ಭಗವದ್ಗೀತೆ ಯ 12 ನೇ ಅಧ್ಯಾಯವು ಭಕ್ತಿಯೋಗವನ್ನು ತಿಳಿಸುತ್ತದೆ. ಇಲ್ಲಿ ಭಕ್ತಿ ಆಂತರಿಕ ಶಕ್ತಿ, ಯೋಗವು ಪರಮಾತ್ಮನ ಸೇರುವುದಾಗಿದೆ. ಇದನ್ನು ದೇಶಭಕ್ತಿಯ ವಿಚಾರಕ್ಕೆ ತಂದರೆ ಭಗವಂತನೊಳಗೆ ದೇಶವಿದೆ, ದೇಶದೊಳಗೆ ದೇಶಭಕ್ತರಿರಬೇಕು, ದೇಶಭಕ್ತರಿಂದ ದೇಶದ ಧರ್ಮ ರಕ್ಷಣೆ ಆಗಬೇಕು. ವಿದೇಶದಲ್ಲಿ ಕುಳಿತು ದೇಶದ ಬಗ್ಗೆ ಚಿಂತನೆ ನಡೆಸುವುದಕ್ಕೂ ದೇಶದೊಳಗೆ ಇದ್ದು ದೇಶಭಕ್ತಿ ಬೆಳೆಸಿಕೊಂಡು ಯೋಗದಿಂದ ಸೇರುವುದಕ್ಕೂ ವ್ಯತ್ಯಾಸವಿಷ್ಟೆ. ಹೊರಗಿನದು ತಾತ್ಕಾಲಿಕ ಒಳಗಿನ ಶಕ್ತಿ ಭಕ್ತಿ ಶಾಶ್ವತ.
ಶಾಶ್ವತವನ್ನು ಬಿಟ್ಟು ತಾತ್ಕಾಲಿಕ ತಂತ್ರವನ್ನು ಸತ್ಯವೆಂದು ನಂಬಿ ನಡೆದವರಿಗೆ ಒಳಗೇ ಇದ್ದ ಶಕ್ತಿಯ ಅರಿವಿಲ್ಲ. ಎಲ್ಲಾ ರಾಜಕೀಯಮಯವಾದರೆ ತಂತ್ರವೇ ತತ್ವ ಬಿಟ್ಟು ನಡೆಯುತ್ತದೆ.ತತ್ವಜ್ಞಾನದಿಂದ ಮಾತ್ರ ಯೋಗ ಕೂಡಿ ಬರೋದು. ಭಗವಂತನು ಸರ್ವಾಂತರ್ಯಾಮಿ. ಇಡೀ ವಿಶ್ವವ್ಯಾಪಿಯಾಗಿರುವ ಪರಮಾತ್ಮನ ಕಾಣೋದು ಎಲ್ಲರಿಗೂ ಅಸಾಧ್ಯ. ಆದರೆ ದೇಶಭಕ್ತಿ ಹಾಗಲ್ಲ. ದೇಶದೊಳಗೆ ಇದ್ದು ದೇಶ ಕಾಣದೆ ವಿದೇಶ ಕಂಡರೆ ಉಪಯೋಗವಿಲ್ಲ. ಹೀಗಾಗಿ ಪ್ರಜಾಪ್ರಭುತ್ವದ ಭವಿಷ್ಯ ನಿರ್ಣಯ ಮಾಡುವ ದೇಶಭಕ್ತಿ ಯು ಪ್ರಜೆಗಳ ಒಳಗೆ ಇದ್ದರೆ ಮತದಾನ ಉತ್ತಮವಾಗಿರುತ್ತದೆ.
