ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Sunday, April 2, 2023

ಸಮಯ ಪ್ರಜ್ಞೆ ಎಷ್ಟು ಅಗತ್ಯವಿದೆ?

———————————- - - - -  
 **ಗಡಿಯಾರ ಕೆಟ್ಟರೆ ಗಡಿಯಾರ ನಿಲ್ಲುತ್ತದೆ,ಸಮಯ ನಿಲ್ಲುವುದಿಲ್ಲ.ಸುಳ್ಳನ್ನು ಮುಚ್ಚಿಟ್ಟರೆ ಸುಳ್ಳು ಮುಚ್ಚಬಹುದು,ಆದರೆ ಸತ್ಯ ಮುಚ್ಚಿಡಲಾಗದು.**

*ಭೂಮಿ ನಮ್ಮ ಬಯಕೆಗಳನ್ನು ಪೂರೈಸಬಲ್ಲುದು,
ಆದರೆ ದುರಾಸೆಗಳನ್ನಲ್ಲ.**
ಸಮಯ ಎಲ್ಲವನ್ನೂ ನಿರ್ಧರಿಸುತ್ತದೆ ಮಾನವನಲ್ಲ ಎನ್ನುವರು ಆದರೂ ಭೂಮಿಯ ಮೇಲೆ ಮಾನವನೇ ಎಲ್ಲಾ ಸಮಯವನ್ನೂ ನಿರ್ಧಾರ ಮಾಡಲು ಹೋಗಿ ಸಮಯಸಾಧಕನೆಂಬ ಬಿರುದನ್ನು ಪಡೆದು ಮರೆಯಾಗುತ್ತಾನೆ. ಇಲ್ಲಿ ಪ್ರತಿಯೊಬ್ಬರೂ ಅವರವರ ಸಮಯ ಪ್ರಜ್ಞೆ  ಕಾಯ್ದುಕೊಂಡು ಯಾವುದು ಸರಿ ಯಾವುದು ತಪ್ಪು ಎನ್ನುವ  ಸತ್ಯಜ್ಞಾನವನ್ನು ಪಡೆಯುವ  ಅವಕಾಶವಿದ್ದರೂ ಯಾರದ್ದೋ ಪ್ರಜ್ಞೆ ಯನ್ನು ಯಾವುದೋ ಸಮಯದಲ್ಲಿ  ಬಳಸಲು ಹೋಗಿ ಕೊನೆಗೆ ಸೋತುಹೋಗುವಾಗ  ಎಚ್ಚೆತ್ತುಕೊಳ್ಳಲು ಸಮಯವೇ ಇರೋದಿಲ್ಲ. ಇಷ್ಟಕ್ಕೂ ಇಲ್ಲಿ ಸಮಯವನ್ನು ನಿಲ್ಲಿಸೋ ಶಕ್ತಿ ಯಾರಲ್ಲೂ ಇಲ್ಲ ಎಂದರೆ ಸರಿಯಾದ ಸಮಯ ಕೆಟ್ಟ ಸಮಯ ಒಳ್ಳೆಯ ಸಮಯ ಹೀಗೇ ಸಮಯವನ್ನು ನಿರ್ಧಾರ ಮಾಡುವುದರಲ್ಲಿ ಸಾಕಷ್ಟು ಸಮಯ ಹೋಗಿರುತ್ತದೆ.
