ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Wednesday, March 1, 2023

ಅದ್ವೈತಾನುಭವ ರಾಜಕೀಯದಿಂದ ಸಾಧ್ಯವಿಲ್ಲ

ಒಂದಂತೂ ಸತ್ಯ ಅದ್ವೈತ ತತ್ವವನ್ನು ಯಾರೂ ತೋರಿಸಲಾಗದು.ಓದಿ,ಕೇಳಿ,ನೋಡಿ,ಹೇಳುವ ಪ್ರಚಾರಗಳು ಸ್ವಾನುಭವವಿಲ್ಲದ ಅರ್ಧಸತ್ಯವಷ್ಟೆ. ಇದನ್ನು ಶ್ರೀ ಆದಿ ಶಂಕರಾಚಾರ್ಯರು ಅನುಭವದಿಂದ ಕಂಡಂತೆ ಎಲ್ಲರೂ ಶಂಕರಾಚಾರ್ಯರಾಗಲಾರರು. ಹಾಗಂತ  ಅವರ  ಜ್ಞಾನದೆಡೆಗೆ ತತ್ವದೆಡೆಗೆ ಹೋದವರಿಲ್ಲವೆಂದಲ್ಲ. ಅಂತಹ ಆಳವಾ್ ಜ್ಞಾನ ಸ್ವತಂತ್ರವಾಗಿದ್ದವರಿಗಷ್ಟೆ ಲಭಿಸುತ್ತದೆ ಸ್ವಯಂ ಶಂಕರಾಗೋದಕ್ಕೆ  ಸಾಧ್ಯವೆ? ಅದ್ವೈತವನ್ನು  ಸರಳವಾದ ಭಾಷೆಯಲ್ಲಿ ತಿಳಿಯಲು ಒಗ್ಗಟ್ಟು,ಐಕ್ಯತೆ,ಏಕತೆಯನ್ನು ದೇವನೊಬ್ಬನೆ ನಾನೆಂಬುದಿಲ್ಲ ಎಲ್ಲಾ ದೇವತೆಗಳಿಂದಲೇ ನಡೆದಿದೆ ಜೊತೆಗೆ ನನ್ನೊಳಗಿನ ಅಸುರಿತನವೂ ಸೇರಿದೆ ಎಂದರೆ  ಈ ಅಸುರಿತನವೇ ಅತಿಯಾದ ಅಹಂಕಾರ,ಸ್ವಾರ್ಥಪೂರಿತ ಕರ್ಮವಾಗುತ್ತದೆ.ಇದರ ಫಲವೂ ಜೀವಾತ್ಮನೆ ಅನುಭವಿಸುವಾಗ  ಒಳಗಿರುವ ಜೀವಾತ್ಮನು ಸ್ವತಂತ್ರನೆ? ಎಲ್ಲರನ್ನೂ ಸೇರಿಸಿಕೊಂಡು ರಾಜಕೀಯ ನಡೆಸಿದರೆ ಒಗ್ಗಟ್ಟು ಮೂಡುವುದೆ? ಹಾಗೆಯೇ ಇತರ ಹಲವು ಮುಖ್ಯ ಸಿದ್ದಾಂತದ ಉದ್ದೇಶ ಒಂದೇ ಎಲ್ಲರನ್ನೂ  ರಾಜಯೋಗದ ಮೂಲಕ‌ ಸೇರಿಸುವುದು.
