶಿಕ್ಷಕ= ಗುರು?

ಶಿಕ್ಷಕರ ದಿನಾಚರಣೆ ಭಾರತದಲ್ಲಿ ನಡೆಸುವಂತೆ ವಿದೇಶದಲ್ಲಿ ನಡೆಸುವರೆ? ಗುರು ಅಥವಾ ಶಿಕ್ಷಕ ಎರಡೂ ಪದ ಪವಿತ್ರವಾಗಿದೆ. ಪವಿತ್ರವಾಗಿರುವ ವಿಷಯಗಳನ್ನು ಕಲಿಸುವವರು ಗುರುವಾಗಿರುವರು. ವಿಷಯ ಕಲಿಸುವವರು ಶಿಕ್ಷಕರಾಗಿರುವರು. ಅಂದರೆ ವಿಷಯಾಂತರವಾದರೆ ಗುರು ಬೇರೆ ಶಿಕ್ಷಕ ಬೇರೆಯಾಗಿ ಆಚಾರ ವಿಚಾರ ಪ್ರಚಾರದಲ್ಲಿ ಅಂತರ ಬೆಳೆಯುತ್ತದೆ.
ನಮ್ಮ  ಗುರುಪೂರ್ಣಿಮೆಗೂ ಶಿಕ್ಷಕರ ದಿನಾಚರಣೆಗೂ ವ್ಯತ್ಯಾಸವಿದೆ. ಕಾರಣ ವಿಷಯ ಬೇರೆ ಬೇರೆ ಎನ್ನುವುದು.
ಜೀವನ ಶೈಲಿಯನ್ನು  ನೋಡಿದಾಗ  ಧರ್ಮ ಗುರುಗಳ ಜೀವನಕ್ಕೂ ಶಿಕ್ಷಕರಿಗೂ ಬೇರೆಯಾಗಿರುತ್ತದೆ.
ಒಟ್ಟಿನಲ್ಲಿ ಅಂತರ ದಿಂದ ಸಮಸ್ಯೆ ಬೆಳೆಯುತ್ತದೆ. ಅಂತರದಲ್ಲಿ ಮಧ್ಯವರ್ತಿಗಳು ‌ಬೆಳೆಯುವರು. ಅರ್ಧ ಸತ್ಯ  ಮಾತ್ರ ಅರ್ಥ ವಾದರೆ ಅತಂತ್ರಸ್ಥಿತಿಗೆ  ಜೀವ ತಲುಪುವುದು.
ಭಾಋಥಿಯ ಶಿಕ್ಷಣದ ಗುರಿಯೇ ಆತ್ಮೋನ್ನತಿ. ಜೀವೋನ್ನತಿ ಎಂದರೆ ತನ್ನ ಜೀವರಕ್ಷಣೆಯಾಗುತ್ತದೆ. ಜೀವನ‌ನಡೆಸಲು ವಿದ್ಯೆ ಅಗತ್ಯವಿದೆ. ವಿದ್ಯೆ ವಿನಯವನ್ನು‌ಬೆಳೆಸುತ್ತದೆ.ವಿನಯದಿಂದ ಜ್ಞಾನೋದಯವಾಗುತ್ತದೆ.ಹಿಂದಿನ ಕಾಲದಲ್ಲಿದ್ದ ಋಷಿಗಳ ಆಶ್ರಮ ದ ಗುರುಕುಲ ಶಿಕ್ಷಣ ಇಂದು ಹೈಟೆಕ್ ಪದ್ದತಿಯನ್ನು
ಕಾಣುತ್ತದೆ. ಮಕ್ಕಳ  ಮಾನಸಿಕತೆ  ಬೌದ್ದಿಕ ಶಕ್ತಿ ಹೊರನೋಟಕ್ಕೆ  ಸೀಮಿತವಾಗಿ  ಹಣವೇ ಸರ್ವಸ್ವ. ಹೀಗಾಗಿ ಹೊರಗಿನ ವಿದ್ಯೆ ಕಲಿಸುವವರು ಶಿಕ್ಷಕರು ಎನ್ನುವ ಮಟ್ಟಿಗೆ  ಆಚರಣೆ.
