ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Tuesday, November 29, 2022

ಸ್ತ್ರೀ ಯನ್ನು ಹಣದಿಂದ ಅಳೆಯಬಹುದೆ?

*ಧರ್ಮಕ್ಕೆ ತಿಂದು ಅಭ್ಯಾಸ ಬೆಳೆಸಿಕೊಂಡವನು ದುಡಿದು ತಿನ್ನಲು ಮನಸು ಮಾಡಲಾರ.**
ದುಡಿದು ತಿನ್ನದೆ ಆತ್ಮನಿರ್ಭರ ಭಾರತವಾಗೋದಿಲ್ಲ.  ನಮ್ಮ  ಧರ್ಮ ಕರ್ಮ ಗಳಲ್ಲಿ   ಸ್ವಚ್ಚತೆ, ಸತ್ಯ, ಸದಾಚಾರ, ಸ್ವಾಭಿಮಾನ ,ಸ್ವಾವಲಂಬನೆಯ  ತತ್ವಜ್ಞಾನವಿದ್ದು ಪರಮಾತ್ಮನಿಗೆ ಮೀಸಲಾಗಿಟ್ಟವರಿಗೆ ಮೇಲಿನ‌ಮುಕ್ತಿ ಮೋಕ್ಷ
ಎನ್ನುವ ಅಧ್ಯಾತ್ಮ ಸತ್ಯ  ಅರ್ಥ ವಾಗಲು ರಾಜಕೀಯದಿಂದ ಅಸಾಧ್ಯ. ರಾಜಯೋಗದಿಂದ ಸಾಧ್ಯವಿದೆ ಇದನ್ನು ಸ್ವಾಮಿ ವಿವೇಕಾನಂದರು  ಭಾರತ ಸ್ವಾತಂತ್ರ್ಯ ಕಳೆದುಕೊಳ್ಳಲು ರಾಜಕೀಯವೆ  ಕಾರಣವೆಂಬ ಸತ್ಯವನ್ನು ಅಂದೇ ತಿಳಿಸಿದ್ದರು. 
ಅಂದಿನ ಧಾರ್ಮಿಕ  ಗುರು ಹಿರಿಯರಲ್ಲಿದ್ದ ಧಾರ್ಮಿಕ ಜ್ಞಾನ
ಅಂದಿನ ರಾಜರಿಗೂ  ಅನ್ವಯಿಸುತ್ತಿತ್ತು ಹಾಗೇ ಪ್ರಜೆಗಳೂ ನಡೆಯುವ ಅವಕಾಶವಿತ್ತು. ಕಾಲಾನಂತರದ ಭೌತಿಕ ಜ್ಞಾನದ ಅಹಂಕಾರ ಸ್ವಾರ್ಥ ಕ್ಕೆ  ತತ್ವವೇ ತಂತ್ರವಾಗುತ್ತಾ ಮಾನವ ತನ್ನ ಅಸುರ ಶಕ್ತಿಯಿಂದ ಆಳಿದ ಪರಿಣಾಮವೇ  ಇಂದಿಗೂ
ಅಜ್ಞಾನದ ಅಸಮಾನತೆಗೆ  ಅಜ್ಞಾನದಿಂದಲೇ ಪರಿಹಾರದ ಹಣ ಕೊಟ್ಟು ಇನ್ನಷ್ಟು ಸಾಲದ ದವಡೆಗೆ ಮಾನವನ ಜೀವ
ಸಿಲುಕಿ  ಸಾಯುತ್ತಿದೆ. ಸಾಲ ತೀರಿಸಲು ಬಂದ ಜೀವಕ್ಕೆ ಸಾಲದ ಹೊರೆ ಹಾಕಿದರೆ  ಅವರವರ ಸಾಲಕ್ಕೆ ಅವರೆ ಜವಾಬ್ದಾರರೆನ್ನುವ ಹಾಗೇ ಕರ್ಮಕ್ಕೆ ತಕ್ಕಂತೆ ಪ್ರತಿಫಲ.
ಪರಮಾತ್ಮನಿಗೇನೂ ನಷ್ಟವಿಲ್ಲ. ಮೇಲಿದ್ದವರು ಕೆಳಗಿಳಿಯುತ್ತಾರೆ.ಕೆಳಗಿದ್ದವರು ಮೇಲೆ ಹೋಗುತ್ತಾರೆ. ಮಧ್ಯದಲ್ಲಿ ಸಿಕ್ಕಿಹಾಕಿಕೊಂಡವರು  ಅತಂತ್ರಸ್ಥಿತಿಗೆ ತಲುಪುತ್ತಾರೆ. ಇಷ್ಟೇ ಜೀವನ. 
ಧರ್ಮವನ್ನು ತಿನ್ನಬಾರದು ಆಗೋದಿಲ್ಲ. ಧರ್ಮಧಾರಣೆ ಮಾಡಿಕೊಂಡರೆ ಧರ್ಮ ರಕ್ಷಣೆ. ಹಾಗಾದರೆ ಧರ್ಮ ಯಾವುದು? ಎಲ್ಲಿದೆ? ಎಷ್ಟಿದೆ? ಯಾಕಿದೆ? ಯಾರಲ್ಲಿದೆ? 
ಪ್ರಶ್ನೆಗೆ ಉತ್ತರ ಸರ್ಕಾರದಲ್ಲಿದೆಯೆ?  ಸರ್ಕಾರ  ನಡೆದಿರೋದೆ ಅಧರ್ಮ ದಿಂದ ಅದರ ಹಿಂದೆ ನಡೆದರೆ ನಮ್ಮ ಮೂಲ ಧರ್ಮದ ಗತಿ ಅಧೋಗತಿ. ಅವರವರ ಹಿಂದಿನ ಗುರು ಹಿರಿಯರಲ್ಲಿದ್ದ ಸತ್ಕರ್ಮ ,ಸ್ವಧರ್ಮದಿಂದ ಸರಳವಾಗಿ ಸ್ವತಂತ್ರ ವಾಗಿ ಜೀವನ ನಡೆಸಿ ಒಗ್ಗಟ್ಟಿನಿಂದ  ಬದುಕುತ್ತಿದ್ದವರನ್ನು ಬಡವರೆಂದು ಹೊರಗೆಳೆದು ಬೇರೆ ಮಾಡಿ  ಸಾಲದ ರುಚಿ ತೋರಿಸಿ ,ಉಚಿತವಾಗಿ ತಿನ್ನಿಸಿದರೆ
ನಿಜವಾದ ಶ್ರೀಮಂತ ಜ್ಞಾನ   ಬೆಳೆಯುವುದು ಅಸಾಧ್ಯ. 
ಈಗಲೂ ಜ್ಞಾನದ ಹೆಸರಲ್ಲಿ ರಾಜಕೀಯ ಬೆಳೆಸಿಕೊಂಡರೆ
ಅದೂ ಅಜ್ಞಾನವೇ ಆಗುತ್ತದೆ. ಸ್ವತಂತ್ರ ಭಾರತದಲ್ಲಿ ಸ್ವಾತಂತ್ರ್ಯ ಯಾರಿಗೆ  ಹೋಗುತ್ತಿದೆ? ಜನಸಾಮಾನ್ಯರಂತೂ
ಸರ್ಕಾರದ ಹಿಂದೆ ನಿಂತು ಬೇಡೋದು ತಪ್ಪಿಲ್ಲ.ಸರ್ಕಾರ ಕ್ಕೆ ಜನರಿಗೆ ಉತ್ತಮ ಶಿಕ್ಷಣ ನೀಡಲು ಸಾಧ್ಯವಾಗಿಲ್ಲ.ಜ್ಞಾನವೇ ಇಲ್ಲದವರನ್ನು ಆಳಬಹುದು.ಜ್ಞಾನಿಗಳನ್ನು ಆಳಲಾಗದು.
ಅದಕ್ಕೆ ಅಜ್ಞಾನವನ್ನು ಹೆಚ್ಚಿಸುತ್ತಾ ರಾಜಕೀಯ ಮಿತಿಮೀರಿ ಬೆಳೆಸಿದ್ದಾರೆ. ಯಾರದ್ದೋ ಹಣ ಯಲ್ಲಮ್ಮನ ಜಾತ್ರೆ. ದೇವರು ಕಾಣುವನೆ? ನಾನೇ ದೇವರೆ?  
ಮಹಿಳೆ ಮಕ್ಕಳನ್ನು ಹೊರಗೆಳೆದು  ಆಳುವುದರಲ್ಲಿ  ಯಾವ ಪುರುಷಾರ್ಥ ವಿದೆ? ಸ್ತ್ರೀ ಶಕ್ತಿಯ ಆತ್ಮಜ್ಞಾನದಿಂದ  ಅಧ್ಯಾತ್ಮ
ಸತ್ಯ  ತಿಳಿಯಬಹುದು. ಸತ್ಯ ತಿಳಿಸದೆ ಅಧರ್ಮ ದಲ್ಲಿ ನಡೆಸಿ
ಸ್ತ್ರೀ ದುಡಿಮೆಯಲ್ಲಿಯೇ  ಪುರುಷ  ಜೀವನ  ನಡೆಸುವಷ್ಟು ಕೆಳಮಟ್ಟಕ್ಕೆ  ಭಾರತ ಹಿಂದುಳಿಯುತ್ತಿದೆಯೆ?  ಸರ್ಕಾರದ  ಹಿಂದೆ  ನಡೆದರೆ ಪರಮಾತ್ಮ ಕಾಣುವನೆ?

ದೇವತೆಗಳ ಸೇನಾಧಿಪತಿಯಾಗಿರುವ ಶ್ರೀ ಸುಬ್ರಮಣ್ಯ ಷಷ್ಠಿ  ಇಂದಿನ ವಿಶೇಷ. ಗಂಡು ಮಕ್ಕಳ ಭಾಗ್ಯೋದಯ ಮಾಡುವ ದೇವತೆ. ಗಂಡು ಮಕ್ಕಳಿಲ್ಲದವರಿಗೆ ಮುಕ್ತಿ ಇಲ್ಲ ಎನ್ನುವ ನಂಬಿಕೆಯೂ ಇದೆ.ಕಾರಣವಿಷ್ಟೆ ಧಾರ್ಮಿಕ ಕಾರ್ಯದಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಂಡು ಆತ್ಮಜ್ಞಾನದೆಡೆಗೆ ಧರ್ಮದೆಡೆಗೆ ಹೋಗುವ ಶಕ್ತಿ ಪುರುಷನಿಗಿರುವಷ್ಟು ಸ್ತ್ರೀ ಗಿಲ್ಲ. ಅದರಲ್ಲೂ ಭೂಮಿಯ ಮೇಲಿದ್ದು ಅವಳನ್ನರಿತು ಜೀವನ ನಡೆಸುವಾಗ ಆತ್ಮಜ್ಞಾನ ಅಗತ್ಯವಿದೆ. ಅಂತಹವರಿಗೆ  ಮೇಲಿರುವ ದೈವ ಸಾನಿದ್ಯ ದೊರೆತಾಗ ಅವರ ಪಿತೃಗಳಿಗೂ ಮುಕ್ತಿ ಗೆ ದಾರಿಯಾಗುತ್ತದೆ.
ಇದರರ್ಥ ಸ್ತ್ರೀ ಗೆ ಅಸಾಧ್ಯವೆನ್ನುವುದು ತಪ್ಪು. ಹಿಂದಿನ ಎಷ್ಟೋ ಮಹಾಸತಿಯರು,ಪತಿವ್ರತೆಯರು,ಧರ್ಮ ಪತ್ನಿಯರು ಪತಿಯನ್ನು ಧರ್ಮದ ಹಾದಿಯಲ್ಲಿ ನಡೆಸುತ್ತಾ,ಸಹಕರಿಸುತ್ತಾ ಮುಕ್ತಿ ಮಾರ್ಗ ಹಿಡಿದಿದ್ದಾರೆ. ಜ್ಞಾನಕ್ಕೆ ಅಧಿಕಾರ ಕೊಡುವುದೂ ಸ್ತ್ರೀ ಶಕ್ತಿಯೇ ಆದ್ದರಿಂದ
ಮದುವೆಯನ್ನು  ವ್ಯಾಪಾರ ದೃಷ್ಟಿಯಿಂದ ಅಳೆಯದೆ ಪವಿತ್ರ ದೃಷ್ಟಿಯಿಂದ ತಿಳಿದವರಿಗೆ ಇಹ ಪರದಲ್ಲಿ ಸುಖ ಶಾಂತಿ ನೆಮ್ಮದಿ ಇರುತ್ತದೆ. ಹಣದಿಂದ ಸ್ತ್ರೀ ಗೆ ಬೆಲೆಕಟ್ಟುವ ಮೊದಲು
ಸ್ತ್ರೀ ಸ್ವಯಂ ಲಕ್ಮಿಯೇ ಎನ್ನುವ ಸತ್ಯ ತಿಳಿದರೆ ಉತ್ತಮ.
ಸರಸ್ವತಿಯ ಜ್ಞಾನವನ್ನು ಕೊಡದೆ ಲಕ್ಮಿಯನ್ನು ದುರ್ಭಳಕೆ ಮಾಡಿಕೊಂಡರೆ  ಲಕ್ಮಿಯಿದ್ದರೂ ಸಂಸಾರದಲ್ಲಿ ಸುಖವಿಲ್ಲದೆ
ಜೀವ ಹೋಗುತ್ತದೆ. ಇದನ್ನು  ಇಂದಿಗೂ  ಮಾನವ ಅರ್ಥ ಮಾಡಿಕೊಳ್ಳಲು ಸೋತಿರುವುದಕ್ಕೆ ಕಾರಣ ಅಜ್ಞಾನ.
ಎಲ್ಲವನ್ನೂ ಹಣದಿಂದ ಖರೀದಿಸುವಷ್ಟು  ಅಜ್ಞಾನ ಭಾರತಾಂಬೆಯ ಮಕ್ಕಳಿಗೆ ಬರಬಾರದಿತ್ತು. ಅಜ್ಞಾನವೇ ಎಲ್ಲಾ ಸಮಸ್ಯೆಗಳಿಗೆ ಕಾರಣವಾಗುತ್ತಿದೆ.ಸರ್ಕಾರ ಅಜ್ಞಾನಿಗಳಿಗೆ  ಮಣೆ ಹಾಕಿ  ಜ್ಞಾನವನ್ನು ಹಿಂದುಳಿಸಿದರೆ  ಲಾಭ ಯಾರಿಗೆ? ನಷ್ಟ ಯಾರಿಗೆ?  ಶಾಶ್ವತ ಯಾವುದು? ಯಾರು ಶಾಶ್ವತ?
ಮದುವೆಯಾದ ನಂತರ ಹಣವಿರುವುದೆ? ಜ್ಞಾನವೇ? ಎಲ್ಲಿರುವರು ಜ್ಞಾನಿಗಳು?  ಸರ್ಕಾರದ ಬೊಕ್ಕಸದ ಹಣ ಕಸಕ್ಕೆ ಸಮಾನವೆನ್ನುವ ಜ್ಞಾನಿಗಳಿಂದ ಕೂಡಿದ ಪ್ರಜೆಗಳಿದ್ದರೆ ಮಾತ್ರ    ದೇಶದಲ್ಲಿ ಧರ್ಮ ರಕ್ಷಣೆ. ಆಗ ಸರ್ಕಾರದ ಹಣವೂ ಸದ್ಬಳಕೆ ಆಗಬಹುದು. ಆದರೆ ಜ್ಞಾನದ ಶಿಕ್ಷಣ ಕೊಡದೆ ಆಳುವವರಿಗೆ ಸಹಕಾರವಿರೋವಾಗ  
ಇದಕ್ಕೆ ಕಾರಣವೆ ನಾವು.
ಇದರ ಫಲವೇ ಮುಂದಿನ ಪೀಳಿಗೆ ಅನುಭವಿಸುವುದು. 
ಮಗು ಹುಟ್ಟುವಾಗಲೇ  ಸಾಲದ ಹೊರೆ ಹಾಕುವ ಪೋಷಕರಿಗೆ  ಮದುವೆಗೂ  ಸರ್ಕಾರದ ಋಣದ ಅಗತ್ಯ ಬಂತೆ? ಎಲ್ಲಿಗೆ ಹೋಗುತ್ತಿದೆ  ಮನುಕುಲ? ಅಸಮಾನತೆಯು
ಜ್ಞಾನದಲ್ಲಿದೆ.  ಸತ್ಯಜ್ಞಾನದ ಶಿಕ್ಷಣದ ಕೊರತೆಯಿದೆ. 
ಸರಸ್ವತಿಗೆ ಲಕ್ಮಿಯ ಅಲಂಕಾರ ಮಾಡಬಹುದು. ಲಕ್ಮಿಗೆ ಸರಸ್ವತಿಯ ಜ್ಞಾನ ಬೇಡವೆ?

