ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Sunday, April 23, 2023

ಅಕ್ಷಯವಾಗಬೇಕಾದದ್ದು ಯಾವುದು?

ಅಕ್ಷಯ ತದಿಗೆಯು ಅಕ್ಷಯ ತೆರಿಗೆ ಆಗದಿರಲಿ. ತೆರಿಗೆ ಕಟ್ಟುವಷ್ಟು  ಸಂಪಾದನೆ ಹೆಚ್ಚಾದಂತೆಲ್ಲಾ  ಮಾನವನಿಗೆ ಸಮಸ್ಯೆ ತಪ್ಪಿದ್ದಲ್ಲ. ಹೆಚ್ಚಾಗಿರುವ ಹಣವನ್ನು ದಾನ ಧರ್ಮಕ್ಕೆ ಬಳಸಿದರೆ  ಪುಣ್ಯ ಅಕ್ಷಯವಾಗುತ್ತದೆ. ಸತ್ಪಾತ್ರರಿಗೆ ದಾನ ಮಾಡುವುದು ಅಗತ್ಯವಾಗಿದೆ. ಪರಮಾತ್ಮನ ಸ್ಮರಣೆ ಅಕ್ಷಯ ಆಗುವಂತಹ ಪ್ರಾರ್ಥನೆ  ಎಲ್ಲರೂ ಮಾಡಿದರೆ ಎಲ್ಲರ ಒಳಗಿರುವ ಆ ಪರಮಾತ್ಮ ಎಚ್ಚರವಾಗಿ  ಬಂದಿರುವ ಸಂಕಷ್ಟದಿಂದ ಮುಕ್ತಿ ಸಿಗುವುದು. ಹೊರಗಿನಿಂದ ಖರೀದಿಸುವ ವಸ್ತು ಒಡವೆಗಳು ಮನೆಯೊಳಗೆ  ಬಂದರೂ ಹಣ ಹೊರಗೆ ಹೋಗುವುದಿಲ್ಲವೆ? ಆದರೆ, ಮನೆಯಲ್ಲಿನ ಹೆಚ್ಚಿನ‌ಹಣವನ್ನು ದಾನ ಧರ್ಮಕ್ಕೆ ಬಳಸಿದರೆ  ಮಾನವನೊಳಗೆ ಪುಣ್ಯ  ಹೆಚ್ಚಾಗಿ ಪರಮಾತ್ಮನ ಕರುಣೆಯಿಂದ  ಶಾಂತಿ ಪಡೆಯಬಹುದು. ಭೌತಿಕದ ವಸ್ತು ಒಡವೆಗಳನ್ನು  ಕಳ್ಳರು ಕದಿಯಬಹುದು. ಅಧ್ಯಾತ್ಮದ ಜ್ಞಾನ ಸಂಪತ್ತು ಪುಣ್ಯ ವನ್ನು ಯಾರೂ ಕದಿಯದೆ ಅಕ್ಷಯವಾಗಿ  ಒಳಗಿನ  ಶುದ್ದತೆ  ಅಕ್ಷಯವಾಗುತ್ತದೆ.ಏನೇ ಇರಲಿ ನಾವು ಏನು ಕೊಟ್ಟರೂ ಹೆಚ್ಚಾಗುತ್ತದೆ ಹಾಗೆ ಪಡೆದರೂ ಹೆಚ್ಚುವುದು. ಏನು ಕೊಡಬೇಕೆಂಬುದು ಮುಖ್ಯವಾಗಿದೆ.
ಎಲ್ಲರ ಬಾಳಿನಲ್ಲಿ ಸುಖ ಶಾಂತಿ ನೆಮ್ಮದಿ ತೃಪ್ತಿ ಹೆಚ್ಚಾಗಲೆಂದು ಬೇಡಿದರೂ  ಉತ್ತಮ ಫಲವಿದೆ. ಭಗವಂತನೆಡೆಗೆ  ಹೋಗಲು  ಇದೊಂದೆ ಮಾರ್ಗ. 
ಅಕ್ಷಯ ತದಿಗೆಯಂದು ಲಕ್ಮಿ ಭೂಮಿಗಿಳಿದಳಂತೆ
ಕುಬೇರ   ಲಕ್ಮಿ ಬಳಸಿಕೊಂಡು ಶ್ರೀಮಂತ ನಾದನಂತೆ
ದ್ರೌಪದಿಗೆ ಅಕ್ಷಯ ಪಾತ್ರೆ ಶ್ರೀ  ಕೃಷ್ಣ ನೀಡಿದನಂತೆ
ಸುಧಾಮನು ಸಿರಿವಂತನಾದನಂತೆ
ಗಂಗೆ ಭೂಮಿಗಿಳಿದಳಂತೆ
ಶ್ರೀ ಶಂಕರಾಚಾರ್ಯರು ಕನಕಧಾರ ಸ್ತೋತ್ರ ರಚಿಸಿದರಂತೆ
ಇನ್ನೂ ಹಲವಾರು  ಅಧ್ಯಾತ್ಮಿಕ ಯೋಗ ಸಂಪತ್ತು  ಭೂಮಿಯಲ್ಲಿ ಬೆಳೆದ  ವಿಶೇಷ ದಿನ. 
ಇಂದು ಸಿರಿಸಂಪತ್ತು ಹೆಚ್ಚಾದಂತೆ ಆಪತ್ತುಗಳೂ ಹೆಚ್ಚುತ್ತಿದೆ.ಕಾರಣವಿಷ್ಟೆ ಸಂಪತ್ತಿನ ಮೂಲವೇ ಅಧರ್ಮ, ಭ್ರಷ್ಟಾಚಾರ.ಭ್ರಷ್ಟಾಚಾರಕ್ಕೆ ಕಾರಣ ಅಜ್ಞಾನ, ಅಜ್ಞಾನಕ್ಕೆ ಕಾರಣ  ಶಿಕ್ಷಣ. ಜ್ಞಾನದ ಶಿಕ್ಷಣವನ್ನು ಈ ದಿನದಿಂದ ಪ್ರಾರಂಭಿಸಿದರೆ ಎಲ್ಲಾ ಸಂಪತ್ತನ್ನು ಸದ್ಬಳಕೆ ಮಾಡಿಕೊಂಡು ಮಾನವ  ಅಕ್ಷರದ ಸಹಾಯದಿಂದ ಅಕ್ಷಯವಾಗದ ಜ್ಞಾನವನ್ನು ಹೆಚ್ಚು ಹೆಚ್ಚು ಪಡೆಯುವುದರಿಂದ ಆತ್ಮನಿರ್ಭರ ಭಾರತವಾಗುತ್ತದೆ. 