ರಾಹುಕಾಲ ಗುಳಿಕಕಾಲ ಯಮಗಂಡಕಾಲ ಹೀಗೇ ಅನೇಕ ಕಾಲವನ್ನು ಸಮಯಕ್ಕೆ ತಕ್ಕಂತೆ ನಿರ್ಧರಿಸಲಾಗಿದೆ.ಅದನ್ನು ನೋಡಿಕೊಂಡು ಶುಭಾಶುಭ ಫಲವನ್ನು ನಿರ್ಧಾರ ಮಾಡಿ ಯೋಗ್ಯ ಕೆಲಸಕ್ಕೆ ಯೋಗ್ಯ ಸಮಯ ನಿಶ್ಚಿತ ಮಾಡುವುದರ ಮೂಲಕ ಸಮಯಕ್ಕೆ ಗೌರವ ಹಾಗು ಬೆಲೆ ಕೊಡುವ ನಮ್ಮ ಸನಾತನ ಧರ್ಮವು ಇಂದು ಹಿಂದುಳಿದಿರೋದಕ್ಕೂ ಕಾರಣ ಆ ಧರ್ಮ ವನ್ನು ಸಮಯಕ್ಕೆ ಸರಿಯಾಗಿ ಅರ್ಥ ಮಾಡಿಕೊಳ್ಳದೆ ಸಮಯ ಮೀರಿದ ನಂತರ  ಅನರ್ಥ ವಾಯಿತೆಂದು ವಿರೋಧಿಸಿ ಹೋರಾಟಕ್ಕಿಳಿದಿರೋದು. ಭೌತಿಕದ ಸಮಯ ಮತ್ತೆ ಬಾರದಿರಬಹುದು.ಅಧ್ಯಾತ್ಮದ ಸಮಯಕ್ಕೆ  ಸಾಕಷ್ಟು ಅವಕಾಶವಿದ್ದರೂ ಮನಸ್ಸು ಹೊರಳದಿದ್ದರೆ  ತಿರುಗಿ ಹೋಗಲಾಗದು. ಹೀಗಾಗಿ ಸಮಯ ಎಲ್ಲರಿಗೂ ಒಂದೇ ಆದರೂ ಕೆಲವರು ಅದನ್ನು ಸದ್ಬಳಕೆ ಮಾಡಿಕೊಂಡರೆ ಕೆಲವರು ದುರ್ಭಳಕೆ ಮಾಡಿಕೊಂಡು ಇದ್ದ ಉತ್ತಮ ಸಮಯ ಹಾಳು ಮಾಡುತ್ತಾರೆ. ಪ್ರತಿದಿನವೂ ಇರುವ ಸಮಯದಲ್ಲಿ  ಭಗವಚ್ಚಿಂತನೆಯಲ್ಲಿ ಕಾಲ ಕಳೆಯಬಹುದು ,ರಾಜಕೀಯ ಚಿಂತನೆಯಲ್ಲೂ ಕಾಲ
ಕಳೆಯಬಹುದು.ಮನರಂಜನೆಯಲ್ಲಿ ಕಾಲಹಾಕಬಹುದು   ದುಷ್ಟರ ಚಿಂತನೆಯಲ್ಲಿ ಮುಳುಗಿರಬಹುದು.  ಯಾವುದಕ್ಕೆ ಸಮಯಕೊಡುವರೋ ಅದು ಬೆಳೆಯುವುದು.

ಹೆಚ್ಚಿನ‌ ಜನರು ರಾಜಕೀಯದಲ್ಲಿ ಮುಳುಗಿರುವಾಗ ಸಮಯ ಹೋಗಿದ್ದೇ ತಿಳಿಯೋದಿಲ್ಲ. ಇಂತಹ ವಿಚಾರವಂತೂ ಗಮನಿಸಲು ಸಮಯವಿರದು. ಪ್ರತಿಯೊಂದು ಸಮಯವೂ ತನ್ನದೇ ಆದ  ಏಳು ಬೀಳುಗಳನ್ನು ಹೊಂದಿದೆ. ಅತಿಯಾದರೆ ಕಷ್ಟ. ಭೂಮಿಯ ಮೇಲಿದ್ದು ಭೂಮಿಯ ಸತ್ಯ ಸತ್ವದ ಬಗ್ಗೆ ತಿಳಿಯದೆ ಮೇಲಿರುವ ಆಕಾಶದತ್ತ ತಲೆಎತ್ತಿ ನಡೆದರೆ ಎಡವಿ ಬೀಳೋದಕ್ಕೂ ಸಮಯವಿದೆ. ಅದಕ್ಕೆ ಹಿರಿಯರು ಹೇಳಿದರು ಎಲ್ಲದ್ದಕ್ಕೂ ಸಮಯ ಕೂಡಿ ಬಂದಾಗಲೇ ಆಗೋದು ಎಂದು.ನಾವು ಎಲ್ಲರಿಗೂ ಒಳ್ಳೆಯದಾಗಲೆಂದು ಬಯಸಿದರೂ ಸಮಯ  ಅವರು ಬಳಸಿದಂತೆ  ನಡೆಸುವುದು.