ಒಳಗಿನ ಶುದ್ದತೆಯಿಲ್ಲದೆ ಹೊರಗಿನ ಶಿಕ್ಷಣ ನೀಡಿದರೆ  ಸ್ವಚ್ಚ ಭಾರತವಾಗದು. ಇದರಿಂದಾಗಿ ಇಂದಿಗೂ  ಹೊರಗೆ ತಳುಕುಬಳುಕಿನ ಜೀವನ ಒಳಗೆ ಹುಳುಕಿನ ಜೀವನ.
ಎಲ್ಲರೂ ಒಂದೇ ಎನ್ನುವ ಹಾಗಿಲ್ಲ.ಬದಲಾವಣೆ ಆಗುತ್ತಿದೆ. ಇದು ಶಾಲಾಕಾಲೇಜ್ ಗಳಲ್ಲಿ ನಡೆದಾಗ ಹೆಚ್ಚಿನ‌ಬದಲಾವಣೆ ಸಾಧ್ಯವಿದೆ ಎನ್ನುವ ಕಾರಣಕ್ಕಾಗಿ  ರಾಷ್ಟ್ರೀಯ ಶಿಕ್ಷಣ ಪದ್ದತಿ ಜಾರಿಗೆ ಬಂದಿತ್ತು.ಅದರಲ್ಲೂ ರಾಜಕೀಯ ಬೆಳೆಸಿಕೊಂಡು  ಅಂತರ ಸೃಷ್ಟಿ ಮಾಡುತ್ತಾ ಮಕ್ಕಳ ಜ್ಞಾನವನ್ನು ಹೊರಗೆ ತೋರಿಸುವುದೇ ಮುಖ್ಯ ಎಂದರೆ  ತಪ್ಪು.
ನಿಧಾನವಾದರೂ ಸರಿ ಸ್ವತಂತ್ರ ಜ್ಞಾನಕ್ಕೆ ಸರಿಯಾದ ಶಿಕ್ಷಣ ಕೊಡುವುದೇ ಧರ್ಮ. ಇದರಿಂದಾಗಿ ಜ್ಞಾನೋದಯವಾಗುತ್ತದೆ. ಜ್ಞಾನದಿಂದ ಆತ್ಮಕ್ಕೆ ತೃಪ್ತಿ ಮುಕ್ತಿ ಸಿಗುತ್ತದೆ. ಸಮಾನತೆಯು ಜ್ಞಾನದಿಂದ ಬೆಳೆದಾಗ ಸಮಾಧಾನ ಒಳಗಿರುತ್ತದೆ. ಗುರುಬೇರೆಯಲ್ಲ ಶಿಕ್ಷಕ ಬೇರೆಯಲ್ಲ. ಉತ್ತಮ ವಿಷಯಗಳನ್ನು ತಿಳಿಸುವಾಗ ನಮ್ಮ ಅರಿವು  ನಮಗೆ  ಗುರುವಾಗಿರಬೇಕಿದೆ.ಯಾರದ್ದೋ ವಿಷಯ ಯಾವುದೋ ಕಾಲ ಯಾರದ್ದೋ ಅನುಭವವನ್ನು  ತಿಳಿಸುವಾಗ ದೇಶ‌ಕಾಲಮಾನ ಧರ್ಮ ಸತ್ಯದ  ಅರಿವು ಅಗತ್ಯವಿದೆ. ಪುಸ್ತಕದ ವಿಚಾರ‌ಮಸ್ತಕಕ್ಕೆ ಏರಿಸುವುದಕ್ಕೆ ಶಿಕ್ಷೆ ನೀಡುವಾಗ ಅದರಿಂದ ಹೃದಯವಂತಿಕೆ ಬೆಳೆದರೆ ಸರಿ.ಹೃದಯಹೀನರಾದರೆ ವ್ಯರ್ಥ. 