ಅಕ್ಷಯ ತೃತೀಯದ ಶುಭಾಶಯಗಳು. 
ಬಸವ ಜಯಂತಿಯ ಶುಭಾಶಯಗಳು
ಬಸವಣ್ಣನವರಂತಹ ಮಹಾತ್ಮರ ಜಯಂತಿಯಲ್ಲಿ ಅವರ ತತ್ವಜ್ಞಾನವನ್ನು ಅಳವಡಿಸಿಕೊಳ್ಳಲು  ಪ್ರಾರಂಭ ಮಾಡಿದರೆ  ನಮ್ಮ ಸಾಲದ ಜೊತೆಗೆ ದೇಶದ ಸಾಲವನ್ನೂ ತೀರಿಸುವ ಕಾಯಕವೇ  ಕೈಲಾಸವಾಗುತ್ತದೆ. ಶಿವ ಮುಕ್ತಿ ಕೊಡೋದು  ಸಾಲ ತೀರಿಸಿದಾಗಷ್ಟೆ.  ದೇಶದ ಸಾಲ ತೀರಿಸಲು ತತ್ವಜ್ಞಾನದ ಅಗತ್ಯವಿದೆ. ವಿದೇಶದ ಸಾಲ ತಂದು ಹಂಚಿದರೆ ಇನ್ನಷ್ಟು ತಂತ್ರ ಬೆಳೆದು  ಜೀವನ ಅತಂತ್ರಸ್ಥಿತಿಗೆ ತಲುಪುತ್ತದೆ. ಇತರರಿಗೆ ಸೇರಬೇಕಾದದ್ದನ್ನು  ಸಂಗ್ರಹಿಸಿಟ್ಟುಕೊಂಡು  ಭ್ರಷ್ಟಾಚಾರ ಬೆಳೆಸಿಕೊಂಡರೆ   ಶಿಕ್ಷೆ ತಪ್ಪಿದ್ದಲ್ಲ. ಅದನ್ನು  ಹಂಚಿಕೊಂಡವರಿಗೂ  ಶಿಕ್ಷೆ ತಪ್ಪೋದಿಲ್ಲ. ಹಾಗಾಗಿ  ನಾವು ಏನೇ ದಾನ ಧರ್ಮ ಕಾರ್ಯ ಮಾಡಿದರೂ ಸ್ವಚ್ಚವಾದ ಸಂಪಾದನೆಯ ಹಣದಿಂದ ಮಾಡಿದರೆ ಸ್ವಚ್ಚ ಭಾರತವಾಗುವುದು.ಆತ್ಮನಿರ್ಭರವಾಗುವುದು.ಜಡಶಕ್ತಿಯ ಹಿಂದೆ ನಡೆದಷ್ಟೂ ಜಡತ್ವ ಹೆಚ್ಚುವುದು. ಹೀಗಾಗಿ  ಮಹಾತ್ಮರುಗಳು  ಪರಮಾತ್ಮನ ಋಣ ತೀರಿಸಲು  ಪರಮಾತ್ಮನ ಸೇವೆ ಮಾಡಿ ಮಹಾತ್ಮರಾದರು. ಹಾಸಿಗೆಇದ್ದಷ್ಟು ಕಾಲುಚಾಚಿದರೆ ಎಲ್ಲಾ ಸರಳ ಸುಗಮ, ಸುಂದರವಾಗಿರುವುದೆಂದು ನಡೆದು ನುಡಿದು ತೋರಿಸಿರುವ  ಶರಣರಿಗೆ ಶರಣಾಗಬೇಕು. ಶರಣರು ಶಿವನಿಗೆ ಶರಣಾಗಿರುವಾಗ  ಶಿವಭಕ್ತರಿಗೆ ಶರಣಾಗೋದಕ್ಕೆ
ಕಾಯಕದಲ್ಲಿ ಶುದ್ದತೆ, ಸತ್ಯತೆ, ಧರ್ಮದ ತತ್ವ ಅಗತ್ಯ.
ಅಸತ್ಯ ಅಶುದ್ದ, ಅಧರ್ಮವು ತಂತ್ರದಲ್ಲಿ ಬೆಳೆದಿದೆ. ರಾಜಕೀಯದಲ್ಲಿದೆ. ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಆಗಬಾರದು. 
ಕಲಬೇಡ ಕೊಲಬೇಡ ಹುಸಿಯನುಡಿಯಲು ಬೇಡ ಮುನಿಯಬೇಡ ಅನ್ಯರಿಗೆ ಅಸಹ್ಯಪಡಬೇಡ ತನ್ನ ಬಣ್ಣಿಸಬೇಡ ಇದಿರಹಳಿಯಲು ಬೇಡ ಇದೇ ಅಂತರಂಗ ಶುದ್ದಿ ಇದೇ ಬಹಿರಂಗ ಶುದ್ದಿ ಇದೇ ಕೂಡಲ ಸಂಗಮನೊಲಿಯುವ ಪರಿ. ಕೇಳಲು ಓದಲು ಹೇಳಲು ಸರಳ ಸುಲಭವಾಗಿರುವ ಇವು ಅಳವಡಿಸಿಕೊಳ್ಳಲು ಸೋತರೆ  ಶಿವನಿಗೆ ಶರಣಾಗೋದಕ್ಕೆ ಆಗದು. ಶರಣಾಗದೆ ಮುಕ್ತಿ ಸಿಗದು. ಹಣದಿಂದ ಮುಕ್ತಿ ಸಿಗದು ಜ್ಞಾನದಿಂದ ಮುಕ್ತಿ ಸಿಗುವುದು. ಆತ್ಮಜ್ಞಾನ  ಸತ್ಯದಿಂದ  ಮಾತ್ರ  ಮುಕ್ತಿ ಸಿಗುವುದು. ಮಿಥ್ಯದಲ್ಲಲ್ಲ ಎಂದಿರುವರು ಮಹಾತ್ಮರು.