ಶಾಶ್ವತವನ್ನು ಬಿಟ್ಟು ತಾತ್ಕಾಲಿಕ ತಂತ್ರವನ್ನು ಸತ್ಯವೆಂದು ನಂಬಿ ನಡೆದವರಿಗೆ ಒಳಗೇ ಇದ್ದ ಶಕ್ತಿಯ ಅರಿವಿರಲ್ಲ. ಎಲ್ಲಾ ರಾಜಕೀಯಮಯವಾದರೆ ತಂತ್ರವೇ ತತ್ವ ಬಿಟ್ಟು ನಡೆಯುತ್ತದೆ.ತತ್ವಜ್ಞಾನದಿಂದ ಮಾತ್ರ ಯೋಗ ಕೂಡಿ ಬರೋದು. ಭಗವಂತನು ಸರ್ವಾಂತರ್ಯಾಮಿ. ಇಡೀ ವಿಶ್ವವ್ಯಾಪಿಯಾಗಿರುವ ಪರಮಾತ್ಮನ ಕಾಣೋದು ಎಲ್ಲರಿಗೂ ಅಸಾಧ್ಯ. ಆದರೆ ದೇಶದೊಳಗೆ ಇದ್ದು ದೇಶ ಕಾಣದೆ ವಿದೇಶ ಕಂಡರೆ ಉಪಯೋಗವಿಲ್ಲ. ಹೀಗಾಗಿ ದೇಶದ ಭವಿಷ್ಯ ನಿರ್ಣಯ ಮಾಡುವ ಮತದಾನ ಶ್ರೇಷ್ಠ. ಅದನ್ನು ಕನಿಷ್ಟಬೆಲೆಗೆ ಮಾರಿಕೊಂಡರೆ ಜೀವನವೇ ಹಾಳು.
ಮತದಾತರ ಅಜ್ಞಾನದ ಅಸಹಾಯಕತೆಯನ್ನು ದುರ್ಭಳಕೆ ಮಾಡಿಕೊಂಡು ಯಾರೇ ಗೆದ್ದರೂ ಅಧರ್ಮ. ಒಟ್ಟಿನಲ್ಲಿ ವಾಸ್ತವದಲ್ಲಿ ಪ್ರಜಾಪ್ರಭುತ್ವದ ಪ್ರಜೆಗಳಿಗೆ ಸ್ವಾತಂತ್ರ್ಯವಿದೆ. ತಮ್ಮ ಜ್ಞಾನದಿಂದ ಸತ್ಯ ತಿಳಿದು ದಾನ ಮಾಡಿದರೆ ಉತ್ತಮ ಜೀವನ. ದೇಶವನ್ನು ನಡೆಸುವುದಕ್ಕೆ ಜನಬಲ ಹಣಬಲ ಬೇಕು. ಈ ಜನರಲ್ಲಿ ಅಜ್ಞಾನದ ಶಿಕ್ಷಣ ಭ್ರಷಚಾರದ ಹಣ ಹಂಚಿಕೊಂಡು ಅಧಿಕಾರ ಚಲಾಯಿಸಿದರೆ ಸಾಮಾನ್ಯಜ್ಞಾನ ಹಿಂದುಳಿಯುವುದು. ಸಾಮಾನ್ಯ ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳೇ ನಡೆಸೋ ಸರ್ಕಾರವೆ ಪ್ರಜಾಪ್ರಭುತ್ವ ದೇಶ. ಆದರೆ ಇಲ್ಲಿ ಎಲ್ಲಾ ರಾಜಕಾರಣಿಗಳ ಕೈಕೆಳಗೆ ನಿಂತು ಬೇಡುವ ಸ್ಥಿತಿಯಲ್ಲಿ ಪಕ್ಷಪಕ್ಷಗಳ ದ್ವೇಷದ ರಾಜಕೀಯಕ್ಕೆ ಜನಜೀವನ ಬಲಿಯಾಗುತ್ತಿರೋದು ದುರಂತ. ಭೌತಿಕದ ಹೋರಾಟದಲ್ಲಿ ಮತಗಳು ಮಾರಾಟವಾದರೆ
ಅಧ್ಯಾತ್ಮದ ಹೋರಾಟದಲ್ಲಿ ಮತಗಳು ದಾನದ ರೂಪ ಪಡೆಯುತ್ತದೆ. ದಾನವಿರಲಿ ದಾನವರಿಗೆ ಆಗದಿರಲಿ.
