ಸಿದ್ದಿ ಪಡೆದ ಸಿದ್ದರು

ಅತೀಂದ್ರಿಯ ಲೋಕದ ರಹಸ್ಯ.. ಸಿದ್ಧಿ ಮತ್ತು ಸಿದ್ಧರ ವಾಸ್ತವ ಸತ್ಯಗಳು: ಬಾಹ್ಯಾಕಾಶದ ಅನಂತತೆಯನ್ನು ಅಳೆಯಲು ಹೊರಟಿರುವ ನವೀನ ವಿಜ್ಞಾನಕ್ಕೇ ಸವಾಲೆಸೆಯುವ, ಪ್ರಕೃತಿಯ ನಿಯಮ...

Friday, June 28, 2024

ವಾರಗಳ ಮಹತ್ವವೇನು

ಶುಕ್ರವಾರದಲ್ಲಿ  ಲಕ್ಮಿಪೂಜೆ  ಮಾಡಿ  ಸಿರಿಸಂಪತ್ತನ್ನು
ಮಾನವರು  ಗಳಿಸಬಹುದು.ಆದರೆ,ಗುರುವಾರದಲ್ಲಿ
ಗುರುವನ್ನ  ಬೇಡುವವರ. ಸಂಖ್ಯೆ  ಕಡಿಮೆಯಾಗಿದೆ.
ಅದಕ್ಕೆ  ಶನಿವಾರ. ಶನಿಮಹಾತ್ಮ ಬಂದು ಸರಿದಾರಿಗೆ
ಎಳೆದೊಯ್ಯುವುದು.
ಗುರುಗಳಲ್ಲಿ  ದೇವಗುರು,ಅಸುರರ ಗುರುಗಳಿದ್ದಾರೆ.
ನಮಗೆ ಹೊರಪ್ರಪಂಚದಲ್ಲಿ  ಶ್ರೀಮಂತ ರನ್ನಾಗಿಸೋ
ಗುರು ಅಸುರಗುರು, ಹಾಗೆ ಒಳಪ್ರಪಂಚದ ಜ್ಞಾನದ
ಶ್ರೀಮಂತರಾಗಿಸೋರೇ  ದೇವಗುರು. ಇಂದು  
ಹೊರಪ್ರಪಂಚದ  ಗುರುಗಳು  ಹೆಚ್ಚು ಶ್ರೀಮಂತರು.ಅವರ ಹಿಂದೆ ನಡೆಯುವ ಶಿಷ್ಯರ ಸಂಖ್ಯೆ   ದೊಡ್ಡದು. ಹೀಗಾಗಿ  ಮಾನವನೊಳಗೇ ಅಸುರೀ ಶಕ್ತಿ  
ಬೆಳೆದಿದೆ ಎಂದರೆ ಒಪ್ಪಲು ಸಾಧ್ಯವೆ? ಹಣವನ್ನು ಸದ್ಬಳಕೆ ಮಾಡಿಕೊಳ್ಳುವವರಲ್ಲಿ ಸತ್ಯಜ್ಞಾನವಿರುತ್ತದೆ. ಹೀಗಾಗಿ ಧಾರ್ಮಿಕ ಕಾರ್ಯ ನಡೆದಿದೆ.ಅದನ್ನು ಉಚಿತವಾಗಿ ಬಳಸಿ ತನ್ನ ಸ್ವಾರ್ಥ ಸುಖಕ್ಕಾಗಿ  ದುರ್ಭಳಕೆ  ಮಾಡಿಕೊಂಡು ನಾನೇ ದೇವರು ಗುರು ಎನ್ನುವವರ  ಹಿಂದೆ ಸಾಕಷ್ಟು ಜನಬಲವೂ ಇರುತ್ತದೆ.  ಯಾವಾಗ ಇದು ಅತಿಯಾದ ಪ್ರದರ್ಶನ ಮಾಡಿ ಜನರ ದಾರಿತಪ್ಪಿಸಿ ಆಳಲು ರಾಜಕೀಯ ಹೆಚ್ಚುವುದೋ ಮೇಲಿರುವ ಗುರು ಎಚ್ಚರವಾಗಿ ಶಿಷ್ಯನಿಗೆ ಶಿಕ್ಷೆಯೂ ಆಗುವುದು.

ಸತ್ಯ,ಧರ್ಮದ ಹೆಸರಲ್ಲಿ  ಶಿಕ್ಷಣದ  ಹೆಸರಲ್ಲಿ  ಈ ಶಕ್ತಿ
ಮಕ್ಕಳನ್ನ  ಆಟವಾಡಿಸಿ  ಜೀವನದಲ್ಲೇ  ಸೋಲಿಸಿದೆ
ಈ ಒಳ ಸತ್ಯ ತಿಳಿಯದ   ಮಾನವ  ತನ್ನ ಜೀವಕ್ಕೆ
ತಾನೇ  ಅಪಚಾರ  ಮಾಡಿಕೊಂಡು ನೋವಿನಲ್ಲಿ
ನರಳುವಂತಾಗಿದೆ.
ಆಸೆಯೇ ದು:ಖಕ್ಕೆ ಮೂಲ.ಅತಿಆಸೆಯೇ ಅಜ್ಞಾನದ
ಸಂಕೇತ.
ಒಟ್ಟಿನಲ್ಲಿ  ನಮ್ಮ  ಗ್ರಹಚಾರಕ್ಕೆ  ಗ್ರಹಗಳನ್ನ ಸರಿಯಾಗಿ  ತಿಳಿಯದೆ  ನಡೆದಿರೋದೇ  ಕಾರಣ.
ವಿಜ್ಞಾನದ ಪ್ರಕಾರ  ಗ್ರಹಗಳ  ಚಲನವಲನದಿಂದ
ಭೂಮಿಯ ಮೇಲೆ ಆಗೋ ವ್ಯತ್ಯಾಸ ತಿಳಿಯಬಹುದು.
ಆದರೆ,ಭೂಮಿಯ ಮೇಲಿದ್ದು  ತನ್ನ ರಾಜಕೀಯದಲ್ಲಿ  ಮಾನವ  ಯಾವ ರೀತಿ ನಡೆದರೆ ಗ್ರಹಗಳು  ಯಾವ  ಪರಿಣಾಮ ಬೀರುವುದೆಂಬ  ಒಳಸತ್ಯ ತಿಳಿಸುವವರೇ  ಜ್ಞಾನಿಗಳು.
ಭಾರತ  ಜ್ಞಾನಿಗಳ‌ ದೇಶವಾಗಿತ್ತು.ವಿದೇಶದ ವಿಜ್ಞಾನ
ಹೆಚ್ಚಾದ  ಕಾರಣ  ಇಂದಿನ  ಭಾರತ  ಹಿಂದುಳಿದವರ
ಪಾಲಾಗಿದೆ.ಆಡಳಿತ ನಡೆಸೋರಿಗೆ   ಹಣ,ಅಧಿಕಾರ
ಬೇಕು .ಜ್ಞಾನದ  ಸತ್ಯ ತಿಳಿಯದೆ, ಗ್ರಹಚಾರವನ್ನ
ದೇಶಕ್ಕೆ  ಅಂಟಿಸಿಕೊಂಡು   ಗ್ರಹಗಳಂತೆ  ಜನರಿಗೆ
ಆಚಾರ,ವಿಚಾರ,ಪ್ರಚಾರ ಮಾಡೋರಿಗೆ  ಗ್ರಹಚಾರ
ಇಲ್ಲವೆ?.ಇದ್ದರೂ  ಯಾರ ಕಣ್ಣಿಗೆ ಕಾಣದೆ, ಅದಕ್ಕೂ
ಸರ್ಕಾರ  ಕಾರಣವೆಂದು  ಪ್ರಚಾರ ಮಾಡಬಹುದು.
ಇದು  ಸತ್ಯ. ಇಲ್ಲಿ ಸರ್ಕಾರ. ಎಂದರೆ ಸಹಕಾರ.
ಎಲ್ಲಿಯವರೆಗೆ ಮಾನವ ಸತ್ಕರ್ಮದಿಂದ,ಸ್ವಾಭಿಮಾನ, ಸ್ವಾವಲಂಬನೆಯ ಜೀವನ ನಡೆಸದೆ,ಪರಾವಲಂಬನೆಯಲ್ಲಿ  ಸರ್ಕಾರದ ಹಿಂದೆ  ನಡೆದು  ದುಡಿಯದೆ  ಸಾಲ  ಮಾಡುತ್ತಾನೋ ಅಲ್ಲಿಯವರೆಗೆ   ಹಣವೇನೂ  ಸಿಗುತ್ತದೆ.ಅದರಿಂದ ಜ್ಞಾನ ಕುಸಿದು  ಸಾಲ ಬೆಳೆದು  ಆತ್ಮಹತ್ಯೆಗೆ   ಶರಣಾಗುತ್ತಾನೆ.ಸ್ವಲ್ಪ  ಜ್ಞಾನವಿರೋರಿಗೆ  ಸತ್ಯದರ್ಶನ ಮಾಡಿಸಲು ಶನಿಮಹಾತ್ಮ ತನ್ನ ದಾರಿಗೆಳೆದು   ಜೀವನದ ಸತ್ಯದರ್ಶನ  ಮಾಡಿಸುತ್ತಾನೆ.ಅಂದರೆ  ಗ್ರಹಗಳನ್ನು ಸೂಕ್ಷ್ಮವಾಗಿ ತಿಳಿದು‌ ಮಾನವ ಬದುಕಿದರೆ,
ಗ್ರಹಚಾರದ  ಪ್ರಭಾವ   ತೀರ್ವವಾಗಿರೋಲ್ಲ.
ಮಾನವನ  ಧರ್ಮಕರ್ಮಕ್ಕನುಗುಣವಾಗಿ  ಭೂಮಿ
ನಡೆದಿದೆ.ಭೂತಾಯಿಯನ್ನೇ   ಅಗೆದು  ಬದುಕಿದರೆ
ಗ್ರಹಚಾರ  ಹೆಚ್ಚು.  ಭೂಮಿಯನ್ನು  ಸರಿಯಾಗಿ ತಿಳಿ
ದು  ಆಕಾಶಕ್ಕೆ  ಹಾರಬಹುದು.ಆದರೂ  ಮಾನವನ
ಜನ್ಮ  ಭೂಮಿಯಲ್ಲೇ  ಮರಣವೂ  ಇಲ್ಲೇ.ಇದನ್ನ
ತಪ್ಪಿಸಲು  ,ತಡೆಯಲು  ಮಾನವನಿಗೆ  ಅಸಾಧ್ಯ.
ಯೋಗಿಗಳಂತೆ   ಬದುಕಿದರೆ  ರೋಗ ಬರುವುದಿಲ್ಲ.
ಯೋಗಿಯ  ಹೆಸರಲ್ಲಿ  ಭೋಗ ಜೀವನ  ನಡೆಸುವುದು
ರೋಗವೆ.
ಯೋಗಾ + ಯೋಗ  =  ನಿರೋಗದಯೋಗ
ಯೋಗ+ಭೋಗ= ರೋಗ
ಭೋಗ+ಭೋಗ=ಭವರೋಗ.
ಜ್ಞಾನದಿಂದ ಯೋಗ,ಭಕ್ತಿ ಯಿಂದ  ಯೋಗ,ಕರ್ಮದಿಂದ   ಯೋಗ  ದೊರೆಯಲು  ಮಾನವ  ಮೈ ಮನಸ್ಸನ್ನ  ಒಂದಾಗಿಸಿ  ಬದುಕಬೇಕು.ಯೋಗ ಎಂದರೆ ಸೇರುವುದು.
ರಾಜಯೋಗವೆಂದರೆ  ರಾಜನಂತೆ ಆಳೋದಲ್ಲ.
ತನ್ನತಾನರಿತು ಧರ್ಮದ  ಜೀವನ ನಡೆಸೋದು.
ಈಗಿನ  ಪ್ರಚಾರಕರಿಗೆ ಅಧಿಕಾರ,ಹಣವಿದ್ದರೂ  ತನ್ನ ತಾನು
ತಿಳಿದು  ಸ್ವತಂತ್ರ ಜ್ಞಾನದಿಂದ ನಡೆಯಲಾಗದೆ ಅರ್ಧಸತ್ಯದ
ವಿಚಾರಗಳಿಂದ ಜನರನ್ನು ಮುಂದೆ ನಡೆಯದಂತೆ ತಡೆದರೆ
ಕಷ್ಟ ನಷ್ಟ  ಮನುಕುಲಕ್ಕೆ  ತಪ್ಪಿದ್ದಲ್ಲ. ಗುರುವಿನಿಂದ  ಸತ್ಯಜ್ಞಾನ , ಸತ್ಯದಿಂದ ಧರ್ಮ ಕರ್ಮ, ಹಣ ಅಧಿಕಾರ  ಇವು
ಅತಿಯಾದರೆ ಅಹಂಕಾರ ಸ್ವಾರ್ಥ ಕ್ಕೆ ಜೀವ ಕಟ್ಟುಬಿದ್ದು ಮತ್ತೆ 
ಸಂಕಷ್ಟ ಸಮಸ್ಯೆ,ಇದನ್ನು ತಡೆಯಲು  ತಿರುಗಿ ದಾನ ಧರ್ಮ
ಗುರು ಗುರಿಯ ಕಡೆಗೆ ಜೀವನ ಪ್ರಯಾಣ. ಹೀಗೆ  ಮರಳಿ ಭಗವಂತನೆಡೆಗೆ  ಸಾಗಲು ಗುರುವಿನ ಜೊತೆಗೆ ಗುರಿ ಅಗತ್ಯ.
ಗುರಿ ಆಧ್ಯಾತ್ಮದ ಕಡೆ ಇದ್ದರೆ ಮುಕ್ತಿ. ಜನನ ಮರಣದ ನಡುವಿನ ಮಾನವನ ಜೀವನ  ಅರ್ಧಸತ್ಯದಲ್ಲಿ ಅತಂತ್ರವಾಗಿ
ಸಮಸ್ಯೆಗಳನ್ನು  ಹೆಚ್ಚಿಸಿಕೊಂಡು ರೋಗಕ್ಕೆ ಒಳಗಾದರೆ  ಇದಕ್ಕೆ ಔಷಧ ಆಧ್ಯಾತ್ಮದಲ್ಲಿರುತ್ತದೆ. 
ಇದು  ಕಾಯಕವೇ  ಕೈಲಾಸವಾದರೆ  ಕರ್ಮಯೋಗಿ.

ಜ್ಞಾನವನ್ನು  ಹಂಚಿಕೊಳ್ಳಬಹುದು. ಆದರೆ ಎಂತಹ ಜ್ಞಾನವನ್ನು ಹಂಚಿಕೊಂಡರೆ ದೈವತ್ವದೆಡೆಗೆ ನಡೆಯಬಹುದೆನ್ನುವ ಸತ್ಯ ತಿಳಿದು ತಿಳಿಸುವವರಿಗೆ  ಇಂದಿಗೂ ಅವಮಾನ. ಹೀಗಾಗಿ ಅಭಿಮಾನಿ ದೇವತೆಗಳೆನ್ನಿಸಿಕೊಂಡವರು  ಹೊರಗೆ ಗುರುವನ್ನು ಅರಸುತ್ತಾ ಗುರಿ ಸರಿಯಿಲ್ಲದೆ ದಾರಿತಪ್ಪಿದಾಗ ನಿಜವಾದ ಗುರುವಿಗಾಗಿ ಹಿಂದಿರುಗಿ ಹಿಂದೂ ಧರ್ಮಕ್ಕೆ ಬರಲೇಬೇಕು.
ವಿಶ್ವದ ತುಂಬಾ ಹಿಂದೂಗಳಿರುವರು ಹಿಂದೂಸ್ತಾನ್ ಎನಿಸಿಕೊಂಡಲ್ಲಿ  ಹಿಂದುಳಿದಿರುವರು ಬೆಳೆದಿರುವರೆಂದರೆ ನಮ್ಮ ಮೂಲ ಗುರುವನ್ನು ಶಿಕ್ಷಣವನ್ನು ಬಿಟ್ಟು ಹೊರನಡೆದವರು  ಮುಂದೆ ಹೋಗಿದ್ದರೂ ಸತ್ಯ ಒಂದೇ .ಒಳಗಿರುವ ಆತ್ಮ ಬಿಟ್ಟು ಹೊರಗಿನ ಆತ್ಮನೊಂದಿಗೆ ಬದುಕಬಹುದೆ? ಕಣ್ಣಿಗೆ ಕಾಣದ ಶಕ್ತಿ ಬಿಟ್ಟು ಕಾಣುವ ಶಕ್ತಿ ಇದೆಯೆ?  ಎಲ್ಲೆಡೆಯೂ ಸಮಾನವಾಗಿ ಹರಡಿಕೊಂಡಿರುವ ಅಣು ಪರಮಾಣುಗಳಾಗಲಿ,ಜೀವಾತ್ಮ ಪರಮಾತ್ಮನ ಸತ್ಯ ಅರ್ಥ ವಾಗೋದಕ್ಕೆ  ಆತ್ಮಜ್ಞಾನಬೇಕಿದೆ.