ಹೃದಯವಂತಿಕೆ ಎನ್ನುವುದು ಹಣದಿಂದ. ಬೆಳೆಸಲಾಗದು
ಸತ್ಯಜ್ಞಾನದಿಂದ ಮಾನವೀಯತೆ ಯ ಮೌಲ್ಯಗಳಿಂದ ಉತ್ತಮ ಆಹಾರ ವಿಹಾರ ಶಿಕ್ಷಣದಿಂದ ಬೆಳೆಸುವವರು ನಿಜವಾದ ಗುರುವೂ ಶಿಕ್ಷಕರೂ ಆಗಿದ್ದರು.‌ಈಗಲೂ ಇದ್ದಾರೆ ಆದರೆ ನಿಸ್ವಾರ್ಥ ನಿರಹಂಕಾರ ಮತ್ತು ಪ್ರತಿಫಲಾಪೇಕ್ಷೆ ಇಲ್ಲದವರು ವಿರಳವಾಗಿರುವರು. ಆಚರಣೆಯಲ್ಲಿ  ಸಂತೋಷವಿರುತ್ತದೆ.ಸಂಶೋಧನೆ  ಇರಬೇಕಿದೆ.
ನಮ್ಮನ್ನು ‌ನಾವು ಪರಿಶೋಧನೆ ಮಾಡಿಕೊಳ್ಳಲು  ಎರಡೂ ಕಡೆ  ಸಂಶೋಧನೆ ನಡೆಯುತ್ತಿರುತ್ತದೆ. ಹೊರಗೆ ಹೋದರೆ ಕಷ್ಟ ಒಳಗಿದ್ದರೆ ನಷ್ಟ. ಕಷ್ಟ ನಷ್ಟಗಳ ನಡುವೆ  ಸಂಶೋಧನೆ  ನಡೆಸುವುದೇ‌ ಕ್ಲಿಷ್ಟಕರ. ಅದಕ್ಕೆ ಹೇಳಿರುವುದು ನಿಮ್ಮ‌ನಿಮ್ಮ‌ಮನವ ತನುವ‌ಸಂತೃಸಿಕೊಳ್ಳಿ ಎಂದು. ಎಷ್ಟು ತಂತ್ರಬಳಸಿದರೂ ಸತ್ಯ ಒಂದೇ ಆಗಿರುವುದು.ಆ ಸತ್ಯ ಬಿಟ್ಟು ನಡೆದಷ್ಟೂ ಅಸತ್ಯವೇ  ಬೆಳೆಯುವುದು. ಸತ್ಯವೇ ದೇವರು.
ಸತ್ಯವಿಲ್ಲದ ಶಿಕ್ಷಣ ದೈವತ್ವ ಬೆಳೆಸದು. ಏನೇ ಇರಲಿ ಶಾಂತಿ ಇರಲಿ. ನಿಧಾನವಾದರೂ   ಸತ್ಯ ಪ್ರಧಾನವಿದ್ದರೆ ಜೀವನ ಸಾರ್ಥಕ  ಎನ್ನುವರು ಮಹಾಗುರುಗಳು.ಕಲಿಕೆಯ ಕಾಲ ಕಲಿಗಾಲ. ಕಲಿಕೆ ನಿರಂತರವಾಗಿರುತ್ತದೆ.ಅದು ಒಳಗೆ ಹೊರಗೆ ಒಂದೇ ಸಮನಾಗಿದ್ದರೆ  ಸಮಾಧಾನವಿರುತ್ತದೆ.

ತಪ್ಪೇ ಮಾಡದವರಿದ್ದಾರೆಯೆ?

ತಪ್ಪು ಮಾಡದ ವ್ಯಕ್ತಿ ಈ ಜಗತ್ತಿನಲ್ಲಿ ಇಲ್ಲ.ಅದರಲ್ಲಿ ದೇವಾಸುರರಿಬ್ಬರೂ ಇದ್ದಾರೆ.ದೇವತೆಗಳು ಮಾಡಿದ್ದನ್ನು ಅಸುರರು ಮಾಡಿದರೆ ತಪ್ಪು ಎಂದರೆ ಒಪ್ಪಲಾಗದು.