ಆದರೆ ಈಗಿದು ಭೋಗದ ಭೌತಿಕದೆಡೆಗೆ  ನಡೆಯುತ್ತಾ ಒಳಗಿದ್ದ ಪರಮಾತ್ಮನ ತತ್ವ ಕಾಣದೆ ಹೊರಗಿನ ತಂತ್ರದ ವಶವಾಗಿದೆ.ಹೊರದೇಶದವರಿಗೆ ತಿಳಿಸುವುದು ಸುಲಭ ನಮ್ಮವರಿಗೆ ಕಲಿಸುವುದು ಕಷ್ಟ.ಕಾರಣ ನಮ್ಮಲ್ಲಿ ನಾನಿದ್ದೇನೆ.ನಾನೇ ಸರಿ ಎನ್ನುವ ಸ್ವಾರ್ಥ ಅಹಂಕಾರ ಹೆಚ್ಚಾಗಿದೆ ಹೀಗಾಗಿ ಹಿಂದೂಗಳ ತತ್ವಜ್ಞಾನ ಹಿಂದುಳಿದು ಇಸ್ಲಾಂ ರ ತಂತ್ರ ಬೆಳೆದು ಮುಸ್ಲಿಂ ರ ಯಂತ್ರದಡಿ ಸಿಲುಕಿದ ಧರ್ಮ ಕ್ಕೆ ಭೂಮಿ ಕಾಣುತ್ತಿಲ್ಲ ಆಕಾಶದೆತ್ತರ ಹಾರುವ ಚಿಂತನೆ ಗೆ ಯಾವುದೇ ವಿರೋಧವಿಲ್ಲ.ಅದೇ ಭೂಮಿ ಮೇಲೆ ಹೇಗೆ ನಡೆದರೆ  ಮೇಲೆ ತಲುಪಬಹುದೆನ್ನುವ ವಿಚಾರಕ್ಕೆ ಸಾಕಷ್ಟು ವಿರೋಧವಿದೆ.
ಕಾರಣವಿಷ್ಟೆ ಇದೊಂದು ಸಾಮಾನ್ಯಜ್ಞಾನದ ವಿಚಾರ.
ಎಲ್ಲರಿಗೂ ಗೊತ್ತಿದೆ ಆದರೆನಡೆಯುತ್ತಿಲ್ಲ.ನಡೆಯುವವರಿಗೂ 
ಬಿಡದ ಮಧ್ಯವರ್ತಿಗಳು. ಎಲ್ಲಾ ಗುರುಗಳೆ ಆದರೆ ಶಿಷ್ಯರು ಯಾರು? ಪ್ರಜಾಪ್ರಭುತ್ವದಲ್ಲಿ ಎಲ್ಲರೂ ರಾಜರಾದರೆ  ದೇಶದ ಗತಿ?
ರಾಜಯೋಗದ ತತ್ವ ರಾಜಕೀಯದ ತಂತ್ರದಿಂದ ಹಿಂದುಳಿದರೆ ಅಧರ್ಮಕ್ಕೆ ಜಯ.ಸ್ವತಂತ್ರ ಜ್ಞಾನಕ್ಕೆ ಮಂತ್ರ,ತಂತ್ರ,ಯಂತ್ರಗಳ ಸದ್ಬಳಕೆಯಾಗಬೇಕಿತ್ತು.ಎಷ್ಟು ಓದಿದರೂ  ಅದರ  ಅಳವಡಿಕೆಯಿಂದ ಸತ್ಯದ ಅನುಭವ ಆಗದಿದ್ದರೆ  ಹಣ,ಸಮಯ ಹಾಳು. ಕೆಲವರಿದ್ದಾರೆ ತಿಳಿದವರು. ಹಲವರು ಕೇಳಿಸಿಕೊಳ್ಳಲು ತಯಾರಿಲ್ಲ. ಅಧಿಕಾರ,ಹಣಸ್ಥಾನಮಾನವಿದ್ದವರಿಗೆ  ಪೂರ್ಣ ಸತ್ಯದ ಕೊರತೆ, ಸತ್ಯ ತಿಳಿದವರಿಗೆ ಅಧಿಕಾರದ ಕೊರತೆ. ಸಾಮಾನ್ಯರನ್ನು ಆಳೋದಕ್ಕೆ ವಿಶೇಷಜ್ಞಾನ ಬೇಕು.ಆದರೆ ಪ್ರಜಾಪ್ರಭುತ್ವದಲ್ಲಿ ಆಳು ಯಾರು ಅರಸ ಯಾರೆಂಬ ಸಾಮಾನ್ಯಜ್ಞಾನ ಎಲ್ಲರಿಗೂ ಇರಬೇಕಿತ್ತು. ಯಾರದ್ದೋ ಜ್ಞಾನವನ್ನು ನನ್ನದೆನ್ನುವುದೆ ಅಸತ್ಯ.ಯಾರದ್ದೋ ಅನುಭವ ನನ್ನ ಅನುಭವವಾಗದು.ಹಾಗೆ ಯಾರದ್ದೋ ಕಥೆ ಬರೆದು ನನ್ನ ಕಥೆ ಎಂದರೆ ಅಸತ್ಯ. ಪ್ರತಿಯೊಬ್ಬರಲ್ಲಿಯೂ ಇರುವ ಚೇತನಾಶಕ್ತಿ  ಒಂದೇ ಆದರೂ ಅವರವರ ಜ್ಞಾನದ ಮಟ್ಟ ಬೇರೆ ಬೇರೆ. ಸತ್ಯ ಒಂದೇ. ಎಲ್ಲರಲ್ಲಿಯೂ ಸತ್ಯವಡಗಿದೆ.