ಜ್ಞಾನ ಎಂದರೆ ತಿಳುವಳಿಕೆ. ಇದರಲ್ಲಿ ಆತ್ಮಜ್ಞಾನ,ವಿಜ್ಞಾನವೆರಡೂ ಸಮಾನವಾಗಿ ಅರ್ಥ ಮಾಡಿಕೊಂಡರೆ ಆತ್ಮವಿಶ್ವಾಸದ ಸುಜ್ಞಾನ. ವಿರುದ್ದದಿಕ್ಕಿನಲ್ಲಿ ನಡೆದರೆ ಅಜ್ಞಾನದ ಅಹಂಕಾರವಾಗುತ್ತದೆ. 
ಭೂಮಿ ಆಕಾಶದಲ್ಲಿ ಚಲಿಸುತ್ತಿದ್ದರೂ ಮನುಕುಲದ ಚಲನೆ ಭೂಮಿಯಮೇಲೇ ಇರುತ್ತದೆ.ಈ ಸಾಮಾನ್ಯ ಜ್ಞಾನವಿಲ್ಲದೆ ಆಕಾಶದೆತ್ತರ ಹಾರಿ ಅಹಂಕಾರ ಪಟ್ಟವರು ಕೆಳಗೆ ಭೂಮಿಯ ಮೇಲೆ ಬಿದ್ದೇ  ಜೀವ ಹೋಗಬೇಕು. ದೇವಾನುದೇವತೆಗಳಿಗೂ  ಇದು ಅನ್ವಯಿಸುತ್ತದೆ ಎನ್ನುವ ಸತ್ಯಜ್ಞಾನವಿದ್ದರೆ  ಉತ್ತಮ ಜೀವನವಾಗುತ್ತದೆ.

ವಿವೇಕಾನಂದರ ಯುವಶಕ್ತಿ ಇಂದಿದೆಯೆ?

ದೇಶದ ಯುವಕರು ವಿದೇಶದೆಡೆಗೆ ಮುಖಮಾಡಿಕೊಂಡು ಸ್ವದೇಶ ದ ವಿರುದ್ದ ಕೂಗುತ್ತಿರುವುದರ ಹಿಂದೆ ಯಾರ ಕೈವಾಡವಿದೆ? 
ಪ್ರಜಾಪ್ರಭುತ್ವ ದ ಅರ್ಥ ತಿಳಿದವರು ಎಚ್ಚರವಾದರೆ ಉತ್ತಮ ಇಲ್ಲಿ ಯುವಪೀಳಿಗೆಗೆ ಹಣ ಅಧಿಕಾರದ ಆಮಿಷ ಒಡ್ಡಿ ತಮ್ಮ ಬೇಳೆ ಬೇಯಿಸಿಕೊಂಡು ಆಳುವವರೆ ಹೆಚ್ಚು.ರಾಜಕೀಯತೆ ಧಾರ್ಮಿಕ ಕ್ಷೇತ್ರವನ್ನೂ ಆವರಿಸಿರುವಾಗ ಇದರಿಂದ ಹೊರ ಬಂದು ವಾಸ್ತವತೆಯನ್ನು ಸರಿಯಾಗಿ ತಿಳಿಯುವುದಕ್ಕೂ ಯುವಶಕ್ತಿಗೆ  ಸಮಯವಿಲ್ಲವೆ? ಅಥವಾ ತಿಳಿಸುವವರಲ್ಲಿಯೆ ರಾಜಕೀಯವಿದೆಯೆ?
ಸ್ವಾಮಿ ವಿವೇಕಾನಂದರು ಅಮೇರಿಕಾದಲ್ಲಿ ಭಾಷಣ ಮಾಡಿದ್ದನ್ನು ಹಿಡಿದುಕೊಂಡು ಅಮೇರಿಕಾದೆಡೆಗೆ ಹೋಗಲು ದೇಶದ  ಹಣ ಬಳಸುವರು.ಒಂದೊಂದು ಕಾರ್ಯಕ್ರಮ ನಡೆಸಲೂ ಹಣ ಬೇಕು ಆದರೆ ಅವರಲ್ಲಿದ್ದ ದೇಶಭಕ್ತಿ ಇಲ್ಲದ ಯುವಪೀಳಿಗೆ ವಿದೇಶದಲ್ಲಿ ಕುಳಿತು ದೇಶದ ಬಗ್ಗೆ ಮಾತಾಡಿ ಒಳಗಿದ್ದ ನಿಜವಾದ ದೇಶಭಕ್ತರನ್ನು  ಗಮನಿಸುವ ಜ್ಞಾನವಿಲ್ಲದೆ ತಾವೇ ಸಾಧಕರೆನ್ನುವಂತೆ ವರ್ತಿಸಿ  ಆಳುವುದು ಅಧರ್ಮ . ಇದು  ಧರ್ಮ, ದೇವರು, ಜಾತಿ,ಪಕ್ಷಗಳವರೆಗೆ ಹರಡಿಕೊಂಡು ದ್ವೇಷ ಹೆಚ್ಚಿಸುವವರಿಗೆ ಒಳ್ಳೆಯ ಸಹಕಾರ ಕೊಟ್ಟಂತಿದೆ. ವಿದೇಶಿಗಳು ಭಾರತದೇಶದ ಜ್ಞಾನಿಗಳು ಬುದ್ದಿವಂತರನ್ನು  ಖರೀದಿಸಲು  ಹೊರಟಿವೆ.ನಮ್ಮವರು ಇದನ್ನು ಪ್ರಗತಿ ಎಂದು ಮಕ್ಕಳನ್ನು ಕಳಿಸುತ್ತಿದ್ದಾರೆಂದರೆ ಇಲ್ಲಿ ದೇಶಭಕ್ತಿಯಿಲ್ಲ. ತೋರುಗಾಣಿಕೆಯ ನಾಟಕವನ್ನು ಸತ್ಯವೆಂದರಿತ ಜನಸಾಮಾನ್ಯರು ಕುರಿಗಳಂತೆ  ಹಿಂದೆ ನಡೆದು ತಿರುಗಿ ಬರಲಾಗದೆ ಸಾಯುತ್ತಿದ್ದಾರೆ. ಹಣದಿಂದ ಜನರನ್ನು ಖರೀದಿಸುವುದೇ ಅಜ್ಞಾನ.  ರಾಜಕಾರಣಿಗಳಂತೂ ದೇಶವನ್ನು  ವಿದೇಶಿ ಬಂಡವಾಳ ,ಸಾಲದ ವ್ಯವಹಾರಕ್ಕೆ  ಬಳಸಿಕೊಂಡು  ವೈಭೋಗದೆಡೆಗೆ  ನಡೆದಿರೋದು ದುರಂತ.
ಹಿಂದೂ ರಾಷ್ಟ್ರ ಮಾಡೋರ ಲಕ್ಷಣವೆ ಇದು? ಮೊದಲು ನಾವುಬದಲಾಗಬೇಕು. ನಾವುಹಿಂದಿನ ಮಹಾತ್ಮರಂತೆ ಅಧ್ಯಾತ್ಮದಲ್ಲಿ  ನಡೆದು ನುಡಿಯಬೇಕು.  ಇಲ್ಲಿ ಎಲ್ಲಾ ಮುಂದಿನ ಚಿಂತೆ ಇಂದಿನ ಸತ್ಯ ಅರ್ಥ ವಾಗದೆ ಹಿಂದಿನ ಸತ್ಯವರಿತು ಮುಂದೆ ನಡೆದರೆ  ಆಗೋದೇ ಹೀಗೆ.  ಯೋಗದಿನಾಚರಣೆಯ ಮೂಲಕ ಯೋಗಾಸನದ ಮೂಲಕ ದೇಶದ ಜನರನ್ನು ಯೋಗಿ ಮಾಡಲಾಗದು. ಪ್ರತಿದಿನ ಯೋಗ್ಯ ವಿಚಾರಗಳಿಂದ ತಮ್ಮ ಯೋಗ್ಯತೆಯ ಕಡೆಗೆ ಗಮನಹರಿಸಿ ಯೋಗ್ಯದಿಕ್ಕಿನಲ್ಲಿನಡೆದುಯೋಗ್ಯಪ್ರಜೆಗಳಾಗು
ವಂತಹ ಶಿಕ್ಷಣವನ್ನೇ ಕೊಡದೆ ಯೋಗ ಮಾಡುತ್ತಾ ವಿದೇಶದೆಡೆಗೆ ನಡೆದರೆ  ಇದರಲ್ಲಿ ಯಾವ  ಉದ್ದೇಶವಿದೆ? ಒಟ್ಟಿನಲ್ಲಿ ದೇಶಕ್ಕಾಗಿ ನಾವೇನೂ ಮಾಡುವ ಅಗತ್ಯವಿಲ್ಲ. ಕೊನೆಪಕ್ಷ ವಿದೇಶ ಮಾಡದಿದ್ದರೆ ಸಾಕು. ಅಂದರೆನಮ್ಮೊಳಗೇ
 ಇರುವ ಸತ್ಯಜ್ಞಾನದಿಂದ ಸತ್ಯ ತಿಳಿದು ಹಿಂದಿರುಗಿ ಬಂದರೆ  ನಮ್ಮ ಮೂಲದ ಧರ್ಮ ಕ್ಕೆ ಬಲ ಬರುವುದು. ಧರ್ಮ ಹೊರಗಿಲ್ಲ ಒಳಗೇ ಇದೆ.ಎಲ್ಲಾ ದೇಶದ ಮೂಲ ಧರ್ಮ ಕರ್ಮ  ಆ ದೇಶದ ಶಿಕ್ಷಣದಲ್ಲಿಯೇ ತಿಳಿಸಿ ಕಲಿಸುವುದರ ಮೂಲಕದೇಶಭಕ್ತಿಹೆಚ್ಚುವುದು.ಆತ್ಮವಿಶ್ವಾಸಆತ್ಮಜ್ಞಾನದಿಂದ 
 ಆತ್ಮನಿರ್ಭರ ಆಗುವುದು. ಇದನ್ನು ಯಾರೋ ಹೊರಗಿನಿಂದ ಬಂದು ಕೊಡಲಾಗದು ಒಳಗಿರುವವರೆ ಬೆಳೆಸಬೇಕಿದೆ. ಒಟ್ಟಿನಲ್ಲಿ ರಾಜಕೀಯವೆಂದರೆ ಬೇರೆಯವರನ್ನು ಆಳುವುದಾಗಿದೆ. ಪ್ರಜಾಪ್ರಭುತ್ವ ಎಂದರೆ ನಮ್ಮನ್ನು ನಾವು ಆಳಿಕೊಳ್ಳಬೇಕಿತ್ತು. ಈಗ ದೇಶದಿಂದ ನನಗೇನೂ ಲಾಭವಿಲ್ಲವೆಂದು ವಿದೇಶಿಗರ ಕೈಕೆಳಗೆ ದುಡಿಯುವ ಯುವಪೀಳಿಗೆಯಲ್ಲಿ ದೇಶಭಕ್ತಿ ಇರಲು ಸಾಧ್ಯವೆ? ವಿದೇಶದ ಋಣ ತೀರಿಸದೆ ದೇಶದ ಋಣ ತೀರಿಸಲಾಗದು.ಆದರೂ ಇಲ್ಲಿನ ನೆಲಜಲದ ಋಣ ತೀರಿಸಲು  ದೇಶಕ್ಕಾಗಿ ಸೇವೆ ಮಾಡುವುದು  ಧರ್ಮ. ಅದು ಬಿಟ್ಟು ಇನ್ನೂ ಸರ್ಕಾರವೇ ನಮ್ಮ ನ್ನು ಸಾಕಬೇಕೆಂದರೆ  ಅಜ್ಞಾನ.
ಸಾಲದ ಹಣದಲ್ಲಿ ಎಷ್ಟೇ ಆಸ್ತಿ ಅಂತಸ್ತು ಅಧಿಕಾರ ಪಡೆದರೂ  ಅದನ್ನು  ತೀರಿಸಲು ಜ್ಞಾನ ಅಗತ್ಯವಿದೆ. ಜ್ಞಾನ ಎಂದರೆ ಹೊರಗಿನ  ವಿಜ್ಞಾನವಲ್ಲ ಒಳಗಿರುವ ಆತ್ಮಜ್ಞಾನ.
ಒಂದು  ಸಣ್ಣ ಜೀವ ಸಾಕಿಕೊಳ್ಳುವ ಯೋಗ್ಯತೆ ಇಲ್ಲದವರು ದೇಶ ಕಟ್ಟಿ ಬೆಳೆಸಬಹುದೆ? ಜನರ ಹಣದಲ್ಲಿ  ಜೀವನ ನಡೆಸಿ ಜನರನ್ನು ದಾರಿತಪ್ಪಿಸಿ ಆಳುವವರ ಸಂಖ್ಯೆ ಬೆಳೆದಿರೋದು  ಅಧರ್ಮ ಭ್ರಷ್ಟಾಚಾರವಾಗಿದೆ. ತನ್ನದಲ್ಲದ ವಿಷಯ ವಸ್ತು ಒಡವೆ, ದೇಶ,ಭಾಷೆ,ಧರ್ಮ ವನ್ನು ತನ್ನದೆನ್ನುವಂತೆ ನಾಟಕ ಆಡಿ ಜನರನ್ನು ಮೋಸಮಾಡುವುದೇ  ಅಧರ್ಮ ಕ್ಕೆ ಕಾರಣ. ಇದು ಪ್ರತಿಷ್ಠಿತ  ಶ್ರೀಮಂತ ವರ್ಗ ಮಧ್ಯವರ್ತಿಗಳ ಸಹಾಯದಿಂದ  ನಡೆಸುತ್ತಿರುವ ರಾಜಕೀಯವಾಗಿದೆ. ಇದರಲ್ಲಿ  ದೇಶಕ್ಕೆ ಏನು ಸಿಕ್ಕಿದೆ? ಜನರ ಸಾಲ ತೀರಿತೆ? ನಮ್ಮ ಧರ್ಮ ರಕ್ಷಣೆಯಾಗಿದೆಯೆ?  ಪ್ರಜೆಗಳೇ ಸಾಮಾನ್ಯಜ್ಞಾನದಿಂದ ತಿಳಿಯುವವರೆಗೆ ಬದಲಾವಣೆ ಕಷ್ಟ.
ಮಹಾತ್ಮರು ಹೇಳಿದ್ದೇ ಒಂದು ಮಹೋದಯರು ಹೇಳೋದೆ ಬೇರೊಂದು. ಎಲ್ಲಾ ತಮ್ಮ ಸ್ವಾರ್ಥ ದ ರಾಜಕೀಯಮಯ ಜಗತ್ತು. ಆದರೆ  ಒಳಗಿನ ಜಗತ್ತು ಎಲ್ಲದ್ದಕ್ಕೂ ಸಾಕ್ಷಿಯಾಗಿದೆ. ತಿರುಗಿ ಬರೋವಾಗ ಕಾದಿದೆ ಆಪತ್ತು.ದೇಶವನ್ನು ವಿದೇಶ ಮಾಡಿದರೆ ವಿದೇಶದೊಳಗೆ ದೇಶ ಸಿಲುಕುತ್ತದೆ  ಅಂದರೆ ವಿದೇಶಿಗಳ ಅಧಿಕಾರಕ್ಕೆ  ದೇಶದ ಯುವಪೀಳಿಗೆ ಬಲಿಯಾಗುತ್ತಾರೆ. ಹಿಂದೆ ಹೀಗೇ ನಡೆದಿತ್ತು ಈಗ ಇತಿಹಾಸ  ಪ್ರಚಾರ ಮಾಡಿ ಇತಿಹಾಸದೆಡೆಗೆ ಹೊರಟಿದ್ದಾರೆ.ಇದಕ್ಕೆ ಕಾರಣ ಇತಿಹಾಸ ಪುರಾಣ ಕಾಲದಲ್ಲಿದ್ದ ಶಿಕ್ಷಣ ಕೊಡದೆ ಆಳಿದ ರಾಜಕೀಯ ವ್ಯವಸ್ಥೆ. ಎಲ್ಲಾ ಪಕ್ಷಗಳಿಗೂ ದೇಶದ ಆರ್ಥಿಕ ಸ್ಥಿತಿ  ಉತ್ತಮವಾಗಿಡುವ ಉದ್ದೇಶ. ಆದರೆ ಜನರ ಜ್ಞಾನ ಗುರುತಿಸುವ ಶಿಕ್ಷಣವಿಲ್ಲದೆ ವಿದೇಶಿ ವಿಜ್ಞಾನದಿಂದ ಜನರನ್ನು ವಿದೇಶದವರೆಗೆ ಕಳಿಸಿ  ಅಳಿದುಳಿದವರನ್ನು ಆಳಿ ಅಳಿಸುವುದೇ  ಆಗಿದೆ. ವಿದೇಶಕ್ಕೆ ಹೋದವರ ಆಸ್ತಿ ಪಾಸ್ತಿಗೆ ವಾರಸುದಾರರಿಲ್ಲದೆ ಕೊಳೆತರೂ ಕೇಳೋರಿಲ್ಲ. ಎಂತಹ ಅಜ್ಞಾನ. ನಮ್ಮ ಪೂರ್ವಜರ ಆಸ್ತಿ ಬೇಕು ಅವರ ಧರ್ಮ ಕರ್ಮ ಭೂಮಿ ಸೇವೆಯ ಜ್ಞಾನ ಬೇಡವೆಂದರೆ  ಹಿಂದೂ ಧರ್ಮದ  ಹಿಂದುಳಿಯುವಿಕೆಗೆ ಇದೇ ಕಾರಣ.ನಮ್ಮವರನ್ನೇ ನಮ್ಮತನ ವನ್ನೇ ಮರೆತು ಬಿಟ್ಟು ಹೋದರೆ ನಮ್ಮವರು ಯಾರು? ಪರಕೀಯರೆ? ಇರಬಹುದು ಕಾರಣ ಅವರು ನಮಗೆ ಆಶ್ರಯ ಕೊಟ್ಟಿರುವಾಗ ಅವರ ಋಣ ನಮಗಿದೆ. ಇದಕ್ಕೆ ಕಾರಣವೇ  ಶಿಕ್ಷಣ.ಹಾಗಾಗಿ ಅವರ ಧರ್ಮಕ್ಕೆ ಜಯ.ಹಿಂದೂಗಳ ಮಂತ್ರ ಇಸ್ಲಾಂ ರ ತಂತ್ರ ಮುಸ್ಲಿಂ ರ ಯಂತ್ರದಿಂದ  ಮನುಕುಲ ಸ್ವತಂತ್ರವಾಗಿದ್ದರೂ ಅತಂತ್ರಸ್ಥಿತಿಗೆ  ತಲುಪಲು ಕಾರಣವೇ  ದ್ವೇಷದ ರಾಜಕೀಯ.
ಒಂದಂತೂ ಸತ್ಯ ಮನುಕುಲವಿರೋದು ಭೂಮಿ ಮೇಲೆ.
ಭೂಮಿಯ ಋಣ ತೀರಿಸಲು  ಭೂ ಸೇವೆ ಮಾಡಬೇಕು. ಸೇವೆಯಲ್ಲಿ  ಸತ್ಯ ಧರ್ಮ ವಿರಬೇಕು. ಈಗ ಎಲ್ಲಿದೆ ಹುಡುಕಬೇಕಿದೆ.ಸಿಗದಿದ್ದರೆ ಒಳಗೇ ಇರುತ್ತದೆ ಬೆಳೆಸಿಕೊಂಡರೆ  ಆತ್ಮಜ್ಞಾನದಿಂದ ಶಾಂತಿ ಮುಕ್ತಿ. ಹೊರಗೆ ನಡೆದಷ್ಟೂ ಸಿಗೋದಿಲ್ಲ. ದೇವರನ್ನು ಹೊರಗೆ  ಬೆಳೆಸೋ ಮೊದಲು ದೈವತ್ವದ ಜ್ಞಾನ ಒಳಗಿದ್ದರೆ ಉತ್ತಮ . ದೇವರಿರೋದೆಲ್ಲಿ?ಅಸುರರೊಳಗೇ ಸುರರು  ಸೇರಿಕೊಂಡರೆ ಆಗೋದೇ ಹೀಗೆ.ರಾಜಕೀಯ ಧರ್ಮ ದ ಹಾದಿಯಲ್ಲಿರಬೇಕಿತ್ತು ಆದರೆ ಧರ್ಮದ ಹೆಸರಿನಲ್ಲಿ ರಾಜಕೀಯ ಬೆಳೆದು ಆಧರ್ಮ  ಮಿತಿಮೀರಿದೆ.  ಯಾರೋ ಯಾರದ್ದೋ ಸಾಲ ತೀರಿಸಲಾಗದು ಎನ್ನುವ ಸತ್ಯ ತಿಳಿದಾಗಲೇ ಅವರವರ ಸಾಲ ತೀರಿಸಲು  ಜನ ಮುಂದೆ ಬರುವರು. ಇದಕ್ಕೆ ಸರ್ಕಾರಗಳೇ ಬಿಡದೆ  ಉಚಿತ ಕೊಟ್ಟು ಸಾಲ ಬೆಳೆಸಿದರೆ  ಸಮಸ್ಯೆಗೆ ಪರಿಹಾರ ಸಿಗದು. ಅನುಭವಿಸಿಯೇ ತೀರಬೇಕಷ್ಟೆ.  ಕಲಿಗಾಲದಲ್ಲಿ ಹೆಚ್ಚು ಜನರು ಧರ್ಮದ ಹೆಸರಿನಲ್ಲಿ ಅಧರ್ಮದ ರಾಜಕೀಯ  ಬೆಳೆಸಿ  ನಮ್ಮವರನ್ನೇ ಆಳುವಾಗ  ಕಲಿಕೆಯಲ್ಲಿ  ಅಜ್ಞಾನವಿದೆ ಎಂದರ್ಥ. ಶಿಕ್ಷಣದ ವಿಚಾರವನ್ನು  ತಿಳಿಸಿದರೂ  ತಲೆಕೆಡಿಸಿಕೊಳ್ಳದವರು  ಧರ್ಮದ ವಿಚಾರದಲ್ಲಿ ತಲೆಕೆಡಿಸಿಕೊಂಡರೆ  ಉಪಯೋಗವಿಲ್ಲ. ಒಳಗೆ ಸೇರಿಸುವ ವಿಷಯದಲ್ಲಿಯೇ ಅಧರ್ಮ ವಿದ್ದರೆ  ಧರ್ಮ ರಕ್ಷಣೆ ಹೇಗೆ ಆಗುತ್ತದೆ. ಸಾಮಾನ್ಯಜ್ಞಾನದ ಕೊರತೆ ವಿಜ್ಞಾನ ಜಗತ್ತನ್ನು ಆಳಲು ಹೊರಟು ಅಜ್ಞಾನವೇ ಹೆಚ್ಚಾಗಿದೆ.