Saturday, November 26, 2022

ಮೇಲರಿಮೆ ಕೀಳರಿಮೆ ಇರೋದು ಅರಿವಿನಲ್ಲಿ

ಜೀವನದಲ್ಲಿ ಕೀಳರಿಮೆ ಮೇಲರಿಮೆ ಎನ್ನುವುದು  ಅವರವರ ಅರಿವಿನ‌ಲ್ಲಿದೆ.
ಒಂದು ಸಂಸಾರ ಸಮಾಜ,ದೇಶದ ಒಳಗಿರುವಾಗ ಎಲ್ಲರಲ್ಲಿಯೂ ಒಂದೇ ಅರಿವಿರೋದು ಕಷ್ಟ.ಕಾರಣ ಅರಿವು ಎಂದರೆ ಜ್ಞಾನ ಜ್ಞಾನವು ಅವರವರ ಹಿಂದಿನ ಕರ್ಮ ಧರ್ಮದ ಮೇಲೇ ನಿಂತಿರುತ್ತದೆ. ಸಾಕಷ್ಟು ಜ್ಞಾನವನ್ನು ಹೊರಗಿನಿಂದ ಪಡೆದರೂ ಒಳಗೆ ಹೋಗಿ ಅರ್ಥ ಮಾಡಿಕೊಳ್ಳಲು ಅಸಾಧ್ಯ. ಅರ್ಥ ವಾದರೂ ನಡೆಯಲು ಕಷ್ಟ
ಇಲ್ಲಿ ಹೊರಗಿನ ಜ್ಞಾನ,ಒಳಗಿನ ಜ್ಞಾನಕ್ಕೆ ಹೊಂದಿಕೆಯಾದರೆ ಮಾತ್ರ ಶಾಂತಿ,ಸಮಾಧಾನ,ತೃಪ್ತಿ. ಯಾವಾಗ ವಿರುದ್ದವಿದ್ದು ಅನಿವಾರ್ಯವಾಗಿ  ತಿಳಿಯಲೇಬೇಕಾಗುವುದೋ ಆಗಲೇ
ಮಾನವನಿಗೆ  ಅಸಂತೋಷ, ಅತೃಪ್ತಿ,ಅಸಮಧಾನ ಹಾಗೇ ಅಜ್ಞಾನವೂ ಹೆಚ್ಚುವುದು.ಬೇಡದನ್ನು ಬೇಕಾದೆಡೆಗೆ ಹಾಕಿದರೆ
ತಿರಸ್ಕರಿಸುವುದು ಒಳಗಿನ‌ಮನಸ್ಸು.ಇದೇ ಕಾರಣದಿಂದ ಇಂದು ಮಕ್ಕಳು ಮಹಿಳೆಯರು ಸಾಕಷ್ಟು ನೊಂದು ಬೆಂದು ಹೊರಬರುತ್ತಿರುವುದೆನ್ನಬಹುದು. ಒಟ್ಟಿನಲ್ಲಿ  ಕೀಳರಿಮೆಯಿದ್ದರೆ ಯಾವುದೇ ಸಾಧನೆ ಮಾಡಲು ಕಷ್ಟ. ಯಾರೋ ಹೆಸರುಮಾಡಿದ್ದಾರೆ,ಹಣಮಾಡಿದ್ದಾರೆಂದರೆ ನಮಗೆ ಕಷ್ಟವೆನಿಸುವುದಕ್ಕೆ ಕಾರಣವೆ ನಮ್ಮ ಕೀಳರಿಮೆ.
ಇದಕ್ಕೆ ಪರಿಹಾರ ಒಂದೇ ನಮ್ಮೊಳಗೇ ಅಡಗಿರುವ  ಜ್ಞಾನವನ್ನು ಪರೀಕ್ಷಿಸಿಕೊಂಡು ನಮ್ಮ ಜೀವನಕ್ಕೆ ಸಾಕಾದಷ್ಟು ದುಡಿದು ಗಳಿಸಿ ಹೆಚ್ಚಾಗಿದ್ದರೆ ದಾನ ಧರ್ಮದಲ್ಲಿ ತೊಡಗಿಸಿಕೊಂಡರೆ ಯಾರೇನೇ ಹೇಳಲಿ ನಮ್ಮ ಆತ್ಮತೃಪ್ತಿ ನಮಗಿದ್ದರೆ  ಹೇಳೋರಿಗೇ ಕಷ್ಟ ನಷ್ಟ. 
ಈ ಹೊರಗಿನ ಶ್ರೀಮಂತ ರ ಹಿಂದೆ ನಡೆದಷ್ಟೂ ನಮ್ಮ ಒಳಗಿನ ಶ್ರೀಮಂತಿಕೆ  ದೂರವಾಗುತ್ತದೆ.ನಿಜವಾದ ಕೀಳರಿಮೆ
ಇವರದ್ದಾಗಿರುತ್ತದೆ. ಸ್ವಾರ್ಥ ಸುಖಕ್ಕಾಗಿ ಪರರನ್ನು ಆಶ್ರಯಿಸಿ ನಡೆದಷ್ಟೂ ಪರಕೀಯರಿಗೆ ಶಕ್ತಿ ಹೆಚ್ಚುವುದು.
ವಿದೇಶಿಗಳನ್ನು ಹಿಂದೆ ಪರದೇಶಿಗಳು ಎನ್ನುವ ಕೆಟ್ಟ ಭಾವನೆಯಲ್ಲಿ  ಕರೆಯುತ್ತಿದ್ದರು.ಈಗ ಕಾಲಬದಲಾಗಿದೆ ನಮ್ಮ‌ಮಕ್ಕಳು ವಿದೇಶಕ್ಕೆ ಹೋಗುವರೆಂದರೆ ಎಲ್ಲಿಲ್ಲದ ಮೇಲರಿಮೆ. ಅಂದರೆ ಭೌತಿಕದ ಸತ್ಯ ಇಂದು ಮುಂದಾಗಿ ಮೇಲೆ ಏರಿ ಅಧ್ಯಾತ್ಮ ಸತ್ಯ ಕೀಳಾಗಿ ಕಾಣುವವರಿಂದ ಆತ್ಮನಿರ್ಭರ ಭಾರತ ಸಾಧ್ಯವಿಲ್ಲ. ಸಾಧ್ಯವಾದರೆ ಮೊದಲು ಭಾರತೀಯರಾಗಬೇಕು. ಇದು ಜನಸಾಮಾನ್ಯರಿಗೆ ಸಾಧ್ಯವಿದೆ. ನಮ್ಮ ಕೀಳರಿಮೆಯಿಂದ ಮೇಲೆ ಬಂದು ನಮ್ಮ ಆತ್ಮಸಾಕ್ಷಿಗೆ ಬೆಲೆಕೊಡಲು ಹೊರಗಿನ ಸರ್ಕಾರದ ರಾಜಕೀಯ ಬೇಡ. ನಮ್ಮೊಳಗೇ ಇರುವ ರಾಜಯೋಗ ಬೇಕಿದೆ.ಯೋಗ್ಯ ಶಿಕ್ಷಣದಿಂದ ಯೋಗಿಗಳಿಂದ ಯೋಗದಿಂದ ಮಾತ್ರ ಸಾಧ್ಯ.ಯೋಗ ಎಂದರೆ ಜೀವಾತ್ಮ‌ಪರಮಾತ್ಮನೆಡೆಗೆ ಹೋಗಿ ಸೇರುವುದು.ಈಗಿನ ವಿದೇಶ ಯೋಗ ದೇಶವನ್ನು ಸಾಲದ ಕಡೆಗೆ ನಡೆಸುತ್ತಾ  ಇನ್ನಷ್ಟು  ಜ್ಞಾನಿಗಳನ್ನು ಹಿಂದುಳಿಸಿ ಆಳುತ್ತಿದೆ.ಒಟ್ಟಿನಲ್ಲಿ ಜ್ಞಾನದಿಂದ ಕೀಳರಿಮೆ ಕಡಿಮೆಯಾಗುತ್ತದೆ. ನಾವೆಷ್ಟೇ ವೈಜ್ಞಾನಿಕ ಸಂಶೋಧನೆ ನಡೆಸಿದರೂ ಅರಿವು ಹೊರಗಿನ ಸತ್ಯ ಮಾತ್ರ ತಿಳಿಸಬಹುದು.
ಒಳಗೇ ಅಡಗಿರುವ ಹಿಂದಿನ  ಎಲ್ಲಾ ಸತ್ಯವನ್ನು ಧಾರ್ಮಿಕವಾಗಿ ಅರ್ಥ ಮಾಡಿಕೊಳ್ಳಲು ಬೇಕಿದೆ ಆತ್ಮಜ್ಞಾನ.
ಆತ್ಮನಿರ್ಭರ ಭಾರತ ಆತ್ಮಜ್ಞಾನದಿಂದ ಮಾತ್ರ ಸಾಧ್ಯ.
ಹೊರಗಿನಿಂದ ಬರುವ  ಎಲ್ಲರಿಗೂ ಭಾರತೀಯತೆಯ ಶಿಕ್ಷಣ ನೀಡುವುದರ ಮೂಲಕ ಭಾರತ ವಿಶ್ವಗುರು ಆಗಬಹುದಷ್ಟೆ.ಹೊರಗಿನಿಂದ ಬಂದವರ  ಶಿಕ್ಷಣ, ಧರ್ಮ, ಸಂಸ್ಕೃತಿ, ಭಾಷೆಗಳನ್ನು  ನಾವೇ ಕಲಿಯುತ್ತಾ ಅವರವ್ಯವಹಾರಕ್ಕೆ ಕೈ ಜೋಡಿಸಿಕೊಂಡಿದ್ದರೆ  ಆತ್ಮದುರ್ಭಲ ಭಾರತ.ಇದರಿಂದಾಗಿ ನಾವೇ ಅವರ ಮುಂದೆ ಕೀಳಾಗಬೇಕು.
ಮೊದಲು ನಮ್ಮತನ ಉಳಿಸಿಕೊಂಡು ನಂತರ ಹೊರಗಿನವರಿಗೆ ಕಲಿಸಬೇಕಿದೆ.ಇದು ನಿಜವಾದ ಮೇಲಿನ ಅರಿವು. ಹಾಗಾದರೆ ಈಗ ನಡೆಯುತ್ತಿರುವುದೇನು? ಶಿಕ್ಷಣ ಯಾರದ್ದು? ಯಾರಿಗೆ? ಯಾಕೆ? ಹೇಗೆ? ಯಾರು? ನೀಡುತ್ತಿರುವುದು.ಇದಕ್ಕೆ ನಮ್ಮದೇ ಸಹಕಾರ ಇದ್ದರೆ ನಾವ್ಯಾರು? ಮೇಲಿನವರೆ ?ಕೆಳಗಿನವರೆ ?ಒಳಗಿನವರೆ? ಹೊರಗಿನವರೆ??
ಯೋಗಿ ಬಯಸಿದ್ದು ಯೋಗಿಗೆ ಭೋಗಿ ಬಯಸಿದ್ದು ಭೋಗಿಗೆ ಎಂದಂತೆ ಯೋಗಿಗಳ ದೇಶವನ್ನು ಯೋಗಿಗಳಾಗಿ ಬೆಳೆಸುವುದೇ ಮೇಲರಿಮೆ. ಇದಕ್ಕೆ ವಿರುದ್ದ ನಡೆದು ನಾವೇ ಮಕ್ಕಳಿಗೆ ನಮ್ಮ ಸಂಸ್ಕೃತಿ, ಧರ್ಮ, ಕರ್ಮದ ಶಿಕ್ಷಣ ನೀಡಲು ಕೀಳರಿಮೆ ಹೊಂದಿದರೆ ಬೇಲೆಯೇ ಎದ್ದು ಹೊಲ‌ಮೇದ್ದಂತೆ ಎನ್ನುವಂತಾಗುವುದು ಸಹಜ.ಇದರಲ್ಲಿ ತಪ್ಪು  ನಮ್ಮ ಒಳಗಿರುವ ಕೀಳರಿಮೆಯದ್ದೆ ಎಂದರೆ ನಾವೇ ಕಾರಣವಾದಾಗ ಹೊರಗೆ ಹೋರಾಟ  ಮಾರಾಟ,ಹಾರಾಟ ಮಾಡಿದರೆ ಅರಿವು ಬೆಳೆಯುವುದೆ? ಕುಸಿಯುವುದೆ?
ಈವರೆಗೆ  ಲೇಖನಗಳಲ್ಲಿ  ಎಷ್ಟು ಮಂದಿಗೆ ಕೀಳರಿವು ಕಂಡಿದೆಯೋ ಮೇಲರಿವು ಕಾಣಿಸಿದೆಯೋ ಅವರವರ ಅರಿವಿಗಷ್ಟೆ ಗೊತ್ತು. ಇಲ್ಲಿ ಯಾರೂ ಮೇಲೂ ಇಲ್ಲ ಕೆಳಗೂ ಇಲ್ಲ.ಎಲ್ಲಾ ಇರೋದು ಮಧ್ಯದ ಭೂಮಿ ಮೇಲಷ್ಟೆ. 
ಆಕಾಶ ಪಾತಾಳದ ನಡುವಿನ ಭೂಮಿಯಲ್ಲಿ ಮಾತ್ರ ಮನುಕುಲ ಇರೋದಲ್ಲವೆ? ಭೂಮಿ ತಾಯಿಯೇ ಎಲ್ಲರ ಆಶ್ರಯದಾತಳು. ಅವಳೇ ಮೇಲೆ ಕೆಳಗೆ ತಳ್ಳುವ ನಾಯಕಿ.
ನಾವು ಕಾರಣಮಾತ್ರರಷ್ಟೆ.

Thursday, November 24, 2022

ದೇವರಿಗೆ ಪಂಚಾಮೃತ ಅಭಿಷೇಕ ಸೇವೆ ಯಾಕೆ?

ದೇವರ ವಿಗ್ರಹಗಳಿಗೆ ಪಂಚಾಮೃತ ಅಭಿಷೇಕ ಯಾಕೆ ಬೇಕು?
ಪಂಚಾಮೃತ ಎಂದರೆ ಪಂಚ ಅಮೃತ ಸಮಾನವಾಗಿರುವ
ಗೋವಿನ ಹಾಲು, ಮೊಸರು, ತುಪ್ಪ ,ಜೇನಿನ ತುಪ್ಪ, ಸಕ್ಕರೆ.
ಪವಿತ್ರವಾಗಿರುವ ಗೋವಿನ ಹಾಲು ಎಷ್ಟು ಬೆಳ್ಳಗೆ ಶುದ್ದ ನಿರ್ಮ ಲವಾಗಿದೆಯೋ ಅಷ್ಟು ನಮ್ಮ‌ಮನಸ್ಸೂ ನಿಷ್ಕಲ್ಮಶ
ಆಗಿರಲೆಂದು, ಇನ್ನು ,ಮೊಸರು ಅಜೀರ್ಣತೆ ನಿವಾರಣೆ ಮಾಡುವ  ಶಕ್ತಿ ಹೊಂದಿದೆ  ಇನ್ನೊಂದು ಅರ್ಥದಲ್ಲಿ  ಮಾನವನಿಗೆ ಎಲ್ಲಾ ಜೀರ್ಣಿಸಿಕೊಳ್ಳಲು  ಕಷ್ಟ ಹೀಗಾಗಿ ಇತರರಿಗೆ ಹಂಚಿಕೊಂಡು ಬಾಳುವ ಶುದ್ದ  ಬುದ್ದಿ  ಬರಲಿ  ಎಂದು  ಆಗಿದೆ,

ತುಪ್ಪ ದ ಅಭಿಷೇಕದಿಂದ  ಮಾನವನಲ್ಲಿ ಅರಿಷಡ್ವರ್ಗ ವೈರತ್ವ  ಹೋಗಿ ಜ್ಞಾನ ಭಕ್ತಿ ವೈರಾಗ್ಯ ಹೆಚ್ಚುವುದೆನ್ನುವುದಾಗಿದೆ.
ಜೇನುತುಪ್ಪ ದ ಅಭಿಷೇಕದಿಂದ ದೇವರು ತೃಪ್ತಿ ಹೊಂದುವರು ಯಾಕೆಂದರೆ ಸರ್ವ ಔಷಧ ಗುಣ ಇದರಲ್ಲಿದೆ ಇದರಿಂದಾಗಿ ನಮ್ಮ ಎಲ್ಲಾ ದುರ್ಗುಣಗಳು ದೂರವಾಗಿ ದೈವೀಗುಣ ಭಕ್ತಿ ಜ್ಞಾನಶಕ್ತಿ ದೇವರು ಕರುಣಿಸಲೆನ್ನುವುದಾಗಿದೆ. ಹಾಗೆಯೇ ಸಕ್ಕರೆಯನ್ನು ಕಬ್ಬು ಅರೆದು ತಯಾರಿಸುವ ಹಾಗೆ ,ನಮ್ಮ ಈ ಶರೀರ ಕಬ್ಬಿನಂತೆ ಅದನ್ನು  ಅರೆದು ಅಂದರೆ ಭಕ್ತಿಗೆ ಸಿಲುಕಿಸಿ ಜ್ಞಾನ,ವೈರಾಗ್ಯ ಸದ್ಗುಣ ಪಡೆದೆ ಅದನ್ನು ನಿನ್ನ‌ಪಾದಕ್ಕೆ ಅರ್ಪಿಸಿ ದ ನನಗೆ ಪಾರಮಾರ್ಥಿಕ ಮೋಕ್ಷವನ್ನು ಕರುಣಿಸು ಭಗವಂತ ಎನ್ನುವ ಭಾವನೆ ಅಡಗಿದೆ. ಒಟ್ಟಿನಲ್ಲಿ ಪಂಚಾಮೃತಗಳ ಅಭಿಷೇಕವು

ಪರಮಾತ್ಮನೆಡೆಗೆ ಜೀವಾತ್ಮನು  ಸೇರಿಕೊಳ್ಳುವಾಗ ಅಮೃತ
ಸಮಾನವಾಗಿರುವ ಪಂಚ ಅಮೃತದ ಬಗ್ಗೆ ತಿಳಿದರೆ ಪ್ರತಿ
ಸೇವೆಯ ಹಿಂದಿರುವ‌ ವೈಜ್ಞಾನಿಕ ವೈಚಾರಿಕತೆ ನಂಬಿಕೆಯು
ಅರ್ಥ ವಾಗಬಹುದು.
ಇಲ್ಲಿ ವಿಗ್ರಹ ಬಿಂಬ ,ಶರೀರ ಅದರ ಪ್ರತಿಬಿಂಬ ಆದ್ದರಿಂದ ವಿಗ್ರಹಕ್ಕೆ ಅರ್ಪಿಸಿದ ಅಭಿಷೇಕ ಮಾಡಿದ ಪಂಚಾಮೃತವನ್ನು
ಪರೋಕ್ಷವಾಗಿ  ಈ ಶರೀರದ ಒಳಗಿನ‌ಪರಮಾತ್ಮನಿಗೆ ನಾವು ಸಲ್ಲಿಸುವಾಗ ಶುದ್ದ ಸ್ವಚ್ಚವಾದ ಮನಸ್ಸಿನಿಂದ ಇದ್ದರೆ  ಪರಮಾತ್ಮನಿಗೆ ತಲುಪುತ್ತದೆ.
ಆಚರಣೆಗಳಲ್ಲಿ, ದೇವತಾರಾಧನೆಯಲ್ಲಿರುವ  ಸೂಕ್ಷ್ಮ ವಾದ
ವಿಚಾರಗಳನ್ನು  ತಿಳಿಸುತ್ತಾ,ತಿಳಿಯುತ್ತಾ ಮುಂದೆ ಬಂದರೆ
ಪ್ರಕೃತಿಯನ್ನು  ಬಳಸಿಕೊಂಡು ಜೀವನ ನಡೆಸುತ್ತಾ
ಪರಮಾತ್ಮನೆಡೆಗೆ  ಸಾಗಬಹುದು. ದುರ್ಭಳಕೆ ಮಾಡಿಕೊಂಡರೆ ತಕ್ಕ ಪ್ರತಿಫಲವೂ  ಜೀವನೆ ಅನುಭವಿಸಬೇಕೆನ್ನುವುದಾಗಿದೆ. ವೈಭವದ ,ಕಾಟಾಚಾರದ
ಭ್ರಷ್ಟಾಚಾರದ ,ಆಚರಣೆಗಳಿಂದ ದೇವರಾಗಲಿ,ಧರ್ಮ ವಾಗಲಿ ಸತ್ಯವಾಗಲಿ ಕಾಣೋದಿಲ್ಲ.
ಪಂಚಾಮೃತವು  ಮಾನವನಿಂದ ಸೃಷ್ಟಿ

ಯಾಗದು. ಎಲ್ಲಾ ಪ್ರಕೃತಿಯ   ಮೂಲವೂ ಶ್ರೇಷ್ಠ ಅಮೃತ ಸಮಾನವಾದವು.  ಅಣು ರೇಣು ತೃಣ  ಕಾಷ್ಠಗಳಲ್ಲಿರುವ ಪರಮಾತ್ಮನ  ಕಣವನ್ನು   ಕೆರೆಯ ನೀರನು ಕೆರೆಗೆ ಚೆಲ್ಲಿ ಎಂದಂತೆ  ದೇವರಿ  ಗೆ ಅರ್ಪಿಸಿದರೆ  ಮನಸ್ಸು ಶುದ್ದ ದೇಹವೂ  ಶುದ್ದ.  
ವೈಜ್ಞಾನಿಕ ಕಾರಣ ಪಂಚಾಮೃತ  ಸೇವನೆಯಿಂದ  ಲೋಹದ ಖನಿಜಾಂಶ  ದೇಹಕ್ಕೆ ಸಿಗುತ್ತದೆ ಹಾಗೆ ವಿಗ್ರಹಗಳು ಬಿರುಕು ಬೀಳದಂತೆ ತಡೆಯುತ್ತದೆ ,ವಿಗ್ರಹದ ಮೇಲೆ ಕೂರುವ ಕ್ರಿಮಿ ಕೀಟವನ್ನು ಮೊಸರು ನಾಶಪಡಿಸುತ್ತದೆ,  ಮೊಸರು ನಮ್ಮ ಜೀರ್ಣ. ಶಕ್ತಿ ಹೆಚ್ಚಿಸಿದರೆ ,ತುಪ್ಪದ ಕೊಬ್ಬು ಜೇನುತುಪ್ಪದ ಅಂಟು ದ್ರವ ವಿಗ್ರಹ ಬಿರುಕುಬಿಡದಂತೆ ತಡೆಯುತ್ತದೆ. ನಮ್ಮ ಶರೀರಕ್ಕೆ ತುಪ್ಪ ಮೇದಸ್ಸು, ಜೇನುತುಪ್ಪ  ಪೋಷಕ ಆಹಾರ ಎಳನೀರು ಸಕ್ಕರೆಯ ಕಣ ವಿಗ್ರಹ ದ ಹೊರಮೈ ಶುಭ್ರಗೊಳಿಸಿದರೆ ಈ ಈ ಮಿಶ್ರಿತ ಸೇವನೆ ಮೇಹರೋಗ ನಿವಾರಣೆಗೆ ಉತ್ತಮವಾಗಿ ರಕ್ತ ಶುದ್ದಿಯಾಗುತ್ತದೆನ್ನುವ  ಕಾರಣವಿದೆ.
ಮನೆಯಲ್ಲಿನ ಗೋವಿನ‌ಹಾಲು,ಮೊಸರು,ತುಪ್ಪ. ಶುದ್ದ ಜೇನುತುಪ್ಪ, ಶುದ್ದವಾದ ಸಕ್ಕರೆ  ಹಿಂದೆ  ಮನೆಯಲ್ಲಿಯೇ
ಸಿಗುತ್ತಿತ್ತು. ಆದರೂ ಭಕ್ತಿ ಅಗತ್ಯವಿದೆ.