ಆದರೆ ಭೂಮಿಯಲ್ಲಿ  ಜ್ಞಾನದಿಂದ ನಡೆಯುವುದಕ್ಕೂ  ಅಜ್ಞಾನದಲ್ಲಿ ‌ನಡೆಯುವುದಕ್ಕೂ  ಹಣವೇ ಮಾಧ್ಯಮವಾದಾಗ ಹಣಗಳಿಸಲು ಅಸತ್ಯ ಅನ್ಯಾಯ ಅಧರ್ಮ  ಬೆಳೆಯುತ್ತ  ಕೊನೆಗೆ ತಪ್ಪು ತಪ್ಪಾಗಿ ಅರ್ಥ ಮಾಡಿಕೊಂಡು ಒಬ್ಬರನ್ನೊಬ್ಬರು ದ್ವೇಷ. ಮಾಡಿಕೊಂಡು ಮುಂದೆ ಹೋದಾಗ ಅ ದೇ ಇತಿಹಾಸ ಪುರಾಣ ಕಥೆಗಳಾಗಿ ಹರಡುತ್ತದೆ. ಆದರೆ ಅದರಿಂದ ನಾವೇನು ತಿಳಿಯಬೇಕು ಬೇಡ ಎನ್ನುವ ವಿಚಾರದಲ್ಲಿ ನಾವು ಚಿಂತನೆ ‌ನಡೆಸಿದರೆ ಎಲ್ಲಾ ತಪ್ಪಾಗಿರೋದಿಲ್ಲ ಸರಿಯೂ ಇರದು. ಒಟ್ಟಿನಲ್ಲಿ ಜೀವನ ನಡೆಸಲು ಬೇಕಾಗಿರುವ ಸತ್ಯಜ್ಞಾನದೆಡೆಗೆ ಹೊರಟಾಗ ತಪ್ಪು ಹೊರಗೆ ಕಾಣುತ್ತದೆ. ಅಸತ್ಯದೆಡೆಗೆ ಹೊರಟಾಗ ತಪ್ಪು ಒಳಗೇ ಬೆಳೆಯುತ್ತದೆ.
ಒಳಗಿನ ತಪ್ಪು ಬೇರೆಯವರಿಗೆ ಕಂಡಾಗ ಹೇಳುವರು. ಹೇಳಬಾರದೆಂದರೆ ಇನ್ನಷ್ಟು ತಪ್ಪಾಗುತ್ತದೆ. ಹಿಂದೆ ಗುರುಹಿರಿಯರು ಕಿರಿಯರು ತಪ್ಪು ದಾರಿ ಹಿಡಿದಾಗ ತಡೆದು ನಿಲ್ಲಿಸಿ ಬುದ್ದಿಕಲಿಸುತ್ತಿದ್ದರು.ಈಗ  ಕಿರಿಯರೆ ಹಿರಿಯರಿಗೆ ಬುದ್ದಿ ಕಲಿಸುವಷ್ಟು ವಿದ್ಯಾವಂತರಾಗಿರುವರು ಆದರೆ ಜ್ಞಾನದ ಕೊರತೆಯಲ್ಲಿ ತಪ್ಪು ದಾರಿ ಹಿಡಿದರೂ ಹಣಸಂಪಾದನೆ ಇರುವುದರಿಂದ ಅದನ್ನು ಹಿರಿಯರೂ ಒಪ್ಪಿ ಸಹಕಾರ ಕೊಡುವುದರಿಂದ  ದಾರಿತಪ್ಪಿಸುವ ಕೆಲಸ ಹೆಚ್ಚು.

ಧರ್ಮ  ಯಾವತ್ತೂ  ರಕ್ಷಣೆ ನೀಡುತ್ತದೆ. ಧರ್ಮ ತಪ್ಪಿ ನಡೆದರೆ ಶಿಕ್ಷೆ ಆಗುತ್ತದೆ  ಎನ್ನುವುದು ಸತ್ಯ ವಾದರೂ ಅದರಿಂದ ತಪ್ಪಿಸಿಕೊಳ್ಳಲು ಸಾಕಷ್ಟು ತಂತ್ರಪ್ರಯೋಗವಾಗುತ್ತದೆ.ತಂತ್ರ ಯಾವತ್ತೂ ತಾತ್ಕಾಲಿಕ ಎನ್ನುವ ಸತ್ಯವರಿತರೆ ಸ್ವತಂತ್ರ ವಾಗಿ ಸರಿದಾರಿಯಲ್ಲಿ ನಡೆಯಬಹುದು.
ಕಲಿಕೆಯೇ ತಪ್ಪಾದಾಗ  ಅದನ್ನು ಸರಿಪಡಿಸಲು ಕಷ್ಟಪಡಬೇಕು.
ಸಂಪಾದನೆಯೇ ಅಧರ್ಮ ದೆಡೆಗೆ ನಡೆದಾಗ  ಜ್ಞಾನ ಬರದು.