ಸರಳವಾಗಿ ಮಾನವರು ತಿಳಿಯೋದಾದರೆ ನಾವು ಏನನ್ನು ಕೊಡುವೆವೋ ಪಡೆಯುವೆವೋ ಅದೇ ತಿರುಗಿ ನಮಗೆ ಸಿಗುತ್ತದೆನ್ನುವುದು ಕರ್ಮ ಸಿದ್ದಾಂತ ಸತ್ಯ. ಅಂದರೆ ಅಕ್ಷಯ  ಯಾವುದಾಗಬೇಕು ಪಾಪವೋ ಪುಣ್ಯವೋ? ಲಾಭವೋ ನಷ್ಟವೋ? ಹಣವೋ ಜ್ಞಾನವೋ? ವಿದ್ಯೆಯೋ ಜ್ಞಾನವೋ? ಶಾಂತಿಯೋ ಕ್ರಾಂತಿಯೋ? ದೈವತ್ವವೋ ಅಸುರತ್ವವೋ? ಆತ್ಮಾವಲೋಕನ ದಿಂದ ತಿಳಿದರೆ  ನಮ್ಮ ಜೀವನದ ಮಾರ್ಗ ಬೇರೆಲ್ಲೋ ಇಲ್ಲ ನಮ್ಮ ಹತ್ತಿರವೇ ಇದೆ ಒಳಗೆ ಇದೆ.ಭೂಮಿಯ ಮೇಲಿದೆ ಆಕಾಶದಲ್ಲಿಲ್ಲ.

No comments:

Post a Comment