ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Friday, March 31, 2023

ಶಾಸ್ತ್ರ ಚಿಕಿತ್ಸೆ ಬಿಟ್ಟರೆ ಶಸ್ತ್ರ ಚಿಕಿತ್ಸೆ ಹೆಚ್ಚುವುದು

ಶಸ್ತ್ರ ಚಿಕಿತ್ಸೆಗೂ ಶಾಸ್ತ್ರ ಚಿಕಿತ್ಸೆಗಿರುವ  ವ್ಯತ್ಯಾಸವಿಷ್ಟೆ ಒಂದು  ದೈಹಿಕ  ಇನ್ನೊಂದು ಮಾನಸಿಕ.ದೈಹಿಕವಾಗಿ  ಚಿಕಿತ್ಸೆ ಮಾಡುವಾಗ ಎಲ್ಲರೂ  ನೋಡಬಹುದು ಮಾನಸಿಕದ್ದು ನೋಡಲಾಗದು ಅನುಭವಿಸಲೇಬೇಕು. ಚಿಕಿತ್ಸೆ ಉತ್ತಮ ಉದ್ದೇಶದ್ದಾದರೆ  ಉತ್ತಮ ಪರಿಹಾರದಿಂದ ಸಂತೋಷದ ಜೀವನ ನಡೆಸಬಹುದು. ಎರಡೂ ಕಡೆ ನೋವಿದೆ ನೋವಿಗೆ ಕಾರಣ ಶಾಸ್ತ್ರದ  ಬಗ್ಗೆ ಸರಿಯಾದ ತಿಳುವಳಿಕೆಯಿಲ್ಲದೆ ನಡೆದಿರೋದು. ಶಸ್ತ್ರ ಹಿಡಿದು ಹೊರಟವರಿಗೆ ಶಾಸ್ತ್ರ ಹಿಡಿಸದು.ಶಾಸ್ತ್ರ ದಲ್ಲಿರುವವರಿಗೆ  ಶಸ್ತ್ರ ಹಿಡಿಯೋದು ಕಷ್ಟ.
ಶಸ್ತ್ರ ಚಿಕಿತ್ಸೆ ಒಂದು ತಾತ್ಕಾಲಿಕ ಪರಿಹಾರ. ಮೂಲದ ಶಕ್ತಿಯರಿತು  ಸರಿಯಾದ ಮಾರ್ಗದರ್ಶನದಲ್ಲಿ ನಡೆದವರಿಗೆ ಯಾವ ಚಿಕಿತ್ಸೆ ಅಗತ್ಯವಿರಲಿಲ್ಲ.
ಇತ್ತೀಚಿನ ದಿನಗಳಲ್ಲಿ ಇದು ಸಾಧಾರಣವಾಗುತ್ತಿದೆ. ಇದಕ್ಕಾಗಿ ಅನೇಕ ಸಂಘಗಳಿವೆ ಸಂಘಟನೆಗಳಿವೆ. ವೈಧ್ಯಕೀಯ ಕ್ಷೇತ್ರದ ಆಪರೇಷನ್ ವಿಚಾರಕ್ಕೂ ಧಾರ್ಮಿಕ ಕ್ಷೇತ್ರದ ಆಪರೇಷನ್ ಗೂ ಹಾಗು ರಾಜಕೀಯ ಕ್ಷೇತ್ರದ ಆಪರೇಷನ್ ಗೂ ಸ್ವಲ್ಪ ಮಟ್ಟಿಗೆ  ವ್ಯತ್ಯಾಸವಿದ್ದರೂ ರೋಗಬಂದವರಿಗೆ ಮಾತ್ರ ಈ ಚಿಕಿತ್ಸೆ ಅಗತ್ಯವಿತ್ತು. ಎಲ್ಲರನ್ನೂ ರೋಗಿಗಳೆಂದು ಪರಿಗಣಿಸಿ ರೋಗದ  ದೇಶವಾಗಿಸುವುದು ಅಧರ್ಮ.
ಇಲ್ಲಿ ಆಪರೇಷನ್ ತಾತ್ಕಾಲಿಕ  ಬೆಳವಣಿಗೆ ಯಾಕೆಂದರೆ  ದೇಹದ ಒಳಗಿನ ಭಾಗದಲ್ಲಿ  ಶಕ್ತಿ ಕುಸಿದರೆ ಅಥವಾ  ಹಾಳಾಗಿ ಹೋಗಿದ್ದರೆ ಹೊರಗಿನಿಂದ  ಬೇರೆ ಶಕ್ತಿಯನ್ನು ಸೇರಿಸಿ  ಶಕ್ತಿ ಹೆಚ್ಚಿಸುವುದಾಗಿರುವಾಗ ಹೊರಗಿನ ಶಕ್ತಿಗೂ ಒಳಗಿನ ಶಕ್ತಿಗೂ ಸರಿಯಾಗಿ ಹೊಂದಿಕೆಯಾಗಿಸೋದು ಕಷ್ಟ.ಯಾವಾಗ ಹೊರಗಿನ ಶಕ್ತಿ ಬಿಟ್ಟು ಹೊರಬರುವುದೋ ಮತ್ತದೇ  ರೋಗದ ಸಮಸ್ಯೆ. ಹೊರಗಿನಿಂದ  ಸೇರಿದ ಶಕ್ತಿಯ ನಕಾರಾತ್ಮಕ ಶಕ್ತಿಯ ಪ್ರಭಾವವೂ  ಒಳಗಿರುವ ಶಕ್ತಿ ಅನುಭವಿಸುತ್ತದೆ. ಹೀಗಾಗಿ ಆಪರೇಷನ್  ತಂತ್ರವು ಮಾನವನ ಸ್ವತಂತ್ರ ವಾದ ಆರೋಗ್ಯ ಕೆಡಿಸಿದಂತಾಗಬಾರದು.
ಶಾಸ್ತ್ರವೂ ಹಾಗೆ ಮೂಲ ಉದ್ದೇಶ ತಿಳಿದು ವಾಸ್ತವದಲ್ಲಿ ಎಷ್ಟು  ಹೇಗೆ  ಯಾವಾಗ ಬಳಸಿದರೆ  ಉತ್ತಮ ಎನ್ನುವುದು ಅಗತ್ಯವಿದೆ. ಬೇರೆಯವರಿಂದ ಎಷ್ಟೇ ಸೇರಿಸಿಕೊಂಡರೂ ತಾತ್ಕಾಲಿಕ ಸುಖ. ಆದರೆ ನಮ್ಮವರಿಂದಲೇ ತಿಳಿದು ಅಳವಡಿಸಿಕೊಂಡರೆ  ತೃಪ್ತಿ ಸಂತೋಷ‌ಸುಖ ಹೆಚ್ಚು. ಇದಕ್ಕೆ ಬೇಕು ಆಂತರಿಕ ಶಕ್ತಿ. ಗುರು ಹಿರಿಯರ ಧರ್ಮ ಕರ್ಮ ವು ಅವರ ಕಾಲವನ್ನು ಯಾವ ಮಟ್ಟಕ್ಕೆ ಏರಿಸಿತ್ತು ಇಳಿಸಿತ್ತು ಎನ್ನುವ ಸತ್ಯ  ಹಿಂದಿನ ಪುರಾಣ ಇತಿಹಾಸದ ಏಳುಬೀಳುಗಳು ತಿಳಿಸುತ್ತವೆ. ಈ ಕಾಲದ ವೈಜ್ಞಾನಿಕ ಚಿಕಿತ್ಸೆ ಅಂದಿನ ವೈಚಾರಿಕತೆಗೆ ವಿರುದ್ದವಿದ್ದಷ್ಟೂ  ರೋಗ ತಪ್ಲಿದ್ದಲ್ಲ.ಯಾವುದೇ ಚಿಕಿತ್ಸೆ ಯಲ್ಲಿ ಧರ್ಮ ಸತ್ಯ ಇಲ್ಲವೋ ತಾತ್ಕಾಲಿಕ  ಪರಿಹಾರವಷ್ಟೆ. ಹೀಗಾಗಿ ಶಾಸ್ತ್ರ ತಿಳಿದು ಶಸ್ತ್ರ ಹಿಡಿದರೆ ಉತ್ತಮ ಆರೋಗ್ಯಕರ ಸಮಾಜ ದೇಶ ಕಾಣಲು ಸಾಧ್ಯ.ಶಿಕ್ಷಣದಲ್ಲಿಯೇ ಇದನ್ನು ಕಲಿಸಿ ಬೆಳೆಸಿದರೆ ಶಾಸ್ತ್ರ ದ ಪ್ರಕಾರ ನಡೆಯುವವರು ನಡೆಯುವರು ಶಸ್ತ್ರ ಯಾವುದಕ್ಕೆ ಹಿಡಿಯಬೇಕೆಂಬ ಅರಿವಿದ್ದರು‌  ಕ್ಷತ್ರಿಯರಾಗಿದ್ದರು. ಧರ್ಮ ವನರಿಯಬಹುದು.ಆದರೆ ಇದು ರಾಜರ ಕಾಲವಲ್ಲ ಹೀಗಾಗಿ  ಪ್ರಜೆಗಳೇ ಎಚ್ಚರವಾಗಿರಲು ಪ್ರಜಾಧರ್ಮ ಜ್ಞಾನದ ಶಿಕ್ಷಣ ಮೂಲವಾಗಿದ್ದರೆ ಉತ್ತಮ. ದೇವಾಸುರರ ಶಕ್ತಿ ಮಾನವನ ಗುಣದಲ್ಲಿದೆ. ದೈವಗುಣ ಹೆಚ್ಚಿಸಿಕೊಳ್ಳಲು ಶಾಸ್ತ್ರ ದ ಅರಿವಿರಬೇಕು. ಅಸುರಗುಣವಿದ್ದವರನ್ನು  ಗೆಲ್ಲಲು ಶಸ್ತ್ರ ಹಿಡಿದು ಹೋರಾಡಬೇಕು. ಯಾವುದೂ ಅತಿಯಾಗ

ಬಾರದಷ್ಟೆ. ಸ್ವಚ್ಚ ಭಾರತ ಸ್ವಚ್ಚ ಶಿಕ್ಷಣದಲ್ಲಿದೆ.ಸಮಾನತೆ ಜ್ಞಾನವಿಜ್ಞಾನದ ಸದ್ಬಳಕೆಯಲ್ಲಿದೆ.

ಒಳಗಿನ ಚಿಕಿತ್ಸೆ ಗೆ ಒಳಗಿನವರ ಸಹಕಾರ ಸಹಾಯ ಅಗತ್ಯ.

ಹೊರಗಿನ ಚಿಕಿತ್ಸೆ  ಹೊರಗಿನವರ ಸಹಕಾರವಿದ್ದರೂ  ಅಪಾಯವೂ ಇರುತ್ತದೆ. 

No comments:

Post a Comment