ಹೀಗೇ ಒಂದನ್ನೊಂದು ವಿರುದ್ದ  ಸೇರಿಸಲು ಹೋದರೆ ಘರ್ಷಣೆ ಆಗುತ್ತದೆ. ಯೋಗದ ವಿಚಾರದಲ್ಲಿ ತಪ್ಪು ತಪ್ಪು ಸೇರಿ ಬೆಳೆದಂತೆ ಸರಿಯಾಗಿದ್ದು ಸರಿಯಾದೆಡೆಗೆ ನಡೆದರೆ ಉತ್ತಮ.
ಹೇಗೆ ವೈಜ್ಞಾನಿಕ ಸಂಶೋಧನೆ ಹೊರಗಿನಿಂದ ಬೆಳೆದಿದೆಯೋ ಅಧ್ಯಾತ್ಮದ ಸಂಶೋಧನೆ ಒಳಗಿನಿಂದ ಬೆಳೆಯುವುದಿಲ್ಲ.ಕಾರಣ ಇವೆರಡೂ ವಿರುದ್ದ. ದೃಷ್ಟಿಯಿಂದ ಜನ ನೋಡುತ್ತಾರೆ. ಹೀಗಾಗಿ ಜಗತ್ತಿನಲ್ಲಿ  ವಿರೋಧಕ್ಕೆ ಕೊಡುವ ಸಹಕಾರ ಒಪ್ಪಂದಕ್ಕೆ ಸಿಗೋದಿಲ್ಲ.
ಮಾತು  ಕೊಟ್ಟ ಮೇಲೆ  ಅದರಂತೆ ನಡೆಯಬೇಕು ಎಸ್ ಎನ್ನುವುದು ಸುಲಭ.ಆದರೆ ಕಾಲ ಒಂದೇ ರೀತಿಯಲ್ಲಿ ಇರದು. ತಪ್ಪು ನಡೆಯುವುದು ಸಹಜ ಅದನ್ನು ಸರಿಪಡಿಸುವುದು ಕಷ್ಟವಾದರೂ ಸಾಧ್ಯವಿದೆ.ಎಲ್ಲಾ ಮನಸ್ಸಿನ ಮೇಲಿರುತ್ತದೆ. ಮನಸ್ಸು ಯಾವಾಗ ಬೇಕಾದರೂ ಬದಲಾಗಬಹುದು. ಹೀಗಾಗಿ ಒಮ್ಮೆ ದೈವೀಕ ಶಕ್ತಿ ಗೆದ್ದರೆ ಇನ್ನೊಂದು ಬಾರಿ ಅಸುರಿಶಕ್ತಿ ಗೆಲ್ಲುತ್ತದೆ.
ಇದಕ್ಕೆ ಮಧ್ಯವರ್ತಿ ಮಾನವನ ಸಹಕಾರ ಸಹಾಯವೇ ಕಾರಣ.ಹಾಗಾದರೆ ನಾವ್ಯಾರು? ದೇವರೆ ಅಸುರರೆ ಮಾನವರೆ? ಭೂಮಿಯಲ್ಲಿ ಮನುಕುಲ ಎಷ್ಟೋ ತಪ್ಪು ಮಾಡಿ  ಸಾವು ನೋವು  ಗೆಲುವುಸೋಲು ಕಂಡಿದ್ದರೂ ಅದರೊಂದಿಗೆ ಬೆರೆತು ತಮ್ಮ ಕೆಲಸ ಮಾಡುತ್ತಿರುವ ಅಗೋಚರ ಶಕ್ತಿ ದೇವರು ಅಸುರರು ಕಣ್ಣಿಗೆ ಕಾಣೋದಿಲ್ಲ. ಇದರಿಂದ ತಪ್ಪು ಯಾರದ್ದು ಸರಿ ಯಾರು ಎನ್ನುವ ವಾದ ವಿವಾದಗಳು ಬೆಳೆಯುತ್ತದೆ.
ಯಾವಾಗ ಅತಿರೇಖಕ್ಕೆ ಏರುವುದೋ ಭೂಮಿಯೇ ತನ್ನ ಕೆಲಸ ತಾನೇ ಮಾಡಿಕೊಂಡು  ಮುಕ್ತಾಯ ಹಾಡುವುದು.