ಯೋಗವು ಪರಮಾತ್ಮನ ಕಡೆಗಿದ್ದರೆ ಶಾಂತಿ ಪರಕೀಯರ ಕಡೆಗಿದ್ದರೆ ರಾಜಕೀಯ ಕ್ರಾಂತಿ. ಯಾರದ್ದೋ ದೇಶದೊಳಗೆ ಇದ್ದು ನನ್ನ ದೇಶವೆಂದರೆ ಸರಿಯಲ್ಲ. ಯಾರದ್ದೋ ಮತವನ್ನು ಕದಿಯುವುದಾಗಲಿ,ಮಾರುವುದಾಗಲಿ,
ನಾಟಕವಾಡಿ ಗಳಿಸುವುದರಿಂದ ಭವಿಷ್ಯ ಉತ್ತಮವಾಗುವಂತಿದ್ದರೆ ಇಂದು ನಮ್ಮ ದೇಶ ಈ ಸ್ಥಿತಿಗೆ ಬರುತ್ತಿರಲಿಲ್ಲ. ಎಲ್ಲಾ ಮಾಡುವುದು ನೋಟಿಗಾಗಿ ಓಟು ಸೀಟಿಗಾಗಿ ಇದು ಅಧಿಕಾರ ಪಡೆಯುವವರೆಗೆ ನಂತರ ತಾವೇ ಕೊಟ್ಟ ಆಶ್ವಾಸನೆ ಈಡೇರಿಸಲು ನಡೆಸೋ ಪ್ರಯತ್ನದಲ್ಲಿ ಯಶಸ್ವಿಯಾದರೂ ನಿಜವಾದ ಫಲಾನುಭವಿಗಳ ಕೈ ಸೇರೋ ಮೊದಲು ಮಧ್ಯವರ್ತಿಗಳ ಕೈ ಚಳಕ ಹೆಚ್ಚಾಗಿ ಸಾಲ ಮಾತ್ರ ದೇಶಕ್ಕೆ. ಇದನ್ನು ಸರಿಪಡಿಸಲು ವಿದೇಶಿಗಳ ಒಪ್ಪಂದಕ್ಕೆ ಹೋಗಿ ಅವರ ಕೈಕೆಳಗೆ ಸೇವೆ ಮಾಡುವ ನಮಗೆ ನಮ್ಮೊಳಗೇ ಅಡಗಿದ್ದ ಜ್ಞಾನವನ್ನು ಬಳಸಲಾಗದೆ ದಾನ ಮಾಡಿದರೂ ಅದರ ಪೂರ್ಣಫಲ ಸಿಗದು. ಕಾರಣ ನಮ್ಮ ಸಂಪಾದನೆಯು ವಿದೇಶಿ ಸಾಲದ ಒಂದು ಭಾಗ. ಶಿಕ್ಷಣದಿಂದ ಜ್ಞಾನ. ಶಿಕ್ಷಣವೇ ತಂತ್ರವಾಗಿದ್ದರೆ ತತ್ವದ ಸ್ವತಂತ್ರ ಜ್ಞಾನ ಹಿಂದುಳಿಯುತ್ತದೆ. ಭೌತಿಕದ ರಾಜಕೀಯದ ದಾನ ಅಧ್ಯಾತ್ಮದ ರಾಜಯೋಗದ ದಾನ ಬೇರೆ ಬೇರೆಯೆ? ಒಂದೇ?
ಧರ್ಮದಲ್ಲಿ ರಾಜಕೀಯ ನಡೆದರೆ ಒಂದೇ. ಧರ್ಮವೇ ರಾಜಕೀಯಕ್ಕೆ ಬಲಿಯಾದರೆ ಬೇರೆ ಬೇರೆ. ದಾನವು ಸುಜ್ಞಾನದಿಂದ ಮಾಡುವುದು ಯೋಗ. ಅಜ್ಞಾನದಿಂದ ದಾನ ಮಾಡುವುದರ ಹಿಂದೆ ಭೋಗದ ನಿರೀಕ್ಷೆ ಹೆಚ್ಚು. ಯಾರೂ ಯಾರನ್ನೂ ಆಳಲಾಗದು. ಅಜ್ಞಾನದ ಜನರನ್ನು ಆಳುವುದು ಸುಲಭ.ಜ್ಞಾನಿಗಳನ್ನು ಆಳಲಾಗದು. ಹಾಸಿಗೆ ಇದ್ದಷ್ಟು ಕಾಲುಚಾಚಿದರೆ ಉತ್ತಮವೆಂದಿದ್ದಾರೆ. ಪ್ರಜೆಗಳು ಎಚ್ಚರವಾಗಿದ್ದರೆ ದಾನಕ್ಕೆ ಬೆಲೆಯಿದೆ.ಬೆಲೆಕಟ್ಟಲಾಗದ ದಾನ ಮತದಾನವಾಗಿತ್ತು.