ಆತ್ಮವಿಶ್ವಾಸ ಒಳಗಿದೆಯೋ ಹೊರಗಿದೆಯೋ?

🌹 *ಸ್ಪೂರ್ತಿ ಕಿರಣ*🌹

*ನಿಮಗೆ ಯಾವುದು ಭಯ ಅಥವಾ ಅಂಜಿಕೆ ಹುಟ್ಟಿಸುತ್ತದೋ*, *ಅದನ್ನೇ ಧೈರ್ಯದಿಂದ ಮಾಡಿ ಯಶಸ್ವಿಯಾಗುವುದು ಆತ್ಮವಿಶ್ವಾಸವನ್ನು ಗಳಿಸಿಕೊಳ್ಳಬಹುದಾದ ಸುಲಭ ಮಾರ್ಗ*. 

*ಯಾವತ್ತೂ ಠೇವಣಿಯಾಗಿ ಇರುವಂಥದ್ದು ಮಾತ್ರ ಆತ್ಮವಿಶ್ವಾಸ. ಅದನ್ನು ಹೆಚ್ಚಿಸಿಕೊಳ್ಳುತ್ತಾ ಹೋಗಬೇಕು.

ಸತ್ಯಂ ವದ ಧರ್ಮಂ ಚರ. ಸತ್ಯ ಹೇಳೋದು‌ಕಷ್ಟ. ಹೇಳಿದರೆ ಯಾರಿಗೂ ಇಷ್ಟವಾಗೋದಿಲ್ಲ ಹಾಗಾದರೆ ಧರ್ಮದಲ್ಲಿ ‌ನಡೆಯಲು ಸಾಧ್ಯವೆ? ಸತ್ಯ ಧರ್ಮ ವೆನ್ನುವ ಜೋಡಿ ಪದದ ಮಧ್ಯೆ  ಅಸತ್ಯ ಅಧರ್ಮ ಗಳು  ಸ್ಥಾನಮಾನ ಪಡೆದಾಗ  ಮೂಲ ಸತ್ಯ ಮೇಲಿನ ಧರ್ಮ ಅಂತರ ಬೆಳೆಯುತ್ತಾ ಹೋಗುತ್ತದೆ. ಈ ಅಂತರವೇ ಅವಾಂತರ ಸೃಷ್ಟಿ ‌ಮಾಡಿ ಆಳುತ್ತವೆ. 
ಮಧ್ಯವರ್ತಿ ಮಾನವ ಮಹಿಳೆ ‌ಮಕ್ಕಳ  ಮಧ್ಯಸ್ಥಿಕೆ ಯಿಂದ ಸತ್ಯ ಬೆಳೆಯುವುದಕ್ಕೆ  ಅವಕಾಶವಿಲ್ಲವಾದರೆ  ಅಸತ್ಯದ ರಾಜಕೀಯವೇ ಬೆಳೆಯುತ್ತದೆ. 
ಒಬ್ಬರನ್ನು ಇನ್ನೊಬ್ಬರು ಆಳೋದೆಂದರೆ ಸುಲಭವಿಲ್ಲ. ಅದಕ್ಕೆ ಅವಕಾಶ ಸಹಕಾರ ಕೊಟ್ಟವರೆ ಆಳಾಗಿ ಹಾಳಾಗಿ ಹೋಗಿರೋದು ಇತಿಹಾಸ ಪುರಾಣ ತಿಳಿಸುತ್ತದೆ.
ಹಾಗಾಗಿ ನಮ್ಮನ್ನು ನಾವೇ ಅರ್ಥ ಮಾಡಿಕೊಂಡು ಪರಮಾತ್ಮನ ದಾಸರಾಗಿ,ಶರಣರಾಗಿದ್ದವರಲ್ಲಿ ಸತ್ತದ ಜೊತೆಗೆ ಧರ್ಮ ವಿತ್ತು. ಏಕಪಕ್ಷೀಯವಾಗಿ ಯಾವುದೇ ಧರ್ಮ ನಿಲ್ಲಬಾರದು. ಆದರೆ ಇಂದಿನ ಪ್ರಜಾಪ್ರಭುತ್ವದಲ್ಲಿ  ಎಲ್ಲಿ ಹಣ ಅಧಿಕಾರವಿದೆಯೋ ಅದು‌  ಭಗವಂತನ ಕೃಪೆ.ಅದನ್ನು ಸರಿಯಾಗಿ‌ಬಳಸದೆ ಭ್ರಷ್ಟಾಚಾರ ಕ್ಕೆ  ದಾರಿ ಮಾಡಿಕೊಟ್ಟರೆ  ಮುಗಿಯಿತು ಕಥೆ. ಹಾಗಾಗಿ ಆತ್ಮವಿಶ್ವಾಸ
ಇರಬೇಕು ಅಹಂಕಾರ ವಿರಬಾರದೆಂದರು.
ಭಯ ಭಕ್ತಿ  ಪರಮಾತ್ಮನಲ್ಲಿರಬೇಕು.ಪರಮಾತ್ಮನ ಅರಿವಿದ್ದರೆ  ಮಹಾತ್ಮರಾಗಬಹುದು. ಒಟ್ಟಿನಲ್ಲಿ ಸತ್ಯಕ್ಕೆ ಬೆಲೆಯಿಲ್ಲ ಧರ್ಮಕ್ಕೆ  ನೆಲೆಯಿಲ್ಲ ಎನ್ನುವ ಕಾಲದಲ್ಲಿರುವ ನಮ್ಮೊಳಗೇ ಸತ್ಯವಿದೆಯೆ ಧರ್ಮ ವಿದೆಯೆ ಕೇಳಿಕೊಳ್ಳಲು ಸಮಯವಿಲ್ಲವೆಂದರೆ ಹೊರಗಿನವರ ಸತ್ಯ ಧರ್ಮ ವನ್ನು ಟೀಕಿಸುವ ಅಗತ್ಯವಿಲ್ಲ.
ಆಧ್ಯಾತ್ಮದಿಂದ ಆತ್ಮನಿರ್ಭರ ವಾಗಬೇಕು. ಯಾವುದೋ ಹೊರದೇಶದ ಶಿಕ್ಷಣಬಂಡವಾಳ,ಧರ್ಮ ಸಂಸ್ಕೃತಿ ಭಾಷೆಯ ಜಪಮಾಡಿಕೊಂಡಿರುವ ಅಸಂಖ್ಯತ  ಜನರನ್ನು ಹಿಂದೆ ತರುವ ಪ್ರಯತ್ನ ಬಿಟ್ಟು ಹಿಂದೆ‌ನಡೆದು ಬರುತ್ತಿರುವ ಮುಂದಿನ ಪ್ರಜೆಗಳನ್ನು ಹಿಡಿದು ಬುದ್ದಿಕಲಿಸುವುದರಿಂದ ಪೋಷಕರಲ್ಲಿ ಅಡಗಿರುವ ಭವಿಷ್ಯದ ಚಿಂತೆ ಕರಗುತ್ತದೆ.
ಕಾಯೋನು ಒಳಗೇ ಇರೋವಾಗ ಮಕ್ಕಳನ್ನು ಅವನೆಡೆಗೆ ಕರೆದೋಯ್ಯುವ  ಸಂಸ್ಕಾರಯುತ ಶಿಕ್ಷಣ ನೀಡುವ ಸ್ವಾತಂತ್ರ್ಯ ನಮಗಿತ್ತು.ಬಳಸಿಲ್ಲವೆಂದರೆ ಈಗಲೂ ಸಮಯವಿದೆ. ಸಾಧ್ಯವಾದವರು  ಸದ್ಬಳಕೆ ಮಾಡಿಕೊಂಡರೆ ಪ್ರಜೆಗಳಾಗಿದ್ದಕ್ಕೆ ಸಾರ್ಥಕ. ಇದಕ್ಕೆ ಯಾಕೆ ಬೇಕು ಸರ್ಕಾರದ ಹಣದಿಂದ ಎಲ್ಲಾ ಸಾಧ್ಯವೆ?
ಸತ್ಯವೇ ದೇವರು.ಸತ್ಯವೇ ಗೆಲ್ಲೋದು, ಆತ್ಮಸಾಕ್ಷಿಯ ಮುಂದೆ ಯಾವ ಸತ್ಯವೇ ಇಲ್ಲ

ನಿಜವಾದ ಸಿರಿತನ ಯಾವುದು?

ಒಬ್ಬ ವ್ಯಕ್ತಿಯು ಸಿರಿವಂತನೋ, ಬಡವನೋ ಆಗಿರಬಹುದು ಆದರೆ ಅವರಲ್ಲಿರುವ ಜೀವಜ್ಯೋತಿಯು ಸಿರಿವಂತವಲ್ಲ ಬಡವವಲ್ಲ. ಒಬ್ಬ ವ್ಯಕ್ತಿಯು ವಿಶ್ವವಿದ್ಯಾಲಯದಲ್ಲಿ ನಾಲ್ಕು ವರ್ಷ ಓದಿದರೆ ಅವನಿಗೆ ವೈದ್ಯ, ವಕೀಲ, ಅಭಿಯಂತರ ಪದವಿಗಳನ್ನು ಕೊಡುತ್ತಾರೆ. ಆದರೆ ಒಬ್ಬ ವ್ಯಕ್ತಿಯು ನೂರು ವರುಷ ಬದುಕಿದರೂ ಅವನಲ್ಲಿರುವ ಜೀವಜ್ಯೋತಿಗೆ ಯಾವ ಪದವಿ ಪ್ರಶಸ್ತಿಗಳಿಲ್ಲ. ಲೌಕಿಕವಾದ ಭೌತಿಕವಾದ ನಮ್ಮ ಎಲ್ಲ ಪದವಿ, ಪ್ರಶಸ್ತಿಗಳನ್ನು ಮಾನ ಸನ್ಮಾನಗಳನ್ನು ಮೀರಿದ್ದು ಈ ಜೀವಜ್ಯೋತಿ ಪರಂಜ್ಯೋತಿ! ಮನೆ-ತೋರಿಸಬಹುದು, ಮನೆಯೊಳಗಿರುವ ಬಯಲನ್ನು ತೋರಿಸಲು ಬರುವುದಿಲ್ಲ. ನಮ್ಮ ದೇಹವೆಂಬ ಮನೆಯೊಳಗಿರುವ ಜೀವಜ್ಯೋತಿಯನ್ನು ಆತ್ಮವನ್ನು ತೋರಿಸಲಾಗದು. ನಾವು ಕಟ್ಟಿಸಿದ ಮನೆ ಒಮ್ಮೆ ಬೀಳಬಹುದು ಮತ್ತೆ ಅದನ್ನು ಕಟ್ಟಲು ಬರುತ್ತದೆ. ಮನೆಯೊಳಗಿರುವ ಬಯಲು ಬೀಳುವುದೂ ಇಲ್ಲ ಏಳುವುದೂ ಇಲ್ಲ. ಹಾಗೇ ದೇಹವು ಹೋಗಬಹುದು, ಬರಬಹುದು ಆದರೆ ಜೀವಜ್ಯೋತಿ, ಆತ್ಮಜ್ಯೋತಿ ಬರುವುದಿಲ್ಲ, ಹೋಗುವುದಿಲ್ಲ. ಅದು ನಿತ್ಯ ನೂತನ ಶಾಶ್ವತ.
 
ಪರಮ ಪೂಜ್ಯ ಶ್ರೀ *ಸಿದ್ಧೇಶ್ವರ ಸ್ವಾಮೀಜಿ* ಅವರ *ದೇವಮಂಡಲ* ಪುಸ್ತಕದಿಂದ ಪುಟ ೨೩.