ಇದರ. ಪರಿಣಾಮ  ಸಾವು ಪ್ರಳಯ ಭೂ ಕಂಪ ರೋಗಗಳ ಮೂಲಕ ಜೀವಹೋಗುವುದಾಗಿದೆ.ಇದರಲ್ಲಿ ತಪ್ಪು ಯಾರದ್ದು? ಸಾವನ್ನು ತಡೆಯಬಹುದೆ?
ಎಷ್ಟೋ ಮಹಾತ್ಮರುಗಳು ಪಾಪಾತ್ಮರು ಪುಣ್ಯಾತ್ಮರು ದೇವತೆಗಳು ಅಸುರರು ಮಾನವರು ಭೂಮಿಯಲ್ಲಿದ್ದೇ ಜೀವನ ನಡೆಸಿರುವಾಗ ಜೀವನದ‌ಮುಖ್ಯ ಗುರಿ ತಪ್ಪನ್ನು ತಿದ್ದಿ ನಡೆಯೋದಷ್ಟೆ. ತಪ್ಪು ತಪ್ಪಾಗಿ ನಡೆಯೋ ದಲ್ಲ. ತಿಳಿದವರಿಗೆ ತಿಳಿದವರು ಹೇಳಿದರೂ ತಪ್ಪು. ತಿಳಿಯದವರಿಗೆ ಹೇಳಿದರೂ ತಪ್ಪು ಎಂದರೆ ತಪ್ಪು ಬೆಳೆಯುತ್ತದೆ. ಒಟ್ಟಿನಲ್ಲಿ ತಪ್ಪು ಒಳಗೇ ಬೆಳೆದಾಗ  ಮಾನವನ ಅರಿವಿಗೇ ಬರದೆ ಹೋಗುತ್ತದೆ.
ಅರಿವಿಗೆ ಬಂದಾಗ ಸರಿದಾರಿ ಕಾಣುತ್ತದೆ.
ಅದಕ್ಕೆ ಮೌನದಿಂದ ತಪ್ಪು ಸರಿ ತಿಳಿಯುತ್ತ ಕಲಿಯುತ್ತ ನಡೆದವರಿಗೆ  ಸರಿದಾರಿಯಲ್ಲಿ  ಶಾಂತಿ ಸಿಕ್ಕಿದೆ..ಈಗಂತೂ ನಕಾರಾತ್ಮಕ ಸುದ್ದಿಯೇ ಹರಡಿಕೊಂಡಿದೆ. ಅದನ್ನು ಪ್ರಚಾರ ಮಾಡೋದೇ ಸರಿಎನ್ನುವರು.ಅಂತಹ ಸುದ್ದಿಗೆ ಹೆಚ್ಚಾಗಿ‌ ಹಣ ಅಧಿಕಾರ ಸ್ಥಾನ ಸಿಕ್ಕರಂತೂ ಮುಗಿಯಿತು ಕಥೆ ತಪ್ಪು ಕಣ್ಣಿಗೆ ಕಾಣದೆ ಬೆಳೆಯುತ್ತದೆ. ಅಸತ್ಯ ಅನ್ಯಾಯ ಅಧರ್ಮ ಜೊತೆಗೆ ಬೆಳೆದು  ಎಲ್ಲರೂ ತಪ್ಪು ಮಾಡುವರು ಅದರಲ್ಲಿ ನಾನೂ ಒಬ್ಬ ಎನ್ನುವುದು ಸಾಮಾನ್ಯವಿಚಾರವಾಗಿರುತ್ತದೆ.