ಪ್ರತಿಯೊಂದು ಪಕ್ಷವೂ ತಮ್ಮದೇ ಆದ ಆಶ್ವಾಸನೆಗಳ ಪಟ್ಟಿ ಹಿಡಿದು ಮತದಾತರನ್ನು ಓಲೈಸಿಕೊಳ್ಳುವತ್ತ ನಡೆದಿದೆ. ಗೆದ್ದ ಪಕ್ಷದಲ್ಲಿ ಇದಕ್ಕೆ ಅವಕಾಶವಿದೆ.ಅದಕ್ಕಾಗಿ ಸಾಕಷ್ಟು ಸಾಲ ಮಾಡಬೇಕು. ಸಾಲ ತೀರಿಸುವುದಕ್ಕೆ ಪ್ರಜೆಗಳೇ ತಯಾರಿರಬೇಕು. ಸತ್ಯ ಕಠೋರವಾಗಲು ಕಾರಣ ಸತ್ಯ ಹಿಂದೆ ಬಿಟ್ಟು ಮುಂದೆ ನಡೆಯೋದಷ್ಟೆ. ಒಟ್ಟಿನಲ್ಲಿ ಸತ್ಯಕ್ಕೆ ಜಯ.ಸತ್ಯಕ್ಕೆ ಸಾವಿಲ್ಲ. ಸತ್ಯವೇ ದೇವರು. ಸತ್ಯವನ್ನೇ ದಾನ ಮಾಡಿ ಅಸತ್ಯ ಬೆಳೆಸಿದರೂ ಕಷ್ಟ ನಷ್ಟ. ಮಾರಿಕೊಂಡರೆ ಜೀವನವೇ ಹಾಳು.ಮತದಾತರ ಅಜ್ಞಾನದ ಅಸಹಾಯಕತೆಯನ್ನು ದುರ್ಭಳಕೆ ಮಾಡಿಕೊಂಡು ಯಾರೇ ಗೆದ್ದರೂ ಅಧರ್ಮ. ಒಟ್ಟಿನಲ್ಲಿ ವಾಸ್ತವದಲ್ಲಿ ಪ್ರಜಾಪ್ರಭುತ್ವದ ಪ್ರಜೆಗಳಿಗೆ ಸ್ವಾತಂತ್ರ್ಯವಿದೆ. ತಮ್ಮ ಜ್ಞಾನದಿಂದ ಸತ್ಯ ತಿಳಿದು ದಾನ ಮಾಡಿದರೆ ಉತ್ತಮ ಜೀವನ. ದೇಶವನ್ನು ನಡೆಸುವುದಕ್ಕೆ ಜನಬಲ ಹಣಬಲ ಬೇಕು. ಈ ಜನರಲ್ಲಿ ಅಜ್ಞಾನದ ಶಿಕ್ಷಣ ಭ್ರಷಚಾರದ ಹಣ ಹಂಚಿಕೊಂಡು ಅಧಿಕಾರ ಚಲಾಯಿಸಿದರೆ ಸಾಮಾನ್ಯಜ್ಞಾನ ಹಿಂದುಳಿಯುವುದು. ಸಾಮಾನ್ಯ ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳೇ ನಡೆಸೋ ಸರ್ಕಾರವೆ ಪ್ರಜಾಪ್ರಭುತ್ವ ದೇಶ. ಆದರೆ ಇಲ್ಲಿ ಎಲ್ಲಾ ರಾಜಕಾರಣಿಗಳ ಕೈಗೆಳಗೆ ನಿಂತು ಬೇಡುವ ಸ್ಥಿತಿಯಲ್ಲಿ ಪಕ್ಷಪಕ್ಷಗಳ ದ್ವೇಷದ ರಾಜಕೀಯಕ್ಕೆ ಜನಜೀವನ ಬಲಿಯಾಗುತ್ತಿರೋದು ಅಧ್ಯಾತ್ಮ ಸತ್ಯ. ಭೌತಿಕದ ಹೋರಾಟದಲ್ಲಿ ಮತಗಳು ಮಾರಾಟವಾದರೆ
ಅಧ್ಯಾತ್ಮದ ಹೋರಾಟದಲ್ಲಿ ಮತಗಳು ದಾನದ ರೂಪ ಪಡೆಯುತ್ತದೆ. ದಾನವಿರಲಿ ದಾನವರಿಗೆ ಆಗದಿರಲಿ.