ಬಡತನ ಸಿರಿತನದ  ಅಂತರದಲ್ಲಿ ಮನೆತನವೂ  ಮರೆತು ಹೋಗುತ್ತಿದೆ. ನಮ್ಮದು ಸಿರಿವಂತರ ಕುಟುಂಬವಾಗಿತ್ತು.ಈಗ ನಮ್ಮಲ್ಲಿ ಬಡತನವಿದೆ ಎನ್ನುವವರೊಮ್ಮೆ ಯೋಚಿಸಿದರೆ ಅಂದಿನ ಕಾಲದ ಶ್ರೀಮಂತ ರಲ್ಲಿದ್ದ  ಜ್ಞಾನಕ್ಕಿಂತ ಉನ್ನತಮಟ್ಟದ ಜ್ಞಾನ ನಮ್ಮೊಳಗೇ ಇದ್ದರೂ ಗುರುತಿಸುವ  ಶಿಕ್ಷಣವಿಲ್ಲದೆ  ಇಂದು ಬಡವರನ್ನು ಹಣದಿಂದ ಅಳೆಯುವ ಕಾಲ ಬಂದಿದೆ. ಅದೇ ಹಣವಂತರಲ್ಲಿ ಹೃದಯವಂತಿಕೆಯ ಕೊರತೆಯಿದೆ ಎಂದರೆ ಭಗವಂತನಿಗೆ ಹತ್ತಿರವಾಗಿರೋದು  ಹೃದಯವಂತಿಕೆಯುಳ್ಳ  ಬ್ರಾಹ್ಮಣ. ಇಲ್ಲಿ ಬ್ರಾಹ್ಮಣ ಎಂದರೆ ಜಾತಿಯಾಗೋದಿಲ್ಲ ಬ್ರಹ್ಮನ ಸತ್ಯವನರಿತು ಬ್ರಹ್ಮಾಂಡದಲ್ಲಿ  ಇದ್ದವರಾಗುವರು.ಎಲ್ಲಾ ಬ್ರಹ್ಮಾಂಡದ ಒಂದು ಸಣ್ಣ‌ಕಣವೆ ಆಗಿದ್ದರೂ ಅದನ್ನರಿಯದೆ  ಹೊರಗಿನಿಂದ ಮೇಲು ಕೀಳಿನ ರಾಜಕೀಯ ನಡೆಸಿದರೆ ನಿಜವಾದ ‌ಬಡವ ಎಲ್ಲೂ ಇಲ್ಲ. ಇದ್ದರೆ ಅದು ನಮ್ಮೊಳಗೇ ಇರೋದು.  ಎಷ್ಟು ಸಾಲ ಮಾಡಿ ಶ್ರೀಮಂತ ನಾಗಿದ್ದರೂ  ಅದನ್ನು  ತೀರಿಸಿ ಕೊಟ್ಟು ಹೋಗೋ ವರೆಗೂ ಆತ್ಮಕ್ಕೆ ಶಾಂತಿ ಮುಕ್ತಿ ಸಿಗದೆನ್ನುವುದು ಸನಾತನ ಧರ್ಮ.

ಯೋಗಕ್ಷೇಮಕ್ಕಾಗಿ ಸ್ತೋತ್ರ

ವಿಷ್ಣು ಸಹಸ್ರನಾಮದ ವಿಶೇಷ ಸ್ತೋತ್ರದಲ್ಲಿ ಎಲ್ಲಾ ಕ್ಷೇಮದಿಂದಿರಲು ಹೇಳಿಕೊಳ್ಳಬೇಕಾದ ಸ್ತೋತ್ರ 64 ನೇ ದಾಗಿದೆಯಂತೆ. ನಾವು ಎಷ್ಟೋ ಪೂಜೆ ಪುನಸ್ಕಾರ,ವ್ರತ ಕಥೆ ಸ್ತೋತ್ರ ಮಂತ್ರ ತಂತ್ರ ಯಂತ್ರಗಳಿಂದ  ಪರಮಾತ್ಮನ ಸೇವೆ ಮಾಡಿದರೂ ಈ ಭಯವೆನ್ನುವುದು ಒಳಗೇ ಇರುತ್ತದೆ ಎಂದರೆ  ಯಾವುದೇ ಸೇವೆ  ಮಾಡುವುದಕ್ಕೆ ನಮಗೆ ಹೊರಗಿನವರೆ ತಿಳಿಸಿರುವರು. ಒಳಗಿರುವವರು ಮಾಡಿಕೊಂಡು ಬಂದಿದ್ದರೂ  ನಮಗೆ ಅದರ ಅರಿವಿರೋದಿಲ್ಲ.ಕಾರಣ ನಮ್ಮ  ವಿಧ್ಯಾಭ್ಯಾಸವೇ  ಹಾಗಿದೆ.
ಮಕ್ಕಳಿಗೆ  ಸಂಸ್ಕಾರ ಸಂಸ್ಕೃತಿ ಭಾಷೆ ಧರ್ಮ ಸತ್ಯವನ್ನು ತಿಳಿಸಿ‌ಬೆಳೆಸುವುದೆ ಪರಮಾತ್ಮನ ಸೇವೆ ಎಂದಾಗ ಮಾತ್ರ
ಅದರೊಂದಿಗೆ ಬೆಳೆದವರಲ್ಲಿ ಭಯವಿರದು. ಹೊರಗೆ ಹೋದರೂ ಕಾಯುವ ಪರಮಾತ್ಮನಿದ್ದಾನೆಂದುಕೊಂಡು ತಮ್ಮ  ಧಾರ್ಮಿಕ ಸೇವೆ ಮಾಡಿಕೊಂಡವರು ನಮ್ಮ ಹಿಂದಿನ ಹಿರಿಯರಾಗಿದ್ದರು. ಅದರಲ್ಲೂ ತುಂಬಾ ದೂರ ಕಳಿಸದೆ ಹತ್ತಿರದಲ್ಲಿದ್ದೇ  ಕುಟುಂಬದ ಸದಸ್ಯರಿಗೆ ಆಶೀರ್ವಾದ ಸಹಕಾರ ಸಹಾಯ ಮಾಡುವ ಕಾಲವಾಗಿತ್ತು.
ಕಾಲಬದಲಾದಂತೆಲ್ಲಾ ಹೊರಗಿನ ಶಿಕ್ಷಣ ಬೆಳೆದಂತೆಲ್ಲಾ ಮಕ್ಕಳು  ಹೊರಗೆ ಹೋಗುತ್ತಾ ದೂರದೂರದ ಊರಿನಲ್ಲಿ ದೇಶದಲ್ಲಿ ನೆಲೆಸುವಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ  ತಮ್ಮ  
ವರು ಸುರಕ್ಷಿತವಾಗಿರಲೆಂದು ಪರಮಾತ್ಮನ ಲ್ಲಿ  ಕೇಳಿಕೊಳ್ಳುವುದಕ್ಕೆ  ಸ್ತೋತ್ರವಿದೆ ಎಂದರೆ ನಮ್ಮ ಮಹಾತ್ಮರುಗಳಿಗೆ ಇಂತಹ ಕಾಲ  ಬರುತ್ತದೆನ್ನುವ ಅರಿವು ಮೊದಲೇ ಇತ್ತು ಎನ್ನಬಹುದು. ಈ ರೀತಿಯಲ್ಲಿ ಅನೇಕ ಸ್ತೋತ್ರಗಳಿವೆ. ಪಠಣ ಮಾಡುವುದರಿಂದ ಪುಣ್ಯ ಬರುತ್ತದೆ.ಅರ್ಥ ಮಾಡಿಕೊಂಡು  ಪ್ರಾರ್ಥನೆ ಮಾಡುವುದರಿಂದ  ಭಯ  ನಿವಾರಣೆಯಾಗಿ ಭಕ್ತಿ ಹೆಚ್ಚುವುದು. ಪ್ರತಿದಿನ 11 ಬಾರಿ ಭಕ್ತಿ ಶ್ರದ್ಧೆಯಿಂದ  ಹೇಳಿದರೆ ಫಲ ಸಿಗುವುದಾದರೆ ನಮ್ಮೊಳಗೇ ಭಕ್ತಿ ಶ್ರದ್ಧೆ 
ನಮಗಾಗಿ ಇರಲೇಬೇಕು,ಇರುತ್ತದೆ.
ಸರ್ವೇ ಜನಾ: ಸುಖಿನೋ ಭವಂತು.

ಪ್ರಮಾಣ ದಿಂದ ಪ್ರಾಮಾಣಿಕತೆ ಬೆಳೆಯುವುದೆ?

ಮಕ್ಕಳು ಪ್ರಾಮಾಣಿಕರಾಗಿರುವುವಂತೆ ಮಾಡುವುದೇ ಶಿಕ್ಷಣದ ಪ್ರಾರಂಭ.  ಆಣೆಪ್ರಮಾಣಗಳನ್ನು ಮಾಡಿಕೊಂಡು ತಮ್ಮ ಆತ್ಮದ್ರೋಹಕ್ಕೆ ತಾವೇ ಕಾರಣವಾಗುತ್ತಿರುವ  ಇಂದಿನ ರಾಜಕೀಯ ವ್ಯವಸ್ಥೆ ಯಲ್ಲಿ ಮಕ್ಕಳ ಪ್ರಾಮಾಣಿಕತೆಯನ್ನಾಗಲಿ,ಸತ್ಯವನ್ನಾಗಲಿ ಗಮನಿಸಲು ಗುರು ಶಿಕ್ಷಕರಿಗೇ ಸಾಧ್ಯವಾಗದೆ  ಮಕ್ಕಳನ್ನು ಸೇರಿಸಿಕೊಂಡು ಅಸತ್ಯ ಅಧರ್ಮ ಅನ್ಯಾಯ ಅನೀತಿಯ ಕಡೆಗೆ ಹೊರಗಿನ ರಾಜಕೀಯದ ಹಿಂದೆ ನಿಂತವರಿಗೆ ಶಿಕ್ಷಣದೊಳಗೇ  ಆಗಿರುವ ಮೋಸ ಅರ್ಥ ವಾಗದೆ ಅದೇ ಶಿಕ್ಷಣಕ್ಕೆ ತಲೆಬಾಗಿ ಸಾಲ ಮಾಡುತ್ತಾ‌ ಹೊರಗಿನ ವಿಷಯಾಸಕ್ತಿಯಲ್ಲಿ‌ಮೈಮರೆತು ಸ್ವಾತಂತ್ರ್ಯ ವನ್ನು ದುರ್ಭಳಕೆ ಮಾಡಿಕೊಂಡವರಿಂದ ಆತ್ಮನಿರ್ಭರ ಕನಸು ನನಸಾಗುವುದೆ? 
ಮಧ್ಯವರ್ತಿಗಳು ಮಾಧ್ಯಮಗಳು ಇತ್ತೀಚಿನ ದಿನಗಳಲ್ಲಿ ಹದಗೆಟ್ಟ ಮಾನಗೆಟ್ಟಿರುವ ವಿಷಯವನ್ನು ಪ್ರಚಾರ ಮಾಡೋದಕ್ಕೆ ಸಾಕಷ್ಟು  ಹೊರನಡೆದಿದೆ. ಅದೇ  ಸಮಯದಲ್ಲಿ ಜನರಿಗೆ ಉತ್ತಮ ಸದ್ವಿಚಾರ ರ ತಿಳಿಸುವುದಕ್ಕೆ  ತಡೆಗೋಡೆ ಹಾಕಿಕೊಂಡಿರೋದನ್ನು ಜನಸಾಮಾನ್ಯರು ತಿಳಿದು  ತಿಳಿಯದಂತಿರೋದು ದುರಂತವಷ್ಟೆ. ಕೆಲವು ಮಾಧ್ಯಮಗಳು ಉತ್ತಮ ಕಾರ್ಯಕ್ರಮದ ಮೂಲಕ ಜನರನ್ನು  ಸನ್ಮಾರ್ಗದಲ್ಲಿ ನಡೆಸಲು ಪ್ರಯತ್ನಪಟ್ಟರೂ ಸರಿಯಾದ ಸಹಕಾರವಿಲ್ಲದೆ ಹಿಂದುಳಿದಿವೆ. ಒಟ್ಟಿನಲ್ಲಿ ವ್ಯವಹಾರಕ್ಕೆ ಇಳಿದಾಗ ಹಣದ ಲಾಭವಿಲ್ಲದೆ ಮುಂದೆ ನಡೆಯಲಾಗದು. ಇದನ್ನು ಶಿಕ್ಷಣ ಕ್ಷೇತ್ರ ಧಾರ್ಮಿಕ ಕ್ಷೇತ್ರ ಸಾಹಿತ್ಯ ಕ್ಷೇತ್ರ ಮುಂದುವರಿಸಿದರೆ ಮುಗಿಯಿತು ಧರ್ಮದ ಗತಿ ಅಧೋಗತಿ.
 ಧಾರ್ಮಿಕ, ರಾಜಕೀಯ, ಆರ್ಥಿಕ, ಸಾಮಾಜಿಕ ಕ್ಷೇತ್ರದ ಸೇವೆಯು  ಯಾವಾಗ ಹಣಸಂಪಾದನೆ ಮುಖ್ಯ ಗುರಿ ಹಿಡಿಯುವುದೋ ಅಲ್ಲಿ  ಸತ್ಯಜ್ಞಾನವಿರದು. ಅಜ್ಞಾನವೇ ಬೆಳೆದಿರುತ್ತದೆ. 
ಒಟ್ಟಿನಲ್ಲಿ ಶೈಕ್ಷಣಿಕ ಕ್ಷೇತ್ರದಿಂದ ಮನುಕುಲ ಜ್ಞಾನ ಗಳಿಸಿ ಮೇಲ್ಮಟ್ಟದ ಚಿಂತನೆಗಳಿಂದ ಆತ್ಮರಕ್ಷಣೆಯತ್ತ ನಡೆದಿರುವುದು  ಸನಾತನ ಧರ್ಮದಲ್ಲಿ  ಕಂಡಿದ್ದೆವು.ಈಗ?
ಮಠ ಮಂದಿರ ಚರ್ಚ್, ಮಸೀದಿಯಂತಹ  ಧಾರ್ಮಿಕ ಕೇಂದ್ರ ಬೆಳೆದಿರೋದೆ ಹಣದಿಂದ.ಅದೂ ಜನರ ಹಣವೇ, ದೇಶದ ಋಣವೇ ಆದಾಗ ದೇಶ ಸೇವೆ ಜನಸೇವೆ ಯಾರು ಮಾಡುತ್ತಿರುವುದು? ದೈವತ್ವ ಪಡೆಯುವ ಶಿಕ್ಷಣ ಕೊಡದೆ ಆಳಿದವರನ್ನು ಏನೆಂದು ಕರೆಯಬೇಕು?
ಸ್ವಲ್ಪ ಸಾಮಾನ್ಯ ಜ್ಞಾನ ಬಳಸಿ ಚಿಂತನೆ ನಡೆಸಿದರೆ ಎಲ್ಲಾ ಸಮಸ್ಯೆಯ ಮೂಲ ಶಿಕ್ಷಣ.ಶಿಕ್ಷಣವೇ ಪರಕೀಯರ ವಶದಲ್ಲಿ ಇರೋವಾಗ ನಾವು ಸ್ವತಂತ್ರ ವೆ? ಮಕ್ಕಳ ಭವಿಷ್ಯ ಹೊರಗಿಲ್ಲ ಒಳಗೇ ಇದೆ.ಪೋಷಕರು ಎಚ್ಚರವಾಗಿದ್ದರೆ  ಉತ್ತಮ.

Sunday, June 16, 2024

ಆಧ್ಯಾತ್ಮ ವಿಜ್ಞಾನ ಭೌತಿಕ ಜ್ಞಾನ

ಭೌತಿಕದಲ್ಲಿದ್ದು ಅಧ್ಯಾತ್ಮ ವಿಚಾರ ತಿಳಿಯುವುದು‌ಜ್ಞಾನ, ಅಧ್ಯಾತ್ಮ ದೊಳಗಿದ್ದು ಅಧ್ಯಾತ್ಮ ಸಂಶೋಧನೆಯೊಳಗಿರೋದು ಆತ್ಮ ಜ್ಞಾನ. ಇಂದು ಸಾಕಷ್ಟು ಜ್ಞಾನಿಗಳಿದ್ದರೂ ಆತ್ಮಜ್ಞಾನಿಗಳ ಸಂಖ್ಯೆ ಕುಸಿದಿದೆ.ಅಧ್ಯಾತ್ಮ ವಿಚಾರವನ್ನು ಪ್ರಚಾರ ಮಾಡೋರೆಲ್ಲರೂ ಅದರೊಳಗೆ ಹೊಕ್ಕಿ ‌ವಾಸ್ತವದಲ್ಲಿ  ಎಷ್ಟು ಸತ್ಯ‌ಮಿಥ್ಯವೆನ್ನುವ ಬಗ್ಗೆ ಸಂಶೋಧನೆಯಾಗದ ಅನೇಕ ವಿಚಾರಗಳಿಂದ ಜನರಲ್ಲಿ  ಆಸಕ್ತಿಯಿಲ್ಲದೆ  ಆಚರಣೆಯ ಮೂಲಕ  ಪ್ರಚಾರ ನಡೆದಾಗ ಪರಮಾತ್ಮನೆಡೆಗೆ‌ ಹೋಗೋದು ಕಷ್ಟ. ಭೌತಿಕದಲ್ಲಿ ನಮ್ಮ ‌ಹೆಸರು ಹಣ ಅಧಿಕಾರಕ್ಕೆ ತಕ್ಕಂತೆ  ಜೀವನ ನಡೆಯುತ್ತದೆ.ಆದರೆ, ಅಧ್ಯಾತ್ಮ ದೆಡೆಗೆ ಹೋದಂತೆಲ್ಲಾ ಇವು‌ತೃಣವೆನಿಸುತ್ತಾ ಹೋಗುತ್ತದೆ. ಸಾಮಾನ್ಯವಾಗಿ ನಾವು ಸಾಮಾನ್ಯ ಜ್ಞಾನದಿಂದ ನಮ್ಮ ಹಿಂದಿನ ಮಹಾತ್ಮರುಗಳನ್ನು ಅರ್ಥ ಮಾಡಿಕೊಂಡರೆ  ಕೊನೆಗಾಲದಲ್ಲಿ  ಈ ಭೌತಿಕ‌ಜಗತ್ತನ್ನು  ಮಿಥ್ಯವೆಂದು ಬ್ರಹ್ಮನೇ ಸತ್ಯವೆಂದು ಹಿಂದೆ ಅಂದರೆ  ಅಂತರ್ಮುಖಿಗಳಾದವರು  ಮಹಾಜ್ಞಾನಿಗಳು.