ಶಿಕ್ಷಣದಲ್ಲಿ ಶಿಕ್ಷೆ  ನೀಡಿ ಕಲಿಸುವುದು ಸರಿ. ಆದರೆ ಯಾವ ವಿದ್ಯೆ ಕಲಿಯದಿದ್ದರೆ ಶಿಕ್ಷೆ ನೀಡಬೇಕೆಂಬ ಅರಿವಿದ್ದರೆ ಶಿಕ್ಷಣ  ಉತ್ತಮ ಮಾರ್ಗದರ್ಶನದಲ್ಲಿರುತ್ತದೆ. ಇಂದಿನ ತಂತ್ರ. ಶಿಕ್ಷಣ ಹಿಂದಿನ ತತ್ವ ಶಿಕ್ಷಣಕ್ಕೆ ವಿರುದ್ದ ಇದ್ದರೆ ತಪ್ಪು  ಒಳಗೇ ಬೆಳೆಯುತ್ತದೆ.  ಹೀಗೇ ಎಲ್ಲಾ ವಿಷಯಗಳಿಗೂ ತಪ್ಪು ಸರಿ ಎನ್ನಬಹುದು. ಅಧ್ಯಾತ್ಮ ಸತ್ಯ ಭೌತಿಕ ಸತ್ಯದಿಂದ ದೂರ ಹೋದರೆ ಅಂತರದಲ್ಲಿ ತಪ್ಪು  ಕಲ್ಪನೆ ತಪ್ಪು ಪ್ರಚಾರದಲ್ಲಿ ಮಧ್ಯವರ್ತಿಗಳು ಇನ್ನಷ್ಟು ಅಜ್ಞಾನ ಸೃಷ್ಟಿ ಮಾಡಿಕೊಂಡು ಭೂಮಿಯನ್ನು ಆಳುವರಷ್ಟೆ. ಆಳೋದಕ್ಕೆ  ನಾವ್ಯಾರು? ಭೂಮಿ ಎನ್ನುವ ಮಾಧ್ಯಮವನ್ನು  ನಡೆಸುವಾಗ ಸನ್ಮಾನದ ಜೊತೆಗೆ ಸನ್ಮಾರ್ಗ ಅಗತ್ಯವಿದೆ.  ಕೇವಲ ಸನ್ಮಾನಕ್ಕಾಗಿ ಅಸತ್ಯ ಅನ್ಯಾಯ ಅಧರ್ಮಕ್ಕೆ  ಮಾನವ‌ನಿಂತರೆ ಜೀವಾತ್ಮನಿಗೆ ಪರಮಾತ್ಮನ ಸತ್ಯ ಅರ್ಥ ಆಗೋದು ಕಷ್ಟ.
ಯಾವಾಗ ಬೇಕಾದರೂ ಬದಲಾಗಬಹುದು.ಕಾಲಚಕ್ರ ತಿರುಗುತ್ತಲೇ ಇರುತ್ತದೆ. ಮೇಲಿನವರು ಕೆಳಗಿಳಿಯಬೇಕು.
ಕೆಳಗಿನವರು ಮೇಲೇರಬೇಕು. ಹೀಗಾಗಿ  ಚಕ್ರದ ಚಲನೆಯನ್ನು ಯಾರೂ ನಿಲ್ಲಿಸಲಾಗದು. ಪ್ರಕೃತಿಯ ಸಣ್ಣ ಜೀವಶಕ್ತಿ ಹೊಂದಿರುವ ಹುಲುಮಾನವನ ಕಣ್ಣಿಗೆ ಲೋಕವೆಲ್ಲಾ  ಹಳದಿ ಕಾಣಲು ಕಾಮಾಲೆರೋಗ ಒಳಗಿರುತ್ತದೆ. ಆ ರೋಗ ವಾಸಿಯಾದರೆ  ಎಲ್ಲಾ ಸ್ವಚ್ಚವಾಗಿರುತ್ತದೆ. ಇದಕ್ಕೆ ಔಷಧ ಯೋಗದಲ್ಲಿರುತ್ತದೆ. ಯೋಗಿಯ  ಮಾರ್ಗ ಭೋಗಿಗೆ ತಪ್ಪು ಕಾಣುತ್ತದೆ. ಆದರೆ ಯೋಗಿಗೆ  ಭೋಗ ಹಿಡಿಸುವುದಿಲ್ಲವಾದ್ದರಿಂದ  ಅದನ್ನು ನಿರ್ಲಕ್ಷ್ಯ ಮಾಡುವನು ಇದು ತಪ್ಪು ಎನಿಸುತ್ತದೆ.
ಅದಕ್ಕೆ ಹೇಳಿರೋದು ಯೋಗಿ ಬಯಸಿದ್ದು  ಯೋಗಿಗೆ
ಭೋಗಿ  ಬಯಸಿದ್ದು ಭೋಗಿಗೆ ಎಂದು.