ಯೋಗವು ಪರಮಾತ್ಮನ ಕಡೆಗಿದ್ದರೆ ಶಾಂತಿ ಪರಕೀಯರ ಕಡೆಗಿದ್ದರೆ ರಾಜಕೀಯ ಕ್ರಾಂತಿ. ಯಾರದ್ದೋ ದೇಶದೊಳಗೆ ಇದ್ದು ನನ್ನ ದೇಶವೆಂದರೆ ಸರಿಯಲ್ಲ. ಯಾರದ್ದೋ ಮತವನ್ನು ಕದಿಯುವುದಾಗಲಿ,ಮಾರುವುದಾಗಲಿ,
ನಾಟಕವಾಡಿ ಗಳಿಸುವುದರಿಂದ ಭವಿಷ್ಯ ಉತ್ತಮವಾಗಿದ್ದರೆ ಇಂದು ನಮ್ಮ ದೇಶ ಈ ಸ್ಥಿತಿಗೆ ಬರುತ್ತಿರಲಿಲ್ಲ. ಎಲ್ಲಾ ಮಾಡುವುದು ನೋಟಿಗಾಗಿ ಓಟು ಸೀಟಿಗಾಗಿ ಇದು ಅಧಿಕಾರ ಪಡೆಯುವವರೆಗೆ ನಂತರ ತಾವೇ ಕೊಟ್ಟ ಆಶ್ವಾಸನೆ ಈಡೇರಿಸಲು ನಡೆಸೋ ಪ್ರಯತ್ನದಲ್ಲಿ ಯಶಸ್ವಿಯಾದರೂ ನಿಜವಾದ ಫಲಾನುಭವಿಗಳ ಕೈ ಸೇರೋ ಮೊದಲು ಮಧ್ಯವರ್ತಿಗಳ ಕೈ ಚಳಕ ಹೆಚ್ಚಾಗಿ ಸಾಲ ಮಾತ್ರ ದೇಶಕ್ಕೆ. ಇದನ್ನು ಸರಿಪಡಿಸಲು ವಿದೇಶಿಗಳ ಒಪ್ಪಂದಕ್ಕೆ ಹೋಗಿ ಅವರ ಕೈಕೆಳಗೆ ಸೇವೆ ಮಾಡುವ ನಮಗೆ ನಮ್ಮೊಳಗೇ ಅಡಗಿದ್ದ ಜ್ಞಾನವನ್ನು ಬಳಸಲಾಗದೆ ದಾನ ಮಾಡಿದರೂ ಅದರ ಪೂರ್ಣಫಲ ಸಿಗದು. ಕಾರಣ ನಮ್ಮ ಸಂಪಾದನೆಯು ವಿದೇಶಿ ಸಾಲದ ಒಂದು ಭಾಗ. ಶಿಕ್ಷಣದಿಂದ ಜ್ಞಾನ. ಶಿಕ್ಷಣವೇ ತಂತ್ರವಾಗಿದ್ದರೆ ತತ್ವದ ಸ್ವತಂತ್ರ ಜ್ಞಾನ ಹಿಂದುಳಿಯುತ್ತದೆ. ಭೌತಿಕದ ರಾಜಕೀಯದ ದಾನ ಅಧ್ಯಾತ್ಮದ ರಾಜಯೋಗದ ದಾನ ಬೇರೆ ಬೇರೆಯೆ? ಒಂದೇ?
No comments:
Post a Comment