ಸಾಮಾನ್ಯರೊಳಗೇ ಅಡಗಿರುವ ಈ ಸಾಮಾನ್ಯಜ್ಞಾನವನ್ನು  ಒಳಗಿದ್ದೇ  ಅರ್ಥ ಮಾಡಿಕೊಳ್ಳಲು ಹೊರಗಿನ ವಿಜ್ಞಾನ ಬಿಡದೆ ಮನೆಯಿಂದ ಹೊರಗೆಳೆದು  ಹಣಸಂಪಾದನೆ ಯ ಮಾದ್ಯಮ ಮಾಡಿಕೊಂಡಿದೆ. ಹಣವಿದ್ದರೂ ಸದ್ಬಳಕೆಯ ಜ್ಞಾನವಿಲ್ಲದವರು ಸಾಮಾನ್ಯರನ್ನೇ ಗುಲಾಮರನ್ನಾಗಿಸಿಕೊಂಡು ಶ್ರೀಮಂತ ರಾದರು. ಇದರಲ್ಲಿ ಎಲ್ಲಾ ಕ್ಷೇತ್ರ ಧರ್ಮ, ಜಾತಿ,ಪಂಗಡ,ಪಕ್ಷ,ದೇಶವೂ ಸೇರಿದೆ.
ಹಾಗಾದರೆ ದೇವರು ಕಂಡರೆ? ಕಂಡವರು ತೋರಿಸಲಾಯಿತೆ?
ಕಾಣದ ದೇವರನ್ನು ಹೊರಗಿಟ್ಟು ತೋರಿಸಬಹುದಷ್ಟೆ.ಒಳಗೆ ನಮ್ಮನ್ನು ಕ್ಷಣಕ್ಷಣಕ್ಕೂ ಎಚ್ಚರಿಸಿ ನೆಡೆಸೋ ಆಶಕ್ತಿಯ‌ಮಾತು ಕೇಳಿಸಿಕೊಳ್ಳಲು  ಸಮಯವಿಲ್ಲದ ನಮಗೆ ಹೊರಗಿನ‌ದೇವರು ತಾತ್ಕಾಲಿಕ ಸಹಕಾರ ನೀಡಬಹುದು. ಯಾವಾಗ ಒಳಗಿನ ಹಾಗು ಹೊರಗಿನ ದೈವಶಕ್ತಿ‌ಕೂಡಿ‌
ನಡೆಸುವುದೋ ಅದೇ ಅದ್ವೈತ.  ಮೂಲ ಬಿಟ್ಟು ಹೊರಗೆ‌ನಡೆದಷ್ಟೂ ಅಂತರದಿಂದ ಅವಾಂತರ ಸೃಷ್ಟಿ ಯಾಗಿ ಜೀವ ಹೋಗುತ್ತದೆ. 
ಶ್ರೀ ಶಂಕರ ಭಗವತ್ಪಾದರ ಭಜಗೋವಿಂದಮ್  ಒಳಗಿರುವ ರಾಜಯೋಗದ ಅರ್ಥ ಈಗಲೂ ಅರ್ಥ ಮಾಡಿಕೊಂಡು  ನಡೆದರೆ ಸನಾತನಧರ್ಮ ಕ್ಕೆ ಯಾವುದೇ ಅಪಾಯವಿಲ್ಲ.
ಅಪಾಯವಿರೋದು ನಮ್ಮ ಜೀವಾತ್ಮನ ಹೊರಗಿನ‌ನಡೆ ನುಡಿಯೊಳಗಿರುವ ರಾಜಕೀಯತೆಗಷ್ಟೆ.
ಬಹಳ ದೊಡ್ಡದಿದೆ..ತಾಳ್ಮೆಯಿಂದ ಓದಬೇಕಷ್ಟೆ.ಇದು ವಾಟ್ಸಪ್ ಕೃಪೆ

ಆದಿ ಶಂಕರಾಚಾರ್ಯ ವಿರಚಿತ *ಭಜ ಗೋವಿಂದಂ* ಗದ್ಯಾರ್ಥ ಸಹಿತ. ಸ್ವಲ್ಪ ದೀರ್ಘವಾಗಿದೆ. ಆದರೆ ಜೀವನದಲ್ಲಿ ಒಮ್ಮೆ ಓದಲೇ ಬೇಕಾದಂಥ ಪವಿತ್ರ ಕೃತಿ.  ಒಮ್ಮೆ ಓದಿ ಬಿಡಿ ಸಾಕು,  ಇಡೀ ಜನ್ಮದ ಪುಣ್ಯ ನಿಮ್ಮದಾಗುವುದು  !! 

ಭಜ ಗೋವಿಂದಂ ಭಜ ಗೋವಿಂದಂ
ಗೋವಿಂದಂ ಭಜ ಮೂಢಮತೇ|
ಸಂಪ್ರಾಪ್ತೇ ಸನ್ನಿಹಿತೇ ಕಾಲೇ
ನ ಹಿ ನ ಹಿ ರಕ್ಷತಿ ಡುಕುರುಞ್ ಕರಣೇ || 1||

ಗೋವಿಂದನನ್ನು ಭಜಿಸು, ಗೋವಿಂದನನ್ನು ಭಜಿಸು, ಎಲೈ ಮೂಢ..! ಅಂತ್ಯ ಕಾಲವು ಸಮೀಪಿಸಿರುವಾಗ ಈ ಹಣ, ದ್ರವ್ಯ  ನಿನ್ನನ್ನು ಎಂದಿಗೂ ರಕ್ಷಿಸುವುದಿಲ್ಲ.

ಮೂಢ ಜಹೀಹಿ ಧನಾಗಮತೃಷ್ಣಾಮ್
ಕುರುಸದ್ಬುದ್ಧಿಂ ಮನಸಿ ವಿತೃಷ್ಣಾಮ್|
ಯಲ್ಲಭಸೇ ನಿಜ ಕರ್ಮೋಪಾತ್ತಂ
ವಿತ್ತಂ ತೇನ ವಿನೋದಯ ಚಿತ್ತಮ್||2||

ಎಲೈ ಮೂಢ..! ಹಣವು ಬರಲೆಂಬ ಆಸೆಯನ್ನು ಬಿಡು.
ಮನಸ್ಸಿನಲ್ಲಿರುವ ಆಸೆಯನ್ನು ತೊರೆದು ಸದ್ವಿಚಾರವನ್ನು ಮಾಡ ಬೇಕೆಂಬ ಬುದ್ಧಿಯನ್ನು ತಂದುಕೊ. ನೀನು ಮಾಡುವ ಕೆಲಸದಿಂದ ಎಷ್ಟು ಹಣ ನಿನಗೆ ದೊರೆಯುತ್ತದೆಯೋ ಅಷ್ಟನ್ನು ಬಳಸಿ ಮನಸ್ಸಿಗೆ ತೃಪ್ತಿಯನ್ನು ತಂದುಕೊ.

 ನಾರೀ ಸ್ತನಭರನಾಭೀದೇಶಂ
ದೃಷ್ಟ್ವಾಮಾ ಗಾ ಮೋಹಾವೇಶಮ್|
ಏತನ್ಮಾಂಸವಸಾದಿವಿಕಾರಂ
ಮನಸಿ ವಿಚಿಂತಯ ವಾರಂ ವಾರಮ್ ||3||

ಸ್ತೀಯರ ಸ್ತನಗಳನ್ನು ನಾಭಿ ಪ್ರದೇಶವನ್ನು ನೋಡಿ ಮೋಹಾವಿಷ್ಟನಾಗಬೇಡ.
ಅದೆಲ್ಲವೂ ಮಾಂಸ, ಕೊಬ್ಬು ಮುಂತಾದವುಗಳ ವಿಕಾರವೆಂದು ಮನಸ್ಸಿನಲ್ಲಿ ಮತ್ತೆ ಮತ್ತೆ ಗುಣಿಸಿ ನೋಡು.

ನಲಿನೀದಲಗತಜಲಮತಿತರಲಂ ತದ್ವಜ್ಜೀವಿತಮತಿಶಯ ಚಪಲಮ್|
ವಿದ್ಧಿ ವ್ಯಾಧ್ಯಭಿಮಾನಗ್ರಸ್ತಂ
ಲೋಕಂ ಶೋಕಹತಂ ಚ ಸಮಸ್ತಮ್ ||4||

ತಾವರೆ ಎಲೆಯ ಮೇಲಿನ ನೀರು ಒಂದೆಡೆ ನಿಲ್ಲದೆ ಬಹು ಬೇಗನೆ ಜಾರುತ್ತದೆ. ಹಾಗೆಯೇ ಮನುಷ್ಯನ ಜೀವಿತವು ಅತ್ಯಂತ ಚಂಚಲ ಯಾವ ಕ್ಷಣದಲ್ಲಾದರೂ ಜಾರಿ ಹೋಗ ಬಹುದು. ಈ ಲೋಕವು ರೋಗ ದುರಂಹಕಾರಗಳಿಂದ ತುಂಬಿದೆಯೆಂದೂ ಸಮಸ್ತರೂ ಒಂದಲ್ಲ ಒಂದು ಶೋಕದಿಂದ ನರಳುತ್ತಿದ್ದಾರೆಂದೂ ತಿಳಿದುಕೋ.

ಯಾವದ್ವಿತ್ತೋಪಾರ್ಜನಸಕ್ತಃ
ಸ್ತಾವನ್ನಿಜಪರಿವಾರೋ ರಕ್ತಃ|
ಪಶ್ಚಾಜ್ಜೀವತಿ ಜರ್ಜರದೇಹೇ
ವಾರ್ತಾಂ ಕೋsಪಿ ನ ಪೃಚ್ಛತಿ ಗೇಹೇ ||5||

ನೀನು ಧನ ಸಂಪಾದನೆಯಲ್ಲಿ ತೊಡಗಿರುವವರೆಗೆ ನಿನ್ನ ಕುಟುಂಬದವರು ನಿನ್ನನ್ನು ಪ್ರೀತಿಯಿಂದ ಆದರಿಸುತ್ತಾರೆ.
ಆಮೇಲೆ ಹಣವನ್ನು ಸಂಪಾದಿಸಲಾರದೆ ಮುದಿತನದಿಂದ ದೇಹವು ಜರ್ಝರಿತವಾಗುತ್ತದೆ. ಆಗ ಮನೆಯಲ್ಲಿರುವ ಯಾರೂ ನಿನ್ನ ಸುದ್ದಿಯನ್ನು ವಿಚಾರಿಸದೆ ದೂರವಾಗಿ ಬಿಡುತ್ತಾರೆ.

ಯಾವತ್ಪವನೋ ನಿವಸತಿ ದೇಹೇ
ತಾವತ್ಪೃಚ್ಛತಿ ಕುಶಲಂ ಗೇಹೇ|
ಗತವತಿ ವಾಯೌ ದೇಹಾಪಾಯೇ
ಭಾರ್ಯಾ ಬಿಭ್ಯತಿ ತಸ್ಮಿನ್ ಕಾಯೇ||6||

ಎಲ್ಲಿಯವರೆಗೆ ದೇಹದಲ್ಲಿ ಪ್ರಾಣವಾಯು ಇರುತ್ತದೆಯೋ ಅಲ್ಲಿಯವರೆಗೆ ನಿನ್ನ ದೇಹಸ್ಥಿತಿ ಹೇಗಿದೆಯೆಂದು ಕುಶಲವನ್ನು ಮನೆಯಲ್ಲಿ ವಿಚಾರಿಸ ಬಹುದು.
ಯಾವಾಗ ಪ್ರಾಣವಾಯು ದೇಹದಿಂದ ಹೊರಟು ಹೋಗುತ್ತದೆಯೋ ಆಗ ಆ ದೇಹದ ಬಳಿಗೆ ಬರಲು ಹೆಂಡತಿಯರು ಸಹ ಹೆದರುತ್ತಾರೆ.

ಬಾಲಸ್ತಾವತ್ಕ್ರೀಡಾಸಕ್ತ-
ಸ್ತರುಣಸ್ತಾವತ್ತರುಣೀಸಕ್ತಃ|
ವೃದ್ಧಸ್ತಾವತ್ಚಿಂತಾಮಗ್ನಃ
ಪರೇ ಬ್ರಹ್ಮಣಿ ಕೋsಪಿ ನ ಸಕ್ತಃ ||7||

ಹುಡುಗನಿಗಾದರೋ ಆಟದಲ್ಲಿ ಆಸಕ್ತಿ. ಯುವಕನಿಗೆ ತರುಣಿಯರಲ್ಲಿ ಆಸಕ್ತಿ ಮುದುಕನು ಯಾವುದೋ ಒಂದು ಚಿಂತೆಯಲ್ಲಿ ಮುಳುಗಿರುತ್ತಾನೆ.
ಏವಂಚ ಪರಬ್ರಹ್ಮದ ವಿಷಯದಲ್ಲಿ ಯಾರಿಗೂ ಆಸಕ್ತಿ ಇಲ್ಲ!

ಕಾ ತೇ ಕಾಂತಾ ಕಸ್ತೇ ಪುತ್ರಃ
ಸಂಸಾರೋsಯಮತೀವ ವಿಚಿತ್ರಃ|
ಕಸ್ಯ ತ್ವಂ ಕಃ ಕುತ ಆಯಾತ-
ಸ್ತತ್ತ್ವಂ ಚಿಂತಯ ತದಿಹ ಭ್ರಾತಃ ||8||

ಈ ಸಂಸಾರವು ಅತೀವ ವಿಚಿತ್ರವಾದದ್ದು. ನಿನ್ನ ಕಾಂತೆ ಎಂದು ಕೊಳ್ಳುವೆಯಲ್ಲ, ಅವಳು ಯಾರು? ನನ್ನ ಪುತ್ರ ಎಂದು ಕೊಳ್ಳುವೆಯಲ್ಲ ಅವನು ಮೂಲದಲ್ಲಿ ಯಾವನಾಗಿದ್ದ? ನೀನಾದರೂ ಯಾರು? ಯಾರ ಮಗ? ಎಲ್ಲಿಂದ ಇಲ್ಲಿಗೆ ಏಕೆ ಬಂದಿರುವೆ? ಎಲೈ ಸೋದರನೇ. ಈ ವಿಷಯದಲ್ಲಿ ಸತ್ಯಸ್ಥಿತಿ ಏನೆಂಬುದನ್ನು ಆಲೋಚಿಸಿ ನೋಡು.

ಸತ್ಸಂಗತ್ವೇ ನಿಸ್ಸಂಗತ್ವಂ
ನಿಸ್ಸಂಗತ್ವೇ ನಿರ್ಮೋಹತ್ವಮ್|
ನಿರ್ಮೋಹತ್ವೇ ನಿಶ್ಚಲತತ್ತ್ವಂ
ನಿಶ್ಚಲತತ್ತ್ವೇ ಜೀವನ್ಮುಕ್ತಿಃ ||9||

ಸಜ್ಜನರ ಸಂಪರ್ಕದಲ್ಲಿದ್ದರೆ ಧನಾದಿ ವಿಷಯಗಳ ಚಿಂತೆ ತಪ್ಪುತ್ತದೆ. ಈ ಚಿಂತೆ ಹೋದಾಗ ಅವುಗಳ ಮೋಹವೂ ಹೋಗುತ್ತದೆ. ಅಜ್ಞಾನದಿಂದಾದ ಮೋಹವು ಹೋದರೆ ಶಾಶ್ವತವಾದ ಸತ್ಯವೇನೆಂಬುದರ ಜ್ಞಾನವಾಗುತ್ತದೆ. ಅಂತಹ ಜ್ಞಾನ ಉದಿಸಿದರೆ ಜೀವನ್ಮುಕ್ತಿಯೇ ಪ್ರಾಪ್ತ ಆಯಿತೆಂದು ತಿಳಿಯ ಬೇಕು.

ವಯಸಿ ಗತೇ ಕಃ ಕಾಮವಿಕಾರಃ ಶುಷ್ಕೇ ನೀರೇ ಕಃ ಕಾಸಾರಃ|
ಕ್ಷೀಣೇ ವಿತ್ತೇ ಕಃ ಪರಿವಾರೋ
ಜ್ಞಾತೇ ತತ್ತ್ವೇ ಕಃ ಸಂಸಾರಃ ||10||

ವಯಸ್ಸು ಕಳೆದು ಹೋದ ಮೇಲೆ ಕಾಮವಿಕಾರ ಎಲ್ಲಿರುತ್ತದೆ? ನೀರು ಒಣಗಿದ ಮೇಲೆ ಕೆರೆಯೆಂದರೆ ಯಾವುದು? ಹಣವು ಕ್ಷೀಣಿಸಿ ಇಲ್ಲವಾದಾಗ ಸಂಸಾರದ ಪರಿವಾರ ಎಲ್ಲಿರುತ್ತದೆ? ತತ್ತ್ವಜ್ಞಾನ ಆದಾಗ ಈ ಸಂಸಾರ ಎಲ್ಲಿದ್ದೀತು?

ಮಾ ಕುರು ಧನಜನಯೌವನಗರ್ವಂ
ಹರತಿ ನಿಮೇಷಾತ್ಕಾಲಃ ಸರ್ವಮ್|
ಮಾಯಾಮಯಮಿದಮಖಿಲಂ ಮತ್ವಾ ಬ್ರಹ್ಮಪದಂ ತ್ವಂ ಪ್ರವಿಶ ವಿದಿತ್ವಾ||11||

ಎಲೈ ಮಾನವ, “ನನಗೆ ಧನಬಲವಿದೆ, ಜನಬಲವಿದೆ, ಯೌವನವಿದೆ” ಎಂದು ಗರ್ವ ಪಡ ಬೇಡ. ಒಂದು ನಿಮಿಷದಲ್ಲಿ ಕಾಲವು ಇದೆಲ್ಲವನ್ನು ನಾಶ ಮಾಡ ಬಲ್ಲದು. ಇದೆಲ್ಲವೂ ಮಾಯಾ ಕಲ್ಪಿತವಾದದ್ದು (ವಸ್ತುತಃ ಇಲ್ಲ) ಎಂದು ನಿಶ್ಚಯಿಸಿ, ಶಾಶ್ವತವಾದ ಬ್ರಹ್ಮವೆಂದರೆ ಏನೆಂಬುದನ್ನರಿತು ಅದರಲ್ಲಿ ಸೇರಿಕೋ.