ಒಟ್ಟಿನಲ್ಲಿ  ಒಳ್ಳೆಯ ಸಮಯಕ್ಕೆ ತಡವಾಗುತ್ತದೆ.ಕೆಟ್ಟ ಸಮಯ ಬೇಗ ಬರುತ್ತದೆ. ಕಾರಣ ಹೆಚ್ಚಿನ‌ ಜನರು ಬಳಸೋದು ಕೆಟ್ಟದ್ದಕ್ಕೆ. ಇದರ ಫ್ರಭಾವ ಎಲ್ಲಾ ಅನುಭವಿಸಲು ಕಾರಣ ಕೆಟ್ಟದ್ದನ್ನು  ನೋಡಿ ಸುಮ್ಮನಿರೋದು. ಕೆಲವರಿಗೆ ಒಳ್ಳೆಯದು ಕೆಟ್ಟದ್ದರ ಅರಿವಿರದು.ಅರಿವಿದ್ದವರು  ಕಲಿಸಿ ತಿಳಿಸಿ ಸಂಸ್ಕಾರ ನೀಡಿದ್ದರೆ ಒಳ್ಳೆಯವರ ಸಂಖ್ಯೆ ಬೆಳೆಯುವುದು. ತಿಳಿದವರಿಗೆ ಅವಕಾಶವಿರದು ಹೀಗಾಗಿ ಸಮಯ ಎಲ್ಲರಿಗೂ ಒಂದೇ ಆದರೂ ಅವರವರ ಜ್ಞಾನಕ್ಕೆ ತಕ್ಕಂತೆ ಬಳಸುವಾಗ  ಬೇರೆ ಬೇರೆ ಕಾಣುವುದು. 
 ಮಾನವ ತಯಾರಿಸಿದ ಗಡಿಯಾರ ನಿಲ್ಲಬಹುದು.
ದೈವನಿರ್ಮಿತ‌ ಕಾಲದ ಸಮಯ ಬದಲಾಗಬಹುದು ನಿಲ್ಲೋದಿಲ್ಲ. ಹಾಗಾಗಿ ಪ್ರತಿಕ್ಷಣವೂ ದೈವ ಪ್ರಾರ್ಥನೆ  ಮಾಡಿಕೊಂಡಿರಲಾಗದು ಸಮಯವನ್ನು ದೈವೀಕ ಶಕ್ತಿಯ ಕಡೆಗೆ ತಿರುಗಿಸಿಕೊಂಡಿರಬಹುದು.ಕಾಯಕವೇ ಕೈಲಾಸವೆನ್ನುವುದೂ ಒಂದು ಮಾರ್ಗ. ಕೈಲಾಸವನ್ನು ಕಾಯಕ ಮಾಡಿಕೊಂಡರೂ ಅಲ್ಲಿಯೂ ಸಮಯ ನೋಡಿ ನಡೆಯಬೇಕಿದೆ. ಎಲ್ಲಾ ಸಮಯವೂ ಉತ್ತಮವೂ ಅಲ್ಲ.ಹಾಳೂ ಇರೋದಿಲ್ಲ.ನಮ್ಮ ಕಾಯಕದಲ್ಲಿದೆ .