Wednesday, November 23, 2022

ವಿಗ್ರಹಪೂಜೆಯ ಮಹತ್ವ

ದೇವರನ್ನು ವಿಗ್ರಹದಲ್ಲಿ ಪೂಜಿಸುವುದೇಕೆ?
ಭಗವಂತ ನಿರಾಕಾರನಾದರೂ ಮಾನವನಿಗೆ ಭಕ್ತಿ,ಶ್ರದ್ದೆ,ನಂಬಿಕೆ ಹೆಚ್ಚಾಗಬೇಕಾದರೆ ಆಕಾರ ಅಗತ್ಯವಿದೆ.
ವಿಗ್ರಹದಲ್ಲಿ ಸ್ಪಷ್ಟರೂಪ,ಕಲ್ಪನೆ ಹೆಚ್ಚಿದ್ದು ಚೈತನ್ಯದೇವತಾ ಸಾನಿದ್ಯ ಉಂಟಾಗುತ್ತದೆ . ಅದರಲ್ಲೂ ಗರ್ಭಗುಡಿಯಲ್ಲಿ ಸೂಕ್ಷ್ಮ ವಾದ ದೈವೀಶಕ್ತಿ ಹೆಚ್ಚು ಅದರ ಒಳ ಪ್ರಕಾರದಲ್ಲಿ ಧಾರಾಳವಾಗಿ ಹೊರಸುತ್ತಿನಲ್ಲಿ ಸ್ವಲ್ಪ ಕಡಿಮೆಯಿದ್ದರೂ ಜನರ ದುಷ್ಟ ಬಾವನೆ,ಅಶುದ್ದತೆ ಕಡಿಮೆಯಾಗಿ ಮನಸ್ಸಿಗೆ ಪುಷ್ಟಿ, ದೇಹಕ್ಕೆ ಉಲ್ಲಾಸ ಹೆಚ್ಚುವುದು.
ವೈಜ್ಞಾನಿಕವಾಗಿ ವಿಗ್ರಹಗಳು ನಮ್ಮ ಉತ್ತಮವಾದ ಮನಸ್ಸು ಜಾಗೃತಗೊಳಿಸಿ ಸಾತ್ವಿಕವಾದ ಜೀವನಕ್ಕೆ ದಾರಿ ಮಾಡಿಕೊಡುತ್ತದೆ. ವಿಗ್ರಹ ದ ಅಭಿಷೇಕದಿಂದ ಆಮ್ಲೀಯ ಶಕ್ತಿ ರೋಗನಿರೋಧಕ ಶಕ್ತಿ ಉಂಟಾಗಿ ಅದರ ಅಯಸ್ಕಾಂತೀಯ ಗುಣದಿಂದ ಆ ತೀರ್ಥ ಸೇವನೆ ಮಾಡುವುದರಿಂದ ಕೆಲವು ರೋಗಾಣುಗಳು ಶರೀರಕ್ಕೆ ಸೇರದಂತೆ ತಡೆಯುತ್ತದೆ. ವಿಗ್ರಹಕ್ಕೆ ಹಾಕಿದ ಹೂವಿನ ಧಾರಣೆ,ಗಂಧದ ಲೇಪನದಿಂದ ಶರೀರದ ಉಷ್ಣತೆ ಕಡಿಮೆಯಾಗುತ್ತದೆ. ಹಾಗೆ ವಿಗ್ರಹವನ್ನು ಏಕಚಿತ್ತದಿಂದ ನೋಡಿದಾಗ ಅದರ ಅಯಸ್ಕಾಂತೀಯ ಶಕ್ತಿ ನಮ್ಮ ಹುಬ್ಬುಗಳ ಮಧ್ಯೆ ಕೇಂದ್ರೀಕರಿಸುವುದರಿಂದ ಮೆದುಳಿನ ನರಮಂಡಲಗಳನ್ನು ಜಾಗೃತಗೊಳಿಸುತ್ತದೆ. ವಿಗ್ರಹದ ಅಲಂಕಾರದಿಂದ ಆನಂದವಾಗಿ ಕಲೆಯೂ ವೃದ್ದಿಸುವುದು.ಜನರ ಒಡನಾಟಕ್ಕೆ ಅವಕಾಶವಿದ್ದು,
ಬಗೆಬಗೆಯ ಲೋಹದ ಪರಿಚಯ ಅದರ ಗುಣಧರ್ಮ ತಿಳಿಯುವುದು. ಇದರಿಂದ  ಹಲವರ ಜೀವನ ನಡೆಯುವುದು.
ಸಂಗ್ರಹ ಬರಹ
ಮುಖ್ಯವಾಗಿ ವಿಗ್ರಹಾರಾಧನೆಯು  ಪರಮಾತ್ಮನೆಡೆಗೆ ಜೀವಾತ್ಮ ಹೋಗುವ ಒಂದು ಮೆಟ್ಟಿಲು. ಮಾನವ ಮಹಾತ್ಮನಾದಾಗ ಆತ್ಮಸ್ವರೂಪದಲ್ಲಿರುವ ಆ ಪರಮಾತ್ಮನ ಎಲ್ಲೆಡೆಯೂ ಕಾಣುತ್ತಾನೆ. ಮೆಟ್ಟಿಲನ್ನು  ಹತ್ತುವಾಗ  ಪ್ರತಿಕ್ಷಣವೂ ಪರಮಾತ್ಮನ ಕಂಡವರಷ್ಟೇ ಕೊನೆಮೆಟ್ಟಿಲ
ವರೆಗೆ ಏರಿರುವುದು ನಮ್ಮ ಹಿಂದಿನ ಮಹಾತ್ಮರಲ್ಲಿ ಕಾಣಬಹುದು. ಆಚರಣೆಗಳು  ಶುದ್ದ ಹೃದಯವಂತರನ್ನು ಬೆಳೆಸಬೇಕು ಹೊರಗಿನ ಹೃದಯವನ್ನು ಮಾರಿಕೊಳ್ಳುವ 
ಹಂತಕ್ಕೆ ಬರಬಾರದು.ವೈಜ್ಞಾನಿಕ ಪೂಜೆ ಹೃದಯದ ಕಸಿ ಮಾಡುತ್ತದೆ.ವೈಚಾರಿಕತೆಯ ಪೂಜೆ ಹೃದಯವಂತರನ್ನು ಬೆಳೆಸುತ್ತದೆ. ಜೀವವಿರೋದು ಹೃದಯದಲ್ಲಾದರೂ ಪರಮಾತ್ಮನಿರೋದು ಹೃದಯವಂತರಲ್ಲಷ್ಟೇ ಇದೇ ಜ್ಞಾನ ವಿಜ್ಞಾನದ ವಿಶೇಷ ಪೂಜೆ.
ವಿಗ್ರಹಗಳಿಟ್ಟುಕೊಂಡು ಪರಮಾತ್ಮನಿಗೆ ಆಗ್ರಹ ಮಾಡಬಾರದು. ಪರಮಾತ್ಮನ ಆಗ್ರಹವನ್ನು ಆಲಿಸುವ ಜ್ಞಾನ ಶಕ್ತಿ  ಬರಬೇಕೆನ್ನುವುದೆ  ಪೂಜೆಯ ಉದ್ದೇಶ. ಸಾಕಾರದಿಂದ ನಿರಾಕಾರವಾದರೆ  ಅಧ್ವೈತ.

Monday, November 21, 2022

ಹರಿಹರರಲ್ಲಿ ಬೇಧಬಾವ ಯಾಕೆ?

ಹರಿ ದೊಡ್ಡವನೋ ಹರನೋ ಎನ್ನುವ ವಾದ ವಿವಾದದಲ್ಲಿ  ಅಂತರಗಳೇ ದೊಡ್ಡದಾಗಿ ಬೆಳೆದಿದೆ. ಯಾರು ದಡ್ಡರು? ದೊಡ್ಡವರು ಎಲ್ಲಿರುವರು?  ಕೇಳೋದಕ್ಕೆ ನಾವ್ಯಾರು? ಹೇಳೋದಕ್ಕೆ ನಾನ್ಯಾರು? ಪ್ರಶ್ನೆಗೆ ಉತ್ತರ ಒಳಗಿತ್ತು.ಹೊರಗೆ ಹುಡುಕುತ್ತಾ ದೂರ ದೂರ ನಡೆದು ಸುಸ್ತಾಗಿದ್ದೇವಷ್ಟೆ.  ಅಂತರ ಬೆಳೆಸುವುದು ಸುಲಭದ ಕೆಲಸ.ಜೋಡಿಸುವುದೇ ಕಷ್ಟ. ಕಟ್ಟುವುದು ಕಷ್ಟ ಮೆಟ್ಟುವುದು ಸುಲಭ ಎಂದಂತಾಗಿದೆ.
ಭೂಮಿಯ ಮೇಲಿದ್ದ ದೇವಾನುದೇವತೆಗಳು ಎಲ್ಲಿರುವರು?
ಭೂಮಿಯಲ್ಲಿ ಮಾತ್ರ ಮನುಕುಲವಿರೋವಾಗ ಯಾರು ಶ್ರೇಷ್ಠ ರು? ಭೂ ತಾಯಿಯ  ಋಣ ತೀರಿಸಲು ನಮ್ಮ ಸೃಷ್ಟಿ ಆಗಿದೆ. 
ಸೃಷ್ಟಿಯಂತೆ ಸ್ಥಿತಿ ನಂತರ ಲಯವೂ ಆಗುತ್ತದೆ. ಇದನ್ನು ನಮ್ಮ ಜ್ಞಾನದಿಂದಲೇ  ತಿಳಿಯಬಹುದಷ್ಟೆ. ಜ್ಞಾನವು ಆಂತರಿಕ ಸತ್ಯದೊಡನಿದ್ದರೆ  ಉತ್ತಮ ಸೃಷ್ಟಿ. ಭೌತಿಕ ಸತ್ಯದಲ್ಲಿದ್ದು ಆಂತರಿಕ ಸತ್ಯದಿಂದ ದೂರವಾದಷ್ಟು  ಲಯವೇ ಹೆಚ್ಚುತ್ತದೆ. ಅವರವರ ಸ್ಥಿತಿಗೆ ಅವರವರ ಸೃಷ್ಟಿ ಕಾರಣವಾದಾಗ ಮೂಲದ ಸೃಷ್ಟಿ ಯನ್ನರಿತವರಿಗೆ ಲಯದ ಬಗ್ಗೆ  ಚಿಂತೆಯಿಲ್ಲ. ತಿಳಿಯದವರಷ್ಟೆ ಲಯವನ್ನು ವಿರೋಧಿಸಿ
ಕ್ರಾಂತಿಯ ಬೀಜ ಬಿತ್ತುವುದು. 
ಸೃಷ್ಟಿಯ ರಹಸ್ಯ ಸೃಷ್ಟಿಕರ್ತ ನಿಗೇ ಗೊತ್ತು. ಸೃಷ್ಟಿ ಮಾಡಲಾಗದ ಮಾನವನಿಗೇನು ಗೊತ್ತು .ಗೊತ್ತಾದರೂ  ತೋರಿಸಲಾಗದು ನಿರಾಕಾರ ಬ್ರಹ್ಮನ  ನಿರಾಕಾರದ ಜೊತೆಗೆ ನಿರಹಂಕಾರದಿಂದ ಕಂಡುಕೊಂಡವರೆ ಮಹಾತ್ಮರು.ಇದನ್ನು
ರಾಜಕೀಯದಿಂದ ತಿಳಿಯಲಾಗದ ಮೇಲೆ ರಾಜಯೋಗದ ಕಡೆಗೆ ನಡೆಯುವುದೇ ಧರ್ಮ.

Tuesday, November 15, 2022

ನಾವ್ಯಾರು? ಎಲ್ಲಿರುವುದು? ಎಲ್ಲಿಂದ ಬಂದೆವು?

ಹಿಂದಿನ ಯುಗಯುಗದಿಂದಲೂ ಭೂಮಿ ಇದೆ.ಅದರ ಮೇಲೆ ದೇವತೆಗಳು, ಮಾನವರು ಅಸುರರೂ ಇದ್ದರು. ಈಗ ಇದರಲ್ಲಿ ನಾವ್ಯಾರು? ನಮ್ಮೊಳಗಿರುವ ಗುಣ ಜ್ಞಾನದಿಂದಲೇ
ಭೂಮಿಯಲ್ಲಿ ಬದಲಾವಣೆ ಆಗುತ್ತಿದೆ. ದೈವತ್ವ ದೇವ ತತ್ವ ಸತ್ಯ ಧರ್ಮ ಆಂತರಿಕವಾಗಿ ಬೆಳೆದರೆ ದೇವರು, ಮಾನವೀಯತೆ,ಮೌಲ್ಯಯುತ ಜೀವನ ಇದ್ದರೆ ಮಾನವರು
ಅಸುರೀ ಗುಣಗಳು ದ್ವೇಷ ಅಹಂಕಾರ ಅತಿಯಾದ ಸ್ವಾರ್ಥ ದ ರಾಜಕೀಯ ಬೆಳೆದರೆ  ಭೂಕಂಪ,ಪ್ರಕೃತಿವಿಕೋಪ, ಪ್ರಳಯ,ಯುದ್ದ,ಹೋರಾಟ,ಕೊಲೆ,ಕ್ರಾಂತಿ ಮುಂತಾದವುಗಳಿಂದ ಜೀವ ಹೋಗುತ್ತದೆ. ಒಟ್ಟಿನಲ್ಲಿ ಎಲ್ಲಾ ಜೀವಕ್ಕೂ ಅಂತ್ಯವಿದೆ. ಜೀವನ ಹೇಗೆ ನಡೆಸಬೇಕೆಂಬ ಜ್ಞಾನ
ವಿಜ್ಞಾನದ ನಡುವಿನ ಸಾಮಾನ್ಯಜ್ಞಾನವಿದ್ದರೆ  ನಾವು ಮಾನವರಾಗಿ ಮಹಾತ್ಮರ ನಡೆ ನುಡಿಯಲ್ಲಿದ್ದ ತತ್ವದೆಡೆಗೆ ನಿಧಾನವಾಗಿಯಾದರೂ ಹೆಜ್ಜೆ ಹಿಂದಿಟ್ಟುಕೊಂಡು ಹಿಂದಿನ ಧರ್ಮವಾದ ಹಿಂದೂ ಧರ್ಮ ವನ್ನರಿಯಲು ಸಾಧ್ಯ.
ಮುಂದೆ ಮುಂದೆ ನಡೆದಷ್ಟೂ ಹಿಂದಿನವರಿಂದ ದೂರವಾದರೆ
ತಿರುಗಿ ಬರೋದು ಕಷ್ಟ.ನಿಧಾನವೇ ಪ್ರಧಾನ. ಎಲ್ಲರ ಜೀವನ
ಸರಿಪಡಿಸಲಾಗದು.ನಮ್ಮ ಜೀವನಕ್ಕೆ ನಾವೇ ಕಾರಣರು.
ಇದು ದೇವತೆಗಳು, ಮಾನವರು,ಅಸುರರ ಜ್ಞಾನದ ಮೇಲಿದೆ
ಅಧ್ಯಾತ್ಮ ಭೌತಿಕದ ನಡುವಿರುವ ಭೂಮಿಯ ಜನರಿಗೆ  ಇಲ್ಲಿ
ನಾನ್ಯಾರೆಂಬುದೇ ಗೊತ್ತಿಲ್ಲ ಆದರೂ ನಾನು ಎಲ್ಲರನ್ನೂ ಆಳಲು ಹೊರಟು ಆಳಾಗಿ ಹಾಳಾಗಿ ಹೋದರೆ ಬೇರೆಯವರು ಕಾರಣವೆನ್ನುವುದು ಮಾತ್ರ ಗೊತ್ತು. ಇನ್ನೊಬ್ಬರ ತಪ್ಪು ನಮ್ಮ ಕಣ್ಣಿಗೆ ಕಾಣುತ್ತದೆ. ನಮ್ಮ ತಪ್ಪು ಇನ್ನೊಬ್ಬರಿಗೆ ಕಾಣುತ್ತದೆ. ಅಧಿಕಾರ,ಹಣವಿದ್ದರೆ ಮಾತ್ರ ತಪ್ಪು ಎತ್ತಿಹಿಡಿಯಬಹುದಾದರೆ ಇಲ್ಲದವರು ಅಧಿಕಾರವಿದ್ದವರ ತಪ್ಪು ಹೇಳಲಾಗದೆ ತಪ್ಪಿತಸ್ಥ ರ ಸಂಖ್ಯೆ ಮೇಲೇರಿದೆ.
 ಅವರ ಹಿಂದೆ ನಡೆದಷ್ಟೂ ನಮ್ಮದೇ ತಪ್ಪಾಗುವಾಗ  ಇದ್ದಲ್ಲಿಯೇ  ನಮ್ಮ ಜೀವನದಲಾಗುತ್ತಿರುವ
ತಪ್ಪನ್ನು ಸರಿಪಡಿಸಿಕೊಂಡರೆ ಮಾನವರಾಗಿರಬಹುದು.
ದೇವಾಸುರರ  ನಡುವಿರುವ ಮಾನವರು  ಇರೋದೆಲ್ಲಿ?ಮನುಕುಲದ ಉದ್ದಾರ ಯಾರಿಂದಾಗಬೇಕಿದೆ? ದೈವತ್ವ ಯಾವುದು? ಅಸುರತ್ವ ಎಂದರೇನು? ಇವೆಲ್ಲವೂ ಸಾಮಾನ್ಯ ಜ್ಞಾನದಿಂದ  ತಿಳಿಯುವುದು ಅಗತ್ಯ.
ಎಲ್ಲಿರುವರು ಮಹಾತ್ಮರು? ನಾನೆಂಬುದಿಲ್ಲ,ನಾನಿದ್ದೇನೆ, ಇವೆರಡರ  ಮಧ್ಯೆ ಅಂತರ ಬೆಳೆಯುತ್ತಾ  ಅಸುರ ಶಕ್ತಿಯೇ ನನ್ನ ನಡೆಸಿದರೆ  ಕಷ್ಟ ನಷ್ಟ ನನ್ನ ಜೀವಕ್ಕೆ. ಇದು ಅಧ್ಯಾತ್ಮ ಸತ್ಯ. ದ್ವೇಷದ ರಾಜಕೀಯದಲ್ಲಿ ಯಾರು ಗೆದ್ದರೂ ಸೋತರೂ ಭಾರತೀಯರೆ ಎನ್ನುವುದಂತೂ ಸತ್ಯ. ಹಾಗೆಯೇ ಹಿಂದೂಗಳನ್ನು  ತಮ್ಮೆಡೆ ಎಳೆದುಕೊಂಡು ಹಿಂದೂಸ್ತಾನ
ದಲ್ಲಿದ್ದರೂ  ನಮ್ಮ ಋಣ ಇಲ್ಲಿದ್ದೇ ತೀರಿಸಬೇಕು. ನೆಲಜಲ ಬೇಕು ಧರ್ಮ ಬೇಡವೆ? ಯಾರನ್ನೋ ಆಳಲು ಹೋಗಿ ಕೆಡುವ ಬದಲಾಗಿ ನಮ್ಮನ್ನ ನಾವು ಆಳಿಕೊಳ್ಳುವ ಸ್ವತಂತ್ರಜ್ಞಾನವನ್ನು ಸಂಪಾದಿಸಲು  ಮೂರನೆಯವರ ಅಗತ್ಯವಿಲ್ಲ.ನಮ್ಮ ಹಿಂದಿನವರ ಅಗತ್ಯವಿದೆ.ಅವರಲ್ಲಿದ್ದ ತತ್ವಜ್ಞಾನವನ್ನು ಅಳವಡಿಸಿಕೊಳ್ಳಲು ಬೇಕಾದ ಸತ್ಯದ ಅಗತ್ಯವಿದೆ.ಒಳಗೆ ಅಸತ್ಯ ಹೊರಗೆ ಸತ್ಯದ ನಾಟಕವಾಡಿದರೆ ಪರಮಾತ್ಮನಿಗೆ ಕಾಣೋದಿಲ್ಲವೆ?ವಿದೇಶಿಗಳ ಕರೆದು ಕೂರಿಸಿ ದೇಶ ನಡೆಸಿ  ಎನ್ನುವ ಮೊದಲು ದೇಶದ ಭವಿಷ್ಯದ ಬಗ್ಗೆ 
ಚಿಂತನೆ ನಡೆಸಲಾಗದ ಪ್ರಜಾಪ್ರಭುತ್ವದಲ್ಲಿ ನಮ್ಮದೇ  ಸಹಕಾರವಿದೆ ಎನ್ನುವ ಸತ್ಯ ತಿಳಿದರೆ ಉತ್ತಮ .ಕರ್ಮಕ್ಕೆ ತಕ್ಕಂತೆ ಪ್ರತಿಫಲ.
ನಮ್ಮ ಜೀವ ಸರ್ಕಾರದೊಳಗಿದೆಯೋ  ಅಥವಾ ನಮ್ಮ ದೇಹದಲ್ಲಿಯೋ? ದೇಶದೊಳಗಿರುವ  ಪ್ರಜೆಗಳ ಸಹಕಾರ ವಿದೇಶಕ್ಕಿದ್ದರೆ ನಾವ್ಯಾರು? ಇದರಿಂದಾಗಿ ನಮ್ಮ  ಆತ್ಮಜ್ಞಾನ
ಬೆಳೆಯಿತೆ?  ಆತ್ಮಜ್ಞಾನದಿಂದ ಜೀವಕ್ಕೆ ಮುಕ್ತಿ ಎಂದರೆ ಎಲ್ಲಿದೆಆತ್ಮ? ಯಾವುದು ಶಾಶ್ವತಜ್ಞಾನ? 
ದೇವರನ್ನು  ಆಳುವುದೆ? ದೇವರೆ ಆಳುವುದೆ? ಅಳುವುದಷ್ಟೆ
ಮಾನವರ ಕೆಲಸವಾಗಬಾರದು. ತತ್ವವನ್ನು ತಂತ್ರವಾಗಿಸಿ ಆಳಬಹುದಷ್ಟೆ. ಸ್ವತಂತ್ರ ವಾಗಿರಲು ಕಷ್ಟವಿದೆ. ಸ್ವತಂತ್ರ ಭಾರತ ಅತಂತ್ರಸ್ಥಿತಿಗೆ ತಂದಿರೋದೆ ಅರ್ಧ ಸತ್ಯದ ಜೀವನ.
ನಾವೆಷ್ಟೇ ಮಂತ್ರ,ತಂತ್ರ,ಯಂತ್ರದಿಂದ  ಆಳಿದರೂ ಮಧ್ಯವರ್ತಿಗಳಷ್ಟೆ.ಮಂತ್ರಶಕ್ತಿ,ತಂತ್ರಶಕ್ತಿ,ಯಂತ್ರಶಕ್ತಿಯ ಮುಂದೆ  ಅಶಕ್ತರಾಗಿಯೇ ಜೀವ ಹೋಗೋದು. ಶಕ್ತಿಗೆ ಶರಣಾಗಿ,ದಾಸರಾಗಿ ಹೋದವರ ಜೀವನ ಹೇಗಿತ್ತು? ಶಕ್ತಿಯನ್ನು ದುರ್ಭಳಕೆ ಮಾಡಿಕೊಂಡು ಆಳುವವರಿಂದ ಭೂಮಿ ಹೇಗಾಗುತ್ತಿದೆ. ಧರ್ಮ ರಕ್ಷಣೆ ನಮ್ಮಿಂದ ಸಾಧ್ಯವೆ? ಕೇವಲ ನನ್ನಿಂದಲೇ?