ದಿನಯಾಮಿನ್ಯೌ ಸಾಯಂ ಪ್ರಾತಃ ಶಿಶಿರವಸಂತೌ ಪುನರಾಯಾತಃ|
ಕಾಲಃಕ್ರೀಡತಿ ಗಚ್ಛತ್ಯಾಯು-
ಸ್ತದಪಿ ನ ಮುಂಚತ್ಯಾಶಾವಯುಃ ||12||

ಹಗಲು ರಾತ್ರಿ, ಸಂಜೆ, ಪ್ರಾತಃಕಾಲ ಶಿಶಿರಋತು, ವಸಂತಋತು ಮುಂತಾದವೆಲ್ಲವೂ ಬರುತ್ತದೆ, ಹೋಗುತ್ತವೆ, ಇದು ಕಾಲಪುರುಷನ ಒಂದು ಆಟ.
ಈ ಆಟದ ಹೆಸರಿನಲ್ಲಿ ಮನುಷ್ಯನ ಆಯಸ್ಸು ಕಳೆದು ಹೋಗುತ್ತದೆ. ಇದೆಲ್ಲಾ ತಿಳಿದಿದ್ದರೂ ಆಸೆಯೆಂಬ ವಾತರೋಗವು ಬಿಟ್ಟು ಹೋಗುವುದೇ ಇಲ್ಲ.

ಕಾ ತೇ ಕಾಂತಾ ಧನಗತ ಚಿಂತಾ ವಾತುಲ ಕಿಂ ತವ ನಾಸ್ತಿ ನಿಯಂತಾ|
ತ್ರಿಜಗತಿ ಸಜ್ಜನಸಂಗತಿರೇಕಾ
ಭವತಿ ಭವಾರ್ಣವತರಣೇ ನೌಕಾ ||13||

ಎಲೈ ವಾತರೋಗಿ! ನಿನಗೆ ಪ್ರಿಯಳಾದ ಮಡದಿ ಯಾರು? ಏನು ಮಾಡಿಯಾಳು? ಇನ್ನೂ ಹಣದ ಆಸೆ ಏಕೆ? ನಿನಗೆ ಬುದ್ದಿ ಹೇಳು ದಾರಿ ತೋರಿಸ ತಕ್ಕವರಿಲ್ಲವೇನು?
ಮೂರು ಲೋಕಗಳಲ್ಲಿ ಹುಡುಕಿದರೂ ಸತ್ಸಂಗ ಎಂಬುದೊಂದೇ ಸಂಸಾರ ಸಾಗರವನ್ನು ದಾಟಿಸ ಬಲ್ಲ ದೋಣಿಯಾಗಿರುತ್ತದೆ.

ಜಟಿಲೋ ಮುಂಡೀ ಲುಂಚಿತಕೇಶಃ
ಕಾಷಾಯಾಂಬರಬಹುಕೃತ ವೇಷಃ|
ಪಶ್ಯನ್ನಪಿ ಚ ನ ಪಶ್ಯತಿ ಮೂಢಃ
ಉದರನಿಮಿತ್ತಂ ಬಹುಕೃತವೇಷಃ ||14||

ಒಬ್ಬನು ಜಟೆಬಿಟ್ಟವನು, ಇನ್ನೊಬ್ಬನು ತಲೆ ಬೋಳಿಸಿ ಕೊಂಡವನು, ಮತ್ತೊಬ್ಬನು ಕೇಶವನ್ನು ಎಳೆದೆಳೆದು ಕಿತ್ತು ಹಾಕಿ  ಕೊಂಡವನು, ಮಗದೊಬ್ಬನು ಕಾವಿ ಬಟ್ಟೆಯನ್ನುಟ್ಟು ಬಹುವಿಧವಾಗಿ ಅಲಂಕರಿಸಿ ಕೊಂಡವನು.
ಕಣ್ಣಿಂದ ಕಾಣುತ್ತಿದ್ದರೂ ಸತ್ಯವನ್ನು ಕಾಣಲಾರದ ಇಂತಹ ಮೂಢರಿದ್ದಾರೆ.
ಇವರು ಹೊಟ್ಟೆಪಾಡಿಗಾಗಿ ಇಂತಹ ನಾನಾ ವೇಷವನ್ನು ಧರಿಸಿರುತ್ತಾರೆ.

ಅಂಗಂ ಗಲಿತಂ ಪಲಿತಂ ಮುಂಡಂ ದಶನವಿಹೀನಂ ಜಾತಂ ತುಂಡಮ್|
ವೃದ್ಧೋ ಯಾತಿ ಗೃಹೀತ್ವಾ ದಂಡಂ ತದಪಿ ನ ಮುಂಚತ್ಯಾಶಾಪಿಂಡಮ್||15||

ವಯಸ್ಸಾದ ಮೇಲೆ ಅವಯವವು ಬಲಹೀನ ಆಗಿರುತ್ತದೆ. ಕೂದಲು ನೆರೆತು ತಲೆಯು ಬೆಳ್ಳಗಾಗಿರುತ್ತದೆ.
ಬಾಯಿಯಲ್ಲಿದ್ದ ಹಲ್ಲುಗಳೆಲ್ಲ ಉದುರಿ ಹೋಗಿರುತ್ತವೆ. ಇಷ್ಟಾದರೂ ಮುದುಕನು ದೊಣ್ಣೆಯನ್ನು ಹಿಡಿದು ಎಲ್ಲಿಗೋ ಹೋಗುತ್ತಲೇ ಇರುತ್ತಾನೆ.
ವಯಸ್ಸಾದರೂ ಆಶೆಯು ಶರೀರವನ್ನು ಬಿಟ್ಟು ಹೋಗುವುದಿಲ್ಲ.

ಅಗ್ರೇ ವಹ್ನಿಃ ಪೃಷ್ಠೇ ಭಾನುಃ
ರಾತ್ರೌ ಚುಬುಕಸಮರ್ಪಿತಜಾನುಃ|
ಕರತಲಭಿಕ್ಷಸ್ತರುತಲವಾಸ-
ಸ್ತದಪಿ ನ ಮುಂಚತ್ಯಾಶಾಪಾಶಃ ||16||

ಛಳಿಯನ್ನು ತಡೆಯಲಾರದೆ ಎದುರಿಗೆ ಬೆಂಕಿಯನ್ನು ಹಾಕಿ ಕೊಂಡು ಮೈಯನ್ನು ಕಾಯಿಸುತ್ತಾನೆ. ಸೂರ್ಯನ ಕಡೆಗೆ ಬೆನ್ನು ಮಾಡಿ ಬಿಸಿಲು ಕಾಯಿಸುತ್ತಾನೆ. ರಾತ್ರಿಯಲ್ಲಿ ಮೊಳಕಾಲು ಗದ್ದವನ್ನು ಮುಟ್ಟುವಂತೆ ಬಾಗಿ ಮಲಗುತ್ತಾನೆ. ಭಿಕ್ಷೆ ಪಾತ್ರೆಯ ಇಲ್ಲದ್ದರಿಂದ ಕೈಯಲ್ಲಿಯೇ ಭಿಕ್ಷೆ ಬೇಡಿ ತಿನ್ನುತ್ತಾನೆ. ಮರದ ಬುಡದಲ್ಲಿ ಮಲಗುತ್ತಾನೆ. ಇಷ್ಟಾದರೂ ಆಸೆಯೆಂಬ ವಾತರೋಗವು ಇವನನ್ನು ಬಿಡುವುದೇ ಇಲ್ಲವಲ್ಲ!

ಕುರುತೇ ಗಂಗಾಸಾಗರಗಮನಂ
ವ್ರತಪರಿಪಾಲನಮಥವಾ ದಾನಮ್|
ಜ್ಞಾನವಿಹೀನಃ ಸರ್ವಮತೇನ
ಮುಕ್ತಿಂ ಭಜತಿ ನ ಜನ್ಮಶತೇನ||17||

ಮೋಕ್ಷವನ್ನು ಪಡೆಯುವುದಕ್ಕಾಗಿ ಕೆಲವರು ಗಂಗಾನದಿಗೆ ಹೋಗಿ ಸ್ನಾನ ಮಾಡುತ್ತಾರೆ. ಸಮುದ್ರ ಸ್ನಾನ ಮಾಡುತ್ತಾರೆ! ನಾನಾ ಬಗೆಯ ವ್ರತಗಳನ್ನು ಮಾಡುತ್ತಾರೆ, ದಾನ ಕೊಡುತ್ತಾರೆ. ಆದರೆ ಆತ್ಮಜ್ಞಾನವಿಲ್ಲದ ನೂರು ಜನ್ಮಗಳನ್ನು ಕಳೆದರೂ ಅವರಿಗೆ ಮೋಕ್ಷವು ಸಿಗುವುದಿಲ್ಲ. ಜ್ಞಾನ ಒಂದೇ ಮೋಕ್ಷಕ್ಕೆ ಸಾಧನ.ಇದು ಎಲ್ಲ ಉಪನಿಷತ್ತುಗಳ ಸಿದ್ಧಾಂತ.

ಸುರಮಂದಿರತರುಮೂಲನಿವಾಸಃ ಶಯ್ಯಾ ಭೂತಲಮಜಿನಂ ವಾಸಃ|
ಸರ್ವಪರಿಗ್ರಹಭೋಗತ್ಯಾಗಃ
ಕಸ್ಯ ಸುಖಂ ನ ಕರೋತಿ ವಿರಾಗಃ ||18||

ವಿರಾಗಿಯಾದವನು ದೇವಾಲಯಗಳಲ್ಲಿ ಅಥವಾ ಮರಗಳ ಬುಡದಲ್ಲಿ ವಾಸ ಮಾಡುತ್ತಾ, ನೆಲವನ್ನೇ ಹಾಸಿಗೆಯನ್ನಾಗಿ ಮಾಡಿ ಕೊಂಡು ಕೃಷ್ಣಾಜಿನವನ್ನು ಹೊದ್ದು ಕೊಂಡು ಸಕಲ ಸುಖಸಾಧನಗಳನ್ನು ತ್ಯಜಿಸುತ್ತಾನೆ. ಇಂಥ ವೈರಾಗ್ಯವು ಯಾರಿಗೆ ತಾನೆ ಸುಖ ನೀಡದು?

ಯೋಗರತೋ ವಾ ಭೋಗರತೋ ವಾ
ಸಂಗರತೋ ವಾ ಸಂಗವಿಹೀನಃ|
ಯಸ್ಯ ಬ್ರಹ್ಮಣಿ ರಮತೇ ಚಿತ್ತಂ
ನಂದತಿ ನಂದತಿ ನಂದತ್ಯೇವ ||19||

ಒಬ್ಬನು ಯೋಗಿಯಾಗಿರಲಿ, ಭೋಗಿಯಾಗಿರಲಿ, ಸತ್ಸಂಗದಲ್ಲಿ ಇರಲಿ ಅಥವಾ ಸಂಗ ರಹಿತನಾಗಿರಲಿ.
ಯಾವಾತನ ಚಿತ್ತವು ಬ್ರಹ್ಮಚಿಂತನೆಯಲ್ಲಿ ನಿರತವಾಗಿರುವುದೋ ಆತನು ಆನಂದದಲ್ಲಿ ಮುಳುಗುತ್ತಾನೆ.
ಆನಂದದಲ್ಲಿರುತ್ತಾನೆ, ಆನಂದಿಸುತ್ತಲೇ ಇರುತ್ತಾನೆ, ಇದು ನಿಶ್ಚಿತ.

ಭಗವದ್ಗೀತಾ ಕಿಂಚಿದಧೀತಾ
ಗಂಗಾಜಲ ಲವ ಕಣಿಕಾ ಪೀತಾ|
ಸಕೃದಪಿ ಯೇನ ಮುರಾರಿ ಸಮರ್ಚಾ ಕ್ರಿಯತೇ ತಸ್ಯ ಯಮೇನ ನ ಚರ್ಚಾ ||20||

ಭಗವದ್ಗೀತೆಯನ್ನು ಸ್ವಲ್ಪ ಅಧ್ಯಯನ ಮಾಡಿದರೂ ಸಾಕು. ಗಂಗಾಜಲದ ಒಂದು ಹನಿಯನ್ನು ಕುಡಿದರೂ ಸಾಕು.
ಶ್ರೀಮನ್ನಾರಾಯಣನನ್ನು ಒಂದು ಸಲ ಪೂಜಿಸಿದರೂ ಸಾಕು, ಆತನ ವಿಷಯದಲ್ಲಿ ಯಮನು ಯಾವ ಚರ್ಚೆಯನ್ನೂ ಮಾಡುವುದಿಲ್ಲ. (ಯಮನಿಂದ ಅವನಿಗೆ ಯಾವ ಬಾಧೆಯೂ ಇರುವುದಿಲ್ಲ).

ಪುನರಪಿ ಜನನಂ ಪುನರಪಿ ಮರಣಂ
ಪುನರಪಿ ಜನನೀಜಠರೇ ಶಯನಮ್|
ಇಹ ಸಂಸಾರೇ ಬಹುದುಸ್ತಾರೇ
ಕೃಪಯಾsಪಾರೇ ಪಾಹಿ ಮುರಾರೇ ||21||

ಮತ್ತೆ ಹುಟ್ಟುವುದು, ಮತ್ತೆ ಸಾಯುವುದು, ಮತ್ತೆ ತಾಯಿಯ ಗರ್ಭದಲ್ಲಿ ಸೇರಿ ಮಲಗುವುದು, ಈ ರೀತಿಯಲ್ಲಿರುವ ಸಂಸಾರಕ್ಕೆ ಪಾರವೇ ಇಲ್ಲ. ಇದನ್ನು ಸುಲಭವಾಗಿ ದಾಟಲಾಗುವುದಿಲ್ಲ. ಹೇ ಮುರಾರಿ, ನಾರಾಯಣ, ಕೃಪೆಯಿಟ್ಟು ನನ್ನನ್ನು ಪಾಲಿಸು.

ಕಸ್ತ್ವಂ ಕೋsಹಂ ಕುತ ಆಯಾತಃ ಕಾ ಮೇ ಜನನೀ ಕೋ ಮೇ ತಾತಃ |
ಇತಿ ಪರಿಭಾವಯ ಸರ್ವಮಸಾರಂ ವಿಶ್ವಂ ತ್ಯಕ್ತ್ವಾ ಸ್ವಪ್ನವಿಚಾರಮ್ ||22||

ನೀನು ಯಾರು? ನಾನು ಯಾರು? ಎಲ್ಲಿಂದ ಏಕೆ ಬಂದಿದ್ದೀಯೇ? ಯಾರು ನನ್ನ ತಾಯಿ? ಯಾರು ನನ್ನ ತಂದೆ? ಎಂಬುದನ್ನು ಸರಿಯಾಗಿ ವಿಚಾರ ಮಾಡಿ ನೋಡು. ಈ ವಿಶ್ವವೆಲ್ಲವೂ ನಿಸ್ಸಾರವಾದ ಸ್ವಪ್ನದ ವಿಚಾರವೇ ಎಂದು ತಿಳಿದು ದೂರವಿಟ್ಟು ಪರ್ಯಾಲೋಚಿಸು.

ರಥ್ಯಾಕರ್ಪಟವಿರಚಿತಕಂಥಃ
ಪುಣ್ಯಾಪುಣ್ಯವಿವರ್ಜಿತಪಂಥಃ|
ಯೋಗೀ ಯೋಗನಿಯೋಜಿತ ಚಿತ್ತೋ ರಮತೇ ಬಾಲೋನ್ಮತ್ತವದೇವ ||23||

ಯೋಗದಲ್ಲಿಯೇ ಮನಸ್ಸನ್ನು ಇಟ್ಟ ಯೋಗಿಯು ಬೀದಿಯಲ್ಲಿ ಬಿದ್ದಿರುವ ಚಿಂದಿಯನ್ನೇ ತೇಪೆ ಹಾಕಿಕೊಂಡು ಮೈಮುಚ್ಚಿ ಕೊಳ್ಳುತ್ತಾನೆ. ಪಾಪ- ಪುಣ್ಯಗಳನ್ನು ನೋಡದೆ ಮನಬಂದ ದಾರಿಯಲ್ಲಿ ನಡೆಯುತ್ತಾನೆ. ಕೆಲವೊಮ್ಮೆ ಮಗುವಿನಂತೆಯೂ, ಕೆಲವೊಮ್ಮೆ ಹುಚ್ಚನಂತೆಯೂ ನಡೆದು ಕೊಳ್ಳುತ್ತಾನೆ.

ತ್ವಯಿ ಮಯಿ ಚಾನ್ಯತ್ರ್ಯಕೋ ವಿಷ್ಣುಃ ವ್ಯರ್ಥಂ ಕುಪ್ಯಸಿ ಮಯ್ಯಸಹಿಷ್ಣುಃ|
ಭವ ಸಮಚಿತ್ತಃ ಸರ್ವತ್ರ ತ್ವಂ
ವಾಛಂಸ್ಯಚಿರಾದ್ಯದಿ ವಿಷ್ಣುತ್ವಮ್||24||

ನಿನ್ನಲ್ಲಿ ನನ್ನಲ್ಲಿ ಅನ್ಯತ್ರ ಎಲ್ಲೆಲ್ಲಿಯೂ ಒಬ್ಬನೇ ವಿಷ್ಣುವಿದ್ದಾನೆ. ಸಹನೆಯನ್ನು ಕಳೆದ ಕೊಂಡು ವ್ಯರ್ಥವಾಗಿ ನನ್ನ ಮೇಲೇಕೆ ಕೋಪಿಸಿ ಕೊಳ್ಳುತ್ತೀಯೆ. ಎಲೈ ಮಾನವ, ಶೀಘ್ರವಾಗಿ ನೀನೇ ವಿಷ್ಣುವಾಗ ಬೇಕೆಂಬ ಬಯಕೆ ಇದ್ದರೆ, ಸರ್ವತ್ರ ವಿಷ್ಣು ಒಬ್ಬನೇ ಇದ್ದಾನೆಂದು ತಿಳಿದು ಸಮಚಿತ್ತನಾಗು.