 ಒಬ್ಬ  ಅಧ್ಯಾತ್ಮ ಗುರುವಿಗೂ ಭೌತಿಕ ಶಿಕ್ಷಕನಿಗೂ ಸಮಯ ಒಂದೇ ಆದರೂ ಅವನು ಕಲಿಸುವ ವಿದ್ಯೆ ಮೇಲೆ ಅವನ ಭವಿಷ್ಯವಿರುತ್ತದೆ. 
ಅತಿಯಾದ ರಾಜಕೀಯವೇ ಸಮಯವನ್ನು ಹಾಳು ಮಾಡುತ್ತದೆ. ಯುಗಯುಗದಿಂದಲೂ  ನಡೆದು ಬಂದಿರುವ ಭೂಮಿಯ ಮೇಲಿರುವ ರಾಜಕೀಯ ಇಂದು ದುರ್ಭಳಕೆ  ಹೆಚ್ಚಾಗಿದ್ದರೂ ನಮ್ಮ ಸಮಯವನ್ನು ಅದಕ್ಕೆ ಕೊಟ್ಟರೆ ಇನ್ನಷ್ಟು ಸಮಯ ವ್ಯರ್ಥ. ನಮ್ಮದೇ ಆದ ಧರ್ಮ ಕರ್ಮಕ್ಕೆ ಬಳಸಿ ಶಾಂತಿಯಿಂದ  ಬದುಕುವವರು ವಿರಳ.ಕ್ರಾಂತಿಗೆ ಸಮಯ ಕೊಡುವವರು ಬಹಳ ಮಂದಿ  ಹೊರಗಿದ್ದಾರೆ. ಇದನ್ನು ನೋಡಿಕೊಂಡು ಕಾಲ ಕಳೆಯುವವರು ಮನೆಯೊಳಗೆ ಹೆಚ್ಚಾಗುತ್ತಿರುವುದು  ದೊಡ್ಡ ಸಮಸ್ಯೆಗೆ ಕಾರಣವಾಗಬಹುದು. ಯಾರ ಸಮಯವನ್ನು ಯಾರೋ ವ್ಯರ್ಥವಾಗಿಸಿದರೆ ಯಾರಿಗೂ ಉಪಯೋಗವಿಲ್ಲ.ಹಾಗೆ ಅವರವರ ಕರ್ಮ ಫಲವನ್ನು  ಯಾರೋ ಬಂದು ಅನುಭವಿಸುವಂತಿದ್ದರೆ  ಚೆನ್ನಾಗಿರುತ್ತಿತ್ತು. ತಂದೆ ಮಾಡಿದ ಸಾಲ ಮಕ್ಕಳು ತೀರಿಸಲು ತಂದೆಯ ಸಮಯ ತಿರುಗಿ ಬರೋದಿಲ್ಲವಲ್ಲ..ಆದರೂ  ಇದನ್ನು ಬದಲಾಯಿಸಲು ತಂತ್ರ ಮಾರ್ಗ ಹಿಡಿದು ಇರುವ ಸ್ವತಂತ್ರ ಜ್ಞಾನವನ್ನು ಹಾಳು
ಮಾಡಿಕೊಳ್ಳುವುದು ಮಾನವನಿಗೆ ನುಂಗಲಾರದ ತುತ್ತಾಗಿದೆ.
ಮಿಂಚಿಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲವೆಂದಿದ್ದಾರೆ.‌ಆದರೂ  ಹೋದ ಕಾಲವನ್ನು ನೆನೆಯುತ್ತಾ ಕಾಲಕಳೆಯುತ್ತಿರುವುದು ತಪ್ಪಿಲ್ಲ ಹೀಗಾದರೆ ಸಮಯ ತಿರುಗಿ ಬರುವುದೆ? ಉತ್ತಮ ವಿಚಾರಗಳನ್ನು ನೆನಪಿಸಿಕೊಂಡರೆ  ಮುಂದೆ ಉತ್ತಮ ಸಮಯ ಬರುತ್ತದೆ. 

No comments:

Post a Comment