ಮತಾಂತರ ಡೇಂಜರ್

ಬಲವಂತದ ಮತಾಂತರ ಡೇಂಜರ್
ಯಾರನ್ನೂ ಬಲವಂತದಿಂದ ಆಳಬಾರದು.

ವಿಜಯವಾಣಿ ಪತ್ರಿಕೆ ಇಂದಿನ‌ ಮುಖ್ಯ ಸುದ್ದಿಯಾಗಿದೆ.
ಇದಕ್ಕೆ ರಾಜಕೀಯ ಪರಿಹಾರವಿದೆಯೇ ರಾಜಯೋಗದ ಪರಿಹಾರವೆ? ಒಟ್ಟಿನಲ್ಲಿ ಸಮಸ್ಯೆಗೆ ಪರಿಹಾರವಿರುತ್ತದೆ ಯಾವಾಗ ರಾಜಕೀಯದ ಪರಿಹಾರ ಹೆಚ್ಚುವುದೋ ರಾಜಯೋಗವಿಲ್ಲದೆ ಜೀವ ಹೋಗುತ್ತದೆ ಅಂತರ ಬೆಳೆಯುತ್ತದೆ. ಇಲ್ಲಿ ಜೀವಾತ್ಮ ಪರಮಾತ್ಮರ ನಡುವಿನ ಅಂತರವೇ ಸಮಸ್ಯೆಗಳಿಗೆ ಕಾರಣವೆನ್ನುವ ಯೋಗಿಗಳಿಲ್ಲ.
ಹಣದಿಂದಲೇ ಪರಿಹಾರ ಸೂಚಿಸುವ ಭೋಗಿಗಳ ಜಗತ್ತಿನಲ್ಲಿ
ಅಜ್ಞಾನದ ಅಂತರಗಳು ಬೆಳೆದು ನಿಂತಿವೆ.
ಒಂದು ಮಗು ಜನ್ಮತಾಳಿದ  ಸ್ಥಳ,ಧರ್ಮ ಕರ್ಮ ವು ಹಿಂದಿನ
ಕಾಲದಿಂದಲೂ  ಋಣ ಸಂಭಂದವಿದೆ ಎನ್ನುವ ಜ್ಞಾನದಿಂದ ಮಕ್ಕಳಿಗೆ ಅಲ್ಲಿಯ ಮೂಲವನ್ನು ಶಿಕ್ಷಣದಲ್ಲಿ ತಿಳಿಸುತ್ತಾ ಪೋಷಕರೂ ನಡೆಯುತ್ತಾ ಇದ್ದಲ್ಲಿಯೇ ಪರಮಾತ್ಮನ ಸೇವೆ ಮಾಡಿಕೊಂಡು  ಮುಕ್ತಿ ಪಡೆದಿದ್ದ ಹಿಂದೂ ಧರ್ಮ ಇಂದು ಹಿಂದುಳಿಯಲು ಕಾರಣವೇ ಹಿಂದಿನವರಿಂದ ಅಂತರ ಬೆಳೆಸಿಕೊಂಡು ಬಂದ ಶಿಕ್ಷಣದ ವಿಚಾರ. ವೈಚಾರಿಕತೆಯಲ್ಲಿನ
ವೈಜ್ಞಾನಿಕತೆಯನ್ನು ಗುರುತಿಸದೆ ತಮ್ಮದೇ ಆದ ಸಂಶೋಧನೆ
ಹೊರಗಿನಿಂದ ಬೆಳೆಸಿಕೊಂಡು  ಧರ್ಮಾಂತರ ಹೆಚ್ಚಾಯಿತು.
ಇನ್ನು ತತ್ವದ ವಿಚಾರದಲ್ಲಿಯೇ  ಅಂತರ ಸಾಕಷ್ಟಿದೆ. ತತ್ವವನ್ನು ತಂತ್ರವಾಗಿ ಬಳಸಿದಾಗ ಎಣಿಸಲಾಗದ ಅಂತರ.
ಹೀಗೇ ಒಂದೇ ಭೂಮಿ,ದೇಶ,ಧರ್ಮ, ಜಾತಿ, ಪಂಗಡ,ಪಕ್ಷ
ವಿಲ್ಲದೆ ಅನೇಕ ದೇವರಿದ್ದರೂ ಮಾನವನಲ್ಲಿ ದೈವತ್ವದ ಕೊರತೆಯಿದೆ. ಹಾಗಾದರೆ ಅಂತರಿಕ ಶುದ್ದಿಯಿಂದ
ಅಂತರವನ್ನು  ಕಡಿಮೆಗೊಳಿಸಲು ಪ್ರಯತ್ನಪಟ್ಟ ಶರಣರು,ದಾಸರು,ಸಂತರು,ಮಹಾತ್ಮರುಗಳು ಎಲ್ಲಿರುವುದು?
ಅವರನ್ನು ರಾಜಕೀಯದ ದಾಳ ಮಾಡಿಕೊಂಡು  ತತ್ವ ಬಿಟ್ಟು ತಂತ್ರ ನಡೆಸಿದರೆ ಆತ್ಮನಿರ್ಭರ ಭಾರತವಾಗಲು ಸಾಧ್ಯವೆ?
ಸ್ತ್ರೀ ಶಕ್ತಿಯನ್ನು  ರಾಜಯೋಗದೆಡೆಗೆ ಕರೆದೊಯ್ಯುವ ಶಿಕ್ಷಣ ಇಲ್ಲದೆ ಜ್ಞಾನದೇವತೆಯನ್ನು ಪೂಜಿಸಿ,ಬೇಡಿದರೂ ವ್ಯರ್ಥ.
ಹೀಗಾಗಿ ಪ್ರಜಾಪ್ರಭುತ್ವದ ವ್ಯವಸ್ಥೆ ಅವಸ್ಥೆ ಯಾಗುತ್ತಿದೆ.
ಪ್ರಜೆಗಳ ಜ್ಞಾನದಿಂದ ಅಂತರ ಕಡಿಮೆಯಾಗಿದ್ದರೆ ತತ್ವಜ್ಞಾನ.
ಹೆಚ್ಚಾಗಿದ್ದರೆ ತಂತ್ರಜ್ಞಾನ. ವಿಪರೀತ ವಾಗಿದ್ದರೆ ಯಂತ್ರಜ್ಞಾನ
ಯಾಂತ್ರಿಕ ಜೀವನದಲ್ಲಿ ನಾವು ಯಂತ್ರಗಳನ್ನು ಪ್ರೀತಿಸುವಷ್ಟು  ನಮ್ಮ ಸ್ವತಂತ್ರ ಜ್ಞಾನವನ್ನು ಪ್ರೀತಿಸದೆ ಮುಂದೆ ನಡೆದರೆ ಅತಂತ್ರಸ್ಥಿತಿಗೆ ಜೀವನ ತಲುಪುತ್ತದೆ.
ಬ್ರಹ್ಮನ ಸೃಷ್ಟಿ ವಿಷ್ಣು ವಿನ ಸ್ಥಿತಿ, ಶಿವನ ಲಯ ಕಾರ್ಯವನ್ನು
ಪ್ರಶ್ನೆ ಮಾಡಲು ನಾವ್ಯಾರು? ಮಹಾದೇವತೆಗಳನ್ನೇ ಮೇಲು ಕೀಳೆಂದು ನೋಡುವ‌ಮಹಾಜ್ಞಾನಿಗಳು ತಂತ್ರವನ್ನು ಬಳಸಿ ತತ್ವವನ್ನು  ಹಿಂದುಳಿಸಿದರೆ ಸಾಮಾನ್ಯರ ಗತಿ ಏನು? 
ಒಟ್ಟಿನಲ್ಲಿ ಅಂತರಕ್ಕೆ ಕಾರಣವೇ ಅಜ್ಞಾನ.ಅಜ್ಞಾನಕ್ಕೆ ಮದ್ದು  ಸತ್ಯಜ್ಞಾನ ದ ಶಿಕ್ಷಣ. ಶಿಕ್ಷಕರು,ಗುರು ಹಿರಿಯರು ಮೊದಲು ಸತ್ಯವಂತರಾಗಿ ಅಂತರವಿಲ್ಲದೆಯೇ ಶಿಷ್ಯರ ಜ್ಞಾನವನ್ನು ತಿಳಿದು ಬೆಳೆಸಿದರೆ  ಪರಿಹಾರವಿದೆ. ಇದು ಧಾರ್ಮಿಕ ಕ್ಷೇತ್ರದ
ಧರ್ಮ. ವಿದೇಶದಲ್ಲಿ  ಹಿಂದೂಗಳಿಗೆ ಗೌರವವಿದೆ, ಜ್ಞಾನಕ್ಕೆ ಬೆಲೆಯಿದೆ ಆದರೆ ನಮ್ಮಲ್ಲೇ ನಮ್ಮವರೆ ಶತ್ರುಗಳಾದರೆ  ಅಂತರದಿಂದ. ಅವಾಂತರವೇ ಬೆಳೆಯೋದು. ಮೊದಲು ನಾವಿರುವ ಭೂಮಿ,ದೇಶ,ಭಾಷೆ,ಧರ್ಮ,ಕರ್ಮದ ಮೂಲ ಉದ್ದೇಶ ತಿಳಿದರೆ ಹೊರಗಿನಿಂದ ಬೆಳೆಸಿದ ಅಸಂಖ್ಯಾತ ದೇವರು,ಧರ್ಮ, ಜಾತಿ,ಪಕ್ಷ,ಪಂಗಡಗಳ ಉದ್ದೇಶ ತಿಳಿಯಲು ಸಾಧ್ಯ.ಒಳಗೇ ಅಜ್ಞಾನವಿಟ್ಟುಕೊಂಡು ಹೊರಗೆ ಹೋರಾಟ,ಹಾರಾಟ,ಮಾರಾಟ ಮಾಡಿದರೆ  ಅಂತರವೇ ಬೆಳೆಯೋದಲ್ಲವೆ? ಇದರಲ್ಲಿ ಸಾಮಾನ್ಯ ಜ್ಞಾನವಿದೆ. ಇದನ್ನು
ಆಳುವವರು  ಅರ್ಥ ಮಾಡಿಕೊಳ್ಳದೆಯೇ  ರಾಜಕೀಯ ಕ್ಕೆ ಇಳಿದರೆ ಹಾಳಾಗೋದು ಯಾರು?
ಮಾನವನ ಶತ್ರುವೇ ಅವನೊಳಗಿನ ಅಹಂಕಾರ ಸ್ವಾರ್ಥ.
ಇವೆರಡಕ್ಕೂ ಅಂತರ ಬೆಳೆಸಿಕೊಂಡರೆ ಸಾಕು. ಅಹಂಕಾರ ಬಿಟ್ಟರೆ  ಸ್ವಾರ್ಥ ವೂ ದೂರವಾಗುತ್ತದೆ. ಇದೇ ನಿಜವಾದ ಆತ್ಮಜ್ಞಾನ. ಆತ್ಮನಿರ್ಭರ ಭಾರತಕ್ಕೆ ಆತ್ಮಜ್ಞಾನದ ಅಗತ್ಯವಿದೆ.
ವೈಜ್ಞಾನಿಕ ಚಿಂತನೆ ಇರಲಿ ಆದರೆ ಆತ್ಮಹತ್ಯೆ ಆಗದಿರಲಿ.
ಜ್ಞಾನದೇವತೆಯನ್ನು ಆರಾಧಿಸಿ,ಪೂಜಿಸಿ,ಗೌರವಿಸಿ ಆಳಲು ಹೋಗಬೇಡಿ.
ಆಳಿದರೆ ಅಂತರ ಹೆಚ್ಚುವುದು. ತಾಯಿಯ ಋಣ ತೀರಿಸಲು ಜ್ಞಾನಬೇಡವೆ?