ಶತ್ರೌ ಮಿತ್ರೇ ಪುತ್ರೇ ಬಂಧೌ
ಮಾ ಕುರು ಯತ್ನಂ ವಿಗ್ರಹಸಂಧೌ|
ಸರ್ವಸ್ಮಿನ್ನಪಿ ಪಶ್ಯಾತ್ಮಾನಂ
ಸರ್ವತ್ರೋತ್ಸೃಜ ಭೇದಜ್ಞಾನಮ್ ||25||

ಶತ್ರು, ಮಿತ್ರ, ಪುತ್ರ, ಬಂಧು ಮೊದಲಾದವರಲ್ಲಿ ಭೇದ ಭಾವನೆಯಿಂದ ಕಲಹ, ಸಂಧಾನಗಳಲ್ಲಿ ಯತ್ನಿಸ ಬೇಡ.
ಎಲ್ಲಾವುದರಲ್ಲಿಯೂ ನಾನೇ ಆತ್ಮನಾಗಿ ಇದ್ದೇನೆ ಎಂಬುದನ್ನು ತಿಳಿದುಕೋ.
ಸರ್ವ ವಸ್ತುಗಳಲ್ಲಿಯೂ ಭೇದ ಬುದ್ಧಿಯನ್ನು ತೊಡೆದು ಹಾಕು.

ಕಾಮಂ ಕ್ರೋಧಂ ಲೋಭಂ ಮೋಹಂ ತ್ಯಕ್ತ್ವಾತ್ಮಾನಂ ಭಾವಯ ಕೋsಹಮ್|
ಆತ್ಮಜ್ಞಾನವಿಹೀನಾ ಮೂಢಾ-
ಸ್ತೇ ಪಚ್ಯಂತೇ ನರಕನಿಗೂಢಾಃ ||26||

ವಿವೇಕಿಯಾದವನು ಕಾಮ, ಕ್ರೋಧ, ಲೋಭ, ಮೋಹಗಳನ್ನು ತೊಡೆದು ಹಾಕಿ ಸರ್ವತ್ರ ಆತ್ಮನೊಬ್ಬನೇ ಇದ್ದಾನೆಂದೂ ಅವನೇ ನಾನು ಎಂದೂ ತಿಳಿದು ಸೋsಹಂ ಎಂದೇ ನಿಶ್ಚಯಿಸುತ್ತಾನೆ.
ಆತ್ಮಜ್ಞಾನವನ್ನು ಪಡೆಯದೇ ಇರುವ ಮೂಢ ಜನರು ನರಕದಲ್ಲಿ ಬಿದ್ದು ಯಾತನೆಗಳನ್ನು ಅನುಭವಿಸುತ್ತಾರೆ.

ಗೇಯಂ ಗೀತಾನಾಮಸಹಸ್ರಂ
ಧ್ಯೇಯಂ ಶ್ರೀಪತಿ ರೂಪಮಜಸ್ರಮ್|
ನೇಯಂ ಸಜ್ಜನಸಂಗೇ ಚಿತ್ತಂ
ದೇಯಂ ದೀನಜನಾಯ ಚ ವಿತ್ತಮ್ ||27||

ಭಗವದ್ಗೀತೆಯನ್ನು, ಭಗವಂತನ ಸಹಸ್ರ ನಾಮಗಳನ್ನು ಹಾಡಿ ಪಾರಾಯಣ ಮಾಡುತ್ತಿರ ಬೇಕು. ಶ್ರೀಹರಿಯ ದಿವ್ಯರೂಪವನ್ನು ಸತತವೂ ಧ್ಯಾನಿಸುತ್ತಿರ ಬೇಕು.
ಸಜ್ಜನರ ಸಹವಾಸದಲ್ಲಿರುವಂತೆ ಮನಸ್ಸನ್ನು ಪ್ರೇರೇಪಿಸ ಬೇಕು. ದೀನ ಜನರಿಗೆ ಹಣದ ಸಹಾಯವನ್ನು ಮಾಡ ಬೇಕು.

 ಅರ್ಥಮನರ್ಥಂ ಭಾವಯ ನಿತ್ಯಂ ನಾಸ್ತಿ ತತಃ ಸುಖಲೇಶಃ ಸತ್ಯಮ್|
ಪುತ್ರಾದಪಿ ಧನಭಾಜಾಂ ಭೀತಿಃ ಸರ್ವತ್ರೈಷಾ ವಿಹಿತಾ ರೀತಿಃ ||28||

ಧನವು ಅನರ್ಥಕಾರಿಯೆಂದು ಸದಾ ಭಾವಿಸುತ್ತಿರು. ಧನದಿಂದ ಸುಖಲೇಶವೂ ಸತ್ಯವಾಗಿ ಇಲ್ಲ. ಹಣವಿದ್ದವರಿಗೆ ತಮ್ಮ ಮಗನಿಂದಲೂ ಸಹ ವಿಪತ್ತು ಬಂದೀತೆಂಬ ಭಯವಿರುತ್ತದೆ.
ಈ ಪರಿಸ್ಥಿತಿಯು ಸರ್ವತ್ರ ಇರತಕ್ಕದ್ದೇ ಸರಿ.

ಪ್ರಾಣಾಯಾಮಂ ಪ್ರತ್ಯಾಹಾರಂ
ನಿತ್ಯಾನಿತ್ಯವಿವೇಕವಿಚಾರಮ್|
ಜಾಪ್ಯಸಮೇತ ಸಮಾಧಿವಿಧಾನಂ
ಕುರ್ವವಧಾನಂ ಮಹದವಧಾನಮ್ ||29||

ಪ್ರಾಣಾಯಾಮ, ಪ್ರತ್ಯಾಹಾರ, ಜಪ, ಸಮಾಧಿ ಇವುಗಳನ್ನು ಮಾಡು. ಭಗವಂತನಲ್ಲಿ ಮನಸ್ಸನ್ನು ನಿಲ್ಲಿಸು. ಮಹಾತ್ಮರು ಆದರಿಸಿದ ಪೂರ್ವಚರಿತೆ ಇದು.

ಸುಖತಃ ಕ್ರಿಯತೇ ರಾಮಾಭೋಗಃ ಪಶ್ಚಾದ್ಧಂತ ಶರೀರೇ ರೋಗಃ|
ಯದ್ಯಪಿ ಲೋಕೇ ಮರಣಂ ಶರಣಂ ತದಪಿ ನ ಮುಂಚತಿ ಪಾಪಾಚರಣಮ್ ||30||

ಜನರು ಸುಖಕ್ಕಾಗಿ ವೇಶ್ಯಾ ಸಹವಾಸವನ್ನೂ ಮಾಡುತ್ತಾರೆ.
ಅಯ್ಯೋ! ಆಮೇಲೆ ಶರೀರ ರೋಗದ ಗೂಡಾಗುತ್ತದೆ. ಕೊನೆಯಲ್ಲಿ ಎಲ್ಲರಿಗೂ ಮರಣವೇ ಗತಿ. ಆದರೂ ಪಾಪಾಚರಣೆಯನ್ನು ಬಿಡುವುದಿಲ್ಲ.

ಗುರುಚರಣಾಂಬುಜನಿರ್ಭರಭಕ್ತಃ ಸಂಸಾರಾದಚಿರಾದ್ಭವ ಮುಕ್ತಃ|ಸೇಂದ್ರಿಯಮಾನಸನಿಯಮಾದೇವಂ ದ್ರಕ್ಷ್ಯಸಿ ನಿಜ ಹೃದಯಸ್ಥಂ ದೇವಮ್||31||

ಶ್ರೀ ಗುರು ಚರಣ ಕಮಲದಲ್ಲಿ ದೃಢವಾದ ಭಕ್ತಿಯನ್ನಿಡು. ಆದಷ್ಟು ಬೇಗನೆ ಸಂಸಾರ ಬಂಧನದಿಂದ ಬಿಡುಗಡೆ ಹೊಂದು. ಇಂದ್ರಿಯಗಳನ್ನು ಮನಸ್ಸನ್ನು ಈ ಪ್ರಕಾರವಾಗಿ ನಿಗ್ರಹಿಸಿರು. ಶೀಘ್ರದಲ್ಲಿಯೇ ನಿನ್ನ ಹೃದಯದಲ್ಲಿಯೇ ಇರುವ ಪರಮಾತ್ಮನನ್ನು ಸಾಕ್ಷಾತ್ಕರಿಸಿ ಕೊಳ್ಳುತ್ತೀಯೆ.

 (ಇಂದುಗುರುವಾದವರೆ ಭೌತಿಕದ ಸತ್ಯದೆಡೆಗೆ ಎಳೆಯುತ್ತಿದ್ದರೆ ಯೋಚಿಸಬೇಕಾಗಿದೆ. ಸದ್ಗುರುಗಳಿರಬೇಕು)

ಭಜಗೋವಿಂದಂ ಭಜ ಗೋವಿಂದಂ
ಗೋವಿಂದಂ ಭಜ ಮೂಢಮತೇ ||

||ಇತಿ ಶ್ರೀಮದ್ಜಗದ್ಗುರು ಶಂಕರಾಚಾರ್ಯವಿರಚಿತಂ ಭಜಗೋವಿಂದ ಸ್ತೋತ್ರಂ ಸಂಪೂರ್ಣಮ್||

ಅವಸರವೇ ಅಪಘಾತಕ್ಕೆ ಕಾರಣ

ಸಣ್ಣ ವಯಸ್ಸಿನಿಂದಲೇ  ಅಪ್ಪ ಅಮ್ಮನವರ ಮೇಲೆ ಪ್ರೀತಿ ವಿಶ್ವಾಸ.ತಪ್ಪು ಮಾಡಿದಾಗ ಬೈಸಿಕೊಂಡು ತಿದ್ದಿ ನಡೆಯುವುದು ಸಹಜವಾಗಿತ್ತು. ಸತ್ಯದ ವಿಚಾರದಲ್ಲಿ ಸಾಕಷ್ಟು ಬಾರಿ ಬೈಸಿಕೊಂಡಿದ್ದೆ ಕಾರಣ ದೊಡ್ಡವರು ಮಾಡಿದ್ದನ್ನು ಸಣ್ಣವರು ಮಾಡಿದರೆ ತಪ್ಪೇನು ಎನ್ನುವ ಚಿಂತನೆ ಯಲ್ಲಿದ್ದ ನನ್ನ ಪ್ರಶ್ನೆಗೆ ಉತ್ತರಿಸುವವರಿರಲಿಲ್ಲ. ತಪ್ಪು ಮಾಡಿ  ತಪ್ಪು ಮಾಡಿದೆ ಎನ್ನುವ ಬದಲು ಮಾಡದಿದ್ದರೆ ಬೈಸಿಕೊಳ್ಳುವುದು ತಪ್ಪುತ್ತದೆ ಎಂದರೂ ತಿಳಿಯದೆ ನಡೆದೇ ಹೋದಾಗ ಸತ್ಯ ಹೇಳಿದರೂ ನಂಬದ ಪರಿಸ್ಥಿತಿ. ಸುಳ್ಳು ಹೇಳಿದರೆ ಒಳಗಿನ ಕೂಗು ನೀನು ಸುಳ್ಳು ಹೇಳಿದ್ದೀಯ..ಹೊರಗಿನವರಿಂದ ಬೈಸಿಕೊಂಡರೂ ಸರಿ ಒಳಗಿನ‌ಕೂಗಿಗೆ ಸರಿಯಿರಬೇಕಷ್ಟೆ.  ಇಲ್ಲವಾದರೆ ಇದು ಪ್ರತಿಯೊಬ್ಬರ ಸಮಸ್ಯೆಗೆ ಕಾರಣವಾಗುತ್ತದೆ. 

ಹೇಗೆ ಧರ್ಮ ರಾಯನಿಗೆ  ಕೆಟ್ಟವರು ಕಾಣಲಿಲ್ಲವೂ ದುರ್ಯೋಧನನಿಗೆ ಒಳ್ಳೆಯವರು ಕಾಣಲಿಲ್ಲ. ನಮ್ಮ ಮನಸ್ಸು ಇದ್ದಂತೆ ಲೋಕದ ಜನ ಕಾಣುವರು. ಇಂದಿಗೂ ಎಷ್ಟೋ ಒಳ್ಳೆಯವರನ್ನು ಕೆಟ್ಟದೃಷ್ಟಿಯಿಂದ ಕಂಡು ಹಿಂದೆ ಉಳಿಸಿರುವರು ಅದಕ್ಕೆ ಕೆಟ್ಟವರು ಮುಂದೆ ನಡೆದಿರೋದು.
ಇಷ್ಟಕ್ಕೂ  ಯಾರನ್ನು ಯಾರು ನಡೆಸುವರು? ಪರಮಾತ್ಮನ ಒಳಗೆ ಅಡಗಿರುವ ಎಲ್ಲಾ ಜೀವಾತ್ಮರಿಗೆ ತನ್ನೊಳಗೆ ಅಡಗಿರುವ ಜ್ಞಾನದ ಆಸ್ತಿಯನ್ನು  ಬಳಸಿಕೊಳ್ಳಲು ಹೊರಗಿನ ಸಹಕಾರ  ಬೇಕೆ?
ಸರ್ಕಾರದಿಂದ ಶಿಕ್ಷಣ ಬದಲಾವಣೆ‌ಮಾಡಲಾಗಿದೆಯೆ?
ಇಲ್ಲವೆಂದರೆ ಯಾರು ಬದಲಾಯಿಸಬೇಕು? ಪ್ರಜಾಪ್ರಭುತ್ವ ‌ನಡೆದಿರೋದು ಪ್ರಜೆಗಳ ಸಹಕಾರದಿಂದ. ಈ ಸಹಕಾರವೇ ಅಜ್ಞಾನದೆಡೆಗೆ ನಡೆದರೆ ಅದಕ್ಕೆ ತಕ್ಕಂತೆ ಜೀವನವಿರುತ್ತದೆ.
ಆದರೆ ಸನಾತನ ಧರ್ಮದಲ್ಲಿ  ನಡೆಯುವುದಕ್ಕೆ ಕಷ್ಟವಿದೆ.
ವೈಜ್ಞಾನಿಕ ವಾಗಿ ಮುಂದೆ ಬೆಳೆದಿರುವ ಮನಸ್ಸಿಗೆ ಕಣ್ಣಿಗೆ ಕಾಣೋದಷ್ಟೆ ಸತ್ಯ. ಕಾಣದ ಸತ್ಯ ನಮ್ಮ ಹಿಂದೆ ಒಳಗೇ ಇದ್ದು  ನಡೆಸಿದರೂ  ನಾನು ಒಪ್ಪೋದಿಲ್ಲವೆಂದರೆ ನಡೆಸೋದು ಬಿಡೋದಿಲ್ಲ. ಇದಕ್ಕಾಗಿ ಹೊರಗಿನಿಂದ  ಅಸತ್ಯ ಅನ್ಯಾಯ ಅಧರ್ಮ ಬೆಳೆದು  ಪ್ರತಿಫಲವಾಗಿ ಹಿಂದಿರುಗಿ‌ಬರುತ್ತಿದೆ. ಒಂದು ಘಟ್ಟದವರೆಗೆ  ಅಸತ್ಯ ಬೆಳೆಸಬಹುದು ಮಿತಿಮೀರಿದರೆ ಕೆಳಗಿಳಿದು ಬರಲೇಬೇಕು. ಹಾಗಾಗಿ ನಮ್ಮ ಗುರುಹಿರಿಯರು ಸತ್ಯದ ಪರ ನಿಂತು  ಆಕಾಶದೆತ್ತರ ಬೆಳೆದರು. ಈಗಲೂ ಆಕಾಶದೆತ್ತರ ಹಾರಿದರೂ ಭೂಮಿಯ ಸತ್ಯ ಸತ್ವ ತತ್ವದ ಅರಿವಿಲ್ಲದಿದ್ದರೆ  ವ್ಯರ್ಥ ಜೀವನವೆನ್ನುವರು
ಇದಕ್ಕಾಗಿ  ಆತ್ಮಸಾಕ್ಷಿ ಯೇ ದೊಡ್ಡದು. 
ದೇಶ ಹಿಂದುಳಿದಿಲ್ಲ ಹಿಂದಿನವರಂತೆ ದೇಶವಾಸಿಗಳಲ್ಲಿ ಸತ್ಯ ಜ್ಞಾನವಿಲ್ಲ. ಹಾಗಾದರೆ ರಾಜಕೀಯದಲ್ಲಿ ಅಡಗಿದೆಯೆ? ಇಲ್ಲ
ಮನೆಯೊಳಗೆ ಇದೆಯೆ? ಮನಸ್ಸಿನಲ್ಲಿದೆಯೆ?
ಸತ್ಯ ಯಾವತ್ತೂ ಒಂದೇ.. ಅದರೊಂದಿಗೆ ಹೋದವರಿಗೆ ಅರ್ಥ ವಾಗಿದೆಯಷ್ಟೆ.ಅದನ್ನು ಬೆಳೆಸೋದಾಗಲಿ ಅಳಿಸೋದಾಗಲಿ  ಒಬ್ಬರಿಂದ ಸಾಧ್ಯವಿಲ್ಲ.ಅವರವರ ಸತ್ಯಕ್ಕೆ ತಕ್ಕಂತೆ ಧರ್ಮ ಬೆಳೆದಿದೆ.  ಒಂದೇ ಸತ್ಯ  ಅಸಂಖ್ಯಾತ ಸತ್ಯ ಆಗಿರೋದು ಹೊರಗಿನ ಜಗತ್ತಿನ ಪ್ರಭಾವ.
ಆ ಜಗತ್ತಿನೊಳಗಿದ್ದು  ಒಂದೇ ಸತ್ಯದೆಡೆಗೆ ನಡೆದವರು ಮಹಾತ್ಮರುಗಳು. ಮಹಾತ್ಮರುಗಳು  ಮೇಲಿನಿಂದ ಬಂದರೋ ಕೆಳಗಿನಿಂದ ಮೇಲೇರಿದರೋ  ಒಟ್ಟಿನಲ್ಲಿ  ಸತ್ಯವೇ ದೇವರೆಂದರು. 
ಹೇಳಿದ್ದು ಕೇಳಿದ್ದು ಮಾಡಿದ್ದು ನೋಡಿದ್ದು ಸುಳ್ಳಾಗಬಹುದು
ನಿಧಾನಿಸಿ ಯೋಚಿಸಿ ಚಿಂತಿಸಿ  ಅನುಭವಿಸಿದ ಮೇಲೇ ಸತ್ಯ ತಿಳಿಯುವುದು..ನಿಧಾನವೇ ಪ್ರಧಾನ.ತಾಳಿದವನು ಬಾಳಿಯಾನು. ಒಳ್ಳೆಯದನ್ನು ಹೇಳಿ,ಕೇಳಿ ಮಾಡಿ ನೋಡಿದವರಿಗೆ  ಜೀವನದಲ್ಲಿ ಒಳ್ಳೆಯದು ಆಗಿದೆ. ಆಯಸ್ಸು ಕಡಿಮೆಯಾಗಿದೆ ಎಂದರೂ ಒಳ್ಳೆಯದೆ ಕಾರಣ ಜೀವನ್ಮುಕ್ತಿ ಬೇಗ ಸಿಕ್ಕಿದೆ ಎನ್ನಬಹುದಲ್ಲವೆ?
ಹಿಂದಿನ  ಮಹಾತ್ಮರ ಕಥೆಗಳಲ್ಲಿ ಹೆಚ್ಚು ಆಯಸ್ಸಿರುವ ಮಗು ಬೇಕೋ ಕಡಿಮೆ ಆಯಸ್ಸಿನ‌ಜ್ಞಾನಿಯಾದ ಮಗು ಬೇಕೋ ಎಂದರೆ ಕಡಿಮೆ ಆಯಸ್ಸಾದರೂ ಸರಿ ಜ್ಞಾನಿಯಾದ ಮಗುವಿರಲಿ ಎಂದು ದೇವರನ್ನು ಬೇಡುತ್ತಿದ್ದರಂತೆ.‌
ಅಜ್ಞಾನದಲ್ಲಿ ಹೆಚ್ಚು ವರ್ಷ ಭೂಮಿಯಲ್ಲಿದ್ದರೆ ಭೂಮಿಗೇ ಭಾರ.