ಆತ್ಮಸಾಕ್ಷಿಯಂತೆ ನಡೆದವರು ವಿರಳ,ಆತ್ಮಹತ್ಯೆ ಮಾಡಿಕೊಳ್ಳುವುದು ಸರಳ. ಹಾಗಂತ ಸರಳವಾದದ್ದನ್ನು ಆರಿಸಿಕೊಳ್ಳುವಷ್ಟು ಮೂರ್ಖರಲ್ಲ  ಮಾನವರು.
ಅಧ್ಯಾತ್ಮ ಸತ್ಯ ಬೌತಿಕ ಸತ್ಯದ  ಅಂತರದಲ್ಲಿ ಅಸತ್ಯದ ರಾಜಕೀಯ ಬೆರೆತು ದ್ವೇಷ ಬೆಳೆದರೆ ಅಧರ್ಮ.
ಒಬ್ಬರಿಗೊಬ್ಬರು  ಕೆಸರುಮೆತ್ತಿಕೊಂಡು  ಕಮಲ ಸ್ವಚ್ಚ ವಾಗಿದೆ ಎಂದು ಲಕ್ಮಿ ಪೂಜೆ ಮಾಡಿದರೆ ಸರಸ್ವತಿ ಒಲಿಯುವುದು ಕಷ್ಟವಿದೆ.
ಸರಸ್ವತಿಯನ್ನು  ಲಕ್ಮಿ ಅಲಂಕಾರ ಮಾಡಿ ಪೂಜಿಸಬಹುದು.
ಆದರೆ , ಲಕ್ಮಿಯಿಂದ ಸರಸ್ವತಿಯನ್ನು ಅರ್ಥ ಮಾಡಿಕೊಂಡು ಆರಾಧಿಸುವುದು ಕಷ್ಟವಿದೆ. ಎಲ್ಲರಿಗೂ  ವೈಭವದಿಂದ ಜೀವನ ನಡೆಸಬೇಕೆಂಬ ಆಸೆ. ಆದರೆ ವೈಭವದ ಹಿಂದಿನ ಮುಖ  ಕಾಣದೆ ವೈಚಾರಿಕತೆ ಬಿಟ್ಟು ನಡೆದರೆ  ಅಧರ್ಮ.
ಹೀಗಾಗಿ ಪ್ರತಿಯೊಂದು  ಮತದಲ್ಲಿಯೂ  ಭಿನ್ನಾಭಿಪ್ರಾಯ ವಿದೆ.  ಇದೇ ಕಾರಣಕ್ಕಾಗಿ  ದ್ವೇಷ ಹೆಚ್ಚಾಗುತ್ತಾ ಕೊನೆಗೆ ದೇಶವೂ ಇಲ್ಲ ದೇಹವೂ ಇಲ್ಲದೆ ಹೋದ ಜೀವ ದ್ವೇಷ ಬಿತ್ತಿ ಹೋಗುತ್ತದೆ. ದ್ವೇಷದಿಂದ ದೂರವಿರುವುದೆ ತತ್ವದ ಉದ್ದೇಶ.
ಅದ್ವೈತ - ನಾವೆಲ್ಲರೂ ಆ ಭಗವಂತನೊಳಗಿರುವ ಸಾಮಾನ್ಯರು ಆತ್ಮಸ್ವರೂಪಿಗಳು ಬ್ರಹ್ಮ ಸ್ವರೂಪ ರು.
ದ್ವೈತ- ಎಲ್ಲರಿಗೂ ಒಂದೇ ಗುರುತತ್ವ  ಆದರೂ ನನ್ನೊಳಗಿನ ಚೈತನ್ಯ ಶಕ್ತಿ ನನ್ನ  ಈ ದೇಹ ಆಳಬೇಕು.ಬೇರೆಯವರ ಚೈತನ್ಯ ಶಕ್ತಿ ನನ್ನ ಆಳುತ್ತಿದೆ ಎಂದರೆ ನನಗೆ  ಒಳಗಿರುವ ಆಶಕ್ತಿಯ ಪರಿಚಯವಾಗಿಲ್ಲದಿರೋದು ಕಾರಣ. ಆ ಚೇತನ ಶಕ್ತಿಯನ್ನು ಗುರುತಿಸಿ  ನಡೆಸುವವರೆ ನಿಜವಾದ ಅಧ್ಯಾತ್ಮ ಗುರು.  ಬೌತಿಕದ ಗುರು‌ ಜೀವನ ನಡೆಸಲು ಸಹಾಯ ಮಾಡಿದರೆ ಅಧ್ಯಾತ್ಮ ಗುರು ಆತ್ಮರಕ್ಷಣೆಯ ಮಾರ್ಗ ದರ್ಶಕರಾಗುವರು.
ಪರಮಾತ್ಮನೊಬ್ಬನೆ ಆಗಿದ್ದು ಅಸಂಖ್ಯಾತ ಜೀವಾತ್ಮರನ್ನು  ನಡೆಸುವಾಗ‌  ಗುರುವಿನ ಮೂಲಕವೇ ಕಾರ್ಯ ನಡೆಸುವುದು.ಕಾಣದ ದೇವರಿಗಿಂತ ಗುರುವೇ ದೊಡ್ಡವರೆಂದರು. ತಾಯಿಯೇ ಮೊದಲ ಗುರು ಎಂದರು.
ಹಾಗಾಗಿ ಜ್ಞಾನದಿಂದ ಮಾತ್ರ ಯೋಗ ಯೋಗದಿಂದ  ಜ್ಞಾನವಾಗಬೇಕು.ಭೋಗದಿಂದ  ಸತ್ಯಜ್ಞಾನವಾಗದು.ತತ್ವವು ಸತ್ಯದೆಡೆಗೆ ನಡೆಸಿದರೆ ತಂತ್ರವು  ಅಸತ್ಯದೆಡೆಗೆ ನಡೆಸಬಹುದು. ತಂತ್ರದಲ್ಲಿಯೂ ಸ್ವತಂತ್ರ ವಾಗಿದ್ದರೂ ನಾನು ಇರೋವರೆಗೂ ಪರಮಾತ್ಮನ ದರ್ಶನ  ಎಲ್ಲರಿಗೂ ಕಷ್ಟ. ಹೀಗಾಗಿ ಕಾಣದ್ದನ್ನು ಕಂಡೆ ಎಂದರೆ ತೋರಿಸಲಾಗದು.
ಕಂಡದ್ದನ್ನು  ಕಂಡೆ  ಎಂದು  ಅನುಭವಿಸಬಹುದು. 
ಎಲ್ಲರ ಅನುಭವ ಒಂದೇ ಆಗಿರದು.ಎಲ್ಲರ ಕರ್ಮ ಹಾಗು ಋಣ ಒಂದೇ ಆಗಿರದು. ಆದರೆ ಎಲ್ಲರ ದೇಶ ಒಂದೇ ಆಗಿದೆ.ಎಲ್ಲರಿಗೂ ಸ್ವಾತಂತ್ರ್ಯ ವಿದೆ.ಎಲ್ಲರೂ ಮಾನವರಾದರೂ ಮಾನವೀಯ ಗುಣಜ್ಞಾನದ ಶಿಕ್ಷಣ ಎಲ್ಲರಿಗೂ ಸಿಗದ ಕಾರಣ ಎಲ್ಲಾ ಬೇರೆ ಬೇರೆ ಕಾಣುವರು. ಶಿಕ್ಷಣದಲ್ಲಿ ಬದಲಾವಣೆ ತರಬಹುದು.ಇದಕ್ಕೆ ಪೋಷಕರ ಸಹಕಾರ ಮುಖ್ಯ. ಮುಖ್ಯವಾಗಿ  ಜ್ಞಾನವುಳ್ಳ ಶಿಕ್ಷಕರ ಅಗತ್ಯವಿದೆ. ಸರ್ಕಾರದ ಶಾಲೆಗಳನ್ನು ಮುಚ್ಚಿ ಖಾಸಗಿ ಶಾಲೆಗೆ ಅನುಮತಿ ಕೊಡುವ ಬದಲಾಗಿ ಸರ್ಕಾರದ ಶಾಲೆಗಳಲ್ಲಿ ಉತ್ತಮ  ಸದ್ವಿಚಾರ ಹಂಚುವ ಕಾರ್ಯಕ್ರಮ ನಡೆಸುತ್ತಾ ಜನಸಾಮಾನ್ಯರನ್ನು ಒಂದಾಗಿಸುವ  ಒಗ್ಗಟ್ಟನ್ನು  ಬೆಳೆಸಿದ್ದರೆಪ್ರತಿಯೊಂದು ಹಳ್ಳಿಯೂ ಉದ್ದಾರವಾಗುತ್ತಿತ್ತು.
ಹಳ್ಳಿಯನ್ನು ದಿಲ್ಲಿ ಮಾಡೋದಾಗಲಿ ದೇಶವನ್ನೇ ವಿದೇಶ ಮಾಡಿ ರಾಜಕೀಯ ನಡೆಸುವುದೆ ಅಧರ್ಮ. ಎಲ್ಲಿಯವರೆಗೆ ಜನರು ಅಜ್ಞಾನದಿಂದ ಹೊರಬರದೆ ರಾಜಕೀಯದೆಡೆಗೆ  ಹೋಗುವರೋ ಅಲ್ಲಿಯವರೆಗೆ  ಒಳಗಿರುವ ರಾಜಯೋಗದ ವಿಚಾರ ತಲೆಗೆ ಹೋಗೋದಿಲ್ಲ. ರಾಜಯೋಗದ ಪ್ರಚಾರ ಮಾಡುವವರಲ್ಲಿ ಹೆಚ್ಚಿನ  ಮಂದಿ  ಸಂಸಾರದೊಳಗಿಲ್ಲ. ಸಂನ್ಯಾಸಿಗಳಾಗಿದ್ದು ಅನುಭವವಿಲ್ಲದ ವಿಚಾರ ಪ್ರಚಾರ ಮಾಡಿದರೂ  ಸರ್ವ ಸಂಗಪರಿತ್ಯಾಗಿಗಳ ನಿಸ್ವಾರ್ಥ ನಿರಹಂಕಾರದ ಶರಣಾಗತಿ ಬಾವನೆ ಮೂಡೋದಿಲ್ಲ. ಪರಮಾತ್ಮನ ದರ್ಶನಕ್ಕೆ ಶರಣರು ದಾಸರು ಮಹಾತ್ಮರುಗಳು ನಡೆದ ದಾರಿ  ಅಂತರ್ಮುಖವಾಗಿತ್ತು. ನನ್ನ ನಾ ಕಂಡುಕೊಳ್ಳುವ ರಾಜಯೋಗವೆ ಬೇರೆ ನನ್ನ ಎಲ್ಲರೂ ಕಾಣುವ ರಾಜಕೀಯವೆ ಬೇರೆ.

No comments:

Post a Comment