Monday, November 14, 2022

ಮಾನವನಿಗೂ ದೇವಮಾನವನಿಗಿರುವ ವ್ಯತ್ಯಾಸ

ಮಾನವನಾಗೋದಕ್ಕೂ ದೇವ ಮಾನವನಾಗೋದಕ್ಕೂ ವ್ಯತ್ಯಾಸ ಮಾನವನಿಗೆ ಮಾನವೀಯತೆಯ ಗುಣ
ವಿರಬೇಕು.ದೇವಮಾನವನಿಗೆ ದೈವತತ್ವದ ಜ್ಞಾನವಿರಬೇಕು. ತತ್ವಜ್ಞಾನವೂ ಮಾನವೀಯತೆಯನ್ನು ಬೆಳೆಸುತ್ತದೆ. ಆದರೆ, ಮಾನವನ  ಆಂತರಿಕ ಶಕ್ತಿಯಿಂದಲೇ ಇದು ಬೆಳೆಯಬೇಕಷ್ಟೆ. ಮಾನವ ಕೋಟ್ಯಾಂತರ ರೂಪಾಯಿಗಳ ಸಹಾಯ,ದಾನ ಧರ್ಮಗಳನ್ನು ಮಾಡಬಹುದು.
ದೇವಮಾನವನಿಗೆ ಇದು ಕಷ್ಟವಾಗಬಹುದು ಕಾರಣ ಅವನ ದೈವತ್ವದ ಗುಣ ಜ್ಞಾನದಿಂದ ಹಣ ಸಂಪಾದನೆ ಇದ್ದರೂ
 ಅದು ಮಿತಿಮೀರಿ ಬೆಳೆದಿರುವುದಿಲ್ಲ. ತತ್ವದ ಪ್ರಕಾರ
ನಡೆದಾಗ  ಎಲ್ಲರಲ್ಲಿಯೂ ಅಡಗಿರುವ ಆ ಪರಮಾತ್ಮನಿಗೆ ಮೋಸ ,ವಂಚನೆ ಮಾಡಲಾಗದು.ಹೀಗಾಗಿ ದೇವ ಮಾನವರಾದವರಲ್ಲಿ ಎಷ್ಟೋ ಸಂಸಾರಿಗಳು,ಸಂನ್ಯಾಸಿಗಳು
ದೇವರನ್ನು ಕಂಡಿದ್ದರು ತೋರಿಸಲಾಗಿಲ್ಲ.ಇಂದು ಹೊರಗಿನ ದೇವರನ್ನು ತೋರಿಸುವುದಕ್ಕಾಗಿಯೇ  ಕೋಟ್ಯಾಂತರ ಹಣವನ್ನು ಬಳಸುತ್ತಾರೆ ಕಂಡವರಿಲ್ಲ.
ಹೀಗಾಗಿ ನಾವು ಭೌತಿಕದಲ್ಲಿ ಸಾಕಷ್ಟು ದೇವರನ್ನು ಸೃಷ್ಟಿಸಿ ಅಧ್ಯಾತ್ಮದಲ್ಲಿ ಹಿಂದುಳಿದಿರೋದೆಂದರೆ ತಪ್ಪೆನ್ನುವವರಿದ್ದಾರೆ.
ಯುಗಯುಗದಿಂದಲೂ ನಡೆದು ಬಂದಿರುವ ಈ ಜೀವ
ಕೋಟಿಯ ಒಳಗೂ ಹೊರಗೂ ಆ ಪರಮಾತ್ಮನಿದ್ದರೂ
ತತ್ವಜ್ಞಾನವನ್ನು  ಅರ್ಥ ಮಾಡಿಕೊಳ್ಳಲು ಸೋತಿರುವ ನಾವು ತಂತ್ರದಲ್ಲಿ  ಎಷ್ಟೇ ವ್ಯವಹಾರ,ವ್ಯಾಪಾರ, ರಾಜಕೀಯ ನಡೆಸಿ
ಜನಬಲ,ಹಣಬಲ ಅಧಿಕಾರ,ಸ್ಥಾನ ಪಡೆದರೂ ಒಳಗಿರುವ
ದೈವತ್ವದೆಡೆಗೆ ಹೋಗಲು  ತತ್ವಜ್ಞಾನಿಗಳ  ತತ್ವವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಪಟ್ಟರೆ ಸಾಧ್ಯ.
ಮಕ್ಕಳ ದಿನಾಚರಣೆಯನ್ನು ಪ್ರತಿವರ್ಷ ಶಾಲೆ ಇನ್ನಿತರ ವಿದ್ಯಾ ಸಂಸ್ಥೆ ನಡೆಸುತ್ತಿದ್ದರೂ ಮಕ್ಕಳಿಗೆ ತತ್ವಜ್ಞಾನದ
ಶಿಕ್ಷಣ ನೀಡದೆ ತಂತ್ರದಿಂದ  ಆಳಿದರೆ ಸ್ವತಂತ್ರ ಜ್ಞಾನೋದಯ ಕಷ್ಟ.
ಇಂದಿನ ಮಕ್ಕಳೇ ಮುಂದಿನ ದೇಶದ ಪ್ರಜೆಗಳು ಇದರಲ್ಲಿ ಎರಡರ್ಥವಿದೆ ಒಂದು ಮುಂದಿನ ದೇಶವೆಂದರೆ ನಮ್ಮದೇ ದೇಶ, ಇನ್ನೊಂದು ಹೊರದೇಶದ ಪ್ರಜೆಗಳು.
ಜ್ಞಾನ ವಿಜ್ಞಾನದ ಅಂತರವನ್ನು ಬೆಳೆಸಿಕೊಂಡು ಮಾನವ ಮಹಾತ್ಮನಾಗೋದು ಕಷ್ಟ. ದೇವರನ್ನು ಬೆಳೆಸುವ ಮೊದಲು ಒಳಗಿರುವ ದೈವತ್ವವನ್ನು ಬೆಳೆಸುವ ನೈತಿಕತೆ,ಧಾರ್ಮಿಕತೆ, ಸಂಸ್ಕಾರದ ಮೂಲಕ  ಶಿಕ್ಷಣದಲ್ಲಿಯೇ ನೀಡಿದರೆ ಇಂದಿನ ಮಕ್ಕಳೇ ಮುಂದಿನ ನಮ್ಮ ದೇಶದ ಪ್ರಜೆಯಾಗಿರುವರು.
ಆಚರಣೆಯು ಒಂದು ದಿನದ ಮಟ್ಟಿಗೆ ಆಗದೆ ಪ್ರತಿದಿನವೂ
ಪೋಷಕರಾದ ನಾವು ಮಕ್ಕಳ ಭವಿಷ್ಯಕ್ಕಾಗಿ ದುಡಿಯುತ್ತೇವೆ.ಆದರೆ ಮಕ್ಕಳೇ ಪೋಷಕರ ಭವಿಷ್ಯದ ಬಗ್ಗೆ  ಧಾರ್ಮಿಕ ಚಿಂತನೆ ನಡೆಸದೆ ದೂರ ದೂರ ಹೋದರೆ ತಪ್ಪು ಮೂಲದಲ್ಲಿದೆ. ದೇವಮಾನವರನ್ನು ಬೆಳೆಸಿದ ಭಾರತದ ಶಿಕ್ಷಣದಲ್ಲಿ  ಮಾನವೀಯ ಗುಣವನ್ನು ‌ತುಂಬಬಹುದಷ್ಟೆ.
ಅದನ್ನು ಅಳವಡಿಸಿಕೊಳ್ಳಲು ಪೋಷಕರ ಸಹಕಾರ ಬೇಕು. ಮಂತ್ರಶಕ್ತಿಯನ್ನು ದುರ್ಭಳಕೆ ಮಾಡಿಕೊಂಡರೆ ಅಸುರತೆ ಬೆಳೆಯುವುದು. ಹೀಗಾಗಿ ದೇವಾಸುರರ ಪ್ರತಿಬಿಂಬವಾಗಿ ಮಕ್ಕಳಿರುವಾಗ ದೈವತ್ವ,ತತ್ವ, ಸತ್ಯವನ್ನು ತಿಳಿಸುತ್ತಾ ಬೆಳೆಸುವ ಶಿಕ್ಷಣ ಅಗತ್ಯ.
 ಯಾವುದೂ ಅತಿಯಾದರೆ ಗತಿಗೇಡು ಇದು ಅಧ್ಯಾತ್ಮ ಹಾಗು ವೈಜ್ಞಾನಿಕ  ಚಿಂತನೆಗಳಿಂದ ದೇಶದ ಮಕ್ಕಳಿಗೆ  ಆಂತರಿಕ ಜ್ಞಾನದ ನಂತರ ಭೌತಿಕ ವಿಜ್ಞಾನ ನೀಡಬೇಕಿದೆ. ಧಾರ್ಮಿಕ ಕ್ಷೇತ್ರ ರಾಜಕೀಯ ಕ್ಷೇತ್ರದ ಹಿಂದೆ ನಡೆಯೋ ಬದಲಾಗಿ ರಾಜಕೀಯ ಕ್ಷೇತ್ರವನ್ನು ಧಾರ್ಮಿಕತೆ ಕಡೆಗೆ ತರುವ ಮೂಲಕ ದೇಶರಕ್ಷಣೆ ಮಾಡಬೇಕಿತ್ತು.
ಇತ್ತೀಚೆಗೆ ಕೆಲವು ಧಾರ್ಮಿಕ ಕ್ಷೇತ್ರದಲ್ಲಿ ಬದಲಾವಣೆ ಗಾಳಿ ಇದೆ.ಆದರೆ ಬದಲಾವಣೆಗೆ ತತ್ವಜ್ಞಾನವನ್ನು ಅಳವಡಿಸಿ
ಕೊಳ್ಳಲು ಬೇಕಿದೆ ಶಿಕ್ಷಣ. ಶಿಕ್ಷಣವನ್ನು ವಿದೇಶಿಗಳ ಕಡೆ ಬಿಟ್ಟು  ವಿದೇಶಿ ಬಂಡವಾಳದಲ್ಲಿ ದೇವಾಲಯ ಕಟ್ಟಿದರೆ ದೇವರು ಹೊರಗಿರುತ್ತಾರೆ.ತಂತ್ರವೇ ಕುತಂತ್ರಿಗಳಿಗೆ ವರವಾಗಿ
ಕುತಂತ್ರಿಗಳೇ ಆಳುವಾಗ ನಮ್ಮ ಸ್ವತಂತ್ರ ಜ್ಞಾನದ ಗತಿ ಅದೋಗತಿ.
ಪೋಷಣೆ ಮಾಡಬೇಕಾಗಿರೋದು ತತ್ವಜ್ಞಾನವನ್ನು ತಂತ್ರವಲ್ಲ.ರಾಜಕೀಯ ಬೆಳೆದಿರೋದೆ ತಂತ್ರದಿಂದ. ಇದರಲ್ಲಿ
ಸ್ವತಂತ್ರ ಜ್ಞಾನ ಬೆಳೆಯಿತೆ? ಬೆಳೆದರೂ  ಅದರಿಂದಾಗಿ ದೇವ ಮಾನವರೆಷ್ಟು? ಮಹಾತ್ಮರೆಷ್ಟು? ಸಂತರು,ಸಾದು,ಸಂನ್ಯಾಸಿ,ದಾಸ,ಶರಣರು ಎಲ್ಲಿರುವರು?
ಪ್ರಶ್ನೆಗೆ ಉತ್ತರ  ನಿಜವಾದ ದೇವಮಾನವರು ನೀಡಬಹುದು.
ಮೊದಲು ಮಾನವ  ತತ್ವಜ್ಞಾನಿಂದ ದೇವಮಾನವ ಆಗುವುದು. ಅದೂ  ಒಳಗೆ ಅಳವಡಿಸಿಕೊಂಡು  ಸ್ಥಿತಪ್ರಜ್ಞಾವಂತರಾದರೆ ಸಾಧ್ಯ. ಓದಿ ಪ್ರಚಾರಕ್ಕೆ ಸೀಮಿತ ಆಗಿದ್ದರೆ  ನೋಡುಗರ ಕಣ್ಣಿಗೆ  ದೇವಮಾನವರಾಗಬಹುದು
ಬಹಳ ಕಷ್ಟಪಡಲು ಕಷ್ಟ. ಹೀಗಾಗಿ ಇಂದಿಗೂ ನಮಗೆ ದೈವತ್ವ ಪದಕ್ಕೆ ಪೂರ್ಣ ಅರ್ಥ ತಿಳಿದಿಲ್ಲ. 
ಜೀವವಿರೋವಾಗ ನಾನುಹೋಗಲ್ಲ. ನಾನು ಹೋದಾಗಲೇ
 ದೇವರು ಕಾಣೋದು ಎಂದರೆ  ಜೀವಾತ್ಮ ಪರಮಾತ್ಮನಿಗೆ ಶರಣಾಗಿ,ದಾಸನಾಗಿದ್ದರೆ ದೇವಮಾನವ.ಇಲ್ಲಿ ನಾನೆಂಬುದಿಲ್ಲ  ಎನ್ನುವ ಅಧ್ವೈತ,ನಾನಿದ್ದೇನೆ ಎನ್ನುವ 
ದ್ವೈತ, ವಿಶಿಷ್ಟಾದ್ವೈತ  ಎಲ್ಲಾ ತತ್ವಗಳಿವೆ ಆದರೆ ಎಲ್ಲಾ ಒಂದಾಗದೆ ಅತಂತ್ರಸ್ಥಿತಿಗೆ ಮನುಕುಲ ತಲುಪಿದೆ.  ಬೇಧ ಭಾವ ಸರ್ವ ಕಾಲದಲ್ಲಿಯೂ ಇದ್ದದ್ದೇ. ಹೀಗಾಗಿ ಇದೇ
 ಹೆಚ್ಚಾದರೆ  ಅಜ್ಞಾನವಷ್ಟೆ.
ಮಕ್ಕಳ ಸೂಕ್ಮವಾದ  ಮನಸ್ಸು  ಬಯಸುವುದು  ಸಂತೋಷ ಮಾತ್ರ. ಆತ್ಮಸಂತೋಷಕ್ಕೆ ಅವರಿಗೆ ಆತ್ಮಜ್ಞಾನವಿರಬೇಕು.
ಭೌತಿಕ ಸಂತೋಷದಲ್ಲಿ  ಆತ್ಮವಂಚನೆಯಾಗದಂತೆ  ಪೋಷಕರು  ಮಕ್ಕಳನ್ನು ದೈವತ್ವದೆಡೆಗೆ ನಡೆಸಿದರೆ ಪೋಷಕರು ದೇವರಾಗುತ್ತಾರೆ. ಇಲ್ಲವಾದರೆ ಅಸುರೀ ಶಕ್ತಿಯೇ ಪೋಷಕರ ಶೋಷಣೆ ಮಾಡುತ್ತದೆ. 
ಎಲ್ಲಿರುವುದು  ದೇವರು ?ಅಸುರರು?

Thursday, November 10, 2022

ಅದೃಷ್ಟವನ್ನು ಹೇಗೆ ಅಳೆಯಬೇಕು?

**ಅದೃಷ್ಟ ನಮ್ಮ ಕೈಯಲ್ಲಿ ಇರುವುದೋ ಇಲ್ಲವೋ ಗೊತ್ತಿಲ್ಲ. ಆದರೆ ನಿರ್ಧಾರ ಮಾತ್ರ ಯಾವಾಗಲು ನಮ್ಮ ಕೈಯಲ್ಲಿ ಇರುತ್ತದೆ.**
ಅದೃಷ್ಟವನ್ನು   ಯಾರೋ ಅಳೆದು ತೂಗಿ ಕೊಡಲಾಗದು.
ನಿನ್ನ ಶ್ರಮಕ್ಕೆ ತಕ್ಕಂತೆ  ಫಲ ಸಿಕ್ಕಾಗ. ಅದನ್ನು ಅದೃಷ್ಟ ಎಂದರೆ  ಶ್ರಮವಿಲ್ಲದೆಯೇ  ಸಿಗುವ ಅಧಿಕಾರ, ಸ್ಥಾನಮಾನದ  ಅದೃಷ್ಟವನ್ನು  ಏನು ತಿಳಿಯಬೇಕು?
 ಅಧ್ಯಾತ್ಮ ಮತ್ತು ಭೌತಿಕದಲ್ಲಿ ಅದೃಷ್ಟ ದುರಾದೃಷ್ಟವನ್ನು ವಿರುದ್ದವಾಗಿ ಅಳೆಯಲಾಗುತ್ತದೆ. ಶ್ರಮಪಟ್ಟವನಿಗೆ ಅದೃಷ್ಟ
ಎನ್ನದೆ ಶ್ರಮವಿಲ್ಲದೆ ಸಂಪಾದಿಸುವವನಿಗೆ ಅದೃಷ್ಟ ವಂತನೆಂದು ಪರಿಗಣಿಸುವುದು ಭೌತಿಕ ಜಗತ್ತು. ಅಧ್ಯಾತ್ಮ ಜಗತ್ತಿನಲ್ಲಿ ಅದೃಷ್ಟ ವೆನ್ನುವ ಪದವನ್ನು ಬಳಸುವುದು ಯಾವಾಗಧಾರ್ಮಿಕ ಪೀಠದಅಧಿಕಾರ,ಸ್ಥಾನಮಾನ,ಸನ್ಮಾನ
ಗಳು  ಸುಲಭವಾಗಿ ಸಿಗುವುದೋ ಆಗ. ಅದೃಷ್ಟ ಎನ್ನಬಹುದು. ಕಾರಣ ಭೌತಿಕದಲ್ಲಿದ್ದು ಇಂತಹ ಅವಕಾಶ ಅಧಿಕಾರ ಎಲ್ಲರಿಗೂ ಸಿಗುವುದಿಲ್ಲ. ಎರಡೂ ಕಡೆಯಿಂದಲೂ
 ಆ ಪರಮಾತ್ಮನ ಕೃಪೆ,ಆಶೀರ್ವಾದ ಅಗತ್ಯವಾಗಿದೆ. ಒಂದೆಡೆ
ಹೆಚ್ಚು  ಅಧ್ಯಾತ್ಮ  ಜ್ಞಾನದೆಡೆಗೆ ನಡೆದಿರಬೇಕು,ಇನ್ನೊಂದು ಕಡೆ ಭೌತಿಕ ವಿಜ್ಞಾನ ತಿಳಿದಿರಬೇಕಷ್ಟೆ. ಏನೂ ತಿಳಿಯದೆ,
ನಡೆಯದೆ ಯಾರೋ ಬಂದು ಹಣವಿದೆಯೆಂದು
ಅಧಿಕಾರಕ್ಕೆ ಏರಿಸಿದರೆ  ಮಾತ್ರ ಕುಳಿತ ಸ್ಥಳದ ಜೊತೆಗೆ ಸುತ್ತಮುತ್ತಲಿನ ಪರಿಸರವೂ ಹಾಳಾಗುತ್ತಾ  ಅದೃಷ್ಟ ಹೋಗಿ
ದುರಾದೃಷ್ಟವೆ  ಬೆಳೆಯೋದು.  ಇಂದಿನ ರಾಜಕೀಯದಲ್ಲಿ ಯಾರು ಯಾವಾಗ ಮೇಲೇರುವರೋ ಕೆಳಗಿಳಿಯುವರೋ ಗೊತ್ತೇ ಆಗಲ್ಲ. ಅಜ್ಞಾನದ ಕೈಗೆ  ಮತದಾನದ ಹಕ್ಕು ನೀಡಿ ಹಣದಿಂದ  ಅದೃಷ್ಟ ಖರೀದಿಸಿ ಕೊನೆಗೆ ಅಧಿಕಾರವೂ ಹಣವೂ ನೀರುಪಾಲು.ಇದು ಒಬ್ಬ ವ್ಯಕ್ತಿಗಲ್ಲ ಇಡೀ ಸಮಾಜಕ್ಕೆ ಕಂಟಕಪ್ರಾಯವಾದರೆ ಇದರ ಪ್ರತಿಫಲವನ್ನು
ಎಲ್ಲಾ ಸೇರಿ ಅನುಭವಿಸಬೇಕು. ಹಾಗಾಗಿ,
ಭೂಮಿಯಲ್ಲಿ ಹುಟ್ಟುವುದೇ ಅದೃಷ್ಟವೆನ್ನಬಹುದು.ಕಾರಣ ನಮ್ಮ ಹಿಂದಿನ ಜನ್ಮದ ಪಾಪ ಪುಣ್ಯದ ಲೆಕ್ಕಾಚಾರವನ್ನು  ಜೀವ ಕಳೆದುಕೊಂಡು ಹೋಗುವುದಕ್ಕೆ ಜನನವಿದೆ. ಎಷ್ಟೋ
ಅತೃಪ್ತ ಆತ್ಮಗಳು ಜನ್ಮವಿಲ್ಲದೆ ಸುತ್ತಾಡುತ್ತಿರುವುದನ್ನು  ಅರ್ಥ ಮಾಡಿಕೊಳ್ಳಲು  ಜ್ಞಾನದಿಂದ ಸಾಧ್ಯ. ಜ್ಞಾನ ಸಂಪಾದನೆಗೆ  ಜನ್ಮವಿದೆ. ಯಾವಾಗ ಜ್ಞಾನವನ್ನು  ದುರ್ಭಳಕೆ
ಮಾಡಿಕೊಂಡು ಅಧಿಕಾರ,ಹೆಸರು,ಹಣ,ಸ್ಥಾನಮಾನ ಪಡೆದು
ನನ್ನ ಅದೃಷ್ಟ ವೆನ್ನುವ ಅಹಂಕಾರದಿಂದ  ಮಾನವ ಮೆರೆಯುವನೋ ಆಗಲೇ ದುರಾದೃಷ್ಟವೂ ಹಿಂದಿನಿಂದ  ಆವರಿಸುತ್ತದೆ.ಹೊರಗಿನ.  ರಾಜಕೀಯ ವ್ಯಕ್ತಿಗಳನ್ನು 
ಅದೃಷ್ಟವಂತರೆನ್ನಬಹುದೆ? 
ಜನರನ್ನು ದೇಶವನ್ನು ಆಳುವುದು ಸಾಮಾನ್ಯರಿಗೆ ಕಷ್ಟ 
ಹೀಗಿರುವಾಗ ಅಂತಹ ದೊಡ್ಡ ವ್ಯಕ್ತಿಗಳು ಅದೃಷ್ಟದ 
ಕೆಲಸ ಮಾಡಿದ್ದರೆ  ಮಾತ್ರ ರಾಜಕೀಯ ನಡೆಸಲು
ಸಾಧ್ಯ. ಇಲ್ಲಿ ಧರ್ಮದಿಂದ ರಾಜಕೀಯ ನಡೆಸುವುದು ಕಷ್ಟ.
ಅಧರ್ಮದಿಂದ ಸುಲಭ ಹೀಗಾಗಿ ಅಧರ್ಮಕ್ಕೆ ಅದೃಷ್ಟ ವೆಂದರೆ  ತಪ್ಪು. ಒಂದು ಕಣ್ಣಿಗೆ ಕಾಣುವ ಅದೃಷ್ಟ ಇನ್ನೊಂದು ಕಣ್ಣಿಗೆ ಕಾಣದ ಅದೃಷ್ಟ.
ಹಿಂದಿನ ಮಹಾತ್ಮರುಗಳು ಅದೃಷ್ಟವಂತರೆ? ಅವರ  ಜೀವನದಲ್ಲಿ  ಭೌತಿಕ ಸುಖವಿರಲಿಲ್ಲ  ಆದರೆ ಅಧ್ಯಾತ್ಮ ದ ಸುಖದಲ್ಲಿ  ಮೈಮರೆತಿದ್ದರು. ಹೀಗಾಗಿ  ಯಾವುದೋ ಒಂದು
ರೀತಿಯಲ್ಲಿ ಎಲ್ಲಾ ಅದೃಷ್ಟವಂತರೆ.  ಯಾವ ರೀತಿಯ ಅದೃಷ್ಟ ನಮಗಿದೆ ಎನ್ನುವ ಸತ್ಯವನ್ನು ನಾವೇ ಅರಿತರೆ ಹೊರಗಿನವರಿಂದ ಅದೃಷ್ಟವಂತರು ಎನ್ನಿಸಿಕೊಳ್ಳುವ ಅಗತ್ಯವಿಲ್ಲ. ಎಲ್ಲರೊಳಗಿದ್ದೂ ನಡೆಸೋ ಮಹಾಶಕ್ತಿಯನ್ನು
ಎಲ್ಲಾ ಅದೃಷ್ಟವಂತರೂ ಗುರುತಿಸಲಾಗದು. ಆದರೂ ಇದು
ಸತ್ಯವಾದಾಗ ನಮ್ಮ ಈ ಜನ್ಮದ ಉದ್ದೇಶ ತಿಳಿದು ನಡೆದರೆ
ಅದೃಷ್ಟ. ಯಾರೋ ಒಬ್ಬರು  ಅಧ್ಯಾತ್ಮ ದ ವಿಚಾರವನ್ನು  ಬರೆಯುತ್ತಿರುವುದಕ್ಕೆ‌ ನೀವು ಅದೃಷ್ಟವಂತರು ಎಂದಿದ್ದರು.
ಆದರೆ, ಅಂತಹ ಜ್ಞಾನವುಳ್ಳವರೊಡನೆ, ಸತ್ಸಂಗದೊಡನೆ
ಬೆರೆತು ಜೀವನ  ನಡೆಸೋರೆ ಅದೃಷ್ಟವಂತರು. 
ಸಜ್ಜನರ ಸಂಗ ಹೆಜ್ಜೇನು ಸವಿದಂತೆ ಎಂದಂತೆ. ಕೆಲವರಿಗೆ
ಜನ್ಮದಾರಂಭದಿಂದಲೇ ಅಂತಹ ಸಂಗವಿದ್ದು ಮುಂದೆ ಬಂದರೆ ಕೆಲವರಿಗೆ ಯಾವುದೇ  ರೀತಿಯ ಸಂಗವಿಲ್ಲದೆ  ಜ್ಞಾನ ಬರಬಹುದು.
ಮತ್ತೆ ಕೆಲವರಿಗೆ  ಸಂಗವಿದ್ದರೂ ಅಜ್ಞಾನವೇಇರಬಹುದು. 
ಇಲ್ಲಿ ಜ್ಞಾನದಿಂದ  ಅದೃಷ್ಟ  ಎನ್ನುವ ಬದಲು ಅಜ್ಞಾನದಲ್ಲಿ
 ಅದೃಷ್ಟ ನೋಡುವವರ ಸಂಖ್ಯೆ ಹೆಚ್ಚು.ಹೀಗಾಗಿಸಾಮಾನ್ಯ
ಜ್ಞಾನ ಬಿಟ್ಟು ಅಜ್ಞಾನದಲ್ಲಿ  ಅದೃಷ್ಟವನ್ನು ಅಳೆದು ಹಂಚಲಾಗುವ ರಾಜಕೀಯವಿದೆ. ರಾಜಯೋಗ ಹಿಂದುಳಿದು
ಹಿಂದುಳಿದವರನ್ನು ಅದೃಷ್ಟವಂತರೆಂದರೆ ತಪ್ಪು. ಹಿಂದಿನ ಧರ್ಮ ವೇ ಹಿಂದೂ ಧರ್ಮ. ಯಾರು ಅವರವರ ಹಿಂದಿನ ಧರ್ಮ ಕರ್ಮ ಕ್ಕೆ  ತಲೆಬಾಗಿರುವರೋ ಅವರಿಗೆ ಜ಼ೀವನ್ಮುಕ್ತಿ
ಎಂದಾಗ ನಿಜವಾದ ಅದೃಷ್ಟವಂತರು  ಯಾರು?
ಸಾಲ ತೀರಿಸಲು ಬಂದ ಜೀವಾತ್ಮನಿಗೆ  ಹಣವಿಲ್ಲದೆಯೂ  ಜ್ಞಾನದಿಂದ  ಜೀವನ ನಡೆಸಿ ಮುಕ್ತಿ ಪಡೆದವರೆ ಶರಣರು..
ಪರಮಾತ್ಮನಿಗೆ ದಾಸರಾಗೋದು ಶರಣಾಗೋದೆಂದರೆ ಸತ್ಯ
ಮತ್ತು ಧರ್ಮದ  ಪರ ನಡೆಯೋದು. ಇಲ್ಲಿ  ಯಾರೋ ಬಂದು ಯಾರದ್ದೋ ದೇಶವನ್ನು ಧರ್ಮ ವನ್ನು ಹಾಳು ಮಾಡುತ್ತಿದ್ದಾರೆನ್ನುವ ಬದಲಾಗಿ  ನಮ್ಮವರಲ್ಲಿಯೇ ಇರದ ಒಗ್ಗಟ್ಟಿನ‌  ಕೊರತೆಯಿಂದಲೇ  ನಾವು ಹಿಂದುಳಿದಿರುವು
ದೆನ್ನುವ ಸತ್ಯ ತಿಳಿದು ನಮ್ಮ ನಮ್ಮ ಅದೃಷ್ಟವನ್ನು ಅಧ್ಯಾತ್ಮದಿಂದ  ಅರ್ಥ ಮಾಡಿಕೊಂಡರೆ ಉತ್ತಮ. 
ಕಲಿಗಾಲದಲ್ಲಿ  ಕರ್ಮ ಯೋಗಿಗಳು ಅದೃಷ್ಟ ವಂತರಂತೆ.
ಮಾಧ್ಯಮಗಳಲ್ಲಿ ಹಲವು  ಪ್ರತಿಭಾವಂತರು  ಒಮ್ಮೆಗೇ ಕಾಣಿಸಿಕೊಂಡರೂ ಕೊನೆಯವರೆಗೂ  ಅವರನ್ನು  ನೋಡಲು ಕಷ್ಟ. ಹೀಗಾಗಿ ಅದೃಷ್ಟ ವೆನ್ನುವುದು  ಬದಲಾಗುತ್ತಾ ಹೋಗುತ್ತದೆ. ಇಂದಿನ ರಾಜ ‌ಮುಂದಿನ‌ ಬಿಕ್ಷುಕನಾಗಬಹುದು, ಬಿಕ್ಷುಕ  ಬಿಕ್ಷುವಾಗಿಬದಲಾಗಬಹುದು.

ನಾಲ್ಕು ವರ್ಣ  ಇಂದು ಒಡೆದು ಅಸಂಖ್ಯಾತ ಜಾತಿಗಳಾಗಿ
ಧರ್ಮ ವಾಗಿದೆ. ಇದನ್ನು  ಅರ್ಥ ಮಾಡಿಕೊಂಡರೆ ವಾಸ್ತವದ ಸತ್ಯದರ್ಶನ. ಪ್ರಜಾಪ್ರಭುತ್ವದ ಪ್ರಜೆಗಳು ಭಾರತದಲ್ಲಿ ಜನ್ಮ ಪಡೆಯಲು ಅದೃಷ್ಟ ಮಾಡಿರಬೇಕೆಂಬ ಸತ್ಯ  ತಿಳಿಯೋದಿಲ್ಲ.
ಕಾರಣ ಇಲ್ಲಿ ಸತ್ಯವೇ ಇಲ್ಲ. ಹೀಗಾಗಿ ವಿದೇಶಗಳಿಗೆ ಹೋಗಿ
ಅದೃಷ್ಟವನ್ನು  ಕೊಂಡಾಡುತ್ತಾರೆ. ಹೀಗಾದರೆ ಅದೃಷ್ಟ ಕೇವಲ
ಹಣದ ಆಧಾರದ ಮೇಲೆ ಅಳೆಯಲಾಗುತ್ತಿದೆ. ಜ್ಞಾನವಲ್ಲ.
ಅಧ್ಯಾತ್ಮ ದಲ್ಲಿ ಜ್ಞಾನವೇ ಅದೃಷ್ಟವನ್ನು ತೋರಿಸುತ್ತದೆ.
ಎಲ್ಲೇ ಇರು ಹೇಗೇ ಇರು ಭಾರತೀಯನಾಗಿರು,
ಕನ್ನಡಿಗನಾಗಿರು  ಎನ್ನುವ ಬದಲು ಮಾನವನಾಗಿರು ಎನ್ನಬಹುದು. ಅದೃಷ್ಟವಂತರು  ಅವರವರ ಧರ್ಮ, ಕರ್ಮ ,ದೇಶ,ರಾಜ್ಯ,ಭಾಷೆ,ಸಂಸ್ಕೃತಿಯ ಒಳಗಿದ್ದರೆ
  ಉತ್ತಮ.ಹೊರಗೆ ಹೋಗಿದ್ದರೆ ಅಧಮ.ದೂರ ಹೋದಷ್ಟೂ ಅದೃಷ್ಟ ಹಿಂದುಳಿಯುತ್ತದೆ.  ಹಿಂದೂ ಧರ್ಮ
ಹಾಳಾಗಿಲ್ಲ. ಇಡೀ ವಿಶ್ವ ಹರಡಿದೆ ಆದರೆ ಹಿಂದೂಸ್ತಾನ್  ಹೆಸರಿನಲ್ಲಿದೆ ,ಹಿಂದೂಸ್ತಾನದಲ್ಲಿ  ಹಿಂದೂಗಳಿಲ್ಲ. ಕಾರಣ ಇಲ್ಲಿ ಹಿಂದಿನ ಶಿಕ್ಷಣ  ಪ್ರಜೆಗಳಿಗೆ ಕೊಟ್ಟಿಲ್ಲ.ಅವರವರ ಹಿಂದಿನ ಧರ್ಮ ಬಿಟ್ಟು  ಹೊರಗಿನ ಹೋರಾಟ,ಹಾರಾಟ,
ಮಾರಾಟದಿಂದ ಧರ್ಮ ರಕ್ಷಣೆ ಆಗದೆ ತಮ್ಮ ತಮ್ಮ 
ಅದೃಷ್ಟವನ್ನು ಅಳೆಯಲಾಗಿದೆ. ಅಧಿಕಾರ,ಹಣ,ಸ್ಥಾನವಿದ್ದವರಿಗೆ ವಾಸ್ತವ ಸತ್ಯದ ಅರಿವಿಲ್ಲ. ಅರಿವಿದ್ದವರಿಗೆ ಹೇಳುವ  ಅಧಿಕಾರವಿಲ್ಲ.
ಇಬ್ಬರ ಜಗಳದಲ್ಲಿ ಮೂರನೆಯವರಿಗೆ ಲಾಭ. ಯಾರು ಅದೃಷ್ಟವಂತರು? ಮೂರನೆಯವರು ಯಾರು?
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ?

ಪರಮಾತ್ಮನ ಜೊತೆಗಿರೋದು ಅದೃಷ್ಟ. ಇದಕ್ಕೆ ಪರಮ ಸತ್ಯದ ಅಗತ್ಯವಿದೆ.

Monday, November 7, 2022

ಯೋಗ. ಭೋಗದ ವಿಜ್ಞಾನ

ಯೋಗದ ವಿಚಾರದಲ್ಲಿ ಸಾಕಷ್ಟು  ಪ್ರಯೋಗಗಳು ಪರೀಕ್ಷೆ ಗಳು ನಡೆದವು.ಆದರೆ ಯೋಗಿಯಾಗಲಾಗಲಿಲ್ಲ. ಎಲ್ಲಿಯವರೆಗೆ ಈ ಹೊರಗಿನ‌ ಪ್ರಯೋಗ,ಪರೀಕ್ಷೆ ಇರುವುದೋ ಅಲ್ಲಿಯವರೆಗೆ ನಮ್ಮ ಮನಸ್ಸು ಆಂತರಿಕವಾಗಿ
ಶರಣಾಗಲು ಕಷ್ಟ. ಇಲ್ಲಿ ಜೀವಾತ್ಮ‌ಪರಮಾತ್ಮನೊಂದಿಗೆ ಸೇರುವ‌ ಯೋಗವೇ ಅಂತಿಮ ಯೋಗ.ಇದನ್ನು ಜ್ಞಾನದಿಂದ ಭಕ್ತಿ ಯಿಂದ ಕರ್ಮ ದಿಂದ ಕಂಡುಕೊಂಡವರು ಪರಮಾತ್ಮನ  ಪರೀಕ್ಷೆಗಳನ್ನು ಎದುರಿಸಬೇಕಾಗಿತ್ತು. ಹೀಗಾಗಿ ಆಂತರಿಕ ವಾಗಿ ಶುದ್ದವಾಗುತ್ತಾ ಆತ್ಮಸಾಕ್ಷಾತ್ಕಾರ ವಾಗಿ ಮುಕ್ತಿ  ಮಾರ್ಗ ಹಿಡಿದರು. ಇಂದಿನ ಯೋಗ ಪರಕೀಯರೆಡೆಗೆ ಸಾಗಿದೆ. ವಿದೇಶಕ್ಕೆ ಯಾವಾಗ ಹೋಗುವುದು ಎನ್ನುವ ತಯಾರಿ ಮಕ್ಕಳಿರುವಾಗಲೇ ಶಿಕ್ಷಣದ ಮೂಲಕ ಪೋಷಕರೆ  ಹೊರಗೆ ನಡೆದು ಸಾಕಷ್ಟು ವೈಜ್ಞಾನಿಕ ಪ್ರಯೋಗಗಳಾಗುತ್ತಿದೆ. ದೈಹಿಕವಾಗಿ ನಡೆಸುವ ಪ್ರಯೋಗದಲ್ಲಿ  ಮಾನಸಿಕ ನೆಮ್ಮದಿ ಹಾಳಾಗುತ್ತಿದೆ. ಮಾನಸಿಕ ನೆಮ್ಮದಿಗಾಗಿ ಯೋಗಾಸನವನ್ನು ಬಳಸುತ್ತಾ  ಪ್ರಯೋಗ ಮಾತ್ರ ಭೌತಿಕದಲ್ಲಿ ಯೇ ಹೆಚ್ಚಾದಂತೆ ಹೊರಗಿನ ಯೋಗ ಕೂಡಿಬರುತ್ತದೆ. 
ವಿದೇಶ ಪ್ರಯಾಣವೂ ಒಂದು ಯೋಗ. ಸ್ವದೇಶದ ಋಣ ತೀರಿಸುವ ಯೋಗವನ್ನು ಅಧ್ಯಾತ್ಮ ತಿಳಿಸುತ್ತದೆ.
 ಇಲ್ಲಿದ್ದು  ಮಾಡಲಾಗದ್ದು ಅಲ್ಲಿ ಹೋಗಿ ಮಾಡಲು ಸಾಧ್ಯವೆಂದರೆ  ಅಲ್ಲಿರುವುದು ನಮ್ಮನೆ ಇಲ್ಲಿ ಬಂದೆ ಸುಮ್ಮನೆ ಎನ್ನಬಹುದು. 
ಅಧ್ಯಾತ್ಮ ದ ಮೂಲ ಮನೆಯಿಂದ ಹೊರಟ ಜೀವ ಭೌತಿಕಾಸಕ್ತಿ  ಬೆಳೆದಂತೆಲ್ಲಾ ಮೂಲ ಮನೆ ಬಿಟ್ಟು ಹೊರನಡೆದು  ಯೋಗವಿಲ್ಲದೆ  ತಿರುಗಿ ತಿರುಗಿ ಎಲ್ಲೋ ಮರೆಯಾಗುತ್ತದೆ. ಯೋಗವನ್ನು  ಮಾನವ ಮನಸ್ಸಿಗೆ ಬಂದಂತೆ ತಿಳಿಯಲಾಗದು. ಅದನ್ನು ಅಧ್ಯಾತ್ಮ ದ ಪ್ರಕಾರ ತಿಳಿಯುತ್ತಾ ಅಳವಡಿಸಿಕೊಂಡರೆ ಇದ್ದಲ್ಲಿಯೇ ಮಹಾಯೋಗ. ಅಳವಡಿಸಿಕೊಳ್ಳುವುದೇ  ಕಷ್ಟ. ಇದಕ್ಕೆ ಬೇಕಿದೆ ಯೋಗ ಶಿಕ್ಷಣ,ಯೋಗ್ಯ ಶಿಕ್ಷಣ,ಯೋಗ್ಯ ಗುರು.
ಭಗವದ್ಗೀತೆ ತಿಳಿಸುವ ‌ ಜ್ಞಾನಯೋಗ,ರಾಜಯೋಗ,ಭಕ್ತಿಯೋಗ,ಕರ್ಮ ಯೋಗವು
ರಾಜಕೀಯದಿಂದ  ಬೆಳೆಸಲಾಗದು. ಹೊರಗೆ ಬೆಳೆಸುವುದು ಕೇವಲ ರಾಜಕೀಯ. ಒಳಗೇ  ಅಡಗಿರುವ  ಶಕ್ತಿಯನ್ನು ಒಳಗೇ ತಿಳಿದು  ಅಧ್ಯಾತ್ಮ ದಿಂದ ಬೆಳೆಸಿಕೊಂಡು ‌ ಯೋಗಿ ಆಗುವುದನ್ನು  ಶ್ರೀ ಕೃಷ್ಣ ಪರಮಾತ್ಮನು ಅರ್ಜುನನಿಗೆ ತಿಳಿಸಿದ  ರಾಜಯೋಗವಾಗಿತ್ತು. ತನ್ನ ಧರ್ಮ, ಕರ್ಮ ವನ್ನು
ಯೋಗ್ಯರೀತಿಯಲ್ಲಿ ಅರಿತು ಅಳವಡಿಸಿಕೊಂಡು ಸ್ವತಂತ್ರ ಜೀವನ‌ ನಡೆಸುವ  ಯೋಗವು ಮಹಾಯೋಗ. ಹಿಂದಿನ ಮಹಾರಾಜರಿಗೆ ಕೊಡುತ್ತಿದ್ದ  ಕ್ಷತ್ರಿಯ ಧರ್ಮದ ಶಿಕ್ಷಣವನ್ನು
ಇಂದಿನ‌  ರಾಜಕಾರಣಿಗಳಿಗೆ ಕೊಟ್ಟರೂ  ಅಂದಿನ ರಾಜಪ್ರಭುತ್ವ ಇಂದಿಲ್ಲ. ಹೋರಾಟ,ಯುದ್ದವೂ ರಾಜಕಾರಣಿಗಳು ಮಾಡೋದಿಲ್ಲ.ಏನಿದ್ದರೂ ನಮ್ಮ ಸೈನಿಕರೆ
 ಇಂದಿನ ರಾಜರು. ಆದರೆ  ಅವರನ್ನೇ ತಮ್ಮ ವಶದಲ್ಲಿ  ಬಳಸಿ 
ವಿದೇಶಿಗರನ್ನು ಸ್ವಾಗತಿಸುವ‌ ಮಟ್ಟಿಗೆ  ವಿದೇಶದ ಯೋಗ  ಬೆಳೆದಿದೆ. ಎಲ್ಲಾ ಮಾನವರೆ ಆದರೂ ಯೋಗಿಗಳಲ್ಲ.
ಯೋಗಿಗಳ ದೇಶವನ್ನು ಭೋಗಿಗಳ ದೇಶವಾಗಿ ಬದಲಾವಣೆ
ಮಾಡಲು ಹೋದರೆ ರೋಗಿಗಳ ದೇಶವಾಗುತ್ತದೆ.ಅವರವರ ಮೂಲ ಶಕ್ತಿಯೇ ಅವರನ್ನು ರಕ್ಷಿಸುವಾಗ ಹೊರಗಿನಿಂದ ತೇಪೆ ಹಾಕಿ‌ ಬದಲಾಯಿಸಹೋದರೆ ಇರುವ ಯೋಗವೂ
ಹಿಂದುಳಿಯುತ್ತದೆ.
ಒಟ್ಟಿನಲ್ಲಿ  ಯೋಗವು ಕಾಲಬಂದಾಗ ಕೂಡಿ ಬರಬೇಕು.
ಇದರಲ್ಲಿ ಸಾಕಷ್ಟು ವಿಚಾರವಿದೆ. ಮನೆ,ಮದುವೆ,ಮಕ್ಕಳು, ವಿದೇಶ, ಶಿಕ್ಷಣ,....ಇನ್ನಿತರ ಭೌತಿಕ ಯೋಗಕ್ಕೆ ಹೊರಗಿನ ಪ್ರಯತ್ನ ವಾದರೆ, ಪರಮಾತ್ಮನ ಸೇರುವ ಯೋಗಕ್ಕೆ ಒಳಗಿನ
ಪ್ರಯತ್ನ,ಪರೀಕ್ಷೆ,ಶೋಧನೆ,ಪ್ರಯೋಗಗಳು ಅಗತ್ಯ. ಎಷ್ಟೇ ಹೊರಗಿನ‌ಪ್ರಯೋಗ ಯಶಸ್ವಿಯಾದರೂ ಒಳಗಿನ ಶೋಧನೆ
ಆಗದಿದ್ದರೆ ಸಂಶೋಧನೆಗಳೇ ಬೆಳೆಯೋದು. 
ಕಾಲಮಾನಕ್ಕೆ ತಕ್ಕಂತೆ ಎಲ್ಲಾ  ನಡೆಯುತ್ತದೆ. ಆದರೆ ಕಾಲದ  ಮಿತಿ ಇದೆ. ಇತಿಮಿತಿಗಳನ್ನು  ತಿಳಿದು ಯೋಗ ಬೆಳೆದರೆ ಉತ್ತಮ ಪರಿಸ್ಥಿತಿ. ಜೀವನಿರೋವಾಗಲೇ‌  ಪರಜೀವ ಕಾಣೋದು. ಹಾಗೆಯೇ ಆತ್ಮ ದೇಹದೊಳಗಿರುವಾಗಲೇ ಪರಮಾತ್ಮನ ಕಾಣೋದೆ ಯೋಗ ಎಂದರು ಮಹಾ
ಜ್ಞಾನಿಗಳು.  

ಮಹಾಭಾರತ ಯುದ್ದದ ಸಮಯದಲ್ಲಿ ಶ್ರೀ ಕೃಷ್ಣ ನ ಸಹಕಾರಕ್ಕಾಗಿ ಅರ್ಜುನನ ಜೊತೆಗೆ ದುರ್ಯೋಧನನೂ  ತನ್ನ  ಜೊತೆಗೆ ಇರಲು ಕೇಳಿಕೊಂಡಾಗ ಶ್ರೀ ಕೃಷ್ಣ  ಇಬ್ಬರಿಗೂ ಸಹಾಯ ಮಾಡಲು ಒಂದೆಡೆ ಶಸ್ತ್ರ ಸಹಿತ ಸೈನ್ಯ ,ಇನ್ನೊಂದು ಕಡೆ ಶಸ್ತ್ರ ರಹಿತ ಸ್ವಯಂ ಶ್ರೀ ಕೃಷ್ಣ ಪರಮಾತ್ಮ.ಅಜ್ಞಾನಿ ದುರ್ಯೋಧನ ಕೇಳಿದ್ದು ಸೈನ್ಯವನ್ನು ಜ್ಞಾನಿಯಾದ ಅರ್ಜುನ ಬೇಡಿದ್ದು ಸ್ವಯಂ ಶ್ರೀ ಕೃಷ್ಣನನ್ನು.ಇಲ್ಲಿ  ಗೆದ್ದ ಅರ್ಜುನ  ಯೋಗಿಯಾದ.
ಹಾಗೆಯೇ ಇಂದಿನ ಭಾರತದ ಪ್ರಜೆಗಳಿಗೆ ಒಳಗಿರುವ  ಯೋಗ ಶಕ್ತಿಯ ಜ್ಞಾನವಿಲ್ಲದೆ ಹೊರಗಿನ ‌ಭೋಗ ಶಕ್ತಿಯ ಹಿಂದೆ ನಿಂತು ಬೇಡುವ ಪರಿಸ್ಥಿತಿಯಿದೆ.  ಸಾಲ ತೀರಿಸಲು ಯೋಗವಿರಬೇಕು. ಭೋಗದಿಂದ ಸಾಲ ಬೆಳೆದು ನಿಂತರೆ ರೋಗವೇ ಹೆಚ್ಚುತ್ತದೆ. ಮನಸ್ಸು ಹೊರನಡೆದಷ್ಟೂ ನಾನೇ ಬೆಳೆಯುವಾಗ  ಯೋಗ  ಕೂಡಿ ಬರಲು ನಾನು ಹೋಗಬೇಕೆನ್ನುವ ಮಹಾತ್ಮರಾಗಲಿ,ದೇವರಾಗಲಿ,
ತತ್ವವಾಗಲಿ ಕಾಣದು.  ನಾನೇ ದೇವರಾದರೆ ನನಗೆ ಮರಣ ಇಲ್ಲವೆ? ಆತ್ಮಕ್ಕೆ ಸಾವಿಲ್ಲ.ಪರಮಾತ್ಮನ ಸೇರೋದೆ ಮಹಾಯೋಗವೆಂದರೆ  ಆತ್ಮವೆ ನಾನೇ? ನಾನೆಂಬುದಿಲ್ಲ ಎಂದರೆ  ಅರ್ಥ ವೇನು? ಅದ್ವೈತ ಸಂಶೋಧನೆ ಒಳಗಿದ್ದು ಮಾಡಿದರೆ ಉತ್ತರವಿದೆ. ..ಹೊರಗೆ ನಡೆದಷ್ಟೂ  ಉತ್ತರ ಸಿಗದು.. ಯೋಗಿಯಾಗೋದೂ ಕಷ್ಟವೆನ್ನುವ  ಹಿಂದೂ ಧರ್ಮದ ರಕ್ಷಣೆ ಯೋಗಿಗಳಿಂದ ಸಾಧ್ಯ.   ರಾಜಯೋಗವನ್ನು ರಾಜಕೀಯವನ್ನಾಗಿಸಹೋದರೆ ಅಧರ್ಮ. ನಾನೇ  ಸರಿಯಿಲ್ಲದೆ ಪರರನ್ನು ಸರಿಪಡಿಸ
ಬಹುದೆ?  
ಅಂದು ಕೌರವರ ಅಧರ್ಮಕ್ಕೆ  ಯುದ್ದ ನಡೆದು  ಧರ್ಮ ಕ್ಕೆ ಜಯ ತಂದು ಕೊಟ್ಟ  ಮಹಾಯೋಗಿ ಶ್ರೀ ಕೃಷ್ಣ ತನ್ನ ಜೀವನದಲ್ಲಿ ಭೋಗವನ್ನೂ ಯೋಗದಲ್ಲಿಯೇ ಕಂಡಿದ್ದನು.
ಅತಿಯಾದ ರಾಜಕೀಯ ದ್ವೇಷದಿಂದ ಯೋಗಿ ಆಗೋದಿಲ್ಲ.
ನಾನೇ ರಾಜನಾದರೆ  ಪ್ರಜಾಪ್ರಭುತ್ವ ಎಲ್ಲಿದೆ?

Sunday, November 6, 2022

ಗ್ರಹಣವನ್ನು ಹೀಗೂ ಅರ್ಥ ಮಾಡಿಕೊಳ್ಳಬಹುದು

ಗ್ರಹಣಗಳು  ಹೆಚ್ಚಾಗುವುದಕ್ಕೆ ಕಾರಣವೇ ಮಾನವನ ಅಜ್ಞಾನದ ಜೀವನ ಶೈಲಿ ಎನ್ನುತ್ತಾರೆ ತಿಳಿದವರು.
ಗ್ರಹ ದೋಷ ಗಳಿಗೆ ಸಾಕಷ್ಟು ಧಾರ್ಮಿಕ ಪರಿಹಾರ ಕಾರ್ಯ ಇದೆ. ಆದರೆ ಗ್ರಹಚಾರದ ಬಗ್ಗೆ ತಿಳಿಯುವ ಜ್ಞಾನದ ಕೊರತೆ ಮಾನವನಲ್ಲಿ ಬೆಳೆದು ನಿಂತಿದೆ. ಭೂಮಿ ಎನ್ನುವ ಗ್ರಹವನ್ನು
ಹೇಗೆ ಬಳಸಿಕೊಂಡರೆ  ಜ್ಞಾನ ಬೆಳೆಯುವುದೆನ್ನುವ ನಮ್ಮ ಹಿಂದಿನ ಧರ್ಮ ಕರ್ಮ  ಸಿದ್ಧಾಂತ ತತ್ವಗಳನ್ನು  ನಮ್ಮ ಮನಸ್ಸಿಗೆ ಬಂದಂತೆ  ಹೊರ ಹಾಕುವಾಗ ಇದೇ ಮುಂದಿನ ಪೀಳಿಗೆಗೆ ಗ್ರಹಚಾರ ಬೆಳೆಸಿದರೆ ವ್ಯರ್ಥ .ಆದರೆ  ಲೋಕ ಕಲ್ಯಾಣಾರ್ಥ ವಾಗಿ   ಭೂ ಗ್ರಹದಲ್ಲಿ ನಡೆಸುವ ಧಾರ್ಮಿಕ ಕಾರ್ಯಕ್ರಮ  ಜನಸಾಮಾನ್ಯರಿಗೆ ಅರ್ಥ ವಾಗುವಂತೆ ವಿವರಿಸುತ್ತಾ ಅವರವರ ಗ್ರಹಚಾರಕ್ಕೆ ಅವರ ಧರ್ಮ ಕರ್ಮ ಕಾರಣವೆನ್ನುವ ಸತ್ಯ ತಿಳಿಸುವತ್ತ  ನಮ್ಮ ಸೇವೆಯು ಶುದ್ದತೆ ಕಡೆಗಿದ್ದರೆ  ಶುದ್ದ ಮನಸ್ಸಿನಿಂದಲೇ ಎಲ್ಲಾ ಕಾರ್ಯಕ್ರಮ ನಡೆದು  ಗ್ರಹಗಳು ತಮ್ಮ ಸ್ವಸ್ಥಾನದಲ್ಲಿ ಚಲಿಸಬಹುದು. ಯಾವಾಗ  ಮನಸ್ಸು ಹೊರ ನಡೆದು ಸ್ವೇಚ್ಚಾಚಾರಕ್ಕೆ ತಿರುಗಿ
ಇತರರನ್ನು ದಾರಿತಪ್ಪಿಸಿ ಆಳುವುದೋ ಆಗಲೇ ಪ್ರಕೃತಿವಿಕೋಪ, ಗ್ರಹಣಗಳು, ಭೂ ಕಂಪಗಳು ಹೆಚ್ಚುತ್ತಾ  ಮನುಕುಲಕ್ಕೆ ಮಾರಕವಾಗುತ್ತದೆ. ಒಟ್ಟಿನಲ್ಲಿ ಭೂಮಿಯನ್ನು
ಮಾನವ ಹೇಗೆ ಬಳಸುವನೋ ಹಾಗೆ ಗ್ರಹಗಳ ಚಲನೆಯೂ
ನಡೆಯುತ್ತದೆ. ಭೂಮಿಯನ್ನು ಸುತ್ತುವ ಚಂದ್ರನಿಗೂ ಗ್ರಹಣ
ಭೂಮಿ ಸುತ್ತುವ ಸೂರ್ಯ ನಿಗೂ ಗ್ರಹಣ ಹಿಡಿಯುವುದು
ಯುಗಯುಗದಿಂದಲೂ ಇದೆ. ಅಂದರೆ ಗ್ರಹಣವನ್ನು ಮುಂದೆ ಇಟ್ಟುಕೊಂಡು ಹಣ ಮಾಡೋರೂ ಇದ್ದಾರೆ. ಗ್ರಹಣದಿಂದ ಹಣ ಕಳೆದುಕೊಳ್ಳುವ ಜನರೂ ಇದ್ದಾರೆ. ಗ್ರಹಣವು  ಹಿಡಿಯೋದು ಗ್ರಹಚಾರವಿದ್ದವರಿಗೆ .ಗ್ರಹಚಾರ ಮಾನವನಿಗೆ ಇದ್ದೇ ಇರುತ್ತದೆ. ಇದನ್ನು ಸರಿಯಾದ ಆಚಾರ,ವಿಚಾರ, ಪ್ರಚಾರದಿಂದ  ಅರ್ಥ ಮಾಡಿಕೊಳ್ಳಲು ನಮ್ಮಲ್ಲಿರಬೇಕು ಶಿಷ್ಟಾಚಾರ. ಶಿಷ್ಟರೆಂದರೆ  ಯಾರು? 
ಗುರುವಾದವರು ಶಿಷ್ಯರಿಗೆ ದಾರಿದೀಪವಾದಂತೆ, ಪ್ರಜೆಗಳಾದವರು ದೇಶಕ್ಕೆ ದಾರಿದೀಪಗಳು.ದಾರಿಹೋಕರನ್ನು ಬೆಳೆಸುವ ಭ್ರಷ್ಟಾಚಾರ ಕ್ಕೆ ಸರಿಯಾಗಿ ಗ್ರಹಣಹಿಡಿಯುತ್ತದೆ. ಜೀವವೇ ಅನುಭವಿಸಬೇಕು. ಒಟ್ಟಿನಲ್ಲಿ ಮಾಧ್ಯಮಗಳಿಗೆ ಹಿಡಿದಷ್ಟು ಗ್ರಹಣ  ಯಾರಿಗೂ ಹಿಡಿಯೋದಿಲ್ಲ.ಅದರ ಹಿಂದೆ ನಡೆದರೆನಮಗೂ ಗ್ರಹಣ ಹಿಡಿಯುವುದು. 
ಉತ್ತಮ ಸುದ್ದಿ ಪ್ರಸಾರಮಾಡಿದರೆ ಇಡೀ ದೇಶಕ್ಕೆ ವಿಶ್ವಕ್ಕೆ 
ಗ್ರಹಣ ದೋಷ ಇರದು.
ಸಾಧ್ಯವೆ? ಎಲ್ಲಿರುವರು ಗ್ರಹ ದೇವತೆಗಳು?
ಭಾನು,ಸೋಮ,ಮಂಗಳ,ಭುಧ,ಗುರು,ಶುಕ್ರ,ಶನಿ..ನಿರಂತರ
ವಾರದ ಏಳೂ ದಿನಗಳಂದು  ನೆನಿಸಿಕೊಳ್ಳುವ ಮಾನವನಿಗೆ
ಅವರೊಂದಿಗಿರುವ ಶಕ್ತಿವಿಶೇಷತೆ ಬಗ್ಗೆ ಅರಿವಿಲ್ಲದೆ ಕೇವಲ
ವಾರ ಎನ್ನುವ ಹಂತಕ್ಕೆ ಬಂದು ಮಾಡಬಾರದ ರಾಜಕೀಯ ಮಾಡುತ್ತಾ ಆಳಿದರೆ  ಗ್ರಹಣ ಹಿಡಿಯುವುದು ಸಹಜ.
ಇದನ್ನು ಸರಿಯಾದ ದಾನ,ಧರ್ಮ,ಪೂಜೆ,ದ್ಯಾನ,ಯೋಗದ ಮೂಲಕ ಕಳೆದುಕೊಳ್ಳಲು  ಪುರೋಹಿತರು,ಧಾರ್ಮಿಕ ಜನರು, ಗುರು ಹಿರಿಯರು, ಜ್ಞಾನಿಗಳು,ಭವಿಷ್ಯ ಹೇಳುವವರು ಇನ್ನಿತರ ಹಿಂದೂ ಧರ್ಮದವರು ತಿಳಿಸಿದ್ದಾರೆ
ಅವರು  ತತ್ವಜ್ಞಾನದಿಂದ ತಿಳಿದು ಪರಿಹಾರ ಸೂಚಿಸಿದ್ದಾರೆ
ನಮ್ಮದೇ ತಂತ್ರದಿಂದ ಅದನ್ನು ತಿಳಿದು ಇನ್ನಷ್ಟು ಗ್ರಹ ಗಳ ಸೃಷ್ಟಿ ಮಾಡುತ್ತಾ ಕಾಲಹರಣ ಮಾಡಿದರೆ ನಿಜವಾದ ಗ್ರಹಣ
ಹಿಡಿದವರೆ ಹೆಚ್ಚಾಗುತ್ತಾರೆ. ಸತ್ಯವಿದೆ ಧರ್ಮ ವಿದೆ.ಆದರೆ ಪೂರ್ಣವಾಗಿ ತಿಳಿದವರಿಲ್ಲದೆ ಅರ್ಧ ಸತ್ಯದಲ್ಲಿ ರಾಜಕೀಯ
ಬೆಳೆದಿದೆ. ಹಾಗಾದರೆ ನಾವ್ಯಾರು? ನಾನ್ಯಾರು ಪ್ರಶ್ನೆಗೆ ಉತ್ತರ
ಒಳಗಿರುವಾಗ ಹೊರಗೆ ಹುಡುಕಿದರೆ ಸಿಗುವುದೆ? ಗ್ರಹದೋಷ ಒಳಗಿರುವಾಗ ಒಳಗಿನ ಶುದ್ದಿಯಾಗಬೇಕಷ್ಡೆ.
ಒಳಗೇ  ಇರುವ ಅಂತರಾತ್ಮನ  ಅರಿವಿಲ್ಲದೆ ಹೊರಗಿನ ಪರಮಾತ್ಮನ ಕಾಣಬಹುದೆ? ಗ್ರಹಗಳ ಚಲನ ವಲನದಿಂದಲೇ ಮಾನವನ ಜೀವನ ನಡೆದಿರುವಾಗ ಅದರ ಬಗ್ಗೆ ಸರಿಯಾದ ಶಿಕ್ಷಣ ನೀಡದೆ ನಾವೇ ಗ್ರಹಗಳಾದರೆ ಮೇಲೆ ಇರುವ ಗ್ರಹಗಳಿಗೇನೂ ಸಮಸ್ಯೆಯಿಲ್ಲ. ಗ್ರಹದೋಷ
ಇದ್ದರೆ  ಮಾನವನಿಗಷ್ಟೆ. ಅಂದರೆ  ಎಲ್ಲದ್ದಕ್ಕೂ ಕಾರಣವೆ ಮಾನವನ ಸ್ವಾರ್ಥ ಅಹಂಕಾರಯುಕ್ತ ರಾಜಕೀಯ ಜೀವನ.
ಹಿಂದಿನ ಜನ್ಮದ ಋಣ ಮತ್ತು ಕರ್ಮ ಫಲ. ಜನ್ಮ ಜನ್ಮಾಂತರದವರೆಗೂ ಹರಿದು ಬಂದಿದೆ.ಭೂಮಿಯಲ್ಲಿದ್ದೇ ಕಳೆದುಕೊಳ್ಳಲು ಬೇಕಿದೆ ಆತ್ಮ ಜ್ಞಾನ. ಆತ್ಮನಿರ್ಭರ ಭಾರತ  ಆತ್ಮಜ್ಞಾನದಿಂದ ಸಾಧ್ಯವಿದೆ. ಆತ್ಮಜ್ಞಾನಿಗಳ ಶುದ್ದತೆಗೆ ಗ್ರಹಗಳು ಶಾಂತವಾಗಿರುತ್ತದೆ.ಗ್ರಹಶಾಂತಿ ಮಾಡಲು ಹಣ ಬೇಕು.ಅದೂ ಶಿಷ್ಟಾಚಾರ ದ ಹಣವಿರಬೇಕು.ಭ್ರಷ್ಟಾಚಾರ ದ ಹಣದಲ್ಲಿ ಏನೇ ಧರ್ಮ ಕಾರ್ಯ ಮಾಡಿದರೂ ನಮ್ಮ
ಕರ್ಮ ಶುದ್ದಿಯಾಗದೆ ಯಾವ ಗ್ರಹಚಾರವೂ  ಹೋಗದು.
ಇದೇ ಕಾರಣದಿಂದ ಮಹಾತ್ಮರುಗಳು ಪ್ರತಿಯೊಂದು ಆಚಾರ ವಿಚಾರ, ರೀತಿ ನೀತಿ ಸಂಸ್ಕೃತಿ ಸಂಪ್ರದಾಯವು ಶಾಸ್ತ್ರ ದ ಮೂಲಕ ತಿಳಿಸಿ ನಡೆಯಲು ದಾರಿತೋರಿದರು.
ಆದರೀಗ ಶಾಸ್ತ್ರ ದ ಮೂಲ ಉದ್ದೇಶ ಅರ್ಥ ಆಗದೆ ಕಾಟಾಚಾರ ಬೆಳೆದು ಹಣಕ್ಕಾಗಿ  ಜನರ ದಾರಿತಪ್ಪಿಸಿ ಕೆಲವು ಭೌತಿಕ ಆಚರಣೆಯಲ್ಲಿ ಭ್ರಷ್ಟಾಚಾರ ತುಂಬಿಹೋಗಿದೆ.ಇದೇ
ಗ್ರಹಣಗಳು, ಪ್ರಕೃತಿವಿಕೋಪ,ರೋಗರುಜಿನ,ಪರಿಸರ ನಾಶಕ್ಕೆ  ಕಾರಣವಾದರೆ  ಪರಿಹಾರವಾಗಿ ಮಾನವ ಹಿಂದೆ ತಿರುಗಿ ಸತ್ಯವನ್ನು  ತನ್ನಲ್ಲಿ ಅಳವಡಿಸಿಕೊಂಡು  ಮೂಲ ಉದ್ದೇಶ ಅರ್ಥ ಮಾಡಿಕೊಳ್ಳುವ ಪ್ರಯತ್ನ ಪಡಬೇಕಿತ್ತು.
ಶಂಖದಿಂದ ಬಂದದ್ದೇ  ತೀರ್ಥ .ಅಂದಿನ ಶಂಖ ಶುದ್ದ ಸತ್ಯ ಧರ್ಮ ದಲ್ಲಿತ್ತು.ಇಂದು  ಕಲುಷಿತ ವಾಗಿದೆ.ಕೆಲವಷ್ಟೇ ಶುದ್ದ ಇದ್ದರೂ  ಮಾನವನಿಗೆ ಅರಿವಿಲ್ಲದೆ ಎಲ್ಲಾ ಶುದ್ದವಾಗಲು ಕಷ್ಟ.ಅವರವರ ಮನಸ್ಸಿನ ಶುದ್ದತೆಗೆ ಸ್ವಚ್ಚ ಶಿಕ್ಷಣಬೇಕು.
ವಿದೇಶಿಗಳು ಭಾರತೀಯತೆಯನ್ನು ಅಳವಡಿಸಿಕೊಂಡು ಅವರ ದೇಶವನ್ನು ಬೆಳೆಸಿಕೊಂಡರೆ  ಸಂತೋಷಪಡುವ ನಾವು ನಮ್ಮಮಕ್ಕಳಿಗೆ ಕಲಿಸಲಾಗದಿದ್ದರೆ ನಮ್ಮದೇ ದೋಷ.
ಆ ದೋಷವೇ ಗ್ರಹವಾಗಿ  ತಿರುಗಿ ಹೊಡೆಯುವಾಗ  ಯಾರೂ ಇರೋದಿಲ್ಲ. ಒಟ್ಟಿನಲ್ಲಿ ಮಾನವನಿಗೆ ತನ್ನ ತಾನು ಬದಲಾಯಿಸಿಕೊಳ್ಳುವುದೇ ಕಷ್ಟ. ಕಾರಣ ಅವನೊಳಗೆ ದೇವಾಸುರರ ಶಕ್ತಿಯಿದೆ. ಅವರಿಬ್ಬರಲ್ಲಿ ಯಾರು ಶ್ರೇಷ್ಠ ಕನಿಷ್ಟವೆನ್ನುವ  ಪೈಪೋಟಿಯಿದೆ. ಜ್ಞಾನವಿಜ್ಞಾನದ ನಡುವೆ ಸಾಮಾನ್ಯಜ್ಞಾನ ಇದ್ದ ಹಾಗೆ ಮಾನವನಿಗೆ ತನ್ನದೇ ಆದ ಸಾಮಾನ್ಯಜ್ಞಾನ  ಇದ್ದು ಅದರ ಮೂಲಕ  ತನ್ನ‌ಜೀವಾತ್ಮನಿಗೆ
ಮುಕ್ತಿ ಸಿಗುವವರೆಗೆ ಸುಖವಿಲ್ಲ. ಇದಕ್ಕಾಗಿ ಆಂತರಿಕ ಶುದ್ದಿಅಗತ್ಯ.ಕಷ್ಟಪಟ್ಟು ಆಂತರಿಕ ಶಕ್ತಿ ಬೆಳೆಸಿಕೊಳ್ಳಲು ರಾಜಯೋಗ ಬೇಕು. ಯೋಗವೆಂದರೆ ಸೇರುವುದೆಂದರ್ಥ ಒಳ್ಳೆಯದಕ್ಕೆ ನಮ್ಮ‌ಮನಸ್ಸು ಸೇರಿದರೆ ಯೋಗ.ಸತ್ಯಕ್ಕೆ ಸೇರಿದರೆ ಯೋಗ,ಧರ್ಮ ಕರ್ಮ ಕ್ಕೆ ತತ್ವಜ್ಞಾನ ಸೇರಿದರೆ ಮಹಾಯೋಗ. ಇದನ್ನು ಪುರಾಣ ಇತಿಹಾಸದ ಕಥೆ ತಿಳಿಸುವುದೆ? ಅದರಲ್ಲೂ ಇದೇ ಅಡಗಿರೋದಾಗಿದೆ.
ವಾಸ್ತವದಲ್ಲಿ ಪ್ರಜಾಪ್ರಭುತ್ವದ  ದೇಶದ ಈ ಸ್ಥಿತಿಗೆ ಪ್ರಜೆಗಳ 
ಅಜ್ಞಾನದ ಜೀವನ ಶೈಲಿ ಕಾರಣ. ಜೀವನಶೈಲಿಗೆ ಶಿಕ್ಷಣದ ವಿಷಯಗಳೇ ಕಾರಣ. 'ವಿಷ'ಯ ವಿಷವನ್ನು ಉಣ್ಣಿಸಿದರೆ ಅಮೃತ ತತ್ವ ಅರ್ಥ ವಾಗದು.ಸ್ವಾಮಿ ವಿವೇಕಾನಂದರು ಶಿಕ್ಷಣದಲ್ಲಿಯೇ ಅಮೃತ ತತ್ವ ಅಳವಡಿಸಲು ಹೇಳಿದ್ದರು.
ಅವರ  ಹೆಸರು ಅಮೇರಿಕಾದಂತಹ ಮಹಾದೇಶದವರೆಗೂ
ಹರಡಿದ್ದರೂ  ಭಾರತದಲ್ಲಿನ ಶಿಕ್ಷಣ ಮಾತ್ರ ಅಮೇರಿಕದ ವಿಷಯವನ್ನು ಬೆಳೆಸಿ ಮಕ್ಕಳಿಗೆ ವಿದೇಶ ವ್ಯಾಮೋಹ ಹೆಚ್ಚಿಸಿ
ತಂತ್ರಜ್ಞಾನದಿಂದ ದೇಶ ಆಳಲು ಹೋದರೆ ಮೂಲದ ತತ್ವಕ್ಕೆ
ಮಾಡಿದ ಅವಮಾನ. ಇದಕ್ಕೆ ಗ್ರಹಣವನ್ನು  ತಪ್ಪಿಸಲಾಗದು.
ಹಣದ ಹಿಂದೆ ಬಿದ್ದರೆ ಜ್ಞಾನದ  ನಷ್ಟ.ಜ್ಞಾನದ ಹಿಂದೆ ಬಿದ್ದರೆ ಹಣದ ನಷ್ಟ. ಇವೆರಡನ್ನೂ ಸರಿಸಮನಾಗಿ ಕಂಡರೆ ಉತ್ತಮ ಸ್ಥಿತಿ. ಸೃಷ್ಟಿ ಸರಿಯಾಗಿದ್ದರೆ  ಉತ್ತಮಸ್ಥಿತಿ ನಂತರ ಮುಕ್ತಿ.
ಸೃಷ್ಟಿ  ಸರಿಯಿಲ್ಲದೆ ಸ್ಥಿತಿಗೆ  ಹಳಿಯುತ್ತಾ  ಲಯವನ್ನು ಹೆಚ್ಚಿಸಿ ಜೀವ ಹೋದರೆ  ಯಥಾ ಪ್ರಕಾರ ಸೃಷ್ಟಿ ಯಾಗುತ್ತದೆ. ಉತ್ತಮ ಶಿಕ್ಷಣದಿಂದ ಸೃಷ್ಟಿ ಯನ್ನು ಅರ್ಥ ಮಾಡಿಕೊಂಡು
ಜನರ ಸ್ಥಿತಿಗೆ ಕಾರಣವನ್ನು ತಿಳಿಯುತ್ತಾ ಸತ್ಯಜ್ಞಾನದಿಂದ ಮುಕ್ತಿ ಪಡೆದ ದೇಶವೇ ಭಾರತ. ಇದು ಭಾರತೀಯ ಹಿಂದಿನ
ಶಿಕ್ಷಣದಲ್ಲಿತ್ತು. ಬದಲಾವಣೆ ಶಿಕ್ಷಣದಲ್ಲಿಯೇ ಆಗಬೇಕಿತ್ತು.
ಅದರಲ್ಲೂ ರಾಜಕೀಯ ಬೆಳೆದು ಭ್ರಷ್ಟಾಚಾರ ತುಂಬಿದರೆ ಮಕ್ಕಳು  ಎತ್ತ ಹೋಗಬೇಕು? ಪೋಷಕರಾದವರೆ ಶೋಷಣೆ ಮಾಡುವವರಾದರೆ  ಬೇಲಿಯೇ ಎದ್ದು ಹೊಲಮೇಯ್ದರೆ  ಕಾಯೋರು ಯಾರು? ದೇವರು ವ್ಯಕ್ತಿ ಯಲ್ಲ ಶಕ್ತಿ.ಅಣು ಪರಮಾಣುಗಳ ವಿಜ್ಞಾನ ಜಗತ್ತಿನಲ್ಲಿ ಜೀವಾತ್ಮ ಪರಮಾತ್ಮ
ಕಾಣದೆ  ಜಗತ್ತಿನಲ್ಲಿ ಗ್ರಹಗಳ‌ಮೇಲೆ ಲಗ್ಗೆ ಹಾಕುವ ವ್ಯಕ್ತಿ ಯ ಬುದ್ದಿಶಕ್ತಿಯಿದೆ.ಆದರೆ ಜ್ಞಾನಶಕ್ತಿಯಿಲ್ಲ. ಸಾಮಾನ್ಯಜ್ಞಾನ ದ
ಕೊರತೆಯೇ ಎಲ್ಲಾ ಸಮಸ್ಯೆಗಳಿಗೆ ಕಾರಣವೆನ್ನಬಹುದಷ್ಟೆ.

Tuesday, November 1, 2022

ಕನ್ನಡದ ರಕ್ಷಣೆ ರಾಜಕೀಯದಿಂದ ಸಾಧ್ಯವೆ?

ಕನ್ನಡ ರಾಜ್ಯೋತ್ಸವ ದ ಶುಭಾಶಯಗಳು. ಭಾಷೆಯ ರಕ್ಷಣೆ ಹಣದಿಂದ, ಅಧಿಕಾರದಿಂದ, ರಾಜಕೀಯದಿಂದ  ಮಾಡೋ ಮೊದಲು ಶಿಕ್ಷಣದಿಂದ ಧರ್ಮದಿಂದ ಮಾಡಿದ್ದರೆ ಇಂದು ಕರ್ನಾಟಕದಲ್ಲಿ ಇಷ್ಟೊಂದು ಹೋರಾಟ,ಹಾರಾಟ ಮಾರಾಟದ  ಗೋಳಾಟವಿರುತ್ತಿರಲಿಲ್ಲ. ಜ್ಞಾನದಿಂದ ಮಾತ್ರ ಧರ್ಮ ಸತ್ಯ ಬೆಳೆಯೋದು. ಇದು ಅವರವರ ರಾಜ್ಯ,ದೇಶ,
ಸ್ಥಳದ ಮೂಲವನ್ನು ಅನುಸರಿಸಿದ್ದರೆ ಬುಡ ಗಟ್ಟಿ. ಅದನ್ನು ಬಿಟ್ಟು ನೇರವಾಗಿ ಹೊರನಡೆದರೆ ರೆಂಬೆಕೊಂಬೆಗಳ ಆಯಸ್ಸು ಕ್ಷೀಣವೆನ್ನುತ್ತಾರೆ ಮಹಾತ್ಮರು.
ಹಿಂದೂ ಧರ್ಮದ ಆಳ ಅಗಲ ಹೇಗೆ ಅಳೆಯಲಾಗದೋ ಹಾಗೆ ಕನ್ನಡ ಹಾಗು ಸಂಸ್ಕೃತ ಭಾಷೆಯೂ ಆಳವಾಗಿರುವ ಜ್ಞಾನವನ್ನು  ಒಳಗಿನಿಂದ ಬೆಳೆಸಿದೆ. ಹೀಗಾಗಿ ಇದನ್ನು ಉಳಿಸಿ ಬೆಳೆಸೋದಕ್ಕೆ ಹೊರಗಿನ ಶಿಕ್ಷಣದ ಅಗತ್ಯವಿಲ್ಲ.ಒಳಗಿನ ಹಿಂದಿನ ಶಿಕ್ಷಣದ ಅಗತ್ಯವಿತ್ತು.  ಕನ್ನಡವನ್ನು  ವ್ಯವಹಾರಿಕ ದೃಷ್ಟಿಯಿಂದ ಅಳೆದರೆ ಈಗಲೂ ಸಾಕಷ್ಟು ಬೆಳೆದಿದೆ.ಆದರೆ ಧರ್ಮದ ದೃಷ್ಟಿಯಿಂದ ಹಿಂದುಳಿಯುತ್ತಿದೆ. ಕನ್ನಡದಿಂದ ನಮ್ಮ ಜೀವನ ನಡೆದಿದೆ.ನಮ್ಮಿಂದ ಕನ್ನಡ ಬೆಳೆದಿಲ್ಲ. ಇಲ್ಲಿ ನಮ್ಮ ಶಿಕ್ಷಣವು ವ್ಯವಹಾರಕ್ಕೆ ತಿರುಗಿದಂತೆಲ್ಲಾ  ಹೆಚ್ಚು ಹಣಗಳಿಸುವ ಸಾಧನವಾಗುತ್ತದೆ. ಅದೇ ಅದರಲ್ಲಿ ಧರ್ಮ ವಿದ್ದರೆ ಕನ್ನಡದಲ್ಲಿ ಧರ್ಮ ತಿಳಿಸಿ ಬೆಳೆಸುವ ವಿಷಯವಿರುತ್ತದೆ. ಕನ್ನಡದ ವಿಷಯ ಭಾಷಾಂತರ ಮಾಡಿ ಜ್ಞಾನ ಹೆಚ್ಚಿಸಲಾಗದು.ಭಾಷಾಂತರದಲ್ಲಿ ಸಾಕಷ್ಟು ಪದಗಳ ಅರ್ಥ ವ್ಯತ್ಯಾಸವಾಗುತ್ತದೆ. ಹೀಗಾಗಿ ಮೂಲ ಪ್ರತಿ ಯಾವತ್ತೂ ಶುದ್ದವಾಗಿರಬೇಕು. ವಿಷಯಗಳ ಬದಲಾವಣೆಯ ಜೊತೆಗೆ ಭಾಷೆಯೂ ಬದಲಾಗುತ್ತಾ ಮೂಲ ಧರ್ಮ ಭಾಷೆ ಹಿಂದುಳಿದು ಹೊರಗಿನ ಆಚರಣೆ ಮುಂದೆ ನಡೆಯಿತು. ಈಗಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ 
ವಿದೆ. ಶಾಸ್ತ್ರೀಯ ಶಿಕ್ಷಣದ ಕೊರತೆಯಿದೆ. ಕೆಲವು ವಿಚಾರಗಳನ್ನು  ನನ್ನ ಮೊದಲ ಪುಸ್ತಕದಲ್ಲಿ  ತಿಳಿಸಲಾಗಿತ್ತು. ಅನುಭವಕ್ಕೆ ಬರುವ ವರೆಗೂನಮಗೆ ಸತ್ಯ ಅರ್ಥ ವಾಗದು. 
ಯಾವುದೇ ಧರ್ಮ, ಸತ್ಯ,ನ್ಯಾಯ,ನೀತಿ,ಸಂಸ್ಕೃತಿ, ಭಾಷೆಯ ಬೆಳವಣಿಗೆ ರಾಜಕೀಯ ದಿಂದ ಬೆಳೆಸಲಾಗದೆನ್ನುವ ಕಾರಣಕ್ಕಾಗಿ ಹಿಂದೆ ಗುರುಕುಲ ಪದ್ದತಿಯ ಶಿಕ್ಷಣದಲ್ಲಿ 
ಮಕ್ಕಳನ್ನು ರಾಜಕೀಯತೆ ಬಿಟ್ಟು ರಾಜರೂ ಕೂಡ  ಗುರುಕುಲದಲ್ಲಿ ಬಿಟ್ಟು ಕಲಿಸುತ್ತಿದ್ದರು. ಕಾರಣವಿಷ್ಟೆ ರಾಜಕೀಯವೆಂಬುದು ನನ್ನ ಬೆಳೆಸುತ್ತದೆ .ನಾನೆಂಬ ಅಹಂಕಾರ ಸ್ವಾರ್ಥ ನನ್ನ ಹಾಳೂ ಮಾಡುತ್ತದೆ.ಮಕ್ಕಳಿಗೆ ಮೂಲದಲ್ಲಿ ಜೀವನದ ಸತ್ಯ ತಿಳಿದರೆ ಮುಂದೆ ಸ್ವತಂತ್ರ
 ಜ್ಞಾನದಿಂದ ಜೀವನ ಸಾಗಿಸುತ್ತಾರೆ ಎನ್ನುವ ಸತ್ಯ ತಿಳಿಯಬಹುದು.
ಮಾತೃಭಾಷೆಗೆ ಮಾತೆಯರೆ ವಿರೋಧ ವ್ಯಕ್ತಪಡಿಸಿದರೆ ಮಕ್ಕಳು ಕಲಿಯಲು ಕಷ್ಟ. ನಾವಿರುವ ನಾಡು ನುಡಿಯನ್ನು
ಬೆಳೆಸಿ ಉಳಿಸುವುದು ಎಲ್ಲರ ಧರ್ಮ. ಹೊರಗಿನಿಂದ ಬಂದು  ಮೂಲವನ್ನು ಅಳಿಸೋದು ಅಧರ್ಮ.ಇಲ್ಲ ಹೊರಗೆ ಹೋಗಿ ಮೂಲವನ್ನು ಮರೆಯುವುದೂ ಅಧರ್ಮ. ನಮ್ಮ ಜೀವನಕ್ಕೆ ಬೇಕಾದಷ್ಟು  ಹಣ ಸಂಪಾದನೆಗೆ ಮೂಲ ಭಾಷೆ
ಯಲ್ಲಿ ಸಾಧ್ಯ ಇದ್ದವರೂ  ಪರಭಾಷಾ ವ್ಯಾಮೋಹದಿಂದ 
ದೂರಹೋಗಿ ದುಡಿದು ಸಂಪಾದಿಸಿದರೂ  ಮೂಲದ ಋಣ ತೀರಿಸದಿದ್ದರೆ ತೃಪ್ತಿ ಸಿಗೋದಿಲ್ಲವೆನ್ನುವ ಕಾರಣಕ್ಕಾಗಿ
 ಹಿಂದೆ ಇದ್ದಲ್ಲಿಯೇ ಅವರವರ ಧರ್ಮಭಾಷೆಯ ತತ್ವಜ್ಞಾನ
ದಿಂದ ಒಗ್ಗಟ್ಟು, ಏಕತೆ, ಐಕ್ಯತೆ,ಸಮಾನತೆಯನ್ನು  ಸಾರಿದರು. ಕಾಲ ಬದಲಾದಂತೆ ಶಿಕ್ಷಣವೂ ಬದಲಾಯಿತು ತತ್ವ ತಂತ್ರವಾಯಿತು ತತ್ವದಿಂದ ರಾಜಯೋಗ ತಂತ್ರದಿಂದ
 ರಾಜಕೀಯ  ಬೆಳೆಯಿತು.ಅಂತರದಲ್ಲಿ  ಮಧ್ಯವರ್ತಿಗಳು ನಿಂತು ಇದೂ ಸರಿ ಅದೂ ಸರಿ ಎಂದರು. ಆದರೆ  ಈಗ ಸರಿಯಾಗಿರುವುದು  ಯಾವುದು?
ನಮಗೆ ನಾವೇ ಪ್ರಶ್ನೆ ಮಾಡಿಕೊಂಡರೆ ಬರುವ ಉತ್ತರ ನಾನೇ ಸರಿ ಎಂದು. ಎಲ್ಲಾ ಸರಿಯಾಗೇ ಇದೆ ತಪ್ಪು ಎಲ್ಲಿದೆ? ನಡೆಯೋದನ್ನು  ತಡೆಯಲಾಗದು.ಯಾಕೆ ನಡೆದಿದೆ
ಎಂದು ಪ್ರಶ್ನೆ ಮಾಡೋಹಾಗಿಲ್ಲ.ನಡೆದ ಮೇಲೇ ಯಾಕೆ ಹೀಗಾಯಿತೆಂದು  ತಿಳಿಯಲು ಹಿಂದಿರುಗಿಬರಬೇಕಷ್ಟೆ. ಇದು ಹಿಂದಿನಿಂದಲೂ ನಡೆದು ಬಂದ ಹಿಂದೂ ಧರ್ಮ. ಹಿಂದಿನ ಶಿಕ್ಷಣ ಹಿಂದೂ ಧರ್ಮ, ಇಂದಿನ ಶಿಕ್ಷಣ ಇಸ್ಲಾಂ ಮುಂದಿನ ಶಿಕ್ಷಣ ಮುಸ್ಲಿಂ ಧರ್ಮ ಎಂದರೆ ತಪ್ಪೆ?
ಎಷ್ಟೇ ಮುಂದುವರಿದರೂ ಯಂತ್ರಮಾನವರಾಗಿರಬೇಕಷ್ಟೆ
ಸ್ವತಂತ್ರ ಜ್ಞಾನ ಹಿಂದಿತ್ತು. ಈಗ ತಂತ್ರವಾಗಿದೆ ಮುಂದೆ ಯಂತ್ರದ ದಾಸರಾಗಬೇಕು. ಪ್ರತಿಯೊಂದು ಆ ಪರಮಾತ್ಮನ
ಅಂಶವೇ ಆದರೆ , ಧಾರ್ಮಿಕ ದೃಷ್ಟಿಯಿಂದ ಬೇರೆ ಬೇರೆ ಕಾಣುತ್ತದೆ. ದೇವನೊಬ್ಬನೆ ನಾಮ ಹಲವು,ದೇಶ ಒಂದೇ ಭಾಷೆ ಹಲವು...ತತ್ವ ಒಂದೇ ತಂತ್ರ ಹಲವು...
 ನರೇಂದ್ರರು ವಿವೇಕಾನಂದರಾಗಿದ್ದು ತತ್ವಜ್ಞಾನದಿಂದ ಇಂದಿನ ತಂತ್ರದಿಂದ  ತತ್ವ ಹಿಂದುಳಿಯುತ್ತಿದೆ ಇಷ್ಟೇ ವ್ಯತ್ಯಾಸ.
ಮೇಲೇರಿದವರು ಕೆಳಗಿಳಿಯಬೇಕು.ಕೆಳಗಿದ್ದವರು ಮೇಲೆ ಹೋಗಲೇಬೇಕು.  ಕಾಲಚಕ್ರ ನಿಲ್ಲೋದಿಲ್ಲ.ನಿಲ್ಲಿಸುವ ಶಕ್ತಿ ವಿಜ್ಞಾನಕ್ಕಿಲ್ಲ.