Friday, June 14, 2024

ಸೋತವರು ಯಾರು ಗೆದ್ದವರು ಎಲ್ಲಿ?

ಸೋತು ಗೆಲ್ಲುವುದು ಗೆದ್ದು ಸೋಲುವುದು ಜೀವನದಲ್ಲಿ ನಡೆಯುತ್ತಲೇ ಇರುತ್ತದೆ. ಆದರೆ  ಇದರಲ್ಲಿ ಎರಡೂ ರೀತಿಯಲ್ಲಿ ‌ಗೆಲುವು ಸೋಲನ್ನು ಕಾಣಬಹುದು.
ನಾನು ಸೋತಿಲ್ಲವೆನ್ನುವವರು ಹೊರಗೆ ಗೆಲ್ಲಲು ಹೊರಟರೆ  ಒಳಗಿನ‌ ಸೋಲು ಇದ್ದೇ ಇರುತ್ತದೆ. ಸತ್ಯದೊಂದಿಗೆ ಗುದ್ದಾಡಿದರೂ ಸೋಲು ನಿಶ್ಚಿತ. ಅಸತ್ಯದೊಂದಿಗೆ‌  ಸೇರಿದರೂ ಸೋಲು ನಿಶ್ಚಿತ. ಸತ್ಯ ದೇವರು,ಅಸತ್ಯ ಅಸುರರು. ಇವರಿಬ್ಬರ ನಡುವೆ ಮನುಕುಲವಿದೆ..ಒಮ್ಮೆ ದೇವತೆಗಳು ಗೆದ್ದರೆ ಇನ್ನೊಮ್ಮೆ ಅಸುರರ ಗೆಲುವು ಇದಕ್ಕೆ ಸಹಕಾರ ಕೊಟ್ಟ ಹುಲುಮಾನವನಿಗೆ  ಸೋಲು ಗೆಲುವಿನ ಆಟವಾಡೋದಷ್ಟೆ ಕರ್ಮ. ಅದನ್ನು ನೋಡಿಕೊಂಡು  ಇದ್ದವರಿಗೆ ಮನರಂಜನೆ .ಮನರಂಜನೆಯಿರಲಿ ಆತ್ಮವಂಚನೆ ಆಗದಿರಲಿ. ಎಲ್ಲಾ ಒಮ್ಮೆ ಗೆದ್ದವರೆ ಹಾಗೆ ಸೋತವರೆ.
ಪ್ರಳಯಕಾಲದಲ್ಲಿ ಎಲ್ಲಾ ಮುಳುಗಿದ ಮಾನವರೆ ಆಗಿರುವರು.
ಪರಮಸತ್ಯ ಧರ್ಮ ಕ್ಕೆ ತಲೆಬಾಗಿದರೆ ಗೆದ್ದಂತೆ ವಿರುದ್ದ ನಿಂತರೆ ಸೋತಂತೆ.

ಅಹಂಕಾರ ಆತ್ಮವಿಶ್ವಾಸವಾಗದು

ನನ್ನ ಮಾತನ್ನು ಕೇಳಿ ಹಲವರು ನನ್ನಲ್ಲಿ ಅಹಂಕಾರವಿದೆ ಎಂದು ತಿಳಿಯುವರು ಆದರೆ ಅಹಂಕಾರ ಪಡಲು ನನ್ನಲ್ಲಿ ಏನಿದೆ ಎಂದು ನಾನೇ ಪ್ರಶ್ನೆ ಮಾಡಿಕೊಂಡಾಗ  ನನ್ನದೇನೂ ಇಲ್ಲ ಎಲ್ಲಾ ಆ ಭಗವತಿಯ ಪ್ರೇರಣೆ ಎನ್ನುವ ಸತ್ಯ ತಿಳಿದಾಗ ಸತ್ಯ ತಿಳಿಸುವುದನ್ನು ಅಹಂಕಾರ ವೆಂದುಕೊಂಡರೆ ತಪ್ಪು ಅದನ್ನು ಆತ್ಮವಿಶ್ವಾಸವೆಂದುಕೊಂಡಾಗ  ಸತ್ಯದರ್ಶನ ನಮಗೆ ಒಳಗೇ ಆಗುತ್ತದೆ. ಯಾರೇ ಆಗಿರಲಿ  ಸತ್ಯದ ದಾರಿಯಲ್ಲಿ ನಡೆಯುವಾಗ  ಆತ್ಮವಿಶ್ವಾಸ ಹೆಚ್ಚುತ್ತದೆ ಅಹಂಕಾರ ಕರಗುತ್ತದೆ. ಇಷ್ಟಕ್ಕೂ ಅಹಂಕಾರ ಪಡಲು ನಾವ್ಯಾರು? ಎಲ್ಲಿಂದ‌ಬಂದೆವು? ಯಾಕೆ ಬಂದೆವು? ಎಲ್ಲಿಗೆ ಸೇರಬೇಕು? ಯಾಕೆ  ಸೇರಬೇಕೆಂಬ ವಿಷಯ ಅಧ್ಯಾತ್ಮ ದ ಮೂಲಕ ತಿಳಿಯುವಾಗ ಅಹಂಕಾರ ಹೆಚ್ಚಾಗುವುದೆ ಆತ್ಮವಿಶ್ವಾಸವೆ? 
ಅದಕ್ಕೆ ಮಾತಿಗಿಂತ ಕೃತಿಯೇ ಮೇಲೆಂದರು. ಇಂದು ಹೆಚ್ಚು ಕೃತಿಚೌರ್ಯ ಹೆಚ್ಚಾಗಿದೆ  ಕಾರಣ ಮೂಲದ ಕೃತಿಯಲ್ಲಿ ಅಡಗಿದ್ದ ಸತ್ಯ ಧರ್ಮ ಅರ್ಥ ವಾಗಿಲ್ಲವಷ್ಟೆ.ಕೃತಿಚೌರ್ಯಕ್ಕೆ ಹೆಚ್ಚು ಬೆಲೆಕೊಟ್ಟು ಕೊಂಡುಕೊಳ್ಳುವವರಿದ್ದಾರೆಂದರೆ ಅಸತ್ಯ  ಬೆಳೆಯುತ್ತಿದೆ ಎಂದರ್ಥ. ಎಷ್ಟು ಬೆಳೆದರೂ ಹೊರಜಗತ್ತಿನಲ್ಲಿ  ಹರಡುತ್ತದೆ ಅದೇ ಒಳಜಗತ್ತನ್ನು ಹಿಂದುಳಿಸುತ್ತದೆ.
ಆಕಾಶದೆತ್ತರ ಹಾರಬಹುದು ಅಲ್ಲಿಯೇ ವಾಸ ಮಾಡಲು ಸಾಧ್ಯವೆ? ಇಲ್ಲವೆಂದರೆ ನಾವು ಅರಿತಿರೋದು ಅಲ್ಪ ಸ್ವಲ್ಪ ವಾದರೂ ಇಷ್ಟೊಂದು ಹಾರಾಟ ಮಾರಾಟ ಹೋರಾಟ ನಡೆಸುತ್ತಿರೋದರ ಹಿಂದೆ  ಏನರ್ಥ ವಿದೆ?  ಶಾಂತವಾಗಿದ್ದ ಮನಸ್ಸಿಗೆ ಹೊರಗಿನ  ಅಸತ್ಯದ ವಿಷಯತುಂಬಿ  ಅಶಾಂತಿಯ ಗೂಡಾಗಿಸಿಕೊಂಡರೆ  ಕಷ್ಟ ‌ನಷ್ಟ ಯಾರಿಗೆ?
ಮನಸ್ಸು ಸ್ಥಿರವಾಗಲು ಅಧ್ಯಾತ್ಮ ಸತ್ಯ ಅಗತ್ಯವೆಂದರು.
ಅಧ್ಯಾತ್ಮ ಎಂದರೆ ತನ್ನತಾನರಿಯುವ  ಆತ್ಮಜ್ಞಾನವಾಗಿತ್ತು.
ಯಾರನ್ನೂ ಅರಿತು ನಡೆಯುವ ಮೊದಲು ಪರಮಾತ್ಮನ ಅರ್ಥ  ತಿಳಿದರೆ ಎಲ್ಲೋ ಹುಡುಕುವ ಬದಲು ಒಳಗೇ ಸಂಶೋಧನೆ ಆಗಬಹುದು. ಎಲ್ಲಾ ಕಾಲದ ಮಹಿಮೆ.
ಜಗತ್ತು ನಡೆದಿದೆ ನಡೆಯುತ್ತಿದೆ ನಡೆಯುತ್ತಲೇ ಇರಬೇಕು
 
ಅಧಿಕಾರ ಸ್ಥಾನ ಹಣವಿದ್ದವರು  ಅಸತ್ಯ ನುಡಿದರೂ ಸತ್ಯ ಎಂದು ತಿಳಿಯುವ ಜನರಿಗೆ  ಸತ್ಯ ನುಡಿಯುವವರ ಮಾತು ಅಹಂಕಾರ ಎನಿಸುವುದು ಸಹಜ. ವ್ಯಕ್ತಿಯನ್ನು ಕಾಣುವಾಗ ವ್ಯಕ್ತಿತ್ವದ ಪರಿಚಯವಾಗೋದು ಕಷ್ಟವಿದೆ. ಹೀಗಾಗಿ‌ಜಗತ್ತು ವ್ಯಕ್ತಿಯಿಂದ ನಡೆಯುತ್ತಿದೆ ವ್ಯಕ್ತಿತ್ವ ಕುಸಿಯುತ್ತಿದೆ. 

ಎಲ್ಲಾ ಒಂದಲ್ಲ ಒಂದು ರೀತಿಯಲ್ಲಿ ಸಾಧಕರೆ. ಈ ಭೂಮಿಯಲ್ಲಿ ಜನ್ಮ ಪಡೆಯಲು ಎಷ್ಟೋ ಜನ್ಮಗಳನ್ನು ಪಡೆದು ಮಾನವನಾಗಿರೋದೆ ದೊಡ್ಡ ಸಾಧನೆ. ಮಾನವನಾಗಿ ಜನ್ಮ ಪಡೆದ ಮೇಲೆ ತನ್ನ ಜನ್ಮಕ್ಕೆ ಕಾರಣರಾದ  ಪೋಷಕರ ಋಣದಿಂದ ಹಿಡಿದು ನಡೆಸುತ್ತಿರುವ ಪರಮಾತ್ಮನ ವರೆಗೆ  ತಿಳಿದು ನಡೆಯುವುದೆ ಜೀವನದ ಗುರಿ.
ಇದರಲ್ಲಿ ಯಾರು ಎಷ್ಟು ಅರ್ಥ ಮಾಡಿಕೊಳ್ಳಲು ಸಾಧ್ಯವೋ ಅಷ್ಟು ತಿಳಿದು ಮೇಲೇರಿರುವರು. ಮೇಲೆ ಹೋದವರ ಹೆಸರು ಹಿಡಿದು ಕೆಳಗೆ ನಡೆಸುವರು.ಕೆಳಗಿದ್ದವರ ಹೆಸರು ಹಿಡಿದು ವ್ಯವಹಾರದೊಳಗಿರುವರು.ಏನೂ ಅರಿಯದವರ ಹಿಡಿದು ರಾಜಕೀಯ ಮಾಡುತ್ತಿರುವವರೆಲ್ಲರೂ ಸಾಧಕರೆ.
ಒಬ್ಬೊಬ್ಬರು  ಒಂದೊಂದು ಕಲೆಯಲ್ಲಿ ಆಸಕ್ತಿ ಹೊಂದಿ ಮುಂದೆ ನಡೆಯುವರು.ಇದರಲ್ಲಿ ಸತ್ಯಧರ್ಮ ಇದೆಯೋ ಇಲ್ಲವೋ ಎನ್ನುವ  ಜ್ಞಾನದಿಂದ  ನಡೆದಾಗಲೇ ಆತ್ಮಕ್ಕೆ ತೃಪ್ತಿ.
ಒಟ್ಟಿನಲ್ಲಿ ಅವರವರ ಆತ್ಮರಕ್ಷಣೆಗೆ ಸತ್ಯವೇ ದೇವರು.
ಅಸತ್ಯದಿಂದ  ದೈವತ್ವಕ್ಕೆ  ತಡೆಯಾದರೂ  ಕೊನೆಗೆ ಸತ್ಯದ‌ಕಡೆಗೆ ನಡೆದವರು  ಅನುಭವಿಗಳು. ಮಾಯೆಯ ಒಳಗಿರುವ‌ಮನಸ್ಸಿಗೆ ಸತ್ಯ ಅಸತ್ಯ ಎರಡೂ ಕಾಣುತ್ತದೆ.ಆದರೆ ಒಳಜಗತ್ತು ಸತ್ಯದಿಂದ ನಡೆಯುತ್ತದೆ. ಎರಡನ್ನೂ  ಬಳಸಿಕೊಂಡು ಮನುಕುಲ ನಡೆಯುತ್ತದೆ. ಇಲ್ಲಿ ಯಾರೂ ಶಾಶ್ವತವಲ್ಲ ಇದು ಸತ್ಯ.

ಅಂದೇ  ಪುರಂಧರ ದಾಸರು ಸತ್ಯವಂತರಿಗೆ ಇದು ಕಾಲವಲ್ಲ ದುಷ್ಟ ಜನರಿಗೇ ಸುಭಿಕ್ಷಕಾಲವೆಂದಿದ್ದರು.ಈಗಿದು ಪುರಂಧರ ದಾಸರ  ಹೆಸರಿನಲ್ಲೇ ಅಸತ್ಯ ಬೆಳೆಸಿದರೂ  ಕೇಳೋರಿಲ್ಲವಾಗಿದೆಯಷ್ಟೆ. ಇದು ಕಲಿಯುಗ.ಕಲಿಯುವ ಯುಗ ಹೊರಗೆ ಕಲಿತಷ್ಟೂ ಅಸತ್ಯವೇ ಬೆಳೆಯೋದು.ಒಳಗೆ ಸ್ವಚ್ಚವಾಗುವ‌ ಕಲಿಕೆಯಿದ್ದರೆ ಉತ್ತಮ. ಯಾರಿಗೆ ಗೊತ್ತು ಯಾರೊಳಗೆ ಯಾವ‌ ಮಹಾತ್ಮರಿರುವರೋ  ಅಸುರರಿರುವರೋ?  ಕಾಲಾಯ ತಸ್ಮೈ ನಮ: